06.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಯಾವಾಗ ನೀವು ಸಂಪೂರ್ಣ ಪಾವನರಾಗುವಿರೋ ಆಗಲೇ ತಂದೆಯು ನಿಮ್ಮ ಬಲಿಹಾರಿಯನ್ನು ಸ್ವೀಕಾರ ಮಾಡುತ್ತಾರೆ, ತಮ್ಮ ಹೃದಯದೊಂದಿಗೆ ಕೇಳಿಕೊಳ್ಳಿ - ನಾವು ಎಷ್ಟು ಪಾವನರಾಗಿದ್ದೇವೆ?”

ಪ್ರಶ್ನೆ:
ನೀವು ಮಕ್ಕಳು ಈಗ ಖುಷಿ-ಖುಷಿಯಿಂದ ತಂದೆಗೆ ಬಲಿಹಾರಿಯಾಗುತ್ತೀರಿ - ಏಕೆ?

ಉತ್ತರ:
ಏಕೆಂದರೆ ನಿಮಗೆ ತಿಳಿದಿದೆ - ನಾವೀಗ ಬಲಿಹಾರಿಯಾದರೆ ತಂದೆಯು 21 ಜನ್ಮಗಳಿಗಾಗಿ ಬಲಿಹಾರಿಯಾಗುತ್ತಾರೆ. ನೀವು ಮಕ್ಕಳಿಗೆ ಇದೂ ತಿಳಿದಿದೆ - ಈಗ ಈ ಅವಿನಾಶಿ ರುದ್ರ ಜ್ಞಾನ ಯಜ್ಞದಲ್ಲಿ ಎಲ್ಲಾ ಮನುಷ್ಯ ಮಾತ್ರರು ಸ್ವಾಹಾ ಆಗಲೇಬೇಕಾಗಿದೆ. ಆದ್ದರಿಂದ ನೀವು ಮೊದಲೇ ಖುಷಿಯಿಂದ ತಮ್ಮ ತನು, ಮನ, ಧನ ಎಲ್ಲವನ್ನೂ ಸ್ವಾಹಾ ಮಾಡಿ ಸಫಲ ಮಾಡಿಕೊಳ್ಳುತ್ತೀರಿ.

ಗೀತೆ:
ಮುಖವನ್ನು ನೋಡಿಕೋ ಪ್ರಾಣಿ..............

ಓಂ ಶಾಂತಿ.
ಶಿವ ಭಗವಾನುವಾಚ. ಅವಶ್ಯವಾಗಿ ತನ್ನ ಮಕ್ಕಳ ಪ್ರತಿಯೇ ಜ್ಞಾನವನ್ನು ಕಲಿಸುತ್ತಾರೆ ಹಾಗೂ ಶ್ರೀಮತ ಕೊಡುತ್ತಾರೆ - ಹೇ ಮಕ್ಕಳೇ ಅಥವಾ ಹೇ ಪ್ರಾಣಿ, ಶರೀರದಿಂದ ಪ್ರಾಣವು ಹೊರಟು ಹೋಗುತ್ತದೆ ಅಥವಾ ಆತ್ಮವು ಹೊರಟು ಹೋಗುತ್ತದೆ ಎಂದರೆ ಇವೆರಡೂ ಒಂದೇ ಮಾತಾಗಿದೆ. ಹೇ ಪ್ರಾಣಿ ಅಥವಾ ಹೇ ಮಕ್ಕಳೇ ನೀವು ನೋಡಿಕೊಂಡಿರಾ - ನನ್ನ ಜೀವನದಲ್ಲಿ ಎಷ್ಟು ಪಾಪವಿತ್ತು ಮತ್ತು ಎಷ್ಟು ಪುಣ್ಯವಿತ್ತು! ಲೆಕ್ಕವನ್ನಂತೂ ತಿಳಿಸಿದ್ದೇವೆ - ನಿಮ್ಮ ಜೀವನದಲ್ಲಿ ಅರ್ಧ ಕಲ್ಪ ಪುಣ್ಯ, ಅರ್ಧ ಕಲ್ಪ ಪಾಪವಾಗುತ್ತದೆ. ಪುಣ್ಯದ ಆಸ್ತಿಯು ತಂದೆಯಿಂದಲೇ ಸಿಗುತ್ತದೆ ಯಾರಿಗೆ ರಾಮನೆಂದು ಹೇಳುತ್ತಾರೆ. ರಾಮನೆಂದು ನಿರಾಕಾರನಿಗೇ ಹೇಳಲಾಗುತ್ತದೆ, ಸೀತಾ ರಾಮನಿಗಲ್ಲ ಅಂದಾಗ ಈಗ ನೀವು ಮಕ್ಕಳು ಯಾರು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರೋ ನಿಮ್ಮ ಬುದ್ಧಿಯಲ್ಲಿ ಬಂದಿದೆ - ಅವಶ್ಯವಾಗಿ ಅರ್ಧ ಕಲ್ಪ ನಾವು ಪುಣ್ಯಾತ್ಮರಾಗಿದ್ದೆವು ನಂತರ ಅರ್ಧ ಕಲ್ಪ ಪಾಪಾತ್ಮರಾದೆವು, ಈಗ ಪುಣ್ಯಾತ್ಮರಾಗಬೇಕಾಗಿದೆ. ಎಷ್ಟು ಪುಣ್ಯಾತ್ಮರಾಗಿದ್ದೇವೆ ಎಂಬುದು ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ಕೇಳಿಕೊಳ್ಳಿ. ಪಾಪಾತ್ಮರಿಂದ ಹೇಗೆ ಪುಣ್ಯಾತ್ಮರಾಗುತ್ತೀರಿ.... ಅದನ್ನೂ ಸಹ ತಂದೆಯು ತಿಳಿಸಿದ್ದಾರೆ. ಯಜ್ಞ, ತಪ ಇತ್ಯಾದಿಗಳಿಂದ ನೀವು ಪುಣ್ಯಾತ್ಮರಾಗುವುದಿಲ್ಲ, ಅದು ಭಕ್ತಿ ಮಾರ್ಗವಾಗಿದೆ, ಅದರಿಂದ ಯಾವುದೇ ಮನುಷ್ಯರು ಪುಣ್ಯಾತ್ಮರಾಗುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ನಾವು ಪುಣ್ಯಾತ್ಮರಾಗುತ್ತಿದ್ದೇವೆ ಎಂದು. ಆಸುರೀ ಮತದಿಂದ ಪಾಪಾತ್ಮರಾಗುತ್ತಾ-ಆಗುತ್ತಾ ಏಣಿಯನ್ನು ಇಳಿಯುತ್ತಲೇ ಬಂದಿದ್ದೀರಿ. ಎಷ್ಟು ಸಮಯ ನಾವು ಪುಣ್ಯಾತ್ಮರಾಗುತ್ತೇವೆ ಅಥವಾ ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎಂಬುದು ಯಾರಿಗೂ ತಿಳಿದಿಲ್ಲ. ಆ ತಂದೆಯನ್ನು ಎಲ್ಲಾ ಮನುಷ್ಯರು ನೆನಪು ಮಾಡುತ್ತಾರೆ. ಅವರಿಗೇ ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರನಿಗೆ ಪರಮಾತ್ಮನೆಂದು ಹೇಳುವುದಿಲ್ಲ ಹಾಗೂ ಮತ್ತ್ಯಾರಿಗೂ ಪರಮಾತ್ಮನೆಂದು ಹೇಳಲು ಸಾಧ್ಯವಿಲ್ಲ. ಭಲೆ ಈ ಸಮಯದಲ್ಲಿ ನೀವು ಪ್ರಜಾಪಿತ ಬ್ರಹ್ಮನೆಂದು ಹೇಳುತ್ತೀರಿ ಆದರೆ ಪ್ರಜಾಪಿತನನ್ನು ಎಂದೂ ಭಕ್ತಿಮಾರ್ಗದಲ್ಲಿ ನೆನಪು ಮಾಡುವುದಿಲ್ಲ. ಎಲ್ಲರೂ ನಿರಾಕಾರ ತಂದೆಯನ್ನೇ ಓ ಗಾಡ್ ಫಾದರ್ ಎಂದು ನೆನಪು ಮಾಡುತ್ತಾರೆ. ಓ ಭಗವಂತ ಎಂಬ ಶಬ್ಧವೇ ಹೊರ ಬರುತ್ತದೆ, ಒಬ್ಬರನ್ನೇ ನೆನಪು ಮಾಡುತ್ತಾರೆ. ಮನುಷ್ಯರು ತಮ್ಮನ್ನು ಗಾಡ್ಫಾದರ್ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಅಥವಾ ಬ್ರಹ್ಮಾ, ವಿಷ್ಣು, ಶಂಕರನೂ ಸಹ ತಮಗೆ ಗಾಡ್ ಫಾದರ್ ಎಂದು ಹೇಳಿಕೊಳ್ಳುವುದಿಲ್ಲ. ಅವರ ಶರೀರಕ್ಕೆ ಹೆಸರಂತೂ ಇದೆಯಲ್ಲವೆ. ಒಬ್ಬರೇ ಗಾಡ್ಫಾದರ್ ಆಗಿದ್ದಾರೆ, ಅವರಿಗೆ ತಮ್ಮ ಶರೀರವಿಲ್ಲ. ಭಕ್ತಿ ಮಾರ್ಗದಲ್ಲಿಯೂ ಶಿವನಿಗೆ ಬಹಳ ಪೂಜೆ ಮಾಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಶಿವ ತಂದೆಯು ಈ ಶರೀರದ ಮೂಲಕ ನಮ್ಮೊಂದಿಗೆ ಮಾತನಾಡುತ್ತಾರೆ ಹೇ ಮಕ್ಕಳೇ ಎಂದು. ಎಷ್ಟು ಪ್ರೀತಿಯಿಂದ ಹೇಳುತ್ತಾರೆ. ನಾನು ಸರ್ವರ ಪತಿತ-ಪಾವನ, ಸದ್ಗತಿದಾತನಾಗಿದ್ದೇನೆಂದು ತಿಳಿದುಕೊಳ್ಳುತ್ತಾರೆ. ಮನುಷ್ಯರು ತಂದೆಯ ಮಹಿಮೆ ಮಾಡುತ್ತಾರಲ್ಲವೆ. ಆದರೆ 5000 ವರ್ಷಗಳ ನಂತರ ಬರುತ್ತಾರೆಂದು ಅವರಿಗೆ ಗೊತ್ತಿಲ್ಲ, ಅವಶ್ಯವಾಗಿ ಕಲಿಯುಗದ ಅಂತ್ಯವಾದಾಗಲೇ ಬರುತ್ತಾರೆ. ಈಗ ಕಲಿಯುಗದ ಅಂತ್ಯವಾಗಿದೆ ಆದ್ದರಿಂದ ಈಗ ತಂದೆಯು ಬಂದಿದ್ದಾರೆ, ನಿಮಗೆ ಕೃಷ್ಣನು ಓದಿಸುವುದಿಲ್ಲ. ಶ್ರೀಮತ ಸಿಗುತ್ತಿದೆ, ಇದು ಕೃಷ್ಣನದಲ್ಲ. ಕೃಷ್ಣನ ಆತ್ಮವೂ ಸಹ ಶ್ರೀಮತದಿಂದಲೇ ದೇವತೆಯಾಗಿದ್ದರು ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ನೀವೀಗ ಆಸುರೀ ಮತದವರಾಗಿದ್ದೀರಿ. ತಂದೆಯು ತಿಳಿಸುತ್ತಾರೆ, ನಿಮ್ಮ ಚಕ್ರವು ಪೂರ್ಣವಾದಾಗಲೇ ನಾನು ಬರುತ್ತೇನೆ. ನೀವೇ ಆದಿಯಲ್ಲಿ ಬಂದಿದ್ದಿರಿ, ಈಗ ಜಡ ಜಡೀಭೂತ ಸ್ಥಿತಿಯಲ್ಲಿದ್ದೀರಿ. ಹಳೆಯ ವೃಕ್ಷವು ಜಡ ಜಡೀಭೂತವಾಗುತ್ತಿದೆಯೆಂದರೆ ಇಡೀ ವೃಕ್ಷವೇ ಹಳೆಯದಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ನೀವು ತಮೋಪ್ರಧಾನರಾಗಿದ್ದರಿಂದ ಎಲ್ಲರೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಇದು ಮನುಷ್ಯ ಸೃಷ್ಟಿಯ ವಿಭಿನ್ನ ಧರ್ಮಗಳ ವೃಕ್ಷವಾಗಿದೆ, ಇದಕ್ಕೆ ತಲೆ ಕೆಳಕಾದ ವೃಕ್ಷವೆಂದು ಹೇಳುತ್ತಾರೆ ಏಕೆಂದರೆ ಇದರ ಬೀಜವು ಮೇಲಿದ್ದಾರೆ, ಆ ಬೀಜದಿಂದಲೇ ಇಡೀ ವೃಕ್ಷವು ಬರುತ್ತದೆ. ಮನುಷ್ಯರು “ಗಾಡ್ಫಾದರ್” ಎಂದು ಹೇಳುತ್ತಾರೆ. ಆತ್ಮವು ಹೇಳುತ್ತದೆ - ಆತ್ಮನ ಹೆಸರು ಆತ್ಮವೆಂದೇ ಆಗಿದೆ. ಆತ್ಮವು ಶರೀರದಲ್ಲಿ ಬಂದಾಗ ಶರೀರಕ್ಕೆ ಹೆಸರನ್ನಿಡಲಾಗುತ್ತದೆ, ಆಟವು ನಡೆಯುತ್ತದೆ. ಆತ್ಮಗಳ ಪ್ರಪಂಚದಲ್ಲಿ ಆಟವು ನಡೆಯುವುದಿಲ್ಲ. ಆಟದ ಮೈದಾನವು ಇದೇ ಆಗಿದೆ. ನಾಟಕದಲ್ಲಿ ಬೆಳಕು ಇತ್ಯಾದಿಗಳೆಲ್ಲವೂ ಇರುತ್ತದೆ. ಬಾಕಿ ಎಲ್ಲಿ ಆತ್ಮರ ನಿವಾಸ ಸ್ಥಾನವಾಗಿದೆಯೋ ಅಲ್ಲಿ ಸೂರ್ಯ, ಚಂದ್ರರಿರುವುದಿಲ್ಲ. ಡ್ರಾಮಾದ ಆಟವು ನಡೆಯುವುದಿಲ್ಲ. ಇಲ್ಲಿಯೇ ಹಗಲು-ರಾತ್ರಿಗಳಾಗುತ್ತವೆ. ಸೂಕ್ಷ್ಮವತನ ಹಾಗೂ ಮೂಲವತನದಲ್ಲಿ ರಾತ್ರಿ-ಹಗಲು ಆಗುವುದಿಲ್ಲ. ಇದು ಕರ್ಮ ಕ್ಷೇತ್ರವಾಗಿದೆ, ಇದರಲ್ಲಿ ಮನುಷ್ಯರೇ ಒಳ್ಳೆಯ ಕರ್ಮವನ್ನೂ ಮಾಡುತ್ತಾರೆ, ಕೆಟ್ಟ ಕರ್ಮವನ್ನೂ ಮಾಡುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಒಳ್ಳೆಯ ಕರ್ಮಗಳಾಗುತ್ತವೆ ಏಕೆಂದರೆ ಅಲ್ಲಿ ಪಂಚ ವಿಕಾರರೂಪಿ ರಾವಣ ರಾಜ್ಯವೇ ಇರುವುದಿಲ್ಲ. ತಂದೆಯು ಕುಳಿತು ಕರ್ಮ, ಅಕರ್ಮ, ವಿಕರ್ಮದ ರಹಸ್ಯವನ್ನು ತಿಳಿಸುತ್ತಾರೆ. ಕರ್ಮವನ್ನಂತೂ ಮಾಡಲೇಬೇಕಾಗಿದೆ, ಇದು ಕರ್ಮ ಕ್ಷೇತ್ರವಾಗಿದೆ. ಸತ್ಯಯುಗದಲ್ಲಿ ಮನುಷ್ಯರು ಯಾವ ಕರ್ಮ ಮಾಡುವರೋ ಅದು ಅಕರ್ಮವಾಗುತ್ತದೆ. ಅಲ್ಲಿ ರಾವಣ ರಾಜ್ಯವೇ ಇರುವುದಿಲ್ಲ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಸ್ವರ್ಗವಿಲ್ಲ, ಸತ್ಯಯುಗದಲ್ಲಿ ಒಂದೇ ಭಾರತವಿತ್ತು ಮತ್ತ್ಯಾವುದೇ ಖಂಡವಿರಲಿಲ್ಲ. ಸ್ವರ್ಗದ ರಚಯಿತನೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ತಂದೆಯು ಸ್ವರ್ಗವನ್ನೇ ರಚಿಸುತ್ತಾರೆ. ಇದನ್ನು ಎಲ್ಲಾ ದೇಶದವರು ತಿಳಿದುಕೊಂಡಿದ್ದಾರೆ - ಭಾರತವು ಪ್ರಾಚೀನ ದೇಶವಾಗಿದೆ, ಮೊಟ್ಟ ಮೊದಲಿಗೆ ಕೇವಲ ಭಾರತವೇ ಇತ್ತು, ಇದನ್ನು ಯಾರೂ ತಿಳಿದುಕೊಂಡಿಲ್ಲ. ಈಗಂತೂ ಇಲ್ಲ ಅಲ್ಲವೆ. ಇದು 5000 ವರ್ಷಗಳ ಮಾತಾಗಿದೆ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು ಎಂದು ಹೇಳುತ್ತಾರೆ. ರಚಯಿತನು ಅವಶ್ಯವಾಗಿ ರಚನೆಯನ್ನು ರಚಿಸುತ್ತಾರೆ. ತಮೋಪ್ರಧಾನ ಬುದ್ಧಿಯವರಾಗಿರುವ ಕಾರಣ ಇಷ್ಟನ್ನೂ ತಿಳಿದುಕೊಳ್ಳುವುದಿಲ್ಲ. ಭಾರತವು ಎಲ್ಲದಕ್ಕಿಂತ ಶ್ರೇಷ್ಠ ಖಂಡವಾಗಿದೆ. ಮನುಷ್ಯ ಸೃಷ್ಟಿಯು ಮೊದಲ ಶಾಖೆಯಾಗಿದೆ, ಇದೂ ಸಹ ನಾಟಕವು ಮಾಡಲ್ಪಟ್ಟಿದೆ. ಸಾಹುಕಾರರು ಬಡವರಿಗೆ ಸಹಯೋಗ ನೀಡುತ್ತಾರೆ, ಇದೂ ನಡೆದು ಬರುತ್ತದೆ. ಭಕ್ತಿ ಮಾರ್ಗದಲ್ಲಿಯೂ ಸಾಹುಕಾರರು ಬಡವರಿಗೆ ದಾನ ಮಾಡುತ್ತಾರೆ ಆದರೆ ಇದು ಪತಿತ ಪ್ರಪಂಚವಾಗಿದೆ ಆದ್ದರಿಂದ ಯಾರ್ಯಾರು ಏನೇನು ದಾನ-ಪುಣ್ಯ ಮಾಡುವರೋ ಪತಿತರೇ ಮಾಡುತ್ತಾರೆ. ಯಾರಿಗೆ ದಾನ ಮಾಡುವರೋ ಅವರೂ ಪತಿತರಾಗಿದ್ದಾರೆ. ಪತಿತರು ಪತಿತರಿಗೇ ದಾನ ಮಾಡುತ್ತಾರೆ ಅಂದಮೇಲೆ ಅದರ ಫಲವನ್ನೇನು ಪಡೆಯುವರು? ಭಲೆ ಎಷ್ಟಾದರೂ ದಾನ-ಪುಣ್ಯಗಳನ್ನು ಮಾಡುತ್ತಾ ಬಂದಿರಲಿ ಆದರೆ ಕೆಳಗಿಳಿಯುತ್ತಾ ಬಂದಿದ್ದಾರೆ. ಭಾರತದಂತಹ ದಾನಿ ಖಂಡವು ಮತ್ತ್ಯಾವುದೂ ಇಲ್ಲ. ಈ ಸಮಯದಲ್ಲಿ ನಿಮ್ಮದು ಏನೆಲ್ಲಾ ತನು-ಮನ-ಧನವಿದೆಯೋ ಎಲ್ಲವನ್ನೂ ಇದರಲ್ಲಿ ಸ್ವಾಹಾ ಮಾಡುತ್ತೀರಿ, ಇದಕ್ಕೆ ರಾಜಸ್ವ ಅಶ್ವಮೇಧ ಅವಿನಾಶಿ ಜ್ಞಾನ ಯಜ್ಞವೆಂದು ಹೇಳಲಾಗುತ್ತದೆ. ಆತ್ಮವು ಹೇಳುತ್ತದೆ - ಈ ಯಾವ ಹಳೆಯ ಶರೀರವಿದೆಯೋ ಇದನ್ನೂ ಸಹ ಇಲ್ಲಿ ಸ್ವಾಹಾ ಮಾಡಬೇಕಾಗಿದೆ ಏಕೆಂದರೆ ನೀವು ತಿಳಿದುಕೊಂಡಿದ್ದೀರಿ - ಇಡೀ ಪ್ರಪಂಚದ ಮನುಷ್ಯ ಮಾತ್ರರೂ ಇದರಲ್ಲಿ ಸ್ವಾಹಾ ಆಗುತ್ತಾರೆ ಆದ್ದರಿಂದ ನಾವೇಕೆ ತಂದೆಗೆ ಖುಷಿ-ಖುಷಿಯಿಂದ ಬಲಿಹಾರಿಯಾಗಬಾರದು! ಆತ್ಮಕ್ಕೆ ತಿಳಿದಿದೆ - ನಾವು ತಂದೆಯನ್ನು ನೆನಪು ಮಾಡುತ್ತೇವೆ. ಬಾಬಾ, ತಾವು ಬಂದರೆ ನಾವು ಬಲಿಹಾರಿಯಾಗುತ್ತೇವೆ ಏಕೆಂದರೆ ಈಗ ನಾವು ಬಲಿಹಾರಿಯಾದರೆ ಮತ್ತೆ ತಾವು 21 ಜನ್ಮಗಳಿಗಾಗಿ ಬಲಿಹಾರಿಯಾಗುತ್ತೀರಿ. ಇದು ಒಂದು ವ್ಯಾಪಾರವಾಗಿದೆ, ನಾವು ನಿಮಗೆ ಬಲಿಹಾರಿಯಾದರೆ ನೀವೂ ಸಹ 21 ಬಾರಿ ಬಲಿಹಾರಿಯಾಗುತ್ತೀರಿ. ಅದಕ್ಕೆ ತಂದೆಯು ತಿಳಿಸುತ್ತಾರೆ - ಎಲ್ಲಿಯವರೆಗೆ ನಿಮ್ಮ ಆತ್ಮವು ಪವಿತ್ರವಾಗುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಬಲಿಹಾರಿವನ್ನು ಸ್ವೀಕಾರ ಮಾಡುವುದಿಲ್ಲ.

ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ಆತ್ಮವು ಪವಿತ್ರವಾಗಿ ಬಿಡುವುದು. ತಂದೆಯನ್ನು ಮರೆಯುವುದರಿಂದ ನೀವು ಎಷ್ಟೊಂದು ಪತಿತ, ದುಃಖಿಯಾಗಿದ್ದೀರಿ. ಮನುಷ್ಯರು ದುಃಖಿಯಾದಾಗ ಶರಣಾಗತಿಯನ್ನು ತೆಗೆದುಕೊಳ್ಳುತ್ತಾರೆ. ನೀವೀಗ 63 ಜನ್ಮಗಳು ರಾವಣನಿಂದ ಬಹಳ ದುಃಖಿಯಾಗಿದ್ದೀರಿ. ಒಬ್ಬ ಸೀತೆಯ ಮಾತಲ್ಲ, ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರೂ ಸೀತೆಯರಾಗಿದ್ದಾರೆ. ರಾಮಾಯಣದಲ್ಲಂತೂ ಕಥೆಯನ್ನು ಬರೆದು ಬಿಟ್ಟಿದ್ದಾರೆ. ಸೀತೆಯನ್ನು ರಾವಣನು ಶೋಕವಾಟಿಕೆಯಲ್ಲಿ ಹಾಕಿದನು, ವಾಸ್ತವದಲ್ಲಿ ಮಾತುಗಳೆಲ್ಲವೂ ಈ ಸಮಯದ್ದಾಗಿದೆ, ಎಲ್ಲರೂ ರಾವಣ ಅರ್ಥಾತ್ ಪಂಚ ವಿಕಾರಗಳ ಬಂಧನದಲ್ಲಿದ್ದಾರೆ ಆದ್ದರಿಂದ ನಮ್ಮನ್ನು ಇದರಿಂದ ಬಿಡಿಸಿ ಎಂದು ದುಃಖಿಯಾಗಿ ಕರೆಯುತ್ತಾರೆ. ಇದು ಒಬ್ಬರ ಮಾತಲ್ಲ, ಇಡೀ ಪ್ರಪಂಚವೇ ರಾವಣನ ಬಂಧನದಲ್ಲಿದೆ, ರಾವಣ ರಾಜ್ಯವಲ್ಲವೆ. ರಾಮ ರಾಜ್ಯವು ಬೇಕೆಂದು ಹೇಳುತ್ತಾರೆ, ಗಾಂಧೀಜಿಯೂ ಸಹ ಹೇಳಿದರು - ಸನ್ಯಾಸಿಗಳೆಂದೂ ರಾಮ ರಾಜ್ಯವು ಬೇಕೆಂದು ಹೇಳುವುದಿಲ್ಲ, ಇದನ್ನು ಭಾರತವಾಸಿಗಳೇ ಹೇಳುತ್ತಾರೆ. ಈ ಸಮಯದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮವಿಲ್ಲ. ಮತ್ತೆಲ್ಲಾ ಶಾಖೆಗಳಿವೆ. ಸತ್ಯಯುಗವಿತ್ತು, ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಈಗ ಆ ಹೆಸರೇ ಬದಲಾಗಿದೆ. ತಮ್ಮ ಧರ್ಮವನ್ನು ಮರೆತು ಬೇರೆ-ಬೇರೆ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆ. ಮುಸಲ್ಮಾನರು ಬಂದು ಎಷ್ಟೊಂದು ಮಂದಿ ಹಿಂದೂಗಳನ್ನು ತಮ್ಮ ಧರ್ಮದಲ್ಲಿ ಸೇರಿಸಿಕೊಂಡರು, ಕ್ರಿಶ್ಚಿಯನ್ ಧರ್ಮದಲ್ಲಿಯೂ ಸಹ ಅನೇಕರು ಸೇರಿದ್ದಾರೆ ಆದ್ದರಿಂದ ಭಾರತವಾಸಿಗಳ ಜನಸಂಖ್ಯೆಯು ಕಡಿಮೆಯಾಗಿ ಬಿಟ್ಟಿದೆ, ಇಲ್ಲದಿದ್ದರೆ ಭಾರತವಾಸಿಗಳ ಜನಸಂಖ್ಯೆಯು ಎಲ್ಲರಿಗಿಂತ ಹೆಚ್ಚಾಗಿರಬೇಕು. ಅನೇಕ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆ. ತಂದೆಯು ತಿಳಿಸುತ್ತಾರೆ - ನಿಮ್ಮ ಆದಿ ಸನಾತನ ದೇವಿ-ದೇವತಾ ಧರ್ಮವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ, ಸತೋಪ್ರಧಾನನಾಗಿತ್ತು. ಅವರೇ ಬದಲಾಗಿ ಈಗ ತಮೋಪ್ರಧಾನರಾಗಿದ್ದಾರೆ. ಈಗ ನೀವು ಮಕ್ಕಳಿಗೆ ತಿಳಿದಿದೆ – ಜ್ಞಾನ ಸಾಗರ, ಪತಿತ-ಪಾವನನೆಂದು ಯಾರನ್ನು ಕರೆಯುವರೋ ಅವರೇ ಸನ್ಮುಖದಲ್ಲಿ ಓದಿಸುತ್ತಿದ್ದಾರೆ. ಅವರು ಜ್ಞಾನ ಸಾಗರ ಪ್ರೇಮ ಸಾಗರನಾಗಿದ್ದಾರೆ. ಕ್ರಿಸ್ತನಿಗೆ ಈ ರೀತಿ ಮಹಿಮೆ ಮಾಡುವುದಿಲ್ಲ. ಕೃಷ್ಣನಿಗೂ ಸಹ ಜ್ಞಾನ ಸಾಗರ, ಪತಿತ-ಪಾವನನೆಂದು ಹೇಳಲಾಗುವುದಿಲ್ಲ. ಸಾಗರವು ಒಂದೇ ಇರುತ್ತದೆ. ನಾಲ್ಕೂ ಕಡೆ ಸಾಗರವೇ ಸಾಗರವಿದೆ, ಎರಡು ಸಾಗರಗಳಿರುವುದಿಲ್ಲ. ಇದು ಮನುಷ್ಯ ಸೃಷ್ಟಿಯ ನಾಟಕವಾಗಿದೆ, ಇದರಲ್ಲಿ ಎಲ್ಲರದೂ ಬೇರೆ-ಬೇರೆ ಪಾತ್ರವಾಗಿದೆ, ತಂದೆಯು ತಿಳಿಸುತ್ತಾರೆ - ನನ್ನ ಕರ್ತವ್ಯವು ಎಲ್ಲರಿಗಿಂತ ಭಿನ್ನವಾಗಿದೆ, ನಾನು ಜ್ಞಾನ ಸಾಗರನಾಗಿದ್ದೇನೆ. ನನ್ನನ್ನೇ ನೀವು ಹೇ ಪತಿತ-ಪಾವನ ಎಂದು ಕೂಗುತ್ತೀರಿ ಮತ್ತು ಮುಕ್ತಿದಾತನೆಂದು ಹೇಳುತ್ತೀರಿ. ಯಾವುದರಿಂದ ಮುಕ್ತ ಮಾಡುತ್ತೇನೆ? ಇದನ್ನೂ ಯಾರೂ ತಿಳಿದುಕೊಂಡಿಲ್ಲ, ನೀವು ತಿಳಿದುಕೊಂಡಿದ್ದೀರಿ - ಸತ್ಯ-ತ್ರೇತಾಯುಗದಲ್ಲಿ ನೀವು ಬಹಳ ಸುಖಿಯಾಗಿದ್ದಿರಿ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈಗಂತೂ ನರಕವಾಗಿದೆ ಆದ್ದರಿಂದ ದುಃಖದಿಂದ ಬಿಡಿಸಿ ಸುಖಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಕೂಗುತ್ತಾರೆ. ಇಂತಹವರು ಸ್ವರ್ಗವಾಸಿಯಾದರು ಎಂಬ ಮಾತನ್ನು ಸನ್ಯಾಸಿಗಳೆಂದೂ ಹೇಳುವುದಿಲ್ಲ. ನಿರ್ವಾಣಕ್ಕೆ ಹೋದರೆಂದು ಅವರು ಹೇಳುತ್ತಾರೆ. ವಿದೇಶದಲ್ಲಿಯೂ ಸಹ ಲೆಫ್ಟ್ ಫಾರ್ ಹೆವೆನ್ಲಿ ಅಬೋಡ್ ಎಂದು ಹೇಳುತ್ತಾರೆ. ಅವರು ಗಾಡ್ ಫಾದರ್ನ ಬಳಿ ಹೋದರೆಂದು ತಿಳಿಯುತ್ತಾರೆ. ಹೆವೆನ್ಲೀ ಗಾಡ್ಫಾದರ್ ಈಗ ತಿಳಿಸುತ್ತಾರೆ - ಮಕ್ಕಳೇ, ಖಂಡಿತವಾಗಿಯೂ ಸ್ವರ್ಗವಿತ್ತು, ಈಗ ಇಲ್ಲ. ನರಕದ ನಂತರ ಸ್ವರ್ಗವು ಬರಬೇಕು. ಪರಮಾತ್ಮನು ಬಂದು ಸ್ವರ್ಗವನ್ನು ಸ್ಥಾಪನೆ ಮಾಡಬೇಕಾಗಿದೆ. ಸೂಕ್ಷ್ಮವತನ ಮೂಲವತನದಲ್ಲಿ ಸ್ವರ್ಗವಿರುವುದಿಲ್ಲ, ಅವಶ್ಯವಾಗಿ ತಂದೆಯು ಬರಬೇಕಾಗುತ್ತದೆ.

ತಂದೆಯು ತಿಳಿಸುತ್ತಾರೆ - ನಾನು ಬಂದು ಪ್ರಕೃತಿಯ ಆಧಾರವನ್ನು ತೆಗೆದುಕೊಳ್ಳುತ್ತೇನೆ, ನನ್ನ ಜನ್ಮವು ಮನುಷ್ಯರ ತರಹ ಆಗುವುದಿಲ್ಲ, ನಾನು ಗರ್ಭದಲ್ಲಿ ಬರುವುದಿಲ್ಲ, ನೀವೆಲ್ಲರೂ ಗರ್ಭದಲ್ಲಿ ಬರುತ್ತೀರಿ. ಸ್ವರ್ಗದಲ್ಲಿ ಗರ್ಭ ಮಹಲಿರುತ್ತದೆ ಏಕೆಂದರೆ ಶಿಕ್ಷೆಯನ್ನನುಭವಿಸಲು ಅಲ್ಲಿ ಯಾವುದೇ ವಿಕರ್ಮವಾಗುವುದಿಲ್ಲ ಆದ್ದರಿಂದ ಅದಕ್ಕೆ ಗರ್ಭ ಮಹಲು ಎಂದು ಹೇಳಲಾಗುತ್ತದೆ. ಇಲ್ಲಿ ವಿಕರ್ಮ ಮಾಡುತ್ತಾರೆ, ಅದರ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಗರ್ಭ ಜೈಲು ಎಂದು ಹೇಳಲಾಗುತ್ತದೆ. ಇಲ್ಲಿ ರಾವಣ ರಾಜ್ಯದಲ್ಲಿ ಮನುಷ್ಯರು ಪಾಪ ಮಾಡುತ್ತಿರುತ್ತಾರೆ. ಇದು ಪಾಪಾತ್ಮರ ಪ್ರಪಂಚವಾಗಿದೆ, ಅದು ಪುಣ್ಯಾತ್ಮರ ಪ್ರಪಂಚ ಸ್ವರ್ಗವಾಗಿದೆ ಆದ್ದರಿಂದ ಆಲದ ಎಲೆಯ ಮೇಲೆ ಕೃಷ್ಣನು ತೇಲಿ ಬಂದನು ಎಂದು ಹೇಳುತ್ತಾರೆ. ಇದು ಕೃಷ್ಣನ ಮಹಿಮೆಯನ್ನು ತೋರಿಸುತ್ತಾರೆ. ಸತ್ಯಯುಗದಲ್ಲಿ ಗರ್ಭದಲ್ಲಿ ದುಃಖವಾಗುವುದಿಲ್ಲ. ತಂದೆಯು ಕರ್ಮ, ಅಕರ್ಮ, ವಿಕರ್ಮದ ಗತಿಯನ್ನು ತಿಳಿಸುತ್ತಾರೆ. ಇದನ್ನು ನಂತರ ಗೀತಾ ಶಾಸ್ತ್ರವನ್ನಾಗಿ ಬರೆದಿದ್ದಾರೆ ಆದರೆ ಅದರಲ್ಲಿ ಶಿವ ಭಗವಾನುವಾಚದ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ಈಗ ನೀವು ತಿಳಿದುಕೊಳ್ಳುತ್ತೀರಿ - ಬೇಹದ್ದಿನ ತಂದೆಯಿಂದ ನಾವು ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಈಗ ಭಾರತವು ರಾವಣನಿಂದ ಶಾಪಗ್ರಸ್ತನಾಗಿದೆ ಆದ್ದರಿಂದ ದುರ್ಗತಿಯಾಗಿ ಬಿಟ್ಟಿದೆ. ಈ ದೊಡ್ಡ ಶಾಪವೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ತಂದೆಯು ಬಂದು ವರ ಕೊಡುತ್ತಾರೆ - ಆಯುಷ್ಯವಾನ್ ಭವ, ಪುತ್ರವಾನ್, ಸಂಪತ್ತಿವಾನ್ ಭವ..... ಎಲ್ಲಾ ಸುಖದ ಆಸ್ತಿಯು ಕೊಡುತ್ತಾರೆ. ಬಂದು ನಿಮಗೆ ಓದಿಸುತ್ತಾರೆ ಯಾವ ವಿದ್ಯೆಯಿಂದ ನೀವು ದೇವತೆಗಳಾಗುತ್ತೀರಿ. ಇದು ಹೊಸ ರಚನೆಯಾಗುತ್ತಿದೆ, ಬ್ರಹ್ಮನ ಮೂಲಕ ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ. ಪ್ರಜಾಪಿತ ಬ್ರಹ್ಮನೆಂದು ಗಾಯನವಿದೆ, ನೀವು ಅವರ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ತಾತನಿಂದ ತಂದೆಯ ಮೂಲಕ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಮೊದಲೂ ತೆಗೆದುಕೊಂಡಿದ್ದೀರಿ, ಈಗ ಪುನಃ ತಂದೆಯು ಬಂದಿದ್ದಾರೆ. ತಂದೆಯ ಮಕ್ಕಳಂತೂ ಮತ್ತೆ ತಂದೆಯ ಬಳಿಗೇ ಹೋಗಬೇಕು ಆದರೆ ಗಾಯನವಿದೆ, ಪ್ರಜಾಪಿತ ಬ್ರಹ್ಮನ ಮೂಲಕ ಮನುಷ್ಯ ಸೃಷ್ಟಿಯ ಸ್ಥಾಪನೆಯಾಗುತ್ತದೆ ಎಂದು. ಅದು ಇಲ್ಲಿಯೇ ಆಗುವುದಲ್ಲವೆ. ಆತ್ಮನ ಸಂಬಂಧದಿಂದ ನಾವು ಸಹೋದರ-ಸಹೋದರರಾಗಿದ್ದೇವೆಂದು ಹೇಳುತ್ತಾರೆ. ಪ್ರಜಾಪಿತ ಬ್ರಹ್ಮನ ಸಂತಾನರಾಗುವುದರಿಂದ ನೀವು ಸಹೋದರ-ಸಹೋದರಿಯರಾಗಿದ್ದೀರಿ. ಈ ಸಮಯದಲ್ಲಿ ನೀವೆಲ್ಲರೂ ಸಹೋದರ-ಸಹೋದರಿಯರಾಗಿದ್ದೀರಿ, ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಂಡಿದ್ದಿರಿ, ಈಗಲೂ ತಂದೆಯಿಂದ ತೆಗೆದುಕೊಳ್ಳುತ್ತಿದ್ದೀರಿ. ಶಿವ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ. ನೀವಾತ್ಮರು ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ, ನೆನಪು ಮಾಡುವುದರಿಂದಲೇ ನೀವು ಪಾವನರಾಗುತ್ತೀರಿ, ಮತ್ತ್ಯಾವುದೇ ಉಪಾಯವಿಲ್ಲ. ಪಾವನರಾಗದೇ ನೀವು ಮುಕ್ತಿಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ಜೀವನ್ಮುಕ್ತಿಧಾಮದಲ್ಲಿ ಮೊಟ್ಟ ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ನಂತರ ನಂಬರ್ವಾರ್ ಬೇರೆ-ಬೇರೆ ಧರ್ಮಗಳು ಬಂದವು. ತಂದೆಯು ಅಂತಿಮದಲ್ಲಿ ಬಂದು ಎಲ್ಲರನ್ನೂ ದುಃಖದಿಂದ ಮುಕ್ತರನ್ನಾಗಿ ಮಾಡುತ್ತಾರೆ, ಅವರಿಗೆ ಮುಕ್ತಿದಾತನೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಕೇವಲ ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಓ ತಂದೆಯೇ ಬನ್ನಿ, ನಮ್ಮನ್ನು ಪತಿತರಿಂದ ಪಾವನ ಮಾಡಿ ಎಂದು ಕರೆಯುತ್ತೀರಿ. ಶಿಕ್ಷಕರಂತೂ ಓದಿಸುತ್ತಾರೆ, ಇದರಲ್ಲಿ ಚರಿತ್ರೆ ಮಾಡುತ್ತಾರೆಯೇ? ಇದೂ ಸಹ ವಿದ್ಯೆಯಾಗಿದೆ, ಜ್ಞಾನ ಸಾಗರ ತಂದೆಯೇ ಬಂದು ಜ್ಞಾನವನ್ನು ಕೊಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ಅರಿತುಕೊಂಡು ಈಗ ಯಾವುದೇ ವಿಕರ್ಮ ಮಾಡಬಾರದು, ಕರ್ಮ ಕ್ಷೇತ್ರದಲ್ಲಿ ಕರ್ಮ ಮಾಡುತ್ತಾ ವಿಕಾರಗಳ ದಾನ ಮಾಡುವುದೇ ವಿಕರ್ಮಗಳಿಂದ ಮುಕ್ತರಾಗುವುದಾಗಿದೆ.

2. ಈ ರೀತಿ ಪಾವನರಾಗಬೇಕಾಗಿದೆ ನಮ್ಮ ಬಲಿಹಾರಿಯನ್ನು ತಂದೆಯು ಸ್ವೀಕಾರ ಮಾಡುವಂತಿರಲಿ. ಪಾವನರಾಗಿ ಪಾವನ ಪ್ರಪಂಚದಲ್ಲಿ ಹೋಗಬೇಕಾಗಿದೆ, ತನು-ಮನ-ಧನವನ್ನು ಈ ಯಜ್ಞದಲ್ಲಿ ಸ್ವಾಹಾ ಮಾಡಿ ಸಫಲ ಮಾಡಿಕೊಳ್ಳಬೇಕಾಗಿದೆ.

ವರದಾನ:
ಜ್ಞಾನದ ಪ್ರಕಾಶತೆ-ಶಕ್ತಿಯ ಮೂಲಕ ವಿಘ್ನ-ವಿನಾಶಕರಾಗುವಂತಹ ಮಾಸ್ಟರ್ ಜ್ಞಾನ ಪೂರ್ಣ ಭವ.

ಭಕ್ತಿ ಮಾರ್ಗದಲ್ಲಿ ಗಣೇಶನನ್ನು ವಿಘ್ನ-ವಿನಾಶಕನೆಂದು ಪೂಜಿಸುತ್ತಾರೆ, ಜೊತೆ-ಜೊತೆಗೆ ಜ್ಞಾನ ಪೂರ್ಣ ಅರ್ಥಾತ್ ವಿದ್ಯಾಪತಿಯೆಂದೂ ಸಹ ಮಾನ್ಯತೆ ಕೊಡುತ್ತಾರೆ. ಅಂದಾಗ ಯಾವ ಮಕ್ಕಳು ಮಾಸ್ಟರ್ ಜ್ಞಾನ ಪೂರ್ಣರಾಗುವರೋ ಅವರೆಂದಿಗೂ ವಿಘ್ನಗಳಿಂದ ಸೋಲನ್ನನುಭವಿಸಲು ಸಾಧ್ಯವಿಲ್ಲ, ಏಕೆಂದರೆ ಜ್ಞಾನಕ್ಕೆ ಪ್ರಕಾಶತೆ-ಶಕ್ತಿಯೆಂದು ಹೇಳಲಾಗುತ್ತದೆ. ಅದರಿಂದ ಗುರಿಯವರೆಗೆ ತಲುಪುವುದು ಸಹಜವಾಗಿ ಬಿಡುತ್ತದೆ. ಈ ರೀತಿಯಲ್ಲಿ ಯಾರು ವಿಘ್ನ-ವಿನಾಶಕರಾಗಿ ಇದ್ದಾರೆ, ತಂದೆಯ ಜೊತೆ ಕಂಬೈಂಡ್ ಆಗಿರುತ್ತಾ ಜ್ಞಾನದ ಸ್ಮರಣೆ ಮಾಡುತ್ತಿರುತ್ತಾರೆಯೋ ಅವರೆಂದಿಗೂ ವಿಘ್ನಗಳಿಂದ ಸೋಲಲು ಸಾಧ್ಯವಿಲ್ಲ.

ಸ್ಲೋಗನ್:
ಒಳಗೆ-ಹೊರಗೆ ಏನೆಲ್ಲಾ ಅವಗುಣಗಳಿವೆಯೋ ಅವನ್ನು ಸಂಪೂರ್ಣವಾಗಿ ವಿಲ್ ಮಾಡಿ ಬಿಡುತ್ತೀರೆಂದರೆ, ವಿಲ್-ಪವರ್ (ಆತ್ಮ ವಿಶ್ವಾಸ) ಬಂದು ಬಿಡುವುದು.

ಅವ್ಯಕ ಸೂಚನೆ:– “ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”

ಈಗ ಅನುಭವಿಗಳಾಗಿ ಅನ್ಯರಿಗೂ ಅಚಲ ಅಡೋಲರನ್ನಾಗಿ ಮಾಡುವ, ಅನುಭವ ಮಾಡಿಸುವ ಸಮಯವಾಗಿದೆ. ಈಗ ಆಟ ಆಡುವ ಸಮಯ ಸಮಾಪ್ತಿ ಆಗಿದೆ. ಈಗ ಸದಾ ಸಮರ್ಥರಾಗಿ ನಿರ್ಬಲ ಆತ್ಮಗಳನ್ನು ಸಮರ್ಥರನ್ನಾಗಿ ಮಾಡುತ್ತಾ ಹೋಗಿ. ನಿಮ್ಮಲ್ಲಿಯೇ ನಿರ್ಬಲತೆಯ ಸಂಸ್ಕಾರಗಳು ಇದ್ದರೆ ಅನ್ಯರನ್ನು ನಿರ್ಬಲ ರನ್ನಾಗಿ ಮಾಡುವಿರಿ. ಜ್ಞಾನದ ಪ್ರತಿಯೊಂದು ಮಾತಿನ ಅನುಭವಿಗಳಾಗುವುದಕ್ಕಾಗಿ ಏಕಾಂತ ಪ್ರಿಯರಾಗಿ, ಏಕಾಂತದ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಿ.