07.05.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಬ್ರಹ್ಮ ಮುಖ ವಂಶಾವಳಿ ಬ್ರಾಹ್ಮಣರಾಗಿದ್ದೀರಿ, ನಿಮಗೇ ತಂದೆಯ ಮೂಲಕ ಜ್ಞಾನದ ಮೂರನೇ ನೇತ್ರವು
ಸಿಕ್ಕಿದೆ, ನೀವೀಗ ಈಶ್ವರನ ಮಡಿಲಿನಲ್ಲಿದ್ದೀರಿ”
ಪ್ರಶ್ನೆ:
ಅದ್ವೈತ ರಾಜ್ಯ,
ಎಲ್ಲಿ ಮತ್ತ್ಯಾವುದೇ ಧರ್ಮವೇ ಇರುವುದಿಲ್ಲ, ಆ ರಾಜ್ಯದ ಸ್ಥಾಪನೆಗೆ ಆಧಾರವೇನಾಗಿದೆ?
ಉತ್ತರ:
ಯೋಗ ಬಲ. ಬಾಹು
ಬಲದಿಂದ ಎಂದಿಗೂ ಅದ್ವೈತ ರಾಜ್ಯದ ಸ್ಥಾಪನೆಯಾಗಲು ಸಾಧ್ಯವಿಲ್ಲ, ಹಾಗೆ ನೋಡಿದರೆ ಕ್ರಿಶ್ಚಿಯನ್ನರ
ಬಳಿ ಇಷ್ಟೊಂದು ಶಕ್ತಿಯಿದೆ, ಒಂದುವೇಳೆ ಅವರು ಪರಸ್ಪರ ಒಂದಾದರೆ ಇಡೀ ವಿಶ್ವದ ಮೇಲೆ ರಾಜ್ಯ
ಮಾಡಬಲ್ಲರು ಆದರೆ ಇದು ಕಾಯಿದೆಯಿಲ್ಲ. ವಿಶ್ವದ ಮೇಲೆ ಒಂದು ರಾಜ್ಯದ ಸ್ಥಾಪನೆ ಮಾಡುವುದು ತಂದೆಯ
ಕರ್ತವ್ಯವೇ ಆಗಿದೆ.
ಗೀತೆ:
ಆಕಾಶ
ಸಿಂಹಾಸನವನ್ನು ಬಿಟ್ಟು ಬಾ............
ಓಂ ಶಾಂತಿ.
ಮಕ್ಕಳಿಗೆ ಓಂಶಾಂತಿಯ ಅರ್ಥವನ್ನು ಬಹಳ ಬಾರಿ ತಿಳಿಸಿದ್ದೇವೆ. ಓಂ ಎಂದರೆ ನಾನು ಯಾರು? ನಾನು ಆತ್ಮ.
ಈ ಶರೀರವು ನನ್ನ ಕರ್ಮೇಂದ್ರಿಯವಾಗಿದೆ, ನಾನಾತ್ಮ ಪರಮಧಾಮದ ನಿವಾಸಿಯಾಗಿದ್ದೇನೆ. ಹೇ ದೂರ
ದೇಶದಲ್ಲಿರುವ ತಂದೆಯೇ ಬನ್ನಿ ಎಂದು ಭಾರತವಾಸಿಗಳು ಕರೆಯುತ್ತಾರೆ ಏಕೆಂದರೆ ಭಾರತದಲ್ಲಿ ಈಗ ಬಹಳ
ಧರ್ಮ ಗ್ಲಾನಿ, ದುಃಖವಾಗಿ ಬಿಟ್ಟಿದೆ. ಈಗ ಪುನಃ ಬಂದು ಗೀತೋಪದೇಶವನ್ನು ತಿಳಿಸಿ, ಗೀತೆಗಾಗಿಯೇ
ಶಿವ ಬಾಬಾ ಬನ್ನಿ ಎಂದು ಹೇಳುತ್ತಾರೆ ಏಕೆಂದರೆ ಅವರು ಎಲ್ಲರ ತಂದೆಯಾಗಿದ್ದಾರೆ. ತಂದೆಯು
ತಿಳಿಸುತ್ತಾರೆ - ಭಾರತವಾಸಿಗಳ ಮೇಲೆ ಮಾಯಾರೂಪಿ ರಾವಣನ ನೆರಳು ಬಿದ್ದಿದೆ ಆದ್ದರಿಂದ ಎಲ್ಲರೂ
ದುಃಖಿ-ಪತಿತರಾಗಿದ್ದಾರೆ. ರೂಪವನ್ನು ಬದಲಾಯಿಸಿಕೊಂಡು ಬನ್ನಿ ಅರ್ಥಾತ್ ಮನುಷ್ಯನ ರೂಪದಲ್ಲಿ ಬನ್ನಿ
ಎಂದು ಕರೆಯುತ್ತಾರೆ ಅಂದಾಗ ನಾನು ಮನುಷ್ಯನ ರೂಪದಲ್ಲಿ ಬರುತ್ತೇನೆ. ನನ್ನ ಬರುವಿಕೆಯು
ದಿವ್ಯ-ಅಲೌಕಿಕವಾಗಿದೆ. ನಾನು ಗರ್ಭದಲ್ಲಿ ಬರುವುದಿಲ್ಲ, ಸಾಧಾರಣ ವೃದ್ಧನ ತನುವಿನಲ್ಲಿ ಬರುತ್ತೇನೆ.
ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ನಾನು ಕಲ್ಪ-ಕಲ್ಪವೂ ನನ್ನ ನಿರಾಕಾರಿ ರೂಪವನ್ನು ಬದಲಾಯಿಸಿಕೊಂಡು
ಬರುತ್ತೇನೆ. ಜ್ಞಾನ ಸಾಗರನು ಪರಮಪಿತ ಪರಮಾತ್ಮನೇ ಆಗಿದ್ದಾರೆ, ಕೃಷ್ಣನಿಗೆಂದೂ ಹೇಳುವುದಿಲ್ಲ.
ತಂದೆಯು ತಿಳಿಸುತ್ತಾರೆ - ನಾನು ಈ ಸಾಧಾರಣ ತನುವಿನಲ್ಲಿ ಬಂದು ನಿಮಗೆ ಪುನಃ ಸಹಜ ರಾಜಯೋಗವನ್ನು
ಕಲಿಸುತ್ತಿದ್ದೇನೆ. ಯಾವಾಗ ಪ್ರಪಂಚವು ಪತಿತವಾಗಿ ಬಿಡುವುದೋ ಆಗ ನಾನು ಬರಬೇಕಾಗುತ್ತದೆ.
ಕಲಿಯುಗದಿಂದ ಸತ್ಯಯುಗವನ್ನಾಗಿ ಮಾಡಲು ನಾನು ಬರುತ್ತೇನೆ. ಬ್ರಹ್ಮಾ, ವಿಷ್ಣು, ಶಂಕರರ ಚಿತ್ರವೂ
ಇದೆ. ಬ್ರಹ್ಮನ ಮೂಲಕ ಸ್ಥಾಪನೆ, ಶಂಕರನ ಮೂಲಕ ವಿನಾಶ, ಮತ್ತೆ ವಿಷ್ಣುವಿನ ಮೂಲಕ ಪಾಲನೆ. ಈ
ಲಕ್ಷ್ಮೀ-ನಾರಾಯಣರು ವಿಷ್ಣುವಿನ ಎರಡು ರೂಪಗಳಾಗಿದ್ದಾರೆ, ಇದನ್ನು ನೀವು ಮಕ್ಕಳು
ತಿಳಿದುಕೊಂಡಿದ್ದೀರಿ. ತಂದೆಯು ಪುನಃ ರೂಪವನ್ನು ಬದಲಾಯಿಸಿಕೊಂಡು ಬಂದಿದ್ದಾರೆ, ಅವರು ನಮ್ಮ ಪರಮ
ತಂದೆ, ಪರಮ ಶಿಕ್ಷಕ, ಪರಮ ಸದ್ಗುರುವೂ ಆಗಿದ್ದಾರೆ ಮತ್ತು ಗುರುಗಳಿಗೆ ಪರಮ ಎಂಬುದನ್ನು
ಹೇಳಲಾಗುವುದಿಲ್ಲ. ಈ ತಂದೆಯಂತೂ ತಂದೆ, ಶಿಕ್ಷಕ, ಗುರು ಮೂವರೂ ಆಗಿದ್ದಾರೆ. ಲೌಕಿಕ ತಂದೆಯು
ಮಕ್ಕಳ ಪಾಲನೆ ಮಾಡಿ ಅವರನ್ನು ಶಾಲೆಗೆ ಕಳುಹಿಸುತ್ತಾರೆ. ಆ ತಂದೆಯೇ ಶಿಕ್ಷಕನಾಗಿ ಓದಿಸುವವರು ಬಹಳ
ವಿರಳ. ಎಲ್ಲಾ ಆತ್ಮರು ನನ್ನನ್ನು ಕರೆಯುತ್ತಾರೆ, ಗಾಡ್ಫಾದರ್ ಎಂದು ಹೇಳುತ್ತಾರೆ ಅಂದಮೇಲೆ ಅವರು
ಆತ್ಮನ ತಂದೆಯಾದರು. ಈ ಗೀತೆಯು ಭಕ್ತಿ ಮಾರ್ಗದ್ದಾಗಿದೆ, ಸತ್ಯಯುಗದಲ್ಲಿ ಕೂಗಲು ಮಾಯೆಯೇ
ಇರುವುದಿಲ್ಲ, ಅಲ್ಲಿ ಸುಖವೇ ಸುಖವಿರುತ್ತದೆ. ನೀವು ತಿಳಿದುಕೊಂಡಿದ್ದೀರಿ - ಇದು 5000 ವರ್ಷಗಳ
ಚಕ್ರವಾಗಿದೆ, ಅರ್ಧ ಕಲ್ಪ ಸತ್ಯ-ತ್ರೇತಾಯುಗವು ದಿನ, ಅರ್ಧ ಕಲ್ಪ ದ್ವಾಪರ-ಕಲಿಯುಗವು
ರಾತ್ರಿಯಾಗಿದೆ. ನೀವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ಬ್ರಹ್ಮಾ ಅಥವಾ ನೀವು
ಬ್ರಾಹ್ಮಣರದೇ ದಿನ-ರಾತ್ರಿಯೆಂದು ಗಾಯನವಿದೆ. ದಿನ ಮತ್ತು ರಾತ್ರಿಯ ಜ್ಞಾನವು ನೀವು ಮಕ್ಕಳಿಗೇ ಇದೆ.
ಲಕ್ಷ್ಮೀ-ನಾರಾಯಣರಿಗೆ ಈ ಜ್ಞಾನವಿರುವುದಿಲ್ಲ. ನೀವೀಗ ಸಂಗಮದಲ್ಲಿದ್ದೀರಿ, ನಿಮಗೆ ತಿಳಿದಿದೆ -
ಈಗ ಭಕ್ತಿ ಮಾರ್ಗವು ಪೂರ್ಣವಾಗಿ ದಿನವು ಉದಯವಾಗುತ್ತದೆ. ಈ ಜ್ಞಾನವು ನಿಮಗೆ ತಂದೆಯ ಮೂಲಕ
ಸಿಕ್ಕಿದೆ. ಕಲಿಯುಗದಲ್ಲಾಗಲಿ ಅಥವಾ ಸತ್ಯಯುಗದಲ್ಲಾಗಲಿ ಈ ಜ್ಞಾನವು ಯಾರಿಗೂ ಇರುವುದಿಲ್ಲ
ಆದ್ದರಿಂದ ಬ್ರಹ್ಮನ ದಿನ-ಬ್ರಹ್ಮನ ರಾತ್ರಿಯೆಂದು ಗಾಯನವಿದೆ. ನೀವೀಗ ಸೂರ್ಯವಂಶಿ, ಚಂದ್ರವಂಶಿ
ರಾಜ್ಯವನ್ನು ಪಡೆಯುವ ಪುರುಷಾರ್ಥ ಮಾಡುತ್ತಿದ್ದೀರಿ. ಮತ್ತೆ ಅರ್ಧ ಕಲ್ಪದ ನಂತರ ನೀವು ರಾಜ್ಯವನ್ನು
ಕಲಿತುಕೊಳ್ಳುತ್ತೀರಿ. ಈ ಜ್ಞಾನವು ನೀವು ಬ್ರಾಹ್ಮಣರ ವಿನಃ ಮತ್ತ್ಯಾರಿಗೂ ಇಲ್ಲ. ನೀವು
ದೇವತೆಗಳಾಗಿ ಬಿಟ್ಟರೆ ನಂತರ ಈ ಜ್ಞಾನವೇ ಇರುವುದಿಲ್ಲ. ಈಗ ರಾತ್ರಿಯಾಗಿದೆ, ಶಿವ ರಾತ್ರಿಯ ಗಾಯನವೂ
ಇದೆ. ಕೃಷ್ಣನ ರಾತ್ರಿಯೆಂದು ಹೇಳುತ್ತಾರೆ ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಶಿವ ಜಯಂತಿ
ಅರ್ಥಾತ್ ಶಿವನು ಪುನಃ ಅವತರಣೆ ಆಗುತ್ತಾರೆ. ಇಂತಹ ತಂದೆಯ ದಿನವಂತೂ ಕೊನೆಪಕ್ಷ ಒಂದು ತಿಂಗಳಾದರೂ
ಆಚರಿಸಬೇಕು. ಯಾರು ಇಡೀ ಸೃಷ್ಟಿಯನ್ನು ಪತಿತನಿಂದ ಪಾವನವನ್ನಾಗಿ ಮಾಡುವರೋ ಅವರಿಗೆ ರಜಾ ದಿನವನ್ನೂ
ಘೋಷಿಸುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಎಲ್ಲರ ಮುಕ್ತಿದಾತನಾಗಿದ್ದೇನೆ,
ಮಾರ್ಗದರ್ಶಕನಾಗಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ.
ನೀವೀಗ ರಾಜಯೋಗವನ್ನು
ಕಲಿಯುವ ಪುರುಷಾರ್ಥ ಮಾಡುತ್ತೀರಿ. ತಂದೆಯು ನಿಮಗೆ ಜ್ಞಾನದ ಮೂರನೇ ನೇತ್ರವನ್ನು ಕೊಡುತ್ತಿದ್ದಾರೆ.
ಆತ್ಮದ ರೂಪವೇನೆಂಬುದೂ ಸಹ ಯಾರಿಗೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ - ನೀವಾತ್ಮರು
ಅಂಗುಷ್ಟಾಕಾರವಾಗಿಯೂ ಇಲ್ಲ, ಅಖಂಡ ಜ್ಯೋತಿಯಾಗಿಯೂ ಇಲ್ಲ. ನೀವು ಬಿಂದುವಾಗಿದ್ದೀರಿ, ನಾನಾತ್ಮನೂ
ಬಿಂದುವಾಗಿದ್ದೇನೆ ಆದರೆ ನಾನು ಪುನರ್ಜನ್ಮದಲ್ಲಿ ಬರುವುದಿಲ್ಲ, ನನ್ನ ಮಹಿಮೆಯೇ ಬೇರೆಯಾಗಿದೆ.
ನಾನು ಪರಮಾತ್ಮನಾಗಿರುವ ಕಾರಣ ಜನನ-ಮರಣದ ಚಕ್ರದಲ್ಲಿ ಬರುವುದಿಲ್ಲ, ನೀವಾತ್ಮರು ಶರೀರದಲ್ಲಿ
ಬರುತ್ತೀರಿ ಆದ್ದರಿಂದ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ನಾನು ಈ ಶರೀರದಲ್ಲಿ ಪ್ರವೇಶ
ಮಾಡುತ್ತೇನೆ, ನಾನು ಈ ಶರೀರವನ್ನು ಬಾಡಿಗೆಯಾಗಿ ತೆಗೆದುಕೊಂಡಿದ್ದೇನೆ. ನೀವೂ ಸಹ ಆತ್ಮವಾಗಿದ್ದೀರಿ
ಆದರೆ ನೀವು ತಮ್ಮನ್ನು ನಾವಾತ್ಮರಾಗಿದ್ದೇವೆ ಎಂಬುದನ್ನು ಅನುಭೂತಿ ಮಾಡುವುದಿಲ್ಲ. ಆತ್ಮವೇ
ತಂದೆಯನ್ನು ನೆನಪು ಮಾಡುತ್ತದೆ. ದುಃಖದಲ್ಲಿ ಯಾವಾಗಲೂ ಹೇ ಭಗವಂತ, ಹೇ ದಯಾಹೃದಯೀ ತಂದೆಯೇ, ದಯೆ
ತೋರಿಸಿ ಎಂದು ನೆನಪು ಮಾಡುತ್ತಾರೆ. ನೀವು ದಯೆಯನ್ನು ಬೇಡುತ್ತೀರಿ ಏಕೆಂದರೆ ಆ ತಂದೆಯು ಜ್ಞಾನ
ಸಾಗರ, ಆನಂದ ಸಾಗರ, ಪವಿತ್ರತೆಯ ಸಾಗರನಾಗಿದ್ದಾರೆ. ಜ್ಞಾನದಲ್ಲಿಯೂ ಪೂರ್ಣನಾಗಿದ್ದಾರೆ, ಜ್ಞಾನ
ಸಾಗರನಾಗಿದ್ದಾರೆ. ಮನುಷ್ಯರಿಗೆ ಈ ಮಹಿಮೆ ಕೊಡಲು ಸಾಧ್ಯವಿಲ್ಲ. ಇಡೀ ಪ್ರಪಂಚದ ಮೇಲೆ ದಯೆ
ತೋರಿಸುವುದು, ಇದು ತಂದೆಯದೇ ಕರ್ತವ್ಯವಾಗಿದೆ. ಅವರು ರಚಯಿತನಾಗಿದ್ದಾರೆ, ಉಳಿದೆಲ್ಲವೂ
ರಚನೆಯಾಗಿದೆ. ರಚಯಿತನು ರಚನೆಯನ್ನು ರಚಿಸುತ್ತಾರೆ. ಮೊದಲು ಸ್ತ್ರೀಯನ್ನು ದತ್ತು
ಮಾಡಿಕೊಳ್ಳುತ್ತಾರೆ ಮತ್ತೆ ಅವರ ಮೂಲಕ ರಚನೆಯನ್ನು ರಚಿಸಿ ಅವರ ಪಾಲನೆಯನ್ನೂ ಮಾಡುತ್ತಾರೆ, ವಿನಾಶ
ಮಾಡುವುದಿಲ್ಲ. ಈ ಬೇಹದ್ದಿನ ತಂದೆಯು ಬಂದು ಸ್ಥಾಪನೆ, ಪಾಲನೆ, ವಿನಾಶವನ್ನು ಮಾಡಿಸುತ್ತಾರೆ. ಆದಿ
ಸನಾತನ ದೇವಿ-ದೇವತಾ ಧರ್ಮದ ಪಾಲನೆ ಮಾಡಿಸುತ್ತಾರೆ. ಸತ್ಯಯುಗದ ಆದಿಯಲ್ಲಿ ಬಹು ಬೇಗನೆ ರಾಜಧಾನಿಯು
ಸ್ಥಾಪನೆಯಾಗಿ ಬಿಡುತ್ತದೆ. ಅನ್ಯ ಧರ್ಮದವರು ಕೇವಲ ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ
ಯಾವಾಗ ಲಕ್ಷಾಂತರ ಅಂದಾಜಿನಲ್ಲಿ ಅವರ ಸಂಖ್ಯೆಯು ವೃದ್ಧಿಯಾಗುವುದೋ ಆಗ ರಾಜ್ಯವು ನಡೆಯುತ್ತದೆ.
ನೀವೀಗ ಯೋಗ ಬಲದಿಂದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ನೀವು ಇಡೀ ವಿಶ್ವದ
ಮಾಲೀಕರಾಗುತ್ತೀರಿ. ಬಾಹುಬಲದಿಂದ ಎಂದೂ ಯಾರೂ ವಿಶ್ವದ ಮೇಲೆ ರಾಜ್ಯ ಮಾಡಲು ಸಾಧ್ಯವಿಲ್ಲ. ತಂದೆಯು
ತಿಳಿಸಿದ್ದಾರೆ, ಕ್ರಿಶ್ಚಿಯನ್ನರಲ್ಲಿ ಇಷ್ಟೊಂದು ಶಕ್ತಿಯಿದೆ, ಅವರು ಪರಸ್ಪರ ಒಂದಾದರೆ ಇಡೀ
ವಿಶ್ವದ ಮೇಲೆ ರಾಜ್ಯ ಮಾಡುವರು ಆದರೆ ಬಾಹುಬಲದಿಂದ ವಿಶ್ವದ ಮೇಲೆ ರಾಜ್ಯ ಪಡೆಯುವುದು
ಕಾಯಿದೆಯಿಲ್ಲ. ಡ್ರಾಮಾದಲ್ಲಿ ಬಾಹು ಬಲದವರು ವಿಶ್ವದ ಮಾಲೀಕರಾಗುವ ನಿಯಮವೇ ಇಲ್ಲ.
ತಂದೆಯು ತಿಳಿಸುತ್ತಾರೆ
- ವಿಶ್ವದ ರಾಜ್ಯ ಭಾಗ್ಯವು ಯೋಗ ಬಲದಿಂದ ನನ್ನ ಮೂಲಕವೇ ಸಿಗುತ್ತದೆ. ಅಲ್ಲಿ ಯಾವುದೇ
ವಿಭಾಗಗಳಿರುವುದಿಲ್ಲ. ಧರಣಿ, ಆಕಾಶ ಎಲ್ಲವೂ ನಿಮ್ಮದಾಗಿರುತ್ತದೆ, ನಿಮ್ಮನ್ನು ಯಾರೂ
ಸ್ಪರ್ಶಿಸುವುದಕ್ಕೂ ಸಾಧ್ಯವಿಲ್ಲ. ಅದಕ್ಕೆ ಅದ್ವೈತ ರಾಜ್ಯವೆಂದು ಹೇಳಲಾಗುತ್ತದೆ. ಇಲ್ಲಿ ಅನೇಕ
ರಾಜ್ಯಗಳಿವೆ, 5000 ವರ್ಷಗಳ ನಂತರ ನೀವು ಮಕ್ಕಳಿಗೆ ಪುನಃ ಈ ರಾಜಯೋಗವನ್ನು ಕಲಿಸುತ್ತೇನೆ,
ಕೃಷ್ಣನ ಆತ್ಮವೂ ಈಗ ಕಲಿಯುತ್ತಿದೆ. ಕೃಷ್ಣನು ಮೊದಲ ನಂಬರಿನ ರಾಜಕುಮಾರನಾಗಿದ್ದನು. ಅವರೇ ಈ
ಸಮಯದಲ್ಲಿ 84 ಜನ್ಮಗಳ ಅಂತಿಮದಲ್ಲಿ ಬಂದು ಬ್ರಹ್ಮನಾಗಿದ್ದಾರೆ. ಈ ಸೃಷ್ಟಿಚಕ್ರವು ಹೇಗೆ
ಸುತ್ತುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸಿದ್ದಾರೆ. ತಂದೆಯು ಪುನಃ ಸ್ವರ್ಗದ ಸ್ಥಾಪನೆ
ಮಾಡುತ್ತಿದ್ದಾರೆ. ಅವಶ್ಯವಾಗಿಯೂ ಅನೇಕ ಧರ್ಮಗಳ ವಿನಾಶವಾಗುವುದು, ಒಂದು ಧರ್ಮದ ಸ್ಥಾಪನೆಯಾಗುವುದು.
ಭಾರತವೇ 100% ಸಾಹುಕಾರನಾಗಿತ್ತು, ಧರ್ಮ ಶ್ರೇಷ್ಠವಾಗಿತ್ತು, ದೇವತೆಗಳ ಕರ್ಮವೂ ಶ್ರೇಷ್ಠವಾಗಿತ್ತು.
ಸರ್ವಗುಣ ಸಂಪನ್ನರು..... ಎಂದು ಅವರಿಗೇ ಮಹಿಮೆಯಿದೆ. ಮೊಟ್ಟ ಮೊದಲು ಪವಿತ್ರರಾಗಿದ್ದರು, ಈಗ
ಪತಿತರಾಗಿದ್ದಾರೆ, ಪುನಃ ತಂದೆಯು ಬಂದು ಸ್ತ್ರೀ-ಪುರುಷ ಇಬ್ಬರನ್ನೂ ಪವಿತ್ರರನ್ನಾಗಿ ಮಾಡುತ್ತಾರೆ.
ರಕ್ಷಾ ಬಂಧನದ ಉತ್ಸವವನ್ನು ಇಷ್ಟೊಂದು ವಿಜೃಂಭಣೆಯಿಂದ ಏಕೆ ಆಚರಿಸುತ್ತಾರೆ ಇದನ್ನು ಯಾರೂ
ತಿಳಿದುಕೊಂಡಿಲ್ಲ. ತಂದೆಯೇ ಬಂದು ಈ ಅಂತಿಮ ಜನ್ಮದಲ್ಲಿ ನೀವಿಬ್ಬರೂ ಪವಿತ್ರರಾಗಿರಿ ಎಂದು
ಪ್ರತಿಜ್ಞೆ ಮಾಡಿಸಿದ್ದರು. ಸನ್ಯಾಸಿಗಳ ಧರ್ಮವೇ ಬೇರೆಯಾಗಿದೆ, ಜ್ಞಾನ, ಭಕ್ತಿ ಮತ್ತು ವೈರಾಗ್ಯ -
ಇದು ನಿಮಗಾಗಿಯೇ ಇದೆ. ನೀವು ನೋಡಿರಬಹುದು - ಪಾದ್ರಿಗಳು ನಡೆದುಕೊಂಡು ಹೋಗುವಾಗ ಅವರ ದೃಷ್ಟಿಯು
ಒಂದೇ ಕಡೆ ಇರುತ್ತದೆ, ಮತ್ತ್ಯಾವ ಕಡೆಯೂ ನೋಡುವುದಿಲ್ಲ. ನನ್ಸ್ ಇರುತ್ತಾರಲ್ಲವೆ. ಅವರಂತೂ
ಕ್ರಿಸ್ತನನ್ನೇ ನೆನಪು ಮಾಡುತ್ತಾರೆ. ಕ್ರಿಸ್ತನು ಭಗವಂತನ ಮಗನಾಗಿದ್ದರೆಂದು ಹೇಳುತ್ತಾರೆ. ನಿಮಗೆ
ಯಾವುದೇ ಬಿಳಿಯ ವಸ್ತ್ರಗಳೊಂದಿಗೆ ಸಂಬಂಧವಿಲ್ಲ, ನೀವಂತೂ ಆತ್ಮವಾಗಿದ್ದೀರಿ. ನನ್ ಬಟ್ ವನ್. ಒಬ್ಬ
ತಂದೆಯನ್ನೇ ನೆನಪು ಮಾಡಬೇಕಾಗಿದೆ. ಸತ್ಯವಾದ ನನ್ಗಳು ನೀವಾಗಿದ್ದೀರಿ. ನಿಮಗೆ ಆಸ್ತಿಯು ಆ
ತಂದೆಯಿಂದ ಸಿಗಬೇಕಾಗಿದೆ. ಅವರನ್ನು ನೆನಪು ಮಾಡಿದಾಗಲೇ ವಿಕರ್ಮಗಳು ವಿನಾಶವಾಗುತ್ತವೆ ಆದ್ದರಿಂದ
ತಂದೆಯ ಆದೇಶವಾಗಿದೆ - ನನ್ನೊಬ್ಬನನ್ನೇ ನೆನಪು ಮಾಡಿ. ಆತ್ಮದ ನಿಶ್ಚಯವು ಆಗದೇ ಇರುವ ಕಾರಣ ಆ
ನನ್ಸ್ ಗಳು ಕ್ರಿಸ್ತನನ್ನೇ ನೆನಪು ಮಾಡುತ್ತಾರೆ. ಭಗವಂತನು ಯಾರೆಂಬುದನ್ನು ತಿಳಿದುಕೊಂಡಿಲ್ಲ.
ಭಾರತವಾಸಿಗಳು ಯಾರು ಮೊಟ್ಟ ಮೊದಲು ಬರುತ್ತಾರೆಯೋ ಅವರೇ ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣರಿಗೆ
ಈ ಸೃಷ್ಟಿಯ ಜ್ಞಾನವಿದೆಯೇ! ಅವರು ತ್ರಿಕಾಲದರ್ಶಿಗಳೂ ಅಲ್ಲ, ತ್ರಿಕಾಲದರ್ಶಿಗಳು ನೀವು ಬ್ರಾಹ್ಮಣರೇ
ಆಗುತ್ತೀರಿ. ನಿಮ್ಮನ್ನು ತಂದೆಯು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡುತ್ತಾರೆ. ನೀವೀಗ ಈಶ್ವರನ
ಮಡಿಲಿನಲ್ಲಿದ್ದೀರಿ, ನಿಮ್ಮ ಈ ಅಂತಿಮ ಜನ್ಮವು ಬಹಳ ಅಮೂಲ್ಯವಾಗಿದೆ. ವಿಶೇಷವಾಗಿ ಭಾರತ ಮತ್ತು ಇಡೀ
ಪ್ರಪಂಚದ ಆತ್ಮಿಕ ಸೇವೆ ಮಾಡುತ್ತೀರಿ, ಅವರಂತೂ ದೈಹಿಕ ಸಮಾಜ ಸೇವಕರಾಗಿದ್ದಾರೆ, ನೀವು ಆತ್ಮೀಯ
ಸಮಾಜ ಸೇವಕರಾಗಿದ್ದೀರಿ. ನಿಮಗೆ ಕಲಿಸುವವರು ಪರಮ ಆತ್ಮನಾಗಿದ್ದಾರೆ. ಪ್ರತಿಯೊಂದು ಆತ್ಮನಿಗೆ
ತಿಳಿಸಿ - ತಂದೆಯನ್ನು ನೆನಪು ಮಾಡಿ, ತಂದೆಗೇ ಪತಿತ-ಪಾವನನೆಂದು ಗಾಯನ ಮಾಡಲಾಗುತ್ತದೆ. ನಿಮಗೆ
ಇಳಿಯುವುದರಲ್ಲಿ 84 ಜನ್ಮಗಳು ಹಿಡಿಸುತ್ತವೆ ಮತ್ತೆ ಮೇಲೇರುವುದರಲ್ಲಿ ಒಂದು ಸೆಕೆಂಡ್
ಹಿಡಿಸುತ್ತದೆ. ನಿಮ್ಮದು ಇದು ಮೃತ್ಯುಲೋಕದ ಅಂತಿಮ ಜನ್ಮವಾಗಿದೆ. ಈಗ ಮೃತ್ಯುಲೋಕವು ವಿನಾಶವಾಗಿ
ಅಮರ ಲೋಕಕ್ಕೆ ಜಯ ಜಯಕಾರವಾಗುವುದು. ಇದಕ್ಕೆ ಅಮರ ಕಥೆಯೆಂದು ಹೇಳಲಾಗುತ್ತದೆ. ಅಮರ ತಂದೆಯು ಬಂದು
ನೀವು ಅಮರ ಆತ್ಮರನ್ನು ಅಮರ ಯುಗದಲ್ಲಿ ಕರೆದುಕೊಂಡು ಹೋಗಲು ಅಮರ ಕಥೆಯನ್ನು ತಿಳಿಸುತ್ತಾರೆ.
ತಂದೆಯು ಹೇಳುತ್ತಾರೆ, ಯಾವುದೇ ಮಾತುಗಳನ್ನು ಮರೆತು ಹೋಗುತ್ತೀರೆಂದರೆ ಕೇವಲ ತಮ್ಮನ್ನು ಆತ್ಮ
ನಿಶ್ಚಯ ಮಾಡಿಕೊಂಡು ತಂದೆಯಾದ ನನ್ನೊಬ್ಬನನ್ನೇ ನೆನಪು ಮಾಡಿ, ಬುದ್ಧಿಯೋಗವನ್ನು ನನ್ನೊಂದಿಗೇ
ಜೋಡಿಸಿ ಆಗ ನಿಮ್ಮ ಪಾಪಗಳು ಭಸ್ಮವಾಗುವುವು ಮತ್ತು ನೀವು ಪುಣ್ಯಾತ್ಮರಾಗಿ ಬಿಡುತ್ತೀರಿ. ನೀವು
ಮನುಷ್ಯರಿಂದ ದೇವತೆಯಾಗುತ್ತೀರಿ, ಇದು ಹೊಸ ಮಾತಲ್ಲ. 5000 ವರ್ಷಗಳ ನಂತರ ತಂದೆಯು ಬಂದು ನಿಮಗೆ
ಆಸ್ತಿಯನ್ನು ಕೊಡುತ್ತಾರೆ ಮತ್ತೆ ರಾವಣನು ಶಾಪ ಕೊಡುತ್ತಾನೆ. ಇದು ಆಟವಾಗಿದೆ, ಭಾರತದ್ದೇ
ಕಥೆಯಾಗಿದೆ. ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ - ಯಾವುದೇ ವೇದ ಶಾಸ್ತ್ರಗಳಲ್ಲಿಲ್ಲ
ಆದ್ದರಿಂದ ಪರಮಾತ್ಮನಿಗೆ ಜ್ಞಾನ ಸಾಗರ, ಶಾಂತಿಯ ಸಾಗರ, ಆನಂದ ಸಾಗರನೆಂದೂ ಹೇಳಲಾಗುತ್ತದೆ.
ನಿಮ್ಮನ್ನು ತನ್ನ ಸಮಾನರನ್ನಾಗಿ ಮಾಡಿಕೊಳ್ಳುತ್ತಾರೆ, ನೀವೂ ಸಹ ಪೂಜ್ಯರಾಗಿದ್ದಿರಿ ನಂತರ
ಪೂಜಾರಿಗಳಾಗುತ್ತೀರಿ. ತಾವೇ ಪೂಜ್ಯ, ತಾವೇ ಪೂಜಾರಿ. ಇದು ಭಗವಂತನಿಗೆ ಅನ್ವಯಿಸುವುದಿಲ್ಲ. ಇದು
ಭಾರತವಾಸಿಗಳ ಮಾತಾಗಿದೆ. ನೀವು ಮೊದಲು ಕೇವಲ ಒಬ್ಬ ಶಿವನ ಭಕ್ತಿ ಮಾಡುತ್ತಿದ್ದಿರಿ, ಅವ್ಯಭಿಚಾರಿ
ಭಕ್ತಿ ಮಾಡಿದಿರಿ. ನಂತರ ದೇವತೆಗಳ ಭಕ್ತಿಯನ್ನು ಆರಂಭಿಸಿದಿರಿ, ಕೆಳಗಿಳಿಯುತ್ತಾ ಬಂದಿರಿ. ಈಗ
ಪುನಃ ನೀವು ದೇವಿ-ದೇವತೆಗಳಾಗುತ್ತಿದ್ದೀರಿ. ಯಾರು ಸ್ವಲ್ಪ ಓದಿದರೂ ಸಹ ಅವರು ಪ್ರಜೆಗಳಲ್ಲಿ
ಬರುತ್ತಾರೆ. ಯಾರು ಚೆನ್ನಾಗಿ ಓದಿ-ಓದಿಸುವರೋ ಅವರು ರಾಜಧಾನಿಯಲ್ಲಿ ಬರುತ್ತಾರೆ. ಪ್ರಜೆಗಳಂತೂ
ಅನೇಕರಾಗುತ್ತಾರೆ. ಒಬ್ಬ ಮಹಾರಾಜನಿಗೆ ಲಕ್ಷಾಂತರ, ಕೋಟ್ಯಾಂತರ ಮಂದಿ ಪ್ರಜೆಗಳಿರುತ್ತಾರೆ. ನೀವು
ಪುರುಷಾರ್ಥವು ಕಲ್ಪದ ಹಿಂದಿನ ತರಹ ಮಾಡುತ್ತೀರಿ. ಪುರುಷಾರ್ಥದಿಂದಲೇ ಯಾರು ಯಾರು ಮಾಲೆಯಲ್ಲಿ
ಬರುತ್ತಾರೆಂಬುದು ಅರ್ಥವಾಗುತ್ತದೆ. ಪ್ರಜೆಗಳಲ್ಲಿಯೂ ಕೆಲವರು ಬಡವರು, ಕೆಲವರು
ಸಾಹುಕಾರರಾಗುತ್ತಾರೆ. ಭಕ್ತಿಮಾರ್ಗದಲ್ಲಿ ಈಶ್ವರಾರ್ಥವಾಗಿ ದಾನ ಮಾಡುತ್ತಾರೆ. ಏಕೆ ಈಶ್ವರನ ಬಳಿ
ಇಲ್ಲವೇನು? ಅಥವಾ ಕೃಷ್ಣಾರ್ಪಣಂ ಎಂದು ಹೇಳುತ್ತಾರೆ ಆದರೆ ವಾಸ್ತವದಲ್ಲಿ ಈಶ್ವರಾರ್ಪಣಂ ಆಗುತ್ತದೆ.
ಮನುಷ್ಯರು ಏನೆಲ್ಲವನ್ನೂ ಮಾಡುವರೋ ಅದರ ಫಲವು ಇನ್ನೊಂದು ಜನ್ಮದಲ್ಲಿ ಸಿಗುತ್ತದೆ. ಒಂದು
ಜನ್ಮಕ್ಕಾಗಿ ಫಲ ಸಿಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ನಾನು ನಿಮಗೆ 21 ಜನ್ಮಗಳ ಆಸ್ತಿಯನ್ನು
ಕೊಡಲು ಬಂದಿದ್ದೇನೆ. ನೀವು ನನ್ನ ಅರ್ಥವಾಗಿ ಡೈರೆಕ್ಟ್ ಏನಾದರೂ ಮಾಡುತ್ತೀರೆಂದರೆ 21
ಜನ್ಮಗಳಿಗಾಗಿ ನಿಮಗೆ ಅದರ ಪ್ರಾಪ್ತಿಯಾಗುತ್ತದೆ. ಪರೋಕ್ಷವಾಗಿ ಮಾಡುತ್ತೀರೆಂದರೆ ಒಂದು
ಜನ್ಮಕ್ಕಾಗಿ ಅಲ್ಪಕಾಲದ ಸುಖ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನಿಮ್ಮದೆಲ್ಲವೂ ಮಣ್ಣು
ಪಾಲಾಗಲಿದೆ ಆದ್ದರಿಂದ ಇದನ್ನು ಸಫಲ ಮಾಡಿಕೊಳ್ಳಿ. ನೀವು ಈ ಆತ್ಮಿಕ ಆಸ್ಪತ್ರೆ ಹಾಗೂ
ಯುನಿವರ್ಸಿಟಿಯನ್ನು ತೆರೆಯುತ್ತಾ ಹೋಗಿ. ಎಲ್ಲಿ ಎಲ್ಲರೂ ಸದಾ ಆರೋಗ್ಯವಂತರು,
ಐಶ್ವರ್ಯವಂತರಾಗುತ್ತಾರೆ, ಇದರಿಂದ ಬಹಳ ಸಂಪಾದನೆಯಾಗುತ್ತದೆ. ಯೋಗದಿಂದ ಆರೋಗ್ಯ ಮತ್ತು ಚಕ್ರವನ್ನು
ತಿಳಿದುಕೊಳ್ಳುವುದರಿಂದ ಭಾಗ್ಯ. ಆದ್ದರಿಂದ ಮನೆ-ಮನೆಯಲ್ಲಿ ಇಂತಹ ಯುನಿವರ್ಸಿಟಿ ಕಮ್
ಹಾಸ್ಪಿಟಲನ್ನು ತೆರೆಯಿರಿ. ದೊಡ್ಡ ವ್ಯಕ್ತಿಗಳಾದರೆ ದೊಡ್ಡದನ್ನು ತೆರೆಯಲಿ ಎಲ್ಲಿ ಅನೇಕರು ಬಂದು
ತಿಳಿದುಕೊಳ್ಳಲಿ. ಬೋರ್ಡಿನ ಮೇಲೆ ಬರೆಯಿರಿ. ಹೇಗೆ ಪ್ರಾಕೃತಿಕ ಚಿಕಿತ್ಸೆಯವರು ಬರೆಯುತ್ತಾರೆ.
ತಂದೆಯು ಇಡೀ ಪ್ರಪಂಚದ ಪ್ರಕೃತಿಯನ್ನೇ ಪವಿತ್ರವನ್ನಾಗಿ ಮಾಡಿ ಬಿಡುತ್ತಾರೆ. ಈ ಸಮಯದಲ್ಲಿ ಎಲ್ಲವೂ
ಅಪವಿತ್ರವಾಗಿದೆ. ಇಡೀ ಪ್ರಪಂಚವನ್ನು ಸದಾ ಆರೋಗ್ಯವಂತ, ಐಶ್ವರ್ಯವಂತನನ್ನಾಗಿ ಮಾಡುವವರು
ತಂದೆಯಾಗಿದ್ದಾರೆ. ಅವರೇ ನೀವು ಮಕ್ಕಳಿಗೆ ಓದಿಸುತ್ತಿದ್ದಾರೆ. ನೀವು ಅತಿಪ್ರಿಯ ಮಕ್ಕಳಾಗಿದ್ದೀರಿ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಈ
ಅಮೂಲ್ಯ ಜೀವನವನ್ನು ಆತ್ಮಿಕ ಸೇವೆಯಲ್ಲಿ ತೊಡಗಿಸಬೇಕಾಗಿದೆ. ವಿಶೇಷವಾಗಿ ಭಾರತ ಮತ್ತು ಇಡೀ
ಪ್ರಪಂಚದ ಸೇವೆ ಮಾಡಬೇಕಾಗಿದೆ.
2. ತಮ್ಮ ಸರ್ವಸ್ವವನ್ನು
ಸಫಲ ಮಾಡಲು ಡೈರೆಕ್ಟ್ ಈಶ್ವರಾರ್ಥವಾಗಿ ಅರ್ಪಣೆ ಮಾಡಬೇಕಾಗಿದೆ. ಆತ್ಮಿಕ ಆಸ್ಪತ್ರೆ ಹಾಗೂ
ಯುನಿವರ್ಸಿಟಿಯನ್ನು ತೆರೆಯಬೇಕಾಗಿದೆ.
ವರದಾನ:
ಏಕರಸ ಸ್ಥಿತಿಯ
ಮೂಲಕ ಅತೀಂದ್ರಿಯ ಸುಖದ ಅನುಭೂತಿ ಮಾಡುವಂತಹ ಸರ್ವ ಆಕರ್ಷಣೆಗಳಿಂದ ಮುಕ್ತ ಭವ.
ಯಾವಾಗ ಇಂದ್ರಿಯಗಳ
ಆಕರ್ಷಣೆ ಮತ್ತು ಸಂಬಂಧಗಳ ಆಕರ್ಷಣೆಯಿಂದ ಮುಕ್ತರಾಗುವಿರಿ, ಆಗಲೇ ಅತೀಂದ್ರಿಯ ಸುಖದ ಅನುಭೂತಿ
ಮಾಡಲು ಸಾಧ್ಯವಾಗುವುದು. ಯಾವುದೇ ಕರ್ಮೇಂದ್ರಿಯಗಳಿಗೆ ವಶರಾಗುವುದರಿಂದ ಭಿನ್ನ-ಭಿನ್ನ
ಆಕರ್ಷಣೆಗಳೇನಿವೆಯೋ, ಅದು ಅತೀಂದ್ರಿಯ ಸುಖ ಅಥವಾ ಹರ್ಷವನ್ನು ಕೊಡುವುದರಲ್ಲಿ ಬಂಧನವನ್ನು
ಹಾಕುವುದು. ಆದರೆ ಯಾವಾಗ ಬುದ್ಧಿಯು ಸರ್ವ ಆಕರ್ಷಣೆಗಳಿಂದ ಮುಕ್ತವಾಗಿದ್ದು, ಒಂದು ಲಕ್ಷ್ಯದಲ್ಲಿ
ಸ್ಥಿತವಾಗಿರುತ್ತದೆಯೋ ಆಗ ಏರುಪೇರುಗಳು ಸಮಾಪ್ತಿಯಾಗುತ್ತದೆ. ಏಕರಸ ಸ್ಥಿತಿಯಾಗುವುದರಿಂದ
ಅತೀಂದ್ರಿಯ ಸುಖದ ಅನುಭೂತಿಯಾಗುವುದು.
ಸ್ಲೋಗನ್:
ತಮ್ಮ ಬುದ್ಧಿಯ
ಸಂಬಂಧವು ಸದಾ ಸ್ಪಷ್ಟವಾಗಿ ಇಟ್ಟುಕೊಂಡರೆ, ಒಬ್ಬರಿನ್ನೊಬರ ಮನಸ್ಸಿನ ಭಾವಗಳನ್ನು ತಿಳಿದುಕೊಂಡು
ಬಿಡುತ್ತೀರಿ.
ಅವ್ಯಕ್ತ ಸೂಚನೆ:– “ಸದಾ
ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”
ಯಾವುದೇ ಪ್ರಕಾರದ
ಏರುಪೇರಿನಲ್ಲಿ ಅಚಲರಾಗಿರಿ, ಇದೇ ಶ್ರೇಷ್ಠ ಬ್ರಾಹ್ಮಣ ಆತ್ಮರ ಚಿಹ್ನೆಯಾಗಿದೆ. ಪ್ರಪಂಚ
ಏರುಪೇರಿನಲ್ಲಿ ಇರಲಿ ಆದರೆ ತಾವು ಶ್ರೇಷ್ಠ ಆತ್ಮಗಳು ಏರುಪೇರಿನಲ್ಲಿ ಬರಲು ಸಾಧ್ಯವಿಲ್ಲ. ಏಕೆ?
ಡ್ರಾಮಾದ ಪ್ರತಿಯೊಂದು ದೃಶ್ಯವನ್ನು ತಿಳಿದುಕೊಂಡಿದ್ದೀರಿ. ಜ್ಞಾನ ಪೂರ್ಣ ಆತ್ಮಗಳು, ಶಕ್ತಿಶಾಲಿ
ಆತ್ಮಗಳು ಸದಾ ಸ್ವತಹವಾಗಿ ಅಚಲರಾಗಿ ಇರುತ್ತಾರೆ. ಎಂದು ಸಹ ವಾಯುಮಂಡಲದಿಂದ ಗಾಬರಿಯಾಗಬೇಡಿ, ಸದಾ
ನಿರ್ಭಯರಾಗಿ ಇರಿ.