07.12.25 Avyakt Bapdada
Kannada
Murli 02.02.2008 Om Shanti Madhuban
“ಸಂಪೂರ್ಣ ಪವಿತ್ರತೆಯ
ಮೂಲಕ ಆತ್ಮಿಕ ಘನತೆ ಹಾಗೂ ವ್ಯಕ್ತಿತ್ವದ ಅನುಭವ ಮಾಡುತ್ತಾ ತಮ್ಮ ಮಾ|| ಜ್ಞಾನ ಸೂರ್ಯ
ಸ್ವರೂಪವನ್ನು ಇಮರ್ಜ್ ಮಾಡಿಕೊಳ್ಳಿ”
ಇಂದು ಬಾಪ್ದಾದಾ
ನಾಲ್ಕಾರೂ ಕಡೆಯ ತಮ್ಮ ರಾಯಲ್ಟಿ ಹಾಗೂ ಪರ್ಸನಾಲಿಟಿಯ ಪರಿವಾರವನ್ನು ನೋಡುತ್ತಿದ್ದೇವೆ. ಸಂಪೂರ್ಣ
ಪವಿತ್ರತೆಯು ಈ ರಾಯಲ್ಟಿ ಹಾಗೂ ಆತ್ಮಿಕ ಘನತೆಯ ಬುನಾದಿಯಾಗಿದೆ. ಪವಿತ್ರತೆಯ ಚಿಹ್ನೆಯು ಎಲ್ಲರ
ಮಸ್ತಕದಲ್ಲಿ ಎಲ್ಲರ ತಲೆಯ ಮೇಲೆ ಪ್ರಕಾಶತೆಯ ಕಿರೀಟವು ಹೊಳೆಯುತ್ತಿದೆ. ಇಂತಹ ಹೊಳೆಯುತ್ತಿರುವ
ಕಿರೀಟಧಾರಿ ಆತ್ಮಿಕ ರಾಯಲ್ಟಿ, ಆತ್ಮಿಕ ಘನತೆಯಿರುವವರು ತಾವು ಬ್ರಾಹ್ಮಣ ಪರಿವಾರದವರಷ್ಟೇ
ಆಗಿದ್ದೀರಿ. ಏಕೆಂದರೆ ಪವಿತ್ರತೆಯನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದೀರಿ. ತಾವು ಬ್ರಾಹ್ಮಣ
ಆತ್ಮರ ಪವಿತ್ರತೆಯ ಪ್ರಭಾವವು ಆದಿ ಕಾಲದಿಂದಲೂ ಪ್ರಸಿದ್ಧವಾಗಿದೆ. ತಮ್ಮ ಅನಾದಿ ಹಾಗೂ ಆದಿ ಕಾಲವು
ನೆನಪಿಗೆ ಬರುತ್ತದೆಯೇ! ನೆನಪು ಮಾಡಿಕೊಳ್ಳಿ - ಅನಾದಿ ಕಾಲದಲ್ಲಿ ತಾವು ಪವಿತ್ರ ಆತ್ಮರು ಆತ್ಮ
ರೂಪದಲ್ಲಿಯೂ ವಿಶೇಷ ಹೊಳೆಯುತ್ತಿರುವ ನಕ್ಷತ್ರಗಳು ಹೊಳೆಯುತ್ತಾ ಇರುತ್ತೀರಿ ಹಾಗೂ ಅನ್ಯ ಆತ್ಮರು
ಇದ್ದರೂ ಸಹ ತಾವು ನಕ್ಷತ್ರಗಳ ಹೊಳಪು ಎಲ್ಲರ ಜೊತೆಯಿದ್ದರೂ ವಿಶೇಷವಾಗಿ ಹೊಳೆಯುತ್ತಿರುತ್ತೀರಿ.
ಹೇಗೆ ಆಕಾಶದಲ್ಲಿ ನಕ್ಷತ್ರಗಳು ಬಹಳಷ್ಟು ಇದ್ದರೂ ಕೆಲವು ನಕ್ಷತ್ರಗಳು
ಹೊಳೆಯುತ್ತಿರುವಂತಹದ್ದಾಗಿರುತ್ತದೆ. ತಮ್ಮನ್ನು ತಾವು ನೋಡಿಕೊಳ್ಳುತ್ತಿದ್ದೀರಾ, ನಂತರ ಆದಿ
ಕಾಲದಲ್ಲಿ ತಮ್ಮ ಪವಿತ್ರತೆಯ ರಾಯಲ್ಟಿ ಹಾಗೂ ಘನತೆಯು ಎಷ್ಟು ಮಹಾನ್ ಆಗಿತ್ತು! ಎಲ್ಲರೂ
ಆದಿಕಾಲಕ್ಕೆ ತಲುಪಿದ್ದೀರಾ? ತಲುಪಿ ಬಿಡಿ. ನನ್ನ ಹೊಳಪಿನ ರೇಖೆ ಎಷ್ಟು ಪರ್ಸೆಂಟೇಜ್ನಲ್ಲಿದೆ ಎಂದು
ಪರಿಶೀಲಿಸಿ. ಆದಿ ಕಾಲದಿಂದ ಅಂತ್ಯಕಾಲದವರೆಗೂ ತಮ್ಮ ಪವಿತ್ರತೆಯ ರಾಯಲ್ಟಿ, ಘನತೆ (ಪರ್ಸನಾಲಿಟಿ)
ಸದಾ ಇರುತ್ತದೆ. ಅನಾದಿಕಾಲದ ಹೊಳೆಯುತ್ತಿರುವ ನಕ್ಷತ್ರ ಹೊಳೆಯುತ್ತಿರುವ ತಂದೆಯ ಜೊತೆ ಜೊತೆ
ನಿವಾಸ ಮಾಡುವವರಾಗಿದ್ದೀರಿ. ಈಗೀಗ ತಮ್ಮ ವಿಶೇಷತೆಯನ್ನು ನೆನಪು ಮಾಡಿ. ಎಲ್ಲರೂ ಅನಾದಿ ಕಾಲದಲ್ಲಿ
ತಲುಪಿದ್ದೀರಾ? ನಂತರ ಇಡೀ ಕಲ್ಪದಲ್ಲಿ ನೀವು ಪವಿತ್ರ ಆತ್ಮರ ರಾಯಲ್ಟಿ ಭಿನ್ನ-ಭಿನ್ನ ರೂಪದಲ್ಲಿ
ಇರುತ್ತದೆ ಏಕೆಂದರೆ ತಾವಾತ್ಮರ ರೀತಿ ಅನ್ಯ ಯಾರೂ ಪವಿತ್ರರಾಗಲಿಲ್ಲ. ಪವಿತ್ರತೆಯ ಜನ್ಮಸಿದ್ಧ
ಅಧಿಕಾರವು ತಾವು ವಿಶೇಷ ಆತ್ಮರಿಗೆ ತಂದೆಯ ಮೂಲಕ ಪ್ರಾಪ್ತಿಯಾಗಿದೆ. ಈಗ ಆದಿ ಕಾಲಕ್ಕೆ ಬನ್ನಿ.
ಅನಾದಿ ಕಾಲದಲ್ಲಿಯೂ ನೋಡಿದಿರಿ, ಈಗ ಆದಿ ಕಾಲದಲ್ಲಿಯೂ ತಮ್ಮ ಪವಿತ್ರತೆಯ ರಾಯಲ್ಟಿಯ ಸ್ವರೂಪವು
ಎಷ್ಟು ಮಹಾನ್ ಆಗಿದೆ! ಎಲ್ಲರೂ ಸತ್ಯಯುಗಕ್ಕೆ ತಲುಪಿದಿರಾ. ತಲುಪಿದ್ದೀರಾ! ಬಂದಿದ್ದೀರಾ? ದೇವತಾ
ರೂಪವು ಎಷ್ಟು ಪ್ರಿಯ ಸ್ವರೂಪವಾಗಿದೆ! ಇಡೀ ಕಲ್ಪದಲ್ಲಿ ದೇವತೆಗಳ ರೀತಿ ರಾಯಲ್ಟಿ ಹಾಗೂ
ಪರ್ಸನಾಲಿಟಿಯು ಅನ್ಯ ಯಾವುದೇ ಆತ್ಮರದಿಲ್ಲ. ದೇವತಾ ರೂಪದ ಹೊಳಪನ್ನು ಅನುಭವ ಮಾಡುತ್ತಿದ್ದೀರಲ್ಲವೆ!
ಇಷ್ಟು ಆತ್ಮಿಕ ಘನತೆಯು ಪವಿತ್ರತೆಯ ಪ್ರಾಪ್ತಿಯಿಂದಾಗಿದೆ. ಈಗ ದೇವತಾ ರೂಪದ ಅನುಭವ ಮಾಡುತ್ತಾ
ಮಧ್ಯ ಕಾಲಕ್ಕೆ ಬನ್ನಿ. ಬಂದಿದ್ದೀರಾ? ಬರುವುದು, ಅನುಭವ ಮಾಡುವುದು ಸಹಜವಲ್ಲವೆ! ಮಧ್ಯ
ಕಾಲದಲ್ಲಿಯೂ ನೋಡಿ, ತಮ್ಮ ಭಕ್ತರು ತಮ್ಮ ಪೂಜ್ಯ ಆತ್ಮರ ಪೂಜೆಯನ್ನು ಮಾಡುತ್ತಾರೆ, ಚಿತ್ರಗಳನ್ನು
ಮಾಡುತ್ತಾರೆ. ಎಷ್ಟೊಂದು ರಾಯಲ್ಟಿಯ ಚಿತ್ರ ಮಾಡುತ್ತಾರೆ ಮತ್ತು ಎಷ್ಟೊಂದು ರಾಯಲ್ಟಿಯಿಂದ ಪೂಜೆ
ಮಾಡುತ್ತಾರೆ. ತಮ್ಮ ಪೂಜ್ಯನೀಯ ಚಿತ್ರವು ಕಣ್ಮುಂದೆ ಬಂದಿತಲ್ಲವೆ! ಚಿತ್ರಗಳನ್ನಂತೂ
ಧರ್ಮಾತ್ಮರದ್ದೂ ಮಾಡುತ್ತಾರೆ, ಧರ್ಮಪಿತರ ಚಿತ್ರಗಳನ್ನೂ ಮಾಡುತ್ತಾರೆ, ಅಭಿನೇತರ ಚಿತ್ರವನ್ನೂ
ಮಾಡುತ್ತಾರೆ ಆದರೆ ತಮ್ಮ ಚಿತ್ರದ ಆತ್ಮೀಯತೆ ಹಾಗೂ ವಿಧಿಪೂರ್ವಕ ಪೂಜೆಯಲ್ಲಿ ವ್ಯತ್ಯಾಸವಿರುತ್ತದೆ.
ಹಾಗಾದರೆ ತಮ್ಮ ಪೂಜ್ಯ ಸ್ವರೂಪವು ತಮ್ಮ ಸನ್ಮುಖದಲ್ಲಿ ಬಂದಿತಲ್ಲವೆ! ಒಳ್ಳೆಯದು - ಈಗ ಅಂತ್ಯಕಾಲ
ಸಂಗಮಕ್ಕೆ ಬನ್ನಿ. ಈ ಆತ್ಮಿಕ ಡ್ರಿಲ್ ಮಾಡುತ್ತಿದ್ದೀರಲ್ಲವೆ! ಪರಿಕ್ರಮಣ ಮಾಡಿ - ತಮ್ಮ
ಪವಿತ್ರತೆಯ, ವಿಶೇಷ ಪ್ರಾಪ್ತಿಯ ಅನುಭವ ಮಾಡಿ. ಅಂತಿಮ ಕಾಲ ಸಂಗಮದಲ್ಲಿ ತಾವು ಬ್ರಾಹ್ಮಣ ಆತ್ಮರ
ಪರಮಾತ್ಮ ಪಾಲನೆಯ, ಪರಮಾತ್ಮ ಪ್ರೀತಿಯ, ಪರಮಾತ್ಮ ವಿದ್ಯಾಭ್ಯಾಸದ ಭಾಗ್ಯವನ್ನು ತಾವು ಕೋಟಿಯಲ್ಲಿ
ಕೆಲವರಿಗಷ್ಟೇ ಲಭಿಸುತ್ತದೆ. ಪರಮಾತ್ಮನ ಡೈರೆಕ್ಟ್ ರಚನೆ, ಮೊದಲನೇ ರಚನೆಯು ತಾವು ಪವಿತ್ರರಿಗಷ್ಟೇ
ಪ್ರಾಪ್ತಿಯಾಗುತ್ತದೆ ಯಾವುದರಿಂದ ತಾವು ಬ್ರಾಹ್ಮಣರೇ ವಿಶ್ವದ ಆತ್ಮರಿಗೂ ಮುಕ್ತಿಯ ಆಸ್ತಿಯನ್ನು
ತಂದೆಯಿಂದ ಕೊಡಿಸುತ್ತೀರಿ ಆದ್ದರಿಂದ ಇಡೀ ಚಕ್ರದಲ್ಲಿ ಅನಾದಿ ಕಾಲ, ಆದಿ ಕಾಲ, ಮಧ್ಯ ಕಾಲ ಹಾಗೂ
ಅಂತಿಮ ಕಾಲ ಇಷ್ಟು ಶ್ರೇಷ್ಠ ಪ್ರಾಪ್ತಿಯ ಆಧಾರವು ಪವಿತ್ರತೆಯಾಗಿದೆ. ಪೂರ್ತಿ ಪರಿಕ್ರಮಣ ಮಾಡಿದಿರಿ,
ಈಗ ತಮ್ಮನ್ನು ಪರಿಶೀಲಿಸಿಕೊಳ್ಳಿ, ತಮ್ಮನ್ನು ನೋಡಿಕೊಳ್ಳಿ. ನೋಡಿಕೊಳ್ಳಲು ಕನ್ನಡಿಯಿದೆಯಲ್ಲವೆ!
ತಮ್ಮನ್ನು ತಾವು ನೋಡಿಕೊಳ್ಳುವ ಕನ್ನಡಿಯಿದೆಯಲ್ಲವೆ? ಯಾರ ಬಳಿ ಇದೆಯೋ ಅವರು ಕೈಯನ್ನೆತ್ತಿ.
ಕನ್ನಡಿಯಿದೆಯೇ, ಸ್ಪಷ್ಟವಾಗಿದೆಯೇ? ಹಾಗಾದರೆ ಕನ್ನಡಿಯಲ್ಲಿ ನನ್ನ ಪವಿತ್ರತೆಯ ಪರ್ಸೆಂಟ್ ಎಷ್ಟಿದೆ
ಎಂದು ನೋಡಿಕೊಳ್ಳಿ. ಪವಿತ್ರತೆಯೆಂದರೆ ಕೇವಲ ಬ್ರಹ್ಮಚರ್ಯವಲ್ಲ ಆದರೆ ಬ್ರಹ್ಮಾಚಾರಿಯಾಗಿದೆ.
ಮನ-ವಚನ-ಕರ್ಮ, ಸಂಬಂಧ-ಸಂಪರ್ಕ, ಎಲ್ಲದರಲ್ಲಿಯೂ ಪವಿತ್ರತೆಯಿದೆಯೇ? ಎಷ್ಟು ಪರ್ಸೆಂಟ್ ಇದೆ?
ಪರ್ಸೆಂಟೇಜ್ ತೆಗೆಯಲು ಬರುತ್ತದೆಯಲ್ಲವೆ! ಟೀಚರ್ಸ್ ಬರುತ್ತದೆಯೇ? ಪಾಂಡವರಿಗೆ ಬರುತ್ತದೆಯೇ?
ಒಳ್ಳೆಯದು - ಬುದ್ಧಿವಂತರಾಗಿದ್ದೀರಿ. ಮಾತೆಯರಿಗೆ ಬರುತ್ತದೆಯೇ? ಬರುತ್ತದೆಯೇ? ಒಳ್ಳೆಯದು.
ಪವಿತ್ರತೆಯ
ಪರಿಶೀಲನೆಯಾಗಿದೆ - ವೃತ್ತಿ, ದೃಷ್ಟಿ ಹಾಗೂ ಕೃತಿ. ಮೂರರಲ್ಲಿಯೂ ಪರಿಶೀಲಿಸಿಕೊಳ್ಳಿ. ಸಂಪೂರ್ಣ
ಪವಿತ್ರತೆಯ ವೃತ್ತಿಯು ಬುದ್ಧಿಯಲ್ಲಿ ಬಂದು ಬಿಟ್ಟಿತಲ್ಲವೆ. ವಿಚಾರ ಮಾಡಿ- ಸಂಪೂರ್ಣ ಪವಿತ್ರತೆಯ
ವೃತ್ತಿ ಅರ್ಥಾತ್ ಪ್ರತಿಯೊಂದು ಆತ್ಮನ ಪ್ರತಿ ಶುಭ ಭಾವನೆ, ಶುಭ ಕಾಮನೆಯನ್ನಿಡುವುದು.
ಅನುಭವಿಯಾಗಿದ್ದೀರಲ್ಲವೆ! ಹಾಗೂ ದೃಷ್ಟಿಯು ಏನಾಗಿರುತ್ತದೆ? ಪ್ರತಿಯೊಂದು ಆತ್ಮವನ್ನು ಆತ್ಮ
ರೂಪದಲ್ಲಿ ನೋಡುವುದು, ಆತ್ಮಿಕ ಸ್ಮೃತಿಯಿಂದ ಮಾತನಾಡುವುದು, ನಡೆಯುವುದು. ಸಂಕ್ಷಿಪ್ತವಾಗಿ
ತಿಳಿಸುತ್ತಿದ್ದೇವೆ. ತಾವು ವಿಸ್ತಾರವಾಗಿ ಭಾಷಣ ಮಾಡಬಹುದು, ಕೃತಿ ಅರ್ಥಾತ್ ಕರ್ಮದಲ್ಲಿ ಸುಖ
ತೆಗೆದುಕೊಳ್ಳುವುದು, ಸುಖ ನೀಡುವುದು. ನನ್ನ ವೃತ್ತಿ, ದೃಷ್ಟಿ, ಕೃತಿ ಇದೇ ಪ್ರಮಾಣದಲ್ಲಿದೆಯೇ
ಎಂದು ಪರಿಶೀಲಿಸಿಕೊಳ್ಳಿ. ಸುಖ ತೆಗೆದುಕೊಳ್ಳಿ, ದುಃಖವನ್ನು ತೆಗೆದುಕೊಳ್ಳಬೇಡಿ. ಎಂದಾದರೂ
ದುಃಖವನ್ನು ತೆಗೆದುಕೊಳ್ಳುತ್ತೇನೆಯೇ ಎಂದು ಚೆಕ್ ಮಾಡಿಕೊಳ್ಳಿ. ಕೆಲವೊಮ್ಮೆ ಸ್ವಲ್ಪ-ಸ್ವಲ್ಪ ಚೆಕ್
ಮಾಡುತ್ತೀರಾ? ದುಃಖ ಕೊಡುವವರೂ ಇರುತ್ತಾರಲ್ಲವೆ. ತಿಳಿದುಕೊಳ್ಳಿ - ಅವರು ದುಃಖವನ್ನು ಕೊಡುತ್ತಾರೆ,
ಆಗ ನೀವು ಅದನ್ನು ಫಾಲೋ ಮಾಡಬೇಕೆ! ಫಾಲೋ ಮಾಡಬೇಕೇ ಅಥವಾ ಮಾಡಬಾರದೇ? ಯಾರನ್ನು ಫಾಲೋ ಮಾಡಬೇಕು?
ದುಃಖ ಕೊಡುವವರನ್ನು ಫಾಲೋ ಮಾಡಬೇಕಾ ಅಥವಾ ತಂದೆಯನ್ನೋ? ತಂದೆಯು, ಬ್ರಹ್ಮಾ ತಂದೆಯು, ನಿರಾಕಾರನ
ಮಾತಂತೂ ಇದೆ, ಆದರೆ ಬ್ರಹ್ಮಾ ತಂದೆಯು ಯಾವುದೇ ಮಗುವಿನ ದುಃಖವನ್ನು ತೆಗೆದುಕೊಂಡರಾ? ಸುಖವನ್ನು
ಕೊಟ್ಟರು ಮತ್ತು ಸುಖವನ್ನು ತೆಗೆದುಕೊಂಡರು. ತಂದೆಯನ್ನು ಫಾಲೋ ಮಾಡುತ್ತೀರಾ ಅಥವಾ ಕೆಲ-ಕೆಲವೊಮ್ಮೆ
ತೆಗೆದುಕೊಳ್ಳಬೇಕಾಗುತ್ತದೆಯೇ? ದುಃಖ ಎಂದು ಹೆಸರೇ ಇದೆ, ದುಃಖವನ್ನು ಕೊಡುತ್ತಾರೆ, ನಿಂದನೆ
ಮಾಡುತ್ತಾರೆ. ಇದು ಕೆಟ್ಟ ವಸ್ತುವೆಂದು ಆ ಸಮಯದಲ್ಲಿ ನಿಮಗೆ ತಿಳಿದಿರುತ್ತದೆ. ಯಾರಾದರೂ ತಮ್ಮನ್ನು
ನಿಂದನೆ ಮಾಡಿದರೆ ಅದನ್ನು ತಾವು ಚೆನ್ನಾಗಿದೆ ಎಂದು ತಿಳಿಯುತ್ತೀರಾ? ಕೆಟ್ಟದೆಂದು
ತಿಳಿಯುತ್ತೀರಲ್ಲವೆ? ಅಂದಮೇಲೆ ಅವರು ತಮಗೆ ದುಃಖವನ್ನು ಕೊಡುತ್ತಾರೆ ಅಥವಾ ನಿಂದನೆ ಮಾಡುತ್ತಾರೆ,
ಒಂದುವೇಳೆ ಕೆಟ್ಟ ವಸ್ತುವವನ್ನು ಯಾರಾದರೂ ತಮಗೆ ಕೊಟ್ಟರೆ ನೀವು ತೆಗೆದುಕೊಳ್ಳುತ್ತೀರಾ?
ತೆಗೆದುಕೊಳ್ಳುತ್ತೀರಾ? ಸ್ವಲ್ಪ ಸಮಯಕ್ಕಾಗಿ ತೆಗೆದುಕೊಳ್ಳುತ್ತೀರಾ! ಹೆಚ್ಚು ಸಮಯಕ್ಕಲ್ಲ,
ಸ್ವಲ್ಪ ಸಮಯಕ್ಕಾಗಿ. ಕೆಟ್ಟ ವಸ್ತು ತೆಗೆದುಕೊಳ್ಳುವಂತದ್ದಾಗಿದೆಯೇ? ಹಾಗಾದರೆ ದುಃಖ ಅಥವಾ
ನಿಂದನೆಯನ್ನು ಏಕೆ ತೆಗೆದುಕೊಳ್ಳುತ್ತೀರಾ? ಅರ್ಥಾತ್ ಮನಸ್ಸಿನಲ್ಲಿ ಫೀಲಿಂಗ್ನ ರೂಪದಲ್ಲಿ ಏಕೆ
ಇಟ್ಟುಕೊಳ್ಳುತ್ತೀರಿ? ತಮ್ಮನ್ನು ತಾವು ಕೇಳಿಕೊಳ್ಳಿ, ನಾವು ದುಃಖವನ್ನು ತೆಗೆದುಕೊಳ್ಳುತ್ತೇವೆಯೇ?
ಅಥವಾ ದುಃಖವನ್ನು ಪರಿವರ್ತನೆಯ ರೂಪದಲ್ಲಿ ನೋಡುತ್ತೀರಾ? ಮೊದಲ ಸಾಲಿನವರು ಏನು ತಿಳಿಯುತ್ತೀರಿ?
ದುಃಖ ತೆಗೆದುಕೊಳ್ಳುವುದು ಸರಿಯೇ? ಸರಿಯೇ? ಮಧುಬನದವರು ಸರಿಯೇ? ಸ್ವಲ್ಪ-ಸ್ವಲ್ಪ
ತೆಗೆದುಕೊಳ್ಳಬೇಕೆ? ಮೊದಲ ಸಾಲಿನವರು, ದುಃಖವನ್ನು ತೆಗೆದುಕೊಳ್ಳಬೇಕಲ್ಲವೆ! ತೆಗೆದುಕೊಳ್ಳಲು
ಇಚ್ಛೆಯಿರುವುದಿಲ್ಲ ಆದರೆ ತೆಗೆದುಕೊಳ್ಳುತ್ತಾರೆ. ತಪ್ಪಾಗಿ ತೆಗೆದುಕೊಂಡು ಬಿಡುತ್ತೀರಿ. ಈ
ದುಃಖದ ಫಿಲೀಂಗ್ನಲ್ಲಿ ಯಾರು ಬೇಸರವಾಗುತ್ತಾರೆ? ಮನಸ್ಸಿನಲ್ಲಿ ಕೊಳಕನ್ನು ಇಟ್ಟುಕೊಂಡರೆ ಬೇಸರ
ಯಾರಿಗಾಗುತ್ತದೆ? ಎಲ್ಲಿ ಕೊಳಕಿರುತ್ತದೆಯೋ ಅಲ್ಲಿ ಬೇಸರವಿರುತ್ತದೆಯಲ್ಲವೆ! ಆಗ ಆ ಸಮಯದಲ್ಲಿ
ತಮ್ಮ ರಾಯಲ್ಟಿ ಹಾಗೂ ಪರ್ಸನಾಲಿಟಿಯನ್ನು ತಮ್ಮ ಮುಂದೆ ತಂದುಕೊಳ್ಳಿ. ಆಗ ತಮ್ಮನ್ನು ಯಾವ ರೂಪದಲ್ಲಿ
ನೋಡುತ್ತೀರಿ? ತಮ್ಮ ಟೈಟಲ್ ಏನೆಂದು ತಿಳಿದಿರುತ್ತದೆಯೇ? ತಮ್ಮ ಟೈಟಲ್ ಆಗಿದೆ- ಸಹನಶೀಲ ದೇವಿ,
ಸಹನಶೀಲ ದೇವ. ಅಂದಾಗ ತಾವು ಯಾರಾಗಿದ್ದೀರಿ? ಸಹನಶೀಲ ದೇವಿ, ಸಹನಶೀಲ ದೇವ ಆಗಿದ್ದೀರಾ? ಅಥವಾ
ಆಗಿಲ್ಲವೇ? ಕೆಲವೊಮ್ಮೆ ಆಗುತ್ತೀರಾ. ತಮ್ಮ ಸ್ವಮಾನವನ್ನು ನೆನಪು ಮಾಡಿಕೊಳ್ಳಿ, ನಾನು
ಯಾರಾಗಿದ್ದೇನೆ! ಇದನ್ನು ಸ್ಮೃತಿಯಲ್ಲಿ ತಂದುಕೊಳ್ಳಿ. ಇಡೀ ಕಲ್ಪದ ವಿಶೇಷ ಸ್ವರೂಪವನ್ನು
ಸ್ಮೃತಿಯಲ್ಲಿ ತಂದುಕೊಳ್ಳಿ. ಸ್ಮೃತಿಯಂತೂ ಬರುತ್ತದೆಯಲ್ಲವೆ.
ಬಾಪ್ದಾದಾರವರು
ನೋಡುತ್ತಾರೆ - ಹೇಗೆ ‘ನಾನು’ ಎಂಬ ಶಬ್ಧವನ್ನು ಸಹಜ ನೆನಪಿನಲ್ಲಿ ಪರಿವರ್ತನೆ ಮಾಡಿಕೊಳ್ಳುತ್ತಾರೆ.
ನಾನು ಎನ್ನುವುದರ ವಿಸ್ತಾರವನ್ನು ಸಂಕ್ಷಿಪ್ತ ಮಾಡಲು ಏನು ಹೇಳುತ್ತೀರಿ? ನನ್ನ ಬಾಬಾ. ಯಾವಾಗಲಾದರೂ
ನಾನು, ನಾನು ಎಂಬ ಶಬ್ಧವು ಬಂದಾಗ ನನ್ನ ಬಾಬಾ ಎನ್ನುವುದರಲ್ಲಿ ಸಂಕ್ಷಿಪ್ತಗೊಳಿಸುತ್ತೀರಿ ಹಾಗೂ
ಮತ್ತೆ-ಮತ್ತೆ ನನ್ನಬಾಬಾ ಎಂದು ಹೇಳುವುದರಿಂದ ನೆನಪೂ ಸಹ ಸಹಜವಾಗಿರುತ್ತದೆ ಮತ್ತು ಪ್ರಾಪ್ತಿಯೂ
ಜಾಸ್ತಿಯಿರುತ್ತದೆ. ಹಾಗೆಯೇ ಇಡೀ ದಿನದಲ್ಲಿ ಒಂದುವೇಳೆ ಯಾವುದೇ ಪ್ರಕಾರದ ಸಮಸ್ಯೆ ಅಥವಾ ಕಾರಣ
ಬರುತ್ತದೆಯೆಂದರೆ ಅಲ್ಲಿ ಈ ಎರಡು ಶಬ್ಧಗಳು ವಿಶೇಷವಾಗಿದೆ - ನಾನು ಮತ್ತು ನನ್ನದು. ಬಾಬಾ ಎಂಬ
ಶಬ್ಧ ಹೇಳುವುದರಿಂದ ನನ್ನದು ಎಂಬ ಶಬ್ಧವು ಪಕ್ಕಾ ಸ್ಮೃತಿಯಲ್ಲಿ ಇದೆ. ಇದೆಯಲ್ಲವೇ? ಎಲ್ಲರೂ ಈಗ
ಬಾಬಾ, ಬಾಬಾ ಎಂದು ಹೇಳುವುದಿಲ್ಲ, ನನ್ನ ಬಾಬಾ ಎಂದು ಹೇಳುತ್ತಾರೆ. ಇದೇ ರೀತಿ ಈ ನಾನು ಎನ್ನುವ
ಶಬ್ಧವನ್ನೂ ಸಹ ಪರಿವರ್ತನೆ ಮಾಡಲು ನಾನು ಎಂದು ಹೇಳಿದಾಗ ತಮ್ಮ ಸ್ವಮಾನದ ಪಟ್ಟಿಯನ್ನು
ಸನ್ಮುಖದಲ್ಲಿ ತನ್ನಿ. ನಾನು ಯಾರು? ಏಕೆಂದರೆ ನಾನು ಎನ್ನುವ ಶಬ್ಧ ಕೆಳಗೆ ಬೀಳಿಸಲೂ ನಿಮಿತ್ತವಾಗಿ
ಬಿಡುತ್ತದೆ ಹಾಗೂ ನಾನು ಎಂಬ ಶಬ್ಧವು ಸ್ವಮಾನದ ಸ್ಮೃತಿಯು ಶ್ರೇಷ್ಠರನ್ನಾಗಿಯೂ ಮಾಡುತ್ತದೆ. ಹೇಗೆ
ನನ್ನಬಾಬಾ ಎನ್ನುವುದರ ಅಭ್ಯಾಸವಾಗಿದೆಯೋ ಹಾಗೆಯೇ ನಾನು ಎಂಬ ಶಬ್ಧವನ್ನು ದೇಹಾಭಿಮಾನದ ಸ್ಮೃತಿಯ
ಬದಲಾಗಿ ತಮ್ಮ ಶ್ರೇಷ್ಠ ಸ್ವಮಾನವನ್ನು ಸನ್ಮುಖದಲ್ಲಿ ತನ್ನಿ. ನಾನು ಶ್ರೇಷ್ಠ ಆತ್ಮನಾಗಿದ್ದೇನೆ,
ಸಿಂಹಾಸನಾಧಿಕಾರಿ ಆತ್ಮನಾಗಿದ್ದೇನೆ, ವಿಶ್ವ ಕಲ್ಯಾಣಿ ಆತ್ಮನಾಗಿದ್ದೇನೆ, ಈ ರೀತಿ ಯಾವುದಾದರೊಂದು
ಸ್ವಮಾನದ ಜೊತೆ ನಾನು ಎಂಬ ಶಬ್ಧವನ್ನು ಜೋಡಿಸಿ. ಆಗ ನಾನು ಎಂಬ ಶಬ್ಧವು ಉನ್ನತಿಗೆ ಸಾಧನವಾಗುತ್ತದೆ.
ಹೇಗೆ ನನ್ನದು ಎಂಬ ಶಬ್ಧವು ಈಗ ಮೆಜಾರಿಟಿ ಬಾಬಾ ಶಬ್ಧದ ನೆನಪು ತರಿಸುತ್ತದೆ ಏಕೆಂದರೆ ಸಮಯ,
ಪ್ರಕೃತಿಯ ಮೂಲಕ ತನ್ನ ಛಾಲೆಂಜ್ ಮಾಡುತ್ತಿದೆ.
ಸಮಯದ ಸಮೀಪತೆಯನ್ನು
ಸಾಮಾನ್ಯ ಮಾತೆಂದು ತಿಳಿಯಬೇಡಿ. ಅಚಾನಕ್ ಹಾಗೂ ಎವರೆಡಿ ಶಬ್ಧವನ್ನು ತಮ್ಮ ಕರ್ಮಯೋಗಿ ಜೀವನದಲ್ಲಿ
ಎಲ್ಲಾ ಸಮಯದಲ್ಲಿಯೂ ಸ್ಮೃತಿಯಲ್ಲಿ ಇಟ್ಟುಕೊಳ್ಳಿ. ಹೇಗೆ ವಿಜ್ಞಾನವು ಹೊಸ-ಹೊಸ ಪ್ರಯೋಗ
ಮಾಡುತ್ತಿರುತ್ತದೆಯೋ ಹಾಗೆಯೇ ತಮ್ಮ ಶಾಂತಿಯ ಶಕ್ತಿಯನ್ನು ಸ್ವಯಂನ ಪ್ರತಿ ಭಿನ್ನ-ಭಿನ್ನ ರೂಪದಲ್ಲಿ
ಪ್ರಯೋಗ ಮಾಡಿ. ಎಷ್ಟೆಷ್ಟು ಸ್ವಯಂಪ್ರತಿ ಪ್ರಯೋಗ ಮಾಡುವ ಅಭ್ಯಾಸ ಮಾಡುತ್ತೀರಿ ಅಷ್ಟೇ ಅನ್ಯರ
ಪ್ರತಿಯೂ ಶಾಂತಿಯ ಶಕ್ತಿಯ ಪ್ರಯೋಗ ಆಗುತ್ತಿರುತ್ತದೆ.
ಈಗ ವಿಶೇಷವಾಗಿ ತಮ್ಮ
ಶಕ್ತಿಗಳ ಸಕಾಶವನ್ನು ನಾಲ್ಕಾರೂ ಕಡೆ ಹರಡಿಸಿ. ತಮ್ಮ ಪ್ರಕೃತಿಯ ಸೂರ್ಯ ಶಕ್ತಿ, ಸೂರ್ಯನ ಕಿರಣಗಳು
ತಮ್ಮ ಕಾರ್ಯವನ್ನು ಅನೇಕ ರೂಪದಲ್ಲಿ ಮಾಡುತ್ತಿದೆ. ನೀರನ್ನು ಸುರಿಸುತ್ತದೆ ಹಾಗೂ ನೀರನ್ನು
ಹೀರಿಯೂಕೊಳ್ಳುತ್ತದೆ. ಹಗಲಿನಿಂದ ರಾತ್ರಿ, ರಾತ್ರಿಯಿಂದ ಹಗಲನ್ನಾಗಿ ಮಾಡಿ ತೋರಿಸುತ್ತದೆ.
ಹಾಗಾದರೆ ತಾವು ತಮ್ಮ ಶಕ್ತಿಗಳ ಸಕಾಶವನ್ನು ವಾಯುಮಂಡಲದಲ್ಲಿ ಹರಡಿಸಲು ಸಾಧ್ಯವಿಲ್ಲವೇ? ತಮ್ಮ
ಶಕ್ತಿಯ ಸಕಾಶದಿಂದ ಆತ್ಮರನ್ನು ದುಃಖ-ಅಶಾಂತಿಯಿಂದ ಮುಕ್ತರನ್ನಾಗಿ ಮಾಡಲು ಆಗುವುದಿಲ್ಲವೇ? ಜ್ಞಾನ
ಸೂರ್ಯ ಸ್ವರೂಪವನ್ನು ಇಮರ್ಜ್ ಮಾಡಿಕೊಳ್ಳಿ. ಕಿರಣಗಳನ್ನು ಹರಡಿ, ಸಕಾಶ ಕೊಡಿ. ಹೇಗೆ ಸ್ಥಾಪನೆಯ
ಆದಿ ಕಾಲದಲ್ಲಿ ಬಾಪ್ದಾದಾರವರ ಕಡೆಯಿಂದ ಅನೇಕ ಆತ್ಮರಿಗೆ ಸುಖ-ಶಾಂತಿಯ ಸಕಾಶ ಸಿಗುವ ಅನುಭವವನ್ನು
ಮನೆಯಲ್ಲಿ ಕುಳಿತಲ್ಲಿಯೇ ಆಯಿತು. ಅಲ್ಲಿಗೆ ಹೋಗಿ ಎಂದು ಸಂಕಲ್ಪ ಸಿಕ್ಕಿತು. ಇದೇ ರೀತಿ ಈಗ ತಾವು
ಮಾ|| ಜ್ಞಾನ ಸೂರ್ಯ ಮಕ್ಕಳ ಮೂಲಕ ಸುಖ-ಶಾಂತಿಯ ಅಲೆಯನ್ನು ಹರಡುವ ಅನುಭೂತಿ ಆಗಬೇಕು ಆದರೆ
ಮನಸ್ಸಿನ ಏಕಾಗ್ರತೆಯೇ ಇದನ್ನು ಮಾಡುವುದರ ಸಾಧನವಾಗಿದೆ. ನೆನಪಿನ ಏಕಾಗ್ರತೆ. ಏಕಾಗ್ರತೆಯ
ಶಕ್ತಿಯನ್ನು ಸ್ವಯಂನಲ್ಲಿ ಹೆಚ್ಚಿಸಿಕೊಳ್ಳಿ. ಯಾವಾಗ ಬೇಕೋ, ಹೇಗೆ ಬೇಕೋ, ಎಲ್ಲಿಯವರೆಗೆ ಬೇಕೋ
ಅಲ್ಲಿಯವರೆಗೆ ಮನಸ್ಸನ್ನು ಏಕಾಗ್ರ ಮಾಡಿಕೊಳ್ಳಬೇಕು. ಈಗ ಮಾ|| ಜ್ಞಾನ ಸೂರ್ಯನ ಸ್ವರೂಪವನ್ನು
ಇಮರ್ಜ್ ಮಾಡಿಕೊಳ್ಳಿ. ಹಾಗೂ ಶಕ್ತಿಗಳ ಕಿರಣ ಹಾಗೂ ಸಕಾಶವನ್ನು ಹರಡಿ.
ಮಕ್ಕಳು ಸೇವೆಯ
ಉಮ್ಮಂಗ-ಉತ್ಸಾಹದಲ್ಲಿ ಅನೇಕಕಡೆ ಸೇವೆ ಚೆನ್ನಾಗಿ ಮಾಡುತ್ತಿದ್ದಾರೆಂದು ಬಾಪ್ದಾದಾರವರು ಕೇಳಿದೆವು
ಹಾಗೂ ಖುಷಿಯಾಯಿತು. ಬಾಪ್ದಾದಾರವರ ಬಳಿ ಎಲ್ಲಾ ಕಡೆಯಿಂದ ಸೇವೆಯ ಸಮಾಚಾರವು ತಲುಪಿದೆ. ಭಲೆ
ಪ್ರದರ್ಶನಿ ಮಾಡಬಹುದು, ಸಮಾಚಾರ ಪತ್ರಿಕೆಗಳ ಮೂಲಕ, ದೂರದರ್ಶನದ ಮೂಲಕ ಸಂದೇಶ ಕೊಡುವ ಕಾರ್ಯವನ್ನು
ಹೆಚ್ಚಾಗಿ ಮಾಡುತ್ತಾ ಹೋಗುತ್ತಿದ್ದೀರಿ. ಸಂದೇಶವು ತಲುಪುತ್ತದೆ, ಸಂದೇಶವನ್ನು ಚೆನ್ನಾಗಿ
ತಲುಪಿಸುತ್ತಿದ್ದೀರಿ. ಹಳ್ಳಿಗಳ ಕಡೆ ಎಲ್ಲೆಲ್ಲಿ ಇನ್ನೂ ತಲುಪಿಲ್ಲವೋ, ಪ್ರತಿಯೊಂದು ಜೋನ್
ತಮ್ಮ-ತಮ್ಮ ಸ್ಥಾನಗಳಲ್ಲಿ ವೃದ್ಧಿ ಮಾಡುತ್ತಾ ಇದೆ. ಪತ್ರಿಕೆಗಳ ಮೂಲಕ, ದೂರದರ್ಶನದ ಮೂಲಕ,
ಭಿನ್ನ-ಭಿನ್ನ ಸಾಧನಗಳ ಮೂಲಕ ಉಮ್ಮಂಗ-ಉತ್ಸಾಹದಿಂದ ಮಾಡುತ್ತಾ ಇದ್ದೀರಿ. ಇದೆಲ್ಲವನ್ನೂ ಮಾಡುವಂತಹ
ಮಕ್ಕಳಿಗೆ ಬಾಪ್ದಾದಾರವರು ಬಹಳ ಸ್ನೇಹಭರಿತ, ಆಶೀರ್ವಾದಗಳಿಂದ ಕೂಡಿದ ಶುಭಾಷಯಗಳನ್ನು
ನೀಡುತ್ತಿದ್ದಾರೆ ಆದರೆ ಈಗ ಸಂದೇಶ ಕೊಡುವುದರಲ್ಲಿ ಒಳ್ಳೆಯ ಉಮ್ಮಂಗ-ಉತ್ಸಾಹವಿದೆ. ಆದರೆ ನಾಲ್ಕೂ
ಕಡೆ ಬ್ರಹ್ಮಾಕುಮಾರಿಯರು ಏನು, ಬಹಳ ಒಳ್ಳೆಯ ಶಕ್ತಿಶಾಲಿ ಕಾರ್ಯವನ್ನು ಮಾಡುತ್ತಿದ್ದಾರೆ ಎಂಬುದೂ
ಸಹ ಒಳ್ಳೆಯ ಧ್ವನಿ ಹರಡುತ್ತಿದೆ. ಹಾಗೂ ವೃದ್ಧಿಯಾಗುತ್ತಾ ಇದೆ ಆದರೆ ಏನೆಂದು ತಿಳಿಸುವುದೇ?
ತಿಳಿಸುವುದೇ? ಆದರೆ...... ಆದರೆ ಬ್ರಹ್ಮಾಕುಮಾರಿಯರ ಬಾಬಾ ಎಷ್ಟು ಚೆನ್ನಾಗಿದ್ದಾರೆ, ಈ ಧ್ವನಿ
ಈಗ ವೃದ್ದಿಯಾಗಬೇಕು. ಬ್ರಹ್ಮಾಕುಮಾರಿಯರು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಆದರೆ ಮಾಡಿಸುವವರು
ಯಾರು? ಈಗ ಇದರ ಪ್ರತ್ಯಕ್ಷತೆಯಾಗಬೇಕು. ಬಾಬಾ ಬಂದಿದ್ದಾರೆ, ಈ ಸಮಾಚಾರವು ಮನಸ್ಸಿನವರೆಗೂ
ತಲುಪಬೇಕು. ಇದರ ಯೋಜನೆ ಮಾಡಿ.
ಬಾಪ್ದಾದಾರವರಿಗೆ ಎಲ್ಲಾ
ಮಕ್ಕಳು ವಾರಸುಧಾರರೂ ಅಥವಾ ಮೈಕ್ ಎಂದು ಯಾರಿಗೆ ಹೇಳುತ್ತಾರೆ? ಎಂದು ಪ್ರಶ್ನೆ ಕೇಳಿದರು. ಮೈಕ್
ಆತ್ಮರೂ ಬಂದಿದ್ದಾರೆ, ಆದರೆ ಬಾಪ್ದಾದಾರವರು ವರ್ತಮಾನ ಸಮಯದನುಸಾರ ಇಂತಹ ಮೈಕ್ನ್ನು ಬಯಸುತ್ತಾರೆ
ಅಥವಾ ಯಾರ ಮಾತಿನಲ್ಲಿ ಮಹಾನತೆಯಿರುತ್ತದೆ ಅಂತಹ ಮೈಕ್ ಆತ್ಮರ ಅವಶ್ಯಕತೆಯಿದೆ. ಸಾಧಾರಣವಾಗಿ ಬಾಬಾ
ಶಬ್ಧವನ್ನು ಹೇಳುತ್ತಾರೆ, ಚೆನ್ನಾಗಿ ಮಾಡುತ್ತಾರೆ ಎನ್ನುವವರೆಗೆ ತಲುಪಿದ್ದಾರೆ, ಅಂದಾಗ
ಬಾಪ್ದಾದಾರವರು ಅದರ ಶುಭಾಷಯಗಳನ್ನೂ ನೀಡುತ್ತಾರೆ ಆದರೆ ಇಂತಹ ಮೈಕ್ ಬೇಕು - ಯಾರ ಶಬ್ಧಕ್ಕೆ ಜನರೂ
ಸಹ ಬೆಲೆ ನೀಡುತ್ತಾರೆ, ಇಂತಹ ಪ್ರಸಿದ್ಧ ಮೈಕ್ ಆಗಿರಬೇಕು. ಪ್ರಸಿದ್ಧಿಯಾಗಿರುವುದರ ಅರ್ಥವಾಗಿದೆ
– ಶ್ರೇಷ್ಠ ಪದವಿಯಿರುದಷ್ಟೇ ಅಲ್ಲ, ಆದರೆ ಅವರ ಮಾತು ಕೇಳಿ, ಇವರು ಹೇಳುವ ಮಾತಿನಲ್ಲಿ ಬೆಲೆಯಿದೆ
ಎಂದು ಜನರು ತಿಳಿಯಬೇಕು. ಇವರು ಅನುಭವದಿಂದ ಹೇಳುತ್ತಾರೆಂದರೆ ಅದಕ್ಕೆ ಬೆಲೆಯಿರಬೇಕು. ಹೇಗೆ ಮೈಕ್
ಬಹಳಷ್ಟಿರುತ್ತವೆ ಆದರೆ ಮೈಕ್ನಲ್ಲಿಯೂ ಕೆಲವು ಶಕ್ತಿಶಾಲಿಯಾಗಿರುತ್ತದೆ, ಇನ್ನೂ ಕೆಲವು ಹೇಗೊ
ಇರುತ್ತದೆ, ಇದೇರೀತಿ ಯಾರ ಶಬ್ಧದಲ್ಲಿ ಶಕ್ತಿಯಿದೆಯೋ ಅಂತಹ ಮೈಕ್ ಆತ್ಮರನ್ನು ಹುಡುಕಿ. ಅವರ
ಮಾತನ್ನು ಕೇಳಿ ಜನರು ತಿಳಿಯಬೇಕು - ಇವರು ಅನುಭವ ಮಾಡಿ ಬಂದಿದ್ದಾರೆ. ಇದರಲ್ಲಿ ಅವಶ್ಯವಾಗಿ
ಯಾವುದೋ ಮಾತಿದೆ ಎಂದು ತಿಳಿಯಬೇಕು. ಆದರೂ ಸಹ ವರ್ತಮಾನ ಸಮಯ ಪ್ರತಿಯೊಂದು ಜೋನ್, ಪ್ರತಿಯೊಂದು
ವರ್ಗದಲ್ಲಿ ಮೈಕ್ ಆತ್ಮರು ಅವಶ್ಯವಾಗಿ ಬಂದಿದ್ದಾರೆ. ಬಾಪ್ದಾದಾರವರು ಸೇವೆಯ ಪ್ರತ್ಯಕ್ಷ
ಫಲಿತಾಂಶವು ಕಾಣುತ್ತಿಲ್ಲವೆಂದು ಹೇಳುತ್ತಿಲ್ಲ, ಕಾಣುತ್ತಿದೆ. ಆದರೆ ಈಗ ಸಮಯ ಕಡಿಮೆಯಿದೆ ಹಾಗೂ
ಸೇವೆಯ ಮಹತ್ವಿಕೆಯನ್ನಿಡುವ ಆತ್ಮರನ್ನು ಈಗ ನಿಮಿತ್ತರನ್ನಾಗಿ ಮಾಡುವ ಅವಶ್ಯಕತೆಯಿದೆ. ಯಾರ
ಮಾತಿನಲ್ಲಿ ಬೆಲೆಯಿದೆ ಅಂತಹ ಆತ್ಮರನ್ನು ನಿಮಿತ್ತರನ್ನಾಗಿ ಮಾಡಬೇಕು. ಭಲೆ ಪದವಿ ಇಲ್ಲದೇ ಇರಬಹುದು
ಆದರೆ ಅವರ ಪ್ರತ್ಯಕ್ಷ ಜೀವನ, ಪ್ರತ್ಯಕ್ಷ ಅನುಭವದ ಅಥಾರಿಟಿಯಿರಬೇಕು. ಅವರ ಮಾತಿನಲ್ಲಿ ಅನುಭವದ
ಅಥಾರಿಟಿಯಿರಬೇಕು. ಎಂತಹ ಮೈಕ್ ಆತ್ಮರು ಬೇಕೆಂದು ತಿಳಿಯಿತಲ್ಲವೆ? ವಾರಸುಧಾರರೆಂದರೆ ತಿಳಿದೇ ಇದೆ.
ಯಾರ ಪ್ರತೀ ಶ್ವಾಸದಲ್ಲಿ, ಪ್ರತೀ ಹೆಜ್ಜೆಯಲ್ಲಿ ತಂದೆ ಹಾಗೂ ಕರ್ತವ್ಯ ಮತ್ತು ಜೊತೆ ಜೊತೆಯಲ್ಲಿ
ಮನಸ್ಸು-ವಚನ-ಕರ್ಮ, ತನು-ಮನ-ಧನ ಎಲ್ಲದರಲ್ಲಿಯೂ ಬಾಬಾ ಹಾಗೂ ಯಜ್ಞ ಸಮಾವೇಶವಾಗಿರುತ್ತದೆ.
ಬೇಹದ್ದಿನ ಸೇವೆ ಸಮಾವೇಶವಾಗಿರುತ್ತದೆ. ಸಕಾಶ ನೀಡುವಂತಹ ಸಮರ್ಥತೆಯಿರುತ್ತದೆ. ಒಳ್ಳೆಯದು.
ಈಗ ಒಂದು ಸೆಕೆಂಡಿನಲ್ಲಿ,
ಒಂದು ಸೆಕೆಂಡ್ ಆಯಿತೆ, ಒಂದು ಸೆಕೆಂಡಿನಲ್ಲಿ ಸಭೆಯಲ್ಲಿ ಯಾರು-ಯಾರು ಎಲ್ಲೆಲ್ಲಿದ್ದಾರೆಯೋ
ಅಲ್ಲಲ್ಲಿಯೇ ಮನಸ್ಸಿನಲ್ಲಿ ಒಂದೇ ಸಂಕಲ್ಪದಲ್ಲಿ ಸ್ಥಿತ ಮಾಡಿ. ನಾನು ಹಾಗೂ ತಂದೆ, ಪರಮಧಾಮದಲ್ಲಿ
ಅನಾದಿ ಜ್ಯೋತಿರ್ಬಿಂದು ಸ್ವರೂಪನಾಗಿದ್ದೇನೆ, ಪರಮಧಾಮದಲ್ಲಿ ತಂದೆಯ ಜೊತೆ ಕುಳಿತುಬಿಡಿ. ಒಳ್ಳೆಯದು
- ಈಗ ಸಾಕಾರದಲ್ಲಿ ಬನ್ನಿ.
ಈಗ ವರ್ತಮಾನ ಸಮಯದನುಸಾರ
ಮನಸ್ಸು-ಬುದ್ಧಿಯನ್ನು ಏಕಾಗ್ರ ಮಾಡುವ ಅಭ್ಯಾಸವನ್ನು, ಯಾವ ಕಾರ್ಯ ಮಾಡುತ್ತಿದ್ದೀರೋ ಅದೇ
ಕಾರ್ಯದಲ್ಲಿ ಏಕಾಗ್ರ ಮಾಡಿ, ನಿಯಂತ್ರಣಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
ಮನಸ್ಸು-ಬುದ್ಧಿ-ಸಂಸ್ಕಾರ ಮೂರರ ಮೇಲೂ ನಿಯಂತ್ರಣಾ ಶಕ್ತಿಯಿರಬೇಕು. ಈ ಅಭ್ಯಾಸವು ಮುಂಬರುವ
ಸಮಯದಲ್ಲಿ ಬಹಳ ಸಹಯೋಗ ನೀಡುತ್ತದೆ. ವಾಯುಮಂಡಲದನುಸಾರ ಒಂದು ಸೆಕೆಂಡಿನಲ್ಲಿ ನಿಯಂತ್ರಣ
ಮಾಡಬೇಕಾಗುತ್ತದೆ. ಏನು ಬಯಸುತ್ತೀರೋ ಅದೇ ಆಗಬೇಕು ಅಂದಾಗ ಈ ಅಭ್ಯಾಸವು ಬಹಳ ಅವಶ್ಯಕವಾಗಿದೆ.
ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ, ಏಕೆಂದರೆ ಸಮಯದಲ್ಲಿ ಇದೇ ಅಭ್ಯಾಸವು ಚೆನ್ನಾಗಿ ಮಾಡುತ್ತದೆ.
ಒಳ್ಳೆಯದು.
ನಾಲ್ಕೂ ಕಡೆಯ ಡಬಲ್
ಸಿಂಹಾಸನಾಧಿಕಾರಿ, ಬಾಪ್ದಾದಾರವರ ಸಿಂಹಾಸನಾಧಿಕಾರಿ, ಜೊತೆಯಲ್ಲಿ ವಿಶ್ವ ರಾಜ್ಯ ಸಿಂಹಾಸನಾಧಿಕಾರಿ,
ಸದಾ ತಮ್ಮ ಅನಾದಿ ಸ್ವರೂಪ, ಆದಿ ಸ್ವರೂಪ, ಮಧ್ಯ ಸ್ವರೂಪ, ಅಂತಿಮ ಸ್ವರೂಪದಲ್ಲಿ, ಯಾವಾಗ ಬೇಕೋ ಆಗ
ಸ್ಥಿತರಾಗುವಂತಹ ಸದಾ ಸರ್ವ ಖಜಾನೆಗಳನ್ನು ಸ್ವಯಂ ಕಾರ್ಯದಲ್ಲಿ ತೊಡಗಿಸಿ ಮತ್ತು ಅನ್ಯರಿಗೂ ಈ
ಖಜಾನೆಯಿಂದ ಸಂಪನ್ನರನ್ನಾಗಿ ಮಾಡುವಂತಹ ಸರ್ವ ಆತ್ಮರಿಗೆ ತಂದೆಯಿಂದ ಮುಕ್ತಿಯ ಆಸ್ತಿಯನ್ನು
ಕೊಡಿಸುವಂತಹ ಪರಮಾತ್ಮ ಪ್ರೀತಿಗೆ ಪಾತ್ರರಾದ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ, ಹೃದಯದ
ಆಶೀರ್ವಾದಗಳು ಹಾಗೂ ನಮಸ್ತೆ.
ವರದಾನ:
ಸಾಥಿ ಮತ್ತು
ಸಾಕ್ಷೀತನದ ಅನುಭವದ ಮುಖಾಂತರ ಸಫಲತಾ ಮೂರ್ತಿ ಭವ.
ಯಾವ ಮಕ್ಕಳು ಸದಾ ತಂದೆಯ
ಜೊತೆಯಿರುತ್ತಾರೆ ಅವರು ಸ್ವತಃವಾಗಿ ಸಾಕ್ಷಿಯಾಗಿ ಬಿಡುತ್ತಾರೆ ಏಕೆಂದರೆ ತಂದೆ ಸ್ವಯಂ
ಸಾಕ್ಷಿಯಾಗಿರುತ್ತಾ ಪಾತ್ರ ಮಾಡುತ್ತಾರೆ ಅಂದಾಗ ಅವರ ಜೊತೆ ಇರುವವರೂ ಸಹಾ ಸಾಕ್ಷಿಯಾಗಿರುತ್ತಾ
ಪಾತ್ರ ಮಾಡುತ್ತಾರೆ ಮತ್ತು ಯಾರ ಜೊತೆಗಾರ ಸ್ವಯಂ ಸರ್ವ ಶಕ್ತಿವಾನ್ ತಂದೆಯಾಗಿದ್ದಾರೆ ಅವರು
ಸ್ವತಃವಾಗಿ ಸಫಲತಾ ಮೂರ್ತಿಗಳಾಗಿಬಿಡುತ್ತಾರೆ. ಭಕ್ತಿ ಮಾರ್ಗದಲ್ಲಂತೂ ಕರೆಯುತ್ತಾರೆ ಸ್ವಲ್ಪ
ಸಮಯಕ್ಕೆ ಜೊತೆಯ ಅನುಭವ ಮಾಡಿಸಿ, ನೋಟ ತೋರಿಸಿ ಆದರೆ ನೀವು ಸರ್ವ ಸಂಬಂಧಗಳಿಂದ ಜೊತೆಗಾರರಾಗಿ
ಬಿಟ್ಟಿರಿ-ಆದ್ದರಿಂದ ಇದೇ ಖುಶಿ ಮತ್ತು ನಶೆಯಲ್ಲಿರಿ ಏನು ಪಡೆಯ ಬೇಕೊ ಅದನ್ನು ಪಡೆದು ಬಿಟ್ಟೆನು.
ಸ್ಲೋಗನ್:
ವ್ಯರ್ಥ
ಸಂಕಲ್ಪಗಳ ನಿಶಾನಿಯಾಗಿದೆ-ಮನಸ್ಸು ಉದಾಸ ಮತ್ತು ಖುಶಿ ಕಾಣದಾಗುವುದು.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.
ಬಹಳ ಕಾಲ ಅಚಲ-ಅಡೋಲ,
ನಿರ್ವಿಘ್ನ, ನಿರ್ಬಂಧನ, ನಿರ್ವಿಕಲ್ಪ, ನಿರ್ವಿಕರ್ಮ ಅರ್ಥಾತ್ ನಿರಾಕಾರಿ, ನಿರ್ವಿಕಾರಿ ಮತ್ತು
ನಿರಹಂಕಾರಿ ಸ್ಥಿತಿಯಲ್ಲಿರಿ ಆಗ ಕರ್ಮಾತೀತರಾಗಲು ಸಾಧ್ಯ. ಸೇವೆಯ ವಿಚಾರ ಭಲೇ ಎಷ್ಟೇ ಹೆಚ್ಚಿಸಿ
ಆದರೆ ವಿಸ್ತಾರದಲ್ಲಿ ಹೋಗುತ್ತಾ ಸಾರದ ಸ್ಥಿತಿಯ ಅಭ್ಯಾಸ ಕಡಿಮೆಯಾಗಬಾರದು, ವಿಸ್ತಾರದಲ್ಲಿ
ಸಾರವನ್ನು ಮರೆಯಬಾರದು. ತಿನ್ನಿ-ಕುಡಿಯಿರಿ, ಸೇವೆ ಮಾಡಿ ಆದರೆ ಭಿನ್ನತನವನ್ನು ಮರೆಯಬೇಡಿ.