07.11.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಸಂಗದೋಷವು ಬಹಳ ನಷ್ಟ ಮಾಡುತ್ತದೆ, ಆದ್ದರಿಂದ ಸಂಗದೋಷದಿಂದ ತಮ್ಮನ್ನು ಬಹಳ-ಬಹಳ ಸಂಭಾಲನೆ
ಮಾಡುತ್ತಾ ಇರಿ, ಇದು ಬಹಳ ಕೆಟ್ಟದ್ದಾಗಿದೆ”
ಪ್ರಶ್ನೆ:
ಮೂರು ಪ್ರಕಾರದ
ಬಾಲ್ಯವು ಯಾವುದಾಗಿದೆ? ಯಾವ ಬಾಲ್ಯವನ್ನು ಎಂದೂ ಮರೆಯಬಾರದು?
ಉತ್ತರ:
ಒಂದನೇ
ಬಾಲ್ಯವಾಗಿದೆ - ಲೌಕಿಕ ತಾಯಿ-ತಂದೆಯ ಬಳಿ ಜನ್ಮ ಪಡೆಯುತ್ತಿದ್ದಂತೆಯೇ ಸಿಕ್ಕಿರುವುದು. ಎರಡನೆಯದು
- ಗುರುವಿಗೆ ಶಿಷ್ಯರಾದಾಗ, ಮೂರನೆಯದು - ಲೌಕಿಕ ತಾಯಿ-ತಂದೆಯನ್ನು ಬಿಟ್ಟು ಅಲೌಕಿಕ ತಂದೆ-ತಾಯಿಯ
ಮಕ್ಕಳಾದಿರಿ, ಅಲೌಕಿಕ ಬಾಲ್ಯ ಅರ್ಥಾತ್ ಈಶ್ವರನ ಮಡಿಲಿನ ಮಕ್ಕಳಾದಿರಿ. ಈಶ್ವರನ ಮಕ್ಕಳಾದಿರಿ
ಅರ್ಥಾತ್ ಮರುಜೀವಿಗಳಾಗಿ ಬಿಟ್ಟಿರಿ. ಈ ಅಲೌಕಿಕ ಬಾಲ್ಯವನ್ನು ಎಂದೂ ಮರೆಯಬಾರದು. ಒಂದುವೇಳೆ
ಮರೆತರೆ ಬಹಳ ಅಳಬೇಕಾಗುವುದು. ಅಳುವುದು ಎಂದರೆ ಮಾಯೆಯ ಪೆಟ್ಟು ತಿನ್ನುವುದು.
ಗೀತೆ:
ಬಾಲ್ಯದ
ದಿನಗಳನ್ನು ಎಂದೂ ಮರೆಯಬಾರದು............
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಅರ್ಥವನ್ನು ತಿಳಿದುಕೊಂಡಿರಿ. ಬಾಲ್ಯವು ಮೂರು
ಪ್ರಕಾರದ್ದಾಗಿದೆ. ಒಂದು ಲೌಕಿಕ ಬಾಲ್ಯ, ಇನ್ನೊಂದು ನಿವೃತ್ತಿ ಮಾರ್ಗದ ಬಾಲ್ಯ, ಗೃಹಸ್ಥವನ್ನು
ಬಿಟ್ಟು ಜೀವಿಸುತ್ತಿದ್ದಂತೆಯೇ ಸತ್ತು ಗುರುವಿಗೆ ಅಥವಾ ಸನ್ಯಾಸಿಗಳಿಗೆ ಶಿಷ್ಯರಾಗುತ್ತಾರೆ.
ಗುರುಗಳೇನು ಶಿಷ್ಯರಿಗೆ ತಂದೆಯಲ್ಲ, ಅವರ ಶಿಷ್ಯರಾಗಿ ಅವರ ಜೊತೆಯಿರುತ್ತಾರೆ. ತಂದೆಯ
ಮಕ್ಕಳಾಗುವುದು ಎಂದರೆ ಅದು ಬಾಲ್ಯವಾಗಿದೆ. ಅವರೂ ಸಹ ಜೀವಿಸಿದ್ದಂತೆಯೇ ಸತ್ತು ಗುರುವಿನ
ಶಿಷ್ಯರಾಗುತ್ತಾರೆ, ಕಾಡಿಗೆ ಹೊರಟುಹೋಗುತ್ತಾರೆ. ಮೂರನೆಯದಾಗಿದೆ- ನಿಮ್ಮದು ಇದು ಅದ್ಭುತವಾದ
ಮರುಜೀವಾ ಜನ್ಮ. ಒಬ್ಬ ಮಾತಾಪಿತರನ್ನು ಬಿಟ್ಟು ಇನ್ನೊಬ್ಬ ಮಾತಾಪಿತರ ಮಕ್ಕಳಾಗುತ್ತೀರಿ, ಇವರು
ಆತ್ಮಿಕ ತಂದೆ-ತಾಯಿಯಾಗಿದ್ದಾರೆ. ನಿಮ್ಮದು ಇದು ಮರುಜೀವ ಜನ್ಮವಾಗಿದೆ. ಈಶ್ವರೀಯ ಮಡಿಲಿನಲ್ಲಿ
ಆತ್ಮೀಯ ಜನ್ಮವಾಗಿದೆ. ನಿಮ್ಮೊಂದಿಗೆ ಈಗ ಆತ್ಮಿಕ ತಂದೆಯು ಮಾತನಾಡುತ್ತಿದ್ದಾರೆ. ಅವರೆಲ್ಲರೂ
ಲೌಕಿಕ ತಂದೆಯರಾಗಿದ್ದಾರೆ, ಇವರು ಆತ್ಮಿಕ ತಂದೆಯಾಗಿದ್ದಾರೆ ಆದ್ದರಿಂದಲೇ ಹಾಡುತ್ತಾರೆ - ತಂದೆಯ
ಮಕ್ಕಳಾಗಿ ಮರುಜೀವಿಗಳಾಗಿ ಮತ್ತೆ ಇದನ್ನು ಮರೆಯಬಾರದು. ಶಿವ ತಂದೆಯು ಶ್ರೇಷ್ಠಾತಿ ಶ್ರೇಷ್ಠ
ಭಗವಂತನಾಗಿದ್ದಾರೆ. ಯಾರಾದರೂ ಗೀತೆ ಇತ್ಯಾದಿಗಳ ಮೇಲೆ ವಾದ ಮಾಡುತ್ತಾರೆಂದರೆ ಮೊಟ್ಟ ಮೊದಲು ಈ
ಮಾತನ್ನು ಕೇಳಬೇಕಾಗಿದೆ – ಶ್ರೇಷ್ಠಾತಿ ಶ್ರೇಷ್ಠ ಭಗವಂತ ಯಾರು? ಬಹ್ಮಾ ದೇವತಾಯ ನಮಃ, ವಿಷ್ಣು
ದೇವತಾಯ ನಮಃ ಎಂದು ಹೇಳುತ್ತಾರೆ ನಂತರ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ. ಶಿವನು ಎಲ್ಲಾ
ಧರ್ಮದವರಿಗೂ ತಂದೆಯಾಗಿದ್ದಾರೆ, ಮೊಟ್ಟ ಮೊದಲು ಈ ಮಾತನ್ನು ತಿಳಿಸಿರಿ - ಆ ಶ್ರೇಷ್ಠಾತಿ ಶ್ರೇಷ್ಠ
ತಂದೆಯು ಒಬ್ಬರೇ ಆಗಿದ್ದಾರೆ. ಬ್ರಹ್ಮಾ-ವಿಷ್ಣುವಿಗೆ ಭಗವಂತನೆಂದು ಹೇಳುವುದಿಲ್ಲ. ಮೊದಲು ಇದನ್ನು
ಪಕ್ಕಾ ಮಾಡಿಸಿರಿ - ಪರಮಪಿತನು ಒಬ್ಬರೇ ಆಗಿದ್ದಾರೆ, ಅವರು ನಿರಾಕಾರನಾಗಿದ್ದಾರೆ. ಅವರಿಗೆ
ರಚಯಿತನೆಂತಲೂ ಹೇಳುತ್ತಾರೆ, ಪತಿತ-ಪಾವನನೆಂತಲೂ ಹೇಳುತ್ತಾರೆ ಅಂದಮೇಲೆ ತಂದೆಯಿಂದ ಅವಶ್ಯವಾಗಿ
ಆಸ್ತಿಯು ಸಿಗುವುದು. ಇದನ್ನು ವಿಚಾರ ಮಾಡಿ - ಬೇಹದ್ದಿನ ತಂದೆಯಿಂದ ಆಸ್ತಿಯು ಯಾರಿಗೆ ಸಿಕ್ಕಿತು?
ತಂದೆಯು ಹೊಸ ಪ್ರಪಂಚವನ್ನು ರಚಿಸುವವರಾಗಿದ್ದಾರೆ, ಅವರ ಹೆಸರಾಗಿದೆ - ಶಿವ. ಶಿವ ಪರಮಾತ್ಮಾಯ ನಮಃ
ಎಂದು ಹೇಳುತ್ತಾರೆ, ಅವರ ಜಯಂತಿಯನ್ನೂ ಆಚರಿಸುತ್ತಾರೆ. ಅವರೇ ಪತಿತ-ಪಾವನ, ರಚಯಿತ,
ಜ್ಞಾನಪೂರ್ಣನಾಗಿದ್ದಾರೆ ಎಂದು ಹೇಳಿದಾಗ ಸರ್ವವ್ಯಾಪಿಯ ಮಾತು ಹೊರಟು ಹೋಗುತ್ತದೆ. ಕರ್ತವ್ಯದ
ಆಧಾರದ ಮೇಲೆ ಅವರ ಮಹಿಮೆಯಿದೆ. ಯಾರು ಕರ್ತವ್ಯವನ್ನು ಮಾಡಿ ಹೋಗುತ್ತಾರೆಯೋ ಅವರದು ನಂತರ ಮಹಿಮೆ
ಮಾಡಲಾಗುತ್ತದೆ. ಶ್ರೇಷ್ಠಾತಿ ಶ್ರೇಷ್ಠನು ತಂದೆಯಾಗಿದ್ದಾರೆ, ಅವರಿಗೆ ಮುಕ್ತಿದಾತನೆಂದು
ಹೇಳುತ್ತಾರೆ. ದಯಾಸಾಗರ, ದುಃಖಹರ್ತ-ಸುಖಕರ್ತನೆಂದೂ ಹೇಳುತ್ತಾರೆ, ಮಾರ್ಗದರ್ಶಕನೆಂದೂ ಹೇಳುತ್ತಾರೆ.
ಯಾವುದೇ ಹೊಸ ಸ್ಥಾನಕ್ಕೆ ಹೋಗುತ್ತಾರೆಂದರೆ ಮಾರ್ಗದರ್ಶಕರನ್ನು ಕರೆದುಕೊಂಡು ಹೋಗುತ್ತಾರೆ.
ವಿದೇಶದಿಂದ ಬರುತ್ತಾರೆಂದರೆ ಅವರಿಗೆ ಎಲ್ಲವನ್ನು ತೋರಿಸುವುದಕ್ಕಾಗಿ ಇಲ್ಲಿನ ಮಾರ್ಗದರ್ಶಕರನ್ನು
ನೇಮಿಸುತ್ತಾರೆ. ತೀರ್ಥ ಯಾತ್ರೆಯಲ್ಲಿ ಕರೆದುಕೊಂಡು ಹೋಗುವುದಕ್ಕೂ ಮಾರ್ಗದರ್ಶಕರಿರುತ್ತಾರೆ. ಈಗ
ತಂದೆಯನ್ನು ಮಾರ್ಗದರ್ಶಕನೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಎಲ್ಲಿಗೋ ಕರೆದುಕೊಂಡು ಹೋಗಲು
ಮಾರ್ಗದರ್ಶನ ನೀಡಿರಬೇಕಲ್ಲವೆ. ಅವರಿಗೆ ಸರ್ವವ್ಯಾಪಿ ಎಂದು ಹೇಳಿದರೆ ಈ ಮಾತುಗಳೆಲ್ಲವೂ ಸಮಾಪ್ತಿ
ಆಗಿ ಬಿಡುತ್ತದೆ ಆದ್ದರಿಂದ ಮೊಟ್ಟ ಮೊದಲು ತಿಳಿಸಿರಿ - ಎಲ್ಲರಿಗೆ ತಂದೆಯು ಒಬ್ಬರೇ ಆಗಿದ್ದಾರೆ.
ಸರ್ವ ಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ, ಅದು ಭಗವಂತನೇ ಹೇಳಿರುವಂತಹ ಗೀತೆಯಾಗಿದೆ. ಅದನ್ನು
ಸಿದ್ಧಮಾಡಿ ಬಿಟ್ಟರೆ ನಂತರ ಅದರ ಮರಿ ಮಕ್ಕಳೆಲ್ಲವೂ ಸಿದ್ಧರಾಗಿ ಬಿಡುತ್ತಾರೆ. ಮೊಟ್ಟ ಮೊದಲಿಗೆ
ಸತ್ಯಗೀತೆಯ ಸಾರವನ್ನು ತಿಳಿಸಬೇಕು. ಶಿವ ಭಗವಾನುವಾಚ - ಈಗ ಶಿವ ತಂದೆಯ ಚರಿತ್ರೆ ಏನಿರಬಹುದು!
ಅವರು ಇಷ್ಟನ್ನೇ ಹೇಳುತ್ತಾರೆ- ನಾನು ಈ ಶರೀರದ ಆಧಾರವನ್ನು ತೆಗೆದುಕೊಂಡು ನಿಮ್ಮನ್ನು ಪತಿತರಿಂದ
ಪಾವನರನ್ನಾಗಿ ಮಾಡುವ ಮಾರ್ಗವನ್ನು ತಿಳಿಸುತ್ತೇನೆ. ಮಕ್ಕಳಿಗೆ ರಾಜಯೋಗವನ್ನು ಕಲಿಸಲು ಬರುತ್ತೇನೆ.
ಇದರಲ್ಲಿ ಚರಿತ್ರೆಯನ್ನೇನು ಮಾಡುತ್ತೀರಿ! ಇವರಂತೂ ವೃದ್ಧನಾಗಿದ್ದಾರೆ. ಕೇವಲ ಬಂದು ಮಕ್ಕಳಿಗೆ
ಓದಿಸುತ್ತಾರೆ. ಪತಿತರನ್ನು ಪಾವನರನ್ನಾಗಿ ಮಾಡಲು ರಾಜಯೋಗವನ್ನು ಕಲಿಸುತ್ತಾರೆ. ನೀವು
ಸತ್ಯಯುಗದಲ್ಲಿ ಹೋಗಿ ರಾಜ್ಯಭಾರ ಮಾಡುತ್ತೀರಿ. ನಿಮಗೆ ಆಸ್ತಿಯು ಸಿಗುತ್ತದೆ ಉಳಿದೆಲ್ಲಾ ಆತ್ಮರು
ಮುಕ್ತಿಧಾಮ, ನಿರಾಕಾರಿ ಪ್ರಪಂಚದಲ್ಲಿ ಇರುತ್ತಾರೆ. ಇದು ಬಹಳ ಸಹಜ ಮಾತಾಗಿದೆ. ಭಾರತದಲ್ಲಿ
ದೇವಿ-ದೇವತೆಗಳ ರಾಜ್ಯವಿತ್ತು. ಒಂದೇ ಧರ್ಮವಿತ್ತು. ಈಗ ಕಲಿಯುಗದಲ್ಲಿ ಎಷ್ಟೊಂದು ಜನಸಂಖ್ಯೆಯಿದೆ!
ಸತ್ಯಯುಗದಲ್ಲಿ ಬಹಳ ಕಡಿಮೆಯಿರುತ್ತದೆ. ಪರಮಪಿತ ಪರಮಾತ್ಮನು ಒಂದು ಧರ್ಮದ ಸ್ಥಾಪನೆ ಅನೇಕ ಧರ್ಮಗಳ
ವಿನಾಶ ಮಾಡಿಸಲು ಬರುತ್ತಾರೆ. ಎಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಅಲ್ಲಿ ಯಾವುದೇ
ಅಪವಿತ್ರ ಆತ್ಮನು ಇರಲು ಸಾಧ್ಯವಿಲ್ಲ. ಅವರ ಹೆಸರೇ ಆಗಿದೆ - ಪತಿತ-ಪಾವನ, ಸರ್ವರ ಸದ್ಗತಿದಾತ. ಇದು
ಹಳೆಯ ಪ್ರಪಂಚ ಕಬ್ಬಿಣದ ಯುಗವಾಗಿದೆ. ಸತ್ಯಯುಗಕ್ಕೆ ಸ್ವರ್ಣಿಮ ಯುಗವೆಂದು ಹೇಳಲಾಗುತ್ತದೆ. ಯಾರು
ದೇವತೆಗಳ ಪೂಜಾರಿಗಳಿದ್ದಾರೆಯೋ ಅವರು ಸಹಜವಾಗಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಯಾರು
ಪೂಜ್ಯರಾಗಿದ್ದರೋ ಅವರೇ ಪೂಜಾರಿಗಳಾಗುತ್ತಾರೆ ಆದ್ದರಿಂದ ಮೊಟ್ಟ ಮೊದಲು ತಂದೆಯ ಪರಿಚಯ
ಕೊಡಬೇಕಾಗಿದೆ - ನಾವು ಅವರ ಮಕ್ಕಳಾಗಿದ್ದೇವೆ, ಇದನ್ನು ಮರೆಯಬೇಡಿ. ಮರೆತರೆ ಅಳಬೇಕಾಗುವುದು.
ಒಂದಲ್ಲ ಒಂದು ಮಾಯೆಯ ಪೆಟ್ಟು ಬೀಳುವುದು. ದೇಹೀ-ಅಭಿಮಾನಿಗಳಾಗಬೇಕಾಗಿದೆ. ನಾವಾತ್ಮರು ಹಿಂತಿರುಗಿ
ತಂದೆಯ ಬಳಿಗೆ ಹೋಗಬೇಕಾಗಿದೆ. ಇಷ್ಟೊಂದು ಮನುಷ್ಯರು ಸಾಯುತ್ತಾರೆಂದರೆ ಮತ್ತೆ ಯಾರು-ಯಾರಿಗಾಗಿ
ಅಳುವರು? ಭಾರತದಲ್ಲಿ ಎಲ್ಲರಿಗಿಂತ ಜಾಸ್ತಿ ಅಳುತ್ತಾರೆ, ಮೊದಲ 12 ತಿಂಗಳು ಅಯ್ಯೊ ಅಯ್ಯೊ
ಎನ್ನುತ್ತಾರೆ, ಹಣೆ ಬಡಿದುಕೊಳ್ಳುತ್ತಾ ಇರುತ್ತಾರೆ. ಇದು ಮೃತ್ಯುಲೋಕದ ರೀತಿ ಪದ್ಧತಿಯಾಗಿದೆ.
ತಂದೆಯು ನಿಮಗೆ ಈಗ ಅಮರಲೋಕದ ಎಲ್ಲಾ ರೀತಿ ಪದ್ಧತಿಗಳನ್ನು ಕಲಿಸುತ್ತಿದ್ದಾರೆ. ಈಗ ನಿಮಗೆ ಇಡೀ
ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿದೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ,
ಇದೆಲ್ಲವೂ ಸಮಾಪ್ತಿಯಾಗಲಿದೆ, ನಾವೀಗ ಮನೆಗೆ ಹೋಗುತ್ತಿದ್ದೇವೆ. ನಾಟಕವು ಮುಕ್ತಾಯವಾಗುತ್ತಿದೆ.
ನಾಟಕದಲ್ಲಿ ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ ಅಂದಮೇಲೆ ಯಾರು-ಯಾರಲ್ಲಿ ಮೋಹವನ್ನಿಡುತ್ತೀರಿ! ಇವರು
ಹೋಗಿ ಇನ್ನೊಂದು ಪಾತ್ರವನ್ನು ಅಭಿನಯಿಸಬೇಕಾಗಿದೆ ಎಂಬುದನ್ನೂ ತಿಳಿದುಕೊಂಡಿದ್ದೀರಿ ಅಂದಮೇಲೆ
ಅಳುವ ಅವಶ್ಯಕತೆಯೇನಿದೆ! ಪ್ರತಿಯೊಬ್ಬರ ಪಾತ್ರವು ನಿಗಧಿತವಾಗಿದೆ. ಹೇಗೆ ತಂದೆಯು ಜ್ಞಾನ ಸಾಗರ,
ಆನಂದ ಸಾಗರ, ಪ್ರೀತಿಯ ಸಾಗರನಾಗಿದ್ದಾರೆ ಅಂದಮೇಲೆ ತಂದೆಯನ್ನು ಫಾಲೋ ಮಾಡಿ ಅದೇರೀತಿ ಆಗಬೇಕಾಗಿದೆ.
ಸಾಗರದಿಂದ ನದಿಗಳು ಉಕ್ಕುತ್ತವೆ ಎಲ್ಲರೂ ನಂಬರ್ವಾರ್ ಇದ್ದಾರೆ. ಕೆಲವರು ಚೆನ್ನಾಗಿ ಮಳೆ
ಸುರಿಸುತ್ತಾರೆ, ಅನೇಕರನ್ನು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತಾರೆ, ಅಂಧರಿಗೆ
ಊರುಗೋಲಾಗುತ್ತಾರೆ. ತಂದೆಗೆ ಬಹಳ ಮಂದಿ ಸಹಯೋಗಿಗಳು ಬೇಕು. ತಂದೆಯು ತಿಳಿಸುತ್ತಾರೆ - ನೀವು
ಅಂಧರಿಗೆ ಊರುಗೋಲಾಗಿರಿ, ಎಲ್ಲರಿಗೆ ಮಾರ್ಗವನ್ನು ತಿಳಿಸಿರಿ, ಕೇವಲ ಒಬ್ಬ ಬ್ರಾಹ್ಮಿಣಿ ಮಾತ್ರ
ಅಂಧರಿಗೆ ಊರುಗೋಲಾಗುವುದಲ್ಲ, ನೀವೆಲ್ಲರೂ ಆಗಬೇಕಾಗಿದೆ. ನಿಮಗೆ ಜ್ಞಾನದ ಮೂರನೇ ನೇತ್ರವು
ಸಿಕ್ಕಿದೆ, ಇದಕ್ಕೆ ಮೂರನೇ ನೇತ್ರದ ಕಥೆ ಎಂದು ಹೇಳಲಾಗುತ್ತದೆ, ಆತ್ಮಕ್ಕೆ ಇದು ದಿವ್ಯ
ನೇತ್ರವಾಗಿದೆ. ಮನುಷ್ಯರಂತೂ ಏನನ್ನೂ ತಿಳಿದುಕೊಂಡಿಲ್ಲ, ತುಚ್ಛ ಬುದ್ಧಿಯವರಾಗಿ ಬಿಟ್ಟಿದ್ದಾರೆ.
ನಮ್ಮ ಧರ್ಮವನ್ನು ಯಾರು ಸ್ಥಾಪನೆ ಮಾಡುತ್ತಾರೆ ಎಂಬುದನ್ನೇ ಭಾರತವಾಸಿಗಳು ತಿಳಿದುಕೊಂಡಿಲ್ಲ.
ತಂದೆಯ ಜನ್ಮವು ಇಲ್ಲಿಯೇ ಆಗುತ್ತದೆ, ಶಿವ ಜಯಂತಿಯನ್ನೂ ಆಚರಿಸುತ್ತಾರೆ ಅಂದಮೇಲೆ ಅವರು
ಸರ್ವವ್ಯಾಪಿಯಾಗಲು ಹೇಗೆ ಸಾಧ್ಯ! ತಂದೆ ಮತ್ತು ರಚನೆಯನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ.
ಋಷಿ ಮುನಿಗಳೆಲ್ಲರೂ ಸಹ ನೇತಿ-ನೇತಿ (ಗೊತ್ತಿಲ್ಲ-ಗೊತ್ತಿಲ್ಲ) ಎಂದು ಹೇಳುತ್ತಾ ಹೋದರು ಆದರೆ ಒಂದು
ದೊಡ್ಡ ತಪ್ಪು ಮಾಡಿದ್ದಾರೆ - ಪರಮಾತ್ಮನನ್ನು ಸರ್ವವ್ಯಾಪಿ ಎಂದು ಹೇಳಿಬಿಟ್ಟಿದ್ದಾರೆ. ನೀವು
ಸಿದ್ಧ ಮಾಡಿ ತಿಳಿಸಿರಿ - ಅವರು ಸರ್ವರ ತಂದೆಯಾಗಿದ್ದಾರೆ, ಪತಿತ-ಪಾವನ, ಮುಕ್ತಿದಾತನಾಗಿದ್ದಾರೆ.
ಹಳೆಯ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ದುಃಖದ ಮಾತಿರುವುದಿಲ್ಲ,
ಶಾಸ್ತ್ರಗಳಲ್ಲಿ ಏನೇನು ಬರೆದುಬಿಟ್ಟಿದ್ದಾರೆ. ಲಕ್ಷ್ಮೀ-ನಾರಾಯಣರಿಗೂ ಸಹ ಅಲ್ಲಿ ಅವರಿಗೆ
ವಿಕಾರವಿಲ್ಲದೆ ಮಕ್ಕಳು ಹೇಗೆ ಜನಿಸುವರು ಎಂದು ಕೇಳುತ್ತಾರೆ. ಅರೆ! ಅವರಿಗೆ ಸರ್ವಗುಣ ಸಂಪನ್ನರು,
16 ಕಲಾ ಸಂಪೂರ್ಣರು, ಸಂಪೂರ್ಣ ನಿರ್ವಿಕಾರಿಗಳು ಎಂದು ಹೇಳಲಾಗುತ್ತದೆ. ಅದು ನಿರ್ವಿಕಾರಿ
ಪ್ರಪಂಚವಾಗಿದೆ, ಇದಕ್ಕೆ ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ ಅಂದಮೇಲೆ ಅಲ್ಲಿಯೂ
ವಿಕಾರವಿರುತ್ತದೆ ಎಂದು ಹೇಗೆ ಹೇಳುವಿರಿ? ಮೊಟ್ಟ ಮೊದಲು ಎಲ್ಲಿಯವರೆಗೆ ತಂದೆಯನ್ನು
ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಮತ್ತೇನನ್ನೂ ಅರಿತುಕೊಳ್ಳಲು ಸಾಧ್ಯವಿಲ್ಲ. ಸರ್ವವ್ಯಾಪಿ
ಎಂದು ಹೇಳುವುದು ಬಹಳ ದೊಡ್ಡ ತಪ್ಪಾಗಿದೆ. ತಂದೆಯನ್ನು ಅರಿತುಕೊಂಡಾಗಲೇ ಆ ತಪ್ಪಿನಿಂದ ಹೊರ ಬರುವರು.
ನಿಶ್ಚಯ ಮಾಡಿಕೊಳ್ಳಿ - ಬಾಬಾ, ತಮ್ಮಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವುದಕ್ಕಾಗಿ ನಾವು ಪುನಃ
ನಿಮ್ಮವರಾಗಿದ್ದೇವೆ. ಶಾಸ್ತ್ರಗಳಲ್ಲಿ ಏನೇನೋ ಬರೆದು ಬಿಟ್ಟಿದ್ದಾರೆ, ಲಕ್ಷ್ಮೀ-ನಾರಾಯಣರನ್ನು
ಸತ್ಯಯುಗದಲ್ಲಿ ತೋರಿಸುತ್ತಾರೆ ಮತ್ತು ಬಾಲ್ಯದ ರಾಧಾಕೃಷ್ಣರನ್ನು ದ್ವಾಪರದಲ್ಲಿ ತೆಗೆದುಕೊಂಡು
ಹೋಗಿದ್ದಾರೆ. ಕೃಷ್ಣನಂತೂ ಸ್ವರ್ಗದ ರಾಜಕುಮಾರನಾಗಿದ್ದಾನೆ, ನಂತರ ಕೃಷ್ಣನದು ಪ್ರತೀ ಜನ್ಮದಲ್ಲಿ
ಮುಖ ಲಕ್ಷಣಗಳು ಬದಲಾಗುತ್ತಾ ಹೋಗುತ್ತವೆ. ಒಂದೇ ರೀತಿಯ ರೂಪವು ಮತ್ತೆಂದೂ ಇರಲು ಸಾಧ್ಯವಿಲ್ಲ.
ಕೃಷ್ಣನು ಮತ್ತೆ ಅದೇ ರೂಪದಿಂದ ದ್ವಾಪರ ಯುಗದಲ್ಲಿ ಬರಲು ಸಾಧ್ಯವೇ! ಇದು ಅಸಂಭವವಾಗಿದೆ.
ನಾವು ಮೂಲತಃ ಮೂಲವತನದ
ನಿವಾಸಿಗಳಾಗಿದ್ದೇವೆ, ಇದು ನಮ್ಮ ಮಧುರಮನೆಯಾಗಿದೆ, ಅದಕ್ಕಾಗಿಯೇ ಮನುಷ್ಯರು ಭಕ್ತಿ ಮಾಡುತ್ತಾರೆ
ಎಂಬುದು ನಿಮಗೆ ತಿಳಿದಿದೆ. ನಮಗೆ ಶಾಂತಿ ಬೇಕೆಂದು ಹೇಳುತ್ತಾರೆ, ಆತ್ಮಕ್ಕೆ ಪಾತ್ರವನ್ನು
ಅಭಿನಯಿಸುವುದಕ್ಕಾಗಿ ಕರ್ಮೇಂದ್ರಿಯಗಳು ಸಿಕ್ಕಿವೆ ಅಂದಮೇಲೆ ಶಾಂತಿಯಲ್ಲಿರಲು ಹೇಗೆ ಸಾಧ್ಯ!
ಶಾಂತಿಗಾಗಿಯೇ ಹಠಯೋಗಗಳನ್ನು ಕಲಿಯುತ್ತಾರೆ, ಗುಹೆಗಳಲ್ಲಿ ಕುಳಿತುಕೊಳ್ಳುತ್ತಾರೆ. ಯಾರಾದರೂ ಒಂದು
ತಿಂಗಳು ಗುಹೆಯಲ್ಲಿ ಕುಳಿತುಕೊಂಡರೆ ಅದು ಅವರಿಗಾಗಿ ಶಾಂತಿಧಾಮವೇ!! ನೀವು ತಿಳಿದುಕೊಂಡಿದ್ದೀರಿ,
ನಾವೀಗ ಶಾಂತಿಧಾಮದಲ್ಲಿ ಹೋಗಿ ಮತ್ತೆ ಸುಖಧಾಮದಲ್ಲಿ ಪಾತ್ರವನ್ನು ಅಭಿನಯಿಸುತ್ತೇವೆ. ಮನುಷ್ಯರಾದರೆ
ಯಾರು ಸುಖಿಯಾಗಿದ್ದಾರೆಯೋ ಅವರಿಗೆ ಇದು ಸ್ವರ್ಗವಾಗಿದೆ, ದುಃಖಿಯಾಗಿರುವವರಿಗೆ ಇದು ನರಕವಾಗಿದೆ
ಎಂದು ತಿಳಿಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಸ್ವರ್ಗವು ಹೊಸ ಪ್ರಪಂಚ ಮತ್ತು ನರಕವೆಂದು
ಹಳೆಯ ಪ್ರಪಂಚಕ್ಕೆ ಹೇಳಲಾಗುತ್ತದೆ. ಭಗವಾನುವಾಚ - ಈ ಭಕ್ತಿ, ಯಜ್ಞ, ತಪ, ದಾನ, ಪುಣ್ಯ
ಇತ್ಯಾದಿಗಳನ್ನು ಮಾಡುವುದು ಭಕ್ತಿಮಾರ್ಗವಾಗಿದೆ, ಇದರಲ್ಲಿ ಯಾವುದೇ ಸಾರವಿಲ್ಲ.
ಸತ್ಯ-ತ್ರೇತಾಯುಗಕ್ಕೆ ಬ್ರಹ್ಮಾನ ದಿನವೆಂದು ಹೇಳಲಾಗುತ್ತದೆ. ಬ್ರಹ್ಮಾನ ದಿನವೇ ನೀವು ಬ್ರಾಹ್ಮಣರ
ದಿನವಾಗಿದೆ ನಂತರ ನಿಮ್ಮದು ರಾತ್ರಿಯು ಆರಂಭವಾಗುತ್ತದೆ. ನೀವು ಮೊಟ್ಟ ಮೊದಲು ಸತ್ಯಯುಗಕ್ಕೆ
ಹೋಗುತ್ತೀರಿ ನಂತರ ನೀವೇ ಚಕ್ರದಲ್ಲಿ ಬರುತ್ತೀರಿ. ಬ್ರಾಹ್ಮಣ, ದೇವತಾ, ಕ್ಷತ್ರಿಯ, ವೈಶ್ಯ,
ಶೂದ್ರರು ನೀವೇ ಆಗುತ್ತೀರಿ. ನೀವು ಶಿವ ಭಗವಾನುವಾಚ ಎಂದು ಹೇಳುತ್ತೀರಿ ಮತ್ತು ಅವರು ಕೃಷ್ಣ
ಭಗವಾನುವಾಚವೆಂದು ಹೇಳುತ್ತಾರೆ. ಬಹಳ ದೊಡ್ಡ ಅಂತರವಿದೆ. ಕೃಷ್ಣನು ಪೂರ್ಣ 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾನೆ, ಕೃಷ್ಣ್ಣನ ಜೊತೆ ಇಡೀ ಸೂರ್ಯವಂಶ ಸಂಪ್ರದಾಯದವರು ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಪುನಃ ಅಂತಿಮದಲ್ಲಿ ರಾಜ್ಯಭಾಗ್ಯವನ್ನು
ತೆಗೆದುಕೊಳ್ಳುತ್ತಿದ್ದಾರೆ. ನೀವು ಮಕ್ಕಳು ಯಾರು ತಿಳಿದುಕೊಂಡಿದ್ದೀರೋ ಅವರಿಗೆ ಮಜಾ ಬರುತ್ತದೆ.
ಹೊಸಬರಿಗೆ ಮಜಾ ಬರುವುದಿಲ್ಲ. ನೀವು ಯಾರದೇ ನಿಂದನೆ ಮಾಡುವುದಿಲ್ಲ, ತಂದೆಯು ನಿಮಗೆ ಎಷ್ಟು
ಸಹಜವಾಗಿ ತಿಳಿಸುತ್ತಾರೆ. ಇಲ್ಲಿ ನೀವು ತಂದೆಯ ಸಂಗದಲ್ಲಿ ಕುಳಿತಿದ್ದಾಗ ಚೆನ್ನಾಗಿ
ತಿಳಿದುಕೊಳ್ಳುತ್ತೀರಿ. ಹೊರಗಡೆ ಹೋಗುತ್ತಿದ್ದಂತೆಯೇ ಆ ಸಂಗದಲ್ಲಿ ಏನಾಗುವುದೋ ತಿಳಿಯುವುದೇ ಇಲ್ಲ.
ಸಂಗದೋಷವು ಬಹಳ ಕೆಟ್ಟದ್ದಾಗಿದೆ. ಸ್ವರ್ಗದಲ್ಲಿ ಈ ರೀತಿಯ ಮಾತುಗಳಿರುವುದಿಲ್ಲ. ಅದರ ಹೆಸರೇ ಆಗಿದೆ
- ಸ್ವರ್ಗ, ವೈಕುಂಠ, ಸುಖಧಾಮ. ಅಲ್ಲಿಯೂ ಅಸುರರಿದ್ದರೆಂದು ಶಾಸ್ತ್ರಗಳಲ್ಲಿ ಬರೆದಿದ್ದಾರೆ, ಈಗ
ನಿಮಗೆ ಅರ್ಥವಾಗಿದೆ - ನಾವು ವಿಶ್ವದ ಮಾಲೀಕರಾಗಿದ್ದೆವು. ಅಲ್ಲಿ ಆಕಾಶ, ಭೂಮಿ ಯಾವುದರಲ್ಲಿಯೂ
ವಿಭಾಗಗಳಿರುವುದಿಲ್ಲ. ಈಗಂತೂ ಎಷ್ಟೊಂದು ವಿಭಜನೆಯಾಗಿದೆ! ತಮ್ಮ-ತಮ್ಮ ಎಲ್ಲೆಗಳನ್ನು
ಹಾಕಿಕೊಳ್ಳುತ್ತಾರೆ. ಪ್ರಪಂಚದಲ್ಲಿ ಎಷ್ಟೊಂದು ಜಗಳವಾಗುತ್ತಿದೆ. ಯಾರೇ ಬಂದರೂ ಸಹ ಮೊಟ್ಟ ಮೊದಲು
ಅವರಿಗೆ ತಿಳಿಸಿ - ತಂದೆ ಯಾರು, ಯಾರಿಗೆ ಭಗವಂತನೆಂದು ಹೇಳಲಾಗುತ್ತದೆ? ಬ್ರಹ್ಮಾ-ವಿಷ್ಣು-ಶಂಕರನು
ದೇವತೆಗಳಾಗಿದ್ದಾರೆ, ಭಗವಂತನು ಒಬ್ಬರೇ ಆಗಿದ್ದಾರೆ, 10 ಮಂದಿಯಲ್ಲ. ಕೃಷ್ಣನು ಭಗವಂತನಾಗಲು
ಸಾಧ್ಯವಿಲ್ಲ, ಭಗವಂತನು ಹಿಂಸೆಯನ್ನು ಹೇಗೆ ಕಲಿಸುವರು! ಭಗವಾನುವಾಚ - ಕಾಮ ಮಹಾಶತ್ರುವಾಗಿದೆ,
ಅದನ್ನು ಜಯಿಸುವುದಕ್ಕಾಗಿಯೇ ಪ್ರತಿಜ್ಞೆ ಮಾಡಿರಿ. ಶ್ರೀರಕ್ಷೆಯನ್ನು ಕಟ್ಟಿಕೊಳ್ಳಿ, ಇದು ಈಗಿನ
ಮಾತಾಗಿದೆ. ಏನೆಲ್ಲವೂ ಕಳೆದು ಹೋಗಿದೆಯೋ ಅದು ಪುನಃ ಭಕ್ತಿಮಾರ್ಗದಲ್ಲಿ ಆಗುವುದು. ದೀಪಾವಳಿಯಂದು
ಮಹಾಲಕ್ಷ್ಮೀ ಪೂಜೆ ಮಾಡುತ್ತಾರೆ ಆದರೆ ಲಕ್ಷ್ಮೀ-ನಾರಾಯಣ ಇಬ್ಬರು ಒಟ್ಟಿಗೆ ಇದ್ದಾರೆಂಬುದು
ಯಾರಿಗಾದರೂ ತಿಳಿದಿದೆಯೇ? ಲಕ್ಷ್ಮೀಗೆ ಹಣವೆಲ್ಲಿಂದ ಸಿಗುವುದು? ಸಂಪಾದನೆ ಮಾಡುವವರು
ಪುರುಷನಾಗಿರುತ್ತಾರಲ್ಲವೆ ಆದರೆ ಲಕ್ಷ್ಮೀಯ ಹೆಸರು ಗಾಯನವಿದೆ - ಮೊದಲು ಲಕ್ಷ್ಮೀ ನಂತರ ನಾರಾಯಣ.
ಲಕ್ಷ್ಮೀಯನ್ನು ಪ್ರತ್ಯೇಕವೆಂದು ತಿಳಿದುಕೊಳ್ಳುತ್ತಾರೆ. ಲಕ್ಷ್ಮೀಗೂ ನಾಲ್ಕು ಭುಜಗಳನ್ನು
ತೋರಿಸುತ್ತಾರೆ. ವಾಸ್ತವದಲ್ಲಿ ಎರಡು ಭುಜ ಲಕ್ಷ್ಮೀಯದು, ಎರಡು ಭುಜ ನಾರಾಯಣದು. ಆದರೆ ಅವರು ಈ
ಮಾತುಗಳನ್ನು ತಿಳಿದುಕೊಂಡಿಲ್ಲ. ನೀವೀಗ ವಿವರವಾಗಿ ತಿಳಿದುಕೊಂಡಿದ್ದೀರಿ.
ಬಾಲ್ಯದ ದಿನಗಳನ್ನು
ಮರೆಯಬಾರದು ಎಂದು ಗೀತೆಯನ್ನು ಕೇಳಿದಿರಿ, ಆತ್ಮವು ಕೇಳುತ್ತದೆ - ಬಾಬಾ, ನಮಗೆ ಈಗ ಸ್ಮೃತಿ ಬಂದಿದೆ
ಎಂದು. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯೊಂದಿಗೆ ಮಾತನಾಡಬೇಕು. ಅಮೃತವೇಳೆ ತಂದೆಯನ್ನು ನೆನಪು
ಮಾಡುವುದು ಒಳ್ಳೆಯದಲ್ಲವೆ. ಸಾಯಂಕಾಲದ ಸಮಯದಲ್ಲಿ ಏಕಾಂತದಲ್ಲಿ ಕುಳಿತುಕೊಳ್ಳಿ. ಭಲೆ ಪರಸ್ಪರ
ಸ್ತ್ರೀ-ಪುರುಷರು ಇಬ್ಬರು ಒಟ್ಟಿಗೆ ಇದ್ದರೂ ಸಹ ಇದೇ ಮಾತನಾಡುತ್ತಾ ಇರಿ – ಶಿವ ತಂದೆಯು
ಬ್ರಹ್ಮಾರವರ ತನುವಿನಿಂದ ಏನು ಹೇಳುತ್ತಾರೆ, ನಾವು ಪೂಜ್ಯರಾದಾಗ ನನ್ನನ್ನು ನೆನಪು
ಮಾಡುತ್ತಿರಲಿಲ್ಲ. ಯಾವಾಗ ಪೂಜಾರಿಗಳಾಗುತ್ತೇವೆಯೋ ಆಗ ತಂದೆಯನ್ನು ನೆನಪು ಮಾಡುತ್ತೇವೆ. ಹೀಗೆ
ಮಾತನಾಡಿಕೊಳ್ಳಬೇಕು. ಯಾರಾದರೂ ಕೇಳಿಸಿಕೊಂಡರೆ ಆಶ್ಚರ್ಯ ಚಕಿತರಾಗುವರು. ನಾವು ಅರ್ಧ ಕಲ್ಪ ಕಾಮ
ಚಿತೆಯನ್ನು ಏರಿ ಸುಟ್ಟು ಭಸ್ಮವಾಗಿ ಬಿಟ್ಟಿದ್ದೆವು. ಸ್ಮಶಾನ ಯೋಗ್ಯರಾಗಿ ಬಿಟ್ಟಿದ್ದೆವು ನಾವೀಗ
ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಬೇಕಾಗಿದೆ, ಸ್ವರ್ಗದಲ್ಲಿ ಹೋಗಬೇಕಾಗಿದೆ. ಇದು ಹಳೆಯ
ಪ್ರಪಂಚವಾಗಿದೆ. ಭಾರತವಾಸಿಗಳು ಇದೇ ಸ್ವರ್ಗವೆಂದು ತಿಳಿದುಕೊಳ್ಳುತ್ತಾರೆ. ಇದೇ ಸ್ವರ್ಗವಂತೂ
ಸತ್ಯಯುಗದಲ್ಲಿರುತ್ತದೆ. ಸ್ವರ್ಗದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಇಲ್ಲಂತೂ ಮಾಯೆಯ
ಆಡಂಬರವಿದೆ. ಈಗ ತಂದೆಯು ತಿಳಿಸುತ್ತಾರೆ – ಸಂಗ ದೋಷದಲ್ಲಿ ಬಂದು ಎಲ್ಲಿಯೂ ಸಿಕ್ಕಿ
ಹಾಕಿಕೊಳ್ಳಬೇಡಿ ಇಲ್ಲದಿದ್ದರೆ ಬಹಳ ಪಶ್ಚಾತ್ತಾಪ ಪಡುವಿರಿ. ಪರೀಕ್ಷೆಯ ಫಲಿತಾಂಶವು ಹೊರ ಬಂದಾಗ
ಎಲ್ಲವೂ ಅರ್ಥವಾಗುತ್ತದೆ. ಮೊದಲು ಮಕ್ಕಳು ಧ್ಯಾನದಲ್ಲಿ ಹೋಗಿ ಇವರು ರಾಣಿಯಾಗುತ್ತಾರೆ, ಇವರು
ದಾಸಿಯಾಗುತ್ತಾರೆ ಎಂದು ಎಲ್ಲವನ್ನೂ ತಿಳಿಸುತ್ತಿದ್ದರು ನಂತರ ತಂದೆಯು ಅದನ್ನೂ ನಿಲ್ಲಿಸಿ ಬಿಟ್ಟರು.
ಹಾಗೆಯೇ ಅಂತಿಮದಲ್ಲಿಯೂ ಸಹ ನಾವು ತಂದೆಯ ಸೇವೆಯನ್ನು ಎಷ್ಟು ಮಾಡಿದೆವು. ಎಷ್ಟು ಮಂದಿಯನ್ನು ನಮ್ಮ
ಸಮಾನ ಮಾಡಿಕೊಂಡೆವು ಎಂಬುದೆಲ್ಲವೂ ಅರ್ಥವಾಗಿ ಬಿಡುವುದು. ಎಲ್ಲವೂ ನೆನಪಿಗೆ ಬರುವುದು.
ಸಾಕ್ಷಾತ್ಕಾರವಿಲ್ಲದೆ ಧರ್ಮರಾಜನೂ ಸಹ ಶಿಕ್ಷೆ ಕೊಡಲು ಸಾಧ್ಯವಿಲ್ಲ. ಮಕ್ಕಳಿಗೆ ಮತ್ತೆ-ಮತ್ತೆ
ತಿಳಿಸಿದ್ದಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು. ತಂದೆಯು ಬಂದು ಮಧುರಾತಿ ಮಧುರ
ವೃಕ್ಷದ ಸಸಿಯನ್ನು ನಾಟಿ ಮಾಡುತ್ತಾರೆ. ಆ ಸರ್ಕಾರದವರು ವೃಕ್ಷಗಳ ಸಸಿಯನ್ನು ನೆಡುತ್ತಾರೆ,
ಉತ್ಸವವನ್ನು ಆಚರಿಸುತ್ತಾರೆ. ಇಲ್ಲಿ ಹೊಸ ಪ್ರಪಂಚದ ನಾಟಿ ಮಾಡಲಾಗುತ್ತಿದೆ ಅಂದಮೇಲೆ ಇಂತಹ
ತಂದೆಯನ್ನು ಮರೆಯಬೇಡಿ, ತಂದೆಯ ಸೇವೆಯಲ್ಲಿ ತೊಡಗಿರಿ. ಇಲ್ಲದಿದ್ದರೆ ಅಂತಿಮದಲ್ಲಿ ಬಹಳ
ಪಶ್ಚಾತ್ತಾಪ ಪಡಬೇಕಾಗುವುದು. ಈಗ ಆಸ್ತಿಯನ್ನು ತೆಗೆದುಕೊಳ್ಳದಿದ್ದರೆ ಕಲ್ಪ-ಕಲ್ಪಾಂತರವೂ ಇದೇರೀತಿ
ಆಗಿ ಬಿಡುವುದು, ಆದ್ದರಿಂದ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಹೇಗೆ ತಂದೆಯು
ಜ್ಞಾನ, ಆನಂದ, ಪ್ರೀತಿಯ ಸಾಗರನಾಗಿದ್ದಾರೆ ಅದೇ ರೀತಿ ತಂದೆಯ ಸಮಾನರಾಗಬೇಕು ಮತ್ತು ತಮ್ಮ
ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ. ಎಲ್ಲರಿಗೆ ಜ್ಞಾನದ ಮೂರನೇ ನೇತ್ರವನ್ನು
ಕೊಡಬೇಕಾಗಿದೆ.
2. ಕೊನೆಯಲ್ಲಿ
ಪಶ್ಚಾತ್ತಾಪ ಪಡುವಂತಹ ಯಾರದೇ ಸಂಗ ಮಾಡಬಾರದು. ಸಂಗದೋಷವು ಬಹಳ ಕೆಟ್ಟದ್ದಾಗಿದೆ ಆದ್ದರಿಂದ
ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವ ಪೂರ್ಣ
ಪುರುಷಾರ್ಥ ಮಾಡಬೇಕಾಗಿದೆ.
ವರದಾನ:
ಸಂತುಷ್ಟತೆಯ
ವಿಶೇಷ ಅಥವ ಶ್ರೇಷ್ಠತೆಯ ಮೂಲಕ ಸರ್ವರ ಇಷ್ಟದೇವ ಆಗುವಂತಹ ಿ ಮೂರ್ತಿ ಭವ.
ಯಾರು ಸದಾ ಸ್ವಯಂನಿಂದ
ಹಾಗೂ ಸರ್ವರಿಂದ ಸಂತುಷ್ಟವಾಗಿ ಇರುತ್ತಾರೆಯೋ, ಅವರೇ ಅನೇಕ ಆತ್ಮರ ಇಷ್ಟ ಅಥವ ಅಷ್ಟ ದೇವತಾ ಆಗಲು
ಸಾಧ್ಯವಾಗುವುದು. ಎಲ್ಲದಕ್ಕಿಂತಲೂ ಅತಿ ಶೇಷ್ಠವಾದ ಗುಣ ಅಥವಾ ದಾನ ಅಥವಾ ವಿಶೇಷತೆ ಅಥವಾ
ಶ್ರೇಷ್ಠತೆಯೆಂದು ಹೇಳುತ್ತೀರೆಂದರೆ, ಅದು ಸಂತುಷ್ಟತೆಯೇ ಆಗಿದೆ. ಸಂತುಷ್ಟ ಆತ್ಮನೇ ಪ್ರಭು ಪ್ರಿಯ,
ಲೋಕ ಪ್ರಿಯ ಹಾಗೂ ಸ್ವಯಂ ಪ್ರಿಯನು ಆಗುವನು. ಇಂತಹ ಸಂತುಷ್ಟ ಆತ್ಮನೇ ವರದಾನಿ ರೂಪದಲ್ಲಿ
ಪ್ರಸಿದ್ಧವಾಗುವನು. ಈಗ ಅಂತಿಮ ಸಮಯದಲ್ಲಿ ಮಹಾದಾನಿಗಿಂತಲೂ ವರದಾನಿ ರೂಪದಿಂದ ಹೆಚ್ಚು
ಸೇವೆಯಾಗುತ್ತದೆ.
ಸ್ಲೋಗನ್:
ಯಾರ ಮಸ್ತಕದಲ್ಲಿ
ಸದಾ ವಿಜಯದ ತಿಲಕವು ಹೊಳೆಯುತ್ತಿರುತ್ತದೆಯೋ, ಅವರೇ ವಿಜಯಿ ರತ್ನಗಳು ಆಗಿದ್ದಾರೆ.
ಅವ್ಯಕ್ತ ಸೂಚನೆ:-
ಬ್ರಹ್ಮಾ ತಂದೆಯ ಸಮಾನ ಸಂಪನ್ನ ಮತ್ತು ಸಂಪೂರ್ಣ ಸ್ಥಿತಿಯ ಅನುಭವ ಮಾಡಿ.
ಕರಗಿ ಸಮಾಪ್ತಿಯಾದರು
ಎಂದು ಪಾಂಡವರ ಗಾಯನವಿದೆ. ಬೆಟ್ಟದ ಮೇಲೆಯಲ್ಲ ಆದರೆ ಶ್ರೇಷ್ಠ ಸ್ಥಿತಿಯಲ್ಲಿ ಕರಗಿ ತಮ್ಮನ್ನು
ಕೆಳಗಡೆಯಿಂದ ಸಂಪೂರ್ಣ ಮೇಲೆ ಅವ್ಯಕ್ತ ಸ್ಥಿತಿಯಲ್ಲಿ ಕರಗಿದರು ಅರ್ಥಾತ್ ಆ ಅವ್ಯಕ್ತ ಸ್ಥಿತಿಯಲ್ಲಿ
ಸಂಪೂರ್ಣತೆಯನ್ನು ಪ್ರಾಪ್ತಿ ಮಾಡಿಕೊಂಡರು, ಇದು ನೀವು ಪಾಂಡವರದ್ದೇ ಗಾಯನವಿದೆ.