03.11.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ನಿರ್ವಿಕಾರಿ ಪ್ರಪಂಚವನ್ನಾಗಿ ಮಾಡಲು, ನಿಮ್ಮ ಚಲನೆಯನ್ನು ಸುಧಾರಣೆ ಮಾಡಲು ಬಂದಿದ್ದಾರೆ, ನೀವು
ಸಹೋದರ-ಸಹೋದರರಾಗಿದ್ದೀರಿ ಆದ್ದರಿಂದ ನಿಮ್ಮ ದೃಷ್ಟಿಯು ಬಹಳ ಶುದ್ಧವಾಗಿರಬೇಕು”
ಪ್ರಶ್ನೆ:
ನೀವು ಮಕ್ಕಳು
ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ ಆದರೂ ಸಹ ನಿಮಗೆ ಒಂದು ಮೂಲ ಚಿಂತೆಯಿರಬೇಕು - ಅದು ಯಾವುದು?
ಉತ್ತರ:
ನಾವು ಪತಿತರಿಂದ
ಹೇಗೆ ಪಾವನರಾಗುವುದು - ಇದು ಮೂಲ ಚಿಂತೆಯಾಗಿದೆ. ತಂದೆಯ ಮಕ್ಕಳಾಗಿಯೂ ಮತ್ತೆ ತಂದೆಯ ಮುಂದೆ
ಶಿಕ್ಷೆಯನ್ನನುಭವಿಸುವಂತಾಗಬಾರದು. ಆದ್ದರಿಂದ ಶಿಕ್ಷೆಗಳಿಂದ ಮುಕ್ತರಾಗುವ ಚಿಂತೆಯಿರಲಿ.
ಇಲ್ಲವಾದರೆ ಆ ಸಮಯದಲ್ಲಿ ಬಹಳ ನಾಚಿಕೆಯಾಗುವುದು. ಬಾಕಿ ನೀವು ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ,
ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಯಾರು ತಿಳಿದುಕೊಳ್ಳುವರೋ ಅವರು ಬೇಹದ್ದಿನ ಮಾಲೀಕನಾಗುವರು.
ತಿಳಿದುಕೊಳ್ಳಲಿಲ್ಲವೆಂದರೆ ಅದು ಅವರ ಅದೃಷ್ಟ. ನಿಮಗೆ ಚಿಂತೆಯಿಲ್ಲ.
ಓಂ ಶಾಂತಿ.
ಆತ್ಮಿಕ ತಂದೆಯ ಹೆಸರು ಶಿವ ಎಂದಾಗಿದೆ. ಅವರೇ ಕುಳಿತು ತಮ್ಮ ಮಕ್ಕಳಿಗೆ ತಿಳಿಸುತ್ತಾರೆ. ಎಲ್ಲರಿಗೂ
ಆತ್ಮಿಕ ತಂದೆಯು ಒಬ್ಬರೇ ಆಗಿದ್ದಾರೆ. ಮೊಟ್ಟ ಮೊದಲಿಗೆ ಈ ಮಾತನ್ನು ತಿಳಿಸಬೇಕು ನಂತರ
ಮುಂದಿನದನ್ನು ತಿಳಿದುಕೊಳ್ಳಲು ಸಹಜವಾಗುವುದು. ಒಂದುವೇಳೆ ತಂದೆಯ ಪರಿಚಯವೇ ಸಿಗಲಿಲ್ಲವೆಂದರೆ
ಪ್ರಶ್ನೆ ಮಾಡುತ್ತಿರುತ್ತಾರೆ. ಮೊಟ್ಟ ಮೊದಲಿಗೆ ಈ ನಿಶ್ಚಯ ಮಾಡಿಸಬೇಕಾಗಿದೆ. ಗೀತೆಯ ಭಗವಂತ
ಯಾರೆಂಬುದು ಪ್ರಪಂಚದವರಿಗೆ ತಿಳಿದಿಲ್ಲ. ಅವರು ಕೃಷ್ಣನೆಂದು ಹೇಳಿ ಬಿಡುತ್ತಾರೆ. ಪರಮಪಿತ
ಪರಮಾತ್ಮ ಶಿವನು ಗೀತೆಯ ಭಗವಂತನೆಂದು ನಾವು ಹೇಳುತ್ತೇವೆ. ಅವರೇ ಜ್ಞಾನ ಸಾಗರನಾಗಿದ್ದಾರೆ.
ಮುಖ್ಯವಾದುದು ಸರ್ವ ಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ. ಹೇ! ಪ್ರಭು ನಿನ್ನ ಗತಿಮತವು
ಭಿನ್ನವಾಗಿದೆ ಎಂದು ಭಗವಂತನಿಗಾಗಿ ಹೇಳುತ್ತಾರೆ. ಕೃಷ್ಣನಿಗೆ ಹೇಳುವುದಿಲ್ಲ. ತಂದೆಯು
ಸತ್ಯವಾಗಿದ್ದಾರೆ, ಅವರು ಅವಶ್ಯವಾಗಿ ಸತ್ಯವನ್ನೇ ತಿಳಿಸುತ್ತಾರೆ. ಪ್ರಪಂಚವು ಮೊದಲು ಹೊಸ
ಸತೋಪ್ರಧಾನವಾಗಿತ್ತು, ಈಗ ಹಳೆಯ ತಮೋಪ್ರಧಾನ ಪ್ರಪಂಚವಾಗಿದೆ. ಪ್ರಪಂಚವನ್ನು ಪರಿವರ್ತಿಸುವವರು
ತಂದೆಯೊಬ್ಬರೇ ಆಗಿದ್ದಾರೆ. ತಂದೆಯು ಹೇಗೆ ಪರಿವರ್ತನೆ ಮಾಡುತ್ತಾರೆ ಎಂಬುದನ್ನೂ ತಿಳಿಸಬೇಕು.
ಯಾವಾಗ ಆತ್ಮವು ಸತೋಪ್ರಧಾನವಾಗುವುದೋ ಆಗ ಸತೋಪ್ರಧಾನ ಪ್ರಪಂಚವೇ ಸ್ಥಾಪನೆಯಾಗುವುದು. ಮೊಟ್ಟ ಮೊದಲು
ನೀವು ಮಕ್ಕಳು ಅಂತರ್ಮುಖಿಯಾಗಬೇಕಾಗಿದೆ. ಹೆಚ್ಚು ವಾದ-ವಿವಾದ ಮಾಡಬಾರದು. ಯಾರಾದರೂ ಒಳಗೆ
ಪ್ರವೇಶಿಸುತ್ತಾರೆಂದರೂ ಬಹಳ ಚಿತ್ರಗಳನ್ನು ನೋಡಿ ಕೇಳುತ್ತಲೇ ಇರುತ್ತಾರೆ ಅಂದಾಗ ಮೊಟ್ಟ ಮೊದಲು
ಒಂದೇ ಮಾತಿನ ಬಗ್ಗೆ ತಿಳಿಸಿ ಕೊಡಬೇಕು ಆಗ ಅವರಿಗೆ ಹೆಚ್ಚಿನದಾಗಿ ಚರ್ಚೆ ಮಾಡುವ ಅವಕಾಶ
ಸಿಗುವುದಿಲ್ಲ. ತಿಳಿಸಿ, ಮೊದಲು ಒಂದು ಮಾತಿನ ಬಗ್ಗೆ ನಿಶ್ಚಯ ಮಾಡಿಕೊಳ್ಳಿ ನಂತರ ಮುಂದಕ್ಕೆ
ತಿಳಿಸುತ್ತೇವೆ ಎಂದು ಹೇಳಿ ನಂತರ ನೀವು 84 ಜನ್ಮಗಳ ಚಕ್ರದ ಬಗ್ಗೆ ತಿಳಿಸಬಹುದು. ತಂದೆಯು
ತಿಳಿಸುತ್ತಾರೆ - ನಾನು ಬಹಳ ಜನ್ಮಗಳ ಅಂತಿಮದಲ್ಲಿ ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡುತ್ತೇನೆ.
ಇವರಿಗೆ ಹೇಳುತ್ತೇನೆ - ನೀವು ತಮ್ಮ ಜನ್ಮಗಳ ಬಗ್ಗೆ ತಿಳಿದುಕೊಂಡಿಲ್ಲ. ತಂದೆಯು ಪ್ರಜಾಪಿತ
ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ. ಮೊಟ್ಟ ಮೊದಲಿಗೆ ತಂದೆಯ ಬಗ್ಗೆ ತಿಳಿಸಬೇಕು. ತಂದೆಯನ್ನು
ಅರ್ಥ ಮಾಡಿಕೊಳ್ಳುವುದರಿಂದ ಯಾವುದೇ ಸಂಶಯವಿರುವುದಿಲ್ಲ. ಅಂದಾಗ ತಿಳಿಸಿ, ತಂದೆಯು
ಸತ್ಯವಾಗಿದ್ದಾರೆ, ಅವರು ಅಸತ್ಯವನ್ನು ತಿಳಿಸುವುದಿಲ್ಲ. ಬೇಹದ್ದಿನ ತಂದೆಯೇ ರಾಜಯೋಗವನ್ನು
ಕಲಿಸುತ್ತಾರೆ. ಶಿವರಾತ್ರಿ ಎಂದು ಗಾಯನವಿದೆ ಅಂದಮೇಲೆ ಅವಶ್ಯವಾಗಿ ಶಿವನು ಇಲ್ಲಿ ಬಂದಿರಬೇಕಲ್ಲವೆ.
ಹೇಗೆ ಇಲ್ಲಿ ಕೃಷ್ಣ ಜಯಂತಿಯನ್ನೂ ಆಚರಿಸುತ್ತಾರೆ. ನಾನು ಬ್ರಹ್ಮಾರವರ ಮೂಲಕ ಸ್ಥಾಪನೆ
ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಎಲ್ಲರೂ ಆ ಒಬ್ಬ ನಿರಾಕಾರ ತಂದೆಯ ಮಕ್ಕಳಾಗಿದ್ದಾರೆ.
ನೀವೀಗ ಅಂತಹ ತಂದೆಯ ಸಂತಾನರಾಗಿದ್ದೀರಿ ಮತ್ತು ಪ್ರಜಾಪಿತ ಬ್ರಹ್ಮಾನ ಸಂತಾನರೂ ಆಗಿದ್ದೀರಿ.
ಪ್ರಜಾಪಿತ ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ನೀವು
ಬ್ರಾಹ್ಮಣ-ಬ್ರಾಹ್ಮಣಿಯರಾದಿರಿ, ಸಹೋದರ-ಸಹೋದರಿಯರಾದಿರಿ ಅಂದಮೇಲೆ ಸಹೋದರತ್ವದಲ್ಲಿ
ಪವಿತ್ರತೆಯಿರುತ್ತದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿರುವ ವಿಧಿಯು ಇದಾಗಿದೆ.
ಸಹೋದರ-ಸಹೋದರಿಯೆಂದ ಮೇಲೆ ಎಂದೂ ಕುದೃಷ್ಟಿಯಾಗಬಾರದು. 21 ಜನ್ಮಗಳಿಗಾಗಿ ಈಗ ದೃಷ್ಟಿಯು
ಸುಧಾರಣೆಯಾಗುತ್ತದೆ. ತಂದೆಯೇ ಮಕ್ಕಳಿಗೆ ಶಿಕ್ಷಣ ಕೊಡುವರಲ್ಲವೆ. ನಡವಳಿಕೆಯನ್ನು ಸುಧಾರಣೆ
ಮಾಡುತ್ತಾರೆ. ಈಗ ಇಡೀ ಪ್ರಪಂಚದ ನಡವಳಿಕೆಯನ್ನು ತಂದೆಯು ಸುಧಾರಣೆ ಮಾಡಬೇಕಾಗಿದೆ. ಈ ಪತಿತ ಹಳೆಯ
ಪ್ರಪಂಚದಲ್ಲಿ ಯಾರಲ್ಲಿಯೂ ಶ್ರೇಷ್ಠ ನಡವಳಿಕೆಯಿಲ್ಲ. ಎಲ್ಲರಲ್ಲಿ ವಿಕಾರಗಳೇ ಇವೆ. ಇದು ಪತಿತ,
ವಿಕಾರೀ ಪ್ರಪಂಚವಾಗಿದೆ. ಮತ್ತೆ ಹೇಗೆ ನಿರ್ವಿಕಾರಿ ಪ್ರಪಂಚವಾಗುವುದು? ನಿರ್ವಿಕಾರಿಯನ್ನಾಗಿ
ತಂದೆಯ ವಿನಃ ಯಾರೂ ಮಾಡಲು ಸಾಧ್ಯವಿಲ್ಲ. ಈಗ ತಂದೆಯು ಪವಿತ್ರರನ್ನಾಗಿ ಮಾಡುತ್ತಿದ್ದಾರೆ.
ಇವೆಲ್ಲವೂ ಗುಪ್ತ ಮಾತುಗಳಾಗಿವೆ. ನಾವು ಆತ್ಮಗಳಾಗಿದ್ದೇವೆ. ಆತ್ಮವು ಪರಮಾತ್ಮ ತಂದೆಯೊಂದಿಗೆ
ಮಿಲನ ಮಾಡಬೇಕಾಗಿದೆ. ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿಯೇ ಎಲ್ಲರೂ ಪುರುಷಾರ್ಥ ಮಾಡುತ್ತಾರೆ.
ಭಗವಂತನು ಒಬ್ಬರೇ ನಿರಾಕಾರನಾಗಿದ್ದಾರೆ, ಮುಕ್ತಿದಾತ, ಮಾರ್ಗದರ್ಶಕನೆಂದು ಪರಮಾತ್ಮನಿಗೇ
ಹೇಳಲಾಗುತ್ತದೆ. ಅನ್ಯ ಧರ್ಮದವರಾರಿಗೂ ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳುವುದಿಲ್ಲ. ಪರಮಪಿತ
ಪರಮಾತ್ಮನೇ ಬಂದು ಮುಕ್ತಗೊಳಿಸುತ್ತಾರೆ ಅರ್ಥಾತ್ ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ
ಮಾಡುತ್ತಾರೆ ಮತ್ತು ಇದೇ ಮಾರ್ಗದರ್ಶನ ನೀಡುತ್ತಾರೆ, ಮೊಟ್ಟ ಮೊದಲಿಗೆ ಇದೊಂದೇ ಮಾತನ್ನು
ಬುದ್ಧಿಯಲ್ಲಿ ಕೂರಿಸಿ. ಒಂದುವೇಳೆ ತಿಳಿದುಕೊಳ್ಳದಿದ್ದರೆ ಬಿಟ್ಟು ಬಿಡಿ. ತಂದೆಯನ್ನೇ
ಅರಿತಿಲ್ಲವೆಂದರೆ ಇನ್ನು ಆಸ್ತಿಯ ಬಗ್ಗೆ ತಿಳಿಸುವುದರಿಂದೇನು ಲಾಭ ಆದ್ದರಿಂದ ಭಲೆ ಹೊರಟು ಹೋಗಲಿ.
ನೀವು ಇದರಲ್ಲಿ ಗಾಬರಿಯಾಗಬೇಡಿ. ನೀವು ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ. ಅಸುರರ ವಿಘ್ನಗಳು
ಬಂದೇ ಬರುತ್ತವೆ, ಇದು ರುದ್ರ ಜ್ಞಾನ ಯಜ್ಞ ಆಗಿದೆ ಅಂದಾಗ ಮೊಟ್ಟ ಮೊದಲಿಗೆ ತಂದೆಯ ಪರಿಚಯ
ಕೊಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮನ್ಮನಾಭವ. ಎಷ್ಟು ಪುರುಷಾರ್ಥ ಮಾಡುವಿರೋ ಅದರನುಸಾರ
ಪದವಿಯನ್ನು ಪಡೆಯುವಿರಿ. ಆದಿ ಸನಾತನ ದೇವಿ-ದೇವತಾ ಧರ್ಮದ ರಾಜ್ಯವು ಸ್ಥಾಪನೆಯಾಗುತ್ತಿದೆ. ಈ
ಲಕ್ಷ್ಮೀ-ನಾರಾಯಣರ ರಾಜಧಾನಿಯಾಗಿದೆ. ಅನ್ಯ ಧರ್ಮದವರು ರಾಜಧಾನಿಯನ್ನು ಸ್ಥಾಪನೆ ಮಾಡುವುದಿಲ್ಲ.
ತಂದೆಯು ಬಂದು ಎಲ್ಲರನ್ನೂ ಮುಕ್ತರನ್ನಾಗಿ ಮಾಡುತ್ತಾರೆ ಮತ್ತೆ ತಮ್ಮ-ತಮ್ಮ ಸಮಯದಲ್ಲಿ ಅನ್ಯ ಧರ್ಮ
ಸ್ಥಾಪಕರು ಬಂದು ತಮ್ಮ ಧರ್ಮ ಸ್ಥಾಪನೆ ಮಾಡುವರು ಮತ್ತೆ ವೃದ್ಧಿಯಾಗುವುದು. ಪುನಃ
ಪತಿತರಾಗಲೇಬೇಕಾಗಿದೆ. ಪತಿತರಿಂದ ಪಾವನರನ್ನಾಗಿ ಮಾಡುವುದು- ಇದು ತಂದೆಯದೇ ಕರ್ತವ್ಯವಾಗಿದೆ. ಆ
ಧರ್ಮ ಸ್ಥಾಪಕರಂತೂ ಕೇವಲ ಬಂದು ಧರ್ಮ ಸ್ಥಾಪನೆ ಮಾಡುತ್ತಾರೆ, ಇದರಲ್ಲಿ ಯಾವುದೇ ಹೆಗ್ಗಳಿಕೆಯ
ಮಾತಿಲ್ಲ. ಮಹಿಮೆಯೆಲ್ಲವೂ ಒಬ್ಬರದೇ ಆಗಿದೆ ಆದರೆ ಆ ಕ್ರಿಶ್ಚಿಯನ್ನರು ಕ್ರೈಸ್ತನ ಹಿಂದೆ ಎಷ್ಟು
ಮಹಿಮೆ ಮಾಡುತ್ತಾರೆ! ಅವರಿಗೂ ತಿಳಿಸಬೇಕು - ಮುಕ್ತಿದಾತ, ಮಾರ್ಗದರ್ಶಕನು ಪರಮಪಿತ ಪರಮಾತ್ಮನೇ
ಆಗಿದ್ದಾರೆ ಅಂದಮೇಲೆ ಕ್ರಿಸ್ತನು ಬಂದು ಏನು ಮಾಡಿದರು? ಅವರ ಹಿಂದೆ ಕ್ರಿಶ್ಚಿಯನ್ ಧರ್ಮದ ಆತ್ಮಗಳು
ಬರುತ್ತಿರುತ್ತಾರೆ, ಕೆಳಗಿಳಿಯತೊಡಗುತ್ತಾರೆ. ದುಃಖದಿಂದ ಬಿಡಿಸುವವರು ಒಬ್ಬರೇ ತಂದೆಯಾಗಿದ್ದಾರೆ.
ಇವೆಲ್ಲಾ ಮಾತುಗಳನ್ನು ಬುದ್ಧಿಯಲ್ಲಿ ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಒಬ್ಬ ತಂದೆಗೇ
ದಯಾಸಾಗರನೆಂದು ಕರೆಯಲಾಗುತ್ತದೆ. ಕ್ರಿಸ್ತನು ದಯೆ ತೋರಿಸುವುದಿಲ್ಲ, ಯಾವ ಮನುಷ್ಯನೂ ಯಾರ ಮೇಲೂ
ದಯೆ ತೋರಿಸುವುದಿಲ್ಲ. ಇದು ಬೇಹದ್ದಿನ ದಯೆಯಾಗಿದೆ. ಒಬ್ಬ ತಂದೆಯು ಎಲ್ಲರಮೇಲೆ ದಯೆ ತೋರಿಸುತ್ತಾರೆ.
ಸತ್ಯಯುಗದಲ್ಲಿ ಎಲ್ಲರೂ ಸುಖ-ಶಾಂತಿಯಲ್ಲಿರುತ್ತಾರೆ, ದುಃಖದ ಮಾತೇ ಇರುವುದಿಲ್ಲ. ಮಕ್ಕಳು ಒಂದು
ಮಾತಿನ (ಪರಮಾತ್ಮನ ಪರಿಚಯ) ಮೇಲೆ ಯಾರಿಗೂ ನಿಶ್ಚಯ ಮಾಡಿಸುವುದಿಲ್ಲ, ಅನ್ಯ ಮಾತುಗಳಲ್ಲಿ ಹೊರಟು
ಹೋಗುತ್ತಾರೆ ನಂತರ ಗಂಟಲು ಕಟ್ಟಿತೆಂದು ಹೇಳುತ್ತಾರೆ. ಮೊಟ್ಟ ಮೊದಲಿಗೆ ತಂದೆಯ ಪರಿಚಯವನ್ನು
ಕೊಡಬೇಕಾಗಿದೆ. ಇದನ್ನು ಬಿಟ್ಟು ನೀವು ಅನ್ಯ ಮಾತುಗಳಲ್ಲಿ ಹೋಗಲೇಬೇಡಿ. ತಿಳಿಸಿ, ತಂದೆಯಂತೂ
ಸತ್ಯವನ್ನೇ ಹೇಳುತ್ತಾರಲ್ಲವೆ. ನಾವು ಬ್ರಹ್ಮಾಕುಮಾರ-ಕುಮಾರಿಯರಿಗೆ ತಂದೆಯೇ ತಿಳಿಸಿಕೊಡುತ್ತಾರೆ.
ಈ ಚಿತ್ರಗಳೆಲ್ಲವನ್ನೂ ಅವರೇ ಮಾಡಿಸಿದ್ದಾರೆ. ಇದರಲ್ಲಿ ಸಂಶಯ ಬರಬಾರದು. ಸಂಶಯ ಬುದ್ಧಿ
ವಿನಃಶ್ಯಂತಿ. ಮೊದಲು ನೀವು ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ ಆಗ
ವಿಕರ್ಮಗಳು ವಿನಾಶವಾಗುತ್ತವೆ. ಮತ್ತ್ಯಾವುದೇ ಉಪಾಯವಿಲ್ಲ. ಪತಿತ ಪಾವನನು ಒಬ್ಬರೇ ಆಗಿದ್ದಾರಲ್ಲವೆ.
ಆ ತಂದೆಯು ತಿಳಿಸುತ್ತಾರೆ - ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ.
ತಂದೆಯು ಯಾರಲ್ಲಿ ಪ್ರವೇಶ ಮಾಡುವರೋ ಅವರೂ ಸಹ ಪುರುಷಾರ್ಥ ಮಾಡಿ ಸತೋಪ್ರಧಾನರಾಗಬೇಕಾಗಿದೆ,
ಪುರುಷಾರ್ಥದಿಂದಲೇ ಆಗುತ್ತಾರೆ. ತಂದೆಯು ಬ್ರಹ್ಮಾ ಮತ್ತು ವಿಷ್ಣುವಿನ ಸಂಬಂಧವನ್ನೂ ತಿಳಿಸುತ್ತಾರೆ.
ನೀವು ಬ್ರಾಹ್ಮಣರೆಲ್ಲರಿಗೆ ರಾಜಯೋಗವನ್ನು ಕಲಿಸುತ್ತಾರೆ, ಇದರಿಂದ ನೀವು ವಿಷ್ಣು ಪುರಿಯ
ಮಾಲೀಕರಾಗುತ್ತೀರಿ. ಮತ್ತೆ ನೀವು 84 ಜನ್ಮಗಳನ್ನು ತೆಗೆದುಕೊಂಡು ಅಂತಿಮದಲ್ಲಿ ಶೂದ್ರರಾಗುತ್ತೀರಿ.
ಪುನಃ ತಂದೆಯು ಬಂದು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಈ ರೀತಿಯಾಗಿ ಮತ್ತ್ಯಾರೂ
ತಿಳಿಸಲು ಸಾಧ್ಯವಿಲ್ಲ. ಮೊಟ್ಟ ಮೊದಲನೆಯ ಮಾತು ತಂದೆಯ ಪರಿಚಯ ಕೊಡುವುದಾಗಿದೆ. ತಂದೆಯು
ತಿಳಿಸುತ್ತಾರೆ - ನಾನೇ ಪತಿತರನ್ನು ಪಾವನರನ್ನಾಗಿ ಮಾಡಲು ಇಲ್ಲಿಗೆ ಬರಬೇಕಾಗುತ್ತದೆ, ಮೇಲಿಂದ
ಪ್ರೇರಣೆ ಕೊಡುವುದಿಲ್ಲ. ಇವರ (ಬ್ರಹ್ಮಾ) ಹೆಸರೇ ಆಗಿದೆ ಭಗೀರಥ ಅಂದಮೇಲೆ ಇವರಲ್ಲಿಯೇ ಅವಶ್ಯವಾಗಿ
ಪ್ರವೇಶ ಮಾಡುತ್ತೇನೆ. ಇವರದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಪುನಃ ಸತೋಪ್ರಧಾನರಾಗುತ್ತಾರೆ.
ಇದಕ್ಕಾಗಿ ತಂದೆಯು ಯುಕ್ತಿಯನ್ನು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು
ನನ್ನೊಬ್ಬನನ್ನೇ ನೆನಪು ಮಾಡಿ, ನಾನೇ ಸರ್ವಶಕ್ತಿವಂತನಾಗಿದ್ದೇನೆ. ನನ್ನನ್ನು ನೆನಪು
ಮಾಡುವುದರಿಂದ ನಿಮ್ಮಲ್ಲಿ ಶಕ್ತಿ ಬರುವುದು. ನೀವು ವಿಶ್ವದ ಮಾಲೀಕರಾಗುವಿರಿ. ಈ
ಲಕ್ಷ್ಮೀ-ನಾರಾಯಣರಾಗುವ ಆಸ್ತಿಯು ಇವರಿಗೆ ತಂದೆಯಿಂದ ಸಿಕ್ಕಿದೆ, ಹೇಗೆ ಸಿಕ್ಕಿತು ಎಂಬುದನ್ನೂ
ತಿಳಿಸುತ್ತಾರೆ. ಪ್ರದರ್ಶನಿ, ಮ್ಯೂಸಿಯಂ ಇತ್ಯಾದಿಗಳಲ್ಲಿಯೂ ನೀವು ತಿಳಿಸಿ - ಮೊದಲಿಗೆ ಒಂದು
ಮಾತನ್ನು ತಿಳಿದುಕೊಳ್ಳಿ ನಂತರ ಅನ್ಯ ಮಾತುಗಳಲ್ಲಿ ಹೋಗಿ. ಇದನ್ನು ತಿಳಿದುಕೊಳ್ಳುವುದು ಬಹಳ
ಅವಶ್ಯಕವಾಗಿದೆ ಇಲ್ಲವಾದರೆ ನೀವು ದುಃಖದಿಂದ ಮುಕ್ತರಾಗಲು ಸಾಧ್ಯವಿಲ್ಲ. ಎಲ್ಲಿಯವರೆಗೆ ನೀವು
ನಿಶ್ಚಯ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಿಮಗೆ ಏನೂ ಅರ್ಥವಾಗುವುದಿಲ್ಲ. ಈ ಸಮಯದಲ್ಲಿ
ಭ್ರಷ್ಟಾಚಾರಿ ಪ್ರಪಂಚವಾಗಿದೆ, ದೇವಿ-ದೇವತೆಗಳ ಪ್ರಪಂಚವು ಶ್ರೇಷ್ಠಾಚಾರಿಯಾಗಿತ್ತು, ಹೀಗೀಗೆ
ತಿಳಿಸಿಕೊಡಬೇಕಾಗಿದೆ. ಮನುಷ್ಯರ ನಾಡಿಯನ್ನೂ ನೋಡಬೇಕು - ಇವರು ತಿಳಿದುಕೊಳ್ಳುತ್ತಾರೆಯೇ ಅಥವಾ
ತವೆಯಂತಿದ್ದಾರೆಯೇ? ಒಂದುವೇಳೆ ತವೆ (ಕಾದ ಹೆಂಚಿನ ತರಹ) ಯಂತಿದ್ದರೆ ಅಂತಹವರನ್ನು ಬಿಟ್ಟು ಬಿಡಿ.
ಇದರಲ್ಲಿ ಸಮಯ ವ್ಯರ್ಥ ಮಾಡಬಾರದು. ಚಾತ್ರಕರನ್ನು, ಪಾತ್ರರನ್ನು ಗುರುತಿಸುವುದಕ್ಕೂ ಬುದ್ಧಿ ಬೇಕು.
ಯಾರು ತಿಳಿದುಕೊಳ್ಳುವರೋ ಅವರ ಚಹರೆಯೇ ಬದಲಾಗುವುದು. ಮೊಟ್ಟ ಮೊದಲಿಗೆ ಖುಷಿಯ ಮಾತನ್ನು
ತಿಳಿಸಬೇಕಾಗಿದೆ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆಯಲ್ಲವೆ. ತಂದೆಗೆ
ಗೊತ್ತಿದೆ, ನೆನಪಿನ ಯಾತ್ರೆಯಲ್ಲಿ ಮಕ್ಕಳು ಬಹಳ ನಿರ್ಬಲರಾಗಿದ್ದಾರೆ, ತಂದೆಯನ್ನು ನೆನಪು
ಮಾಡುವುದು ಪರಿಶ್ರಮವಿದೆ. ಇದರಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ಇದೂ ಸಹ ಆಟವು
ಮಾಡಲ್ಪಟ್ಟಿದೆ. ಈ ಆಟವು ಹೇಗೆ ಮಾಡಿ-ಮಾಡಲ್ಪಟ್ಟಿದೆಯೆಂದು ತಂದೆಯು ತಿಳಿಸುತ್ತಾರೆ. ಪ್ರಪಂಚದ
ಮನುಷ್ಯರಿಗೆ ಅಂಶ ಮಾತ್ರವೂ ಗೊತ್ತಿಲ್ಲ.
ತಂದೆಯ
ನೆನಪಿನಲ್ಲಿದ್ದಾಗ ನೀವು ಯಾರಿಗಾದರೂ ತಿಳಿಸುವುದರಲ್ಲಿ ಏಕರಸವಾಗಿರುತ್ತೀರಿ. ಇಲ್ಲವಾದರೆ
ಏನಾದರೊಂದು ದೋಷಗಳನ್ನು ಹುಡುಕುತ್ತಿರುತ್ತಾರೆ. ತಂದೆಯು ಹೇಳುತ್ತಾರೆ - ನೀವು ಹೆಚ್ಚಿನ ಪರಿಶ್ರಮ
ತೆಗೆದುಕೊಳ್ಳಬೇಡಿ. ಸ್ಥಾಪನೆಯು ಅವಶ್ಯವಾಗಿ ಆಗಲೇಬೇಕಾಗಿದೆ. ಡ್ರಾಮಾದ ಪೂರ್ವ ನಿಶ್ಚಿತವನ್ನು
ಯಾರೂ ಬದಲಾಯಿಸಲು ಸಾಧ್ಯವಿಲ್ಲ ಆದ್ದರಿಂದ ಉಲ್ಲಾಸದಲ್ಲಿರಬೇಕು - ನಾವು ತಂದೆಯಿಂದ ಬೇಹದ್ದಿನ
ಆಸ್ತಿಯನ್ನು ಪಡೆಯುತ್ತಿದ್ದೇವೆ. ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ಬಹಳ
ಪ್ರೀತಿಯಿಂದ ಕುಳಿತು ತಿಳಿಸಿಕೊಡಬೇಕಾಗಿದೆ. ತಂದೆಯನ್ನು ನೆನಪು ಮಾಡುತ್ತಾ ಆನಂದ ಭಾಷ್ಫಗಳೂ ಬಂದು
ಬಿಡಬೇಕು. ಮತ್ತೆಲ್ಲಾ ಸಂಬಂಧಗಳು ಕಲಿಯುಗಿಯಾಗಿದೆ. ಇದು ಆತ್ಮಿಕ ತಂದೆಯ ಸಂಬಂಧವಾಗಿದೆ, ನಿಮ್ಮ
ಅನಂದದ ಕಣ್ಣೀರು ವಿಜಯಮಾಲೆಯ ಮಣಿಗಳಾಗುತ್ತವೆ. ಕೆಲವರೇ ಈ ರೀತಿ ಬಹಳ ಪ್ರೇಮದಿಂದ ತಂದೆಯನ್ನು
ನೆನಪು ಮಾಡುತ್ತಾರೆ. ಪ್ರಯತ್ನ ಪಟ್ಟು ಎಷ್ಟು ಸಾಧ್ಯವೋ ತಮ್ಮ ಸಮಯ ತೆಗೆದು ತನ್ನ ಭವಿಷ್ಯವನ್ನು
ಶ್ರೇಷ್ಠ ಮಾಡಿಕೊಳ್ಳಬೇಕು. ಪ್ರದರ್ಶನಿಯಲ್ಲಿಯೂ ಇಷ್ಟೊಂದು ಮಂದಿ ಮಕ್ಕಳು ಬೇಕಾಗಿಲ್ಲ, ಬಹಳಷ್ಟು
ಚಿತ್ರಗಳ ಅವಶ್ಯಕತೆಯೂ ಇಲ್ಲ. ನಂಬರ್ವನ್ ಚಿತ್ರವಾಗಿದೆ - ಗೀತೆಯ ಭಗವಂತ ಯಾರು? ಅದರ ಪಕ್ಕದಲ್ಲಿ
ಲಕ್ಷ್ಮೀ-ನಾರಾಯಣ, ನಂತರ ಏಣಿಯ ಚಿತ್ರ, ಇಷ್ಟೇ ಸಾಕು. ಬಾಕಿ ಇಷ್ಟೆಲ್ಲಾ ಚಿತ್ರಗಳ
ಅವಶ್ಯಕತೆಯಿಲ್ಲ. ನೀವು ಮಕ್ಕಳು ಎಷ್ಟು ಸಾಧ್ಯವೋ ಅಷ್ಟು ನೆನಪಿನ ಯಾತ್ರೆಯನ್ನು
ಹೆಚ್ಚಿಸಿಕೊಳ್ಳಬೇಕಾಗಿದೆ. ಇದೇ ಮೂಲ ಚಿಂತೆಯಲ್ಲಿರಬೇಕು - ಹೇಗೆ ಪತಿತರಿಂದ ಪಾವನರಾಗುವುದು!
ತಂದೆಯ ಮಕ್ಕಳಾಗಿಯೂ ಮತ್ತೆ ಆ ತಂದೆಯ ಮುಂದೆ ಹೋಗಿ ಶಿಕ್ಷೆಗಳನ್ನನುಭವಿಸುವುದು ಬಹಳ ದುರ್ಗತಿಯ
ಮಾತಾಗಿದೆ. ಈಗ ನೆನಪಿನ ಯಾತ್ರೆಯಲ್ಲಿರುವುದಿಲ್ಲ ಎಂದರೆ ಮತ್ತೆ ತಂದೆಯ ಮುಂದೆ ಶಿಕ್ಷೆ ತಿನ್ನುವ
ಸಮಯದಲ್ಲಿ ಬಹಳ ನಾಚಿಕೆಯಾಗುವುದು ಆದ್ದರಿಂದ ಶಿಕ್ಷೆಯನ್ನನುಭವಿಸುವಂತಾಗಬಾರದು, ಇದು
ಎಲ್ಲದಕ್ಕಿಂತ ಹೆಚ್ಚು ಚಿಂತೆಯನ್ನಿಟ್ಟುಕೊಳ್ಳಬೇಕು. ನೀವು ರೂಪ ಹಾಗೂ ಭಸಂತ (ಆತ್ಮ
ಸ್ಮೃತಿಯಲ್ಲಿದ್ದು ಜ್ಞಾನದ ಮಳೆ ಸುರಿಸುವವರು) ಆಗಿದ್ದೀರಿ. ತಂದೆಯೂ ಹೇಳುತ್ತಾರೆ - ನಾನು ರೂಪನೂ
ಆಗಿದ್ದೇನೆ, ಭಸಂತನೂ ಆಗಿದ್ದೇನೆ. ಅತಿ ಚಿಕ್ಕ ಬಿಂದುವಾಗಿದ್ದೇನೆ ಮತ್ತೆ ಜ್ಞಾನ ಸಾಗರನೂ
ಆಗಿದ್ದೇನೆ. ನೀವಾತ್ಮಗಳಲ್ಲಿ ಸಂಪೂರ್ಣ ಜ್ಞಾನವು ತುಂಬಲ್ಪಡುತ್ತದೆ. 84 ಜನ್ಮಗಳ ರಹಸ್ಯವು ನಿಮ್ಮ
ಬುದ್ಧಿಯಲ್ಲಿದೆ. ನೀವು ಜ್ಞಾನ ಸ್ವರೂಪರಾಗಿ ಜ್ಞಾನದ ಮಳೆ ಸುರಿಸುತ್ತೀರಿ. ಜ್ಞಾನದ ಒಂದೊಂದು
ರತ್ನವು ಎಷ್ಟು ಅಮೂಲ್ಯವಾಗಿದೆ! ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ತಂದೆಯು
ತಿಳಿಸುತ್ತಾರೆ - ನೀವು ಪದಮಾಪದಮ ಭಾಗ್ಯಶಾಲಿಗಳಾಗಿದ್ದೀರಿ, ಆದ್ದರಿಂದಲೇ ನಿಮ್ಮ ಚರಣಗಳಲ್ಲಿ
ಪದಮದ ಚಿಹ್ನೆಯನ್ನು ತೋರಿಸುತ್ತಾರೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಮನುಷ್ಯರು ಪದಮಪತಿ ಎಂದು
ಹೆಸರನ್ನಿಡುತ್ತಾರೆ, ಇವರ ಬಳಿ ಬಹಳ ಹಣವಿದೆಯೆಂದು ತಿಳಿಯುತ್ತಾರೆ. ಪದಮಾಪತಿಯೆಂದು ಒಂದು ಉಪ
ನಾಮವನ್ನೇ ಇಡುತ್ತಾರೆ. ತಂದೆಯು ಇವೆಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಮತ್ತೆ ಹೇಳುತ್ತಾರೆ -
ಮಕ್ಕಳೇ, ಮೂಲ ಮಾತೇನೆಂದರೆ ತಂದೆ ಮತ್ತು 84 ಜನ್ಮಗಳ ಚಕ್ರವನ್ನು ನೆನಪು ಮಾಡಿ. ಈ ಜ್ಞಾನವು
ಭಾರತವಾಸಿಗಳಿಗಾಗಿಯೇ ಇದೆ. ನೀವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಇದೂ ಸಹ
ತಿಳಿದುಕೊಳ್ಳುವ ಮಾತಲ್ಲವೆ. ಮತ್ತ್ಯಾವುದೇ ಸನ್ಯಾಸಿ ಮೊದಲಾದವರಿಗೆ ಸ್ವದರ್ಶನ ಚಕ್ರಧಾರಿಗಳೆಂದು
ಹೇಳುವುದಿಲ್ಲ. ದೇವತೆಗಳಿಗೂ ಹೇಳುವುದಿಲ್ಲ ಏಕೆಂದರೆ ದೇವತೆಗಳಲ್ಲಿ ಜ್ಞಾನವೇ ಇರುವುದಿಲ್ಲ.
ನಮ್ಮಲ್ಲಿ ಸಂಪೂರ್ಣ ಜ್ಞಾನವಿದೆ, ಈ ಲಕ್ಷ್ಮೀ-ನಾರಾಯಣರಲ್ಲಿ ಇಲ್ಲವೆಂದು ನೀವು ಹೇಳುತ್ತೀರಿ.
ತಂದೆಯು ಯಥಾರ್ಥ ಮಾತನ್ನು ತಿಳಿಸುತ್ತಾರಲ್ಲವೆ.
ಈ ಜ್ಞಾನವು ಬಹಳ
ಅದ್ಭುತವಾಗಿದೆ, ನೀವು ಎಷ್ಟು ಗುಪ್ತ ವಿದ್ಯಾರ್ಥಿಗಳಾಗಿದ್ದೀರಿ. ನಾವು ಪಾಠಶಾಲೆಗೆ ಹೋಗುತ್ತೇವೆ,
ನಮಗೆ ಭಗವಂತನೇ ಓದಿಸುತ್ತಾರೆಂದು ನೀವು ಹೇಳುತ್ತೀರಿ. ಅಂದಮೇಲೆ ನಿಮ್ಮ ಗುರಿ-ಧ್ಯೇಯವೇನು? ನಾವು
ಈ ಲಕ್ಷ್ಮೀ-ನಾರಾಯಣರಾಗುತ್ತೇವೆಂದು ಹೇಳುತ್ತೀರಿ. ಮನುಷ್ಯರು ಇದನ್ನು ಕೇಳಿ ಬಹಳ
ಆಶ್ಚರ್ಯಚಕಿತರಾಗುತ್ತಾರೆ. ನಾವು ನಮ್ಮ ಮುಖ್ಯ ಕೇಂದ್ರಕ್ಕೆ ಹೋಗುತ್ತೇವೆ ಎಂದು ಹೇಳಿದಾಗ ಏನು
ಓದುತ್ತೀರಿ? ಎಂದು ಕೇಳುತ್ತಾರೆ. ಮನುಷ್ಯರಿಂದ ದೇವತೆ, ಭಿಕಾರಿಗಳಿಂದ ರಾಜಕುಮಾರರಾಗುವ
ವಿದ್ಯೆಯನ್ನು ಓದುತ್ತಿದ್ದೇವೆ. ನಿಮ್ಮ ಚಿತ್ರಗಳು ಬಹಳ ಚೆನ್ನಾಗಿವೆ, ದಾನವನ್ನು ಯಾವಾಗಲೂ
ಪಾತ್ರರಿಗೆ ಮಾಡಲಾಗುತ್ತದೆ. ನಿಮಗೆ ಪಾತ್ರರು (ಅರ್ಹರು) ಎಲ್ಲಿ ಸಿಗುತ್ತಾರೆ? ಶಿವ,
ಲಕ್ಷ್ಮೀ-ನಾರಾಯಣ, ರಾಮ-ಸೀತೆಯ ಮಂದಿರಗಳಲ್ಲಿ ಸಿಗುತ್ತಾರೆ. ಅಲ್ಲಿ ಹೋಗಿ ನೀವು ಅವರಿಗೆ
ತಿಳಿಸಿಕೊಡಿ. ತಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಗಂಗಾ ನದಿಯ ತೀರಕ್ಕೂ ಹೋಗಿ ನೀವು ತಿಳಿಸಿ -
ಪತಿತ-ಪಾವನಿ ಗಂಗೆಯೋ ಅಥವಾ ಪರಮಪಿತ ಪರಮಾತ್ಮನೋ? ಸರ್ವರ ಸದ್ಗತಿಯನ್ನು ಈ ಗಂಗೆಯು ಮಾಡುವುದೋ ಅಥವಾ
ಬೇಹದ್ದಿನ ತಂದೆಯು ಮಾಡುವರೋ? ನೀವು ಈ ಮಾತಿನ ಬಗ್ಗೆ ಚೆನ್ನಾಗಿ ತಿಳಿಸಬಹುದು. ವಿಶ್ವದ
ಮಾಲೀಕರಾಗುವ ಮಾರ್ಗವನ್ನು ನೀವು ತಿಳಿಸುತ್ತೀರಿ. ದಾನ ಮಾಡುತ್ತೀರಿ. ಕವಡೆಯಂತಹ ಮನುಷ್ಯರನ್ನೂ
ವಿಶ್ವದ ಮಾಲೀಕರನ್ನಾಗಿ ಮಾಡುತ್ತೀರಿ. ಭಾರತವು ವಿಶ್ವದ ಮಾಲೀಕನಾಗಿತ್ತಲ್ಲವೆ. ನೀವು ಬ್ರಾಹ್ಮಣರದು
ದೇವತೆಗಳಿಗಿಂತಲೂ ಉತ್ತಮ ಕುಲವಾಗಿದೆ. ಈ ತಂದೆಯಂತೂ (ಬ್ರಹ್ಮಾ) ತಿಳಿದುಕೊಳ್ಳುತ್ತಾರೆ - ನಾನು
ತಂದೆಯ ಅತಿಮುದ್ದಿನ ಮಗುವಾಗಿದ್ದೇನೆ. ತಂದೆಯೇ ನನ್ನ ಶರೀರವನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ.
ಈ ಮಾತುಗಳನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯು ನನ್ನಲ್ಲಿ
ಸವಾರಿಯಾಗಿದ್ದಾರೆ. ನಾನು ತಂದೆಯನ್ನು ತಲೆಯ ಮೇಲೆ ಕೂರಿಸಿಕೊಂಡಿದ್ದೇನೆ ಅರ್ಥಾತ್ ಸರ್ವೀಸ್ ಮಾಡಿ
ಎಂದು ಶರೀರ ಕೊಟ್ಟಿದ್ದೇನೆ ಅದರ ಪ್ರತಿಫಲವಾಗಿ ತಂದೆಯು ನನಗೆ ಎಷ್ಟೊಂದು ಕೊಡುತ್ತಾರೆ! ಅವರು
ನಮ್ಮನ್ನು ಎಲ್ಲರಿಗಿಂತ ಶ್ರೇಷ್ಠ ತಮ್ಮ ಹೆಗಲ ಮೇಲೆ ಕೂರಿಸಿಕೊಳ್ಳುತ್ತಾರೆ. ನಂಬರ್ವನ್
ಕರೆದುಕೊಂಡು ಹೋಗುತ್ತಾರೆ. ತಂದೆಗೆ ಮಕ್ಕಳು ಪ್ರಿಯರಾಗುತ್ತಾರೆಂದರೆ ಅವರನ್ನು ತಮ್ಮ ಹೆಗಲಿನ ಮೇಲೆ
ಕೂರಿಸಿಕೊಳ್ಳುತ್ತಾರಲ್ಲವೆ. ತಾಯಿಯಾದರೆ ಮಕ್ಕಳನ್ನು ಕೇವಲ ಮಡಿಲಿನವರೆಗೆ ತೆಗೆದುಕೊಳ್ಳುತ್ತಾಳೆ
ಆದರೆ ತಂದೆಯು ತನ್ನ ಹೆಗಲಿನ ಮೇಲೆ ಕೂರಿಸಿಕೊಳ್ಳುತ್ತಾರೆ. ಪಾಠಶಾಲೆಗೆ ಎಂದೂ ಕಲ್ಪನೆ ಎಂದು
ಹೇಳಲಾಗುವುದಿಲ್ಲ. ಶಾಲೆಯಲ್ಲಿ ಇತಿಹಾಸ-ಭೂಗೋಳವನ್ನು ಓದುತ್ತಾರೆ ಅಂದಮೇಲೆ ಅದು ಕಲ್ಪನೆಯಾಯಿತೆ?
ಅದೇರೀತಿ ಇದೂ ಸಹ ಚರಿತ್ರೆ-ಭೂಗೋಳವಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಬಹಳ
ಪ್ರೀತಿಯಿಂದ ಕುಳಿತು ಆತ್ಮಿಕ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯ ನೆನಪಿನಲ್ಲಿ ಪ್ರೇಮದ
ಕಣ್ಣೀರು ಬರಲಿ, ಆ ಕಣ್ಣೀರು ವಿಜಯ ಮಾಲೆಯ ಮಣಿಯಾಗಿ ಬಿಡುತ್ತದೆ. ತಮ್ಮ ಸಮಯವನ್ನು ಭವಿಷ್ಯ
ಪ್ರಾಲಬ್ಧ ಮಾಡಿಕೊಳ್ಳುವುದರಲ್ಲಿ ಸಫಲ ಮಾಡಬೇಕಾಗಿದೆ.
2. ಅಂತರ್ಮುಖಿಯಾಗಿ
ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ, ಹೆಚ್ಚು ಹೇಳುವುದಕ್ಕೆ ಹೋಗಬಾರದು. ಒಂದೇ ಚಿಂತೆಯಿರಲಿ -
ಶಿಕ್ಷೆಯನ್ನು ಅನುಭವಿಸುವಂತಹ ಯಾವುದೇ ಕರ್ತವ್ಯವು ನನ್ನಿಂದಾಗಬಾರದು.
ವರದಾನ:
ಆತ್ಮೀಯ
ಯಾತ್ರಿಕನಾಗಿದ್ದೇನೆ - ಈ ಸ್ಮತಿಯಿಂದ ಸದಾ ಉಪರಾಮ್, ನ್ಯಾರೆ ಮತ್ತು ನಿರ್ಮೋಹಿ ಭವ.
ಆತ್ಮೀಯ ಯಾತ್ರಿಕ ಸದಾ
ನೆನಪಿನ ಯಾತ್ರೆಯಲ್ಲಿ ಮುಂದುವರೆಯುತ್ತಿರುತ್ತಾರೆ, ಈ ಯಾತ್ರೆ ಸದಾ ಕಾಲಕ್ಕೆ
ಸುಖಧಾಯಿಯಾಗಿರುತ್ತದೆ. ಯಾರು ಆತ್ಮೀಯ ಯಾತ್ರೆಯಲ್ಲಿ ತತ್ಪರರಾಗಿರುತ್ತಾರೆ, ಅವರು ಬೇರೆ ಯಾವುದೇ
ಯಾತ್ರೆಯನ್ನು ಮಾಡುವ ಅವಶ್ಯಕತೆಯಿಲ್ಲ. ಈ ಯಾತ್ರೆಯಲ್ಲಿ ಎಲ್ಲಾ ಯಾತ್ರೆಗಳೂ ಸಮಾವೇಶವಾಗಿದೆ.
ಮನಸ್ಸಿನಿಂದಾಗಲಿ ತನುವಿನಿಂದಾಗಲಿ ಅಲೆದಾಡುವುದು ಸಮಾಪ್ತಿಯಾಗಿ ಬಿಡುವುದು. ಅಮದಾಗ ಸದಾ ಇದೇ
ಸ್ಮತಿಯಿರಲಿ ನಾನು ಆತ್ಮೀಯ ಯಾತ್ರಿಕನಾಗಿರುವೆ, ಯಾತ್ರಿಕನಿಗೆ ಯಾವುದರಲ್ಲಿಯೂ ಮೋಹವಿರಲು
ಸಾಧ್ಯವಿಲ್ಲ. ಅವರು ಸಹಜವಾಗಿ ಉಪರಾಮ, ನ್ಯಾರೆ ಅಥವಾ ನಿರ್ಮೋಹಿಯಾಗುವ ವರದಾನ ದೊರಕಿ ಬಿಡುವುದು.
ಸ್ಲೋಗನ್:
ಸದಾ ವ್ಹಾ! ಬಾಬಾ,
ವ್ಹಾ! ನನ್ನ ಅದೃಷ್ಠ ಮತ್ತು ವ್ಹಾ! ನನ್ನ ಮಧುರ ಪರಿವಾರ-ಇದೇ ಗೀತೆ ಮೊಳಗುತ್ತಿರಲಿ.
ಅವ್ಯಕ್ತ ಸೂಚನೆ:-
ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.
ಹೇಗೆ ತಂದೆಯನ್ನು ಸರ್ವ
ಸ್ವರೂಪಗಳಿಂದ ಅಥವಾ ಸರ್ವ ಸಂಬಂಧಗಳಿಂದ ತಿಳಿದುಕೊಳ್ಳುವುದು ಅವಶ್ಯಕವಾಗಿದೆ, ಹಾಗೆಯೇ ತಂದೆಯ
ಮೂಲಕ ಸ್ವಯಂನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ತಿಳಿದುಕೊಳ್ಳುವುದು ಅರ್ಥಾತ್
ಒಪ್ಪಿಕೊಳ್ಳುವುದು. ನಾನು ಯಾರಾಗಿದ್ದೇನೆ, ಏನಾಗಿದ್ದೇನೆ, ಇದನ್ನು ಒಪ್ಪಿಕೊಂಡು ನಡೆಯುವುದರಿಂದ
ದೇಹದಲ್ಲಿ ವಿದೇಹಿ, ವ್ಯಕ್ತದಲ್ಲಿರುತ್ತ ಅವ್ಯಕ್ತ, ನಡೆಯುತ್ತಾ-ತಿರುಗಾಡುತ್ತಾ ಫರಿಸ್ತಾ ಅರ್ಥವಾ
ಕರ್ಮ ಮಾಡುತ್ತ ಕರ್ಮಾತೀತ ಸ್ಥಿತಿಯಾಗಿ ಬಿಡುವುದು.