05.05.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಸದಾ ಈ ನಶೆಯಲ್ಲಿರಿ- ನಾವು ಸಂಗಮಯುಗೀ ಬ್ರಾಹ್ಮಣರಾಗಿದ್ದೇವೆ, ಯಾವ ತಂದೆಯನ್ನು ಎಲ್ಲರೂ ಕರೆದರು ಅವರೀಗ ನಮ್ಮ ಸನ್ಮುಖದಲ್ಲಿದ್ದಾರೆಂದು ನಮಗೆ ತಿಳಿದಿದೆ”

ಪ್ರಶ್ನೆ:
ಯಾವ ಮಕ್ಕಳ ಬುದ್ಧಿಯೋಗವು ಸರಿಯಾಗಿರುತ್ತದೆಯೋ ಅವರಿಗೆ ಯಾವ ಸಾಕ್ಷಾತ್ಕಾರವು ಆಗುತ್ತದೆ?

ಉತ್ತರ:
ಸತ್ಯಯುಗೀ ಹೊಸರಾಜಧಾನಿಯಲ್ಲಿ ಏನೆಲ್ಲವೂ ಆಗುತ್ತದೆ, ಹೇಗೆ ನಾವು ಶಾಲೆಯಲ್ಲಿ ಓದುತ್ತೇವೆ ಮತ್ತು ರಾಜ್ಯವನ್ನು ಮಾಡುತ್ತೇವೆ, ಇವೆಲ್ಲಾ ಸಾಕ್ಷಾತ್ಕಾರಗಳು ಎಷ್ಟೆಷ್ಟು ನಾವು ಹತ್ತಿರದಲ್ಲಿ ಬರುತ್ತೇವೆಯೋ ಅಷ್ಟು ಆಗುತ್ತಿರುತ್ತದೆ ಆದರೆ ಯಾರ ಬುದ್ಧಿಯೋಗವು ಸರಿಯಾಗಿರುತ್ತದೆ, ಯಾರು ತಮ್ಮ ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡುತ್ತಾರೆ, ಕೆಲಸಕಾರ್ಯಗಳನ್ನು ಮಾಡುತ್ತಲೂ ಒಬ್ಬ ತಂದೆಯ ನೆನಪಿನಲ್ಲಿರುತ್ತಾರೆಯೋ ಅವರಿಗೇ ಇವೆಲ್ಲಾ ಸಾಕ್ಷಾತ್ಕಾರಗಳು ಆಗುತ್ತಿರುತ್ತವೆ.

ಗೀತೆ:
ಓಂ ನಮಃ ಶಿವಾಯ................

ಓಂ ಶಾಂತಿ.
ಭಕ್ತಿಮಾರ್ಗದಲ್ಲಿ ಏನೆಲ್ಲಾ ಸತ್ಸಂಗಗಳಿವೆಯೋ ಅಲ್ಲಿಗೆ ನೀವು ಹೋಗಿರುತ್ತೀರಿ. ಅಲ್ಲಿ ಒಂದು ವಾಹ್ ಗುರು ಅಥವಾ ರಾಮನಾಮವನ್ನು ಜಪಿಸಿ ಎಂದು ಹೇಳುತ್ತಾರೆ. ಇಲ್ಲಾದರೆ ಮಕ್ಕಳು ಏನನ್ನೂ ಹೇಳುವ ಅವಶ್ಯಕತೆಯಿಲ್ಲ. ಒಂದೇಬಾರಿ ಹೇಳಿದ್ದೀರಿ ಮತ್ತೆಮತ್ತೆ ಹೇಳುವ ಅವಶ್ಯಕತೆಯಿಲ್ಲ. ತಂದೆಯು ಒಬ್ಬರೇ ಆಗಿದ್ದಾರೆ, ಅವರು ಹೇಳುವುದೂ ಒಂದೇ ಆಗಿದೆ, ಏನು ಹೇಳುತ್ತಾರೆ? ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ಮೊದಲು ಕಲಿತು ನಂತರ ಇಲ್ಲಿಗೆ ಬಂದು ಕುಳಿತುಕೊಳ್ಳುತ್ತಾರೆ. ನಾವು ಯಾವ ತಂದೆಯ ಮಕ್ಕಳಾಗಿದ್ದೇವೆಯೋ ಅವರನ್ನು ನೆನಪು ಮಾಡಬೇಕು. ಇದನ್ನೂ ಸಹ ನೀವು ಬ್ರಹ್ಮನ ಮೂಲಕ ತಿಳಿದುಕೊಂಡಿದ್ದೀರಿ- ನಾವೆಲ್ಲಾ ಆತ್ಮಗಳ ತಂದೆಯು ಅವರೊಬ್ಬರೇ ಆಗಿದ್ದಾರೆ. ಪ್ರಪಂಚದಲ್ಲಿ ಇದು ಗೊತ್ತಿಲ್ಲ. ನಿಮಗೆ ಗೊತ್ತಿದೆ- ನಾವೆಲ್ಲರೂ ಆ ತಂದೆಯ ಮಕ್ಕಳಾಗಿದ್ದೇವೆ, ಅವರನ್ನು ಗಾಡ್ ಫಾದರ್ ಎಂದು ಕರೆಯುತ್ತಾರೆ. ಈಗ ಫಾದರ್ ಹೇಳುತ್ತಾರೆ- ನಾನು ಈ ಸಾಧಾರಣ ತನುವಿನಿಂದ ನಿಮಗೆ ಓದಿಸಲು ಬಂದಿದ್ದೇನೆ. ನಿಮಗೆ ಗೊತ್ತಿದೆ, ಬಾಬಾರವರು ಇವರಲ್ಲಿ (ಬ್ರಹ್ಮಾ) ಬಂದಿದ್ದಾರೆ. ನಾವು ಅವರ ಮಕ್ಕಳಾಗಿದ್ದೇವೆ. ತಂದೆಯೇ ಬಂದು ಪತಿತರಿಂದ ಪಾವನರಾಗುವ ಮಾರ್ಗವನ್ನು ತಿಳಿಸುತ್ತಾರೆ. ಇದು ಇಡೀ ದಿನ ಬುದ್ಧಿಯಲ್ಲಿರುತ್ತದೆ. ಹಾಗೆ ನೋಡಿದರೆ ಎಲ್ಲರೂ ಶಿವತಂದೆಯ ಸಂತಾನರಾಗಿದ್ದಾರೆ ಆದರೆ ನಿಮಗೆ ಇದು ತಿಳಿದಿದೆ, ಬೇರೆ ಯಾರಿಗೂ ತಿಳಿದಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾವು ಆತ್ಮರಾಗಿದ್ದೇವೆ, ತಂದೆಯನ್ನೇ ನೆನಪು ಮಾಡಬೇಕೆಂದು ತಂದೆಯು ನಮಗೆ ಆಜ್ಞೆಯನ್ನು ನೀಡಿದ್ದಾರೆ. ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಟ್ಟಿದ್ದಾರೆ. ತಂದೆಯನ್ನು ಎಲ್ಲರೂ ಕರೆಯುತ್ತಾರಲ್ಲವೆ. ಈಗಲೂ ಅವರು ಪರಮಾತ್ಮನನ್ನು ಬನ್ನಿ ಎಂದು ಕರೆಯುತ್ತಲೇ ಇರುತ್ತಾರೆ ಆದರೆ ನೀವು ಸಂಗಮಯುಗೀ ಬ್ರಾಹ್ಮಣರು ತಂದೆಯು ಬಂದಿದ್ದಾರೆಂದು ಹೇಳುತ್ತಾರೆ. ಈ ಸಂಗಮಯುಗವು ನಿಮಗೆ ಮಾತ್ರವೇ ಗೊತ್ತಿದೆ. ಇದಕ್ಕೆ ಪುರುಷೋತ್ತಮ ಯುಗವೆನ್ನಲಾಗುತ್ತದೆ. ಪುರುಷೋತ್ತಮ ಯುಗವು ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಮಧ್ಯದಲ್ಲಿರುತ್ತದೆ. ಸತ್ಯಯುಗದಲ್ಲಿ ಸತ್ಪುರುಷ, ಕಲಿಯುಗದಲ್ಲಿ ಅಸತ್ಯ ಪುರುಷರಿರುತ್ತಾರೆ. ಸತ್ಯಯುಗದಲ್ಲಿ ಯಾರು ಇದ್ದು ಹೋಗಿದ್ದಾರೆಯೋ ಅವರ ಚಿತ್ರಗಳೂ ಇವೆ. ಎಲ್ಲದಕ್ಕಿಂತ ಹಳೆಯ ಚಿತ್ರಗಳು ಇದಾಗಿದೆ, ಇದಕ್ಕಿಂತ ಹಳೆಯ ಚಿತ್ರಗಳು ಇನ್ನ್ಯಾವುದೂ ಇರುವುದಿಲ್ಲ. ಈ ರೀತಿಯಂತೂ ಅನೇಕ ಮನುಷ್ಯರು ಅರ್ಥರಹಿತವಾದ ಚಿತ್ರಗಳನ್ನು ಬಿಡಿಸುತ್ತಾರೆ. ಯಾರೆಲ್ಲಾ ಬಂದುಹೋಗಿದ್ದಾರೆಂದು ನಿಮಗೆ ಗೊತ್ತಿದೆ. ಹೇಗೆ ಕೆಳಗಡೆ ಅಂಬಾದೇವಿಯ ಚಿತ್ರವನ್ನು ತೋರಿಸುತ್ತಾರೆ ಅಥವಾ ಕಾಳಿಯ ಚಿತ್ರವಿದೆ ಅಂದಾಗ ಈ ರೀತಿ ಅನೇಕ ಭುಜಗಳಿರಲು ಸಾಧ್ಯವಿಲ್ಲ. ಅಂಬಾದೇವಿಗೂ ಎರಡು ಭುಜಗಳೇ ಇರುತ್ತದೆ. ಮನುಷ್ಯರಾದರೆ ಕೈಜೋಡಿಸಿ ಪೂಜೆ ಮಾಡುತ್ತಾರೆ, ಭಕ್ತಿಮಾರ್ಗದಲ್ಲಿ ಅನೇಕ ಪ್ರಕಾರದ ಚಿತ್ರಗಳನ್ನು ಬಿಡಿಸಿದ್ದಾರೆ. ಮನುಷ್ಯನ ಮೇಲೂ ಭಿನ್ನ-ಭಿನ್ನ ಪ್ರಕಾರದ ಅಲಂಕಾರಗಳನ್ನು ಮಾಡಿದಾಗ ರೂಪ ಬದಲಾವಣೆಗೊಳ್ಳುತ್ತದೆ. ಈ ರೀತಿಯ ಚಿತ್ರಗಳಂತೂ ವಾಸ್ತವದಲ್ಲಿ ಇರುವುದಿಲ್ಲ. ಇವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಇಲ್ಲಂತೂ ಮನುಷ್ಯರಲ್ಲಿ ಅಂಗವಿಕಲತೆಯಿರುತ್ತದೆ ಆದರೆ ಸತ್ಯಯುಗದಲ್ಲಿ ಈ ಅಂಗವಿಕಲತೆಯಿರುವುದಿಲ್ಲ. ಸತ್ಯಯುಗದಲ್ಲಿ ಆದಿಸನಾತನ ದೇವಿ-ದೇವತಾ ಧರ್ಮವಿತ್ತು ಎಂದು ನಿಮಗೆ ಗೊತ್ತಿದೆ. ಆದರೆ ಇಲ್ಲಿ ಪ್ರತಿಯೊಬ್ಬರ ಉಡುಪುಗಳನ್ನು ನೋಡಿದಾಗ ಪ್ರತಿಯೊಬ್ಬರದೂ ತಮ್ಮದೇ ಆದ ಪ್ರಕಾರದ್ದಿರುತ್ತದೆ. ಅಲ್ಲಂತೂ ಯಥಾರಾಜ-ರಾಣಿ ತಥಾ ಪ್ರಜೆಗಳಾಗಿರುತ್ತಾರೆ. ಎಷ್ಟು ಸಮೀಪಕ್ಕೆ ಬರುತ್ತೀರೋ ಆಗ ನಿಮಗೆ ನಿಮ್ಮ ರಾಜಧಾನಿಯ ಉಡುಪು ಮುಂತಾದವುಗಳ ಸಾಕ್ಷಾತ್ಕಾರವಾಗುತ್ತದೆ. ನಾವು ಈ ರೀತಿ ಶಾಲೆಯಲ್ಲಿ ಓದುತ್ತೇವೆ, ಈ ರೀತಿ ಮಾಡುತ್ತೇವೆ. ಇವೆಲ್ಲವನ್ನು ನೋಡುತ್ತಿರುತ್ತೀರಿ ಆದರೆ ಯಾರ ಬುದ್ಧಿಯೋಗವು ಚೆನ್ನಾಗಿರುತ್ತದೆ ಅವರೇ ನೋಡಲು ಸಾಧ್ಯ. ತನ್ನ ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡುತ್ತಾರೆ. ಕೆಲಸಕಾರ್ಯಗಳನ್ನಂತೂ ಮಾಡಲೇಬೇಕು. ಭಕ್ತಿಮಾರ್ಗದಲ್ಲಿಯೂ ಕೆಲಸಗಳನ್ನು ಮಾಡುತ್ತೀರಲ್ಲವೆ. ಜ್ಞಾನವಂತೂ ಇರಲಿಲ್ಲ, ಇದೆಲ್ಲವೂ ಭಕ್ತಿಯಾಗಿದೆ. ಅದಕ್ಕೆ ಹೇಳಲಾಗುತ್ತದೆ ಭಕ್ತಿಯ ಜ್ಞಾನ. ನೀವು ವಿಶ್ವದ ಮಾಲೀಕರು ಹೇಗಾದಿರಿ ಎನ್ನುವ ಜ್ಞಾನವನ್ನು ಅವರು ಕೊಡಲು ಸಾಧ್ಯವಿಲ್ಲ. ಈಗ ನೀವು ಇಲ್ಲಿ ಓದಿ ಭವಿಷ್ಯ ವಿಶ್ವಕ್ಕೆ ಮಾಲೀಕರಾಗುತ್ತೀರಿ. ನಿಮಗೆ ಗೊತ್ತಿದೆ- ಈ ವಿದ್ಯೆಯಿರುವುದೇ ಹೊಸಪ್ರಪಂಚ, ಅಮರಲೋಕಕ್ಕಾಗಿ ಉಳಿದಂತೆ ಅಮರನಾಥದಲ್ಲಿ ಶಂಕರನು ಪಾರ್ವತಿಗೆ ಅಮರಕಥೆಯನ್ನು ಹೇಳಲಿಲ್ಲ. ಅವರಂತೂ ಶಿವಶಂಕರನನ್ನು ಒಂದು ಮಾಡಿದರು. ಈಗ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ- ಇವರೂ (ಬ್ರಹ್ಮಾ) ಸಹ ಹೇಳುತ್ತಾರೆ, ತಂದೆಯಲ್ಲದೇ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ಯಾರು ತಿಳಿಸಲು ಸಾಧ್ಯ! ಇವರು ಸಾಧು-ಸಂತರೇನಲ್ಲ. ಹೇಗೆ ನೀವು ಗೃಹಸ್ಥವ್ಯವಹಾರದಲ್ಲಿದ್ದೀರೋ ಹಾಗೆಯೇ ಇವರದೂ (ಬ್ರಹ್ಮಾ) ಸಹ ಉಡುಪು ಮುಂತಾದವುಗಳೆಲ್ಲವೂ ಇದೆ. ಹೇಗೆ ಮನೆಯಲ್ಲಿ ತಂದೆ-ತಾಯಿ, ಮಕ್ಕಳಿರುತ್ತಾರೆ, ಹಾಗೆಯೇ ಏನೂ ವ್ಯತ್ಯಾಸವಿಲ್ಲ. ತಂದೆಯು ಈ ರಥದಲ್ಲಿ ಸವಾರನಾಗಿ ಮಕ್ಕಳ ಬಳಿ ಬರುತ್ತಾರೆ. ಇವರಿಗೆ ಭಾಗ್ಯಶಾಲಿ ರಥವೆಂದು ಮಹಿಮೆಯಿದೆ. ಕೆಲವೊಮ್ಮೆ ಎತ್ತಿನ ಮೇಲೂ ಸವಾರಿಯನ್ನು ತೋರಿಸುತ್ತಾರೆ. ಮನುಷ್ಯರು ಉಲ್ಟಾ ತಿಳಿದುಕೊಂಡಿದ್ದಾರೆ. ಮಂದಿರದಲ್ಲಿ ಎತ್ತು ಇರಲು ಸಾಧ್ಯವೇ! ಭಕ್ತಿಮಾರ್ಗದಲ್ಲಿ ಮನುಷ್ಯರು ಬಹಳ ಗೊಂದಲಕ್ಕೊಳಗಾಗಿದ್ದಾರೆ. ಮನುಷ್ಯರಿಗಂತೂ ಭಕ್ತಿಮಾರ್ಗದ ನಶೆಯಿದೆ, ನಿಮಗೆ ಜ್ಞಾನಮಾರ್ಗದ ನಶೆಯಿದೆ. ಈ ಸಂಗಮದಲ್ಲಿ ತಂದೆಯು ನಿಮಗೆ ಓದಿಸುತ್ತಿದ್ದಾರೆಂದು ನೀವು ಹೇಳುತ್ತೀರಿ. ನೀವು ಈ ಪ್ರಪಂಚದಲ್ಲಿದ್ದೀರಿ ಆದರೆ ಬುದ್ಧಿಯಿಂದ ತಿಳಿದುಕೊಂಡಿದ್ದೀರಿ- ನಾವು ಬ್ರಾಹ್ಮಣರು ಸಂಗಮಯುಗದಲ್ಲಿದ್ದೇವೆ. ಬಾಕಿ ಎಲ್ಲಾ ಮನುಷ್ಯರು ಕಲಿಯುಗದಲ್ಲಿದ್ದಾರೆ, ಇವೆಲ್ಲವೂ ಅನುಭವದ ಮಾತುಗಳಾಗಿವೆ. ನಾವು ಕಲಿಯುಗದಿಂದ ಈಗ ಹೊರಗೆ ಬಂದಿದ್ದೇವೆಂದು ಬುದ್ಧಿಯು ಹೇಳುತ್ತದೆ. ತಂದೆಯೂ ಬಂದಿದ್ದಾರೆ, ಈ ಹಳೆಯ ಪ್ರಪಂಚವೇ ಬದಲಾವಣೆಯಾಗುತ್ತದೆ. ಇದು ನಿಮ್ಮ ಬುದ್ಧಿಯಲ್ಲಿದೆ, ಬೇರೆ ಯಾರ ಬುದ್ಧಿಯಲ್ಲಿಯೂ ಇಲ್ಲ. ಭಲೆ ಒಂದೇ ಮನೆಯಲ್ಲಿರುತ್ತಾರೆ, ಒಂದೇ ಪರಿವಾರದವರಾಗಿರುತ್ತಾರೆ, ಅದರಲ್ಲಿಯೂ ನಾವು ಸಂಗಮಯುಗದವರೆಂದು ತಂದೆಯು ಹೇಳುತ್ತಾರೆ. ನಾವು ಕಲಿಯುಗದವರೆಂದು ಮಕ್ಕಳು ಹೇಳುತ್ತಾರೆ. ಅದ್ಭುತವಾಗಿದೆಯಲ್ಲವೆ! ಮಕ್ಕಳಿಗೆ ಗೊತ್ತಿದೆ- ನಮ್ಮ ವಿದ್ಯೆಯು ಪೂರ್ಣವಾದಾಗ ವಿನಾಶವಾಗುತ್ತದೆ. ವಿನಾಶವಂತೂ ಆಗಲೇಬೇಕು. ನಿಮ್ಮಲ್ಲಿಯೂ ಕೆಲವರಿಗೆ ಗೊತ್ತಿದೆ- ಈ ಹಳೆಯ ಪ್ರಪಂಚವು ವಿನಾಶವಾಗುತ್ತಿದೆಯೆಂದರೆ ಹೊಸಪ್ರಪಂಚಕ್ಕಾಗಿ ತಯಾರಿ ನಡೆಸಬೇಕು. ಬ್ಯಾಗ್-ಬ್ಯಾಗೇಜನ್ನು ತಯಾರಿ ಮಾಡಿಕೊಳ್ಳಬೇಕು. ಬಾಕಿ ಸ್ವಲ್ಪವೇ ಸಮಯ ಇದೆ. ತಂದೆಯವರಾಗಬೇಕಾಗಿದೆ, ಹಸಿವಿನಿಂದ ಸತ್ತರೂ ಮೊದಲು ತಂದೆ, ನಂತರ ಮಕ್ಕಳು. ಇದಂತೂ ತಂದೆಯ ಭಂಡಾರವಾಗಿದೆ. ನೀವು ಶಿವತಂದೆಯ ಭಂಡಾರದಿಂದ ತಿನ್ನುತ್ತೀರಿ. ಬ್ರಾಹ್ಮಣರು ಭೋಜನವನ್ನು ತಯಾರಿಸುತ್ತಾರೆ, ಆದ್ದರಿಂದ ಬ್ರಹ್ಮಾಭೋಜನವೆನ್ನುತ್ತಾರೆ. ಯಾರು ಪವಿತ್ರ ಬ್ರಾಹ್ಮಣರಿದ್ದಾರೆ ನೆನಪಿನಲ್ಲಿದ್ದು ತಯಾರಿಸುತ್ತಾರೆ. ಬ್ರಾಹ್ಮಣರನ್ನು ಬಿಟ್ಟರೆ ಶಿವತಂದೆಯ ನೆನಪಿನಲ್ಲಿ ಯಾರೂ ಇರಲು ಸಾಧ್ಯವಿಲ್ಲ. ಆ ಬ್ರಾಹ್ಮಣರಂತೂ ಶಿವತಂದೆಯ ನೆನಪಿನಲ್ಲಿರುತ್ತಾರೆಯೇ! ಇದು ಶಿವತಂದೆಯ ಭಂಡಾರವಾಗಿದೆ. ಇಲ್ಲಿ ಬ್ರಹ್ಮಾಭೋಜನವನ್ನು ತಯಾರಿಸುತ್ತಾರೆ, ಬ್ರಾಹ್ಮಣರು ಯೋಗದಲ್ಲಿರುತ್ತಾರೆ. ಪವಿತ್ರರಂತೂ ಇದ್ದೇ ಇರುತ್ತಾರೆ, ಬಾಕಿ ಇಲ್ಲಿ ಯೋಗದ ಮಾತಾಗಿದೆ. ಇದರಲ್ಲಿಯೇ ಪರಿಶ್ರಮವಿರುತ್ತದೆ. ವ್ಯರ್ಥವಂತೂ ನಡೆಯುವುದಿಲ್ಲ. ನಾನು ಸಂಪೂರ್ಣ ಯೋಗದಲ್ಲಿರುತ್ತೇನೆ, 80% ಯೋಗದಲ್ಲಿರುತ್ತೇನೆಂದು ಈ ರೀತಿ ಯಾರೂ ಹೇಳಲು ಸಾಧ್ಯವಿಲ್ಲ. ಜ್ಞಾನವು ಬೇಕಾಗಿದೆ. ನೀವು ಮಕ್ಕಳಲ್ಲಿ ಯಾರು ತಮ್ಮ ದೃಷ್ಟಿಯಿಂದಲೇ ಮತ್ತೊಬ್ಬರನ್ನು ಶಾಂತಗೊಳಿಸುತ್ತಾರೆ ಅವರೇ ಯೋಗಿಯಾಗಿದ್ದಾರೆ. ಇದೂ ಸಹ ಶಕ್ತಿಯಾಗಿದೆ. ಒಮ್ಮೆಲೆ ನಿಶ್ಯಬ್ಧರಾಗುತ್ತಾರೆ. ಯಾವಾಗ ನೀವು ಅಶರೀರಿಯಾಗುತ್ತೀರಿ ಮತ್ತು ತಂದೆಯ ನೆನಪಿನಲ್ಲಿರುತ್ತೀರಿ ಅಂದಾಗ ಇದೇ ಸತ್ಯನೆನಪಾಗಿದೆ. ಇದನ್ನು ಪುನಃ ಅಭ್ಯಾಸ ಮಾಡಬೇಕು. ಹೇಗೆ ನೀವು ಇಲ್ಲಿ ನೆನಪಿನಲ್ಲಿ ಕುಳಿತುಕೊಳ್ಳುತ್ತೀರಿ, ಈ ಅಭ್ಯಾಸವನ್ನು ಮಾಡಿಸಲಾಗುತ್ತದೆ. ಆದರೂ ಸಹ ಎಲ್ಲರೂ ನೆನಪಿನಲ್ಲಿರುವುದಿಲ್ಲ. ಬುದ್ಧಿಯು ಅಲ್ಲಿ-ಇಲ್ಲಿ ಓಡಾಡುತ್ತಿರುತ್ತದೆ. ಅವರು ತಮ್ಮದೇನನ್ನು ನಷ್ಟಮಾಡಿಕೊಳ್ಳುತ್ತಾರೆ. ಯಾರು ತಮ್ಮನ್ನು ಡ್ರಿಲ್ ಟೀಚರ್ ಎಂದು ತಿಳಿಯುತ್ತಾರೆ ಅವರನ್ನು ಇಲ್ಲಿ ಗದ್ದುಗೆಯ ಮೇಲೆ ಕುಳ್ಳರಿಸಬೇಕು. ತಂದೆಯ ನೆನಪಿನಲ್ಲಿ ಮುಂದೆ ಕುಳಿತುಕೊಳ್ಳುತ್ತಾರೆ. ಬುದ್ಧಿಯೋಗವು ಬೇರೆಲ್ಲಿಯೂ ಹೋಗಬಾರದು ಆಗ ನಿಶ್ಯಬ್ಧವಾಗಿಬಿಡುತ್ತದೆ, ನೀವು ಅಶರೀರಿಯಾಗಿಬಿಡುತ್ತೀರಿ ಮತ್ತು ತಂದೆಯ ನೆನಪಿನಲ್ಲಿರುತ್ತೀರಿ. ಇದು ಸತ್ಯವಾದ ನೆನಪಾಗಿದೆ. ಸನ್ಯಾಸಿಗಳು ಶಾಂತಿಯಲ್ಲಿ ಕುಳಿತುಕೊಳ್ಳುತ್ತಾರೆ ಅವರು ಯಾರ ನೆನಪಿನಲ್ಲಿರುತ್ತಾರೆ? ಅದೇನೂ ಯಥಾರ್ಥವಾದ ನೆನಪಲ್ಲ, ಯಾರಿಗೂ ಪ್ರಯೋಜನವಾಗುವುದಿಲ್ಲ, ಅವರು ಸೃಷ್ಟಿಯನ್ನು ಶಾಂತಗೊಳಿಸಲು ಸಾಧ್ಯವಿಲ್ಲ ಏಕೆಂದರೆ ಅವರು ತಂದೆಯನ್ನೇ ತಿಳಿದುಕೊಂಡಿಲ್ಲ. ಬ್ರಹ್ಮ್ ಅನ್ನು ಭಗವಂತನೆಂದು ತಿಳಿದುಕೊಂಡಿದ್ದಾರೆ, ಅದು ಸರಿಯಲ್ಲ. ಈಗ ನಿಮಗೆ ಶ್ರೀಮತವು ಸಿಗುತ್ತದೆ- ನನ್ನೊಬ್ಬನನ್ನೇ ನೆನಪು ಮಾಡಿ. 84 ಜನ್ಮಗಳನ್ನು ಪಡೆದಿದ್ದೇವೆಂದು ನಿಮಗೆ ಗೊತ್ತಿದೆ. ಪ್ರತಿಯೊಂದು ಜನ್ಮದಲ್ಲಿ ಸ್ವಲ್ಪ-ಸ್ವಲ್ಪ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಹೇಗೆ ಚಂದ್ರನಲ್ಲಿ ಕಲೆಗಳು ಕಡಿಮೆಯಾಗುತ್ತದೆಯೋ ನೋಡುವಾಗ ಅಷ್ಟೇನೂ ತಿಳಿಯುವುದಿಲ್ಲ. ಈಗ ಯಾರೂ ಸಹ ಸಂಪೂರ್ಣರಾಗಿಲ್ಲ. ಮುಂದೆ ನಿಮಗೆ ಸಾಕ್ಷಾತ್ಕಾರಗಳಾಗುತ್ತಾ ಇರುತ್ತವೆ. ಆತ್ಮವು ಎಷ್ಟೊಂದು ಸೂಕ್ಷ್ಮವಾಗಿದೆ! ಅದರದ್ದೂ ಸಾಕ್ಷಾತ್ಕಾರವಾಗುತ್ತದೆ. ಇಲ್ಲದಿದ್ದರೆ ಇವರಲ್ಲಿ ಬೆಳಕು ಕಡಿಮೆಯಿದೆ, ಇವರಲ್ಲಿ ಹೆಚ್ಚಿದೆಯೆಂದು ಮಕ್ಕಳು ಹೇಗೆ ಹೇಳಲು ಸಾಧ್ಯ! ದಿವ್ಯದೃಷ್ಟಿಯಿಂದಲೇ ಆತ್ಮವನ್ನು ನೋಡುತ್ತಾರೆ. ಇದೆಲ್ಲವೂ ಸಹ ಡ್ರಾಮಾದಲ್ಲಿ ನೊಂದಾವಣೆಯಾಗಿದೆ. ನನ್ನ ಕೈಯಲ್ಲಿ ಏನೂ ಇಲ್ಲ. ಡ್ರಾಮಾ ನನ್ನಿಂದ ಮಾಡಿಸುತ್ತದೆ, ಇದೆಲ್ಲವೂ ಡ್ರಾಮಾನುಸಾರ ನಡೆಯುತ್ತದೆ. ಭೋಗ ಇತ್ಯಾದಿಯೆಲ್ಲವೂ ಡ್ರಾಮಾದಲ್ಲಿ ನೊಂದಾವಣೆಯಾಗಿದೆ. ಸೆಕೆಂಡ್-ಬೈ-ಸೆಕೆಂಡ್ ಪಾತ್ರವು ನಡೆಯುತ್ತಿರುತ್ತದೆ.

ಈಗ ತಂದೆಯು ಶಿಕ್ಷಣವನ್ನು ಕೊಡುತ್ತಾರೆ ನಾವು ಹೇಗೆ ಪಾವನರಾಗಬೇಕು? ತಂದೆಯನ್ನು ನೆನಪು ಮಾಡಬೇಕು. ಎಷ್ಟೊಂದು ಸೂಕ್ಷ್ಮವಾದ ಆತ್ಮವು ಈಗ ಪತಿತವಾಗಿದೆ ಮತ್ತೆ ಪಾವನವಾಗಬೇಕಾಗಿದೆ. ಇದು ಅದ್ಭುತವಾದ ಮಾತಲ್ಲವೆ. ಪ್ರಕೃತಿಯೆಂದು ಹೇಳಲಾಗುತ್ತದೆ. ತಂದೆಯಿಂದ ನೀವು ಎಲ್ಲಾ ಪ್ರಾಕೃತಿಕ ಮಾತುಗಳನ್ನೇ ಕೇಳುತ್ತೀರಿ. ಆತ್ಮ ಮತ್ತು ಪರಮಾತ್ಮನ ಬಗ್ಗೆ ಯಾರೂ ಸಹ ತಿಳಿದಿಲ್ಲ. ಇದು ಎಲ್ಲದಕ್ಕಿಂತ ಸತ್ಯವಾದ ಮಾತಾಗಿದೆ. ಋಷಿ-ಮುನಿಗಳಿಗೂ ಸಹ ಗೊತ್ತಿಲ್ಲ. ಇಷ್ಟು ಸೂಕ್ಷ್ಮವಾದ ಆತ್ಮವು ಕಲ್ಲುಬುದ್ಧಿ ನಂತರ ಪಾರಸಬುದ್ಧಿಯಾಗುತ್ತದೆ. ಬುದ್ಧಿಯಲ್ಲಿ ಇದೇ ಚಿಂತನೆ ನಡೆಯುತ್ತಿರಲಿ. ನಾವು ಆತ್ಮ ಕಲ್ಲುಬುದ್ಧಿಯಾಗಿದ್ದೆವು, ಈಗ ತಂದೆಯ ನೆನಪಿನಿಂದ ಪಾರಸಬುದ್ಧಿಯವರಾಗುತ್ತಿದ್ದೇವೆ. ಲೌಕಿಕರೀತಿಯಲ್ಲಂತೂ ತಂದೆಯು ದೊಡ್ಡವರು, ನಂತರ ಶಿಕ್ಷಕರು. ಗುರುವೂ ಸಹ ದೊಡ್ಡವರೇ ಸಿಗುತ್ತಾರೆ. ಇಲ್ಲಂತೂ ಒಂದೇ ಬಿಂದು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಇಡೀ ಕಲ್ಪ ದೇಹಧಾರಿಯನ್ನು ನೆನಪು ಮಾಡಿದಿರಿ, ಈಗ ತಂದೆಯು ಹೇಳುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ. ನಿಮ್ಮ ಬುದ್ಧಿಯನ್ನು ಬಹಳ ತೀಕ್ಷ್ಣಗೊಳಿಸುತ್ತಾರೆ. ವಿಶ್ವದ ಮಾಲೀಕರಾಗುವುದು ಕಡಿಮೆ ಮಾತೇನು! ಈ ಲಕ್ಷ್ಮೀ-ನಾರಾಯಣರು ಸತ್ಯಯುಗದ ಮಾಲೀಕರು ಹೇಗಾದರೆಂದು ಯಾರೂ ಯೋಚಿಸುವುದಿಲ್ಲ. ನೀವೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದಿದ್ದೀರಿ. ಈ ಮಾತುಗಳನ್ನು ಹೊಸಬರು ತಿಳಿದುಕೊಳ್ಳುವುದಿಲ್ಲ. ಮೊದಲು ವಿಸ್ತಾರವಾಗಿ ತಿಳಿಸುತ್ತಾರೆ ನಂತರ ಸೂಕ್ಷ್ಮವಾಗಿ ತಿಳಿಸುತ್ತಾರೆ. ತಂದೆಯು ಬಿಂದುವಾಗಿದ್ದಾರೆ, ಅವರಂತೂ ಇಷ್ಟು ದೊಡ್ಡ-ದೊಡ್ಡ ಲಿಂಗರೂಪವನ್ನು ಮಾಡುತ್ತಾರೆ. ಮನುಷ್ಯರದೂ ಸಹ ದೊಡ್ಡ-ದೊಡ್ಡ ಮೂರ್ತಿಗಳನ್ನು ಮಾಡುತ್ತಾರೆ. ಆದರೆ ಈ ರೀತಿಯೇನಿಲ್ಲ. ಮನುಷ್ಯನ ಶರೀರವು ಈ ರೀತಿಯೇ ಇರುತ್ತದೆ. ಭಕ್ತಿಮಾರ್ಗದಲ್ಲಿ ಏನೆಲ್ಲಾ ಮಾಡಿದ್ದಾರೆ, ಮನುಷ್ಯರು ಎಷ್ಟೊಂದು ಗೊಂದಲಕ್ಕೊಳಗಾಗಿದ್ದಾರೆ, ಏನೆಲ್ಲಾ ಕಳೆದುಹೋಯಿತು ಅದು ಮತ್ತೆ ನಡೆಯುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಈಗ ನೀವು ತಂದೆಯ ಶ್ರೀಮತದಂತೆ ನಡೆಯಿರಿ. ಇವರಿಗೂ (ಬ್ರಹ್ಮಾ) ತಂದೆಯು ಶ್ರೀಮತವನ್ನು ಕೊಟ್ಟಿದ್ದಾರೆ, ಸಾಕ್ಷಾತ್ಕಾರವನ್ನೂ ಮಾಡಿಸಿದ್ದಾರೆ. ನಿನಗೆ ನಾನು ರಾಜ್ಯಭಾಗ್ಯವನ್ನು ಕೊಡುತ್ತೇನೆ, ಈಗ ಈ ಸೇವೆಯಲ್ಲಿ ತತ್ಫರನಾಗು. ತನ್ನ ಆಸ್ತಿಯನ್ನು ಪಡೆದುಕೊಳ್ಳುವ ಪುರುಷಾರ್ಥ ಮಾಡು. ಇವೆಲ್ಲವನ್ನೂ ಬಿಟ್ಟುಬಿಡು ಎಂದು ಹೇಳಿದರು. ಅಂದಾಗ ಇವರು ನಿಮಿತ್ತರಾದರು. ಎಲ್ಲರೂ ಸಹ ಈ ರೀತಿ ನಿಮಿತ್ತರಾಗುವುದಿಲ್ಲ. ಯಾರಿಗೆ ನಶೆಯಿರುತ್ತದೆಯೋ ಅವರು ಬಂದು ಕುಳಿತುಕೊಂಡರು, ನನಗಂತೂ ರಾಜ್ಯಭಾಗ್ಯವು ಸಿಗುತ್ತದೆ ಅಂದಾಗ ಈ ನಯಾಪೈಸೆಯನ್ನು ನಾನೇನು ಮಾಡಲಿ! ಅಂದಾಗ ತಂದೆಯು ಮಕ್ಕಳಿಗೆ ಪುರುಷಾರ್ಥ ಮಾಡಿಸುತ್ತಾರೆ. ರಾಜಧಾನಿಯು ಸ್ಥಾಪನೆಯಾಗುತ್ತಿದೆ, ನಾವು ಲಕ್ಷ್ಮೀ-ನಾರಾಯಣರಿಗಿಂತ ಕಡಿಮೆಯಾಗುವುದಿಲ್ಲ ಎಂದು ಹೇಳುತ್ತಾರೆ ಅಂದಾಗ ಶ್ರೀಮತದಂತೆ ನಡೆದು ತೋರಿಸಬೇಕು. ನೆಪಗಳನ್ನು ಹೇಳಬಾರದು. ಮಕ್ಕಳು-ಮರಿಗಳ ಸ್ಥಿತಿಯೇನಾಗುತ್ತದೆ ಎಂದು ತಂದೆಯು ತಿಳಿಸಿದ್ದಾರೆಯೇ! ಆಶ್ಚರ್ಯವಾಗಿ ಅಪಘಾತದಲ್ಲಿ ಯಾರಾದರೂ ಶರೀರಬಿಟ್ಟರೆ ನಾವು ಹಸಿವಿನಿಂದ ಇರುತ್ತೇವೆಯೇ? ಯಾರಾದರೂ ಮಿತ್ರಸಂಬಂಧಿಗಳು ತಿನ್ನಲು ಕೊಡುತ್ತಾರೆ, ಇಲ್ಲಿ ನೋಡಿ, ಹಳೆಯ ಗುಡಿಸಿಲಿನಲ್ಲಿ ಇರುತ್ತಾರೆ. ನೀವು ಮಕ್ಕಳು ಬಂದು ಅರಮನೆಗಳಲ್ಲಿರುತ್ತೀರಿ. ಮಕ್ಕಳೇ, ಚೆನ್ನಾಗಿ ಓದಿ, ತಿನ್ನಿರಿ, ಕುಡಿಯಿರಿ ಎಂದು ತಂದೆಯು ತಿಳಿಸುತ್ತಾರೆ. ಯಾರೂ ಏನೂ ಸಹ ತಂದಿರುವುದಿಲ್ಲ. ಅವರಿಗೂ ಚೆನ್ನಾಗಿ ಸಿಗುತ್ತದೆ. ನಾನಂತೂ ರಮತಯೋಗಿಯಾಗಿದ್ದೇನೆಂದು ಶಿವತಂದೆಯು ಹೇಳುತ್ತಾರೆ. ಯಾರದೇ ಕಲ್ಯಾಣ ಮಾಡಬೇಕೆಂದರೂ ಮಾಡಬಹುದು. ಯಾರು ಜ್ಞಾನಿ ಮಕ್ಕಳಾಗಿದ್ದಾರೆ, ಅವರು ಎಂದೂ ಸಾಕ್ಷಾತ್ಕಾರದ ಮಾತುಗಳಿಂದ ಸಂತೋಷಿಸುವುದಿಲ್ಲ. ಯೋಗವನ್ನು ಬಿಟ್ಟರೆ ಇನ್ನೇನೂ ಇಲ್ಲ ಆದ್ದರಿಂದ ಈ ಸಾಕ್ಷಾತ್ಕಾರದ ಮಾತುಗಳಲ್ಲಿ ಖುಷಿಪಡಬಾರದಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯೋಗದ ಸ್ಥಿತಿಯನ್ನು ಈ ರೀತಿ ಮಾಡಿಕೊಳ್ಳಬೇಕು- ದೃಷ್ಟಿಕೊಟ್ಟಕೂಡಲೇ ಯಾರನ್ನಾದರೂ ಶಾಂತಗೊಳಿಸಬೇಕು. ಒಮ್ಮೆಲೆ ನಿಶ್ಯಬ್ಧವಾಗಬೇಕು, ಇದಕ್ಕಾಗಿ ಅಶರೀರಿಯಾಗುವ ಅಭ್ಯಾಸ ಮಾಡಬೇಕು.

2. ಜ್ಞಾನದ ಸತ್ಯನಶೆಯಿರಲು ನೆನಪಿರಲಿ- ನಾವು ಸಂಗಮಯುಗಿಯಾಗಿದ್ದೇವೆ, ಈಗ ಈ ಹಳೆಯ ಪ್ರಪಂಚವು ಪರಿವರ್ತನೆಯಾಗುತ್ತದೆ, ನಾವೀಗ ಮನೆಗೆ ಹೋಗುತ್ತಿದ್ದೇವೆ, ಶ್ರೀಮತದಂತೆ ಸದಾ ನಡೆಯಬೇಕು, ನೆಪಗಳನ್ನು ಹೇಳಬಾರದು.

ವರದಾನ:
ಪರಮಾತ್ಮನ ಮಿಲನದ ಮೂಲಕ ಆತ್ಮೀಯ ವಾರ್ತಾಲಾಪದ ಸರಿಯಾದ ಪ್ರತಿಕ್ರಿಯೆ ಪಡೆದುಕೊಳ್ಳುವಂತಹ ತಂದೆಯ ಸಮಾನ ಬಹುರೂಪಿ ಭವ.

ಹೇಗೆ ತಂದೆ ಬಹುರೂಪಿಯಾಗಿದ್ದಾರೆ- ಸೆಕೆಂಡ್ನಲ್ಲಿ ನಿರಾಕಾರಿಯಿಂದ ಆಕಾರಿ ವಸ್ತ್ರ ಧಾರಣೆ ಮಾಡುತ್ತಾರೆ. ಅದೇ ರೀತಿ ತಾವೂ ಸಹ ಈ ಮಣ್ಣಿನ ಡ್ರೆಸ್ ಬಿಟ್ಟು ಆಕಾರೀ ಫರಿಸ್ಥಾ ಡ್ರೆಸ್. ಮಿನುಗುವ ಡ್ರೆಸ್ ಧರಿಸಿಕೊಳ್ಳಿ ಆಗ ಸಹಜವಾಗಿ ಮಿಲನವೂ ಆಗುವುದು ಮತ್ತು ಆತ್ಮೀಯ ವಾರ್ತಾಲಾಪದ ಸ್ಪಷ್ಟ ಪ್ರತಿಕ್ರಿಯೆ ನಿಮಗೆ ತಿಳಿಯುವುದು ಏಕೆಂದರೆ ಆ ಡ್ರೆಸ್ ಹಳೆಯ ಜಗತ್ತಿನ ವೃತ್ತಿ ಮತ್ತು ವೈಬ್ರೇಷನ್ಂದ ಮಾಯೆಯೆಂಬ ವಾಟರ್ ಅಥವಾ ಬೆಂಕಿಯಿಂದ ಫ್ರೂಫ್ ಆಗಿದೆ. ಇದರಲ್ಲಿ ಮಾಯೆ ಹಸ್ತಕ್ಷೇಪ ಮಾಡುವುದಿಲ್ಲ.

ಸ್ಲೋಗನ್:
ಧೃಡತೆ ಅಸಂಭವವನ್ನೂ ಸಂಭವ ಮಾಡಿಬಿಡುವುದು.

ಅವ್ಯಕ್ತ ಸೂಚನೆ: ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.

ಬ್ರಹ್ಮಾಕುಮಾರನ ಅರ್ಥವೇ ಆಗಿದೆ - ಸದಾ ಪವಿತ್ರತೆಯ ವ್ಯಕ್ತಿತ್ವ ಮತ್ತು ಘನತೆಯಲ್ಲಿರುವುದು. ಇದೇ ಪವಿತ್ರತೆಯ ವ್ಯಕ್ತಿತ್ವ. ವಿಶ್ವದ ಆತ್ಮಗಳನ್ನು ತಮ್ಮ ಕಡೆಗೆ ಆಕರ್ಷಿತರನ್ನಾಗಿ ಮಾಡುವುದು - ಇದೇ ಪವಿತ್ರತೆಯ ಘನತೆ ಧರ್ಮರಾಜಪುರಿಯಲ್ಲಿ ಘನತೆ ಕೊಡುವುದರಿಂದ ಬಿಡಿಸುವುದು. ಇದೇ ಘನತೆಯ ಅನುಸಾರ ಭವಿಷ್ಯ ರಾಯಲ್ ಪರಿವಾರದಲ್ಲಿ ಬರಲು ಸಾಧ್ಯ. ಹೇಗೆ ಶರೀರದ ವ್ಯಕ್ತಿತ್ವ ದೇಹ-ಭಾನದಲ್ಲಿ ತರುತ್ತದೆ, ಇಂತಹ ಪವಿತ್ರತೆಯ ವ್ಯಕ್ತಿತ್ವ ದೇಹಿ-ಅಭಿಮಾನಿಯನ್ನಾಗಿ ಮಾಡಿ ತಂದೆಯ ಸಮೀಪ ತರುತ್ತದೆ.