04.05.25 Avyakt Bapdada
Kannada
Murli 20.02.2005 Om Shanti Madhuban
“ಹೃದಯಪೂರ್ವಕವಾಗಿ ನನ್ನ
ಬಾಬಾ ಎಂದು ಹೇಳಿ ಮತ್ತು ಸರ್ವ ಅವಿನಾಶಿ ಖಜಾನೆಗಳಿಗೆ ಮಾಲೀಕರಾಗಿ ನಿಶ್ಚಿಂತ ಚಕ್ರವರ್ತಿಗಳಾಗಿ”
ಇಂದು ಭಾಗ್ಯವಿದಾತ
ಬಾಪ್ದಾದಾ ತನ್ನ ಎಲ್ಲಾ ಮಕ್ಕಳ ಮಸ್ತಕದ ಮಧ್ಯದಲ್ಲಿ ಭಾಗ್ಯದ ರೇಖೆಯನ್ನು ನೋಡುತ್ತಿದ್ದಾರೆ.
ಪ್ರತಿಯೊಬ್ಬ ಮಗುವಿನ ಮಸ್ತಕದಲ್ಲಿ ಹೊಳೆಯುತ್ತಿರುವ ದಿವ್ಯ ನಕ್ಷತ್ರದ ರೇಖೆಯು ಕಂಡುಬರುತ್ತಾ ಇದೆ.
ಪ್ರತಿಯೊಬ್ಬ ನಯನಗಳಲ್ಲಿ ಸ್ನೇಹ ಮತ್ತು ಶಕ್ತಿಯ ರೇಖೆಯನ್ನು ನೋಡುತ್ತಿದ್ದಾರೆ. ಮುಖದಲ್ಲಿ
ಶ್ರೇಷ್ಠ-ಮಧುರ ವಾಣಿಯ ರೇಖೆಯನ್ನು ನೋಡುತ್ತಿದ್ದಾರೆ. ತುಟಿಗಳ ಮೇಲೆ ಮಧುರ ಮುಗುಳ್ನಗೆಯ ರೇಖೆಯು
ಹೊಳೆಯುತ್ತಾ ಇದೆ. ಹೃದಯದಲ್ಲಿ ಹೃದಯರಾಮನ ಸ್ನೇಹದಲ್ಲಿ ಲವಲೀನರಾಗಿರುವ ರೇಖೆಯನ್ನು ನೋಡುತ್ತಾ
ಇದ್ದಾರೆ. ಕೈಗಳಲ್ಲಿ ಸದಾ ಸರ್ವಖಜಾನೆಗಳಿಂದ ಸಂಪನ್ನರಾಗಿರುವ ರೇಖೆಯನ್ನು ನೋಡುತ್ತಿದ್ದಾರೆ.
ಕಾಲುಗಳಲ್ಲಿ ಪ್ರತೀ ಹೆಜ್ಜೆಯಲ್ಲಿ ಪದುಮದ ರೇಖೆಯನ್ನು ನೋಡುತ್ತಿದ್ದಾರೆ - ಯಾವುದು ಈಗ ನೀವು
ಮಕ್ಕಳಿಗೆ ಈ ಸಂಗಮಯುಗದಲ್ಲಿ ಭಾಗ್ಯವು ಪ್ರಾಪ್ತಿಯಾಗಿದೆ, ಇಂತಹ ಶ್ರೇಷ್ಠ ಭಾಗ್ಯವು ಇಡೀ
ಕಲ್ಪದಲ್ಲಿ ಯಾರದೂ ಸಹ ಇರುವುದಿಲ್ಲ. ಇಂತಹ ಭಾಗ್ಯವನ್ನು ಅನುಭವ ಮಾಡುತ್ತೀರಾ? ಇಷ್ಟೊಂದು
ಶ್ರೇಷ್ಠಭಾಗ್ಯದ ಆತ್ಮೀಯ ನಶೆಯ ಅನುಭವವನ್ನು ಮಾಡುತ್ತೀರಾ? ಹೃದಯದಲ್ಲಿ ಸ್ವತಃವಾಗಿ “ವಾಹ್ ನನ್ನ
ಭಾಗ್ಯವೆ!” ಎಂಬ ಗೀತೆಯು ಬಾರಿಸುತ್ತಾ ಇದೆ. ಈ ಸಂಗಮಯುಗದ ಭಾಗ್ಯವು ಅವಿನಾಶಿಯಾದಂತಹ
ಭಾಗ್ಯವಾಗಿಬಿಡುತ್ತದೆ - ಏಕೆ? ಅವಿನಾಶಿ ತಂದೆಯ ಮೂಲಕ ಅವಿನಾಶಿ ಭಾಗ್ಯವು ಪ್ರಾಪ್ತಿಯಾಗಿದೆ ಆದರೆ
ಈ ಸಂಗಮಯುಗದಲ್ಲಿಯೇ ಪ್ರಾಪ್ತಿಯಾಗುತ್ತದೆ. ಈ ಸಂಗಮಯುಗದಲ್ಲಿಯೇ ಅನುಭೂತಿಯನ್ನು ಮಾಡುತ್ತೀರಿ. ಈ
ವಿಶೇಷ ಸಂಗಮಯುಗದ ಪ್ರಾಪ್ತಿಯು ಅತೀ ಶ್ರೇಷ್ಠವಾಗಿದೆ. ಇಂತಹ ಶ್ರೇಷ್ಠ ಭಾಗ್ಯದ ಅನುಭವವು ಸದಾ
ಪ್ರಕಟವಾಗಿರುತ್ತದೆಯೇ? ಅಥವಾ ಕೆಲವೊಮ್ಮೆ ಗುಪ್ತ ಅಥವಾ ಕೆಲವೊಮ್ಮೆ ಪ್ರಕಟವಾಗಿರುತ್ತದೆಯೇ? ಮತ್ತೆ
ಅದಕ್ಕಾಗಿ ಪುರುಷಾರ್ಥವೇನು ಮಾಡಿದಿರಿ? ಇಷ್ಟು ದೊಡ್ಡಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು
ಪುರುಷಾರ್ಥವು ಎಷ್ಟು ಸಹಜವಾಯಿತು! “ನನ್ನ ಬಾಬಾ” ಎಂದು ಕೇವಲ ಮನಸ್ಸಿನಿಂದ (ಹೃದಯದಿಂದ)
ತಿಳಿದುಕೊಂಡಿದ್ದೀರಿ, ಒಪ್ಪಿಕೊಂಡಿದ್ದೀರಿ ಮತ್ತು ತನ್ನವರನ್ನಾಗಿ ಮಾಡಿಕೊಂಡಿದ್ದೀರಿ. ನಾನು
ತಂದೆಯವನು, ತಂದೆಯು ನನ್ನವರು ಎಂಬುದನ್ನು ಮನಃಪೂರ್ವಕವಾಗಿ ಗುರುತಿಸಿದ್ದೀರಿ. ನನ್ನದೆಂದು
ಒಪ್ಪಿಕೊಳ್ಳುವುದೆಂದರೆ ಅಧಿಕಾರಿಯಾಗುವುದು. ಅಧಿಕಾರವೂ ಸಹ ಎಷ್ಟು ದೊಡ್ಡದಾಗಿದೆ! ಯೋಚಿಸಿ,
ಯಾರಾದರೂ ನಿಮ್ಮನ್ನು ನಿಮಗೆ ಏನೇನು ಸಿಕ್ಕಿತು? ಎಂದು ಕೇಳಿದರೆ ಏನು ಹೇಳುತ್ತೀರಿ? ಏನನ್ನು
ಪಡೆಯಬೇಕಿತ್ತೋ ಅದನ್ನು ಪಡೆದುಬಿಟ್ಟೆವು ಎಂದು ಹೇಳುತ್ತೀರಲ್ಲವೇ. ಅಪ್ರಾಪ್ತವಾದ ವಸ್ತು
ಪರಮಾತ್ಮನ ಖಜಾನೆಯಲ್ಲಿ ಯಾವುದೂ ಇಲ್ಲ. ಪ್ರಾಪ್ತಿ ಸ್ವರೂಪದ ಅನುಭವವನ್ನು ಮಾಡಿದಿರೋ ಅಥವಾ
ಮಾಡುತ್ತಿದ್ದೀರೋ? ಭವಿಷ್ಯದ ಮಾತು ಬೇರೆ, ಈ ಸಂಗಮಯುಗದಲ್ಲಿ ಪ್ರಾಪ್ತಿ ಸ್ವರೂಪದ ಅನುಭವವಿದೆಯೇ?
ಒಂದುವೇಳೆ ಸಂಗಮಯುಗದಲ್ಲಿ ಅನುಭವ ಮಾಡಲಿಲ್ಲವೆಂದರೆ ಭವಿಷ್ಯದಲ್ಲಿಯೂ ಸಹ ಮಾಡಲು ಸಾಧ್ಯವಿಲ್ಲ -
ಏಕೆ? ಭವಿಷ್ಯವು ಪ್ರಾಲಬ್ಧವಾಗಿದೆ, ಆದರೆ ಪ್ರಾಲಬ್ಧ ಈಗಿನ ಪುರುಷಾರ್ಥದ ಶ್ರೇಷ್ಠಕರ್ಮದಿಂದ
ಆಗುತ್ತದೆ. ಕೊನೆಯಲ್ಲಿ ಅನುಭವ ಸ್ವರೂಪರಾಗಿಬಿಡುತ್ತೇವೆ ಎಂದಲ್ಲ. ಸಂಗಮಯುಗದ ಬಹಳ ಕಾಲದ ಅನುಭವವೇ
ಪ್ರಾಲಬ್ಧವಾಗಿದೆ. ಜೀವನ್ಮುಕ್ತಿಯ ವಿಶೇಷ ಅನುಭವವು ಈಗಿನದಾಗಿದೆ. ನಿಶ್ಚಿಂತ ಚಕ್ರವರ್ತಿಗಳಾಗುವ
ಅನುಭವ ಈಗಿನದಾಗಿದೆ. ಅಂದಾಗ ಎಲ್ಲರೂ ನಿಶ್ಚಿಂತ ಚಕ್ರವರ್ತಿಗಳೋ ಅಥವಾ ಚಿಂತೆಯಿದೆಯೋ? ಯಾರು
ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ ಅಂತಹವರು ಕೈಯೆತ್ತಿ. ಆಗಿದ್ದೀರೋ ಅಥವಾ ಆಗುತ್ತಿದ್ದೀರೋ?
ಆಗಿದ್ದೀರಲ್ಲವೆ! ಚಿಂತೆಯೇನು? ಯಾವಾಗ ದಾತನ ಮಕ್ಕಳಾಗಿಬಿಡುತ್ತೀರೆಂದರೆ ಚಿಂತೆಯೇನು ಉಳಿಯಿತು? `ನನ್ನ
ಬಾಬಾ’ ಎಂದು ಒಪ್ಪಿಕೊಂಡಿರಿ ಮತ್ತು ಚಿಂತೆಯ ಅನೇಕ ಮಂಕರಿ (ಹೊರೆ) ಗಳನ್ನು ಇಳಿಸಿಕೊಂಡಿರಿ.
ಹೊರೆಯೂ ಇಳಿದುಹೋಯಿತು. ಹೊರೆಯಿದೆಯೇ? ಇದೆಯೇ? ಪ್ರಕೃತಿಯ ಆಟವನ್ನೂ ಸಹ ನೋಡುತ್ತೀರಿ. ಮಾಯೆಯ
ಆಟವನ್ನೂ ಸಹ ನೋಡುತ್ತೀರಿ ಆದರೆ ನಿಶ್ಚಿಂತ ಚಕ್ರವರ್ತಿಗಳಾಗಿ ಸಾಕ್ಷಿಯಾಗಿ ಆಟವನ್ನು ನೋಡುತ್ತೀರಾ.
ಪ್ರಪಂಚದವರಾದರೂ ಭಯಪಡುತ್ತಾರೆ - ಏನಾಗುತ್ತದೆಯೋ ಗೊತ್ತಿಲ್ಲ! ನಿಮಗೂ ಈ ರೀತಿ ಭಯವಿದೆಯೇ?
ಭಯಪಡುತ್ತೀರಾ? ಏನಾಗುತ್ತದೆಯೋ ಅದು ಒಳ್ಳೆಯದಕ್ಕಿಂತ ಒಳ್ಳೆಯದೇ ಆಗುತ್ತದೆ ಎಂಬ ನಿಶ್ಚಯ
ನಿಶ್ಚಿತವಾಗಿದೆಯೇ? ಏಕೆಂದರೆ ತ್ರಿಕಾಲದರ್ಶಿಯಾಗಿ ಪ್ರತಿಯೊಂದು ದೃಶ್ಯವನ್ನು ನೋಡುತ್ತೀರಿ. ಇಂದು
ಏನಿದೆ, ನಾಳೆ ಏನಾಗುತ್ತದೆಯೋ - ಇದನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಜ್ಞಾನಪೂರ್ಣರಲ್ಲವೆ?
ಸಂಗಮದ ನಂತರ ಏನಾಗಲಿದೆ? ತಮ್ಮೆಲ್ಲರ ಮುಂದೆ ಸ್ಪಷ್ಟವಾಗಿದೆಯಲ್ಲವೆ! ನವಯುಗ ಬರಲೇಬೇಕಾಗಿದೆ.
ಪ್ರಪಂಚದವರು ನವಯುಗವು ಬರುತ್ತದೆಯೇ? ಎಂದು ಕೇಳುತ್ತಾರೆ. ಬರುತ್ತದೆಯೇ? ಅಂದಾಗ ನೀವೇನು
ಹೇಳುತ್ತೀರಿ? ಬಂದೇಬರುತ್ತದೆ ಎಂದು ಹೇಳುತ್ತೀರಲ್ಲವೆ. ಆದ್ದರಿಂದ ಏನಾಗುತ್ತದೆ ಎಂಬ
ಪ್ರಶ್ನೆಯಿಲ್ಲ. ಸ್ವರ್ಣೀಮಯುಗವು ಬರುತ್ತದೆ ಎಂಬುದೂ ತಿಳಿದಿದೆ. ರಾತ್ರಿಯ ನಂತರ ಈಗ ಸಂಗಮ
ಪ್ರಭಾತ, ಅಮೃತವೇಳೆಯಾಗಿದೆ. ಅಮೃತವೇಳೆಯ ನಂತರ ದಿನ ಬರಲೇಬೇಕು. ಯಾರಿಗೆಲ್ಲಾ ನಿಶ್ಚಯವಿದೆಯೋ ಅವರು
ನಿಶ್ಚಿಂತರು, ಯಾವುದೇ ಚಿಂತೆಯಿಲ್ಲ, ನಿಶ್ಚಿಂತರು. ವಿಶ್ವದ ರಚಯಿತನ ಮೂಲಕ ರಚನೆಯ ಸ್ಪಷ್ಟಜ್ಞಾನವು
ಸಿಕ್ಕಿಬಿಟ್ಟಿದೆ.
ಬಾಪ್ದಾದಾ
ನೋಡುತ್ತಿದ್ದಾರೆ - ಎಲ್ಲಾ ಮಕ್ಕಳು ಸ್ನೇಹದ, ಸಹಯೋಗದ ಮತ್ತು ಸಂಪರ್ಕದ ಪ್ರೀತಿಯಲ್ಲಿ
ಬಂಧಿಸಲ್ಪಡುತ್ತಾ ತಮ್ಮ ಮನೆಗೆ ತಲುಪಿಬಿಟ್ಟಿದ್ದಾರೆ. ಬಾಪ್ದಾದಾ ಎಲ್ಲಾ ಸ್ನೇಹಿ ಮಕ್ಕಳಿಗೆ,
ಸಹಯೋಗಿ ಮಕ್ಕಳಿಗೆ, ಸಂಪರ್ಕದಲ್ಲಿ ಬರುವಂತಹ ಮಕ್ಕಳಿಗೆ, ತನ್ನ ಅಧಿಕಾರವನ್ನು ತೆಗೆದುಕೊಳ್ಳಲು
ತನ್ನ ಮನೆಯಲ್ಲಿ ತಲುಪುವುದರಿಂದ ಅಭಿನಂದನೆಗಳನ್ನು ಕೊಡುತ್ತಿದ್ದಾರೆ. ಅದಕ್ಕಾಗಿ ಶುಭಾಷಯಗಳು,
ಶುಭಾಷಯಗಳು. ಬಾಪ್ದಾದಾರವರಿಗೆ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿದೆಯೋ ಅಥವಾ ಮಕ್ಕಳಿಗೆ
ಬಾಪ್ದಾದಾರವರ ಜೊತೆ ಜಾಸ್ತಿಯಿದೆಯೋ? ಯಾರದು ಜಾಸ್ತಿಯಿದೆ - ತಮ್ಮದೋ ಅಥವಾ ತಂದೆಯದಾಗಿದೆಯೋ?
ತಂದೆಯ ಮೇಲೆ ಮಕ್ಕಳಿಗೆ ಹೆಚ್ಚು ಪ್ರೀತಿಯಿದೆ ಎಂದು ಹೇಳುತ್ತೇವೆ. ನೋಡಿ, ಮಕ್ಕಳಿಗೆ ಪ್ರೀತಿಯಿದೆ,
ಆದ್ದರಿಂದ ಎಲ್ಲೆಲ್ಲಿಂದ ಬಂದು ತಲುಪಿದ್ದೀರಲ್ಲವೆ? ಎಷ್ಟು ದೇಶದಿಂದ ಬಂದಿದ್ದೀರಿ? (50 ದೇಶದಿಂದ)
50 ದೇಶದಿಂದ ಬಂದಿದ್ದಾರೆ. ಆದರೆ ಎಲ್ಲದಕ್ಕಿಂತ ದೂರದಿಂದ ಯಾರು ಬಂದಿದ್ದಾರೆ? ಅಮೇರಿಕಾದವರು
ದೂರದಿಂದ ಬಂದಿದ್ದಾರೆಯೇ? ತಾವೂ ಸಹ ದೂರದಿಂದ ಬಂದಿದ್ದೀರಿ ಆದರೆ ಬಾಪ್ದಾದಾರವರು ಪರಮಧಾಮದಿಂದ
ಬಂದಿದ್ದಾರೆ. ಅದಕ್ಕೆ ಹೋಲಿಕೆ ಮಾಡಿದರೆ ಅಮೇರಿಕಾ ಎಷ್ಟು ದೂರವಿದೆ? ಅಮೇರಿಕಾ ದೂರವಿದೆಯೋ ಅಥವಾ
ಪರಮಧಾಮ ದೂರವಿದೆಯೋ? ಬಾಪ್ದಾದಾ ಎಲ್ಲರಿಗಿಂತ ದೂರದೇಶದವರಾಗಿದ್ದಾರೆ. ಮಕ್ಕಳು ನೆನಪು ಮಾಡುತ್ತೀರಿ
ಮತ್ತೆ ತಂದೆಯು ಪ್ರತ್ಯಕ್ಷವಾಗಿಬಿಡುತ್ತಾರೆ. ಈಗ ತಂದೆಯು ಮಕ್ಕಳಿಂದ ಏನನ್ನು ಬಯಸುತ್ತಾರೆ? ಎಂದು
ಕೇಳುತ್ತೀರಲ್ಲವೆ - ತಂದೆಯು ಏನನ್ನು ಬಯಸುತ್ತಾರೆ - ಅಂದಾಗ ಬಾಪ್ದಾದಾ ಮಧುರಾತಿ ಮಧುರ ಮಕ್ಕಳಿಂದ
ಒಬ್ಬೊಬ್ಬ ಮಗುವೂ ಸ್ವರಾಜ್ಯಾಧಿಕಾರಿ ರಾಜರಾಗಬೇಕೆಂದು ಬಯಸುತ್ತಾರೆ. ಎಲ್ಲರೂ ರಾಜರಾಗಿದ್ದೀರಾ?
ಸ್ವರಾಜ್ಯವಿದೆಯೇ? ಸ್ವಯಂನ ಮೇಲೆ ರಾಜ್ಯವಂತೂ ಇದೆಯಲ್ಲವೆ! ಯಾರು ಸ್ವರಾಜ್ಯಾಧಿಕಾರಿ
ರಾಜನಾಗಿದ್ದೇನೆ ಎಂದು ತಿಳಿದಿದ್ದೀರಿ ಅಂತಹವರು ಕೈಯನ್ನೆತ್ತಿ. ಬಹಳ ಒಳ್ಳೆಯದು. ಬಾಪ್ದಾದಾರವರಿಗೆ
ಮಕ್ಕಳನ್ನು ನೋಡಿ ಪ್ರೀತಿ ಬರುತ್ತದೆ ಏಕೆಂದರೆ ದುಃಖ-ಅಶಾಂತಿಯಿಂದ ದೂರವಾಗಲು 63 ಜನ್ಮಗಳಿಂದ
ಬಹಳಷ್ಟು ಕಷ್ಟಪಟ್ಟಿದ್ದಾರೆ. ಪ್ರತಿಯೊಬ್ಬ ಮಗುವೂ ಈಗ ಸ್ವರಾಜ್ಯಾಧಿಕಾರಿಗಳಾಗಲಿ ಎಂದು ತಂದೆಯು
ಬಯಸುತ್ತಾರೆ. ಮನಸ್ಸು-ಬುದ್ಧಿ-ಸಂಸ್ಕಾರಕ್ಕೆ ಮಾಲೀಕರಾದಿರಿ, ರಾಜರಾದಿರಿ. ಯಾವಾಗ ಬೇಕೋ, ಎಲ್ಲಿ
ಬೇಕೋ, ಹೇಗೆ ಬೇಕೋ ಅಲ್ಲಿ ಮನಸ್ಸು-ಬುದ್ಧಿ-ಸಂಸ್ಕಾರವನ್ನು ಪರಿವರ್ತನೆ ಮಾಡಿಕೊಳ್ಳಲು
ಸಾಧ್ಯವಾಗಬೇಕು. ಒತ್ತಡ ಮುಕ್ತ ಜೀವನದ ಅನುಭವವು ಸದಾ ಪ್ರತ್ಯಕ್ಷವಾಗಿರಲಿ. ಕೆಲವೊಮ್ಮೆ
ಗುಪ್ತವಾಗಿಬಿಡುತ್ತದೆ, ಇದನ್ನೂ ಸಹ ಬಾಪ್ದಾದಾ ನೋಡುತ್ತಾರೆ. ಇದನ್ನು ಮಾಡಬಾರದು ಎಂದು
ಯೋಚಿಸುತ್ತಾರೆ, ಇದು ಸರಿಯಾಗಿದೆ, ಇದು ತಪ್ಪಾಗಿದೆ ಎಂದು ಯೋಚಿಸುತ್ತಾರೆ ಆದರೆ ಸ್ವರೂಪದಲ್ಲಿ
ತರುವುದಿಲ್ಲ. ಯೋಚಿಸುವುದೆಂದರೆ ಗುಪ್ತವಾಗಿರುವುದು. ಸ್ವರೂಪದಲ್ಲಿ ತರುವುದು ಅರ್ಥಾತ್
ಪ್ರತ್ಯಕ್ಷವಾಗಿರುವುದು. ಸಮಯಕ್ಕೋಸ್ಕರ ನಿರೀಕ್ಷಣೆ ಮಾಡುತ್ತಿಲ್ಲ ಅಲ್ಲವೆ! ಕೆಲವೊಮ್ಮೆ ಈ ರೀತಿ
ಮಾಡುತ್ತೀರಿ. ಆತ್ಮಿಕ ವಾರ್ತಾಲಾಪ ಮಾಡುತ್ತೀರಲ್ಲವೆ ಆಗ ಕೆಲವು ಮಕ್ಕಳು ಸಮಯ ಬಂದಾಗ
ಸರಿಯಾಗಿಬಿಡುತ್ತದೆ ಎಂದು ಹೇಳುತ್ತೀರಿ. ಸಮಯವು ತಮ್ಮ ರಚನೆಯಾಗಿದೆ. ಮಾ|| ರಚಯಿತರಲ್ಲವೆ, ಅಂದಾಗ
ಮಾ|| ರಚಯಿತರು ರಚನೆಯ ಆಧಾರದಂತೆ ನಡೆಯುವುದಿಲ್ಲ. ಸಮಯದ ಸಮಾಪ್ತಿಯನ್ನು ನೀವು ಮಾ|| ರಚಯಿತರು
ಸಮೀಪಕ್ಕೆ ಕರೆತರಬೇಕು.
ಒಂದು ಸೆಕೆಂಡಿನಲ್ಲಿ
ಮನಸ್ಸಿಗೆ ಮಾಲೀಕರಾಗಿ ಆದೇಶ ಕೊಡಲು ಸಾಧ್ಯವಿದೆಯೇ? ಸಾಧ್ಯವಿದೆಯೇ? ಮನಸ್ಸನ್ನು ಏಕಾಗ್ರ ಮಾಡಲು
ಸಾಧ್ಯವಿದೆಯೇ? ಬಿಂದುವನ್ನಿಡಲು ಸಾಧ್ಯವಿದೆಯೋ ಅಥವಾ ಬಿಂದುವನ್ನಿಡಲು ಹೋದರೆ ಅದು ಮತ್ತೆ
ಪ್ರಶ್ನಾರ್ಥಕ ಚಿಹ್ನೆಯಾಗಿಬಿಡುತ್ತದೆಯೇ? ಏನು, ಏಕೆ, ಹೇಗೆ, ಇದೇನು, ಅದೇನು, ಆಶ್ಚರ್ಯಸೂಚಕವೂ
ಇರಬಾರದು. ಒಂದು ಸೆಕೆಂಡಿನಲ್ಲಿ ಬಿಂದುವಾಗಿಬಿಡಿ. ಬೇರೆ ಯಾವುದೇ ಪರಿಶ್ರಮವಿಲ್ಲ. ಒಂದು
ಶಬ್ದವನ್ನು ಕೇವಲ ಅಭ್ಯಾಸದಲ್ಲಿ ತನ್ನಿ “ಪಾಯಿಂಟ್ (ಬಿಂದು)” ಆಗುವುದು. ಬಿಂದುಸ್ವರೂಪರಾಗುವುದು.
ವ್ಯರ್ಥಕ್ಕೆ ಬಿಂದುವನ್ನಿಡಬೇಕು ಮತ್ತು ಯಾವ ಮಹಾವಾಕ್ಯವನ್ನು ಕೇಳುತ್ತೀರೋ ಆ ಮಾತಿನ ಮೇಲೆ ವಿಚಾರ
ಮಾಡಬೇಕು ಮತ್ತ್ಯಾವುದೇ ಕಷ್ಟವಿಲ್ಲ. ಮಹಾವಾಕ್ಯವನ್ನು ನೆನಪಿಟ್ಟುಕೊಳ್ಳಿ ಬಿಂದುವನ್ನು ಹಾಕಿಬಿಡಿ,
ಬಿಂದುವಾಗಿಬಿಡಿ - ಈ ಅಭ್ಯಾಸವನ್ನು ಇಡೀ ದಿನದಲ್ಲಿ ಮಧ್ಯ-ಮಧ್ಯದಲ್ಲಿ ಎಷ್ಟೇ
ಬಿಡುವಿಲ್ಲದಂತಿದ್ದರೂ ಸಹ ಪ್ರಯತ್ನ ಮಾಡಿ - ಒಂದು ಸೆಕೆಂಡಿನಲ್ಲಿ ಬಿಂದುವಾಗಲು ಸಾಧ್ಯವಿದೆಯೇ?
ಒಂದು ಸೆಕೆಂಡಿನಲ್ಲಿ ಬಿಂದುವನ್ನಿಡಲು ಸಾಧ್ಯವಿದೆಯೇ? ಯಾವಾಗ ಈ ಅಭ್ಯಾಸವಾಗುತ್ತದೆ? ಮತ್ತೆ ಮತ್ತೆ
ಅಭ್ಯಾಸ ಮಾಡುವುದರಿಂದ ಅಂತಿಮ ಸಮಯದಲ್ಲಿ ಪೂರ್ಣವಿರಾಮವನ್ನಿಡಲು ಸಾಧ್ಯವಾಗುತ್ತದೆ.
ಪಾಸ್-ವಿತ್-ಆನರ್ (ಗೌರವಾನ್ವಿತವಾಗಿ ತೇರ್ಗಡೆ) ಆಗಿಬಿಡುತ್ತೀರಿ. ಇದೇ ಪರಮಾತ್ಮನ ಪಾಲನೆ, ಇದೇ
ಪರಮಾತ್ಮನ ವಿದ್ಯೆಯಾಗಿದೆ.
ಯಾರೆಲ್ಲಾ ಬಂದಿದ್ದೀರಿ,
ಮೊದಲಬಾರಿ ಬರುವವರಿರಬಹುದು, ಮೊದಲ ಬಾರಿ ಮಿಲನ ಮಾಡುವುದಕ್ಕೋಸ್ಕರ ಯಾರೆಲ್ಲಾ ಬಂದಿದ್ದೀರೋ ಅವರು
ಕೈಯೆತ್ತಿರಿ. ಬಹಳ ಮಂದಿ ಬಂದಿದ್ದಾರೆ, ಎಲ್ಲರಿಗೂ ಸ್ವಾಗತ. ಹೇಗೆ ಈಗ ಮೊದಲಬಾರಿ ಬಂದಿದ್ದೀರೋ
ಅದೇರೀತಿ ಮೊದಲ ನಂಬರನ್ನು ತೆಗೆದುಕೊಳ್ಳಬೇಕು. ಅದಕ್ಕೆ ಅವಕಾಶವೂ ಇದೆ. ನಾವಂತೂ ಈಗೀಗ ಇನ್ನೂ
ಮೊದಲಬಾರಿ ಬಂದಿದ್ದೇವೆ, ನಮಗಿಂತಲೂ ಮೊದಲು ಅವರು ಬಹಳಷ್ಟಿದ್ದಾರೆಂದು ತಾವು ಯೋಚಿಸುತ್ತೀರಿ ಆದರೆ
ನಾಟಕದಲ್ಲಿ ಲಾಸ್ಟ್ ಸೋ ಫಾಸ್ಟ್, ಫಾಸ್ಟ್ ಸೋ ಫಸ್ಟ್ ಬರುವ ಅವಕಾಶವನ್ನಿಡಲಾಗಿದೆ. ಅವಕಾಶವಿದೆ
ಮತ್ತು ಚಾನ್ಸ್ (ಅವಕಾಶ) ವನ್ನು ತೆಗೆದುಕೊಳ್ಳುವವರಿಗೆ ಬಾಪ್ದಾದಾರವರು ಚಾನ್ಸ್ಲರ್ ಎಂದು
ಹೇಳುತ್ತೇವೆ. ಅಂದಾಗ ಚಾನ್ಸಲರ್ ಆಗಿ. ಚಾನ್ಸಲರ್ ಆಗಬೇಕಾಗಿದೆಯೇ? ಯಾರು ಆಗುತ್ತೇವೆಂದು
ತಿಳಿಯುತ್ತೀರೋ ಅವರು ಕೈಯನ್ನೆತ್ತಿ. ಆಗುತ್ತೀರಾ? ವಾಹ್! ಶುಭಾಷಯಗಳು. ಬಾಪ್ದಾದಾ ನೋಡಿದೆವು -
ಇಲ್ಲಿ ಯಾರೆಲ್ಲರೂ ಬಂದಿದ್ದಾರೆಯೋ ಎಲ್ಲರೂ ಕೈಯನ್ನೆತ್ತುತ್ತಿದ್ದಾರೆ. ಬಹಳಷ್ಟು ಮಂದಿ
ಎತ್ತಿದ್ದಾರೆ. ಶುಭಾಷಯಗಳು, ಶುಭಾಷಯಗಳು. ಬಾಪ್ದಾದಾರವರು ತಾವೆಲ್ಲಾ ಬರಲಿರುವ ಮಧುರಾತಿ ಮಧುರ,
ಪ್ರಿಯಾತಿಪ್ರಿಯ ಮಕ್ಕಳನ್ನು ವಿಶೇಷವಾಗಿ ನೆನಪು ಮಾಡಿಕೊಂಡಿದ್ದೇವೆ - ಏಕೆ? ನಿಮಂತ್ರಣವನ್ನು ಏಕೆ
ಕೊಟ್ಟಿದ್ದೇವೇ? ತಿಳಿದಿದೆಯೇ? ನೋಡಿ, ನಿಮಂತ್ರಣವಂತೂ ಅನೇಕರಿಗೆ ಸಿಕ್ಕಿತು ಆದರೆ ತಾವು ಬಂದು
ತಲುಪಿದ್ದೀರಿ. ಬಾಪ್ದಾದಾ ಏಕೆ ನೆನಪು ಮಾಡಿದೆವು? ಏಕೆಂದರೆ ಬಾಪ್ದಾದಾರವರಿಗೆ ಗೊತ್ತಿದೆ -
ಯಾರೆಲ್ಲರೂ ಬಂದಿದ್ದೀರೋ ಅವರು ಸ್ನೇಹಿ, ಸಹಯೋಗಿಯಿಂದ ಸಹಜಯೋಗಿಗಳಾಗುವ ಕ್ವಾಲಿಟಿಯಾಗಿದ್ದೀರಿ.
ಒಂದುವೇಳೆ ಸಾಹಸವನ್ನಿಟ್ಟರೆ ತಾವು ಸಹಜಯೋಗಿಯಾಗಿ ಅನ್ಯರಿಗೂ ಸಹಜಯೋಗದ ಸಂದೇಶಿಗಳಾಗಿ ಸಂದೇಶವನ್ನು
ಕೊಡಬಲ್ಲಿರಿ. ಸಂದೇಶ ಕೊಡುವುದೆಂದರೆ ಭಗವಂತನ ಸಂದೇಶಪುತ್ರರಾಗುವುದು. ಆತ್ಮರನ್ನು
ದುಃಖ-ಅಶಾಂತಿಯಿಂದ ಬಿಡಿಸುವುದು. ಎಲ್ಲರೂ ತಮ್ಮ ಸಹೋದರ-ಸಹೋದರಿಯರೇ ಅಲ್ಲವೆ ಆದ್ದರಿಂದ ತಮ್ಮ
ಸಹೋದರ-ಸಹೋದರಿಯರಿಗೆ ಈಶ್ವರೀಯ ಸಂದೇಶವನ್ನು ಕೊಡಿ ಅರ್ಥಾತ್ ಮುಕ್ತರನ್ನಾಗಿ ಮಾಡಿ, ಇದರಿಂದ
ಬಹಳಷ್ಟು ಆಶೀರ್ವಾದಗಳು ಸಿಗುತ್ತವೆ. ಯಾವುದೇ ಆತ್ಮನನ್ನು ದುಃಖ-ಅಶಾಂತಿಯಿಂದ ಬಿಡಿಸುವುದರಿಂದ
ಬಹಳಷ್ಟು ಆಶೀರ್ವಾದಗಳು ಸಿಗುತ್ತದೆ ಮತ್ತು ಆಶೀರ್ವಾದ ಸಿಗುವುದರಿಂದ ಅತೀಂದ್ರಿಯ ಸುಖ, ಆಂತರಿಕ
ಖುಷಿಯ ಬಹಳ ಅನುಭವವಾಗುತ್ತದೆ - ಏಕೆ? ಏಕೆಂದರೆ ಖುಷಿಯನ್ನು ಹಂಚಿದಿರಲ್ಲವೆ. ಅಂದಾಗ ಖುಷಿಯನ್ನು
ಹಂಚುವುದರಿಂದ ಖುಷಿಯು ಹೆಚ್ಚುತ್ತದೆ, ಎಲ್ಲರೂ ಖುಷಿಯಾಗಿದ್ದೀರಾ? ಎಲ್ಲರೂ ಖುಷಿಯಾಗಿದ್ದೀರಾ ಎಂದು
ವಿಶೇಷವಾಗಿ ಬಾಪ್ದಾದ ಅತಿಥಿಗಳೊಂದಿಗೆ ಕೇಳುವುದಿಲ್ಲ, ಅಧಿಕಾರಿಗಳೊಂದಿಗೆ ಕೇಳುತ್ತೇವೆ. ತಮ್ಮನ್ನು
ಅತಿಥಿಯೆಂದು ತಿಳಿಯಬೇಡಿ, ಅಧಿಕಾರಿಗಳಾಗಿದ್ದೀರಿ ಅಂದಾಗ ಎಲ್ಲರೂ ಖುಷಿಯಾಗಿದ್ದೀರಾ? ಹಾ! ತಾವು
ಬರುವಂತಹ ಮಕ್ಕಳೊಂದಿಗೆ ಕೇಳುತ್ತೇವೆ - ಅತಿಥಿಗಳೆಂದು ಹೆಸರಿಗೆ ಮಾತ್ರವೇ ಹೇಳಲಾಗುತ್ತದೆ ಆದರೆ
ನೀವು ಅತಿಥಿಗಳಲ್ಲ, ಮಹಾನರಾಗಿ ಮಹಾನರನ್ನಾಗಿ ಮಾಡುವವರಾಗಿದ್ದೀರಿ. ಅಂದಾಗ ಎಲ್ಲರೂ
ಖುಷಿಯಾಗಿದ್ದೀರಾ? ಖುಷಿಯಾಗಿದ್ದರೆ ಕೈಯನ್ನು ಅಲುಗಾಡಿಸಿ. ಈಗಂತೂ ಖುಷಿಯಾಗಿದ್ದೀರಿ, ಹೋಗಿ ಏನು
ಮಾಡುವಿರಿ? ಖುಷಿಯನ್ನು ಹಂಚುತ್ತೀರಲ್ಲವೆ. ಎಲ್ಲರಿಗೂ ಹೆಚ್ಚಿನದದಾಗಿ ಖುಷಿಯನ್ನು ಹಂಚಿರಿ, ಎಷ್ಟು
ಹಂಚುತ್ತೀರೋ ಅಷ್ಟು ವೃದ್ಧಿಯಾಗುತ್ತದೆ - ಸರಿಯೇ? ಒಳ್ಳೆಯದು- ಎಲ್ಲರೂ ಚಪ್ಪಾಳೆಯನ್ನು ತಟ್ಟಿರಿ
(ಎಲ್ಲರೂ ಹೆಚ್ಚಿನದಾಗಿ ಚಪ್ಪಾಳೆ ತಟ್ಟಿದರು). ಹೇಗೆ ಈಗ ಎಲ್ಲರೂ ಚಪ್ಪಾಳೆಯನ್ನು ತಟ್ಟಿದಿರೋ
ಹಾಗೆಯೇ ಸದಾ ಖುಷಿಯ ಚಪ್ಪಾಳೆಯು ಯಾವಾಗಲೂ ತಾನಾಗಿಯೇ ಮೊಳಗುತ್ತಿರಲಿ.
ಬಾಪ್ದಾದಾ ಸದಾ ಶಿಕ್ಷಕಿ
ಸಹೋದರಿಯರಿಗೆ ತಿಳಿಸುತ್ತೇವೆ - ಟೀಚರ್ಸ್ ಎಂದರೆ ತಮ್ಮ ಫೀಚರ್ಸ್ (ಚಹರೆ) ನಿಂದ ಫ್ಯೂಚರ್ (ಭವಿಷ್ಯ)
ತೋರಿಸುವವರಾಗಿ. ಇಂತಹ ಟೀಚರ್ಸ್ ಆಗಿದ್ದೀರಲ್ಲವೆ! ತಮ್ಮನ್ನು ನೋಡಿ ಸ್ವರ್ಗದ ಸುಖದ ಅನುಭೂತಿಯಾಗಲಿ,
ಶಾಂತಿಯ ಅನುಭೂತಿಯಾಗಲಿ. ನಡೆಯುತ್ತಾ-ತಿರುಗಾಡುತ್ತಾ ಫರಿಶ್ತೆಗಳು ಕಂಡುಬರಲಿ. ಇಂತಹ ಟೀಚರ್ಸ್
ಆಗಿದ್ದೀರಲ್ಲವೆ. ಒಳ್ಳೆಯದು. ಪ್ರವೃತ್ತಿಯಲ್ಲಿರುವವರಿರಬಹುದು, ಸೇವೆಗೆ ನಿಮಿತ್ತರಾಗಿರಬಹುದು
ಆದರೆ ಎಲ್ಲರೂ ಬಾಪ್ದಾದಾರವರ ಸಮಾನರಾಗುವಂತಹ ನಿಶ್ಚಯಬುದ್ಧಿ ವಿಜಯಿಗಳಾಗಿದ್ದೀರಿ. ಒಳ್ಳೆಯದು.
ನಾಲ್ಕೂಕಡೆಯ ಸಾಕಾರ
ರೂಪದಲ್ಲಿ ಸಮ್ಮುಖದಲ್ಲಿ ಇರುವಂತಹವರಿಗೆ ಅಥವಾ ದೂರದಲ್ಲಿ ಕುಳಿತು ಹೃದಯಕ್ಕೆ ಹತ್ತಿರ
ಆಗಿರುವಂತಹವರಿಗೆ ಇಂತಹ ಸದಾ ಶ್ರೇಷ್ಠ ಭಾಗ್ಯವಾನ್ ಆತ್ಮಗಳಿಗೆ ಸದಾ ನಿಮಿತ್ತರಾಗಿ ನಿರ್ಮಾಣ
ಕಾರ್ಯ ಸಫಲ ಮಾಡುವಂತಹ ವಿಶೇಷ ಆತ್ಮಗಳಿಗೆ, ಸದಾ ತಂದೆಯ ಸಮಾನ ಆಗುವ ಉಮ್ಮಂಗ-ಉತ್ಸಾಹದಲ್ಲಿ
ಮುಂದುವರೆಯುವಂತಹ ಸಾಹಸವಂತ ಮಕ್ಕಳಿಗೆ, ಸದಾ ಪ್ರತಿ ಹೆಜ್ಜೆಯಲ್ಲಿ ಪದಮಗಳ ಸಂಪಾದನೆಯನ್ನು ಜಮಾ
ಮಾಡಿಕೊಳ್ಳುವಂತಹ ಪ್ರಪಂಚದಲ್ಲಿ ಬಹಳ-ಬಹಳ ಪದಮದಷ್ಟು ಧನವಂತರು, ಹಣತುಂಬಿರುವಂತಹ ಆತ್ಮಗಳಿಗೆ
ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಡಬಲ್ ವಿದೇಶಿ
ನಿಮಿತ್ತರಾಗಿರುವಂತಹ ದೊಡ್ಡ ಅಕ್ಕಂದಿರೊಂದಿಗೆ :
ಒಳ್ಳೆಯದು, ಸೇವೆಯ ಸಾಕ್ಷಿಯನ್ನು ಕೊಡುತ್ತಿದ್ದೀರಿ. ಇದರಿಂದಲೇ ಧ್ವನಿ ಹರಡುತ್ತದೆ. ಅನುಭವ
ಹೇಳುವುದರಿಂದ ಬೇರೆಯವರ ಅನುಭವವು ಹೆಚ್ಚಾಗುತ್ತದೆ. ಅಂದಾಗ ಬಾಪ್ದಾದಾ ಖುಷಿಯಾಗಿದ್ದಾರೆ,
ವಿದೇಶದಲ್ಲಿಯ ಸೇವೆಯಲ್ಲಿಯೂ ನಿಮಿತ್ತರಾಗುವಂತಹ ಒಳ್ಳೆಯ ಉಮ್ಮಂಗ-ಉತ್ಸಾಹದಿಂದ ಸೇವೆಯಲ್ಲಿ
ತತ್ಪರರಾಗಿದ್ದೀರಿ. ಈ ದೇಶದಿಂದಲೇ ಹೋದಿರಿ, ಆದರೆ ವಿದೇಶದವರ ಸೇವೆಗೆ ಹೀಗೆಯೇ ನಿಮಿತ್ತರಾಗಿ
ಅಲ್ಲಿ ಇರುವವರ ಹಾಗೆ ಮಾಡುತ್ತಿದ್ದೀರಿ. ತಮ್ಮವರೆಂಬ ಭಾವನೆ ತರಿಸಿದ್ದೀರಿ. ಮತ್ತೆ ಎಲ್ಲರೊಂದಿಗೂ
ಆ ಭಾವನೆ ಇದೆ. ಒಬ್ಬರೊಂದಿಗೆ ಅಲ್ಲ, ಲಂಡನ್ನವರ ಪ್ರತಿ ಅಥವಾ ಅಮೆರಿಕಾದವರ ಪ್ರತಿ ಅಲ್ಲ.
ಬೇಹದ್ದಿನ ಸೇವಾಧಾರಿಗಳಾಗಿದ್ದೀರಿ, ಜವಾಬ್ದಾರಿಯಂತೂ ವಿಶ್ವದ್ದಾಗಿದೆಯಲ್ಲವೇ ಅಂದಾಗ ಬಾಪ್ದಾದಾ
ಶುಭಾಶಯಗಳನ್ನು ಕೊಡುತ್ತಿದ್ದಾರೆ. ಮಾಡುತ್ತಿದ್ದೀರಿ, ಮುಂದೆ ಇನ್ನೂ ಚೆನ್ನಾಗಿ ಹಾರುತ್ತೀರಿ
ಮತ್ತು ಹಾರಿಸುತ್ತಾ ಇರುತ್ತೀರಿ.
ವೆೃಯಕ್ತಿಕ ಬೇಟಿ:
ಎಲ್ಲರೂ ಹೋಲಿ ಮತ್ತು ಹ್ಯಾಪಿ ಹಂಸಗಳಾಗಿದ್ದೀರಲ್ಲವೇ. ಹಂಸದ ಕೆಲಸ ಏನಾಗಿರುತ್ತದೆ? ಹಂಸದಲ್ಲಿ
ನಿರ್ಣಯ ಶಕ್ತಿ ಬಹಳಷ್ಟು ಇರುತ್ತದೆ. ಅಂದಾಗ ತಾವು ಪವಿತ್ರ ಸಂತೋಷವಾಗಿರುವ ಹಂಸಗಳು. ವ್ಯರ್ಥವನ್ನು
ಸಮಾಪ್ತಿ ಮಾಡುವಂತಹ ಮತ್ತು ಸಮರ್ಥರಾಗಿ ಸಮರ್ಥರನ್ನಾಗಿ ಮಾಡುವಂತಹರಾಗಿದ್ದೀರಿ. ಎಲ್ಲರೂ
ಸಂತೋಷವಾಗಿದ್ದೀರಲ್ಲವೇ? ಸದಾ ಕಾಲದ ಖುಷಿ ಇದೆಯಲ್ಲವೇ? ಸದಾ-ಸದಾ ಹ್ಯಾಪಿ (ಖುಷಿಯಾಗಿರಿ) ಈಗ-ಆಗ
ದುಃಖವನ್ನು ಬರಲು ಬಿಡಬೇಡಿ. ದುಃಖಕ್ಕೆ ವಿಚ್ಚೇದನೆ ಕೊಟ್ಟುಬಿಡಿ. ಆಗಷ್ಟೇ ಬೇರೆಯವರ ದುಃಖವನ್ನು
ದೂರ ಮಾಡಲು ಸಾಧ್ಯವಲ್ಲವೇ. ಅಂದಾಗ ಸುಖಿಗಳಾಗಿ ಮತ್ತು ಸುಖವನ್ನು ಕೊಡಿ. ಈ ಕೆಲಸವನ್ನು
ಮಾಡುತ್ತೀರಲ್ಲವೇ! ಇಲ್ಲಿಂದ ಯಾವ ಸುಖ ಸಿಕ್ಕಿದೆಯೋ ಅದನ್ನು ಜಮಾ ಮಾಡಿಕೊಳ್ಳಿ. ಎಂದಾದರೂ ಏನಾದರೂ
- ಬಾಬಾ ಮಧುರ ಬಾಬಾ, ದುಃಖವನ್ನು ತೆಗೆದುಕೊಂಡುಬಿಡಿ ಎಂದು ಹೇಳಿ, ತಮ್ಮ ಹತ್ತಿರ ಇಟ್ಟುಕೊಳ್ಳಬೇಡಿ.
ಕೆಟ್ಟ ವಸ್ತುವನ್ನು ಇಟ್ಟುಕೊಳ್ಳಲಾಗುತ್ತದೆಯೇನು? ದುಃಖವಂತೂ ಕೊಳಕಾಗಿದೆಯಲ್ಲವೇ! ಅಂದಾಗ
ದುಃಖವನ್ನು ತೆಗೆದು ಹಾಕಿ ಸುಖಿಯಾಗಿರಿ. ಅಂದಾಗ ಇದಾಗಿದೆ ಸುಖಿಯಾಗಿರುವವವರ ಗ್ರೂಪ್ ಮತ್ತು
ಸುಖದಾಯಿ ಗ್ರೂಪ್. ನಡೆಯುತ್ತಾ-ತಿರುಗಾಡುತ್ತಾ ಸುಖ ಕೊಡುತ್ತೀರಿ. ತಮಗೆ ಎಷ್ಟೊಂದು ಆಶೀರ್ವಾದ
ಸಿಗುತ್ತದೆ. ಅಂದಾಗ ಈ ಗ್ರೂಪ್ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ (ಸ್ವಯಂ) ಖುಷಿಯಾಗಿದ್ದೀರಲ್ಲವೇ!
ಈಗ ಮುಗುಳ್ನಗುತ್ತಾ ಇರಿ. ಮುಗುಳ್ನಗಿಸುತ್ತಾ ಇರಿ. ಖುಷಿಯಲ್ಲಿ ನರ್ತಿಸಿ.
ವರದಾನ:
ನೆನಪು ಮತ್ತು
ಸೇವೆಯ ಬ್ಯಾಲೆನ್ಸ್ ಮೂಲಕ ಏರುವಕಲೆಯ ಅನುಭವ ಮಾಡುವಂತಹ ರಾಜ್ಯ ಅಧಿಕಾರಿ ಭವ
ನೆನಪು ಮತ್ತು ಸೇವೆಯ
ಬ್ಯಾಲೆನ್ಸ್ ಇದ್ದಾಗ ಪ್ರತಿ ಹೆಜ್ಜೆಯಲ್ಲಿ ಏರುವಕಲೆಯ ಅನುಭವ ಮಾಡುತ್ತಿರುತ್ತಾರೆ. ಪ್ರತಿ
ಸಂಕಲ್ಪದಲ್ಲಿ ಸೇವೆಯಿದ್ದಲ್ಲಿ ವ್ಯರ್ಥದಿಂದ ಬಿಡುಗಡೆಯಾಗುವಿರಿ. ಸೇವೆ ಜೀವನದ ಒಂದು
ಅಂಗವಾಗಿಬಿಡಬೇಕು. ಯಾವ ರೀತಿ ಶರೀರಕ್ಕೆ ಎಲ್ಲಾ ಅಂಗಗಳೂ ಅವಶ್ಯಕವಿದೆ ಅದೇ ರೀತಿ ಬ್ರಾಹ್ಮಣ
ಜೀವನದ ವಿಶೇಷ ಅಂಗ ಸೇವೆಯಾಗಿದೆ. ಬಹಳ ಸೇವೆಯ ಅವಕಾಶ ಸಿಗುವುದು. ಸ್ಥಾನ ಸಿಗುವುದು. ಜೊತೆ
ಸಿಗುವುದು ಇದೂ ಸಹ ಭಾಗ್ಯದ ನಿಶಾನಿಯಾಗಿದೆ. ಇಂತಹ ಸೇವೆಯ ಸುವರ್ಣ ಅವಕಾಶ ತೆಗೆದುಕೊಳ್ಳುವವರೇ
ರಾಜ್ಯ ಅಧಿಕಾರಿಯಾಗುತ್ತಾರೆ.
ಸ್ಲೋಗನ್:
ಪರಮಾತ್ಮನ
ಪ್ರೀತಿಯ ಪಾಲನೆಯ ಸ್ವರೂಪವಾಗಿದೆ- ಸಹಯೋಗಿ ಜೀವನ.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ಪವಿತ್ರತೆ ನೀವು ಮಕ್ಕಳ
ಎಲ್ಲದಕ್ಕಿಂತ ದೊಡ್ಡಕ್ಕಿಂತ ದೊಡ್ಡ ಶೃಂಗಾರವಾಗಿದೆ, ಸಂಪೂರ್ಣ ಪವಿತ್ರತೆ ನಿಮ್ಮ ಜೀವನದ
ಎಲ್ಲದಕ್ಕಿಂತ ದೊಡ್ಡಕ್ಕಿಂತ ದೊಡ್ಡ ಆಸ್ತಿಯಾಗಿದೆ, ಘನತೆ ಮತ್ತು ವ್ಯಕ್ತಿತ್ವವಾಗಿದೆ, ಇದನ್ನು
ಧಾರಣೆ ಮಾಡಿ ಸದಾ ತಯಾರಾಗಿರಿ(ಎವರ್ ರೆಡಿ) ಆಗ ಪ್ರಕೃತಿಯು ತನ್ನ ಕೆಲಸ ಆರಂಭ ಮಾಡುವುದು.
ಪವಿತ್ರತೆಯ ವ್ಯಕ್ತಿತ್ವದಿಂದ ಸಂಪನ್ನ ರಾಯಲ್ ಆತ್ಮರನ್ನು ಸಭ್ಯತೆಯ ದೇವಿ ಎಂದು ಹೇಳಲಾಗುತ್ತದೆ.