04.02.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ಸಂಗಮ ಯುಗದಲ್ಲಿ ನಿಮಗೆ ಹೊಸ ಮತ್ತು ಭಿನ್ನವಾದ ಜ್ಞಾನವು ಸಿಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ನಾವೆಲ್ಲಾ ಆತ್ಮರು ಪಾತ್ರಧಾರಿಗಳಾಗಿದ್ದೇವೆ. ಒಬ್ಬರ ಪಾತ್ರವು ಇನ್ನೊಬ್ಬರಿಗೆ ಹೋಲುವುದಿಲ್ಲ.”

ಪ್ರಶ್ನೆ:
ಮಾಯೆಯ ಮೇಲೆ ಜಯ ಗಳಿಸಲು ನೀವು ಆತ್ಮಿಕ ಯೋಧರಿಗೆ (ಕ್ಷತ್ರಿಯರಿಗೆ) ಯಾವ ಯುಕ್ತಿ ಸಿಕ್ಕಿದೆ?

ಉತ್ತರ:
ಹೇ ಆತ್ಮಿಕ ಕ್ಷತ್ರಿಯರೇ, ನೀವು ಸದಾ ಶ್ರೀಮತದಂತೆ ನಡೆಯುತ್ತಾ ಇರಿ, ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ. ನಿತ್ಯವೂ ಬೆಳಗ್ಗೆ-ಬೆಳಗ್ಗೆ ಎದ್ದು ನೆನಪಿನಲ್ಲಿರುವ ಅಭ್ಯಾಸ ಮಾಡಿಕೊಳ್ಳಿ ಆಗ ಮಾಯೆಯ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಉಲ್ಟಾ-ಸುಲ್ಟಾ ಸಂಕಲ್ಪಗಳಿಂದ ಮುಕ್ತರಾಗುತ್ತೀರಿ. ನೆನಪಿನ ಮಧುರ ಯುಕ್ತಿಯು ಮಾಯಾಜೀತರನ್ನಾಗಿ ಮಾಡಿ ಬಿಡುವುದು.

ಗೀತೆ:
ಯಾರ ಜೊತೆಗಾರನು ಸ್ವಯಂ ಭಗವಂತನಾಗಿದ್ದಾರೆಯೋ ಅವರಿಗೆ ಬಿರುಗಾಳಿಗಳು ಏನೂ ಮಾಡಲಾರವು.......

ಓಂ ಶಾಂತಿ.
ಇದು ಮನುಷ್ಯರು ರಚಿಸಿರುವ ಗೀತೆಯಾಗಿದೆ. ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಗೀತೆ, ಭಜನೆ ಇತ್ಯಾದಿಗಳನ್ನು ಹಾಡುತ್ತಾರೆ, ಭಕ್ತರು ಮಹಿಮೆ ಮಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಬಹಳ ಮಹಿಮೆ ಮಾಡುತ್ತಾರೆ. ನೀವು ಮಕ್ಕಳು ಯಾರದೇ ಮಹಿಮೆ ಮಾಡುವಂತಿಲ್ಲ. ಮಕ್ಕಳು ತಂದೆಗೆಂದೂ ಮಹಿಮೆ ಮಾಡುವುದಿಲ್ಲ. ತಂದೆಗೆ ಗೊತ್ತಿದೆ, ಇವರು ನನ್ನ ಮಕ್ಕಳಾಗಿದ್ದಾರೆ ಎಂದು ಮತ್ತು ಮಕ್ಕಳಿಗೆ ಗೊತ್ತಿದೆ - ಇವರು ನಮ್ಮ ತಂದೆಯಾಗಿದ್ದಾರೆ. ಈಗ ಇದು ಬೇಹದ್ದಿನ ಮಾತಾಗಿದೆ. ಎಲ್ಲರೂ ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತಾರೆ. ಇಲ್ಲಿಯವರೆಗೂ ನೆನಪು ಮಾಡುತ್ತಲೇ ಇರುತ್ತಾರೆ. ಭಗವಂತನಿಗೆ ಹೇ ತಂದೆಯೇ ಎಂದು ಹೇಳುತ್ತಾರೆ. ಇವರ ಹೆಸರಾಗಿದೆ- ಶಿವತಂದೆ. ಹೇಗೆ ನಾವಾತ್ಮರಿದ್ದೇವೆಯೋ ಹಾಗೆಯೇ ಶಿವ ತಂದೆಯಿದ್ದಾರೆ. ಅವರು ಪರಮ ಆತ್ಮನಾಗಿದ್ದಾರೆ. ಅವರಿಗೆ ಸುಪ್ರೀಂ ಎಂದು ಹೇಳಲಾಗುತ್ತದೆ. ನಾವು ಅವರ ಮಕ್ಕಳಾಗಿದ್ದೇವೆ. ಅವರಿಗೂ ಪರಮ (ಶ್ರೇಷ್ಠ) ಆತ್ಮನೆಂದು ಹೇಳಲಾಗುತ್ತದೆ. ಅವರ ನಿವಾಸಸ್ಥಾನವೆಲ್ಲಿದೆ? ಪರಮಧಾಮದಲ್ಲಿ. ಅಲ್ಲಿ ಎಲ್ಲಾ ಆತ್ಮರೂ ಇರುತ್ತಾರೆ. ಆತ್ಮಗಳೇ ಪಾತ್ರಧಾರಿಗಳಾಗಿದ್ದೀರಿ, ನಿಮಗೆ ತಿಳಿದಿದೆ- ನಾಟಕದಲ್ಲಿ ಪಾತ್ರಧಾರಿಗಳು ನಂಬರ್ವಾರ್ ಇರುತ್ತಾರೆ. ಪ್ರತಿಯೊಬ್ಬರ ಪಾತ್ರದನುಸಾರವೇ ವೇತನ ಸಿಗುತ್ತದೆ. ಯಾರೆಲ್ಲಾ ಪರಮಧಾಮದಲ್ಲಿರುವರೋ ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ ಆದರೆ ಎಲ್ಲರಿಗೆ ನಂಬರ್ವಾರ್ ಪಾತ್ರವು ಸಿಕ್ಕಿದೆ. ಆತ್ಮಿಕ ತಂದೆಯು ತಿಳಿಸುತ್ತಾರೆ - ಆತ್ಮಗಳಲ್ಲಿ ಹೇಗೆ ಅವಿನಾಶಿ ಪಾತ್ರವು ನಿಗಧಿಯಾಗಿದೆ ಎಂದು. ಎಲ್ಲಾ ಆತ್ಮರ ಪಾತ್ರವು ಒಂದೇ ರೀತಿಯಿರಲು ಸಾಧ್ಯವಿಲ್ಲ. ಎಲ್ಲರಲ್ಲಿ ಒಂದೇ ರೀತಿಯ ಶಕ್ತಿಯಿಲ್ಲ. ನೀವು ತಿಳಿದುಕೊಂಡಿದ್ದೀರಿ, ಯಾರು ಶಿವನ ರುದ್ರ ಮಾಲೆಯಲ್ಲಿ ಮೊದಲು ಇರುವರೋ ಅವರದೇ ಒಳ್ಳೆಯ ಪಾತ್ರವಾಗಿದೆ. ನಾಟಕದಲ್ಲಿ ಯಾರು ಬಹಳ ಒಳ್ಳೊಳ್ಳೆಯ ಪಾತ್ರಧಾರಿಗಳಾಗಿರುವರೋ ಅವರಿಗೆ ಎಷ್ಟೊಂದು ಮಹಿಮೆಯಾಗುತ್ತದೆ. ಕೇವಲ ಅವರನ್ನು ನೋಡುವುದಕ್ಕಾಗಿಯೇ ಮನುಷ್ಯರು ಹೋಗುತ್ತಾರೆ ಅಂದಾಗ ಇದು ಬೇಹದ್ದಿನ ನಾಟಕವಾಗಿದೆ. ಈ ಬೇಹದ್ದಿನ ನಾಟಕದಲ್ಲಿಯೂ ಶ್ರೇಷ್ಠರು ಒಬ್ಬ ತಂದೆಯಾಗಿದ್ದಾರೆ. ಶ್ರೇಷ್ಠಾತಿ ಶ್ರೇಷ್ಠ ಪಾತ್ರಧಾರಿ, ರಚಯಿತ, ನಿರ್ದೇಶಕನೆಂದೂ ಹೇಳಬಹುದು. ಅವರೆಲ್ಲರೂ ಹದ್ದಿನ ಪಾತ್ರಧಾರಿಗಳು, ನಿರ್ದೇಶಕರಾಗಿರುತ್ತಾರೆ. ಅವರಿಗೆ ತಮ್ಮ ಚಿಕ್ಕ ಪಾತ್ರವು ಸಿಕ್ಕಿದೆ. ಆತ್ಮವು ಪಾತ್ರವನ್ನಭಿನಯಿಸುತ್ತದೆ ಆದರೆ ದೇಹಾಭಿಮಾನದ ಕಾರಣ ಮನುಷ್ಯರದು ಇಂತಹ ಪಾತ್ರವಾಗಿದೆ ಎಂದು ಹೇಳಿ ಬಿಡುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಪಾತ್ರವೆಲ್ಲವೂ ಆತ್ಮನದಾಗಿದೆ, ಆತ್ಮಾಭಿಮಾನಿಯಾಗಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ- ಸತ್ಯಯುಗದಲ್ಲಿ ಆತ್ಮಾಭಿಮಾನಿಗಳಿರುತ್ತಾರೆ. ತಂದೆಯನ್ನು ಅರಿತುಕೊಂಡಿರುವುದಿಲ್ಲ. ಇಲ್ಲಿ ಕಲಿಯುಗದಲ್ಲಾದರೆ ಆತ್ಮಾಭಿಮಾನಿಗಳೂ ಅಲ್ಲ ಮತ್ತು ತಂದೆಯನ್ನೂ ಸಹ ಅರಿತುಕೊಂಡಿಲ್ಲ. ನೀವೀಗ ಆತ್ಮಾಭಿಮಾನಿಯಾಗುತ್ತೀರಿ. ತಂದೆಯನ್ನೂ ಅರಿತುಕೊಂಡಿದ್ದೀರಿ.

ನೀವು ಬ್ರಾಹ್ಮಣರಿಗೆ ಭಿನ್ನವಾದ ಜ್ಞಾನವು ಸಿಗುತ್ತದೆ. ನೀವು ಆತ್ಮನನ್ನು ಅರಿತುಕೊಂಡಿದ್ದೀರಿ- ನಾವೆಲ್ಲಾ ಆತ್ಮರು ಪಾತ್ರಧಾರಿಗಳಾಗಿದ್ದೇವೆ. ಎಲ್ಲರಿಗೆ ಪಾತ್ರವು ಸಿಕ್ಕಿದೆ. ಒಬ್ಬರ ಪಾತ್ರವು ಇನ್ನೊಬ್ಬರಿಗೆ ಹೋಲುವುದಿಲ್ಲ. ಆ ಪಾತ್ರವೆಲ್ಲವೂ ಆತ್ಮದಲ್ಲಿದೆ. ವಾಸ್ತವದಲ್ಲಿ ಆ ಹದ್ದಿನ ನಾಟಕದ ಪಾತ್ರವನ್ನೂ ಸಹ ಆತ್ಮವೇ ಧಾರಣೆ ಮಾಡಿಕೊಳ್ಳುತ್ತದೆ. ಒಳ್ಳೆಯ ಪಾತ್ರವನ್ನೂ ಆತ್ಮವೇ ತೆಗೆದುಕೊಳ್ಳುತ್ತದೆ. ನಾನು ರಾಜ್ಯಪಾಲನಾಗಿದ್ದೇನೆ, ಇಂತಹವನಾಗಿದ್ದೇನೆಂದು ಆತ್ಮವೇ ಹೇಳುತ್ತದೆ ಆದರೆ ಆತ್ಮಾಭಿಮಾನಿಯಾಗುವುದಿಲ್ಲ. ಸತ್ಯಯುಗದಲ್ಲಿಯೂ ಸಹ ನಾನು ಆತ್ಮನಾಗಿದ್ದೇನೆ, ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕೆಂದು ತಿಳಿದುಕೊಳ್ಳುತ್ತಾರೆ ಆದರೆ ಪರಮಾತ್ಮನನ್ನು ಯಾರೂ ತಿಳಿದುಕೊಂಡಿರುವುದಿಲ್ಲ. ಈ ಸಮಯದಲ್ಲಿ ನೀವು ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ಶೂದ್ರರು ಮತ್ತು ದೇವತೆಗಳಿಗಿಂತಲೂ ನೀವು ಬ್ರಾಹ್ಮಣರು ಉತ್ತಮರಾಗಿದ್ದೀರಿ. ಇಷ್ಟೊಂದು ಮಂದಿ ಬ್ರಾಹ್ಮಣರು ಎಲ್ಲಿಂದ ಬರುತ್ತಾರೆ? ಪ್ರದರ್ಶನಿಯಲ್ಲಿ ಲಕ್ಷಾಂತರ ಮಂದಿ ಬರುತ್ತಾರೆ. ಯಾರು ಚೆನ್ನಾಗಿ ತಿಳಿದುಕೊಂಡರೋ, ಜ್ಞಾನವನ್ನು ಕೇಳಿದರೋ ಅವರು ಪ್ರಜೆಯಾಗಿ ಬಿಟ್ಟರು. ಒಬ್ಬೊಬ್ಬ ರಾಜನಿಗೂ ಬಹಳ ಮಂದಿ ಪ್ರಜೆಗಳಿರುತ್ತಾರೆ. ನೀವೀಗ ಬಹಳ ಪ್ರಜೆಗಳನ್ನು ತಯಾರು ಮಾಡುತ್ತಿದ್ದೀರಿ. ಪ್ರದರ್ಶನಿ, ಪ್ರೋಜೆಕ್ಟರ್ನಿಂದ ಕೆಲವರು ತಿಳಿದುಕೊಂಡು ಒಳ್ಳೆಯವರಾಗಿ ಬಿಡುತ್ತಾರೆ. ಕಲಿಯುತ್ತಾರೆ, ಯೋಗ ಮಾಡುತ್ತಾರೆ. ಈಗ ಅಂತಹವರು ಬರ ತೊಡಗುತ್ತಾರೆ. ಪ್ರಜೆಗಳೂ ತಯಾರಾಗುವರು, ಮತ್ತೆ ಸಾಹುಕಾರರು, ರಾಜಾ-ರಾಣಿ, ಬಡವರು ಎಲ್ಲರೂ ತಯಾರಾಗುವರು. ರಾಜಕುಮಾರ-ಕುಮಾರಿಯರು ಬಹಳಮಂದಿ ಇರುತ್ತಾರೆ. ಸತ್ಯಯುಗದಿಂದ ತ್ರೇತಾದವರೆಗೆ ರಾಜಕುಮಾರ-ಕುಮಾರಿಯರಾಗಬೇಕಾಗಿದೆ. ಕೇವಲ 8 ಅಥವಾ 108 ಮಂದಿಯಿರುವುದಿಲ್ಲ, ಈಗ ಎಲ್ಲರೂ ತಯಾರಾಗುತ್ತಿದ್ದಾರೆ. ನೀವು ಸರ್ವೀಸ್ ಮಾಡುತ್ತಾ ಇರುತ್ತೀರಿ. ಇದೂ ಹೊಸದೇನಲ್ಲ. ನೀವು ಯಾವುದೇ ಕಾರ್ಯಕ್ರಮ ಮಾಡಿದಿರಿ, ಅದೂ ಹೊಸ ಮಾತಲ್ಲ. ಅನೇಕ ಬಾರಿ ಮಾಡಿದ್ದೀರಿ, ಮತ್ತೆ ಸಂಗಮದಲ್ಲಿ ಇದೇ ಕರ್ತವ್ಯ ಮಾಡುತ್ತೀರಿ, ಮತ್ತೇನು ಮಾಡುವಿರಿ! ತಂದೆಯು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಬರುತ್ತಾರೆ. ಇದಕ್ಕೆ ವಿಶ್ವದ ಚರಿತ್ರೆ-ಭೂಗೋಳವೆಂದು ಹೇಳಲಾಗುತ್ತದೆ. ಪ್ರತಿಯೊಂದು ಮಾತಿನಲ್ಲಿ ನಂಬರ್ವಾರಂತೂ ಇದ್ದೇ ಇರುತ್ತದೆ. ನಿಮ್ಮಲ್ಲಿ ಯಾರಾದರೂ ಚೆನ್ನಾಗಿ ಭಾಷಣ ಮಾಡಿದರೆ ಇವರು ಬಹಳ ಚೆನ್ನಾಗಿ ಭಾಷಣ ಮಾಡಿದರೆಂದು ಎಲ್ಲರೂ ಹೇಳುತ್ತಾರೆ ನಂತರ ಎರಡನೆಯವರ ಭಾಷಣವನ್ನು ಕೇಳಿದಾಗಲೂ ಸಹ ಮೊದಲಿನವರು ಚೆನ್ನಾಗಿ ತಿಳಿಸುತ್ತಿದ್ದರು ಎಂದು ಹೇಳುತ್ತಾರೆ. ಮೂರನೆಯವರು ಮೊದಲಿನವರಿಗಿಂತಲೂ ತೀಕ್ಷ್ಣವಾಗಿದ್ದರೆ ಇವರು ಮೊದಲಿನವರಿಗಿಂತಲೂ ತೀಕ್ಷ್ಣವಾಗಿದ್ದಾರೆಂದು ಹೇಳುತ್ತಾರೆ. ಪ್ರತೀ ಮಾತಿನಲ್ಲಿ ನಾವು ಅವರಿಗಿಂತಲೂ ಮೇಲೆ ಹೋಗಬೇಕೆಂದು ಪುರುಷಾರ್ಥ ಮಾಡಲಾಗುತ್ತದೆ. ಯಾರು ಬುದ್ಧಿವಂತರಾಗಿರುವರೋ ಅವರು ಭಾಷಣ ಮಾಡುವುದಕ್ಕಾಗಿ ಕೂಡಲೇ ಕೈಯೆತ್ತುತ್ತಾರೆ. ನೀವೆಲ್ಲರೂ ಪುರುಷಾರ್ಥಿಗಳಾಗಿದ್ದೀರಿ, ಮುಂದೆ ಹೋದಂತೆ ಮೇಲ್-ಟ್ರೈನ್ ಆಗಿ ಬಿಡುತ್ತಾರೆ. ಹೇಗೆ ಮಮ್ಮಾರವರು ವಿಶೇಷ ಮೇಲ್-ಟ್ರೈನ್ ಆಗಿದ್ದರು. ಬಾಬಾರವರದಂತೂ ಅರ್ಥವಾಗುವುದಿಲ್ಲ ಏಕೆಂದರೆ ಶಿವ ತಂದೆ ಮತ್ತು ಇವರು ಒಟ್ಟಿಗೆ ಇದ್ದಾರೆ ಆದ್ದರಿಂದ ಯಾರು ತಿಳಿಸುತ್ತಿದ್ದಾರೆ ಎಂದು ನೀವು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಆದ್ದರಿಂದ ಸದಾ ಇದನ್ನೇ ತಿಳಿಯಿರಿ - ನಮಗೆ ಶಿವ ತಂದೆಯು ತಿಳಿಸುತ್ತಾರೆ. ತಂದೆ ಮತ್ತು ದಾದಾ ಇಬ್ಬರೂ ತಿಳಿದುಕೊಂಡಿದ್ದಾರೆ ಆದರೆ ಅವರು ಅಂತರ್ಯಾಮಿಯಾಗಿದ್ದಾರೆ. ಹೊರಗಿನಿಂದ ಹೇಳುತ್ತಾರೆ - ಇವರು ಬಹಳ ಬುದ್ಧಿವಂತರಾಗಿದ್ದಾರೆ, ತಂದೆಯೂ ಸಹ ಮಹಿಮೆಯನ್ನು ಕೇಳಿ ಖುಷಿ ಪಡುತ್ತಾರೆ. ಲೌಕಿಕ ತಂದೆಗೂ ಸಹ ತಮ್ಮಮಕ್ಕಳು ಚೆನ್ನಾಗಿ ಓದಿ ಶ್ರೇಷ್ಠ ಪದವಿಯನ್ನು ಪಡೆಯುವರು, ಈ ಮಗು ನನ್ನಹೆಸರನ್ನು ಪ್ರಖ್ಯಾತ ಮಾಡುವರೆಂದು ತಿಳಿಯುವರು. ಹಾಗೆಯೇ ಇವರೂ ಸಹ ತಿಳಿದುಕೊಳ್ಳುತ್ತಾರೆ - ಇಂತಹ ಮಗು ಈ ಆತ್ಮಿಕ ಸೇವೆಯಲ್ಲಿ ಬುದ್ಧಿವಂತನಾಗಿದೆ. ಮುಖ್ಯವಾದುದು ಭಾಷಣ ಮಾಡುವುದಾಗಿದೆ. ತಂದೆಯು ಉದಾಹರಣೆಯನ್ನೂ ತಿಳಿಸಿದ್ದರು - ಒಬ್ಬರಿಗೆ 5 ಮಂದಿ ಮಕ್ಕಳಿದ್ದರು, ಯಾರೋ ಕೇಳಿದರು - ನಿಮಗೆ ಎಷ್ಟು ಮಂದಿ ಮಕ್ಕಳಿದ್ದಾರೆ ಎಂದು. ಅದಕ್ಕೆ ಅವರು ಇಬ್ಬರು ಮಕ್ಕಳಿದ್ದಾರೆಂದು ಹೇಳಿದರು. ನಿಮಗಂತೂ 5 ಮಂದಿ ಮಕ್ಕಳಿದ್ದಾರೆ ಆದರೆ ಇಬ್ಬರು ಎಂದು ಏಕೆ ಹೇಳುತ್ತೀರಿ ಎಂದು ಕೇಳಿದಾಗ ನನ್ನ ಹೆಸರನ್ನು ಉಳಿಸುವ ಸುಪುತ್ರರು ಇಬ್ಬರೇ ಆಗಿದ್ದಾರೆ ಎಂದರು. ಇಲ್ಲಿಯೂ ಹಾಗೆಯೇ ಮಕ್ಕಳಂತೂ ಅನೇಕರಿದ್ದಾರೆ ತಂದೆಯು ತಿಳಿಸುತ್ತಾರೆ - ಈ ಡಾಕ್ಟರ್ ನಿರ್ಮಲ ಮಗು ಬಹಳ ಒಳ್ಳೆಯವರಾಗಿದ್ದಾರೆ. ಬಹಳ ಪ್ರೀತಿಯಿಂದ ಲೌಕಿಕ ತಂದೆಗೆ ತಿಳಿಸಿ ಸೇವಾಕೇಂದ್ರವನ್ನು ತೆರೆಸಿದ್ದಾರೆ. ಇದು ಭಾರತದ ಸೇವೆಯಾಗಿದೆ. ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ರಾವಣನು ಈ ಭಾರತವನ್ನು ನರಕವನ್ನಾಗಿ ಮಾಡಿದನು. ಒಬ್ಬ ಸೀತೆಯು ಬಂಧನದಲ್ಲಿರಲಿಲ್ಲ ಆದರೆ ನೀವೆಲ್ಲಾ ಸೀತೆಯರು ರಾವಣನ ಬಂಧನದಲ್ಲಿದ್ದೀರಿ ಬಾಕಿ ಶಾಸ್ತ್ರಗಳಲ್ಲಿ ಎಲ್ಲವೂ ದಂತ ಕಥೆಗಳಿವೆ. ಈ ಭಕ್ತಿಮಾರ್ಗವೂ ಸಹ ಡ್ರಾಮಾದಲ್ಲಿದೆ. ಸತ್ಯಯುಗದಿಂದ ಹಿಡಿದು ಯಾವುದು ಕಳೆದು ಹೋಯಿತೋ ಅದು ಪುನರಾವರ್ತನೆಯಾಗುವುದು. ತಾವೇ ಪೂಜ್ಯ, ತಾವೇ ಪೂಜಾರಿಯಾಗುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಬಂದು ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡುತ್ತೇನೆ. ಮೊದಲು ಸತ್ಯಯುಗವಿದ್ದದ್ದು ನಂತರ ಕಲಿಯುಗವಾಗಬೇಕಾಗಿದೆ. ಸತ್ಯಯುಗದಲ್ಲಿ ಸೂರ್ಯವಂಶಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ರಾಮ ರಾಜ್ಯದಲ್ಲಿ ಚಂದ್ರವಂಶಿಯರಿದ್ದರು.

ಈ ಸಮಯದಲ್ಲಿ ನೀವೆಲ್ಲರೂ ಆತ್ಮಿಕ ಕ್ಷತ್ರಿಯ (ಯೋಧರು) ರಾಗಿದ್ದೀರಿ. ಯುದ್ಧದ ಮೈದಾನದಲ್ಲಿ ಬರುವವರಿಗೆ ಕ್ಷತ್ರಿಯರೆಂದು ಹೇಳಲಾಗುತ್ತದೆ. ನೀವು ಆತ್ಮಿಕ ಕ್ಷತ್ರಿಯರಾಗಿದ್ದೀರಿ. ಉಳಿದಂತೆ ಅವರು ದೈಹಿಕ ಕ್ಷತ್ರಿಯರಾಗಿದ್ದಾರೆ ಅದಕ್ಕೆ ಬಾಹು ಬಲದಿಂದ ಹೊಡೆದಾಡುವುದು ಎಂದು ಹೇಳಲಾಗುತ್ತದೆ. ಮೊದಲಿಗೆ ಬಾಹುಗಳಿಂದ ಹೊಡೆದಾಡುವ ಮಲ್ಲ ಯುದ್ಧವಿರುತ್ತಿತ್ತು, ಪರಸ್ಪರ ಹೊಡೆದಾಡುತ್ತಿದ್ದರು, ವಿಜಯವನ್ನು ಪಡೆಯುತ್ತಿದ್ದರು. ಈಗಂತೂ ನೋಡಿ, ಬಾಂಬು ಇತ್ಯಾದಿಗಳು ತಯಾರಾಗಿವೆ. ನೀವೂ ಕ್ಷತ್ರಿಯರಾಗಿದ್ದೀರಿ, ಅವರೂ ಕ್ಷತ್ರಿಯರಾಗಿದ್ದಾರೆ. ನೀವು ಶ್ರೀಮತದಂತೆ ನಡೆದು ಮಾಯೆಯ ಮೇಲೆ ಜಯ ಗಳಿಸುತ್ತೀರಿ. ನೀವು ಆತ್ಮಿಕ ಕ್ಷತ್ರಿಯರಾಗಿದ್ದೀರಿ. ಆತ್ಮಗಳೇ ಈ ಶರೀರದ ಕರ್ಮೇಂದ್ರಿಯಗಳ ಮೂಲಕ ಎಲ್ಲವನ್ನೂ ಮಾಡುತ್ತಿದ್ದೀರಿ. ತಂದೆಯು ಬಂದು ಆತ್ಮರಿಗೇ ಕಲಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ಮತ್ತೆ ಮಾಯೆಯು ಕಬಳಿಸುವುದಿಲ್ಲ. ನಿಮ್ಮ ವಿಕರ್ಮಗಳೂ ವಿನಾಶವಾಗುತ್ತವೆ ಮತ್ತು ನಿಮಗೆ ಉಲ್ಟಾ-ಸುಲ್ಟಾ ಸಂಕಲ್ಪಗಳು ಬರುವುದಿಲ್ಲ. ತಂದೆಯನ್ನು ನೆನಪು ಮಾಡಿದರೆ ಖುಷಿಯೂ ಇರುವುದು ಆದ್ದರಿಂದ ತಂದೆಯು ತಿಳಿಸುತ್ತಾರೆ - ಮುಂಜಾನೆ ಎದ್ದು ಅಭ್ಯಾಸ ಮಾಡಿ, ಬಾಬಾ ತಾವು ಎಷ್ಟು ಮಧುರವಾಗಿದ್ದೀರಿ. ಬಾಬಾ, ಎಂದು ಆತ್ಮವೇ ಹೇಳುತ್ತದೆ. ತಂದೆಯು ಪರಿಚಯ ನೀಡಿದ್ದಾರೆ - ನಾನು ನಿಮ್ಮ ತಂದೆಯಾಗಿದ್ದೇನೆ, ನಿಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸಲು ಬಂದಿದ್ದೇನೆ. ಈ ಮನುಷ್ಯ ಸೃಷ್ಟಿಯ ವೃಕ್ಷವು ತಲೆ ಕೆಳಕಾಗಿದೆ. ಇದು ವಿಭಿನ್ನ ಧರ್ಮಗಳ ಮನುಷ್ಯ ಸೃಷ್ಟಿಯಾಗಿದೆ, ಇದಕ್ಕೆ ವಿರಾಟ ಲೀಲೆಯೆಂದು ಹೇಳಲಾಗುತ್ತದೆ. ತಂದೆಯು ತಿಳಿಸಿದ್ದಾರೆ - ನಾನು ಈ ಮಾನವ ವಂಶ ವೃಕ್ಷದ ಬೀಜ ರೂಪನಾಗಿದ್ದೇನೆ, ನನ್ನನ್ನು ನೆನಪು ಮಾಡುತ್ತಾರೆ. ಇಲ್ಲಿ ಒಬ್ಬೊಬ್ಬರು ಒಂದೊಂದು ವೃಕ್ಷ (ಧರ್ಮ) ದವರಾಗಿದ್ದಾರೆ. ಮತ್ತೆ ನಂಬರ್ವಾರ್ ಬರುತ್ತಾರೆ. ಈ ನಾಟಕವು ಮಾಡಲ್ಪಟ್ಟಿದೆ. ಇಂತಹವರು ಧರ್ಮ ಸ್ಥಾಪಕ ಪೈಗಂಬರನನ್ನು ಕಳುಹಿಸಿದರೆಂದು ಹೇಳಿಕೆಯಿದೆ ಆದರೆ ಅಲ್ಲಿಂದ ಕಳುಹಿಸುವುದಿಲ್ಲ. ಇದು ಡ್ರಾಮಾನುಸಾರ ಪುನರಾವರ್ತನೆಯಾಗುತ್ತದೆ. ತಂದೆಯೊಬ್ಬರೇ ಧರ್ಮ ಮತ್ತು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ. ಇದನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಈಗ ಸಂಗಮವಾಗಿದೆ, ವಿನಾಶ ಜ್ವಾಲೆಯು ಪ್ರಜ್ವಲಿತವಾಗಬೇಕಾಗಿದೆ. ಇದು ಶಿವ ತಂದೆಯ ಜ್ಞಾನ ಯಜ್ಞವಾಗಿದೆ, ಇದನ್ನು ಅವರು ರುದ್ರ ಯಜ್ಞವೆಂದು ಹೆಸರನ್ನಿಟ್ಟಿದ್ದಾರೆ. ಪ್ರಜಾಪಿತ ಬ್ರಹ್ಮನ ಮೂಲಕ ನೀವು ಬ್ರಾಹ್ಮಣರು ರಚನೆಯಾಗಿದ್ದೀರಿ ಅಂದಮೇಲೆ ನೀವು ಶ್ರೇಷ್ಠರಾದಿರಲ್ಲವೆ. ಕೊನೆಯಲ್ಲಿ ಅನ್ಯ ಮನೆತನಗಳು ಬರುತ್ತವೆ, ವಾಸ್ತವದಲ್ಲಿ ಎಲ್ಲರೂ ಬ್ರಹ್ಮನ ಮಕ್ಕಳಾಗಿದ್ದೀರಿ, ಬ್ರಹ್ಮನಿಗೆ ಗ್ರೇಟ್ ಗ್ರೇಟ್ ಗ್ರ್ಯಾಂಡ್ ಫಾದರ್ ಎಂದು ಹೇಳಲಾಗುತ್ತದೆ. ಮೊಟ್ಟ ಮೊದಲು ಶ್ರೇಷ್ಠಾತಿ ಶ್ರೇಷ್ಠ ಬ್ರಹ್ಮಾ ನಂತರ ವಂಶಾವಳಿಗಳು ರಚನೆಯಾಗುತ್ತವೆ. ಭಗವಂತನು ಸೃಷ್ಟಿಯನ್ನು ಹೇಗೆ ರಚಿಸುತ್ತಾರೆಂದು ಕೇಳುತ್ತಾರೆ. ರಚನೆಯಂತೂ ಇದೆ, ಯಾವಾಗ ರಚನೆಯು ಪತಿತವಾಗುವರೋ ಆಗ ರಚಯಿತನನ್ನು ಕರೆಯುತ್ತಾರೆ. ಅವರೇ ಬಂದು ದುಃಖಿ ಸೃಷ್ಟಿಯನ್ನು ಸುಖಿಯನ್ನಾಗಿ ಮಾಡುತ್ತಾರೆ ಆದ್ದರಿಂದ ದುಃಖಹರ್ತ-ಸುಖಕರ್ತ ತಂದೆಯೇ ಬನ್ನಿ ಎಂದು ಕರೆಯುತ್ತಾರೆ. ಹರಿದ್ವಾರವೆಂದು ಹೆಸರನ್ನಿಟ್ಟಿದ್ದಾರೆ. ಹರಿದ್ವಾರ ಎಂದರೆ ಹರಿಯ ದ್ವಾರವಾಗಿದೆ. ಅಲ್ಲಿ ಗಂಗೆಯು ಹರಿಯುತ್ತದೆ, ನಾವು ಗಂಗೆಯಲ್ಲಿ ಸ್ನಾನ ಮಾಡಿದರೆ ಹರಿಯ ದ್ವಾರದಲ್ಲಿ ಹೊರಟು ಹೋಗುತ್ತೇವೆಂದು ತಿಳಿಯುತ್ತಾರೆ ಆದರೆ ಹರಿಯ ದ್ವಾರವೆಲ್ಲಿದೆ? ಅವರು ಮತ್ತೆ ಕೃಷ್ಣನಿಗೆ ಹರಿ ಎಂದು ಹೇಳಿಬಿಡುತ್ತಾರೆ. ಹರಿಯ ದ್ವಾರವಂತೂ ಶಿವ ತಂದೆಯಾಗಿದ್ದಾರೆ. ದುಃಖಹರ್ತ-ಸುಖಕರ್ತನಾಗಿದ್ದಾರೆ. ಮೊದಲು ನೀವು ತಮ್ಮ ಮನೆಗೆ ಹೋಗಬೇಕಾಗಿದೆ. ನೀವು ಮಕ್ಕಳಿಗೆ ಈಗ ತಮ್ಮ ತಂದೆ ಮತ್ತು ಮನೆಯ ಪರಿಚಯ ಸಿಕ್ಕಿದೆ. (ಮಾಲೆಯಲ್ಲಿ) ತಂದೆಯ ಸ್ಥಾನವು ಸ್ವಲ್ಪ ಮೇಲಿದೆ. ನಿರಾಕಾರನ ಸಂಕೇತವಾದ ಹೂ ಮೇಲಿದೆ. ನಂತರ ಅದಕ್ಕಿಂತಲೂ ಸ್ವಲ್ಪ ಕೆಳಗೆ ಜೋಡಿ ಮಣಿಗಳು. ಮತ್ತೆ ರುದ್ರ ಮಾಲೆಯೆಂದು ಹೇಳುತ್ತಾರೆ. ರುದ್ರ ಮಾಲೆಯು ವಿಷ್ಣುವಿನ ಮಾಲೆಯಾಗಿದೆ. ವಿಷ್ಣುವಿನ ಕೊರಳಿನ ಮಾಲೆಯು ಮತ್ತೆ ವಿಷ್ಣು ಪುರಿಯಲ್ಲಿ ರಾಜ್ಯ ಮಾಡುತ್ತಾರೆ. ಬ್ರಾಹ್ಮಣರ ಮಾಲೆಯಂತೂ ಇಲ್ಲ ಏಕೆಂದರೆ ಪದೇ-ಪದೇ ಏರಿಳಿತವಾಗುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ- ನಂಬರ್ವಾರಂತೂ ಇದೆಯಲ್ಲವೆ. ಇಂದು ಚೆನ್ನಾಗಿ ನಡೆಯುತ್ತಾರೆ, ನಾಳೆ ಬಿರುಗಾಳಿ ಬಂದಿತು, ಗ್ರಹಚಾರ ಬಂದಿತೆಂದರೆ ತಣ್ಣಗಾಗಿ ಬಿಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಆಶ್ಚರ್ಯವೆನಿಸುವಂತೆ ಜ್ಞಾನವನ್ನು ಕೇಳಿ ನನ್ನವರಾಗುತ್ತಾರೆ, ಧ್ಯಾನದಲ್ಲಿಯೂ ಹೋಗುತ್ತಾರೆ. ಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ.... ಮತ್ತೆ ಓಡಿ ಹೋಗಿ ಒಮ್ಮೆಲೆ ಚಂಡಾಲರಾಗುತ್ತಾರೆ ಹಾಗಾದರೆ ಮಾಲೆಯು ಹೇಗಾಗುವುದು? ಆದ್ದರಿಂದಲೇ ಬ್ರಾಹ್ಮಣರ ಮಾಲೆಯು ತಯಾರಾಗುವುದಿಲ್ಲವೆಂದು ತಂದೆಯು ತಿಳಿಸುತ್ತಾರೆ. ಭಕ್ತಿಯ ಮಾಲೆಯೇ ಬೇರೆ, ರುದ್ರ ಮಾಲೆಯೇ ಬೇರೆಯಾಗಿದೆ. ಭಕ್ತ ಮಾಲೆಯಲ್ಲಿ ಪ್ರಮುಖರಾದವರು ಸ್ತ್ರೀಯರಲ್ಲಿ ಮೀರಾ ಮತ್ತು ಭಕ್ತರಲ್ಲಿ ನಾರದ. ಇದು ರುದ್ರ ಮಾಲೆಯಾಗಿದೆ, ಸಂಗಮದಲ್ಲಿ ತಂದೆಯೇ ಬಂದು ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ಮಕ್ಕಳು ತಿಳಿದುಕೊಂಡಿದ್ದೀರಿ, ನಾವೇ ಸ್ವರ್ಗದ ಮಾಲೀಕರಾಗಿದ್ದೇವೆ, ಈಗ ನರಕದಲ್ಲಿದ್ದೇವೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನರಕವನ್ನು ಒದೆಯಿರಿ, ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯಿರಿ, ಯಾವುದನ್ನು ರಾವಣನು ನಿಮ್ಮಿಂದ ಕಸಿದುಕೊಂಡಿದ್ದಾನೆ. ಇದನ್ನು ತಂದೆಯೇ ಬಂದು ತಿಳಿಸುತ್ತಾರೆ - ಅವರು ಎಲ್ಲಾ ಶಾಸ್ತ್ರಗಳು, ತೀರ್ಥ ಯಾತ್ರೆ ಇತ್ಯಾದಿಗಳನ್ನು ತಿಳಿದುಕೊಂಡಿದ್ದಾರೆ, ಬೀಜ ರೂಪನಲ್ಲವೆ. ಜ್ಞಾನ ಸಾಗರ, ಶಾಂತಿಯ ಸಾಗರ.... ಇದನ್ನು ಆತ್ಮವೇ ಹೇಳುತ್ತದೆ.

ತಂದೆಯು ತಿಳಿಸುತ್ತಾರೆ - ಈ ಲಕ್ಷ್ಮೀ-ನಾರಾಯಣರು ಸತ್ಯಯುಗದ ಮಾಲೀಕರಾಗಿದ್ದರು, ಅದಕ್ಕೆ ಮೊದಲು ಏನಿತ್ತು? ಅವಶ್ಯವಾಗಿ ಕಲಿಯುಗದ ಅಂತ್ಯವಿರುವುದು. ಅಂದಮೇಲೆ ಸಂಗಮವಾಯಿತಲ್ಲವೆ. ಅದರನಂತರ ಈಗ ಸ್ವರ್ಗವಾಗುತ್ತದೆ. ತಂದೆಗೆ ಸ್ವರ್ಗದ ರಚಯಿತ, ಸ್ವರ್ಗ ಸ್ಥಾಪನೆ ಮಾಡುವವರೆಂದು ಹೇಳಲಾಗುತ್ತದೆ. ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು, ಇವರಿಗೆ ಆಸ್ತಿಯು ಎಲ್ಲಿಂದ ಸಿಕ್ಕಿತು? ಸ್ವರ್ಗದ ರಚಯಿತ ತಂದೆಯಿಂದ. ಇದು ತಂದೆಯದೇ ಆಸ್ತಿಯಾಗಿದೆ. ಈ ಲಕ್ಷ್ಮೀ-ನಾರಾಯಣರಿಗೆ ಸತ್ಯಯುಗದ ರಾಜಧಾನಿಯಿತ್ತು, ಅದನ್ನು ಹೇಗೆ ಪಡೆದುಕೊಂಡರು ಎಂದು ನೀವು ಯಾರನ್ನಾದರೂ ಕೇಳಿರಿ, ಯಾರೂ ತಿಳಿಸಲು ಸಾಧ್ಯವಿಲ್ಲ. ಈ ದಾದಾರವರೂ ಸಹ ಹೇಳುತ್ತಾರೆ- ನಾನೂ ಸಹ ತಿಳಿದುಕೊಂಡಿರಲಿಲ್ಲ, ಪೂಜೆ ಮಾಡುತ್ತಿದ್ದೆನು ಏನೂ ತಿಳಿದುಕೊಂಡಿರಲಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಇವರು ಸಂಗಮ ಯುಗದಲ್ಲಿ ರಾಜಯೋಗವನ್ನು ಕಲಿಯುತ್ತಾರೆ. ಗೀತೆಯಲ್ಲಿಯೇ ರಾಜಯೋಗದ ವರ್ಣನೆಯಿದೆ. ಗೀತೆಯ ವಿನಃ ಮತ್ತ್ಯಾವುದೇ ಶಾಸ್ತ್ರಗಳಲ್ಲಿ ರಾಜಯೋಗದ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ. ಭಗವಂತನೇ ಬಂದು ನರನಿಂದ ನಾರಾಯಣನಾಗುವ ಜ್ಞಾನವನ್ನು ತಿಳಿಸಿದ್ದಾರೆ. ಭಾರತದ ಮುಖ್ಯಶಾಸ್ತ್ರವು ಗೀತೆಯಾಗಿದೆ. ಗೀತೆಯು ಯಾವಾಗ ರಚಿಸಲ್ಪಟ್ಟಿತು, ಇದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ- ಕಲ್ಪ-ಕಲ್ಪವೂ ನಾನು ಸಂಗಮದಲ್ಲಿ ಬರುತ್ತೇನೆ. ಯಾರಿಗೆ ರಾಜ್ಯವನ್ನು ಕೊಟ್ಟಿದ್ದೆನೋ ಅವರು ರಾಜ್ಯವನ್ನು ಕಳೆದುಕೊಂಡು ತಮೋಪ್ರಧಾನ ದುಃಖಿಯಾಗಿ ಬಿಟ್ಟಿದ್ದಾರೆ. ಇದೆಲ್ಲವೂ ಭಾರತದ ಕಥೆಯಾಗಿದೆ. ಭಾರತವೇ ಆಲ್ರೌಂಡ್ ಆಗಿದೆ ಮತ್ತೆಲ್ಲಾ ಖಂಡಗಳು ನಂತರದಲ್ಲಿ ಬರುತ್ತವೆ. ತಂದೆಯು ತಿಳಿಸುತ್ತಾರೆ- ನಿಮಗೆ 84 ಜನ್ಮಗಳ ರಹಸ್ಯವನ್ನು ತಿಳಿಸುತ್ತೇನೆ. 5000 ವರ್ಷಗಳ ಮೊದಲು ನೀವು ದೇವಿ-ದೇವತೆಗಳಾಗಿದ್ದಿರಿ, ತಮ್ಮ ಜನ್ಮಗಳನ್ನು ನೀವು ಅರಿತುಕೊಂಡಿಲ್ಲ. ಹೇ ಭಾರತವಾಸಿಗಳೇ, ತಂದೆಯು ಅಂತಿಮದಲ್ಲಿ ಬರುತ್ತಾರೆ, ಅವರು ಆದಿಯಲ್ಲಿ ಬಂದರೆ ಆದಿ-ಅಂತ್ಯದ ಜ್ಞಾನವನ್ನು ತಿಳಿಸುವುದು ಹೇಗೆ? ಸೃಷ್ಟಿಯ ವೃದ್ಧಿಯೇ ಆಗಿಲ್ಲವೆಂದರೆ ಅದರ ಬಗ್ಗೆ ತಿಳಿಸುವುದಾದರೂ ಹೇಗೆ? ಸತ್ಯಯುಗದಲ್ಲಂತೂ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ತಂದೆಯು ಈಗ ಸಂಗಮದಲ್ಲಿಯೇ ಜ್ಞಾನವನ್ನು ಕೊಡುತ್ತಾರೆ. ಜ್ಞಾನಪೂರ್ಣರಲ್ಲವೆ. ಅವಶ್ಯವಾಗಿ ಜ್ಞಾನವನ್ನು ತಿಳಿಸಲು ಅಂತ್ಯದಲ್ಲಿ ಬರಬೇಕಾಗುತ್ತದೆ. ಆದಿಯಲ್ಲಿ ನಿಮಗೆ ಏನು ತಿಳಿಸುತ್ತಾರೆ! ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಈ ವಿಶ್ವ ವಿದ್ಯಾಲಯವು ಪಾಂಡವ ಸರ್ಕಾರದ್ದಾಗಿದೆ. ಈಗ ಸಂಗಮವಾಗಿದೆ, ಯಾದವರು-ಕೌರವರು ಮತ್ತು ಪಾಂಡವರು, ಅವರು ಇದಕ್ಕೆ ಸೇನೆಯೆಂದು ತೋರಿಸಿದ್ದಾರೆ. ತಂದೆಯು ತಿಳಿಸುತ್ತಾರೆ - ಯಾದವರು-ಕೌರವರು ವಿನಾಶ ಕಾಲೇ ವಿಪರೀತ ಬುದ್ಧಿಯವರಾಗಿದ್ದಾರೆ, ಒಬ್ಬರು ಇನ್ನೊಬ್ಬರಿಗೆ ನಿಂದನೆ ಮಾಡುತ್ತಾರೆ ಏಕೆಂದರೆ ತಂದೆಯೊಂದಿಗೆ ಪ್ರೀತಿಯಿಲ್ಲ. ನಾಯಿ, ಬೆಕ್ಕು ಎಲ್ಲದರಲ್ಲಿ ಪರಮಾತ್ಮನಿದ್ದಾರೆಂದು ಹೇಳಿಬಿಡುತ್ತಾರೆ. ಬಾಕಿ ಪಾಂಡವರದು ಪ್ರೀತಿ ಬುದ್ಧಿಯಾಗಿತ್ತು. ಸ್ವಯಂ ಪರಮಾತ್ಮನೇ ಪಾಂಡವರಿಗೆ ಜೊತೆಗಾರನಾಗಿದ್ದರು. ಪಾಂಡವರು ಎಂದರೆ ಆತ್ಮಿಕ ಪಂಡರು (ಮಾರ್ಗದರ್ಶಕರು), ಅವರು ದೈಹಿಕ ಮಾರ್ಗದರ್ಶಕರಾಗಿದ್ದಾರೆ, ನೀವು ಆತ್ಮಿಕ ಪಂಡರಾಗಿದ್ದೀರಿ. ಒಳ್ಳೆಯದು -

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಆತ್ಮಾಭಿಮಾನಿಯಾಗಿ ಈ ಬೇಹದ್ದಿನ ನಾಟಕದಲ್ಲಿ ಹೀರೋ ಪಾತ್ರವನ್ನಭಿನಯಿಸಬೇಕಾಗಿದೆ. ಪ್ರತಿಯೊಬ್ಬ ಪಾತ್ರಧಾರಿಯ ಪಾತ್ರವು ಬೇರೆ-ಬೇರೆಯಾಗಿದೆ ಆದ್ದರಿಂದ ಯಾರದೇ ಪಾತ್ರದೊಂದಿಗೆ ಈರ್ಷ್ಯೆ ಮಾಡಬಾರದು.

2. ಬೆಳಗ್ಗೆ-ಬೆಳಗ್ಗೆ ಎದ್ದು ತಮ್ಮೊಂದಿಗೆ ತಾವೇ ಮಾತನಾಡಬೇಕು, ಅಭ್ಯಾಸ ಮಾಡಬೇಕು - ನಾನು ಈ ಶರೀರದ ಕರ್ಮೇಂದ್ರಿಯಗಳಿಂದ ಭಿನ್ನವಾಗಿದ್ದೇನೆ. ಬಾಬಾ, ತಾವು ಎಷ್ಟು ಮಧುರರಾಗಿದ್ದೀರಿ! ತಾವು ನಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನ ಕೊಡುತ್ತೀರಿ.

ವರದಾನ:
ತಂದೆಯ ಸಂಸ್ಕಾರಗಳನ್ನು ತಮ್ಮ ಸತ್ಯ ಸಂಸ್ಕಾರಗಳನ್ನಾಗಿ ಮಾಡಿಕೊಳ್ಳುವ ವ್ಯರ್ಥ ಅಥವಾ ಹಳೆಯ ಸಂಸ್ಕಾರಗಳಿಂದ ಮುಕ್ತ ಭವ.

ಯಾವುದೇ ವ್ಯರ್ಥ ಸಂಕಲ್ಪ ಅಥವಾ ಹಳೆಯ ಸಂಸ್ಕಾರಗಳು ದೇಹ-ಅಭಿಮಾನದ ಸಂಬಂಧದಿಂದ ಇದೆ, ಆತ್ಮಿಕ ಸ್ವರೂಪದ ಸಂಸ್ಕಾರವು ತಂದೆಯ ಸಮಾನವಾಗಿರುತ್ತದೆ. ಹೇಗೆ ತಂದೆಯು ಸದಾ ವಿಶ್ವ ಕಲ್ಯಾಣಕಾರಿ, ಪರೋಪಕಾರಿ, ದಯಾಹೃದಯಿ, ವರದಾತ...... ಆಗಿದ್ದಾರೆಯೋ ಹಾಗೆಯೇ ಸ್ವಯಂನ ಸಂಸ್ಕಾರವು ಸ್ವಾಭಾವಿಕವಾಗಿ ಬಿಡುತ್ತದೆ. ಸಂಸ್ಕಾರವಾಗುವುದು ಅರ್ಥಾತ್ ಸಂಕಲ್ಪ, ಮಾತು ಮತ್ತು ಕರ್ಮವು ಅದರನುಸಾರ ಸ್ವತಹವಾಗಿ ನಡೆಯುವುದು. ಜೀವನದಲ್ಲಿ ಸಂಸ್ಕಾರವು ಒಂದು ಕೀಲಿ ಕೈ ಆಗಿದೆ, ಇದರಿಂದ ಸ್ವತಹವಾಗಿ ನಡೆಯುತ್ತಾ ಇರುತ್ತೀರಿ, ನಂತರ ಪರಿಶ್ರಮ ಪಡುವ ಅವಶ್ಯಕತೆಯೇ ಇರುವುದಿಲ್ಲ.

ಸ್ಲೋಗನ್:
ಆತ್ಮಿಕ ಸ್ಥಿತಿಯಲ್ಲಿದ್ದು ತನ್ನ ರಥ(ಶರೀರ)ದ ಮೂಲಕ ಕಾರ್ಯವನ್ನು ಮಾಡಿಸುವವರೇ ಸತ್ಯ ಪುರುಷಾರ್ಥಿ ಆಗಿದ್ದಾರೆ.

ಅವ್ಯಕ್ತ ಸೂಚನೆ:- ಏಕತೆ ಮತ್ತು ವಿಶ್ವಾಸದ ಗುಣ ಲಕ್ಷಣಗಳ ಮೂಲಕ ಸಫಲತಾ ಸಂಪನ್ನರಾಗಿರಿ.

ಹೇಗೆ ತಂದೆಯು ನಿಮ್ಮೆಲ್ಲರನ್ನು ಕೊನೆ-ಕೊನೆಯಿಂದ ಹುಡುಕಿ ತೆಗೆದಿದ್ದಾರೆ. ಅನೇಕ ವೃಕ್ಷಗಳ ಕೊಂಬೆಗಳು ಈಗ ಒಂದೇ ಗಂಧದ ವೃಕ್ಷವಾಗಿ ಬಿಟ್ಟಿದೆ. ಜನ ಹೇಳುತ್ತಾರೆ – ಇಬ್ಬರು ನಾಲ್ವರು ಮಾತೆಯರು ಒಟ್ಟಾಗಿ ಇರಲು ಸಾಧ್ಯವಿಲ್ಲ ಮತ್ತು ನೀವು ಮಾತೆಯರು ಇಡೀ ವಿಶ್ವದಲ್ಲಿ ಏಕತೆಯನ್ನು ಸ್ಥಾಪನೆ ಮಾಡುವುದಕ್ಕೆ ನಿಮಿತ್ತರಾಗಿದ್ದೀರಿ, ಇದೇ ನಿಮ್ಮ ಪರಸ್ಪರದ ಏಕತೆ ತಂದೆಯನ್ನು ಪ್ರತ್ಯಕ್ಷ ಮಾಡುವುದು.