03.05.26    Avyakt Bapdada     Kannada Murli    18.01.2010     Om Shanti     Madhuban


“ಬ್ರಹ್ಮಾ ತಂದೆಯ ಸಮಾನ ನಷ್ಟಮೋಹ ಸ್ಮೃತಿ ಸ್ವರೂಪರಾಗಲು ಮನಸ್ಸಿನ ವೇಳಾಪಟ್ಟಿ ಮಾಡಿ ಕರ್ಮ ಮಾಡುತ್ತಾ ಕರ್ಮ ಯೋಗಿ ಅಶರೀರಿ ಆಗುವ ಅಭ್ಯಾಸ ಮಾಡಿ”


ಈ ದಿನ ನಾಲ್ಕಾರು ಕಡೆ ಮಕ್ಕಳಲ್ಲಿ ವಿಶೇಷ ಸ್ನೇಹ ಸಮಾವೇಶವಾಗಿದೆ. ಈ ದಿನಕ್ಕೆ ಸ್ಮೃತಿ ದಿವಸ ಎಂದು ಹೇಳುತ್ತಾರೆ. ಬಾಪ್ದಾದಾರವರು ಅಮೃತ ವೇಳೆಯಿಂದ ನಾಲ್ಕಾರು ಕಡೆ ದೇಶದಲ್ಲಿರಬಹುದು, ವಿದೇಶದಲ್ಲಿರಬಹುದು ಎಲ್ಲಾ ಮಕ್ಕಳ ಹೃದಯದಲ್ಲಿ ತಂದೆಯ ಸ್ನೇಹದ ಚಿತ್ರ ಕಂಡು ಬರುವುದು ನೋಡಿದ್ದಾರೆ ಮತ್ತು ತಂದೆಯ ಹೃದಯದಲ್ಲಿಯೂ ಪ್ರತಿಯೊಬ್ಬ ಮಗುವಿನ ಪ್ರತಿ ಸ್ನೇಹದ ಚಿತ್ರ ಸಮಾವೇಶ ಆಗಿತ್ತು. ಈ ದಿನಕ್ಕೆ ವಿಶೇಷ ಸ್ನೇಹದ ದಿನ, ಸ್ಮೃತಿ ದಿನ ಎಂದು ಹೇಳುತ್ತಾರೆ. ಬಾಪ್ದಾದಾರವರು ಅಮೃತವೇಳೆಯಿಂದಲೂ ಸಹ ಮೊದಲು ಮಕ್ಕಳ ಕಡೆ ಅನೇಕ ಸ್ನೇಹದ ರತ್ನಗಳ ಮಾಲೆಯನ್ನು ನೋಡಿದ್ದೇವೆ. ಪ್ರತಿಯೊಬ್ಬ ಮಗುವಿನ ಹೃದಯದಲ್ಲಿ ಸ್ವಾಭಾವಿಕವಾಗಿ ನನ್ನ ಬಾಬಾ, ಬ್ರಹ್ಮಾ ಬಾಬಾ, ಮಧುರ ಬಾಬಾ ಎಂಬ ಹಾಡು ಬರುತ್ತಿತ್ತು. ಮತ್ತು ಬಾಪ್ದಾದಾರವರ ಹೃದಯದಲ್ಲಿ ಮಧುರ ಮಕ್ಕಳೇ, ಪ್ರಿಯ ಮಕ್ಕಳೇ ಎಂಬ ಹಾಡು ಬರುತ್ತಿತ್ತು. ಈ ದಿನ ಪ್ರತಿಯೊಬ್ಬರ ಒಳಗೆ ಬೇರೆ ಶಕ್ತಿಗಳಿಗಿಂದ ಸ್ನೇಹದ ಶಕ್ತಿ ಹೆಚ್ಚು ಸಮಾವೇಶವಾಗಿದೆ. ಈ ಪರಮಾತ್ಮನ ಸ್ನೇಹ ಈಶ್ವರೀಯ ಸ್ನೇಹ ಕೇವಲ ಸಂಗಮಯುಗದಲ್ಲಿಯೇ ಅನುಭವವಾಗುತ್ತದೆ. ಪರಮಾತ್ಮನ ಸ್ನೇಹ ಅನುಭವಿಗೆ ಗೊತ್ತಾಗುತ್ತದೆ, ಯಾವುದು ಪ್ರತಿಯೊಬ್ಬ ಮಗುವನ್ನು ಸಹಜಯೋಗಿಯನ್ನಾಗಿ ಮಾಡಿ ಬಿಡುತ್ತದೆ. ಬಾಪ್ದಾದಾರವರು ಸರ್ವ ಮಕ್ಕಳಲ್ಲಿ ಸ್ನೇಹದ ಅನುಭವ ಬಹಳ-ಬಹಳ ಸಮಾವೇಶವಾಗಿರುವುದು ನೋಡಿದ್ದೇವೆ. ತಮ್ಮೆಲ್ಲರ ಜನ್ಮಕ್ಕೆ ಆಧಾರ ಸ್ನೇಹ ಆಗಿದೆ. ಬೇರೆ ಶಕ್ತಿಗಳು ಕಡಿಮೆ ಆದರೂ ತಂದೆಯ ಸ್ನೇಹ ಮತ್ತು ನಿಮಿತ್ತಾ ಆಗಿರುವ ವಿಶೇಷ ಆತ್ಮಗಳ ಸ್ನೇಹದ ಅನುಭವ ಮೆಜಾರಿಟಿ ಎಲ್ಲಾ ಮಕ್ಕಳ ಹೃದಯದಲ್ಲಿ ಚೆಹರೆಯ ಮೇಲೆ ಕಂಡು ಬರುತ್ತದೆ, ಈ ರೀತಿ ಇಲ್ಲದೆ ಇರುವ ಮಕ್ಕಳು ಯಾರೂ ಇಲ್ಲ. ಈಗ ತಾವೆಲ್ಲಾ ಮಕ್ಕಳಿಗೆ ಈ ದಿನ ವಿಶೇಷ ಇಲ್ಲಿಯವರೆಗೆ ಯಾರು ತಲುಪಿಸಿದ್ದಾರೆ? ಯಾವ ವಿಮಾನದಲ್ಲಿ ಬಂದಿದ್ದೀರಿ? ಟ್ರೈನ್ನಲ್ಲಿ ಬಂದಿದ್ದೀರಾ? ವಿಮಾನದಲ್ಲಿ ಬಂದಿದ್ದೀರಾ? ಎಲ್ಲರ ಮುಖದಲ್ಲಿ ಸ್ನೇಹದ ವಿಮಾನದಲ್ಲಿ ತಲುಪಿರುವುದು ಕಾಣಿಸುತ್ತದೆ. ಏನಾದರೂ ಮಾಡಬೇಕಾಗುತ್ತದೆ ಆದರೆ ಎಲ್ಲರೂ ಸ್ನೇಹದ ವಿಮಾನದಲ್ಲಿ ತಲುಪಿ ಬಿಟ್ಟಿದ್ದೀರಿ.

ಈ ದಿನಕ್ಕೆ ಸ್ಮೃತಿ ದಿವಸ ಎಂದು ಹೇಳಲಾಗುತ್ತದೆ ಆದರೆ ಸ್ಮೃತಿ ದಿವಸಕ್ಕೆ ಜೊತೆ-ಜೊತೆ ಸಮರ್ಥ ದಿನ ಎಂದು ಹೇಳಲಾಗುತ್ತದೆ. ಈ ದಿನಕ್ಕೆ ಕಿರೀಟವನ್ನು ಧಾರಣೆ ಮಾಡುವ ದಿನ ಎಂದು ಹೇಳಲಾಗುತ್ತದೆ ಏಕೆಂದರೆ ಈ ದಿನ ಬಾಪ್ದಾದಾರವರು ವಿಶೇಷ ಬ್ರಹ್ಮಾ ತಂದೆ ನಿಮಿತ್ತ ಆಗಿರುವ ಮಹಾವೀರ ಆತ್ಮಗಳಿಗೆ ವಿಶ್ವ ಸೇವೆಯ ಕಿರೀಟವನ್ನು ತೊಡಿಸಿದರು. ತಂದೆ, ಬ್ರಹ್ಮಾ ತಂದೆ ಸ್ವಯಂ ಗುಪ್ತವಾದರು ಮತ್ತು ಮಕ್ಕಳಿಗೆ ವಿಶ್ವ ಸೇವೆಯ ಸ್ಮೃತಿ ತಿಲಕವನ್ನು ಕೊಟ್ಟಿದ್ದಾರೆ. ಮಕ್ಕಳನ್ನು ಮಾಡುವವರನ್ನಾಗಿ ಮಾಡಿದರು ಮತ್ತು ಸ್ವಯಂ ಮಾಡಿಸುವವರು ಆಗಿದ್ದರು. ತನ್ನ ಸಮಾನ ಫರಿಸ್ಥಾ ರೂಪದ ವರದಾನವನ್ನು ಕೊಟ್ಟು ಪ್ರಕಾಶದ ಕಿರೀಟವನ್ನು ತೊಡಿಸಿದರು ಮತ್ತು ಬಾಪ್ದಾದಾ ಯಾವ ಕಿರೀಟ, ತಿಲಕದ ವರದಾನವನ್ನು ಕೊಟ್ಟರು ಅದರ ಪ್ರಮಾಣ ಮಕ್ಕಳ ಕರ್ತವ್ಯವನ್ನು ನೋಡಿ ಖುಷಿ ಆಗಿದ್ದಾರೆ. ಮಕ್ಕಳು ಸೇವೆಯ ವರದಾನವನ್ನು ಕಾರ್ಯದಲ್ಲಿ ತೆಗೆದುಕೊಂಡು ಬಂದಿರುವುದು ನೋಡಿ ಬಾಪ್ದಾದಾ ಖುಷಿ ಆದರು. ಇದುವರೆಗೆ ಯಾವ ಪಾರ್ಟ್ ಮಾಡಿದ್ದಾರೆ ಮತ್ತು ಮುಂದೆಯೂ ಮಾಡಬೇಕು. ಇದಕ್ಕೆ ಪದಮಗುಣ ಬ್ರಹ್ಮಾ ತಂದೆ ವಿಶೇಷ ಶುಭಾಶಯಗಳನ್ನು ನೀಡುತ್ತಿದ್ದಾರೆ ವಾಹ್! ಮಕ್ಕಳೇ ವಾಹ್! ವಿದೇಶಕ್ಕೂ ಹೋದಾಗ ಏನು ನೋಡಿದ್ದೇವೆ? ಪ್ರತಿಯೊಬ್ಬ ಮಗು ಸ್ನೇಹದಲ್ಲಿ ಸಮಾವೇಶ ಆಗಿದೆ. ತಂದೆಯ ಮೂಲಕ ಯಾವ ಸಮರ್ಥತೆ ಸಿಕ್ಕಿದೆ ಏಕೆಂದರೆ ಈ ದಿನ ವಿಶೇಷ ಸ್ನೇಹದಿಂದ ಸಮರ್ಥತೆಯ ವರದಾನವನ್ನು ಪ್ರಾಪ್ತಿ ಮಾಡಿಕೊಳ್ಳುವ ದಿನವಾಗಿದೆ. ಬಾಪ್ದಾದಾರವರು ನೋಡಿದರು ಕೆಲವು ಮಕ್ಕಳು ಬಹಳ ಒಳ್ಳೆಯ ಲಗನ್ನಲ್ಲಿ, ನೆನಪಿನಲ್ಲಿ, ಸೇವೆಯಲ್ಲಿ ತೊಡಗಿರುತ್ತಾರೆ. ಅಮೃತವೇಳೆ ಬಹಳ ಚೆನ್ನಾಗಿ ಅನುಭವ ಮಾಡುತ್ತಾರೆ. ಅಶರೀರಿತನದ ಅನುಭವ ಮಾಡುತ್ತಾರೆ. ಆದರೆ ಕರ್ಮಯೋಗಿ ಆಗುವ ಸಮಯ ಬಂದಾಗ ಎರಡೂ ಕಾರ್ಯಗಳನ್ನು ಯೋಗಿಯ ಮತ್ತು ಕರ್ಮದ ಎರಡು ಕಾರ್ಯಗಳನ್ನು ಒಟ್ಟುಗೂಡಿಸುವುದರಲ್ಲಿ ಅಂತರ ಆಗುತ್ತದೆ. ಕರ್ಮ ಮತ್ತು ಯೋಗದ ಬ್ಯಾಲೆನ್ಸ್ ಇರಲಿ ಎಂದು ಪುರುಷಾರ್ಥ ಮಾಡುತ್ತಾರೆ ಆದರೆ ಹೇಗೆ ಅಮೃತವೇಳೆ ಶಕ್ತಿಶಾಲಿ ಅನುಭವ ಮಾಡುತ್ತಾರೆ ಅದೇ ರೀತಿ ಕರ್ಮದಲ್ಲಿ ಅಂತರ ಆಗಿ ಬಿಡುತ್ತದೆ ಪರಿಶ್ರಮ ಮಾಡಬೇಕಾಗುತ್ತದೆ ಮತ್ತು ಬಾಪ್ದಾದಾರವರು ಎಲ್ಲಾ ಮಕ್ಕಳಿಗೆ ವಿಶ್ವದ ವಿನಾಶ ಅಚಾನಕ್ ಆಗುವುದಿದೆ. ಒಂದುವೇಳೆ ಇಡೀ ದಿನ ಅಟೆನ್ಷನ್ಗೆ ಬದಲಾಗಿ ಯಾವುದೇ ಧಾರಣೆಯ ಕೊರತೆ ಇರುವ ಕಾರಣ ಕರ್ಮ ಯೋಗಿಯ ಸ್ಥಿತಿಯಲ್ಲಿ ಅಂತರ ಬಂದಾಗ ವಿಶ್ವ ವಿನಾಶದ ತಾರೀಖಂತೂ ಬಾಪ್ದಾದಾ ಅನೌನ್ಸ್ ಮಾಡುವುದಿಲ್ಲ. ಆದರೆ ತಮ್ಮ ಜೀವನದ ಕಾಲ ಯಾವಾಗ ಸಮಾಪ್ತಿ ಆಗುತ್ತದೆ ಎಂದು ಗೊತ್ತಿದೆಯೇ? ನನ್ನ ಮೃತ್ಯು ಇಂತಹ ತಾರೀಖಿನಲ್ಲಿ ಆಗುವುದಿದೆ ಎಂದು ಯಾರಿಗಾದರೂ ಗೊತ್ತಿದೆಯೇ? ಅವರು ಕೈ ಎತ್ತಿ. ಅಚಾನಕ್ ಏನಾದರೂ ಆಗಬಹುದು. ಯಾವುದಾದರೂ ಪ್ರಕೃತಿಯಿಂದ ಆಪತ್ತು ಬಂದಾಗ ಎಷ್ಟು ಜನರ ಮೃತ್ಯು ಆಗಿ ಬಿಡುತ್ತದೆ ಅಂದಾಗ ವಿಶ್ವದ ಸಮಾಪ್ತಿಯ ತಾರೀಖಿನ ಸಂಕಲ್ಪದಿಂದ ಹುಡುಗಾಟಿಕೆ ಆಗಬಾರದು. ಎಂದಿಗೂ ಯಾವಾಗ ಎಂದು ಹೇಳಬಾರದು ಈಗ ಎಂದು ಹೇಳಬೇಕು ಎನ್ನುವುದು ತಮ್ಮ ಜಗದಾಂಬರವರ ಸ್ಲೋಗನ್ ಇತ್ತು. ನಾಳೆ ಏನಾದರೂ ಆಗಬಹುದು ಆದರೆ ನಾನು ಎವರ್ರೆಡಿ ಆಗಲೇಬೇಕು. ಅಂದಾಗ ಇಷ್ಟು ತಯಾರಿಯ ಅಟೆನ್ಷನ್ ಎಲ್ಲರಿಗೂ ಇದೆಯೇ? ತಮ್ಮ ಕರ್ಮದ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿದಿರಾ? ನಾಲ್ಕೂ ಸಬ್ಜೆಕ್ಟ್ ಜ್ಞಾನ, ಯೋಗ, ಧಾರಣೆ, ಸೇವೆ ನಾಲ್ಕೂ ವಿಷಯದ ಮೇಲೆ ತಯಾರಿ ಮಾಡಿಕೊಂಡಿದ್ದೀರಾ? ಪೂರ್ತಿ ಬೇಹದ್ದಿನ ವೈರಾಗ್ಯದ ಅನುಭವ ಚೆಕ್ ಮಾಡಿಕೊಂಡಿದ್ದೀರಾ? ತಮ್ಮ ಹೃದಯದಲ್ಲಿ ನಾನು ಎವರ್ರೆಡಿ ಆಗಿದ್ದೇನೆಯೇ? ಎಂದು ಚೆಕ್ ಮಾಡಿಕೊಂಡಿದ್ದೀರಾ? ನಷ್ಟ ಮೋಹ ಸ್ಮೃತಿ ಸ್ವರೂಪ ಏಕೆಂದರೆ ಬ್ರಹ್ಮಾ ತಂದೆಯೂ ಸಹ ಸ್ವಯಂ ಪುರುಷಾರ್ಥ ಮಾಡಿ ಈ ರೀತಿ ಮಾಡಿಕೊಂಡರು ಯಾವುದನ್ನು ಅನುಭವಿ ಮಕ್ಕಳು ನೋಡಿದರು. ಯಾವುದೇ ಕಡೆ ಈ ವಾತಾವರಣ ಇರಲಿಲ್ಲ. ಯಾವುದೇ ಲೆಕ್ಕಾಚಾರದ ಅಚನಾಕ್ ಅಶರೀರಿ ಆಗುವ ಅಭ್ಯಾಸದಿಂದ ಅಶರೀರಿ ಆಗಿ ಹಾರಿಕೊಂಡು ಹೋದರು. ಬ್ರಹ್ಮಾ ತಂದೆ ಹೋಗುವವರು ಎಂದು ಕೆಲವರು ತಿಳಿದುಕೊಂಡರೇ? ಆದರೆ ನಷ್ಟಮೋಹಿ ಆಗಿ ಮಕ್ಕಳ ಕೈಯಲ್ಲಿ ಕೈ ಇರುತ್ತಾ ಎಲ್ಲಾದರೂ ಆಕರ್ಷಣೆ ಇತ್ತೇನು? ಫರಿಸ್ಥಾ ಆಗಿ ಬಿಟ್ಟರು. ಮಕ್ಕಳಿಗೆ ಫರಿಸ್ಥಾ ಆಗುವ ತಿಲಕವನ್ನು ಕೊಟ್ಟು ಬಿಟ್ಟರು. ಆ ಕಾರಣ ಬಹಳ ಸಮಯ ಅಶರೀರತನದ ಅಭ್ಯಾಸ ಇತ್ತು. ಕೆಲವು ಅನುಭವಿ ಮಕ್ಕಳು ಯಾರು ಜೊತೆಯಲ್ಲಿ ಇದ್ದರು ಅವರು ಕರ್ಮ ಮಾಡುತ್ತಾ-ಮಾಡುತ್ತಾ ಅಶರೀರಿ ಆಗಿರುವುದನ್ನು ಅನುಭವ ಮಾಡಿದರು. ಅಂದಾಗ ಕರ್ಮಯೋಗಿ ಆಗುವುದರಲ್ಲಿ ಯಾವ ಅಂತರವಿದೆ ಇದಕ್ಕೆ ಕಾರಣ ಕರ್ಮ ಮಾಡುತ್ತಾ ನಾನು ಆತ್ಮನಾಗಿದ್ಡೇನೆ ಎಂಬ ಸ್ಮೃತಿ ಇಮರ್ಜ್ ಆಗುವುದಿಲ್ಲ. ಇದಂತೂ ಎಲ್ಲರಿಗೆ ಗೊತ್ತಿದೆ. ಆದರೆ ನಾನು ಆತ್ಮ ಎಂತಹ ಆತ್ಮನಾಗಿದ್ದೇನೆ, ನಾನು ಮಾಡಿಸುವಂತಹ ಆತ್ಮನಾಗಿದ್ದೇನೆ ಮತ್ತು ಈ ಕರ್ಮೇಂದ್ರಿಯಗಳು ಮಾಡಿಸುವಂತಹದ್ದು. ಈ ಮಾಡಿಸುವಂತಹ ಸ್ವಮಾನ ಕರ್ಮ ಮಾಡುತ್ತಾ ಸ್ಮೃತಿ ಸ್ವರೂಪದಲ್ಲಿ ಇರಲಿ, ಭಲೆ ಕರ್ಮೇಂದ್ರಿಯಗಳ ಮೂಲಕ ಕರ್ಮ ಮಾಡಿಸಬಹುದು ಆದರೆ ನಾನು ಮಾಡಿಸುವವನಾಗಿದ್ದೇನೆ, ಮಾಲೀಕನಾಗಿದ್ದೇನೆ, ಈ ಸೀಟಿನಲ್ಲಿ ಸೆಟ್ ಆಗಿ ಬಿಟ್ಟರೆ ಯಾವುದೇ ಕರ್ಮೇಂದ್ರಿಯ ಆರ್ಡರ್ನಲ್ಲಿ ಇರುತ್ತದೆ. ಸೀಟ್ ವಿನಃ ಯಾರೂ ಯಾರ ಆದೇಶವನ್ನೂ ಕೇಳುವುದಿಲ್ಲ. ಅಂದಮೇಲೆ ಮಾಡಿಸುವ ಆತ್ಮನಾಗಿದ್ದೇನೆ, ಈ ಕರ್ಮೇಂದ್ರಿಯಗಳು ಮಾಡುವಂತದ್ದಾಗಿವೆ ಮಾಡಿಸುವವರಲ್ಲ.

ಬ್ರಹ್ಮಾ ತಂದೆ ಪ್ರಾರಂಭದಲ್ಲಿ ಪ್ರತಿದಿನ ಸಮಾಪ್ತಿ ಸಮಯ ಈ ಕರ್ಮೇಂದ್ರಿಯಗಳ ರಾಜ ದರ್ಬಾರ್ ಮಾಡುತ್ತಿರುವುದನ್ನು ಬ್ರಹ್ಮಾ ತಂದೆಯ ಅನುಭವ ಕೇಳಿದ್ದೀರಿ, ಹಳೆಯ ಮಕ್ಕಳು ಈ ಡೈರಿ ನೋಡಿರಬಹುದು, ಪ್ರತಿದಿನ ದರ್ಬಾರ್ ಮಾಡುತ್ತಿದ್ದರು ಮತ್ತು ಮಾಡಿಸುವ ಮಾಲೀಕನಾಗಿ ಪ್ರತಿಯೊಂದು ಕರ್ಮೇಂದ್ರಿಯದ ಸಮಾಚಾರವನ್ನು ತೆಗೆದುಕೊಳ್ಳುತ್ತಿದ್ದರು ಮತ್ತು ಕೊಡುತ್ತಿದ್ದರು. ಇಷ್ಟು ಅಟೆನ್ಷನ್ ಪ್ರಾರಂಭದಲ್ಲಿಯೇ ಬ್ರಹ್ಮಾ ತಂದೆ ಮಾಡಿದರು ಆಂದಾಗ ತಾವೂ ಸಹ ಮಾಡಿಸುವ ಮಾಲೀಕ ಎಂದು ತಿಳಿಯಬೇಕು ಏಕೆಂದರೆ ಆತ್ಮ ರಾಜ ಆಗಿದೆ, ಈ ಕರ್ಮೇಂದ್ರಿಯಗಳು ಜೊತೆಗಾರರಾಗಿದ್ದಾವೆ, ಚೆಕ್ ಮಾಡಿಕೊಳ್ಳಬೇಕು - ಈ ದಿನ ವಿಶೇಷ ಮನಸ್ಸು-ಬುದ್ಧಿ-ಸಂಸ್ಕಾರ, ಸ್ವಭಾವ ಎಂದಾದರೂ ಹೇಳಿ, ಸಂಸ್ಕಾರ ಎಂದಾದರೂ ಹೇಳಿ ಇದರ ಸ್ಥಿತಿ ಏನಿತ್ತು? ಮತ್ತು ತಕ್ಷಣ ಚೆಕ್ ಮಾಡಿಕೊಳ್ಳುವುದರಿಂದ ನಮ್ಮ ರಾಜ ನಮ್ಮ ಸ್ಥಿತಿ-ಗತಿಯನ್ನು ವಿಚಾರಿಸುತ್ತಾರೆ ಎಂದು ಕರ್ಮೇಂದ್ರಿಯಗಳ ಮೇಲೆ ಅಟೆನ್ಷನ್ ಇರುತ್ತದೆ. ಆತ್ಮ ರಾಜಾ ಮಾಡಿಸುವಂತಹದ್ದು ಕರ್ಮೇಂದ್ರಿಯಗಳ ಮೂಲಕ ಮಾಡಿಸುವವನಾಗಿದ್ದೇನೆ ಎಂದು ಚೆಕ್ ಮಾಡಿಕೊಳ್ಳಿ. ಇಲ್ಲವೆಂದರೆ ಕೆಲವು ಮಕ್ಕಳು - ನಾವು ಕರ್ಮೇಂದ್ರಿಯಗಳಿಗೆ ಆದೇಶ ಕೊಡುತ್ತೇವೆ ಮತ್ತೆ ಆಗಿ ಬಿಡುತ್ತದೆ, ಪುರುಷಾರ್ಥ ಮಾಡುತ್ತೇವೆ ಆದರೆ ಕೆಲ-ಕೆಲವು ಸಂಸ್ಕಾರ ಅಥವಾ ಸ್ವಭಾವ ಆದೇಶದಂತೆ ಇರುವುದಿಲ್ಲ ಎಂದು ಹೇಳುವುದನ್ನು ನೋಡಿದ್ದೇವೆ. ಇದಕ್ಕೆ ಕಾರಣ ತಮ್ಮ ಈ ಸ್ವಮಾನದ ಸೀಟಿನಲ್ಲಿ ಸೆಟ್ ಆಗಿರುವುದಿಲ್ಲ. ಸೀಟ್ ಮೇಲೆ ಕುಳಿತುಕೊಳ್ಳದೆ ಎಷ್ಟೇ ಆದೇಶ ಮಾಡಿದರೂ ಆದೇಶ ಒಪ್ಪಿಕೊಳ್ಳುವವರು ಒಪ್ಪಿಕೊಳ್ಳುವುದಿಲ್ಲ ಅಂದಾಗ ಕರ್ಮ ಮಾಡುತ್ತಾ ತಮ್ಮ ಮಾಡಿಸುವಂತಹ ಮಾಲೀಕ ಎಂಬ ಸೀಟಿನಲ್ಲಿ ಸೆಟ್ ಆಗಿ ಬಿಡಿ. ಕೆಲವು ಮಕ್ಕಳು ಇದನ್ನೂ ಸಹ ಬಾಬಾರವರ ಜೊತೆ ವಾರ್ತಾಲಾಪ ಮಾಡುತ್ತಾರೆ. ಬಾಬಾ ತಾವು ನಮಗೆ ಸರ್ವಶಕ್ತಿವಂತರನ್ನಾಗಿ ಮಾಡಿದ್ದಿರಿ, ಶಕ್ತಿವಂತರೂ ಅಲ್ಲ, ಸರ್ವಶಕ್ತಿವಂತನ ವರದಾನ ಪ್ರತಿಯೊಬ್ಬ ಮಗುವಿಗೆ ಬ್ರಾಹ್ಮಣ ಜನ್ಮ ಪಡೆದುಕೊಳ್ಳುತ್ತಲೇ ಕೊಟ್ಟರು ನೆನಪಿದೆಯೇ? ತಮ್ಮ ಜನ್ಮ ದಿನದ ವರದಾನ ನೆನಪಿದೆಯೇ? ಪ್ರತಿಯೊಬ್ಬ ಮಕ್ಕಳಿಗೆ ಬಾಬಾ ಮಾಸ್ಟರ್ ಸರ್ವಶಕ್ತಿವಂತ ಭವ ಎಂಬ ವರದಾನ ಕೊಟ್ಟಿದ್ದೇವೆ. ಯಾರು ವರದಾನ ಕೊಟ್ಟಿದ್ದಾರೆ? ಆಲ್ಮೈಟಿ ಅಥಾರಿಟಿ ವರದಾನ ಕೊಟ್ಟಿದ್ದಾರೆ ಆದರೆ ಯಾವ ಸಮಯದಲ್ಲಿ ಯಾವ ಶಕ್ತಿಗಳು ಬೇಕು ಅದು ಬರುವುದಿಲ್ಲ, ಆದೇಶನುಸಾರ ನಡೆಯುವುದಿಲ್ಲ ಎಂದು ದೂರುತ್ತಾರೆ. ಈ ರೀತಿ ಏಕೆ ಆಗುತ್ತದೆ? ಸರ್ವಶಕ್ತಿವಂತ ತಂದೆಯ ವರದಾನ ಕೊಟ್ಟರು ಅಂದಾಗ ಅದಕ್ಕಿಂದ ದೊಡ್ಡದು ಯಾವುದೂ ಇರುವುದಿಲ್ಲ. ವರದಾನದ ಸ್ಥಿತಿಯಲ್ಲಿ ಸ್ಥಿತರಾಗಿ ಒಂದುವೇಳೆ ಆದೇಶ ಮಾಡಿದಾಗ, ಆದೇಶ ಮಾಡಿರುವುದು ಶಕ್ತಿ ಕೆಲಸ ಮಾಡದೆ ಇರುವುದು ಈ ರೀತಿ ಆಗಲು ಸಾಧ್ಯವಿಲ್ಲ. ಒಂದು ಆತ್ಮ ಮಾಲೀಕ ಆಗಿದೆ, ಸರ್ವ ಶಕ್ತಿವಂತನ ವರದಾನ ಸಿಕ್ಕಿದೆ. ಆ ಸ್ವರೂಪದಲ್ಲಿ ಸ್ಥಿತರಾಗಿ ಮಾಲೀಕನಾಗಿದ್ದೇನೆ, ವರದಾನವಿದೆ ಎರಡೂ ಸ್ವರೂಪದ ಸ್ಮೃತಿಯಲ್ಲಿ ಇದ್ದು ಆದೇಶ ಮಾಡಿ. ಶಕ್ತಿ ಕೆಲಸ ಮಾಡದೆ ಇರುವುದು ಅಸಂಭವ ಆಗಿದೆ ಏಕೆಂದರೆ ವರದಾನ ಮತ್ತು ತಂದೆಯ ಅಸ್ತಿಯ ಅಧಿಕಾರ ಸಂಗಮ ಯುಗದಲ್ಲಿ ತಮ್ಮೆಲ್ಲರಿಗೆ ಮಾಸ್ಟರ್ ಸರ್ವಶಕ್ತಿವಂತನ ಟೈಟಲ್ ಸಿಕ್ಕಿದೆ, ಕೇವಲ ಆ ಸ್ಥಿತಿಯಲ್ಲಿ ಸ್ಥಿತರಾಗುವುದಿಲ್ಲ, ಸದಾ ಸ್ಥಿತರಾಗುವುದಿಲ್ಲ. ಕೆಲವೊಮ್ಮೆ ಎಂಬುದು ಬಂದು ಬಿಡುತ್ತದೆ. ಈ ಕೆಲವೊಮ್ಮೆ ಎಂಬ ಶಬ್ದ ತಾವು ಬಾಹ್ಮಣರ ಡಿಕ್ಷನರಿಯಿಂದ ತೆಗೆದು ಹಾಕಿ. ಈಗೀಗ ಹಾಜಿರ್ ಆಗಬೇಕು. ಬಾಬಾ ತಮ್ಮನ್ನು ನೆನಪು ಮಾಡಿದರೆ ತಾವು ಹಾಜಿರ್ ಆಗಿ ಬಿಡುತ್ತೀರಿ ಎಂದು ತಾವು ಹೇಳುತ್ತೀರಲ್ಲವೇ. ಅನುಭವ ಇದೆಯೇ? ಕೈ ಎತ್ತಿ. ಅನುಭವ ಇದೆಯೇ? ಈಗ ನೋಡಿ ಕೈಯಂತೂ ಎತ್ತಿದ್ದೀರಿ, ತಂದೆ ಹಾಜಿರ್ ಆಗಿ ಬಿಡುತ್ತಾರೆ. ಪ್ರಭು ಹಾಜಿರಾಗಿ ಬಿಡುತ್ತಾರೆ ಅಂದಾಗ ಈ ಶಕ್ತಿ ಯಾವುದು? ಈ ಶಕ್ತಿಗಳೂ ಸಹ ತಮಗೆ ತಂದೆಯ ಆಸ್ತಿಯ ರೂಪದಲ್ಲಿ ಸಿಕ್ಕಿದೆ ಅಂದಾಗ ಮಾಲೀಕರಾಗಿ ಆದೇಶ ಮಾಡಿ. ಮಾಲೀಕರಾಗಿ ಆದೇಶ ಮಾಡುವುದಿಲ್ಲವೆಂದರೆ ಶಕ್ತಿಗಳು ಕಳೆದುಕೊಳ್ಳುತ್ತೀರಲ್ಲವೇ. ಆ ಸ್ಥಿತಿಯಲ್ಲಿ ಸ್ಥಿತರಾಗಿ ಆದೇಶ ಮಾಡುತ್ತೀರಿ ಅಂದಾಗ ಮಾಲೀಕರಾಗಿಲ್ಲವೆಂದರೆ ಆದೇಶ ಯಾರು ಒಪ್ಪುತ್ತಾರೆ.

ಬಾಪ್ದಾದಾ ಈಗ ಏನು ಬಯಸುತ್ತಾರೆ? ಗೊತ್ತಿದೆಯಲ್ಲವೇ. ನನ್ನ ಪ್ರತಿಯೊಬ್ಬ ಮಕ್ಕಳು ಕರ್ಮ ಮಾಡುತ್ತಿದ್ದರೂ ರಾಜಾ ಮಕ್ಕಳಾಗಿ ಸ್ವರಾಜ್ಯಾಧಿಕಾರಿ ಆಗಿ ಸ್ವರಾಜ್ಯದ ಸೀಟ್ನ್ನು ಬಿಡಬಾರದು ಎಂದು ತಂದೆ ಇದನ್ನೇ ಬಯಸುತ್ತಾರೆ. ರಾಜಾ ಇಡೀ ದಿನದಲ್ಲಿ ರಾಜಾನೇ ಆಗುತ್ತಾರಲ್ಲವೇ. ಕೆಲವೊಮ್ಮೆ ರಾಜನಾಗುತ್ತಾರೆ, ಕೆಲವೊಮ್ಮೆ ಆಗುವುದಿಲ್ಲ. ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ಅಥವಾ ಕುಳಿತುಕೊಳ್ಳದೆ ಇರುವುದು ಬೇರೆ ಮಾತಾಗಿದೆ ಆದರೆ ಮನೆಯಲ್ಲಿ ಇರುತ್ತಾ ನಾನು ರಾಜಾ ಆಗಿದ್ದೇನೆ ಎಂಬುದು ಮರೆಯುವುದಿಲ್ಲ. ಕರ್ಮಯೋಗಿ ಮತ್ತು ಅಮೃತವೇಳೆಯ ಯಥಾರ್ಥ ಯೋಗ ಶಕ್ತಿಶಾಲಿ ಸ್ಥಿತಿಯಲ್ಲಿ ಅಂತರ ಇರಬಾರದು. ಡಬಲ್ ಕಾರ್ಯ ಆಗಿದೆ ಆದರೆ ತಾವು ಯಾರಾಗಿದ್ದೀರಿ? ತಾವು ವಿಶ್ವದ ಪರಿವರ್ತಕರು, ವಿಶ್ವ ಕಲ್ಯಾಣಕಾರಿ ಆಗಿದ್ದೀರಿ, ಆದ್ದರಿಂದ ನಡೆಯುತ್ತಾ-ಓಡಾಡುತ್ತಾ ರಾಜ ಎಂಬುದು ಮರೆಯಬೇಡಿ, ಸೀಟನ್ನು ಬಿಡಬೇಡಿ - ತಂದೆ ಇದನ್ನೇ ಬಯಸುತ್ತಾರೆ. ಸೀಟ್ ಇಲ್ಲದೆ ಯಾರೂ ಆದೇಶವನ್ನು ಒಪ್ಪುವುದಿಲ್ಲ. ಈಗಿನ ಸಮಯದಲ್ಲಿ ನೋಡಿ ಸೀಟ್ಗಾಗಿ ಏನೇನು ಮಾಡುತ್ತಾರೆ? ತಮ್ಮ ಅಧಿಕಾರವನ್ನು ಪಡೆಯಲು ಎಷ್ಟು ಪ್ರಯತ್ನ ಮಾಡುತ್ತಾರೆ. ತಮ್ಮ ಅಧಿಕಾರವನ್ನು ಬಿಡಲು ಯಾರೂ ಬಯಸುವುದಿಲ್ಲ. ತಾವು ತಮ್ಮ ಪರಮಾತ್ಮ ಅಧಿಕಾರ ನಾನು ಯಾರಾಗಿದ್ದೇನೆ? ಸದಾ ಕರ್ಮ ಮಾಡುತ್ತೀರೆಂದರೆ ಕರ್ಮ ಮಾಡುತ್ತಲೂ ಸಹ ತಮ್ಮ ಮನಸ್ಸಿನ ದಿನಚರಿಯನ್ನು ಮಾಡಿಟ್ಟುಕೊಳ್ಳಿ. ಕರ್ಮ ಮಾಡುತ್ತಾ ಮನಸ್ಸಿನ ಸ್ವಮಾನ ಯಾವುದಿರುತ್ತದೆ? ಈಗಿನ ಸಮಯದಲ್ಲಿ ಯಾವ ಲಕ್ಷ್ಯ ಇಟ್ಟುಕೊಳ್ಳುತ್ತೀರಿ? ಪ್ರತಿಯೊಂದು ಕಾರ್ಯದ ಸಮಯ ತಮ್ಮ ಸ್ವಮಾನದ ಪಟ್ಟಿ ಇದೆ, ಭಲೆ ಭಿನ್ನ-ಭಿನ್ನ ಟೈ ಟೇಬಲ್ ಮಾಡಿ, ಹೇಗೆ ಸ್ಥೂಲ ಕಾರ್ಯದ ಟೈಂ ಟೇಬುಲ್ ಫಿಕ್ಸ್ ಮಾಡುತ್ತೀರಿ ಅದೇ ರೀತಿ ಮನಸ್ಸಿನ ಟೈಂ ಟೇಬುಲ್ ಫಿಕ್ಸ್ ಮಾಡಿ. ಈ ಸಮಯದಲ್ಲಿ ಈ ಕಾರ್ಯ ಮಾಡಬೇಕು ಎಂದು ಗೊತ್ತಾಗಿದೆ ಅದರ ಜೊತೆ ಯಾವ ಸ್ವಮಾನ ಇಟ್ಟುಕೊಳ್ಳಬೇಕು? ಮಾಲೀಕತನದ ಅಧಿಕಾರ ಯಾವ ಸ್ವಮಾನದ ರೂಪದಲ್ಲಿ ಇಟ್ಟುಕೊಳ್ಳಬೇಕು. ಈ ಮನಸ್ಸಿನ ಟೈಂ ಟೇಬುಲ್ ಮಾಡಿ. ಟೈಂ ಟೇಬುಲ್ ಮಾಡುವುದು ಬರುತ್ತಿದೆಯಲ್ಲವೇ. ಮಾತೆಯರಿಗೆ ಬರುತ್ತದೆಯೇ? ಮಾತೆಯರು ತಮಗೆ ತಾವೇ ದಿನಚರಿಯನ್ನು ಮಾಡಿಕೊಳ್ಳಿ. ಒಳ್ಳೆಯದು ಅಡುಗೆ ಮಾಡಬೇಕು ಆ ಸಮಯದಲ್ಲಿ ಯಾವ ಸ್ವಮಾನ ತಮ್ಮ ಬುದ್ಧಿಯಲ್ಲಿ ಇಮರ್ಜ್ ಆಗಬೇಕು. ಸ್ವಮಾನದ ಬಹಳ ಮಾಲೆ ಇದೆ. ಇಷ್ಟು ದೊಡ್ಡ ಮಾಲೆಯಾಗಿದೆ, ಸ್ವಮಾನವನ್ನು ಎಣಿಸುತ್ತಾ ಮಾಲೆಯಲ್ಲಿ ಸಮಾವೇಶ ಆಗಿ ಬಿಡಿ. ಈಗ ಬಹಳ ಕಾಲದ ಮಕ್ಕಳೂ ಸಹ ಈಗ ವಿನಾಶ ಏನೂ ಕಾಣಿಸುವುದಿಲ್ಲ ಎಂದು ಹೇಳುತ್ತಾರೆ. ಈಗ ತಾರೀಖು ಫಿಕ್ಸ್ ಆಗಿಲ್ಲ, ಮಾಡಿ ಬಿಡುತ್ತೇವೆ, ಆಗಿ ಬಿಡುತ್ತದೆ, ಇದು ಹುಡುಗಾಟಿಕೆಯಾಗಿದೆ. ಸಂದೇಶ ಕೊಡುವುದರಲ್ಲೂ ವಿಶ್ವ ಕಲ್ಯಾಣಕಾರಿ ಆಗಿದ್ದಾರೆ ಅಂದಾಗ ಕೆಲವು ಮಕ್ಕಳು ಈಗ ಸಮಯವಿದೆ ಎಂದು ತಿಳಿದಿದ್ದಾರೆ. ಮುಂದೆ ಹೋದಂತೆ ಸಂದೇಶ ಕೊಟ್ಟು ಬಿಡುತ್ತೇವೆ ಎಂದು ತಿಳಿದಿದ್ದಾರೆ. ಆದರೆ ಈ ರೀತಿ ಆಗುವುದಿಲ್ಲ. ಯಾರಿಗೆ ಕೊನೆಗೆ ಸಂದೇಶ ಕೊಡುತ್ತೀರಿ ಅವರು ನಿಮಗೆ ದೂರು ಕೊಡುತ್ತಾರೆ, ಯಾವ ದೂರು ಕೊಡುತ್ತಾರೆ? ತಾವು ಮೊದಲು ಏಕೆ ಹೇಳಿಲ್ಲ, ನಾವೂ ಮಾಡಿ ಬಿಡುತ್ತಿದ್ದೆವು, ತಾವು ಕೊನೆಗೆ ತಿಳಿಸಿದ್ದೀರಿ ಎಂದು ದೂರುತ್ತಾರೆ. ಅಂದಾಗ ನಾವು ಕೇವಲ ತಿಳಿದುಕೊಂಡು ಕೇವಲ ಅಹೋ! ಪ್ರಭು ತಮ್ಮ ಲೀಲೆ ಅಪರಮಪಾರವಾಗಿದೆ! ಎಂದು ಹೇಳಲು ಸಾಧ್ಯವಿದೆ. ಪದವಿಯಂತೂ ಪಡೆಯಲು ಸಾಧ್ಯವಿಲ್ಲ. ಏಕೆ? ಬಹಳ ಸಮಯದ ಸಹಯೋಗವೂ ಬೇಕಾಗಿದೆ. ತಾವೆಲ್ಲರೂ ವಾರಸುಧಾರರು ಕುಳಿತಿದ್ದೀರಲ್ಲವೇ. ಯಾರು ತಮ್ಮನ್ನು ವಾರಸುಧಾರರು ಎಂದು ತಿಳಿಯುತ್ತಾರೆ ಅವರು ಕೈ ಎತ್ತಿ. ವಾರಸುಧಾರರು ಆಗಿದ್ದೀರಾ? ಒಳ್ಳೆಯದು ವಾರಸುಧಾರರಾದರೆ ತಾವು ಪೂರ್ತಿ ಆಸ್ತಿಯನ್ನು ಪಡೆಯಬೇಕೋ ಅಥವಾ ಸ್ವಲ್ಪ ಪಡೆಯಬೇಕೋ? ಎಲ್ಲರೂ ಪೂರ್ತಿ ಆಸ್ತಿಯನ್ನು ಪಡೆಯಬೇಕು ಎಂದು ಹೇಳುತ್ತಾರೆ. ಪೂರ್ತಿ 21 ಜನ್ಮಗಳಕ್ಕೆ ಪೂರ್ತಿ ಆಸ್ತಿಯಾಗಿದೆ. ಆದಿಯಿಂದ ಅಂತ್ಯದವರೆಗೆ ರಾಯಲ್ ಪ್ರಜೆಗಳು ಅಲ್ಲ ರಾಯಲ್ ಪರಿವಾರದಲ್ಲಿ, ರಾಜ್ಯ ಪರಿವಾರದಲ್ಲಿ ಬರಬೇಕು. ಸಿಂಹಾಸನದ ಮೇಲೆ ಅಂತೂ ಒಬ್ಬರೇ ಕುಳಿತುಕೊಳ್ಳುತ್ತಾರಲ್ಲವೇ, ದಂಪತಿಯರು ಕುಳಿತುಕೊಳ್ಳುತ್ತಾರೆ ಆದರೆ ಅಲ್ಲಿನ ಸಭೆ, ಯಾವಾಗ ಆಗುತ್ತದೋ ರಾಯಲ್ ಪರಿವಾರದ ವಿಶೇಷ ನಿಮಿತ್ತ ಆತ್ಮರು ಅಲ್ಲಿ ಕಿರೀಟಧಾರರಾಗಿ ಕುಳಿತುಕೊಳ್ಳುತ್ತಾರೆ. ಕಿರೀಟವಿಲ್ಲದೆ ಕುಳಿತುಕೊಳ್ಳುವುದಿಲ್ಲ ಮತ್ತು ಪ್ರತಿಯೊಂದು ಕಾರ್ಯದಲ್ಲಿ ಸಲಹೆ ಕೊಡುವವರು, ಆದರೆ ಕೇವಲ ರಾಜ್ಯ ಮಾಡುವವರೆಂದಲ್ಲ, ಜೊತೆಯಲ್ಲಿ ಸಲಹೆಯಿಂದ ರಾಜ್ಯ ಮಾಡುತ್ತಾರೆ. ಆದ್ದರಿಂದ ಒಂದುವೇಳೆ ಸಂಪೂರ್ಣ ಆಸ್ತಿಯನ್ನು ಪಡೆಯಬೇಕೆಂದರೆ ಮೊದಲು ಜನ್ಮದಿಂದ ಅಂತ್ಯದವರೆಗೆ ಪೂರ್ತಿ 21 ಜನ್ಮಗಳು, ಅರ್ಧವೂ ಅಲ್ಲ, ಮಧ್ಯದಲ್ಲಿ ಹೋಗಬಾರದು, ಅಕಾಲ ಮೃತ್ಯುವಂತೂ ಆಗುವುದಿಲ್ಲ ಪೂರ್ತಿ ಆಸ್ತಿಯನ್ನು ಪಡೆಯಬೇಕೋ ಅಥವಾ ಸ್ವಲ್ಪದರಲ್ಲಿ ಖುಷಿ ಆಗಬೇಕೋ? ತಮ್ಮ ಮಾತೇಶ್ವರಿ ಜಗದಂಬಾ ಸದಾ ಬಾಪ್ದಾದಾರವರು ಯಾವ ಶ್ರೀಮತ ಕೊಟ್ಟರು, ಮನಸ್ಸಿನ, ವಾಚಾ, ಕರ್ಮಣ ಇರಬಹುದು ಯಾವುದೆಲ್ಲಾ ಶ್ರೀಮತ ಕೊಟ್ಟರು ಅದು ನಾವು ಮಾಡಲೇಬೇಕು ಎಂದು ಲಕ್ಷ್ಯ ಇಟ್ಟುಕೊಳ್ಳುತ್ತಿದ್ದರು. ಈ ರೀತಿ ಪೂರ್ಣ ಆಸ್ತಿ ಪಡೆಯುವವರು ಅಚಾನಕ್, ಎವರ್ರೆಡಿ ಮತ್ತು ಬಹಳ ಸಮಯ ಎಂಬ ಲಕ್ಷ್ಯವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಿ, ಮೂರು ಶಬ್ದಗಳು ಒಟ್ಟಿಗೆ ನೆನಪಿಟ್ಟುಕೊಳ್ಳಿ, ಆದ್ದರಿಂದ ಬಾಪ್ದಾದಾರವರ ಎಲ್ಲಾ ಆಸೆಯ ದೀಪಗಳಾದ ಮಕ್ಕಳ ಪ್ರತಿ ಸದಾ ಈ ಮೂರು ಶಬ್ದಗಳನ್ನು ನೆನಪಿಟ್ಟುಕೊಂಡು ಎಲ್ಲರೂ ಆಶಾ ದೀಪಕರಾಗುವ ಪ್ರತ್ಯಕ್ಷ ಪ್ರಮಾಣವನ್ನು ತೋರಿಸಬೇಕು ಎಂಬ ವರದಾನವಿದೆ.

ವಿದೇಶದವರೂ ಸಹ ಮನಸಾ ಸೇವೆಯಿಂದ ಸಹಯೋಗಿಯಲ್ಲವೇ. ಎಲ್ಲಾ ಧರ್ಮದಲ್ಲಿ ವೃದ್ಧಿ ಆಗುತ್ತಿರುವುದನ್ನು ಬಾಪ್ದಾದಾರವರು ನೋಡಿದರು. ಒಂದು ಧರ್ಮವಲ್ಲ, ಕೇವಲ ಹಿಂದು ಧರ್ಮವಲ್ಲ, ಆದರೆ ಮುಸಲ್ಮಾನ, ಬೌದ್ಧ ಎಲ್ಲಾ ಧರ್ಮಗಳು, ಕ್ರಿಶ್ಚಯನ್ನರು ಎಲ್ಲರೂ ನಿಧಾನ-ನಿಧಾನಕ್ಕೆ ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಮೊದಲು ನೋಡಿ ಬ್ರಹ್ಮಾಕುಮಾರಿಯರ ಹೆಸರನ್ನು ಕೇಳಿ ಭಯ ಪಡುತ್ತಿದ್ದರು. ವಿನಾಶ-ವಿನಾಶ ಎಂದು ಏನು ಹೇಳುತ್ತೀರಿ? ಈಗ ಮತ್ತೆ ಏನು ಹೇಳುತ್ತಾರೆ? ಈಗ ವಿನಾಶ ಯಾವಾಗ ಆಗುತ್ತದೆ ಎಂದು ಕೇಳುತ್ತಾರೆ. ವಿನಾಶ ಹೇಗಾಗುತ್ತದೆ ಮತ್ತು ಏನು ಮಾಡಬೇಕು. ವಿನಾಶವಂತೂ ಆಗಲೇಬೇಕು, ಇದಂತೂ ಗ್ಯಾರೆಂಟಿ ಆಗಿದೆ. ತಮ್ಮೆಲ್ಲರಿಗೆ ಗ್ಯಾರೆಂಟಿ ಇದೆಯಲ್ಲವೇ. ವಿದೇಶದವರು ಇರಬಹುದು, ಭಾರತದವರು ಇರಬಹುದು ಗ್ಯಾರೆಂಟಿ ಇದೆಯಲ್ಲವೇ. ತಮಗೆ ಸಹಯೋಗ ಇದ್ದೇ ಇದೆ, ಆಗಲೇಬೇಕು. ಚಪ್ಪಾಳೆ ತಟ್ಟಿ. ಎಲ್ಲರಿಗೆ ಉಮ್ಮಂಗ ಚೆನ್ನಾಗಿದೆ ಮತ್ತು ನಿಮಿತ್ತ ಆಗಿರುವ ಅತ್ಮಗಳು ಪಾಂಡವರು ಇರಬಹುದು, ಶಕ್ತಿಗಳು ಇರಬಹುದು ಇಬ್ಬರಲ್ಲಿ ಉಮ್ಮಂಗ -ಉತ್ಸಾಹವಿದೆ. ಕೇವಲ ಈಗ ಬಾಪ್ದಾದಾರವರು ಪುರುಷಾರ್ಥವನ್ನು ತೀವ್ರ ಮಾಡಿ ಎಂದು ಯಾವ ಸೂಚನೆ ಕೊಟ್ಟರು. ಪುರುಷಾರ್ಥ ಅಲ್ಲ, ಪುರುಷಾರ್ಥದ ಸಮಯ ಹೋಯಿತು ಈಗ ತೀವ್ರ ಪುರುಷಾರ್ಥದ ಸಮಯವಾಗಿದೆ ಮತ್ತು ಎಂದೋ ಮಾಡೋಣ ಎನ್ನುವುದರಲ್ಲಿ ಇರಬೇಡಿ, ಈಗ ಮಾಡಬೇಕು. ಈಗ ಆಗಬೇಕು. ಆಗಲೇಬೇಕು. ಒಳ್ಳೆಯದು.

ಎಲ್ಲಾ ಕಡೆಯ ತೀವ್ರ ಪುರುಷಾರ್ಥಿ ಸದಾ ಉಮ್ಮಂಗ-ಉತ್ಸಾಹದಿಂದ ಹೆಜ್ಜೆ ಮುಂದಿಡುವಂತಹವರು, ಯಾರು ಸತ್ಯ ಹೃದಯದಿಂದ ಮಾಡುತ್ತಾರೆ ಅವರ ಮಸ್ತಕದಲ್ಲಿ ವಿಜಯದ ತಿಲಕ ಬಾಪ್ದಾದಾರವರು ನೋಡುತ್ತಿದ್ದಾರೆ. ಬಾಪ್ದಾದಾರವರ ಹೃದಯದಲ್ಲಿ ಪ್ರತಿಯೊಬ್ಬ ಮಗು ಸಮಾವೇಶವಾಗಿದ್ದಾರೆ ಮತ್ತು ಪ್ರತಿಯೊಬ್ಬ ಮಗುವಿನಲ್ಲಿ ತಂದೆ ಸಮಾವೇಶ ಆಗಿದ್ದಾರೆ. ತಂದೆಯ ಹೃದಯದಲ್ಲಿ ಮಗು ಸಮಾವೇಅವಾಗಿದೆ. ಶುಭಾಶಯಗಳು, ಶುಭಾಶಯಗಳು ಮತ್ತು ಶುಭಾಶಯಗಳ ಜೊತೆ ನಮಸ್ತೆ.

ವರದಾನ:
ಶಕ್ತಿಶಾಲಿ ಸ್ಥಿತಿಯ ಮೂಲಕ ರಚನೆಯ ಸರ್ವ ಆಕರ್ಷಣೆಗಳಿಂದ ದೂರವಿರುವಂತಹ ಮಾಸ್ಟರ್ ರಚೈತ ಭವ.

ಯಾವಾಗ ಮಾಸ್ಟರ್ ರಚೈತ, ಮಾಸ್ಟರ್ ಜ್ಞಾನಪೂರ್ಣನ ಶಕ್ತಿಶಾಲಿ ಸ್ಥಿತಿ ಅಥವಾ ನಶೆಯಲ್ಲಿ ಸ್ಥಿತರಾಗಿರುತ್ತೀರಿ, ಆಗಲೇ ರಚನೆಯ ಸರ್ವ ಆಕರ್ಷಣೆಗಳಿಂದ ದೂರವಿರಲು ಸಾಧ್ಯ. ಏಕೆಂದರೆ ಈಗ ರಚನೆಯು ಇನ್ನಷ್ಟು ಭಿನ್ನ-ಭಿನ್ನ ರಂಗು-ರಂಗಿನ ರೂಪವನ್ನು ರಚಿಸುವುದು ಆದ್ದರಿಂದ ಈಗ ಬಾಲ್ಯತನವನ್ನು ಮರೆಯಿರಿ, ಹುಡುಗಾಟಿಕೆಯ ತಪ್ಪುಗಳು, ಆಲಸ್ಯದ ತಪ್ಪುಗಳು, ನಿರ್ಲಕ್ಷ್ಯ ಮಾಡುವ ತಪ್ಪುಗಳೇನಿವೆಯೋ ಅದನ್ನು ಮರೆತು ತಮ್ಮ ಶಕ್ತಿಶಾಲಿ, ಶಕ್ತಿ-ಸ್ವರೂಪ, ಶಸ್ತ್ರಧಾರಿ ಸ್ವರೂಪ, ಸದಾ ಜಾಗೃತ ಜ್ಯೋತಿ ಸ್ವರೂಪವನ್ನು ಪ್ರತ್ಯಕ್ಷಗೊಳಿಸಿದಾಗ ಹೇಳಲಾಗುವುದು - ಮಾಸ್ಟರ್ ರಚೈತ.

ಸ್ಲೋಗನ್:
ಮನಸ್ಸಿನ ಸ್ಥಿತಿಯಲ್ಲಿ ಇಷ್ಟು ಹಾರ್ಡ್ (ಸಮರ್ಥ) ಆಗಿರಿ, ಅದರಿಂದ ಯಾವುದೇ ಪರಿಸ್ಥಿತಿಗಳೂ ಅವರನ್ನು ಕರಗುವಂತೆ ಮಾಡಬಾರದು.

ಅವ್ಯಕ್ತ ಸೂಚನೆ:– “ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”

ಯಾವುದೇ ವಾತಾವರಣದಲ್ಲಿ, ವಾಯುಮಂಡಲದಲ್ಲಿ ಇರಿ ಸ್ಥಿತಿ ಸದಾ ಅಚಲ ಅಡೋಲ ಏಕರಸವಾಗಿ ಇರಲಿ. ಎಂದಾದರೂ ನಿಮಿತ್ತಾರಾಗಿರುವವರು ಯಾವುದೇ ಸಲಹೆಯನ್ನು ನೀಡುತ್ತಾರೆ ಎಂದರೆ, ಅದರಲ್ಲಿ ಗೊಂದಲದಲ್ಲಿ ಬರಬಾರದು, ಏಕೆಂದರೆ ಯಾರು ನಿಮಿತ್ತರಾಗಿದ್ದಾರೆ ಅವರು ಅನುಭವಿ ಆಗಿದ್ದಾರೆ. ಒಂದುವೇಳೆ ಅವರ ಡೈರೆಕ್ಷನ್ ಸ್ಪಷ್ಟವಾಗಿ ಇಲ್ಲದಿದ್ದರೂ ಸಹ ಏರುಪೇರಿನಲ್ಲಿ ಬರಬಾರದು. ಸಹನಶೀಲರಾಗಿ ಹೇಳಿ ಇದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ, ಆಗ ಸ್ಥಿತಿ ಏಕರಸ ಅಚಲ ಅಡೋಲ ಆಗುವುದು.