03.02.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ನೆನಪಿನಲ್ಲಿರುವ ಪುರುಷಾರ್ಥವನ್ನು ಖಂಡಿತ ಮಾಡಬೇಕಾಗಿದೆ, ಏಕೆಂದರೆ ನೆನಪಿನ ಬಲದಿಂದಲೇ ನೀವು
ವಿಕರ್ಮಾಜೀತರಾಗುತ್ತೀರಿ.”
ಪ್ರಶ್ನೆ:
ಯಾವ ವಿಚಾರ
ಬಂದಾಗ ಪುರುಷಾರ್ಥದಲ್ಲಿ ಕೆಳಗೆ ಬೀಳುತ್ತೀರಿ? ಈಶ್ವರೀಯ ಸೇವಾಧಾರಿ ಮಕ್ಕಳು ಯಾವ ಸೇವೆಯನ್ನು
ಮಾಡುತ್ತಾ ಇರುತ್ತಾರೆ?
ಉತ್ತರ:
ಕೆಲವು ಮಕ್ಕಳು
ತಿಳಿದುಕೊಳ್ಳುತ್ತಾರೆ - ಇನ್ನೂ ಸಮಯವಿದೆ, ಕೊನೆಯಲ್ಲಿ ಪುರುಷಾರ್ಥ ಮಾಡೋಣ ಎಂದು. ಆದರೆ
ಮೃತ್ಯುವಿಗೆ ನಿಯಮವಿದೆಯೇ? ನಾಳೆ-ನಾಳೆ ಎನ್ನುತ್ತಾ ಮರಣ ಹೊಂದುವರು. ಇನ್ನೂ ಬಹಳ ವರ್ಷಗಳಿವೆ,
ಕೊನೆಯಲ್ಲಿ ಮಾಡಿ ಬಿಡುತ್ತೇವೆ ಎಂದು ತಿಳಿದುಕೊಳ್ಳಬೇಡಿ - ಈ ವಿಚಾರವು ಇನ್ನೂ ಬೀಳಿಸಿ ಬಿಡುವುದು.
ಎಷ್ಟು ಸಾಧ್ಯವೋ ನೆನಪಿನಲ್ಲಿರುವ ಪುರುಷಾರ್ಥ ಮಾಡಿ. ಶ್ರೀಮತದಂತೆ ತಮ್ಮ ಕಲ್ಯಾಣವನ್ನು
ಮಾಡಿಕೊಳ್ಳುತ್ತಾ ಇರಿ. ಆತ್ಮಿಕ ಈಶ್ವರೀಯ ಸೇವಾಧಾರಿ ಮಕ್ಕಳು ಆತ್ಮಗಳನ್ನು ರಕ್ಷಣೆ ಮಾಡುವ,
ಪತಿತರನ್ನು ಪಾವನ ಮಾಡುವ ಸೇವೆ ಮಾಡುತ್ತಿರುತ್ತಾರೆ.
ಗೀತೆ:
ಓಂ ನಮಃ ಶಿವಾಯ.............
ಓಂ ಶಾಂತಿ.
ಇದನ್ನಂತೂ ಮಕ್ಕಳಿಗೆ ತಿಳಿಸಲಾಗಿದೆ - ನಿರಾಕಾರ ತಂದೆಯು ಸಾಕಾರ ಶರೀರವಿಲ್ಲದೆ ಯಾವುದೇ ಕರ್ಮ
ಮಾಡಲು ಸಾಧ್ಯವಿಲ್ಲ, ಪಾತ್ರವನ್ನಭಿನಯಿಸಲು ಸಾಧ್ಯವಿಲ್ಲ. ಆತ್ಮಿಕ ತಂದೆಯು ಬಂದು ಬ್ರಹ್ಮಾರವರ
ಮೂಲಕ ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ. ಯೋಗಬಲದಿಂದಲೇ ಮಕ್ಕಳು ಸತೋಪ್ರಧಾನರಾಗಬೇಕು ಮತ್ತೆ
ಸತೋಪ್ರಧಾನ ವಿಶ್ವದ ಮಾಲೀಕರಾಗಬೇಕು. ಇದು ಮಕ್ಕಳ ಬುದ್ಧಿಯಲ್ಲಿದೆ. ಕಲ್ಪ-ಕಲ್ಪವೂ ತಂದೆಯು ಬಂದು
ರಾಜಯೋಗವನ್ನು ಕಲಿಸುತ್ತಾರೆ. ಬ್ರಹ್ಮಾರವರ ಮೂಲಕ ಬಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ
ಮಾಡುತ್ತಾರೆ ಅಂದರೆ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಯಾವ ಮನುಷ್ಯರು
ದೇವಿ-ದೇವತೆಗಳಾಗಿದ್ದರೋ ಅವರು ಈಗ ಬದಲಾಗಿ ಶೂದ್ರ, ಪತಿತರಾಗಿ ಬಿಟ್ಟಿದ್ದಾರೆ. ಭಾರತವು ಪಾರಸ
ಪುರಿಯಾಗಿದ್ದಾಗ ಸುಖ-ಶಾಂತಿ-ಪವಿತ್ರತೆ ಎಲ್ಲವೂ ಇತ್ತು, ಇದು 5000 ವರ್ಷಗಳ ಮಾತಾಗಿದೆ. ನಿಖರವಾದ
ಲೆಕ್ಕವನ್ನು ತಂದೆಯು ತಿಳಿಸುತ್ತಾರೆ. ಅವರಿಗಿಂತ ಶ್ರೇಷ್ಠರು ಯಾರೂ ಇಲ್ಲ. ಸೃಷ್ಟಿ ಅಥವಾ ವೃಕ್ಷ
ಯಾವುದಕ್ಕೆ ಕಲ್ಪವೃಕ್ಷವೆಂದು ಹೇಳುತ್ತಾರೆಯೋ ಅದರ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಂದೆಯೇ
ತಿಳಿಸುತ್ತಾರೆ. ಭಾರತದ ಯಾವ ದೇವಿ-ದೇವತಾ ಧರ್ಮವಿತ್ತೋ ಅದು ಈಗ ಪ್ರಾಯಃಲೋಪವಾಗಿ ಬಿಟ್ಟಿದೆ.
ದೇವಿ-ದೇವತಾ ಧರ್ಮವಂತೂ ಈಗಿಲ್ಲ. ದೇವತೆಗಳ ಚಿತ್ರಗಳಿವೆ, ಇದನ್ನು ಭಾರತವಾಸಿಗಳೇ
ತಿಳಿದುಕೊಂಡಿದ್ದಾರೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಭಲೆ ಶಾಸ್ತ್ರಗಳಲ್ಲಿ ಈ
ತಪ್ಪು ಮಾಡಿ ಬಿಟ್ಟಿದ್ದಾರೆ ಅಂದರೆ ಕೃಷ್ಣನನ್ನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ.
ತಂದೆಯೇ ಬಂದು ಮರೆತಿರುವವರಿಗೆ ಮಾರ್ಗವನ್ನು ತಿಳಿಸುತ್ತಾರೆ. ಮಾರ್ಗವನ್ನು ತಿಳಿಸುವವರು
ಬರುತ್ತಾರೆಂದರೆ ಎಲ್ಲಾ ಆತ್ಮರು ಮುಕ್ತಿಧಾಮಕ್ಕೆ ಹೊರಟು ಹೋಗುತ್ತಾರೆ ಅಂದರೆ ಅವರಿಗೆ ಸರ್ವರ
ಸದ್ಗತಿದಾತ ಎಂದು ಹೇಳಲಾಗುತ್ತದೆ. ರಚಯಿತನು ಒಬ್ಬರೇ ಇರುವರು, ಸೃಷ್ಟಿಯು ಒಂದೇ ಆಗಿದೆ. ವಿಶ್ವದ
ಚರಿತ್ರೆ, ಭೂಗೋಳವೂ ಒಂದೇ ಆಗಿದೆ. ಅದು ಪುನರಾವರ್ತನೆಯಾಗುತ್ತಾ ಇರುತ್ತದೆ. ಸತ್ಯ, ತ್ರೇತಾ,
ದ್ವಾಪರ, ಕಲಿಯುಗ ನಂತರ ಸಂಗಮಯುಗವಾಗುತ್ತದೆ. ಕಲಿಯುಗದಲ್ಲಿ ಪತಿತರು, ಸತ್ಯಯುಗದಲ್ಲಿ
ಪಾವನರಿರುತ್ತಾರೆ. ಸತ್ಯಯುಗವಾದಾಗ ಅವಶ್ಯವಾಗಿ ಕಲಿಯುಗದ ವಿನಾಶವಾಗುವುದು. ವಿನಾಶಕ್ಕೆ ಮೊದಲು
ಸ್ಥಾಪನೆಯಾಗುವುದು. ಸತ್ಯಯುಗದಲ್ಲಂತೂ ಸ್ಥಾಪನೆಯಾಗುವುದಿಲ್ಲ. ಯಾವಾಗ ಪತಿತ ಪ್ರಪಂಚವಾಗುವುದೋ
ಆಗಲೇ ಭಗವಂತನು ಬರುವರು. ಸತ್ಯಯುಗವು ಪಾವನ ಪ್ರಪಂಚವಾಗಿದೆ. ಪತಿತ ಪ್ರಪಂಚವನ್ನು ಪಾವನವನ್ನಾಗಿ
ಮಾಡಲು ಭಗವಂತನೇ ಬರಬೇಕಾಗುತ್ತದೆ. ಈಗ ತಂದೆಯು ಬಹಳ ಸಹಜವಾದ ಯುಕ್ತಿಗಳನ್ನು ತಿಳಿಸುತ್ತಾರೆ -
ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ.
ಪತಿತ-ಪಾವನನಂತು ಯಾರೋ ಒಬ್ಬರು ಇರುತ್ತಾರಲ್ಲವೇ. ಭಕ್ತರಿಗೆ ಫಲ ಕೊಡುವವರು ಒಬ್ಬರೇ
ಭಗವಂತನಾಗಿದ್ದಾರೆ, ಭಕ್ತರಿಗೆ ಜ್ಞಾನವನ್ನು ಕೊಡುತ್ತಾರೆ. ಪತಿತ ಪ್ರಪಂಚದಲ್ಲಿ ಪಾವನರನ್ನಾಗಿ
ಮಾಡಲು ಜ್ಞಾನಸಾಗರನೇ ಬರುತ್ತಾರೆ. ಯೋಗದಿಂದ ಪಾವನರಾಗುತ್ತೀರಿ. ತಂದೆಯ ವಿನಃ ಮತ್ತ್ಯಾರೂ
ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಇವೆಲ್ಲಾ ಮಾತುಗಳನ್ನು ಬುದ್ಧಿಯಲ್ಲಿ ಕೂರಿಸಬೇಕಾಗುತ್ತದೆ
ಅನ್ಯರಿಗೆ ತಿಳಿಸುವುದಕ್ಕಾಗಿ. ಮನೆ-ಮನೆಯಲ್ಲಿ ಸಂದೇಶ ಕೊಡಬೇಕಾಗಿದೆ. ಭಗವಂತನು ಬಂದಿದ್ದಾರೆಂದು
ಹೇಳುವುದಲ್ಲ, ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ. ಹೇಳಿ, ಆ ತಂದೆಯಿದ್ದಾರಲ್ಲವೆ. ಒಬ್ಬರು ಲೌಕಿಕ
ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆಯಾಗಿದ್ದಾರೆ. ದುಃಖದ ಸಮಯದಲ್ಲಿ ಪಾರಲೌಕಿಕ ತಂದೆಯನ್ನೇ ನೆನಪು
ಮಾಡುತ್ತಾರೆ. ಸುಖಧಾಮದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ
ರಾಜ್ಯದಲ್ಲಿ ಸುಖವೇ ಸುಖವಿತ್ತು. ಸುಖ-ಶಾಂತಿ, ಪವಿತ್ರತೆಯಿತ್ತು. ತಂದೆಯ ಆಸ್ತಿಯು ಸಿಕ್ಕಿದ ಮೇಲೆ
ಮತ್ತೇಕೆ ಕರೆಯುವರು! ಆತ್ಮಕ್ಕೆ ಗೊತ್ತಿದೆ - ನಮಗೆ ಸುಖವಿದೆ, ಇದನ್ನು ಯಾರು ಬೇಕಾದರೂ ಹೇಳುವರು
- ಇಲ್ಲಿ ಸುಖವೇ ಸುಖವಿರುತ್ತದೆ. ತಂದೆಯು ದುಃಖಕ್ಕಾಗಿ ಸೃಷ್ಟಿಯನ್ನು ರಚಿಸಲಿಲ್ಲ. ಇದು
ಮಾಡಿ-ಮಾಡಲ್ಪಟ್ಟ ಆಟವಾಗಿದೆ, ಯಾರ ಪಾತ್ರವು ಕೊನೆಯಲ್ಲಿದೆಯೋ, 2-4 ಜನ್ಮಗಳನ್ನು
ತೆಗೆದುಕೊಳ್ಳುವರೋ ಅವರು ಖಂಡಿತವಾಗಿ ಉಳಿದ ಸಮಯದಲ್ಲಿ ಶಾಂತಿಯಲ್ಲಿರುತ್ತಾರೆ ಆದರೆ ಅವರು
ಡ್ರಾಮಾದ ಆಟದಿಂದಲೇ ಹೊರಟು ಹೋಗಲು ಸಾಧ್ಯವಿಲ್ಲ. ಈ ಆಟದಲ್ಲಿ ಎಲ್ಲರೂ ಬರಲೇಬೇಕಾಗುವುದು. ಕೇವಲ
ಒಂದೆರಡು ಜನ್ಮಗಳು ಸಿಗುತ್ತವೆ, ಉಳಿದ ಸಮಯ ಹೇಗೆ ಮೋಕ್ಷದಲ್ಲಿರುತ್ತಾರೆ. ಆತ್ಮವು
ಪಾತ್ರಧಾರಿಯಲ್ಲವೆ. ಕೆಲವು ಆತ್ಮರಿಗೆ ಶ್ರೇಷ್ಠ ಪಾತ್ರವು ಸಿಕ್ಕಿದೆ, ಕೆಲವರಿಗೆ ಕಡಿಮೆ. ಇದನ್ನೂ
ಸಹ ನೀವೀಗ ತಿಳಿದುಕೊಂಡಿದ್ದೀರಿ, ಈಶ್ವರನ ಅಂತ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ಗಾಯನವಿದೆ.
ತಂದೆಯೇ ಬಂದು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಪರಿಚಯವನ್ನು ಕೊಡುತ್ತಾರೆ. ಎಲ್ಲಿಯವರೆಗೆ
ಸ್ವಯಂ ರಚಯಿತನೇ ಬರುವುದಿಲ್ಲವೋ ಅಲ್ಲಿಯವರೆಗೆ ರಚಯಿತ ಮತ್ತು ರಚನೆಯನ್ನು ಅರಿತುಕೊಳ್ಳಲು
ಸಾಧ್ಯವಿಲ್ಲ. ತಂದೆಯೇ ಬಂದು ತಿಳಿಸುತ್ತಾರೆ, ನಾನು ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ.
ನಾನು ಯಾರಲ್ಲಿ ಪ್ರವೇಶ ಮಾಡುತ್ತೇನೆಯೋ ಅವರು ತನ್ನ ಜನ್ಮಗಳನ್ನು ಅರಿತುಕೊಂಡಿಲ್ಲ. ಅವರಿಗೆ ತನ್ನ
84 ಜನ್ಮಗಳ ಕಥೆಯನ್ನು ತಿಳಿಸುತ್ತೇನೆ. ಯಾರದೇ ಪಾತ್ರದಲ್ಲಿ ಬದಲಾವಣೆಯಾಗಲು ಸಾಧ್ಯವಿಲ್ಲ. ಇದು
ಮಾಡಿ-ಮಾಡಲ್ಪಟ್ಟ ಆಟವಾಗಿದೆ. ಇದೂ ಸಹ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಯಾವಾಗ
ಪವಿತ್ರರಾಗಿ ತಿಳಿದುಕೊಳ್ಳುವರೋ ಆಗ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಚೆನ್ನಾಗಿ
ತಿಳಿದುಕೊಳ್ಳುವುದಕ್ಕಾಗಿಯೇ ಈ 7 ದಿನಗಳ ಭಟ್ಟಿಯಿದೆ. ಭಾಗವತ ಇತ್ಯಾದಿಗಳನ್ನು 7 ದಿನಗಳು
ಇಡುತ್ತಾರೆ. ಇಲ್ಲಿಯೂ ಸಹ ಕೊನೆ ಪಕ್ಷ 7 ದಿನಗಳ ವಿನಃ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ.
ಕೆಲವರಂತೂ ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಇನ್ನೂ ಕೆಲವರು 7 ದಿನಗಳ ಕಾಲ ತಿಳಿದುಕೊಂಡೂ
ಸಹ ಏನೂ ಅರ್ಥ ಮಾಡಿಕೊಳ್ಳುವುದಿಲ್ಲ. ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನಾನಂತೂ 7 ದಿನಗಳ
ಕಾಲ ಬಂದೆನು, ನಮ್ಮ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳುವುದಿಲ್ಲವೆಂದು ಹೇಳಿ ಬಿಡುತ್ತಾರೆ.
ಶ್ರೇಷ್ಠ ಪದವಿಯನ್ನೂ ಪಡೆಯುವ ಭಾಗ್ಯವೂ ಇಲ್ಲವೆಂದರೆ ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ.
ಆದರೂ ಸಹ ಅವರ ಕಲ್ಯಾಣವಂತೂ ಆಯಿತಲ್ಲವೆ. ಪ್ರಜೆಗಳು ಈ ರೀತಿಯಾಗಿಯೇ ತಯಾರಾಗುತ್ತಾರೆ ಬಾಕಿ ರಾಜ್ಯ
ಭಾಗ್ಯವನ್ನು ತೆಗೆದುಕೊಳ್ಳುವುದರಲ್ಲಿ ಗುಪ್ತ ಪರಿಶ್ರಮವಿದೆ. ತಂದೆಯನ್ನು ನೆನಪು ಮಾಡುವುದರಿಂದಲೇ
ವಿಕರ್ಮಗಳು ವಿನಾಶವಾಗುತ್ತವೆ. ಈಗ ಮಾಡಿ ಅಥವಾ ಮಾಡದೇ ಇರಿ ಆದರೆ ತಂದೆಯ ಆದೇಶವು ಇದಾಗಿದೆ -
ಪ್ರಿಯವಾದ ವಸ್ತುವನ್ನು ನೆನಪು ಮಾಡಲಾಗುತ್ತದೆಯಲ್ಲವೆ. ಹೇ ಪತಿತ-ಪಾವನ ಬನ್ನಿ ಎಂದು ಭಕ್ತಿ
ಮಾರ್ಗದಲ್ಲಿಯೂ ಹಾಡುತ್ತಾರೆ. ಈಗ ಅವರು ಸಿಕ್ಕಿದ್ದಾರೆ, ನನ್ನನ್ನು ನೆನಪು ಮಾಡಿದರೆ ನಿಮ್ಮ
ತುಕ್ಕು ಇಳಿಯುವುದೆಂದು ಹೇಳುತ್ತಾರೆ. ರಾಜ್ಯಭಾಗ್ಯವು ಸಹಜವಾಗಿ ಸಿಗಲು ಸಾಧ್ಯವೇ? ಸ್ವಲ್ಪವಾದರೂ
ಪರಿಶ್ರಮವಾಗುತ್ತದೆಯಲ್ಲವೆ. ನೆನಪಿನಲ್ಲಿಯೇ ಪರಿಶ್ರಮವಿದೆ. ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ.
ಬಹಳ ನೆನಪು ಮಾಡುವವರು ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತಾರೆ. ಪೂರ್ಣ ನೆನಪು ಮಾಡದಿದ್ದರೆ
ವಿಕರ್ಮ ವಿನಾಶವಾಗುವುದಿಲ್ಲ. ಯೋಗಬಲದಿಂದಲೇ ವಿಕರ್ಮಾಜೀತರಾಗಬೇಕಾಗಿದೆ. ಮೊದಲೂ ಸಹ ಯೋಗ ಬಲದಿಂದಲೇ
ವಿಕರ್ಮಗಳನ್ನು ಜಯಿಸಿದ್ದಿರಿ. ಯಾವಾಗ ಕಲಿಯುಗದ ಅಂತ್ಯದಲ್ಲಿ ಯಾರೂ ಪವಿತ್ರರಿರಲಿಲ್ಲ ಅಂದಮೇಲೆ
ಲಕ್ಷ್ಮೀ-ನಾರಾಯಣರು ಇಷ್ಟು ಪವಿತ್ರರು ಹೇಗಾದರು! ಇದಂತೂ ಸ್ಪಷ್ಟವಾಗಿದೆ. ಈ ಗೀತಾ ಜ್ಞಾನದ ಭಾಗವು
ಪುನರಾವರ್ತನೆಯಾಗುತ್ತಿದೆ. “ಶಿವ ಭಗವಾನುವಾಚ” ತಪ್ಪುಗಳಂತೂ ಆಗುತ್ತಿರುತ್ತವೆಯಲ್ಲವೆ. ತಂದೆಯೇ
ಬಂದು ಸುಧಾರಣೆ ಮಾಡುತ್ತಿರುತ್ತಾರೆ. ಭಾರತದ ಯಾವುದೆಲ್ಲಾ ಶಾಸ್ತ್ರಗಳಿವೆಯೋ ಎಲ್ಲವೂ
ಭಕ್ತಿಮಾರ್ಗದ್ದಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಯಾವುದನ್ನು ಹೇಳಿದ್ದೆನೋ ಅದು ಯಾರಿಗೂ
ತಿಳಿದಿಲ್ಲ. ಯಾರಿಗೆ ತಿಳಿಸಿದ್ದೆನೋ ಅವರು ಪದವಿಯನ್ನು ಪಡೆದರು. 21 ಜನ್ಮಗಳ ಪ್ರಾಲಬ್ಧವನ್ನು
ಪಡೆದರು ನಂತರ ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ. ನೀವೇ ಚಕ್ರವನ್ನು ಸುತ್ತಿ ಬಂದಿದ್ದೀರಿ.
ಕಲ್ಪದ ಮೊದಲೂ ಯಾರು ಕೇಳಿದ್ದರೊ ಅವರೇ ಬರುತ್ತಾರೆ. ನಾವೀಗ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ
ಸಸಿಯನ್ನು ನಾಟಿ ಮಾಡುತ್ತಿದ್ದೇವೆಂದು ನಿಮಗೆ ತಿಳಿದಿದೆ. ಇದು ದೈವೀ ವೃಕ್ಷದ ನಾಟಿಯಾಗಿದೆ.
ಅವರಂತೂ ಆ ವೃಕ್ಷಗಳ ಬಹಳ ನಾಟಿ ಮಾಡುತ್ತಿರುತ್ತಾರೆ. ತಂದೆಯು ಬಂದು ವ್ಯತ್ಯಾಸವನ್ನು
ತಿಳಿಸುತ್ತಾರೆ. ತಂದೆಯು ದೈವೀ ಹೂಗಳ ನಾಟಿ ಮಾಡುತ್ತಾರೆ. ಅವರಂತು ಅರಣ್ಯದ ನಾಟಿ
ಮಾಡುತ್ತಿರುತ್ತಾರೆ. ಕೌರವರು ಮತ್ತು ಪಾಂಡವರು ಏನು ಮಾಡಿ ಹೋದರು, ಮನುಷ್ಯರ ಯೋಜನೆ ಏನು ಮತ್ತು
ನಿಮ್ಮ ಯೋಜನೆಗಳೇನು ಎಂಬುದನ್ನೂ ತೋರಿಸುತ್ತೀರಿ. ಮನುಷ್ಯರ ಪ್ರಪಂಚವು ವೃದ್ಧಿಯಾಗದಿರಲಿ, ಕುಟುಂಬ
ಕಲ್ಯಾಣ ಯೋಜನೆ ಮಾಡಬೇಕು ಯಾವುದರಿಂದ ಜನಸಂಖ್ಯೆಯು ಹೆಚ್ಚಾಗಬಾರದು ಎಂದು ತಮ್ಮ ಪ್ಲಾನ್
ಮಾಡುತ್ತಾರೆ ಅದಕ್ಕಾಗಿ ಪರಿಶ್ರಮ ಪಡುತ್ತಿರುತ್ತಾರೆ. ತಂದೆಯಂತೂ ಬಹಳ ಒಳ್ಳೆಯ ಮಾತನ್ನು
ತಿಳಿಸುತ್ತಾರೆ, ಅನೇಕ ಧರ್ಮಗಳು ವಿನಾಶವಾಗುತ್ತವೆ ಮತ್ತು ಒಂದೇ ದೇವಿ-ದೇವತಾ ಧರ್ಮದ ಪರಿವಾರವನ್ನು
ಸ್ಥಾಪನೆ ಮಾಡುತ್ತಾರೆ. ಸತ್ಯಯುಗದಲ್ಲಿ ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮದ ಕುಟುಂಬ ಇತ್ತು
ಮತ್ತು ಇಷ್ಟೊಂದು ಕುಟುಂಬಗಳಿರಲಿಲ್ಲ. ಭಾರತದಲ್ಲಿ ಎಷ್ಟೊಂದು ಕುಟುಂಬಗಳಿವೆ! ಗುಜರಾತಿ ಕುಟುಂಬ,
ಮಹಾರಾಷ್ಟ್ರದವರ ಕುಟುಂಬ.... ವಾಸ್ತವದಲ್ಲಿ ಭಾರತವಾಸಿಗಳದು ಒಂದೇ ಕುಟುಂಬವಿರಬೇಕು. ಅನೇಕ
ಕುಟುಂಬಗಳಿದ್ದರೆ ಅವಶ್ಯವಾಗಿ ಪರಸ್ಪರ ಕಿರಿ ಕಿರಿಯಿರುತ್ತದೆ ಮತ್ತೆ ಹೊಡೆದಾಟಗಳಾಗುತ್ತವೆ.
ಕುಟುಂಬಗಳಲ್ಲಿಯೂ ಸಾಮಾಜಿಕ ಯುದ್ಧವಾಗುತ್ತದೆ, ಹೇಗೆ ಕ್ರಿಶ್ಚಿಯನ್ನರದು ತಮ್ಮ ಕುಟುಂಬವಿದೆ ಆದರೆ
ಅವರ ಪರಸ್ಪರದಲ್ಲಿಯೂ ಯುದ್ಧವಾಗುತ್ತದೆ. ಪರಸ್ಪರ ಕ್ರಿಶ್ಚಿಯನ್ನರಿಬ್ಬರೂ ಸೇರುವುದಿಲ್ಲ. ನೀರನ್ನೂ
ಹಂಚಲಾಗುತ್ತದೆ. ಸಿಖ್ಖ್ ಧರ್ಮದವರು ತಿಳಿದುಕೊಳ್ಳುತ್ತಾರೆ, ನಾನು ನಮ್ಮ ಸಿಖ್ಖ್ ಧರ್ಮದವರಿಗೆ
ಹೆಚ್ಚು ಸುಖವನ್ನು ಕೊಡಬೇಕು, ಮಮತೆಯಿರುವ ಕಾರಣ ತಲೆ ಕೆಡಿಸಿಕೊಳ್ಳುತ್ತಾರೆ. ಯಾವಾಗ
ಅಂತ್ಯವಾಗುವುದೋ ಆಗ ಸಾಮಾಜಿಕ ಯುದ್ಧಗಳೆಲ್ಲವೂ ಬಂದು ಬಿಡುತ್ತವೆ. ಪರಸ್ಪರ
ಹೊಡೆದಾಡಲಾರಂಭಿಸುತ್ತಾರೆ. ವಿನಾಶವಂತೂ ಆಗಲೇಬೇಕಾಗಿದೆ. ಅನೇಕ ಬಾಂಬುಗಳನ್ನು
ತಯಾರಿಸುತ್ತಿರುತ್ತಾರೆ. ಮಹಾ ಯುದ್ಧವಾದಾಗ ಅದರಲ್ಲಿ ಎರಡು ಬಾಂಬುಗಳನ್ನು ಹಾಕಿದ್ದರು ಆದರೆ ಈಗಂತೂ
ಬಹಳಷ್ಟು ತಯಾರಿಸಿದ್ದಾರೆ, ಇದು ಬಹಳ ತಿಳಿದುಕೊಳ್ಳುವ ಮಾತಲ್ಲವೆ. ನೀವು ತಿಳಿಸಬೇಕು - ಇದು ಅದೇ
ಮಹಾಭಾರತ ಯುದ್ಧವಾಗಿದೆ. ದೊಡ್ಡ-ದೊಡ್ಡವರು ಯಾರೆಲ್ಲರೂ ಇದ್ದಾರೆಯೋ ಎಲ್ಲರೂ ಹೇಳುತ್ತಾರೆ.
ಒಂದುವೇಳೆ ಈ ಯುದ್ಧವನ್ನು ನಿಲ್ಲಿಸದಿದ್ದರೆ ಇಡೀ ಪ್ರಪಂಚಕ್ಕೇ ಬೆಂಕಿ ಬೀಳುವುದು. ಬೆಂಕಿಯಂತೂ
ಬೀಳಲೇಬೇಕಾಗಿದೆ, ಅದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಆದಿ ಸನಾತನ ದೇವಿ-ದೇವತಾ ಧರ್ಮದ
ಸ್ಥಾಪನೆ ಮಾಡುತ್ತಿದ್ದಾರೆ. ಇದು ಸತ್ಯಯುಗಕ್ಕಾಗಿ ರಾಜಯೋಗವಾಗಿದೆ. ಆ ದೇವಿ-ದೇವತಾ ಧರ್ಮವು ಈಗ
ಪ್ರಾಯಲೋಪವಾಗಿದೆ, ಚಿತ್ರಗಳೂ ಇವೆ. ತಂದೆಯು ತಿಳಿಸುತ್ತಾರೆ - ಕಲ್ಪದ ಮೊದಲಿನ ತರಹ ಯಾವ ವಿಘ್ನಗಳು
ಬರಬೇಕೋ ಎಲ್ಲವೂ ಬರುವವು. ಮೊದಲೇ ತಿಳಿಯುತ್ತದೆಯೇ! ಆದ ನಂತರ ಕಲ್ಪದ ಹಿಂದೆಯೂ ಈ ರೀತಿಯಾಗಿತ್ತು
ಎಂದು ತಿಳಿದುಕೊಳ್ಳಲಾಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಡ್ರಾಮಾದಲ್ಲಿ ನಾವು
ಬಂಧಿತರಾಗಿದ್ದೇವೆ. ನೆನಪಿನಯಾತ್ರೆಯನ್ನು ಮರೆಯಬಾರದು, ಇದಕ್ಕೆ ಪರೀಕ್ಷೆಯೆಂದು ಹೇಳಲಾಗುತ್ತದೆ.
ನೆನಪಿನ ಯಾತ್ರೆಯಲ್ಲಿ ನಿಲ್ಲಲು ಸಾಧ್ಯವಿಲ್ಲ, ಸುಸ್ತಾಗಿ ಬಿಡುತ್ತಾರೆ. ರಾತ್ರಿಯ ಪ್ರಯಾಣಿಕನೇ
ಸುಸ್ತಾಗಬೇಡ..... ಎಂದು ಗೀತೆಯಿದೆಯಲ್ಲವೆ. ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಇದು
ನೆನಪಿನ ಯಾತ್ರೆಯಾಗಿದೆ, ಇದರಿಂದ ರಾತ್ರಿಯು ಮುಕ್ತಾಯವಾಗಿ ದಿನವು ಬರುವುದು. ಅರ್ಧ ಕಲ್ಪವು
ಪೂರ್ಣವಾಗಿ ಮತ್ತೆ ಸುಖವು ಆರಂಭವಾಗುವುದು. ತಂದೆಯೇ ಮನ್ಮನಾಭವದ ಅರ್ಥವನ್ನು ತಿಳಿಸಿದ್ದಾರೆ.
ಕೇವಲ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಆ ಶಕ್ತಿಯು ಉಳಿದಿಲ್ಲ. ಈಗಂತೂ ಎಲ್ಲರ
ಕಲ್ಯಾಣವಾಗಬೇಕಾಗಿದೆ ಅಂದರೆ ನಾವು ಎಲ್ಲಾ ಮನುಷ್ಯ ಮಾತ್ರರ ಕಲ್ಯಾಣ ಮಾಡುತ್ತಿದ್ದೇವೆ. ವಿಶೇಷವಾಗಿ
ಭಾರತ ಮತ್ತು ಇಡೀ ಪ್ರಪಂಚದ ಕಲ್ಯಾಣವನ್ನು ಶ್ರೀಮತದನುಸಾರ ನಾವು ಮಾಡುತ್ತಿದ್ದೇವೆ. ಯಾರು
ಕಲ್ಯಾಣಕಾರಿಗಳಾಗುವರೋ ಅವರಿಗೇ ಆಸ್ತಿಯು ಸಿಗುವುದು. ನೆನಪಿನ ಯಾತ್ರೆಯ ವಿನಃ ಕಲ್ಯಾಣವಾಗಲು
ಸಾಧ್ಯವಿಲ್ಲ.
ಈಗ ನಿಮಗೆ
ತಿಳಿಸಲಾಗುತ್ತದೆ - ಇವರು ಬೇಹದ್ದಿನ ತಂದೆಯಾಗಿದ್ದಾರೆ, ತಂದೆಯಿಂದ ಆಸ್ತಿಯು ಸಿಕ್ಕಿತ್ತು,
ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಪುನರ್ಜನ್ಮದ ಲೆಕ್ಕವೂ ಇದೆ. 84
ಜನ್ಮಗಳನ್ನು ಯಾರು ತೆಗೆದುಕೊಳ್ಳುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ತಮ್ಮದೇ ಶ್ಲೋಕಗಳನ್ನು
ಮಾಡಿ ತಿಳಿಸುತ್ತಿರುತ್ತಾರೆ. ಅದೇ ಗೀತೆಯಾಗಿದೆ ಆದರೆ ಅನೇಕ ಟೀಕೆಗಳನ್ನು ಬರೆದುಬಿಡುತ್ತಾರೆ.
ಗೀತೆಗಿಂತಲೂ ಭಾಗವತವನ್ನು ದೊಡ್ಡದನ್ನಾಗಿ ಮಾಡಿ ಬಿಟ್ಟಿದ್ದಾರೆ. ಗೀತೆಯಲ್ಲಿ ಜ್ಞಾನವಿದೆ,
ಭಾಗವತದಲ್ಲಿ ಜೀವನ ಚರಿತ್ರೆಯಿದೆ. ವಾಸ್ತವದಲ್ಲಿ ಗೀತೆಯು ದೊಡ್ಡದಿರಬೇಕು, ಜ್ಞಾನ ಸಾಗರನು
ತಂದೆಯಾಗಿದ್ದಾರೆ. ಅವರ ಜ್ಞಾನವು ನಡೆಯುತ್ತಲೇ ಇರುತ್ತದೆ. ಆ ಗೀತೆಯನ್ನಂತೂ ಅರ್ಧ ಗಂಟೆಯಲ್ಲಿ ಓದಿ
ಬಿಡುತ್ತಾರೆ. ಈಗ ನೀವು ಬರೆಯುತ್ತೀರಿ, ಜ್ಞಾನವನ್ನು ಕೇಳುತ್ತಲೇ ಬರುತ್ತೀರಿ. ದಿನ-ಪ್ರತಿದಿನ
ನಿಮ್ಮ ಬಳಿ ಬರುತ್ತಾ ಇರುತ್ತಾರೆ, ಕ್ರಮೇಣವಾಗಿ ಬರುತ್ತಾರೆ. ಈಗಲೇ ಒಂದುವೇಳೆ ದೊಡ್ಡ-ದೊಡ್ಡ
ರಾಜರು ಬಂದು ಬಿಟ್ಟರೆ ಮತ್ತೆ ತಡವಾಗುವುದಿಲ್ಲ. ಬಹು ಬೇಗನೆ ತಂದೆಯ ಪ್ರತ್ಯಕ್ಷತೆಯಾಗಿ ಬಿಡುವುದು
ಆದ್ದರಿಂದ ಯುಕ್ತಿಯಿಂದ ನಿಧಾನ-ನಿಧಾನವಾಗಿ ನಡೆಯುತ್ತಿರುತ್ತದೆ. ಇದು ಗುಪ್ತ ಜ್ಞಾನವಾಗಿದೆ. ಇವರು
ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ. ರಾವಣನ ಜೊತೆ ನಿಮ್ಮ ಯುದ್ಧವು ಹೇಗಾಗುತ್ತದೆ.
ನಿಮ್ಮನ್ನು ನೀವೇ ತಿಳಿದುಕೊಂಡಿದ್ದೀರಿ, ಮತ್ತ್ಯಾರೂ ತಿಳಿದುಕೊಂಡಿಲ್ಲ. ಭಗವಾನುವಾಚ - ನೀವು
ಸತೋಪ್ರಧಾನರಾಗಲು ನನ್ನನ್ನು ನೆನಪು ಮಾಡಿ ಆಗ ಪಾಪನಾಶವಾಗಿ ಬಿಡುತ್ತದೆ. ಪವಿತ್ರರಾಗಿ, ಆಗ ಜೊತೆ
ಕರೆದುಕೊಂಡು ಹೋಗುವೆನು, ಜೀವನ್ಮುಕ್ತಿಯು ಎಲ್ಲರಿಗೂ ಸಿಗುವುದು. ರಾವಣ ರಾಜ್ಯದಿಂದ ಮುಕ್ತಿಯಾಗಿ
ಬಿಡುವುದು. ನೀವು ಬರೆಯುತ್ತೀರಿ - ನಾವು ಶಿವ ಶಕ್ತಿ ಬ್ರಹ್ಮಾಕುಮಾರ-ಕುಮಾರಿಯರು, ಶ್ರೇಷ್ಠಾಚಾರಿ
ಪ್ರಪಂಚವನ್ನು ಸ್ಥಾಪನೆ ಮಾಡುತ್ತೀರಿ - ಪರಮಪಿತ ಪರಮಾತ್ಮನ ಶ್ರೀಮತದಂತೆ 5000 ವರ್ಷಗಳ ಹಿಂದಿನ
ತರಹ. 5000 ವರ್ಷಗಳ ಮೊದಲೂ ಶ್ರೇಷ್ಠಾಚಾರಿ ಪ್ರಪಂಚವಿತ್ತು, ಇದನ್ನು ಬುದ್ಧಿಯಲ್ಲಿ ಕೂರಿಸಬೇಕು.
ಮುಖ್ಯ-ಮುಖ್ಯವಾದ ಮಾತುಗಳು ಬುದ್ಧಿಯಲ್ಲಿ ಧಾರಣೆಯಾಗಿದ್ದಾಗ ನೆನಪಿನ ಯಾತ್ರೆಯಲ್ಲಿರುತ್ತಾರೆ.
ಕಲ್ಲು ಬುದ್ಧಿಯವರಲ್ಲವೆ. ಇನ್ನೂ ಸಮಯವಿದೆ, ಕೊನೆಯಲ್ಲಿ ಪುರುಷಾರ್ಥ ಮಾಡೋಣ ಎಂದು ಕೆಲವರು
ತಿಳಿದುಕೊಳ್ಳುತ್ತಾರೆ ಆದರೆ ಮೃತ್ಯುವಿಗೆ ನಿಯಮವಿದೆಯೇ? ನಾಳೆ, ನಾಳೆ ಎನ್ನುತ್ತಾ ಸತ್ತು
ಹೋಗುತ್ತಾರೆ. ಪುರುಷಾರ್ಥವನ್ನಂತೂ ಮಾಡಲಿಲ್ಲ ಆದ್ದರಿಂದ ಇನ್ನೂ ಬಹಳಷ್ಟು ವರ್ಷಗಳಿವೆ, ಕೊನೆಯಲ್ಲಿ
ಮಾಡಿ ಬಿಡೋಣ ಎಂದು ತಿಳಿಯಬೇಡಿ, ಈ ವಿಚಾರವು ಇನ್ನೂ ಬೀಳಿಸಿ ಬಿಡುವುದು. ಎಷ್ಟು ಸಾಧ್ಯವೋ
ಪುರುಷಾರ್ಥ ಮಾಡುತ್ತಾ ಇರಿ. ಶ್ರೀಮತದಂತೆ ಪ್ರತಿಯೊಬ್ಬರೂ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ,
ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು - ನಾನು ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ? ಎಷ್ಟು ತಂದೆಯ
ಸೇವೆ ಮಾಡುತ್ತೇನೆ? ನೀವು ಆತ್ಮಿಕ ಈಶ್ವರೀಯ ಸೇವಾಧಾರಿಗಳಾಗಿದ್ದೀರಲ್ಲವೆ. ನೀವು ಆತ್ಮರನ್ನು
ರಕ್ಷಣೆ ಮಾಡುತ್ತೀರಿ. ಆತ್ಮವು ಪತಿತನಿಂದ ಹೇಗೆ ಪಾವನವಾಗುವುದು, ಅದಕ್ಕಾಗಿ ಯುಕ್ತಿಗಳನ್ನು
ತಿಳಿಸುತ್ತೀರಿ. ಪ್ರಪಂಚದಲ್ಲಿ ಒಳ್ಳೆಯ ಮತ್ತು ಕೆಟ್ಟ ಮನುಷ್ಯರಂತೂ ಇದ್ದೇ ಇರುತ್ತಾರೆ.
ಪ್ರತಿಯೊಬ್ಬರ ಪಾತ್ರವೂ ಬೇರೆ-ಬೇರೆಯಾಗಿದೆ. ಇದು ಬೇಹದ್ದಿನ ಮಾತಾಗಿದೆ. ಮುಖ್ಯವಾದ
ರೆಂಬೆ-ಕೊಂಬೆಗಳನ್ನೇ ಎಣಿಕೆ ಮಾಡಲಾಗುತ್ತದೆ. ಬಾಕಿ ಎಲೆಗಳಂತೂ ಬಹಳಷ್ಟಿವೆ. ತಂದೆಯು
ತಿಳಿಸುತ್ತಿರುತ್ತಾರೆ - ಮಕ್ಕಳೇ, ಪರಿಶ್ರಮ ಪಡಿ, ಎಲ್ಲರಿಗೆ ತಂದೆಯ ಪರಿಚಯ ಕೊಡಿ ಇದರಿಂದ
ತಂದೆಯೊಂದಿಗೆ ಬುದ್ಧಿಯೋಗವು ಜೋಡಣೆಯಾಗಲಿ. ತಂದೆಯು ಎಲ್ಲಾ ಮಕ್ಕಳಿಗೆ ತಿಳಿಸುತ್ತಾರೆ -
ಪವಿತ್ರರಾದರೆ ಮುಕ್ತಿಧಾಮದಲ್ಲಿ ಹೋಗುವಿರಿ. ಮಹಾಭಾರತ ಯುದ್ಧದಿಂದ ಏನಾಗುವುದೆಂದು ಪ್ರಪಂಚದವರಿಗೆ
ಗೊತ್ತಿಲ್ಲ. ಈ ಜ್ಞಾನ ಯಜ್ಞವು ರಚಿಸಲ್ಪಟ್ಟಿದೆ ಏಕೆಂದರೆ ಹೊಸ ಪ್ರಪಂಚವು ಬೇಕು. ನಮ್ಮ ಯಜ್ಞವು
ಪೂರ್ಣವಾದರೆ ಎಲ್ಲವೂ ಈ ಯಜ್ಞದಲ್ಲಿ ಸ್ವಾಹಾ ಆಗಿ ಬಿಡುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಇದು
ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ ಆದ್ದರಿಂದ ವಿಘ್ನಗಳಿಗೆ ಗಾಬರಿಯಾಗಬಾರದು. ವಿಘ್ನಗಳಲ್ಲಿ ನೆನಪಿನ
ಯಾತ್ರೆಯನ್ನು ಮರೆಯಬಾರದು. ಗಮನವಿರಲಿ, ನೆನಪಿನ ಯಾತ್ರೆಯು ಎಂದೂ ನಿಲ್ಲಬಾರದು.
2. ಪಾರಲೌಕಿಕ ತಂದೆಯ
ಪರಿಚಯವನ್ನು ಎಲ್ಲರಿಗೆ ಕೊಡುತ್ತಾ ಪಾವನರಾಗುವ ಯುಕ್ತಿಯನ್ನು ತಿಳಿಸಬೇಕಾಗಿದೆ. ದೈವೀ ವೃಕ್ಷದ
ನಾಟಿ ಮಾಡಬೇಕಾಗಿದೆ.
ವರದಾನ:
‘ನಾನು ಎಂಬುದರ’
ತ್ಯಾಗ ಮಾಡುತ್ತಾ ಸೇವೆಯಲ್ಲಿ ಸದಾ ಮಗ್ನರಾಗಿರುವಂತಹ ತ್ಯಾಗ ಮೂರ್ತಿ, ಸೇವಾಧಾರಿ ಭವ.
ಸೇವಾಧಾರಿಯು ಸೇವೆಯಲ್ಲಿ
ಸಫಲತೆಯ ಅನುಭೂತಿಯನ್ನು ಆಗಲೇ ಮಾಡಬಹುದು, ಯಾವಾಗ “ನಾನು” ಎಂಬುದರ ತ್ಯಾಗವಾಗಿರುತ್ತದೆ. ನಾನು
ಸೇವೆ ಮಾಡುತ್ತಿದ್ದೇನೆ, ನಾನು ಸೇವೆಯನ್ನು ಮಾಡಿದೆನು - ಈ ಸೇವಾ ಭಾವದ ತ್ಯಾಗವಿರಲಿ. ನಾನು
ಎಂಬುದಿರಬಾರದು ಆದರೆ ನಾನು ಮಾಡುವವನು, ಮಾಡಿಸುವವರು ತಂದೆಯಾಗಿದ್ದಾರೆ. “ನಾನು” ಎಂಬುದು ತಂದೆಯ
ಪ್ರೀತಿಯಲ್ಲಿ ಲೀನವಾಗಿ ಬಿಡಲಿ - ಇದಕ್ಕೆ ಸೇವೆಯಲ್ಲಿ ಸದಾ ಮಗ್ನವಾಗಿರುವ ತ್ಯಾಗಮೂರ್ತಿ - ಸತ್ಯ
ಸೇವಾಧಾರಿ ಎಂದು ಹೇಳಲಾಗುವುದು. ಮಾಡಿಸುವವರು ಮಾಡಿಸುತ್ತಿದ್ದಾರೆ, ನಾವು ನಿಮಿತ್ತ ಆಗಿದ್ದೇವೆ.
ಸೇವೆಯಲ್ಲಿ “ನಾನು” ಎಂಬುದು ಸೇರ್ಪಡೆ ಆಗುವುದು ಅರ್ಥಾತ್ ಮೋಹ್ತಾಜ್ ಆಗುವುದು. ಸತ್ಯ
ಸೇವಾಧಾರಿಯಲ್ಲಿ ಈ ಸಂಸ್ಕಾರವಿರಲು ಸಾಧ್ಯವಿಲ್ಲ.
ಸ್ಲೋಗನ್:
ವ್ಯರ್ಥವನ್ನು
ಸಮಾಪ್ತಿಗೊಳಿಸಿಬಿಡಿ, ಅದರಿಂದ ಸೇವೆಯ ಅವಕಾಶಗಳು ತಮ್ಮ ಮುಂದೆ ಬರುತ್ತವೆ.
ಅವ್ಯಕ್ತ ಸೂಚನೆ:- ಏಕತೆ
ಮತ್ತು ವಿಶ್ವಾಸದ ಗುಣ ಲಕ್ಷಣಗಳ ಮೂಲಕ ಸಫಲತಾ ಸಂಪನ್ನರಾಗಿರಿ.
ಏಕತೆಗಾಗಿ ಸ್ವಯಂನಲ್ಲಿ
ಸಮಾವೇಶಿಸುವ ಶಕ್ತಿ ಬೇಕು, ಇದರಿಂದ ಇನ್ನೊಬ್ಬರ ಸಂಸ್ಕಾರ ಅವಶ್ಯವಾಗಿ ಶೀತಲವಾಗುವುದು. ಸದಾ
ಒಬ್ಬರಿನ್ನೊಬ್ಬರಲ್ಲಿ ಸ್ನೇಹದ, ಶ್ರೇಷ್ಠತೆಯ ಭಾವನೆಯಿಂದ ಸಂಪರ್ಕದಲ್ಲಿ ಬನ್ನಿ, ಗುಣಗ್ರಾಹಿಯಾಗಿ
ಆಗ ಏಕತೆ ಕಾಯಮರಾಗಲು ಸಾಧ್ಯ. ನಿಮ್ಮ ಸಂಘಟನೆಯ ಶುಭ ಭಾವನೆ ಅನೇಕ ಆತ್ಮರಿಗೆ ಭಾವನೆಯ ಫಲ
ಕೊಡಿಸುವುದಕ್ಕೆ ನಿಮಿತ್ತವಾಗುವುದು. ಅವರಿಗೆ ಹೊಸ ದಾರಿ ಸಿಗುವುದು.