05.07.26    Avyakt Bapdada     Kannada Murli    15.12.2010     Om Shanti     Madhuban


“ನನ್ನದನ್ನು ನಿನ್ನದರಲ್ಲಿ ಪರಿವರ್ತನೆ ಮಾಡಿ ನಿಶ್ಚಿಂತ ಚಕ್ರವರ್ತಿ ಆಗಿ, ಸೆಕೆಂಡಿನಲ್ಲಿ ವ್ಯರ್ಥವನ್ನು ಬಿಂದು ಹಾಕುವ ಅಭ್ಯಾಸಿ ಆಗಿ ಪ್ರತಿಯೊಂದು ಸಂಕಲ್ಪ ಮತ್ತು ಸಮಯವನ್ನು ಸಫಲ ಮಾಡಿ”


ಈ ದಿನ ನಾಲ್ಕಾರು ಕಡೆ ತನ್ನ ನಿಶ್ಚಿಂತ ಚಕ್ರವರ್ತಿ ಮಕ್ಕಳನ್ನು ನೋಡುತ್ತಿದ್ದೇನೆ. ಈ ರೀತಿ ನಿಶ್ಚಿಂತ ಚಕ್ರವರ್ತಿಗಳ ಸಭೆ ಈಗಷ್ಟೇ ಕಂಡು ಬರುತ್ತದೆ, ಏಕೆಂದರೆ ಈಗಷ್ಟೇ ತಂದೆ ಚಿಂತೆಯನ್ನು ತೆಗೆದುಕೊಂಡು ನಿಶ್ಚಿಂತ ಚಕ್ರವರ್ತಿಯನ್ನಾಗಿ ಮಾಡುತ್ತಾರೆ. ಆದ್ದರಿಂದ ತಮ್ಮ ಸಭೆ ಈ ಸಮಯದಲ್ಲಿಯೇ ಕಂಡು ಬರುತ್ತದೆ. ತಾವೆಲ್ಲರೂ ಬೆಳಗ್ಗೆ ಏಳುವಾಗ ನಿಶ್ಚಿಂತ ಸ್ಥಿತಿಯಲ್ಲಿ ಸ್ಥಿತರಾಗುತ್ತೀರಿ. ತಿನ್ನುತ್ತಾ-ಕುಳಿತುಕೊಳ್ಳುತ್ತಾ, ಕರ್ಮ ಮಾಡುತ್ತಾ ಯಾವುದೇ ಚಿಂತೆ ಇಲ್ಲ. ನಿದ್ರೆ ಮಾಡಿದರೂ ನಿಶ್ಚಿಂತ. ಈ ರೀತಿ ಚಕ್ರವರ್ತಿ ಮತ್ತು ನಿಶ್ಚಿಂತತೆ, ಏಳುತ್ತಾ, ನಿದ್ರೆ ಮಾಡುತ್ತಾ ಅನುಭವ ಮಾಡುತ್ತೀರಾ? ಏಕೆಂದರೆ ತಾವೆಲ್ಲರೂ ತಂದೆಗೆ ಚಿಂತೆ ಕೊಟ್ಟು ನಶೆ (ಫಕುರ್) ತೆಗೆದುಕೊಂಡು ಬಿಟ್ಟಿದ್ದೀರಿ ಆದ್ದರಿಂದ ನಿಶ್ಚಿಂತ ಚಕ್ರವರ್ತಿ ಆಗಿ ಬಿಟ್ಟಿದ್ದೀರಿ. ಒಂದುವೇಳೆ ನಡೆಯುತ್ತಾ ಯಾವುದೇ ಚಿಂತೆ ಬಂದು ಬಿಟ್ಟರೆ ಚಿಂತೆ ಏನು ಮಾಡುತ್ತದೆ? ನಶೆ ಇದ್ದರೆ ತಮ್ಮ ಮಸ್ತಕದಲ್ಲಿ ಪ್ರಕಾಶದ ಬೆಳಕು ಹೊಳೆಯುತ್ತದೆ. ಒಂದುವೇಳೆ ಚಿಂತೆ ಬಂದು ಬಿಟ್ಟರೆ ಹೊರೆಯ ಬುಟ್ಟಿ ಬಂದು ಬಿಡುತ್ತದೆ. ಹೇಳಿ ತಮಗೆ ಪ್ರಕಾಶದ ಹೊಳಪು ಚೆನ್ನಾಗಿರುತ್ತದೋ ಅಥವಾ ಹೊರೆಯ ಮಂಕ್ರಿ ಚೆನ್ನಾಗಿರುತ್ತದೋ? ನಿಶ್ಚಿಂತ ಚಕ್ರವತಿ ಸ್ವಯಂಗೂ ಸಹ ಪ್ರಿಯವಾಗುತ್ತದೆ ಮತ್ತು ಯಾರು ಆ ಸ್ಥಿತಿಯಲ್ಲಿ ಹಾರುತ್ತಾರೆ ಅವರ ಹೊಳೆಯುತ್ತಿರುವ ಪ್ರಕಾಶ ನೋಡಿ ಬೇರೆಯವರಿಗೆ ಎಷ್ಟು ಪ್ರಿಯವಾಗುತ್ತದೆ, ಆದ್ದರಿಂದ ಬಾಪ್ದಾದಾರವರು ಸದಾ ಮಕ್ಕಳಿಗೆ ನಿಶ್ಚಿಂತ ಚಕ್ರವರ್ತಿ ಸ್ಥಿತಿಯಲ್ಲಿ ಇರುವುದನ್ನು, ಈ ಸ್ಮೃತಿ ಸ್ವರೂಪದಲ್ಲಿ ಸ್ಥಿತ ಮಾಡುತ್ತಾರೆ. ಆದ್ದರಿಂದ ತಮ್ಮ ಚಿತ್ರಗಳೂ ಸಹ ಭಕ್ತರು ಡಬಲ್ ಕಿರೀಟಧಾರರನ್ನಾಗಿ ತೋರಿಸುತ್ತಾರೆ. ಒಂದು ಪ್ರಕಾಶದ ಕಿರೀಟ ಮತ್ತೆ ಇನ್ನೊಂದು ವಿಕಾರಗಳನ್ನು ಜಯ ಗಳಿಸುವ ಚಕ್ರವರ್ತಿಯ ಕಿರೀಟವನ್ನು ಡಬಲ್ ಕಿರೀಟವನ್ನು ತೋರಿಸುತ್ತಾರೆ. ಅದ್ದರಿಂದ ಬಾಪ್ದಾದಾರವರು ಸದಾ ಪ್ರತಿಯೊಬ್ಬ ಮಗುವಿಗೆ ಶಿಕ್ಷಣವನ್ನು ಕೊಡುತ್ತಾರೆ - ಸದಾ ಮೌಜಿನಲ್ಲಿ ಇರುವುದು ಬಹಳ ಸಹಜವಾಗಿದೆ. ಯಾವುದು ಸಹಜವಾಗಿದೆ. ಕೇವಲ ಹದ್ದಿನ ನನ್ನತನ ತಂದೆಗೆ ಕೊಟ್ಟು ಬಿಡಿ. ನನ್ನದರಿಂದ ನಿನ್ನದು ಮಾಡಿದರೆ ನಿಶ್ಚಿಂತ ಚಕ್ರವರ್ತಿ ಆಗಿ ಬಿಡುತ್ತೀರಿ. ಒಂದೇ ಶಬ್ದದ ಅಂತರವಾಗಿದೆ. ನಿನ್ನದು-ನನ್ನದು. ನಿ ಮತ್ತು ನ ಎಂಬ ಶಬ್ದಗಳ ಅಂತರದಲ್ಲಿ ನಿಶ್ಚಿಂತ ಚಕ್ರವತಿ ಆಗಿ ಬಿಡುತ್ತೀರಿ. ಸಹಜವಾಗಿದೆಯಲ್ಲವೇ! ನಿಶ್ಚಿಂತ ಚಕ್ರವರ್ತಿ ಆಗಿದ್ದೀರಾ? ಚಿಂತೆ ಇರುತ್ತದೆಯೇ? ಒಂದುವೇಳೆ ಎಂದಾದರೂ ನಶೆಗೆ (ಫಕುರ್) ಬದಲಾಗಿ ಚಿಂತೆ ಬಂದು ಬಿಟ್ಟರೆ ಅಂತರ ನಿನ್ನದು ಬದಲಾಗಿ ನನ್ನದು ಎಂದು ತಿಳಿಯುವುದರಿಂದ ಬರುತ್ತದೆ. ಅಂದಾಗ ಎಲ್ಲರದು ಪ್ರತ್ಯಕ್ಷವಾಗಿ ಯಾವ ಲಕ್ಷ್ಯವಿದೆ ಚಿಂತೆ ಕೊಟ್ಟು ಬಿಟ್ಟಿದ್ದೀರಾ ಅಥವಾ ಮಧ್ಯ-ಮಧ್ಯದಲ್ಲಿ ನಶೆಯನ್ನು ಬಿಟ್ಟು ಚಿಂತೆಯಲ್ಲಿ ಬಂದು ಬಿಡುತ್ತೀರೋ! ಚಿಂತೆ ಬರುತ್ತದೋ ಅಥವಾ ನಿಶ್ಚಿಂತವಾಗಿರುತ್ತೀರೋ? ಯಾರು ಸದಾ ನಿಶ್ಚಿಂತ ಚಕ್ರವರ್ತಿಯಾಗಿ ಇರುತ್ತೀರಿ ಅವರು ಕೈ ಎತ್ತಿ. ನಿಶ್ಚಿಂತ ಚಕ್ರವರ್ತಿ, ಪಕ್ಕಾ ಆಗಿದೆಯೋ ಅಥವಾ ಕೆಲವೊಮ್ಮೆ ಮಾತ್ರ ಆಗುತ್ತೀರೋ? ನಿಶ್ಚಿಂತ ಚಕ್ರವರ್ತಿ ಕೈ ಉದ್ದವಾಗಿ ಎತ್ತಿ. ಕೆಲವೊಮ್ಮೆ ಆಗುವವರೂ ಇದ್ದಾರೆ. ಸೇವೆಯ ಚಿಂತೆ ಬೇರೆ ಮಾತಾಗಿದೆ. ಆದರೆ ಆ ಚಿಂತೆ ಬೇರೆಯವರನ್ನೂ ನಿಶ್ಚಿಂತರನ್ನಾಗಿ ಮಾಡುವ ಸಾಧನೆಯಾಗಿದೆ. ತಮ್ಮ ಸಂಸ್ಕಾರಗಳಿಂದ ಒಂದುವೇಳೆ ಚಿಂತೆ ಬಂದರೆ ಅದನ್ನು ಆ ಸಮಯದಲ್ಲಿಯೇ ನನ್ನದರ ಬದಲಾಗಿ ನಿನ್ನದು ಎನ್ನುವುದರಲ್ಲಿ ಪರಿವರ್ತನೆ ಮಾಡಿ ಬಿಡಿ. ತಂದೆಗೆ ಚಿಂತೆ ಕೊಟ್ಟು ಬಿಡಿ ಮತ್ತು ನಶೆಯನ್ನು ತೆಗೆದುಕೊಳ್ಳಿ ಏಕೆಂದರೆ ತಂದೆ ಬಂದಿರುವುದೇ ಮಕ್ಕಳ ಚಿಂತೆಯನ್ನು ತೆಗೆದುಕೊಂಡು ನಶೆಯನ್ನು ಕೊಡಲು. ಅಂದಾಗ ಚೆಕ್ ಮಾಡಿಕೊಳ್ಳಿ ನನ್ನಲ್ಲಿ ಕೆಲವೊಮ್ಮೆ ಬಹಳ ಸಮಯದ ಸಂಸ್ಕಾರ ಇಮರ್ಜ್ ಆಗುವುದಿಲ್ಲ ತಾನೇ? ಏಕೆಂದರೆ ಬಾಪ್ದಾದಾ ಸ್ವಲ್ಪ ಸಮಯದಿಂದ ಮಕ್ಕಳಿಗೆ ವರ್ತಮಾನ ಸಮಯದ ಪ್ರಮಾಣ ಎಂದಾದರೂ ಏನಾದರೂ ಆಗಬಹುದು ಮತ್ತು ಎಂದಾದರೂ ಆಗಬಹುದು ಎಂದು ತಿಳಿಸಿದ್ದಾರೆ, ಆದ್ದರಿಂದ ಪ್ರತಿಯೊಬ್ಬ ಮಗು ತಮಗೆ ತಾವು ಒಂದು ಸೆಕೆಂಡಿನಲ್ಲಿ ಬಿಂದು ಹಾಕಲು ಬಯಸಿದರೆ ಹಾಕಲು ಸಾಧ್ಯವೇ? ಅಟೆನ್ಷನ್ ಕೊಡಬೇಕು. ಯಾವುದೇ ವ್ಯರ್ಥ ಸಂಕಲ್ಪ ಬಂದಿದೆ ಎಂದು ತಿಳಿಯಿರಿ ಆಗ ಬಿಂದು ಮೂಲಕ ಒಂದು ಸೆಕೆಂಡಿನಲ್ಲಿ ವ್ಯರ್ಥವನ್ನು ಸಮಾಪ್ತಿ ಮಾಡಲು ಸಾಧ್ಯವೇ? ಇಷ್ಟು ಅಭ್ಯಾಸವಿದೆಯೇ? ಆ ಸಮಯದಲ್ಲಿ ಸಮಯದ ಪರಿಸ್ಥಿತಿ ಅನುಸಾರವಾಗಿ ಪುರುಷಾರ್ಥ ಮಾಡಿ ವ್ಯರ್ಥವನ್ನು ದೂರ ಮಾಡುವ ಅವಶ್ಯಕತೆ ಇದೆ! ಬಿಂದು ಹಾಕಲು ಬಯಸಿದರೆ ಪ್ರಶ್ನಾರ್ಥ ಆಗಿ ಬಿಡುತ್ತದೆ. ಏಕೆ, ಏನು, ಹೇಗೆ.... ಆ ಸಮಯದಲ್ಲಿ ಇದನ್ನು ಯೋಚನೆ ಮಾಡುತಿದ್ದರೆ ಬರುವಂತಹ ಸಮಯದಲ್ಲಿ ತಂದೆಯ ಜೊತೆ ಹೋಗುವ ಯಾವ ಲಕ್ಷ್ಯವಿದೆ, ತಂದೆಯಂತೂ ಸೆಕೆಂಡಿನಲ್ಲಿ ಬಿಂದು ಆಗಿದ್ದಾರೆ ಮತ್ತು ಸೆಕೆಂಡೂ ಸಹ ಬಿಂದು ಆಗಿದೆ ಮತ್ತು ಫುಲ್ಸ್ಟಾಪ್ ಸಹ ಬಿಂದು ಆಗಿದೆ. ಇಷ್ಟು ಅಭ್ಯಾಸವಿದೆಯೇ? ಆದ್ದರಿಂದ ಈಗಿನಿಂದ ಈ ಅಭ್ಯಾಸದ ಅಭ್ಯಾಸಿ ಆಗಿದ್ದರೆ ತಂದೆಯ ಸಮಾನ ಶ್ರೀಮತದ ಕೈಯಲ್ಲಿ ಕೈ ಕೊಡುತ್ತಾ ತಮ್ಮ ಮನೆ ತಲುಪಿ ಬಿಡುತ್ತೀರಿ. ಆದ್ದರಿಂದ ಬಾಪ್ದಾದಾರವರು ಮೊದಲೂ ತಿಳಿಸಿದ್ದಾರೆ ಎರಡು ಮಾತುಗಳ ಅಟೆನ್ಷನ್ ಅಂಡರ್ಲೈನ್ ಮಾಡಿ. ಎರಡು ಮಾತುಗಳು ಯಾವುದು?

ಒಂದು ಸಂಕಲ್ಪದ ಖಜಾನೆ ಮತ್ತೊಂದು ಸಮಯದ ಖಜಾನೆಯಾಗಿದೆ. ಖಜಾನೆಗಳಂತೂ ಬಹಳ ಸಿಕ್ಕಿದೆ, ಜ್ಞಾನದ ಖಜಾನೆ, ಶಕ್ತಿಗಳ ಖಜಾನೆ, ಯೋಗದ ಮೂಲಕ ಯಾವುದೆಲ್ಲಾ ಮುಖ್ಯವಾಗಿ ಸಂಪನ್ನರಾಗುವ ಯುಕ್ತಿಗಳಿದೆ, ಎಲ್ಲವನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಾ? ಏಕೆಂದರೆ ಸಂಗಮಯುಗದ ಸಮಯ ಇಡೀ ಕಲ್ಪದಲ್ಲಿ ಅಮೂಲ್ಯ ವಿಶೇಷ ಸಮಯವಾಗಿದೆ, ಈ ಸಮಯವೇ ಎಷ್ಟು ಪ್ರಾಪ್ತಿ ಮಾಡಿಕೊಳ್ಳಲು ಬಯಸುತ್ತೀರೋ ಅಷ್ಟು ಮಾಡಿಕೊಳ್ಳಬಹುದು ಏಕೆಂದರೆ ಈ ಒಂದು ಜನ್ಮ ಮಹಾನ್ ಜನ್ಮವಾಗಿದೆ. ಒಂದು ಜನ್ಮದಲ್ಲಿ ಅನೇಕ ಜನ್ಮಗಳ ಪ್ರಾಲಬ್ದವನ್ನು ಮಾಡಿಕೊಳ್ಳಬೇಕು. ಸಂಗಮ ಯುಗದ ಸಮಯ ಒಂದು ಸೆಕೆಂಡ್ ಸಹ ಹಾಳು ಮಾಡಬಾರದು. ಒಂದು ಸೆಕೆಂಡಿನ ಸಂಬಂಧ ಅನೇಕ ಜನ್ಮಗಳ ಜೊತೆ ಇದೆ. ಜಮಾ ಮಾಡಿಕೊಳ್ಳುವ ಒಂದು ವರ್ಷ ಅನೇಕ ವರ್ಷಗಳ ಪ್ರಾಪ್ತಿಯದ್ದಾಗಿದೆ. ಆದ್ದರಿಂದ ಈ ಸಮಯದ ಬೆಲೆ ಒಂದು ಗಂಟೆ ಅಲ್ಲ ಸೆಕೆಂಡ್ ಅಥವಾ ನಿಮಿಷವೂ ಸಹ ಮಹಾನ್ ಆಗಿದೆ. ಒಂದು ಸೆಕೆಂಡೂ ಸಹ ಮಹಾನ್ ಆಗಿದೆ. ಮತ್ತು ಸಂಕಲ್ಪ ಈ ಸಂಗಮ ಜನ್ಮದ ವಿಶೇಷ ಆಧಾರವಾಗಿದೆ. ನೋಡಿ, ಯಾರು ಯೋಗ ಮಾಡುತ್ತಾರೆಂದರೆ ಮನ್ಮನಾಭವ ಎಂದು ಹೇಳುತ್ತೀರಿ ಮತ್ತೆ ಇದು ಫೌಂಡೇಶನ್ಗೆ ಆಧಾರವಾಗಿದೆ. ಮನಸ್ಸಿನ ಕೆಲಸವೇ ಆಗಿದೆ ಸಂಕಲ್ಪ ಮಾಡುವುದು, ಸಂಕಲ್ಪದ ಮೂಲಕವೇ ನೆನಪಿನ ಯಾತ್ರೆಯ ಅನುಭೂತಿ ಮಾಡುತ್ತೀರಿ. ಒಬ್ಬರಿಗೊಬ್ಬರೂ ಸಹ ಮುಖ್ಯವಾಗಿ ಭಿನ್ನ-ಭಿನ್ನ ಸಂಕಲ್ಪಗಳನ್ನು ಕೊಟ್ಟು ಅಭ್ಯಾಸ ಮಾಡಿಸುತ್ತೀರಲ್ಲವೇ! ಸಮಯದ ತೀವ್ರತೆ ಇಡೀ ದಿನದಲ್ಲಿ ನಡೆಯುತ್ತಾ-ಓಡಾಡುತ್ತಾ, ಕರ್ಮ ಮಾಡುತ್ತಾ, ಸಂಬಂಧದಲ್ಲಿ ಬರುತ್ತಾ ಅಮೂಲ್ಯ ರೂಪದಲ್ಲಿ ಇದೆಯೇ? ಎಂದು ಎಲ್ಲರೂ ಚೆಕ್ ಮಾಡಿಕೊಳ್ಳಿ. ಏಕೆಂದರೆ ಸಮಯ ಅಮೂಲ್ಯವಾಗಿದೆ. ಸಂಕಲ್ಪ ಸರ್ವಶಕ್ತಿವಂತರನ್ನಾಗಿ ಮಾಡುತ್ತದೆ.

ಬಾಪ್ದಾದಾರವರು ಪದೇ-ಪದೇ ಹೇಳುತ್ತಾರೆ - ಹೇ ಬಾಪ್ದಾದಾರವರ ಮುದ್ದಾಂತಹ, ಹೃದಯದಲ್ಲಿ ಇರುವಂತಹ ಮಕ್ಕಳೇ ಈಗ ವ್ಯರ್ಥ ಖಾತೆಯನ್ನು ಸಮಾಪ್ತಿ ಮಾಡಿ. ಸಫಲ ಮಾಡಿ. ಸಫಲ ಮಾಡುವುದೇ ಸಫಲತೆಯಾಗಿದೆ. ಒಂದು ಸೆಕೆಂಡ್ ಹೋಗಿದೆ - ಈ ರೀತಿ ಯೋಚನೆ ಮಾಡಬೇಡಿ. ಪ್ರತಿಯೊಂದು ಸೆಕೆಂಡ್, ಪ್ರತಿಯೊಂದು ಸಂಕಲ್ಪ ಸಫಲ ಆಗಿದೆ, ಇಷ್ಟು ಅಟೆನ್ಷನ್ ತಮ್ಮ ಮೇಲೆ ಇಟ್ಟುಕೊಳ್ಳಲೇ ಬೇಕು. ಇಷ್ಟು ಫುಲ್ಸ್ಟಾಪ್ ಹಾಕುವ ಚೆಕಿಂಗ್ ಮಾಡಿಕೊಳ್ಳಿ. ಹುಡುಗಾಟಿಕೆ ಇರಬಾರದು. ಬಾಪ್ದಾದಾರವರು ಹೇಳಿದರು ಆದರೆ ನಾವು ತಿಳಿದೇ ಇಲ್ಲ, ಸಮಯವನ್ನು ಯೋಚನೆ ಮಾಡಿಲ್ಲ, ಇಷ್ಟು ಸಮಯ ವೇಗವಾಗಿ ಹೋಗುತ್ತಿದೆ, ಹೋಗುತ್ತದೆ. ಈಗ ಹುಡುಗಾಟಿಕೆಯನ್ನು ಬಾಪ್ದಾದಾರವರು ಪ್ರತಿಯೊಬ್ಬರಿಂದ ತೆಗೆದುಕೊಳ್ಳಲು ಬಯಸುತ್ತಾರೆ. ನಾನು ತಿಳಿದೇ ಇಲ್ಲ, ಯೋಚನೆ ಮಾಡಿಲ್ಲ - ಈ ರೀತಿ ಕೇಳಲು ಬಾಪ್ದಾದಾರವರು ಇಷ್ಟ ಪಡುವುದಿಲ್ಲ. ಈಗ ವರ್ಷವೂ ಹೊಸದು ಬರುವುದಿದೆ, ಈ ಹೊಸ ವರ್ಷದಲ್ಲಿ ಶುರು ಆಗುವುದರ ಮೊದಲೇ ಬ್ರಾಹ್ಮಣ ಸಂಸಾರದಿಂದ ಹುಡುಗಾಟಿಕೆ ಜೊತೆಯಲ್ಲಿ ಆಲಸ್ಯವನ್ನು ತೆಗೆದುಕೊಳ್ಳಲು ಬಯಸುತ್ತಾರೆ, ಆಲಸ್ಯವೂ ಸಹ ಭಿನ್ನ-ಭಿನ್ನ ಪ್ರಕಾರವಾಗಿದೆ, ವರ್ಷದಲ್ಲಿ ಈಗ ಎಷ್ಟು ಸಮಯ ಉಳಿದಿದೆ, ಇದರ ಅಭ್ಯಾಸವನ್ನು ಶುರು ಮಾಡಿ ಮತ್ತು ಯಾವಾಗ ಹೊಸ ವರ್ಷ ಶುರು ಆಗುತ್ತದೆ, ಬಾಪ್ದಾದಾರವರಿಗೆ ಸಾಹಸ ಇಟ್ಟು ಸಂಕಲ್ಪ ಮಾಡುವುದು ಮತ್ತು ಇದಕ್ಕೆ ವಿದಾಯಿ ಕೊಡುವುದು. ವರ್ಷದ ಜೊತೆ ಇದಕ್ಕೂ ಸಹ ವಿದಾಯಿ ಕೊಟ್ಟು ಬಿಡಿ. ಕೊಡಲು ಸಾಧ್ಯವೇ? ಯಾರಿಗೆ ಕೊಡಲು ಸಾಧ್ಯವಾಗುತ್ತದೆ ಅವರು ಕೈ ಎತ್ತಿ. (ಎಲ್ಲರೂ ಕೈ ಎತ್ತಿದ್ದಾರೆ) ವಾಹ್! ಮಕ್ಕಳೇ ವಾಹ್! ಕೈ ಎತ್ತುವುದರಲ್ಲಿ ಬಾಪ್ದಾದಾರವರನ್ನು ಬಹಳ ಖುಷಿ ಮಾಡುತ್ತೀರಿ. ಬಾಪ್ದಾದಾರವರು ನೋಡಿದ್ದಾರೆ ಬಹಳ ಮಕ್ಕಳಿಗೆ ಕೈ ಎತ್ತುವುದರ ರಿಟರ್ನ್ ಮಾಡುವುದು ನೆನಪು ಇರುತ್ತದೆ. ಮತ್ತು ಕೆಲವರು ನೆನಪು ಇಟ್ಟುಕೊಳ್ಳುವುದರಲ್ಲಿಯೂ ಹುಡುಗಾಟಿಕೆ ಆಗಿ ಬಿಡುತ್ತಾರೆ. ಬಾಪ್ದಾದಾರವರ ಜೊತೆ ಬಹಳ ಚೆನ್ನಾಗಿ ವಾರ್ತಾಲಾಪ ಮಾಡುತ್ತಾರೆ. ಆಗಿ ಬಿಡುತ್ತದೆ ಬಾಬಾ ತಾವು ನೋಡಿ ಈಗ ಆಗುತ್ತದೆ, ಈಗ ಆಗುತ್ತದೆ....... ಬಾಪ್ದಾದಾರವರೂ ಸಹ ಈ ರೀತಿ ಹುಡುಗಾಟಿಕೆಯ ಮಕ್ಕಳದು ಕೇಳಿ ಮುಗುಳ್ನಗುತ್ತಾರೆ ಮತ್ತೇನು ಮಾಡಲಿ! ಒಳ್ಳೆಯದು ಮಾಡಬೇಕು, ಮಾಡಬೇಕು, ಮಾಡಬೇಕು ಎಂದು ಬಹಳ ಯೋಚನೆ ಮಾಡುತ್ತೀರಿ, ಆದರೆ ಮಾಡುತ್ತಿದ್ದಾರೋ ಅಥವಾ ಇಲ್ಲವೋ ಅದರ ಚೆಕೆಂಗ್ನಲ್ಲಿ ಹುಡುಗಾಟಿಗೆ ಆಗಿ ಬಿಡುತ್ತೀರಿ.

ಅಂದಾಗ ಈ ದಿನ ಎಲ್ಲಾ ಕಡೆಯ ಮಕ್ಕಳನ್ನು, ಬಾಪ್ದಾದಾರವರು ಕೇಳಿದಾಗ ಯಾರು ತಮ್ಮ ದೇಶದಲ್ಲಿ, ತಮ್ಮ ಸ್ಥಾನಗಳಲ್ಲಿ ನೋಡುತ್ತಿರುತ್ತಾರೆ, ಅದೂ ಸಹ ಚೆನ್ನಾಗಿ ಕಂಡು ಬರುತ್ತದೆ, ಕೇಳಿಸುತ್ತದೆ. ಅಂದಾಗ ಬಾಪ್ದಾದಾ ಸನ್ಮುಖದಲ್ಲಿ ಬರುವಂತಹ ಮಕ್ಕಳನ್ನು ಮತ್ತು ತಮ್ಮ ಸ್ಥಾನಗಳಲ್ಲಿ ಕೇಳುವ, ನೋಡುವ ಮಕ್ಕಳಿಗೆ ಪುರುಷಾರ್ಥವನ್ನು, ಸಂಕಲ್ಪವನ್ನು ಮತ್ತು ಸಂಗಮದ ಸಮಯವನ್ನು ಅಂಡರ್ಲೈನ್ ಮಾಡಿ ಎಂದು ಹೇಳುತ್ತಾರೆ. ಎಲ್ಲಾ ಮಕ್ಕಳು ಪ್ರೀತಿಯಲ್ಲಂತೂ ಮೆಜಾರಿಟಿ ಪಾಸ್ ಆಗಿದ್ದಾರೆ. ಪ್ರೀತಿಯ ಆಧಾರದ ಮೇಲೆ ತಮ್ಮನ್ನು ಒಳ್ಳೆ ಪ್ರೊಗ್ರೆಸ್ (ಉನ್ನತಿ) ಮಾಡಿಕೊಳುತ್ತಿದ್ದೀರಿ. ಪ್ರೀತಿಯ ಕಾರಣ, ತಂದೆಯ ಪ್ರೀತಿಯ ರೆಸ್ಪಾಂಡ್ ಸಿಗುವುದರಿಂದ ಮುಂದುವರೆಯುತ್ತೀರಿ ಆದರೆ ಹೇಗೆ ಪ್ರೀತಿಯಲ್ಲಿ ಅನುಭವಿ ಆಗಿ ಮುಂದುವರೆಯುತ್ತಿದ್ದೀರಿ ಅದೇ ರೀತಿ ನೆನಪಿನ ಸಬ್ಜೆಕ್ಟಿನಲ್ಲಿ ಅನೇಕ ಜನ್ಮಗಳ ವಿಕರ್ಮ ವಿನಾಶ ಮಾಡುವುದರಲ್ಲಿ ಇನ್ನೂ ಅಟೆನ್ಷನ್ ನೀಡಿ. ಏಕೆ? ವಿಕರ್ಮ ವಿನಾಶ ಆದರೆ ಜೊತೆ-ಜೊತೆಯಲ್ಲಿ ಹೋಗುತ್ತೀರಿ ಇಲ್ಲವೆಂದರೆ ಹಿಂದೆ-ಹಿಂದೆ ಬರುತ್ತೀರಿ ಮತ್ತು ಪ್ರೀತಿಯ ರೆಸ್ಪಾಂಡ್ ಪ್ರಿಯವಾಗಿರುವವರು ಏನು ಹೇಳುತ್ತಾರೋ ಅದನ್ನು ಮಾಡಲೇಬೇಕು ಎಂದು ತಂದೆ ತಿಳಿಯುತ್ತಾರೆ. ಮಕ್ಕಳ ಪ್ರೀತಿ ತಂದೆಯ ಜೊತೆ ಇರಲಿ ಎಂದು ತಂದೆ ಬಯಸುತ್ತಾರೆ. ರಾಜಧಾನಿಯಲ್ಲೂ ಸಹ ಬ್ರಹ್ಮಾ ತಂದೆಯ ಜೊತೆ ರಾಜಧಾನಿಯಲ್ಲಿ ಬರುತ್ತೀರಿ. ರಾಜಧಾನಿಯಲ್ಲಿ ಬರುವುದು ಅರ್ಥಾತ್ ರಾಯಲ್ ಪರಿವಾರದಲ್ಲಿ ಬರುವುದು. ಸಿಂಹಾಸನದ ಮೇಲೆ ಕುಳಿತುಕೊಂಡಿಲ್ಲವೆಂದರೂ ರಾಯ ಪರಿವಾರದ ಜೊತೆಗಾರರಾದರೂ ಆಗಿ. ಇದರ ಪರಿಶೀಲನೆ ಹೇಗೆ ಮಾಡಬೇಕೆಂದು ಬಾಪ್ದಾದಾರವರು ಮೊದಲೂ ಸಹ ತಿಳಿಸಿದ್ದಾರೆ! ತಾವು ಎಂದಿನಿಂದ ಬಂದಿದ್ದೀರೋ, ತಮ್ಮ ಜ್ಞಾನದ ಆಯಸ್ಸಿನಷ್ಟು ತಮ್ಮ, ಸಮಯದಲ್ಲಿ ಒಂದುವೇಳೆ ತಾವು ಬಾಪ್ದಾದಾ ಹೃದಯ ಸಿಂಹಾಸನಾಧಿಕಾರಿ ಆಗಿದ್ದರೆ ಯಾರು ಹೆಚ್ಚು ಸಮಯ ಹೃದಯ ಸಿಂಹಾಸನದ ಮೇಲೆ ಇರುತ್ತಾರೆ, ಮಣ್ಣಿನಲ್ಲಿ ಕಾಲು ಇಟ್ಟಿಲ್ಲ, ಅವರು ಅದರನುಸಾರವಾಗಿ ರಾಯಲ್ ಪರಿವಾರದಲ್ಲಿ ಹತ್ತಿರ ಸಂಬಂಧದಲ್ಲಿ ಇರುತ್ತಾರೆ. ರಾಯಲ್ ಪರಿವಾರದವರಾಗಿರುತ್ತಾರೆ. ಅಂದಾಗ ಪ್ರೀತಿ ಇದೆ, ಪ್ರೀತಿ ಇರುವವರು ಜೊತೆಯನ್ನು ನಿಭಾಯಿಸುವುದರಲ್ಲಿ ಹಿಂದೆ ಇರುವುದಿಲ್ಲ. ಯಾರು ಹೃದಯ ಸಿಂಹಾಸನಾಧಿಕಾರಿ ಆಗಿದ್ದಾರೆ ಅವರು ದ್ವಾಪರ ಕಲಿಯುಗದ ಸಂಬಂಧದಲ್ಲೂ ಇರುತ್ತಾರೆ. ಹತ್ತಿರ ಇರುತ್ತಾರೆ. ಆದ್ದರಿಂದ ಪ್ರೀತಿಯನ್ನು ನಿಭಾಯಿಸುವವರು ಸದಾ ಹೃದಯ ಸಿಂಹಾಸನಾಧಿಕಾರಿ ಆಗಿರಿ ಮತ್ತು ಜನ್ಮ-ಜನ್ಮದ ಅಧಿಕಾರ ತೆಗೆದುಕೊಳ್ಳಿ, ಆದ್ದರಿಂದ ಬಾಪ್ದಾದಾ ಪ್ರತಿಯೊಂದು ಮಗುವನ್ನು ಪ್ರೀತಿ ಮಾಡುತ್ತಾರೆ. ಪ್ರೀತಿಯ ಸಬ್ಜೆಕ್ಟಿನಲ್ಲಿ ಪ್ರತಿಯೊಬ್ಬರು ಪಾಸ್ ಆಗಿದ್ದಾರೆ ಎಂದು ಬಾಬಾ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಈಗ ಎಲ್ಲಾ ಸಬ್ಜೆಕ್ಟ್ಗಳಲ್ಲಿ ಪಾಸ್ ಆಗಲೇಬೇಕು. ಪಾಸ್ ಆಗಬೇಕು ಮತ್ತು ಜೊತೆಯಲ್ಲಿ ಇರಬೇಕು. ಒಳ್ಳೆಯದು.

ಮೊದಲನೇ ಬಾರಿ ಯಾವ ಮಕ್ಕಳು ಬಂದಿದ್ದಾರೆ ಅವರು ಎದ್ದು ನಿಲ್ಲಿ. ಮೊದಲನೇ ಬಾರಿ ಬಂದಿರುವವರು! ಅರ್ಧ ಕ್ಲಾಸ್ ಹೊಸಬರು ಬಂದಿದ್ದಾರೆ, ಬಾಪ್ದಾದಾ ಬಂದವರಿಗೆ ಸ್ವಾಗತ ಮಾಡುತ್ತಿದ್ದಾರೆ. ಆದರೂ ಶುಭಾಶಯಗಳು. ಮೊದಲನೇ ಬಾರಿ ಬಂದಿರುವುದಕ್ಕೆ ಶುಭಾಶಯಗಳು. ಭಲೆ ಲೇಟ್ ಆಗಿ ಬಂದಿದ್ದೀರಿ ಆದರೆ ಟೂ ಲೇಟ್ಗಿಂತ ಮುಂಚೆ ಬಂದಿದ್ದೀರಿ. ಸ್ವಲ್ಪ ಸಮಯದಲ್ಲಿ ತೀವ್ರ ಪುರುಷಾರ್ಥಿ ಆಗಿ ತಮ್ಮ ಭವಿಷ್ಯವನ್ನು ಎಷ್ಟು ಹೆಚ್ಚಿಸಿಕೊಳ್ಳಲು ಬಯಸುತ್ತೀರೋ ಅಷ್ಟು ಹೆಚ್ಚಿಸಿಕೊಳ್ಳಬಹುದು - ಈಗ ಈ ಅಟೆನ್ಷನ್ ಇಟ್ಟುಕೊಳ್ಳಬೇಕು ಏಕೆಂದರೆ ಈಗಲೂ ಪುರುಷಾರ್ಥ ಮಾಡುವ ಮಾರ್ಜಿನ್ ಇದೆ. ಎಷ್ಟು ಮುಂದುವರೆಯಲು ಬಯಸುತ್ತೀರೋ ಅಷ್ಟು ಮುಂದುವರೆಯಬಹುದು. ಬಾಪ್ದಾದಾ ಮತ್ತು ಈ ದೈವೀ ಪರಿವಾರ ತಮಗೆ ಜೊತೆ-ಜೊತೆಯಲ್ಲಿ ಮುಂದುವರೆಯುವ ವೈಬ್ರೇಷನ್ಸ್ ಕೊಡುತ್ತಾರೆ. ಆದ್ದರಿಂದ ಮುಂದುವರೆಯಿರಿ, ಸಾಹಸ ಇಟ್ಟುಕೊಳ್ಳಿ. ಸಾಹಸ ತಮ್ಮದು ಮತ್ತು ಸಹಯೋಗ ಬಾಪ್ದಾದಾ ಮತ್ತು ದೈವೀ ಪರಿವಾರದ್ದು. ಮುಂದುವರೆಯಿರಿ. ಸರಿಯಲ್ಲವೇ ಹೌದು ಎಂದು ಹೇಳಿ, ಮುಂದುವರೆಯಿರಿ. ಒಳ್ಳೆಯದು.

ಮಧುಬನ ನಿವಾಸಿಯವರೊಂದಿಗೆ: ಮಧುಬನದವರಂತೂ ಲಕ್ಕಿ ಆಗಿದ್ದಾರೆ. ಸ್ವಲ್ಪ ಸಂಘಟನೆಯನ್ನು ಪಕ್ಕಾ ಮಾಡಿ ಜೊತೆಗಾರರನ್ನಾಗಿ ಮಾಡಿಕೊಳ್ಳಿ ಮತ್ತೆ ಬೇರೆ ಯಾವುದರಲ್ಲೂ ಜೊತೆಗಾರರಾಗಬೇಡಿ, ಇದರಲ್ಲಿ ಒಬ್ಬರಿಗೊಬ್ಬರು ಜೊತೆಗಾರರನ್ನಾಗಿ ಮಾಡಿಕೊಂಡು ಮೊದಲನೇ ನಂಬರ್ ಮಧುಬನದವರು ತೆಗೆದುಕೊಳ್ಳಬೇಕು. ತೆಗೆದುಕೊಳ್ಳುತ್ತೀರಾ. ಕಳೆದು ಹೋಗಿರುವುದು ಹಳೆದು ಹೋಗಿದೆ. ಯಾವುದೆಲ್ಲಾ ಆಗಿದೆ, ಎಲ್ಲರೂ ನೋಡಿದ್ದಾರೆ, ಕೇಳಿದ್ದಾರೆ ಮತ್ತು ಮಧುಬನದವರಿಗಂತೂ ಬಹಳ ಗೋಲ್ಡೆನ್ ಅವಕಾಶವಿದೆ. ಮಧುಬನದಲ್ಲಿ ಎಲ್ಲಾ ಬಂದು ಬಿಟ್ಟಿದೆ. ಅಂದಾಗ ಮಧುಬನದವರು ಒಂದುವೇಳೆ ಎಲ್ಲರೂ ಸೇರಿ, ಈ ರೀತಿ ಅಲ್ಲ ಪಾಂಡವ ಭವನ ಬೇರೆ ಮತ್ತು ಬೇರೆ ಸ್ಥಾನ ಬೇರೆ ಅಲ್ಲ, ಮಧುಬನ ಎಂದರೆ ಎಲ್ಲಾ ಒಂದೇ. ಅಂದಾಗ ಮಧುನದವರು ಮಾಡುತ್ತೇವೆ ಎಂದು ತಿಳಿದಿದ್ದೀರಾ? ಯಾರು ಮಾಡುತ್ತಾರೆ ಅವರು ಕೈ ಎತ್ತಿ. ಎಲರೂ ಎತ್ತಿದ್ದೀರಾ? ದೊಡ್ಡ ಮಾತೇನಲ್ಲ. ದಾದಿಗಳು ಏನು ತಿಳಿಯುತ್ತೀರಿ? ಮಧುಬನದವರಂತೂ ನಂಬರ್ವನ್ ಆಗಿದ್ದಾರೆ. ಒಳ್ಳೆಯದು. ಬಾಬಾ ಎಲ್ಲರಿಗೂ ಮಾಡಿ ತೋರಿಸಲು ಹೇಳಿದ್ದಾರೆ ಆದರೆ ಮಧುಬನ ಮಧುಬನವೇ ಆಗಿದೆ. ಗುಜರಾತ್ನವರು ಮಾಡಿ ತೋರಿಸುತ್ತೇವೆ ಎಂದು ಹೇಳಿದ್ದಾರೆ. ಒಳ್ಳೆಯದು. ಎಲ್ಲರೂ ವೈಬ್ರೇಷನ್ಸ್ ಕೊಡಬೇಕು. ಆಗಿ ಬಿಡುತ್ತದೆ, ಯಾವುದೇ ದೊಡ್ದ ಮಾತಲ್ಲ. ವಿಘ್ನದ ಹೆಸರು-ಗುರುತು ಇಲ್ಲ. ಯಾವುದಾದರೂ ನಡೆದರೆ, ವ್ಯವಹಾರ ಮಾಡಿದಿರಿ ಸಮಾಪ್ತಿ ಆಗುತ್ತದೆ. ಸ್ವಲ್ಪ ಸಮಯದ ಮೊದಲು ದಾದಿಯವರು ಇದ್ದಾಗ ಒಮ್ಮೆ ಎಲ್ಲರೂ ಹಾಜಿಯ ಪಾಠ ಪಕ್ಕಾ ಮಾಡಿದರು. ಅಲ್ಲ ಎಂಬ ಶಬ್ದ ಇಲ್ಲ ಹಾಜಿ, ಬಹಳ ಒಳ್ಳೆಯದು. ಮಧುಬನದವರು ಮೊದಲನೇ ನಂಬರ್ ತೆಗೆದುಕೊಳ್ಳುತ್ತಾರೆ. ಬಾಪ್ದಾದಾರವರಿಗೆ ಮಧುಬನದ ನಶೆ ಇದೆಯಲ್ಲವೇ. ಪ್ರತಿಯೊಂದು ಜೋನಿನ ನಶೆ ಇದೆ. ಈಗ ಮಧುಬನ ಎದುರಿನಲ್ಲಿ ಬಂದಿದೆ. ಆದರೆ ಬಾಪ್ದಾದಾ ಎಲ್ಲಾ ಜೋನಿನವರಿಗೆ ಹೇಳುತ್ತಾರೆ. ಹಾಜಿ, ಮಧುರ ಆತ್ಮ ಎಲ್ಲರ ಈ ಪಾಠ ಪಕ್ಕಾ ಆಗಿದೆಯೇ. ಪಕ್ಕಾ ಆಗಿದೆಯಲ್ಲವೇ? ಬಹುಮಾನವಂತೂ ಮಧುಬನದವರು ತೆಗೆದುಕೊಳ್ಳಬೇಕು. ಒಂದು ಸೆಕೆಂಡಿನಲ್ಲಿ ಕಳೆದು ಹೋಗಿರುವುದನ್ನು ಮರೆಯುತ್ತೀರಾ? ಪುರುಷಾಥಿ ಆಗಿದ್ದೀರಾ, ಆಗಿ ಬಿಟ್ಟಿದೆ ಆದರೆ ಕಳೆದು ಹೋಗಿರುವುದನ್ನು ಮರೆತು ಹಾರಿ. ಹಾರುವವರು ಹಿಂದಿನದ್ದು ಬಿಟ್ಟು ಬಿಡುತ್ತಾರೆ ಆಗ ಹಾರುತ್ತಾರೆ. ಬಹಳ ಒಳ್ಳೆಯದು.

ಈಗ ಗುಜರಾತಿನವರು ಯಾವುದಾದರೂ ನವೀನತೆಯನ್ನು ಮಾಡಲಿ. ಬಾಪ್ದಾದಾರವರು ದೆಹಲಿಯವರಿಗೂ ಸಹ ಹೇಳಿದರು. ನವೀನತೆಯನ್ನು ಈಗ ಮಾಡಿ. ಬಾಪ್ದಾದಾರವರಿಗೆ ಸಮಾಚಾರ ಸಿಕ್ಕಿದೆ - ಈಗ ಯುವಕರು ದೇಶ-ವಿದೇಶದವರು ಸೇರಿ ಯಾವುದನ್ನು ಆರಂಭ ಮಾಡಿದ್ದೀರಿ ಅದರಲ್ಲಿ ಒಳ್ಳೆ ರಿಜಲ್ಟ್ ಬರಲು ಸಾಧ್ಯತೆ ಇದೆ. ಈಗಂತೂ ಕಂಡು ಹಿಡಿಯುವುದು ಪ್ರಾರಂಭಿಸಿದ್ದಾರೆ, ಆದರೆ ಭಾರತ ಮತ್ತು ವಿದೇಶ ಇಬ್ಬರು ಸೇರಿ ಇನ್ನೂ ಕಮಾಲ್ ಮಾಡಬಹುದು. ಈಗಂತೂ ಆರಂಭ ಮಾಡಿದ್ದೀರಿ ಆದರೆ ದೆಹಲಿಯವರು ಚೆನ್ನಾಗಿ ಸಾಹಸ ಇಟ್ಟುಕೊಂಡಿದ್ದಾರೆ. ಶುರು ಮಾಡಿದ್ದಾರೆ. ಈಗ ವಿಶ್ವದಲ್ಲಿ ಇದು ಹರಡಿ ಬಿಟ್ಟರೆ ವಿದೇಶ ಮತ್ತು ದೇಶದವರು ಸೇರಿ ಒಂದು ಬ್ರಾಹ್ಮಣ ಪರಿವಾರ ಆಗಿದೆ. ಮತ್ತು ವಿಶ್ವದ ಮುಂದೆ ವಿಶ್ವವನ್ನೂ ಸಹ ಒಂದು ಮಾಡುತ್ತೀರಿ. ಶುರು ಅಂತೂ ಆಗಿಬಿಟ್ಟಿದೆ. ಈಗ ಮುಸಲ್ಮಾನರೂ ಸಹ ಮುಂದುವರೆಯುತ್ತಿದ್ದಾರೆ ಆದರೆ ಈಗ ಈ ರೀತಿ ದೊಡ್ಡ ಪ್ರೋಗ್ರಾಂ ಮಾಡಿ ಯಾವುದರಲ್ಲಿ ಮುಖ್ಯ ದೇಶಗಳಿಂದ ಬರಲಿ ಮತ್ತು ವಿಶ್ವದಲ್ಲಿ ಈ ಮಾತು ಪ್ರಸಿದ್ಧ ಆಗಲಿ - ಎಲ್ಲರೂ ಒಬ್ಬ ತಂದೆಯ ಮಕ್ಕಳು ಪರಸ್ಪರ ಸಹೋದರ-ಸಹೋದರಿ ಆಗಿದ್ದಾರೆ, ಸಹೋದರತ್ವ (ಬ್ರದರ್ಹುಡ್), ಸಿಸ್ಟರ್ಹುಡ್ ಈ ಶಬ್ದ ಹರುಡುತ್ತಿರಲಿ. ಒಂದೇ ಸ್ಟೇಜಿನಲ್ಲಿ ಎಲ್ಲಾ ಕಡೆಯವರ ವಿಶೇಷ ಅನುಭವ ಇರಲಿ. ಪ್ಲಾನ್ಂತೂ ಎಲ್ಲರೂ ಮಾಡುತ್ತಿದ್ದಾರೆ. ಈಗ ಬೇಹದ್ದಿನಲ್ಲಿ ಹೋಗುತ್ತಿದ್ದಾರೆ. ಇದು ಒಂದು ಈಶ್ವರ ಪರಿವಾರ ಎಂದು ಎಲ್ಲರಿಗೆ ಗೊತ್ತಾಗಿ ಬಿಡಲಿ, ಇದು ಪ್ರಸಿದ್ಧ ಆಗಿದೆ. ಬಾಕಿ ಯಾರೆಲ್ಲಾ ಬರುತ್ತಾರೆ ಸೇವೆಯನ್ನೂ ಮಾಡುತ್ತಿದ್ದೀರಿ, ಸ್ವ-ಪುರುಷಾರ್ಥವೂ ಮಾಡುತ್ತಿದ್ದೀರಿ ಮತ್ತು ಈಶ್ವರನ ಕಾರ್ಯವಾಗಿದೆ, ಇದೂ ಸಹ ಪ್ರಪಂಚದಲ್ಲಿ ಪ್ರಸಿದ್ಧ ಆಗಿ ಬಿಡುತ್ತದೆ. ಒಂದು ಪರಿವಾರ ಆಗಿದೆ. ಒಳ್ಳೆಯದು.

ಎಲ್ಲಾ ಕಡೆ ಮಕ್ಕಳಿಗೆ ಬಾಪ್ದಾದಾರವರು ಈಗ ಶುಭಾಶಯಗಳನ್ನು ಕೊಡುತ್ತಿದ್ದಾರೆ. ಪ್ರತಿ ದಿನ ಪ್ರತಿಯೊಂದು ಗಂಟೆ ಮುಂದುವರೆಯುವ ಶುಭಾಶಯಗಳು. ಸಮಯ ನಿಮಗೆ ಕಾಯುತ್ತಿದೆ, ತಾವು ಸಮಯಕ್ಕೆ ಕಾಯಬೇಡಿ. ತಾವು ಸಮಯವನ್ನು ಎಷ್ಟು ಸಮೀಪ ತರಲು ಬಯಸುತ್ತೀರೋ ಸಮಾಪ್ತಿಯನ್ನು ಅಷ್ಟು ಸಮೀಪ ತರಲು ಸಾಧ್ಯವಿದೆಯೇ? ಸಮಯ ಬಂದಾಗ ತಯಾರಾಗುವುದು ಬ್ರಾಹ್ಮಣರ ಸಂಕಲ್ಪ ಅಲ್ಲ ತಾವು ಸಮಯವನ್ನು ಸಮೀಪಕ್ಕೆ ತೆಗೆದುಕೊಂಡು ಬನ್ನಿ. ಈಗ ಬ್ರಾಹ್ಮಣ ಆತ್ಮರು ಸಮಯವನ್ನು ಸಮೀಪ ತೆಗೆದುಕೊಂಡು ಬರಲಿ ಎಂದು ಸಮಯ ತಂದೆಗೆ ಹೇಳುತ್ತದೆ. ಈಗ ಸಮಾಪ್ತಿಯನ್ನು ಸಮೀಪ ತೆಗೆದುಕೊಂಡು ಬರಲಿ ಎಂದು ಪ್ರಕೃತಿಯೂ ಸಹ ತಂದೆಗೆ ಹೇಳುತ್ತದೆ. ಅಂದಾಗ ಬಾಪ್ದಾದಾ ಏನು ಉತ್ತರ ಕೊಡಲಿ? ಯಾವ ಉತ್ತರ ಕೊಡಲಿ? ಸಮಯ ಬಂದು ಬಿಟ್ಟಿದೆ ಎಂದು ಹೇಳಲೇನು? ತಮ್ಮ ಕಡೆಯಿಂದ ಈ ಉತ್ತರವನ್ನು ಕೊಡಲೇನು? ಯಾವ ಉತ್ತರ ಕೊಡಲಿ? ಯಾವ ಉತ್ತರ ಕೊಡಲಿ? ಈಗ ಸಮಾಪ್ತಿಯನ್ನು ಸಮೀಪಕ್ಕೆ ತರಬೇಕು. ಸಮೀಪಕ್ಕೆ ತರುವುದು ಅರ್ಥಾತ್ ಸ್ವಯಂನ್ನು ಸಂಪನ್ನ-ಸಂಪೂರ್ಣ ಮಾಡಿಕೊಳ್ಳುವುದು ಏಕೆಂದರೆ ಬಾಪ್ದಾದಾ ಒಂಟಿಯಾಗಿ ಹೋಗುವುದಿಲ್ಲ, ಮಕ್ಕಳ ಜೊತೆ ಹೋಗುತ್ತಾರೆ. ಅಂದಾಗ ಡೇಟ್ ಫಿಕ್ಸ್ ಮಾಡಬೇಕು. ಎಲ್ಲಿಯವರೆಗೆ? ಕೆಲಸವಂತೂ ಕೊಟ್ಟಿದ್ದೇವೆ, ಈಗ ಪರಸ್ಪರ ಸಲಹೆ ತೆಗೆದುಕೊಳ್ಳಬೇಕು. ಬಾಪ್ದಾದಾ ಪ್ರಕೃತಿಗೆ ಯಾವ ಉತ್ತರ ಕೊಡಲಿ! ಪ್ರಕೃತಿ ಬಹಳ ಚಿಂತೆ ಮಾಡುತ್ತದೆ. ದುಃಖಿ ಆತ್ಮಗಳು ಮನಸ್ಸಿನಲ್ಲಿ ಬಹಳ ಕೂಗುತ್ತಿದ್ದಾರೆ. ಮನಸಾ ಸೇವೆ ಈಗ ಹೆಚ್ಚಿಸಿ. ಮನಸಾ ಸೇವೆ ಮಾಡುತ್ತೀರಿ ಆದರೆ ನಿರಂತರವಾಗಿ ಹೆಚ್ಚಿಸುತ್ತಿರಿ, ಅದನ್ನು ಇನ್ನೂ ಹೆಚ್ಚಿಸಿ ಏಕೆಂದರೆ ಪ್ರಕೃತಿ ಮತ್ತು ದುಃಖಿ ಆತ್ಮಗಳು ತಮ್ಮ ಬಳಿ ಬರುತ್ತಾರೆ. ಕೂಗುತ್ತಾರೆ. ಅಂದಾಗ ತಾವು ಅವರಿಗೆ ಸ್ವಲ್ಪ ಶಾಂತಿ ಅಥವಾ ಸುಖದ ಅನುಭೂತಿ ಮಾಡಿಸಿ. ಅವರು ಒಂದು ಸೆಕೆಂಡಿನ ಶಾಂತಿಯನ್ನು ಬಯಸುತ್ತಾರೆ, ಸ್ವಲ್ಪ ಶಾಂತಿ ಕೊಟ್ಟು ಬಿಡಿ. ಹೇಗೆ ಹಸಿವು ಆಗುತ್ತದೆ ಅಂದಾಗ ಯಾವುದಾದರು ಸಿಗಲಿ ಎಂದು ತಿಳಿಯುತ್ತಾರೆ, ಸ್ವಲ್ಪವಾದರೂ ಸಿಗಲಿ ಎಂದು ತಿಳಿಯುತ್ತಾರೆ, ಅಂದಾಗ ಮನಸಾ ಸೇವೆಯನ್ನೂ ಸಹ ಹೆಚ್ಚಿಸಿಕೊಳ್ಳಿ. ವಾಚಾದಂತೂ ನಡೆಯುತ್ತಿದೆ. ಬಾಪ್ದಾದಾರವರು ಖುಷಿ ಆಗಿದ್ದಾರೆ. ಒಳ್ಳೆಯದು. ಬಾಪ್ದಾದಾರವರು ಯಾವ ಹೋಂವರ್ಕ್ ಕೊಟ್ಟಿದ್ದಾರೆ ಅದನ್ನು ನೆನಪು ಇಟ್ಟುಕೊಳ್ಳಬೇಕು ಮತ್ತು ನೆನಪಿಗೆ ತರಿಸಬೇಕಾಗಿದೆ.

ಬಾಪ್ದಾದಾರವರ ಹೃದಯ ಸಿಂಹಾಸನ ಮಕ್ಕಳಿಗೆ, ವಿಶ್ವ ಕಲ್ಯಾಣದ ಕರ್ತವ್ಯದಲ್ಲಿ ಸದಾ ಮುಂದುವರೆಯುವವರನ್ನು ಬಾಪ್ದಾದಾರವರು ದೃಷ್ಟಿ ಕೊಡುತ್ತಾ ಹೃದಯದ ಪ್ರೀತಿ ಮತ್ತು ಶುಭಾಶಯಗಳು, ಶುಭಾಶಯಗಳನ್ನು.... ಕೊಡುತ್ತಿದ್ದಾರೆ. ಪ್ರತಿಯೊಂದು ಮಗು ದೂರ ಕುಳಿತಿದ್ದರೂ ಸನ್ಮುಖದ ಅನುಭವ ಮಾಡುತ್ತಿದ್ದಾರೆ ಮತ್ತು ಬಾಪ್ದಾದಾ ಎಲ್ಲಾ ಮಕ್ಕಳನ್ನು ಹೃದಯದಲ್ಲಿ ಸಮಾವೇಶ ಮಾಡಿಕೊಳ್ಳುತ್ತಾ ಎಲ್ಲಾ ಮಕ್ಕಳೊಂದಿಗೆ ನಮಸ್ತೆ-ನಮಸ್ತೆ ಮಾಡುತ್ತಿದ್ದಾರೆ.

ವರದಾನ:
ಸ್ನೇಹ ಹಾಗೂ ಶಕ್ತಿ ರೂಪದ ಸಮತೋಲನದ ಮೂಲಕ ಸೇವೆ ಮಾಡುವಂತಹ ಸಫಲತಾ ಮೂರ್ತಿ ಭವ.

ಹೇಗೆ ಒಂದು ಕಣ್ಣಿನಲ್ಲಿ ತಂದೆಯವರ ಸ್ನೇಹ ಹಾಗೂ ಇನ್ನೊಂದು ಕಣ್ಣಿನಲ್ಲಿ ತಮಗೆ ಸಿಕ್ಕಿರುವ ಕರ್ತವ್ಯ(ಸೇವೆ)ಯು ಸದಾ ಸ್ಮೃತಿಯಲ್ಲಿ ಇರುತ್ತದೆ. ಹಾಗೆಯೇ ಈಗ ಸ್ನೇಹಿ-ಮೂರ್ತಿಯ ಜೊತೆ-ಜೊತೆಗೆ ಶಕ್ತಿ ರೂಪರೂ ಆಗಬೇಕು. ಸ್ನೇಹದ ಜೊತೆ-ಜೊತೆಗೆ ಶಬ್ಧಗಳಲ್ಲಿಯೂ ಇಂತಹ ಹರಿತವಿರಲಿ, ಅದರಿಂದ ಯಾರದೇ ಹೃದಯವನ್ನು ಸೀಳಿಬಿಡಲಿ. ಹೇಗೆ ತಾಯಿಯು ತನ್ನ ಮಕ್ಕಳಿಗೆ ಎಂತಹ ಶಬ್ಧಗಳಲ್ಲಿಯೇ ಶಿಕ್ಷಣವನ್ನು ಕೊಡುತ್ತಾಳೆ, ಅದರಲ್ಲಿ ತಾಯಿಯ ಸ್ನೇಹವಿರುವ ಕಾರಣದಿಂದ ಆ ಶಬ್ಧಗಳು ಹರಿತ ಅಥವಾ ಕಹಿಯೆಂಬ ಅನುಭವ ಆಗುವುದಿಲ್ಲ. ಅದೇರೀತಿಯಲ್ಲಿ ಜ್ಞಾನದ ಯಾವುದೆಲ್ಲಾ ಸತ್ಯ ಮಾತುಗಳಿವೆ, ಅವನ್ನು ಸ್ಪಷ್ಟ ಶಬ್ಧಗಳಲ್ಲಿ ತಿಳಿಸಿರಿ ಆದರೆ ಶಬ್ಧಗಳಲ್ಲಿ ಸ್ನೇಹವು ಸಮಾವೇಶವಾಗಿರಲಿ, ಆಗಲೇ ಸಫಲತಾ ಮೂರ್ತಿಗಳು ಆಗಿ ಬಿಡುವಿರಿ.

ಸ್ಲೋಗನ್:
ಸರ್ವ ಶಕ್ತಿವಂತ ತಂದೆಯನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತೀರೆಂದರೆ, ಪಶ್ಚಾತ್ತಾಪದಿಂದ ಮುಕ್ತರಾಗಿ ಬಿಡುವಿರಿ.

ಅವ್ಯಕ್ತ ಸೂಚನೆ:- ಜ್ವಾಲಾ ಸ್ವರೂಪ ಸ್ಥಿತಿಯಲ್ಲಿರುತ್ತ ಶಕ್ತಿಶಾಲಿ ನೆನಪಿನ ಅನುಭವ ಮಾಡಿ.

ಹೇಗೆ ಸೂರ್ಯನ ಕಿರಣಗಳು ಹರಡುತ್ತದೆ, ಹಾಗೆಯೇ ಮಾಸ್ಟರ್ ಸರ್ವಶಕ್ತಿವಂತನ ಸ್ಥಿತಿಯಲ್ಲಿ ಶಕ್ತಿಗಳು ಅಥವಾ ವಿಶೇಷತೆಗಳ ರೂಪಿ ಕಿರಣಗಳು ನಾಲ್ಕಾರು ಕಡೆ ಹರಡುವ ಅನುಭವ ಮಾಡಿ, ಅದಕ್ಕೆ “ನಾನು ಮಾಸ್ಟರ್ ಸರ್ವಶಕ್ತಿವಂತ, ವಿಘ್ನ-ವಿನಾಶಕ ಆತ್ಮನಾಗಿದ್ದೇನೆ”, ಈ ಶ್ರೇಷ್ಠ ಸ್ವಮಾನದ ಸ್ಮೃತಿಯ ಸೀಟ್ನಲ್ಲಿ ಸ್ಥಿತರಾಗಿ ಯೋಗವನ್ನು ಜ್ವಾಲಾ ರೂಪವನ್ನಾಗಿ ಯಾವುದೇ ವಿಘ್ನ ಮುಂದೆಯು ಸಹ ಬರಲು ಸಾಧ್ಯವಿಲ್ಲ.