06.02.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈಗ ಇದು
ಏರುವ ಕಲೆಯ ಸಮಯವಾಗಿದೆ, ಭಾರತವು ಬಡವನಿಂದ ಸಾಹುಕಾರನಾಗುತ್ತದೆ, ನೀವು ಸತ್ಯಯುಗೀ ರಾಜಧಾನಿಯ
ಆಸ್ತಿಯನ್ನು ತೆಗೆದುಕೊಳ್ಳಿ.”
ಪ್ರಶ್ನೆ:
ತಂದೆಯ ಯಾವ
ಬಿರುದನ್ನು ಶ್ರೀಕೃಷ್ಣನಿಗೆ ಕೊಡಲು ಸಾಧ್ಯವಿಲ್ಲ?
ಉತ್ತರ:
ತಂದೆಯು ಬಡವರ
ಬಂಧುವಾಗಿದ್ದಾರೆ. ಶ್ರೀಕೃಷ್ಣನಿಗೆ ಈ ರೀತಿ ಹೇಳುವುದಿಲ್ಲ. ಶ್ರೀಕೃಷ್ಣನಂತೂ ಬಹಳ
ಧನವಂತನಾಗಿದ್ದೇನೆ. ಅವನ ರಾಜ್ಯದಲ್ಲಿ ಎಲ್ಲರೂ ಸಾಹುಕಾರರಿರುತ್ತಾರೆ. ತಂದೆಯು ಯಾವಾಗ ಈ ಭೂಮಿಗೆ
ಬರುವರೋ ಆಗ ಭಾರತವು ಎಲ್ಲದಕ್ಕಿಂತ ಬಡ ದೇಶವಾಗಿದೆ. ಭಾರತವನ್ನು ಮತ್ತೆ ಸಾಹುಕಾರವನ್ನಾಗಿ
ಮಾಡುತ್ತಾರೆ. ನೀವು ಹೇಳುತ್ತೀರಿ, ನಮ್ಮ ಭಾರತವು ಸ್ವರ್ಗವಾಗಿತ್ತು, ಈಗ ಇಲ್ಲ. ಮತ್ತೆ ಆಗುವುದು.
ಬಡವರ ಬಂಧು ತಂದೆಯೇ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ.
ಗೀತೆ:
ಕೊನೆಗೂ ಆ ದಿನ
ಇಂದು ಬಂದಿತು..............
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಹೇಗೆ ಆತ್ಮವು ಗುಪ್ತವಾಗಿದೆ ಮತ್ತು
ಶರೀರವು ಪ್ರತ್ಯಕ್ಷವಾಗಿದೆ. ಆತ್ಮವನ್ನು ಈ ಸ್ಥೂಲ ಕಣ್ಣುಗಳಿಂದ ನೋಡಲು ಆಗುವುದಿಲ್ಲ,
ನಿರಾಕಾರಿಯಾಗಿದೆ. ಅದು ಖಂಡಿತವಾಗಿಯೂ ಇದೆ ಆದರೆ ಈ ಶರೀರದಿಂದ ಮುಚ್ಚಲ್ಪಟ್ಟಿದೆ ಆದ್ದರಿಂದ
ಆತ್ಮವು ಗುಪ್ತವೆಂದು ಹೇಳಲಾಗುತ್ತದೆ. ಆತ್ಮವೇ ಸ್ವಯಂ ಹೇಳುತ್ತದೆ - ನಾನು ನಿರಾಕಾರನಾಗಿದ್ದೇನೆ,
ಇಲ್ಲಿ ಸಾಕಾರದಲ್ಲಿ ಬಂದು ಗುಪ್ತವಾಗಿದ್ದೇನೆ. ಆತ್ಮಗಳದು ನಿರಾಕಾರಿ ಪ್ರಪಂಚವಾಗಿದೆ. ಅಲ್ಲಂತೂ
ಗುಪ್ತ ಮಾತಿಲ್ಲ. ಪರಮಪಿತ ಪರಮಾತ್ಮನೂ ಸಹ ಅಲ್ಲಿರುತ್ತಾರೆ, ಅವರಿಗೆ ಸುಪ್ರೀಂ ಎಂದು
ಹೇಳಲಾಗುತ್ತದೆ. ಶ್ರೇಷ್ಠಾತಿ ಶ್ರೇಷ್ಠ ಆತ್ಮ ಅತಿ ದೂರವಿರುವ ಪರಮ ಆತ್ಮನಾಗಿದ್ದಾರೆ. ತಂದೆಯು
ತಿಳಿಸುತ್ತಾರೆ - ಹೇಗೆ ನೀವು ಗುಪ್ತವಾಗಿದ್ದೀರೋ ಹಾಗೆಯೇ ನಾನೂ ಸಹ ಗುಪ್ತವಾಗಿ ಬರಬೇಕಾಗುತ್ತದೆ.
ನಾನು ಗರ್ಭ ಜೈಲಿನಲ್ಲಿ ಬರುವುದಿಲ್ಲ. ನನ್ನ ಹೆಸರೊಂದೇ ಶಿವ ಎಂಬುದು ನಡೆದು ಬರುತ್ತದೆ. ನಾನು ಈ
ತನುವಿನಲ್ಲಿ ಬರುತ್ತೇನೆ. ಆಗಲೂ ನನ್ನ ಹೆಸರು ಬದಲಾಗುವುದಿಲ್ಲ. ಇವರ (ಬ್ರಹ್ಮಾ) ಆತ್ಮದ ಯಾವ
ಶರೀರವಿದೆಯೋ ಇದರ ಹೆಸರು ಬದಲಾಗುತ್ತದೆ. ನನಗೆ ಶಿವನೆಂದೇ ಹೇಳುತ್ತಾರೆ, ಎಲ್ಲಾ ಆತ್ಮರ
ತಂದೆಯಾಗಿದ್ದೇನೆ. ನೀವಾತ್ಮರೂ ಸಹ ಈ ಶರೀರದಲ್ಲಿ ಗುಪ್ತವಾಗಿದ್ದೀರಿ. ಈ ಶರೀರದ ಮೂಲಕ ಕರ್ಮ
ಮಾಡುತ್ತೀರಿ. ನಾನೂ ಗುಪ್ತವಾಗಿದ್ದೇನೆ ಅಂದಾಗ ಮಕ್ಕಳಿಗೆ ಈ ಜ್ಞಾನವು ಈಗ ಸಿಗುತ್ತಿದೆ - ಆತ್ಮವು
ಈ ಶರೀರದಿಂದ ಮುಚ್ಚಲ್ಪಟ್ಟಿದೆ. ಆತ್ಮವು ನಿರಾಕಾರಿಯಾಗಿದೆ, ಶರೀರವು ಸಾಕಾರಿಯಾಗಿದೆ. ನಾನೂ ಸಹ
ಅಶರೀರಿಯಾಗಿದ್ದೇನೆ. ನಿರಾಕಾರಿ ತಂದೆಯು ಈ ಶರೀರದ ಮೂಲಕ ತಿಳಿಸುತ್ತಾರೆ - ನೀವೂ ಸಹ
ನಿರಾಕಾರಿಯಾಗಿದ್ದೀರಿ, ಶರೀರದ ಮೂಲಕ ಕೇಳಿಸಿಕೊಳ್ಳುತ್ತೀರಿ. ನಿಮಗೆ ತಿಳಿದಿದೆ - ತಂದೆಯು
ಭಾರತವನ್ನು ಪುನಃ ಬಡ ದೇಶದಿಂದ ಸಾಹುಕಾರನನ್ನಾಗಿ ಮಾಡಲು ಬಂದಿದ್ದಾರೆ. ನೀವು ನಮ್ಮ ಭಾರತವೆಂದು
ಹೇಳುತ್ತೀರಿ. ಪ್ರತಿಯೊಬ್ಬರೂ ತಮ್ಮ ರಾಜ್ಯವನ್ನು ನಮ್ಮ ಗುಜರಾತ್, ನಮ್ಮ ರಾಜಾಸ್ತಾನವೆಂದು
ಹೇಳುತ್ತಾರೆ. ನಮ್ಮದು, ನಮ್ಮದು ಎಂದು ಹೇಳುವುದರಿಂದ ಅದರಲ್ಲಿ ಮೋಹವಿರುತ್ತದೆ. ನಮ್ಮದು ಬಡ
ಭಾರತವಾಗಿದೆ. ಇದನ್ನು ಎಲ್ಲರೂ ಒಪ್ಪುತ್ತಾರೆ ಆದರೆ ನಮ್ಮ ಭಾರತವು ಯಾವಾಗ ಸಾಹುಕಾರನಾಗಿತ್ತು,
ಹೇಗಿತ್ತು ಎಂಬುದನ್ನು ಅವರು ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ಬಹಳ ನಶೆಯಿದೆ! ನಮ್ಮ ಭಾರತವಂತೂ
ಬಹಳ ಸಾಹುಕಾರನಾಗಿತ್ತು, ದುಃಖದ ಮಾತಿರಲಿಲ್ಲ. ಸತ್ಯಯುಗದಲ್ಲಿ ಯಾವುದೇ ಇನ್ನೊಂದು ಧರ್ಮವಿರಲಿಲ್ಲ,
ಒಂದೇ ದೇವಿ-ದೇವತಾ ಧರ್ಮವಿತ್ತು, ಇದು ಯಾರಿಗೂ ತಿಳಿದಿಲ್ಲ. ಈ ವಿಶ್ವದ ಚರಿತ್ರೆ-ಭೂಗೋಳವನ್ನು
ಯಾರೂ ಅರಿತುಕೊಂಡಿಲ್ಲ. ನೀವೀಗ ಚೆನ್ನಾಗಿ ಅರಿತುಕೊಳ್ಳುತ್ತೀರಿ, ನಮ್ಮ ಭಾರತವು ಬಹಳ
ಸಾಹುಕಾರನಾಗಿತ್ತು, ಈಗ ಬಡವನಾಗಿದೆ. ಈಗ ಪುನಃ ಸಾಹುಕಾರನನ್ನಾಗಿ ಮಾಡಲು ತಂದೆಯು ಬಂದಿದ್ದಾರೆ.
ಭಾರತವು ಸತ್ಯಯುಗದಲ್ಲಿ ಬಹಳ ಸಾಹುಕಾರನಾಗಿದ್ದಾಗ ದೇವಿ-ದೇವತೆಗಳ ರಾಜ್ಯವಿತ್ತು, ಮತ್ತೆ ಆ
ರಾಜ್ಯವು ಎಲ್ಲಿ ಹೋಯಿತು, ಇದನ್ನು ಯಾರೂ ತಿಳಿದುಕೊಂಡಿಲ್ಲ. ಋಷಿ-ಮುನಿ ಮೊದಲಾದವರೂ ಸಹ ನಾವು
ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿಲ್ಲವೆಂದು ಹೇಳುತ್ತಿದ್ದರು. ತಂದೆಯು ತಿಳಿಸುತ್ತಾರೆ -
ಸತ್ಯಯುಗದಲ್ಲಿಯೂ ಸಹ ದೇವಿ-ದೇವತೆಗಳಿಗೆ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ
ಜ್ಞಾನವಿರಲಿಲ್ಲ. ಒಂದುವೇಳೆ ಅವರಿಗೂ ಸಹ ನಂತರದಲ್ಲಿ ನಾವು ಏಣಿಯನ್ನಿಳಿಯುತ್ತಾ ಕಲಿಯುಗಕ್ಕೆ
ಹೋಗುತ್ತೇವೆ ಎಂಬ ಜ್ಞಾನವು ಇದ್ದಿದ್ದರೆ ಅಲ್ಲಿನ ರಾಜ್ಯ ಪದವಿಯ ಸುಖವೂ ಇರುತ್ತಿರಲಿಲ್ಲ,
ಚಿಂತೆಯಾಗಿ ಬಿಡುತ್ತಿತ್ತು. ನಾವು ಸತೋಪ್ರಧಾನರಾಗಿದ್ದೇವೆ, ಈಗ ಪುನಃ ಸತೋಪ್ರಧಾನರಾಗುವುದು ಹೇಗೆ
ಎಂದು ಚಿಂತೆಯಾಗಿದೆ. ನಾವಾತ್ಮರು ಯಾರು ನಿರಾಕಾರಿ ಪ್ರಪಂಚದಲ್ಲಿದ್ದೆವೋ ಅಲ್ಲಿಂದ ಹೇಗೆ
ಸುಖಧಾಮದಲ್ಲಿ ಬಂದೆವು ಎಂಬ ಜ್ಞಾನವೂ ಇದೆ. ನಾವೀಗ ಏರುವ ಕಲೆಯಲ್ಲಿದ್ದೇವೆ. ಇದು 84 ಜನ್ಮಗಳ
ಏಣಿಯಾಗಿದೆ. ಡ್ರಾಮಾನುಸಾರ ಪ್ರತಿಯೊಬ್ಬ ಪಾತ್ರಧಾರಿಯು ನಂಬರ್ವಾರ್ ತಮ್ಮ-ತಮ್ಮ ಸಮಯದಲ್ಲಿ ಬಂದು
ಪಾತ್ರವನ್ನಭಿನಯಿಸುತ್ತಾರೆ. ಬಡವರ ಬಂಧು ಎಂದು ಯಾರಿಗೆ ಹೇಳಲಾಗುತ್ತದೆ ಎಂಬುದನ್ನು ನೀವೀಗ
ತಿಳಿದುಕೊಂಡಿದ್ದೀರಿ. ಇದು ಪ್ರಪಂಚದವರಿಗೆ ಗೊತ್ತಿಲ್ಲ. ಗೀತೆಯಲ್ಲಿಯೂ ಕೇಳಿದಿರಿ - ಕೊನೆಗೂ ಆ
ದಿನ ಇಂದು ಬಂದಿತು. ಯಾವ ದಿನದ ಮಾರ್ಗವನ್ನು ಕಾಯುತ್ತಿದ್ದೆವೋ..... ಎಲ್ಲಾ ಭಕ್ತರು. ಭಗವಂತನು
ಯಾವಾಗ ಬಂದು ನಾವು ಭಕ್ತರನ್ನು ಈ ಭಕ್ತಿ ಮಾರ್ಗದಿಂದ ಬಿಡಿಸಿ ಸದ್ಗತಿಯಲ್ಲಿ ಕರೆದುಕೊಂಡು
ಹೋಗುತ್ತಾರೆ ಎಂಬುದನ್ನೂ ಈಗ ತಿಳಿದುಕೊಂಡಿದ್ದೇವೆ. ತಂದೆಯು ಪುನಃ ಈ ಶರೀರದಲ್ಲಿ ಬಂದು
ಬಿಟ್ಟಿದ್ದಾರೆ. ಶಿವ ಜಯಂತಿಯನ್ನಾಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಬರುತ್ತಾರೆ. ಕೃಷ್ಣನ
ತನುವಿನಲ್ಲಿ ಬರುತ್ತಾರೆ ಎಂದಲ್ಲ. ತಂದೆಯು ತಿಳಿಸುತ್ತಾರೆ - ಕೃಷ್ಣನ ಆತ್ಮವೂ ಸಹ 84 ಜನ್ಮಗಳನ್ನು
ತೆಗೆದುಕೊಂಡಿದ್ದಾರೆ. ಅವರ ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಯಾರು ಮೊದಲಿನ ನಂಬರಿನಲ್ಲಿದ್ದರೋ
ಅವರೇ ಈಗ ಅಂತ್ಯದಲ್ಲಿದ್ದಾರೆ, ತತ್ತ್ವಂ. ನಾನಂತೂ ಅವರ ಸಾಧಾರಣ ತನುವಿನಲ್ಲಿ ಬರುತ್ತೇನೆ. ಬಂದು
ನಿಮಗೆ ನೀವು ಹೇಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ ಎಂಬುದನ್ನು ತಿಳಿಸುತ್ತೇನೆ. ಏಕ್
ಓಂಕಾರ್, ಪರಮಪಿತ ಪರಮಾತ್ಮ ತಂದೆಯಾಗಿದ್ದಾರೆ, ಅವರು ಅವಶ್ಯವಾಗಿ ಮನುಷ್ಯರಿಂದ ದೇವತೆಗಳನ್ನಾಗಿ
ಮಾಡುವವರಾಗಿದ್ದಾರೆ ಎಂಬುದನ್ನು ಸರ್ದಾರರೂ ಹೇಳುತ್ತಾರೆ ಅಂದಮೇಲೆ ನಾವೇಕೆ ದೇವತೆಗಳಾಗಬಾರದು!
ಯಾರು ದೇವತೆಗಳಾಗಿದ್ದರು ಅವರು ಒಮ್ಮೆಲೆ ತಿಳಿದುಕೊಂಡು ಬಿಡುತ್ತಾರೆ. ಯಾರೊಬ್ಬರೂ ತಮ್ಮನ್ನು
ದೇವಿ-ದೇವತಾ ಧರ್ಮದವರೆಂದು ತಿಳಿದುಕೊಳ್ಳುವುದಿಲ್ಲ. ಮತ್ತೆಲ್ಲಾ ಧರ್ಮಗಳ ಚರಿತ್ರೆಯು
ಚಿಕ್ಕದಾಗಿದೆ. ಕೆಲವರದು 500 ವರ್ಷಗಳದು, ಇನ್ನೂ ಕೆಲವರದು 1250 ವರ್ಷಗಳ ಚರಿತ್ರೆಯಿದೆ ಆದರೆ
ನಿಮ್ಮದು 5000 ವರ್ಷಗಳ ಚರಿತ್ರೆಯಾಗಿದೆ. ದೇವತಾ ಧರ್ಮದವರೇ ಸ್ವರ್ಗದಲ್ಲಿ ಬರುತ್ತಾರೆ, ಅನ್ಯ
ಧರ್ಮಗಳು ಬರುವುದೇ ಕೊನೆಯಲ್ಲಿ ಅಂದಾಗ ದೇವತಾ ಧರ್ಮದವರೂ ಸಹ ಡ್ರಾಮಾನುಸಾರ ಅನ್ಯ ಧರ್ಮಗಳಲ್ಲಿ
ಹೋಗಿ ಸೇರಿದ್ದಾರೆ. ಅವರು ಮತ್ತೆ ತಮ್ಮ-ತಮ್ಮ ಧರ್ಮದಲ್ಲಿ ಹಿಂತಿರುಗಿ ಬರುತ್ತಾರೆ.
ತಂದೆಯು ತಿಳಿಸುತ್ತಾರೆ
- ಮಕ್ಕಳೇ, ನೀವಂತೂ ವಿಶ್ವದ ಮಾಲೀಕರಾಗಿದ್ದಿರಿ, ನೀವೂ ಸಹ ತಿಳಿದುಕೊಳ್ಳುತ್ತೀರಿ - ತಂದೆಯು
ಸ್ವರ್ಗ ಸ್ಥಾಪನೆ ಮಾಡುವವರಾಗಿದ್ದಾರೆ ಅಂದಮೇಲೆ ನಾವೇಕೆ ಸ್ವರ್ಗದಲ್ಲಿರಬಾರದು! ತಂದೆಯಿಂದ ಖಂಡಿತ
ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ - ಇದರಿಂದಲೇ ಇವರು ನಮ್ಮ ಧರ್ಮದವರೆಂದು ಸಿದ್ಧವಾಗುತ್ತದೆ.
ಯಾರು ಈ ಧರ್ಮದವರಲ್ಲವೋ ಅವರು ಬರುವುದೇ ಇಲ್ಲ. ಪರ ಧರ್ಮದಲ್ಲಿ ಏಕೆ ಹೋಗಬೇಕೆಂದು ಹೇಳುತ್ತಾರೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಹೊಸ ಪ್ರಪಂಚದಲ್ಲಿ ದೇವತೆಗಳಿಗೆ ಬಹಳ ಸುಖವಿತ್ತು, ಚಿನ್ನದ
ಮಹಲು ಇತ್ತು. ಸೋಮನಾಥ ಮಂದಿರದಲ್ಲಿ ಎಷ್ಟೊಂದು ಚಿನ್ನವಿತ್ತು! ಈ ರೀತಿ ಮತ್ತ್ಯಾವುದೇ ಧರ್ಮವು
ಇರುವುದೇ ಇಲ್ಲ. ಸೋಮನಾಥ ಮಂದಿರದಂತಹ ಭಾರಿ ಮಂದಿರವು ಮತ್ತ್ಯಾವುದೂ ಇಲ್ಲ. ಬಹಳ ವಜ್ರ
ವೈಡೂರ್ಯಗಳಿತ್ತು. ಬುದ್ಧ ಮೊದಲಾದವರಿಗೆ ಯಾವುದೇ ವಜ್ರ ವೈಡೂರ್ಯಗಳ ಮಹಲುಗಳಿರುವುದಿಲ್ಲ. ನೀವು
ಮಕ್ಕಳನ್ನು ಯಾವ ತಂದೆಯು ಇಷ್ಟು ಶ್ರೇಷ್ಠರನ್ನಾಗಿ ಮಾಡಿದ್ದಾರೆಯೋ ಅವರಿಗೆ ಎಷ್ಟೊಂದು
ಮಾನ್ಯತೆಯನ್ನಿಟ್ಟಿದ್ದೀರಿ! ಮಾನ್ಯತೆ ಕೊಡಲಾಗುತ್ತದೆಯಲ್ಲವೆ. ಒಳ್ಳೆಯ ಕರ್ಮ ಮಾಡಿ
ಹೋಗಿದ್ದಾರೆಂದು ತಿಳಿಯುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ, ಎಲ್ಲರಿಗಿಂತ ಒಳ್ಳೆಯ ಕರ್ಮವನ್ನು
ಪತಿತ-ಪಾವನ ತಂದೆಯೇ ಮಾಡಿ ಹೋಗುತ್ತಾರೆ. ನಿಮ್ಮ ಆತ್ಮವೂ ಹೇಳುತ್ತದೆ - ಎಲ್ಲರಿಗಿಂತ ಸರ್ವೋತ್ತಮ
ಸೇವೆಯನ್ನು ಬೇಹದ್ದಿನ ತಂದೆಯೇ ಬಂದು ಮಾಡುತ್ತಾರೆ. ನಮ್ಮನ್ನು ಪ್ರಜೆಗಳಿಂದ ರಾಜರು,
ಭಿಕಾರಿಗಳಿಂದ ರಾಜಕುಮಾರರನ್ನಾಗಿ ಮಾಡುತ್ತಾರೆ. ಯಾವ ತಂದೆಯು ಭಾರತವನ್ನು ಸ್ವರ್ಗವನ್ನಾಗಿ
ಮಾಡುತ್ತಾರೆಯೋ ಅವರಿಗೆ ಈಗ ಯಾರೂ ಗೌರವವನ್ನಿಡುವುದಿಲ್ಲ. ನಿಮಗೆ ತಿಳಿದಿದೆ - ಸೋಮನಾಥ ಮಂದಿರವು
ಬಹಳ ಶ್ರೇಷ್ಠ ಮಂದಿರವೆಂದು ಗಾಯನವಿದೆ, ಅದನ್ನು ಲೂಟಿ ಮಾಡಿದರು. ಲಕ್ಷ್ಮೀ-ನಾರಾಯಣ ಮಂದಿರವನ್ನು
ಎಂದೂ ಲೂಟಿ ಮಾಡಲಿಲ್ಲ, ಸೋಮನಾಥ ಮಂದಿರವನ್ನು ಲೂಟಿ ಮಾಡಿದರು. ಭಕ್ತಿ ಮಾರ್ಗದಲ್ಲಿಯೂ ಬಹಳ
ಧನವಂತರಿರುತ್ತಾರೆ. ರಾಜರಲ್ಲಿಯೂ ನಂಬರ್ವಾರ್ ಇರುತ್ತಾರಲ್ಲವೆ. ಯಾರು ಶ್ರೇಷ್ಠ ಪದವಿಯವರಿರುವರೋ
ಅವರಿಗೆ ಚಿಕ್ಕ ಪದವಿಯವರು ಗೌರವ ಕೊಡುತ್ತಾರೆ. ದರ್ಬಾರಿನಲ್ಲಿಯೂ ನಂಬರ್ವಾರ್ ಆಗಿ
ಕುಳಿತುಕೊಳ್ಳುತ್ತಾರೆ. ಈ ಬ್ರಹ್ಮಾ ತಂದೆಯಂತು ಅನುಭವಿಯಲ್ಲವೆ. ಇಲ್ಲಿನದು ಪತಿತ ರಾಜರ ದರ್ಬಾರ್
ಆಗಿದೆ. ಪಾವನ ರಾಜರ ದರ್ಬಾರ್ ಹೇಗಿರಬಹುದು! ಅವರ ಬಳಿ ಅಷ್ಟೊಂದು ಹಣವಿದೆಯೆಂದರೆ ಅವರ ಮನೆಗಳು
ಅಷ್ಟೇ ಚೆನ್ನಾಗಿರುತ್ತವೆ. ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ಓದಿಸುತ್ತಿದ್ದಾರೆ,
ಸ್ವರ್ಗ ಸ್ಥಾಪನೆ ಮಾಡಿಸುತ್ತಿದ್ದಾರೆ. ನಾವು ಸ್ವರ್ಗದ ಮಹಾರಾಜ, ಮಹಾರಾಣಿಯಾಗುತ್ತೇವೆ. ನಂತರ
ಕೆಳಗಿಳಿಯುತ್ತಾ-ಇಳಿಯುತ್ತಾ ಭಕ್ತರಾದಾಗ ಮೊಟ್ಟ ಮೊದಲು ಶಿವ ತಂದೆಯ ಪೂಜಾರಿಗಳಾಗುತ್ತೇವೆ. ಯಾರು
ಸ್ವರ್ಗದ ಮಾಲೀಕರನ್ನಾಗಿ ಮಾಡಿದರೋ ಅವರಿಗೇ ಪೂಜೆ ಮಾಡುತ್ತೇವೆ. ಅವರು ನಮ್ಮನ್ನು ಬಹಳ
ಸಾಹುಕಾರರನ್ನಾಗಿ ಮಾಡುತ್ತಾರೆ. ಈಗ ಇದು ಎಷ್ಟು ಬಡ ಭಾರತವಾಗಿದೆ, ಯಾವ ಜಮೀನನ್ನು 500
ರೂಪಾಯಿಗಳಿಗೆ ತೆಗೆದುಕೊಂಡಿದ್ದೆವೋ ಅದರ ಬೆಲೆಯು ಇಂದು 5000 ಕ್ಕಿಂತಲೂ ಅಧಿಕವಾಗಿ ಬಿಟ್ಟಿದೆ.
ಇದೆಲ್ಲವೂ ಆರ್ಟಿಫಿಷಿಯಲ್ ಬೆಲೆಯಾಗಿದೆ. ಸತ್ಯಯುಗದಲ್ಲಂತೂ ಧರಣಿಗೆ ಬೆಲೆ ಕಟ್ಟಬೇಕಾಗಿಲ್ಲ.
ಯಾರಿಗೆಷ್ಟು ಬೇಕೋ ಅಷ್ಟು ತೆಗೆದುಕೊಳ್ಳಬಹುದು, ಬಹಳಷ್ಟು ಜಮೀನಿರುವುದು. ಸಿಹಿ ನೀರಿನ ನದಿಗಳ
ತೀರದಲ್ಲಿ ನಮ್ಮ ಮಹಲುಗಳಿರುತ್ತವೆ, ಬಹಳ ಕೆಲವರೇ ಮನುಷ್ಯರಿರುತ್ತಾರೆ, ಪ್ರಕೃತಿಯು
ದಾಸಿಯಾಗಿರುತ್ತದೆ. ಹೂ-ಹಣ್ಣು ಬಹಳ ಚೆನ್ನಾಗಿ ಸಿಗುತ್ತಿರುತ್ತವೆ. ಈಗಂತೂ ಎಷ್ಟು ಪರಿಶ್ರಮ
ಪಟ್ಟರೂ ಸಹ ಅನ್ನವು ಸಿಗುವುದಿಲ್ಲ. ಮನುಷ್ಯರು ಬಹಳ ಹಸಿವು, ಬಾಯಾರಿಕೆಯಲ್ಲಿ ಸಾಯುತ್ತಾರೆ ಅಂದಾಗ
ಗೀತೆಯನ್ನು ಕೇಳುತ್ತಿದ್ದಂತೆಯೇ ನೀವು ರೋಮಾಂಚನವಾಗಿ ನಿಂತು ಬಿಡಬೇಕು. ತಂದೆಗೆ ಬಡವರ ಬಂಧು ಎಂದು
ಹೇಳುತ್ತಾರೆ. ಬಡವರ ಬಂಧುವಿನ ಅರ್ಥವನ್ನು ತಿಳಿದುಕೊಂಡಿರಲ್ಲವೆ. ಯಾರನ್ನು ಸಾಹುಕಾರರನ್ನಾಗಿ
ಮಾಡುತ್ತಾರೆ? ಅವಶ್ಯವಾಗಿ ಎಲ್ಲಿಯೋ ಬಂದು ಅವರನ್ನು ಸಾಹುಕಾರರನ್ನಾಗಿ ಮಾಡುವರಲ್ಲವೆ. ಮಕ್ಕಳು
ತಿಳಿದುಕೊಂಡಿದ್ದೀರಿ - ನಾವು ಪಾವನರಿಂದ ಪತಿತರಾಗುವುದರಲ್ಲಿ 5000 ವರ್ಷಗಳು ಹಿಡಿಸುತ್ತವೆ. ಈಗ
ಪುನಃ ತಂದೆಯು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಶ್ರೇಷ್ಠಾತಿ ಶ್ರೇಷ್ಠರನ್ನಾಗಿ ಮಾಡುತ್ತಾರೆ.
ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಕ್ಕಿ ಬಿಡುತ್ತದೆ. ಬಾಬಾ, ನಾನು ನಿಮ್ಮವನಾಗಿದ್ದೇನೆಂದು
ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ವಿಶ್ವದ ಮಾಲೀಕರಾಗಿದ್ದೀರಿ. ಮಗುವಿನ
ಜನ್ಮವಾಯಿತೆಂದರೆ ವಾರಸುಧಾರನಾದರು, ಎಷ್ಟೊಂದು ಖುಷಿಯಾಗುತ್ತದೆ. ಹೆಣ್ಣು ಮಗುವಾದರೆ
ನೋಡುತ್ತಿದ್ದಂತೆಯ ಚಹರೆಯು ಇಳಿದು ಹೋಗುತ್ತದೆ. ಇಲ್ಲಂತೂ ಎಲ್ಲಾ ಆತ್ಮರು ಮಕ್ಕಳಾಗಿದ್ದಾರೆ. ಈಗ
ಅರ್ಥವಾಗಿದೆ - ನಾವು ಪ್ರತೀ 5000 ವರ್ಷಗಳ ಮೊದಲೂ ಸ್ವರ್ಗದ ಮಾಲೀಕರಾಗಿದ್ದೇವೆ. ತಂದೆಯು ಆ ರೀತಿ
ಮಾಡಿದ್ದರು, ಶಿವಜಯಂತಿಯನ್ನೂ ಆಚರಿಸುತ್ತಾರೆ ಆದರೆ ಅವರು ಯಾವಾಗ ಬಂದಿದ್ದರು ಎಂದು
ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ,
ಜಯಂತಿಯನ್ನಾಚರಿಸುತ್ತಾರೆ. ಕೇವಲ ಲಿಂಗಗಳ ದೊಡ್ಡ-ದೊಡ್ಡ ಮಂದಿರಗಳನ್ನು ಕಟ್ಟಿಸುತ್ತಾರೆ. ಆದರೆ
ಅವರು ಹೇಗೆ ಬಂದರು? ಬಂದು ಏನು ಮಾಡಿದರು? ಏನೂ ಗೊತ್ತಿಲ್ಲ, ಇದಕ್ಕೆ ಅಂಧ ಶ್ರದ್ಧೆಯೆಂದು
ಹೇಳಲಾಗುತ್ತದೆ. ಅವರಿಗೆ ಇದು ಗೊತ್ತೇ ಇಲ್ಲ - ನಮ್ಮ ಧರ್ಮ ಯಾವುದು? ಯಾವಾಗ ಸ್ಥಾಪನೆಯಾಯಿತು?
ಅನ್ಯ ಧರ್ಮದವರಿಗಾದರೂ ಬುದ್ಧನು ಯಾವಾಗ ಬಂದರು ಎಂಬುದೆಲ್ಲವೂ ತಿಳಿದಿದೆ, ತಿಥಿ-ತಾರೀಖು ಇದೆ ಆದರೆ
ಶಿವ ತಂದೆ ಮತ್ತು ಲಕ್ಷ್ಮೀ-ನಾರಾಯಣರ ತಿಥಿ-ತಾರೀಖು ಇಲ್ಲ. 5000 ವರ್ಷಗಳ ಮಾತನ್ನು ಲಕ್ಷಾಂತರ
ವರ್ಷಗಳೆಂದು ಬರೆದು ಬಿಟ್ಟಿದ್ದಾರೆ. ಲಕ್ಷಾಂತರ ವರ್ಷಗಳ ಮಾತು ಯಾರಿಗಾದರೂ ನೆನಪಿಗೆ ಬರುವುದೇ?
ಭಾರತದಲ್ಲಿ ಯಾವಾಗ ದೇವಿ-ದೇವತಾ ಧರ್ಮವಿತ್ತೆಂದು ತಿಳಿದುಕೊಂಡಿಲ್ಲ. ಲಕ್ಷಾಂತರ ವರ್ಷಗಳ
ಲೆಕ್ಕದಿಂದ ಭಾರತದ ಸಂಪತ್ತು ಎಲ್ಲದಕ್ಕಿಂತ ದೊಡ್ಡದಾಗಿರಬೇಕು. ಭಾರತದ ಜಮೀನು ಎಲ್ಲದಕ್ಕಿಂತ
ದೊಡ್ಡದಾಗಿರಬೇಕು. ಲಕ್ಷಾಂತರ ವರ್ಷಗಳಲ್ಲಿ ಎಷ್ಟೊಂದು ಜನಸಂಖ್ಯೆಯಾಗಿ ಬಿಡುತ್ತದೆ!
ಲೆಕ್ಕವಿಲ್ಲದಷ್ಟಾಗಿ ಬಿಡುವುದು ಆದರೆ ಇಷ್ಟಂತೂ ಇಲ್ಲ. ಇನ್ನೂ ಕಡಿಮೆಯಾಗುತ್ತಾ ಹೋಗಿದೆ. ಇವೆಲ್ಲಾ
ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಮನುಷ್ಯರು ಕೇಳಿದಾಗ ಈ ಮಾತುಗಳನ್ನು ಎಂದೂ ಕೇಳಿಲ್ಲ,
ಯಾವುದೇ ಶಾಸ್ತ್ರಗಳಲ್ಲಿ ಓದಿಲ್ಲವೆಂದು ಹೇಳುತ್ತಾರೆ. ಇವು ಅದ್ಭುತವಾದ ಮಾತುಗಳಾಗಿವೆ.
ಈಗ ನೀವು ಮಕ್ಕಳ
ಬುದ್ಧಿಯಲ್ಲಿ ಇಡೀ ಚಕ್ರದ ಜ್ಞಾನವಿದೆ. ಇವರು (ಬ್ರಹ್ಮಾ) ಬಹಳ ಜನ್ಮಗಳ ಅಂತಿಮದಲ್ಲಿ ಪತಿತ
ಆತ್ಮನಾಗಿದ್ದಾರೆ. ಯಾರು ಸತೋಪ್ರಧಾನರಾಗಿದ್ದರೋ ಅವರೇ ಈಗ ತಮೋಪ್ರಧಾನನಾಗಿದ್ದಾರೆ. ಪುನಃ
ಸತೋಪ್ರಧಾನರಾಗಬೇಕಾಗಿದೆ. ನೀವಾತ್ಮರಿಗೆ ಈಗ ಶಿಕ್ಷಣ ಸಿಗುತ್ತಿದೆ. ಆತ್ಮವು ಕಿವಿಗಳ ಮೂಲಕ
ಕೇಳಿಸಿಕೊಳ್ಳುತ್ತದೆ ಆಗ ಶರೀರವು ತೂಗುತ್ತದೆ ಏಕೆಂದರೆ ಆತ್ಮವು ಕೇಳಿಸಿಕೊಳ್ಳುತ್ತದೆಯಲ್ಲವೆ.
ಅವಶ್ಯವಾಗಿ ನಾವಾತ್ಮರು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. 84 ಜನ್ಮಗಳಲ್ಲಿ 84 ಮಂದಿ
ತಂದೆ-ತಾಯಿಯರು ಖಂಡಿತ ಸಿಕ್ಕಿರುವರು. ಇದೂ ಲೆಕ್ಕವಿದೆಯಲ್ಲವೆ. ಬುದ್ಧಿಯಲ್ಲಿ ಬರುತ್ತದೆ - ನಾವು
84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತೆ ಕಡಿಮೆ ಜನ್ಮಗಳಿರುವವರೂ ಇರುತ್ತಾರೆ. ಎಲ್ಲರೂ 84
ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ಶಾಸ್ತ್ರಗಳಲ್ಲಿ ಏನೇನನ್ನು
ಬರೆದು ಬಿಟ್ಟಿದ್ದಾರೆ! ನಿಮಗಾದರೂ ಕೇವಲ 84 ಜನ್ಮಗಳೆಂದು ಹೇಳುತ್ತಾರೆ ಆದರೆ ನನಗೆ ನೋಡಿ,
ಲೆಕ್ಕವಿಲ್ಲದಷ್ಟು ಅಸಂಖ್ಯ ಜನ್ಮಗಳೆಂದು ಹೇಳಿ ಬಿಡುತ್ತಾರೆ. ಕಣ ಕಣದಲ್ಲಿ, ಕಲ್ಲು-ಮುಳ್ಳಿನಲ್ಲಿ
ನನ್ನನ್ನು ಸೇರಿಸಿ ಬಿಟ್ಟಿದ್ದಾರೆ. ಎಲ್ಲಿ ನೋಡಿದರೂ ನೀನೇ ನೀನು, ಕೃಷ್ಣನೇ ಕೃಷ್ಣನಿದ್ದಾನೆ,
ಮಥುರಾ-ಬೃಂದಾವನದಲ್ಲಿ ಈ ರೀತಿ ಹೇಳುತ್ತಿರುತ್ತಾರೆ. ಕೃಷ್ಣನೇ ಸರ್ವವ್ಯಾಪಿಯಾಗಿದ್ದಾನೆ ಎಂದು.
ರಾಧೆಯ ಪಂಥದವರು ಎಲ್ಲಿ ನೋಡಿದರಲ್ಲಿ ರಾಧೆಯೇ ರಾಧೆ, ನೀವೂ ರಾಧೆ, ನಾನೂ ರಾಧೆ ಎಂದು
ಹೇಳುತ್ತಿರುತ್ತಾರೆ.
ಅಂದಾಗ ಒಬ್ಬ ತಂದೆಯೇ
ಅವಶ್ಯವಾಗಿ ಬಡವರ ಬಂಧುವಾಗಿದ್ದಾರೆ. ಭಾರತ ಯಾವುದು ಎಲ್ಲದಕ್ಕಿಂತ ಸಾಹುಕಾರನಾಗಿತ್ತೋ ಅದು ಈಗ
ಎಲ್ಲದಕ್ಕಿಂತ ಬಡವನಾಗಿದೆ ಆದ್ದರಿಂದ ನಾನು ಭಾರತದಲ್ಲಿಯೇ ಬರಬೇಕಾಗುತ್ತದೆ. ಇದು
ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಡ್ರಾಮಾದಲ್ಲಿ
ಯಾವುದು ನಿಗಧಿಯಾಗಿದೆಯೋ ಅದು ಚಾಚೂ ತಪ್ಪದೆ ಪುನರಾವರ್ತನೆಯಾಗುವುದು. ಇದರಲ್ಲಿ ಒಂದು ಪೈಸೆಯಷ್ಟೂ
ಅಂತರವಾಗುವುದಿಲ್ಲ. ಡ್ರಾಮಾದ ಬಗ್ಗೆಯೂ ಅರ್ಥವಾಗಬೇಕು. ಡ್ರಾಮಾ ಎಂದರೆ ಡ್ರಾಮಾ. ಹೇಗೆ ಅವು
ಹದ್ದಿನ ನಾಟಕಗಳಾಗಿರುತ್ತವೆ, ಇದು ಬೇಹದ್ದಿನ ನಾಟಕವಾಗಿದೆ. ಈ ಬೇಹದ್ದಿನ ನಾಟಕದ
ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ ಅಂದಾಗ ಬಡವರ ಬಂಧು ನಿರಾಕಾರ ಭಗವಂತನನ್ನೇ
ಒಪ್ಪುತ್ತಾರೆ. ಕೃಷ್ಣನಿಗೆ ಹೇಳುವುದಿಲ್ಲ. ಕೃಷ್ಣನು ಬಹಳ ಧನವಂತ, ಸತ್ಯಯುಗದ
ರಾಜಕುಮಾರನಾಗುತ್ತಾನೆ. ಭಗವಂತನಿಗಂತೂ ತನ್ನ ಶರೀರವೇ ಇಲ್ಲ, ಅವರು ಬಂದು ನೀವು ಮಕ್ಕಳನ್ನು
ಧನವಂತರನ್ನಾಗಿ ಮಾಡುತ್ತಾರೆ, ನಿಮಗೆ ರಾಜಯೋಗದ ಶಿಕ್ಷಣವನ್ನು ಕೊಡುತ್ತಾರೆ. ವಿದ್ಯೆಯಿಂದ ವಕೀಲ
ಇತ್ಯಾದಿ ಆಗಿ ಸಂಪಾದನೆ ಮಾಡುತ್ತಾರೆ. ತಂದೆಯೂ ಸಹ ಈಗ ನಿಮಗೆ ಓದಿಸುತ್ತಾರೆ. ನೀವು ಭವಿಷ್ಯದಲ್ಲಿ
ನರನಿಂದ ನಾರಾಯಣನಾಗುತ್ತೀರಿ. ನಿಮ್ಮ ಜನ್ಮವಂತು ಆಗುತ್ತದೆಯಲ್ಲವೆ. ಸ್ವರ್ಗವು ಯಾವುದೇ ಸಮುದ್ರದ
ಕೆಳಗಿನಿಂದ ಹೊರ ಬರುತ್ತದೆಯೆಂದಲ್ಲ. ಕೃಷ್ಣನೂ ಸಹ ಜನ್ಮ ತೆಗೆದುಕೊಂಡನಲ್ಲವೆ, ಆ ಸಮಯದಲ್ಲಿ ಕಂಸ
ಪುರಿ ಇತ್ಯಾದಿಗಳಿರಲಿಲ್ಲ. ಕೃಷ್ಣನ ಹೆಸರನ್ನು ಎಷ್ಟೊಂದು ಗಾಯನ ಮಾಡಲಾಗುತ್ತದೆ ಆದರೆ ಕೃಷ್ಣನ
ತಂದೆಗೂ ಗಾಯನವಿಲ್ಲ. ಅವರ ತಂದೆ ಎಲ್ಲಿದ್ದಾರೆ? ಅವಶ್ಯವಾಗಿ ಕೃಷ್ಣನು ಯಾರ ಮಗನೋ ಆಗಿರಬೇಕಲ್ಲವೆ!
ಕೃಷ್ಣನು ಜನ್ಮ ಪಡೆದಾಗ ಕೆಲವರು ಪತಿತರೂ ಇರುತ್ತಾರೆ, ಯಾವಾಗ ಅವರೆಲ್ಲರೂ ಸಂಪುರ್ಣ
ಸಮಾಪ್ತಿಯಾಗುತ್ತಾರೆ ಆಗ ಕೃಷ್ಣನು ಸಿಂಹಾಸನವನ್ನೇರುತ್ತಾನೆ. ತನ್ನ ರಾಜ್ಯವನ್ನು
ತೆಗೆದುಕೊಳ್ಳುತ್ತಾನೆ, ಆಗಿನಿಂದಲೇ ಅವರ ಸಂವತ್ಸರವು ಆರಂಭವಾಗುತ್ತದೆ. ಲಕ್ಷ್ಮೀ-ನಾರಾಯಣರಿಂದಲೇ
ಸಂವತ್ಸರವು ಆರಂಭವಾಗುತ್ತದೆ. ನೀವು ಪೂರ್ಣ ಲೆಕ್ಕವನ್ನು ಬರೆಯುತ್ತೀರಿ, ಇವರ ರಾಜ್ಯವು ಇಷ್ಟು
ಸಮಯ ಮತ್ತು ಇವರದು ಇಷ್ಟು ಸಮಯ ಎಂದು ಬರೆಯುತ್ತೀರಿ ಆಗ ಈ ಕಲ್ಪದ ಆಯಸ್ಸು ದೊಡ್ಡದಾಗಿರಲು
ಸಾಧ್ಯವಿಲ್ಲವೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. 5000 ವರ್ಷಗಳ ಪೂರ್ಣ ಲೆಕ್ಕವಿದೆ, ನೀವು
ಮಕ್ಕಳ ಬುದ್ಧಿಯಲ್ಲಿ ಬರುತ್ತದೆಯಲ್ಲವೆ. ನಾವು ನೆನ್ನೆಯ ದಿನ ಸ್ವರ್ಗದ ಮಾಲೀಕರಾಗಿದ್ದೆವು.
ತಂದೆಯು ಮಾಡಿದ್ದರು ಆದ್ದರಿಂದಲೇ ಶಿವ ಜಯಂತಿಯನ್ನು ಆಚರಿಸುತ್ತಿದ್ದೇವೆ. ನೀವು ಎಲ್ಲರನ್ನೂ
ತಿಳಿದುಕೊಂಡಿದ್ದೀರಿ. ಕ್ರೈಸ್ಟ್, ಗುರುನಾನಕ್ ಮೊದಲಾದವರು ಪುನಃ ಯಾವಾಗ ಬರುತ್ತಾರೆ ಎಂಬ ಜ್ಞಾನವು
ನಿಮಗಿದೆ. ವಿಶ್ವದ ಇತಿಹಾಸ-ಭೂಗೋಳವು ಚಾಚೂ ತಪ್ಪದೆ ಪುನರಾವರ್ತನೆಯಾಗುತ್ತದೆ. ಈ ವಿದ್ಯೆಯು ಎಷ್ಟು
ಸಹಜವಾಗಿದೆ! ನೀವು ಸ್ವರ್ಗವನ್ನು ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ಭಾರತವು ಸ್ವರ್ಗವಾಗಿತ್ತು,
ಭಾರತವು ಅವಿನಾಶಿ ಖಂಡವಾಗಿದೆ. ಭಾರತಕ್ಕೆ ಇರುವ ಮಹಿಮೆಯು ಮತ್ತ್ಯಾವುದಕ್ಕೂ ಇರಲು ಸಾಧ್ಯವಿಲ್ಲ.
ಎಲ್ಲರನ್ನೂ ಪತಿತರಿಂದ ಪಾವನ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಡ್ರಾಮಾದ
ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಳ್ಳುತ್ತಾ ಎಲ್ಲಾ ಚಿಂತೆಗಳನ್ನು ಬಿಟ್ಟು
ಬಿಡಬೇಕಾಗಿದೆ. ಒಂದು ಸತೋಪ್ರಧಾನರಾಗುವ ಚಿಂತೆಯನ್ನಿಟ್ಟುಕೊಳ್ಳಬೇಕಾಗಿದೆ.
2. ಬಡವರ ಬಂಧು ತಂದೆಯು
ಭಾರತವನ್ನು ಬಡ ದೇಶದಿಂದ ಸಾಹುಕಾರನನ್ನಾಗಿ ಮಾಡಲು ಬಂದಿದ್ದಾರೆ. ಅವರಿಗೆ ಸಂಪೂರ್ಣ
ಸಹಯೋಗಿಗಳಾಗಬೇಕಾಗಿದೆ. ತಮ್ಮ ಹೊಸ ಪ್ರಪಂಚವನ್ನು ನೆನಪು ಮಾಡಿ ಸದಾ ಖುಷಿಯಲ್ಲಿರಬೇಕಾಗಿದೆ.
ವರದಾನ:
ಹೃದಯದಲ್ಲಿ ಸದಾ
ಒಬ್ಬ ರಾಮನನ್ನು ಇರಿಸಿಕೊಂಡು ಸತ್ಯ ಸೇವೆ ಮಾಡುವಂತಹ ಮಾಯಾಜೀತ, ವಿಜಯಿ ಭವ.
ಹನುಮಂತನ ವಿಶೇಷತೆಯಲ್ಲಿ
ತೋರಿಸುತ್ತಾರೆ - ಅವನು ಸದಾ ಸೇವಾಧಾರಿ, ಮಹಾವೀರನಾಗಿದ್ದನು ಆದ್ದರಿಂದ ಸ್ವಯಂ ತಾನು ಸುಡಲಿಲ್ಲ
ಆದರೆ ಬಾಲದಿಂದ ಲಂಕೆಯನ್ನೇ ಸುಟ್ಟನು. ಅದೇ ರೀತಿ ಇಲ್ಲಿಯೂ ಸಹ ಯಾರು ಸದಾ ಸೇವಾಧಾರಿ ಆಗಿದ್ದಾರೆಯೋ
ಅವರೇ ಮಾಯೆಯ ಅಧಿಕಾರವನ್ನು ಸಮಾಪ್ತಿ ಮಾಡಿ ಬಿಡಬಹುದು. ಯಾರು ಸೇವಾಧಾರಿಯೇ ಆಗಿರುವುದಿಲ್ಲ ಅವರು
ಮಾಯೆಯ ರಾಜ್ಯವನ್ನು ಸುಡುವುದಕ್ಕೆ ಸಾಧ್ಯವಾಗುವುದಿಲ್ಲ. ಹನುಮಂತನ ಹೃದಯದಲ್ಲಿ ಸದಾ ರಾಮನೇ
ಅಡಗಿದ್ದನು, ಅಂದಾಗ ತಮ್ಮ ಹೃದಯದಲ್ಲಿ ತಂದೆಯಲ್ಲದೆ ಮತ್ತ್ಯಾರೂ ಇರಬಾರದು, ತಮ್ಮ ದೇಹದ ಸ್ಮೃತಿಯೂ
ಇರಬಾರದು. ಹೀಗಿದ್ದಾಗಲೇ ಮಾಯಾಜೀತ, ವಿಜಯಿಯಾಗುವಿರಿ.
ಸ್ಲೋಗನ್:
ಹೇಗೆ ಆತ್ಮ
ಮತ್ತು ಶರೀರವು ಕಂಬೈಂಡ್ ಆಗಿದೆಯೋ ಹಾಗೆಯೇ ತಾವು ತಂದೆಯ ಜೊತೆ ಕಂಬೈಂಡ್ ಆಗಿರಿ.
ಅವ್ಯಕ್ತ ಸೂಚನೆ:- ಏಕತೆ
ಮತ್ತು ವಿಶ್ವಾಸದ ಗುಣ ಲಕ್ಷಣಗಳ ಮೂಲಕ ಸಫಲತಾ ಸಂಪನ್ನರಾಗಿರಿ.
ಸಂಘಟನೆಯಲ್ಲಿ
ಪ್ರತಿಯೊಬ್ಬರ ವಿಶೇಷತೆಯನ್ನು ನೋಡಬೇಕು. ವಿಶೇಷತೆಯನ್ನೇ ಗ್ರಹಣ ಮಾಡಬೇಕು ಮತ್ತು ಬಲಹೀನತೆಗಳನ್ನು
ಅಳಿಸುವ ಪ್ರಯತ್ನ ಮಾಡಿ – ಏಕತೆಯ ಸಂಘಟನೆಯನ್ನು ಬಲಗೊಳಿಸುವ ವಿಧಿ ಇದೇ ಆಗಿದೆ. ಹೇಗೆ ನೀವು
ಎಲ್ಲರ ಎದ್ದೇಳುವುದು, ಮಾತನಾಡುವುದು, ನಡೆಯುವುದು ಒಂದೇ ತರಹವಿದೆ ಅಥವಾ ಎಲ್ಲರದ್ದು ಒಂದೇ ತರಹದ
ಮಾತುಗಳು, ಒಂದೇ ಗೀತೆ, ಒಂದೇ ರೀತಿ, ಒಂದೇ ನೀತಿ, ಹಾಗೆಯೇ ಸಂಸ್ಕಾರಗಳು ಸಮಾನವಾಗಿ ಕಾಣಿಸಲಿ.
ಭಿನ್ನತೆಯಿದ್ದರೂ ಸಹ ಒಬ್ಬರಿನ್ನೊಬ್ಬರಲ್ಲಿ ವಿಶ್ವಾಸವಿಟ್ಟು ಎಲ್ಲರ ವಿಚಾರಗಳಿಗೆ ಸತ್ಕಾರ ಕೊಡಿ.
ಇದೇ ಏಕತೆಯ ಆಧಾರವಾಗಿದೆ.