06.12.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ಶರೀರರೂಪಿ ಗೊಂಬೆಯು ಆತ್ಮರೂಪಿ ಚೈತನ್ಯ ಕೀಲಿಯಿಂದ (ಚಾಬಿ) ನಡೆಯುತ್ತದೆ, ನೀವು ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ ಆಗ ನಿರ್ಭಯರಾಗಿ ಬಿಡುತ್ತೀರಿ.”

ಪ್ರಶ್ನೆ:
ಆತ್ಮವು ಶರೀರದ ಜೊತೆ ಆಟವಾಡುತ್ತಾ ಕೆಳಗೆ ಬಂದಿದೆ, ಆದ್ದರಿಂದ ಅದಕ್ಕೆ ಯಾವ ಹೆಸರು ಕೊಡುವಿರಿ?

ಉತ್ತರ:
ಕೀಲು ಗೊಂಬೆ. ಹೇಗೆ ಡ್ರಾಮಾದಲ್ಲಿ ಕೀಲು ಗೊಂಬೆಯಾಟವನ್ನು ತೋರಿಸುತ್ತಾರೆ ಹಾಗೆಯೇ ನೀವಾತ್ಮಗಳು ಕೀಲು ಗೊಂಬೆಯ ತರಹ 5000 ವರ್ಷಗಳಲ್ಲಿ ಆಟವನ್ನಾಡುತ್ತಾ ಕೆಳಗೆ ಬಂದು ಬಿಟ್ಟಿದ್ದೀರಿ. ತಂದೆಯು ನೀವು ಕೀಲು ಗೊಂಬೆಗಳಿಗೆ ಮೇಲೇರುವ ಮಾರ್ಗವನ್ನು ತಿಳಿಸಲು ಬಂದಿದ್ದಾರೆ. ನೀವೀಗ ಶ್ರೀಮತದ ಕೀಲಿಯನ್ನು ಉಪಯೋಗಿಸಿ ಆಗ ಮೇಲೆ ಹೊರಟು ಹೋಗುತ್ತೀರಿ.

ಗೀತೆ:
ಸಭೆಯಲ್ಲಿ ಜ್ಯೋತಿ ಬೆಳಗಿತು...........

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಶ್ರೀಮತ ಕೊಡುತ್ತಾರೆ - ಯಾವಾಗ ಯಾರದೇ ನಡವಳಿಕೆಯು ಸರಿಯಿಲ್ಲದಿದ್ದರೆ ತಂದೆ-ತಾಯಿಯು ಬಹುಷಃ ಈಶ್ವರನೇ ಮತವನ್ನು ಕೊಡಬೇಕೆಂದು ಹೇಳುತ್ತಾರೆ ಆದರೆ ನಿಜವಾಗಿಯೂ ಈಶ್ವರನೇ ಮತ ಕೊಡುವರೆಂದು ಅವರಿಗೆ ತಿಳಿದೇ ಇಲ್ಲ. ನೀವು ಮಕ್ಕಳಿಗೆ ಈಗ ಈಶ್ವರೀಯ ಮತ ಸಿಗುತ್ತಿದೆ ಅರ್ಥಾತ್ ಆತ್ಮಿಕ ತಂದೆಯು ಮಕ್ಕಳಿಗೆ ಶ್ರೇಷ್ಠರಾಗಲು ಶ್ರೇಷ್ಠ ಮತವನ್ನು ಕೊಡುತ್ತಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಶ್ರೇಷ್ಠಾತಿ ಶ್ರೇಷ್ಠರಾಗುತ್ತಿದ್ದೇವೆ, ತಂದೆಯು ನಮಗೆ ಎಷ್ಟು ಶ್ರೇಷ್ಠ ಮತವನ್ನು ಕೊಡುತ್ತಿದ್ದಾರೆ! ನಾವು ಅವರ ಮತದಂತೆ ನಡೆದು ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ ಅಂದಮೇಲೆ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವವರು ಅವರೇ ತಂದೆಯಾಗಿದ್ದಾರೆಂಬುದು ಸಿದ್ಧವಾಗುತ್ತದೆ. ಮನುಷ್ಯರಿಂದ ದೇವತೆಯನ್ನಾಗಿ ಮಾಡಿದರು ಎಂದು ಸಿಖ್ಖರೂ ಹಾಡುತ್ತಾರೆ ಅಂದಾಗ ಅವಶ್ಯವಾಗಿ ತಂದೆಯು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವ ಮತ ಕೊಡುತ್ತಾರೆ. ಏಕ್ ಓಂಕಾರ್, ಕರ್ತ ಪುರುಷ, ನಿರ್ಭಯ..... ಎಂದು ಅವರ ಮಹಿಮೆಯೂ ಇದೆ ಅಂದರೆ ನೀವೆಲ್ಲರೂ ನಿರ್ಭಯರಾಗಿ ಬಿಡುತ್ತೀರಿ, ತಮ್ಮನ್ನು ಆತ್ಮನೆಂದು ತಿಳಿಯುತ್ತೀರಲ್ಲವೆ. ಆತ್ಮಕ್ಕೆ ಯಾವುದೇ ಭಯವಿರುವುದಿಲ್ಲ, ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿರ್ಭಯರಾಗಿ. ನಿಮಗೆ ಭಯವೆಲ್ಲಿಂದ ಬರುವುದು? ಯಾವುದೇ ಭಯವಿಲ್ಲ. ನೀವು ತಮ್ಮ ಮನೆಯಲ್ಲಿ ಕುಳಿತಿದ್ದರೂ ತಂದೆಯ ಶ್ರೀಮತವನ್ನು ತೆಗೆದುಕೊಳ್ಳುತ್ತಾ ಇರುತ್ತೀರಿ. ಈಗ ಶ್ರೀಮತ ಯಾರದು? ಯಾರು ಕೊಡುತ್ತಾರೆ? ಈ ಮಾತುಗಳು ಗೀತೆಯಲ್ಲಂತೂ ಇಲ್ಲ. ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಪತಿತರಾಗಿ ಬಿಟ್ಟಿದ್ದೀರಿ, ಈಗ ಪಾವನರಾಗಲು ನನ್ನೊಬ್ಬನ್ನೇ ನೆನಪು ಮಾಡಿ. ಈ ಪುರುಷೋತ್ತಮರಾಗುವ ಮೇಳವು ಸಂಗಮಯುಗದಲ್ಲಿಯೇ ಆಗುತ್ತದೆ. ಅನೇಕರು ಬಂದು ಶ್ರೀಮತವನ್ನು ತೆಗೆದುಕೊಳ್ಳುತ್ತಾರೆ ಇದಕ್ಕೆ ಈಶ್ವರನ ಜೊತೆ ಮಕ್ಕಳ ಮೇಳವೆಂದು ಹೇಳಲಾಗುತ್ತದೆ. ಈಶ್ವರನೂ ನಿರಾಕಾರನಾಗಿದ್ದಾರೆ, ಮಕ್ಕಳೂ (ಆತ್ಮಗಳು) ನಿರಾಕಾರಿಯಾಗಿದ್ದೀರಿ. ನಾವಾತ್ಮರಾಗಿದ್ದೇವೆ ಎಂಬುದನ್ನು ಪಕ್ಕಾ-ಪಕ್ಕಾ ಹವ್ಯಾಸ ಮಾಡಿಕೊಳ್ಳಬೇಕು. ಹೇಗೆ ಆಟದ ಗೊಂಬೆಗೆ ಕೀಲಿಯನ್ನು ಹಾಕಿದಾಗ ಅದು ನರ್ತನ ಮಾಡತೊಡಗುತ್ತದೆ ಹಾಗೆಯೇ ಆತ್ಮವೂ ಸಹ ಈ ಶರೀರರೂಪಿ ಗೊಂಬೆಯ ಕೀಲಿಯಾಗಿದೆ. ಇದರಲ್ಲಿ ಆತ್ಮವು ಇಲ್ಲದೇ ಹೋದರೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ನೀವು ಚೈತನ್ಯ ಗೊಂಬೆಗಳಾಗಿದ್ದೀರಿ. ಗೊಂಬೆಗೆ ಕೀಲಿ ಹಾಕದೆ ಇದ್ದರೆ ಅದು ಕೆಲಸ ಮಾಡುವುದಿಲ್ಲ, ನಿಂತು ಬಿಡುತ್ತದೆ. ಆತ್ಮವೂ ಸಹ ಚೈತನ್ಯ ಕೀಲಿ ಕೈ ಆಗಿದೆ ಮತ್ತು ಇದು ಅವಿನಾಶಿ, ಅಮರ ಕೀಲಿ (ಚಾಬಿ) ಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಆತ್ಮವನ್ನೇ ನೋಡುತ್ತೇನೆ, ಆತ್ಮವೇ ಕೇಳುತ್ತದೆ. ಇದನ್ನು ಪಕ್ಕಾ ಹವ್ಯಾಸ ಮಾಡಿಕೊಳ್ಳಬೇಕಾಗಿದೆ. ಈ ಚಾಬಿಯಿಲ್ಲದೆ ಶರೀರವು ನಡೆಯಲು ಸಾಧ್ಯವಿಲ್ಲ. ಇದಕ್ಕೂ ಅವಿನಾಶಿ ಚಾಬಿಯು ಸಿಕ್ಕಿದೆ. 5000 ವರ್ಷಗಳವರೆಗೆ ಈ ಚಾಬಿಯು ಕೆಲಸ ಮಾಡುತ್ತದೆ. ಇದು ಚೈತನ್ಯ ಕೀಲಿಯಾಗಿರುವ ಕಾರಣ ಚಕ್ರವು ಸುತ್ತುತ್ತಲೇ ಇರುತ್ತದೆ. ಇವು ಚೈತನ್ಯ ಗೊಂಬೆಗಳಾಗಿವೆ, ತಂದೆಯೂ ಸಹ ಚೈತನ್ಯ ಆತ್ಮನಾಗಿದ್ದಾರೆ. ಯಾವಾಗ ಈ ಕೀಲಿಯು ಪೂರ್ಣವಾಗಿ ಬಿಡುತ್ತದೆಯೋ ಅರ್ಥಾತ್ ಶಕ್ತಿಯು ಕಡಿಮೆ ಆಗಿ ಬಿಡುತ್ತದೆಯೋ ಆಗ ತಂದೆಯು ಹೊಸದಾಗಿ ಯುಕ್ತಿಯನ್ನು ತಿಳಿಸುತ್ತಾರೆ ಅರ್ಥಾತ್ ನನ್ನನ್ನು ನೆನಪು ಮಾಡುವುದರಿಂದ ಮತ್ತೆ ಈ ಕೀಲಿಯು ಕೆಲಸ ಮಾಡತೊಡಗುತ್ತದೆ ಅರ್ಥಾತ್ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗಿ ಬಿಡುವುದು. ಹೇಗೆ ಮೋಟಾರ್ನಲ್ಲಿ ಪೆಟ್ರೋಲ್ ಸಮಾಪ್ತಿಯಾದಾಗ ಮತ್ತೆ ಅದಕ್ಕೆ ತುಂಬಿಸಲಾಗುತ್ತದೆಯಲ್ಲವೆ ಹಾಗೆಯೇ ನಮ್ಮಲ್ಲಿ ಹೇಗೆ ಪೆಟ್ರೋಲ್ ತುಂಬಿಸಿಕೊಳ್ಳಬೇಕೆಂಬುದನ್ನು ನೀವಾತ್ಮಗಳು ತಿಳಿದುಕೊಳ್ಳುತ್ತೀರಿ. ಬ್ಯಾಟರಿಯು ಖಾಲಿಯಾದಾಗ ಮತ್ತೆ ಅದರಲ್ಲಿ ಚಾರ್ಜ್ ಮಾಡಲಾಗುತ್ತದೆಯಲ್ಲವೆ. ಬ್ಯಾಟರಿಯು ಖಾಲಿಯಾದಾಗ ಅದರಲ್ಲಿ ಬೆಳಕು ಕಡಿಮೆಯಾಗಿ ಬಿಡುತ್ತದೆ. ಈಗ ನೀವಾತ್ಮರೂಪಿ ಬ್ಯಾಟರಿಯು ತುಂಬುತ್ತದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ತುಂಬುತ್ತಾ ಹೋಗುತ್ತದೆ. 84 ಜನ್ಮಗಳ ಚಕ್ರವನ್ನು ಸುತ್ತಿ ಬ್ಯಾಟರಿಯು ಖಾಲಿಯಾಗಿ ಬಿಟ್ಟಿದೆ. ಸತೋ, ರಜೋ, ತಮೋದಲ್ಲಿ ಬಂದು ಬಿಟ್ಟಿದೆ. ಈಗ ತಂದೆಯು ಪುನಃ ಕೀಲಿಯನ್ನು ಕೊಡಲು ಅಥವಾ ಬ್ಯಾಟರಿಯನ್ನು ತುಂಬಿಸಲು ಬಂದಿದ್ದಾರೆ. ಚಾರ್ಜ್ ಇಲ್ಲವೆಂದರೆ ಮನುಷ್ಯರು ಏನಾಗಿ ಬಿಡುತ್ತಾರೆ! ಆದ್ದರಿಂದ ಈಗ ನೆನಪಿನಿಂದಲೇ ಬ್ಯಾಟರಿಯನ್ನು ತುಂಬಿಸಿಕೊಳ್ಳಬೇಕಾಗಿದೆ. ಇದಕ್ಕೆ ಮಾನವರೂಪಿ ಬ್ಯಾಟರಿಯೆಂದು ಹೇಳಲಾಗುವುದು. ತಂದೆಯು ತಿಳಿಸುತ್ತಾರೆ - ನನ್ನೊಂದಿಗೆ ಯೋಗವನ್ನಿಡಿ, ಈ ಜ್ಞಾನವನ್ನು ಒಬ್ಬ ತಂದೆಯೇ ಕೊಡುತ್ತಾರೆ. ಸದ್ಗತಿದಾತ ತಂದೆಯು ಅವರೊಬ್ಬರೇ ಆಗಿದ್ದಾರೆ, ಈಗ ನಿಮ್ಮ ಬ್ಯಾಟರಿಯು ಈ ರೀತಿ ತುಂಬುತ್ತದೆ ಅದರಿಂದ 84 ಜನ್ಮಗಳವರೆಗೆ ಪೂರ್ಣ ಪಾತ್ರವನ್ನಭಿನಯಿಸುತ್ತೀರಿ. ಹೇಗೆ ಡ್ರಾಮಾದಲ್ಲಿ ತೊಗಲು ಗೊಂಬೆಗಳು ನರ್ತಿಸುತ್ತವೆಯಲ್ಲವೆ. ನೀವಾತ್ಮಗಳೂ ಸಹ ಹೀಗೆ ತೊಗಲು ಗೊಂಬೆಗಳ ಸಮಾನ ಇದ್ದೀರಿ. ಮೇಲಿನಿಂದ ಇಳಿಯುತ್ತಾ 5000 ವರ್ಷಗಳಲ್ಲಿ ಒಮ್ಮೆಲೆ ಕೆಳಗೆ ಬಂದು ಬಿಡುತ್ತೀರಿ ಮತ್ತೆ ತಂದೆಯು ಬಂದು ಮೇಲೇರಿಸುತ್ತಾರೆ. ಅದಂತೂ ಒಂದು ಆಟದ ಗೊಂಬೆಯಾಗಿದೆ. ತಂದೆಯು ಅದರ ಉದಾಹರಣೆಯನ್ನು ನೀಡಿ ನಿಮಗೆ ಏರುವಕಲೆ ಹಾಗೂ ಇಳಿಯುವ ಕಲೆಯ ಅರ್ಥವನ್ನು ತಿಳಿಸಿಕೊಡುತ್ತಾರೆ - ಇದು 5000 ವರ್ಷಗಳ ಮಾತಾಗಿದೆ. ಶ್ರೀಮತದಿಂದ ನಮಗೆ ಚಾಬಿಯೂ ಸಿಗುತ್ತಿದೆ, ಇದರಿಂದ ನಾವು ಪೂರ್ಣ ಸತೋಪ್ರಧಾನರಾಗಿ ಬಿಡುತ್ತೇವೆ ನಂತರ ಇಡೀ ಪಾತ್ರವನ್ನು ಪುನರಾವರ್ತಿಸುತ್ತೇವೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಇದು ತಿಳಿಯುವ ಮತ್ತು ತಿಳಿಸುವ ಎಷ್ಟು ಸಹಜ ಮಾತಾಗಿದೆ! ಆದರೂ ತಂದೆಯು ಹೇಳುತ್ತಾರೆ - ಯಾರು ಕಲ್ಪದ ಹಿಂದೆ ತಿಳಿದುಕೊಂಡಿದ್ದರೋ ಅವರೇ ತಿಳಿದುಕೊಳ್ಳುತ್ತಾರೆ. ನೀವು ಎಷ್ಟಾದರೂ ತಲೆಕೆಡಿಸಿಕೊಳ್ಳಿ, ಅವರು ಅದಕ್ಕಿಂತ ಹೆಚ್ಚಾಗಿ ತಿಳಿದುಕೊಳ್ಳುವುದೇ ಇಲ್ಲ. ತಂದೆಯಂತೂ ಎಲ್ಲರಿಗೆ ಒಂದೇ ಸಮನಾಗಿ ತಿಳುವಳಿಕೆ ಕೊಡುತ್ತಾರೆ. ನೀವು ಎಲ್ಲಿ ಬೇಕಾದರೂ ತಂದೆಯನ್ನು ನೆನಪು ಮಾಡಬಹುದಾಗಿದೆ. ಭಲೆ ಸನ್ಮುಖದಲ್ಲಿ ಬ್ರಾಹ್ಮಣಿ ಇಲ್ಲದಿದ್ದರೂ ಸಹ ನೀವು ನೆನಪಿನಲ್ಲಿ ಕುಳಿತುಕೊಳ್ಳಬಹುದು ಏಕೆಂದರೆ ತಂದೆಯ ನೆನಪಿನಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಎಂದು ನಿಮಗೆ ತಿಳಿದಿದೆ ಅಂದಮೇಲೆ ಆ ತಂದೆಯ ನೆನಪಿನಲ್ಲಿ ಕುಳಿತು ಬಿಡಬೇಕಾಗಿದೆ. ಬೇರೆಯವರು ನಿಮ್ಮನ್ನು ವಿಶೇಷವಾಗಿ ಕೂರಿಸುವ ಅವಶ್ಯಕತೆಯಿಲ್ಲ. ತಿನ್ನುತ್ತಾ-ಕುಡಿಯುತ್ತಾ, ಸ್ನಾನ ಇತ್ಯಾದಿಗಳನ್ನು ಮಾಡುತ್ತಲೂ ತಂದೆಯನ್ನು ನೆನಪು ಮಾಡಿ. ಸ್ವಲ್ಪ ಸಮಯಕ್ಕಾಗಿ ನಿಮ್ಮ ಸನ್ಮುಖದಲ್ಲಿ ಅನ್ಯರು ನೆನಪು ಮಾಡಿಸಲು ಕುಳಿತುಕೊಳ್ಳುತ್ತಾರೆ, ಹಾಗೆಂದು ಹೇಳಿ ಅವರು ಯಾವಾಗಲೂ ನಿಮಗೆ ಸಹಯೋಗ ನೀಡುತ್ತಾರೆಂದಲ್ಲ. ಪ್ರತಿಯೊಬ್ಬರೂ ತಮಗೆ ತಾವು ಸಹಯೋಗ ಕೊಟ್ಟುಕೊಳ್ಳಬೇಕಾಗಿದೆ. ಹೀಗೀಗೆ ಮಾಡಿ ಆಗ ನಿಮ್ಮದು ದೈವೀ ಬುದ್ಧಿಯಾಗುವುದು ಎಂದು ಈಶ್ವರನಂತೂ ಮತ ನೀಡಿದ್ದಾರೆ. ತಂದೆಯು ಇದನ್ನು ಒತ್ತು ಕೊಟ್ಟು ಹೇಳುತ್ತಾರೆ. ಶ್ರೀಮತವನ್ನು ಎಲ್ಲರಿಗೆ ಕೊಡುತ್ತಿರುತ್ತಾರೆ. ಇಷ್ಟಂತೂ ಅವಶ್ಯವಾಗಿದೆ - ಕೆಲವರ ಬುದ್ಧಿಯು ತಣ್ಣಗಿದೆ, ಕೆಲವರದು ತೀಕ್ಷ್ಣವಿದೆ. ಪಾವನ ತಂದೆಯ ಜೊತೆ ನಿಮ್ಮ ಬುದ್ಧಿಯೋಗವಿಲ್ಲವೆಂದರೆ ಬ್ಯಾಟರಿಯು ಚಾರ್ಜ್ ಆಗುವುದಿಲ್ಲ. ತಂದೆಯ ಶ್ರೀಮತವನ್ನು ಪಾಲಿಸುವುದಿಲ್ಲ. ಯೋಗವು ಹಿಡಿಸುವುದೇ ಇಲ್ಲ. ನಮ್ಮ ಬ್ಯಾಟರಿಯು ತುಂಬುತ್ತಾ ಹೋಗುತ್ತದೆ ಎಂಬುದನ್ನು ನೀವೀಗ ಅನುಭವ ಮಾಡುತ್ತೀರಿ. ತಮೋಪ್ರಧಾನರಿಂದ ಸತೋಪ್ರಧಾನರಂತೂ ಖಂಡಿತ ಆಗಬೇಕಾಗಿದೆ. ಈ ಸಮಯದಲ್ಲಿ ನಿಮಗೆ ಪರಮಾತ್ಮನ ಶ್ರೀಮತವು ಸಿಗುತ್ತಿದೆ, ಇದನ್ನು ಪ್ರಪಂಚದವರು ಸ್ವಲ್ಪವೂ ತಿಳಿದಿಲ್ಲ. ನನ್ನ ಮತದಿಂದ ನೀವು ದೇವತೆಗಳಾಗಿ ಬಿಡುತ್ತೀರಿ, ಇದಕ್ಕಿಂತಲೂ ಶ್ರೇಷ್ಠ ಮತವು ಮತ್ತ್ಯಾವುದೂ ಇಲ್ಲ. ಸತ್ಯಯುಗದಲ್ಲಿಯೂ ಈ ಜ್ಞಾನವಿರುವುದಿಲ್ಲ. ಇದು ನಾಟಕದಲ್ಲಿ ಮಾಡಲ್ಪಟ್ಟಿದೆ. ನಿಮ್ಮನ್ನು ಪುರುಷೋತ್ತಮರನ್ನಾಗಿ ಮಾಡುವ ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ ನಂತರ ಇದರ ನೆನಪಾರ್ಥವಾಗಿ ಭಕ್ತಿಮಾರ್ಗದಲ್ಲಿ ಹಬ್ಬಗಳನ್ನಾಚರಿಸುತ್ತಾರಲ್ಲವೆ. ದಶಹರಾ ಹಬ್ಬವನ್ನು ಆಚರಿಸುತ್ತಾರೆ. ವಾಸ್ತವದಲ್ಲಿ ತಂದೆಯು ಯಾವಾಗ ಬರುತ್ತಾರೆಯೋ ಆಗ ದಶಹರಾ ಆಗುತ್ತದೆ ಅರ್ಥಾತ್ ದಶಕಂಠ ರಾವಣನ ಸಂಹಾರವಾಗುತ್ತದೆ. 5000 ವರ್ಷಗಳ ನಂತರ ಪ್ರತಿಯೊಂದು ಮಾತು ಪುನರಾವರ್ತನೆಯಾಗುತ್ತದೆ.

ನೀವು ಮಕ್ಕಳಿಗೇ ಈ ಈಶ್ವರೀಯ ಮತ ಅರ್ಥಾತ್ ಶ್ರೀಮತವು ಸಿಗುತ್ತಿದೆ, ಇದರಿಂದ ನೀವು ಶ್ರೇಷ್ಠರಾಗುತ್ತೀರಿ. ನೀವಾತ್ಮಗಳು ಸತೋಪ್ರಧಾನರಾಗಿದ್ದಿರಿ, ಮತ್ತೆ ಇಳಿಯುತ್ತಾ-ಇಳಿಯುತ್ತಾ ತಮೋಪ್ರಧಾನ ಭ್ರಷ್ಟರಾಗಿ ಬಿಡುತ್ತೀರಿ ನಂತರ ತಂದೆಯು ಬಂದು ಜ್ಞಾನ ಮತ್ತು ಯೋಗವನ್ನು ಕಲಿಸಿ ಸತೋಪ್ರಧಾನ ಶ್ರೇಷ್ಠರನ್ನಾಗಿ ಮಾಡುತ್ತಾರೆ ಮತ್ತು ನೀವು ಏಣಿಯನ್ನು ಹೇಗೆ ಕೆಳಗಿಳಿಯುತ್ತೀರಿ ಎಂಬುದನ್ನು ತಿಳಿಸುತ್ತಾರೆ. ಈ ನಾಟಕವು ನಡೆಯುತ್ತಾ ಇರುತ್ತದೆ. ಇದರ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸಿದ್ದಾರೆ ಅಂದಮೇಲೆ ಈಗ ನಿಮಗೆ ಸ್ಮೃತಿ ಬಂದಿತಲ್ಲವೆ. ಪ್ರತಿಯೊಬ್ಬರ ಜನ್ಮದ ಕಥೆಯನ್ನಂತೂ ತಿಳಿಸಲು ಸಾಧ್ಯವಿಲ್ಲ. ಓದಿ ತಿಳಿಸಲು ಅದನ್ನು ಬರೆಯಲು ಆಗುವುದೂ ಇಲ್ಲ. ಇದನ್ನು ತಂದೆಯು ತಿಳಿಸಿ ಕೊಡುತ್ತಾರೆ. ನೀವೀಗ ಬ್ರಾಹ್ಮಣರಾಗಿದ್ದೀರಿ ನಂತರ ನೀವೇ ದೇವತೆಗಳಾಗಬೇಕಾಗಿದೆ. ಬ್ರಾಹ್ಮಣ, ದೇವತಾ, ಕ್ಷತ್ರಿಯ - ಮೂರು ಧರ್ಮಗಳನ್ನು ನಾನು ಸ್ಥಾಪನೆ ಮಾಡುತ್ತೇನೆ. ಈಗ ನಿಮ್ಮ ಬುದ್ಧಿಯಲ್ಲಿದೆ - ನಾವು ತಂದೆಯ ಮೂಲಕ ಬ್ರಾಹ್ಮಣವಂಶಿಯರಾಗುತ್ತೇವೆ ನಂತರ ಸೂರ್ಯವಂಶಿ, ಚಂದ್ರವಂಶಿಯರಾಗುತ್ತೇವೆ. ಯಾರು ಅನುತ್ತೀರ್ಣರಾಗುವರೋ ಅವರು ಚಂದ್ರವಂಶಿಯವರಾಗಿ ಬಿಡುತ್ತಾರೆ. ಯಾವುದರಲ್ಲಿ ಅನುತ್ತೀರ್ಣ? ಯೋಗದಲ್ಲಿ. ಜ್ಞಾನವನ್ನಂತೂ ಬಹಳ ಸಹಜ ಮಾಡಿ ತಿಳಿಸಿದ್ದೇನೆ - ಹೇಗೆ ನೀವು 84 ಜನ್ಮಗಳ ಚಕ್ರವನ್ನು ಸುತ್ತುತ್ತೀರಿ ಎಂದು. ಇದನ್ನು ಮನುಷ್ಯರು 84 ಲಕ್ಷ ಜನ್ಮಗಳೆಂದು ಹೇಳಿ ಬಿಡುತ್ತಾರೆ ಅಂದಾಗ ಎಷ್ಟು ದೂರ ತೆಗೆದುಕೊಂಡು ಹೋಗಿದ್ದಾರೆ! ಈಗ ನಿಮಗೆ ಈಶ್ವರೀಯ ಮತ ಸಿಗುತ್ತಿದೆ. ಈಶ್ವರನು ಒಂದೇ ಬಾರಿ ಬರುತ್ತಾರೆ ಅಂದಮೇಲೆ ಅವರ ಮತವೂ ಒಂದೇ ಬಾರಿ ಸಿಗುವುದು. ಒಂದು ದೇವಿ-ದೇವತಾ ಧರ್ಮವಿತ್ತು, ಅವಶ್ಯವಾಗಿ ಅವರಿಗೆ ಈಶ್ವರೀಯ ಮತ ಸಿಕ್ಕಿತ್ತು ಅಂದಮೇಲೆ ಅದಕ್ಕೆ ಮೊದಲು ಸಂಗಮಯುಗವಿತ್ತು, ತಂದೆಯು ಬಂದು ಪ್ರಪಂಚವನ್ನು ಪರಿವರ್ತನೆ ಮಾಡುತ್ತಾರೆ. ನೀವೀಗ ಪರಿವರ್ತನೆಯಾಗುತ್ತಿದ್ದೀರಿ. ಈ ಸಮಯದಲ್ಲಿ ನಿಮ್ಮನ್ನು ತಂದೆಯು ಪರಿವರ್ತನೆ ಮಾಡುತ್ತಾರೆ. ಕಲ್ಪ-ಕಲ್ಪವೂ ನಾವು ಪರಿವರ್ತನೆಯಾಗುತ್ತಾ ಬಂದಿದ್ದೇವೆ, ಪರಿವರ್ತನೆಯಾಗುತ್ತಲೇ ಇರುತ್ತೇವೆಂದು ನೀವು ಹೇಳುತ್ತೀರಿ. ಇದು ಚೈತನ್ಯ ಬ್ಯಾಟರಿಯಾಗಿದೆಯಲ್ಲವೆ, ಅದು ಜಡವಾಗಿದೆ. ಮಕ್ಕಳಿಗೆ ಅರ್ಥವಾಗಿದೆ - 5000 ವರ್ಷಗಳ ನಂತರ ತಂದೆಯು ಬಂದಿದ್ದಾರೆ, ಶ್ರೇಷ್ಠಾತಿ ಶ್ರೇಷ್ಠ ಮತವನ್ನೂ ಕೊಡುತ್ತಾರೆ. ಸರ್ವ ಶ್ರೇಷ್ಠ ಭಗವಂತನ ಮತವು ಸಿಗುತ್ತಿದೆ, ಇದರಿಂದ ನೀವು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ನಿಮ್ಮ ಬಳಿ ಯಾರೇ ಬಂದರೂ ಸಹ ತಿಳಿಸಿ - ನೀವು ಈಶ್ವರನ ಸಂತಾನರಾಗಿದ್ದೀರಲ್ಲವೆ? ಈಶ್ವರನು ಶಿವ ತಂದೆಯಾಗಿದ್ದಾರೆ, ಶಿವ ಜಯಂತಿಯನ್ನೂ ಆಚರಿಸುತ್ತಾರೆ. ಅವರು ಸದ್ಗತಿದಾತನಾಗಿದ್ದಾರೆ. ಅವರಿಗೆ ತಮ್ಮದೇ ಆದ ಶರೀರವಿಲ್ಲ ಅಂದಮೇಲೆ ಯಾರ ಮೂಲಕ ಮತ ಕೊಡುತ್ತಾರೆ? ನೀವೂ ಸಹ ಆತ್ಮವಾಗಿದ್ದೀರಿ, ಶರೀರದ ಮೂಲಕ ಮಾತನಾಡುತ್ತೀರಲ್ಲವೆ. ಶರೀರವಿಲ್ಲದೆ ಆತ್ಮವು ಏನನ್ನೂ ಮಾಡಲು ಸಾಧ್ಯವಿಲ್ಲ ಅಂದಮೇಲೆ ನಿರಾಕಾರ ತಂದೆಯೂ ಸಹ ಹೇಗೆ ಬರುವರು? ರಥದಲ್ಲಿ ಬರುತ್ತಾರೆಂದು ಗಾಯನವಿದೆ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಥೆಗಳನ್ನು ಬರೆದಿದ್ದಾರೆ. ತ್ರಿಮೂರ್ತಿಗಳನ್ನು ಸೂಕ್ಷ್ಮವತನದಲ್ಲಿ ತೋರಿಸಿದ್ದಾರೆ. ಇವೆಲ್ಲವೂ ಸಾಕ್ಷಾತ್ಕಾರದ ಮಾತುಗಳಾಗಿವೆ. ರಚನೆಯೆಲ್ಲವೂ ಇಲ್ಲಿಯೇ ಇದೆಯಲ್ಲವೆ ಅಂದಮೇಲೆ ರಚಯಿತ ತಂದೆಯೂ ಸಹ ಇಲ್ಲಿಯೇ ಬರಬೇಕಾಗುತ್ತದೆ. ಪತಿತ ಪ್ರಪಂಚದಲ್ಲಿಯೇ ಬಂದು ಪಾವನರನ್ನಾಗಿ ಮಾಡಬೇಕಾಗಿದೆ. ಇಲ್ಲಿ ಮಕ್ಕಳನ್ನು ಡೈರೆಕ್ಟ್ ಪಾವನರನ್ನಾಗಿ ಮಾಡುತ್ತಿದ್ದಾರೆ. ಇದನ್ನು ತಿಳಿದುಕೊಳ್ಳುತ್ತಾರೆ ಆದರೂ ಸಹ ಜ್ಞಾನವು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಯಾರಿಗೂ ತಿಳಿಸಿ ಕೊಡುವುದಿಲ್ಲ. ಶ್ರೀಮತವನ್ನು ತೆಗೆದುಕೊಳ್ಳಲಿಲ್ಲವೆಂದರೆ ಶ್ರೇಷ್ಠಾತಿ ಶ್ರೇಷ್ಠರಾಗಲು ಸಾಧ್ಯವಿಲ್ಲ. ಯಾರು ತಿಳಿದುಕೊಳ್ಳುವುದೇ ಇಲ್ಲವೋ ಅವರೇನು ಪದವಿಯನ್ನು ಪಡೆಯುವರು! ಎಷ್ಟು ಸರ್ವೀಸ್ ಮಾಡುವಿರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಂದೆಯು ತಿಳಿಸಿದ್ದಾರೆ - ತಮ್ಮ ಮೂಳೆ-ಮೂಳೆಯನ್ನು ಸೇವೆಯಲ್ಲಿ ತೊಡಗಿಸಬೇಕಾಗಿದೆ. ಆಲ್ರೌಂಡ್ ಸೇವೆ ಮಾಡಬೇಕಾಗಿದೆ. ತಂದೆಯ ಸೇವೆಯಲ್ಲಿ ನಾವು ನಮ್ಮ ಮೂಳೆಗಳನ್ನು ಸವೆಸುವುದಕ್ಕೂ ತಯಾರಿದ್ದೇವೆ, ಅನೇಕ ಮಕ್ಕಳು ಸರ್ವೀಸಿಗಾಗಿ ಚಡಪಡಿಸುತ್ತಿರುತ್ತಾರೆ. ಬಾಬಾ, ನಮ್ಮನ್ನು ಈ ಬಂಧನದಿಂದ ಬಿಡಿಸಿ ನಾವು ಸರ್ವೀಸಿನಲ್ಲಿ ತೊಡಗಬೇಕಾಗಿದೆ, ಇದರಿಂದ ಅನೇಕರ ಕಲ್ಯಾಣವಾಗುವುದು ಎಂದು ಹೇಳುತ್ತಾರೆ. ಇಡೀ ಪ್ರಪಂಚವಂತೂ ಸ್ಥೂಲ ಸೇವೆ ಮಾಡುತ್ತದೆ. ಅದರಿಂದಂತೂ ಏಣಿಯನ್ನು ಇಳಿಯುತ್ತಲೇ ಬರುತ್ತೀರಿ. ಈಗ ಈ ಆತ್ಮಿಕ ಸೇವೆಯಿಂದ ಏರುವ ಕಲೆಯಾಗುತ್ತದೆ. ಇಂತಹವರು ನಮಗಿಂತ ಹೆಚ್ಚು ಸರ್ವೀಸ್ ಮಾಡುತ್ತಾರೆಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದಾಗಿದೆ. ಸೇವಾಧಾರಿ ಒಳ್ಳೆಯ ಮಕ್ಕಳಿದ್ದರೆ ಸೇವಾಕೇಂದ್ರವನ್ನು ಸಂಭಾಲನೆ ಮಾಡಬಲ್ಲರು. ತರಗತಿಯಲ್ಲಿ ನಂಬರ್ವಾರ್ ಕುಳಿತುಕೊಳ್ಳುತ್ತಾರೆ ಆದರೆ ಇಲ್ಲಂತೂ ನಂಬರ್ವಾರ್ ಕುಳ್ಳರಿಸುವುದಿಲ್ಲ ಏಕೆಂದರೆ ಆಘಾತವಾಗಿ ಬಿಡುತ್ತದೆ. ಪ್ರತಿಯೊಬ್ಬರೂ ತಮ್ಮನ್ನು ತಾವು ಅರ್ಥ ಮಾಡಿಕೊಳ್ಳಬಹುದಲ್ಲವೆ. ಸರ್ವೀಸ್ ಮಾಡದಿದ್ದರೆ ಅವಶ್ಯವಾಗಿ ಪದವಿಯೂ ಕಡಿಮೆಯಾಗಿ ಬಿಡುವುದು. ಪದವಿಗಳು ನಂಬರ್ವಾರ್ ಬಹಳಷ್ಟಿವೆಯಲ್ಲವೆ ಆದರೆ ಅದು ಸುಖಧಾಮ, ಇದು ದುಃಖಧಾಮವಾಗಿದೆ. ಅಲ್ಲಿ ಯಾವುದೇ ಕಾಯಿಲೆ ಇತ್ಯಾದಿಗಳಿರುವುದಿಲ್ಲ. ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಸರ್ವೀಸ್ ಮಾಡಲಿಲ್ಲವೆಂದರೆ ನಾವು ಬಹಳ ಕಡಿಮೆ ಪದವಿಯನ್ನು ತೆಗೆದುಕೊಳ್ಳುತ್ತೇವೆಂದು ತಿಳಿದುಕೊಳ್ಳಿ. ಸರ್ವೀಸಿನಿಂದಲೇ ಪದವಿ ಸಿಗುತ್ತದೆ ಅಂದಾಗ ತಮ್ಮ ಪರಿಶೀಲನೆ ಮಾಡಿಕೊಳ್ಳಿ - ಪ್ರತಿಯೊಬ್ಬರೂ ತಮ್ಮ ಸ್ಥಿತಿಯನ್ನು ಅರಿತುಕೊಂಡಿದ್ದಾರೆ. ಮಮ್ಮಾ-ಬಾಬಾರವರೂ ಸಹ ಸರ್ವೀಸ್ ಮಾಡುತ್ತಾ ಬಂದಿದ್ದಾರೆ. ಒಳ್ಳೊಳ್ಳೆಯ ಮಕ್ಕಳೂ ಇದ್ದಾರೆ, ಭಲೆ ನೌಕರಿಯಲ್ಲಿಯೂ ಇದ್ದಾರೆ ಅಂತಹವರಿಗೆ ಹೇಳಲಾಗುತ್ತದೆ – ಅರ್ಧ ಸಮಯ ರಜೆ ತೆಗೆದುಕೊಂಡಾದರೂ ಸರ್ವೀಸ್ ಮಾಡಿ, ಪರವಾಗಿಲ್ಲ. ಯಾರು ತಂದೆಯ ಹೃದಯದಲ್ಲಿರುವರೋ ಅವರು ರಾಜ್ಯ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆ, ನಂಬರ್ವಾರ್ ಪುರುಷಾರ್ಥದನುಸಾರ. ಹಾಗೆಯೇ ವಿಜಯ ಮಾಲೆಯಲ್ಲಿ ಬಂದು ಬಿಡುತ್ತಾರೆ. ಅರ್ಪಣೆಯೂ ಆಗುತ್ತಾರೆ, ಸರ್ವೀಸನ್ನೂ ಮಾಡುತ್ತಾರೆ. ಕೆಲವರು ಭಲೆ ಅರ್ಪಣೆಯಾಗುತ್ತಾರೆ ಆದರೆ ಸರ್ವೀಸ್ ಮಾಡುವುದಿಲ್ಲ, ಅಂತಹವರ ಪದವಿಯು ಕಡಿಮೆಯಾಗುತ್ತದೆಯಲ್ಲವೆ. ಶ್ರೀಮತದಿಂದ ಈ ರಾಜಧಾನಿಯು ಸ್ಥಾಪನೆಯಾಗುತ್ತದೆ. ಈ ರೀತಿ ಎಂದಾದರೂ ಕೇಳಿದ್ದೀರಾ? ಅಥವಾ ವಿದ್ಯೆಯಿಂದ ರಾಜಧಾನಿಯು ಸ್ಥಾಪನೆಯಾಗುತ್ತದೆ ಎಂಬುದನ್ನು ಎಂದಾದರೂ ಕೇಳಿದ್ದಿರಾ ಅಥವಾ ನೋಡಿದ್ದಿರಾ? ಹಾ! ದಾನ-ಪುಣ್ಯ ಮಾಡುವುದರಿಂದ ಭಲೆ ರಾಜನ ಮನೆಯಲ್ಲಿ ಜನ್ಮ ಪಡೆಯಲೂಬಹುದು ಆದರೆ ವಿದ್ಯೆಯಿಂದ ರಾಜ್ಯ ಪದವಿಯನ್ನು ಪಡೆದಮಾತನ್ನು ಎಂದೂ ಯಾರೂ ಕೇಳಿರುವುದಿಲ್ಲ, ಯಾರಿಗೂ ತಿಳಿದೂ ಇಲ್ಲ. ತಂದೆಯು ತಿಳಿಸುತ್ತಾರೆ - ನೀವೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ನೀವೀಗ ಮೇಲೆ ಹೋಗಬೇಕಾಗಿದೆ, ಇದು ಬಹಳ ಸಹಜವೂ ಆಗಿದೆ. ನೀವು ನಂಬರ್ವಾರ್ ಪುರುಷಾರ್ಥದನುಸಾರ ಕಲ್ಪ-ಕಲ್ಪವೂ ತಿಳಿದುಕೊಳ್ಳುತ್ತೀರಿ. ತಂದೆಯು ನೆನಪು-ಪ್ರೀತಿಯನ್ನೂ ಸಹ ನಂಬರ್ವಾರ್ ಪುರುಷಾರ್ಥದನುಸಾರವೇ ಕೊಡುತ್ತಾರೆ. ಯಾರು ಸರ್ವೀಸಿನಲ್ಲಿದ್ದಾರೆಯೋ ಅವರಿಗೆ ಹೆಚ್ಚು ನೆನಪು-ಪ್ರೀತಿಯನ್ನು ಕೊಡುತ್ತಾರೆ ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ನಾನು ತಂದೆಯ ಹೃದಯವನ್ನು ಏರಿದ್ದೇನೆಯೇ? ಮಾಲೆಯ ಮಣಿಯಾಗಲು ಸಾಧ್ಯವೇ? ವಿದ್ಯಾವಂತರ ಮುಂದೆ ಅವಿದ್ಯಾವಂತರು ಅವಶ್ಯವಾಗಿ ತಲೆ ಬಾಗುವರು ಆದ್ದರಿಂದ ಮಕ್ಕಳು ಪುರುಷಾರ್ಥ ಮಾಡಲಿ ಎಂದು ತಂದೆಯು ತಿಳಿಸುತ್ತಾರೆ ಆದರೆ ಡ್ರಾಮಾದಲ್ಲಿ ಪಾತ್ರವಿಲ್ಲವೆಂದರೆ ಎಷ್ಟಾದರೂ ತಲೆ ಕೆಡಿಸಿಕೊಳ್ಳಲಿ, ಅವರು ಮೇಲೆರುವುದಿಲ್ಲ. ಯಾವುದಾದರೊಂದು ಗ್ರಹಚಾರವು ಕುಳಿತುಕೊಳ್ಳುತ್ತದೆ. ದೇಹಾಭಿಮಾನದಿಂದಲೇ ಮತ್ತೆಲ್ಲಾ ವಿಕಾರಗಳು ಬರುತ್ತವೆ. ಮುಖ್ಯ ಕಠಿಣ ಕಾಯಿಲೆಯು ದೇಹಾಭಿಮಾನದ್ದಾಗಿದೆ. ಸತ್ಯಯುಗದಲ್ಲಿ ದೇಹಾಭಿಮಾನದ ಹೆಸರೇ ಇರುವುದಿಲ್ಲ, ಅಲ್ಲಿ ನಿಮ್ಮದು ಪ್ರಾಲಬ್ಧವಿರುತ್ತದೆ. ಇದನ್ನು ತಂದೆಯು ಇಲ್ಲಿಯೇ ತಿಳಿಸುತ್ತಾರೆ. ತಮ್ಮನ್ನು ಆತ್ಮನೆಂದು ತಿಳಿದು ನನ್ನೊಬ್ಬನನ್ನೇ ನೆನಪು ಮಾಡಿ ಎಂಬ ಶ್ರೀಮತವನ್ನು ಮತ್ತ್ಯಾರೂ ಕೊಡುವುದಿಲ್ಲ, ಇದು ಮುಖ್ಯ ಮಾತಾಗಿದೆ. ಅಂದಾಗ ಇದನ್ನು ಬರೆಯಿರಿ - ನಿರಾಕಾರ ಭಗವಂತನು ತಿಳಿಸುತ್ತಾರೆ, ನನ್ನೊಬ್ಬನನ್ನು ನೆನಪು ಮಾಡಿ, ತಮ್ಮನ್ನು ಆತ್ಮನೆಂದು ತಿಳಿಯಿರಿ, ತಮ್ಮ ದೇಹವನ್ನೂ ಸಹ ನೆನಪು ಮಾಡಿಕೊಳ್ಳಬೇಡಿ. ಹೇಗೆ ಭಕ್ತಿಯಲ್ಲಿಯೂ ಸಹ ಒಬ್ಬ ಶಿವನಿಗೇ ಪೂಜೆ ಮಾಡುತ್ತೀರಿ ಅಂದಾಗ ಈಗ ಜ್ಞಾನವನ್ನೂ ಕೇವಲ ನಾನೇ ಕೊಡುತ್ತೇನೆ, ಉಳಿದೆಲ್ಲವೂ ಭಕ್ತಿಯಾಗಿದೆ. ಅವ್ಯಭಿಚಾರಿ ಜ್ಞಾನವು ನಿಮಗೆ ಒಬ್ಬ ಶಿವ ತಂದೆಯಿಂದಲೇ ಸಿಗುತ್ತದೆ. ಈ ಜ್ಞಾನ ಸಾಗರನಿಂದ ರತ್ನಗಳು ಸಿಗುತ್ತವೆ, ಆ ಸ್ಥೂಲ ಸಾಗರದ ಮಾತಿಲ್ಲ. ಈ ಜ್ಞಾನ ಸಾಗರನು ನೀವು ಮಕ್ಕಳಿಗೆ ಜ್ಞಾನ ರತ್ನಗಳನ್ನು ಕೊಡುತ್ತಾರೆ, ಇದರಿಂದ ನೀವು ದೇವತೆಗಳಾಗುತ್ತೀರಿ. ಶಾಸ್ತ್ರಗಳಲ್ಲಿ ಏನೇನೋ ಬರೆದು ಬಿಟ್ಟಿದ್ದಾರೆ. ಸಾಗರದಿಂದ ದೇವತೆಗಳು ಹೊರ ಬಂದರು ಮತ್ತೆ ರತ್ನಗಳನ್ನು ಕೊಟ್ಟರು ಎಂದು ಹೇಳುತ್ತಾರೆ. ವಾಸ್ತವದಲ್ಲಿ ನೀವು ಜ್ಞಾನ ಸಾಗರನ ಮಕ್ಕಳಿಗೆ ಜ್ಞಾನ ರತ್ನಗಳನ್ನು ಕೊಡುತ್ತಾರೆ. ನೀವು ಜ್ಞಾನ ರತ್ನಗಳನ್ನು ಆರಿಸಿಕೊಳ್ಳುತ್ತೀರಿ, ಮೊದಲು ಕಲ್ಲುಗಳನ್ನು ಆರಿಸಿಕೊಳ್ಳುತ್ತಿದ್ದಿರಿ ಆದ್ದರಿಂದ ಕಲ್ಲು ಬುದ್ಧಿಯವರಾಗಿ ಬಿಟ್ಟಿರಿ. ಈಗ ರತ್ನಗಳನ್ನು ಆರಿಸುವುದರಿಂದ ನೀವು ಪಾರಸಬುದ್ಧಿಯವರಾಗಿ ಬಿಡುತ್ತೀರಿ. ಪಾರಸನಾಥರಾಗುತ್ತೀರಲ್ಲವೆ. ಈ ಪಾರಸನಾಥರು (ಲಕ್ಷ್ಮೀ-ನಾರಾಯಣ) ವಿಶ್ವದ ಮಾಲೀಕರಾಗಿದ್ದರು. ಭಕ್ತಿಮಾರ್ಗದಲ್ಲಂತೂ ಅನೇಕ ಹೆಸರುಗಳು, ಅನೇಕ ಚಿತ್ರಗಳನ್ನು ಮಾಡಿ ಬಿಟ್ಟಿದ್ದಾರೆ. ವಾಸ್ತವದಲ್ಲಿ ಲಕ್ಷ್ಮೀ-ನಾರಾಯಣ ಅಥವಾ ಪಾರಸನಾಥ - ಎರಡೂ ಒಂದೇ ಮಾತಾಗಿದೆ. ನೇಪಾಳದಲ್ಲಿ ಪಶುಪತಿನಾಥನ ಮೇಳವಾಗುತ್ತದೆ, ಅವರೂ ಪಾರಸನಾಥನೇ ಆಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯು ಯಾವ ಜ್ಞಾನ ರತ್ನಗಳನ್ನು ಕೊಟ್ಟಿದ್ದಾರೆಯೋ ಅವನ್ನೇ ಆರಿಸಿಕೊಳ್ಳಬೇಕಾಗಿದೆ, ಕಲ್ಲುಗಳನ್ನಲ್ಲ. ದೇಹಾಭಿಮಾನದ ಕಠಿಣ ಕಾಯಿಲೆಯಿಂದ ಸ್ವಯಂನ್ನು ಪಾರು ಮಾಡಿಕೊಳ್ಳಬೇಕಾಗಿದೆ.

2. ತಮ್ಮ ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಿಕೊಳ್ಳಲು ಪವರ್ಹೌಸ್ ತಂದೆಯ ಜೊತೆ ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ, ಆತ್ಮಾಭಿಮಾನಿಯಾಗಿರುವ ಪುರುಷಾರ್ಥ ಮಾಡಬೇಕು. ನಿರ್ಭಯರಾಗಿರಬೇಕಾಗಿದೆ.

ವರದಾನ:
ದಾತಾತನದ ಭಾವನೆಯ ಮುಖಾಂತರ ಇಚ್ಛಾಮಾತ್ರಂ ಅವಿದ್ಯೆ ನ ಸ್ಥಿತಿಯ ಅನುಭವ ಮಾಡುವಂತಹ ತೃಪ್ತ ಆತ್ಮ ಭವ.

ಸದಾ ಒಂದೇ ಲಕ್ಷ್ಯ ಇರಲಿ ನಾನು ದಾತಾನ ಮಗುವಾಗಿ ಸರ್ವ ಆತ್ಮರಿಗೆ ಕೊಡಬೇಕು, ದಾತಾತನದ ಭಾವನೆ ಇಡುವುದರಿಂದ ಸಂಪನ್ನ ಆತ್ಮರಾಗಿ ಬಿಡುವಿರಿ ಮತ್ತು ಯಾರು ಸಂಪನ್ನರಾಗಿರುತ್ತಾರೆ ಅವರು ಸದಾ ತೃಪ್ತರಾಗಿರುತ್ತಾರೆ. ನಾನು ಕೊಡುವಂತಹ ದಾತಾನ ಮಗು ಆಗಿದ್ದೇನೆ-ಕೊಡುವುದೇ ತೆಗೆದುಕೊಳ್ಳುವುದಾಗಿದೆ, ಇದೇ ಭಾವನೆ ಸದಾ ನಿರ್ವಿಘ್ನ, ಇಚ್ಛಾ ಮಾತ್ರಂ ಅವಿಧ್ಯಾನ ಸ್ಥಿತಿಯ ಅನುಭವವನ್ನು ಮಾಡಿಸುತ್ತದೆ. ಸದಾ ಒಂದೇ ಲಕ್ಷ್ಯದ ಕಡೆ ಗಮನಯಿರಲಿ, ಆ ಲಕ್ಷ್ಯವಾಗಿದೆ ಬಿಂದು ಮತ್ತು ಬೇರೆ ಯಾವುದೇ ಮಾತಿನ ವಿಸ್ತಾರವನ್ನು ನೋಡುತ್ತಿದ್ದರೂ ನೋಡದಂತೆ, ಕೇಳುತ್ತಿದ್ದರೂ ಕೇಳದಂತಿರಿ.

ಸ್ಲೋಗನ್:
ಬುದ್ಧಿ ಹಾಗೂ ಸ್ಥಿತಿ ಒಂದುವೇಳೆ ಬಲಹೀನವಾಗಿದ್ದಾಗ ಅದರ ಕಾರಣವಾಗಿದೆ ವ್ಯರ್ಥ ಸಂಕಲ್ಪ.

ಅವ್ಯಕ್ತ ಸೂಚನೆ:- ಈಗ ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.

ಕರ್ಮಾತೀತರಾಗುವುದಕ್ಕೆ ಕರ್ಮಗಳ ಲೆಕ್ಕಾಚಾರದಿಂದ ಮುಕ್ತರಾಗಿ. ಸೇವೆಯಲ್ಲಿಯೂ ಸೇವಯ ಬಂಧನದಲ್ಲಿ ಬಂಧಿಂತರಾಗಿರುವ ಸೇವಾಧಾರಿಯಲ್ಲ. ಬಂಧನ ಮುಕ್ತರಾಗಿ ಸೇವೆ ಮಾಡಿ ಅರ್ಥಾತ್ ಹದ್ದಿನ (ಮಿತವಾದ) ರಾಯಲ್ ಇಚ್ಛೆಗಳಿಂದ ಮುಕ್ತರಾಗಿರಿ. ಹೇಗೆ ದೇಹದ ಬಂಧನದಿಂದ, ದೇಹದ ಸಂಬಂಧದ ಬಂಧನ, ಇಂತಹ ಸೇವೆಯಲ್ಲಿ ಸ್ವಾರ್ಥ - ಈ ಬಂಧನವೂ ಸಹ ಕರ್ಮಾತೀತರಾಗುವುದರಲ್ಲಿ ವಿಘ್ನ ಹಾಕುತ್ತದೆ. ಕರ್ಮಾತೀತರಾಗುವುದು ಅರ್ಥಾತ್ ಈ ರಾಯಲ್ ಲೆಕ್ಕಾಚಾರದಿಂದಲೂ ಮುಕ್ತ.