05.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ವೇಶ್ಯಾಲಯವನ್ನು ಶಿವಾಲಯವನ್ನಾಗಿ ಮಾಡಲು ತಂದೆಯು ಬಂದಿದ್ದಾರೆ, ವೇಶ್ಯೆಯರಿಗೂ ಸಹ ಈಶ್ವರೀಯ
ಸಂದೇಶವನ್ನು ಕೊಟ್ಟು ಅವರ ಕಲ್ಯಾಣವನ್ನೂ ಮಾಡುವುದು ನಿಮ್ಮ ಕರ್ತವ್ಯವಾಗಿದೆ.”
ಪ್ರಶ್ನೆ:
ಯಾವ ಮಕ್ಕಳು
ತಮಗೆ ಬಹಳ ನಷ್ಟವನ್ನುಂಟು ಮಾಡಿಕೊಳ್ಳುತ್ತಾರೆ?
ಉತ್ತರ:
ಯಾರು ಯಾವುದೇ
ಕಾರಣದಿಂದ ಮುರುಳಿ (ವಿದ್ಯೆ) ಯನ್ನು ತಪ್ಪಿಸುತ್ತಾರೆ, ಅವರು ತಮಗೆ ತಾವೇ ಬಹಳ ನಷ್ಟವನ್ನುಂಟು
ಮಾಡಿಕೊಳ್ಳುತ್ತಾರೆ. ಕೆಲವು ಮಕ್ಕಳಂತೂ ಪರಸ್ಪರ ಮುನಿಸಿಕೊಳ್ಳುವ ಕಾರಣ ತರಗತಿಗೆ ಬರುವುದಿಲ್ಲ,
ಯಾವುದಾದರೊಂದು ನೆಪ ಮಾಡಿಕೊಂಡು ಮನೆಯಲ್ಲಿಯೇ ಮಲಗಿ ಬಿಡುತ್ತಾರೆ. ಇದರಿಂದ ಅವರು ತಮ್ಮದೇ ನಷ್ಟ
ಮಾಡಿಕೊಳ್ಳುತ್ತಾರೆ ಏಕೆಂದರೆ ತಂದೆಯು ನಿತ್ಯವೂ ಒಂದಲ್ಲ ಒಂದು ಹೊಸ ಯುಕ್ತಿಗಳನ್ನು
ತಿಳಿಸುತ್ತಿರುತ್ತಾರೆ. ಕೇಳುವುದೇ ಇಲ್ಲವೆಂದರೆ ಕಾರ್ಯದಲ್ಲಿ ಹೇಗೆ ತರುತ್ತೀರಿ!
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ಇದು ತಿಳಿದಿದೆ - ನಾವೀಗ ವಿಶ್ವದ ಮಾಲೀಕರಾಗಲು ಓದುತ್ತಿದ್ದೇವೆ.
ಭಲೆ ಮಾಯೆಯು ಮರೆಸಿ ಬಿಡುತ್ತದೆ, ಕೆಲಕೆಲವರಿಗಂತೂ ಇಡೀ ದಿನ ಮರೆಸಿ ಬಿಡುತ್ತದೆ. ಖುಷಿಯಿರಲು ಅವರು
ಎಂದೂ ನೆನಪು ಮಾಡುವುದೇ ಇಲ್ಲ. ನಮಗೆ ಭಗವಂತನೇ ಓದಿಸುತ್ತಾರೆ ಎಂಬುದನ್ನೇ ಮರೆತು ಹೋಗುತ್ತಾರೆ.
ಮರೆತು ಹೋಗುವ ಕಾರಣ ಮತ್ತೆ ಸೇವೆಯನ್ನು ಮಾಡಲು ಸಾಧ್ಯವಿಲ್ಲ. ರಾತ್ರಿಯೂ ತಂದೆಯು ತಿಳಿಸಿದ್ದರು -
ಕನಿಷ್ಟರಿಗಿಂತಲೂ ಅತಿ ಕನಿಷ್ಟರು ಯಾರು ವೇಶ್ಯೆಯರಿದ್ದಾರೆಯೋ ಅವರ ಸೇವೆ ಮಾಡಬೇಕಾಗಿದೆ.
ವೇಶ್ಯೆಯರಿಗೆ ನೀವು ಸಂದೇಶ ಕೊಡಿ - ನೀವು ತಂದೆಯ ಈ ಜ್ಞಾನವನ್ನು ಧಾರಣೆ ಮಾಡಿದರೆ ಸ್ವರ್ಗದ
ವಿಶ್ವದ ಮಹಾರಾಣಿಯಾಗುತ್ತೀರಿ ಯಾವುದೇ ಸಾಹುಕಾರರೂ ಆಗಲು ಸಾಧ್ಯವಿಲ್ಲ. ಯಾರು ತಿಳಿದುಕೊಂಡಿದ್ದೀರಿ
- ವಿದ್ಯಾವಂತರಾಗಿದ್ದೀರೋ ಅಂತಹವರು ಅವರಿಗೆ ಜ್ಞಾನ ಕೊಡುವ ಪ್ರಬಂಧ ಮಾಡಿ ಇದರಿಂದ ಪಾಪ! ಬಹಳ ಖುಷಿ
ಪಡುತ್ತಾರೆ ಏಕೆಂದರೆ ಅವರೂ ಸಹ ಅಬಲೆಯರಾಗಿದ್ದಾರೆ. ಅವರಿಗೆ ನೀವು ತಿಳಿಸಿಕೊಡಿ - ತಂದೆಯಂತೂ
ಬಹಳಷ್ಟು ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ. ಹೇಳಿ, ನೀವೇ ಶ್ರೇಷ್ಠಾತಿ ಶ್ರೇಷ್ಠರಿದ್ದವರು
ಈಗ ಅತಿ ಕನಿಷ್ಟರಾಗಿದ್ದೀರಿ. ನಿಮ್ಮ ಹೆಸರಿನಿಂದಲೇ ಭಾರತವು ವೇಶ್ಯಾಲಯವಾಗಿದೆ. ಈ ಪುರುಶಾರ್ಥ
ಮಾಡುವುದರಿಂದ ಮತ್ತೆ ನೀವು ಶಿವಾಲಯದಲ್ಲಿ ಹೋಗುತ್ತೀರಿ. ನೀವೀಗ ಹಣಕ್ಕಾಗಿ ಎಷ್ಟು ಕೆಟ್ಟ
ಕೆಲಸವನ್ನು ಮಾಡುತ್ತೀರಿ! ಈಗ ಇದನ್ನು ಬಿಡಿ - ಈ ರೀತಿಯಾಗಿ ತಿಳಿಸುವುದರಿಂದ ಅವರು ಬಹಳ ಖುಷಿ
ಪಡುವರು. ಇದರಲ್ಲಿ ನಿಮ್ಮನ್ನು ಯಾರೂ ತಡೆಯುವುದಿಲ್ಲ. ಇದಂತೂ ಒಳ್ಳೆಯ ಮಾತಲ್ಲವೆ. ಬಡವರಿಗೆ
ಇರುವುದೇ ಭಗವಂತ, ಹಣದ ಕಾರಣ ಬಹಳ ಕೆಟ್ಟ ಕೆಲಸ ಮಾಡುತ್ತಾರೆ. ಅವರಿಗೆ ಇದು ಹೇಗೆ
ವ್ಯಾಪಾರವಿದ್ದಂತೆ. ಈಗ ಸರ್ವೀಸ್ ಹೇಗೆ ವೃದ್ಧಿಯಾಗುವುದು? ಎಂದು ನಾವು ಯುಕ್ತಿಗಳನ್ನು
ತೆಗೆಯುತ್ತೇವೆಂದು ಮಕ್ಕಳು ಹೇಳುತ್ತಾರೆ. ಕೆಲವು ಮಕ್ಕಳಂತೂ ಯಾವುದಾದರೊಂದು ಮಾತಿನಲ್ಲಿ
ಮುನಿಸಿಕೊಳ್ಳುತ್ತಾರೆ, ವಿದ್ಯೆಯನ್ನೂ ಬಿಟ್ಟು ಬಿಡುತ್ತಾರೆ. ನಾವು ಓದದಿದ್ದರೆ ನಮಗೇ
ನಷ್ಟವನ್ನುಂಟು ಮಾಡಿಕೊಳ್ಳುತ್ತೇವೆಂದು ತಿಳಿಯುವುದಿಲ್ಲ. ಮುನಿಸಿಕೊಂಡು ಮನೆಯಲ್ಲಿಯೇ
ಕುಳಿತುಕೊಂಡು ಬಿಡುತ್ತಾರೆ. ಈ ರೀತಿ ಅಂಧರು ಹೀಗೆ ಹೇಳಿದರು ಎಂದು ಹೇಳಿ, ಬರುವುದೇ ಇಲ್ಲ.
ವಾರದಲ್ಲಿ ಒಂದು ಬಾರಿ ಬರುವುದೂ ಕಷ್ಟ. ತಂದೆಯಂತೂ ಮುರುಳಿಗಳಲ್ಲಿಯೂ ಕೆಲಕೆಲವೊಮ್ಮೆ ಕೆಲವೊಂದು
ಸಲಹೆಗಳನ್ನು ಕೊಡುತ್ತಿರುತ್ತಾರೆ. ಮುರುಳಿಯನ್ನಂತೂ ಕೇಳಬೇಕಲ್ಲವೆ. ತರಗತಿಗೆ ಬಂದಾಗಲೇ
ಕೇಳುತ್ತೀರಿ. ಇಂತಹವರು ಅನೇಕರಿದ್ದಾರೆ, ಕಾರಣ-ಅಕಾರಣದಿಂದ ನೆಪ ಮಾಡಿಕೊಂಡು ಮಲಗಿ ಬಿಡುತ್ತಾರೆ.
ಒಳ್ಳೆಯದು, ಇಂದು ಹೋಗುವುದಿಲ್ಲ ಎಂದುಕೊಳ್ಳುತ್ತಾರೆ. ಅರೆ! ತಂದೆಯು ಇಂತಹ ಒಳ್ಳೊಳ್ಳೆಯ
ವಿಚಾರಗಳನ್ನು ತಿಳಿಸುತ್ತಾರೆ, ಸರ್ವೀಸ್ ಮಾಡಿದರೆ ಶ್ರೇಷ್ಠ ಪದವಿಯನ್ನೇ ಪಡೆಯುವಿರಿ. ಇದು
ವಿದ್ಯೆಯಾಗಿದೆ, ಬನಾರಸ್ ಹಿಂದೂ ಯುನಿವರ್ಸಿಟಿ ಮೊದಲಾದಕಡೆ ಬಹಳಷ್ಟು ಶಾಸ್ತ್ರಗಳನ್ನು ಓದುತ್ತಾರೆ.
ಬೇರೆ ಯಾವುದೇ ಕೆಲಸವಿಲ್ಲವೆಂದರೆ ಸಾಕು, ಶಾಸ್ತ್ರಗಳನ್ನು ಕಂಠಪಾಠ ಮಾಡಿ ಸತ್ಸಂಗವನ್ನು ಆರಂಭ ಮಾಡಿ
ಬಿಡುತ್ತಾರೆ. ಅವರಲ್ಲಿ ಉದ್ದೇಶವೇನೂ ಇರುವುದಿಲ್ಲ. ಈ ವಿದ್ಯೆಯಿಂದಂತೂ ಎಲ್ಲರ ದೋಣಿಯು
ಪಾರಾಗುತ್ತದೆ ಅಂದಾಗ ಮಕ್ಕಳು ಇಂತಹ ಪದಮದ ಸೇವೆಯನ್ನು ಮಾಡಬೇಕಾಗಿದೆ. ಯಾವಾಗ ಸಾಹುಕಾರರು ಇಲ್ಲಿ
ವೇಶ್ಯೆಯರೂ ಬರುವುದು ನೋಡಿದರೆ ಅವರಿಗೆ ಬರುವುದಕ್ಕೆ ಮನಸ್ಸಾಗುವುದಿಲ್ಲ, ದೇಹಾಭಿಮಾನವಿದೆಯಲ್ಲವೆ.
ಅವರಿಗೆ ನಾಚಿಕೆಯಾಗುತ್ತದೆ. ಭಲೆ ಅವರಿಗಾಗಿ ಇನ್ನೊಂದು ಸೇವಾಕೇಂದ್ರವನ್ನು ತೆರೆಯಿರಿ, ಆ
ವಿದ್ಯೆಯಂತೂ ಶರೀರ ನಿರ್ವಹಣಾರ್ಥವಾಗಿ ಬಿಡಿಗಾಸಿನ ವಿದ್ಯೆಯಾಗಿದೆ. ಇದು 21 ಜನ್ಮಗಳಿಗಾಗಿ ಇದೆ,
ಇದರಿಂದ ಅನೇಕರ ಕಲ್ಯಾಣವಾಗುವುದು. ಬಹುತೇಕವಾಗಿ ಮಾತೆಯರೂ ಸಹ ಕೇಳುತ್ತಾರೆ, ಬಾಬಾ, ಮನೆಯಲ್ಲಿ
ಗೀತಾಪಾಠಶಾಲೆಯನ್ನು ತೆರೆಯುವುದೇ? ಅವರಿಗೆ ಈಶ್ವರೀಯ ಸೇವೆಯ ಅಭಿರುಚಿ ಇರುತ್ತದೆ. ಪುರುಷರಂತೂ
ಅಲ್ಲಿ-ಇಲ್ಲಿ ಕ್ಲಬ್ ಮೊದಲಾದಕಡೆ ತಿರುಗುತ್ತಿರುತ್ತಾರೆ. ಸಾಹುಕಾರರಿಗಾಗಿ ಇಲ್ಲಿಯೇ ಸ್ವರ್ಗವಿದೆ.
ಎಷ್ಟೊಂದು ಫ್ಯಾಷನ್ ಮಾಡುತ್ತಿರುತ್ತಾರೆ ಆದರೆ ದೇವತೆಗಳ ಪ್ರಾಕೃತಿಕ ಸೌಂದರ್ಯ ನೋಡಿ ಹೇಗಿದೆ!
ಎಷ್ಟೊಂದು ಅಂತರವಿದೆ! ಇಲ್ಲಿ ನಿಮಗೆ ಸತ್ಯವನ್ನು ತಿಳಿಸಲಾಗುತ್ತದೆ ಆದ್ದರಿಂದ ನೋಡಿ ಎಷ್ಟೊಂದು
ಕಡಿಮೆ ಮಂದಿ ಬರುತ್ತಾರೆ. ಅದರಲ್ಲಿಯೂ ಬಡವರು. ಅಲ್ಲಂತೂ ಬಹು ಬೇಗನೆ ಹೊರಟು ಹೋಗುತ್ತಾರೆ,
ಅಲ್ಲಿಗೂ ಶೃಂಗಾರ ಮಾಡಿಕೊಂಡು ಹೋಗುತ್ತಾರೆ. ಗುರುಗಳು ವಿವಾಹ ಮಾಡಿಸುತ್ತಾರೆ. ಇಲ್ಲಿ ಒಂದುವೇಳೆ
ಯಾರದೇ ವಿವಾಹ ಮಾಡಿಸಿದರೂ ಅದು ರಕ್ಷಣೆಗಾಗಿ, ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಪಾರಾಗಲಿ,
ಜ್ಞಾನ ಚಿತೆಯ ಮೇಲೆ ಕುಳಿತು ಪದಮಾಪದಮ ಭಾಗ್ಯಶಾಲಿ ಆಗಲಿ ಎಂದು ಇಲ್ಲಿ ಗಾಂಧರ್ವ ವಿವಾಹವನ್ನು
ಮಾಡಿಸಲಾಗುತ್ತದೆ. ಕೆಲವರು ತಂದೆ-ತಾಯಿಗೆ ಹೇಳುತ್ತಾರೆ - ಈ ನಷ್ಟಗೊಳಿಸುವ ವ್ಯವಹಾರವನ್ನು ಬಿಟ್ಟು
ಸ್ವರ್ಗಕ್ಕೆ ನಡೆಯಿರಿ. ಆಗ ತಂದೆ-ತಾಯಿಯು ಹೇಳುತ್ತಾರೆ - ಏನು ಮಾಡುವುದು, ಪ್ರಪಂಚದವರು ಇವರು
ನಮ್ಮ ಕುಲದವರ ಹೆಸರನ್ನು ಕೆಡಿಸುತ್ತಾರೆಂದು ಹೇಳಿ ನಮ್ಮ ಮೇಲೆ ಎದುರುಬೀಳುತ್ತಾರೆ. ವಿವಾಹ
ಮಾಡಿಕೊಳ್ಳದೇ ಇರುವುದು ನಿಯಮಕ್ಕೆ ವಿರುದ್ಧವೆಂದು ತಿಳಿಯುತ್ತಾರೆ. ಲೋಕ ಮರ್ಯಾದೆ, ಕುಲ
ಮರ್ಯಾದೆಗಳನ್ನು ಬಿಡುವುದೇ ಇಲ್ಲ ಭಕ್ತಿಮಾರ್ಗದಲ್ಲಿ ನನ್ನವರು ಒಬ್ಬ ತಂದೆಯ ವಿನಃ ಮತ್ತ್ಯಾರೂ
ಇಲ್ಲವೆಂದು ಹಾಡುತ್ತಾರೆ. ಮೀರಾಳ ಗೀತೆಯೂ ಇದೆ. ಸ್ತ್ರೀಯರಲ್ಲಿ ಭಕ್ತಿನಿ ಮೀರಾ, ಪುರುಷರಲ್ಲಿ
ನಾರದನ ಗಾಯನವಿದೆ, ನಾರದನ ಕಥೆಯೂ ಇದೆಯಲ್ಲವೆ. ನಿಮಗೆ ಯಾರಾದರೂ ಹೊಸಬರು ನಾನು ಲಕ್ಷ್ಮಿಯನ್ನು
ವರಿಸುತ್ತೇನೆಯೇ ಎಂದು ಕೇಳಿದರೆ ತಿಳಿಸಿ, ತಮ್ಮನ್ನು ನೋಡಿಕೊಳ್ಳಿ - ಯೋಗ್ಯರಾಗಿದ್ದೀರಾ? ಪವಿತ್ರ,
ಸರ್ವಗುಣ ಸಂಪನ್ನರಾಗಿದ್ದೀರಾ? ಇದಂತೂ ವಿಕಾರಿ ಪತಿತ ಪ್ರಪಂಚವಾಗಿದೆ, ಅದರಿಂದ ಹೊರ ತೆಗೆದು
ಪಾವನರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಪಾವನರಾಗಿ, ಆಗಲೇ ಲಕ್ಷ್ಮಿಯನ್ನು ವರಿಸಲು
ಯೋಗ್ಯರಾಗುತ್ತೀರಿ. ಇಲ್ಲಿ ತಂದೆಯ ಬಳಿ ಬರುತ್ತಾರೆ, ಪ್ರತಿಜ್ಞೆ ಮಾಡುತ್ತಾರೆ ಮತ್ತೆ ಮನೆಗೆ ಹೋಗಿ
ವಿಕಾರದಲ್ಲಿ ಬೀಳುತ್ತಾರೆ. ಇಂತಿಂತಹ ಸಮಾಚಾರಗಳು ಬರುತ್ತವೆ, ತಂದೆಯು ತಿಳಿಸುತ್ತಾರೆ -
ಇಂತಹವರನ್ನು ಯಾವ ಬ್ರಾಹ್ಮಿಣಿಯು ಕರೆತರುವರೋ ಅವರ ಮೇಲೂ ಪ್ರಭಾವವಾಗುತ್ತದೆ. ಇಂದ್ರಸಭೆಯ
ಕಥೆಯಿದೆಯಲ್ಲವೆ. ಅಂದಾಗ ಕರೆದುಕೊಂಡು ಬರುವವರಿಗೂ ಸಹ ಶಿಕ್ಷೆಯಾಗುತ್ತದೆ. ತಂದೆಯು ಯಾವಾಗಲೂ
ಬ್ರಾಹ್ಮಿಣಿಯರಿಗೆ ಹೇಳುತ್ತಾರೆ - ಕಚ್ಚಾ ಆದವರನ್ನು ಕರೆದುಕೊಂಡು ಬರಬೇಡಿ, ನಿಮ್ಮ ಸ್ಥಿತಿಯೂ ಸಹ
ಕೆಳಗಿಳಿಯುವುದು ಏಕೆಂದರೆ ನಿಯಮಕ್ಕೆ ವಿರುದ್ಧವಾಗಿ ಕರೆತಂದರು. ವಾಸ್ತವದಲ್ಲಿ
ಬ್ರಾಹ್ಮಿಣಿಯಾಗುವುದು ಬಹಳ ಸಹಜವಾಗಿದೆ. 10-15 ದಿನಗಳಲ್ಲಿ ಆಗಿ ಬಿಡಬಹುದು. ತಂದೆಯು ಯಾರಿಗೆ
ಬೇಕಾದರೂ ತಿಳಿಸಿಕೊಡಲು ಬಹಳ ಸಹಜ ಯುಕ್ತಿಗಳನ್ನು ತಿಳಿಸುತ್ತಾರೆ. ನೀವು ಭಾರತವಾಸಿ ಆದಿ ಸನಾತನ
ದೇವಿ-ದೇವತಾ ಧರ್ಮದವರಾಗಿದ್ದಿರಿ, ಸ್ವರ್ಗವಾಸಿಗಳಾಗಿದ್ದಿರಿ, ಈಗ ನರಕವಾಸಿಯಾಗಿದ್ದೀರಿ. ಪುನಃ
ಸ್ವರ್ಗವಾಸಿಯಾಗಬೇಕೆಂದರೆ ಈ ವಿಕಾರವನ್ನು ಬಿಡಿ. ಕೇವಲ ತಂದೆಯನ್ನು ನೆನಪು ಮಾಡಿ ಆಗ ವಿಕರ್ಮಗಳು
ವಿನಾಶವಾಗುವವು. ಎಷ್ಟು ಸಹಜವಾಗಿದೆ! ಆದರೆ ಕೆಲವರು ಏನನ್ನೂ ತಿಳಿದುಕೊಳ್ಳುವುದೇ ಇಲ್ಲ. ತಾನೇ
ತಿಳಿದುಕೊಂಡಿಲ್ಲವೆಂದರೆ ಅನ್ಯರಿಗೇನು ತಿಳಿಸುತ್ತಾರೆ! ವಾನಪ್ರಸ್ಥ ಸ್ಥಿತಿಯಲ್ಲಿಯೂ ಮೋಹದ
ಸೆಳೆತವಿರುತ್ತದೆ. ಈಗಂತೂ ಬಹಳ ಮಂದಿ ವಾನಪ್ರಸ್ಥ ಸ್ಥಿತಿಯಲ್ಲಿ ಹೋಗುವುದೇ ಇಲ್ಲ.
ತಮೋಪ್ರಧಾನರಲ್ಲವೆ. ಇಲ್ಲಿಯೇ ಸಿಲುಕಿಕೊಂಡಿರುತ್ತಾರೆ. ಮೊದಲಿಗೆ ವಾನಪ್ರಸ್ಥಿಗಳ ದೊಡ್ಡ-ದೊಡ್ಡ
ಆಶ್ರಮಗಳಿತ್ತು, ಈಗ ಅಷ್ಟೊಂದಿಲ್ಲ. 80-90 ವರ್ಷದವರಾದರೂ ಸಹ ಮನೆಯನ್ನು ಬಿಡುವುದೇ ಇಲ್ಲ. ನಾವೀಗ
ವಾಣಿಯಿಂದ ದೂರ ಹೋಗಬೇಕು, ಈಶ್ವರನನ್ನು ನೆನಪು ಮಾಡಬೇಕಾಗಿದೆ ಎಂಬುದನ್ನು ತಿಳಿದುಕೊಳ್ಳುವುದೇ
ಇಲ್ಲ. ಭಗವಂತ ಯಾರು ಎಂಬುದೇನನ್ನೂ ತಿಳಿದುಕೊಂಡಿಲ್ಲ. ಸರ್ವವ್ಯಾಪಿ ಎಂದು ಹೇಳಿದರೆ ಯಾರನ್ನು
ನೆನಪು ಮಾಡುವುದು? ನಾವು ಪೂಜಾರಿಗಳಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ತಂದೆಯು
ನಿಮ್ಮನ್ನು ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡುತ್ತಾರೆ 21 ಜನ್ಮಗಳಿಗಾಗಿ. ಅಂದಮೇಲೆ ಇದಕ್ಕಾಗಿ
ಪುರುಷಾರ್ಥವನ್ನಂತೂ ಮಾಡಬೇಕಾಗುವುದು.
ತಂದೆಯು ತಿಳಿಸುತ್ತಾರೆ
- ಈ ಹಳೆಯ ಪ್ರಪಂಚವಂತೂ ಸಮಾಪ್ತಿಯಾಗಬೇಕಾಗಿದೆ. ಈಗ ನಾವು ಮನೆಗೆ ಹೋಗಬೇಕಾಗಿದೆ - ಇದೇ
ಚಿಂತೆಯಿರಲಿ. ಅಲ್ಲಿ ಕುದೃಷ್ಟಿಯಿರುವುದೇ ಇಲ್ಲ. ತಂದೆಯು ಬಂದು ಪವಿತ್ರ ಪ್ರಪಂಚಕ್ಕಾಗಿ ತಯಾರಿ
ಮಾಡಿಸುತ್ತಾರೆ. ಸೇವಾಧಾರಿ ಮುದ್ದು ಮಕ್ಕಳನ್ನು ತಮ್ಮ ಕಣ್ಣುಗಳ ಮೇಲೆ ಕೂರಿಸಿಕೊಂಡು ಕರೆದುಕೊಂಡು
ಹೋಗುತ್ತಾರೆ. ಅಂದಾಗ ಅದಮರ ಉದ್ಧಾರವನ್ನೂ ಮಾಡುವುದಕ್ಕಾಗಿ ಸಾಹಸವು ಬೇಕು. ಆ ಸರ್ಕಾರದಲ್ಲಂತೂ
ದೊಡ್ಡ-ದೊಡ್ಡ ಗುಂಪಿರುತ್ತದೆ. ಓದು-ಬರಹವಿರುವವರು ಟಿಪ್-ಟಾಪ್ ಆಗಿರುತ್ತಾರೆ. ಇಲ್ಲಾದರೆ ಕೆಲವರು
ಬಡವರು-ಸಾಹುಕಾರರಿದ್ದಾರೆ. ಅವರನ್ನು ತಂದೆಯು ಎಷ್ಟು ಮೇಲೆತ್ತುತ್ತಾರೆ! ಚಲನೆಯೂ ಸಹ ಬಹಳ
ಘನತೆಯಿಂದ ಕೂಡಿರಲಿ. ಭಗವಂತನೇ ಓದಿಸುತ್ತಾರೆ, ಆ ವಿದ್ಯೆಯಲ್ಲಾದರೆ ಯಾರಾದರೂ ದೊಡ್ಡ
ಪರೀಕ್ಷೆಯನ್ನು ತೇರ್ಗಡೆ ಮಾಡಿದರೆ ಎಷ್ಟೊಂದು ಟಿಪ್-ಟಾಪ್ ಆಗಿರುತ್ತಾರೆ. ಇಲ್ಲಂತೂ ತಂದೆಯು ಬಡವರ
ಬಂಧುವಾಗಿದ್ದಾರೆ. ಬಡವರೇ ಏನಾದರೊಂದನ್ನು ಕಳುಹಿಸುತ್ತಾರೆ. ಒಂದೆರಡು ರೂಪಾಯಿಗಳನ್ನೂ ಸಹ
ಮನಿಆರ್ಡರ್ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಎಷ್ಟು ಭಾಗ್ಯಶಾಲಿಗಳಾಗಿದ್ದೀರಿ!
ಪ್ರತಿಯಾಗಿ ನಿಮಗೆ ಬಹಳಷ್ಟು ಸಿಗುತ್ತದೆ. ಇದೇನೂ ಹೊಸ ಮಾತಲ್ಲ, ಸಾಕ್ಷಿಯಾಗಿ ನಾಟಕವನ್ನು
ನೋಡುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಚೆನ್ನಾಗಿ ಓದಿರಿ, ಇದು ಈಶ್ವರೀಯ
ಯಜ್ಞವಾಗಿದೆ. ಇದರಿಂದ ಏನು ಬೇಕು ಅದನ್ನು ತೆಗೆದುಕೊಳ್ಳಿ ಆದರೆ ಇಲ್ಲಿ ತೆಗೆದುಕೊಂಡರೆ ಅಲ್ಲಿ
ಕಡಿಮೆಯಾಗಿ ಬಿಡುವುದು. ಸ್ವರ್ಗದಲ್ಲಂತೂ ಎಲ್ಲವೂ ಸಿಗುತ್ತದೆ. ತಂದೆಗೆ ಸರ್ವೀಸಿನಲ್ಲಿ ಬಹಳ
ಸ್ಫೂರ್ತಿವಂತ ಮಕ್ಕಳು ಬೇಕು. ಹೇಗೆ ಮೋಹಿನಿ, ಸುದೇಶ್...... ಇದ್ದಾರೆ, ಹಾಗೆಯೇ ಸರ್ವೀಸಿನ
ಉಮ್ಮಂಗವಿರಬೇಕು. ನಿಮ್ಮ ಹೆಸರು ಬಹಳ ಪ್ರಖ್ಯಾತವಾಗುವುದು. ಮತ್ತೆ ನಿಮಗೆ ಬಹಳ ಗೌರವ ಕೊಡುತ್ತಾರೆ.
ತಂದೆಯು ಎಲ್ಲಾ ಸಲಹೆಗಳನ್ನು ಕೊಡುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ಇಲ್ಲಿ ಮಕ್ಕಳಿಗೆ
ಸಮಯ ಸಿಕ್ಕಿದರೆ ಸಾಕು, ನೆನಪಿನಲ್ಲಿರಿ. ಹೇಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದಿನವು ಸಮೀಪವಾದಂತೆ
ಏಕಾಂತದಲ್ಲಿ ಹೋಗಿ ಓದುತ್ತಾರೆ. ವ್ಯಕ್ತಿಗತವಾಗಿ ಶಿಕ್ಷಕರನ್ನು ಇಟ್ಟುಕೊಳ್ಳುತ್ತಾರೆ. ನಮ್ಮ ಬಳಿ
ಶಿಕ್ಷಕರಂತು ಅನೇಕರಿದ್ದಾರೆ ಆದರೆ ಕೇವಲ ಓದುವ ಉಮ್ಮಂಗವಿರಬೇಕು. ತಂದೆಯು ಬಹಳ ಸಹಜವಾಗಿ
ತಿಳಿಸುತ್ತಾರೆ - ಕೇವಲ ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ, ಈ ಶರೀರವು ವಿನಾಶಿ ನೀವಾತ್ಮಗಳು
ಅವಿನಾಶಿಯಾಗಿದ್ದೀರಿ. ಈ ಜ್ಞಾನವು ಒಂದೇ ಬಾರಿ ಸಿಗುತ್ತದೆ. ಮತ್ತೆ ಸತ್ಯಯುಗದಿಂದ ಹಿಡಿದು
ಕಲಿಯುಗದ ಅಂತ್ಯದವರೆಗೂ ಯಾರಿಗೂ ಸಿಗುವುದೇ ಇಲ್ಲ, ನಿಮಗೇ ಸಿಗುತ್ತದೆ. ನಾವಾತ್ಮರಾಗಿದ್ದೇವೆ
ಎಂಬುದನ್ನು ಪಕ್ಕಾ ನಿಶ್ಚಯ ಮಾಡಿಕೊಳ್ಳಿ. ತಂದೆಯಿಂದ ನಮಗೆ ಆಸ್ತಿಯು ಸಿಗುತ್ತದೆ. ತಂದೆಯ
ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತದೆ. ಕೇವಲ ಇದೇ ಒಳಗೆ ತಿರುಗುತ್ತಿರಲಿ - ಇದರಿಂದಲೂ
ಅನೇಕರ ಕಲ್ಯಾಣವಾಗುತ್ತದೆ ಆದರೆ ಚಾರ್ಟನ್ನಿಡುವುದೇ ಇಲ್ಲ. ಬರೆಯುತ್ತಾ-ಬರೆಯುತ್ತಾ ಮತ್ತೆ
ಸುಸ್ತಾಗಿ ಬಿಡುತ್ತಾರೆ. ತಂದೆಯು ಬಹಳ ಸಹಜ ಮಾಡಿ ತಿಳಿಸುತ್ತಾರೆ - ನಾವಾತ್ಮಗಳು
ಸತೋಪ್ರಧಾನರಾಗಿದ್ದೆವು, ಈಗ ತಮೋಪ್ರಧಾನರಾಗಿದ್ದೇವೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು
ಮಾಡಿದರೆ ಸತೋಪ್ರಧಾನರಾಗಿ ಬಿಡುತ್ತೀರಿ. ಎಷ್ಟು ಸಹಜವಾಗಿದೆ ಆದರೂ ಸಹ ಮರೆತು ಹೋಗುತ್ತೀರಿ. ಎಷ್ಟು
ಸಮಯ ಕುಳಿತುಕೊಳ್ಳುತ್ತೀರೋ ಅಷ್ಟು ಸಮಯ ಆತ್ಮನೆಂದು ತಿಳಿಯಿರಿ. ನಾನಾತ್ಮ ತಂದೆಯ ಮಗುವಾಗಿದ್ದೇನೆ,
ತಂದೆಯನ್ನು ನೆನಪು ಮಾಡಿದರೆ ಸ್ವರ್ಗದ ರಾಜ್ಯಭಾಗ್ಯವು ಸಿಗುವುದು ಮತ್ತು ಅರ್ಧಕಲ್ಪದ ಪಾಪಗಳು
ಭಸ್ಮವಾಗುತ್ತದೆ. ಎಷ್ಟು ಸಹಜವಾದ ಯುಕ್ತಿಯನ್ನು ತಂದೆಯು ತಿಳಿಸುತ್ತಾರೆ. ಎಲ್ಲಾ ಮಕ್ಕಳು
ಕೇಳುತ್ತೀರಿ, ಈ ತಂದೆಯು ಸ್ವಯಂ ಅಭ್ಯಾಸ ಮಾಡುತ್ತಾರೆ ಆದ್ದರಿಂದಲೇ ಕಲಿಸುತ್ತಾರಲ್ಲವೆ. ನಾನು
ತಂದೆಯ ರಥವಾಗಿದ್ದೇನೆ, ತಂದೆಯು ನನಗೆ ತಿನ್ನಿಸುತ್ತಾರೆ, ನೀವು ಮಕ್ಕಳೂ ಸಹ ಇದೇ ರೀತಿ ತಿಳಿಯಿರಿ
– ಶಿವ ತಂದೆಯನ್ನು ನೆನಪು ಮಾಡುತ್ತಾ ಇರಿ, ಇದರಿಂದ ಎಷ್ಟೊಂದು ಲಾಭವಾಗುವುದು ಆದರೆ ಮರೆತು
ಹೋಗುತ್ತಾರೆ. ಇದು ಬಹಳ ಸಹಜವಾಗಿದೆ, ವ್ಯಾಪಾರದಲ್ಲಿ ಯಾರು ಗ್ರಾಹಕರಿಲ್ಲವೆಂದರೆ ನೆನಪಿನಲ್ಲಿ
ಕುಳಿತು ಬಿಡಿ. ನಾನಾತ್ಮನಾಗಿದ್ದೇನೆ, ತಂದೆಯನ್ನು ನೆನಪು ಮಾಡಬೇಕಾಗಿದೆ. ಕಾಯಿಲೆಯಲ್ಲಿಯೂ ಸಹ
ನೆನಪು ಮಾಡಬಲ್ಲಿರಿ. ಬಂಧನದಲ್ಲಿರುವವರಾಗಿದ್ದರೆ ಅಲ್ಲಿ ಕುಳಿತೇ ನೀವು ನೆನಪು ಮಾಡುತ್ತಾ ಇರಿ.
ಇದರಿಂದ ನೀವು 10-20 ವರ್ಷದವರಿಗಿಂತಲೂ ಉತ್ತಮ ಪದವಿಯನ್ನು ಪಡೆದುಕೊಳ್ಳುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಸರ್ವೀಸಿನಲ್ಲಿ ಬಹಳ-ಬಹಳ ಸ್ಪೂರ್ತಿವಂತರಾಗಬೇಕು. ಸಮಯ ಸಿಕ್ಕಿದಾಗಲೆಲ್ಲಾ ಏಕಾಂತದಲ್ಲಿ ಕುಳಿತು
ತಂದೆಯನ್ನು ನೆನಪು ಮಾಡಬೇಕಾಗಿದೆ. ವಿದ್ಯಾಭ್ಯಾಸದ ಉಮ್ಮಂಗವನ್ನಿಡಬೇಕಾಗಿದೆ. ವಿದ್ಯೆಯೊಂದಿಗೆ
ಎಂದೂ ಮುನಿಸಿಕೊಳ್ಳಬಾರದು.
2. ತಮ್ಮ ಚಲನೆಯನ್ನು
ಬಹಳ ಘನತೆಯಿಂದ ಇಟ್ಟುಕೊಳ್ಳಬೇಕಾಗಿದೆ. ನಾವೀಗ ಮನೆಗೆ ಹೋಗಬೇಕಾಗಿದೆ, ಹಳೆಯ ಪ್ರಪಂಚವು
ಸಮಾಪ್ತಿಯಾಗಲಿದೆ. ಆದ್ದರಿಂದ ಮೋಹದ ದಾರಗಳನ್ನು ಕತ್ತರಿಸಬೇಕಾಗಿದೆ. ವಾಣಿಯಿಂದ ದೂರ ಹೋಗುವ
ಸ್ಥಿತಿಯಲ್ಲಿರುವ ಅಭ್ಯಾಸ ಮಾಡಬೇಕಾಗಿದೆ. ಅದಮರ ಉದ್ಧಾರವನ್ನೂ ಮಾಡುವ ಸೇವೆ ಮಾಡಬೇಕಾಗಿದೆ.
ವರದಾನ:
ಶ್ರೇಷ್ಠ
ವೃತ್ತಿಯ ಮೂಲಕ ವೃತ್ತಿಗಳನ್ನು ಪರಿವರ್ತನೆ ಮಾಡುವಂತಹ ಸದಾ ಸಿದ್ಧಿ ಸ್ವರೂಪ ಭವ.
ಸಿದ್ಧಿ ಸ್ವರೂಪರಾಗಲು
ವೃತ್ತಿಯ ಮೂಲಕ ವೃತ್ತಿಗಳನ್ನು, ಸಂಕಲ್ಪದ ಮೂಲಕ ಸಂಕಲ್ಪಗಳನ್ನು ಪರಿವರ್ತನೆ ಮಾಡುವ ಕಾರ್ಯ ಮಾಡಿ,
ಇದರ ಬಗ್ಗೆ ಸಂಶೋಧನೆ ಮಾಡಿ. ಯಾವಾಗ ಈ ಸೇವೆಯಲ್ಲಿ ಬಿಜಿಯಾಗಿ ಬಿಡುವಿರಿ ಆಗ ಈ ಸೂಕ್ಷ್ಮ ಸೇವೆ
ಸ್ವತಃ ಅನೇಕ ಬಲಹೀನತೆಗಳಿಂದ ಪಾರು ಮಾಡಿಬಿಡುತ್ತದೆ. ಈಗ ಇದರ ಯೋಜನೆ ತಯಾರಿಸಿ ಆಗ ಜಿಜ್ಞಾಸುಗಳು
ಸಹ ಹೆಚ್ಚುತ್ತಾರೆ, ಸಹಯೋಗ ಸಹಾ ಹೆಚ್ಚು ಸಿಗುತ್ತೆ, ಮನೆಗಳು ಸಹ ಸಿಗುತ್ತವೆ - ಎಲ್ಲ ಸಿದ್ಧಿಗಳು
ಸಹಜವಾಗಿ ಬಿಡುವುದು. ಈ ವಿಧಿ-ಸಿಧಿ ಸ್ವರೂಪರನ್ನಾಗಿ ಮಾಡಿ ಬಿಡುವುದು.
ಸ್ಲೋಗನ್:
ಸಮಯವನ್ನು ಸಫಲ
ಮಾಡುತ್ತಿರಿ ಆಗ ಸಮಯದ ಮೋಸದಿಂದ ಸುರಕ್ಷಿತರಾಗುವಿರಿ.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಮಕ್ಕಳೊಂದಿಗೆ ತಂದೆಗೆ
ಇಷ್ಟು ಪ್ರೀತಿಯಿದೆ ಪ್ರತಿ ದಿನದ ಪ್ರೀತಿಯ ಪ್ರತ್ಯುತ್ತರವನ್ನು ಕೊಡುವುದಕ್ಕೆ ಇಷ್ಟು ದೊಡ್ಡ
ಪತ್ರವನ್ನು ಬರೆಯುತ್ತಾರೆ. ನೆನಪು ಪ್ರೀತಿಯನ್ನು ಕೊಡುತ್ತಾರೆ ಮತ್ತು ಜೊತೆಗಾರರಾಗಿ ಸದಾ
ಜೊತೆಯನ್ನು ನಿಭಾಯಿಸುತ್ತಾರೆ, ಅಂದಾಗ ಈ ಪ್ರೀತಿಯಲ್ಲಿ ತಮ್ಮ ಎಲ್ಲಾ ಬಲಹೀನತೆಗಳನ್ನು ಸಮರ್ಪಣೆ
ಮಾಡಿ ಬಿಡಿ. ಪರಮಾತ್ಮನ ಪ್ರೀತಿಯಲ್ಲಿ ಈ ರೀತಿ ಸಮಾವೇಶವಾಗಿಬಿಡಿ ಎಂದೂ ಹದ್ದಿನ ಪ್ರಭಾವ ತಮ್ಮ ಕಡೆ
ಆಕರ್ಷಿತರನ್ನಾಗಿ ಮಾಡಲು ಸಾಧ್ಯವಿಲ್ಲ. ಸದಾ ಬೇಹದ್ದಿನ ಪ್ರಾಪ್ತಿಗಳಲ್ಲಿ ಮಗ್ನರಾಗಿರಿ ಅದರಿಂದ
ಆತ್ಮೀಯತೆಯ ಸುಗಂಧ ವಾತಾವರಣದಲ್ಲಿ ಹರಡಿ ಬಿಡಲಿ.