03.08.25 Avyakt Bapdada
Kannada
Murli 28.03.2006 Om Shanti Madhuban
“ವಿಶ್ವದ ಆತ್ಮಗಳನ್ನು
ದುಃಖದಿಂದ ಬಿಡಿಸಲು ಮನಸ್ಸಾ ಸೇವೆಯನ್ನು ಹೆಚ್ಚಿಸಿ ಸಂಪನ್ನ ಮತ್ತು ಸಂಪೂರ್ಣರಾಗಿ”
ಈ ದಿನ ಸರ್ವ ಖಜಾನೆಗಳ
ಮಾಲೀಕ ಬಾಪ್ದಾದಾ ತನ್ನ ನಾಲ್ಕೂ ಕಡೆಯ ಎಲ್ಲಾ ಖಜಾನೆಗಳಿಂದ ಸಂಪನ್ನರಾದ ಮಕ್ಕಳನ್ನು
ನೋಡುತ್ತಿದ್ದೇವೆ. ಬಾಪ್ದಾದಾ ಪ್ರತಿಯೊಬ್ಬ ಮಗುವನ್ನು ಸರ್ವ ಖಜಾನೆಗಳಿಂದ ಮಾಲೀಕರನ್ನಾಗಿ
ಮಾಡಿದ್ದೇವೆ. ಕೊಡುವಂತಹವರೂ ಒಬ್ಬರೇ, ಎಲ್ಲರಿಗೂ ಒಂದೇರೀತಿ ಸರ್ವ ಖಜಾನೆಗಳನ್ನು ಕೊಟ್ಟಿದ್ದೇವೆ.
ಕೆಲವರಿಗೆ ಕಡಿಮೆ, ಕೆಲವರಿಗೆ ಹೆಚ್ಚು ಕೊಟ್ಟಿಲ್ಲ - ಏಕೆ? ತಂದೆಯು ಅಪರಿಮಿತ ಖಜಾನೆಗೆ
ಮಾಲೀಕನಾಗಿದ್ದಾರೆ. ಬೇಹದ್ದಿನ ಖಜಾನೆಯಾಗಿದೆ ಆದ್ದರಿಂದ ಪ್ರತಿಯೊಬ್ಬ ಮಗುವು ಅಪರಿಮಿತ ಖಜಾನೆಗೆ
ಮಾಲೀಕನಾಗಿದ್ದಾರೆ. ಬಾಪ್ದಾದಾರವರು ಸರ್ವ ಮಕ್ಕಳಿಗೆ ಒಂದೇ ರೀತಿಯಾಗಿ ಕೊಟ್ಟಿದ್ದೇವೆ ಆದರೆ ಧಾರಣೆ
ಮಾಡುವಂತಹವರು ಕೆಲವರು ಸರ್ವ ಖಜಾನೆಗಳನ್ನು ಧಾರಣೆ ಮಾಡುವವರಾಗಿದ್ದಾರೆ ಮತ್ತು ಕೆಲವರು ಯಥಾಶಕ್ತಿ
ಧಾರಣೆ ಮಾಡುವವರಾಗಿದ್ದಾರೆ. ಕೆಲವರು ನಂಬರ್ವನ್ ಮತ್ತು ಕೆಲವರು ನಂಬರ್ವಾರ್ ಆಗಿದ್ದಾರೆ. ಯಾರು
ಎಷ್ಟೇ ಧಾರಣೆ ಮಾಡಿದರೂ ಅವರ ಚಹರೆಯಿಂದ, ನಯನಗಳಿಂದ ಖಜಾನೆಗಳ ನಶೆ ಸ್ಪಷ್ಟವಾಗಿ ಕಂಡು ಬರುತ್ತದೆ.
ಖಜಾನೆಯಿಂದ ಸಂಪನ್ನನಾಗಿರುವ ಆತ್ಮನ ಚಹರೆ-ನಯನಗಳಿಂದ ಸಂಪನ್ನತೆಯು ಕಂಡು ಬರುತ್ತದೆ. ಹೇಗೆ ಸ್ಥೂಲ
ಖಜಾನೆಯನ್ನು ಪ್ರಾಪ್ತಿ ಮಾಡಿಕೊಂಡಿರುವಂತಹ ಆತ್ಮಗಳ ಚಲನೆಯಿಂದ, ಚಹರೆಯಿಂದ ಕಂಡು ಬರುತ್ತದೆ
ಅದೇರೀತಿ ಇದು ಅವಿನಾಶಿ ಖಜಾನೆಯ ನಶೆಯಾಗಿದೆ. ಖುಷಿಯು ಸ್ಪಷ್ಟವಾಗಿ ಕಂಡು ಬರುತ್ತದೆ. ಸಂಪನ್ನತೆಯ
ಹೆಮ್ಮೆಯು ನಿಶ್ಚಿಂತ ಚಕ್ರವರ್ತಿಯನ್ನಾಗಿ ಮಾಡುತ್ತದೆ. ಎಲ್ಲಿ ಈಶ್ವರೀಯ ಹೆಮ್ಮೆಯಿದೆ ಅಲ್ಲಿ
ಚಿಂತೆಯಿರಲು ಸಾಧ್ಯವಿಲ್ಲ, ನಿಶ್ಚಿಂತ ಚಕ್ರವರ್ತಿ, ದುಃಖರಹಿತ ಪ್ರಪಂಚಕ್ಕೆ ಚಕ್ರವರ್ತಿಗಳಾಗಿ
ಬಿಡುತ್ತಾರೆ. ಅಂದಾಗ ತಾವೆಲ್ಲರೂ ಸಹ ಈಶ್ವರೀಯ ಸಂಪನ್ನತೆಯ ಖಜಾನೆಯುಳ್ಳವರು ನಿಶ್ಚಿಂತ
ಚಕ್ರವರ್ತಿಗಳಾಗಿದ್ದೀರಲ್ಲವೆ! ದುಃಖರಹಿತ ಪ್ರಪಂಚಕ್ಕೆ ಚಕ್ರವರ್ತಿಗಳಾಗಿದ್ದೀರಲ್ಲವೆ! ಏನಾದರೂ
ಚಿಂತೆಯಿದೆಯೇ? ಏನಾದರೂ ದುಃಖವಿದೆಯೇ? ಏನಾಗುತ್ತದೆಯೋ, ಹೇಗಾಗುತ್ತದೆಯೋ ಇದರದ್ದೂ ಚಿಂತೆಯಲ್ಲವೆ!
ತ್ರಿಕಾಲದರ್ಶಿ ಸ್ಥಿತಿಯಲ್ಲಿ ಸ್ಥಿತರಾಗಿರುವವರು ತಿಳಿದುಕೊಂಡಿದ್ದೀರಿ. ಏನಾಗುತ್ತದೆಯೋ ಅದು
ಒಳ್ಳೆಯದೇ ಆಗುತ್ತದೆ, ಏನು ಆಗುವುದಿದೆಯೋ ಅದೂ ಸಹ ಇನ್ನೂ ಒಳ್ಳೆಯದೇ ಆಗಿದೆ - ಏಕೆ?
ಸರ್ವಶಕ್ತಿವಂತ ತಂದೆಯು ಜೊತೆಗಾರನಾಗಿದ್ದಾರೆ. ಅವರ ಜೊತೆಯಲ್ಲಿರುವವರಾಗಿದ್ದೀರಿ.
ಪ್ರತಿಯೊಬ್ಬರಿಗೂ ಹೆಮ್ಮೆಯಿದೆ - ಬಾಪ್ದಾದಾ ಸದಾ ನಮ್ಮ ಹೃದಯದಲ್ಲಿರುತ್ತಾರೆ ಮತ್ತು ನಾವು ಸದಾ
ತಂದೆಯ ಹೃದಯದಲ್ಲಿರುತ್ತೇವೆ ಅಂದಾಗ ಈ ನಶೆಯಿದೆಯಲ್ಲವೆ! ಯಾರು ಹೃದಯ ಸಿಂಹಾಸನಾರೂಢರಾಗಿದ್ದಾರೆ
ಅವರ ಸಂಕಲ್ಪವೇನು, ಸ್ಪಪ್ನದಲ್ಲಿಯೂ ಸಹ ದುಃಖದ ಅಲೆಯು ಬರಲು ಸಾಧ್ಯತೆಯಿಲ್ಲ - ಏಕೆ? ಸರ್ವ
ಖಜಾನೆಗಳಿಂದ ಸಂಪನ್ನರಾಗಿರುತ್ತಾರೆ, ಯಾವುದು ತುಂಬಿರುತ್ತದೆ ಅದು ತುಳುಕುವುದಿಲ್ಲ.
ಅಂದಾಗ ನಾಲ್ಕೂ ಕಡೆಯ
ಮಕ್ಕಳ ಸಂಪನ್ನತೆಯನ್ನು ನೋಡುತ್ತಿದ್ದೇವೆ. ಪ್ರತಿಯೊಬ್ಬರ ಜಮಾದ ಖಾತೆಯನ್ನು ಬಾಪ್ದಾದಾ ಪರಿಶೀಲನೆ
ಮಾಡಿದೆವು. ಖಜಾನೆಯಂತೂ ಅಪರಿಮಿತವಾಗಿ ಸಿಕ್ಕಿದೆ, ಆದರೆ ಏನು ಸಿಕ್ಕಿದೆಯೋ ಆ ಖಜಾನೆಯನ್ನು
ಕಾರ್ಯದಲ್ಲಿ ಉಪಯೋಗಿಸುತ್ತಾ ಸಮಾಪ್ತಿ ಮಾಡಿ ಬಿಟ್ಟಿದ್ದಾರೆ ಅಥವಾ ಸಿಕ್ಕಿರುವ ಖಜಾನೆಯನ್ನು
ಕಾರ್ಯದಲ್ಲಿ ತೊಡಗಿಸಿದ್ದಾರೆ ಆದರೆ ಇನ್ನೂ ವೃದ್ಧಿಮಾಡಿಕೊಂಡಿದ್ದಾರೆಯೇ? ಎಷ್ಟು
ಪರ್ಸೆಂಟೇಜ್ನಲ್ಲಿ ಪ್ರತಿಯೊಬ್ಬರ ಖಾತೆಯಲ್ಲಿ ಜಮಾ ಆಗಿದೆ? ಏಕೆಂದರೆ ಈ ಖಜಾನೆಯು ಕೇವಲ ಈ
ಸಮಯಕ್ಕಾಗಿ ಅಲ್ಲ, ಈ ಖಜಾನೆಯು ಭವಿಷ್ಯದಲ್ಲಿಯೂ ಜೊತೆಯಲ್ಲಿ ಬರಬೇಕಾಗಿದೆ. ಜಮಾ ಆಗಿರುವಂತಹದೆ
ಜೊತೆಯಲ್ಲಿ ಬರುತ್ತದೆ. ಅಂದಾಗ ಪರ್ಸೆಂಟೇಜನ್ನು ನೋಡುತ್ತಿದ್ದೆವು. ಏನನ್ನು ನೋಡಿದೆವು?
ಸೇವೆಯನ್ನಂತೂ ಎಲ್ಲಾ ಮಕ್ಕಳು ಯಥಾಯೋಗ ಅಥವಾ ಯಥಾಶಕ್ತಿ ಮಾಡುತ್ತಿದ್ದಾರೆ ಆದರೆ ಸೇವೆಯ ಫಲ ಜಮಾ
ಆಗುವುದರಲ್ಲಿ ಅಂತರವಾಗುತ್ತದೆ. ಕೆಲವು ಮಕ್ಕಳ ಜಮಾದ ಖಾತೆಯನ್ನು ನೋಡಿದೆವು. ಸೇವೆಯನ್ನೂ ಬಹಳ
ಮಾಡುತ್ತಾರೆ ಆದರೆ ಸೇವೆಯನ್ನು ಮಾಡಿದುದರ ಫಲ ಜಮಾ ಆಗಿಲ್ಲ. ಅದರ ಲಕ್ಷಣವಾಗಿದೆ - ಒಂದುವೇಳೆ
ಸೇವೆಯನ್ನು ಮಾಡುವಂತಹ ಆತ್ಮನು ಭಲೆ ಮನಸ್ಸಿನಿಂದ, ಮಾತಿನಿಂದ, ಕರ್ಮಣಾದಿಂದ - ಮೂರರಲ್ಲಿಯೂ 100%
ಅಂಕಗಳಿರುತ್ತದೆ. ಮೂರಕ್ಕೂ 100 ಅಂಕಗಳಿದೆ. ಸೇವೆಯನ್ನಂತೂ ಮಾಡಿದಿರಿ ಆದರೆ ಸೇವೆಯನ್ನು
ಮಾಡುವಂತಹ ಸಮಯ ಅಥವಾ ಸೇವೆಯ ನಂತರ ಸ್ವಯಂ ತಮ್ಮ ಮನಸ್ಸಿನಲ್ಲಿ ತಮ್ಮೊಂದಿಗೆ ಸಂತುಷ್ಟತೆ ಮತ್ತು
ಜೊತೆಯಲ್ಲಿ ಯಾರ ಸೇವೆಯನ್ನು ಮಾಡಿದಿರಿ, ಯಾರು ಸೇವೆಯಲ್ಲಿ ಜೊತೆಗಾರರಾಗಿರುತ್ತಾರೆ ಅಥವಾ
ಸೇವೆಯನ್ನು ಮಾಡುವಂತಹವರನ್ನು ನೋಡುತ್ತೀರಿ, ಕೇಳುತ್ತೀರಿ. ಅವರೂ ಸಹ ಸಂತುಷ್ಟರಾಗಿದ್ದೇ ಆದರೆ ಜಮಾ
ಆಯಿತೆಂದು ತಿಳಿದುಕೊಳ್ಳಿ. ಸ್ವಯಂನ ಸಂತುಷ್ಟತೆ, ಸರ್ವರ ಸಂತುಷ್ಟತೆ ಇಲ್ಲವೆಂದರೆ ಜಮಾದ
ಖಾತೆಯಲ್ಲಿ ಕಡಿಮೆಯಾಗುತ್ತದೆ.
ಯಥಾರ್ಥ ಸೇವೆಯ
ವಿಧಿಯನ್ನು ಮೊದಲೂ ಸಹ ತಿಳಿಸಿಕೊಟ್ಟಿದ್ದೇವೆ. ಮೂರು ಮಾತು ವಿಧಿಪೂರ್ವಕವಾಗಿ ಇದ್ದಿದ್ದೇ ಆದರೆ
ಜಮಾ ಆಗುತ್ತದೆ. ಅದನ್ನು ತಿಳಿಸಲಾಗಿದೆ - 1. ನಿಮಿತ್ತ ಭಾವ, 2. ನಿರ್ಮಾನ ಭಾವ, 3. ನಿರ್ಮಲ
ಸ್ವಭಾವ, ನಿರ್ಮಲ ವಾಣಿ. ಭಾವ, ಭಾವನೆ ಮತ್ತು ಸ್ವಭಾವ, ಒಂದುವೇಳೆ ಈ ಮೂರು ಮಾತಿನಲ್ಲಿ ಒಂದು ಮಾತು
ಕಡಿಮೆಯಿದ್ದರೂ, ಒಂದು ಇದೆ ಎರಡಿಲ್ಲ, ಎರಡು ಇದೆ ಒಂದು ಇಲ್ಲವೆಂದರೆ ಈ ಬಲಹೀನತೆಯು ಜಮಾದ
ಪರ್ಸೆಂಟೇಜನ್ನು ಕಡಿಮೆ ಮಾಡುತ್ತದೆ. ಅಂದಾಗ ನಾಲ್ಕೂ ಸಬ್ಜೆಕ್ಟ್ನಲ್ಲಿ ತಮ್ಮನ್ನು ತಾವು ಪರಿಶೀಲನೆ
ಮಾಡಿಕೊಳ್ಳಿ. ನಾಲ್ಕೂ ಸಬ್ಜೆಕ್ಟ್ನಲ್ಲಿ ನನ್ನ ಖಾತೆಯು ಜಮಾ ಆಗಿದೆಯೇ? ಏಕೆ? ಬಾಪ್ದಾದಾ ನೋಡಿದೆವು
- ಕೆಲವರಲ್ಲಿ ಯಾವ ನಾಲ್ಕೂ ಮಾತುಗಳನ್ನು ತಿಳಿಸಲಾಯಿತು - ಭಾವ, ಭಾವನೆಯ ಪ್ರಮಾಣ ಕೆಲವು ಮಕ್ಕಳ
ಸೇವೆಯ ಸಮಾಚಾರ ಬಹಳ ಇದೆ ಆದರೆ ಜಮಾದ ಖಾತೆಯು ಕಡಿಮೆಯಿದೆ.
ಪ್ರತಿಯೊಂದು ಖಜಾನೆಯನ್ನು
ಪರಿಶೀಲನೆ ಮಾಡಿಕೊಳ್ಳಿ - ಜ್ಞಾನದ ಖಜಾನೆ ಅರ್ಥಾತ್ ಯಾವುದೆಲ್ಲಾ ಸಂಕಲ್ಪ, ಕರ್ಮವನ್ನು ಮಾಡಿದಿರಿ
ಅದನ್ನು ಜ್ಞಾನಪೂರ್ಣರಾಗಿ ಮಾಡಿದಿರಾ? ಸಾಧಾರಣ ರೀತಿಯಿರಲಿಲ್ಲವೇ? ಯೋಗ ಅರ್ಥಾತ್ ಸರ್ವಶಕ್ತಿಗಳ
ಖಜಾನೆಯಿಂದ ಸಂಪನ್ನವಾಗಲಿ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಪ್ರತೀದಿನ ದಿನಚರಿಯಲ್ಲಿ ಸಮಯ
ಪ್ರಮಾಣ ಯಾವ ಶಕ್ತಿಯ ಅವಶ್ಯಕತೆಯಿದೆ, ಆ ಸಮಯ, ಆ ಶಕ್ತಿ ಆದೇಶದನುಸಾರ ಇತ್ತೇ?
ಮಾ||ಸರ್ವಶಕ್ತಿವಂತನ ಅರ್ಥವೇ ಆಗಿದೆ - ಮಾಲೀಕ. ಸಮಯ ಕಳೆದ ನಂತರ ಶಕ್ತಿಗಳನ್ನು ಯೋಚಿಸುತ್ತಲೇ
ಇರುವುದು - ಈ ರೀತಿಯಿಲ್ಲ. ಒಂದುವೇಳೆ ಸಮಯದಲ್ಲಿ ಆದೇಶದಂತೆ ಶಕ್ತಿಯು ಪ್ರಕಟವಾಗಲಿಲ್ಲವೆಂದರೆ,
ಯಾವಾಗ ಒಂದು ಶಕ್ತಿಯನ್ನೇ ಆದೇಶದಂತೆ ನಡೆಸಲು ಸಾಧ್ಯವಿಲ್ಲವೆಂದರೆ ನಿರ್ವಿಘ್ನ ರಾಜ್ಯದ ಅಧಿಕಾರಿ
ಹೇಗೆ ಆಗುತ್ತೀರಿ?
ಅಂದಾಗ ಶಕ್ತಿಗಳ
ಖಜಾನೆಯನ್ನು ಎಷ್ಟು ಜಮಾ ಮಾಡಿಕೊಂಡಿದ್ದೀರಿ? ಯಾರು ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸುತ್ತಾರೆ ಅದು
ಜಮಾ ಆಗುತ್ತದೆ. ನನ್ನ ಖಾತೆಯು ಏನಾಗಿದೆ ಎಂದು ಪರಿಶೀಲನೆ ಮಾಡಿಕೊಳ್ಳುತ್ತಾ ನಡೆಯುತ್ತೀರಾ?
ಏಕೆಂದರೆ ಬಾಪ್ದಾದಾರವರಿಗೆ ಎಲ್ಲಾ ಮಕ್ಕಳೊಂದಿಗೆ ಬಹಳ ಪ್ರೀತಿಯಿದೆ. ಬಾಪ್ದಾದಾರವರು ಎಲ್ಲಾ
ಮಕ್ಕಳ ಜಮಾದ ಖಾತೆಯು ಸಂಪನ್ನವಾಗಿರಲಿ ಎಂದು ಬಯಸುತ್ತೇವೆ. ಧಾರಣೆಯಲ್ಲಿಯೂ ಸಹ ಧಾರಣೆಯ
ಗುಪ್ತವಾಗಿದೆ - ಪ್ರತಿಯೊಂದು ಕರ್ಮವು ಗುಣ ಸಂಪನ್ನವಾಗಿರುತ್ತದೆ. ಯಾವ ಸಮಯ, ಯಾವ ಗುಣದ
ಅವಶ್ಯಕತೆಯೋ ಆ ಗುಣ ಚಹರೆ ಮತ್ತು ಚಲನೆಯಲ್ಲಿ ಪ್ರತ್ಯಕ್ಷವಾಗಿ ಕಂಡುಬರಲಿ. ಒಂದುವೇಳೆ ಯಾವುದೇ
ಗುಣದ ಕೊರತೆಯಿದ್ದರೆ ಉದಾಹರಣೆಗೆ - ಸರಳತೆಯ ಗುಣವು ಕರ್ಮದ ಸಮಯದಲ್ಲಿ ಅವಶ್ಯಕತೆಯಿದೆ, ಮಧುರತೆಯ
ಅವಶ್ಯಕತೆಯಿದೆ, ಭಲೆ ಮಾತಿನಲ್ಲಿರಬಹುದು, ಕರ್ಮದಲ್ಲಿರಬಹುದು ಒಂದುವೇಳೆ ಮಧುರತೆ-ಸರಳತೆಗೆ ಬದಲಾಗಿ
ಸ್ವಲ್ಪವೇನಾದರೂ ಆವೇಶ ಅಥವಾ ಸುಸ್ತಿನ ಕಾರಣ ಮಧುರತೆ ಇಲ್ಲ, ಮಾತು ಮಧುರತೆಯಿಲ್ಲವೆಂದರೆ ಚಹರೆಯು
ಮಧುರವಾಗಿಲ್ಲವೆಂದರೆ ಸೀರಿಯಸ್ ಆಗಿದ್ದರೆ ಗುಣ ಸಂಪನ್ನರೆಂದು ಹೇಳುವುದಿಲ್ಲ ಅಲ್ಲವೆ. ಎಂತಹದ್ದೇ
ಸಂದರ್ಭವಿರಲಿ ಆದರೆ ನನ್ನ ಯಾವ ಗುಣವಿದೆಯೋ ಆ ಗುಣವು ಪ್ರತ್ಯಕ್ಷವಾಗಬೇಕಾಗಿದೆ. ಈಗ ಸ್ವಲ್ಪವೇ
ತಿಳಿಸುತ್ತಿದ್ದೇವೆ.
ಅದೇ ರೀತಿ ಸೇವೆ -
ಸೇವೆಯಲ್ಲಿ ಎಲ್ಲದಕ್ಕಿಂತ ಒಳ್ಳೆಯ ಲಕ್ಷಣವು ಸೇವಾಧಾರಿಯದಾಗಿದೆ - ಸ್ವಯಂ ಸಹ ಸದಾ ಹಗುರ, ಲೈಟ್
ಮತ್ತು ಖುಷಿಯಿಂದ ಕಂಡುಬರಲಿ. ಸೇವೆಯ ಫಲವಾಗಿದೆ ಖುಷಿ. ಒಂದುವೇಳೆ ಸೇವೆಯನ್ನು ಮಾಡುತ್ತಾ ಖುಷಿಯು
ಮಾಯವಾಯಿತೆಂದರೆ ಸೇವೆಯ ಖಾತೆಯು ಜಮಾ ಆಗುವುದಿಲ್ಲ. ಸೇವೆಯಲ್ಲಿ ಸಮಯವನ್ನು ತೊಡಗಿಸಿದಿರಿ,
ಪರಿಶ್ರಮ ಪಟ್ಟಿರೆಂದರೆ ಸ್ವಲ್ಪ ಪರ್ಸೆಂಟೇಜಿನಲ್ಲಿ ಅದು ಜಮಾ ಆಗುತ್ತದೆ. ವ್ಯರ್ಥವಾಗಿ
ಹೋಗುವುದಿಲ್ಲ ಆದರೆ ಎಷ್ಟು ಪರ್ಸೆಂಟೇಜಿನಲ್ಲಿ ಜಮಾ ಆಗಬೇಕೋ ಅಷ್ಟು ಆಗುವುದಿಲ್ಲ. ಹಾಗೆಯೇ
ಸಂಬಂಧ-ಸಂಪರ್ಕದ ಲಕ್ಷಣವಾಗಿದೆ - ಸಂಬಂಧ-ಸಂಪರ್ಕದಲ್ಲಿ ಆಶೀರ್ವಾದದ ಪ್ರಾಪ್ತಿಯಾಗಲಿ. ಯಾರದೇ
ಸಂಬಂಧ-ಸಂಪರ್ಕದಲ್ಲಿ ಬಂದಾಗ ಬಹಳ ಒಳ್ಳೆಯವರು ಎಂದು ಅವರ ಮನಸ್ಸಿನಿಂದ ತಮ್ಮ ಪ್ರತಿ ಆಶೀರ್ವಾದವೇ
ಹೊರ ಬರಲಿ. ಹೊರಗಿನಿಂದ ಅಲ್ಲ, ಮನಃಪೂರ್ವಕವಾಗಿ ಆಶೀರ್ವಾದ ಬರಲಿ. ಒಂದುವೇಳೆ ಆಶೀರ್ವಾದ
ಪ್ರಾಪ್ತಿಯಾಗಿದೆಯೆಂದರೆ ಆಶೀರ್ವಾದ ಸಿಗುವುದು ಬಹಳ ಸಹಜ ಪುರುಷಾರ್ಥದ ಸಾಧನವಾಗಿದೆ. ಭಲೆ ಭಾಷಣ
ಮಾಡಬೇಡಿ, ಮನಸ್ಸಾ ಸೇವೆಯು ಅಷ್ಟು ಶಕ್ತಿಶಾಲಿಯಾಗಿಲ್ಲ, ಯಾವುದೇ ಹೊಸ-ಹೊಸ ಯೋಜನೆ ಮಾಡಲು
ಬರುವುದಿಲ್ಲವೆಂದರೂ ಪರವಾಗಿಲ್ಲ. ಎಲ್ಲದಕ್ಕಿಂತ ಸಹಜ ಪುರುಷಾರ್ಥದ ಸಾಧನವಾಗಿದೆ - ಆಶೀರ್ವಾದ
ತೆಗೆದುಕೊಳ್ಳಿ, ಆಶೀರ್ವಾದ ಕೊಡಿ. ಹೀಗೆ ಕೆಲವು ಮಕ್ಕಳ ಮನಸ್ಸಿನ ಸಂಕಲ್ಪವನ್ನು ಬಾಪ್ದಾದಾ ರೀಡ್
(ಓದುತ್ತಾರೆ) ಮಾಡುತ್ತಾರೆ. ಕೆಲವು ಮಕ್ಕಳು ಸಮಯದನುಸಾರ, ಪರಿಸ್ಥಿತಿಯನುಸಾರ ಕೇಳುತ್ತಾರೆ -
ಆಕಸ್ಮಿಕವಾಗಿ ಕೆಲವರು ಕೆಟ್ಟ ಕರ್ಮವನ್ನು ಮಾಡುತ್ತಾರೆಂದರೆ ಅವರಿಗೆ ಆಶೀರ್ವಾದವನ್ನು ಹೇಗೆ
ಕೊಡುವುದು? ಅವರನ್ನು ನೋಡಿದರೆ ಸಾಕು ಕೋಪ ಬರುತ್ತದೆ, ಆಶೀರ್ವಾದವನ್ನು ಹೇಗೆ ಕೊಡುವುದು? ಕ್ರೋಧದ
ಮಕ್ಕಳು, ಮೊಮ್ಮಕ್ಕಳು ಅನೇಕರಿದ್ದಾರೆ ಆದರೆ ಅವರು ಕೆಟ್ಟ ಕರ್ಮ ಮಾಡಿದರು. ಅದು ಕೆಟ್ಟದ್ದೇ ಆಗಿದೆ,
ಅದು ಕೆಟ್ಟದ್ದಾಗಿದೆ ಎಂದು ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಇದು ಒಳ್ಳೆಯದು,
ನಿರ್ಣಯವನ್ನಂತೂ ಚೆನ್ನಾಗಿ ಮಾಡಿದಿರಿ ಮತ್ತು ಚೆನ್ನಾಗಿ ತಿಳಿದುಕೊಂಡಿದ್ದೀರಿ ಆದರೆ ಒಂದನೆಯದು -
ತಿಳಿದುಕೊಳ್ಳುವುದಾಗಿದೆ, ಇನ್ನೊಂದಾಗಿದೆ - ಅವರ ಕೆಟ್ಟ ಕರ್ಮ, ಕೆಟ್ಟ ಮಾತನ್ನು ತನ್ನ ಹೃದಯದಲ್ಲಿ
ಅಳವಡಿಸಿಕೊಳ್ಳುವುದು. ತಿಳಿದುಕೊಳ್ಳುವುದು ಹಾಗೂ ಅಳವಡಿಸಿಕೊಳ್ಳುವುದರಲ್ಲಿ ವ್ಯತ್ಯಾಸವಿದೆ.
ಒಂದುವೇಳೆ ನೀವು ಬುದ್ಧಿವಂತರಾದರೆ ಬುದ್ಧಿವಂತರು ಯಾವುದೇ ಕೊಳಕು ವಸ್ತುವನ್ನು ತನ್ನ ಹತ್ತಿರ
ಇಟ್ಟುಕೊಳ್ಳುತ್ತಾರೆಯೇ? ಆದರೆ ಅದು ಕೆಟ್ಟದ್ದೇ ಆಗಿದೆ, ನಿಮ್ಮ ಹೃದಯದಲ್ಲಿ ಅದನ್ನು
ಇಟ್ಟುಕೊಳ್ಳುವುದು ಅರ್ಥಾತ್ ನೀವು ಕೊಳಕು ವಸ್ತುವನ್ನು ನಿಮ್ಮ ಹತ್ತಿರ ಇಟ್ಟುಕೊಂಡು ಸಂಭಾಲನೆ
ಮಾಡಿದ ಹಾಗೆ. ತಿಳಿದುಕೊಳ್ಳುವುದೇ ಬೇರೆ, ಅಳವಡಿಸಿಕೊಳ್ಳುವುದೇ ಬೇರೆಯಾಗಿದೆ.
ಬುದ್ಧಿವಂತರಾಗುವುದು ಸರಿಯಾಗಿದೆ ಆದರೆ ಅದನ್ನು ಅಳವಡಿಸಿಕೊಳ್ಳಬಾರದು. ಇವರು ಇರುವುದೇ ಹೀಗೆ
ಅಂದರೆ ಇದನ್ನು ಅಳವಡಿಸಿಕೊಂಡಂತೆ. ಈ ರೀತಿ ತಿಳಿದುಕೊಂಡು ವ್ಯವಹರಿಸುವುದು ಬುದ್ಧಿವಂತಿಕೆಯಲ್ಲ.
ಬಾಪ್ದಾದಾ ಪರಿಶೀಲನೆ ಮಾಡಿದೆವು - ಈಗ ಸಮಯ ಸಮೀಪಕ್ಕೆ ಬರುವುದಲ್ಲ, ನೀವು ಸಮಯವನ್ನು ಸಮೀಪಕ್ಕೆ
ತರಬೇಕಾಗಿದೆ. ಸ್ವಲ್ಪ ಸಿಗ್ನಲ್ ಕೊಡಿ, ಪರಿವರ್ತನೆಯಾಗಲು 10 ವರ್ಷ ಆಗುತ್ತದೆಯೇ, 20 ವರ್ಷ
ಆಗುತ್ತದೆಯೇ, ಎಷ್ಟು ಸಮಯ ಹಿಡಿಸುತ್ತದೆ? ಎಂದು ಕೆಲವು ಮಕ್ಕಳು ಕೇಳುತ್ತಾರೆ.
ಅಂದಾಗ ತಂದೆ ಮಕ್ಕಳನ್ನು
ಪ್ರಶ್ನೆ ಮಾಡುತ್ತಾರೆ. ತಂದೆಯನ್ನು ನೀವು ಬಹಳ ಪ್ರಶ್ನೆ ಮಾಡುತ್ತಾರೆ, ಈ ದಿನ ತಂದೆಯು ತಾವು
ಮಕ್ಕಳನ್ನು ಪ್ರಶ್ನೆ ಮಾಡುತ್ತೇವೆ - ಸಮಯವನ್ನು ಸಮೀಪ ತರುವಂತಹವರು ಯಾರು? (ಡ್ರಾಮಾ ಆಗಿದೆ) ಆದರೆ
ಅದಕ್ಕೆ ನಿಮಿತ್ತರು ಯಾರು? ನಿಮ್ಮದು ಒಂದು ಹಾಡೂ ಸಹ ಇದೆ - ಯಾರು ಸ್ವರ್ಣೀಮ ಸೂರ್ಯನನ್ನು ತಡೆ
ಹಿಡಿದಿದ್ದಾರೆ. ಈ ಗೀತೆಯಿದೆಯಲ್ಲವೆ? ಹಗಲನ್ನು ತರುವಂತಹವರು ಯಾರು? ವಿನಾಶಕಾರಿಗಳಂತೂ ವಿನಾಶ
ಮಾಡಬೇಕು, ಮಾಡಬೇಕೆಂದು ಚಡಪಡಿಸುತ್ತಿದ್ದಾರೆ ಆದರೆ ನವ ನಿರ್ಮಾಣ ಮಾಡುವಂತಹವರು ಇಷ್ಟೊಂದು
ಸಿದ್ಧರಾಗಿದ್ದೀರಾ? ಹಳೆಯದೆಲ್ಲವೂ ಸಮಾಪ್ತಿಯಾಯಿತೇ! ನವ ನಿರ್ಮಾಣವಾಗಲಿಲ್ಲವೆಂದರೆ ಏನು ಆಗುತ್ತದೆ,
ಆದ್ದರಿಂದ ಬಾಪ್ದಾದಾರವರು ಈಗ ತಂದೆಗೆ ಬದಲಾಗಿ ಶಿಕ್ಷಕನ ರೂಪವನ್ನು ಧಾರಣೆ ಮಾಡಿದ್ದೇವೆ.
ಹೋಮ್ವರ್ಕ್ ಕೊಟ್ಟಿದ್ದೇನಲ್ಲವೆ? ಹೋಮ್ವರ್ಕ್ನ್ನು ಯಾರು ಕೊಡುತ್ತಾರೆ? ಶಿಕ್ಷಕ. ಕೊನೆಗೆ
ಸದ್ಗುರುವಿನ ಪಾತ್ರವಿದೆ, ತಮ್ಮನ್ನು ತಾವೇ ಕೇಳಿಕೊಳ್ಳಿ - ಸಂಪನ್ನ ಹಾಗೂ ಸಂಪೂರ್ಣ ಸ್ಥಿತಿ
ಎಷ್ಟರ ಮಟ್ಟಿಗೆ ತಲುಪಿದ್ದೀರಿ? ಶಬ್ಧದಿಂದ ದೂರವಾಗುವುದು, ಅಥವಾ ಶಬ್ಧದಲ್ಲಿ ಬರುವುದು - ಎರಡೂ
ಒಂದೇಸಮಾನ ಇದೆಯೇ? ಹೇಗೆ ಶಬ್ಧದಲ್ಲಿ ಬರುವುದು, ಯಾವಾಗ ಬೇಕಾದರೂ ಸಹಜವಾಗಿದೆಯೋ ಹಾಗೆಯೇ
ಶಬ್ಧದಿಂದ ದೂರವಾಗುವುದೂ ಸಹ ಹೇಗೆ ಬೇಕಾದರೆ ಹಾಗೆಯೇ ಹೋಗಲು ಸಾಧ್ಯವಿದೆಯೇ? ಸೆಕೆಂಡಿನಲ್ಲಿ
ಶಬ್ಧದಲ್ಲಿ ಬರಲು ಸಾಧ್ಯವಿದೆ, ಸೆಕೆಂಡಿನಲ್ಲಿ ಶಬ್ಧದಿಂದ ದೂರ ಹೋಗುವುದು, ಇಷ್ಟು ಅಭ್ಯಾಸವಿದೆಯೇ?
ಹೇಗೆ ಶರೀರದ ಮೂಲಕ ಯಾವಾಗ ಬೇಕು, ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಿ ಬರಲು ಸಾಧ್ಯವಿದೆಯಲ್ಲವೆ.
ಹಾಗೆಯೇ ಮನಸ್ಸು-ಬುದ್ಧಿಯ ಮೂಲಕ ಎಲ್ಲಿಗೆ ಬೇಕೋ, ಯಾವಾಗ ಬೇಕೋ ಅಲ್ಲಿಗೆ ಹೋಗಿ ಬರಲು ಸಾಧ್ಯವಿದೆಯೇ?
ಏಕೆಂದರೆ ಅಂತ್ಯದಲ್ಲಿ ತೇರ್ಗಡೆಯ ಅಂಕಗಳು, ಯಾರಿಗೆ ಸಿಗುತ್ತದೆಯೆಂದರೆ ಯಾರು ಸೆಕೆಂಡಿನಲ್ಲಿ ಹೇಗೆ
ಬೇಕೋ, ಎಲ್ಲಿಗೆ ಬೇಕೋ, ಏನನ್ನು ಆದೇಶ ಮಾಡಲು ಬಯಸುತ್ತೀರೋ ಅದರಲ್ಲಿ ಸಫಲರಾಗಬೇಕು. ವಿಜ್ಞಾನಿಗಳೂ
ಸಹ ಇದೇ ಪ್ರಯತ್ನ ಮಾಡುತ್ತಾರೆ - ಸಹಜವೂ ಆಗಬೇಕು ಮತ್ತು ಸಮಯವೂ ಸಹ ಕಡಿಮೆಯಿರಬೇಕು. ಅಂದಾಗ ಇಂತಹ
ಸ್ಥಿತಿಯಿದೆಯೇ? ನಿಮಿಷದವರೆಗೆ ಬಂದಿದ್ದೀರೋ, ಸೆಕೆಂಡಿನವರೆಗೆ ತಲುಪಿದ್ದೀರೋ, ಎಷ್ಟು ಸಮಯ
ಹಿಡಿಸುತ್ತದೆ? ಹೇಗೆ ಲೈಟ್ಹೌಸ್-ಮೈಟ್ಹೌಸ್ ಸೆಕೆಂಡಿನಲ್ಲಿ ಸ್ವಿಚ್ಆನ್ ಮಾಡಿದ ತಕ್ಷಣ ತಮ್ಮ ಲೈಟ್
ಹರಡುತ್ತದೆ ಅದೇರೀತಿ ತಾವು ಲೈಟ್ಹೌಸ್ ಆಗಿ ಸೆಕೆಂಡಿನಲ್ಲಿ ತಮ್ಮ ಲೈಟ್ನ್ನು ನಾಲ್ಕೂ ಕಡೆ ಹರಡಲು
ಸಾಧ್ಯವಿದೆಯೇ? ಒಂದು ಸ್ಥಾನದಲ್ಲಿ ಕುಳಿತು ಈ ಸ್ಥೂಲ ಕಣ್ಣುಗಳಿಂದ ದೂರದವರೆವಿಗೂ ನೋಡಲು
ಸಾಧ್ಯವಿದೆಯಲ್ಲವೆ! ತಮ್ಮ ದೃಷ್ಟಿ ಹರಿಸುತ್ತೀರಲ್ಲವೆ! ಅದೇರೀತಿ ಮೂರನೇ ನೇತ್ರದ ಮೂಲಕ ಒಂದು
ಸ್ಥಾನದಲ್ಲಿ ಕುಳಿತು ನಾಲ್ಕೂ ಕಡೆ ವರದಾತ, ವಿದಾತನಾಗಿ ದೃಷ್ಟಿಯಿಂದ ಪರಿವರ್ತನೆ ಮಾಡಲು
ಸಾಧ್ಯತೆಯೇ? ಈ ಎಲ್ಲಾ ಮಾತುಗಳಲ್ಲಿ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳುತ್ತಿದ್ದೀರಾ? ಮೂರನೆಯ
ನೇತ್ರ ಇಷ್ಟೊಂದು ಸ್ಪಷ್ಟ ಮತ್ತು ಸ್ವಚ್ಛವಾಗಿದೆಯೇ? ಒಂದುವೇಳೆ ಸ್ವಲ್ಪವೇನಾದರೂ ಬಲಹೀನತೆಯಿದ್ದರೆ
ಕಾರಣವನ್ನು ಮೊದಲೇ ತಿಳಿಸಿದ್ದೇವೆ. ಈ ಅಲ್ಪಕಾಲದ ಸೆಳೆತ "ನಾನು ಮತ್ತು ನನ್ನದು", ಹೇಗೆ ನಾನು
ಎಂಬುದಕ್ಕೆ ಸ್ಪಷ್ಟ ಮಾಡಲಾಗಿತ್ತು - ಹೋಮ್ವರ್ಕ್ನ್ನೂ ಸಹ ಕೊಡಲಾಗಿತ್ತು. ಎರಡು ಪ್ರಕಾರದ ನಾನು
ಎಂಬುದನ್ನು ಸಮಾಪ್ತಿ ಮಾಡಿ ಒಂದು ಪ್ರಕಾರದ ನಾನು ಎಂಬುದನ್ನು ಇಟ್ಟುಕೊಳ್ಳಿ. ಎಲ್ಲರೂ ಈ
ಹೋಮ್ವರ್ಕ್ನ್ನು ಮಾಡಿದಿರಾ? ಈ ಹೋಮ್ವರ್ಕ್ನಲ್ಲಿ ಯಾರು ಸಫಲರಾದಿರಿ ಅವರು ಕೈಯೆತ್ತಿರಿ. ಪಾಸ್
ಆದಿರಾ? ಬಾಪ್ದಾದಾರವರು ಎಲ್ಲರನ್ನೂ ನೋಡಿದ್ದೇವೆ. ಸಾಹಸವನ್ನು ಈ ರೀತಿ ಇಡಿ, ಹೆದರಬಾರದು.
ಒಳ್ಳೆಯದು - ಶುಭಾಷಯಗಳು ಸಿಗುತ್ತವೆ. ಪೂರ್ಣ ಮಾಡಿರುವವರು ಬಹಳ ಕಡಿಮೆಯಿದ್ದಾರೆ, ಮಾಡಿದ್ದರೆ
ಕೈಯನ್ನೆತ್ತಿ. ಟಿ.ವಿ.ಯಲ್ಲಿ ಕೈಯನ್ನು ತೋರಿಸಿ. ಹಿಂದೆಯಿರುವವರನ್ನೂ ತೋರಿಸಿ. ಬಹಳ ಕಡಿಮೆ
ಸಂಖ್ಯೆಯಲ್ಲಿ ಕೈಯನ್ನೆತ್ತಿದ್ದಾರೆ. ಈಗ ಏನು ಮಾಡುತ್ತೀರಿ? ಎಲ್ಲರಿಗೂ ತಮ್ಮ ಮೇಲೆ ತಮಗೆ ನಗು
ಬರುತ್ತಾ ಇದೆ.
ಒಳ್ಳೆಯದು - ಎರಡನೆಯ
ಹೋಮ್ವರ್ಕ್ ಆಗಿತ್ತು, ಕ್ರೋಧವನ್ನು ಬಿಡುವುದು, ಇದಂತೂ ಸಹಜವಲ್ಲವೆ. ಅಂದಾಗ ಕ್ರೋಧವನ್ನು ಯಾರು
ಬಿಟ್ಟರು, ಇಷ್ಟು ದಿನಗಳಲ್ಲಿ ಕ್ರೋಧವನ್ನು ಮಾಡಲಿಲ್ಲವೆ? (ಇದರಲ್ಲಿ ಬಹಳಮಂದಿ ಕೈಯೆತ್ತಿದ್ದಾರೆ)
ಇದರಲ್ಲಿ ಸ್ವಲ್ಪ ಜಾಸ್ತಿಯಿದ್ದಾರೆ. ಯಾರೆಲ್ಲಾ ಕ್ರೋಧ ಮಾಡಿಲ್ಲ, ತಮ್ಮ ಅಕ್ಕಪಕ್ಕ ಇರುವಂಥವರನ್ನೂ
ಕೇಳುತ್ತೇವೆ. ಬಹಳಷ್ಟಿದ್ದಾರೆ. ಕ್ರೋಧ ಮಾಡಲಿಲ್ಲವೆ? ಸಂಕಲ್ಪದಲ್ಲಿ, ಮನಸ್ಸಿನಲ್ಲಿ ಕ್ರೋಧ
ಬಂದಿತೆ? ಆದರೂ ಸಹ ಶುಭಾಷಯಗಳು, ಒಂದುವೇಳೆ ಮನಸ್ಸಿನಲ್ಲಿ ಬಂದಿತು, ಬಾಯಿಂದ ಮಾತನಾಡಲಿಲ್ಲವೆಂದರೆ
ಅದಕ್ಕೂ ಶುಭಾಷಯಗಳು. ಬಹಳ ಒಳ್ಳೆಯದು.
ಅಂದಾಗ ತಾವೇ ನೋಡಿಕೊಳ್ಳಿ
- ಫಲಿತಾಂಶದ ಲೆಕ್ಕದಿಂದ ಸ್ಥಾಪನೆಯ ಕಾರ್ಯ ಸ್ವಯಂನ್ನು ಸಂಪನ್ನ ಮಾಡುವುದು ಮತ್ತು ಸರ್ವ ಆತ್ಮರಿಗೆ
ಮುಕ್ತಿಯ ಆಸ್ತಿಯನ್ನು ಕೊಡಿಸುವುದು, ಈ ಕಾರ್ಯ ಸಂಪನ್ನವಾಯಿತೆ? ಸ್ವಯಂನ್ನು ಜೀವನ್ಮುಕ್ತ
ಸ್ವರೂಪರನ್ನಾಗಿ ಮಾಡುವುದು ಮತ್ತು ಸರ್ವ ಆತ್ಮರಿಗೆ ಮುಕ್ತಿಯ ಆಸ್ತಿಯನ್ನು ಕೊಡಿಸುವುದು - ಇದು
ಸ್ಥಾಪನಾಕರ್ತರಾದ ಆತ್ಮರ ಶ್ರೇಷ್ಠ ಕರ್ಮವಾಗಿದೆ ಅಂದಾಗ ಬಾಪ್ದಾದಾ ಇದಕ್ಕಾಗಿ ಕೇಳುತ್ತೇವೆ –
ಸರ್ವ ಬಂಧನದಿಂದ ಮುಕ್ತ ಜೀವನ್ಮುಕ್ತ ಸ್ಥಿತಿಯನ್ನು ಸಂಗಮದಲ್ಲಿಯೇ ತಲುಪಬೇಕು ಅಥವಾ ಸತ್ಯಯುಗದಲ್ಲಿ
ತಲುಪಬೇಕೋ? ಸಂಗಮಯುಗದಲ್ಲಿ ಸಂಪನ್ನರಾಗಬೇಕಾಗಿದೆಯೇ ಅಥವಾ ಸತ್ಯಯುಗದಲ್ಲಿಯೂ ರಾಜಯೋಗವನ್ನು
ಕಲಿಯಬೇಕೋ? ಇಲ್ಲಿಯೇ ಸಂಪನ್ನರಾಗಬೇಕಲ್ಲವೆ? ಸಂಪೂರ್ಣರು ಇಲ್ಲಿಯೇ ಆಗಬೇಕು. ಸಂಗಮಯುಗದ ಸಮಯವೂ ಸಹ
ಅತಿ ದೊಡ್ಡ ಖಜಾನೆಯಾಗಿದೆ. ಅಂದಾಗ ಯಾರು ಸ್ವರ್ಣೀಮ ಸೂರ್ಯೋದವರನ್ನು ತಡೆ ಹಿಡಿದಿದ್ದಾರೆ? ತಿಳಿಸಿ.
ಬಾಪ್ದಾದಾ ಏನನ್ನು
ಬಯಸುತ್ತೇವೆ? ಏಕೆಂದರೆ ತಂದೆಯ ಆಶಾದೀಪಗಳು ಮಕ್ಕಳೇ ಆಗಿದ್ದಾರೆ ಅಂದಾಗ ತಮ್ಮ ಖಾತೆಯನ್ನು
ಚೆನ್ನಾಗಿ ಪರಿಶೀಲನೆ ಮಾಡಿಕೊಳ್ಳಿ. ಕೆಲವು ಮಕ್ಕಳನ್ನು ನೋಡಿದೆವು, ಕೆಲವು ಮಕ್ಕಳು
ಆರಾಮವಾಗಿದ್ದಾರೆ, ಆರಾಮವಾಗಿ ನಡೆಯುತ್ತಿದ್ದಾರೆ. ಏನಾದರೂ ಒಳ್ಳೆಯದೆ ಆಗಿದೆ, ಈಗ ಮೋಜು ಮಾಡಿ.
ಸತ್ಯಯುಗದಲ್ಲಿ ಯಾರು ನೋಡುತ್ತಾರೆ, ಯಾರಿಗೆ ಗೊತ್ತಿದೆ ಜಮಾ ಖಾತೆಯಲ್ಲಿ ಇಂತಹ ಮೋಜಿಲಾಲ್ ಎಂದಾದರೂ
ಹೇಳಿ, ಮೋಜಿರಾಮ ಎಂದಾದರೂ ಹೇಳಿ - ಇಂತಹ ಮಕ್ಕಳನ್ನು ನೋಡಿದೆವು. ಮಜಾ ಮಾಡಿ. ಅನ್ಯರಿಗೂ
ಹೇಳುತ್ತಾರೆ ಅರೆ! ಏನು ಮಾಡಬೇಕು, ಮಜಾವಾಗಿರಿ. ತಿನ್ನಿ, ಕುಡಿಯಿರಿ, ಮಜವಾಗಿರಿ. ಮಜವಾಗಿರಿ ಎಂದು
ತಂದೆಯೂ ಹೇಳುತ್ತಾರೆ. ಸ್ವಲ್ಪದರಲ್ಲಿಯೇ ರಾಜಿಯಾಗುವವರಿದ್ದರೆ ಸ್ವಲ್ಪದರಲ್ಲಿಯೇ ರಾಜಿಯಾಗಿ.
ವಿನಾಶಿ ಸಾಧನಗಳ ಮೋಜು ಅಲ್ಪಕಾಲದ್ದಾಗಿರುತ್ತದೆ. ಸದಾಕಾಲದ ಮೋಜನ್ನು ಬಿಟ್ಟು ಒಂದುವೇಳೆ
ಅಲ್ಪಕಾಲದ ಸಾಧನದ ಮೋಜಿನಲ್ಲಿರಲು ಇಚ್ಛಿಸುತ್ತೀರೆಂದರೆ ಬಾಪ್ದಾದಾ ಏನು ಹೇಳುತ್ತೇವೆ? ಸೂಚನೆಯನ್ನು
ಕೊಡುತ್ತೇವೆ ಮತ್ತೇನು ಮಾಡುತ್ತೇವೆ? ಕೆಲವರು ವಜ್ರದ ಗಣಿಯಲ್ಲಿ ಹೋಗುತ್ತಾರೆ ಮತ್ತು ಎರಡು
ವಜ್ರಗಳನ್ನು ತೆಗೆದುಕೊಂಡು ಖುಷಿಪಡುತ್ತಾರೆಂದರೆ ಅವರಿಗೆ ಏನು ಹೇಳುವುದು? ಆದ್ದರಿಂದ ಈ
ರೀತಿಯಾಗಬಾರದು. ಅತೀಂದ್ರಿಯ ಸುಖದ ಮೋಜಿನ ಉಯ್ಯಾಲೆಯಲ್ಲಿ ತೂಗಿ. ಅವಿನಾಶಿ ಪ್ರಾಪ್ತಿಗಳ
ಉಯ್ಯಾಲೆಯ ಮೋಜಿನಲ್ಲಿ ತೂಗಿ. ಡ್ರಾಮಾದಲ್ಲಿ ನೋಡಿ, ಮಾಯೆಯ ಪಾತ್ರವೂ ಸಹ ವಿಚಿತ್ರವಾಗಿದೆ. ಇದೇ
ಸಮಯದಲ್ಲಿ ಇಂತಿಂತಹ ಸಾಧನಗಳು ಹೊರ ಬಂದಿವೆ, ಮೊದಲು ಅದು ಇರಲೇ ಇಲ್ಲ. ಆದರೆ ಸಾಧನಗಳಿಲ್ಲದೆ ಯಾರು
ಸಾಧನೆಯನ್ನು ಮಾಡಿದರೋ, ಸೇವೆಯನ್ನು ಮಾಡಿದರೋ ಅದರ ಉದಾಹರಣೆಯೂ ಸಹ ಎದುರಿನಲ್ಲಿ ಇದೆಯಲ್ಲವೆ?
ಇವೆಲ್ಲಾ ಸಾಧನಗಳಿತ್ತೇನು? ಆದರೆ ಸೇವೆಯು ಎಷ್ಟಾಗಿತ್ತು? ಕ್ವಾಲಿಟಿಯಿರುವವರು ಹೊರ ಬಂದರಲ್ಲವೆ.
ಆದಿರತ್ನಗಳಂತೂ ತಯಾರಾಗಿ ಬಿಟ್ಟರಲ್ಲವೆ! ಈ ಸಾಧನೆಗಳ ಆಕರ್ಷಣೆಯಿದೆಯೇ. ಸಾಧನಗಳನ್ನು
ಉಪಯೋಗಿಸುವುದು ತಪ್ಪೆಂದು ಹೇಳಲು ಸಾಧ್ಯವಿಲ್ಲ ಆದರೆ ಸಾಧನೆಯನ್ನು ಮರೆತು ಸಾಧನಗಳಲ್ಲಿ ತೊಡಗುವುದು
ಇದಕ್ಕೆ ಬಾಪ್ದಾದಾ ತಪ್ಪೆಂದು ಹೇಳುತ್ತಾರೆ. ಸಾಧನ ಜೀವನದ ಹಾರುವ ಕಲೆಯ ಸಾಧನೆಯಲ್ಲ, ಆಧಾರವಲ್ಲ.
ಸಾಧನೆಯು ಆಧಾರವಾಗಿದೆ. ಒಂದುವೇಳೆ ಸಾಧನೆಗೆ ಬದಲಾಗಿ ಸಾಧನಗಳನ್ನು ಆಧಾರವಾಗಿ ಮಾಡಿಕೊಂಡಿದ್ದೇ
ಆದರೆ ಫಲಿತಾಂಶ ಏನಾಗುತ್ತದೆ? ಸಾಧನ ವಿನಾಶಿಯಾಗಿದೆ, ಅಂದಾಗ ಅದರ ಫಲಿತಾಂಶವೇನು? ಸಾಧನ
ಅವಿನಾಶಿಯಾಗಿದೆ. ಇದರ ಫಲಿತಾಂಶ ಏನಾಗಿರುತ್ತದೆ? ಒಳ್ಳೆಯದು.
ನಾಲ್ಕೂ ಕಡೆಯ ಮಕ್ಕಳ
ಪುರುಷಾರ್ಥ ಮತ್ತು ಪ್ರೀತಿಯ ಸಮಾಚಾರ ಪತ್ರಗಳು ಬಾಪ್ದಾದಾರವರಿಗೆ ತಲುಪಿದೆ, ಬಾಪ್ದಾದಾರವರು
ಮಕ್ಕಳ ಉಮ್ಮಂಗ-ಉತ್ಸಾಹವನ್ನು ನೋಡಿ ಇದನ್ನು ಮಾಡುತ್ತೇವೆ, ಇದನ್ನು ಮಾಡುತ್ತೇವೆ, ಈ ಸಮಾಚಾರವನ್ನು
ಕೇಳಿ ಖುಷಿಯಾಗುತ್ತದೆ. ಈಗ ಕೇವಲ ಯಾವ ಸಾಹಸವನ್ನಿಟ್ಟಿದ್ದೀರಿ, ಉಮ್ಮಂಗ-ಉತ್ಸಾಹವನ್ನಿಟ್ಟಿದ್ದೀರಿ,
ಇದಕ್ಕೆ ಮತ್ತೆ-ಮತ್ತೆ ಗಮನವನ್ನು ತರಿಸುತ್ತೇವೆ - ಪ್ರತ್ಯಕ್ಷದಲ್ಲಿ ತರುವುದು. ಇದೇ ಎಲ್ಲಾ
ಮಕ್ಕಳ ಪ್ರತಿ ಬಾಪ್ದಾದಾರವರ ಹೃದಯದ ಆಶೀರ್ವಾದವಾಗಿದೆ ಮತ್ತು ಎಲ್ಲರ ನಾಲ್ಕೂ ಕಡೆಯ ಸಂಕಲ್ಪ, ಮಾತು
ಮತ್ತು ಕರ್ಮದಲ್ಲಿ, ಸಂಬಂಧ-ಸಂಪರ್ಕದಲ್ಲಿ ಸಂಪನ್ನರಾಗುವಂತಹ ಶ್ರೇಷ್ಠ ಆತ್ಮಗಳಿಗೆ ಸದಾ
ಸ್ವ-ದರ್ಶನ ಮಾಡುವಂತಹ ಸ್ವದರ್ಶನ ಚಕ್ರಧಾರಿ ಮಕ್ಕಳಿಗೆ, ಸದಾ ಧೃಡ ಸಂಕಲ್ಪದ ಮೂಲಕ ಮಾಯಾಜೀತರಾಗಿ
ತಂದೆಯ ಮುಂದೆ ಸ್ವಯನ್ನು ಪ್ರತ್ಯಕ್ಷತೆ ಮಾಡುವಂತಹ ವಿಶ್ವದ ಮುಂದೆ ತಂದೆಯನ್ನು ಪ್ರತ್ಯಕ್ಷತೆ
ಮಾಡುವಂತಹ ಸರ್ವೀಸೇಬಲ್, ನಾಲೆಡ್ಜ್ಫುಲ್, ಸಕ್ಸಸ್ಫುಲ್ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ
ಮತ್ತು ಪದಮಾಪದಮಗುಣ ಆಶೀರ್ವಾದಗಳು ಮತ್ತೆ ನಮಸ್ತೆ-ನಮಸ್ತೆ.
ವರದಾನ:
ಸತ್ಯವಾದ
ಸ್ವಚ್ಚವಾದ ಹೃದಯದ ಆಧಾರದಿಂದ ನಂಬರ್ ಒನ್ ತೆಗೆದುಕೊಳ್ಳುವಂತಹ ದಿಲಾರಾಮ ಪಸಂದ್ ಭವ.
ದಿಲಾರಾಮ ತಂದೆಗೆ ಸತ್ಯ
ಹೃದಯವುಳ್ಳಂತಹ ಮಕ್ಕಳೇ ಇಷ್ಟವಾಗುತ್ತಾರೆ. ಪ್ರಾಪಂಚಿಕ ಬುದ್ಧಿ ಇಲ್ಲದೇ ಇದ್ದರೂ ಪರವಾಗಿಲ್ಲ ಆದರೆ
ಸತ್ಯವಾದ ಸ್ವಚ್ಚ ಹೃದಯವುಳ್ಳವರಾಗಿದ್ದರೆ ನಂಬರ್ ಒನ್ ಪಡೆದುಕೊಳ್ಳುತ್ತಾರೆ ಏಕೆಂದರೆ ತಂದೆ ಇಷ್ಟು
ವಿಶಾಲ ಬುದ್ಧಿಯನ್ನು ಕೊಟ್ಟು ಬಿಡುತ್ತಾರೆ ಅದರಿಂದ ರಚಯಿತನನ್ನು ತಿಳಿಯುವುದರಿಂದ ಹಿಡಿದು ರಚನೆಯ
ಆದಿ, ಮಧ್ಯೆ, ಅಂತ್ಯದ ಜ್ಞಾನವನ್ನು ತಿಳಿದು ಬಿಡುತ್ತಾರೆ. ಆದ್ದರಿಂದ ಸತ್ಯ, ಸ್ವಚ್ಚ ಹೃದಯದ
ಆಧಾರದಿಂದಲೇ ನಂಬರ್ ತಯಾರಾಗುತ್ತದೆ, ಸೇವೆಯ ಆಧಾರದಿಂದ ಅಲ್ಲ. ಸತ್ಯ ಹೃದಯದವರ ಸೇವೆಯ ಫ್ರಭಾವ
ಹೃದಯದವರೆಗೆ ಮುಟ್ಟುತ್ತದೆ. ಬುದ್ಧಿವುಳ್ಳವರು ಹೆಸರು ಸಂಪಾದಿಸುತ್ತಾರೆ ಮತ್ತು ಹೃದಯವಂತರು
ಪ್ರಪಂಚವನ್ನು ಸಂಪಾದಿಸುತ್ತಾರೆ.
ಸ್ಲೋಗನ್:
ಸರ್ವರ ಪ್ರತಿ
ಶುಭ ಚಿಂತನೆ ಮತ್ತು ಶುಭ ಕಾಮನೆ ಇಡುವಂತಹದೇ ಸತ್ಯ ಪರೋಪಕಾರವಾಗಿದೆ.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಯಾವ ಮಕ್ಕಳು ಪರಮಾತ್ಮನ
ಪ್ರೀತಿಯಲ್ಲಿ ಸದಾ ಲವಲೀನರಾಗುತ್ತಾರೆ, ಕಳೆದು ಹೋಗಿರುತ್ತಾರೆ ಅವರ ಹೊಳಪು, ಅನುಭೂತಿಯ ಕಿರಣಗಳು
ಬಹಳ ಶಕ್ತಿಶಾಲಿಯಾಗಿರುತ್ತವೆ ಯಾವುದೇ ಸಮಸ್ಯೆ ಸಮೀಪ ಬರುವುದು ದೂರ ಆದರೆ ಕಣ್ಣು ಎತ್ತಿ ನೋಡಲು
ಸಹ ಸಾಧ್ಯವಿಲ್ಲ. ಅವರಿಗೆ ಎಂದೂ ಯಾವುದೇ ಪ್ರಕಾರದ ಕಷ್ಟವಾಗುವುದಿಲ್ಲ.