06.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-
ನೆನಪಿನಲ್ಲಿರುವಂತಹ ಪರಿಶ್ರಮ ಪಡಿ ಆಗ ಪಾವನರಾಗುತ್ತೀರಿ, ಈಗ ತಂದೆಯು ನಿಮಗೆ ಓದಿಸುತ್ತಿದ್ದಾರೆ
ನಂತರ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ”
ಪ್ರಶ್ನೆ:
ಯಾವ ಒಂದು
ಸಂದೇಶವನ್ನು ನೀವು ಎಲ್ಲರಿಗೂ ಕೊಡಬೇಕಾಗಿದೆ?
ಉತ್ತರ:
ಈಗ ಮನೆಗೆ
ಹೋಗಬೇಕು ಆದ್ದರಿಂದ ಪಾವನರಾಗಬೇಕು. ಪತಿತ-ಪಾವನ ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ
ಆಗ ಪಾವನರಾಗುತ್ತೀರಿ, ಈ ಸಂದೇಶವನ್ನು ಎಲ್ಲರಿಗೂ ತಿಳಿಸಬೇಕು. ತಂದೆಯು ತನ್ನ ಪರಿಚಯವನ್ನು ನೀವು
ಮಕ್ಕಳಿಗೆ ಕೊಟ್ಟಿದ್ದಾರೆ, ಈಗ ನಿಮ್ಮ ಕರ್ತವ್ಯವಾಗಿದೆ- ತಂದೆಯನ್ನು ಪ್ರತ್ಯಕ್ಷಗೊಳಿಸುವುದು. ಸನ್
ಶೋಜ್ ಫಾದರ್ ಎಂದು ಹೇಳಲಾಗುತ್ತದೆ.
ಗೀತೆ:
ಸತ್ತರೂ ನಿಮ್ಮ
ಮಡಿಲಿನಲ್ಲಿಯೇ, ಬದುಕಿದರೂ ನಿಮ್ಮ ಮಡಿಲಿನಲ್ಲಿಯೇ..........
ಓಂ ಶಾಂತಿ.
ಮಕ್ಕಳು ಗೀತೆಯ ಅರ್ಥವನ್ನು ಕೇಳಿದಿರಿ- ಬಾಬಾ, ನಾವು ನಿಮ್ಮ ರುದ್ರಮಾಲೆಯಲ್ಲಿ
ಪೆÇೀಣಿಸಲ್ಪಡುತ್ತೇವೆ. ಈ ಗೀತೆಯು ಭಕ್ತಿಮಾರ್ಗದಲ್ಲಿ ಮಾಡಿರುವುದಾಗಿದೆ, ಏನೆಲ್ಲಾ ಪ್ರಪಂಚದ
ಸಾಮಗ್ರಿಗಳಿವೆ, ಜಪ-ತಪ, ಪೂಜೆ ಇತ್ಯಾದಿಯೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಭಕ್ತಿ ರಾವಣರಾಜ್ಯ,
ಜ್ಞಾನ ರಾಮರಾಜ್ಯವಾಗಿದೆ. ಜ್ಞಾನಕ್ಕೆ ನಾಲೆಡ್ಜ್, ವಿದ್ಯೆಯೆಂದು ಹೇಳಲಾಗುತ್ತದೆ. ಭಕ್ತಿಯನ್ನು
ವಿದ್ಯೆಯೆಂದು ಹೇಳುವುದಿಲ್ಲ. ಅದರಲ್ಲಿ ಏನಾಗುತ್ತೇವೆಂದು ಯಾವುದೇ ಉದ್ದೇಶವೂ ಇರುವುದಿಲ್ಲ,
ಭಕ್ತಿಯು ವಿದ್ಯೆಯಲ್ಲ. ರಾಜಯೋಗವನ್ನು ಕಲಿಯುವುದು ವಿದ್ಯೆಯಾಗಿದೆ. ವಿದ್ಯೆಯು ಒಂದು ಸ್ಥಾನದಲ್ಲಿ,
ಶಾಲೆಯಲ್ಲಿ ಓದಲಾಗುತ್ತದೆ. ಭಕ್ತಿಯಲ್ಲಂತೂ ಅಲ್ಲಿ-ಇಲ್ಲಿ ಅಲೆದಾಡಬೇಕಾಗುತ್ತದೆ. ವಿದ್ಯೆಯೆಂದರೆ
ವಿದ್ಯೆ ಅಂದಾಗ ವಿದ್ಯೆಯನ್ನು ಪೂರ್ಣರೀತಿಯಾಗಿ ಓದಬೇಕಾಗಿದೆ. ನಾವು ವಿದ್ಯಾರ್ಥಿಯಾಗಿದ್ದೇವೆಂದು
ಮಕ್ಕಳಿಗೆ ಗೊತ್ತಿದೆ. ಅನೇಕರು ತಮ್ಮನ್ನು ವಿದ್ಯಾರ್ಥಿಯೆಂದು ತಿಳಿಯುವುದಿಲ್ಲ ಏಕೆಂದರೆ ಓದುವುದೇ
ಇಲ್ಲ. ತಂದೆಯನ್ನೂ ಸಹ ತಂದೆಯೆಂದು ತಿಳಿಯುವುದಿಲ್ಲ, ಶಿವತಂದೆಯನ್ನು ಸದ್ಗತಿದಾತನೆಂದು
ತಿಳಿಯುವುದಿಲ್ಲ. ಇಂತಹವರೂ ಸಹ ಇದ್ದಾರೆ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳುವುದಿಲ್ಲ, ರಾಜಧಾನಿ
ಸ್ಥಾಪನೆಯಾಗುತ್ತಿದೆಯಲ್ಲವೆ. ಅದರಲ್ಲಿ ಎಲ್ಲಾ ಪ್ರಕಾರದವರೂ ಇರುತ್ತಾರೆ. ಪತಿತರನ್ನು ಪಾವನ ಮಾಡಲು
ತಂದೆಯು ಬಂದಿದ್ದಾರೆ. ಹೇ ಪತಿತ-ಪಾವನ ಬನ್ನಿ ಎಂದು ತಂದೆಯನ್ನು ಕರೆಯುತ್ತಾರೆ. ಈಗ ತಂದೆಯು
ತಿಳಿಸುತ್ತಾರೆ- ಪಾವನರಾಗಿ. ತಂದೆಯನ್ನು ನೆನಪು ಮಾಡಿ. ಪ್ರತಿಯೊಬ್ಬರಿಗೂ ತಂದೆಯ ಈ ಸಂದೇಶವನ್ನು
ತಿಳಿಸಬೇಕು. ಈ ಸಮಯದಲ್ಲಿ ಭಾರತವೇ ವೇಶ್ಯಾಲಯವಾಗಿದೆ, ಮೊದಲು ಭಾರತವು ಶಿವಾಲಯವಾಗಿತ್ತು. ಈಗ ಎರಡೂ
ಕಿರೀಟವು ಇಲ್ಲದಂತಾಗಿದೆ. ಇದೂ ಸಹ ನೀವು ಮಕ್ಕಳಿಗೆ ಗೊತ್ತಿದೆ. ಈಗ ಪತಿತ-ಪಾವನ ತಂದೆಯು
ಹೇಳುತ್ತಾರೆ- ನನ್ನನ್ನು ನೆನಪು ಮಾಡಿ ಆಗ ಪತಿತರಿಂದ ಪಾವನರಾಗುತ್ತೀರಿ. ನೆನಪಿನಲ್ಲಿ
ಪರಿಶ್ರಮವಿದೆ. ಬಹಳ ಕಡಿಮೆಮಂದಿ ನೆನಪಿನಲ್ಲಿರುತ್ತಾರೆ. ಭಕ್ತಮಾಲೆಯು ನೆನಪಿನದ್ದೇ ಆಗಿದೆ.
ಶ್ರೇಷ್ಠ ಭಕ್ತರು, ನಾರದ, ಮೀರಾ ಮುಂತಾದವರ ಹೆಸರುಗಳಿವೆ. ಇವರಲ್ಲಿಯೂ ಸಹ ಎಲ್ಲರೂ ಬಂದು
ಓದುವುದಿಲ್ಲ. ಕಲ್ಪದ ಮೊದಲು ಯಾರು ಓದಿದ್ದರೋ ಅವರೇ ಓದುತ್ತಾರೆ. ಬಾಬಾ, ನಾವು ನಿಮ್ಮನ್ನು ಕಲ್ಪದ
ಮೊದಲು ಮಿಲನ ಮಾಡಿದ್ದೆವು, ವಿದ್ಯೆ ಅಥವಾ ನೆನಪಿನ ಯಾತ್ರೆಯನ್ನು ಕಲಿತಿದ್ದೆವೆಂದು ಹೇಳುತ್ತಾರೆ.
ನೀವು ಮಕ್ಕಳನ್ನು ಕರೆದುಕೊಂಡು ಹೋಗಲು ಈಗ ತಂದೆಯು ಬಂದಿದ್ದಾರೆ. ನೀವು ಆತ್ಮಗಳು ಪತಿತರಾಗಿದ್ದೀರಿ
ಆದ್ದರಿಂದ ಬಂದು ಪಾವನ ಮಾಡಿ ಎಂದು ಕರೆಯುತ್ತೀರಿ ಎಂಬುದನ್ನು ತಂದೆಯು ತಿಳಿಸುತ್ತಾರೆ. ಈಗ ತಂದೆಯು
ಹೇಳುತ್ತಾರೆ- ನನ್ನನ್ನು ನೆನಪು ಮಾಡಿ, ಪವಿತ್ರರಾಗಿ. ತಂದೆಯು ಓದಿಸುತ್ತಾರೆ ನಂತರ ಜೊತೆಯಲ್ಲಿಯೂ
ಕರೆದುಕೊಂಡು ಹೋಗುತ್ತಾರೆ. ಮಕ್ಕಳಿಗೆ ಆಂತರ್ಯದಲ್ಲಿ ಬಹಳ ಖುಷಿಯಿರಬೇಕಾಗಿದೆ. ತಂದೆಯು
ಓದಿಸುತ್ತಿದ್ದಾರೆ, ಕೃಷ್ಣನನ್ನು ತಂದೆಯೆಂದು ಹೇಳುವುದಿಲ್ಲ. ಕೃಷ್ಣನನ್ನು ಪತಿತ-ಪಾವನನೆಂದೂ
ಹೇಳುವುದಿಲ್ಲ. ತಂದೆಯೆಂದು ಯಾರಿಗೆ ಹೇಳಲಾಗುತ್ತದೆ ಮತ್ತು ಅವರು ಹೇಗೆ ಜ್ಞಾನವನ್ನು ಕೊಡುತ್ತಾರೆ
ಎಂಬುದು ಯಾರಿಗೂ ಸಹ ಗೊತ್ತಿಲ್ಲ. ಇದು ನಿಮಗಷ್ಟೇ ತಿಳಿದಿದೆ. ತಂದೆಯು ತಮ್ಮ ಪರಿಚಯವನ್ನು ತಂದೆಗೇ
ಕೊಡುತ್ತಾರೆ. ಹೊಸಬರು ಯಾರೂ ಸಹ ತಂದೆಯೊಂದಿಗೆ ಮಿಲನ ಮಾಡಲು ಸಾಧ್ಯವಿಲ್ಲ. ಸನ್ ಶೋಜ್ ಫಾದರ್ ಎಂದು
ತಂದೆಯು ತಿಳಿಸುತ್ತಾರೆ. ಮಕಳೇ ತಂದೆಯನ್ನು ಪ್ರತ್ಯಕ್ಷಗೊಳಿಸುತ್ತಾರೆ. ತಂದೆಯು ಯಾರ ಜೊತೆಯೂ
ಮಿಲನ ಮಾಡುವ ಅಥವಾ ಮಾತನಾಡುವ ಅವಶ್ಯಕತೆಯಿಲ್ಲ. ಭಲೆ ಇಷ್ಟು ಸಮಯ ತಂದೆಯು ಹೊಸ-ಹೊಸಮಕ್ಕಳೊಂದಿಗೆ
ಮಿಲನ ಮಾಡುತ್ತಿದ್ದರು, ಡ್ರಾಮಾದಲ್ಲಿತ್ತು ಬಹಳಷ್ಟು ಮಂದಿ ಬರುತ್ತಿದ್ದರು.
ಮಿಲಿಟರಿಯಲ್ಲಿರುವವರಿಗೂ ಸಹ ತಂದೆಯು ತಿಳಿಸುತ್ತಾರೆ- ಅವರದ್ದು ಉದ್ಧಾರ ಮಾಡಬೇಕಾಗಿದೆ, ಅವರೂ ಸಹ
ಕರ್ಮ ಕರ್ತವ್ಯವನ್ನು ಮಾಡಲೇಬೇಕಾಗಿದೆ. ಇಲ್ಲದಿದ್ದರೆ ಶತ್ರುಗಳು ದಾಳಿ ಮಾಡಿಬಿಡುತ್ತಾರೆ. ಕೇವಲ
ತಂದೆಯನ್ನು ನೆನಪು ಮಾಡಬೇಕು. ಯಾರು ಯುದ್ಧದ ಮೈದಾನದಲ್ಲಿ ಶರೀರಬಿಡುತ್ತಾರೆ ಅವರು ಸ್ವರ್ಗಕ್ಕೆ
ಹೋಗುತ್ತಾರೆಂಬುದು ಗೀತೆಯಲ್ಲಿದೆ ಆದರೆ ಈ ರೀತಿಯಂತೂ ಹೋಗಲು ಸಾಧ್ಯವಿಲ್ಲ. ಸ್ವರ್ಗಸ್ಥಾಪನೆ
ಮಾಡುವವರು ಯಾವಾಗ ಬರುತ್ತಾರೆಯೋ ಆಗಲೇ ಹೋಗುತ್ತಾರೆ. ಸ್ವರ್ಗವೆಂದರೇನು, ಇದು ಯಾರಿಗೂ ಗೊತ್ತಿಲ್ಲ.
ಈಗ ನೀವು ಮಕ್ಕಳು ಪಂಚವಿಕಾರಗಳೆಂದು ರಾವಣನೊಂದಿಗೆ ಯುದ್ಧ ಮಾಡುತ್ತೀರಿ. ತಂದೆಯು ತಿಳಿಸುತ್ತಾರೆ-
ಅಶರೀರಿಭವ, ತನ್ನನ್ನು ಆತ್ಮನೆಂದು ನಿಶ್ಚಯ ಮಾಡಿಕೊಳ್ಳಿ, ನನ್ನನ್ನು ನೆನಪು ಮಾಡಿ ಎಂದು ಯಾರೂ ಸಹ
ಹೇಳಲು ಸಾಧ್ಯವಿಲ್ಲ.
ಸರ್ವಶಕ್ತಿವಂತ ಎಂದು ಒಬ್ಬ ತಂದೆಯನ್ನು ಬಿಟ್ಟರೆ ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ,
ಬ್ರಹ್ಮಾ-ವಿಷ್ಣು-ಶಂಕರನಿಗೂ ಹೇಳಲು ಸಾಧ್ಯವಿಲ್ಲ. ಸರ್ವಶಕ್ತಿವಂತ ಒಬ್ಬರೇ ತಂದೆಯಾಗಿದ್ದಾರೆ.
ವಲ್ರ್ಡ್ ಆಲ್ಮೈಟಿ ಅಥಾರಿಟಿ, ಜ್ಞಾನಸಾಗರನೆಂದು ಒಬ್ಬ ತಂದೆಗೇ ಹೇಳಲಾಗುತ್ತದೆ. ಈ
ಸಾಧು-ಸಂತರೆಲ್ಲರೂ ಸಹ ಶಾಸ್ತ್ರಗಳ ಅಥಾರಿಟಿಯಾಗಿದ್ದಾರೆ. ಭಕ್ತಿಯ ಅಥಾರಿಟಿಯೆಂದು ಎಂದೂ ಹೇಳಲು
ಸಾಧ್ಯವಿಲ್ಲ, ಶಾಸ್ತ್ರಗಳ ಅಥಾರಿಟಿಯಾಗಿದ್ದಾರೆ. ಅವರದೆಲ್ಲವೂ ಸಹ ಶಾಸ್ತ್ರಗಳ ಮೇಲೆ
ಆಧಾರಿತವಾಗಿದೆ. ಭಕ್ತಿಯ ಫಲವನ್ನು ಭಗವಂತನು ಕೊಡಲು ಬರುತ್ತಾರೆಂದು ತಿಳಿಯುತ್ತಾರೆ. ಭಕ್ತಿಯು
ಯಾವಾಗ ಪ್ರಾರಂಭವಾಯಿತು, ಯಾವಾಗ ಪೂರ್ಣಗೊಳ್ಳುತ್ತದೆ- ಇದು ಗೊತ್ತಿಲ್ಲ. ಭಕ್ತಿಯಿಂದ ಭಗವಂತ
ಖುಷಿಯಾಗುತ್ತಾರೆಂದು ಭಕ್ತರು ತಿಳಿಯುತ್ತಾರೆ. ಭಗವಂತನೊಂದಿಗೆ ಮಿಲನ ಮಾಡುವ ಇಚ್ಛೆಯಿರುತ್ತದೆ
ಆದರೆ ಅವನು ಯಾರ ಭಕ್ತಿಯಿಂದ ರಾಜಿಗೊಳ್ಳುತ್ತಾರೆ. ಖಂಡಿತ ಅವನದ್ದೇ ಭಕ್ತಿ ಮಾಡಿದಾಗಲೇ
ರಾಜಿûಯಾಗುತ್ತಾರೆ. ನೀವು ಶಂಕರನ ಭಕ್ತಿ ಮಾಡಿದರೆ ತಂದೆಯು ಹೇಗೆ ರಾಜಿûಯಾಗಲು ಸಾಧ್ಯ! ಅಥವಾ
ಹನುಮಂತನ ಭಕ್ತಿ ಮಾಡಿದರೆ ತಂದೆಯು ರಾಜಿûಯಾಗುವರೇ? ಸಾಕ್ಷಾತ್ಕಾರವಾಗುತ್ತದೆ ಬಾಕಿ ಇನ್ನೇನೂ
ಸಿಗುವುದಿಲ್ಲ. ತಂದೆಯು ತಿಳಿಸುತ್ತಾರೆ- ನಾನು ಭಲೆ ಸಾಕ್ಷಾತ್ಕಾರ ಮಾಡಿಸುವೆನು ಆದರೆ ನನ್ನೊಂದಿಗೆ
ಮಿಲನವಾಗಲು ಸಾಧ್ಯವಿಲ್ಲ ಆದರೆ ನೀವು ನನ್ನೊಂದಿಗೆ ಮಿಲನ ಮಾಡುತ್ತೀರಿ, ಭಕ್ತರು ಭಗವಂತನೊಂದಿಗೆ
ಮಿಲನ ಮಾಡಲು ಭಕ್ತಿ ಮಾಡುತ್ತಾರೆ. ಭಗವಂತನು ಯಾವ ರೂಪದಲ್ಲಿ ಬಂದು ಮಿಲನ ಮಾಡುತ್ತಾರೆಂದು
ಗೊತ್ತಿಲ್ಲವೆಂದು ಹೇಳುತ್ತಾರೆ. ಇದಕ್ಕೆ ಅಂದಶ್ರದ್ಧೆಯೆಂದು ಹೇಳಲಾಗುತ್ತದೆ. ಈಗ ನೀವು ತಂದೆಯ
ಜೊತೆ ಮಿಲನ ಮಾಡುತ್ತೀರಿ. ಆ ನಿರಾಕಾರ ತಂದೆಯು ಯಾವಾಗ ಶರೀರ ಧಾರಣೆ ಮಾಡುತ್ತಾರೆ, ಆಗ ತಮ್ಮ
ಪರಿಚಯವನ್ನು ಕೊಡುತ್ತಾರೆ- ನಾನು ನಿಮ್ಮ ತಂದೆಯಾಗಿರುವೆನು, 5000 ವರ್ಷಗಳ ಹಿಂದೆಯೂ ಸಹ ನಿಮಗೆ
ರಾಜ್ಯಭಾಗ್ಯವನ್ನು ಕೊಟ್ಟಿದ್ದೆನು ನಂತರ 84 ಜನ್ಮಗಳನ್ನು ಪಡೆಯಬೇಕಾಯಿತು. ಈ ಸೃಷ್ಟಿಚಕ್ರವು
ತಿರುಗುತ್ತಾ ಇದೆ. ದ್ವಾಪರದ ನಂತರ ಬೇರೆ ಧರ್ಮಗಳು ಬರುತ್ತವೆ, ತಮ್ಮ-ತಮ್ಮ ಧರ್ಮವನ್ನು ಬಂದು
ಸ್ಥಾಪನೆ ಮಾಡುತ್ತಾರೆ. ಇದರಲ್ಲೇನೂ ದೊಡ್ಡಸ್ಥಿಕೆಯಿಲ್ಲ. ದೊಡ್ಡಸ್ತಿಕೆ ಯಾರದೂ ಇಲ್ಲ. ಯಾವಾಗ
ತಂದೆಯು ಬಂದು ಬ್ರಹ್ಮನಲ್ಲಿ ಪ್ರವೇಶ ಮಾಡುತ್ತಾರೆಯೋ ಆಗ ದೊಡ್ಡಸ್ತಿಕೆಯಿರುವುದು. ಇಲ್ಲದಿದ್ದರೆ
ಈ ವ್ಯಾಪಾರ ಮಾಡುತ್ತಿದ್ದರು, ಭಗವಂತ ತನ್ನಲ್ಲಿ ಬರುತ್ತಾರೆಂದು ಇವರಿಗೇನಾದರೂ (ಬ್ರಹ್ಮಾ)
ಗೊತ್ತಿತ್ತೆ! ತಂದೆಯು ಪ್ರವೇಶ ಮಾಡಿ ತಿಳಿಸಿದರು- ನಾನು ಇವರಲ್ಲಿ (ಬ್ರಹ್ಮಾ) ಹೇಗೆ ಪ್ರವೇಶ
ಮಾಡಿದೆನು, ಹೇಗೆ ಇವರಿಗೆ ತೋರಿಸಿದೆನು- ನನ್ನದೆಲ್ಲವೂ ನಿನ್ನದು, ನಿನ್ನದೆಲ್ಲವೂ ನನ್ನದು ನೋಡು.
ನೀನು ತನು-ಮನ-ಧನದಿಂದ ನನ್ನ ಸಹಯೋಗಿಯಾಗುತ್ತೀಯಾ, ಅದರ ಬದಲಾಗಿ ನಿನಗೆ ಇದು ಸಿಗುತ್ತದೆ. ನಾನು
ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ ಯಾರಿಗೆ ತಮ್ಮ ಜನ್ಮಗಳ ಬಗ್ಗೆ ಗೊತ್ತಿಲ್ಲ ಎಂದು
ತಂದೆಯು ತಿಳಿಸುತ್ತಾರೆ ಆದರೆ ನಾನು ಯಾವಾಗ ಬರುತ್ತೇನೆ, ಹೇಗೆ ಬರುತ್ತೇನೆಂದು ಯಾರಿಗೂ
ಗೊತ್ತಿಲ್ಲ. ಈಗ ನೀವು ನೋಡುತ್ತೀರಿ- ತಂದೆಯು ಸಾಧಾರಣ ತನುವಿನಲ್ಲಿ ಬಂದಿದ್ದಾರೆ, ಇವರ ಮೂಲಕ ನಮಗೆ
ಜ್ಞಾನ ಮತ್ತು ಯೋಗವನ್ನು ಕಲಿಸುತ್ತಿದ್ದಾರೆ. ಜ್ಞಾನವಂತೂ ಬಹಳ ಸಹಜವಾಗಿದೆ. ನರಕದ ದ್ವಾರವು
ಮುಚ್ಚಲ್ಪಟ್ಟಿದೆ, ಸ್ವರ್ಗದ ದ್ವಾರವು ಹೇಗೆ ತೆರೆಯಲ್ಪಡುತ್ತದೆಯೆಂದು ಇದೂ ಸಹ ನಿಮಗೆ ತಿಳಿದಿದೆ.
ದ್ವಾಪರದಿಂದ ರಾವಣರಾಜ್ಯವು ಪ್ರಾರಂಭವಾಗುತ್ತದೆ ಅಂದರೆ ನರಕದ ದ್ವಾರವು ತೆರೆಯುತ್ತದೆ. ಹೊಸದು
ಮತ್ತು ಹಳೆಯ ಪ್ರಪಂಚವನ್ನು ಅರ್ಧ-ಅರ್ಧವಾಗಿಟ್ಟಿದ್ದಾರೆ. ಅಂದಾಗ ಈಗ ತಂದೆಯು ತಿಳಿಸುತ್ತಾರೆ-
ನಾನು ನೀವು ಮಕ್ಕಳಿಗೆ ಪತಿತರಿಂದ ಪಾವನರಾಗುವ ಯುಕ್ತಿಯನ್ನು ತಿಳಿಸುತ್ತೇನೆ, ತಂದೆಯನ್ನು ನೆನಪು
ಮಾಡಿ ಆಗ ಜನ್ಮ-ಜನ್ಮಾಂತರದ ಪಾಪವು ನಾಶವಾಗಿಬಿಡುತ್ತದೆ. ಈ ಜನ್ಮದ ಪಾಪವನ್ನು ತಿಳಿಸಬೇಕು. ಏನು
ಪಾಪ ಮಾಡಿದಿರಿ? ಏನು ದಾನ-ಪುಣ್ಯ ಮಾಡಿದಿರಿ? ಎಂದು ನೆನಪಿರುತ್ತದೆಯಲ್ಲವೆ. ಕಪ್ಪು ಮತ್ತು ಬಿಳುಪು,
ಶ್ಯಾಮ ಮತ್ತು ಸುಂದರ- ಇದರ ಅರ್ಥವಂತೂ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಹೆಸರು
ಶ್ಯಾಮಸುಂದರನೆಂದಾಗ ಚಿತ್ರದಲ್ಲಿ ಕಪ್ಪಾಗಿ ತೋರಿಸಿದ್ದಾರೆ. ರಘುನಾಥನ ಮಂದಿರದಲ್ಲಿಯೂ ಸಹ ಕಪ್ಪಾಗಿ
ತೋರಿಸುತ್ತಾರೆ. ಹನುಮಂತನ ಮಂದಿರ ನೋಡಿ ಅಂದಾಗ ಎಲ್ಲರನ್ನೂ ಕಪ್ಪಾಗಿ ತೋರಿಸಿದ್ದಾರೆ. ಇದು ಪತಿತ
ಪ್ರಪಂಚವಾಗಿದೆ, ಈಗ ನೀವು ಮಕ್ಕಳಿಗೆ ಶ್ಯಾಮರಿಂದ ಸುಂದರರಾಗಬೇಕೆಂಬ ಚಿಂತೆಯಿರಬೇಕು. ಇದಕ್ಕಾಗಿಯೇ
ನೀವು ತಂದೆಯನ್ನು ನೆನಪು ಮಾಡುತ್ತಿರಿ. ತಂದೆಯು ಹೇಳುತ್ತಾರೆ- ಇದು ಅಂತಿಮ ಜನ್ಮವಾಗಿದೆ,
ನನ್ನನ್ನು ನೆನಪು ಮಾಡಿ ಆಗ ಪಾಪವು ಭಸ್ಮವಾಗುತ್ತದೆ. ತಂದೆಯು ಕರೆದುಕೊಂಡು ಹೋಗಲು ಬಂದಿದ್ದಾರೆ
ಅಂದಾಗ ಶರೀರವನ್ನು ಇಲ್ಲಿಯೇ ಬಿಟ್ಟುಹೋಗುತ್ತೇವೆ, ಶರೀರವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಲು
ಸಾಧ್ಯವೇ! ಪತಿತ ಆತ್ಮರಂತೂ ಹೋಗಲು ಸಾಧ್ಯವಿಲ್ಲ. ತಂದೆಯು ಅವಶ್ಯವಾಗಿ ಪಾವನರಾಗುವ ಯುಕ್ತಿಯನ್ನು
ತಿಳಿಸುತ್ತಾರೆ. ಅಂದಾಗ ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ ಎಂದು
ಹೇಳುತ್ತಾರೆ. ಭಕ್ತಿಮಾರ್ಗದಲ್ಲಿ ಅಂಧಶ್ರದ್ಧೆಯೇ ಇದೆ. ಶಿವಕಾಶಿ ಎನ್ನುತ್ತಾರೆ, ನಂತರ ಶಿವನು
ಗಂಗೆಯನ್ನು ತಂದನು, ಭಾಗೀರಥದಿಂದ ಗಂಗೆಯು ಹೊರಬಂದಳೆಂದು ಹೇಳುತ್ತಾರೆ. ನೀರು ತಲೆಯಿಂದ ಬರಲು ಹೇಗೆ
ಸಾಧ್ಯ! ಭಾಗೀರಥನ ಜಟೆಯಿಂದ ಗಂಗೆಯು ಬರಲು ಅವನೆಲ್ಲಾದರೂ ಪರ್ವತದ ಮೇಲೆ ಕುಳಿತಿದ್ದಾನೆಯೇ!
ಸಾಗರದಿಂದ ಎಳೆಯಲ್ಪಟ್ಟ ನೀರು ಮಳೆಯಾಗಿ ಸುರಿಯುತ್ತದೆ ಇದು ಇಡೀ ಪ್ರಪಂಚದಲ್ಲಿ ನೀರು ಹರಿದುಕೊಂಡು
ಹೋಗುತ್ತದೆ. ನದಿಗಳಂತೂ ಎಲ್ಲಾ ಕಡೆಯೂ ಇದೆ. ಪರ್ವತಗಳಲ್ಲಿ ಮಂಜುಗಡ್ಡೆಯಾಗಿ ನೀರು ಉಳಿಯುತ್ತದೆ,
ಆ ನೀರೂ ಸಹ ಬರುತ್ತದೆ. ಪರ್ವತಗಳ ಗುಹೆಗಳಲ್ಲಿರುವ ನೀರು ಬಂದು ಬಾವಿಗಳಲ್ಲಿ ಸೇರುತ್ತದೆ. ಅದೂ ಸಹ
ಮಳೆಯ ಮೇಲೆ ಆಧಾರಿತವಾಗಿದೆ. ಮಳೆ ಬರದಿದ್ದರೆ ಬಾವಿಗಳು ಒಣಗಿಹೋಗುತ್ತವೆ.
ಬಾಬಾ ನಮ್ಮನ್ನು ಪಾವನರನ್ನಾಗಿ ಮಾಡಿ ಸ್ವರ್ಗಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ.
ಸ್ವರ್ಗ, ಕೃಷ್ಣಪುರಿಯ ಆಸೆಯೇ ಇರುತ್ತದೆ, ವಿಷ್ಣುಪುರಿಯ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ.
ಎಲ್ಲಿ ನೋಡಿದರೂ ಕೃಷ್ಣನೇ ಕೃಷ್ಣನಿದ್ದಾನೆಂದು ಕೃಷ್ಣನ ಭಕ್ತರು ಹೇಳುತ್ತಾರೆ. ಅರೆ! ಪರಮಾತ್ಮ
ಸರ್ವವ್ಯಾಪಿ ಎಂದು ಹೇಳಿದಾಗ ಎಲ್ಲಿ ನೋಡಿದರೂ ಪರಮಾತ್ಮನೇ ಪರಮಾತ್ಮನಿದ್ದಾನೆಂದು ಏಕೆ
ಹೇಳುವುದಿಲ್ಲ! ಎಲ್ಲವೂ ಅವನದೇ ರೂಪವಾಗಿದೆ ಎಂದು ಭಕ್ತರು ಹೇಳುತ್ತಾರೆ. ಅವನೇ ಈ ಲೀಲೆಯೆಲ್ಲವನ್ನೂ
ನಡೆಸುತ್ತಿದ್ದಾನೆಂದು ಹೇಳುತ್ತಾರೆ. ಭಗವಂತನು ಲೀಲೆಯನ್ನು ತೋರಿಸಲು ರೂಪಗಳನ್ನು ಧಾರಣೆ
ಮಾಡುತ್ತಾನೆ ಅಂದಾಗ ಖಂಡಿತ ಈಗ ಲೀಲೆಯನ್ನು ತೋರಿಸಬೇಕಲ್ಲವೆ. ಪರಮಾತ್ಮನು ಪ್ರಪಂಚವನ್ನು
ಸ್ವರ್ಗದಲ್ಲಿ ನೋಡಿರಿ, ಅಲ್ಲಿ ಯಾವುದೇ ಕೊಳಕಿನ ಮಾತಿರುವುದಿಲ್ಲ. ಇಲ್ಲಂತೂ ಕೊಳಕೇ ಕೊಳಕು
ಇರುವುದು. ನಂತರ ಪರಮಾತ್ಮನು ಸರ್ವವ್ಯಾಪಿ ಎಂದು ಹೇಳುತ್ತಾರೆ, ಪರಮಾತ್ಮನೇ ಸುಖವನ್ನು ಕೊಡುತ್ತಾರೆ.
ಮಗುವು ಜನ್ಮವಾಯಿತೆಂದರೆ ಸುಖ ಸಿಕ್ಕಿತು ನಂತರ ಶರೀರಬಿಟ್ಟರೆ ದುಃಖವಾಯಿತು. ಅರೆ! ಭಗವಂತನು ನಿಮಗೆ
ಕೊಟ್ಟನು, ನಂತರ ತೆಗೆದುಕೊಂಡನೆಂದರೆ ಇದರಲ್ಲಿ ಅಳುವ ಅವಶ್ಯಕತೆಯೇನು! ಸತ್ಯಯುಗದಲ್ಲಿ ಅಳುವುದು
ಮುಂತಾದ ದುಃಖವಿರುವುದಿಲ್ಲ. ಮೋಹಜೀತರಾಜನ ದೃಷ್ಟಾಂತವನ್ನು ತೋರಿಸಿದ್ದಾರೆ. ಇದೆಲ್ಲಾ ಸುಳ್ಳು
ದೃಷ್ಟಾಂತವಾಗಿದೆ, ಇದರಲ್ಲಿ ಸಾರವೇನೂ ಇಲ್ಲ. ಸತ್ಯಯುಗದಲ್ಲಿ ಋಷಿ-ಮುನಿಗಳಿರುವುದಿಲ್ಲ. ಈ ರೀತಿ
ಮೋಹಜೀತ ರಾಜನೂ ಸಹ ಇರಲು ಸಾಧ್ಯವಿಲ್ಲ. ಭಗವಾನುವಾಚ- ಯಾದವರು, ಕೌರವರು ಮತ್ತು ಪಾಂಡವರು ಏನು ಮಾಡಿ
ಹೋದರು? ನಿಮ್ಮ ಬುದ್ಧಿಯೋಗವು ತಂದೆಯ ಜೊತೆಯಲ್ಲಿಲ್ಲ ಎಂದರೆ ಆಗ ತಂದೆಯನ್ನು ನೆನಪು ಮಾಡಿ ಎಂದು
ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ- ನಾನು ಇವರ (ಬ್ರಹ್ಮಾ) ಮೂಲಕ ಭಾರತವನ್ನು
ಸ್ವರ್ಗವನ್ನಾಗಿ ಮಾಡುತ್ತೇನೆ. ಈಗ ಯಾರು ಪವಿತ್ರರಾಗುತ್ತಾರೆಯೋ ಅವರು ಪವಿತ್ರ ಪ್ರಪಂಚದ
ಮಾಲೀಕರಾಗುತ್ತಾರೆ. ಯಾರೇ ಸಿಕ್ಕಿದರೂ ಸಹ ಅವರಿಗೆ ತಿಳಿಸಿ, ತಂದೆಯು ತಿಳಿಸುತ್ತಾರೆ-
ನನ್ನೊಬ್ಬನನ್ನೇ ನೆನಪು ಮಾಡಿ, ನನ್ನ ಜೊತೆ ಪ್ರೀತಿಯನ್ನಿಟ್ಟುಕೊಳ್ಳಿ, ಮತ್ತ್ಯಾರನ್ನೂ ನೆನಪು
ಮಾಡಬೇಡಿ. ಇದು ಅವ್ಯಭಿಚಾರಿ ನೆನಪಾಗಿದೆ. ಇಲ್ಲಿ ಯಾವುದೇ ನೀರಿನ ಧಾರೆ ಎರೆಯುವ ಮಾತಿಲ್ಲ.
ಭಕ್ತಿಮಾರ್ಗದಲ್ಲಿ ಈ ಕೆಲಸಗಳನ್ನು ಮಾಡುತ್ತಾರೆ, ನೆನಪು ಮಾಡುತ್ತಾರಲ್ಲವೆ. ನನ್ನನ್ನು ನೆನಪು
ಮಾಡಿ, ತನ್ನ ಪತಿಯನ್ನು ನೆನಪು ಮಾಡಬೇಡಿ ಎಂದು ಗುರುಗಳು ಹೇಳುತ್ತಾರೆ. ನೀವು ಮಕ್ಕಳಿಗೆ ಎಷ್ಟೊಂದು
ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಬಾಬಾ ಎಂದರೆ ಭಗವಂತ. ಭಗವಂತ ನಿರಾಕಾರನಾಗಿದ್ದಾರೆ,
ಕೃಷ್ಣನಿಗೆ ಎಲ್ಲರೂ ಭಗವಂತನೆಂದು ಹೇಳುವುದಿಲ್ಲ. ಕೃಷ್ಣನಂತೂ ಮಗುವಾಗಿದ್ದಾನೆ, ಶಿವತಂದೆಯು
ಇವರಲ್ಲಿ ಇಲ್ಲದಿದ್ದರೆ ನೀವು ಇಲ್ಲಿ ಇರುತ್ತಿದ್ದಿರೇನು? ಶಿವತಂದೆಯು ಇವರ (ಬ್ರಹ್ಮಾ) ಮೂಲಕ
ತನ್ನವರನ್ನಾಗಿ ಮಾಡಿಕೊಂಡಿದ್ದಾರೆ. ಇವರು (ಬ್ರಹ್ಮಾ) ತಾಯಿಯೂ ಆಗಿದ್ದಾರೆ, ತಂದೆಯೂ ಆಗಿದ್ದಾರೆ,
ತಾಯಿ ಸಾಕಾರದಲ್ಲಿ ಬೇಕಲ್ಲವೆ. ಅವರಾದರೂ (ಶಿವತಂದೆ) ತಂದೆಯಾಗಿದ್ದಾರೆ ಅಂದಾಗ ಇಂತಹ ಮಾತುಗಳನ್ನು
ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ.
ನೀವು ಮಕ್ಕಳು ಎಂದೂ ಯಾವ ಮಾತಿನಲ್ಲಿಯೂ ಸಹ ಗೊಂದಲಕ್ಕೊಳಗಾಗಬಾರದು. ವಿದ್ಯೆಯನ್ನೆಂದೂ ಬಿಡಬಾರದು.
ಅನೇಕ ಮಕ್ಕಳು ಸಂಗದೋಷದಲ್ಲಿ ಬಂದು ಮುನಿಸಿಕೊಂಡು ಅಥವಾ ಜಗಳ ಮಾಡಿಕೊಂಡು ತನ್ನ ಪಾಠಶಾಲೆಯನ್ನು
ತೆರೆಯುತ್ತಾರೆ ಆದರೆ ಇದು ಮೂರ್ಖತನವಾಗಿದೆ. ಮುನಿಸಿಕೊಂಡಾಗ ಪಾಠಶಾಲೆಯನ್ನು ತೆರೆಯಲು
ಯೋಗ್ಯರಾಗಿರುವುದಿಲ್ಲ, ಆ ನಿಮ್ಮ ದೇಹಾಭಿಮಾನವು ನಡೆಯುವುದೇ ಇಲ್ಲ ಏಕೆಂದರೆ ಬುದ್ಧಿಯಲ್ಲಿ
ಶತ್ರುತ್ವವಿದೆ ಅಂದಾಗ ಅದೇ ನೆನಪಿಗೆ ಬರುತ್ತದೆ. ಯಾರಿಗೂ ಏನನ್ನೂ ತಿಳಿಸಿಕೊಡಲು ಆಗುವುದಿಲ್ಲ.
ಯಾರಿಗೆ ಜ್ಞಾನ ಕೊಡುತ್ತೀರೋ ಆವರು ಮುಂದುವರೆಯುತ್ತಾರೆ, ಸ್ವಯಂ ತಾನೇ ಕೆಳಗೆ ಬೀಳುತ್ತಾರೆ- ಈ
ರೀತಿಯೂ ಆಗುತ್ತಿರುತ್ತದೆ. ಸ್ವಯಂ ತಿಳಿದುಕೊಳ್ಳುತ್ತಾರೆ- ನನಗಿಂತ ಅವರ ಸ್ಥಿತಿಯು ಚೆನ್ನಾಗಿದೆ,
ಓದುವವನು ರಾಜನಾಗಿ, ಓದಿಸುವವರು ದಾಸ-ದಾಸಿಯರಾಗುತ್ತಾರೆ, ಈ ರೀತಿಯೂ ಸಹ ಇರುತ್ತದೆ. ಪುರುಷಾರ್ಥ
ಮಾಡಿ ತಂದೆಯ ಕೊರಳಿಗೆ ಹಾರವಾಗಬೇಕು. ಬಾಬಾ, ಬದುಕಿದ್ದಾಗಲೇ ನಿಮ್ಮವನಾಗಿದ್ದೇನೆ, ತಂದೆಯ
ನೆನಪಿನಿಂದಲೇ ದೋಣಿಯು ಪಾರಾಗಿಬಿಡುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಎಂದೂ ಯಾವ
ಮಾತಿನಲ್ಲಿಯೂ ಗೊಂದಲಕ್ಕೊಳಗಾಗಬಾರದು. ಪರಸ್ಪರ ಮುನಿಸಿಕೊಂಡು ವಿದ್ಯೆಯನ್ನು ಬಿಡಬಾರದು.
ಶತ್ರುತ್ವವನ್ನಿಟ್ಟುಕೊಳ್ಳುವುದು ದೇಹಾಭಿಮಾನವಾಗಿದೆ. ಸಂಗದೋಷದಿಂದ ತನ್ನನ್ನು ಬಹಳ-ಬಹಳ ಸಂಭಾಲನೆ
ಮಾಡಿಕೊಳ್ಳಬೇಕು. ಪಾವನರಾಗಬೇಕು, ತಮ್ಮ ಚಲನೆಯಿಂದ ತಂದೆಯನ್ನು ಪ್ರತ್ಯಕ್ಷಗೊಳಿಸಬೇಕು.
2. ಪ್ರೀತಿ
ಬುದ್ಧಿಯವರಾಗಿ ಒಬ್ಬ ತಂದೆಯ ಅವ್ಯಭಿಚಾರಿ ನೆನಪಿನಲ್ಲಿರಬೇಕು. ತನು-ಮನ-ಧನದಿಂದ ತಂದೆಯ
ಕಾರ್ಯದಲ್ಲಿ ಸಹಯೋಗಿಯಾಗಬೇಕು.
ವರದಾನ:
ನ್ಯಾರಾ ಮತ್ತು
ಪ್ಯಾರಾ ಆಗುವಂತಹ ರಹಸ್ಯ ತಿಳಿದು ರಾಜಿಯಾಗಿರುವಂತಹ ರಾಜಯುಕ್ತ ಭವ
ಯಾವ ಮಕ್ಕಳು
ಪ್ರವೃತ್ತಿಯಲ್ಲಿರುತ್ತಾ ನ್ಯಾರಾ ಮತ್ತು ಪ್ಯಾರಾ ಆಗುವಂತಹ ರಹಸ್ಯ ತಿಳಿದಿರುತ್ತಾರೆ ಅವರು ಸದಾ
ಸ್ವಯಂಗೆ ಸ್ವಯಂ ರಾಜಿಯಾಗಿರುತ್ತಾರೆ. ಪ್ರವೃತ್ತಿಯನ್ನೂ ಸಹ ರಾಜಿಯಾಗಿಡುತ್ತಾರೆ. ಜೊತೆ-ಜೊತೆ
ಸತ್ಯ ಹೃದಯವಿರುವ ಕಾರಣ ಸಾಹೇಬ ಕೂಡ ಸದಾ ಅವರ ಮೇಲೆ ರಾಜಿಯಾಗಿರುತ್ತಾನೆ. ಈ ರೀತಿ
ರಾಜಿಯಾಗಿರುವಂತಹ ರಾಜಯುಕ್ತ ಮಕ್ಕಳಿಗೆ ತಮ್ಮ ಪ್ರತಿ ಅಥವಾ ಅನ್ಯ ಯಾರ ಬಗ್ಗೆಯೂ ನ್ಯಾಯ
ಕೊಡುವಂತಹವರಾಗುವ ಅವಶ್ಯಕತೆಯಿರುವುದಿಲ್ಲ ಏಕೆಂದರೆ ಅವರು ತಮ್ಮ ನಿರ್ಣಯ ತಮಗೆ ತಾವೇ ಮಾಡುತ್ತಾರೆ
ಆದ್ದರಿಂದ ಅವರಿಗೆ ಯಾರೇ ನ್ಯಾಯ ಕೊಡುವಂತಹವರ ವಕೀಲ ಅಥವಾ ಜಡ್ಜ್ ಆಗುವಂತಹ ಅವಶ್ಯಕತೆಯೇ
ಬರುವುದಿಲ್ಲ.
ಸ್ಲೋಗನ್:
ಸೇವೆಯಿಂದ ಯಾವ
ಆರ್ಶೀವಾದ ಸಿಗುತ್ತದೆ - ಆ ಆರ್ಶೀವಾದವೇ ಆರೋಗ್ಯವಂತರಾಗಿರಲು ಆಧಾರವಾಗಿದೆ.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ಹೇಗೆ ಸ್ಥೂಲ ಶರೀರದಲ್ಲಿ
ವಿಶೇಷ ಶ್ವಾಸ ನಡೆಯುವುದು ಅವಶ್ಯಕವಾಗಿದೆ. ಶ್ವಾಸವಿಲ್ಲವೆಂದರೆ ಜೀವನವಿಲ್ಲ, ಇಂತಹ ಬ್ರಾಹ್ಮಣ
ಜೀವನದ ಶ್ವಾಸ ಪವಿತ್ರತೆಯಾಗಿದೆ. 21 ಜನ್ಮಗಳ ಪ್ರಾಲಬ್ಧದ ಆಧಾರ ಪವಿತ್ರತೆಯಾಗಿದೆ. ಆತ್ಮ ಮತ್ತು
ಪರಮಾತ್ಮನ ಮಿಲನದ ಆಧಾರ ಪವಿತ್ರ ಬುದ್ಧಿಯಾಗಿದೆ. ಸಂಗಮಯುಗೀ ಪ್ರಾಪ್ತಿಗಳ ಆಧಾರ ಮತ್ತು
ಭವಿಷ್ಯದಲ್ಲಿ ಪೂಜ್ಯ ಪದವಿ ಪಡೆಯುವುದಕ್ಕೆ ಆಧಾರ ಪವಿತ್ರತೆಯಾಗಿದೆ. ಅದಕ್ಕೆ ಪವಿತ್ರತೆಯ
ವ್ಯಕ್ತಿತ್ವವನ್ನು ವರದಾನದ ರೂಪದಲ್ಲಿ ಧಾರಣೆ ಮಾಡಿ.