04.08.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ನಿಮ್ಮನ್ನು ಹೂಗಳ ರಾಜಾನನ್ನಾಗಿ ಮಾಡಲು ಬಂದಿದ್ದಾರೆ ಆದ್ದರಿಂದ ವಿಕಾರಗಳ ಯಾವುದೇ ದುರ್ಗಂಧವಿರಬಾರದು.”

ಪ್ರಶ್ನೆ:
ವಿಕಾರಗಳ ಅಂಶವನ್ನು ಸಮಾಪ್ತಿ ಮಾಡಿಕೊಳ್ಳಲು ಯಾವ ಪುರುಷಾರ್ಥ ಮಾಡಬೇಕಾಗಿದೆ?

ಉತ್ತರ:
ನಿರಂತರ ಅಂತರ್ಮುಖಿಯಾಗಿರುವ ಪುರುಷಾರ್ಥ ಮಾಡಿ. ಅಂತರ್ಮುಖಿ ಎಂದರೆ ಸೆಕೆಂಡಿನಲ್ಲಿ ಶರೀರದಿಂದ ಡಿಟ್ಯಾಚ್ (ಭಿನ್ನ). ಈ ಪ್ರಪಂಚದ್ದೆಲ್ಲವೂ ಸಂಪೂರ್ಣವಾಗಿ ಮರೆತು ಹೋಗಲಿ. ಒಂದು ಸೆಕೆಂಡಿನಲ್ಲಿ ಮೇಲೆ ಹೋಗುವುದು ಮತ್ತು ಬರುವುದು - ಈ ಅಭ್ಯಾಸದಿಂದ ವಿಕಾರಗಳ ಅಂಶವು ಸಮಾಪ್ತಿಯಾಗಿ ಬಿಡುತ್ತದೆ. ಕರ್ಮವನ್ನು ಮಾಡುತ್ತಾ-ಮಾಡುತ್ತಾ ಮಧ್ಯ-ಮಧ್ಯದಲ್ಲಿ ಅಂತರ್ಮುಖಿಯಾಗಿ ಬಿಡಿ. ಈ ರೀತಿಯೆನಿಸಲಿ - ಹೇಗೆ ಸಂಪೂರ್ಣ ಸನ್ನಾಟ ಶಾಂತಿಯು ಹರಡಲಿ. ಯಾವುದೇ ಶಬ್ಧ ವಿಲ್ಲ. ಈ ಸೃಷ್ಟಿಯು ಹೇಗೆ ಇಲ್ಲವೇ ಇಲ್ಲವೆನಿಸಲಿ.

ಓಂ ಶಾಂತಿ.
ಇಲ್ಲಿ ಪ್ರತಿಯೊಬ್ಬರನ್ನೂ ಏಕೆ ಕುಳ್ಳರಿಸಲಾಗುತ್ತದೆಯೆಂದರೆ ಅಶರೀರಿಯಾಗಿ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಿ ಮತ್ತು ಜೊತೆ ಜೊತೆಗೆ ಸೃಷ್ಟಿ ಚಕ್ರವನ್ನೂ ಸಹ ನೆನಪು ಮಾಡಿ. ಮನುಷ್ಯರು 84 ಜನ್ಮಗಳ ಚಕ್ರವನ್ನೂ ತಿಳಿದುಕೊಂಡಿಲ್ಲ, ತಿಳಿದುಕೊಳ್ಳುವುದೂ ಇಲ್ಲ. ಯಾರು 84 ಜನ್ಮಗಳ ಚಕ್ರವನ್ನು ಸುತ್ತುವರೋ ಅವರೇ ತಿಳಿದುಕೊಳ್ಳಲು ಬರುತ್ತಾರೆ. ನೀವು ಇದನ್ನೇ ನೆನಪು ಮಾಡಬೇಕು, ಇದಕ್ಕೆ ಸ್ವದರ್ಶನ ಚಕ್ರವೆಂದು ಹೇಳಲಾಗುತ್ತದೆ. ಇದರಿಂದ ಆಸುರೀ ಸಂಕಲ್ಪಗಳು ಸಮಾಪ್ತಿಯಾಗುತ್ತವೆ. ಯಾರಾದರೂ ಅಸುರರು ಕುಳಿತಿದ್ದಾರೆಂದರೆ ಅವರ ತಲೆಯು ಕತ್ತರಿಸಲ್ಪಡುತ್ತದೆಯೆಂದಲ್ಲ. ಮನುಷ್ಯರು ಸ್ವದರ್ಶನ ಚಕ್ರದ ಅರ್ಥವನ್ನೇ ತಿಳಿದುಕೊಂಡಿಲ್ಲ. ಈ ಜ್ಞಾನವು ನೀವು ಮಕ್ಕಳಿಗೆ ಇಲ್ಲಿಯೇ ಸಿಗುತ್ತದೆ. ಕಮಲ ಪುಷ್ಫ ಸಮಾನ ಗೃಹಸ್ಥ ವ್ಯವಹಾರದಲ್ಲಿದ್ದು ಪವಿತ್ರರಾಗಿ. ಭಗವಾನುವಾಚವಿದೆಯಲ್ಲವೆ. ಈ ಒಂದು ಜನ್ಮದಲ್ಲಿ ಪವಿತ್ರರಾಗುವುದರಿಂದ ಭವಿಷ್ಯ 21 ಜನ್ಮಗಳವರೆಗೆ ನೀವು ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ಸತ್ಯಯುಗಕ್ಕೆ ಶಿವಾಲಯವೆಂದು ಹೇಳಲಾಗುತ್ತದೆ. ಕಲಿಯುಗವು ವೇಶ್ಯಾಲಯವಾಗಿದೆ. ಈ ಪ್ರಪಂಚವು ಬದಲಾಗುತ್ತದೆ, ಇದು ಭಾರತದ ಮಾತೇ ಆಗಿದೆ. ಅನ್ಯರ ಮಾತುಗಳಲ್ಲಿ ಹೋಗಲೇಬಾರದು. ಪ್ರಾಣಿ, ಪಕ್ಷಿಗಳದು ಏನಾಗುವುದು? ಅನ್ಯ ಧರ್ಮದವರದು ಮುಂದೆ ಏನಾಗುವುದು ಎಂದು ಯಾರಾದರೂ ಕೇಳಿದರೆ ಹೇಳಿ, ಮೊದಲು ತಮ್ಮ ಬಗ್ಗೆ ತಿಳಿದುಕೊಳ್ಳಿ ನಂತರ ಅನ್ಯರ ಮಾತು. ಭಾರತವಾಸಿಗಳೇ ತಮ್ಮ ಧರ್ಮವನ್ನು ಮರೆತು ದುಃಖಿಯಾಗಿದ್ದಾರೆ, ಭಾರತದಲ್ಲಿಯೇ ನೀವು ಮಾತಾಪಿತಾ..... ಎಂದು ಕರೆಯುತ್ತಾರೆ. ವಿದೇಶದಲ್ಲಿ ಮಾತಾಪಿತಾ ಎಂಬ ಶಬ್ಧವನ್ನು ಹೇಳುವುದಿಲ್ಲ. ಅವರು ಕೇವಲ ಗಾಡ್ ಫಾದರ್ ಎಂದು ಹೇಳುತ್ತಾರೆ. ಅವಶ್ಯವಾಗಿ ಭಾರತದಲ್ಲಿಯೇ ಅಪಾರ ಸುಖವಿತ್ತು. ಭಾರತವು ಸ್ವರ್ಗವಾಗಿತ್ತು - ಇದನ್ನೂ ನೀವು ತಿಳಿದುಕೊಂಡಿದ್ದೀರಿ. ತಂದೆಯು ಬಂದು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ. ತಂದೆಯು ಹೂದೋಟದ ಮಾಲಿಯೆಂದು ಹೇಳುತ್ತಾರೆ. ತಂದೆಯು ಬಂದು ಮುಳ್ಳುಗಳನ್ನು ಹೂಗಳನ್ನಾಗಿ ಮಾಡಿ ಎಂದು ಕರೆಯುತ್ತಾರೆ ಅಂದಾಗ ತಂದೆಯು ಹೂದೋಟವನ್ನಾಗಿ ಮಾಡುತ್ತಾರೆ ಮತ್ತೆ ಮಾಯೆಯು ಮುಳ್ಳುಗಳ ಕಾಡನ್ನಾಗಿ ಮಾಡುತ್ತದೆ. ಮನುಷ್ಯರಂತೂ ಈಶ್ವರನೇ ನಿನ್ನ ಮಾಯೆಯು ಬಹಳ ಪ್ರಬಲವಾಗಿದೆ ಎಂದು ಹೇಳುತ್ತಾರೆ. ಈಶ್ವರನನ್ನಾಗಲಿ, ಮಾಯೆಯನ್ನಾಗಲಿ ತಿಳಿದುಕೊಂಡಿಲ್ಲ. ಯಾರು ಯಾವುದೋ ಶಬ್ಧವನ್ನು ಹೇಳಿದರೆ ಸಾಕು ಅದನ್ನೇ ಪುನರಾವರ್ತಿಸುತ್ತಿರುತ್ತಾರೆ, ಅರ್ಥವೇನೂ ಇಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇದು ರಾಮ ರಾಜ್ಯ ಮತ್ತು ರಾವಣ ರಾಜ್ಯದ ಆಟವಾಗಿದೆ. ರಾಮ ರಾಜ್ಯದಲ್ಲಿ ಸುಖವು, ರಾವಣ ರಾಜ್ಯದಲ್ಲಿ ದುಃಖವು ಇದೆ, ಇದು ಇಲ್ಲಿಯದೇ ಮಾತಾಗಿದೆ. ಇದೇನೂ ಪ್ರಭುವಿನ ಮಾಯೆಯಲ್ಲ. ಪಂಚ ವಿಕಾರಗಳಿಗೆ ಮಾಯೆಯೆಂದು ಹೇಳಲಾಗುತ್ತದೆ, ಇದಕ್ಕೆ ರಾವಣನೆಂದೂ ಹೇಳುತ್ತಾರೆ ಬಾಕಿ ಮನುಷ್ಯರಂತೂ ಪುನರ್ಜನ್ಮವನ್ನು ತೆಗೆದುಕೊಂಡು 84ರ ಚಕ್ರದಲ್ಲಿ ಬರುತ್ತಾರೆ. ಸತೋಗುಣಿಯಿಂದ ತಮೋಪ್ರಧಾನರಾಗುತ್ತಾರೆ. ಈ ಸಮಯದಲ್ಲಿ ಎಲ್ಲರೂ ವಿಕಾರದಿಂದಲೇ ಜನಿಸುತ್ತಾರೆ ಆದ್ದರಿಂದ ವಿಕಾರಿಗಳೆಂದು ಹೇಳಲಾಗುತ್ತದೆ. ವಿಕಾರೀ ಪ್ರಪಂಚವೆಂದು ಹೆಸರೂ ಇದೆ, ಮತ್ತೆ ನಿರ್ವಿಕಾರಿ ಪ್ರಪಂಚ ಅರ್ಥಾತ್ ಹಳೆಯ ಪ್ರಪಂಚದಿಂದ ಹೇಗೆ ಹೊಸದಾಗುತ್ತದೆ ಎಂಬುದು ತಿಳಿದುಕೊಳ್ಳುವ ಸಾಮಾನ್ಯ ಮಾತಾಗಿದೆ. ಹೊಸ ಪ್ರಪಂಚದಲ್ಲಿ ಮೊದಲು ಸ್ವರ್ಗವಿತ್ತು. ಮಕ್ಕಳಿಗೆ ಗೊತ್ತಿದೆ - ಸ್ವರ್ಗದ ಸ್ಥಾಪನೆ ಮಾಡುವವರು ಪರಮಪಿತ ಪರಮಾತ್ಮನಾಗಿದ್ದಾರೆ. ಅದರಲ್ಲಿ ಅಪಾರ ಸುಖವಿತ್ತು. ಜ್ಞಾನದಿಂದ ದಿನ, ಭಕ್ತಿಯಿಂದ ರಾತ್ರಿಯು ಹೇಗಾಗುತ್ತದೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಅದಕ್ಕಾಗಿ ತಿಳಿಸಿ, ಬ್ರಹ್ಮಾ ಹಾಗೂ ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರ ದಿನ ಮತ್ತೆ ಅದೇ ಬ್ರಾಹ್ಮಣರ ರಾತ್ರಿ. ದಿನ ಮತ್ತು ರಾತ್ರಿಯು ಇಲ್ಲಿಯೇ ಆಗುತ್ತದೆ, ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಪ್ರಜಾಪಿತ ಬ್ರಹ್ಮನ ರಾತ್ರಿಯೆಂದರೆ ಅವಶ್ಯವಾಗಿ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಿಗೂ ರಾತ್ರಿಯಾಗುವುದು. ಅರ್ಧ ಕಲ್ಪ ದಿನ, ಅರ್ಧ ಕಲ್ಪ ರಾತ್ರಿ.

ಈಗ ತಂದೆಯು ನಿರ್ವಿಕಾರಿ ಪ್ರಪಂಚವನ್ನಾಗಿ ಮಾಡಲು ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕಾಮ ಮಹಾಶತ್ರುವಾಗಿದೆ, ಅದರ ಮೇಲೆ ಜಯ ಗಳಿಸಿರಿ, ಸಂಪೂರ್ಣ ನಿರ್ವಿಕಾರಿ ಪವಿತ್ರರಾಗಬೇಕಾಗಿದೆ. ಅಪವಿತ್ರರಾಗುವುದರಿಂದಲೂ ನೀವು ಬಹಳಷ್ಟು ಪಾಪಗಳನ್ನು ಮಾಡಿದ್ದೀರಿ, ಇದು ಪಾಪಾತ್ಮರ ಪ್ರಪಂಚವಾಗಿದೆ. ಅವಶ್ಯವಾಗಿ ಶರೀರದ ಜೊತೆಯೇ ಪಾಪ ಮಾಡುತ್ತಾರೆ ಆದ್ದರಿಂದ ಪಾಪಾತ್ಮರಾಗುತ್ತಾರೆ. ದೇವತೆಗಳ ಪವಿತ್ರ ಪ್ರಪಂಚದಲ್ಲಿ ಪಾಪವಾಗುವುದಿಲ್ಲ. ನೀವಿಲ್ಲಿ ಶ್ರೀಮತದಿಂದ ಶ್ರೇಷ್ಠ ಪುಣ್ಯಾತ್ಮರಾಗುತ್ತಿದ್ದೀರಿ. ಶ್ರೀ ಶ್ರೀ 108ರ ಮಾಲೆಯೂ ಇದೆ. ಅದರಲ್ಲಿ ಮೇಲೆ ಹೂವಿದೆ, ಅದಕ್ಕೆ ಶಿವನೆಂದು ಹೇಳುತ್ತಾರೆ. ಅದು ನಿರಾಕಾರಿ ಹೂವಾಗಿದೆ ಮತ್ತೆ ಸಾಕಾರದಲ್ಲಿ ಸ್ತ್ರೀ-ಪುರುಷನಿದ್ದಾರೆ, ಅವರ ಮಾಲೆಯು ಮಾಡಲ್ಪಟ್ಟಿದೆ. ಶಿವ ತಂದೆಯ ಮೂಲಕ ಇವರು (ಬ್ರಹ್ಮಾ-ಸರಸ್ವತಿ) ಪೂಜೆ ಮತ್ತು ಸ್ಮರಣೆಗೆ ಯೋಗ್ಯರಾಗುತ್ತಾರೆ. ತಂದೆಯು ನಮ್ಮನ್ನು ವಿಜಯ ಮಾಲೆಯ ಮಣಿಯನ್ನಾಗಿ ಮಾಡುತ್ತಾರೆ, ನಾವು ವಿಶ್ವದ ಮೇಲೆ ನೆನಪಿನ ಬಲದಿಂದ ವಿಜಯವನ್ನು ಪಡೆಯುತ್ತಿದ್ದೇವೆ. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ ಮತ್ತೆ ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ಅವರಾದರೆ ತಿಳಿದುಕೊಳ್ಳದೆ ಪ್ರಭು ನಿನ್ನ ಮಾಯೆಯು ಪ್ರಬಲವಾಗಿದೆ ಎಂದು ಹೇಳಿ ಬಿಡುತ್ತಾರೆ. ಯಾರ ಬಳಿಯಾದರೂ ಹಣವಿದೆಯೆಂದರೆ ಇವರ ಬಳಿ ಬಹಳ ಮಾಯೆಯಿದೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಪಂಚ ವಿಕಾರಿಗಳಿಗೇ ಮಾಯೆಯೆಂದು ಹೇಳಲಾಗುತ್ತದೆ, ಇದಕ್ಕೆ ರಾವಣನೆಂದೂ ಹೇಳಲಾಗುತ್ತದೆ. ಇದಕ್ಕೆ ಅವರು 10 ತಲೆಗಳ ರಾವಣನ ಚಿತ್ರವನ್ನು ಮಾಡಿ ಬಿಟ್ಟಿದ್ದಾರೆ. ಈಗ ಚಿತ್ರವಿರುವುದರಿಂದ ತಿಳಿಸಲಾಗುತ್ತದೆ. ಹೇಗೆ ಅಂಗಧನ ಬಗ್ಗೆಯೂ ತೋರಿಸುತ್ತಾರೆ, ಅಂಗಧನನನ್ನು ರಾವಣನು ಅಲುಗಾಡಿಸಿದನು ಆದರೆ ಅಲುಗಾಡಿಸಲು ಸಾಧ್ಯವಾಗಲೇ ಇಲ್ಲ. ಹೀಗೆ ದೃಷ್ಟಾಂತವನ್ನು ಮಾಡಿ ಬಿಟ್ಟಿದ್ದಾರೆ ಆದರೆ ಇಂತಹ ಯಾವುದೇ ವಸ್ತುವಿಲ್ಲ. ತಂದೆಯು ತಿಳಿಸುತ್ತಾರೆ - ಮಾಯೆಯು ನಿಮ್ಮನ್ನು ಎಷ್ಟಾದರೂ ಅಲುಗಾಡಿಸಲಿ ಆದರೆ ನೀವು ಸ್ಥಿರವಾಗಿರಿ. ರಾವಣ, ಹನುಮಂತ, ಅಂಗದನ ಇತ್ಯಾದಿಯೆಲ್ಲಾ ದೃಷ್ಟಾಂತಗಳನ್ನು ಮಾಡಿ ಬಿಟ್ಟಿದ್ದಾರೆ. ಇವೆಲ್ಲದರ ಅರ್ಥವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಭ್ರಮರಿಯ ಉದಾಹರಣೆಯೂ ಇದೆ. ಭ್ರಮರಿ ಮತ್ತು ಬ್ರಾಹ್ಮಣಿ ರಾಶಿಯು ಸೇರುತ್ತದೆ. ನೀವು ಪ್ರಯೋಜನವಿಲ್ಲದ ಕೀಟಗಳಿಗೆ ಜ್ಞಾನ-ಯೋಗದ ಭೂ ಭೂ ಮಾಡಿ ಪತಿತರಿಂದ ಪಾವನರನ್ನಾಗಿ ಮಾಡುತ್ತೀರಿ. ತಂದೆಯನ್ನು ನೆನಪು ಮಾಡುವುದರಿಂದ ಸತೋಪ್ರಧಾನರಾಗುತ್ತೀರಿ. ಆಮೆಯ ದೃಷ್ಟಾಂತವೂ ಇದೆ. ಆಮೆಯು ತನ್ನ ಎಲ್ಲಾ ಇಂದ್ರಿಯಗಳನ್ನು ಸಂಕುಚಿತಗೊಳಿಸಿ ಅಂತರ್ಮುಖಿಯಾಗಿ ಕುಳಿತು ಬಿಡುತ್ತದೆ. ನಿಮಗೂ ಸಹ ತಂದೆಯು ತಿಳಿಸುತ್ತಾರೆ - ಭಲೆ ಕರ್ಮ ಮಾಡಿ, ಮತ್ತೆ ಅಂತರ್ಮುಖಿಯಾಗಿ ಬಿಡಿ. ಹೇಗೆ ಈ ಸೃಷ್ಟಿಯು ಇಲ್ಲವೇ ಇಲ್ಲವೆನಿಸಲಿ. ಅಲುಗಾಟವೇ ನಿಂತು ಹೋಗುತ್ತದೆ. ಭಕ್ತಿಮಾರ್ಗದಲ್ಲಂತೂ ಬಾಹರ್ಮುಖಿಯಾಗಿ ಬಿಡುತ್ತಾರೆ. ಗೀತೆಯನ್ನು ಹಾಡುವುದು, ಇದು, ಅದು ಎಷ್ಟೊಂದು ಚಂಚಲತೆ, ಎಷ್ಟೊಂದು ಖರ್ಚಾಗುತ್ತದೆ. ಎಷ್ಟು ಮೇಳಗಳು ಸೇರುತ್ತವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಇವೆಲ್ಲವನ್ನೂ ಬಿಟ್ಟು ಅಂತರ್ಮುಖಿಯಾಗಿ ಹೇಗೆ ಈ ಸೃಷ್ಟಿಯು ಇಲ್ಲವೇ ಇಲ್ಲ. ತಮ್ಮನ್ನು ನೋಡಿಕೊಳ್ಳಿ, ನಾನು ಯೋಗ್ಯನಾಗಿದ್ದೇನೆಯೇ? ಯಾವುದೇ ವಿಕಾರವು ಸತಾಯಿಸುತ್ತಿಲ್ಲವೆ? ನಾನು ತಂದೆಯನ್ನು ನೆನಪು ಮಾಡುತ್ತೇನೆಯೇ? ಯಾವ ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅಂತಹ ತಂದೆಯನ್ನು ದಿನ-ರಾತ್ರಿ ನೆನಪು ಮಾಡಬೇಕು. ನಾವಾತ್ಮರಾಗಿದ್ದೇವೆ, ಅವರು ನಮ್ಮ ತಂದೆಯಾಗಿದ್ದಾರೆ. ನಾವೀಗ ಹೊಸ ಪ್ರಪಂಚದ ಹೂಗಳಾಗುತ್ತಿದ್ದೇವೆ ಎಂಬುದೇ ಒಳಗೆ ವಿಚಾರ ನಡೆಯುತ್ತಿರಲಿ. ಎಕ್ಕದ ಅಥವಾ ಕಣಗಿಲೆ ಹೂವಾಗಬಾರದು. ನಾವಂತೂ ಒಮ್ಮೆಲೆ ರಾಜಾಹೂ ಅರ್ಥಾತ್ ಸುಗಂಧಭರಿತ ಹೂಗಳಾಗಬೇಕಾಗಿದೆ. ಯಾವುದೇ ದುರ್ಗಂಧವಿರಬಾರದು. ಕೆಟ್ಟ ಸಂಕಲ್ಪಗಳೆಲ್ಲವೂ ಹೊರಟು ಹೋಗಲಿ. ಮಾಯೆಯ ಬಿರುಗಾಳಿಗಳು ಬೀಳಿಸಲು ಬಹಳಷ್ಟು ಬರುತ್ತವೆ ಆದರೆ ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮ ಮಾಡಬಾರದು. ಹೀಗೀಗೆ ತಮ್ಮನ್ನು ಪಕ್ಕಾ ಮಾಡಿಕೊಳ್ಳಬೇಕು ಮತ್ತು ತಮ್ಮನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಶರೀರ ನಿರ್ವಹಣೆಗಾಗಿ ಭಲೆ ಕರ್ಮವನ್ನೂ ಮಾಡಿ ಅದರಿಂದಲೂ ನೀವು ಸಮಯವನ್ನು ತೆಗೆಯಬಹುದು. ಭೋಜನವನ್ನು ಸ್ವೀಕರಿಸುವ ಸಮಯದಲ್ಲಿಯೂ ತಂದೆಯ ಮಹಿಮೆ ಮಾಡುತ್ತಾ ಇರಿ. ತಂದೆಯನ್ನು ನೆನಪು ಮಾಡಿ ಸೇವಿಸುವುದರಿಂದ ಭೋಜನವು ಪವಿತ್ರವಾಗಿ ಬಿಡುವುದು. ಯಾವಾಗ ತಂದೆಯನ್ನು ನಿರಂತರ ನೆನಪು ಮಾಡುವಿರೋ ಆಗ ಆ ನೆನಪಿನಿಂದಲೇ ಬಹಳ ಜನ್ಮಗಳ ಪಾಪವು ತುಂಡಾಗುತ್ತದೆ ಮತ್ತು ನೀವು ಸತೋಪ್ರಧಾನರಾಗುತ್ತೀರಿ. ನೋಡಿಕೊಳ್ಳಿ, ನಾನು ಎಷ್ಟು ಸತ್ಯ ಚಿನ್ನವಾಗಿದ್ದೇನೆ? ಇಂದು ಎಷ್ಟು ಗಂಟೆಗಳ ಸಮಯ ನೆನಪಿನಲ್ಲಿದ್ದೆನು? ನೆನ್ನೆಯ ದಿನ ಮೂರು ಗಂಟೆ ನೆನಪಿನಲ್ಲಿದ್ದೆನು, ಇಂದು ಎರಡು ಗಂಟೆ ನೆನಪಿನಲ್ಲಿದ್ದೆನು ಎಂದರೆ ಇಂದು ನಷ್ಟವಾಯಿತೆಂದರ್ಥ. ಏರಿಳಿತವಾಗುತ್ತಾ ಇರುವುದು. ಹೇಗೆ ಯಾತ್ರೆಗೆ ಹೋಗುತ್ತಾರೆಂದರೆ ಕೆಲವೊಮ್ಮೆ ಹಳ್ಳ, ಕೆಲವೊಮ್ಮೆ ದಿಣ್ಣೆಯಿರುತ್ತದೆ. ನಿಮ್ಮ ಸ್ಥಿತಿಯೂ ಸಹ ಏರಿಳಿತವಾಗುತ್ತಿರುವುದು ಆದ್ದರಿಂದ ತಮ್ಮ ಖಾತೆಯನ್ನು ನೋಡಿಕೊಳ್ಳಬೇಕಾಗಿದೆ. ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಭಗವಾನುವಾಚವಿದೆ ಅಂದಾಗ ಅವಶ್ಯವಾಗಿ ಮಕ್ಕಳಿಗೇ ಓದಿಸುತ್ತಾರೆ. ಇಡೀ ಪ್ರಪಂಚಕ್ಕೆ ಏಕೆ ಓದಿಸುತ್ತಾರೆ? ಈಗ ಭಗವಂತನೆಂದು ಯಾರಿಗೆ ಹೇಳುವುದು? ಕೃಷ್ಣನಂತೂ ಶರೀರಧಾರಿಯಾಗಿದ್ದಾನೆ, ಭಗವಂತನೆಂದು ನಿರಾಕಾರ ಪರಮಪಿತ ಪರಮಾತ್ಮನಿಗೇ ಹೇಳಲಾಗುತ್ತದೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಬ್ರಹ್ಮಾನ ವೃದ್ಧ ತನುವಿನದೂ ಸಹ ಗಾಯನವಿದೆ. ಬಿಳಿಯ ದಾಡಿ, ಮೀಸೆಗಳಂತೂ ವೃದ್ಧರಿಗೇ ಇರುತ್ತದೆಯಲ್ಲವೆ. ಅವಶ್ಯವಾಗಿ ಅನುಭವೀ ರಥವೇ ಬೇಕಾಗಿದೆ. ಚಿಕ್ಕರಥದಲ್ಲಿ ಪ್ರವೇಶ ಮಾಡುವರೇ? ತಾವೇ ಹೇಳುತ್ತಾರೆ - ಮಕ್ಕಳೇ, ನನ್ನನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಸುಪ್ರೀಂ ಗಾಡ್ ಫಾದರ್ ಅಥವಾ ಪರಮ ಆತ್ಮನಾಗಿದ್ದಾರೆ. ನೀವೂ ಸಹ 100% ಪವಿತ್ರರಾಗಿದ್ದಿರಿ, ಈಗ 100% ಅಪವಿತ್ರರಾಗಿದ್ದೀರಿ. ಸತ್ಯಯುಗದಲ್ಲಿ 100% ಪವಿತ್ರತೆಯಿದ್ದಾಗ ಸುಖ ಮತ್ತು ಶಾಂತಿಯೂ ಇತ್ತು. ಮುಖ್ಯವಾದುದು ಪವಿತ್ರತೆಯಾಗಿದೆ. ನೀವೂ ಸಹ ನೋಡುತ್ತೀರಿ - ಪವಿತ್ರರಿಗೆ ಅಪವಿತ್ರರು ಹೋಗಿ ತಲೆ ಬಾಗುತ್ತಾರೆ, ಅವರ ಮಹಿಮೆ ಮಾಡುತ್ತಾರೆ. ಸನ್ಯಾಸಿಗಳ ಮುಂದೆ ತಾವು ಸರ್ವ ಗುಣ ಸಂಪನ್ನರು, ನಾವು ನೀಚ, ಪಾಪಿಗಳಾಗಿದ್ದೇವೆ ಎಂಬ ಮಾತನ್ನು ಎಂದೂ ಹೇಳುವುದಿಲ್ಲ. ದೇವತೆಗಳ ಮುಂದೆ ಹೋಗಿ ಈ ರೀತಿ ಹೇಳುತ್ತಾರೆ. ಇದನ್ನೂ ಸಹ ತಂದೆಯು ತಿಳಿಸಿದ್ದಾರೆ - ಕುಮಾರಿಗೆ ಎಲ್ಲರೂ ತಲೆ ಬಾಗುತ್ತಾರೆ. ಮತ್ತೆ ವಿವಾಹವಾದ ನಂತರ ಎಲ್ಲರ ಮುಂದೆ ತಾನು ತಲೆ ಬಾಗುತ್ತಾಳೆ ಏಕೆಂದರೆ ವಿಕಾರಿಯಾಗುತ್ತಾಳಲ್ಲವೆ. ಈಗ ತಂದೆಯು ತಿಳಿಸುತ್ತಾರೆ - ನೀವು ನಿರ್ವಿಕಾರಿಯಾಗುತ್ತೀರೆಂದರೆ ಅರ್ಧಕಲ್ಪ ನಿರ್ವಿಕಾರಿಯಾಗಿರುತ್ತೀರಿ. ಈಗ ಪಂಚ ವಿಕಾರಗಳ ರಾಜ್ಯವೇ ಸಮಾಪ್ತಿಯಾಗುತ್ತದೆ. ಇದು ಮೃತ್ಯುಲೋಕ, ಅದು ಅಮರಲೋಕವಾಗಿದೆ. ಈಗ ನೀವಾತ್ಮರಿಗೆ ಜ್ಞಾನದ ಮೂರನೆಯ ನೇತ್ರವು ಸಿಗುತ್ತದೆ, ಅದನ್ನು ತಂದೆಯೇ ಕೊಡುತ್ತಾರೆ. ತಿಲಕವನ್ನೂ ಸಹ ಮಸ್ತಕದಲ್ಲಿಯೇ ಇಟ್ಟುಕೊಳ್ಳುತ್ತಾರೆ. ಆತ್ಮಕ್ಕೆ ಈಗ ಜ್ಞಾನವು ಸಿಗುತ್ತಿದೆ, ಏತಕ್ಕಾಗಿ? ನೀವು ತಮಗೆ ತಾವೇ ರಾಜ ತಿಲಕವನ್ನು ಕೊಟ್ಟುಕೊಳ್ಳಿ. ಹೇಗೆ ಬ್ಯಾರಿಸ್ಟರಿ ಓದುತ್ತಾರೆಂದರೆ ಓದಿ ತಮಗೆ ತಾವೇ ಬ್ಯಾರಿಸ್ಟರಿಯ ತಿಲಕವನು ಇಟ್ಟುಕೊಳ್ಳುತ್ತಾರೆ. ಓದಿದರೆ ತಿಲಕ ಸಿಗುವುದು, ಕೇವಲ ಆಶೀರ್ವಾದದಿಂದ ಸಿಗುವುದಿಲ್ಲ. ಒಂದುವೇಳೆ ಆ ರೀತಿಯಿದ್ದರೆ ಶಿಕ್ಷಕರು ಎಲ್ಲರ ಮೇಲೆ ಕೃಪೆ ತೋರುವುದಾದರೆ ಎಲ್ಲರೂ ತೇರ್ಗಡೆಯಾಗಿ ಬಿಡಬೇಕು. ಆದರೆ ಮಕ್ಕಳು ತಮಗೆ ತಾವೇ ರಾಜತಿಲಕವನ್ನು ಇಟ್ಟುಕೊಳ್ಳಬೇಕಾಗಿದೆ, ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತದೆ ಮತ್ತು ಚಕ್ರವನ್ನು ನೆನಪು ಮಾಡುವುದರಿಂದ ಚಕ್ರವರ್ತಿ ಮಹಾರಾಜರಾಗಿ ಬಿಡುತ್ತೀರಿ. ತಂದೆಯು ತಿಳಿಸುತ್ತಾರೆ - ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ದೇವಿ-ದೇವತೆಗಳು ಡಬಲ್ ಕಿರೀಟಧಾರಿಗಳಾಗುತ್ತೀರಿ. ಪತಿತ ರಾಜರೂ ಸಹ ಹೋಗಿ ಅವರ ಪೂಜೆ ಮಾಡುತ್ತಾರೆ. ನಿಮ್ಮನ್ನು ಪೂಜಾರಿ ರಾಜರಿಗಿಂತಲೂ ಶ್ರೇಷ್ಠರನ್ನಾಗಿ ಮಾಡುತ್ತೇನೆ. ಯಾರು ಬಹಳ ದಾನ-ಪುಣ್ಯ ಮಾಡುವರೋ ಅವರು ಹೋಗಿ ರಾಜರ ಬಳಿ ಜನ್ಮ ಪಡೆಯುತ್ತಾರೆ ಏಕೆಂದರೆ ಒಳ್ಳೆಯ ಕರ್ಮ ಮಾಡಿದ್ದಾರೆ. ಈಗ ಇಲ್ಲಿ ನಿಮಗೆ ಅವಿನಾಶಿ ಜ್ಞಾನ ಧನವು ಸಿಕ್ಕಿದೆ ಅದನ್ನು ಧಾರಣೆ ಮಾಡಿಕೊಂಡು ಮತ್ತೆ ದಾನ ಮಾಡಬೇಕಾಗಿದೆ. ಇದು ಆದಾಯದ ಮೂಲವಾಗಿದೆ. ಶಿಕ್ಷಕರೂ ಸಹ ವಿದ್ಯಾ ದಾನ ಮಾಡುತ್ತಾರೆ. ಆ ವಿದ್ಯೆಯು ಅಲ್ಪಕಾಲಕ್ಕಾಗಿದೆ. ವಿದೇಶದಿಂದ ಓದಿ ಬರುತ್ತಾರೆ. ಒಂದುವೇಳೆ ಬಂದೊಡನೆಯೇ ಹೃದಯಾಘಾತವಾಗಿ ಬಿಟ್ಟರೆ ವಿದ್ಯೆಯು ಸಮಾಪ್ತಿ. ವಿನಾಶಿಯಾಗಿ ಬಿಟ್ಟಿತಲ್ಲವೆ! ಪರಿಶ್ರಮವೆಲ್ಲವೂ ನೀರಲ್ಲಿ ಹೋಯಿತು, ನಿಮ್ಮ ಪರಿಶ್ರಮವು ಈ ರೀತಿ ಹೋಗಲು ಸಾಧ್ಯವಿಲ್ಲ. ನೀವು ಎಷ್ಟು ಚೆನ್ನಾಗಿ ಓದುತ್ತೀರೋ ಅಷ್ಟು 21 ಜನ್ಮಗಳವರೆಗೆ ನಿಮ್ಮ ವಿದ್ಯೆಯು ಶಾಶ್ವತವಾಗಿ ಬಿಡುವುದು. ಅಲ್ಲಿ ಅಕಾಲ ಮೃತ್ಯುವಾಗುವುದೇ ಇಲ್ಲ. ಈ ವಿದ್ಯೆಯನ್ನು ಜೊತೆ ತೆಗೆದುಕೊಂಡು ಹೋಗುತ್ತೀರಿ.

ಹೇಗೆ ತಂದೆಯು ಈಗ ಕಲ್ಯಾಣಕಾರಿಯಾಗಿದ್ದಾರೆಯೋ ಹಾಗೆಯೇ ನೀವು ಮಕ್ಕಳೂ ಸಹ ಕಲ್ಯಾಣಕಾರಿಗಳಾಗಬೇಕಾಗಿದೆ. ಎಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ. ತಂದೆಯಂತೂ ಬಹಳ ಒಳ್ಳೆಯ ಸಲಹೆಯನ್ನು ಕೊಡುತ್ತಾರೆ. ಒಂದೇ ಮಾತನ್ನು ತಿಳಿಸಿಕೊಡಿ - ಸರ್ವಶ್ರೇಷ್ಠ ಶಿರೋಮಣಿ ಶ್ರೀಮತ್ಭಗವದ್ಗೀತೆಗೆ ಇಷ್ಟೊಂದು ಮಹಿಮೆ ಏಕೆ ಇದೆ? ಭಗವಂತನದೇ ಶ್ರೇಷ್ಠ ಮತವಾಗಿದೆ ಅಂದಮೇಲೆ ಈಗ ಭಗವಂತನೆಂದು ಯಾರಿಗೆ ಹೇಳಲಾಗುವುದು? ಭಗವಂತನೆಂದರೆ ಒಬ್ಬರೇ ಇರುತ್ತಾರೆ, ಅವರು ನಿರಾಕಾರನಾಗಿದ್ದಾರೆ. ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ ಆದ್ದರಿಂದ ಪರಸ್ಪರ ಸಹೋದರ-ಸಹೋದರರೆಂದು ಹೇಳುತ್ತೀರಿ ಮತ್ತೆ ಬ್ರಹ್ಮಾರವರ ಮೂಲಕ ಹೊಸ ಸೃಷ್ಟಿಯನ್ನು ರಚಿಸಿದಾಗ ಸಹೋದರ-ಸಹೋದರಿಯರಾಗಿ ಬಿಡುತ್ತೀರಿ. ಈ ಸಮಯದಲ್ಲಿ ನೀವು ಸಹೋದರ-ಸಹೋದರಿಯರಾಗಿದ್ದೀರಿ ಅಂದಮೇಲೆ ಪವಿತ್ರರಾಗಿರಬೇಕಾಗುವುದು. ಇದು ಯುಕ್ತಿಯಾಗಿದೆ. ಈಗ ವಿಕಾರೀದೃಷ್ಟಿಯು ಒಮ್ಮೆಲೆ ಹೊರಟು ಹೋಗಲಿ. ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕು, ನನ್ನ ಕಣ್ಣುಗಳು ಎಲ್ಲಿಯೂ, ಮೋಸ ಮಾಡಲಿಲ್ಲವೆ? ಮಾರುಕಟ್ಟೆಯಲ್ಲಿ ಕಡಲೆಯನ್ನು ನೋಡಿ ಮನಸ್ಸಾಗಲಿಲ್ಲವೆ? ಹೀಗೆ ಅನೇಕರಿಗೆ ಇಷ್ಟವಾಗಿ ಬಿಡುತ್ತದೆ, ತಿಂದು ಬಿಡುತ್ತಾರೆ. ಬ್ರಾಹ್ಮಿಣಿಯು ಯಾವುದೇ ಸಹೋದರನ ಜೊತೆ ಹೊರಗಡೆ ಹೋಗುತ್ತಾರೆಂದರೆ ಸಹೋದರನು ಕಡಲೆಯನ್ನು ತಿನ್ನಿರಿ, ಒಂದು ಬಾರಿ ತಿಂದರೆ ಪಾಪವೇನಾಗುವುದಿಲ್ಲ ಎಂದು ಹೇಳುತ್ತಾರೆ. ಆಗ ಯಾರು ಕಚ್ಚಾ ಆಗಿರುತ್ತಾರೆಯೋ ಅವರು ಕೂಡಲೇ ತಿಂದು ಬಿಡುತ್ತಾರೆ. ಇದರ ಮೇಲೆ ಶಾಸ್ತ್ರಗಳಲ್ಲಿಯೂ ಅರ್ಜುನನ ದೃಷ್ಟಾಂತವಿದೆ. ಈ ಕಥೆಗಳನ್ನು ಕುರಿತು ಬರೆದಿದ್ದಾರೆ. ಬಾಕಿ ಇವೆಲ್ಲವೂ ಈ ಸಮಯದ ಮಾತುಗಳಾಗಿವೆ.

ನೀವೆಲ್ಲರೂ ಸೀತೆಯರಾಗಿದ್ದೀರಿ. ನಿಮಗೆ ತಂದೆಯು ತಿಳಿಸುತ್ತಾರೆ - ಒಬ್ಬ ತಂದೆಯನ್ನು ನೆನಪು ಮಾಡಿರಿ ಆಗ ನಿಮ್ಮ ಪಾಪಗಳು ತುಂಡಾಗುತ್ತವೆ. ಮತ್ತ್ಯಾವುದೇ ಮಾತುಗಳಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ - ರಾವಣನೆಂದರೆ ಯಾವುದೇ ವ್ಯಕ್ತಿಯಲ್ಲ, ಇದು ವಿಕಾರಗಳ ಸಂಕೇತವಾಗಿದೆ. ವಿಕಾರಗಳ ಪ್ರವೇಶತೆಯಾಗಿ ಬಿಡುತ್ತದೆಯೆಂದರೆ ಅವರಿಗೆ ರಾವಣನ ಸಂಪ್ರದಾಯದವರೆಂದು ಹೇಳಲಾಗುತ್ತದೆ. ಹೇಗೆ ಯಾರಾದರೂ ಅಂತಹ ಕೆಲಸ ಮಾಡುತ್ತಾರೆಂದರೆ ನೀವು ಅಸುರರಾಗಿದ್ದೀರಿ ಎಂದು ಹೇಳುತ್ತಾರೆ. ಚಲನೆಯು ಅಸುರಿಯಾಗಿದೆ, ವಿಕಾರೀ ಮಕ್ಕಳಿಗೆ ನೀವು ಕುಲಕಳಂಕಿತರಾಗುತ್ತೀರಿ ಎಂದು ಹೇಳುತ್ತಾರೆ. ಇಲ್ಲಿಯೂ ಸಹ ಬೇಹದ್ದಿನ ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಶ್ಯಾಮನಿಂದ ಸುಂದರರನ್ನಾಗಿ ಮಾಡುತ್ತೇನೆ ಮತ್ತೆ ನೀವು ಮುಖ ಕಪ್ಪು ಮಾಡಿಕೊಳ್ಳುತ್ತೀರಿ. ಪ್ರತಿಜ್ಞೆ ಮಾಡಿ ಮತ್ತೆ ವಿಕಾರಿಗಳಾಗುತ್ತೀರಿ. ಪತಿತರಿಗಿಂತಲೂ ಪತಿತರಾಗಿ ಬಿಡುತ್ತಾರೆ ಆದ್ದರಿಂದ ಕಲ್ಲು ಬುದ್ಧಿಯವರೆಂದು ಹೇಳಲಾಗುತ್ತದೆ. ಈಗ ಪುನಃ ನೀವು ಪಾರಸ ಬುದ್ಧಿಯವರಾಗುತ್ತೀರಿ. ನಿಮ್ಮದು ಏರುವ ಕಲೆಯಾಗುತ್ತದೆ. ತಂದೆಯನ್ನು ಅರಿತುಕೊಂಡಿರಿ ಮತ್ತು ವಿಶ್ವದ ಮಾಲೀಕರಾದಿರಿ, ಇದರಲ್ಲಿ ಸಂಶಯದ ಮಾತಿರಲು ಸಾಧ್ಯವಿಲ್ಲ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಮಕ್ಕಳಿಗಾಗಿ ಸ್ವರ್ಗವನ್ನೇ ಉಡುಗೊರೆಯನ್ನಾಗಿ ತರುತ್ತಾರಲ್ಲವೆ. ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಏನು ಮಾಡುತ್ತಾರೆ? ವ್ರತ ಇತ್ಯಾದಿಗಳನ್ನು ಇಟ್ಟುಕೊಳ್ಳುತ್ತಾರೆ. ವಾಸ್ತವದಲ್ಲಿ ವಿಕಾರಗಳ ವ್ರತವನ್ನಿಟ್ಟುಕೊಳ್ಳಬೇಕು, ವಿಕಾರದಲ್ಲಿ ಹೋಗಬಾರದು. ಈ ವಿಕಾರಗಳಿಂದಲೇ ನೀವು ಆದಿ-ಮಧ್ಯ-ಅಂತ್ಯ ದುಃಖವನ್ನು ಪಡೆದಿದ್ದೀರಿ. ಈಗ ಈ ಒಂದು ಜನ್ಮ ಪವಿತ್ರರಾಗಿ. ಹಳೆಯ ಪ್ರಪಂಚದ ವಿನಾಶವು ಮುಂದೆ ನಿಂತಿದೆ. ನೀವು ನೋಡುತ್ತೀರಿ - ಭಾರತದಲ್ಲಿ 9 ಲಕ್ಷ ಜನಸಂಖ್ಯೆ ಮಾತ್ರವಿರುತ್ತದೆ ಮತ್ತೆಲ್ಲವೂ ಶಾಂತಿಯಾಗಿ ಬಿಡುವುದು. ಯಾವುದೇ ಜಗಳ-ಕಲಹವಾಗಲಿ, ಅನ್ಯ ಧರ್ಮವೇ ಇರುವುದೇ ಇಲ್ಲ. ಒಂದು ಧರ್ಮದ ಸ್ಥಾಪನೆ, ಉಳಿದ ಅನೇಕ ಧರ್ಮಗಳ ವಿನಾಶವಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅವಿನಾಶಿ ಜ್ಞಾನ ಧನವನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಂಡು ಮತ್ತೆ ದಾನ ಮಾಡಬೇಕಾಗಿದೆ. ವಿದ್ಯೆಯಿಂದ ತಮಗೆ ತಾವೇ ರಾಜ ತಿಲಕವನ್ನು ಇಟ್ಟುಕೊಳ್ಳಬೇಕಾಗಿದೆ. ಹೇಗೆ ತಂದೆಯು ಕಲ್ಯಾಣಕಾರಿಯಾಗಿದ್ದಾರೆಯೋ ಹಾಗೆಯೇ ಕಲ್ಯಾಣಕಾರಿಗಳಾಗಬೇಕಾಗಿದೆ.

2. ತಿನ್ನುವುದು-ಕುಡಿಯುವುದರ ಪ್ರತಿ ಸಂಪೂರ್ಣ ವ್ರತವನ್ನಿಟ್ಟುಕೊಳ್ಳಬೇಕಾಗಿದೆ. ಎಂದೂ ಕಣ್ಣುಗಳು ಮೋಸ ಮಾಡದಿರಲಿ - ಇದರ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ತಮ್ಮನ್ನು ಸುಧಾರಣೆ ಮಾಡಿಕೊಳ್ಳಬೇಕು. ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮ ಮಾಡಬಾರದು.

ವರದಾನ:
ಮನಸಾ ಶಕ್ತಿಯ ಅನುಭವದ ಮೂಲಕ ವಿಶಾಲ ಕಾರ್ಯದಲ್ಲಿ ಸದಾ ಸಹಯೋಗಿ ಭವ.

ಪ್ರಕೃತಿಯನ್ನು ತಮೋಗುಣಿ ಆತ್ಮಗಳ ವೈಭ್ರೇಷನನ್ನು ಪರಿವರ್ತನೆ ಮಾಡುವುದು ಮತ್ತು ರಕ್ತ ಹರಿಯುವ ವಾತಾವರಣ, ವೈಭ್ರೇಷನ್ ನಲ್ಲಿ ಸ್ವಯಂನ್ನು ಸುರಕ್ಷಿತವಾಗಿಡುವುದು, ಅನ್ಯ ಆತ್ಮಗಳಿಗೆ ಸಹಯೋಗ ಕೊಡುವುದು, ಹೊಸ ಸೃಷ್ಠಿಯಲ್ಲಿ ಹೊಸ ರಚನೆಯ ಯೋಗಬಲದಿಂದ ಪ್ರಾರಂಭ ಮಾಡುವುದು - ಈ ಎಲ್ಲಾ ವಿಶಾಲ ಕಾರ್ಯಕ್ಕಾಗಿ ಮನಸಾ ಶಕ್ತಿಯ ಆವಶ್ಯಕತೆಯಿದೆ. ಮನಸಾ ಶಕ್ತಿಯ ಮೂಲಕವೇ ಸ್ವಯಂನ ಅಂತ್ಯ ಸುಂದರವಾಗಿರುವುದು. ಮನಸಾ ಶಕ್ತಿ ಅರ್ಥಾತ್ ಶ್ರೇಷ್ಠ ಸಂಕಲ್ಪ ಶಕ್ತಿ, ಒಬ್ಬರ ಜೊತೆ ಲೈನ್ ಕ್ಲಿಯರ್ - ಈಗ ಇದರ ಅನುಭವಿಗಳಾಗಿ ಆಗ ಬೇಹದ್ಧಿನ ಕಾರ್ಯದಲ್ಲಿ ಸಹಯೋಗಿಗಳಾಗಿ ಬೇಹದ್ಧಿನ ವಿಶ್ವದ ರಾಜ್ಯ ಅಧಿಕಾರಿಗಳಾಗುವಿರಿ.

ಸ್ಲೋಗನ್:
ನಿರ್ಭಯತೆ ಮತ್ತು ನಮ್ರತೆಯೆ ಜ್ಞಾನಿ ಮತ್ತು ಯೋಗಿ ಆತ್ಮನ ಸ್ವರೂಪವಾಗಿದೆ.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ಪರಮಾತ್ಮನ ಪ್ರೀತಿ ಆನಂದಮಯ ಉಯ್ಯಾಲೆಯಾಗಿದೆ, ಈ ಸುಖದಾಯಿ ಉಯ್ಯಾಲೆಯಲ್ಲಿ ತೂಗುತ್ತ ಸದಾ ಪರಮಾತ್ಮ ಪ್ರೀತಿಯಲ್ಲಿ ಲವಲೀನರಾಗಿದ್ದರೆ ಎಂದೂ ಯಾವುದೇ ಪರಿಸ್ಥಿತಿ ಅಥವಾ ಮಾಯೆಯ ಏರುಪೇರು ಬರಲು ಸಾಧ್ಯವಿಲ್ಲ. ಪರಮಾತ್ಮನ ಪ್ರೀತಿ ಅಖೂಟ್, ಅಟಲವಾಗಿದೆ, ಸರ್ವ ಪ್ರಾಪ್ತಿಯಾಗಬಹುದು ಆದರೆ ಪರಮಾತ್ಮನ ಪ್ರೀತಿಯನ್ನು ಪ್ರಾಪ್ತಿಮಾಡಿಕೊಳ್ಳುವ ವಿಧಿಯಾಗಿದೆ - ನ್ಯಾರಾ(ಭಿನ್ನ)ರಾಗುವುದು. ಎಷ್ಟು ಭಿನ್ನರಾಗುತ್ತೀರಿ ಅಷ್ಟು ಪರಮಾತ್ಮನ ಪ್ರೀತಿಯ ಅಧಿಕಾರ ಪ್ರಾಪ್ತಿಯಾಗುತ್ತದೆ.