06.09.26 Avyakt Bapdada
Kannada
Murli 19.10.2011 Om Shanti Madhuban
“ವ್ಯರ್ಥ ಸಮಯ, ವ್ಯರ್ಥ
ಸಂಕಲ್ಪದ ವಿಜಯಿಗಳಾಗಿ, ಪರಸ್ಪರದಲ್ಲಿ ಸಂಸ್ಕಾರ ಮಿಲನದ ರಾಸ್ನ ಸಂಕಲ್ಪ ಮಾಡಿ.”
ಇಂದು ಬಾಪ್ದಾದಾರವರು
ನಾಲ್ಕೂ ಕಡೆಯ ಮಧುರಾತಿ ಮಧುರ ಪ್ರಿಯಾತಿ ಪ್ರಿಯ ಮಕ್ಕಳನ್ನು ನೋಡುತ್ತಿದ್ದೇವೆ. ಎಲ್ಲರೂ ಬಹಳ
ಪ್ರೀತಿಯಿಂದ ತಮ್ಮ ನೆನಪು ಕೊಡುತ್ತಿದ್ದೀರಿ. ಇಷ್ಟು ಪ್ರೀತಿ ಕೇವಲ ತಂದೆಯನ್ನೇ ಮಾಡುತ್ತೀರಿ. ಈ
ಪರಮಾತ್ಮ ಪ್ರೀತಿಯು ಕೇವಲ ಈಗ ಪ್ರಾಪ್ತಿಯಾಗುತ್ತದೆ. ಪ್ರತಿಯೊಂದು ಮಗು ಪ್ರೀತಿಯಲ್ಲಿ
ಲವಲೀನವಾಗಿದೆ. ತಂದೆಯೂ ಸಹ ಪ್ರೀತಿಯ ಪ್ರತ್ಯುತ್ತರವನ್ನು ಪ್ರತಿಯೊಂದು ಮಗುವಿಗೆ ಕೊಡುತ್ತಿದ್ದಾರೆ
- ವಾಹ್ ಮಕ್ಕಳೇ ವಾಹ್! ಭಲೆ ಸನ್ಮುಖದಲ್ಲಿರಬಹುದು, ಭಲೆ ದೂರವಿರಬಹುದು ಆದರೆ ಪ್ರತಿಯೊಂದು ಮಗು
ತಂದೆಯ ಹೃದಯದಲ್ಲಿ ಸಮಾವೇಶವಾಗಿದ್ದಾರೆ. ಎಲ್ಲರ ಹೃದಯದಲ್ಲಿ ಈ ಗೀತೆ ಮೊಳಗುತ್ತಿದೆ - ಇತನಾ
ಪ್ಯಾರ್ ಕರೆಗಾ ಕೌನ್ (ಇಷ್ಟು ಪ್ರೀತಿಯನ್ನು ಮಾಡುವವರು ಯಾರು!) ಈ ತಂದೆ ಮತ್ತು ಮಕ್ಕಳ ಆತ್ಮಿಕ
ಪ್ರೀತಿಯು ಪ್ರತಿಯೊಬ್ಬರನ್ನು ದೇಹದಿಂದ ಭಿನ್ನ ಮತ್ತು ತಂದೆಯ ಪ್ರಿಯರನ್ನಾಗಿ ಮಾಡುವಂತದ್ದಾಗಿದೆ
ಮತ್ತು ಈ ಪ್ರೀತಿಯು ಈಗಲೇ ಮಕ್ಕಳಿಗೆ ಪ್ರಾಪ್ತಿಯಾಗುತ್ತದೆ. ಈ ಪ್ರೀತಿಯು ಮಕ್ಕಳನ್ನು ಎಂತಹವರಿಂದ
ಎಂತಹವರನ್ನಾಗಿ ಮಾಡುತ್ತದೆ! ಈ ಪ್ರೀತಿಯು ಕೇವಲ ಈ ಒಂದು ಜನ್ಮದಲ್ಲಿ ಪ್ರಾಪ್ತಿಯಾಗುತ್ತದೆ.
ತಂದೆಯೂ ಸಹ ಮಕ್ಕಳ ಸ್ನೇಹವನ್ನು ನೋಡಿ ಮಕ್ಕಳ ಸ್ನೇಹದಲ್ಲಿ ಸಮಾವೇಶವಾಗುತ್ತಾರೆ.
ಇಂದು ಬಾಪ್ದಾದಾರವರು ಪ್ರತಿಯೊಬ್ಬರ ಮಸ್ತಕದಲ್ಲಿ ಮೂರು ಭಾಗ್ಯವನ್ನು ನೋಡುತ್ತಿದ್ದಾರೆ. ಒಂದು-
ತಂದೆಯ ಸ್ವರೂಪದಲ್ಲಿ ಪ್ರಾಪ್ತಿಯಾಗಿರುವ ಆಸ್ತಿಯ ಭಾಗ್ಯ, ಎರಡನೆಯದು - ಶಿಕ್ಷಕನ ರೂಪದಲ್ಲಿ
ಶ್ರೇಷ್ಠ ಶಿಕ್ಷಣದ ಭಾಗ್ಯ ಮತ್ತು ಮೂರನೆಯದು - ಸದ್ಗುರುವಿನ ರೂಪದಲ್ಲಿ ವರದಾನಗಳ ಭಾಗ್ಯ.
ಪ್ರತಿಯೊಬ್ಬರ ಮಸ್ತಕವು ಈ ಮೂರು ಭಾಗ್ಯಗಳಿಂದ ಹೊಳೆಯುತ್ತಿದೆ. ಬಾಪ್ದಾದಾರವರೂ ಸಹ ತನ್ನ
ಭಾಗ್ಯಶಾಲಿ ಮಕ್ಕಳನ್ನು ನೋಡಿ ಖುಷಿ ಪಡುತ್ತಿದ್ದೇವೆ. ಭಲೆ ಸನ್ಮುಖದಲ್ಲಿ ಕುಳಿತಿರಬಹುದು, ಭಲೆ
ದೂರದಲ್ಲಿ ಕುಳಿತಿರಬಹುದು ಆದರೆ ಹೃದಯದಲ್ಲಿ ಸಮೀಪವಿದ್ದೀರಿ. ಇಂತಹ ಮಕ್ಕಳ ಮತ್ತು ತಂದೆಯ
ಪ್ರೀತಿಯು ಇಡೀ ಕಲ್ಪದಲ್ಲಿ ಈ ಸಮಯದಲ್ಲಿಯೇ ಪ್ರಾಪ್ತಿಯಾಗುತ್ತದೆ. ಈ ಪ್ರೀತಿಯ ಅನುಭವವನ್ನು
ಅನ್ಯರಿಗೂ ಮಾಡಿಸುತ್ತಿದ್ದೀರಿ. ಈಗ ಕೆಲ ಕೆಲವು ವ್ಯಕ್ತಿಗಳು ತಿಳಿಯುತ್ತಾರೆ- ಈ ಬ್ರಾಹ್ಮಣ
ಆತ್ಮರಿಗೆ ಏನು ಸಿಕ್ಕಿದೆ ಎಂದು. ಏನು ಸಿಕ್ಕಿದೆ, ಅದರ ಸ್ಪಷ್ಟೀಕರಣವಾಗುತ್ತಾ ಇದೆ. ಬಾಬಾರವರು
ನೋಡಿದರು - ಈಗ ಈ ಪ್ಲಾಟಿನಂ ಜುಬಿಲಿಯು ನಾಲ್ಕೂ ಕಡೆ ಪ್ರಭಾವ ಬೀರಿದೆ ಮತ್ತು ಮಕ್ಕಳೂ ಸಹ
ಹೃದಯದಿಂದ ಸೇವೆ ಮಾಡಿದ್ದೀರಿ ಮತ್ತು ಮುಂದಿನ ಯೋಜನೆಯನ್ನೂ ಮಾಡಿದ್ದೀರಿ. ಅಂದಮೇಲೆ ಬಾಪ್ದಾದಾರವರೂ
ಸಹ ನಾಲ್ಕೂ ಕಡೆಯ ಮಕ್ಕಳಿಗೆ ಶುಭಾಷಯಗಳನ್ನು ಕೊಡುತ್ತಿದ್ದಾರೆ - ವಾಹ್ ಮಕ್ಕಳೇ ವಾಹ್! ಈ 75
ವರ್ಷಗಳು ತಮ್ಮ-ತಮ್ಮ ಪುರುಷಾರ್ಥದನುಸಾರ ಮಾಡುತ್ತಾ ನಿರ್ವಿಘ್ನರಾಗಿ, ಅನ್ಯರನ್ನೂ ಮಾಡಿ
ತಲುಪಿಬಿಟ್ಟಿದ್ದೀರಿ. ಈಗ ತಂದೆಯು ಮಕ್ಕಳಿಂದ ಏನನ್ನು ಬಯಸುತ್ತಾರೆ? ತಂದೆಯು ಪ್ರತಿಯೊಂದು
ಮಗುವಿನಲ್ಲಿ ಸದಾ ಇದೇ ಆಸೆಯಿದೆ - ಪ್ರತಿಯೊಂದು ಮಗು ತಂದೆಯ ಸಮಾನನಾಗಿ ಬಿಡಲಿ. ಹೇಗೆ ಬ್ರಹ್ಮಾ
ತಂದೆಯು ವಿಜಯಿಯಾದರು, ಹಾಗೆಯೇ ಪ್ರತಿಯೊಂದು ಮಗು ಸದಾ ವಿಜಯಿಯಾಗಲಿ. ಇದಕ್ಕಾಗಿ ಹೇಗೆ ಬ್ರಹ್ಮಾ
ತಂದೆಯು ಏನು ಮಾಡಿದರು? ಫಾಲೋ ಫಾದರ್. ಅಂದಾಗ ತಾವೆಲ್ಲರೂ ಸಹ ಪ್ರತೀ ಹೆಜ್ಜೆಯನ್ನು ಇಡುವುದಕ್ಕೆ
ಮೊದಲು ಪರಿಶೀಲಿಸಿ - ಇದನ್ನು ಬ್ರಹ್ಮಾ ತಂದೆಯು ಮಾಡಿದರೆ? ಬ್ರಹ್ಮಾ ತಂದೆಯು ಪ್ರತಿಯೊಂದು
ಮಗುವಿನ ಪ್ರತಿ ತಿಳಿದಿದ್ದರು - ಈ ಮಗು ಪುರುಷಾರ್ಥದಲ್ಲಿಯೂ, ಸೇವೆಯಲ್ಲಿಯೂ ಸಹ ಬಲಹೀನವಾಗಿದೆ
ಎಂದು ಭಲೆ ತಿಳಿದಿದ್ದರು ಆದರೆ ಬಲಹೀನರ ಪ್ರತಿ ಮತ್ತಷ್ಟು ದಯೆ ಹಾಗೂ ಕಲ್ಯಾಣದ ಭಾವನೆಯಿತ್ತು.
ಹಾಗೆಯೇ ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಇದನ್ನೇ ತಿಳಿಸುತ್ತಾರೆ - ತಮ್ಮ ಪರಿವಾರದ ಪ್ರತಿಯೊಬ್ಬ
ಸಹೋದರ ಹಾಗೂ ಸಹೋದರಿಯ ಪ್ರತಿ ಶುಭ ಭಾವನೆ, ಶುಭ ಕಾಮನೆ, ದಯೆ ಹಾಗೂ ಕಲ್ಯಾಣದ ದೃಷ್ಟಿಯಿಂದ ಅವರಿಗೂ
ಸಹಯೋಗಿಗಳಾಗಿರಿ. ಬಾಪ್ದಾದಾರವರು ಮೊದಲೇ ತಿಳಿಸಿದ್ದೆವು - ಪ್ರೀತಿಯ ಸಬ್ಜೆಕ್ಟ್ನಲ್ಲಿ
ಪ್ರತಿಯೊಂದು ಮಗು ಯಥಾ ಶಕ್ತಿ ಉತ್ತೀರ್ಣರಾಗಿದ್ದೀರಿ. ಪ್ರೀತಿಯ ಕಾರಣವೇ ಮುಂದುವರೆಯುತ್ತಿದ್ದೀರಿ.
ಈಗ ಬಾಪ್ದಾದಾರವರು ಮಕ್ಕಳ ಪ್ರೀತಿಯನ್ನು ನೋಡಿ ಖುಷಿ ಪಡುತ್ತಿದ್ದಾರೆ. ಪ್ರೀತಿಯ ಸಬ್ಜೆಕ್ಟ್ನ
ಕಾರಣ ಪ್ರತಿಯೊಂದು ಮಗು ನಂಬರ್ವಾರ್ ನಡೆಯುತ್ತಿದ್ದೀರಿ. ಈಗ ಬಾಪ್ದಾದಾರವರು ಬಯಸುತ್ತಾರೆ -
ಪ್ರೀತಿಯಲ್ಲಿ ಸ್ವಲ್ಪ ಅರ್ಪಣೆಯನ್ನೂ ಮಾಡಲಾಗುತ್ತದೆ. ತಂದೆಯೊಂದಿಗೆ ಪ್ರೀತಿಯಿದೆ ಆದ್ದರಿಂದ ಯಾವ
ಅರ್ಪಣೆ ಮಾಡಬೇಕಾಗಿದೆ? ಬಾಪ್ದಾದಾರವರು ಏನನ್ನು ಬಯಸುತ್ತಾರೆ ಅದನ್ನು ತಿಳಿದು ಬಿಟ್ಟಿರಾ,
ತಿಳಿದಿರಲ್ಲವೆ ಬಾಬಾರವರು ಏನನ್ನು ಬಯಸುತ್ತಾರೆ? ತಿಳಿದಿರಾ? ಕತ್ತನ್ನು ಅಲುಗಾಡಿಸಿ.
ತಿಳಿದಿದ್ದೀರಾ? ಅಂದಾಗ ಮಾಡಬೇಕಾಗಿದೆ ಇದರ ಧೈರ್ಯವಿದೆಯಲ್ಲವೆ. ಧೈರ್ಯವಿದೆಯೇ ಕೈಯೆತ್ತಿರಿ.
ಧೈರ್ಯವಿದೆಯೇ? ಒಳ್ಳೆಯದು - ಅಂದಮೇಲೆ ಸಾಹಸ ಮಕ್ಕಳದು ಸಹಯೋಗ ತಂದೆಯದು ಇದ್ದೇ ಇದೆ.
ಈಗ ಬಾಪ್ದಾದಾರವರು ಬಯಸುತ್ತಾರೆ, ಫಲಿತಾಂಶದಲ್ಲಿ ನೋಡಿದರೆ ಈಗಿನವರೆಗೂ ಸಂಪೂರ್ಣ ಪವಿತ್ರತೆಯ
ಲೆಕ್ಕದಿಂದ ವ್ಯರ್ಥ ಸಂಕಲ್ಪವೂ ಸಹ ಅಪವಿತ್ರತೆಯ ಬೀಜವಾಗಿದೆ. ಅಂದಮೇಲೆ ಬಾಪ್ದಾದಾರವರು ನೋಡಿದರು
- ಈ ವ್ಯರ್ಥ ಸಂಕಲ್ಪ ನಡೆಯುವುದು ಮೆಜಾರಿಟಿ ಮಕ್ಕಳಲ್ಲಿ ಈಗಿನವರೆಗೂ ಸಂಸ್ಕಾರವು ಉಳಿದುಕೊಂಡಿದೆ.
ಒಂದು – ವ್ಯರ್ಥ ಸಂಕಲ್ಪ ಮತ್ತು ಇನ್ನೊಂದು - ವ್ಯರ್ಥ ಸಮಯ - ಇದು ಮೆಜಾರಿಟಿ ಮಕ್ಕಳಲ್ಲಿ
ಈಗಿನವರೆಗೂ ಕಾಣಿಸುತ್ತಿದೆ ಮತ್ತು ವ್ಯರ್ಥ ಸಂಕಲ್ಪಕ್ಕೆ ಆಧಾರವಾಗಿದೆ - ಮನಸ್ಸು, ಅದು
ಮನ್ಮನಾಭವವಾಗಿರಲು ಬಿಡುವುದಿಲ್ಲ ಏಕೆಂದರೆ ಬಾಪ್ದಾದಾರವರು ಬಹಳ ಸಮಯದಿಂದ ಸೂಚನೆ ಕೊಟ್ಟಿದ್ದಾರೆ
- ಏನೆಲ್ಲಾ ಆಗುತ್ತದೆಯೋ ಅದು ಅಚಾನಕ್ ಆಗುವುದಿದೆ. ಅಂದಮೇಲೆ ಅಚಾನಕ್ನ ಲೆಕ್ಕದಿಂದ ಬಾಪ್ದಾದಾರವರು
ಪರಿಶೀಲನೆ ಮಾಡಿದರು - ಮೆಜಾರಿಟಿ ಮಕ್ಕಳಲ್ಲಿ ಈ ವ್ಯರ್ಥ ಸಂಕಲ್ಪದ ಸಂಸ್ಕಾರವಿದೆ. ಅಂದಮೇಲೆ
ಯಾವಾಗ ಬ್ರಹ್ಮಾ ತಂದೆಯು ವ್ಯರ್ಥ ಸಮಯ, ವ್ಯರ್ಥ ಸಂಕಲ್ಪದ ವಿಜಯಿಯಾಗಿ ಕರ್ಮಾತೀತರಾದರು ಅಂದಮೇಲೆ
ಫಾಲೋ ಫಾದರ್.
ಬಾಪ್ದಾದಾರವರು ನೋಡಿದರು - ಮನಸ್ಸು ತಮ್ಮ ರಚನೆಯಾಗಿದೆ, ತಾವು ಮನಸ್ಸಿನ ರಚಯಿತನಾಗಿದ್ದೀರಿ
ಅಂದಮೇಲೆ ಮನಸ್ಸನ್ನು ನಡೆಸುವವರಾಗಿದ್ದೀರಿ. ಮನಸ್ಸಿನ ಕಂಟ್ರೋಲಿಂಗ್ ಪವರ್, ರೂಲಿಂಗ್ ಪವರ್ನ
ಮಾಲೀಕನಾಗಿದ್ದೀರಿ ಆದರೆ ಆದರೂ ಸಹ ಮನಸ್ಸು ಎಲ್ಲಿಯಾದರೂ ಮೋಸ ಮಾಡಿ ಬಿಡುತ್ತದೆ. ಅದಾಗಿದೆ ತಮ್ಮ
ರಚನೆ, ನನ್ನದಲ್ಲವೆ! ಆದರೆ ಕಂಟ್ರೋಲಿಂಗ್ ಪವರ್ ಕಡಿಮೆಯಿರುವ ಕಾರಣ ಮೋಸ ಮಾಡಿಬಿಡುತ್ತದೆ.
ಮನಸ್ಸನ್ನು ಕುದುರೆ ಎಂದೂ ಸಹ ಹೇಳಲಾಗುತ್ತದೆ ಆದರೆ ತಮ್ಮ ಬಳಿ ಶ್ರೀಮತದ ಲಾಗಮು ಇದೆ. ಲಗಾಮು
ಇದೆಯಲ್ಲವೆ! ಅಂದಮೇಲೆ ಒಂದುವೇಳೆ ಮನಸ್ಸು ಎಂದಾದರೂ ವ್ಯರ್ಥ ಸಂಕಲ್ಪದಕಡೆ ಹೋಗುತ್ತದೆಯೆಂದರೆ
ಲಗಾಮನ್ನು ಟೈಟ್ ಮಾಡುವುದರಿಂದ ತಮ್ಮನ್ನು ವ್ಯರ್ಥ ಸಂಕಲ್ಪದ ಸ್ವಲ್ಪ ಅಪವಿತ್ರತೆಯನ್ನೂ ಸಹ
ಸಮಾಪ್ತಿ ಮಾಡಿ ಬಿಡಬಹುದು. ಮನಸ್ಸಿನ ಮಾಲೀಕರಾಗಿ, ಹೇಗೆ ಬ್ರಹ್ಮಾ ತಂದೆಯು ಪ್ರತಿನಿತ್ಯ ಮನಸ್ಸಿನ
ಪರಿಶೀಲನೆ ಮಾಡಿದರು ಹಾಗೆಯೇ ಪ್ರತಿನಿತ್ಯ ಪರಿಶೀಲನೆ ಮಾಡಿ ಮತ್ತು ವ್ಯರ್ಥ ಸಂಕಲ್ಪವನ್ನು ಸಮಾಪ್ತಿ
ಮಾಡಿ. ಅಂದಮೇಲೆ ಇಂದು ಬಾಪ್ದಾದಾರವರು ಇದನ್ನೇ ಬಯಸುತ್ತಾರೆ - ಈ ವ್ಯರ್ಥ ಸಂಕಲ್ಪವನ್ನು ಸಮಾಪ್ತಿ
ಮಾಡಿ. ಕೆಟ್ಟ ಸಂಕಲ್ಪಗಳು ಕಡಿಮೆಯಿದೆ, ವ್ಯರ್ಥ ಸಂಕಲ್ಪವು ಹೆಚ್ಚಿನದಾಗಿ ಇದೆ ಆದರೆ ಇದರಲ್ಲಿ
ಸಮಯವು ಬಹಳ ಹೊರಟು ಹೋಗುತ್ತದೆ. ಮನಸ್ಸಿನ ಮಾಲೀಕರಾಗಿ ಮನಸ್ಸನ್ನು ಈ ರೀತಿ ಬ್ಯುಸಿ ಮಾಡಿ - ಅದು
ಬೇರೆ ಕಡೆ ಆಕರ್ಷಿಸುತ್ತದೆ, ತಮ್ಮ ಲಗಾಮನ್ನು ಸಡಿಲ ಮಾಡಬೇಡಿ. ಈ ರೀತಿ ಮಾಡಲು ಆಗುತ್ತದೆಯೇ? ಇಂದು
ಬಾಪ್ದಾದಾರವರು ವ್ಯರ್ಥ ಸಂಕಲ್ಪದ ಸಮಾಪ್ತಿಯ ಸಂಕಲ್ಪವನ್ನು ಎಲ್ಲರಿಗೂ ಕೊಡುತ್ತಿದ್ದಾರೆ. ಮಾಡಲು
ಸಾಧ್ಯವಿದೆಯೇ? ವ್ಯರ್ಥ ಸಂಕಲ್ಪವನ್ನೂ ಸಮಾಪ್ತಿ ಮಾಡುತ್ತೇವೆಂದು ಯಾರು ತಿಳಿಯುತ್ತೀರಿ ಅವರು
ಕೈಯನ್ನೆತ್ತಿರಿ, ಸಮಾರೋಹವನ್ನು ಆಚರಿಸುತ್ತೇವೆ. ವ್ಯರ್ಥ ಸಮಯವನ್ನೂ ಉಳಿತಾಯ ಮಾಡಬೇಕು. ಸಮಯ
ಮತ್ತು ಸಂಕಲ್ಪ ಎರಡನ್ನೂ ಉಳಿತಾಯ ಮಾಡಬೇಕು ಏಕೆಂದರೆ ಬಾಪ್ದಾದಾರವರು ಎಲ್ಲರ ಚಾರ್ಟ್ ನೋಡುತ್ತಾರೆ.
ಚಾರ್ಟ್ನಲ್ಲಿ ಈ ಕೊರತೆ ಮೆಜಾರಿಟಿ ಮಕ್ಕಳಲ್ಲಿ ಕಂಡುಬಂದಿತು. ಮನಸ್ಸಿನ ಮಾಲೀಕರೇ ವಿಶ್ವದ
ಮಾಲೀಕರಾಗುವವರಾಗಿದ್ದಾರೆ. ಹೇಗೆ ಬ್ರಹ್ಮಾತಂದೆಯು ಮನಜೀತರಾಗಿ ವಿಶ್ವದ ಮಾಲೀಕನಾಗಿ ಬಿಟ್ಟರು,
ಈಗಂತು ತಮಗಾಗಿ, ಮಕ್ಕಳಿಗಾಗಿ ಆಹ್ವಾನ ಮಾಡುತ್ತಿದ್ದಾರೆ, ತಮ್ಮ ಅಡ್ವಾನ್ಸ್ ಪಾರ್ಟಿಯವರೂ ಸಹ
ಆಹ್ವಾನ ಮಾಡುತ್ತಿದ್ದಾರೆ. ತಿಳಿಸಿದೆವಲ್ಲವೆ – ನಾಲ್ಕು ಗಂಟೆಗೆ (ಅಮೃತವೇಳೆ) ಅಡ್ವಾನ್ಸ್
ಪಾರ್ಟಿಯವರೂ ಸಹ ವತನದಲ್ಲಿ ಬರುತ್ತಾರೆ, ಆಗ ಕೇಳುತ್ತಾರೆ - ಮುಕ್ತಿಯ ಗೇಟ್ ಯಾವಾಗ ತೆರೆಯುತ್ತದೆ?
ಯಾರು ತೆರೆಯಬೇಕಾಗಿದೆ? ತಾವೆಲ್ಲರೂ ಮುಕ್ತಿಯ ಗೇಟ್ ತೆರೆಯುವವರಾಗಿದ್ದೀರಲ್ಲವೆ. ತಾವು
ಸಂಪೂರ್ಣರಾಗುವುದು ಅರ್ಥಾತ್ ಮುಕ್ತಿಯ ಗೇಟ್ ತೆರೆಯುವುದಾಗಿದೆ. ಅಂದಮೇಲೆ ಬಾಪ್ದಾದಾರವರೊಂದಿಗೆ
ಅಡ್ವಾನ್ಸ್ ಪಾರ್ಟಿ ಆತ್ಮಿಕ ವಾರ್ತಾಲಾಪ ಮಾಡುತ್ತಿದ್ದಾರೆ - ಎಲ್ಲಿಯವರೆಗೆ? ಅಂದಮೇಲೆ ಬಾಬಾರವರು
ತಮ್ಮೊಂದಿಗೆ ಕೇಳುತ್ತಾರೆ - ಎಲ್ಲಿಯವರೆಗೆ? ಅಂದಮೇಲೆ ಏನು ಜವಾಬು ಕೊಡುತ್ತೀರಿ? ಮೊದಲ ಸಾಲಿನವರು
ಹೇಳಿ, ಎಲ್ಲಿಯವರೆಗೆ? ಪ್ರತೀ ಕಾರ್ಯಕ್ಕಾಗಿ ದಿನಾಂಕವನ್ನು ನಿಗಧಿ ಪಡಿಸುತ್ತೀರಲ್ಲವೆ. ಅಂದಮೇಲೆ
ಈ ಕಾರ್ಯದ ದಿನಾಂಕ ಎಲ್ಲಿಯವರೆಗೆ? ಬ್ರಹ್ಮಾ ತಂದೆಯಂತು ಫರಿಶ್ತಾರೂಪದಲ್ಲಿ ಆಹ್ವಾನ
ಮಾಡುತ್ತಿದ್ದಾರೆ. ದಿನಾಂಕ ತಿಳಿಸಲು ಸಾಧ್ಯವಿದೆಯೇ? ಹೇಳಿ, ದಿನಾಂಕ ನಿಗಧಿ ಪಡಿಸಲು ಸಾಧ್ಯವಿದೆಯೇ?
ಈಗ ದಿನಾಂಕವು ನಿಗಧಿಯಿದೆಯೇ? ಪಾಂಡವರು ಕೈಯನ್ನೆತ್ತಿರಿ, ದಿನಾಂಕ ನಿಗಧಿಯಾಗಿದೆಯೇ? ಇಲ್ಲ. ಏಕೆ?
ದೀದಿ ಹೇಳುತ್ತಾರೆ - ಮನೆಗೆ ಹೋಗಬೇಕು, ಮನೆಗೆ ಹೋಗಬೇಕು ಎಂದು ನಮಗೆ ಲಗನ್ ಇತ್ತು. ದಾದಿ
ಹೇಳುತ್ತಾರೆ - ಕರ್ಮಾತೀತರಾಗಬೇಕು, ಕರ್ಮಾತೀತರಾಗಬೇಕು....... ಎಂದು ನಮಗೆ ಲಗನ್ ಇತ್ತು.
ಅಂದಮೇಲೆ ತಮ್ಮೆಲ್ಲರಿಗಂತು ದೀದಿ-ದಾದಿಯವರೊಂದಿಗೆ ಪ್ರೀತಿಯಿದೆಯಲ್ಲವೆ. ಇರುವುದಂತು ಎಲ್ಲರೊಂದಿಗೆ
ಇದೆ ಏಕೆಂದರೆ ಯಾರೆಲ್ಲಾ ಅಡ್ವಾನ್ಸ್ ಪಾರ್ಟಿಯಲ್ಲಿ ಹೋಗಿದ್ದಾರೆ ಅವರೆಲ್ಲರೊಂದಿಗೆ ತಮ್ಮ
ಪ್ರೀತಿಯಂತು ಇದೆ. ಈಗ ಅವರ ಪ್ರಶ್ನೆಗೆ ಉತ್ತರ ಕೊಡಿ. ಅದಕ್ಕಾಗಿ ಪರಸ್ಪರದಲ್ಲಿ ಆತ್ಮಿಕ
ವಾರ್ತಾಲಾಪ ಮಾಡಿ ಈಗ ಜವಾಬನ್ನು ತಯಾರು ಮಾಡಿ. ಮಾಡುತ್ತೀರಾ?
ಈಗಂತು ಡಬಲ್ ವಿದೇಶಿಗಳ ಮಿಲನದ ದಿನವಾಗಿದೆಯಲ್ಲವೆ. ಅಂದಮೇಲೆ ಡಬಲ್ ವಿದೇಶಿಗಳೂ ಸಹ ಪರಸ್ಪರದಲ್ಲಿ
ವಿಚಾರ ಮಾಡಿ ದಿನಾಂಕವನ್ನು ನಿಗಧಿಗೊಳಿಸಿ ಮತ್ತು ಭಾರತದವರೂ ಸಹ ಇದರಬಗ್ಗೆ ಚರ್ಚೆ ಮಾಡಿ ತಿಳಿಸಿರಿ.
ಜವಾಬು ಇದೆಯೇ! ಹಾ! ಹೇಳಿ, ಹೇಳಿ.... ಯಾರು ಹೇಳುತ್ತೀರಿ ಅವರು ಕೈಯೆತ್ತಿರಿ. (ಮೋಹಿನಿ ಬೆಹೆನ್,
ನ್ಯುಯಾರ್ಕ್ - ಬಾಬಾ ದಿನಾಂಕವನ್ನು ತಾವು ನಿಗಧಿ ಪಡಿಸಿ, ನಾವುಗಳು ಎವರೆಡಿಯಿದ್ದೇವೆ) ಇಲ್ಲ,
ತಾವು ನಿಗಧಿ ಪಡಿಸಬೇಕಲ್ಲವೆ. ತಾವು ತಯಾರು ಮಾಡಬೇಕಾಗಿದೆಯಲ್ಲವೆ. ಬಾಬಾರವರಂತು ಹೇಳುತ್ತಾರೆ - ಈ
ದೀಪಾವಳಿಯಲ್ಲಿ ಮಾಡಿ ಬಿಡಿ ಎಂದು. ಎವರೆಡಿ. ಎವರೆಡಿಯಿದ್ದೀರಾ? ಬಹಳ ಹತ್ತಿರವಿದೆ ಎಂದು
ಹೇಳುತ್ತೀರಿ. ಆದ್ದರಿಂದ ಹೇಳುತ್ತಿದ್ದೇವೆ - ತಾವು ಹೇಳಿರಿ. (ಡಾ.ನಿರ್ಮಲಾ ಬೆಹೆನ್ರವರು ಹೇಳಿದರು
- ಬಾಬಾ ಒಂದು ವರ್ಷ ಕೊಡಿ) ಒಳ್ಳೆಯದು- ಒಂದುವರ್ಷದವರ ಹೆಸರನ್ನು ನೋಟ್ ಮಾಡಿರಿ. ಒಳ್ಳೆಯದು -
ಎಲ್ಲರೂ ಮುಗುಳ್ನಗುತ್ತಾರೆ. ಹೇಳಿ. (ನಿರ್ವೈರ್ ಭಾಯಿಜೀ ಹೇಳಿದರು - ನೌ ಆರ್ ನೆವರ್ (ಈಗಿಲ್ಲದಿದ್ದರೆ
ಇನ್ನೆಂದಿಗೂ ಇಲ್ಲ), ಇಂದು ಈಗ ಆಗಬೇಕಾಗಿದೆ) ಅಂದಮೇಲೆ ಚಪ್ಪಾಳೆ ಹಾಕಿ. ಒಳ್ಳೆಯದು, ಬಹಳ
ಒಳ್ಳೆಯದು - ಈಗೀಗ ಎಲ್ಲರೂ ತಮ್ಮ ಮನಸ್ಸಿನಲ್ಲಿ ಈ ಪ್ರತಿಜ್ಞೆ ಮಾಡಿ - ಎಂದೂ ಸಹ ವ್ಯರ್ಥ ಸಂಕಲ್ಪ
ಬರಲು ಬಿಡುವುದಿಲ್ಲ. ಇದನ್ನು ಮಾಡಲು ಸಾಧ್ಯವಿದೆಯೇ? ಈಗಿನಿಂದ ಹೇಳುತ್ತೀರಾ - ನೌ ಆರ್ ನೆವರ್,
ಅಂದಮೇಲೆ ಕೊನೆ ಪಕ್ಷ ಈಗಿನಿಂದ ವ್ಯರ್ಥ ಸಂಕಲ್ಪ, ವ್ಯರ್ಥ ಸಮಯವನ್ನು ಕಳೆಯುವುದಿಲ್ಲವೆಂದು ಎಲ್ಲರೂ
ಪ್ರತಿಜ್ಞೆ ಮಾಡುತ್ತೀರಾ? ಇದರಲ್ಲಿ ಯಾರು ತಯಾರಾಗಿದ್ದೀರಿ ಅವರು ಕೈಯನ್ನೆತ್ತಿರಿ. ಮೆಜಾರಿಟಿ
ಕೈಯೆತ್ತಿದರು. ಸಮಯ ಹಿಡಿಸುತ್ತದೆ ಎಂದು ಯಾರು ತಿಳಿಯುತ್ತೀರಿ ಅವರು ಕೈಯೆತ್ತಿರಿ. ಯಾರೂ ಇಲ್ಲ.
ಅವರೂ ಸ್ವಲ್ಪ ಮಂದಿಯಿದ್ದಾರೆ, ಸ್ವಲ್ಪ ಸ್ವಲ್ಪ ಕೈಯೆತ್ತುತ್ತಿದ್ದಾರೆ. ಒಳ್ಳೆಯದು - ಈ
ದೀಪಾವಳಿಯಲ್ಲಿ ಈ ಒಂದು ಧೃಡ ಸಂಕಲ್ಪ ಮಾಡಿರಿ, ಯಾರೆಲ್ಲಾ ಮೆಜಾರಿಟಿ ಕೈಯೆತ್ತಿದ್ದೀರಿ ಅವರು
ಸ್ವಾಹಾ ಮಾಡಬೇಕು ಅದಕ್ಕಾಗಿ ತಮ್ಮೆಲ್ಲರ ಕಡೆಯಿಂದ ಧೃಡ ಸಂಕಲ್ಪಕ್ಕಾಗಿ ಇಂದು ಕೇಕ್ನ್ನು ಕಟ್
ಮಾಡುತ್ತೇವೆ. ಇಷ್ಟವಾಯಿತಲ್ಲವೆ. ಈ ದಿನದ ಕೇಕ್ ಈ ಧೃಡ ಸಂಕಲ್ಪದ ಸೂಚಕವಾಗಿದೆ ಏಕೆಂದರೆ ಎಲ್ಲರೂ
ಇಷ್ಟ ಪಡುತ್ತಾರೆ, ಅಜ್ಞಾನಿಗಳೂ ಸಹ ಇಷ್ಟಪಡುತ್ತಾರೆ - ಈಗ ಏನಾದರೂ ಆಗಬೇಕು, ಈಗ ಸ್ವಲ್ಪ ಏನಾದರೂ
ಆಗಬೇಕು ಎಂದು ಆದರೆ ಶಕ್ತಿಯಿಲ್ಲ. ತಾವು ಮಕ್ಕಳಲ್ಲಂತು ಸಂಕಲ್ಪವನ್ನು ಪೂರ್ಣ ಮಾಡುವ ಶಕ್ತಿಯಿದೆ.
ಫಾಲೋ ಫಾದರ್ ಅಲ್ಲವೆ. ಬ್ರಹ್ಮಾ ತಂದೆಯ ಜನ್ಮವೇ ಧೃಡ ಸಂಕಲ್ಪದಿಂದ ಆಗಿದೆ. ಮಾಡಬೇಕು ಅಷ್ಟೇ, ಏನು
ಮಾಡುವುದು, ಏನನ್ನು ಮಾಡಬಾರದು ಎಂದು ಯೋಚಿಸಲಿಲ್ಲ, ಮಾಡಬೇಕು. ಆ ಒಂದು ಧೃಡ ಸಂಕಲ್ಪವು ಇಷ್ಟು
ಮಕ್ಕಳ ಭವಿಷ್ಯ ರೂಪಿಸಿದೆ. ಒಬ್ಬ ಬ್ರಹ್ಮಾ ತಂದೆಯು ಎಷ್ಟು ಧೈರ್ಯವನ್ನಿಟ್ಟರು. ಅರ್ಧ ಭಾಗ
ಸಿಕ್ಕಿತು ಮತ್ತು ಯಜ್ಞವನ್ನು ರಚಿಸಿದರು. ಯಜ್ಞದ ಬ್ರಾಹ್ಮಣರನ್ನು ರಚಿಸಿದರು ಮತ್ತು ಒಬ್ಬ
ಬ್ರಹ್ಮಾ ತಂದೆಯ ಧೃಡ ಸಂಕಲ್ಪದ ಕಾರಣ ಈಗ ದೇಶ-ವಿದೇಶದ ಆತ್ಮರು ತಲುಪಿಬಿಟ್ಟದ್ದಾರೆ. ಅಂದಮೇಲೆ
ಧೃಡ ಸಂಕಲ್ಪ ಏನು ಮಾಡಲು ಸಾಧ್ಯವಿಲ್ಲ! ಇದಂತು ತಮ್ಮಮುಂದೆ ಒಂದು ಉದಾಹರಣೆಯಾಗಿದೆ. ಬಹಳ
ಒಳ್ಳೊಳ್ಳೆಯ ಸಂಕಲ್ಪ ಮಾಡುತ್ತೀರಿ ತಂದೆಯ ಬಳಿ ತಲುಪುತ್ತದೆ ಆದರೆ ಅದರಲ್ಲಿ ಧೃಡತೆ
ಕಡಿಮೆಯಾಗುತ್ತದೆ. ಯಾವುದೇ ಮಾತು ಮುಂದೆಬಂದಿತೆಂದರೆ ಧೃಡತೆ ಕಡಿಮೆಯಾಗಿಬಿಡುತ್ತದೆ. ಧೃಡತೆ
ಸಫಲತೆಯ ಬೀಗದಕೈ ಆಗಿದೆ.
ನೋಡಿ, ದೆಹಲಿಯವರು ಧೃಡಸಂಕಲ್ಪ ಮಾಡಿದರು, ಮಾಡಲೇಬೇಕು. ಆಯಿತಲ್ಲವೆ. ಯೋಚಿಸುತ್ತೇವೆ, ನೋಡುತ್ತೇವೆ,
ಈ ರೀತಿ ಮಾಡಲಿಲ್ಲ. ಎಲ್ಲರ ಧೃಡ ಸಂಕಲ್ಪ, ಈ ಮಕ್ಕಳು ನಿಮಿತ್ತರಾದವರು ಹೇಗೆ ನಿಮಿತ್ತರಾದರು ಆದರೆ
ಎಲ್ಲರ ಸಹಯೋಗ ಮತ್ತು ಧೃಡ ಸಂಕಲ್ಪ ಅದನ್ನು ಪ್ರತ್ಯಕ್ಷದಲ್ಲಿ ಸಫಲತೆಯನ್ನು ತಂದಿತು. ಇದರಲ್ಲಿ
ಎಲ್ಲರೂ ಜೊತೆ ಕೊಟ್ಟರು ಮತ್ತು ಏಕಮತವಾಯಿತು. ಆಯಿತು ಇಲ್ಲ, ಆಯಿತು ಇಲ್ಲ ಎಂದು ಹೇಳಲಿಲ್ಲ, ಒಂದು
ಧೃಡಮತವಾಯಿತು ಅಂದಮೇಲೆ ಧೃಡತೆಯಲ್ಲಿ ಇಷ್ಟೂ ಶಕ್ತಿಯಿದೆ. ಯಾವ ಕಾರ್ಯವನ್ನು ಪ್ರಾರಂಭಿಸುತ್ತೀರಿ
ಅದರಲ್ಲಿ ಮೊದಲು ಧೃಡ ಸಂಕಲ್ಪದ ಬೀಜವನ್ನು ಹಾಕಿರಿ, ಅದರ ಫಲ ಬರಲೇಬೇಕು. ಇಷ್ಟು 90 ವರ್ಷಗಳು ಹೇಗೆ
ಕಳೆಯಿತು, ಬ್ರಹ್ಮಾ ತಂದೆ ಮತ್ತು ಮಕ್ಕಳ ಜೊತೆಯ ಧೃಡ ಸಂಕಲ್ಪದಿಂದ 90 ವರ್ಷಗಳು ಪೂರ್ಣವಾಯಿತು.
ಉಮ್ಮಂಗ-ಉತ್ಸಾಹದಿಂದ ಮುಂದುವರೆಯುತ್ತಾ, ಮುಂದುವರೆಸುತ್ತಾ ಹೋದಿರಿ ಆಗ ಈ 90 ವರ್ಷಗಳು
ಪೂರ್ಣವಾಯಿತು. ಈಗ ಈ ಸಂಕಲ್ಪ ಮಾಡಿ - ಇಂದು ವ್ಯರ್ಥ ಸಮಯ, ವ್ಯರ್ಥ ಸಂಕಲ್ಪ ಸಮಾಪ್ತಿ ಮಾಡಲೇಬೇಕು.
ಯಾವಾಗ ವ್ಯರ್ಥವು ಸಮಾಪ್ತಿಯಾಗಿ ಬಿಡುತ್ತದೆ ಆಗ ಸದಾ ಶ್ರೇಷ್ಠ ಸಂಕಲ್ಪದ ಖಜಾನೆಯು ಕಮಾಲ್ ಮಾಡಿ
ತೋರಿಸುವುದು.
ಇಂದು ಡಬಲ್ ವಿದೇಶಿಯರ ವಿಶೇಷ ಮಿಲನದ ದಿನವಾಗಿದೆ. ಅಂದಮೇಲೆ ಬಾಪ್ದಾದಾರವರು ಡಬಲ್ವಿದೇಶಿಗಳನ್ನು
ನೋಡಿ ಖುಷಿಪಡುತ್ತಿದ್ದಾರೆ, ವೃದ್ಧಿಯನ್ನೂ ಮಾಡುತ್ತಿದ್ದೀರಿ ಮತ್ತು ಡಬಲ್ ಸೇವೆಯ ಕಡೆ ಚೆನ್ನಾಗಿ
ಗಮನವಿದೆ. ಬಾಪ್ದಾದಾರವರು ಕೇವಲ ಈ ಸೂಚನೆಯನ್ನು ಪುನಃ ಕೊಡುತ್ತಿದ್ದಾರೆ- ಪರಸ್ಪರದಲ್ಲಿ ಸಂಸ್ಕಾರ
ಮಿಲನ ರಾಸ್ ಮಾಡಿ. ಈ ರೀತಿ ಯೋಚಿಸಬಾರದು - ಸೇವಾಕೇಂದ್ರವಂತು ಚೆನ್ನಾಗಿ ನಡೆಯುತ್ತಿದೆ, ಸೇವೆಯಂತು
ಚೆನ್ನಾಗಿ ಆಗುತ್ತಿದೆ ಆದರೆ ಯಾವಾಗ ಒಂದು ಪರಿವಾರವಾಗಿದೆ, ಪ್ರಭು ಪರಿವಾರವಾಗಿದೆ, ಲೌಕಿಕ
ಪರಿವಾರವಲ್ಲ ಪ್ರಭು ಪರಿವಾರ ಆಗಿದೆ. ಪ್ರಭು ಪರಿವಾರದ ಅರ್ಥವೇ ಆಗಿದೆ - ಒಬ್ಬರು ಇನ್ನೊಬ್ಬರಲ್ಲಿ
ಶುಭ ಭಾವನೆ, ಕಲ್ಯಾಣದ ಭಾವನೆಯಿರುವುದು. ಪರಸ್ಪರದಲ್ಲಿ ಇದೇ ಸಂಕಲ್ಪವಿರಲಿ - ನಾವೆಲ್ಲರೂ ಜೊತೆ
ಜೊತೆ ಒಬ್ಬರು ಇನ್ನೊಬ್ಬರನ್ನು ಮುಂದುವರೆಸುತ್ತಾ ಮುಕ್ತಿಯ ಗೇಟ್ನ್ನು ತೆರೆದು ಜೊತೆಯಲ್ಲಿ
ಹೋಗಲೇಬೇಕು. ಆದ್ದರಿಂದ ಇವರು 8 ಮಂದಿಯಲ್ಲ, 10 ಮಂದಿಯಲ್ಲ ಆದರೆ 10 ಮಂದಿ ಒಂದೇ ಆಗಿದ್ದಾರೆ
ಎಂಬುದು ತಿಳುವಳಿಕೆಯಲ್ಲಿ ಬರಲಿ - ಪ್ರತಿಯೊಂದು ಸೇವಾಕೇಂದ್ರದಲ್ಲಿ ಇಂತಹ ವಾಯುಮಂಡಲವಿರಲಿ. ಈಗ
ಸಂಸ್ಕಾರ ಮಿಲನದ ರಾಸ್ನ್ನು ಪ್ರತಿಯೊಬ್ಬರು ತಮ್ಮ ಮನಸ್ಸಿನಲ್ಲಿ ದೀಪಾವಳಿಯಲ್ಲಿ ಸಂಕಲ್ಪ ಮಾಡಿರಿ.
ಒಂದು ಆತ್ಮವೂ ಸಹ ಒಬ್ಬರು ಇನ್ನೊಬ್ಬರಿಂದ ದೂರವಿಲ್ಲ, ಎಲ್ಲರೂ ಒಂದೇ ಆಗಿದ್ದಾರೆ. ಅಂದಾಗ ಈ
ದೀಪಾವಳಿಯಲ್ಲಿ ಸಂಸ್ಕಾರ ಮಿಲನದ ರಾಸ್ ಮಾಡಿ. ಮನಸ್ಸಿನಲ್ಲಿ ಧೃಡ ಸಂಕಲ್ಪ ಮಾಡಿ - ಒಬ್ಬರೂ ಸಹ
ನನ್ನಿಂದ ಹೊರೆಯಾಗಬಾರದು, ಎಲ್ಲರೂ ಹಗುರವಾಗಿರಬೇಕು. ಸಂಸ್ಕಾರ ಮಿಲನವಾಗಿಲ್ಲವೆಂದರೆ
ಹೊರೆಯಾಗುತ್ತದೆ. ಅಂದಮೇಲೆ ಬಾಬಾರವರು ತಿಳಿಯುತ್ತಾರೆ - ಈ ಸಂಕಲ್ಪದಿಂದ ಗೇಟ್ ತೆರೆಯಲು ಬೇಗನೆ
ತಯಾರಾಗಿ ಬಿಡುತ್ತೀರಿ. ಯಾರೂ ಸಹ ನಮ್ಮಿಂದ ಬೇಸರವಾಗಲಿಲ್ಲವೆ ಎಂದು ಪರಿಶೀಲಿಸಿ, ಆದರೆ ಹೊರೆಯೂ
ಆಗಬಾರದು. ಈ ರೀತಿಯಾಗಲು ಆಗುತ್ತದೆಯೇ? ಆಗುತ್ತದೆಯೇ? ಕತ್ತನ್ನು ಅಲುಗಾಡಿಸಿ, ಆಗುತ್ತದೆಯೇ?
ಆಗುತ್ತದೆಯೇ ಕೈಯನ್ನೆತ್ತಿ. ಅಂದಮೇಲೆ ಈ ದೀಪಾವಳಿಯಲ್ಲಿ ಒಳ್ಳೆಯ ಶೋಭೆಯುಂಟಾಗಿ ಬಿಡುತ್ತದೆ.
ಬಾಪ್ದಾದಾರವರು ಹೃದಯದಲ್ಲಿ ಪ್ರತಿನಿತ್ಯ ಡಬಲ್ ವಿದೇಶಿಗಳನ್ನು ಇಮರ್ಜ್ ಮಾಡುತ್ತಾರೆ, ಏಕೆ? ಏಕೆ
ಇಮರ್ಜ್ ಮಾಡುತ್ತಾರೆ? ಏಕೆಂದರೆ ಡಬಲ್ ವಿದೇಶಿಗಳು ಇಡೀ ವಿಶ್ವದಲ್ಲಿ ಹೆಸರನ್ನು ಪ್ರಸಿದ್ಧಗೊಳಿಸಲು
ನಿಮಿತ್ತರಾದಿರಿ. ಯಾವ ಮಾತಿನಲ್ಲಿ? ಯಾವಾಗ ಈ ಭಾರತ ವಾಸಿಗಳು ಇಲ್ಲ, ವಿದೇಶಿಗಳಿದ್ದಾರೆ ಇವರು
ತಮ್ಮ ಭಾಗ್ಯವನ್ನು ರೂಪಿಸಿಕೊಂಡಿದ್ದಾರೆಂದರೆ ನಾವೇಕೆ ಉಳಿದುಕೊಳ್ಳುವುದು. ಈ ಪ್ರೇರಣೆಯು ದೆಹಲಿಯ
ಕಾರ್ಯಕ್ರಮದಿಂದ ಭಾರತದಲ್ಲಿ ಚೆನ್ನಾಗಿ ಹರಡಿದೆ ಆದ್ದರಿಂದ ಬಾಪ್ದಾದಾರವರು ಸೇವೆಯ ನಿಮಿತ್ತ
ತಮ್ಮೆಲ್ಲರನ್ನು ಇಮರ್ಜ್ ಮಾಡುತ್ತಾರೆ. ಭಾರತವನ್ನು ಜಾಗೃತ ಮಾಡುತ್ತೀರಿ, ಜಾಗೃತ ಮಾಡುತ್ತಿದ್ದೀರಿ
ಮತ್ತು ಮುಂದೆಯೂ ಸಹ ಹೀಗೆಯೇ ವಿ.ಐ.ಪಿ.,ಗಳನ್ನು ತಯಾರು ಮಾಡುತ್ತೀರಿ ಅವರು ಭಾರತದವರನ್ನು
ಜಾಗೃತಗೊಳಿಸುತ್ತಾರೆ. ಅವರ ಅನುಭವವು ಭಾರತದವರನ್ನು ಜಾಗೃತಗೊಳಿಸುತ್ತದೆ. ಬಾಪ್ದಾದಾರವರಿಗೆ
ನೆನಪಿದೆ - ಪ್ರಾರಂಭದಲ್ಲಿ ಬಹಳ ವಿ.ಐ.ಪಿ.,ಗಳನ್ನು ಕರೆತರುತ್ತಿದ್ದರು. ಕಾರ್ಯಕ್ರಮಗಳನ್ನು
ಮಾಡುತ್ತಿದ್ದರು. ಈಗ ಈ ಸೇವೆಯಲ್ಲ. ಇಂತಹ ವಿ.ಐ.ಪಿ.,ಗಳನ್ನು ತಯಾರು ಮಾಡಿ ಅವರು ಸ್ಟೇಜಿನ ಮೇಲೆ
ತನ್ನ ಅನುಭವವನ್ನು ತಿಳಿಸಲಿ. ಈಗ ಹೆಚ್ಚಿನದಾಗಿ ಸಂಸ್ಕೃತಿಯನ್ನು ತೋರಿಸಿದಿರಿ, ಅನುಭವವನ್ನೂ
ತಿಳಿಸಿದಿರಿ ಆದರೆ ಸ್ವಲ್ಪವೇ ಸಮಯವಿತ್ತು, ಈಗ ಇಂತಹ ವಿ.ಐ.ಪಿ.,ಗಳನ್ನು ಕರೆತನ್ನಿ ಅವರು
ಭಾರತದವರ ಅದೃಷ್ಟವನ್ನು ಬೆಳಗಿಸಲಿ. ಈಗಲೂ ಸಹ ಯಾವ ಸೇವೆಯನ್ನು ವಿದೇಶಿಗಳು ಮತ್ತು ಭಾರತದವರು ಸೇವೆ
ಮಾಡಿದಿರಿ ಅದರ ಪ್ರಭಾವ ಚೆನ್ನಾಗಿ ಬೀರಿದೆ. ಈಗ ಒಟ್ಟಿಗೆ ಸೇರಿ ಇಂತಹ ಸೇವೆಯನ್ನು
ಮುಂದುವರೆಸುತ್ತಾ ಸಾಗಿರಿ. ಮತ್ತು ಮುಖ್ಯಮಾತು- ತಮ್ಮನ್ನು ಪ್ರತಿಯೊಬ್ಬರೂ ಭಲೆ
ಭಾರತವಾಸಿಗಳಿರಬಹುದು, ವಿದೇಶಿಗಳಿರಬಹುದು ಬೇಗಬೇಗನೆ ಈ ರೀತಿ ಸಂಪನ್ನ ಮಾಡಿ - ತಮ್ಮೆಲ್ಲರ
ಸಂಪನ್ನತೆಯು ಮುಕ್ತಿಯ ಗೇಟ್ ತೆರೆದು ಬಿಡಲಿ. ಒಳ್ಳೆಯದು.
ನಾಲ್ಕೂ ಕಡೆಯ ಭಲೆ ಸನ್ಮುಖದಲ್ಲಿ ಕುಳಿತಿರಬಹುದು, ಎಲ್ಲಿಯೇ ಕುಳಿತ್ತಿದ್ದೀರಿ ಆದರೆ ಎಲ್ಲರ ಗಮನ
ಮಧುಬನದಲ್ಲಿದೆ. ಬಾಪ್ದಾದಾರವರನ್ನು ನೋಡುತ್ತಿದ್ದೀರಿ, ಮೆಜಾರಿಟಿಯಂತು ನೋಡುತ್ತಿದ್ದೀರಿ.
ಬಾಪ್ದಾದಾರವರೂ ಸಹ ಎಲ್ಲಾ ಮಕ್ಕಳನ್ನು, ನಾಲ್ಕೂ ಕಡೆಯ ಮಕ್ಕಳಿಗೆ ಸದಾ ಹರ್ಷಿತರಾಗಿರುವಂತಹ, ಸದಾ
ಡಬಲ್ ಪುರುಷಾರ್ಥಿ, ಡಬಲ್ ಪುರುಷಾರ್ಥಿ ಅರ್ಥಾತ್ ಸ್ವಯಂನ ಪುರುಷಾರ್ಥದಲ್ಲಿಯೂ ಮತ್ತು ಸೇವೆಯ
ಪುರುಷಾರ್ಥದಲ್ಲಿ, ಇಂತಹ ಡಬಲ್ ಪುರುಷಾರ್ಥಿ ಮತ್ತು ಡಬಲ್ ನಿಶ್ಚಯ ಮತ್ತು ನಶೆಯಲ್ಲಿರುವಂತಹ, ಸದಾ
ತಂದೆಯ ಜೊತೆಯಲ್ಲಿರುವಂತಹ, ಸದಾ ಪರಸ್ಪರದಲ್ಲಿಯೂ ಸಹ ಕಲ್ಯಾಣ ಮತ್ತು ದಯೆಯ ಶುಭ
ಭಾವನೆಯಲ್ಲಿರುವಂತಹ, ಒಂದೊಂದು ಮಗುವಿಗೆ ಹೆಸರಿನ ಸಹಿತವಾಗಿ ಬಾಪ್ದಾದಾರವರು ಹೃದಯದ
ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ.
ಆದರೆ ಇಂದಿನ ಮಾತು ವ್ಯರ್ಥ ಸಂಕಲ್ಪದ ಸಮಾಪ್ತಿಯನ್ನು ಮರೆಯಬಾರದು. ಬಾಪ್ದಾದಾರವರ ಬಳಿ
ರೆಕಾರ್ಡ್ಂತು ತಲುಪಿಯೇಬಿಡುತ್ತದೆ. ಬಾಪ್ದಾದಾರವರು ನೋಡುತ್ತಾರೆ - ಎಷ್ಟು ತೀವ್ರ ಪುರುಷಾರ್ಥಿ
ಮಕ್ಕಳಿದ್ದಾರೆ ಮತ್ತು ಒಬ್ಬರು ಇನ್ನೊಬ್ಬರಿಗೂ ಸಹ ಉಮ್ಮಂಗ-ಉತ್ಸಾಹವನ್ನು ಕೊಡುತ್ತಾ
ಮುಂದುವರೆಸುವವರಿದ್ದೀರಿ. ಒಂದುವೇಳೆ ಯಾರಾದರೂ ತಪ್ಪು ಮಾಡುತ್ತಾರೆಂದರೆ ಅವರ ಪ್ರತಿ ತಾವು ಆ
ತಪ್ಪನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡುತ್ತೀರಿ - ಇದನ್ನು ಮಾಡುತ್ತಾರೆ, ಇದನ್ನು ಮಾಡುತ್ತಾರೆ,
ಇದನ್ನು ಮಾಡುತ್ತಾರೆ.... ಇದನ್ನೂ ಸಮಾಪ್ತಿ ಮಾಡಿ. ಅವರಿಗೆ ಸಹಯೋಗ ಕೊಡಿ, ಶ್ರೇಷ್ಠ ಭಾವನೆ ಕೊಡಿ,
ಇಂತಹ ಸೇವೆ ಮಾಡುತ್ತಾ ಪೂರ್ಣ ಸಂಘಟನೆಯನ್ನು ಶ್ರೇಷ್ಠ ಸಂಕಲ್ಪದವರನ್ನಾಗಿ ಮಾಡಲೇಬೇಕಾಗಿದೆ.
ಯಾವುದೇ ಸೇವಾಕೇಂದ್ರದಲ್ಲಿ ಎಂದಾದರೂ ಯಾರೇ ಒಬ್ಬರು ಇನ್ನೊಬ್ಬರ ಪ್ರತಿ ಯಾವುದೇ ಬೇರೆ
ಭಾವನೆಯಿರಬಾರದು, ಶುಭ ಭಾವನೆ, ಶುಭ ಕಾಮನೆ, ಸರಿಯಲ್ಲವೆ. ಬಹಳ ಒಳ್ಳೆಯದು - ಈಗ ಎಲ್ಲಾ ಮಕ್ಕಳಿಗೆ
ಬಾಪ್ದಾದಾರವರು ಶುಭಾಷಯಗಳ ಜೊತೆ ಹೃದಯದ ನೆನಪು-ಪ್ರೀತಿಯನ್ನೂ ಸಹ ಜೊತೆಯಲ್ಲಿ ಕೊಡುತ್ತಿದ್ದಾರೆ.
ವರದಾನ:
ನಿಷ್ಕಾಮ ಸೇವೆಯ
ಮೂಲಕ ವಿಶ್ವದ ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ವಿಶ್ವ ಕಲ್ಯಾಣಿ, ದಯಾಹೃದಯಿ ಭವ.
ಯಾರು ನಿಷ್ಕಾಮ ಸೇವಾಧಾರಿ
ಆಗಿರುತ್ತಾರೆಯೋ, ಅವರಲ್ಲೆಂದಿಗೂ ಈ ಸಂಕಲ್ಪವು ಬರಲು ಸಾಧ್ಯವಿಲ್ಲ - ನಾನು ಇಷ್ಟೊಂದು ಮಾಡಿದೆನು,
ಇದರಿಂದ ನನಗೆ ಮಾನ್ಯತೆ, ಸ್ಥಾನ ಅಥವ ಮಹಿಮೆಯು ಸಿಗಬೇಕು..... ಇದೂ ಸಹ ತೆಗೆದುಕೊಳ್ಳುವುದಾಯಿತು.
ದಾತನ ಮಕ್ಕಳಲ್ಲಿ ತೆಗೆದುಕೊಳ್ಳುವ ಸಂಕಲ್ಪವನ್ನೂ ಮಾಡುತ್ತಾರೆಂದರೂ ಸಹ ದಾತನಾಗಲಿಲ್ಲ. ಈ ರೀತಿ
ತೆಗೆದುಕೊಳ್ಳುವುದೂ ಸಹ ಕೊಡುವವರ ಮುಂದೆ ಶೋಭಿಸುವುದಿಲ್ಲ. ಈ ಸಂಕಲ್ಪವು ಯಾವಾಗ
ಸಮಾಪ್ತಿಯಾಗುತ್ತದೆಯೋ ಆಗಲೇ ವಿಶ್ವ ಮಹಾರಾಜನ ಪದವಿಯು ಪ್ರಾಪ್ತಿಯಾಗುವುದು. ಇಂತಹ ನಿಷ್ಕಾಮ
ಸೇವಾಧಾರಿ, ಬೇಹದ್ದಿನ ವೈರಾಗಿಗಳು ಆಗಿರುವವರೇ ವಿಶ್ವ ಕಲ್ಯಾಣಿ, ದಯಾಹೃದಯಿಗಳು ಆಗುತ್ತಾರೆ.
ಸ್ಲೋಗನ್:
ತನ್ನ ದೋಷ/ತಪ್ಪನ್ನು
ಅನ್ಯರ ಮೇಲೆ ಹೊರಿಸುವುದೂ ಸಹ ಪರಚಿಂತನೆ ಆಗಿದೆ.
ಅವ್ಯಕ್ತ ಸೂಚನೆ:- ಈಗ
ತಮ್ಮ ದಾತಾ ಸ್ವರೂಪವನ್ನು ಪ್ರತ್ಯಕ್ಷ ಮಾಡಿಕೊಳ್ಳಿ.
ಎಲ್ಲಕ್ಕಿಂತ ದೊಡ್ಡ ದಾನ
ವಾಗಿದೆ - ದಾತನ ಮಕ್ಕಳಾಗಿ ಸರ್ವರಿಗೂ ಸಹಯೋಗ ಕೊಡುವುದು. ಕೆಟ್ಟು ಹೋದ ಕೆಲಸವನ್ನು, ಹಾಳಾದ
ಸಂಸ್ಕಾರಗಳನ್ನು, ಕೆಟ್ಟು ಹೋದ ಮೂಡನ್ನು ಶುಭ ಭಾವನೆಯಿಂದ ಸರಿ ಮಾಡುವುದರಲ್ಲಿ ಸಹಯೋಗಿ ಆಗಿ. ಇವರು
ಹೀಗೆ ಹೇಳಿದರು, ಇದನ್ನು ಮಾಡಿದರು, ಎಲ್ಲವನ್ನು ನೋಡುತ್ತಾ ಕೇಳುತ್ತಾ, ತಿಳಿದಿದ್ದರೂ ಸಹ ತಮ್ಮ
ಸಹಯೋಗದ ಸ್ಟಾಕ್ ನ ಮೂಲಕ ಪರಿವರ್ತನೆ ಮಾಡಿ ಅವರನ್ನು ಸಂಪನ್ನ ಮಾಡುವುದು - ಇದೆ ಎಲ್ಲಕ್ಕಿಂತ
ದೊಡ್ಡ ದಾನ ಆಗಿದೆ.