07.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಅವಿನಾಶಿ ಜ್ಞಾನರತ್ನ ಧಾರಣೆ ಮಾಡಿ ತಾವೀಗ ಭಿಕಾರಿಗಳಿಂದ ಸಾಹುಕಾರರಾಗಬೇಕಾಗಿದೆ, ನೀವಾತ್ಮಗಳು
ರೂಪಭಸಂತರಾಗಿದ್ದೀರಿ.”
ಪ್ರಶ್ನೆ:
ಯಾವ ಶುಭ
ಭಾವನೆಯನ್ನಿಟ್ಟು ಪುರುಷಾರ್ಥದಲ್ಲಿ ಸದಾ ತತ್ಫರರಾಗಿರಬೇಕಾಗಿದೆ?
ಉತ್ತರ:
ಸದಾ ಇದೇ ಶುಭ
ಭಾವನೆಯನ್ನಿಟ್ಟುಕೊಳ್ಳಿ - ನಾವಾತ್ಮರು ಸತೋಪ್ರಧಾನರಾಗಿದ್ದೆವು, ನಾವೇ ತಂದೆಯಿಂದ ಶಕ್ತಿಯ
ಆಸ್ತಿಯನ್ನು ತೆಗೆದುಕೊಂಡಿದ್ದೆವು, ಈಗ ಪುನಃ ತೆಗೆದುಕೊಳ್ಳುತ್ತಿದ್ದೇವೆ. ಇದೇ ಶುಭ ಭಾವನೆಯಿಂದ
ಪುರುಷಾರ್ಥ ಮಾಡಿ ಸತೋಪ್ರಧಾನರಾಗಬೇಕಾಗಿದೆ. ಎಲ್ಲರೂ ಸತೋಪ್ರಧಾನರಾಗುವರೆ ಎಂದು ಯೋಚಿಸಬಾರದು.
ನೆನಪಿನ ಯಾತ್ರೆಯಲ್ಲಿರುವ ಪುರುಷಾರ್ಥವನ್ನು ಮಾಡುತ್ತಾ ಇರಿ. ಸೇವೆಯಿಂದ ಶಕ್ತಿಯನ್ನು
ಪಡೆದುಕೊಳ್ಳಿ.
ಗೀತೆ:
ಈ ಪಾಪದ
ಪ್ರಪಂಚದಿಂದ.........................
ಓಂ ಶಾಂತಿ.
ಇದು ವಿದ್ಯೆಯಾಗಿದೆ. ಪ್ರತಿಯೊಂದು ಮಾತನ್ನು ತಿಳಿದುಕೊಳ್ಳಬೇಕಾಗಿದೆ ಮತ್ತೆ ಯಾವುದೆಲ್ಲಾ
ಸತ್ಸಂಗಗಳಾದಿ ಇದೆಯೋ ಅವು ಭಕ್ತಿಮಾರ್ಗದ್ದಾಗಿವೆ. ಭಕ್ತಿಯನ್ನು ಮಾಡುತ್ತಾ-ಮಾಡುತ್ತಾ
ಭಿಕಾರಿಗಳಾಗಿ ಬಿಟ್ಟಿದ್ದಾರೆ. ಅವರು ಒಂದು ತರಹದ ಭಿಕಾರಿಗಳಾಗಿದ್ದಾರೆ. ನೀವು ಇನ್ನೊಂದು
ಪ್ರಕಾರದ ಭಿಕಾರಿಗಳಾಗಿದ್ದೀರಿ. ನೀವು ಸಾಹುಕಾರರಾಗಿದ್ದಿರಿ. ಈಗ ಭಿಕಾರಿಗಳಾಗಿದ್ದೀರಿ. ನಾವೇ
ಸಾಹುಕಾರರಾಗಿದ್ದೆವು ಎಂಬುದು ಯಾರಿಗೂ ತಿಳಿದಿಲ್ಲ. ನಿಮಗೆ ತಿಳಿದಿದೆ - ನಾವು ವಿಶ್ವದ ಮಾಲೀಕರು,
ಸಾಹುಕಾರರಾಗಿದ್ದೆವು. ಅಮೀರ್ಚಂದ್ರೇ ಫಕೀರ್ಚಂದರಾಗಿದ್ದೀರಿ. ಇದು ವಿದ್ಯೆಯಾಗಿದೆ. ಇದನ್ನು
ಚೆನ್ನಾಗಿ ಓದಬೇಕು, ಧಾರಣೆ ಮಾಡಬೇಕು ಮತ್ತು ಮಾಡಿಸುವ ಪ್ರಯತ್ನ ಪಡಬೇಕಾಗಿದೆ. ಅವಿನಾಶಿ
ಜ್ಞಾನರತ್ನಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಆತ್ಮವು ರೂಪಭಸಂತನಲ್ಲವೆ. ಆತ್ಮವೇ ಧಾರಣೆ
ಮಾಡಿಕೊಳ್ಳುತ್ತದೆ. ಶರೀರವು ವಿನಾಶಿಯಾಗಿದೆ. ಕೆಲಸಕ್ಕೆ ಬಾರದಿರುವ ವಸ್ತುವಿದ್ದರೆ ಅದನ್ನು
ಸುಟ್ಟು ಹಾಕುತ್ತಾರೆ. ಶರೀರವನ್ನೂ ಸಹ ಕೆಲಸಕ್ಕೆ ಬಾರದ್ದಾಗಿರುವಾಗ ಬೆಂಕಿಯಲ್ಲಿ ಸುಡುತ್ತಾರೆ
ಆದರೆ ಆತ್ಮವನ್ನು ಸುಡುವುದಿಲ್ಲ. ನಾವಾತ್ಮಗಳಾಗಿದ್ದೇವೆ, ಯಾವಾಗಿನಿಂದ ರಾವಣ ರಾಜ್ಯವು
ಪ್ರಾರಂಭವಾಯಿತೋ ಆಗಿನಿಂದಲೂ ಮನುಷ್ಯರು ದೇಹಾಭಿಮಾನದಲ್ಲಿ ಬಂದು ಬಿಟ್ಟಿದ್ದಾರೆ. ನಾನು
ಶರೀರವಾಗಿದ್ದೇನೆ ಎಂಬುದು ಪಕ್ಕಾ ಆಗಿ ಬಿಡುತ್ತದೆ. ಆತ್ಮವು ಅಮರನಾಗಿದೆ, ಅಮರನಾಥ ತಂದೆಯು ಬಂದು
ಆತ್ಮಗಳನ್ನು ಅಮರರನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಂತೂ ತಮ್ಮ ಸಮಯದಲ್ಲಿ ತಮ್ಮ ಇಚ್ಛೆಯನುಸಾರ
ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ ಏಕೆಂದರೆ ಆತ್ಮವು ಮಾಲೀಕನಾಗಿದೆ,
ಯಾವಾಗ ಬೇಕಾದರೂ ಶರೀರವನ್ನು ಬಿಡುತ್ತದೆ. ಅಲ್ಲಿ ಶರೀರಕ್ಕೆ ಸರ್ಪದ ತರಹ ಧೀರ್ಘಾಯಸ್ಸಿರುತ್ತದೆ.
ನೀವೀಗ ತಿಳಿದುಕೊಂಡಿದ್ದೀರಿ - ನಿಮ್ಮದು ಇದು ಬಹಳ ಜನ್ಮಗಳ ಅಂತಿಮ ಜನ್ಮದ ಹಳೆಯ ಪೊರೆ (ಶರೀರ)
ಯಾಗಿದೆ. 84 ಜನ್ಮಗಳನ್ನು ಪೂರ್ಣಗೊಳಿಸಿದ್ದೀರಿ. ಕೆಲವರದು 60-70 ಜನ್ಮಗಳು ಇವೆ. ಇನ್ನೂ ಕೆಲವರದು
50 ಜನ್ಮಗಳಿವೆ. ತ್ರೇತಾಯುಗದಲ್ಲಿ ಅವಶ್ಯವಾಗಿ ಆಯಸ್ಸು ಸ್ವಲ್ಪ ಕಡಿಮೆಯಾಗಿ ಬಿಡುತ್ತದೆ.
ಸತ್ಯಯುಗದಲ್ಲಿ ಪೂರ್ಣಾಯಸ್ಸಿರುತ್ತದೆ ಅಂದಾಗ ನಾವು ಮೊಟ್ಟ ಮೊದಲಿಗೆ ಸತ್ಯಯುಗದಲ್ಲಿ ಬರಬೇಕೆಂಬ
ಪುರುಷಾರ್ಥ ಮಾಡಿ. ಅಲ್ಲಿ ಶಕ್ತಿಯಿರುತ್ತದೆ ಆದ್ದರಿಂದ ಅಕಾಲ ಮೃತ್ಯುವಿರುವುದಿಲ್ಲ. ಶಕ್ತಿಯು
ಕಡಿಮೆಯಾದಾಗ ಆಯಸ್ಸು ಕಡಿಮೆಯಾಗುತ್ತದೆ. ಹೇಗೆ ತಂದೆಯು ಸರ್ವಶಕ್ತಿವಂತನಾಗಿದ್ದಾರೆಯೋ ಹಾಗೆಯೇ
ನೀವಾತ್ಮಗಳನ್ನೂ ಶಕ್ತಿವಂತರನ್ನಾಗಿ ಮಾಡುತ್ತಾರೆ. ಮೊದಲನೆಯದಾಗಿ ಪವಿತ್ರರಾಗಿ ಮತ್ತು
ನೆನಪಿನಲ್ಲಿರಿ ಆಗ ಶಕ್ತಿ ಸಿಗುವುದು. ಬಾಬಾರವರಿಂದ ಶಕ್ತಿಯ ಆಸ್ತಿಯನ್ನು ತೆಗೆದುಕೊಳ್ಳುವಿರಿ.
ಪಾಪಾತ್ಮಗಳು ಶಕ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಪುಣ್ಯಾತ್ಮರಾದರೆ ಶಕ್ತಿ ಸಿಗುವುದು. ಈ
ಸಂಕಲ್ಪ ಮಾಡಿ - ನಾವಾತ್ಮಗಳು ಸತೋಪ್ರಧಾನರಾಗಿದ್ದೆವು. ಯಾವಾಗಲೂ ಶುಭ ಭಾವನೆಯನ್ನಿಡಿ. ಎಲ್ಲರೂ
ಸತೋಪ್ರಧಾನರಾಗುವರೇ ಎಂದಲ್ಲ. ಕೆಲವರು ಸತೋ ಆಗುವರಲ್ಲವೆ ಎಂದಲ್ಲ. ತಮ್ಮ ಪ್ರತಿ ತಿಳಿದುಕೊಳ್ಳಿ -
ನಾವು ಮೊಟ್ಟ ಮೊದಲು ಸತೋಪ್ರಧಾನರೇ ಆಗಿದ್ದೆವು. ಈ ನಿಶ್ಚಯದಿಂದಲೇ ಸತೋಪ್ರಧಾನರಾಗುತ್ತೀರಿ. ನಾವು
ಹೇಗೆ ಸತೋಪ್ರಧಾನರಾಗಲು ಸಾಧ್ಯ? ಪುನಃ ಜಾರಿ ಬೀಳುವಿರಿ ನೆನಪಿನ ಯಾತ್ರೆಯಲ್ಲಿಯೇ ಇರುವುದಿಲ್ಲ
ಎಂದಲ್ಲ. ಎಷ್ಟು ಸಾಧ್ಯವೋ ಅಷ್ಟು ಪುರುಷಾರ್ಥ ಮಾಡಿ. ತಮ್ಮನ್ನು ಆತ್ಮನೆಂದು ತಿಳಿದು
ಸತೋಪ್ರಧಾನರಾಗಬೇಕಾಗಿದೆ. ಈ ಸಮಯದಲ್ಲಿ ಎಲ್ಲಾ ಮನುಷ್ಯ ಮಾತ್ರರು ತಮೋಪ್ರಧಾನರಾಗಿದ್ದಾರೆ. ನೀವು
ಆತ್ಮರೂ ತಮೋಪ್ರಧಾನರಾಗಿದ್ದೀರಿ. ಈಗ ತಂದೆಯ ನೆನಪಿನಿಂದ ಆತ್ಮವನ್ನು ಸತೋಪ್ರಧಾನ
ಮಾಡಿಕೊಳ್ಳಬೇಕಾಗಿದೆ. ಜೊತೆ ಜೊತೆಗೆ ಸರ್ವೀಸನ್ನೂ ಮಾಡಿ ಆಗ ಶಕ್ತಿ ಸಿಗುವುದು. ತಿಳಿದುಕೊಳ್ಳಿ -
ಯಾರಾದರೂ ಸೇವಾಕೇಂದ್ರವನ್ನು ತೆರೆಯುತ್ತಾರೆಂದರೆ ಅನೇಕರ ಆಶೀರ್ವಾದಗಳು ಅವರಿಗೆ ಸಿಗುವುದು.
ಯಾರಾದರೂ ಬಂದು ವಿಶ್ರಾಂತಿ ಪಡೆಯಲಿ ಎಂದು ಮನುಷ್ಯರು ಧರ್ಮಶಾಲೆಯನ್ನು ಕಟ್ಟಿಸುತ್ತಾರೆ. ಆತ್ಮವು
ಖುಷಿಯಾಗುತ್ತದೆಯಲ್ಲವೆ. ಅದರಲ್ಲಿರುವವರಿಗೆ ವಿಶ್ರಾಂತಿ ಸಿಗುತ್ತದೆಯೆಂದರೆ ಅವರ ಆಶೀರ್ವಾದಗಳು
ಕಟ್ಟಿಸಿರುವವರಿಗೆ ಸಿಗುತ್ತದೆ. ಅಂದಾಗ ಅದರ ಪರಿಣಾಮವೇನಾಗುವುದು? ಇನ್ನೊಂದು ಜನ್ಮದಲ್ಲಿ
ಸುಖಿಯಾಗಿರುವರು, ಒಳ್ಳೆಯ ಮನೆಯು ಸಿಗುವುದು ಮನೆಯ ಸುಖವು ಸಿಗುವುದು. ಹಾಗೆಂದು ಹೇಳಿ ಅವರೆಂದೂ
ರೋಗಿಯಾಗುವುದಿಲ್ಲ ಎಂದಲ್ಲ. ಕೇವಲ ಒಳ್ಳೆಯ ಮನೆಯು ಸಿಗುವುದು. ಆಸ್ಪತ್ರೆಯನ್ನು ತೆರೆದರೆ
ಆರೋಗ್ಯವು ಚೆನ್ನಾಗಿರುವುದು. ವಿಶ್ವ ವಿದ್ಯಾಲಯವನ್ನು ತೆರೆದರೆ ಒಳ್ಳೆಯ ವಿದ್ಯಾಭ್ಯಾಸವಿರುವುದು.
ಸ್ವರ್ಗದಲ್ಲಂತೂ ಈ ಆಸ್ಪತ್ರೆ ಇತ್ಯಾದಿಗಳಿರುವುದೇ ಇಲ್ಲ. ಇಲ್ಲಿ ನೀವು ಪುರುಷಾರ್ಥದಿಂದ 21
ಜನ್ಮಗಳಿಗಾಗಿ ಪ್ರಾಲಬ್ಧವನ್ನು ಮಾಡಿಕೊಳ್ಳುತ್ತೀರಿ ಆದರೆ ಅಲ್ಲಿ ಯಾವುದೇ ಆಸ್ಪತ್ರೆ, ಕೋರ್ಟ್,
ಪೋಲಿಸರು ಇತ್ಯಾದಿ., ಏನೂ ಇರುವುದಿಲ್ಲ. ನೀವೀಗ ಸುಖಧಾಮಕ್ಕೆ ನಡೆಯುತ್ತೀರಿ, ಅಲ್ಲಿ ಮಂತ್ರಿಗಳೂ
ಸಹ ಇರುವುದಿಲ್ಲ. ಮಹಾರಾಜ-ಮಹಾರಾಣಿಯರೆ ಶ್ರೇಷ್ಠಾತಿ ಶ್ರೇಷ್ಠರಾಗಿರುತ್ತಾರೆ ಅಂದಮೇಲೆ ಅವರಿಗೆ
ಮಂತ್ರಿಗಳ ಸಲಹೆಯ ಅವಶ್ಯಕತೆಯಿರುವುದಿಲ್ಲ. ಯಾವಾಗ ತಿಳುವಳಿಕೆಹೀನರಾಗಿರುವರೋ, ವಿಕಾರಗಳಲ್ಲಿ
ಬೀಳುವರೋ ಆಗ ಅವರಿಗೆ ಇನ್ನೊಬ್ಬರ ಸಲಹೆ ಬೇಕಾಗುವುದು. ರಾವಣ ರಾಜ್ಯದಲ್ಲಿ ಸಂಪೂರ್ಣ ಬುದ್ಧಿಹೀನ,
ತುಚ್ಛ ಬುದ್ಧಿಯವರಾಗಿ ಬಿಡುತ್ತಾರೆ. ಆದ್ದರಿಂದ ವಿನಾಶದ ಮಾರ್ಗವನ್ನು ಹುಡುಕುತ್ತಿರುತ್ತಾರೆ.
ತಂದೆಯು ತಿಳಿದುಕೊಳ್ಳುತ್ತಾರೆ - ನಾನು ವಿಶ್ವವನ್ನು ಇಷ್ಟು ಶ್ರೇಷ್ಠವನ್ನಾಗಿ ಮಾಡುತ್ತೇನೆ ಆದರೆ
ಇದು ಇನ್ನೂ ಕೆಳಗಿಳಿಯುತ್ತಲೇ ಹೋಗುತ್ತದೆ. ಈಗ ವಿನಾಶವು ಸನ್ಮುಖದಲ್ಲಿಯೇ ಇದೆ.
ಮಕ್ಕಳು
ತಿಳಿದುಕೊಂಡಿದ್ದೀರಿ - ನಾವೀಗ ಮನೆಗೆ ಹೋಗಬೇಕಾಗಿದೆ. ನಾವು ಭಾರತದ ಸೇವೆ ಮಾಡಿ ದೈವೀ ರಾಜ್ಯವನ್ನು
ಸ್ಥಾಪನೆ ಮಾಡಿ ನಂತರ ರಾಜ್ಯ ಮಾಡುತ್ತೇವೆ. ಗಾಯನವೂ ಇದೆ - ಫಾಲೋ ಫಾದರ್. ತಂದೆಯು ಮಗನನ್ನು
ಪ್ರತ್ಯಕ್ಷ ಮಾಡುವರು. ಮಗನು ತಂದೆಯನ್ನು ಪ್ರತ್ಯಕ್ಷ ಮಾಡುವನು. ಈ ಸಮಯದಲ್ಲಿ ಶಿವ ತಂದೆಯು
ಬ್ರಹ್ಮಾರವರ ತನುವಿನಲ್ಲಿ ಬಂದು ನಮಗೆ ಓದಿಸುತ್ತಾರೆಂದು ಮಕ್ಕಳಿಗೆ ತಿಳಿದಿದೆ. ತಂದೆಯು ತಿಳಿಸಿ
ಕೊಡುವುದೇ ಹೀಗೆ. ನಾವು ಬ್ರಹ್ಮನನ್ನು ಭಗವಂತ ಅಥವಾ ದೇವತೆಯೆಂದು ಹೇಳುವುದಿಲ್ಲ. ಇವರೂ
ಪತಿತನಾಗಿದ್ದರು, ತಂದೆಯು ಪತಿತ ಶರೀರದಲ್ಲಿ ಪ್ರವೇಶ ಮಾಡಿದ್ದಾರೆ. ವೃಕ್ಷದಲ್ಲಿ ನೋಡಿ, ಮೇಲೆ
ನಿಂತಿದ್ದಾರಲ್ಲವೆ. ಪತಿತನಾಗಿದ್ದಾರೆ, ನಂತರ ಕೆಳಗೆ ಪಾವನರಾಗಲು ತಪಸ್ಸು ಮಾಡಿ ನಂತರ
ದೇವತೆಯಾಗುತ್ತಾರೆ. ತಪಸ್ಸು ಮಾಡುವವರು ಬ್ರಾಹ್ಮಣರಾಗಿದ್ದಾರೆ. ನೀವು
ಬ್ರಹ್ಮಾಕುಮಾರ-ಕುಮಾರಿಯರೆಲ್ಲರೂ ರಾಜಯೋಗವನ್ನು ಕಲಿಯುತ್ತಿದ್ದೀರಿ. ಎಷ್ಟು ಸ್ಪಷ್ಟವಾಗಿದೆ.
ಇದರಲ್ಲಿ ಯೋಗವು ಚೆನ್ನಾಗಿರಬೇಕು. ನೆನಪಿನಲ್ಲಿ ಇರುವುದಿಲ್ಲವೆಂದರೆ ಮುರುಳಿ (ಮಾತು) ಯಲ್ಲಿಯೂ ಆ
ಶಕ್ತಿಯಿರುವುದಿಲ್ಲ. ಶಿವ ತಂದೆಯ ನೆನಪಿನಿಂದಲೇ ಶಕ್ತಿಯು ಸಿಗುತ್ತದೆ. ನೆನಪಿನಿಂದಲೇ
ಸತೋಪ್ರಧಾನರಾಗುತ್ತೀರಿ, ಇಲ್ಲವಾದರೆ ಶಿಕ್ಷೆಗಳನ್ನನುಭವಿಸಿ ಕಡಿಮೆ ಪದವಿಯನ್ನು ಪಡೆಯುತ್ತೀರಿ.
ಮೂಲ ಮಾತು ನೆನಪಿನದಾಗಿದೆ. ಇದಕ್ಕೆ ಭಾರತದ ಪ್ರಾಚೀನ ಯೋಗವೆಂದು ಹೇಳಲಾಗುತ್ತದೆ. ಜ್ಞಾನದ ಬಗ್ಗೆ
ಯಾರಿಗೂ ತಿಳಿದಿಲ್ಲ. ಹಿಂದಿನ ಋಷಿ-ಮುನಿಗಳೂ ಸಹ ನಾವು ರಚಯಿತ ಮತ್ತು ರಚನೆಯ
ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೆಂದು ಹೇಳುತ್ತಿದ್ದರು. ನೀವೂ ಸಹ ಮೊದಲು ಏನನ್ನೂ
ತಿಳಿದುಕೊಂಡಿರಲಿಲ್ಲ. ಈ ಪಂಚ ವಿಕಾರಗಳು ನಿಮ್ಮನ್ನು ಸಂಪೂರ್ಣ ಕನಿಷ್ಟರನ್ನಾಗಿ ಮಾಡಿವೆ. ಈಗ ಈ
ಹಳೆಯ ಪ್ರಪಂಚವು ಸುಟ್ಟು ಸಮಾಪ್ತಿಯಾಗುವುದಿದೆ. ಏನೂ ಉಳಿಯುವುದಿಲ್ಲ. ನೀವೆಲ್ಲರೂ ನಂಬರ್ವಾರ್
ಪುರುಷಾರ್ಥದನುಸಾರ ತನು, ಮನ, ಧನದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡುತ್ತೀರಿ.
ಪ್ರದರ್ಶನಿಯಲ್ಲಿ ನಿಮ್ಮೊಂದಿಗೆ ಕೇಳಿದಾಗ ತಿಳಿಸಿ - ನಾವು ಬ್ರಹ್ಮಾಕುಮಾರ-ಕುಮಾರಿಯರು ನಮ್ಮದೇ
ತನು-ಮನ-ಧನದಿಂದ ಶ್ರೀಮತದನುಸಾರ ಸೇವೆ ಮಾಡಿ ರಾಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ.
ಶ್ರೀಮತದಂತೆ ನಾವು ರಾಮ ರಾಜ್ಯವನ್ನು ಸ್ಥಾಪನೆ ಮಾಡುತ್ತೇವೆ ಎಂಬ ಮಾತನ್ನು ಗಾಂಧೀಜಿಯಂತೂ
ಹೇಳುತ್ತಿರಲಿಲ್ಲ. ಇಲ್ಲಿ ಶ್ರೀ ಶ್ರೀ 108, ತಂದೆಯು ಕುಳಿತಿದ್ದಾರೆ, 108ರ ಮಾಲೆಯನ್ನೂ
ಮಾಡುತ್ತಾರೆ. ಮಾಲೆಯು ದೊಡ್ಡದಾಗುತ್ತದೆ, ಅದರಲ್ಲಿ 8-108ರ ಮಣಿಗಳು ಒಳ್ಳೆಯ ಪರಿಶ್ರಮ ಪಡುತ್ತಾರೆ.
ನಂಬರ್ವಾರಂತೂ ಅನೇಕರಿದ್ದಾರೆ, ಒಳ್ಳೆಯ ಪರಿಶ್ರಮ ಪಡುತ್ತಾರೆ. ರುದ್ರ ಯಜ್ಞವನ್ನು ಮಾಡಿದಾಗ
ಸಾಲಿಗ್ರಾಮಗಳ ಪೂಜೆಯು ನಡೆಯುತ್ತದೆ. ಅವಶ್ಯವಾಗಿ ಅಂತಹ ಸೇವೆ ಮಾಡಿದ್ದಾರೆ, ಆದಕಾರಣವೇ ಪೂಜೆಯು
ನಡೆಯುತ್ತದೆ. ನೀವು ಬ್ರಾಹ್ಮಣರು ಆತ್ಮಿಕ ಸೇವಾಧಾರಿಗಳಾಗಿದ್ದೀರಿ. ಎಲ್ಲಾ ಆತ್ಮಗಳನ್ನು
ಜಾಗೃತಗೊಳಿಸುವವರಾಗಿದ್ದೀರಿ. ನಾನಾತ್ಮನಾಗಿದ್ದೇನೆ ಎಂಬುದನ್ನು ಮರೆತಾಗಲೇ ದೇಹಾಭಿಮಾನವು ಬಂದು
ಬಿಡುತ್ತದೆ. ನಾನು ಇಂತಹವನಾಗಿದ್ದೇನೆಂದು ತಿಳಿಯುತ್ತಾರೆ. ನಾನಾತ್ಮನಾಗಿದ್ದೇನೆ, ಈ ಹೆಸರು
ಶರೀರದ್ದಾಗಿದೆ ಎಂದು ಯಾರಿಗೂ ತಿಳಿದಿಲ್ಲ. ನಾವಾತ್ಮಗಳು ಎಲ್ಲಿಂದ ಬರುತ್ತೇವೆ ಎಂದು ಯಾರಿಗೂ
ವಿಚಾರವೇ ಇಲ್ಲ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಶರೀರದ ಭಾನವು ಪಕ್ಕಾ ಆಗಿ ಬಿಟ್ಟಿದೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಹುಡುಗಾಟಿಕೆಯನ್ನು ಬಿಡಿ, ಮಾಯೆಯು ಬಹಳ ಶಕ್ತಿಶಾಲಿಯಾಗಿದೆ.
ನೀವು ಯುದ್ಧದ ಮೈದಾನದಲ್ಲಿದ್ದೀರಿ. ಆದ್ದರಿಂದ ಆತ್ಮಾಭಿಮಾನಿಗಳಾಗಿ. ಇದು ಆತ್ಮಗಳು ಮತ್ತು
ಪರಮಾತ್ಮನ ಮೇಳವಾಗಿದೆ. ಆತ್ಮಗಳು ಮತ್ತು ಪರಮಾತ್ಮನು ಬಹಳಕಾಲ ಅಗಲಿದ್ದರೆಂಬ ಗಾಯನವಿದೆ ಆದರೆ ಇದರ
ಅರ್ಥವು ಅವರಿಗೆ ತಿಳಿದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ನಾವಾತ್ಮಗಳು ತಂದೆಯ
ಜೊತೆಯಿರುವವರಾಗಿದ್ದೇವೆ, ಅದು ಆತ್ಮಗಳ ಮನೆಯಾಗಿದೆಯಲ್ಲವೆ. ತಂದೆಯೂ ಅಲ್ಲಿ (ಪರಮಧಾಮ) ದ್ದಾರೆ.
ಅವರ ಹೆಸರಾಗಿದೆ - ಶಿವ. ಶಿವ ಜಯಂತಿಯ ಗಾಯನವೂ ಇದೆ. ಇನ್ನ್ಯಾವುದೇ ಹೆಸರನ್ನು ಕೊಡಬಾರದು. ತಂದೆಯು
ತಿಳಿಸುತ್ತಾರೆ - ನನ್ನ ಮೂಲ ಹೆಸರಾಗಿದೆ - ಕಲ್ಯಾಣಕಾರಿ ಶಿವ. ಕಲ್ಯಾಣಕಾರಿ ರುದ್ರನೆಂದು
ಹೇಳುವುದಿಲ್ಲ, ಕಲ್ಯಾಣಕಾರಿ ಶಿವನೆಂದು ಹೇಳುತ್ತಾರೆ. ಕಾಶಿಯಲ್ಲಿಯೂ ಶಿವನ ಮಂದಿರವಿದೆಯಲ್ಲವೆ.
ಅಲ್ಲಿಗೆ ಹೋಗಿ ಸಾಧುಗಳು ಮಂತ್ರವನ್ನು ಪಠಿಸುತ್ತಾರೆ. ಶಿವಕಾಶಿ ವಿಶ್ವನಾಥ ಗಂಗಾ ಎಂದು
ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಯಾವ ಶಿವನನ್ನು ಕಾಶಿಯ ಮಂದಿರದಲ್ಲಿ ಕುಳ್ಳರಿಸಿದ್ದಾರೆಯೋ
ಅವರಿಗೆ ವಿಶ್ವನಾಥನೆಂದು ಹೇಳುತ್ತಾರೆ. ವಾಸ್ತವದಲ್ಲಿ ನಾನಂತೂ ವಿಶ್ವದ ನಾಥನಲ್ಲ, ನೀವೇ
ವಿಶ್ವಕ್ಕೆ ನಾಥ (ಒಡೆಯ) ರಾಗುತ್ತೀರಿ. ನಾನಾಗುವುದೇ ಇಲ್ಲ. ಬ್ರಹ್ಮತತ್ವಕ್ಕೂ ಸಹ ನೀವೇ
ಒಡೆಯರಾಗುತ್ತೀರಿ. ಅದು ನಿಮ್ಮ ಮನೆಯಾಗಿದೆ. ಸತ್ಯಯುಗ ರಾಜಧಾನಿಯಲ್ಲ, ನನ್ನ ಮನೆಯಂತೂ
ಬ್ರಹ್ಮತತ್ವವಾಗಿದೆ. ನಾನು ಸ್ವರ್ಗದಲ್ಲಿ ಬರುವುದಿಲ್ಲ ಅಥವಾ ಒಡೆಯನೂ ಆಗುವುದಿಲ್ಲ. ನನಗೆ ಶಿವ
ತಂದೆಯೆಂದೇ ಹೇಳುತ್ತೀರಿ. ಪತಿತರನ್ನು ಪಾವನ ಮಾಡುವುದೇ ನನ್ನ ಪಾತ್ರವಾಗಿದೆ. ಕೊಳಕಾದ ಬಟ್ಟೆಯನ್ನು
ಒಗೆದರೆಂದು ಸಿಖ್ಖರೂ ಸಹ ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಏಕ್ ಓಂಕಾರ್.....
ಎಂದು ಮಹಿಮೆ ಮಾಡುತ್ತಾರೆ. ಅಯೋನಿಜ ಎಂದರೆ ಜನನ-ಮರಣರಹಿತ. ನಾನಂತೂ 84 ಜನ್ಮಗಳನ್ನು
ತೆಗೆದುಕೊಳ್ಳುವುದಿಲ್ಲ, ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡುತ್ತೇನೆ. ಮನುಷ್ಯರು 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾರೆ. ತಂದೆಯು ನನ್ನ ಜೊತೆ ಒಟ್ಟಿಗೆ ಕುಳಿತಿದ್ದಾರೆಂದು ಇವರ (ಬ್ರಹ್ಮಾ)
ಆತ್ಮಕ್ಕೆ ತಿಳಿದಿದೆ. ಆದರೂ ಸಹ ನೆನಪು ಮತ್ತೆ-ಮತ್ತೆ ಮರೆತು ಹೋಗುತ್ತದೆ. ಈ ದಾದಾರವರ ಆತ್ಮವು
ಹೇಳುತ್ತದೆ, ನಾನು ಬಹಳ ಪರಿಶ್ರಮ ಪಡಬೇಕಾಗುತ್ತದೆ. ತಂದೆಯು ನನ್ನ ಜೊತೆ ಕುಳಿತಿದ್ದಾರೆ
ಆದ್ದರಿಂದ ಚೆನ್ನಾಗಿರುತ್ತದೆಯೆಂದಲ್ಲ. ತಂದೆಯು ನನ್ನ ಜೊತೆಯಿದ್ದಾರೆ. ನನ್ನ ಬಳಿಯಿದ್ದಾರೆ
ಎಂಬುದನ್ನೂ ತಿಳಿದುಕೊಂಡಿದ್ದೇನೆ, ಈ ಶರೀರಕ್ಕೆ ಅವರು ಮಾಲೀಕರಿದ್ದಂತೆ ಆದರೂ ಸಹ ತಂದೆಯ ನೆನಪನ್ನು
ಮರೆತು ಬಿಡುತ್ತೇನೆ. ತಂದೆಗೆ ಈ ಮನೆಯನ್ನು (ಶರೀರ) ಇರುವುದಕ್ಕೆ ಕೊಟ್ಟಿದ್ದೇನೆ ಆದರೆ ನಾನು ಒಂದು
ಮೂಲೆಯಲ್ಲಿ ಕುಳಿತಿದ್ದೇನೆ. ತಂದೆಯು ದೊಡ್ಡ ವ್ಯಕ್ತಿಯಾದರಲ್ಲವೆ. ವಿಚಾರ ಮಾಡುತ್ತೇನೆ, ಮಾಲೀಕನು
ನನ್ನ ಪಕ್ಕದಲ್ಲಿಯೇ ಕುಳಿತಿದ್ದಾರೆ. ಇದು ಅವರ ರಥವಾಗಿದೆ. ಅವರು ಇದರ ಸಂಭಾಲನೆ ಮಾಡುತ್ತಾರೆ.
ಶಿವ ತಂದೆಯು ನನಗೆ ತಿನ್ನಿಸುತ್ತಾರೆ. ನಾನು ಅವರ ರಥವಾಗಿದ್ದೇನೆ ಅಂದಮೇಲೆ ಏನಾದರೂ ನನಗೆ ಉಪಚಾರ
ಮಾಡುತ್ತಾರೆ. ಈ ಖುಷಿಯಲ್ಲಿ ತಿನ್ನುತ್ತೇನೆ ಆದರೆ 2-3 ನಿಮಿಷಗಳ ನಂತರ ಮರೆತು ಹೋಗುತ್ತೇನೆ. ಆಗ
ತಿಳಿಯುತ್ತೇನೆ - ಮಕ್ಕಳಿಗೆ ಇನ್ನೆಷ್ಟು ಪರಿಶ್ರಮವಾಗುವುದು! ಆದ್ದರಿಂದ ತಂದೆಯು
ತಿಳಿಸುತ್ತಿರುತ್ತಾರೆ. ಸಾಧ್ಯವಾದಷ್ಟು ತಂದೆಯನ್ನು ನೆನಪು ಮಾಡಿ. ಇದರಲ್ಲಿ ಬಹಳ-ಬಹಳ ಲಾಭವಿದೆ.
ಇಲ್ಲಂತೂ ಚಿಕ್ಕ ಮಾತಿಗೆ ಬೇಸರವಾಗಿ ವಿದ್ಯಾಭ್ಯಾಸವನ್ನು ಬಿಟ್ಟು ಬಿಡುತ್ತಾರೆ. ಬಾಬಾ, ಬಾಬಾ ಎಂದು
ಹೇಳಿ ಮತ್ತೆ ವಿಚ್ಛೇದನ ಕೊಟ್ಟು ಬಿಡುತ್ತಾರೆ. ತಂದೆಯನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ,
ಜ್ಞಾನವನ್ನು ಕೇಳುತ್ತಾರೆ, ಹೇಳುತ್ತಾರೆ. ದಿವ್ಯ ದೃಷ್ಟಿಯಿಂದ ಸ್ವರ್ಗವನ್ನೂ ನೋಡುತ್ತಾರೆ, ರಾಸ್
ಮಾಡುತ್ತಾರೆ. ಅಹೋ ಮಾಯೆ! ನನಗೆ ವಿಚ್ಛೇದನವನ್ನು ಕೊಟ್ಟು ಓಡಿ ಹೋಗುತ್ತಾರೆ. ಯಾವ ತಂದೆಯು
ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರಿಗೇ ವಿಚ್ಛೇದನವನ್ನು ಕೊಟ್ಟು ಬಿಡುತ್ತಾರೆ.
ಒಳ್ಳೊಳ್ಳೆಯ ಮಕ್ಕಳೂ ಸಹ ವಿಚ್ಛೇದನವನ್ನು ಕೊಟ್ಟು ಬಿಡುತ್ತಾರೆ.
ಈಗ ನಿಮಗೆ ಮಾರ್ಗವನ್ನು
ತಿಳಿಸಲಾಗುತ್ತದೆ. ಸ್ಥೂಲವಾಗಿ ಕೈಯನ್ನು ಹಿಡಿದುಕೊಂಡು ಕರೆದುಕೊಂಡು ಹೋಗುತ್ತಾರೆಂದಲ್ಲ. ಈ
ಕಣ್ಣುಗಳಿಂದಂತೂ ನೀವು ಕುರುಡರಲ್ಲ. ನಿಮಗೇ ಜ್ಞಾನದ ಮೂರನೆಯ ನೇತ್ರವು ಸಿಗುತ್ತದೆ. ನೀವು
ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಈ 84 ಜನ್ಮಗಳ ಚಕ್ರವು ಬುದ್ಧಿಯಲ್ಲಿ
ತಿರುಗಬೇಕು. ನಿಮ್ಮ ಹೆಸರಾಗಿದೆ – ಸ್ವದರ್ಶನ ಚಕ್ರಧಾರಿ. ಒಬ್ಬ ತಂದೆಯನ್ನೆ ನೆನಪು ಮಾಡಬೇಕಾಗಿದೆ,
ಮತ್ತ್ಯಾರ ನೆನಪೂ ಇರಬಾರದು. ಕೊನೆಯಲ್ಲಿ ಇದೇ ಸ್ಥಿತಿಯಿರಲಿ. ಹೇಗೆ ಸ್ತ್ರೀಗೆ ಪುರುಷನೊಂದಿಗೆ
ಪ್ರೀತಿಯಿರುತ್ತದೆ, ಅವರದು ದೈಹಿಕ ಪ್ರೀತಿ. ಇಲ್ಲಿ ನಿಮ್ಮದು ಆತ್ಮಿಕ ಪ್ರೀತಿಯಾಗಿದೆ. ನೀವು
ಏಳುತ್ತಾ-ಕುಳಿತುಕೊಳ್ಳುತ್ತಾ ಪತಿಯರ ಪತಿ, ತಂದೆಯರ ತಂದೆಯನ್ನು ನೆನಪು ಮಾಡಬೇಕಾಗಿದೆ.
ಪ್ರಪಂಚದಲ್ಲಿ ಇಂತಹ ಅನೇಕ ಮನೆಗಳಿವೆ, ಎಲ್ಲಿ ಸ್ತ್ರೀ-ಪುರುಷ ಹಾಗೂ ಪರಿವಾರವು ಪರಸ್ಪರ ಬಹಳ
ಪ್ರೀತಿಯಿಂದಿರುತ್ತಾರೆ. ಮನೆಯು ಸ್ವರ್ಗದಂತಿರುತ್ತದೆ. ಐದಾರು ಮಕ್ಕಳು ಒಟ್ಟಿಗೆ ಇರುತ್ತಾರೆ,
ಮುಂಜಾನೆ ಬೇಗನೆ ಎದ್ದು ಪೂಜೆಯಲ್ಲಿ ಕುಳಿತುಕೊಳ್ಳುತ್ತಾರೆ. ಮನೆಯಲ್ಲಿ ಯಾವುದೇ ಜಗಳ-ಕಲಹವಿಲ್ಲ,
ಏಕರಸವಾಗಿರುತ್ತಾರೆ. ಇನ್ನು ಕೆಲವೊಂದು ಕಡೆ ಒಂದೇ ಮನೆಯಲ್ಲಿ ಒಬ್ಬರು ರಾಧಾ ಸ್ವಾಮಿಯ
ಶಿಷ್ಯರಾಗಿದ್ದರೆ ಇನ್ನೊಬ್ಬರು ಧರ್ಮವನ್ನೇ ಮಾಡುವುದಿಲ್ಲ. ಅಂತಹವರೂ ಇರುತ್ತಾರೆ. ಚಿಕ್ಕ ಮಾತಿಗೆ
ಬೇಸರವಾಗಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಅಂತಿಮ ಜನ್ಮದಲ್ಲಿ ಪೂರ್ಣ ಪುರುಷಾರ್ಥ ಮಾಡಿ,
ತಮ್ಮ ಹಣವನ್ನೂ ಸಹ ಸಫಲ ಮಾಡಿ, ತಮ್ಮ ಕಲ್ಯಾಣ ಮಾಡಿಕೊಳ್ಳಿ ಆಗ ಭಾರತದ ಕಲ್ಯಾಣವಾಗುವುದು. ನಾವು
ಶ್ರೀಮತದನುಸಾರ ಪುನಃ ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತೇವೆಂದು ನಿಮಗೆ ತಿಳಿದಿದೆ. ನೆನಪಿನ
ಯಾತ್ರೆಯಿಂದ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿದುಕೊಳ್ಳುವುದರಿಂದ ನೀವು
ಚಕ್ರವರ್ತಿ ರಾಜರಾಗುತ್ತೀರಿ. ನಂತರ ಇಳಿಯುವುದು ಆರಂಭವಾಗುವುದು ಮತ್ತೆ ಅಂತ್ಯದಲ್ಲಿ ತಂದೆಯ ಬಳಿ
ಬಂದು ಬಿಡುತ್ತೀರಿ. ಶ್ರೀಮತದಂತೆ ನಡೆಯುವುದರಿಂದಲೇ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಂದೆಯು
ಗಲ್ಲಿಗೇರಿಸುವುದಿಲ್ಲ, ಮೊಟ್ಟ ಮೊದಲನೆಯದಾಗಿ ತಿಳಿಸುತ್ತಾರೆ - ಮಕ್ಕಳೇ, ಪವಿತ್ರರಾಗಿ ಮತ್ತು
ನನ್ನನ್ನು ನೆನಪು ಮಾಡಿ. ಸತ್ಯಯುಗದಲ್ಲಿ ಯಾರೂ ಪತಿತರಿರುವುದಿಲ್ಲ. ದೇವಿ-ದೇವತೆಗಳೂ ಸಹ ಕೆಲವರೇ
ಇರುತ್ತಾರೆ, ಮತ್ತೆ ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತದೆ. ದೇವತೆಗಳದು ಚಿಕ್ಕ ವೃಕ್ಷವಾಗಿದೆ.
ನಂತರ ಎಷ್ಟೊಂದು ವೃದ್ಧಿಯಾಗಿ ಬಿಡುತ್ತದೆ! ಆತ್ಮಗಳೆಲ್ಲರೂ ಬರುತ್ತಿರುತ್ತಾರೆ, ಇದು
ಮಾಡಿ-ಮಾಡಲ್ಪಟ್ಟ ಆಟವಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಆತ್ಮಿಕ
ಸೇವಾಧಾರಿಗಳಾಗಿ ಆತ್ಮಗಳನ್ನು ಜಾಗೃತ ಮಾಡುವ ಸೇವೆ ಮಾಡಬೇಕಾಗಿದೆ. ತನು-ಮನ-ಧನದಿಂದ ಸೇವೆ ಮಾಡಿ
ಶ್ರೀಮತದಂತೆ ರಾಮ ರಾಜ್ಯದ ಸ್ಥಾಪನೆಗೆ ನಿಮಿತ್ತರಾಗಬೇಕಾಗಿದೆ.
2. ಸ್ವದರ್ಶನ
ಚಕ್ರಧಾರಿಗಳಾಗಿ 84 ಜನ್ಮಗಳ ಚಕ್ರವನ್ನು ಬುದ್ಧಿಯಲ್ಲಿ ತಿರುಗಿಸುತ್ತಿರಬೇಕಾಗಿದೆ. ಒಬ್ಬ
ತಂದೆಯನ್ನೇ ನೆನಪು ಮಾಡಬೇಕಾಗಿದೆ. ಬೇರೆ ಯಾರನ್ನೂ ನೆನಪು ಮಾಡಬಾರದು. ಎಂದೂ ಯಾವುದೇ ಮಾತಿನಿಂದ
ಬೇಸರವಾಗಿ ವಿದ್ಯೆಯನ್ನು ಬಿಟ್ಟು ಬಿಡಬಾರದು.
ವರದಾನ:
ಸಂಘಟನೆಯಲ್ಲಿರುತ್ತಾ ಲಕ್ಷ್ಯ ಮತ್ತು ಲಕ್ಷಣವನ್ನು ಸಮಾನ ಮಾಡುವಂತಹ ಸದಾ ಶಕ್ತಿಶಾಲಿ ಆತ್ಮ ಭವ.
ಸಂಘಟನೆಯಲ್ಲಿ
ಒಬ್ಬರಿನ್ನೊಬ್ಬರನ್ನು ನೋಡುತ್ತಾ ಉಮ್ಮಂಗ-ಉತ್ಸಾಹವೂ ಬರುತ್ತದೆ, ಅಂದಾಗ ಹುಡುಗಾಟಿಕೆಯೂ ಬರುತ್ತದೆ.
ಯೋಚಿಸುತ್ತಾರೆ - ಇವರೂ ಮಾಡುತ್ತಾ, ನಾವೂ ಮಾಡಿದೆವೆಂದರೆ ಏನಾಯಿತು. ಆದ್ದರಿಂದ ಸಂಘಟನೆಯಿಂದ
ಶ್ರೇಷ್ಠರಾಗುವ ಸಹಯೋಗವನ್ನು ತೆಗೆದುಕೊಳ್ಳಿರಿ. ಪ್ರತೀ ಕರ್ಮವನ್ನು ಮಾಡುವುದಕ್ಕೆ ಮೊದಲು
ವಿಶೇಷವಾಗಿ ಈ ಗಮನ ಅಥವ ಲಕ್ಷ್ಯವಿರಲಿ - ನಾನು ಸ್ವಯಂನ್ನು ಸಂಪನ್ನ ಮಾಡಿಕೊಂಡು ಸ್ಯಾಂಪಲ್
ಆಗಬೇಕಾಗಿದೆ. ನಾನು ಮಾಡಿ ಅನ್ಯರಿಗೂ ಮಾಡಿಸಬೇಕಾಗಿದೆ. ನಂತರ ಮತ್ತೆ-ಮತ್ತೆ ಈ ಲಕ್ಷ್ಯವನು ಇಮರ್ಜ್
ಮಾಡಿಕೊಳ್ಳಿರಿ. ಲಕ್ಷ್ಯ ಮತ್ತು ಲಕ್ಷಣವನ್ನು ಸರಿ ಸಮಾನ ಮಾಡುತ್ತಾ ನಡೆಯುತ್ತೀರೆಂದರೆ
ಶಕ್ತಿಶಾಲಿಯಾಗಿ ಬಿಡುತ್ತೀರಿ.
ಸ್ಲೋಗನ್:
ಅಂತ್ಯದಲ್ಲಿ
ತೀವ್ರವಾಗಿ ಹೋಗಬೇಕೆಂದರೆ ಸಾಧಾರಣ ಮತ್ತು ವ್ಯರ್ಥ ಸಂಕಲ್ಪಗಳಲ್ಲಿ ಸಮಯವನ್ನು ಕಳೆಯಬಾರದು.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಯಾರು
ಪ್ರೀಯರಾಗಿರುತ್ತಾರೆ, ಅವರನ್ನು ನೆನಪು ಮಾಡಲಾಗುವುದಿಲ್ಲ, ಅವರ ನೆನಪು ಸ್ವತಃ ಬರುತ್ತದೆ. ಕೇವಲ
ಹೃದಯದ ಪ್ರೀತಿಯಿರಲಿ, ಸತ್ಯ ಮತ್ತು ನಿಸ್ವಾರ್ಥವಾಗಿರಲಿ. ಯಾವಾಗ ನನ್ನ ಬಾಬಾ, ಪ್ರಿಯ ಬಾಬಾ ಎಂದು
ಹೇಳುತ್ತೀರಿ - ಪ್ರಿಯರನ್ನು ಎಂದೂ ಮರೆಯಲು ಸಾಧ್ಯವಿಲ್ಲ ಮತ್ತು ನಿಸ್ವಾರ್ಥ ಪ್ರೀತಿ ತಂದೆಯನ್ನು
ಬಿಟ್ಟರೆ ಬೇರೆ ಯಾವ ಆತ್ಮನಿಂದಲೂ ಸಿಗಲು ಸಾಧ್ಯವಿಲ್ಲ ಅದಕ್ಕೆ ಎಂದು ಸ್ವಾರ್ಥ ಭಾವದಿಂದ ನೆನಪು
ಮಾಡಬೇಡಿ, ನಿಸ್ವಾರ್ಥ ಪ್ರೀತಿಯಲ್ಲಿ ಲವಲೀನರಾಗಿಬಿಡಿ.