04.11.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಜ್ಞಾನವಂತರಾಗುತ್ತೀರೆಂದರೆ ಧನವಂತರಾಗಿ ಬಿಡುತ್ತೀರಿ, ಜಗದಂಬೆ ಜ್ಞಾನ ಜ್ಞಾನೇಶ್ವರಿಯೇ ರಾಜ
ರಾಜೇಶ್ವರಿಯಾಗುವರು”
ಪ್ರಶ್ನೆ:
ತಂದೆಗೆ ತನ್ನ
ಮಕ್ಕಳ ಮೇಲೆ ದಯೆ ಬರುತ್ತದೆ, ಆದ್ದರಿಂದ ಶ್ರೇಷ್ಠ ಅದೃಷ್ಟವನ್ನು ರೂಪಿಸುವುದಕ್ಕಾಗಿ ಯಾವ
ಶ್ರೀಮತವನ್ನು ಕೊಡುತ್ತಾರೆ?
ಉತ್ತರ:
ಮಧುರ ಮಕ್ಕಳೇ -
ತಲೆಯ ಮೇಲೆ ಯಾವ ಪಾಪದ ಹೊರೆಯಿದೆಯೋ ಅದನ್ನು ಮೃತ್ಯುವಿಗೆ ಮೊದಲೇ ನೆನಪಿನ ಯಾತ್ರೆಯಲ್ಲಿದ್ದು
ಹೊರೆಯನ್ನು ಇಳಿಸಿಕೊಳ್ಳಿರಿ. ಯಾವುದೇ ವಿಕರ್ಮವನ್ನು ಮಾಡಬೇಡಿ. ತಂದೆಯು ನಿಮ್ಮನ್ನು ಯಮ ಪಾಶದಿಂದ
ಬಿಡಿಸುವುದಕ್ಕಾಗಿ ಬಂದಿದ್ದಾರೆ ಆದ್ದರಿಂದ ಈಗ ಅಂತಹ ಯಾವುದೇ ಕರ್ಮವನ್ನು ಮಾಡಬಾರದು.
ಗೀತೆ:
ರಾತ್ರಿಯ
ಪ್ರಯಾಣಿಕನೇ ಸುಸ್ತಾಗಬೇಡ..........
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯ ಅರ್ಥವನ್ನು ತಿಳಿದುಕೊಂಡಿದ್ದೀರಿ. ತಂದೆಯು ಭಕ್ತಿಯೆಂಬ
ರಾತ್ರಿಯನ್ನು ವಿನಾಶ ಮಾಡಿ, ದಿನದ ಸ್ಥಾಪನೆ ಮಾಡಲು ಬಂದಿದ್ದಾರೆ ಏಕೆಂದರೆ ಹೇ ಪತಿತ-ಪಾವನ ಬನ್ನಿ
ಎಂದು ತಂದೆಯನ್ನೇ ಕರೆಯುತ್ತಾರಲ್ಲವೇ. ಯಾವುದೋ ಸಮಯದಲ್ಲಿ ನಾವು ಪಾವನರಾಗಿದ್ದೆವು, ಈಗ
ಪತಿತರಾಗಿದ್ದೇವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಮೊದಲು ಏನಿತ್ತು, ಈಗ ಅದನ್ನೇ ಬೇಕು ಎಂದು
ಬೇಡಲಾಗುತ್ತದೆ. ನೀವು ಮಕ್ಕಳಿಗೆ ಗೊತ್ತಿದೆ - ಮೊದಲು ಪವಿತ್ರ ದೇವಿ-ದೇವತೆಗಳ ರಾಜಧಾನಿಯಿತ್ತು,
ಜ್ಞಾನ ಜ್ಞಾನೇಶ್ವರಿಯೇ ನಂತರ ರಾಜ ರಾಜೇಶ್ವರಿಯಾಗುವರು. ಹೇಗೆ ಜಗದಂಬೆ ಮತ್ತು ಲಕ್ಷ್ಮಿಯು
ಬೇರೆ-ಬೇರೆ ಆಗಿದ್ದಾರೆ. ಲಕ್ಷ್ಮಿಯನ್ನೆಂದಿಗೂ ಜಗದಂಬೆ ಎಂದು ಹೇಳುವುದಿಲ್ಲ, ಲಕ್ಷ್ಮಿಯನ್ನು ಅವರ
ಇಬ್ಬರು ಮಕ್ಕಳೇ ಮಾತೇಶ್ವರಿ ಎಂದು ಕರೆಯುತ್ತಾರೆ. ಇಲ್ಲಿ ಜಗದಂಬೆಯನ್ನು ಎಲ್ಲಾ ಭಾರತವಾಸಿಗಳು,
ಯಾರೆಲ್ಲಾ ಧಾರ್ಮಿಕ ವ್ಯಕ್ತಿಗಳಿದ್ದಾರೆಯೋ ಎಲ್ಲರೂ ಅಂಬೆ ಎಂದು ಕರೆಯುತ್ತಾರೆ. ದೇವಿ-ದೇವತೆಗಳ
ಮಂದಿರದಲ್ಲಿ ಹೋಗಿ ಭಕ್ತಿ ಮಾಡುತ್ತಾರೆ. ಈಗ ನಿಮಗೆ ಅರ್ಥವಾಗಿದೆ - ನಾವು ಬಹಳ ಭಕ್ತಿ ಮಾಡಿದ್ದೇವೆ.
ದಾನ-ಪುಣ್ಯ ಇತ್ಯಾದಿಗಳನ್ನು ನೀವು ಎಷ್ಟು ಮಾಡಿದ್ದೀರೋ ಅಷ್ಟು ಮತ್ತ್ಯಾರೂ ಮಾಡಿರುವುದಿಲ್ಲ. ನೀವೇ
ಎಲ್ಲರಿಗಿಂತ ಹೆಚ್ಚಿನದಾಗಿ ಭಕ್ತಿ ಮಾಡಿದ್ದೀರಿ. ನೀವೀಗ ಜೀವಿಸಿದ್ದಂತೆಯೇ ತಮ್ಮ ನೆನಪಾರ್ಥವನ್ನು
ನೋಡಿದ್ದೀರಿ. ಆದಿದೇವ ಮತ್ತು ಆದಿ ದೇವಿಯಿದ್ದಾರೆ, ಅವರಿಗೆ ಜಗದಂಬೆಯೆಂದು ಹೇಳುತ್ತಾರೆ. ಈಗ
ನಿಮಗೆ ತಿಳಿದಿದೆ - ಜಗದಂಬೆಯು ಧನವಂತರಾಗುತ್ತಾರೆ, ನೀವು ಅವರ ಮಕ್ಕಳಾಗಿದ್ದೀರಲ್ಲವೆ. ಈಗ ನೀವು
ಓದುತ್ತಿದ್ದೀರಿ, ಜಗದಂಬೆಯು ವಿದ್ಯಾ ದೇವಿಯಾಗಿದ್ದಾರೆ. ಲೌಕಿಕ ಜ್ಞಾನದಿಂದ ಎಂದಿಗೂ
ರಾಜ-ರಾಣಿಯಾಗುವುದಿಲ್ಲ. ನಿಮಗೆ ತಿಳಿದಿದೆ - ಆತ್ಮರೆಲ್ಲರೂ ಶಿವ ತಂದೆಯ ಮಕ್ಕಳಾಗಿದ್ದಾರೆ ಮತ್ತು
ಇವರು ಪ್ರಜಾಪಿತ ಬ್ರಹ್ಮಾನಾಗಿದ್ದಾರೆ. ಶಿವ ತಂದೆಯು ಇವರ ಮೂಲಕ ಹೊಸ ಪ್ರಪಂಚದ ಸ್ಥಾಪನೆ
ಮಾಡುತ್ತಿದ್ದಾರೆ. ಬ್ರಹ್ಮಾನ ಮೂಲಕ ಸ್ಥಾಪನೆ ಎಂದು ಗಾಯನವಿದೆ, ಇದನ್ನು ಚೆನ್ನಾಗಿ ತಿಳಿದುಕೊಂಡು
ಧಾರಣೆ ಮಾಡಬೇಕಾಗಿದೆ. ಸಿಂಹದ ಹಾಲಿಗೆ ಚಿನ್ನದ ಪಾತ್ರೆಯು ಬೇಕು ಎಂದು ಹೇಳುತ್ತಾರಲ್ಲವೇ. ಈ
ಜ್ಞಾನವು ಸರ್ವಶಕ್ತಿವಂತ ಪರಮಪಿತ ಪರಮಾತ್ಮನದಾಗಿದೆ. ಈ ಜ್ಞಾನಕ್ಕಾಗಿ ಬುದ್ಧಿರೂಪಿ ಪಾತ್ರೆಯು
ಚಿನ್ನದ ಸಮಾನವಾಗಬೇಕು. ಹೊಸ ಪ್ರಪಂಚದಲ್ಲಿ ಆತ್ಮ ಮತ್ತು ಶರೀರವು ಎರಡೂ ಚಿನ್ನದ ಸಮಾನ ಆಗುತ್ತವೆ.
ಈಗ ನಿಮ್ಮ ಆತ್ಮವು ಕಲ್ಲಿನ ಪಾತ್ರೆಯಾಗಿದೆ ಆದ್ದರಿಂದ ಶರೀರವೂ ಸಹ ಅಂತಹುದೇ ಆಗಿದೆ. ಭಾರತದಲ್ಲಿಯೇ
ಶ್ಯಾಮ ಮತ್ತು ಸುಂದರ, ಪತಿತ ಮತ್ತು ಪಾವನರೆಂದು ಹೇಳುತ್ತಾರೆ. ನಾವು ಪತಿತರನ್ನು ಪಾವನರನ್ನಾಗಿ
ಮಾಡಿ ಎಂದು ಮತ್ತ್ಯಾವುದೇ ಖಂಡಗಳಲ್ಲಿ ಈ ರೀತಿ ಹೇಳುವುದಿಲ್ಲ. ದುಃಖದಿಂದ ಬಿಡಿಸಿ ಶಾಂತಿಯಲ್ಲಿ
ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ವಿವೇಕವೂ ಹೇಳುತ್ತದೆ - ನಾವು ಭಾರತವಾಸಿಗಳು
ಪಾವನರಾಗಿದ್ದೆವು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಭಲೆ ಎಷ್ಟು ದೊಡ್ಡ ವ್ಯಕ್ತಿಗಳೇ ಇರಬಹುದು,
ಅವರೂ ಸಹ ಗುರುವಿನ ಕಾಲಿಗೆ ಬೀಳುತ್ತಾರೆ ಏಕೆಂದರೆ ಗುರುವು ಸನ್ಯಾಸತ್ವವನ್ನು ಧಾರಣೆ ಮಾಡಿದ್ದಾರೆ,
ಪಂಚ ವಿಕಾರಗಳನ್ನು ಬಿಟ್ಟಿದ್ದಾರೆ ಎಂದು ವಿಕಾರಿಗಳು ನಿರ್ವಿಕಾರಿಗಳಿಗೆ ಮಾನ್ಯತೆಯನ್ನು
ಕೊಡುತ್ತಾರೆ. ಪವಿತ್ರತೆಗೆ ಮಾನ್ಯತೆಯಿದೆ. ದ್ವಾಪರದಿಂದ ರಾಜ-ರಾಣಿ ಮತ್ತು ಮಂತ್ರಿಗಳಿರುತ್ತಾರೆ.
ಸತ್ಯಯುಗದ ರಾಜ-ರಾಣಿಗೆ ಮಂತ್ರಿಗಳಿರುವುದಿಲ್ಲ. ಯಾವಾಗ ರಾಜ-ರಾಣಿಯು ಪತಿತರಾಗುತ್ತಾರೆಯೋ ಆಗಲೇ
ಒಬ್ಬ ಮಂತ್ರಿಯನ್ನು ಇಟ್ಟುಕೊಳ್ಳುತ್ತಾರೆ. ಈಗಂತೂ ಬಹಳ ಪತಿತರಾಗಿರುವ ಕಾರಣ ನೂರಾರು
ಮಂತ್ರಿಗಳನ್ನು ಇಟ್ಟುಕೊಳ್ಳುತ್ತಾರೆ - ಇದು ಡ್ರಾಮಾದಲ್ಲಿ ನೊಂದಣಿಯಾಗಿದೆ. ತಂದೆಯು
ತಿಳಿಸುತ್ತಾರೆ - ಡ್ರಾಮಾದ ಪೂರ್ವ ನಿಶ್ಚಿತವು ಹೇಗೆ ಮಾಡಲ್ಪಟ್ಟಿದೆ! ಮೊದಲು ಭಾರತವಷ್ಟೇ ಇತ್ತು,
ನಂತರ ಅನ್ಯ ಧರ್ಮದವರು ಬಂದರು. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ನೀವು ಜ್ಞಾನ ಜ್ಞಾನೇಶ್ವರಿ
ಆಗಿದ್ದೀರಿ, ಜಗದಂಬೆಯು ಬ್ರಹ್ಮಾನ ಮಗಳು ವಿದ್ಯಾ ಸರಸ್ವತಿಯಾಗಿದ್ದಾರೆ. ಜಗದಂಬೆಯು
ಜ್ಞಾನವಂತಳಾಗಿದ್ದಾರೆ, ಅವರೇ ಇನ್ನೊಂದು ಜನ್ಮದಲ್ಲಿ ಧನ ಲಕ್ಷ್ಮೀಯಾಗುತ್ತಾರೆ. ಈಗ ನಿಮಗೆ ತಂದೆಯು
ಜ್ಞಾನವನ್ನು ಕಲಿಸುತ್ತಿದ್ದಾರೆ, ನಿಮಗೆ ತಿಳಿದಿದೆ - ನಾವು ಅಲ್ಲಿ ಧನವಂತರಾಗುತ್ತೇವೆ. ಈ
ಲಕ್ಷ್ಮೀ-ನಾರಾಯಣರು ಹೇಗೆ ಧನವಂತರಾದರು ಎಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ.
ಬ್ರಹ್ಮಾ-ಸರಸ್ವತಿಯೇ ಲಕ್ಷ್ಮೀ-ನಾರಾಯಣರಾದರು. ಬ್ರಹ್ಮಾ ಜಗತ್ಪಿತನಾಗಿದ್ದಾರೆ ಅಂದಮೇಲೆ
ಬ್ರಾಹ್ಮಣ-ಬ್ರಾಹ್ಮಿಣಿಯರು ಅನೇಕರಿರುವರು. ನೀವು ಬ್ರಾಹ್ಮಣ-ಬ್ರಾಹ್ಮಿಣಿಯರು ಎಷ್ಟೊಂದು ಮಂದಿ
ಇದ್ದೀರಿ, ನಾವು ಈ ಜ್ಞಾನದಿಂದ ಭವಿಷ್ಯದಲ್ಲಿ ಇಂತಹ ಧನವಂತರಾಗುತ್ತೇವೆಂದು ನಿಮಗೆ ತಿಳಿದಿದೆ.
ಒಮ್ಮೆಲೆ ಧನ ಲಕ್ಷ್ಮೀ ಆಗುತ್ತೀರಿ, ಇದಕ್ಕಿಂತ ಹೆಚ್ಚಿನ ಐಶ್ವರ್ಯವು ಮತ್ತ್ಯಾರ ಬಳಿಯೂ
ಇರುವುದಿಲ್ಲ ಆದ್ದರಿಂದಲೇ ಜ್ಞಾನವು ಆದಾಯದ ಮೂಲವೆಂದು ಹೇಳಲಾಗುತ್ತದೆ. ಜಡ್ಜ್, ಬ್ಯಾರಿಸ್ಟರ್
ಇತ್ಯಾದಿ ಜ್ಞಾನದಿಂದಲೇ ಆಗುತ್ತಾರಲ್ಲವೆ ಅಂದಮೇಲೆ ಇದೂ ಆದಾಯವಾಯಿತಲ್ಲವೆ. ಕೆಲಕೆಲವು ವೈದ್ಯರಿಗೆ
ಒಬ್ಬ ರೋಗಿಯಿಂದಲೇ ಲಕ್ಷಾಂತರ ರೂಪಾಯಿಗಳು ಸಿಗುತ್ತವೆ, ಯಾರಾದರೂ ರಾಜ-ರಾಣಿ ಅಥವಾ ರಾಜಕುಮಾರರು
ಕಾಯಿಲೆಗೊಳಗಾದರೆ ವೈದ್ಯರು ಆ ರೋಗದಿಂದ ಮುಕ್ತಗೊಳಿಸಿದರೆ ಅವರಿಗೆ ಖುಷಿಯಾಗಿ ದೊಡ್ಡ-ದೊಡ್ಡ
ಮನೆಗಳನ್ನು ಕಟ್ಟಿಸಲು ಹಣವನ್ನು ಕೊಟ್ಟು ಬಿಡುತ್ತಾರೆ ಅಂದಮೇಲೆ ಎಷ್ಟೊಂದು ಆದಾಯವಾಯಿತು!
ವಿದ್ಯೆಯಿಂದಲೇ ಪದವಿಯನ್ನು ಪಡೆಯುತ್ತಾರಲ್ಲವೇ. ನಿಮ್ಮದು ಇದು ವಿದ್ಯೆಯೂ ಆಗಿದೆ, ವ್ಯಾಪಾರವೂ
ಆಗಿದೆ.
ನೀವು ಮಧುರ ಮಕ್ಕಳು ಈಗ
ವ್ಯಾಪಾರ ಮಾಡಲು ಬಂದಿದ್ದೀರಿ. ನಿಮ್ಮ ಬಳಿ ಕೆಲಸಕ್ಕೆ ಬರದಿರುವಂತಹದ್ದನ್ನು ಕೊಟ್ಟು ಲಕ್ಷದಷ್ಟು
ಸಂಪಾದಿಸುತ್ತೀರಿ. ತಂದೆಯು ಅವಿನಾಶಿ ಸರ್ಜನ್ ಆಗಿದ್ದಾರೆ. ಸದಾ ಆರೋಗ್ಯವಂತರಾಗಲು ತಂದೆಯು
ಯೋಗವನ್ನು ಕಲಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಗ್ಯಾರಂಟಿ ಕೊಡುತ್ತೇನೆ, ನೀವು
21 ಜನ್ಮಗಳಿಗಾಗಿ ಸದಾ ಆರೋಗ್ಯವಂತರಾಗುತ್ತೀರಿ ಅಂದಮೇಲೆ ಇಂತಹ ಸರ್ಜನ್ನ ಶ್ರೀಮತದಂತೆ ಏಕೆ
ನಡೆಯಬಾರದು! ತಂದೆಯ ಮತವನ್ನು ಪಾಲಿಸಿರಿ, ನನ್ನನ್ನು ನೆನಪು ಮಾಡಿರಿ. ಹೇಳುತ್ತಾರಲ್ಲವೆ - ಸ್ಮರಣೆ
ಮಾಡಿ ಮಾಡಿ ಸುಖ ಪಡೆಯಿರಿ, ಇದರಿಂದ ತನುವಿನ ಕಲಹ-ಕ್ಲೇಷಗಳು ಕಳೆಯುವವು. ಭಕ್ತಿಮಾರ್ಗದಲ್ಲಿ
ಯಾವುದೇ ಕಲಹ-ಕ್ಲೇಷಗಳು ಕಳೆಯುವುದಿಲ್ಲ. ಅನೇಕ ಸನ್ಯಾಸಿಗಳೂ ಸಹ ಕಾಯಿಲೆಯಲ್ಲಿ ನರಳುತ್ತಿರುತ್ತಾರೆ.
ಹೇಗೆ ಹುಚ್ಛರಾಗಿ ಬಿಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯ ಶ್ರೀಮತದಂತೆ
ನಡೆದರೆ ನಾವು ಸದಾ ಆರೋಗ್ಯವಂತರಾಗುತ್ತೇವೆ, ಅಲ್ಲಿ ಆಯಸ್ಸು 125ರಿಂದ 150 ವರ್ಷಗಳವರೆಗೆ
ಇರುತ್ತದೆ. ದ್ವಾಪರದಲ್ಲಿಯೂ ಆಯಸ್ಸು ಒಮ್ಮೆಲೆ 35 ವರ್ಷಗಳಿಗೆ ಇಳಿದು ಬಿಡುವುದಿಲ್ಲ, ದ್ವಾಪರದ
ಆರಂಭದಲ್ಲಿಯೂ ಸಹ 100-125 ವರ್ಷಗಳಿರುತ್ತವೆ ನಂತರ 70-80ಕ್ಕೆ ಇಳಿಯುತ್ತದೆ. ಈಗಂತೂ 35-40
ವರ್ಷಗಳಿಗೆ ಇಳಿದಿದೆ. ಕೆಲವರು ಬಾಲ್ಯದಲ್ಲಿಯೇ ಶರೀರ ಬಿಡುತ್ತಾರೆ ಏಕೆಂದರೆ ಭೋಗಿಗಳಾಗಿದ್ದಾರೆ.
ನಿಮಗೆ ತಿಳಿದಿದೆ - ಈಗ ಭೋಗಿಯಿಂದ ಯೋಗಿ ಆಗುತ್ತಿದ್ದೀರಿ. ಅಲ್ಲಿ ಇಷ್ಟೊಂದು ಧೀರ್ಘಾಯಸ್ಸು
ಇರುವುದು, ಎಂದೂ ಅಕಾಲಮೃತ್ಯು ಆಗುವುದಿಲ್ಲ. ತಂದೆಯು ಸ್ಮೃತಿ ತರಿಸುತ್ತಾರೆ, ನಿಮಗೆ ಎಷ್ಟೊಂದು
ರಾಜ್ಯಭಾಗ್ಯವಿತ್ತು. ಈಗ ರಾವಣನು ಲೂಟಿ ಮಾಡಿದ್ದಾನೆ. ಅಲ್ಲಿ ಈ ಮಂದಿರ ಇತ್ಯಾದಿಗಳಿರುವುದಿಲ್ಲ.
ನಿಮ್ಮ ಘೋಷಣಾ ವಾಕ್ಯಗಳೂ ಇವೆ, ಭಾರತದ ಆದಿ ಸನಾತನ ದೇವಿ-ದೇವತಾ ಧರ್ಮಕ್ಕೆ ಜಿಂದಾಬಾದ್,
ಉಳಿದೆಲ್ಲವೂ ಮುರ್ದಾಬಾದ್ ಅರ್ಥಾತ್ ಅನೇಕ ಧರ್ಮಗಳ ವಿನಾಶ. ಅಲ್ಲಿ ಕೇವಲ ಒಂದೇ ಭಾರತ ಖಂಡವಿತ್ತು,
ಒಂದು ಖಂಡದಲ್ಲಿ ಮನುಷ್ಯರೂ ಸಹ ಕೆಲವರೇ ಇರುವರು. ನೀವು ಬರೆಯಬಹುದು - ಸ್ವಲ್ಪವೇ ಸಮಯದಲ್ಲಿ
ಭಾರತದ ಜನ ಸಂಖ್ಯೆಯು 9 ಲಕ್ಷವಾಗುವುದು. ಮತ್ತೆಲ್ಲರೂ ಸಮಾಪ್ತಿಯಾಗುವರು. ಈಗ ಒಂದು ಧರ್ಮದ
ಸ್ಥಾಪನೆಯಾಗುತ್ತಿದೆ, ಹೊಸ ದೈವೀ ರಾಜ್ಯದಲ್ಲಿ ಒಂದೇ ಭಾಷೆ, ಒಂದೇ ರೀತಿ-ನೀತಿ ಇರುವುದು. ಇಲ್ಲಿ
ಪ್ರತಿಯೊಬ್ಬರ ರೀತಿ-ನೀತಿಯೇ ಬೇರೆಯಾಗಿದೆ, ಅಲ್ಲಿ ಒಂದು ರಾಜ್ಯ, ಒಂದು ಮತವಿತ್ತು - ನೀವು ಇಂತಹ
ಘೋಷಣಾ ವಾಕ್ಯಗಳನ್ನು ಪತ್ರಿಕೆಗಳಲ್ಲಿಯೂ ಹಾಕಿಸಬಹುದು. ಕೆಲವರು ಸಲಹೆಯನ್ನು ಕೇಳುತ್ತಾರೆ - ಬಾಬಾ,
ಹಣವನ್ನು ಖರ್ಚು ಮಾಡಿ ಪತ್ರಿಕೆಗಳಲ್ಲಿ ಹಾಕಿಸುವುದೇ? ತಂದೆಯು ತಿಳಿಸುತ್ತಾರೆ - ಭಲೆ ಹಾಕಿಸಿರಿ,
ಏನು ನಡೆಯುತ್ತಿದೆ ಎಂಬುದು ಮನುಷ್ಯರಿಗೆ ಅರ್ಥವಾಗಲಿ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತವು
ಸ್ವರ್ಗವಾಗಿತ್ತು, ಸೂರ್ಯವಂಶಿ ದೇವಿ-ದೇವತೆಗಳದು ಒಂದು ಧರ್ಮ, ಒಂದು ಮತವಿತ್ತು ಎಂಬುದನ್ನೂ
ಹೇಳುತ್ತಾರೆ. ಈ ಮಹಾಭಾರತ ಯುದ್ಧದ ನಂತರ ಸ್ವರ್ಗದ ದ್ವಾರಗಳು ತೆರೆದಿತ್ತು. ಪತ್ರಿಕೆಗಳಲ್ಲಿ
ಹಾಕಿಸುವಾಗ ಹೆಸರು ಬ್ರಹ್ಮಾಕುಮಾರ-ಕುಮಾರಿ ಎಂದು ಇರಬಾರದು ಆದರೆ ಯಾವಾಗ ಪವಿತ್ರರಾಗಿರುತ್ತೀರಿ
ಆಗಲೇ ಬಿ.ಕೆ. ಎಂದು ಕರೆಸಿಕೊಳ್ಳಲಾಗುತ್ತದೆ. ತಂದೆಯನ್ನು ಕರೆದಿದ್ದೀರಿ, ಈಗ ತಂದೆಯು ಬಂದಿದ್ದಾರೆ
ಅಂದಮೇಲೆ ತಂದೆಯೊಂದಿಗೆ ಪ್ರತಿಜ್ಞೆ ಮಾಡಿರಿ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಅಲೆದಾಡಿದಿರಿ! ಯಜ್ಞ,
ತಪ, ದಾನ-ಪುಣ್ಯಗಳನ್ನು ಮಾಡಿದಿರಿ. ಮೊದಲು ಒಬ್ಬ ಶಿವನ ಭಕ್ತಿ ಮಾಡುತ್ತಿದ್ದಿರಿ ನಂತರ
ದೇವತೆಗಳಿಗೆ ಭಕ್ತಿ ಮಾಡಿದಿರಿ. ಈಗ ವ್ಯಭಿಚಾರಿ ಭಕ್ತಿಯಾಗಿ ಬಿಟ್ಟಿದೆ. ತಂದೆಯು ನಿಮ್ಮನ್ನು ಈಗ
ಎಲ್ಲಾ ದುಃಖಗಳಿಂದ ಬಿಡುಗಡೆ ಮಾಡುತ್ತಾರೆ. ತಂದೆಯು ನೀವು ಮಕ್ಕಳಿಗೇ ಜ್ಞಾನವನ್ನು ಕೊಟ್ಟು ಎಷ್ಟು
ಶ್ರೇಷ್ಠ, ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಿ ನಿಮ್ಮ ಬಳಿ ಎಲ್ಲವೂ
ಚಿನ್ನದ್ದೇ ಇರುವುದು. ತಂದೆಯು ನಿಮಗೆ ಶ್ರೀಮತವನ್ನು ಕೊಟ್ಟು ಸ್ವರ್ಗದ ಮಾಲೀಕರನ್ನಾಗಿ
ಮಾಡುತ್ತಾರೆ ಅಂದಮೇಲೆ ನೀವು ಶ್ರೀಮತದಂತೆ ಏಕೆ ನಡೆಯುವುದಿಲ್ಲ! ತಂದೆಯು ಯಮ ಪಾಶದಿಂದ
ಬಿಡಿಸುತ್ತಾರೆ, ಗರ್ಭ ಜೈಲಿನ ಶಿಕ್ಷೆಗಳಿಂದ ಬಿಡಿಸುತ್ತಾರೆ. ನೀವು ಸ್ವರ್ಗದಲ್ಲಿ ಗರ್ಭ
ಮಹಲಿನಲ್ಲಿ ಇರುತ್ತೀರಿ. ಇಲ್ಲಿ ಜೈಲಾಗಿದೆ ಏಕೆಂದರೆ ಮನುಷ್ಯರು ಪಾಪ ಕರ್ಮ ಮಾಡುತ್ತಾರೆ. ಅಲ್ಲಿ
ಪಂಚ ವಿಕಾರಗಳೇ ಇರುವುದಿಲ್ಲ, ಆದರೂ ಸಹ ರಾಜ-ರಾಣಿ ಮತ್ತು ಪ್ರಜೆಗಳ ಪದವಿಯಲ್ಲಿ ಅಂತಹವರಂತೂ
ಇರುತ್ತಾರೆಯಲ್ಲವೇ. ಹಣ ಸಂಪಾದಿಸಲು ಮನುಷ್ಯರು ಪರಿಶ್ರಮ ಪಡುತ್ತಾರಲ್ಲವೇ. ಅಲ್ಲಿ
ಮಂತ್ರಿಗಳಿರುವುದಿಲ್ಲ ಏಕೆಂದರೆ ನೀವು ಇಲ್ಲಿನ ಪ್ರಾಲಬ್ಧವನ್ನು ಪಡೆಯುತ್ತೀರಿ. ಈಗ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ನೀವು ಶ್ರೀಮತದಂತೆ ನಡೆಯಿರಿ, ನಾನು ದೂರ ದೇಶದಿಂದ ಪತಿತ ರಾಜ್ಯದಲ್ಲಿ
ಪತಿತ ಶರೀರದಲ್ಲಿ ಬಂದಿದ್ದೇನೆ. ಇದು ರಾವಣನ ದೇಶವಾಗಿದೆ, ನಾನು ಬಂದು ನೀವು ಮಕ್ಕಳಿಗೆ
ಆಸ್ತಿಯನ್ನು ಕೊಡುತ್ತೇನೆ. ಇಂತಹ ತಂದೆಯ ಆಜ್ಞೆಯನ್ನು ಪಾಲಿಸದಿದ್ದರೆ ಅಂತಹವರು ಕುಪುತ್ರರಾದರು.
ವಿಕಾರದ ಹಿಂದೆ ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಕೆ? ತಂದೆಯು ತಿಳಿಸುತ್ತಾರೆ - ಈ ವಿಕಾರವು ದುಃಖ
ಕೊಡುವಂತದ್ದಾಗಿದೆ, ಪತಿತರನ್ನು ಪಾವನ ಮಾಡುವುದು ನನ್ನ ಕರ್ತವ್ಯವಾಗಿದೆ. ತಂದೆಯು ಎಷ್ಟು
ಪ್ರೀತಿಯಿಂದ ತಿಳಿಸುತ್ತಾರೆ - ತಿನ್ನಿರಿ, ಕುಡಿಯಿರಿ. ಸುಖಿಯಾಗಿ ಇರಿ ಆದರೆ ನಾವು ಶಿವ ತಂದೆಯ
ಬಳಿ ಬಂದಿದ್ದೇವೆ, ಅವರಿಂದ ನಮ್ಮ ಪಾಲನೆಯಾಗುತ್ತಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಒಂದುವೇಳೆ
ಮಿತ್ರ ಸಂಬಂಧಿ ಮೊದಲಾದವರ ವಸ್ತುಗಳನ್ನು ಧರಿಸುತ್ತೀರೆಂದರೆ ಅವರೇ ನೆನಪಿಗೆ ಬರುತ್ತಾರೆ, ಪದವಿಯು
ಭ್ರಷ್ಟವಾಗುತ್ತದೆ. ಇಲ್ಲಿ ಶಿವ ತಂದೆಯ ಭಂಡಾರದಿಂದ, ಪತಿತ-ಪಾವನ ತಂದೆಯ ಯಜ್ಞದಿಂದ
ಪಾಲನೆಯಾಗಬೇಕಾಗಿದೆ, ಪತಿತ ಮನೆಯಿಂದಲ್ಲ. ಯಾರಾದರೂ ಕೊಟ್ಟಿರುವ ವಸ್ತುವಿದ್ದರೆ ಅವರೇ ನೆನಪಿಗೆ
ಬರುತ್ತಾರೆ. ಅದಕ್ಕಾಗಿಯೇ ಗಾಯನವಿದೆ - ಯಾರು ಅಂತ್ಯಕಾಲದಲ್ಲಿ ಸ್ತ್ರೀಯನ್ನು ಸ್ಮರಣೆ ಮಾಡಿದರೋ
ಅವರಿಗೆ...... ಎಷ್ಟು ಒಳ್ಳೆಯ ಸ್ಥಿತಿಯಿರಬೇಕು. ಗೃಹಸ್ಥ ವ್ಯವಹಾರದಲ್ಲಿರುತ್ತಾ ಬುದ್ಧಿಯಿಂದ
ತಿಳಿದುಕೊಳ್ಳಿ - ಇವರೆಲ್ಲರೂ ಸಮಾಪ್ತಿಯಾಗಿ ಬಿಟ್ಟಿದ್ದಾರೆ. ನನ್ನವರು ಒಬ್ಬ ತಂದೆಯಾಗಿದ್ದಾರೆ.
ಈಗ ತಂದೆಯ ಮಾಲೆಯ ಸ್ಮರಣೆ ಮಾಡುತ್ತೀರಾ? ನಾನು ನೀವು ಮಕ್ಕಳಿಗೆ ಸ್ಮೃತಿ ತರಿಸುತ್ತೇನೆ -
ನನ್ನನ್ನು ನೆನಪು ಮಾಡಿರಿ ನಿಮಗೆ ಬಹಳ ಶಕ್ತಿ ಸಿಗುವುದು, ವಿಕರ್ಮಗಳು ವಿನಾಶವಾಗುತ್ತವೆ. ನೀವು
ಬಲಶಾಲಿಗಳಾಗಿ ಬಿಡುತ್ತೀರಿ. ಈ ಲಕ್ಷ್ಮೀ-ನಾರಾಯಣರು ಬಲಶಾಲಿಗಳಲ್ಲವೆ, ಯಾರು ಬಲಶಾಲಿಗಳಾಗುವರೋ
ಅವರೇ ರಾಜ್ಯವನ್ನು ಪಡೆಯುತ್ತಾರೆ. ಬ್ರಹ್ಮಾ ತಂದೆಯು ತಮ್ಮ ಅನುಭವವನ್ನು ತಿಳಿಸುತ್ತಾರೆ - ನಾನು
12 ಮಂದಿ ಗುರುಗಳನ್ನು ಮಾಡಿಕೊಂಡೆನು, ಗುರುಗಳು ಹೇಳಿದರು - ಮುಂಜಾನೆ ಎದ್ದು ಸಾವಿರ ಮಾಲೆಗಳನ್ನು
ಜಪಿಸಿರಿ. ಮತ್ತ್ಯಾವುದಾದರೂ ಸಮಯವನ್ನು ತಿಳಿಸಿ ಎಂದು ನಾವು (ಬ್ರಹ್ಮಾ) ಹೇಳುತ್ತಿದ್ದೆವು,
ಇಡೀದಿನ ಉದ್ಯೋಗ-ವ್ಯವಹಾರಗಳಿಂದ ಸುಸ್ತಾಗಿ ಬಿಡುತ್ತೇವೆ ಎಂದು ನಾವು ಹೇಳುತ್ತಿದ್ದೆವು. ಹೇಗೆ
ನೀವೂ ಸಹ ಬಾಬಾ, ಅಮೃತವೇಳೆ ಏಳಲು ಆಗುವುದಿಲ್ಲ ಎಂದು ಹೇಳುತ್ತೀರಿ. ನಾವು ಪವಿತ್ರರಾಗಿರಲು
ಆಗುವುದಿಲ್ಲ, ನೆನಪಿನಲ್ಲಿರಲು ಆಗುವುದಿಲ್ಲ ಎಂದು ಹೇಳಬಾರದು. ತಂದೆಯು ತಿಳಿಸುತ್ತಾರೆ - ನೆನಪು
ಮಾಡದಿದ್ದರೆ ವಿಕರ್ಮಗಳು ಹೇಗೆ ವಿನಾಶವಾಗುತ್ತವೆ! ನೀವು ಅವಶ್ಯವಾಗಿ ತಮೋಪ್ರಧಾನರಿಂದ
ಸತೋಪ್ರಧಾನರು ಆಗಬೇಕಾಗಿದೆ. ಇದು ನಿಮ್ಮ ಅಂತಿಮ ಜನ್ಮವಾಗಿದೆ ಆದ್ದರಿಂದ ಅವಶ್ಯವಾಗಿ
ಪವಿತ್ರರಾಗಬೇಕು. ತಂದೆಯ ಶ್ರೀಮತದಂತೆ ನಡೆಯದಿದ್ದರೆ ಪದವಿಯನ್ನೇನು ಪಡೆಯುತ್ತೀರಿ! ಅರ್ಧ
ಕಲ್ಪದಿಂದ ನನ್ನನ್ನು ಕರೆದಿರಿ, ಈಗ ಹೇಳುತ್ತೇವೆ - ಪಾವನರಾಗಿ ನನ್ನನ್ನು ನೆನಪು ಮಾಡಿರಿ,
ಅನ್ಯರಿಗೂ ಈ ಮಾರ್ಗವನ್ನು ತಿಳಿಸುತ್ತಿರಿ. ಸಂದೇಶವನ್ನು ಕೊಡಿ, ಮನ್ಮನಾಭವ. ಮೃತ್ಯುವು
ಸನ್ಮುಖದಲ್ಲಿ ನಿಂತಿದೆ, ನಿಮಗೇ ಸಂದೇಶ ವಾಹಕರೆಂದು ಹೇಳಲಾಗುತ್ತದೆ. ನೀವು ಬ್ರಾಹ್ಮಣರಲ್ಲದೇ
ಮತ್ತ್ಯಾರೂ ಸಂದೇಶ ವಾಹಕರಾಗಲು ಸಾಧ್ಯವಿಲ್ಲ. ಪತಿತ-ಪಾವನ ಶಿವ ತಂದೆಯು ಬರುತ್ತಾರೆ. ಯಾರಲ್ಲಿ
ಪ್ರವೇಶ ಮಾಡುತ್ತಾರೆ ಎಂಬುದನ್ನೂ ಬರೆಯಲಾಗಿದೆ- ಬ್ರಹ್ಮಾನ ಮೂಲಕ ಸ್ಥಾಪನೆ. ಆದರೆ ಇದನ್ನು
ತಿಳಿದುಕೊಳ್ಳುತ್ತಾರೆಯೇ! ಸೂಕ್ಷ್ಮವತನದಲ್ಲಿ ಪ್ರಜಾಪಿತ ಬ್ರಹ್ಮಾನಿರುವರೇ? ಇಲ್ಲಿಯೇ ಪತಿತರಿಂದ
ಪಾವನರಾಗುತ್ತಾರೆ, ಶಾಂತಿಯ ಬಲದಿಂದ ಸ್ಥಾಪನೆಯಾಗುತ್ತದೆ. ವಿಜ್ಞಾನದ ಬಲದಿಂದ ವಿನಾಶವಾಗುತ್ತದೆ.
ಶಾಂತಿಯು ಹೇಗೆ ಸಿಗುವುದು ಎಂದು ಎಲ್ಲರೂ ಕೇಳುತ್ತಾರೆ. ಆತ್ಮವಂತೂ ಶಾಂತ ಸ್ವರೂಪನಾಗಿದೆ, ಇಲ್ಲಿಗೆ
ಪಾತ್ರವನ್ನು ಅಭಿನಯಿಸಲು ಬಂದಿದ್ದಾರೆ. ಇಲ್ಲಿ ಸಂಪೂರ್ಣ ಶಾಂತವಾಗಿರಲು ಹೇಗೆ ಸಾಧ್ಯ! ಸಂಪೂರ್ಣ
ಶಾಂತಿಯು ಶಾಂತಿಧಾಮದಲ್ಲಿಯೇ ಸಿಗುವುದು, ಇಲ್ಲಂತೂ ದುಃಖವೇ ಸಿಗುತ್ತದೆ. ಸತ್ಯಯುಗದಲ್ಲಿ
ಸುಖ-ಶಾಂತಿ ಎರಡೂ ಇರುತ್ತದೆ.
ಈಗ ನೀವು ಮಕ್ಕಳಿಲ್ಲಿ
ಸನ್ಮುಖದಲ್ಲಿ ಕೇಳುತ್ತೀರಿ, ತಂದೆಯು ತಿಳಿಸುತ್ತಾರೆ- ಎಂದಿಗೂ ಪತಿತರು ನನ್ನೊಂದಿಗೆ
ಮಿಲನವಾಗುವಂತಿಲ್ಲ. ಈ ರೀತಿಯಿಲ್ಲದಿದ್ದರೆ ಕರೆದುಕೊಂಡು ಬರುವಂತಹ ಬ್ರಾಹ್ಮಣಿಯರ ಮೇಲೆ
ಪಾಪವೇರುವುದು. (ಇಂಧ್ರ ಸಭೆಯ ಪರಿಶ್ತೆಯ ಉದಾಹರಣೆ) ವಾಸ್ತವದಲ್ಲಿ ಇಂದ್ರಸಭೆಯು ಇದಾಗಿದೆ.
ಇವರೆಲ್ಲರೂ ಜ್ಞಾನ ದೇವತೆಗಳಾಗಿದ್ದಾರೆ ಅಂದಮೇಲೆ ಇಲ್ಲಿ ಇನ್ನೂ ಪೆಟ್ಟು ಬೀಳುತ್ತದೆ, ತಂದೆಯು
ಕಡ್ಡಾಯವಾಗಿ ನಿಷೇಧಿಸುತ್ತಾರೆ. ಯಾರೂ ಪತಿತರನ್ನು ಕರೆತರುವಂತಿಲ್ಲ. ಮೊದಲು ತಂದೆಯು ಯಾವಾಗಲೂ
ಕೇಳುತ್ತಿದ್ದರು - ಪ್ರತಿಜ್ಞೆ ಮಾಡಿದ್ದೀರಾ? ಇನ್ನೂ ಪುರುಷಾರ್ಥ ಮಾಡುತ್ತಿದ್ದೇನೆ ಎಂದು
ಹೇಳುತ್ತಿದ್ದರು. ಯಾವಾಗ ಪಕ್ಕಾ ನಿಶ್ಚಯವಾಗುವುದೋ ಆಗ ಮಿಲನ ಮಾಡಿರಿ. ಒಂದುವೇಳೆ ಮಿಲನ ಮಾಡಿಕೊಂಡು
ಹೋದ ನಂತರ ವಿಕಾರದಲ್ಲಿ ಬೀಳುತ್ತಾರೆಂದರೆ ನೂರು ಪಟ್ಟು ಪಾಪವಾಗುವುದು. ಬಹುಷಃ ಇವರ ಅದೃಷ್ಠದಲ್ಲಿ
ಇಲ್ಲವೆಂದು ತಂದೆಯು ತಿಳಿದುಕೊಳ್ಳುವರು. ತಂದೆಯು ಅದೃಷ್ಠವನ್ನು ರೂಪಿಸುವುದಕ್ಕಾಗಿ ಪುರುಷಾರ್ಥ
ಮಾಡಿಸುತ್ತಾರೆ. ಇಂತಹ ತಂದೆಯ ಮಾತನ್ನೇ ಪಾಲಿಸದಿದ್ದರೆ ಅಂತಹವರ ಗತಿಯೇನಾಗುವುದು! ತಂದೆಗೆ ದಯೆ
ಬರುತ್ತದೆ, ತಂದೆಯು ತಿಳಿಸುತ್ತಾರೆ - ತಮ್ಮನ್ನು ಪರಿವರ್ತನೆ ಮಾಡಿಕೊಳ್ಳುತ್ತಾ ಹೋಗಿರಿ.
ಪರಿವರ್ತನೆಯಾಗದೆ ಹಾಗೆಯೇ ನಡೆಯುತ್ತಾ-ನಡೆಯುತ್ತಾ ಶರೀರ ಬಿಡುವಂತಾಗಬಾರದು. ನಾವು ತಂದೆಯನ್ನು
ನೆನಪು ಮಾಡಿ ಪಾಪಗಳ ಹೊರೆಯನ್ನು ಇಳಿಸಿಕೊಳ್ಳಬೇಕೆಂಬ ಭಯವಿರಲಿ. ಒಳ್ಳೆಯದು.
ಎಲ್ಲರ ಸದ್ಗತಿ ಮಾಡುವವರು
ಒಬ್ಬರೇ ಶಿವ ತಂದೆಯಾಗಿದ್ದಾರೆ. ಅವರ ಭಾವ ಚಿತ್ರವನ್ನು ತೆಗೆಯಲು ಸಾಧ್ಯವಿಲ್ಲ, ಅವರನ್ನು ದಿವ್ಯ
ದೃಷ್ಟಿಯಿಂದಲೇ ನೋಡಬಹುದಾಗಿದೆ ಆದರೆ ಅವರನ್ನು ಅನುಭವ ಮಾಡಬಹುದು. ಒಳ್ಳೆಯದು-
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಅಂತ್ಯ
ಕಾಲದಲ್ಲಿ ಒಬ್ಬ ತಂದೆಯ ನೆನಪೇ ಬರಲಿ - ಅಂತಹ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ. ಮತ್ತ್ಯಾರೂ
ನೆನಪಿಗೆ ಬರಬಾರದು. ಬುದ್ಧಿಯಲ್ಲಿರಲಿ - ಇದೆಲ್ಲವೂ ವಿನಾಶವಾಗಲಿದೆ.
2. ತಮ್ಮನ್ನು ತಾವು
ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ಈ ಅಂತಿಮ ಜನ್ಮದಲ್ಲಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.
ನನ್ನಿಂದ ಯಾವುದೇ ಪಾಪ ಕರ್ಮವಾಗಬಾರದು ಎಂಬ ಭಯವಿರಲಿ.
ವರದಾನ:
ಡ್ರಾಮದ
ಗುರಾಣಿಯನ್ನು ಎದುರಿಗೆ ಇಡಿದು ಖುಷಿಯ ಪೌಷ್ಠಿಕ ಆಹಾರ ತೆಗೆದುಕೊಳ್ಳುವಂತಹ ಸದಾ ಶಕ್ತಿಶಾಲಿ ಭವ.
ಖುಷಿ ರೂಪಿ ಭೋಜನ
ಆತ್ಮವನ್ನು ಶಕ್ತಿಶಾಲಿಯನ್ನಾಗಿ ಮಾಡುತ್ತದೆ, ಖುಷಿಗಿಂತಲೂ ಪೌಷ್ಠಿಕ ಆಹಾರ ಬೇರೊಂದಿಲ್ಲ ಎಂದೂ ಸಹ
ಹೇಳುತ್ತಾರೆ. ಅದಕ್ಕಾಗಿ ಡ್ರಾಮದ ಗುರಾಣಿಯನ್ನು ಸರಿಯಾದ ರೀತಿಯಲ್ಲಿ ಕಾರ್ಯದಲ್ಲಿ ತೊಡಗಿಸಿ.
ಒಂದುವೇಳೆ ಸದಾ ಡ್ರಾಮದ ಸ್ಮøತಿ ಇದ್ದಲ್ಲಿ ಎಂದೂ ಸಹ ಬಾಡಿ ಹೋಗಲು ಸಾಧ್ಯವಿಲ್ಲ, ಖುಷಿ ಕಳೆದು
ಹೋಗಲು ಸಾಧ್ಯವಿಲ್ಲ ಏಕೆಂದರೆ ಈ ಡ್ರಾಮ ಕಲ್ಯಾಣಕಾರಿಯಾಗಿದೆ. ಆದ್ದರಿಂದ ಅಕಲ್ಯಾಣಕಾರಿ
ದೃಶ್ಯದಲ್ಲಿಯೂ ಸಹ ಕಲ್ಯಾಣ ಅಡಕವಾಗಿದೆ, ಈ ರೀತಿ ತಿಳಿದು ಸದಾ ಖುಷಿಯಲ್ಲಿರುವಿರಿ.
ಸ್ಲೋಗನ್:
ಪರಚಿಂತನೆ ಮತ್ತು
ಪರದರ್ಶನದ ಧೂಳಿನಿಂದಲೂ ದೂರ ಇರುವಂತಹವರೇ ಸತ್ಯ ಅಮೂಲ್ಯ ವಜ್ರಗಳಾಗಿದ್ದಾರೆ.
ಅವ್ಯಕ್ತ ಸೂಚನೆ:-
ಬ್ರಹ್ಮಾ ತಂದೆಯ ಸಮಾನ ಸಂಪನ್ನ ಮತ್ತು ಸಂಪೂರ್ಣ ಸ್ಥಿತಿಯ ಅನುಭವ ಮಾಡಿ.
ಸಂಪನ್ನತೆ ಅಥವಾ
ಸಂಪೂರ್ಣತೆಯನ್ನು ಪ್ರಾಪ್ತಿ ಮಾಡಿಕೊಳ್ಳಲು ದೇಹದ ಅಭಿಮಾನದಿಂದ ಸಂಪೂರ್ಣ ಸಮರ್ಪಣೆಯಾಗಬೇಕು. ದೇಹದ
ಅಭಿಮಾನ ಸಂಪೂರ್ಣವಾಗಿ ತುಂಡಾಗಲಿ ಆಗ ಹೇಳಲಾಗುವುದು ಸರ್ವ ಸಮರ್ಪಣಮಯ ಜೀವನ, ಹೀಗೆ ಯಾರು ಸರ್ವ
ತ್ಯಾಗಿ, ಸರ್ವ ಸಮರ್ಪಣ ಜೀವನದವರಿದ್ದಾರೆ ಅವರದ್ದೇ ಸಂಪೂರ್ಣ ಅವಸ್ಥೆಯ ಗಾಯನ ಮಾಡಲಾಗುವುದು ಮತ್ತು
ಯಾವಾಗ ಸಂಪೂರ್ಣರಾಗುತ್ತೀರಿ ಆಗ ಜೊತೆ ಹೋಗುವಿರಿ.