05.11.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ ಇಡೀ
ಪ್ರಪಂಚ ರೋಗಿಗಳ ದೊಡ್ಡ ಆಸ್ಪತ್ರೆಯಾಗಿದೆ, ತಂದೆಯು ಇಡೀ ಪ್ರಪಂಚವನ್ನು ನಿರೋಗಿಯನ್ನಾಗಿ ಮಾಡಲು
ಬಂದಿದ್ದಾರೆ”
ಪ್ರಶ್ನೆ:
ಯಾವ
ಸ್ಮೃತಿಯಿದ್ದರೆ ಎಂದೂ ಗೊಂದಲ ಅಥವಾ ದುಃಖದ ಅಲೆ ಬರಲು ಸಾಧ್ಯವಿಲ್ಲ?
ಉತ್ತರ:
ಈಗ ನಾವು ಈ
ಹಳೆಯ ಪ್ರಪಂಚ, ಹಳೆಯ ಶರೀರವನ್ನು ಬಿಟ್ಟು ಮನೆಗೆ ಹೋಗುತ್ತೇವೆ ಮತ್ತೆ ಹೊಸ ಪ್ರಪಂಚದಲ್ಲಿ
ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೇವೆ. ನಾವು ಈಗ ರಾಜಧಾನಿಯಲ್ಲಿ ಹೋಗಲು ರಾಜಯೋಗವನ್ನು
ಕಲಿಯುತ್ತಿದ್ದೇವೆ. ತಂದೆಯು ನಾವು ಮಕ್ಕಳಿಗಾಗಿ ಆತ್ಮಿಕ ರಾಜಾಸ್ಥಾನವನ್ನು ಸ್ಥಾಪನೆ
ಮಾಡುತ್ತಿದ್ದಾರೆ, ಇದೇ ಸ್ಮೃತಿಯಿದ್ದಾಗ ದುಃಖದ ಅಲೆಗಳು ಬರಲು ಸಾಧ್ಯವಿಲ್ಲ.
ಗೀತೆ:
ನೀವೇ ಮಾತಾಪಿತಾ.....
ಓಂ ಶಾಂತಿ.
ಕೆಲವು ಗೀತೆಗಳು ನೀವು ಮಕ್ಕಳಿಗಾಗಿ ಅಲ್ಲ, ಹೊಸ-ಹೊಸಬರಿಗೆ ತಿಳಿಸಲು ಇದೆ. ಎಲ್ಲರೂ ಬುದ್ಧಿವಂತರೇ
ಇದ್ದಾರೆ ಎಂದಲ್ಲ. ಇಲ್ಲ, ಬುದ್ಧಿಹೀನರನ್ನು ಬುದ್ಧಿವಂತರನ್ನಾಗಿ ಮಾಡಲಾಗುತ್ತದೆ. ಮಕ್ಕಳು
ತಿಳಿಯುತ್ತೀರಿ - ನಾವು ಎಷ್ಟು ಬುದ್ಧಿಹೀನರಾಗಿದ್ದೆವು, ಈಗ ತಂದೆಯು ನಮ್ಮನ್ನು
ಬುದ್ಧಿವಂತರನ್ನಾಗಿ ಮಾಡುತ್ತಾರೆ. ಹೇಗೆ ಶಾಲೆಯಲ್ಲಿ ಓದಿ ಮಕ್ಕಳು ಎಷ್ಟೊಂದು ಬುದ್ಧಿವಂತರಾಗಿ
ಬಿಡುತ್ತಾರೆ. ಪ್ರತಿಯೊಬ್ಬರೂ ತಮ್ಮ-ತಮ್ಮ ಬುದ್ಧಿವಂತಿಕೆಯಿಂದ ಬ್ಯಾರಿಸ್ಟರ್, ಇಂಜಿನಿಯರ್
ಇತ್ಯಾದಿ ಆಗುತ್ತಾರೆ. ಇದಂತೂ ಆತ್ಮನನ್ನು ಬುದ್ಧಿವಂತನನ್ನಾಗಿ ಮಾಡುವಂತಹದ್ದಾಗಿದೆ. ಓದುವುದೂ ಸಹ
ಶರೀರದ ಮೂಲಕ ಆತ್ಮ ಓದುತ್ತದೆ ಆದರೆ ಹೊರಗಡೆ ಏನೇ ಶಿಕ್ಷಣ ಸಿಗುತ್ತದೆ ಅದು ಅಲ್ಪಕಾಲಕ್ಕಾಗಿ ಶರೀರ
ನಿರ್ವಹಣಾರ್ಥವಾಗಿ ಇದೆ. ಭಲೆ ಕೆಲವರು ಕನ್ವರ್ಟ್ ಮಾಡಿಕೊಳ್ಳುತ್ತಾರೆ. ಹಿಂದೂಗಳನ್ನು
ಕ್ರಿಶ್ಚಿಯನ್ನರನ್ನಾಗಿ ಮಾಡಿಕೊಳ್ಳುತ್ತಾರೆ - ಏತಕ್ಕಾಗಿ? ಸ್ವಲ್ಪ ಸುಖ ಪಡೆಯುವುದಕ್ಕಾಗಿ. ಹಣ,
ನೌಕರಿ ಸಹಜವಾಗಿ ಸಿಗುವುದಕ್ಕಾಗಿ ಜೀವನಾಧಾರಕ್ಕಾಗಿ ಕ್ರಿಶ್ಚಿಯನ್ನರಾಗುತ್ತಾರೆ. ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ – ಮೊಟ್ಟ ಮೊದಲು ನಾವು ಆತ್ಮಾಭಿಮಾನಿಗಳು ಆಗಬೇಕಾಗಿದೆ, ಇದೇ ಮುಖ್ಯ
ಮಾತಾಗಿದೆ ಏಕೆಂದರೆ ಇದು ರೋಗಿ ಪ್ರಪಂಚವಾಗಿದೆ. ರೋಗಿಯಾಗದೇ ಇರುವಂತಹ ಮನುಷ್ಯರೇ ಇಲ್ಲ.
ಏನಾದರೊಂದು ಇದ್ದೇ ಇರುತ್ತದೆ. ಈ ಇಡೀ ಪ್ರಪಂಚವೇ ದೊಡ್ಡ ಆಸ್ಪತ್ರೆಯಾಗಿದೆ. ಇದರಲ್ಲಿ ಎಲ್ಲಾ
ಮನುಷ್ಯರು ಪತಿತರು, ರೋಗಿಗಳಾಗಿದ್ದಾರೆ. ಆಯಸ್ಸೂ ಕಡಿಮೆಯಾಗಿದೆ ಆದ್ದರಿಂದ ಆಕಸ್ಮಿಕವಾಗಿ ಮೃತ್ಯು
ಹೊಂದುತ್ತಾರೆ ಅಂದರೆ ಕಾಲದ ಮುಷ್ಠಿಯಲ್ಲಿ ಬಂದು ಬಿಡುತ್ತಾರೆ. ಇದು ಕೇವಲ ನೀವು ಮಕ್ಕಳಿಗೇ
ತಿಳಿದಿದೆ. ನೀವು ಮಕ್ಕಳು ಕೇವಲ ಭಾರತವನ್ನಷ್ಟೇ ಅಲ್ಲ, ಗುಪ್ತ ರೂಪದಿಂದ ಇಡೀ ವಿಶ್ವದ ಸೇವೆ
ಮಾಡುತ್ತೀರಿ. ಮೂಲ ಮಾತೇನೆಂದರೆ, ಮನುಷ್ಯರು ತಂದೆಯನ್ನು ಅರಿತುಕೊಂಡಿಲ್ಲ. ಮನುಷ್ಯರಾಗಿಯೂ
ಪಾರಲೌಕಿಕ ತಂದೆಯನ್ನೇ ತಿಳಿದುಕೊಂಡಿಲ್ಲ, ಅವರೊಂದಿಗೆ ಪ್ರೀತಿಯನ್ನಿಡುವುದಿಲ್ಲ. ಈಗ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ನನ್ನೊಂದಿಗೇ ಪ್ರೀತಿಯನ್ನು ಇಟ್ಟುಕೊಳ್ಳಿರಿ, ನನ್ನೊಂದಿಗೆ
ಪ್ರೀತಿಯನ್ನು ಇಟ್ಟುಕೊಳ್ಳುತ್ತಾ-ಇಟ್ಟುಕೊಳ್ಳುತ್ತಾ ನನ್ನ ಜೊತೆಯಲ್ಲಿಯೇ ಮರಳಿ ಮನೆಗೆ
ನಡೆಯಬೇಕಾಗಿದೆ. ಆದರೆ ಮನೆಗೆ ಹೋಗುವವರೆಗೆ ಈ ಛೀ ಛೀ ಪ್ರಪಂಚದಲ್ಲಿ ಇರಬೇಕಾಗುತ್ತದೆ. ಮೊಟ್ಟ
ಮೊದಲು ದೇಹಾಭಿಮಾನಿಗಳಿಂದ ಆತ್ಮಾಭಿಮಾನಿ ಆಗಿರಿ ಆಗ ನೀವು ಧಾರಣೆ ಮಾಡಿಕೊಳ್ಳುವಿರಿ ಹಾಗೂ
ತಂದೆಯನ್ನು ನೆನಪು ಮಾಡಬಲ್ಲಿರಿ. ಒಂದುವೇಳೆ ಆತ್ಮಾಭಿಮಾನಿ ಆಗದಿದ್ದರೆ ಏನೂ ಪ್ರಯೋಜನಕ್ಕಿಲ್ಲ.
ಎಲ್ಲರೂ ದೇಹಾಭಿಮಾನಿ ಆಗಿದ್ದಾರೆ, ನೀವಂತೂ ತಿಳಿದುಕೊಂಡಿದ್ದೀರಿ - ನಾವು ಆತ್ಮಾಭಿಮಾನಿ ಆಗಿಲ್ಲ,
ತಂದೆಯನ್ನು ನೆನಪು ಮಾಡಿಲ್ಲವೆಂದರೆ ನಾವೂ ಸಹ ಮೊದಲು ಯಾರಾಗಿದ್ದೆವೋ ಅವರೇ, ವ್ಯತ್ಯಾಸವೇನೂ ಇಲ್ಲ.
ಮೂಲ ಮಾತು ಆತ್ಮಾಭಿಮಾನಿ ಆಗಬೇಕಾಗಿದೆ. ರಚನೆಯನ್ನು ಅರಿತುಕೊಳ್ಳುವುದೇ ಮೂಲ ಮಾತಲ್ಲ.
ರಚಯಿತ-ರಚನೆಯ ಜ್ಞಾನವೆಂದು ಗಾಯನವಿದೆ, ಮೊದಲು ರಚನೆ ನಂತರ ರಚಯಿತನ ಜ್ಞಾನವೆಂದು ಹೇಳುವುದಿಲ್ಲ.
ಮೊದಲು ರಚೈತ. ಏಕೆಂದರೆ ಅವರೇ ತಂದೆಯಾಗಿದ್ದಾರೆ. ಓ ಗಾಡ್ಫಾದರ್ ಎಂದು ಹೇಳುತ್ತಾರೆ. ಆ ತಂದೆಯೇ
ಬಂದು ಮಕ್ಕಳನ್ನು ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ತಂದೆಯಂತೂ ಸದಾ ಆತ್ಮಾಭಿಮಾನಿಯಾಗಿದ್ದಾರೆ
ಆದ್ದರಿಂದ ಅವರು ಶ್ರೇಷ್ಠರಾಗಿದ್ದಾರೆ. ತಂದೆಯು ಹೇಳುತ್ತಾರೆ - ನಾನಂತೂ ಆತ್ಮಾಭಿಮಾನಿ ಆಗಿದ್ದೇನೆ,
ಯಾರಲ್ಲಿ ಪ್ರವೇಶ ಮಾಡಿದ್ದೇನೆಯೋ ಅವರನ್ನೂ ಆತ್ಮಾಭಿಮಾನಿಯನ್ನಾಗಿ ಮಾಡುತ್ತೇನೆ. ಬ್ರಹ್ಮಾರವರನ್ನು
ಕನ್ವರ್ಟ್ ಮಾಡಲು ಇವರಲ್ಲಿ ಪ್ರವೇಶ ಮಾಡಿದ್ದೇನೆ ಏಕೆಂದರೆ ಇವರೂ ಸಹ ಮೊದಲು
ದೇಹಾಭಿಮಾನಿಯಾಗಿದ್ದರು ಆದ್ದರಿಂದ ಇವರಿಗೂ ಇದೇ ಮಾತನ್ನು ತಿಳಿಸುತ್ತೇನೆ - ತನ್ನನ್ನು ಆತ್ಮನೆಂದು
ತಿಳಿದು ನನ್ನನ್ನು ಯಥಾರ್ಥ ರೀತಿಯಿಂದ ನೆನಪು ಮಾಡಿ. ಆತ್ಮವೇ ಬೇರೆ, ಜೀವವೇ ಬೇರೆ ಎಂದು
ತಿಳಿದುಕೊಳ್ಳುವ ಮನುಷ್ಯರು ಅನೇಕರಿದ್ದಾರೆ ಆದರೆ ಯಥಾರ್ಥ ಜ್ಞಾನವಿಲ್ಲ. ಆತ್ಮವು ದೇಹದಿಂದ ಹೊರಟು
ಹೋಗುತ್ತದೆ ಅಂದಮೇಲೆ ಎರಡು ವಸ್ತುಗಳಾಯಿತಲ್ಲವೆ. ತಂದೆಯು ತಿಳಿಸುವುದೇನೆಂದರೆ ಮಕ್ಕಳೇ ನೀವು
ಆತ್ಮರಾಗಿದ್ದೀರಿ, ಆತ್ಮವೇ ಪುನರ್ಜನ್ಮ ತೆಗೆದುಕೊಳ್ಳುತ್ತದೆ. ಆತ್ಮವೇ ಶರೀರವನ್ನು ತೆಗೆದುಕೊಂಡು
ಪಾತ್ರ ಮಾಡುತ್ತದೆ. ತಂದೆಯು ಪದೇ-ಪದೇ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಿರಿ
ಎಂದು. ಇದರಲ್ಲಿಯೇ ಪರಿಶ್ರಮವಿದೆ. ಹೇಗೆ ವಿದ್ಯಾರ್ಥಿಗಳು ಓದುವುದಕ್ಕಾಗಿ ಏಕಾಂತದಲ್ಲಿ ಉದ್ಯಾನ
ವನದಲ್ಲಿ ಹೋಗಿ ಓದುತ್ತಾರೆ. ಪಾದ್ರಿಗಳೂ ಸಹ ಸುತ್ತಾಡಲು ಹೋಗುತ್ತಾರೆಂದರೆ ಆ ಸಮಯದಲ್ಲಿ ಬಹಳ
ಶಾಂತಿಯಲ್ಲಿರುತ್ತಾರೆ. ಅವರೇನೂ ಆತ್ಮಾಭಿಮಾನಿ ಆಗಿರುವುದಿಲ್ಲ. ಕೇವಲ ಕ್ರೈಸ್ಟ್ನ
ನೆನಪಿನಲ್ಲಿರುತ್ತಾರೆ. ಮನೆಯಲ್ಲಿದ್ದೇ ನೆನಪು ಮಾಡಬಹುದು ಆದರೆ ವಿಶೇಷವಾಗಿ ಕ್ರೈಸ್ಟ್ನ್ನು ನೆನಪು
ಮಾಡಲು ಏಕಾಂತದಲ್ಲಿ ಹೋಗುತ್ತಾರೆ ಮತ್ತ್ಯಾವ ಕಡೆ ನೋಡುವುದೇ ಇಲ್ಲ. ಕ್ರಿಶ್ಚಿಯನ್ನರಲ್ಲಿಯೂ
ಒಳ್ಳೊಳ್ಳೆಯ ವ್ಯಕ್ತಿಗಳು ನಾವು ಕ್ರೈಸ್ಟ್ನ್ನು ನೆನಪು ಮಾಡುತ್ತೇವೆ. ಅವರ ಬಳಿ ಹೊರಟು
ಹೋಗುತ್ತೇವೆ. ನಮ್ಮ ಕ್ರೈಸ್ಟ್ ಹೆವೆನ್ಲ್ಲಿ ಇದ್ದಾರೆ, ನಾವೂ ಅಲ್ಲಿಗೆ ಹೊರಟು ಹೋಗುತ್ತೇವೆಂದು
ಹೇಳುತ್ತಾರೆ. ನಮ್ಮ ಕ್ರೈಸ್ಟ್ ಹೆವೆನ್ಲೀ ಗಾಡ್ಫಾದರ್ನ ಬಳಿ ಹೋದರು. ನಾವೂ ನೆನಪು
ಮಾಡುತ್ತಾ-ಮಾಡುತ್ತಾ ಅವರ ಬಳಿ ಹೋಗುತ್ತೇವೆಂದು ತಿಳಿಯುತ್ತಾರೆ. ಎಲ್ಲಾ ಕ್ರಿಶ್ಚಿಯನ್ನರು
ಅವರೊಬ್ಬರ ಮಕ್ಕಳಾದರು. ಅವರಲ್ಲಿಯೂ ಸ್ವಲ್ಪ ಒಳ್ಳೆಯ ಜ್ಞಾನವಿದೆ ಆದರೆ ತಿಳಿದುಕೊಂಡಿರುವ ಜ್ಞಾನವು
ಸಲ್ಪ ತಪ್ಪಾಗಿದೆಯೆಂದು ನೀವು ಹೇಳುತ್ತೀರಿ ಏಕೆಂದರೆ ಕ್ರೈಸ್ಟ್ನ ಆತ್ಮವು ಮೇಲೆ ಹೋಗಿಯೇ ಇಲ್ಲ.
ಕ್ರೈಸ್ಟ್ ಎಂಬ ಹೆಸರಂತು ಶರೀರದ್ದಾಗಿದೆ. ಶರೀರವನ್ನು ಶಿಲುಬೆಗೆ ಏರಿಸಲಾಯಿತು. ಆತ್ಮವನ್ನು ಏನೂ
ಮಾಡಲು ಸಾಧ್ಯವಿಲ್ಲ ಅಂದಮೇಲೆ ಕ್ರೈಸ್ಟ್ನ ಆತ್ಮವು ಗಾಡ್ಫಾದರ್ನ ಬಳಿ ಹೋಯಿತು ಎಂದು ಹೇಳುವುದೂ ಸಹ
ತಪ್ಪಾಗುತ್ತದೆ. ಯಾರೇ ಇರಬಹುದು ಮರಳಿ ಹೋಗುವುದಕ್ಕೆ ಹೇಗೆ ಸಾಧ್ಯ? ಪ್ರತಿಯೊಬ್ಬರೂ ಸ್ಥಾಪನೆ
ಮಾಡಿದಮೇಲೆ ಪಾಲನೆಯನ್ನು ಅವಶ್ಯವಾಗಿ ಮಾಡಬೇಕಾಗುತ್ತದೆ. ಮನೆಯನ್ನು ಸ್ವಚ್ಛ ಮಾಡಲಾಗುತ್ತದೆ, ಇದೂ
ಪಾಲನೆಯಾಗಿದೆ ಅಲ್ಲವೆ.
ಈಗ ನೀವು ಬೇಹದ್ದಿನ
ತಂದೆಯನ್ನು ನೆನಪು ಮಾಡಿರಿ. ಈ ಜ್ಞಾನವನ್ನು ತಂದೆಯ ವಿನಃ ಯಾರೂ ಕೊಡಲು ಸಾಧ್ಯವಿಲ್ಲ. ತಮ್ಮದೇ
ಕಲ್ಯಾಣ ಮಾಡಬೇಕಾಗಿದೆ. ರೋಗಿಯಿಂದ ನಿರೋಗಿ ಆಗಬೇಕಾಗಿದೆ. ಇದು ರೋಗಿಗಳ ದೊಡ್ಡ ಆಸ್ಪತ್ರೆಯಾಗಿದೆ,
ಇಡೀ ವಿಶ್ವವೇ ರೋಗಿಗಳ ಆಸ್ಪತ್ರೆಯಾಗಿದೆ. ರೋಗಿಗಳು ಅವಶ್ಯವಾಗಿ ಬೇಗ ಸಾಯುತ್ತಾರೆ. ತಂದೆಯು ಬಂದು
ಇಡಿ ವಿಶ್ವವನ್ನೇ ನಿರೋಗಿಯನ್ನಾಗಿ ಮಾಡುತ್ತಾರೆ. ಇಲ್ಲಿಯೇ ನಿರೋಗಿಗಳಾಗುತ್ತೀರಿ ಎಂದಲ್ಲ ಹೊಸ
ಪ್ರಪಂಚದಲ್ಲಿಯೇ ನಿರೋಗಿಗಳಿರುತ್ತಾರೆ, ಹಳೆಯ ಪ್ರಪಂಚದಲ್ಲಿ ನಿರೋಗಿಗಳಿರಲು ಸಾಧ್ಯವಿಲ್ಲ. ಈ
ಲಕ್ಷ್ಮಿ-ನಾರಾಯಣರು ನಿರೋಗಿ, ಸದಾ ಆರೋಗ್ಯವಂತರಾಗಿದ್ದಾರೆ. ಅಲ್ಲಿ ಧೀರ್ಘಾಯಸ್ಸು ಇರುತ್ತದೆ,
ರೋಗಿಗಳು ವಿಕಾರಿಯಾಗಿರುತ್ತಾರೆ. ನಿರ್ವಿಕಾರಿಗಳು ರೋಗಿಯಾಗಿರುವುದಿಲ್ಲ, ಅವರು ಸಂಪೂರ್ಣ
ನಿರ್ವಿಕಾರಿಯಾಗಿರುತ್ತಾರೆ. ಸ್ವಯಂ ತಂದೆಯೇ ಹೇಳುತ್ತಾರೆ - ಈ ಸಮಯದಲ್ಲಿ ಇಡೀ ವಿಶ್ವ ಅದರಲ್ಲಿಯೂ
ವಿಶೇಷವಾಗಿ ಭಾರತವು ರೋಗಿಯಾಗಿದೆ. ನೀವು ಮಕ್ಕಳು ಮೊಟ್ಟ ಮೊದಲಿಗೆ ನಿರೋಗಿ ಪ್ರಪಂಚದಲ್ಲಿ
ಬರುತ್ತೀರಿ. ನೆನಪಿನ ಯಾತ್ರೆಯಿಂದಲೇ ನಿರೋಗಿಯಾಗುತ್ತೀರಿ, ನೆನಪಿನಿಂದ ತಮ್ಮ ಮಧುರ ಮನೆಗೆ
ಹೋಗುತ್ತೀರಿ. ಇದೂ ಸಹ ಒಂದು ಯಾತ್ರೆಯಾಗಿದೆ. ಆತ್ಮವು ಪರಮಾತ್ಮ ತಂದೆಯ ಬಳಿ ಹೋಗುವ ಯಾತ್ರೆಯಾಗಿದೆ.
ಇದು ಆತ್ಮಿಕ ಯಾತ್ರೆಯಾಗಿದೆ. ಈ ಶಬ್ಧವು ಯಾರಿಗೂ ಅರ್ಥವಾಗುವುದಿಲ್ಲ. ನೀವೂ ಸಹ ನಂಬರ್ವಾರ್
ತಿಳಿದುಕೊಂಡಿದ್ದೀರಿ ಆದರೆ ಮರೆತು ಹೋಗಿದ್ದೀರಿ. ಮೂಲ ಮಾತು ಇದಾಗಿದೆ, ಇದನ್ನು ತಿಳಿಸುವುದೂ ಸಹ
ಬಹಳ ಸಹಜ ಆದರೆ ಯಾರು ಸ್ವಯಂ ಆತ್ಮಿಕ ಯಾತ್ರೆಯಲ್ಲಿ ಇರುವರೋ ಅವರೇ ಅನ್ಯರಿಗೆ ತಿಳಿಸುವರು. ತಾನು
ಮಾಡದೆ ಅನ್ಯರಿಗೆ ತಿಳಿಸಿದರೆ ಬಾಣ ನಾಟುವುದಿಲ್ಲ. ಇದಕ್ಕೆ ಸತ್ಯತೆಯ ಹೊಳಪು(ಹರಿತ) ಇರಬೇಕಾಗಿದೆ.
ನಾವು ತಂದೆಯನ್ನು ಇಷ್ಟೂ ನೆನಪು ಮಾಡಬೇಕಾಗಿದೆ. ಹೇಗೆ ಸ್ತ್ರೀ ತನ್ನ ಪತಿಯನ್ನು ಎಷ್ಟೊಂದು ನೆನಪು
ಮಾಡುತ್ತಾಳೆ, ಇವರು ಪತಿಯರಿಗೂ ಪತಿ, ತಂದೆಯರಿಗೂ ತಂದೆ, ಗುರುಗಳಿಗೂ ಗುರು. ಗುರುಗಳೂ ಸಹ ಆ
ತಂದೆಯನ್ನೇ ನೆನಪು ಮಾಡುತ್ತಾರೆ. ಕ್ರೈಸ್ಟ್ ಸಹ ತಂದೆಯನ್ನೇ ನೆನಪು ಮಾಡುತ್ತಿದ್ದರು ಆದರೆ
ಅವರನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಯಾವಾಗ ಬರುವರೋ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ.
ಭಾರತವಾಸಿಗಳಿಗೇ ಗೊತ್ತಿಲ್ಲವೆಂದರೆ ಅನ್ಯರಿಗೆ ಪರಿಚಯ ಎಲ್ಲಿಂದ ಸಿಗುತ್ತದೆ. ವಿದೇಶದಿಂದಲೂ
ಇಲ್ಲಿಗೆ ಯೋಗವನ್ನು ಕಲಿಯುವುದಕ್ಕಾಗಿ ಬರುತ್ತಾರೆ. ಪ್ರಾಚೀನ ಯೋಗವನ್ನು ಭಗವಂತನು ಕಲಿಸಿದರೆಂದು
ತಿಳಿಯುತ್ತಾರೆ. ಇದು ಭಾವನೆಯಾಗಿದೆ. ತಂದೆಯು ತಿಳಿಸುತ್ತಾರೆ - ಸತ್ಯ-ಸತ್ಯವಾದ ಯೋಗವಂತೂ ನಾನೇ
ಕಲ್ಪ-ಕಲ್ಪ ಒಂದು ಬಾರಿ ಬಂದು ಕಲಿಸುತ್ತೇನೆ. ಮುಖ್ಯ ಮಾತಾಗಿದೆ - ತಮ್ಮನ್ನು ಆತ್ಮನೆಂದು ತಿಳಿದು
ತಂದೆಯನ್ನು ನೆನಪು ಮಾಡಿ ಇದಕ್ಕೇ ಆತ್ಮಿಕ ಯೋಗ ಎಂದು ಹೇಳಲಾಗುತ್ತದೆ. ಬಾಕಿ ಎಲ್ಲರದು ಶಾರೀರಿಕ
ಯೋಗವಾಗಿದೆ. ಬ್ರಹ್ಮದೊಂದಿಗೆ ಯೋಗವನ್ನು ಇಡುತ್ತಾರೆ. ಅದು ತಂದೆಯಂತೂ ಅಲ್ಲ, ಅದಂತೂ ಮಹಾ
ತತ್ವವಾಗಿದೆ, ಇರುವ ಸ್ಥಾನವಾಗಿದೆ ಅಂದಮೇಲೆ ಸತ್ಯವಾಗಿರುವವರು ಒಬ್ಬ ತಂದೆಯೇ ಆಗಿದ್ದಾರೆ. ಒಬ್ಬ
ತಂದೆಯನ್ನೇ ಸತ್ಯ ಎಂದು ಹೇಳಲಾಗುತ್ತದೆ. ಭಾರತವಾಸಿಗಳಿಗೆ ತಂದೆಯೇ ಸತ್ಯ ಹೇಗೆ ಎನ್ನುವುದೂ
ಗೊತ್ತಿಲ್ಲ. ಅವರೇ ಸತ್ಯ ಖಂಡದ ಸ್ಥಾಪನೆ ಮಾಡುತ್ತಾರೆ. ಸತ್ಯ ಖಂಡ ಮತ್ತು ಅಸತ್ಯ ಖಂಡ. ನೀವು
ಯಾವಾಗ ಸತ್ಯ ಖಂಡದಲ್ಲಿರುತ್ತೀರಿ ಆಗ ಅಲ್ಲಿ ರಾವಣ ರಾಜ್ಯವೇ ಇರುವುದಿಲ್ಲ. ಅರ್ಧ ಕಲ್ಪದ ನಂತರ
ರಾವಣ ರಾಜ್ಯ ಅಸತ್ಯ ಖಂಡವು ಪ್ರಾರಂಭವಾಗುತ್ತದೆ. ಸತ್ಯ ಖಂಡ ಪೂರ್ಣ ಸತ್ಯಯುಗಕ್ಕೆ ಹೇಳಲಾಗುತ್ತದೆ
ನಂತರ ಅಸತ್ಯ ಖಂಡ ಪೂರ್ಣ ಕಲಿಯುಗದ ಅಂತ್ಯ. ಈಗ ನೀವು ಸಂಗಮದಲ್ಲಿ ಕುಳಿತಿದ್ದೀರಿ. ಈ ಕಡೆಯೂ ಇಲ್ಲ,
ಆ ಕಡೆಯೂ ಇಲ್ಲ. ನೀವು ಯಾತ್ರೆ ಮಾಡುತ್ತೀರಿ. ಆತ್ಮವು ಯಾತ್ರೆ ಮಾಡುತ್ತಿದೆ, ಶರೀರವಲ್ಲ. ತಂದೆಯು
ಬಂದು ಯಾತ್ರೆ ಮಾಡುವುದನ್ನು ಕಲಿಸುತ್ತಿದ್ದಾರೆ, ಇಲ್ಲಿಂದಲೇ ಅಲ್ಲಿಗೆ ಹೋಗಬೇಕಾಗಿದೆ - ಇದನ್ನು
ನಿಮಗೆ ಕಲಿಸುತ್ತಾರೆ. ಆ ಮನುಷ್ಯರು ನಂತರ ನಕ್ಷತ್ರ, ಚಂದ್ರ ಮುಂತಾದ ಕಡೆ ಹೋಗುವ ಯಾತ್ರೆ
ಮಾಡುತ್ತಾರೆ. ಈಗ ನೀವು ತಿಳಿದಿದ್ದೀರಿ - ಅದರಲ್ಲಿ ಯಾವುದೇ ಲಾಭವಿಲ್ಲ. ಈ ವಸ್ತುಗಳಿಂದಲೇ ಪೂರ್ಣ
ವಿನಾಶವಾಗುವುದು. ಬಾಕಿ ಏನೆಲ್ಲಾ ಪರಿಶ್ರಮ ಪಡುತ್ತಾರೆ ಎಲ್ಲವೂ ವ್ಯರ್ಥವಾಗಿದೆ. ನೀವು
ತಿಳಿದಿದ್ದೀರಿ - ಇವೆಲ್ಲಾ ವಸ್ತುಗಳು ಯಾವುದು ವಿಜ್ಞಾನದಿಂದ ಮಾಡುತ್ತಾರೆ ಅದು ಭವಿಷ್ಯದಲ್ಲಿ
ನಿಮ್ಮದೇ ಕೆಲಸಕ್ಕೆ ಬರುತ್ತದೆ. ಈ ಡ್ರಾಮಾ ಮಾಡಲ್ಪಟ್ಟಿದೆ. ಬೇಹದ್ದಿನ ತಂದೆಯು ಬಂದು
ಓದಿಸುತ್ತಾರೆಂದರೆ ಎಷ್ಟು ಗೌರವವನ್ನಿಡಬೇಕು! ಹಾಗೆಯೇ ಶಿಕ್ಷಕನಿಗೂ ಬಹಳ ಗೌರವವನ್ನಿಡುತ್ತಾರೆ.
ಶಿಕ್ಷಕರು ಆದೇಶ ಕೊಡುತ್ತಾರೆ - ಚೆನ್ನಾಗಿ ಓದಿ ಉತ್ತೀರ್ಣರಾಗಿ ಎಂದು. ಒಂದುವೇಳೆ ಆದೇಶವನ್ನು
ಪಾಲಿಸುವುದಿಲ್ಲವೆಂದರೆ ಅನುತ್ತೀರ್ಣ ಆಗಿ ಬಿಡುತ್ತೀರಿ. ತಂದೆಯೂ ತಿಳಿಸುತ್ತಾರೆ - ವಿಶ್ವದ
ಮಾಲೀಕರಾಗಲು ನಿಮಗೆ ಓದಿಸುತ್ತೇನೆ. ಈ ಲಕ್ಷ್ಮೀ-ನಾರಾಯಣರು ಮಾಲೀಕರಾಗಿದ್ದಾರೆ. ಭಲೆ ಪ್ರಜೆಗಳೂ
ಮಾಲೀಕರಾಗಿದ್ದಾರೆ, ಆದರೆ ಪದವಿಯಂತೂ ಬಹಳ ಇವೆಯಲ್ಲವೆ. ಭಾರತವಾಸಿಗಳೂ ಸಹ ನಾವು ಮಾಲೀಕರೆಂದು
ಎಲ್ಲರೂ ಹೇಳುತ್ತಾರಲ್ಲವೆ. ಬಡವರೂ ಸಹ ಭಾರತದ ಮಾಲೀಕರೆಂದು ತಮ್ಮನ್ನು ತಿಳಿಯುತ್ತಾರೆ. ಆದರೆ ರಾಜ
ಮತ್ತು ಅವರಲ್ಲಿ ಎಷ್ಟು ವ್ಯತ್ಯಾಸವಿದೆ! ಜ್ಞಾನದಿಂದ ಪದವಿಯ ವ್ಯತ್ಯಾಸವಾಗಿ ಬಿಡುತ್ತದೆ.
ಜ್ಞಾನದಲ್ಲಿಯೂ ಬುದ್ಧಿವಂತಿಕೆ ಇರಬೇಕು. ಪವಿತ್ರತೆಯೂ ಸಹ ಅವಶ್ಯವಾಗಿದೆ ಅಂದಮೇಲೆ
ಆರೋಗ್ಯ-ಸಂಪತ್ತೂ ಬೇಕು. ಸ್ವರ್ಗದಲ್ಲಿ ಎಲ್ಲರೂ ಇರುತ್ತಾರಲ್ಲವೆ. ತಂದೆಯು ಗುರಿ-ಉದ್ದೇಶವನ್ನು
ತಿಳಿಸುತ್ತಾರೆ. ಇಡೀ ಪ್ರಪಂಚದಲ್ಲಿ ಮತ್ತ್ಯಾರ ಬುದ್ಧಿಯಲ್ಲಿಯೂ ಈ ಗುರಿ-ಉದ್ದೇಶವಿರುವುದಿಲ್ಲ.
ನೀವು ತಕ್ಷಣ ನಾವು ಈ ರೀತಿ ಆಗುತ್ತೇವೆಂದು ಹೇಳುತ್ತೀರಿ. ಇಡೀ ವಿಶ್ವದಲ್ಲಿ ನಮ್ಮ
ರಾಜಧಾನಿಯಾಗುತ್ತದೆ. ಇದಂತೂ ಈಗ ಪಂಚಾಯಿತಿ ರಾಜ್ಯವಾಗಿದೆ. ಮೊದಲು ಡಬಲ್ ಕಿರೀಟಧಾರಿಗಳಿದ್ದರು
ನಂತರ ಒಂದು ಕಿರೀಟ, ಈಗ ಕಿರೀಟವೇ ಇಲ್ಲ. ತಂದೆಯು ಮುರುಳಿಯಲ್ಲಿ ಹೇಳಿದ್ದರು - ಇದೂ ಸಹ
ಚಿತ್ರದಲ್ಲಿರಲಿ - ಡಬಲ್ ಕಿರೀಟಧಾರಿ ರಾಜರುಗಳ ಮುಂದೆ ಸಿಂಗಲ್ ಕಿರೀಟಧಾರಿಗಳು ತಲೆ ಬಾಗುತ್ತಾರೆ.
ಈಗ ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ರಾಜರಿಗೂ ರಾಜ ಡಬಲ್ ಕಿರೀಟಧಾರಿಗಳನ್ನಾಗಿ
ಮಾಡುತ್ತೇನೆ. ಅದು ಅಲ್ಪಕಾಲಕ್ಕಾಗಿ, ಇದು 21 ಜನ್ಮಗಳ ಮಾತು. ಪಾವನರಾಗುವುದು ಮೊದಲ ಮುಖ್ಯ
ಮಾತಾಗಿದೆ. ಬಂದು ಪತಿತರನ್ನು ಪಾವನರನ್ನಾಗಿ ಮಾಡಿ ಎಂದೂ ಸಹ ಕರೆಯುತ್ತಾರೆ. ರಾಜರನ್ನಾಗಿ ಮಾಡಿ
ಎಂದು ಕರೆಯುವುದಿಲ್ಲ. ಈಗ ನೀವು ಮಕ್ಕಳದು ಬೇಹದ್ದಿನ ಸನ್ಯಾಸವಾಗಿದೆ. ಈ ಪ್ರಪಂಚದಿಂದಲೇ ನಮ್ಮ
ಮನೆಗೆ ಹೋಗುತ್ತೇವೆ ನಂತರ ಸ್ವರ್ಗದಲ್ಲಿ ಬರುತ್ತೇವೆ. ಯಾವಾಗ ನಾವು ಮನೆಗೆ ಹೋಗುತ್ತೇವೆ ನಂತರ
ರಾಜಧಾನಿಯಲ್ಲಿ ಬರುತ್ತೇವೆ ಎಂದು ತಿಳಿಯುತ್ತೀರಿ ಆಗ ಆಂತರ್ಯದಲ್ಲಿ ಖುಷಿಯಿರಬೇಕು ಆದ್ದರಿಂದ
ಮತ್ತೆ ತಬ್ಬಿಬ್ಬಾಗುವುದು, ದುಃಖ ಮುಂತಾದವೆಲ್ಲವನ್ನು ಏಕೆ ಇರಬೇಕು! ನಾವು ಆತ್ಮರು ಮನೆ
ಹೋಗುತ್ತೇವೆ ನಂತರ ಹೊಸ ಪ್ರಪಂಚದಲ್ಲಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೇವೆ. ಮಕ್ಕಳಿಗೆ
ಸ್ಥಿರವಾಗಿರುವ ಖುಷಿ ಏಕೆ ಇರುವುದಿಲ್ಲ? ಮಾಯೆಯ ವಿರೋಧ ಬಹಳ ಇದೆ ಆದ್ದರಿಂದ ಖುಷಿ ಕಡಿಮೆಯಾಗಿ
ಬಿಡುತ್ತದೆ. ಪತಿತ-ಪಾವನ ಸ್ವಯಂ ಹೇಳುತ್ತಾರೆ - ನನ್ನನ್ನು ನೆನಪು ಮಾಡಿ ಆಗ ನಿಮ್ಮ
ಜನ್ಮ-ಜನ್ಮಾಂತರದ ಪಾಪ ಭಸ್ಮವಾಗಿ ಬಿಡುತ್ತದೆ. ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ನಾವು
ನಮ್ಮ ರಾಜಾಸ್ಥಾನದಲ್ಲಿ ಹೊರಟು ಹೋಗುತ್ತೇವೆಂದು ತಿಳಿಯುತ್ತೀರಿ. ಇಲ್ಲಿ ಭಿನ್ನ-ಭಿನ್ನ ಪ್ರಕಾರದ
ರಾಜರುಗಳಿದ್ದಾರೆ, ಈಗ ಮತ್ತೆ ಆತ್ಮಿಕ ರಾಜಾಸ್ಥಾನವಾಗಬೇಕಾಗಿದೆ. ಸ್ವರ್ಗದ ಮಾಲೀಕರಾಗಿ
ಬಿಡುತ್ತೀರಿ. ಕ್ರಿಶ್ಚಿಯನ್ನರು ಹೆವೆನ್ನ ಅರ್ಥವನ್ನು ತಿಳಿದುಕೊಂಡಿಲ್ಲ. ಅವರು ಮುಕ್ತಿಧಾಮವನ್ನು
ಹೆವೆನ್ ಎಂದು ಹೇಳಿ ಬಿಡುತ್ತಾರೆ. ಈ ರೀತಿ ಅಲ್ಲ - ಹೆವೆನ್ಲೀ ಗಾಡ್ಫಾದರ್ ಹೆವೆನ್ನಲ್ಲಿ
ಇರುತ್ತಾರೆ ಎಂದು. ಅವರಂತೂ ಇರುವುದೇ ಶಾಂತಿಧಾಮದಲ್ಲಿ. ಈಗ ನೀವು ಪ್ಯಾರಡೈಸ್ನಲ್ಲಿ ಹೋಗಲು
ಪುರುಷಾರ್ಥ ಮಾಡುತ್ತೀರಿ. ಈ ವ್ಯತ್ಯಾಸವನ್ನು ತಿಳಿಸಬೇಕು - ಗಾಡ್ಫಾದರ್ ಮುಕ್ತಿಧಾಮದಲ್ಲಿ
ಇರುವವರಾಗಿದ್ದಾರೆ. ಹೆವೆನ್ ಹೊಸ ಪ್ರಪಂಚಕ್ಕೆ ಹೇಳಲಾಗುತ್ತದೆ, ಅಲ್ಲಂತೂ ಕ್ರಿಶ್ಚಿಯನ್ನರು
ಇರುವುದಿಲ್ಲ. ತಂದೆಯೇ ಬಂದು ಪ್ಯಾರಡೈಸ್ ಸ್ಥಾಪನೆ ಮಾಡುತ್ತಾರೆ. ನೀವು ಯಾವುದಕ್ಕೆ
ಶಾಂತಿಧಾಮವೆಂದು ಹೇಳುತ್ತೀರಿ ಅದನ್ನು ಅವರು ಹೆವೆನ್ ಎಂದು ತಿಳಿಯುತ್ತಾರೆ. ಇವೆಲ್ಲಾ ಮಾತುಗಳು
ತಿಳಿದುಕೊಳ್ಳುವ ಮಾತುಗಳಾಗಿವೆ.
ತಂದೆಯು ತಿಳಿಸುತ್ತಾರೆ
- ಜ್ಞಾನವಂತು ಬಹಳ ಸಹಜವಾಗಿದೆ. ಇದು ಪವಿತ್ರರಾಗುವ ಜ್ಞಾನವಾಗಿದೆ, ಮುಕ್ತಿ-ಜೀವನ್ಮುಕ್ತಿಯಲ್ಲಿ
ಹೋಗುವ ಜ್ಞಾನವಾಗಿದೆ, ಇದನ್ನು ತಂದೆಯೇ ಕೊಡಬಲ್ಲರು. ಯಾವಾಗ ಯಾರನ್ನೇ ನೇಣಿಗೆ ಏರಿಸಲಾಗುತ್ತದೆ
ಆಗ ಆಂತರ್ಯದಲ್ಲಿ ಇದೇ ಇರುತ್ತದೆ - ನಾವು ಭಗವಂತನ ಬಳಿ ಹೋಗುತ್ತೇವೆ. ನೇಣಗೆ ಏರಿಸುವವರೂ ಸಹ
ಹೇಳುತ್ತಾರೆ - ಗಾಡ್ನ ನೆನಪು ಮಾಡಿ. ಪರಮಾತ್ಮನನ್ನು ಇಬ್ಬರೂ ತಿಳಿದುಕೊಂಡಿಲ್ಲ. ಅವರಿಗಂತು ಆ
ಸಮಯದಲ್ಲಿ ಮಿತ್ರ ಸಂಬಂಧಿ ಮುಂತಾದವರು ನೆನಪಿಗೆ ಬರುತ್ತಾರೆ. ಗಾಯನವೂ ಇದೆ - ಅಂತ್ಯಕಾಲದಲ್ಲಿ
ಯಾರು ಸ್ತ್ರೀಯನ್ನು ಸ್ಮರಸಿದರು..... ಏನಾದರೊಂದು ನೆನಪು ಅವಶ್ಯವಾಗಿ ಇರುತ್ತದೆ.
ಸತ್ಯಯುಗದಲ್ಲಿಯೇ ಮೋಹಜೀತರಿರುತ್ತಾರೆ. ಅಲ್ಲಿ ಒಂದು ವಸ್ತ್ರವನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳುತ್ತಾರೆಂದು ತಿಳಿಯುತ್ತಾರೆ. ನೆನಪು ಮಾಡುವ ಅವಶ್ಯಕತೆಯಿಲ್ಲ ಆದ್ದರಿಂದ ದುಃಖದಲ್ಲಿ
ಎಲ್ಲರೂ ಸ್ಮರಣೆ ಮಾಡುತ್ತಾರೆ.... ಎಂದು ಹೇಳುತ್ತಾರೆ. ಆದರೆ ದುಃಖವಿದೆ. ಆದ್ದರಿಂದ ಭಗವಂತನಿಂದ
ಏನಾದರೂ ಸಿಗಲಿ ಎಂದು ನೆನಪು ಮಾಡುತ್ತಾರೆ. ಅಲ್ಲಂತೂ ಎಲ್ಲವೂ ಪ್ರಾಪ್ತಿಯಾಗಿಯೇ ಇರುತ್ತದೆ. ನೀವು
ಹೇಳಬಹುದು - ನಮ್ಮ ಉದ್ದೇಶ ಮನುಷ್ಯರನ್ನು ಆಸ್ತಿಕರನ್ನಾಗಿ ಮಾಡುವುದು, ಮಾಲೀಕರನ್ನಾಗಿ
ಮಾಡುವುದಾಗಿದೆ. ಈಗ ಎಲ್ಲರೂ ನಿರ್ಧನಿಕರಾಗಿದ್ದಾರೆ. ನಾವು ಧನಿಕರಾಗುತ್ತೇವೆ. ಸುಖ, ಶಾಂತಿ,
ಸಂಪತ್ತಿನ ಆಸ್ತಿ ಕೊಡುವಂತಹವರು ತಂದೆಯೇ ಆಗಿದ್ದಾರೆ. ಈ ಲಕ್ಷ್ಮೀ-ನಾರಾಯಣರದು ಎಷ್ಟು ದೊಡ್ಡ
ದೀರ್ಘಾಯಸ್ಸಿತ್ತು. ಇದೂ ಸಹ ತಿಳಿಯುತ್ತಾರೆ- ಭಾರತವಾಸಿಗಳ ಮೊಟ್ಟ ಮೊದಲ ಆಯಸ್ಸು ಬಹಳ
ಧೀರ್ಘವಾಗಿರುತ್ತಿತ್ತು, ಈಗ ಚಿಕ್ಕದಾಗಿದೆ. ಏಕೆ ಚಿಕ್ಕದಾಗಿದೆ ಎಂಬುದನ್ನು ಯಾರೂ
ತಿಳಿದುಕೊಂಡಿಲ್ಲ. ತಿಳಿಯುವುದು ಮತ್ತು ಅನ್ಯರಿಗೆ ತಿಳಿಸುವುದಂತೂ ನಿಮಗೆ ಬಹಳ ಸಹಜವಾಗಿಬಿಟ್ಟಿದೆ.
ಅದೂ ಸಹ ನಂಬರ್ವಾರ್. ತಿಳಿಸುವುದಂತೂ ಪ್ರತಿಯೊಬ್ಬರದೂ ತನ್ನ - ತನ್ನದೇ ಆಗಿರುತ್ತದೆ, ಯಾರು ಹೇಗೆ
ಧಾರಣೆ ಮಾಡುತ್ತಾರೆ ಹಾಗೆಯೇ ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಹೇಗೆ ತಂದೆಯು
ಸದಾ ಆತ್ಮಾಭಿಮಾನಿಯಾಗಿರುತ್ತಾರೆ, ಹಾಗೆಯೇ ಆತ್ಮಾಭಿಮಾನಿಯಾಗಿರುವ ಸಂಪೂರ್ಣ ಪುರುಷಾರ್ಥ
ಮಾಡಬೇಕಾಗಿದೆ. ಒಬ್ಬ ತಂದೆಯನ್ನು ಹೃದಯದಿಂದ ಪ್ರೀತಿ ಮಾಡುತ್ತಾ-ಮಾಡುತ್ತಾ ತಂದೆಯ ಜೊತೆ ಮನೆಗೆ
ನಡೆಯಬೇಕು.
2. ಬೇಹದ್ದಿನ ತಂದೆಗೆ
ಸಂಪೂರ್ಣ ಗೌರವವನ್ನಿಡಬೇಕಾಗಿದೆ ಅರ್ಥಾತ್ ತಂದೆಯ ಆದೇಶದಂತೆ ನಡೆಯಬೇಕಾಗಿದೆ. ತಂದೆಯ ಮೊದಲ
ಆದೇಶವಾಗಿದೆ - ಮಕ್ಕಳೇ, ಚೆನ್ನಾಗಿ ಓದಿ ಉತ್ತೀರ್ಣರಾಗಿ ಬಿಡಿ. ಈ ಆದೇಶವನ್ನು ಪಾಲನೆ
ಮಾಡಬೇಕಾಗಿದೆ.
ವರದಾನ:
ಶಕ್ತಿಶಾಲಿ
ಸೇವೆಯ ಮೂಲಕ ನಿರ್ಬಲರಲ್ಲಿ ಬಲವನ್ನು ತುಂಬುವ ಸತ್ಯ ಸೇವಾಧಾರಿ ಭವ.
ಸತ್ಯ ಸೇವಾಧಾರಿಯ
ವಾಸ್ತವಿಕ ವಿಶೇಷತೆಯಾಗಿದೆ - ನಿರ್ಬಲರಲ್ಲಿ ಬಲವನ್ನು ತುಂಬಲು ನಿಮಿತ್ತರಾಗುವುದು. ಸೇವೆಯಂತೂ
ಎಲ್ಲರೂ ಮಾಡುತ್ತಾರೆ ಆದರೆ ಸಫಲತೆಯಲ್ಲಿ ಏನು ಅಂತರ ಕಂಡುಬರುವುದು ಅದಕ್ಕೆ ಕಾರಣವಾಗಿದೆ ಸೇವೆಯ
ಸಾಧನದಲ್ಲಿ ಶಕ್ತಿಯ ಕೊರತೆ. ಹೇಗೆ ಖಡ್ಗದಲ್ಲಿ ಒಂದುವೇಳೆ ಹರಿತವಿಲ್ಲದೇ ಹೋದರೆ ಖಡ್ಗದ ಕೆಲಸ
ಮಾಡುವುದಿಲ್ಲ, ಅದೇ ರೀತಿ ಸೇವೆಯ ಸಾಧನಗಳಲ್ಲಿ ಒಂದುವೇಳೆ ನೆನಪಿನ ಶಕ್ತಿ ಎಂಬ ಹರಿತ ಇಲ್ಲದೇ
ಹೋದರೆ ಸಫಲತೆ ಇರುವುದಿಲ್ಲ ಅದಕ್ಕಾಗಿ ಶಕ್ತಿಶಾಲಿ ಸೇವಾಧಾರಿಗಳಾಗಿ, ನಿರ್ಬಲರಲ್ಲಿ ಬಲ ತುಂಬಿ
ಗುಣ ಮಟ್ಟದ ಆತ್ಮಗಳನ್ನು ತೆಗೆಯಿರಿ ಆಗ ಹೇಳಲಾಗುವುದು ಸತ್ಯ ಸೇವಾಧಾರಿ.
ಸ್ಲೋಗನ್:
ಪ್ರತಿಯೊಂದು
ಪರಿಸ್ಥಿತಿಯನ್ನು ಹಾರುವ ಕಲೆಯ ಸಾಧನವೆಂದು ತಿಳಿದು ಸದಾ ಹಾರುತ್ತಿರಿ.
ಅವ್ಯಕ್ತ ಸೂಚನೆ:-
ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.
ಅಶರೀರಿಯಾಗುವುದು
ಸಹಜವಾಗಿದೆ ಆದರೆ ಯಾವ ಸಮಯ ಯಾವುದೇ ಮಾತು ಮುಂದೆ ಬರಲಿ, ಯಾವುದೇ ಸರ್ವೀಸ್ನ ಜಂಜಾಟ ಮುಂದೆ ಬರಲಿ,
ಯಾವುದೇ ಏರುಪೇರಿನಲ್ಲಿ ತರುವಂತಹ ಪರಿಸ್ಥಿತಿಗಳಿರಲಿ, ಇಂತಹ ಸಮಯದಲ್ಲಿ ಯೋಚಿಸಿ ಮತ್ತು
ಅಶರೀರಿಯಾಗಿ ಬಿಡಿ, ಇದಕ್ಕಾಗಿ ಬಹಳ ಸಮಯದ ಅಭ್ಯಾಸ ಬೇಕಾಗಿದೆ. ಯೋಚಿಸುವುದು ಮತ್ತು ಮಾಡುವುದು
ಜೊತೆ-ಜೊತೆಯಲ್ಲಿ ನಡೆಯಲ್ಲಿ ಆಗ ಅಂತಿಮ ಪೇಪರ್ನಲ್ಲಿ ಪಾಸ್ ಆಗಬಹುದು.