06.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಸಮಯ
ಸಿಕ್ಕಿದಾಗಲೆಲ್ಲಾ ಏಕಾಂತದಲ್ಲಿ ಹೋಗಿ ನೆನಪಿನ ಯಾತ್ರೆ ಮಾಡಿ, ಯಾವಾಗ ನೀವು ಗುರಿಯನ್ನು
ತಲುಪುವಿರೋ ಆಗ ಈ ಯಾತ್ರೆಯು ಮುಕ್ತಾಯವಾಗುವುದು.”
ಪ್ರಶ್ನೆ:
ಸಂಗಮಯುಗದಲ್ಲಿ
ತಂದೆಯು ತಮ್ಮ ಮಕ್ಕಳಲ್ಲಿ ಯಾವ ಇಂತಹ ಗುಣವನ್ನು ತುಂಬುತ್ತಾರೆ, ಅದು ಅರ್ಧಕಲ್ಪದವರೆಗೆ ನಡೆಯುತ್ತಾ
ಹೋಗುತ್ತದೆ?
ಉತ್ತರ:
ತಂದೆಯು
ತಿಳಿಸುತ್ತಾರೆ - ನಾನು ಹೇಗೆ ಅತಿ ಮಧುರನಾಗಿದ್ದೇನೆಯೋ ಹಾಗೆಯೇ ಮಕ್ಕಳನ್ನೂ ಸಹ ಮಧುರರನ್ನಾಗಿ
ಮಾಡುತ್ತೇನೆ. ದೇವತೆಗಳು ಬಹಳ ಮಧುರರಾಗಿದ್ದಾರೆ. ನೀವು ಮಕ್ಕಳೇ ಈಗ ಮಧುರರಾಗುವ ಪುರುಷಾರ್ಥ
ಮಾಡುತ್ತಿದ್ದೀರಿ. ಯಾರು ಅನೇಕರ ಕಲ್ಯಾಣ ಮಾಡುವರೋ, ಯಾರಲ್ಲಿ ಯಾವುದೇ ವಿಕಾರಿ ಸಂಕಲ್ಪಗಳಿಲ್ಲವೋ
ಅವರೇ ಮಧುರರಾಗಿದ್ದಾರೆ. ಅಂತಹವರಿಗೆ ಶ್ರೇಷ್ಠ ಪದವಿಯು ಪ್ರಾಪ್ತವಾಗುತ್ತದೆ. ಮತ್ತೆ ಅವರಿಗೇ
ಪೂಜೆಯು ನಡೆಯುತ್ತದೆ.
ಓಂ ಶಾಂತಿ.
ತಂದೆಯು ಕುಳಿತು ತಿಳಿಸುತ್ತಾರೆ - ಈ ಶರೀರದ ಮಾಲೀಕನು ಆತ್ಮನಾಗಿದೆ. ಇದನ್ನು ಮೊದಲು
ತಿಳಿದುಕೊಳ್ಳಬೇಕು ಏಕೆಂದರೆ ಈಗ ಮಕ್ಕಳಿಗೆ ಜ್ಞಾನವು ಸಿಕ್ಕಿದೆ ಅಂದಾಗ ಮೊಟ್ಟ ಮೊದಲಿಗೆ
ತಿಳಿದುಕೊಳ್ಳಿ - ನಾವಾತ್ಮರಾಗಿದ್ದೇವೆ, ಆತ್ಮವು ಶರೀರದಿಂದ ಕೆಲಸವು ತೆಗೆದುಕೊಳ್ಳುತ್ತದೆ,
ಪಾತ್ರವನ್ನಭಿನಯಿಸುತ್ತದೆ. ಇಂತಹ ವಿಚಾರಗಳು ಮತ್ತ್ಯಾವ ಮನುಷ್ಯರಿಗೂ ಬರುವುದಿಲ್ಲ ಏಕೆಂದರೆ
ದೇಹಾಭಿಮಾನದಲ್ಲಿದ್ದಾರೆ. ಇಲ್ಲಂತೂ ಮಕ್ಕಳನ್ನು ಇದೇ ವಿಚಾರದಲ್ಲಿ ಕುಳ್ಳರಿಸಲಾಗುತ್ತದೆ -
ನಾನಾತ್ಮನಾಗಿದ್ದೇನೆ, ಇದು ನನ್ನ ಶರೀರವಾಗಿದೆ, ನಾನು ಆತ್ಮನು ಪರಮಪಿತ ಪರಮಾತ್ಮನ
ಸಂತಾನನಾಗಿದ್ದೇನೆ. ಈ ನೆನಪೇ ಪದೇ-ಪದೇ ಮರೆತು ಹೋಗುತ್ತದೆ. ಇದನ್ನು ಮೊದಲು ಪೂರ್ಣ ನೆನಪು
ಮಾಡಬೇಕು. ಹೇಗೆ ಯಾತ್ರೆಯಲ್ಲಿ ಹೋಗುವಾಗ ನಡೆಯುತ್ತಾ ಇರಿ ಎಂದು ಹೇಳುತ್ತಾರೆ ಹಾಗೆಯೇ ನೀವೂ ಸಹ
ನೆನಪಿನ ಯಾತ್ರೆಯಲ್ಲಿ ನಡೆಯುತ್ತಿರಬೇಕಾಗಿದೆ ಅಂದರೆ ನೆನಪು ಮಾಡಬೇಕಾಗಿದೆ. ನೆನಪು
ಮಾಡುವುದಿಲ್ಲವೆಂದರೆ ಅರ್ಥ ಯಾತ್ರೆಯಲ್ಲಿ ನಡೆಯುತ್ತಿಲ್ಲ. ದೇಹಾಭಿಮಾನವು ಬರುತ್ತದೆ.
ದೇಹಾಭಿಮಾನದಿಂದಲೇ ಒಂದಲ್ಲ ಒಂದು ವಿಕರ್ಮವಾಗಿ ಬಿಡುತ್ತದೆ. ಮನುಷ್ಯರು ಸದಾ ವಿಕರ್ಮವನ್ನೇ
ಮಾಡುತ್ತಾರೆಂದಲ್ಲ, ಆದರೂ ಸಂಪಾದನೆಯಂತೂ ನಿಂತು ಹೋಗುತ್ತದೆಯಲ್ಲವೆ ಆದ್ದರಿಂದ ಸಾಧ್ಯವಾದಷ್ಟು
ನೆನಪಿನ ಯಾತ್ರೆಯಲ್ಲಿ ಎಂದೂ ಸಡಿಲವಾಗಬಾರದು. ಏಕಾಂತದಲ್ಲಿ ಕುಳಿತು ತಮ್ಮ ಜೊತೆ ವಿಚಾರ ಸಾಗರ
ಮಂಥನ ಮಾಡಿ, ಒಳ್ಳೊಳ್ಳೆಯ ಪಾಯಿಂಟ್ಸ್ನ್ನು ತೆಗೆಯಿರಿ. ಎಷ್ಟು ಸಮಯ ತಂದೆಯ ನೆನಪಿನಲ್ಲಿರುತ್ತೀರಿ,
ಮಧುರವಾದ ವಸ್ತುವಿನ ನೆನಪಂತೂ ಬರುತ್ತದೆಯಲ್ಲವೆ.
ಮಕ್ಕಳಿಗೆ ತಿಳಿಸಲಾಗಿದೆ
- ಈ ಸಮಯದಲ್ಲಿ ಎಲ್ಲಾ ಮನುಷ್ಯ ಮಾತ್ರರು ಒಬ್ಬರು ಇನ್ನೊಬ್ಬರಿಗೆ ನಷ್ಟಗೊಳಿಸುತ್ತಲೇ ಇರುತ್ತಾರೆ.
ಕೇವಲ ಶಿಕ್ಷಕರ ಮಹಿಮೆಯನ್ನು ತಂದೆಯು ಮಾಡುತ್ತಾರೆ. ಅವರಲ್ಲಿಯೂ ಕೆಲವರು ಕೆಟ್ಟವರಿರುತ್ತಾರೆ.
ಇಲ್ಲವಾದರೆ ಶಿಕ್ಷಕರ ಅರ್ಥವೇ ಆಗಿದೆ - ಶಿಕ್ಷಣವನ್ನು ಕಲಿಸುವವರು, ಒಳ್ಳೆಯ ಗುಣಗಳನ್ನು
ಕಲಿಸಿಕೊಡುವವರು. ಯಾರು ಧಾರ್ಮಿಕ ವ್ಯಕ್ತಿಗಳು ಒಳ್ಳೆಯ ಸ್ವಭಾವದವರಿರುತ್ತಾರೆಯೋ ಅವರ ಚಲನೆಯು
ಚೆನ್ನಾಗಿರುತ್ತದೆ. ಒಂದುವೇಳೆ ತಂದೆಯು ಮಧ್ಯಪಾನ ಮಾಡುತ್ತಾರೆಂದರೆ ಮಕ್ಕಳಿಗೂ ಆ ಸಂಗದ ರಂಗು
ಹಿಡಿಯುತ್ತದೆ. ಇದಕ್ಕೆ ಕೆಟ್ಟ ಸಂಗವೆಂದು ಹೇಳಲಾಗುತ್ತದೆ. ಇದು ರಾವಣ ರಾಜ್ಯವಲ್ಲವೆ. ಅವಶ್ಯವಾಗಿ
ರಾಮರಾಜ್ಯವಿತ್ತು ಆದರೆ ಅದು ಹೇಗಿತ್ತು? ಹೇಗೆ ಸ್ಥಾಪನೆಯಾಯಿತು? ಎಂಬ ಅದ್ಭುತವಾದ ಮಧುರ
ಮಾತುಗಳನ್ನು ನೀವು ಮಕ್ಕಳೇ ಅರಿತುಕೊಂಡಿದ್ದೀರಿ. ಸ್ವೀಟ್, ಸ್ವೀಟರ್, ಸ್ವೀಟೆಸ್ಟ್ ಎಂದು
ಹೇಳಲಾಗುತ್ತದೆಯಲ್ಲವೆ. ತಂದೆಯ ನೆನಪಿನಲ್ಲಿದ್ದುಕೊಂಡೇ ನೀವು ಪವಿತ್ರರಾಗಿ, ಅನ್ಯರನ್ನು
ಪವಿತ್ರರನ್ನಾಗಿ ಮಾಡುತ್ತೀರಿ. ತಂದೆಯಂತೂ ಹೊಸ ಸೃಷ್ಟಿಯಲ್ಲಿ ಬರುವುದಿಲ್ಲ. ಸೃಷ್ಟಿಯಲ್ಲಿ
ಪ್ರಾಣಿಗಳು, ಮನುಷ್ಯರು, ಹೊಲ-ಗದ್ದೆ ಇತ್ಯಾದಿಗಳಿರುತ್ತವೆ. ಮನುಷ್ಯರಿಗಾಗಿ ಎಲ್ಲವೂ ಬೇಕಲ್ಲವೆ.
ಶಾಸ್ತ್ರಗಳಲ್ಲಿರುವ ಮಹಾಪ್ರಳಯದ ವೃತ್ತಾಂತವೂ ಸಹ ತಪ್ಪಾಗಿದೆ. ಪ್ರಳಯವಾಗುವುದೇ ಇಲ್ಲ. ಈ
ಸೃಷ್ಟಿಚಕ್ರವು ಸುತ್ತುತ್ತಲೇ ಇರುತ್ತದೆ. ಮಕ್ಕಳಿಗೆ ಆದಿಯಿಂದ ಅಂತ್ಯದವರೆಗೆ ಎಲ್ಲವೂ
ಗಮನದಲ್ಲಿರಬೇಕಾಗಿದೆ. ಮನುಷ್ಯರಿಗಂತೂ ಅನೇಕ ಪ್ರಕಾರದ ಚಿತ್ರಗಳು ನೆನಪಿಗೆ ಬರುತ್ತವೆ. ಜಾತ್ರೆ,
ಮೇಳ ಇತ್ಯಾದಿಗಳು ನೆನಪಿಗೆ ಬರುತ್ತವೆ. ಅದೆಲ್ಲವೂ ಹದ್ದಿನದಾಗಿದೆ, ನಿಮ್ಮದು ಇದು
ಬೇಹದ್ದಿನದಾಗಿದೆ. ಬೇಹದ್ದಿನ ಖುಷಿ, ಬೇಹದ್ದಿನ ಧನವಾಗಿದೆ ಏಕೆಂದರೆ ಬೇಹದ್ದಿನ ತಂದೆಯಲ್ಲವೆ.
ಲೌಕಿಕ ತಂದೆಯಿಂದ ಎಲ್ಲವೂ ಮಿತವಾದದ್ದೇ ಸಿಗುತ್ತದೆ. ಪಾರಲೌಕಿಕ ತಂದೆಯಿಂದ ಅಪರಿಮಿತವಾದ ಸುಖವು
ಸಿಗುತ್ತದೆ. ಸುಖ ಇರುವುದೇ ಹಣದಲ್ಲಿ. ಸತ್ಯಯುಗದಲ್ಲಂತೂ ಹಣವು ಯಥೇಚ್ಛವಾಗಿರುತ್ತದೆ. ಎಲ್ಲವೂ
ಸತೋಪ್ರಧಾನವಾಗಿರುತ್ತದೆ. ನಿಮ್ಮ ಬುದ್ಧಿಯಲ್ಲಿದೆ - ನಾವು ಸತೋಪ್ರಧಾನರಾಗಿದ್ದೆವು, ಪುನಃ
ಆಗಬೇಕಾಗಿದೆ. ಇದನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ - ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ,
ಮಧುರ-ಅತಿ ಮಧುರ, ಮಧುರಾತಿ ಮಧುರರಿದ್ದಾರಲ್ಲವೆ. ತಂದೆಗಿಂತಲೂ ಮಧುರರಾಗುವವರಿದ್ದಾರೆ, ಅವರೇ
ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಯಾರು ಅನೇಕರ ಕಲ್ಯಾಣ ಮಾಡುವರೋ ಅವರೇ ಮಧುರಾತಿ
ಮಧುರರಾಗಿದ್ದಾರೆ. ತಂದೆಯೂ ಸಹ ಮಧುರಾತಿ ಮಧುರರಾಗಿದ್ದಾರಲ್ಲವೆ. ಆದ್ದರಿಂದಲೇ ಎಲ್ಲರೂ ಅವರನ್ನು
ನೆನಪು ಮಾಡುತ್ತಾರೆ. ಕೇವಲ ಜೇನು ಅಥವಾ ಸಕ್ಕರೆಗೆ ಅತಿ ಮಧುರವೆಂದು ಹೇಳಲಾಗುವುದಿಲ್ಲ. ಮನುಷ್ಯರ
ನಡವಳಿಕೆಯನ್ನು ನೋಡಿ ಹೀಗೆ ಹೇಳಲಾಗುತ್ತದೆಯಲ್ಲವೆ. ಇವರು ಮಧುರ ಮಗುವಾಗಿದ್ದಾರೆ ಎಂದು
ಹೇಳುತ್ತಾರಲ್ಲವೆ. ಸತ್ಯಯುಗದಲ್ಲಿ ಯಾವುದೇ ವಿಕಾರದ ಮಾತಿರುವುದಿಲ್ಲ. ಯಾರು ಇಷ್ಟು ಶ್ರೇಷ್ಠ
ಪದವಿಯನ್ನು ಪಡೆಯುವರೋ ಅವರು ಅವಶ್ಯವಾಗಿ ಇಲ್ಲಿ ಪುರುಷಾರ್ಥ ಮಾಡುತ್ತಾರೆ.
ನೀವೀಗ ಹೊಸ ಪ್ರಪಂಚದ
ಬಗ್ಗೆ ತಿಳಿದುಕೊಂಡಿದ್ದೀರಿ. ನಿಮಗೋಸ್ಕರ ನಾಳೆ ಹೊಸ ಪ್ರಪಂಚ, ಸುಖಧಾಮವಿರುವುದು. ಶಾಂತಿಯು
ಯಾವಾಗ ಇತ್ತು ಎಂಬುದು ಮನುಷ್ಯರಿಗೆ ತಿಳಿದೇ ಇಲ್ಲ. ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಬೇಕೆಂದು
ಹೇಳುತ್ತಾರೆ ಆದರೆ ನಿಮಗೂ ತಿಳಿದಿದೆ - ವಿಶ್ವದಲ್ಲಿ ಶಾಂತಿಯಿತ್ತು, ಅದನ್ನು ಪುನಃ ಈಗ ಸ್ಥಾಪನೆ
ಮಾಡುತ್ತಿದ್ದೀರಿ. ಈಗ ಇದನ್ನು ಎಲ್ಲರಿಗೆ ತಿಳಿಸುವುದು ಹೇಗೆ? ಮನುಷ್ಯರಿಗೆ ಯಾವುದರ ಇಚ್ಛೆಯಿದೆಯೋ
ಅಂತಹ ವಿಚಾರಗಳನ್ನು ಬರೆಯಬೇಕು. ವಿಶ್ವದಲ್ಲಿ ಶಾಂತಿಯು ಬೇಕೆಂದು ಬಹಳ
ತಲೆಕೆಡಿಸಿಕೊಳ್ಳುತ್ತಿರುತ್ತಾರೆ ಏಕೆಂದರೆ ಬಹಳ ಅಶಾಂತಿಯಿದೆ. ಆದ್ದರಿಂದಲೇ ಈ ಲಕ್ಷ್ಮೀ-ನಾರಾಯಣರ
ಚಿತ್ರವನ್ನು ಸನ್ಮುಖದಲ್ಲಿ ತರಬೇಕು. ಇವರ ರಾಜ್ಯವಿದ್ದಾಗ ವಿಶ್ವದಲ್ಲಿ ಶಾಂತಿಯಿತ್ತು ಅದಕ್ಕೆ
ಸ್ವರ್ಗ, ದೈವೀ ಪ್ರಪಂಚವೆಂದು ಹೇಳುತ್ತಾರೆ. ಅಲ್ಲಿ ಸಂಪೂರ್ಣ ಶಾಂತಿಯಿತ್ತು, ಇಂದಿಗೆ 5000
ವರ್ಷಗಳ ಮೊದಲಿನ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಇದು ಮುಖ್ಯವಾದ ಮಾತಾಗಿದೆ. ಎಲ್ಲಾ
ಆತ್ಮಗಳೂ ಸೇರಿ ಹೇಳುತ್ತಾರೆ - ವಿಶ್ವದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುವುದು? ಎಂದು. ಎಲ್ಲಾ
ಆತ್ಮಗಳೂ ಕೂಗುತ್ತಿದ್ದಾರೆ ಆದರೆ ನೀವಿಲ್ಲಿ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುವ ಪುರುಷಾರ್ಥ
ಮಾಡುತ್ತಿದ್ದೀರಿ. ಯಾರು ವಿಶ್ವ ಶಾಂತಿಯನ್ನು ಬಯಸುತ್ತಾರೆಯೋ ಅವರಿಗೆ ನೀವು ತಿಳಿಸಿ –
ಭಾರತದಲ್ಲಿಯೇ ಶಾಂತಿಯಿತ್ತು, ಭಾರತವು ಸ್ವರ್ಗವಾಗಿದ್ದಾಗ ಶಾಂತಿಯಿತ್ತು, ಈಗ ನರಕವಾಗಿದೆ.
ನರಕದಲ್ಲಿ ಅಶಾಂತಿಯಿದೆ ಏಕೆಂದರೆ ಅನೇಕ ಧರ್ಮಗಳಿವೆ. ಮಾಯೆಯ ರಾಜ್ಯವಾಗಿದೆ. ಭಕ್ತಿಯ ಆಡಂಬರವೂ ಇದೆ.
ದಿನ-ಪ್ರತಿದಿನ ವೃದ್ಧಿಯಾಗುತ್ತಲೇ ಹೋಗುತ್ತದೆ. ಮನುಷ್ಯರೂ ಸಹ ಜಾತ್ರೆ, ಮೇಳಗಳಿಗೆ ಹೋಗುತ್ತಾರೆ.
ಅವಶ್ಯವಾಗಿ ಏನೋ ಸತ್ಯವಿರಬೇಕೆಂದು ತಿಳಿಯುತ್ತಾರೆ. ಈಗ ನಿಮಗೆ ತಿಳಿದಿದೆ - ಅದರಿಂದ ಯಾರೂ
ಪಾವನರಾಗಲು ಸಾಧ್ಯವಿಲ್ಲ. ಪಾವನರಾಗುವ ಮಾರ್ಗವನ್ನು ಯಾವುದೇ ಮನುಷ್ಯರು ತಿಳಿಸಲು ಸಾಧ್ಯವಿಲ್ಲ.
ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ, ಪ್ರಪಂಚವೂ ಒಂದೇ ಆಗಿದೆ. ಕೇವಲ ಇದಕ್ಕೆ ಹೊಸದು ಮತ್ತು
ಹಳೆಯದೆಂದು ಹೇಳಲಾಗುತ್ತದೆ. ಹೊಸ ಪ್ರಪಂಚದಲ್ಲಿ ಹೊಸ ಭಾರತ, ಹೊಸ ದೆಹಲಿಯೆಂದು ಹೇಳುತ್ತಾರೆ. ಈಗ
ಹೊಸದಾಗಲಿದೆ. ಅದರಲ್ಲಿ ಹೊಸ ರಾಜ್ಯವಿರುವುದು, ಇಲ್ಲಿ ಹಳೆಯ ಪ್ರಪಂಚದಲ್ಲಿ ಹಳೆಯ ರಾಜ್ಯವಿದೆ.
ಯಾವುದಕ್ಕೆ ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚವೆಂದು ಹೇಳಲಾಗುತ್ತದೆಯೆಂದು ನೀವು
ತಿಳಿದುಕೊಂಡಿದ್ದೀರಿ. ಭಕ್ತಿಯದು ಎಷ್ಟೊಂದು ವಿಸ್ತಾರವಿದೆ, ಇದಕ್ಕೆ ಅಜ್ಞಾನವೆಂದು ಹೇಳಲಾಗುತ್ತದೆ.
ಜ್ಞಾನ ಸಾಗರನು ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ನಿಮಗೆ ರಾಮ, ರಾಮ ಎಂದು ಹೇಳಿ ಅಥವಾ ಏನಾದರೂ
ಜಪ ಮಾಡಿ ಎಂದು ಹೇಳುವುದಿಲ್ಲ. ವಿಶ್ವದ ಚರಿತ್ರೆ, ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ
ಎಂಬುದನ್ನು ತಂದೆಯು ತಿಳಿಸುತ್ತಾರೆ. ನೀವು ಈ ಶಿಕ್ಷಣವನ್ನು ಓದುತ್ತಿದ್ದೀರಿ. ಇದರ ಹೆಸರೇ ಆಗಿದೆ
- ಆತ್ಮಿಕ ವಿದ್ಯೆ. ಆಧ್ಯಾತ್ಮಿಕ ಜ್ಞಾನ, ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಜ್ಞಾನ
ಸಾಗರನೆಂದು ಒಬ್ಬ ತಂದೆಗೆ ಹೇಳಲಾಗುತ್ತದೆ, ಅವರು ಆತ್ಮಿಕ ಜ್ಞಾನಪೂರ್ಣ ತಂದೆಯಾಗಿದ್ದಾರೆ. ತಂದೆಯು
ಆತ್ಮಗಳೊಂದಿಗೇ ಮಾತನಾಡುತ್ತಾರೆ. ಆತ್ಮಿಕ ತಂದೆಯು ಓದಿಸುತ್ತಾರೆಂದು ನೀವು ಮಕ್ಕಳೂ
ತಿಳಿದುಕೊಂಡಿದ್ದೀರಿ. ಇದು ಆತ್ಮಿಕ ಜ್ಞಾನವಾಗಿದೆ. ಆತ್ಮಿಕ ಜ್ಞಾನಕ್ಕೆ ಆಧ್ಯಾತ್ಮಿಕ ಜ್ಞಾನವೆಂದು
ಹೇಳಲಾಗುತ್ತದೆ.
ಪರಮಪಿತ ಪರಮಾತ್ಮನು
ಬಿಂದುವಾಗಿದ್ದಾರೆಂದು ನಿಮಗೆ ತಿಳಿದಿದೆ. ಅವರು ನಮಗೆ ಓದಿಸುತ್ತಾರೆ. ನಾವಾತ್ಮಗಳು
ಓದುತ್ತಿದ್ದೇವೆ, ಇದನ್ನು ಮರೆಯಬಾರದು. ನಾವಾತ್ಮಗಳಿಗೆ ಯಾವ ಜ್ಞಾನವು ಸಿಗುತ್ತದೆಯೋ ಅದನ್ನು ನಾವು
ಅನ್ಯ ಆತ್ಮಗಳಿಗೆ ಕೊಡುತ್ತೇವೆ. ಯಾವಾಗ ತಮ್ಮನ್ನು ಆತ್ಮವೆಂದು ತಿಳಿದು ತಂದೆಯ
ನೆನಪಿನಲ್ಲಿರುತ್ತೀರೋ ಆಗ ತಂದೆಯ ನೆನಪು ನಿಲ್ಲುವುದು. ನೆನಪಿನಲ್ಲಿ ಬಹಳ ಅಪಕ್ವವಾಗಿದ್ದಾರೆ.
ಬಹುಬೇಗನೆ ದೇಹಾಭಿಮಾನವು ಬಂದು ಬಿಡುತ್ತದೆ ಅಂದಾಗ ಆತ್ಮಾಭಿಮಾನಿಗಳಾಗುವ ಅಭ್ಯಾಸ ಮಾಡಬೇಕಾಗಿದೆ.
ನಾವಾತ್ಮಗಳು ಇವರೊಂದಿಗೆ ವ್ಯಾಪಾರ ಮಾಡುತ್ತೇವೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು
ನೆನಪು ಮಾಡುವುದರಲ್ಲಿಯೇ ಲಾಭವಿದೆ. ನಾವೀಗ ಯಾತ್ರೆಯಲ್ಲಿದ್ದೇವೆಂದು ಆತ್ಮಕ್ಕೆ ತಿಳಿದಿದೆ.
ಕರ್ಮವನ್ನಂತೂ ಮಾಡಲೇಬೇಕಾಗಿದೆ. ಮಕ್ಕಳು ಮೊದಲಾದವರನ್ನೂ ಸಹ ಸಂಭಾಲನೆ ಮಾಡಬೇಕು.
ಉದ್ಯೋಗ-ವ್ಯವಹಾರಗಳನ್ನೂ ಮಾಡಬೇಕಾಗಿದೆ. ವ್ಯಾಪಾರ ಇತ್ಯಾದಿಗಳಲ್ಲಿಯೂ ಸಹ ನೆನಪಿರಲಿ -
ನಾವಾತ್ಮರಾಗಿದ್ದೇವೆ, ಇದು ಬಹಳ ಕಷ್ಟವಾಗಿರುತ್ತದೆ. ಬಾಬಾ ತಿಳಿಸುತ್ತಾರೆ - ಎಂದೂ ಯಾವುದೇ ಉಲ್ಟಾ
ಕರ್ಮ ಮಾಡಬೇಡಿ. ಎಲ್ಲದಕ್ಕಿಂತಲೂ ವಿಕಾರವು ದೊಡ್ಡ ಪಾಪವಾಗಿದೆ. ಇದೇ ಬಹಳ ತೊಂದರೆ ಕೊಡುವುದಾಗಿದೆ.
ಈಗ ನೀವು ಮಕ್ಕಳು ಪಾವನರಾಗುವ ಪ್ರತಿಜ್ಞೆಯನ್ನು ಮಾಡುತ್ತೀರಿ, ಅದರದೇ ನೆನಪಾರ್ಥವಾಗಿ ಈ
ರಕ್ಷಾಬಂಧನವಿದೆ. ಹಿಂದೆ ನಯಾಪೈಸೆಯ ರಾಖಿಯು ಸಿಗುತ್ತಿತ್ತು, ಬ್ರಾಹ್ಮಣರು ಹೋಗಿ ರಾಖಿಯನ್ನು
ಕಟ್ಟುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಾಖಿಯು ಎಷ್ಟು ಫ್ಯಾಷನೇಬಲ್ ಮಾಡುತ್ತಾರೆ!
ವಾಸ್ತವದಲ್ಲಿ ಇದು ಈಗಿನ ಮಾತಾಗಿದೆ. ನೀವು ತಂದೆಯೊಂದಿಗೆ ಪ್ರತಿಜ್ಞೆ ಮಾಡುತ್ತೀರಿ - ನಾವು ಎಂದೂ
ವಿಕಾರದಲ್ಲಿ ಹೋಗುವುದಿಲ್ಲ ಎಂದು. ನಿಮ್ಮಿಂದ ವಿಶ್ವ ಮಾಲೀಕರಾಗುವ ಆಸ್ತಿಯನ್ನು ಪಡೆಯುತ್ತೇವೆ.
ತಂದೆಯು ಹೇಳುತ್ತಾರೆ - 63 ಜನ್ಮಗಳು ವಿಷಯ ವೈತರಣಿ ನದಿಯಲ್ಲಿ ಮುಳುಗಿದ್ದಿರಿ, ಈಗ ನಿಮ್ಮನ್ನು
ಕ್ಷೀರ ಸಾಗರಕ್ಕೆ ಕರೆದೊಯ್ಯುತ್ತೇನೆ. ಸಾಗರವಲ್ಲ, ಹೋಲಿಕೆಯಲ್ಲಿ ಹೇಳಲಾಗುತ್ತದೆ. ನಿಮ್ಮನ್ನು
ಶಿವಾಲಯಕ್ಕೆ ಕರೆದೊಯ್ಯುತ್ತೇನೆ. ಅಲ್ಲಿ ಅಪಾರ ಸುಖವಿರುತ್ತದೆ. ಈಗ ಇದು ನಿಮ್ಮದು ಅಂತಿಮ
ಜನ್ಮವಾಗಿದೆ. ಹೇ ಆತ್ಮಗಳೇ, ಪವಿತ್ರರಾಗಿ. ಜನ್ಮ-ಜನ್ಮಾಂತರದ ಪಾಪವು ತಲೆಯ ಮೇಲಿದೆ. ಅದನ್ನು
ತಂದೆಯ ನೆನಪಿನಿಂದಲೇ ಭಸ್ಮ ಮಾಡಿಕೊಳ್ಳಬೇಕು. ಕಲ್ಪದ ಹಿಂದೆಯೂ ನಿಮಗೆ ಶಿಕ್ಷಣವನ್ನು
ಕೊಟ್ಟಿದ್ದೆನು, ಯಾವಾಗ ನೀವು ಗ್ಯಾರಂಟಿ ಕೊಡುತ್ತೀರಿ ಆಗ ತಂದೆಯು ಗ್ಯಾರಂಟಿ ಕೊಡುತ್ತಾರೆ. ಬಾಬಾ
ನಾವು ನಿಮ್ಮ ನೆನಪಿನಲ್ಲಿಯೇ ಇರುತ್ತೇವೆ. ಶರೀರದ ಸ್ಮೃತಿಯ ಇರದಂತೆ ನೆನಪು ಮಾಡಬೇಕು.
ಸನ್ಯಾಸಿಗಳಲ್ಲಿಯೂ ಕೆಲವರು ತೀಕ್ಷ್ಣ, ಪಕ್ಕಾ ಬ್ರಹ್ಮಜ್ಞಾನಿಗಳಿರುತ್ತಾರೆ, ಅವರೂ ಸಹ
ಕುಳಿತು-ಕುಳಿತಿದ್ದಂತೆಯೇ ದೇಹವನ್ನು ಬಿಡುತ್ತಾರೆ. ಇಲ್ಲಿ ನಿಮಗೆ ತಂದೆಯು ತಿಳಿಸುತ್ತಾರೆ -
ಪಾವನರಾಗಿ ಹೋಗಬೇಕು. ಅವರು ತನ್ನ ಮತದ ಮೇರೆಗೆ ನಡೆಯುತ್ತಾರೆ. ಶರೀರ ಬಿಟ್ಟು
ಮುಕ್ತಿ-ಜೀವನ್ಮುಕ್ತಿಗೆ ಹೋಗುತ್ತಾರೆ ಎನ್ನುವ ಮಾತಲ್ಲ. ಅವರು ಮತ್ತೆ ಇಲ್ಲಿಯೇ ಬರುತ್ತಾರೆ ಆದರೆ
ಇವರು ನಿರ್ವಾಣಧಾಮಕ್ಕೆ ಹೋದರೆಂದು ಅವರ ಅನುಯಾಯಿಗಳು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ -
ಒಬ್ಬರೂ ಸಹ ಹಿಂತಿರುಗಿ ಹೋಗುವುದಿಲ್ಲ, ನಿಯಮವೂ ಇಲ್ಲ ಏಕೆಂದರೆ ವೃಕ್ಷವು ವೃದ್ಧಿ ಹೊಂದಲೇಬೇಕು.
ಈಗ ನೀವು ಸಂಗಮಯುಗದಲ್ಲಿ
ಕುಳಿತಿದ್ದೀರಿ, ಮತ್ತೆಲ್ಲಾ ಮನುಷ್ಯರು ಕಲಿಯುಗದಲ್ಲಿದ್ದಾರೆ. ನೀವು ದೈವೀ
ಸಂಪ್ರದಾಯದವರಾಗುತ್ತಿದ್ದೀರಿ. ಯಾರು ಈ ಧರ್ಮದವರಾಗಿರುತ್ತಾರೆಯೋ ಅವರು ಬರುತ್ತಾ ಇರುತ್ತಾರೆ.
ಅಲ್ಲಿ ದೇವಿ-ದೇವತೆಗಳದೂ ವಂಶಾವಳಿಯಿರುತ್ತದೆಯಲ್ಲವೆ. ಇಲ್ಲಿ ಬದಲಾಗಿ ಅನ್ಯ ಧರ್ಮದಲ್ಲಿ
ಹೋಗಿರುವವರೆಲ್ಲರೂ ಮತ್ತೆ ಹಿಂತಿರುಗಿ ಬರುತ್ತಾರೆ ಇಲ್ಲವೆಂದರೆ ಅಲ್ಲಿ ಆ ಸ್ಥಾನವನ್ನು ತುಂಬುವವರು
ಯಾರು? ಖಂಡಿತವಾಗಿ ಅವರು ತಮ್ಮ ಸ್ಥಾನವನ್ನು ತುಂಬಲು ಮತ್ತೆ ಹಿಂತಿರುಗಿ ಬರುತ್ತಾರೆ. ಇದು ಬಹಳ
ಸೂಕ್ಷ್ಮವಾಗಿರುವಂತಹ ಮಾತಾಗಿದೆ. ಬಹಳ ಒಳ್ಳೊಳ್ಳೆಯ ಮಕ್ಕಳೂ ಬರುತ್ತಾರೆ, ಯಾರು ಬೇರೆ ಧರ್ಮದಲ್ಲಿ
ಪರಿವರ್ತನೆಯಾಗಿ ಹೋಗಿದ್ದಾರೆ ಅವರು ಮತ್ತೆ ಆ ಸ್ಥಾನಕ್ಕೆ ಬರುತ್ತಾರೆ. ನಿಮ್ಮ ಬಳಿ ಮುಸಲ್ಮಾನರೂ
ಬರುತ್ತಾರಲ್ಲವೆ. ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ತಕ್ಷಣ ಪರಿಶೀಲನೆ ಮಾಡುತ್ತಾರೆ - ಇಲ್ಲಿ
ಬೇರೆ ಧರ್ಮದವರು ಹೇಗೆ ಬರುತ್ತಾರೆ! ಆಪತ್ಕಾಲದಲ್ಲಿ ಬಹಳ ಮಂದಿಯನ್ನು ಹಿಡಿಯುತ್ತಾರೆ, ಮತ್ತೆ ಹಣ
ಕೊಡುವುದರಿಂದ ಬಿಟ್ಟು ಬಿಡುತ್ತಾರೆ. ಕಲ್ಪದ ಹಿಂದೆ ಏನು ನಡೆದಿತ್ತೊ ಅದನ್ನೇ ಈಗ ನೋಡುತ್ತಿದ್ದೀರಿ.
ಕಲ್ಪದ ಹಿಂದೆಯೂ ಇದೇ ರೀತಿಯಾಗಿತ್ತು. ಈಗ ನೀವು ಮನುಷ್ಯರಿಂದ ದೇವತೆಗಳು ಉತ್ತಮ
ಪುರುಷರಾಗುತ್ತಿದ್ದೀರಿ. ಇದು ಸರ್ವೋತ್ತಮ ಬ್ರಾಹ್ಮಣ ಕುಲವಾಗಿದೆ. ಈ ಸಮಯದಲ್ಲಿ ತಂದೆ ಹಾಗೂ
ಮಕ್ಕಳೂ ಆತ್ಮಗಳ ಸೇವೆಯಲ್ಲಿದ್ದೀರಿ. ಯಾರೇ ಬಡವರನ್ನು ಧನವಂತರನ್ನಾಗಿ ಮಾಡುವುದು ಆತ್ಮಿಕ
ಸೇವೆಯಾಗಿದೆ. ತಂದೆಯು ಕಲ್ಯಾಣ ಮಾಡುತ್ತಾರೆಂದರೆ ಮಕ್ಕಳೂ ಸಹ ಸಹಯೋಗವನ್ನು ಕೊಡಬೇಕಾಗಿದೆ. ಯಾರು
ಅನೇಕರಿಗೆ ಮಾರ್ಗವನ್ನು ತೋರಿಸುತ್ತಾರೆಯೋ ಅವರು ಬಹಳ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ನೀವು
ಮಕ್ಕಳು ಪುರುಷಾರ್ಥ ಮಾಡಬೇಕು ಆದರೆ ಚಿಂತಿಸುವ ಮಾತಿಲ್ಲ ಏಕೆಂದರೆ ನಿಮ್ಮ ಜವಾಬ್ದಾರಿ ತಂದೆಯ
ಮೇಲಿದೆ. ಪುರುಷಾರ್ಥವನ್ನು ಜೋರಾಗಿ ಮಾಡಿಸಲಾಗುತ್ತದೆ ಮತ್ತೆ ಯಾವ ಫಲ ಸಿಗುತ್ತದೆಯೋ ಅದರಿಂದ
ಕಲ್ಪದ ಹಿಂದೆಯೂ ಇದೇ ರೀತಿ ಸಿಕ್ಕಿತ್ತು ಎಂದು ತಿಳಿಯಲಾಗುತ್ತದೆ. ತಂದೆಯು ಮಕ್ಕಳಿಗೆ
ತಿಳಿಸುತ್ತಾರೆ - ಮಕ್ಕಳೇ, ಚಿಂತೆ ಮಾಡಬೇಡಿ, ಸೇವೆಯಲ್ಲಿ ಪರಿಶ್ರಮ ಪಡಿ. ಆಗಲಿಲ್ಲವೆಂದರೆ ಏನು
ಮಾಡುತ್ತೀರಿ! ಈ ಕುಲದವರಲ್ಲವೆಂದರೆ ಭಲೆ ಎಷ್ಟೇ ನೀವು ತಲೆ ಕೆಡಿಸಿಕೊಂಡರೂ ಕೆಲವರು ಬಹಳ
ವಾದ-ವಿವಾದ ಮಾಡುತ್ತಾರೆ, ಕೆಲವರು ಕಡಿಮೆ. ತಂದೆಯು ಹೇಳುತ್ತಾರೆ - ಯಾವಾಗ ಬಹಳ ದುಃಖವು
ಹೆಚ್ಚಾಗುತ್ತದೆಯೋ ಆಗ ಮತ್ತೆ ಬರುತ್ತೇನೆ. ನಿಮ್ಮದು ಏನೂ ವ್ಯರ್ಥವಾಗುವುದಿಲ್ಲ. ನಿಮ್ಮ
ಕೆಲಸವಾಗಿದೆ - ಸರಿಯಾದ ಮಾರ್ಗ ತೋರಿಸುವುದು. ಶಿವ ತಂದೆಯು ತಿಳಿಸುತ್ತಾರೆ - ತಂದೆಯನ್ನು ನೆನಪು
ಮಾಡಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಭಗವಂತನು ಇದ್ದಾರೆಂದು ಬಹಳ ಮಂದಿ ಹೇಳುತ್ತಾರೆ.
ಮಹಾಭಾರತ ಯುದ್ಧದ ಸಮಯದಲ್ಲಿ ಭಗವಂತ ಇದ್ದರು ಆದರೆ ಯಾವ ಭಗವಂತನಿದ್ದರು ಎಂಬುದರಲ್ಲಿ
ಗೊಂದಲವಾಗಿದ್ದಾರೆ. ಕೃಷ್ಣನಂತೂ ಇರಲು ಸಾಧ್ಯವಿಲ್ಲ. ಕೃಷ್ಣನು ಅದೇ ಚಹರೆಯಿಂದ ಮತ್ತೆ
ಸತ್ಯಯುಗದಲ್ಲಿಯೇ ಕಾಣಿಸಿಕೊಳ್ಳುತ್ತಾನೆ. ಪ್ರತಿಯೊಂದು ಜನ್ಮದಲ್ಲಿ ಚಹರೆಯ ಲಕ್ಷಣಗಳು
ಪರಿವರ್ತನೆಯಾಗುತ್ತವೆ. ಸೃಷ್ಟಿಯು ಈಗ ಪರಿವರ್ತನೆಯಾಗುತ್ತಿದೆ. ಹಳೆಯದನ್ನು ಹೊಸದನ್ನಾಗಿ ಈಗ
ಭಗವಂತನು ಹೇಗೆ ಮಾಡುತ್ತಿದ್ದಾರೆ, ಇದನ್ನೂ ಸಹ ಯಾರೂ ತಿಳಿದಿಲ್ಲ. ಕೊನೆಯಲ್ಲಿ ನಿಮ್ಮ ಹೆಸರು
ಪ್ರಸಿದ್ಧವಾಗುತ್ತದೆ. ಸ್ಥಾಪನೆಯಾಗುತ್ತಿದೆ, ಮತ್ತೆ ಅದರಲ್ಲಿ ನೀವು ರಾಜ್ಯ ಮಾಡುತ್ತೀರಿ.
ವಿನಾಶವೂ ಆಗುತ್ತದೆ. ಒಂದು ಕಡೆ ಹೊಸ ಪ್ರಪಂಚ, ಇನ್ನೊಂದು ಕಡೆ ಹಳೆಯ ಪ್ರಪಂಚ. ಈ ಚಿತ್ರವು ಬಹಳ
ಚೆನ್ನಾಗಿದೆ. ಬ್ರಹ್ಮನ ಮುಖಾಂತರ ಸ್ಥಾಪನೆ, ಶಂಕರನ ಮುಖಾಂತರ ವಿನಾಶವೆಂದು ಹೇಳುತ್ತಾರೆ ಆದರೆ ಏನೂ
ತಿಳಿದುಕೊಂಡಿಲ್ಲ. ತ್ರಿಮೂರ್ತಿಯ ಚಿತ್ರವು ಮುಖ್ಯವಾಗಿದೆ. ಶಿವ ತಂದೆಯು ಶ್ರೇಷ್ಠವಾಗಿದ್ದಾರೆ.
ನೀವು ತಿಳಿದಿದ್ದೀರಿ – ಶಿವ ತಂದೆಯು ಬ್ರಹ್ಮನ ಮುಖಾಂತರ ನೆನಪಿನ ಯಾತ್ರೆಯನ್ನು ನಮಗೆ
ಕಲಿಸುತ್ತಿದ್ದಾರೆ. ತಂದೆಯನ್ನು ನೆನಪು ಮಾಡಿ, ಯೋಗ ಎಂಬ ಅಕ್ಷರವು ಕಠಿಣವೆನಿಸುತ್ತದೆ. ನೆನಪು
ಎಂಬ ಅಕ್ಷರವು ಬಹಳ ಸಹಜವಾಗಿದೆ. ಬಾಬಾ ಅಕ್ಷರ ಬಹಳ ಪ್ರಿಯವೇ ಆಗಿದೆ. ಅವರಿಂದ ವಿಶ್ವದ ಆಸ್ತಿಯು
ಸಿಗುತ್ತದೆ. ನಾವು ಆತ್ಮಗಳು ಅಂತಹ ತಂದೆಯನ್ನೇ ನೆನಪು ಮಾಡುವುದಿಲ್ಲ ಆದ್ದರಿಂದ ನಿಮಗೆ
ನಾಚಿಕೆಯಾಗುತ್ತದೆಯಲ್ಲವೆ. ತಂದೆಯೂ ಹೇಳುತ್ತಾರೆ - ನೀವು ತಿಳುವಳಿಕೆಹೀನರಾಗಿದ್ದೀರಿ. ತಂದೆಯನ್ನು
ನೆನಪು ಮಾಡಲಿಲ್ಲವೆಂದರೆ ನಿಮಗೆ ಆಸ್ತಿಯು ಹೇಗೆ ಸಿಗುತ್ತದೆ? ವಿಕರ್ಮಗಳು ಹೇಗೆ ವಿನಾಶವಾಗುತ್ತದೆ.
ನೀವು ಆತ್ಮಗಳಾಗಿದ್ದೀರಿ, ನಾನು ನಿಮಗೆ ಪರಮಪಿತ ಪರಮಾತ್ಮ ಅವಿನಾಶಿಯಾಗಿದ್ದೇನೆ. ನಾವು ಪಾವನರಾಗಿ
ಸುಖಧಾಮದಲ್ಲಿ ಹೋಗಬೇಕೆಂದು ನೀವು ಇಷ್ಟ ಪಡುತ್ತೀರಿ. ಅದಕ್ಕಾಗಿ ಶ್ರೀಮತದಂತೆ ನಡೆಯಬೇಕು.
ತಂದೆಯನ್ನು ನೆನಪು ಮಾಡಿದಾಗ ವಿಕರ್ಮಗಳು ವಿನಾಶವಾಗುತ್ತದೆ. ನೆನಪು ಮಾಡುವುದಿಲ್ಲವೆಂದರೆ ವಿಕರ್ಮ
ವಿನಾಶ ಹೇಗಾಗುತ್ತದೆ! ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಪ್ರತಿಯೊಂದು
ಪ್ರಕಾರದಿಂದ ಪುರುಷಾರ್ಥ ಮಾಡಿ, ಚಿಂತೆ ಮಾಡಬಾರದು ಏಕೆಂದರೆ ನಮ್ಮ ಜವಾಬ್ದಾರಿ ಸ್ವಯಂ ತಂದೆಯ
ಮೇಲಿದೆ. ನಮ್ಮದೇನೂ ವ್ಯರ್ಥವಾಗುವುದಿಲ್ಲ.
2. ತಂದೆಯ ಸಮಾನ
ಬಹಳ-ಬಹಳ ಮಧುರರಾಗಿ ಅನೇಕರ ಕಲ್ಯಾಣ ಮಾಡಿ ಈ ಅಂತಿಮ ಜನ್ಮದಲ್ಲಿ ಖಂಡಿತ ಪವಿತ್ರರಾಗಬೇಕು.
ವ್ಯವಹಾರ ಮುಂತಾದವನ್ನು ಮಾಡುತ್ತಾ ನಾನು ಆತ್ಮನಾಗಿದ್ದೇನೆಂದು ಅಭ್ಯಾಸ ಮಾಡಬೇಕು.
ವರದಾನ:
ಪ್ರವೃತ್ತಿಯ
ವಿಸ್ತಾರದಲ್ಲಿರುತ್ತಾ ಫರಿಸ್ಥಾತನದ ಸಾಕ್ಷಾತ್ಕಾರ ಮಾಡಿಸುವಂತಹ ಸಾಕ್ಷಾತ್ಕಾರಮೂರ್ತಿ ಭವ.
ಪ್ರವೃತ್ತಿಯ
ವಿಸ್ತಾರವಿದ್ದರೂ ಸಹ ವಿಸ್ತಾರವನ್ನು ಸಂಕೀರ್ಣಗೊಳಿಸಿ ಉಪರಾಮವಾಗಿರುವಂತಹ ಅಭ್ಯಾಸ ಮಾಡಿ. ಈಗೀಗ
ಸ್ಥೂಲ ಕಾರ್ಯ ಮಾಡುತ್ತಿರುವಿರಿ, ಈಗೀಗ ಅಶರೀರಿಯಾದಿರಿ-ಈ ಅಭ್ಯಾಸ ಫರಿಷ್ತೇತನದ ಸಾಕ್ಷಾತ್ಕಾರ
ಮಾಡಿಸುತ್ತದೆ. ಉನ್ನತ ಸ್ಥಿತಿಯಲ್ಲಿರುವುದರಿಂದ ಸಣ್ಣ-ಪುಟ್ಟ ಮಾತುಗಳು ವ್ಯಕ್ತಭಾವದ
ಅನುಭವವಾಗುವುದು. ಹಿರಿಯ ಸ್ಥಾನಕ್ಕೆ ಹೋಗುವುದರಿಂದ ಕೀಳುತನ ತಾನಾಗಿಯೇ ಬಿಟ್ಟು ಹೋಗಿ ಬಿಡುವುದು.
ಪರಿಶ್ರಮದಿಂದ ಬಿಡಿಸಿಕೊಂಡು ಬಿಡುವರು. ಸಮಯ ಸಹಾ ಉಳಿತಾಯವಾಗುವುದು, ಸೇವೆಯು ಸಹಾ ವೇಗವಾಗಿ
ಆಗುವುದು. ಬುದ್ಧಿ ಇಷ್ಟು ವಿಶಾಲವಾಗಿ ಬಿಡುವುದು ಒಂದೇ ಸಮಯದಲ್ಲಿ ಬಹಳಷ್ಟು ಕಾರ್ಯ ಮಾಡಲು
ಸಾಧ್ಯವಾಗುವುದು.
ಸ್ಲೋಗನ್:
ಖುಷಿಯನ್ನು ಖಾಯಂ
ಆಗಿಟ್ಟು ಕೊಳ್ಳಲು ಆತ್ಮರೂಪಿ ದೀಪಕ್ಕೆ ಜ್ಞಾನರೂಪಿ ತುಪ್ಪವನ್ನು ಪ್ರತಿದಿನ ಹಾಕುತ್ತಿರಿ.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಮಕ್ಕಳೊಂದಿಗೆ ತಂದೆಯ
ಪ್ರೀತಿಯಿದೆ ಅದಕ್ಕೆ ತಂದೆಯು ಸದಾ ಹೇಳುತ್ತಾರೆ ಮಕ್ಕಳೇ ಯಾರಾಗಿದ್ದೀರಿ, ಹೇಗಿದ್ದೀರಿ -
ನನ್ನವರಾಗಿದ್ದೀರಿ. ಹಾಗೆಯೇ ನೀವು ಸಹ ಸದಾ ಪ್ರೀತಿಯಲ್ಲಿ ಲವಲೀನರಾಗಿರಿ, ಹೃದಯದಿಂದ ಹೇಳಿರಿ ಬಾಬಾ
ಯಾರೇ ಇರಲಿ ಅದು ಎಲ್ಲವೂ ನೀವೇ ಆಗಿದ್ದೀರಿ. ಎಂದೂ ಅಸತ್ಯದ ರಾಜ್ಯದ ಪ್ರಭಾವದಲ್ಲಿ ಬರಬೇಡಿ.
ಶ್ರೇಷ್ಠ ಭಾಗ್ಯದ ಗೆರೆ ಎಳೆಯುವ ಪೇನ್ನು (ಲೇಖನಿ)ನ್ನು ತಂದೆಯು ನೀವು ಮಕ್ಕಳ ಕೈಯಲ್ಲಿ
ಕೊಟ್ಟೀದ್ದಾರೆ, ನೀವು ಎಷ್ಟು ಬೇಕು ಅಷ್ಟು ಭಾಗ್ಯ ಮಾಡಿಕೊಳ್ಳಬಹುದು.