05.05.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಸುಖ-ಶಾಂತಿಯ ವರದಾನವು ಒಬ್ಬ ತಂದೆಯಿಂದಲೇ ಸಿಗುತ್ತದೆ, ಯಾವುದೇ ದೇಹಧಾರಿಯಿಂದಲ್ಲ, ತಂದೆಯು ನಿಮಗೆ
ಮುಕ್ತಿ-ಜೀವನ್ಮುಕ್ತಿಯ ಮಾರ್ಗ ತೋರಿಸಲು ಬಂದಿದ್ದಾರೆ”
ಪ್ರಶ್ನೆ:
ತಂದೆಯ
ಜೊತೆಯಲ್ಲಿ ಹೋಗುವ ಮತ್ತು ಸತ್ಯಯುಗದ ಆದಿಯಲ್ಲಿ ಬರುವ ಪುರುಷಾರ್ಥವೇನಾಗಿದೆ?
ಉತ್ತರ:
ತಂದೆಯ ಜೊತೆ
ಹೋಗಬೇಕೆಂದರೆ ಪೂರ್ಣ ಪವಿತ್ರರಾಗಬೇಕಾಗಿದೆ. ಸತ್ಯಯುಗದ ಆದಿಯಲ್ಲಿ ಬರಲು ಅನ್ಯ ಎಲ್ಲಾ ಸಂಗಗಳನ್ನು
ಬಿಟ್ಟು ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ. ಅವಶ್ಯವಾಗಿ ಆತ್ಮಾಭಿಮಾನಿಗಳಾಗಬೇಕಾಗಿದೆ. ಒಬ್ಬ
ತಂದೆಯ ಮತದಂತೆ ನಡೆದಾಗ ಶ್ರೇಷ್ಠ ಪದವಿಯ ಅಧಿಕಾರ ಸಿಗುವುದು.
ಗೀತೆ:
ನಯನ ಹೀನನಿಗೆ
ದಾರಿ ತೋರಿಸು ಪ್ರಭು.............
ಓಂ ಶಾಂತಿ.
ಈ ಗೀತೆಯನ್ನು ಯಾರು ಹಾಡಿದರು? ಮಕ್ಕಳು. ಏಕೆಂದರೆ ತಂದೆಯಂತೂ ಒಬ್ಬರೇ ಆಗಿದ್ದಾರೆ, ಅವರಿಗೇ
ರಚಯಿತನೆಂದು ಹೇಳಲಾಗುತ್ತದೆ. ರಚನೆಯು ರಚಯಿತನನ್ನು ಕರೆಯುತ್ತದೆ. ತಂದೆಯು ತಿಳಿಸಿದ್ದಾರೆ -
ಭಕ್ತಿಮಾರ್ಗದಲ್ಲಿ ನಿಮಗೆ ಇಬ್ಬರು ತಂದೆಯರಿರುತ್ತಾರೆ, ಒಬ್ಬರು ಲೌಕಿಕ ಇನ್ನೊಬ್ಬರು ಪಾರಲೌಕಿಕ.
ಎಲ್ಲಾ ಆತ್ಮರ ತಂದೆಯು ಒಬ್ಬರೇ ಆಗಿದ್ದಾರೆ. ಒಬ್ಬರೇ ತಂದೆಯಾಗುವ ಕಾರಣ ಎಲ್ಲಾ ಆತ್ಮರು ತಮ್ಮನ್ನು
ಸಹೋದರರೆಂದು ಹೇಳುತ್ತಾರೆ, ಆ ತಂದೆಯನ್ನು ಓ ಗಾಡ್ ಫಾದರ್, ಓ ಪರಮಪಿತ ದಯೆ ತೋರಿಸಿ, ಕ್ಷಮಿಸಿ
ಎಂದು ಕೂಗುತ್ತಾರೆ. ಭಕ್ತರ ರಕ್ಷಕ ಒಬ್ಬ ಭಗವಂತನೇ ಆಗಿದ್ದಾರೆ. ಮೊಟ್ಟ ಮೊದಲು ಇದನ್ನು
ತಿಳಿಸಬೇಕಾಗಿದೆ - ನಮಗೆ ಇಬ್ಬರು ತಂದೆಯರಿದ್ದಾರೆ. ಪಾರಲೌಕಿಕ ತಂದೆಯಂತೂ ಎಲ್ಲರಿಗೂ ಒಬ್ಬರೇ
ಆಗಿದ್ದಾರೆ, ಬಾಕಿ ಪ್ರತಿಯೊಬ್ಬರಿಗೂ ಲೌಕಿಕ ತಂದೆಯು ಬೇರೆ-ಬೇರೆಯಿರುತ್ತಾರೆ. ಈಗ ಲೌಕಿಕ ತಂದೆಯು
ದೊಡ್ಡವರೋ ಅಥವಾ ಪಾರಲೌಕಿಕ ತಂದೆಯು ದೊಡ್ಡವರೋ? ಲೌಕಿಕ ತಂದೆಯನ್ನಂತೂ ಎಂದೂ ಭಗವಂತ ಎಂದು,
ಪರಮಪಿತ ಎಂದೂ ಹೇಳುವುದಿಲ್ಲ. ಆತ್ಮದ ತಂದೆಯು ಅವರೊಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ. ಆತ್ಮದ
ಹೆಸರು ಎಂದೂ ಬದಲಾಗುವುದಿಲ್ಲ, ಶರೀರದ ಹೆಸರು ಬದಲಾಗುತ್ತದೆ. ಆತ್ಮವು ಭಿನ್ನ-ಭಿನ್ನ ಶರೀರವನ್ನು
ತೆಗೆದುಕೊಂಡು ಪಾತ್ರವನ್ನು ಅಭಿನಯಿಸುತ್ತದೆ ಅರ್ಥಾತ್ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ.
ಕೊನೆಗೂ ಎಷ್ಟು ಜನ್ಮಗಳು ಸಿಗುತ್ತವೆಯೆಂದು ತಂದೆಯು ಬಂದು ತಿಳಿಸುತ್ತಾರೆ. ನೀವು ಮಕ್ಕಳು ತಮ್ಮ
ಜನ್ಮಗಳ ಬಗ್ಗೆ ತಿಳಿದುಕೊಂಡಿಲ್ಲ. ತಂದೆಯು ಭಾರತದಲ್ಲಿಯೇ ಬರುತ್ತಾರೆ, ಅವರ ಹೆಸರಾಗಿದೆ - ಶಿವ.
ಶಿವನು ಪರಮಾತ್ಮನಾಗಿದ್ದಾರೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಶಿವ ಜಯಂತಿ ಅಥವಾ ಶಿವ
ರಾತ್ರಿಯನ್ನೂ ಆಚರಣೆ ಮಾಡುತ್ತಾರೆ. ಅವರು ನಿರಾಕಾರನಾಗಿದ್ದಾರೆ. ಹೇಗೆ ಆತ್ಮವೂ ನಿರಾಕಾರಿಯಾಗಿದೆ.
ನಿರಾಕಾರಿಯಿಂದ ಪಾತ್ರವನ್ನು ಅಭಿನಯಿಸಲು ಸಾಕಾರದಲ್ಲಿ ಬರುತ್ತದೆ. ಈಗ ನಿರಾಕಾರ ಶಿವನಂತೂ
ಶರೀರವಿಲ್ಲದೆ ಪಾತ್ರವನ್ನು ಅಭಿನಯಿಸಲು ಸಾಧ್ಯವಿಲ್ಲ. ಮನುಷ್ಯರು ಈ ಮಾತುಗಳನ್ನು ಏನೂ
ತಿಳಿದುಕೊಳ್ಳುವುದಿಲ್ಲ, ನಯನ ಹೀನರಾಗಿದ್ದಾರೆ. ಈ ಶರೀರದ ಎರಡು ಕಣ್ಣುಗಳಂತೂ ಎಲ್ಲರಿಗೂ ಇದೆ.
ಆತ್ಮಕ್ಕೆ ಜ್ಞಾನದ ಮೂರನೇ ನೇತ್ರವಿಲ್ಲ, ಇದಕ್ಕೆ ದಿವ್ಯ ಚಕ್ಷುವೆಂದೂ ಹೇಳುತ್ತಾರೆ. ಆತ್ಮವು
ತನ್ನ ತಂದೆಯನ್ನು ಮರೆತು ಬಿಟ್ಟಿದೆ ಆದ್ದರಿಂದ ನಯನಹೀನರಿಗೆ ದಾರಿ ತೋರಿಸಿ ಎಂದು ಕೂಗುತ್ತಾರೆ.
ಎಲ್ಲಿಯ ದಾರಿ? ಶಾಂತಿಧಾಮ ಮತ್ತು ಸುಖಧಾಮದ ದಾರಿ. ಸರ್ವರ ಸದ್ಗತಿದಾತ ಸದ್ಗುರು ಒಬ್ಬರೇ
ಆಗಿದ್ದಾರೆ. ಮನುಷ್ಯರು ಮನುಷ್ಯರಿಗೆ ಗುರುಗಳಾಗಿ ಸದ್ಗತಿ ನೀಡಲು ಸಾಧ್ಯವಿಲ್ಲ. ತಾನೂ ಸದ್ಗತಿ
ಪಡೆಯುವುದಿಲ್ಲ, ಅನ್ಯರಿಗೂ ನೀಡುವುದಿಲ್ಲ. ಒಬ್ಬ ತಂದೆಯೇ ಸರ್ವರಿಗೆ ಸದ್ಗತಿ ಕೊಡುತ್ತಾರೆ. ಆ
ತಂದೆಯನ್ನೇ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಯಾವುದೇ ಮನುಷ್ಯ ಮಾತ್ರರು
ಮುಕ್ತಿ-ಜೀವನ್ಮುಕ್ತಿ, ಶಾಂತಿ ಮತ್ತು ಸುಖವನ್ನು ಸದಾಕಾಲಕ್ಕಾಗಿ ಕೊಡಲು ಸಾಧ್ಯವಿಲ್ಲ.
ಸುಖ-ಶಾಂತಿಯ ವರದಾನವನ್ನು ಒಬ್ಬ ತಂದೆಯೇ ಕೊಡುತ್ತಾರೆ, ಮನುಷ್ಯರು ಮನುಷ್ಯರಿಗೆ ಕೊಡಲು
ಸಾಧ್ಯವಿಲ್ಲ. ಭಾರತವಾಸಿಗಳು ಸತೋಪ್ರಧಾನರಾಗಿದ್ದಾರೆ, ಸತ್ಯಯುಗೀ ಸ್ವರ್ಗವಾಸಿಗಳಾಗಿದ್ದರು,
ಆತ್ಮವು ಪವಿತ್ರವಾಗಿತ್ತು. ಭಾರತಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ಯಾವಾಗ ಆತ್ಮರು ಪವಿತ್ರ,
ಸತೋಪ್ರಧಾನರಾಗಿದ್ದರು.
ನೀವು
ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಇಂದಿಗೆ 5000 ವರ್ಷಗಳ ಮೊದಲು ಭಾರತವು ಸ್ವರ್ಗ,
ಸತೋಪ್ರಧಾನವಾಗಿತ್ತು. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಈಗ ಕಲಿಯುಗದ ಅಂತ್ಯವಾಗಿದೆ, ಇದಕ್ಕೆ
ನರಕವೆಂದು ಹೇಳಲಾಗುತ್ತದೆ. ಇದೇ ಭಾರತವು ಸ್ವರ್ಗವಾಗಿದ್ದಾಗ ಬಹಳ ಧನವಂತನಾಗಿತ್ತು,
ವಜ್ರ-ವೈಡೂರ್ಯಗಳ ಮಹಲು ಇತ್ತು. ತಂದೆಯು ಮಕ್ಕಳಿಗೆ ನೆನಪು ತರಿಸುತ್ತಾರೆ - ಸತ್ಯಯುಗದ ಆದಿಯಲ್ಲಿ
ಈ ಲಕ್ಷ್ಮೀ-ನಾರಾಯಣರ ರಾಜಧಾನಿಯಿತ್ತು, ಅದಕ್ಕೆ ಸ್ವರ್ಗ, ವೈಕುಂಠವೆಂದು ಹೇಳಲಾಗುತ್ತಿತ್ತು.
ಈಗಂತೂ ಸ್ವರ್ಗವು ಇಲ್ಲ, ಇದನ್ನು ತಂದೆಯು ತಿಳಿಸುತ್ತಾರೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ.
ನಿರಾಕಾರ ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ಅವರು ಏನು ಮಾಡುತ್ತಾರೆ ಎಂಬುದನ್ನಂತೂ
ತಿಳಿದುಕೊಂಡಿಲ್ಲ. ನಾವಾತ್ಮರ ತಂದೆಯು ಶಿವನಾಗಿದ್ದಾರೆ, ನಾವು ಅವರ ಜಯಂತಿಯನ್ನು ಆಚರಿಸುತ್ತೇವೆ.
ಮನುಷ್ಯರು ತಂದೆಯ ಚರಿತ್ರೆಯನ್ನೇ ತಿಳಿದುಕೊಂಡಿಲ್ಲ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು ಎಂದು
ಗಾಯನವಿದೆ. ಓ ಗಾಡ್ಫಾದರ್ ದಯೆ ತೋರಿಸಿ, ನಾವು ಬಹಳ ದುಃಖಿಯಾಗಿದ್ದೇವೆ ಎಂದು ಕರೆಯುತ್ತಾರೆ
ಏಕೆಂದರೆ ಇದು ರಾವಣ ರಾಜ್ಯವಾಗಿದೆ. ವರ್ಷ-ವರ್ಷವೂ ರಾವಣನನ್ನು ಸುಡುತ್ತಾರಲ್ಲವೆ ಆದರೆ ಈ ಹತ್ತು
ತಲೆಯ ರಾವಣನು ಯಾರು? ನಾವು ಅವನನ್ನು ಏಕೆ ಸುಡುತ್ತೇವೆ? ಇವನು ಎಂತಹ ಶತ್ರುವಾಗಿದ್ದಾನೆ, ಯಾವ
ಕಾರಣ ಅವನ ಪ್ರತಿಮೆ ಮಾಡಿ ಸುಡುತ್ತೇವೆ ಎಂಬುದನ್ನು ಭಾರತವಾಸಿಗಳು ಸ್ವಲ್ಪವೂ ತಿಳಿದುಕೊಂಡಿಲ್ಲ
ಏಕೆಂದರೆ ಜ್ಞಾನದ ಮೂರನೇ ನೇತ್ರವಿಲ್ಲ ಆದ್ದರಿಂದಲೇ ರಾಮ ರಾಜ್ಯ ಬೇಕೆಂದು ಬಯಸುತ್ತಾರೆ. 5
ವಿಕಾರಗಳು ಸ್ತ್ರೀಯಲ್ಲಿ, 5 ವಿಕಾರಗಳು ಪುರುಷನಲ್ಲಿಯೂ ಇವೆ ಆದ್ದರಿಂದ ಇದಕ್ಕೆ ರಾವಣ
ಸಂಪ್ರದಾಯವೆಂದು ಹೇಳಲಾಗುತ್ತದೆ. ಈ ಪಂಚ ವಿಕಾರಗಳ ರಾವಣನೇ ಅತಿ ದೊಡ್ಡ ಶತ್ರುವಾಗಿದ್ದಾನೆ. ಇವನ
ಪ್ರತಿಮೆ ಮಾಡಿ ಸುಡುತ್ತಾರೆ ಆದರೆ ರಾವಣನು ಯಾರು? ಯಾರನ್ನು ಸುಡುತ್ತೇವೆ? ರಾವಣ ರಾಜ್ಯ, ಪಂಚ
ವಿಕಾರಗಳು ಎಂದಿನಿಂದ ಆರಂಭವಾಯಿತು ಎಂಬುದು ಭಾರತವಾಸಿಗಳಿಗೆ ಅರ್ಥವೇ ಆಗುವುದಿಲ್ಲ. ತಂದೆಯು
ತಿಳಿಸುತ್ತಾರೆ - ಸತ್ಯ, ತ್ರೇತಾಯುಗವು ರಾಮ ರಾಜ್ಯವಾಗಿದೆ, ದ್ವಾಪರ-ಕಲಿಯುಗವು ರಾವಣ
ರಾಜ್ಯವಾಗಿದೆ. ಸತ್ಯಯುಗದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇವರಿಗೆ ಈ ರಾಜ್ಯವು
ಎಲ್ಲಿಂದ, ಹೇಗೆ ಸಿಕ್ಕಿತು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಇವು ತಿಳಿದುಕೊಳ್ಳುವ
ಮಾತುಗಳಾಗಿವೆ. ಇದರಲ್ಲಿ ಗಮನ ಕೊಡಬೇಕಾಗಿದೆ. ಅತೀ ಪ್ರಿಯ ತಂದೆಯಾಗಿದ್ದಾರೆ ಆದ್ದರಿಂದಲೇ ಅವರನ್ನು
ಭಕ್ತಿಮಾರ್ಗದಲ್ಲಿಯೂ ಕರೆಯುತ್ತಾರೆ. ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ದುಃಖದ
ಹೆಸರೂ ಇರಲಿಲ್ಲ, ಈಗ ದುಃಖಧಾಮವಾಗಿದೆ. ಎಷ್ಟೊಂದು ಧರ್ಮಗಳಿವೆ, ಸತ್ಯಯುಗದಲ್ಲಿ ಒಂದು ಧರ್ಮವಿತ್ತು,
ಇಷ್ಟೆಲ್ಲಾ ಆತ್ಮರು ಎಲ್ಲಿ ಹೊರಟು ಹೋದರು? ಇದು ಯಾರಿಗೂ ತಿಳಿದಿಲ್ಲ ಏಕೆಂದರೆ ನಯನ
ಹೀನರಾಗುತ್ತಾರೆ. ಶಾಸ್ತ್ರಗಳಿಂದ ಯಾರಿಗೂ ಜ್ಞಾನದ ಮೂರನೇ ನೇತ್ರವು ಸಿಗುವುದಿಲ್ಲ, ಜ್ಞಾನ
ನೇತ್ರವನ್ನು ಜ್ಞಾನ ಸಾಗರ, ಪರಮಪಿತ ಪರಮಾತ್ಮನೇ ಕೊಡುತ್ತಾರೆ. ಆತ್ಮಕ್ಕೆ ಮೂರನೇ ನೇತ್ರವು
ಸಿಗುತ್ತದೆ. ನಾವೆಷ್ಟು ಜನ್ಮಗಳನ್ನು ತೆಗೆದುಕೊಳ್ಳುವೆವೋ ಸತ್ಯಯುಗದಲ್ಲಿ ಯಾವ ದೇವತೆಗಳ
ರಾಜ್ಯವಿತ್ತೋ ಅದು ಎಲ್ಲಿ ಹೋಯಿತೆಂದು ಆತ್ಮವು ಮರೆತು ಹೋಯಿತು. ಮನುಷ್ಯರು 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾರೆ. 84 ಜನ್ಮಗಳ ಚಕ್ರ ಎಂದು ಹೇಳುತ್ತಾರೆ ಆದರೆ ಯಾವ ಆತ್ಮವು 84 ಜನ್ಮಗಳನ್ನು
ತೆಗೆದುಕೊಳ್ಳುತ್ತದೆ? ಯಾರು ಮೊದಲು ಭಾರತದಲ್ಲಿ ಬರುವರೋ ಅವರು ದೇವಿ-ದೇವತೆಗಳಾಗಿದ್ದರು ನಂತರ 84
ಜನ್ಮಗಳನ್ನು ಭೋಗಿಸಿ ಅಂತ್ಯದಲ್ಲಿ ಪತಿತರಾಗಿ ಬಿಡುತ್ತಾರೆ. ಹೇ ಪತಿತ-ಪಾವನ ಎಂದು ಹಾಡುತ್ತಾರೆ,
ಇದರಿಂದ ನಾವು ಪತಿತರಾಗಿದ್ದೇವೆ ಎಂಬುದನ್ನು ಸಿದ್ಧ ಮಾಡಿಕೊಳ್ಳುತ್ತಾರೆ ಆದ್ದರಿಂದ ಹೇ
ಪತಿತ-ಪಾವನ, ನಮ್ಮನ್ನು ಪಾವನ ಮಾಡಲು ಬನ್ನಿ ಎಂದು ಕರೆಯುತ್ತಾರೆ. ಯಾರು ಸ್ವಯಂ
ಪತಿತರಾಗಿದ್ದಾರೆಯೋ ಅವರು ಅನ್ಯರನ್ನು ಹೇಗೆ ಪಾವನ ಮಾಡುವರು? ತಂದೆಯು ತಿಳಿಸುತ್ತಾರೆ, ಅರ್ಧಕಲ್ಪ
ರಾವಣ ರಾಜ್ಯ, ಪಂಚ ವಿಕಾರಗಳಿರುವ ಕಾರಣ ಭಾರತವು ಇಷ್ಟು ದುಃಖಿಯಾಗಿದೆ, 84 ಜನ್ಮಗಳನ್ನಂತೂ
ತೆಗೆದುಕೊಳ್ಳಬೇಕಾಗಿದೆ, ಇದರ ಲೆಕ್ಕವನ್ನೂ ತಿಳಿಸಬೇಕು. ಮೊಟ್ಟ ಮೊದಲು ಸತ್ಯಯುಗದಲ್ಲಿ
ಸತೋಪ್ರಧಾನರು ನಂತರ ತ್ರೇತಾದಲ್ಲಿ ಸತೋ..... ಹೀಗೆ ಆತ್ಮದಲ್ಲಿ ತುಕ್ಕು ಬೀಳುತ್ತದೆ. ತಂದೆಯು
ಭಾರತದಲ್ಲಿಯೇ ಬರುತ್ತಾರೆ. ಶಿವ ಜಯಂತಿ ಇದೆಯಲ್ಲವೆ. ಮತ್ತೆಲ್ಲಾ ಆತ್ಮರು ಗರ್ಭದಲ್ಲಿ ಜನ್ಮ
ಪಡೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ಶರೀರದಲ್ಲಿ ಪ್ರವೇಶ ಮಾಡುತ್ತೇನೆ.
ಇವರದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಈ ತಿಳುವಳಿಕೆಯನ್ನು ಕೇವಲ ಒಬ್ಬರಿಗೇ ನೀಡಲಾಗುವುದಿಲ್ಲ.
ಇದು ಗೀತಾ ಪಾಠಶಾಲೆಯಾಗಿದೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ಈ ರಾಜಯೋಗವನ್ನು
ಕಲಿಸಲಾಗುತ್ತದೆ. ನೀವಿಲ್ಲಿ ಸ್ವರ್ಗದ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ಬಂದಿದ್ದೀರಿ
ಯಾವುದನ್ನು ತಂದೆಯೇ ಕೊಡಲು ಸಾಧ್ಯ. ಗೀತೆಯನ್ನು ಓದುವುದರಿಂದ ಯಾರೂ ರಾಜರಾಗುವುದಿಲ್ಲ. ಇನ್ನೂ
ಇಳಿಯುತ್ತಲೇ ಹೋಗುತ್ತಾರೆ. ತಂದೆಯು ಗೀತಾ ಜ್ಞಾನವನ್ನು ತಿಳಿಸಿ ರಾಜರನ್ನಾಗಿ ಮಾಡುತ್ತಾರೆ,
ಅನ್ಯರ ಮೂಲಕ ಗೀತೆಯನ್ನು ಕೇಳುವುದರಿಂದ ಎಲ್ಲಾ ಬಡವರಾಗಿ ಬಿಟ್ಟಿದ್ದಾರೆ. ಭಾರತದಲ್ಲಿ ಈ
ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಸುಖ, ಶಾಂತಿ, ಪವಿತ್ರತೆಯಿತ್ತು. ಪವಿತ್ರ ಗೃಹಸ್ಥ
ಆಶ್ರಮವಿತ್ತು, ಅಲ್ಲಿ ಹಿಂಸೆಯ ಹೆಸರಿಲಿಲ್ಲ, ಮತ್ತೆ ದ್ವಾಪರದಿಂದ ಹಿಡಿದು ಹಿಂಸೆಯು ಆರಂಭವಾಗಿದೆ.
ಕಾಮ ಕಟಾರಿಯನ್ನು ನಡೆಸುತ್ತಾ-ನಡೆಸುತ್ತಾ ನಿಮ್ಮದು ಈ ಸ್ಥಿತಿಯುಂಟಾಗಿದೆ. ಸತ್ಯಯುಗದಲ್ಲಿ 100%
ಸಾಹುಕಾರರು, ಸತೋಪ್ರಧಾನರಾಗಿದ್ದಿರಿ. ಈ ರಹಸ್ಯವನ್ನು ಯಾವುದೇ ಮನುಷ್ಯರಾಗಲಿ, ಸಾಧು-ಸಂತರಾಗಲಿ
ತಿಳಿದುಕೊಂಡಿಲ್ಲ. ಯಾವ ತಂದೆಯು ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆಯೋ ಅವರೇ ಬಂದು
ಸತೋಪ್ರಧಾನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ರಾವಣನ ಮತದಂತೆ ನೀವು ಮನುಷ್ಯರ ಗತಿ ಏನಾಗಿ
ಬಿಟ್ಟಿದೆ! ರಾಜರೂ ಸಹ ಯಾವ ಪವಿತ್ರ ರಾಜರು ಬಂದು ಹೋಗಿದ್ದಾರೆಯೋ ಅವರ ಚರಣಗಳಿಗೆ ಬೀಳುತ್ತಾರೆ
ಮತ್ತು ತಾವು ಸರ್ವ ಗುಣ ಸಂಪನ್ನರು, ನಾವು ನೀಚರು, ಪಾಪಿಗಳು ನಮ್ಮಲ್ಲಿ ಯಾವುದೇ ಗುಣವಿಲ್ಲವೆಂದು
ಹಾಡುತ್ತಾರೆ. ತಾವೇ ಬಂದು ನಮ್ಮನ್ನು ಮಂದಿರಕ್ಕೆ ಯೋಗ್ಯರನ್ನಾಗಿ ಮಾಡಿ, ತಾವೇ ದಯೆ ತೋರಿಸಿ ಎಂದು
ಹೇಳುತ್ತಾರೆ ಆದರೆ ತಂದೆಯು ಹೇಗೆ ಬಂದು ಪುನಃ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿಸುತ್ತಾರೆ
ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ನಾವೇ ದೇವಿ-ದೇವತಾ
ಧರ್ಮದವರಾಗಿದ್ದೆವು, ಮತ್ತೆ ನಾವೇ ಕ್ಷತ್ರಿಯ, ವೈಶ್ಯ, ಶೂದ್ರರಾದೆವು. ಈಗ 84 ಜನ್ಮಗಳು ಮುಗಿಯಿತು.
ಮತ್ತೆ ಪ್ರಪಂಚದ ಚಕ್ರವು ಸುತ್ತಬೇಕಾಗಿದೆ. ಆದ್ದರಿಂದ ಪುನಃ ನೀವು ಇಲ್ಲಿ ಪಾವನರಾಗಬೇಕಾಗಿದೆ.
ಪತಿತರಂತೂ ಸುಖಧಾಮ, ಶಾಂತಿಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನೀವು
ಸತೋಪ್ರಧಾನರಾಗಿದ್ದವರೇ ತಮೋಪ್ರಧಾನರಾಗಿದ್ದೀರಿ. ಸತೊಪ್ರಧಾನರಿಂದ ತಮೋಪ್ರಧಾನರಾದಿರಿ ಮತ್ತೆ
ಸತೋಪ್ರಧಾನರಾಗಬೇಕಾಗಿದೆ ಆಗಲೇ ಮುಕ್ತಿಧಾಮ, ಸುಖಧಾಮಕ್ಕೆ ಹೋಗುವಿರಿ. ಭಾರತವು ಸುಖಧಾಮವಾಗಿತ್ತು,
ಈಗ ದುಃಖಧಾಮವಾಗಿದೆ. ನಯನ ಹೀನನಿಗೆ ದಾರಿ ತೋರಿಸು ಪ್ರಭು ಎಂದು ಗೀತೆಯಲ್ಲಿಯೂ ಕೇಳಿದಿರಿ.
ಮನುಷ್ಯರಂತೂ ಪರಮಾತ್ಮನು ಸರ್ವವ್ಯಾಪಿಯಾಗಿದ್ದಾರೆ, ಇಂತಹ ಅವತಾರವಾಗಿದ್ದಾರೆ, ಪರಶುರಾಮನ
ಅವತಾರವಾಗಿದ್ದಾರೆಂದು ಹೇಳುತ್ತಾರೆ ಆದರೆ ತಂದೆಯು ಪರಶುರಾಮನಾಗಿ ಯಾರನ್ನಾದರೂ ಸಾಯಿಸುವರೇ? ಇದು
ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಈ ಚಕ್ರದಲ್ಲಿ ಹೇಗೆ 84 ಜನ್ಮಗಳನ್ನು
ತೆಗೆದುಕೊಂಡಿದ್ದೀರಿ, ಈಗ ತಂದೆಯಾದ ನನ್ನನ್ನು ನೆನಪು ಮಾಡಿ. ಹೇ ಆತ್ಮರೇ, ದೇಹೀ-ಅಭಿಮಾನಿಗಳಾಗಿ.
ದೇಹಾಭಿಮಾನಿಗಳಾಗಿ ನೀವು ಸಂಪೂರ್ಣ ದುಃಖಿ, ಕಂಗಾಲ, ನರಕವಾಸಿಗಳಾಗಿ ಬಿಟ್ಟಿದ್ದೀರಿ. ಒಂದುವೇಳೆ
ಸ್ವರ್ಗವಾಸಿಗಳಾಗಬೇಕೆಂದರೆ ಖಂಡಿತವಾಗಿಯೂ ಆತ್ಮಾಭಿಮಾನಿಗಳಾಗಬೇಕಾಗಿದೆ. ಆತ್ಮವೇ ಒಂದು ಶರೀರವನ್ನು
ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಈಗ 84 ಜನ್ಮಗಳು ಪೂರ್ಣವಾಯಿತು, ಮತ್ತೆ ಸತ್ಯಯುಗದ
ಆದಿಯಲ್ಲಿ ಹೋಗಬೇಕಾಗಿದೆ ಆದ್ದರಿಂದ ಈಗ ನನ್ನನ್ನು ನೆನಪು ಮಾಡಿ ಮತ್ತೆಲ್ಲಾ ಸಂಗಗಳಿಂದ
ಬುದ್ಧಿಯೋಗವನ್ನು ತೆಗೆಯಿರಿ. ಭಲೆ ಗೃಹಸ್ಥ ವ್ಯವಹಾರದಲ್ಲಿಯೇ ಇರಿ, ತಮ್ಮನ್ನು ಆತ್ಮ ನಿಶ್ಚಯ
ಮಾಡಿಕೊಳ್ಳಿ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಈಗ
ದೇಹೀ-ಅಭಿಮಾನಿಗಳಾಗಬೇಕಾಗಿದೆ. ನನ್ನನ್ನು ನೆನಪು ಮಾಡಿದರೆ ಇರುವ ತುಕ್ಕೆಲ್ಲವೂ ಭಸ್ಮವಾಗುತ್ತದೆ.
ನೀವು ಪವಿತ್ರರಾಗಿ ಬಿಡುತ್ತೀರಿ, ಆಗ ನಾನು ಎಲ್ಲಾ ಮಕ್ಕಳನ್ನು ಕರೆದುಕೊಂಡು ಹೋಗುವೆನು. ಒಂದುವೇಳೆ
ನನ್ನ ಮತದಂತೆ ನಡೆಯದಿದ್ದರೆ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ. ಈ ಲಕ್ಷ್ಮೀ-ನಾರಾಯಣರದು
ಶ್ರೇಷ್ಠ ಪದವಿಯಾಗಿದೆ. ಇವರ ರಾಜ್ಯವಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ. ದ್ವಾಪರದಿಂದ ಹಿಡಿದು
ಅನ್ಯ ಧರ್ಮಗಳು ಬರುತ್ತವೆ. ಸತ್ಯಯುಗದಲ್ಲಿ ಕೆಲವರೇ ಮನುಷ್ಯರಿರುತ್ತಾರೆ, ಈಗಂತೂ ಬಹಳ
ಧರ್ಮಗಳಿರುವ ಕಾರಣ ಎಷ್ಟೊಂದು ದುಃಖಿಯಾಗಿ ಬಿಟ್ಟಿದ್ದಾರೆ. ಆ ದೇವತಾ ಧರ್ಮದವರೇ ಈಗ
ಪತಿತರಾಗಿರುವುದರಿಂದ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳುವುದಿಲ್ಲ, ಹಿಂದೂಗಳೆಂದು ಹೆಸರನ್ನು
ಇಟ್ಟು ಬಿಟ್ಟಿದ್ದಾರೆ. ಹಿಂದೂ ಎಂಬ ಧರ್ಮವು ಯಾವುದೂ ಇಲ್ಲ. ರಾವಣನೇ ನಿಮ್ಮನ್ನು ಈ ರೀತಿ ಮಾಡಿ
ಬಿಟ್ಟಿದ್ದಾನೆ. ನೀವು ಯಾವಾಗ ಯೋಗ್ಯ ದೇವಿ-ದೇವತೆಗಳಾಗಿದ್ದಿರೋ ಆಗ ಇಡೀ ವಿಶ್ವದ ಮೇಲೆ
ರಾಜ್ಯವಿತ್ತು, ಎಲ್ಲರೂ ಸುಖಿಯಾಗಿದ್ದರು, ಈಗ ದುಃಖಿಯಾಗಿ ಬಿಟ್ಟಿದ್ದಾರೆ. ಭಾರತವೇ
ಸ್ವರ್ಗವಾಗಿತ್ತು, ಈಗ ನರಕವಾಗಿ ಬಿಟ್ಟಿದೆ. ಮತ್ತೆ ನರಕವನ್ನು ಸ್ವರ್ಗವನ್ನಾಗಿ ತಂದೆಯ ವಿನಃ
ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ದೇವತೆಗಳಿಗೆ ಸಂಪೂರ್ಣ ನಿರ್ವಿಕಾರಿಗಳೆಂದು ಹೇಳಲಾಗುತ್ತದೆ.
ಇಲ್ಲಿಯ ಮನುಷ್ಯರಂತೂ ಸಂಪೂರ್ಣ ವಿಕಾರಿಗಳಾಗಿದ್ದಾರೆ, ಇವರಿಗೆ ಪತಿತರೆಂದು ಹೇಳಲಾಗುತ್ತದೆ.
ಭಾರತವು ಶಿವಾಲಯವಾಗಿತ್ತು, ಶಿವ ತಂದೆಯಿಂದ ಸ್ಥಾಪನೆ ಮಾಡಲ್ಪಟ್ಟಿತ್ತು. ತಂದೆಯು ಸ್ವರ್ಗವನ್ನಾಗಿ
ಮಾಡುತ್ತಾರೆ ಮತ್ತೆ ರಾವಣನು ನರಕವನ್ನಾಗಿ ಮಾಡುತ್ತಾನೆ. ರಾವಣನು ಶಾಪ ಕೊಡುತ್ತಾನೆ, ತಂದೆಯು 21
ಜನ್ಮಗಳಿಗಾಗಿ ಆಸ್ತಿ ಕೊಡುತ್ತಾರೆ. ನೀವೀಗ ಪ್ರತಿಯೊಬ್ಬರೂ ತಂದೆಯನ್ನೇ ನೆನಪು ಮಾಡಿ, ಯಾವುದೇ
ದೇಹಧಾರಿಗಳನ್ನಲ್ಲ. ಯಾವುದೇ ದೇಹಧಾರಿಗಳಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಭಗವಂತನು ಒಬ್ಬರೇ
ಆಗಿದ್ದಾರೆ, ತಂದೆಯಂತೂ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ ನಂತರ ರಾವಣನು ಶ್ರಾಪಗ್ರಸ್ಥರನ್ನಾಗಿ
ಮಾಡಿ ಬಿಡುತ್ತಾನೆ. ಈ ಸಮಯದಲ್ಲಿ ಭಾರತವು ಶಾಪಗ್ರಸ್ಥನಾಗಿದೆ, ಬಹಳ ದುಃಖಿಯಾಗಿದ್ದಾರೆ. ಈಗ ಈ
ರಾವಣನ ಮೇಲೆ ಜಯ ಗಳಿಸಬೇಕಾಗಿದೆ. ದಾನ ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದೆಂದು ಗಾಯನವಿದೆ. ಆ
ಗ್ರಹಣವಂತೂ ಪೃಥ್ವಿಯ ಛಾಯೆಯಾಗಿದೆ. ಈಗ ತಂದೆಯು ತಿಳಿಸುತ್ತಾರೆ, ನಿಮ್ಮ ಮೇಲೆ ಪಂಚ ವಿಕಾರರೂಪಿ
ರಾವಣನ ಗ್ರಹಣವಿದೆ. ಈ ಐದು ವಿಕಾರಗಳನ್ನು ದಾನದಲ್ಲಿ ಕೊಟ್ಟು ಬಿಡಿ. ಮೊದಲಿಗೆ ಈ ದಾನ ಕೊಡಿ -
ನಾವು ಎಂದೂ ವಿಕಾರದಲ್ಲಿ ಹೋಗುವುದಿಲ್ಲ, ಈ ಕಾಮ ಕಟಾರಿಯು ಮನುಷ್ಯರನ್ನು ಪತಿತರನ್ನಾಗಿ ಮಾಡಿ
ಬಿಡುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯು ಯಾವ
ಜ್ಞಾನ ಕೊಡುತ್ತಾರೆಯೋ ಅದರ ಮೇಲೆ ಪೂರ್ಣ ಗಮನ ಕೊಟ್ಟು ಓದಬೇಕಾಗಿದೆ. ಜ್ಞಾನದ ಮೂರನೇ ನೇತ್ರದಿಂದ
ತಮ್ಮ 84 ಜನ್ಮಗಳನ್ನು ಅರಿತುಕೊಂಡು ಈಗ ಅಂತಿಮ ಜನ್ಮದಲ್ಲಿ ಪಾವನರಾಗಬೇಕಾಗಿದೆ.
2. ರಾವಣನ ಶಾಪದಿಂದ
ಮುಕ್ತರಾಗಲು ಒಬ್ಬ ತಂದೆಯ ನೆನಪಿನಲ್ಲಿರಬೇಕಾಗಿದೆ. ಪಂಚ ವಿಕಾರಗಳ ದಾನ ಕೊಡಬೇಕಾಗಿದೆ. ಒಬ್ಬ
ತಂದೆಯ ಮತದಂತೆ ನಡೆಯಬೇಕಾಗಿದೆ.
ವರದಾನ:
ಕಿರೀಟ ಹಾಗೂ
ತಿಲಕವನ್ನು ಧಾರಣೆ ಮಾಡಿಕೊಂಡು ಬಾಪ್ದಾದಾರವರ ಸಹಯೋಗಿಯಾಗುವ ಹೃದಯ ಸಿಂಹಾಸನಾಧಾರಿ ಭವ.
ಯಾವಾಗ ಯಾರೇ ಸಿಂಹಾಸನದ
ಮೇಲೆ ಕುಳಿತುಕೊಳ್ಳುತ್ತಾರೆಂದರೆ, ಅವರ ಚಿಹ್ನೆಯಾಗಿ ತಿಲಕ ಹಾಗೂ ಕಿರೀಟವಿರುತ್ತದೆ. ಹಾಗೆಯೇ ಯಾರು
ಹೃದಯ ಸಿಂಹಾಸನಾಧಿಕಾರಿ ಆಗಿದ್ದಾರೆಯೋ ಅವರ ಮಸ್ತಕದಲ್ಲಿ ಸದಾ ಅವಿನಾಶಿ ಆತ್ಮನ ಸ್ಥಿತಿಯ ತಿಲಕವು
ದೂರದಿಂದಲೇ ಹೊಳೆಯುತ್ತಿರುವಂತೆ ಕಂಡು ಬರುತ್ತದೆ. ಸರ್ವ ಆತ್ಮರ ಕಲ್ಯಾಣದ ಶುಭ ಭಾವನೆಯು, ಅವರ
ಕಣ್ಣುಗಳಿಂದ ಅಥವಾ ಮುಖದಿಂದ ಕಾಣಿಸುತ್ತದೆ. ಅವರ ಪ್ರತೀ ಸಂಕಲ್ಪ, ವಚನ ಹಾಗೂ ಕರ್ಮವು ತಂದೆಯ
ಸಮಾನವಾಗಿ ಇರುತ್ತದೆ.
ಸ್ಲೋಗನ್:
ಸರಳ ನೆನಪಿಗಾಗಿ
ಸರಳತೆಯ ಗುಣವನ್ನು ಧಾರಣೆ ಮಾಡಿಕೊಳ್ಳಿರಿ, ಸಂಸ್ಕಾರಗಳನ್ನು ಸರಳ ಮಾಡಿಕೊಳ್ಳಿರಿ.
ಅವ್ಯಕ್ತ ಸೂಚನೆ:– “ಸದಾ
ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”
ಯಾರಿಗೆ ಡ್ರಾಮಾದ
ಜ್ಞಾನದ ಶಕ್ತಿ ಪ್ರಾಕ್ಟಿಕಲ್ ಜೀವನದಲ್ಲಿ ಆಗಿದೆ ಅವರು ಎಂದು ಸಹ ಏರುಪೇರಿನಲ್ಲಿ ಬರಲು
ಸಾಧ್ಯವಿಲ್ಲ. ಸದಾ ಏಕರಸ ಅಚಲ ಅಡೋಲ ಆಗುವ ಹಾಗೂ ಮಾಡುವ ವಿಶೇಷ ಶಕ್ತಿ ಇದು ಡ್ರಾಮಾದ ಪಾಯಿಂಟ್
ಆಗಿದೆ. ಇದನ್ನು ಶಕ್ತಿಯ ರೂಪದಲ್ಲಿ ಧಾರಣೆ ಮಾಡುವವರು ಎಂದೂ ಸಹ ಸೋಲಲು ಸಾಧ್ಯವಿಲ್ಲ. ಈ
ಕಲ್ಯಾಣಕಾರಿ ಡ್ರಾಮಾದ ಪ್ರತಿಯೊಂದು ದೃಶ್ಯದಲ್ಲಿ ಯಾವುದೋ ಒಂದು ಕಲ್ಯಾಣ ಸಮಾವೇಶ ವಾಗಿದೆ.
ಸಹನಶೀಲ ಆಗಿ ಸಾಕ್ಷಿಯಾಗಿ ನೋಡುವ ಅಭ್ಯಾಸ ಮಾಡಿ ಆಗ ಅಚಲ ಅಡೋಲರಾಗಿ ಇರುವಿರಿ.