07.02.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಬುದ್ಧಿಯಲ್ಲಿ ಒಬ್ಬ ತಂದೆಯ ನೆನಪೇ ಸ್ಥಿರವಾಗಿರಲಿ, ಇದೂ ಸಹ ಅಹೋ ಸೌಭಾಗ್ಯವಾಗಿದೆ.”

ಪ್ರಶ್ನೆ:
ಯಾವ ಮಕ್ಕಳಿಗೆ ಸರ್ವೀಸಿನ ಉತ್ಸಾಹವಿರುವುದೋ ಅವರ ಚಿಹ್ನೆಗಳೇನು?

ಉತ್ತರ:
ಅವರು ಬಾಯಿಂದ ಜ್ಞಾನವನ್ನು ತಿಳಿಸದೇ ಇರಲು ಸಾಧ್ಯವಿಲ್ಲ. ಅವರು ಆತ್ಮಿಕ ಸೇವೆಯಲ್ಲಿ ತಮ್ಮ ಮೂಳೆ-ಮೂಳೆಗಳನ್ನು ಸ್ವಾಹಾ ಮಾಡುತ್ತಾರೆ. ಅವರಿಗೆ ಆತ್ಮಿಕ ಜ್ಞಾನವನ್ನು ತಿಳಿಸುವುದರಲ್ಲಿ ಬಹಳ ಖುಷಿಯಿರುತ್ತದೆ, ಖುಷಿಯಲ್ಲಿಯೇ ನರ್ತಿಸುತ್ತಿರುತ್ತಾರೆ. ಅವರು ತಮಗಿಂತಲೂ ಹಿರಿಯರಿಗೆ ಬಹಳ ಗೌರವ ಕೊಡುತ್ತಾರೆ. ಅವರಿಂದ ಕಲಿಯುತ್ತಿರುತ್ತಾರೆ.

ಗೀತೆ:
ಪ್ರಪಂಚ ಬದಲಾದರೂ ನಾವು ಬದಲಾಗುವುದಿಲ್ಲ..............

ಓಂ ಶಾಂತಿ.
ಮಕ್ಕಳು ಗೀತೆಯ ಎರಡು ಸಾಲನ್ನು ಕೇಳಿದಿರಿ. ಇದು ಪ್ರತಿಜ್ಞೆಯ ಗೀತೆಯಾಗಿದೆ. ಹೇಗೆ ಯಾರದೇ ನಿಶ್ಚಿತಾರ್ಥ (ವಿವಾಹ) ವಾದಾಗ ನಾವು ಸ್ತ್ರೀ-ಪುರುಷರೆಂದೂ ಒಬ್ಬರು ಇನ್ನೊಬ್ಬರನ್ನು ಬಿಡುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತಾರೆ. ಯಾರಿಗಾದರೂ ಪರಸ್ಪರ ಆಗಲಿಲ್ಲವೆಂದರೆ ಬಿಟ್ಟು ಬಿಡಲೂಬಹುದು. ಇಲ್ಲಿ ನೀವು ಮಕ್ಕಳು ಯಾರ ಜೊತೆ ಪ್ರತಿಜ್ಞೆ ಮಾಡುತ್ತೀರಿ? ಈಶ್ವರನ ಜೊತೆ. ಅವರ ಜೊತೆ ನೀವು ಮಕ್ಕಳ ಅಥವಾ ಪ್ರಿಯತಮೆಯರ ನಿಶ್ಚಿತಾರ್ಥವಾಗಿದೆ ಆದರೆ ಯಾರು ಇಂತಹ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನು ಬಿಟ್ಟು ಬಿಡುತ್ತಾರೆ. ಇಲ್ಲಿ ನೀವು ಮಕ್ಕಳು ಕುಳಿತಿದ್ದೀರಿ, ನಿಮಗೆ ತಿಳಿದಿದೆ - ಈಗ ಬೇಹದ್ದಿನ ಬಾಪ್ದಾದಾರವರು ಬಂದರೆಂದರೆ ಬಂದರು, ಈ ಸ್ಥಿತಿಯು ನೀವು ಇಲ್ಲಿದ್ದಾಗ ಇರುತ್ತದೆ. ಹೊರಗಿನ ಸೇವಾಕೇಂದ್ರಗಳಲ್ಲಂತೂ ಈ ರೀತಿಯಿರುವುದಿಲ್ಲ. ಇಲ್ಲಿ ನೀವು ಬಾಪ್ದಾದಾ ಬಂದರೆಂದರೆ ಬಂದು ಬಿಟ್ಟರು ಎಂದು ತಿಳಿದುಕೊಳ್ಳುತ್ತೀರಿ. ಹೊರಗಿನ ಸೇವಾಕೇಂದ್ರಗಳಲ್ಲಿ ತಂದೆಯು ನುಡಿಸಿರುವ ಮುರುಳಿಯು ಬಂದು ಬಿಟ್ಟಿತೆಂದು ತಿಳಿಯುತ್ತಾರೆ. ಇಲ್ಲಿಯ ಮತ್ತು ಅಲ್ಲಿಯದರಲ್ಲಿ ಬಹಳ ಅಂತರವಿರುತ್ತದೆ ಏಕೆಂದರೆ ಇಲ್ಲಿ ಬೇಹದ್ದಿನ ಬಾಪ್ದಾದಾರವರ ಸಮ್ಮುಖದಲ್ಲಿ ನೀವು ಕುಳಿತಿದ್ದೀರಿ. ಅಲ್ಲಂತು ನೀವು ಸಮ್ಮುಖದಲ್ಲಿರುವುದಿಲ್ಲ. ಸಮ್ಮುಖದಲ್ಲಿ ಹೋಗಿ ಮುರುಳಿ ಕೇಳಬೇಕೆಂದು ಬಯಸುತ್ತೀರಿ. ಇಲ್ಲಿ ಮಕ್ಕಳ ಬುದ್ಧಿಯಲ್ಲಿ ಬಂದಿತು - ಬಾಬಾ ಬಂದೇ ಬಿಟ್ಟರು. ಹೇಗೆ ಅನ್ಯ ಸತ್ಸಂಗಗಳಲ್ಲಿ ಅವರು ಇಂತಹ ಸ್ವಾಮಿಯು ಬರುವರು ಎಂದು ತಿಳಿದುಕೊಳ್ಳುತ್ತಾರೆ ಆದರೆ ಆ ವಿಚಾರವೂ ಸಹ ಎಲ್ಲರಿಗೂ ಏಕರಸವಾಗಿರುವುದಿಲ್ಲ. ಕೆಲವರ ಬುದ್ಧಿಯಂತೂ ಬೇರೆ ಕಡೆ ಅಲೆದಾಡುತ್ತಿರುತ್ತದೆ. ಕೆಲವರಿಗೆ ಪತಿಯ ನೆನಪು, ಕೆಲವರಿಗೆ ಸಂಬಂಧಿಗಳ ನೆನಪು ಬರುತ್ತದೆ. ಬುದ್ಧಿಯೋಗವು ಒಬ್ಬ ಗುರುವಿನ ಕಡೆಯೇ ನಿಲ್ಲುವುದಿಲ್ಲ. ಆ ಸ್ವಾಮಿಯ ನೆನಪಿನಲ್ಲಿ ಕುಳಿತುಕೊಳ್ಳುವವರು ಬಹಳ ವಿರಳ. ಇಲ್ಲಿಯೂ ಹಾಗೆಯೇ. ಎಲ್ಲರೂ ಶಿವ ತಂದೆಯ ನೆನಪಿನಲ್ಲಿರುತ್ತಾರೆ ಎಂದಲ್ಲ. ಬುದ್ಧಿಯು ಒಂದಲ್ಲ ಒಂದು ಕಡೆ ಓಡುತ್ತಿರುತ್ತದೆ. ಮಿತ್ರ ಸಂಬಂಧಿ ಮೊದಲಾದವರ ನೆನಪು ಬರುತ್ತದೆ. ಇಡೀ ಸಮಯ ಒಬ್ಬ ಶಿವ ತಂದೆಯ ನೆನಪಿನಲ್ಲಿದ್ದರೆ ಅಹೋ ಸೌಭಾಗ್ಯ! ಸ್ಥಿರವಾದ ನೆನಪಿನಲ್ಲಿರುವವರು ಕೆಲವರೇ ವಿರಳ. ಇಲ್ಲಿ ತಂದೆಯ ಸನ್ಮುಖದಲ್ಲಿದ್ದಾಗ ಬಹಳ ಖುಷಿಯಿರಬೇಕು. ಅತೀಂದ್ರಿಯ ಸುಖವನ್ನು ಗೋಪಿವಲ್ಲಭನ ಗೋಪ-ಗೋಪಿಕೆಯರಿಂದ ಕೇಳಿ. ಇದು ಇಲ್ಲಿಯ ಗಾಯನವಾಗಿದೆ. ನೀವಿಲ್ಲಿ ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ. ನಾವು ಈಶ್ವರನ ಮಡಿಲಿನಲ್ಲಿದ್ದೇವೆ ನಂತರ ದೈವೀ ಮಡಿಲಿಗೆ ಹೋಗುತ್ತೇವೆ ಎಂಬುದು ನಿಮಗೆ ತಿಳಿದಿದೆ. ಭಲೆ ಕೆಲವರ ಬುದ್ಧಿಯಲ್ಲಿ ಈ ಚಿತ್ರದಲ್ಲಿ ಇದನ್ನು ಸರಿ ಪಡಿಸಬೇಕು, ಇದನ್ನೇ ಬರೆಯಬೇಕೆಂದು ಸರ್ವೀಸಿನ ವಿಚಾರಗಳು ನಡೆಯುತ್ತವೆ ಆದರೆ ಯಾರು ಒಳ್ಳೆಯ ಮಕ್ಕಳಾಗಿರುವರೋ ಅವರು ಈಗಂತೂ ನಾವು ಕೇವಲ ತಂದೆಯಿಂದಲೇ ಕೇಳಬೇಕಾಗಿದೆ ಎಂದು ತಿಳಿಯುತ್ತಾರೆ. ಮತ್ತ್ಯಾವುದೇ ಸಂಕಲ್ಪ ಬರಲಿ ಅವಕಾಶ ಕೊಡುವುದಿಲ್ಲ. ತಂದೆಯು ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಲು ಬಂದಿದ್ದಾರೆ ಅಂದಮೇಲೆ ಆ ತಂದೆಯೊಂದಿಗೇ ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ. ನಂಬರ್ವಾರ್ ಧಾರಣೆ ಮಾಡುವವರಂತೂ ಇದ್ದೇ ಇರುತ್ತಾರೆ. ಕೆಲವರು ಕೇಳಿ ಚೆನ್ನಾಗಿ ಧಾರಣೆ ಮಾಡುತ್ತಾರೆ. ಕೆಲವರು ಕಡಿಮೆ ಧಾರಣೆ ಮಾಡುತ್ತಾರೆ. ಬುದ್ಧಿಯೋಗವು ಬೇರೆ ಕಡೆ ಓಡುತ್ತಿದ್ದರೆ ಅವರಿಗೆ ಧಾರಣೆಯಾಗುವುದಿಲ್ಲ ಕಚ್ಚಾ ಆಗಿ ಬಿಡುತ್ತಾರೆ. ಒಂದೆರಡು ಬಾರಿ ಮುರುಳಿಯನ್ನು ಕೇಳಿದಿರಿ, ಧಾರಣೆಯಾಗಲಿಲ್ಲವೆಂದರೆ ಅದೇ ಹವ್ಯಾಸವು ಪಕ್ಕಾ ಆಗುತ್ತಾ ಹೋಗುವುದು. ಮತ್ತೆ ಎಷ್ಟಾದರೂ ಮುರುಳಿಯನ್ನು ಕೇಳುತ್ತಿರಲಿ ಆದರೆ ಧಾರಣೆಯಾಗುವುದಿಲ್ಲ. ಯಾರಿಗೂ ತಿಳಿಸುವುದಕ್ಕೂ ಸಾಧ್ಯವಿಲ್ಲ. ಯಾರಿಗೆ ಧಾರಣೆಯಿರುವುದೋ ಅವರಿಗೆ ಸರ್ವೀಸಿನ ಆಸಕ್ತಿಯಿರುವುದು. ಅವರು ಸರ್ವೀಸಿಗಾಗಿ ತಯಾರಿರುತ್ತಾರೆ. ಹೋಗಿ ದಾನ ಮಾಡಬೇಕು ಎಂದು ಆಲೋಚಿಸುತ್ತಾರೆ. ಏಕೆಂದರೆ ಈ ಜ್ಞಾನ ಧನವು ಒಬ್ಬ ತಂದೆಯ ವಿನಃ ಮತ್ತ್ಯಾರ ಬಳಿಯೂ ಇಲ್ಲ. ತಂದೆಯು ಇದನ್ನೂ ಸಹ ತಿಳಿದುಕೊಂಡಿದ್ದಾರೆ. ಎಲ್ಲರಿಗೂ ಧಾರಣೆಯಾಗಲು ಸಾಧ್ಯವಿಲ್ಲ. ಎಲ್ಲರೂ ಒಂದೇ ಸಮನಾಗಿ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಬುದ್ಧಿಯು ಬೇರೆ ಕಡೆ ಅಲೆದಾಡುತ್ತಿರುತ್ತದೆ. ಭವಿಷ್ಯದ ಅದೃಷ್ಟವು ಅಷ್ಟು ಶ್ರೇಷ್ಠವಾಗಿ ರೂಪುಗೊಳ್ಳುವುದಿಲ್ಲ. ಇನ್ನೂ ಕೆಲವರು ಸ್ಥೂಲ ಸರ್ವೀಸಿನಲ್ಲಿ ತಮ್ಮ ಮೂಳೆ-ಮೂಳೆಯನ್ನು ಉಪಯೋಗಿಸುತ್ತಾರೆ, ಎಲ್ಲರನ್ನೂ ಖುಷಿ ಪಡಿಸುತ್ತಾರೆ. ಹೇಗೆ ಭೋಜನವನ್ನು ತಯಾರಿಸಿ ತಿನ್ನಿಸುತ್ತಾರೆ. ಇದೂ ಸಹ ಸಬ್ಜೆಕ್ಟ್ ಅಲ್ಲವೆ. ಯಾರಿಗೆ ಸರ್ವೀಸಿನ ಉತ್ಸಾಹವಿರುವುದೋ ಅವರು ಮುಖದಿಂದ ಜ್ಞಾನವನ್ನು ಹೇಳದೇ ಇರುವುದೇ ಇಲ್ಲ. ಮತ್ತೆ ತಂದೆಯು ನೋಡುತ್ತಾರೆ - ದೇಹಾಭಿಮಾನವಂತೂ ಇಲ್ಲವೆ? ಹಿರಿಯರಿಗೆ ಗೌರವ ಕೊಡುತ್ತಾರೆಯೇ ಅಥವಾ ಇಲ್ಲವೆ? ದೊಡ್ಡ ಮಹಾರಥಿಗಳಿಗೆ ಗೌರವವನ್ನಿಡಬೇಕಾಗಿದೆ. ಹಾ! ಕೆಲ ಕೆಲವರು ಚಿಕ್ಕವರೂ ಸಹ ಬುದ್ಧಿವಂತರಾಗಿ ಬಿಡುತ್ತಾರೆಂದರೆ ಅವರಿಗೆ ದೊಡ್ಡವರು ಗೌರವ ಕೊಡಬೇಕಾಗುತ್ತದೆ ಏಕೆಂದರೆ ಅವರ ಬುದ್ಧಿಯು ಗ್ಯಾಲಪ್ ಮಾಡುತ್ತದೆ, ಸರ್ವೀಸಿನ ಉತ್ಸಾಹವನ್ನು ನೋಡಿ ಇವರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆಂದು ತಂದೆಯು ಖುಷಿಯಾಗುವರು. ಇಡೀ ದಿನ ಪ್ರದರ್ಶನಿಯಲ್ಲಿ ತಿಳಿಸುವ ಅಭ್ಯಾಸ ಮಾಡಬೇಕು. ಇದರಿಂದ ಅನೇಕ ಪ್ರಜೆಗಳಂತೂ ಆಗುತ್ತಾರಲ್ಲವೆ, ಮತ್ತ್ಯಾವುದೇ ಉಪಾಯವಿಲ್ಲ. ಸೂರ್ಯವಂಶಿ, ಚಂದ್ರವಂಶಿ, ರಾಜಾ-ರಾಣಿ, ಪ್ರಜೆ ಎಲ್ಲರೂ ಇಲ್ಲಿಯೇ ಆಗುತ್ತಾರೆ ಅಂದಮೇಲೆ ಎಷ್ಟೊಂದು ಸರ್ವೀಸ್ ಮಾಡಬೇಕು! ಮಕ್ಕಳ ಬುದ್ಧಿಯಲ್ಲಿ ಇದಂತೂ ಇದೆ - ನಾವೀಗ ಬ್ರಾಹ್ಮಣರಾಗಿದ್ದೇವೆ, ಗೃಹಸ್ಥದಲ್ಲಿರುವುದರಿಂದ ಪ್ರತಿಯೊಬ್ಬರ ಸ್ಥಿತಿಯು ಬೇರೆ-ಬೇರೆಯಾಗಿರುತ್ತದೆಯಲ್ಲವೆ. ಮನೆ-ಮಠವನ್ನಂತೂ ಬಿಡುವಂತಿಲ್ಲ. ತಂದೆಯು ತಿಳಿಸುತ್ತಾರೆ - ಭಲೆ ಮನೆಯಲ್ಲಿಯೇ ಇರಿ ಆದರೆ ಬುದ್ಧಿಯಲ್ಲಿ ಈ ನಿಶ್ಚಯವಿರಲಿ - ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಿಯೇ ಬಿಟ್ಟಿದೆ. ಈಗ ತಂದೆಯೊಂದಿಗೆ ನಮ್ಮ ಕೆಲಸವಿದೆ, ಇದನ್ನೂ ತಿಳಿದುಕೊಂಡಿದ್ದೀರಿ - ಯಾರು ಕಲ್ಪದ ಹಿಂದೆ ಜ್ಞಾನವನ್ನು ತೆಗೆದುಕೊಂಡಿದ್ದರೋ ಅವರೇ ತೆಗೆದುಕೊಳ್ಳುತ್ತಾರೆ. ಕ್ಷಣ-ಪ್ರತಿಕ್ಷಣವು ಚಾಚೂ ತಪ್ಪದೆ ಪುನರಾವರ್ತನೆಯಾಗುತ್ತದೆ. ಆತ್ಮದಲ್ಲಿ ಜ್ಞಾನವಿರುತ್ತದೆಯಲ್ಲವೆ. ತಂದೆಯ ಬಳಿಯಂತು ಜ್ಞಾನವಿರುತ್ತದೆ. ನೀವು ಮಕ್ಕಳೂ ಸಹ ತಂದೆಯ ತರಹ ಆಗಬೇಕಾಗಿದೆ. ಜ್ಞಾನ ಬಿಂದುಗಳನ್ನು ಧಾರಣೆ ಮಾಡಬೇಕಾಗಿದೆ. ಎಲ್ಲಾ ಜ್ಞಾನ ಬಿಂದುಗಳನ್ನು ಒಂದೇ ಸಮಯದಲ್ಲಿ ತಿಳಿಸಲು ಆಗುವುದಿಲ್ಲ. ವಿನಾಶವು ಸಮ್ಮುಖದಲ್ಲಿ ನಿಂತಿದೆ. ಇದು ಅದೇ ವಿನಾಶವಾಗಿದೆ. ಸತ್ಯ-ತ್ರೇತಾಯುಗದಲ್ಲಿ ಯಾವುದೇ ಯುದ್ಧವು ನಡೆಯುವುದಿಲ್ಲ. ಯುದ್ಧವಂತು ನಂತರದಲ್ಲಿ ಯಾವಾಗ ಬಹಳ ಧರ್ಮಗಳಾಗುವವೋ, ಸೈನ್ಯಗಳೆಲ್ಲವೂ ಬರುವವೋ ಆಗ ಯುದ್ಧಗಳಾಗುತ್ತವೆ. ಮೊಟ್ಟ ಮೊದಲು ಆತ್ಮರು ಸತೋಪ್ರಧಾನರಿಂದ ಕೆಳಗಿಳಿಯುತ್ತಾರೆ ನಂತರ ಸತೋ, ರಜೋ, ತಮೋದ ಸ್ಥಿತಿಯಾಗುತ್ತದೆ ಅಂದಾಗ ಇದೆಲ್ಲವನ್ನೂ ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ, ಹೇಗೆ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಇಲ್ಲಿ ಕುಳಿತಿದ್ದೀರಿ ಅಂದಮೇಲೆ ಬುದ್ಧಿಯಲ್ಲಿರಲಿ – ಶಿವ ತಂದೆಯು ಬಂದು ನಮಗೆ ಖಜಾನೆಯನ್ನು ಕೊಡುತ್ತಾರೆ, ಅದನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಒಳ್ಳೊಳ್ಳೆಯ ಮಕ್ಕಳು ಜ್ಞಾನ ಬಿಂದುಗಳನ್ನು ಬರೆದಿಟ್ಟುಕೊಳ್ಳುತ್ತಾರೆ. ಬರೆದುಕೊಳ್ಳುವುದು ಒಳ್ಳೆಯದಾಗಿದೆ, ಇದರಿಂದ ಬುದ್ಧಿಯಲ್ಲಿ ಒಳ್ಳೊಳ್ಳೆಯ ವಿಷಯಗಳು ನೆನಪಿಗೆ ಬರುತ್ತವೆ. ಇಂದು ಈ ವಿಷಯದ ಮೇಲೆ ತಿಳಿಸಬೇಕು ಎಂದು. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಎಷ್ಟೊಂದು ಖಜಾನೆಯನ್ನು ಕೊಟ್ಟಿದ್ದೆನು, ಸತ್ಯ-ತ್ರೇತಾಯುಗದಲ್ಲಿ ನಿಮ್ಮ ಬಳಿ ಅಪಾರ ಧನವಿತ್ತು ನಂತರ ವಾಮ ಮಾರ್ಗದಲ್ಲಿ ಹೋಗುವ ಕಾರಣ ಅದು ಕಡಿಮೆಯಾಗುತ್ತಾ ಹೋಯಿತು, ಖುಷಿಯೂ ಕಡಿಮೆಯಾಗುತ್ತಾ ಹೋಯಿತು, ಅಲ್ಲಿಂದ ಯಾವುದಾದರೊಂದು ವಿಕರ್ಮವಾಗತೊಡಗುತ್ತದೆ. ಇಳಿಯುತ್ತಾ-ಇಳಿಯುತ್ತಾ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಸತೋಪ್ರಧಾನ, ಸತೋ, ರಜೋ, ತಮೋದ ಸ್ಥಿತಿಯಾಗುತ್ತದೆ. ಸತೋದಿಂದ ರಜೋದಲ್ಲಿ ಕೂಡಲೆ ಬಂದು ಬಿಡುವುದಿಲ್ಲ. ನಿಧಾನ-ನಿಧಾನವಾಗಿ ಕೆಳಗಿಳಿಯುತ್ತೀರಿ. ತಮೋಪ್ರಧಾನದಲ್ಲಿಯೂ ನಿಧಾನ-ನಿಧಾನವಾಗಿ ಏಣಿಯನ್ನು ಕೆಳಗಿಳಿಯುತ್ತೀರಿ. ಕಲೆಗಳು ಕಡಿಮೆಯಾಗತೊಡಗುತ್ತವೆ. ದಿನ-ಪ್ರತಿದಿನ ಕಡಿಮೆಯಾಗುತ್ತಾ ಹೋಗುತ್ತದೆ. ಈಗ ಹೈಜಂಪ್ ಮಾಡಬೇಕಾಗಿದೆ. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಇದಕ್ಕಾಗಿ ಸಮಯವೂ ಬೇಕು. ಏರಿದರೆ ವೈಕುಂಠ ರಸ, ಬಿದ್ದರೆ ಪುಡಿ ಪುಡಿ.... ಎಂದು ಗಾಯನವಿದೆ. ಕಾಮದ ಪೆಟ್ಟು ಬಿದ್ದರೆ ಒಮ್ಮೆಲೆ ಪುಡಿ ಪುಡಿಯಾಗಿ ಬಿಡುತ್ತಾರೆ. ಮೂಳೆಗಳು ಪುಡಿ ಪುಡಿಯಾಗುತ್ತವೆ. ಕೆಲವರು ತಮ್ಮದೇ ಜೀವಘಾತ ಮಾಡಿಕೊಳ್ಳುತ್ತಾರೆ. ಇದು ಆತ್ಮಘಾತವಲ್ಲ, ಜೀವಘಾತವೆಂದು ಹೇಳಲಾಗುತ್ತದೆ. ಇಲ್ಲಂತೂ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ತಂದೆಯನ್ನು ನೆನಪು ಮಾಡಬೇಕಾಗಿದೆ ಏಕೆಂದರೆ ತಂದೆಯಿಂದ ರಾಜ್ಯಭಾಗ್ಯವು ಸಿಗುತ್ತದೆ. ತಮ್ಮೊಂದಿಗೆ ಕೇಳಿಕೊಳ್ಳಿ, ನಾವು ತಂದೆಯನ್ನು ನೆನಪು ಮಾಡಿ ಭವಿಷ್ಯಕ್ಕಾಗಿ ಎಷ್ಟು ಸಂಪಾದನೆ ಮಾಡಿಕೊಂಡೆವು? ಎಷ್ಟು ಮಂದಿ ಅಂಧರಿಗೆ ಊರುಗೋಲಾದೆವು? ಮನೆ-ಮನೆಯಲ್ಲಿ ಸಂದೇಶ ಕೊಡಬೇಕಾಗಿದೆ - ಈ ಹಳೆಯ ಪ್ರಪಂಚವು ಬದಲಾಗುತ್ತಿದೆ. ತಂದೆಯು ಹೊಸ ಪ್ರಪಂಚಕ್ಕಾಗಿ ರಾಜಯೋಗವನ್ನು ಕಲಿಸುತ್ತಿದ್ದಾರೆ. ಏಣಿ ಚಿತ್ರದಲ್ಲಿ ಎಲ್ಲವನ್ನೂ ತೋರಿಸಲಾಗಿದೆ. ಈ ಚಿತ್ರಗಳನ್ನೂ ಮಾಡಿಸುವುದರಲ್ಲಿ ಪರಿಶ್ರಮವಾಗುತ್ತದೆ. ಈ ರೀತಿ ಸಹಜವಾಗಿ ಮಾಡಿಸಿದರೆ ಅನ್ಯರಿಗೆ ಸಹಜವಾಗಿ ಅರ್ಥವಾಗಬಹುದೇ ಎಂದು ಇಡೀದಿನ ವಿಚಾರವು ನಡೆಯುತ್ತಿರುತ್ತದೆ. ಇಡೀ ಪ್ರಪಂಚದವರಂತೂ ಬರುವುದಿಲ್ಲ, ದೇವಿ-ದೇವತಾ ಧರ್ಮದವರೇ ಬರುತ್ತಾರೆ. ನಿಮ್ಮ ಸೇವೆಯಂತೂ ಬಹಳ ನಡೆಯುವುದಿದೆ. ನಿಮ್ಮ ಈ ತರಗತಿಯು ಎಲ್ಲಿಯವರೆಗೆ ನಡೆಯುವುದು ಎಂದು ನೀವಂತೂ ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ತಿಳಿಯುತ್ತಾರೆ ಆದ್ದರಿಂದ ಶಾಸ್ತ್ರ ಮೊದಲಾದುವುಗಳನ್ನು ತಿಳಿಸುತ್ತಲೇ ಇರುತ್ತಾರೆ. ಯಾವಾಗ ಅಂತ್ಯವಾಗುವುದೋ ಆಗ ಎಲ್ಲರ ಸದ್ಗತಿದಾತನು ಬರುವರು ಮತ್ತು ಯಾರು ನಮ್ಮ ಶಿಷ್ಯರಾಗಿದ್ದಾರೆಯೋ ಅವರದೂ ಮುಕ್ತಿಯಾಗುವುದು ಮತ್ತು ನಾವೂ ಸಹ ಹೋಗಿ ಜ್ಯೋತಿಯಲ್ಲಿ ಸಮಾವೇಶವಾಗುತ್ತೇವೆಂದು ತಿಳಿದುಕೊಳ್ಳುತ್ತಾರೆ ಆದರೆ ಈ ರೀತಿಯಂತೂ ಅಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಅಮರ ತಂದೆಯ ಮೂಲಕ ಸತ್ಯ-ಸತ್ಯವಾದ ಅಮರ ಕಥೆಯನ್ನು ಕೇಳುತ್ತಿದ್ದೇವೆ ಅಂದಮೇಲೆ ಅಮರ ತಂದೆಯು ಏನನ್ನು ಹೇಳುತ್ತಾರೆಯೋ ಅದನ್ನು ಪಾಲಿಸಬೇಕಾಗುತ್ತದೆ. ತಂದೆಯು ಕೇವಲ ಇದನ್ನೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ, ಪವಿತ್ರರಾಗಿ. ಇಲ್ಲದಿದ್ದರೆ ಶಿಕ್ಷೆಯನ್ನೂ ಅನುಭವಿಸಬೇಕಾಗುವುದು. ಕಡಿಮೆ ಪದವಿ ಸಿಗುವುದು. ಸರ್ವೀಸಿನಲ್ಲಿ ಪರಿಶ್ರಮ ಪಡಬೇಕಾಗಿದೆ. ಹೇಗೆ ದಧೀಚಿ ಋಷಿಯ ದೃಷ್ಟಾಂತವಿದೆ - ಋಷಿಯು ತನ್ನ ಮೂಳೆಗಳನ್ನೂ ಸರ್ವೀಸಿನಲ್ಲಿ ಕೊಟ್ಟು ಬಿಟ್ಟರು ಎಂದು. ತನ್ನ ಶರೀರದ ಬಗ್ಗೆಯೂ ಆಲೋಚಿಸದೆ ಇಡೀ ದಿನ ಸರ್ವೀಸಿನಲ್ಲಿರುವುದಕ್ಕೆ ಸರ್ವೀಸಿನಲ್ಲಿ ಮೂಳೆಗಳನ್ನು ಸ್ವಾಹಾ ಮಾಡುವುದೆಂದು ಹೇಳಲಾಗುತ್ತದೆ. ಒಂದು ಸ್ಥೂಲಸೇವೆ, ಇನ್ನೊಂದು ಆತ್ಮಿಕ ಸೇವೆಯಾಗಿದೆ. ಆತ್ಮಿಕ ಸೇವೆ ಮಾಡುವವರು ಆತ್ಮಿಕ ಜ್ಞಾನವನ್ನೇ ತಿಳಿಸುತ್ತಿರುತ್ತಾರೆ. ಜ್ಞಾನ ಧನದ ದಾನ ಮಾಡುತ್ತಾ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ. ಪ್ರಪಂಚದಲ್ಲಿ ಮನುಷ್ಯರು ಯಾವ ಸರ್ವೀಸ್ ಮಾಡುವರೋ ಅದೆಲ್ಲವೂ ಸ್ಥೂಲ ಸರ್ವೀಸ್ ಆಗಿದೆ. ಶಾಸ್ತ್ರಗಳನ್ನು ತಿಳಿಸುತ್ತಾರೆ, ಅದೇನೂ ಆತ್ಮಿಕ ಸೇವೆಯಲ್ಲ. ಆತ್ಮಿಕ ಸೇವೆಯನ್ನು ಕೇವಲ ತಂದೆಯೇ ಬಂದು ಕಲಿಸಿ ಕೊಡುತ್ತಾರೆ. ಆತ್ಮಿಕ ತಂದೆಯೇ ಬಂದು ಆತ್ಮಿಕ ಮಕ್ಕಳಿಗೆ (ಆತ್ಮರಿಗೆ) ಓದಿಸುತ್ತಾರೆ.

ನೀವು ಮಕ್ಕಳು ಈಗ ಸತ್ಯಯುಗೀ ಪ್ರಪಂಚದಲ್ಲಿ ಹೋಗುವುದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಅಲ್ಲಿ ನಿಮ್ಮಿಂದ ಯಾವುದೇ ವಿಕರ್ಮವಾಗುವುದಿಲ್ಲ, ಅದು ರಾಮ ರಾಜ್ಯವಾಗಿದೆ. ಅಲ್ಲಿ ಕೆಲವರೇ ಇರುತ್ತಾರೆ, ಈಗಂತೂ ರಾವಣ ರಾಜ್ಯದಲ್ಲಿ ಎಲ್ಲರೂ ದುಃಖಿಯಾಗಿದ್ದಾರಲ್ಲವೆ. ನಂಬರ್ವಾರ್ ಪುರುಷಾರ್ಥದನುಸಾರ ಪೂರ್ಣ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಈ ಏಣಿ ಚಿತ್ರದಲ್ಲಿಯೇ ಪೂರ್ಣ ಜ್ಞಾನವು ಬಂದು ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿ, ಇದರಿಂದ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ನೀವು ಇದೇರೀತಿ ತಿಳಿಸಬೇಕು - ಯಾವುದರಿಂದ ಮನುಷ್ಯರಿಗೆ ಅರ್ಥವಾಗಲಿ - ನಾವು ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೇವೆ, ಈಗ ಪುನಃ ನೆನಪಿನ ಯಾತ್ರೆಯಿಂದಲೇ ಸತೋಪ್ರಧಾನರಾಗುತ್ತೇವೆ. ಚಿತ್ರವನ್ನು ನೋಡಿದಾಗ ಬುದ್ಧಿಯು ವಿಚಾರ ಮಾಡುತ್ತದೆ, ಈ ಜ್ಞಾನವು ಮತ್ತ್ಯಾರ ಬಳಿಯೂ ಇಲ್ಲ. ಈ ಏಣಿ ಚಿತ್ರದಲ್ಲಿ ಮತ್ತೆಲ್ಲಾ ಧರ್ಮದವರ ಸಮಾಚಾರ ಎಲ್ಲಿದೆ? ಎಂದು ಕೇಳುತ್ತಾರೆ. ಅದೆಲ್ಲಾ ಸಮಾಚಾರವು ಗೋಲದ ಚಿತ್ರದಲ್ಲಿ ಬರೆಯಲ್ಪಟ್ಟಿದೆ. ಅವರು ಹೊಸ ಪ್ರಪಂಚದಲ್ಲಂತೂ ಬರುವುದಿಲ್ಲ, ಅವರಿಗೆ ಕೇವಲ ಶಾಂತಿ ಸಿಗುತ್ತದೆ. ಭಾರತವಾಸಿಗಳೇ ಸ್ವರ್ಗದಲ್ಲಿದ್ದರಲ್ಲವೆ. ತಂದೆಯೂ ಸಹ ಭಾರತದಲ್ಲಿ ಬಂದು ರಾಜಯೋಗವನ್ನು ಕಲಿಸುತ್ತಾರೆ ಆದ್ದರಿಂದ ಭಾರತದ ಪ್ರಾಚೀನ ಯೋಗವನ್ನು ಎಲ್ಲರೂ ಇಷ್ಟ ಪಡುತ್ತಾರೆ. ಈ ಚಿತ್ರಗಳಿಂದ ಅವರಿಗೆ ತಾನಾಗಿಯೇ ಅರ್ಥವಾಗುತ್ತದೆ, ಅವಶ್ಯವಾಗಿ ಹೊಸ ಪ್ರಪಂಚದಲ್ಲಿ ಕೇವಲ ಭಾರತವೇ ಇತ್ತು ಮತ್ತು ತಮ್ಮ ಧರ್ಮದ ಬಗ್ಗೆಯೂ ತಿಳಿದುಕೊಳ್ಳುತ್ತಾರೆ. ಭಲೆ ಕ್ರೈಸ್ತನು ಧರ್ಮ ಸ್ಥಾಪನೆ ಮಾಡಲು ಬಂದರು ಈ ಸಮಯದಲ್ಲಿ ಅವರೂ ತಮೋಪ್ರಧಾನರಾಗಿದ್ದಾರೆ. ಇದು ರಚಯಿತ ಮತ್ತು ರಚನೆಯ ಎಷ್ಟು ದೊಡ್ಡ ಜ್ಞಾನವಾಗಿದೆ! ನೀವು ಇದನ್ನು ಹೇಳಬಹುದು - ನಮಗೆ ಯಾರದೇ ಹಣದ ಅವಶ್ಯಕತೆಯಿಲ್ಲ. ಹಣವನ್ನು ನಾವೇನು ಮಾಡುವುದು? ನೀವೂ ಕೇಳಿರಿ, ಅನ್ಯರಿಗೂ ತಿಳಿಸಿ. ಈ ಚಿತ್ರ ಇತ್ಯಾದಿಗಳನ್ನು ಮುದ್ರಿಸಿ, ಈ ಚಿತ್ರಗಳಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ದೊಡ್ಡ ಹಾಲ್ ಮಾಡಿ, ಇಲ್ಲಿ ಈ ಜ್ಞಾನವನ್ನು ತಿಳಿಸಿ ಕೊಡುವಂತಿರಬೇಕು ಬಾಕಿ ನಾವು ಹಣವನ್ನು ತೆಗೆದುಕೊಂಡು ಏನು ಮಾಡಬೇಕು? ನಿಮ್ಮದೇ ಮನೆಯ ಕಲ್ಯಾಣವಾಗುತ್ತದೆ, ನೀವು ಕೇವಲ ಪ್ರಬಂಧ ಮಾಡಿ. ಅನೇಕರು ಬಂದು ರಚಯಿತ ಮತ್ತು ರಚನೆಯ ಜ್ಞಾನವು ಬಹಳ ಚೆನ್ನಾಗಿದೆ, ಇದನ್ನು ಮನುಷ್ಯರು ತಿಳಿದುಕೊಳ್ಳಲೇಬೇಕೆಂದು ಹೇಳುತ್ತಾರೆ. ವಿದೇಶದವರು ಈ ಜ್ಞಾನವನ್ನು ಕೇಳಿ ಬಹಳ ಇಷ್ಟ ಪಡುತ್ತಾರೆ. ಬಹಳ ಖುಷಿಯಾಗುತ್ತಾರೆ. ನಾವೂ ಸಹ ತಂದೆಯ ಜೊತೆ ಯೋಗವನ್ನಿಟ್ಟರೆ ವಿಕರ್ಮ ವಿನಾಶವಾಗುವುದೆಂದು ತಿಳಿಯುತ್ತಾರೆ ಅಂದಮೇಲೆ ಎಲ್ಲರಿಗೂ ತಂದೆಯ ಪರಿಚಯವನ್ನು ಕೊಡಬೇಕಾಗುತ್ತದೆ ಆಗ ಈ ಜ್ಞಾನವನ್ನು ಪರಮಾತ್ಮನ ಹೊರತು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲವೆಂಬುದನ್ನು ತಿಳಿದುಕೊಳ್ಳುತ್ತಾರೆ. ಖುದಾನು ಸ್ವರ್ಗ (ಬಹಿಶ್ತ್) ಸ್ಥಾಪನೆ ಮಾಡಿದರು ಎಂದು ಹೇಳುತ್ತಾರೆ ಆದರೆ ಅವರು ಹೇಗೆ ಬರುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ನಿಮ್ಮ ಮಾತುಗಳನ್ನು ಕೇಳಿ ಖುಷಿಯಾಗುತ್ತಾರೆ ಮತ್ತು ಪುರುಷಾರ್ಥ ಮಾಡಿ ಯೋಗವನ್ನು ಕಲಿಯುತ್ತಾರೆ. ತಮೋಪ್ರಧಾನರಿಂದ ಸತೋಪ್ರಧಾನರಾಗಲು ಪುರುಷಾರ್ಥ ಮಾಡುತ್ತಾರೆ. ಸರ್ವೀಸಿಗಾಗಿ ಬಹಳ ವಿಚಾರಗಳನ್ನು ಮಾಡಬೇಕು. ಭಾರತದಲ್ಲಿ ಕಲೆಯನ್ನು ತೋರಿಸಿದಾಗಲೇ ಮತ್ತೆ ತಂದೆಯು ವಿದೇಶಕ್ಕೂ ಕಳುಹಿಸುವರು. ಈ ಮೆಷಿನ್ ಅಲ್ಲಿಯವರೆಗೂ ಹೋಗುವುದು. ಇದಕ್ಕೆ ಇನ್ನೂ ಸಮಯವಿದೆಯಲ್ಲವೆ. ಹೊಸ ಪ್ರಪಂಚವಾಗುವುದರಲ್ಲಿ ಏನೂ ತಡವಾಗುವುದಿಲ್ಲ. ಎಲ್ಲಿಯಾದರೂ ಭೂಕಂಪ ಇತ್ಯಾದಿಗಳಾದರೆ 2-3 ವರ್ಷಗಳಲ್ಲಿ ಹೊಸ ಮನೆಗಳೆಲ್ಲವನ್ನೂ ಕಟ್ಟಿ ಬಿಡುತ್ತಾರೆ. ಕೆಲಸಗಾರರು ಅನೇಕರಿದ್ದು ಸಾಮಾನುಗಳೆಲ್ಲವೂ ತಯಾರಿದ್ದರೆ ಆಗುವುದರಲ್ಲಿ ತಡವೇನೂ ಆಗುವುದಿಲ್ಲ. ವಿದೇಶದಲ್ಲಿ ಮನೆಗಳು ಹೇಗಾಗುತ್ತವೆ - ಮಿನಿಟ್ ಮೋಟಾರ್ ಅಂದಮೇಲೆ ಸ್ವರ್ಗದಲ್ಲಿ ಇನ್ನೆಷ್ಟು ಶೀಘ್ರವಾಗಿ ತಯಾರಾಗಬಹುದು! ಚಿನ್ನ, ಬೆಳ್ಳಿ ಇತ್ಯಾದಿಗಳೆಲ್ಲವೂ ನಿಮಗೆ ಸಿಕ್ಕಿ ಬಿಡುತ್ತವೆ. ಗಣಿಗಳಿಂದ ನೀವು ಚಿನ್ನ, ವಜ್ರ, ಬೆಳ್ಳಿಗಳನ್ನು ತೆಗೆದುಕೊಂಡು ಬರುತ್ತೀರಿ. ಆ ಕಲೆಯನ್ನಂತೂ ಎಲ್ಲರೂ ಕಲಿಯುತ್ತಿದ್ದಾರೆ. ವಿಜ್ಞಾನದ ಅಭಿವೃದ್ಧಿ ಎಷ್ಟೊಂದು ಆಗುತ್ತಿದೆ. ಈ ವಿಜ್ಞಾನವೇ ಮತ್ತೆ ಸತ್ಯಯುಗದಲ್ಲಿ ಕೆಲಸಕ್ಕೆ ಬರುವುದು. ಇಲ್ಲಿ ಕಲಿಯುವವರು ಮತ್ತೆ ಸತ್ಯಯುಗದಲ್ಲಿ ಬಂದು ಇನ್ನೊಂದು ಜನ್ಮ ಪಡೆದುಕೊಂಡು ಈ ಕಲೆಯನ್ನು ಅಲ್ಲಿ ಉಪಯೋಗಿಸುತ್ತಾರೆ. ಆ ಸಮಯದಲ್ಲಂತೂ ಇಡೀ ಪ್ರಪಂಚವೇ ಹೊಸದಾಗಿ ಬಿಡುತ್ತದೆ. ರಾವಣ ರಾಜ್ಯವು ಸಮಾಪ್ತಿಯಾಗುತ್ತದೆ. ಪಂಚ ತತ್ವಗಳೂ ಸಹ ನಿಯಮದನುಸಾರ ಸೇವೆಯಲ್ಲಿರುತ್ತವೆ, ಸ್ವರ್ಗವಾಗಿ ಬಿಡುತ್ತದೆ. ಅಲ್ಲಿ ಯಾವುದೇ ಇಂತಹ ಉಪದ್ರವಗಳಾಗುವುದಿಲ್ಲ, ರಾವಣ ರಾಜ್ಯವೇ ಇರುವುದಿಲ್ಲ. ಎಲ್ಲರೂ ಸತೋಪ್ರಧಾನರಾಗಿರುತ್ತಾರೆ.

ಎಲ್ಲದಕ್ಕಿಂತ ಒಳ್ಳೆಯ ಮಾತೇನೆಂದರೆ - ನೀವು ಮಕ್ಕಳಿಗೆ ತಂದೆಯ ಜೊತೆ ಬಹಳ ಪ್ರೀತಿಯಿರಬೇಕು. ತಂದೆಯು ಖಜಾನೆಯನ್ನು ಕೊಡುತ್ತಾರೆ, ಅದನ್ನು ಧಾರಣೆ ಮಾಡಿ ಮತ್ತೆ ಅನ್ಯರಿಗೆ ದಾನ ಮಾಡಬೇಕಾಗಿದೆ. ಎಷ್ಟು ದಾನ ಮಾಡುವಿರೋ ಅಷ್ಟು ಸೇರುತ್ತಾ ಹೋಗುವವು. ಸೇವೆಯನ್ನೇ ಮಾಡಲಿಲ್ಲವೆಂದರೆ ಧಾರಣೆ ಹೇಗಾಗುತ್ತದೆ? ಸರ್ವೀಸಿನಲ್ಲಿ ಬುದ್ಧಿ ಉಪಯೋಗಿಸಬೇಕು. ಬಹಳಷ್ಟು ಸರ್ವೀಸ್ ನಡೆಯುವುದು. ದಿನ-ಪ್ರತಿದಿನ ಉನ್ನತಿಯನ್ನು ಪಡೆಯಬೇಕಾಗಿದೆ. ತನ್ನ ಉನ್ನತಿಯನ್ನೂ ಮಾಡಿಕೊಳ್ಳಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸದಾ ಆತ್ಮಿಕ ಸೇವೆಯಲ್ಲಿ ತತ್ಪರರಾಗಿರಬೇಕಾಗಿದೆ. ಜ್ಞಾನ ಧನದ ದಾನ ಮಾಡಿ ಖುಷಿಯಲ್ಲಿ ನರ್ತಿಸಬೇಕಾಗಿದೆ. ಸ್ವಯಂ ಧಾರಣೆ ಮಾಡಿ ಅನ್ಯರಿಗೂ ಧಾರಣೆ ಮಾಡಿಸಬೇಕಾಗಿದೆ.

2. ತಂದೆಯು ಯಾವ ಜ್ಞಾನದ ಖಜಾನೆಯನ್ನು ಕೊಡುತ್ತಾರೆಯೋ ಅದರಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ. ನೋಟ್ಸ್ ಬರೆಯಬೇಕಾಗಿದೆ. ಮತ್ತೆ ಆಯಾ ವಿಷಯದ ಬಗ್ಗೆ ತಿಳಿಸಬೇಕಾಗಿದೆ. ಜ್ಞಾನ ಧನದ ದಾನ ಮಾಡುವ ಉತ್ಸಾಹದಲ್ಲಿರಬೇಕು.

ವರದಾನ:
ಸತ್ಯತೆಯ ಮಹಾನತೆಯ ಮೂಲಕ ಸದಾ ಖುಷಿಯ ಉಯ್ಯಾಲೆಯಲ್ಲಿ ತೂಗುವಂತಹ ಅಧಿಕಾರಿ ಸ್ವರೂಪ ಭವ.

ಸತ್ಯತೆಯ ಅಧಿಕಾರಿ ಸ್ವರೂಪ ಮಕ್ಕಳ ಮಹಿಮೆಯಿದೆ - ಸತ್ಯವಾಗಿರುವವರು ನರ್ತಿಸುತ್ತಿರುತ್ತಾರೆ. ಸತ್ಯದ ದೋಣಿಯು ಅಲುಗಾಡುವುದು ಆದರೆ ಮುಳುಗಲು ಸಾಧ್ಯವಿಲ್ಲ. ತಮ್ಮನ್ನು ಯಾರೆಷ್ಟಾದರೂ ಅಲುಗಾಡಿಸಲು (ವಿಚಲಿತ) ಪ್ರಯತ್ನಿಸಲಿ ಆದರೆ ತಾವು ಸತ್ಯತೆಯ ಮಹಾನತೆಯಿಂದ ಅತಿ ಹೆಚ್ಚು ಖುಷಿಯ ಉಯ್ಯಾಲೆಯಲ್ಲಿ ತೂಗುತ್ತಿರಿ. ಅವರು ತಮ್ಮನ್ನು ಅಲುಗಾಡಿಸುವುದಿಲ್ಲ ಆದರೆ ಉಯ್ಯಾಲೆಯನ್ನು ಅಲುಗಾಡಿಸುತ್ತಾರೆ.ಇದು ಅಲುಗಾಡುವುದಲ್ಲ ಆದರೆ ತೂಗುವುದಾಗಿದೆ ಆದ್ದರಿಂದ ತಾವು ಅವರಿಗೆ ಧನ್ಯವಾದಗಳನ್ನು ಕೊಡಿ - ತಾವು ತೂಗಿರಿ ಮತ್ತು ನಾವು ತಂದೆಯ ಜೊತೆ ತೂಗುತ್ತೇವೆ.

ಸ್ಲೋಗನ್:
ಸರ್ವ ಶಕ್ತಿಗಳ ಲೈಟ್ (ಜ್ಞಾನ) ಸದಾ ಜೊತೆಯಿರಲಿ, ಇದರಿಂದ ಮಾಯೆಯು ಸಮೀಪಕ್ಕೂ ಬರಲು ಸಾಧ್ಯವಿಲ್ಲ.

ಅವ್ಯಕ್ತ ಸೂಚನೆ:- ಏಕತೆ ಮತ್ತು ವಿಶ್ವಾಸದ ಗುಣ ಲಕ್ಷಣಗಳ ಮೂಲಕ ಸಫಲತಾ ಸಂಪನ್ನರಾಗಿರಿ.

ಏಕತೆ, ಸ್ವಚ್ಛತೆ, ಸೂಕ್ಷತೆ, ಮಧುರತೆ ಮತ್ತು ಮನಸ್ಸು, ವಾಣಿ, ಕರ್ಮದಲ್ಲಿ ಮಹಾನತೆ – ಈ 5 ಮಾತುಗಳು ಒಬ್ಬೊಬ್ಬರ ಪ್ರತಿ ಹಜ್ಜೆಯಲ್ಲಿ ಕಾಣಿಸುತ್ತಾ ಬರಲಿ ಆಗ ತಂದೆಯ ಪ್ರತ್ಯಕ್ಷತೆ ಸಹಜವಾಗಿ ಆಗುವುದು. ಇಲ್ಲಿಯವರೆಗೆ ಸಂಸ್ಕಾರಗಳಲ್ಲಿ ಭಿನ್ನತೆ ಕಾಣಿಸುತ್ತದೆ, ಅದನ್ನು ಏಕತೆಯಲ್ಲಿ ತರಬೇಕು. ಏಕತೆಗಾಗಿ ಒಬ್ಬರಿನ್ನೊಬ್ಬರ ವಿಚಾರಗಳಿಗೆ ಗೌರವ ಕೊಡಿ, ಹಾಂ ಜೀ, ಹಾಂ ಜೀ ಎಂದು ತಮ್ಮ ವಿಚಾರ ಅವಶ್ಯವಾಗಿ ಕೊಡೀ, ನಂತರ ಏಕತೆಯ ಬಂಧನದಲ್ಲಿ ಬಂಧಿತರಾಗಿ, ಇದೇ ಏಕತೆ ಸಫಲತೆಯ ಸಾಧನವಾಗಿದೆ.