08.02.26    Avyakt Bapdada     Kannada Murli    31.12.2008     Om Shanti     Madhuban


“ಈ ಹೊಸ ವರ್ಷದಲ್ಲಿ ಪರಿವರ್ತನೆ ಶಕ್ತಿಯ ವರದಾನದ ಮೂಲಕ ನಕಾರಾತ್ಮಕತೆಯನ್ನು ಸಕಾರಾತ್ಮಕತೆಯಲ್ಲಿ ಪರಿವರ್ತನೆ ಮಾಡಿ, ಸಂಕಲ್ಪ, ಶ್ವಾಸ ಸಮಯವನ್ನು ಸಫಲ ಮಾಡಿ, ಸಫಲತಾಮೂರ್ತಿಗಳಾಗಿ”


ಈ ದಿನ ನವ ಜೀವನ ಮಾಡುವ ತಂದೆ ತನ್ನ ಎಲ್ಲಾ ಕಡೆಯ ನವ ಜೀವನವನ್ನು ಧಾರಣೆ ಮಾಡಿಕೊಳ್ಳುವ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಈ ನವ ಜೀವನ ಇರುವುದೇ ನವ ಯುಗವನ್ನು ತಯಾರು ಮಾಡಲು. ಜನರು ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ, ತಾವು ಎಲ್ಲಾ ನವ ಜೀವನದ ಮಕ್ಕಳು ಎಲ್ಲಾ ಆತ್ಮರಿಗೆ, ಶುಭಾಶಯಗಳನ್ನೂ ಕೊಡುತ್ತೀರಿ ಜೊತೆಯಲ್ಲಿ ನವಯುಗ ಬಂತು ಅಂದರೆ ಬಂದು ಬಿಟ್ಟಿತ್ತು ಎನ್ನುವ ಇದೇ ಶುಭ ಸಮಾಚಾರವನ್ನು ಕೊಡುತ್ತೀರಿ. ತಾವೆಲ್ಲಾ ಮಕ್ಕಳಿಗಂತೂ ತಂದೆ ಆಸ್ತಿಯ ರೂಪದಲ್ಲಿ ಸ್ವರ್ಣಿಮ ಪ್ರಪಂಚದ ಚಿನ್ನದ ಉಡುಗೊರೆಯನ್ನು ಕೊಟ್ಟು ಬಿಟ್ಟಿದ್ದಾರೆ. ಯಾವ ಸ್ವರ್ಣಿಮ ಪ್ರಪಂಚದಲ್ಲಿ ಅನೇಕ ಚಿನ್ನದ ಉಡುಗೊರೆಗಳು ಇದ್ದೇ ಇರುತ್ತದೆ. ತಮ್ಮೆಲ್ಲರಿಗೂ ಈ ಸ್ವರ್ಣಿಮ ಪ್ರಪಂಚದ ಉಡುಗೊರೆಯಂತೂ ನಮ್ಮ ಜನ್ಮಸಿದ್ಧ ಅಧಿಕಾರವಾಗಿದೆ ಎನ್ನುವ ನಶೆ ಇದೆ. ಈಗಿನ ಪ್ರಪಂಚದಲ್ಲಿ ಯಾರಾದರೂ ಯಾರಿಗಾದರೂ ಎಷ್ಟೇ ದೊಡ್ಡದರಲ್ಲಿ ದೊಡ್ಡ ಉಡುಗೊರೆಯನ್ನು ಕೊಡಲಿ ದೊಡ್ಡದರಲ್ಲಿ ದೊಡ್ಡ ಉಡುಗೊರೆ ಏನು ಕೊಡುತ್ತಾರೆ? ಕಿರೀಟ ಅಥವಾ ಸಿಂಹಾಸನ, ಆದರೆ ತಮ್ಮ ಗೋಲ್ಡನ್ ಉಡುಗೊರೆ ಮುಂದೆ ಅದು ಎಂತಹ ವಸ್ತು ಆಗಿದೆ? ದೊಡ್ಡ ವಸ್ತುವೇನು? ನಮ್ಮ ತಂದೆ ನಮಗೆ ಎಲ್ಲದಕ್ಕಿಂತ ಅತೀ ಶ್ರೇಷ್ಠ ನವಯುಗದ ಉಡುಗೊರೆ ಕೊಟ್ಟಿದ್ದಾರೆ ಎಂದು ನಿಮ್ಮ ಹೃದಯದಲ್ಲಿ ಖುಷಿ ಇದೆ. ನಿಶ್ಚಯವೂ ಇದೆ, ನಿಶ್ಚಿತವೂ ಆಗಿದೆ. ಈ ನಿಶ್ಚಿತವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಈ ಅಟಲ ನಿಶ್ಚಯ ಸದಾ ಸ್ಮೃತಿಯಲ್ಲಿ ಇರುತ್ತದೆಯೇ? ಸದಾ ಇರುತ್ತದೆಯೋ ಅಥವಾ ಕೆಲವೊಮ್ಮೆ ಕಡಿಮೆ ಆಗಿ ಬಿಡುತ್ತದೋ? ಜನ್ಮಸಿದ್ಧ ಅಧಿಕಾರ ಅಂದಮೇಲೆ ಜನ್ಮಸಿದ್ಧ ಅಧಿಕಾರ ಎಂದೂ ಅಲುಗಾಡಲು ಸಾಧ್ಯವಿಲ್ಲ.

ಇಂದು ತಾವೆಲ್ಲಾ ಭಿನ್ನ-ಭಿನ್ನ ಸ್ಥಾನಗಳಿಂದ ಹೊಸ ವರ್ಷವನ್ನು ಆಚರಿಸಲು ಬಂದಿದ್ದೀರಿ ತಾವು ಈ ಹೊಸ ವರ್ಷವನ್ನು ಆಚರಿಸುತ್ತಿದ್ದೀರಿ ಅಂದಾಗ ಈ ಹೊಸ ವರ್ಷದ ಲಕ್ಷ್ಯ ಏನು ಇಟ್ಟುಕೊಂಡಿದ್ದೀರಿ? ಈ ಹೊಸ ವರ್ಷದಲ್ಲಿ ವಿಶೇಷವಾಗಿ ಏನು ಮಾಡಬೇಕಾಗಿದೆ? ಈ ಹೊಸ ವರ್ಷದ ವಿಶೇಷತೆ ಆಗಿದೆ ತಂದೆಯ ಸಮಾನ ಸಂಪನ್ನ ಮತ್ತು ಸಂಪೂರ್ಣ ಆಗಲೇಬೇಕು. ಏನೇ ಪುರುಷಾರ್ಥ ಮಾಡಬೇಕಾಗಿ ಬರಲಿ ಆದರೆ ಇದಂತೂ ನಿಶ್ಚಿತ ನಾವು ತಂದೆಯ ಸಮಾನ ಆಗಲೇಬೇಕು. ಹಾಗಾದರೆ ಹೇಳಿ, ಎಲ್ಲರ ಮನದಲ್ಲಿ ಇದೇ ಪಕ್ಕಾ ಸಂಕಲ್ಪ ಇದೆಯಲ್ಲವೇ, ಇದೆಯೇ? ತಲೆ ಆಡಿಸಿರಿ. ಪ್ರತಿಯೊಂದು ಮಗು ತಂದೆಯ ಸಮಾನ ಆಗಲಿ ಎಂದು ತಂದೆಯು ಇದೇ ಬಯಸುತ್ತಾರೆ. ತಂದೆಯಂತೂ ತಂದೆಯೇ ಆದರೆ ಮಕ್ಕಳು ತಂದೆಗಿಂತಲೂ ಶ್ರೇಷ್ಟರು ಅಂದಮೇಲೆ ತಂದೆಯ ಸಮಾನರಾಗುವ ಲಕ್ಷ್ಯವನ್ನು ಪೂರ್ತಿ ಮಾಡಲು ತಂದೆಯನ್ನು ಅನುಕರಣೆ ಮಾಡಬೇಕು. ತಾವೇ ಯೋಚಿಸಿ - ತಂದೆ, ಬ್ರಹ್ಮಾ ತಂದೆ ಸಂಪೂರ್ಣ ಹೇಗಾದರು? ಅವರ ವಿಶೇಷತೆ ಏನಿತ್ತು? ಸಂಪೂರ್ಣರಾಗಲು ವಿಶೇಷ ಆಧಾರ ಏನಾಗಿತ್ತು? ಬ್ರಹ್ಮಾ ತಂದೆ ತಮ್ಮ ಪ್ರತಿಯೊಂದು ಸಮಯವನ್ನು ಸಫಲ ಮಾಡಿದರು. ಶ್ವಾಸ-ಶ್ವಾಸ, ಸೆಕೆಂಡ್-ಸೆಕೆಂಡ್ನ್ನು ಸಫಲ ಮಾಡಿದರು ಅಂದಾಗ ಈ ವರ್ಷ ಏನು ಲಕ್ಷ್ಯ ಇಟ್ಟುಕೊಳ್ಳುತ್ತೀರಿ? ಸಫಲ ಮಾಡಿಕೊಳ್ಳಬೇಕು ಹಾಗೂ ಸಫಲತಾಮೂರ್ತಿಗಳು ಆಗಲೇಬೇಕು. ಸಫಲತೆ ನಮ್ಮ ಕೊರಳಿನ ಹಾರವಾಗಿದೆ. ಸಫಲತೆ ನಮ್ಮ ತಂದೆಯ ಆಸ್ತಿ ಆಗಿದೆ, ಅಂದಾಗ ಈ ಲಕ್ಷ್ಯದಿಂದ ಪರಿಶೀಲನೆ ಮಾಡಿಕೊಳ್ಳಿ. ಪ್ರತಿದಿನ ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿ, ಸಫಲತಾಮೂರ್ತಿಗಳಾಗಿ ಸಮಯ, ಶ್ವಾಸ, ಖಜಾನೆಗಳು, ಶಕ್ತಿಗಳು, ಗುಣಗಳು ಎಲ್ಲವನ್ನು ಸಫಲ ಮಾಡಿಕೊಂಡಿದ್ದೇನೆಯೇ? ಈಗಿನ ಸಫಲತೆಯಿಂದ ಭವಿಷ್ಯದ 21 ಜನ್ಮಗಳಿಗೆ ಜಮಾ ಆಗುತ್ತದೆ, ಈಗ ತಾವು ಏನೆಲ್ಲಾ ಸಫಲ ಮಾಡಿಕೊಂಡಿದ್ದೀರಿ ಅದರ ಫಲ ಜಮಾ ಆಗುತ್ತದೆ, ಇದಂತೂ ಗೊತ್ತಿದೆ, ಮೊದಲೇ ತಿಳಿಸಲಾಗಿದೆ, ಒಂದುವೇಳೆ, ತಾವು ಸಮಯ ಸಫಲ ಮಾಡಿಕೊಳ್ಳುತ್ತೀರೆಂದರೆ ಭವಿಷ್ಯದಲ್ಲಿಯೂ ತಮಗೆ ಪೂರ್ತಿ ಸಮಯದ ರಾಜ್ಯಭಾಗ್ಯ ಪ್ರಾಪ್ತಿ ಆಗುತ್ತದೆ. ಶ್ವಾಸವನ್ನು ಸಫಲ ಮಾಡಿಕೊಳ್ಳುತ್ತೀರೆಂದರೆ 21 ಜನ್ಮ ಆರೋಗ್ಯವಾಗಿರುತ್ತೀರಿ. ಆರೋಗ್ಯದಲ್ಲಿ ಎಂದಿಗೂ ಯಾವ ಕಡಿಮೆ ಆಗುವುದಿಲ್ಲ ಮತ್ತು ಜೊತೆಯಲ್ಲಿ ಯಾವುದೆಲ್ಲಾ ಖಜಾನೆ ಜಮಾ ಮಾಡಿಕೊಳ್ಳುತ್ತೀರಿ, ಎಲ್ಲದಕ್ಕಿಂತ ದೊಡ್ಡ ಖಜಾನೆ ಜ್ಞಾನದ ಖಜಾನೆ ಆಗಿದೆ. ಜ್ಞಾನದ ಅರ್ಥ ತಿಳುವಳಿಕೆ ಆಗಿದೆ ಅಂದಮೇಲೆ ಜ್ಞಾನದ ಖಜಾನೆ ಸಫಲ ಮಾಡುವುದರಿಂದ ಭವಿಷ್ಯದಲ್ಲಿ ತಾವು ಈ ರೀತಿ ತಿಳುವಳಿಕೆವುಳ್ಳವರು ಆಗುತ್ತೀರಿ. ಅಲ್ಲಿ ತಾವು ಯಾವುದೇ ಮಂತ್ರಿಗಳಿಂದ ಸಲಹೆ ಪಡೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ತಾವೇ ಸ್ವಯಂ ಅಖಂಡ ರಾಜ್ಯ, ಅಟಲ ರಾಜ್ಯ ನಡೆಸುತ್ತೀರಿ ಹಾಗೂ ತಮ್ಮ ರಾಜ್ಯದಲ್ಲಿ ಯಾವುದೇ ವಿಘ್ನಗಳು ಇರುವುದಿಲ್ಲ. ನಿರ್ವಿಘ್ನ, ಅಟಲ, ಅಖಂಡವಾಗಿರುತ್ತದೆ. ಇದಾಗಿದೆ ಜ್ಞಾನದ ಖಜಾನೆ ಜಮಾ ಮಾಡುವುದರ ಫಲ. ಒಂದು ಜನ್ಮ ಸಫಲ ಮಾಡಿಕೊಂಡಿದ್ದೀರಿ ಮತ್ತು ಅನೇಕ ಜನ್ಮಗಳು ಸಫಲತೆಯ ಫಲ ತಿನ್ನುತ್ತೀರಿ. ಅದೇ ರೀತಿ ಪ್ರಾಪ್ತವಾಗಿರುವ ಶಕ್ತಿಗಳನ್ನು ಸ್ವಯಂ ಪ್ರತಿ ಅಥವಾ ಅನ್ಯರ ಪ್ರತಿ ಸಫಲ ಮಾಡಿಕೊಳ್ಳುತ್ತೀರಿ ಎಂದರೆ ಭವಿಷ್ಯದಲ್ಲಿ ತಮ್ಮ ರಾಜ್ಯದಲ್ಲಿ ಸರ್ವ ಶಕ್ತಿಗಳು ಇರುತ್ತದೆ. ಎಂದೂ ಯಾವ ಶಕ್ತಿಯ ಕೊರತೆ ಇರುವುದಿಲ್ಲ, ಹಾಗೆಯೇ ತಾವು ಗುಣ ದಾನ ಮಾಡುತ್ತೀರಿ ಎಂದರೆ ತಮ್ಮ ಅಂತಿಮ ಜನ್ಮ 84ನೇ ಜನ್ಮದವರೆಗೆ ಯಾವ ಜಡ ಚಿತ್ರಗಳನ್ನು ಮಾಡುತ್ತಾರೆ ಕೊನೆಯವರೆಗೆ ತಮ್ಮದು ಏನು ಮಹಿಮೆ ಮಾಡುತ್ತಾರೆ? ಸರ್ವಗುಣ ಸಂಪನ್ನ, ಅಂದಾಗ ಒಂದೊಂದರ ಸಫಲತೆಯ ಪ್ರಾಪ್ತಿಯಿಂದ ಅನೇಕ ಜನ್ಮಕ್ಕೆ ಅಧಿಕಾರಿಗಳು ಆಗಿ ಬಿಡುತ್ತೀರಿ ಅಂದಾಗ ಈ ವರ್ಷ ಏನು ಮಾಡಬೇಕು? ಒಂದು ಶ್ವಾಸ, ಒಂದು ಸೆಕೆಂಡೂ ಸಹ ಅಸಫಲ ಆಗಬಾರದು, ಸಫಲ ಮಾಡಿಕೊಳ್ಳಬೇಕು. ಜಮಾದ ಸಮಯ ಒಂದು ಚಿಕ್ಕದಾದ ಸಮಯ ಹಾಗೂ ಫಲದ ಸಮಯ 21 ಜನ್ಮ ಅಂದಮೇಲೆ ಈ ವರ್ಷದಲ್ಲಿ ತಂದೆಯ ಸಮಾನ ಆಗುವ ಲಕ್ಷ್ಯವಿದೆಯೇ? ಎಲ್ಲರಿಗೂ ತಂದೆಯ ಸಮಾನ ಆಗಲೇಬೇಕು ಎನ್ನುವ ಲಕ್ಷ್ಯವಿದೆಯೇ? ಆಗಬೇಕು ಅಲ್ಲ, ಆಗಲೇಬೇಕು. “ಆಗಲೇಬೇಕು” ಎನ್ನುವ ಮಾತನ್ನು ಅಂಡರ್ಲೈನ್ ಮಾಡಿಕೊಳ್ಳಿ. ಮಕ್ಕಳೂ ಆಗುತ್ತೀರಾ? ಚಿಕ್ಕ-ಚಿಕ್ಕ ಮಕ್ಕಳು ಆಗುತ್ತೀರಿ. ಮಕ್ಕಳಿಗೆ ಕಿರೀಟ ಚೆನ್ನಾಗಿ ಕಾಣಿಸುತ್ತಿದೆ (ಎಲ್ಲಾ ಮಕ್ಕಳು ಕಿರೀಟ ಧರಿಸಿಕೊಂಡಿದ್ದಾರೆ) ಬಹಳ ಚೆನ್ನಾಗಿದೆ.

ಈ ವರ್ಷದ ಲಕ್ಷ್ಯವನ್ನೂ ಇಟ್ಟುಕೊಂಡಿದ್ದೀರಿ ಹಾಗೂ ಜೊತೆಯಲ್ಲಿ ತಂದೆಯನ್ನು ಫಾಲೋ ಮಾಡುವ ಮಂತ್ರ ಸಫಲ ಮಾಡಿ ಸಫಲತಾ ಮೂರ್ತಿಗಳಾಗಬೇಕು, ಅದಕ್ಕಾಗಿ ಹೆಚ್ಚು ಪರಿಶ್ರಮ ಅಥವಾ ಕಷ್ಟವನ್ನು ಬಾಪ್ದಾದಾರವರು ಮಕ್ಕಳಿಗೆ ಕೊಡುವುದಿಲ್ಲ. ಬಹಳ ಸಹಜ ವಿಧಿ ಹೇಳುತ್ತಾರೆ, ಸಹಜ ವಿಧಿ ಯಾವುದು? ಏನೇ ಸಂಕಲ್ಪ ಮಾಡಲಿ, ತಂದೆಯ ಸಂಕಲ್ಪ ಹೀಗಿತ್ತೇನು? ಎಂದು ಮೊದಲು ಪರಿಶೀಲನೆ ಮಾಡಿಕೊಳ್ಳಿ, ಆಡುವ ಮಾತುಗಳನ್ನು ಪರಿಶೀಲನೆ ಮಾಡಿಕೊಳ್ಳಿ, ಏಕೆಂದರೆ ತಂದೆಯ ಸಮಾನ ಆಗಬೇಕಲ್ಲವೇ. ಅಂದಾಗ ಸಂಕಲ್ಪ, ಮಾತು, ಕರ್ಮ, ಸಂಬಂಧ-ಸಂಪರ್ಕ ಮೊದಲು ಯೋಚಿಸಿ, ತಂದೆಯದು ಹೀಗಿತ್ತೇನು? ಎಂದು ಪರಿಶೀಲನೆ ಮಾಡಿಕೊಳ್ಳಿ ಮತ್ತು ತಂದೆಯ ಹಾಗೆ ಸ್ವರೂಪರಾಗಿ. ಬ್ರಹ್ಮಾ ತಂದೆಯನ್ನು ಅನುಕರಣೆ ಮಾಡಿ. ಫಾಲೋ ಫಾದರ್ ಎಂಬ ಗಾಯನವಿದೆಯಲ್ಲವೇ. ಕೆಲವು ಮಕ್ಕಳು ಬಹಳ ಒಳ್ಳೊಳ್ಳೆಯ ಆಟವನ್ನು ತೋರಿಸುತ್ತಾರೆ. ಗೊತ್ತಿದೆಯೇ? ಯಾವ ಆಟವನ್ನು ತೋರಿಸುತ್ತಾರೆ ಗೊತ್ತಿದೆಯೇ? ಫಾಲೋ ಮಾಡುವುದಿಲ್ಲ ಆದರೆ ಏನು ಹೇಳುತ್ತಾರೆ? ಈ ರೀತಿ ನಾನು ಬಯಸಿರಲಿಲ್ಲ ಆದರೆ ಆಗಿ ಹೋಯಿತು. ಮೊದಲು ಯೋಚಿಸಿ ನಂತರ ಯೋಚಿಸಬೇಡಿ, ಸ್ವರೂಪರಾಗಿ ಬಿಡಿ. ಒಂದುವೇಳೇ ಸ್ವರೂಪರಾಗುತ್ತೀರೆಂದರೆ ತಾವು ಈ ರೀತಿ ಹೇಳುವುದಿಲ್ಲ, “ನಾನು ಯೋಚಿಸಿರಲಿಲ್ಲ ಆದರೆ ಆಗಿ ಹೋಯಿತು” ಮಾಡುವವರು, ಯೋಚನೆ ಮಾಡುವವರು ತಾವು ಶ್ರೇಷ್ಠ ಆತ್ಮಗಳು ಮಾಲೀಕರಾಗಿದ್ದೀರಿ. ಕರ್ಮೇಂದ್ರಿಯಗಳ ಮೇಲೆ ಕಂಟ್ರೋಲ್ ಇಲ್ಲ ಎನ್ನುವುದು ಆಗಿ ಹೋಯಿತು ಎಂಬ ಶಬ್ದ ತೋರಿಸುತ್ತದೆ.

ಈ ವರ್ಷದಲ್ಲಿ ಇದೇ ಸ್ಲೋಗನ್ ನೆನಪಿಟ್ಟುಕೊಳ್ಳಿ - ತಂದೆಯ ಸಮಾನ ಮಾಡಲೇಬೇಕು, ಆಗಲೇಬೇಕು. ಕಷ್ಟವಿಲ್ಲ ತಾನೆ? ತಂದೆ ಹೇಗೆ ಮಾಡಿದ್ದಾರೆ ಹಾಗೆಯೇ ಮಾಡುವುದು, ಕಾಪಿ ಮಾಡುವುದು ಸಹಜ ಅಲ್ಲವೇ, ಯೋಚಿಸುವ ಅವಶ್ಯಕತೆ ಇಲ್ಲ. ಮತ್ತು ತಮ್ಮೆಲ್ಲರಿಗೂ ನಿಶ್ಚಿತವಾಗಿದೆ ಬ್ರಹ್ಮಾ ತಂದೆ ಹೇಗೆ ಫರಿಸ್ತೆ ಆದರು ಅಂದಾಗ ಫರಿಸ್ತೆಯಿಂದ ದೇವತೆ ಆಗಲೇಬೇಕು ಎನ್ನುವುದು ನಿಶ್ಚಿತವಾಗಿದೆ. ಅಂದಾಗ ತಾವೂ ಸಹ ಫರಿಸ್ತೆಯಿಂದ ದೇವತೆ ಆಗಲೇಬೇಕು. ಕೆಲವು ಮಕ್ಕಳು ಹೇಳುತ್ತಾರೆ - ನಡೆಯುತ್ತಾ-ನಡೆಯುತ್ತಾ ಬಹಳ ಮಾಯೆಯ ವಿರೋಧ (ಅಪೋಸಿಶನ್) ಆಗುತ್ತದೆ, ಅಪೋಸಿಶನ್ ಕಾರಣ ಸ್ಥಿತಿಯಿಂದ ಕೆಳಗೆ ಇಳಿದು ಬಿಡುತ್ತಾರೆ ಆದರೆ ನೆನಪು ಇಟ್ಟುಕೊಳ್ಳಿ - ತಂದೆಯ ಸಮಾನ ಆಗಬೇಕೆಂದರೆ ಸ್ಥಾಪನೆಯ ಆದಿಯಲ್ಲಿ ಬ್ರಹ್ಮಾ ತಂದೆಯವರು ಎಷ್ಟು ಅಪೋಜಿಶನ್ನ್ನು ಪೊಸಿಶನ್ನಲ್ಲಿ ಮಾಡಿದರು? ಪ್ರತಿಯೊಂದು ಮಾತು ಹೊಸದು ಚಾಲೆಂಜ್ ಆಗಿತ್ತು. ಈಗಂತೂ ಜಮಾನ ಬಹಳ ಬದಲಾವಣೆ ಆಗಿದೆ ಆದರೆ ಬ್ರಹ್ಮಾ ತಂದೆ ಒಂಟಿಯಾಗಿ ಎಷ್ಟು ಸ್ವಮಾನದಲ್ಲಿ ಸೀಟಿನ ಮೇಲೆ ಕುಳಿತು ಪೊಜಿಶನ್ (ಸ್ಥಿತಿಯ) ಮೂಲಕ ಅಪೋಜಿಶನ್ನ್ನು ಎದುರಿಸಿದರು. ಎಲ್ಲಿ ಪೊಜಿಶನ್ ಇದೆ ಅಲ್ಲಿ ಅಪೊಜಿಶನ್ ಏನೂ ಮಾಡಲು ಸಾಧ್ಯವಿಲ್ಲ. ಮೊದಲು ಏನು ಹೇಳುತ್ತಿದ್ದರು? ಇವರು ಏರುಪೇರು ಮಾಡುತ್ತಾರೆ ಎಂದು ಮತ್ತು ಈಗ ಏನು ಹೇಳುತ್ತಾರೆ? ಕಮಾಲ್ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಎಷ್ಟೊಂದು ಅಂತರವಿದೆ. ಕಾರಣ ಏನು? ಬ್ರಹ್ಮಾತಂದೆಯವರು ಸ್ವಯಂ ಸ್ವಮಾನದ ಸೀಟ್ ಮತ್ತು ನಿಶ್ಚಯದ ಶಸ್ತ್ರಗಳ ಮೂಲಕ ಅಪೋಜಿಶನ್ನ್ನು ಸಮಾಪ್ತಿ ಮಾಡಿದರು ಅಂದಾಗ ತಾವು ಈ ವರ್ಷದಲ್ಲಿ ಏನು ಮಾಡುತ್ತೀರಿ? ಸಮಾನ ಆಗಬೇಕಲ್ಲವೇ. ಒಂದುವೇಳೆ ಸದಾ ಅಪೋಜಿಶನ್ ಆಗುತ್ತದೆ ಎಂದರೆ ಸ್ವಮಾನದ ಸೀಟಿನ ಮೇಲೆ ಕುಳಿತುಬಿಡಿ ಆಗ ಅಪೋಜಿಶನ್ ಪೋಜಿಶನ್ನಲ್ಲಿ ಬದಲಾಗಿ ಬಿಡಲಿ. ಸಾಹಸವಿದೆಯೇ? ಬ್ರಹ್ಮಾ ತಂದೆಯ ಸಮಾನ ಆಗಲೇಬೇಕು. ಅದರಲ್ಲಂತೂ ಕೈ ಎತ್ತಿದಿರಿ ಆದರೆ ಇಷ್ಟು ಸಾಹಸವಿದೆಯೇ? ಮೊಟ್ಟ ಮೊದಲು ಸ್ವಯಂನ ಪರಿವರ್ತನೆ, ನಂತರ ಅನೇಕ ಸಂಬಂಧ-ಸಂಪರ್ಕದಲ್ಲಿ ಬರುವ ಆತ್ಮಗಳ ಪರಿವರ್ತನೆ ಹಾಗೂ ನಂತರ ವಿಶ್ವದ ಆತ್ಮಗಳ ಪರಿವರ್ತನೆ ತಮ್ಮ ಮನಸಾ ಶುಭ ಭಾವನೆ, ಶುಭ ಕಾಮನೆಯ ಮೂಲಕ, ದೃಢ ಸಂಕಲ್ಪದ ಮೂಲಕ ಪರಿವರ್ತನೆ ಮಾಡಬೇಕು.

ಅಂದಾಗ ಈ ವರ್ಷದಲ್ಲಿ ವಿಶೇಷವಾಗಿ ಒಂದು ಶಕ್ತಿಯ ವರದಾನವನ್ನು ಕೊಡುತ್ತಿದ್ದಾರೆ. ನನ್ನ ಬಾಬಾ ಎಂದು ಹೃದಯದಿಂದ ಹೇಳಿದರೆ ಆ ಶಕ್ತಿ ಪ್ರತ್ಯಕ್ಷ ಆಗುತ್ತದೆ, ಕೇವಲ ನನ್ನ ಬಾಬಾ ಎನ್ನುವುದಲ್ಲ, ಹೃದಯದಿಂದ ಹೇಳಿ, ಅಧಿಕಾರದಿಂದ ನನ್ನ ಬಾಬಾ ಎಂದು ಹೇಳಿದಾಗ ಶಕ್ತಿ ಪ್ರತ್ಯಕ್ಷ ಆಗಿ ಬಿಡುತ್ತದೆ. ಅದು ಯಾವ ಶಕ್ತಿ? ಪರಿವರ್ತನೆಯ ಶಕ್ತಿ ಆಗಿದೆ. ಪರಿವರ್ತನೆಯ ಶಕ್ತಿಯಲ್ಲಿ ವಿಶೇಷವಾಗಿ ನಕಾರಾತ್ಮಕವನ್ನು ಸಕಾರಾತ್ಮಕತೆಯಲ್ಲಿ ಪರಿವರ್ತನೆ ಮಾಡಿ, ವ್ಯರ್ಥ ಸಂಕಲ್ಪ, ವ್ಯರ್ಥ ಚಲನೆಯನ್ನು ನೋಡುತ್ತಾ ಸಕಾರಾತ್ಮಕತೆಯಲ್ಲಿ ಪರಿವರ್ತನೆ ಮಾಡಿಕೊಳ್ಳಿ. ಸಕಾರಾತ್ಮಕತೆಯನ್ನೇ ನೋಡುವುದು, ಮಾತನಾಡುವುದು, ಮಾಡುವುದು, ಕೇವಲ ಶುಭ ಭಾವನೆ ಹಾಗೂ ಶುಭ ಕಾಮನೆಯ ಮೂಲಕ ಸಹಜವಾಗಿ ಬಿಡುತ್ತದೆ ಏಕೆಂದರೆ ಈ ಅಪೋಸಿಶನ್ಂತೂ ಬಂದೇ ಬರುತ್ತದೆ, ಆದರೆ ತಮ್ಮ ಪರಿವರ್ತನೆಯ ಶಕ್ತಿ ತಮಗೆ ಸಹಜ ಸಫಲತೆಯನ್ನು ಕೊಡಿಸುತ್ತದೆ ಹಾಗಾದರೆ ತಿಳಿಯಿತೇ? ಈ ವರ್ಷದ ವಿಶೇಷ ವರದಾನ ಪರಿವರ್ತನೆಯ ಶಕ್ತಿಯನ್ನು ದೃಢ ಸಂಕಲ್ಪದಿಂದ ಕಾರ್ಯದಲ್ಲಿ ತೆಗೆದುಕೊಂಡು ಬನ್ನಿ. ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಲ್ಲವೇ? ನಿಮ್ಮ ಚಾಲೆಂಜ್ ನೆನಪಿದೆಯಲ್ಲವೇ? ತಾವು ವಿಶ್ವ ಪರಿವರ್ತಕರಲ್ಲವೇ. ವಿಶ್ವ ಪರಿವರ್ತಕ ಎಂಬ ಟೈಟಿಲ್ ನಿಮ್ಮದು ಅಂದಮೇಲೆ ಸ್ವಯಂನ್ನು ಪರಿವರ್ತನೆ ಮಾಡಿಕೊಳ್ಳುವುದು ಕಷ್ಟವೇನು! ಹೃದಯದಲ್ಲಿ ಯಾವುದೇ ಕಷ್ಟದ ಮಾತುಗಳು ಬಂದಲ್ಲಿ, ಹಾಗೆ ನೋಡಿದರೆ ಕಷ್ಟದ ಮಾತೇನೂ ಇರುವುದಿಲ್ಲ ತಾವು ಮಾಡಿಕೊಂಡು ಬಿಡುತ್ತೀರಿ. ತಾವು ಮಾಸ್ಟರ್ ಸರ್ವಶಕ್ತಿವಂತರು, ತಮ್ಮ ಮುಂದೆ ಯಾವುದು ತಾನೆ ಕಷ್ಟ? ಆದರೆ ತಾವು ಒಂದು ತಪ್ಪು ಮಾಡಿ ಬಿಡುತ್ತೀರಿ ಹಾಗೂ ಕಷ್ಟ ಮಾಡಿಕೊಂಡು ಬಿಡುತ್ತೀರಿ. ಹೇಗೆ ಇಲ್ಲಿ ಏನಾದರೂ ಅಂಧಕಾರವಾದಲ್ಲಿ ಯಾರಾದರೂ ಅಪ್ಪಿ-ತಪ್ಪಿ ಅಂಧಕಾರವನ್ನು ಓಡಿಸಲು ಪ್ರಯತ್ನ ಮಾಡಿದರೆ ಅಂಧಕಾರ ಓಡಿ ಹೋಗುತ್ತದೇನು? ತಾವು ಬೆಳಕಿನ ಸ್ವಿಚ್ ಆನ್ ಮಾಡಿದಾಗ ಅಂಧಕಾರ ಸೆಕೆಂಡಿನಲ್ಲಿ ಓಡಿ ಹೋಗುತ್ತದೆ ಇದು ಸರಿಯಾದ ವಿಧಿ ಆಗಿದೆ. ಅಂದಾಗ ತಾವೂ ಸಹ ಈ ತಪ್ಪು ಮಾಡುತ್ತೀರಿ, ಯಾವ ಮಾತು ನಡೆದು ಹೋಗಿದೆ ಅದಕ್ಕೆ ಏಕೆ? ಏನು? ಯಾವಾಗ? ಹೇಗೆ? ಈ ಸಾಲು ಏಕೆ ಎಂಬ ಸಾಲಿನಲ್ಲಿ ಹೋಗುತ್ತೀರಿ. ಚಿಕ್ಕದಾದ ಮಾತನ್ನು ದೊಡ್ಡದಾಗಿ ಮಾಡುತ್ತೀರಿ ಅದು ದೊಡ್ಡ ಮಾತು ಆದಾಗ ಕಷ್ಟವಾಗುತ್ತದೆ. ಚಿಕ್ಕ ಮಾತು ಮಾಡಿಕೊಳ್ಳಿ ಅಂದಾಗ ಸಹಜ ಆಗಿಬಿಡಲಿ. ತಂದೆ ಯಾವುದೇ ಶಕ್ತಿಯನ್ನು ಕಾರ್ಯದಲ್ಲಿ ತೊಡಗಿಸುವ ವಿಧಿ ಬಹಳ ಸಹಜವಾಗಿ ಹೇಳಿದ್ದಾರೆ. ತಮ್ಮ ಮಾಸ್ಟರ್ ಸರ್ವಶಕ್ತಿವಾನ್, ಈ ಸ್ಮೃತಿಯ ಸೀಟಿನಲ್ಲಿ ಕುಳಿತುಕೊಳ್ಳಿ. ಒಂದುವೇಳೆ ಈ ಸೀಟಿನಲ್ಲಿ ಕುಳಿತುಕೊಂಡರೆ ಅಪ್ಸೆಟ್ ಆಗುವುದಿಲ್ಲ. ಸೀಟಿನಲ್ಲಿ ಕುಳಿತುಕೊಂಡಿಲ್ಲವೆಂದರೆ ಅಪ್ಸೆಟ್ ಆಗುತ್ತಾರೆ. ಸೀಟ್ ಇದ್ದರೆ ಅಪ್ಸೆಟ್ ಆಗುವುದಿಲ್ಲ. 63 ಜನ್ಮದ ಸಂಸ್ಕಾರ ಇಮರ್ಜ್ ಆಗಿಬಿಡುತ್ತದೆ. 63 ಜನ್ಮ ಏನಿತ್ತು? ಈಗೀಗ ಸೆಟ್, ಈಗೀಗ ಅಪ್ಸೆಟ್ ಅಂದಾಗ ಸದಾ ಸ್ವಮಾನದ ಸೀಟಿನ ಮೇಲೆ ಸೆಟ್ ಆಗಿರಿ ಮತ್ತು ಈ ವರ್ಷದಲ್ಲಿ ಏನು ಮಾಡುತ್ತೀರಿ? ಹೊಸ ವರ್ಷದಲ್ಲಿ ಉಡುಗೊರೆಯಂತೂ ಎಲ್ಲರಿಗೂ ಕೊಡುತ್ತೀರಲ್ಲವೇ? ಹಾಗಾದರೆ ಯಾವ ಉಡುಗೊರೆ ಕೊಡುತ್ತೀರಿ? ಶುಭಾಶಯಗಳಂತೂ ಕೊಡುತ್ತೀರಿ, ಅದರ ಜೊತೆ ಉಡುಗೊರೆ ಏನು ಕೊಡುತ್ತೀರಿ? ಉಡುಗೊರೆಯಂತೂ ತಮ್ಮ ಬಳಿ ಬಹಳಷ್ಟು ಇದೆ. ಎಷ್ಟು ಕೊಡಲು ಬಯಸುತ್ತೀರೋ ಅಷ್ಟೂ ಕೊಡಬಹುದು. ಸ್ಥೂಲ ಉಡುಗೊರೆಯಂತೂ ಅಲ್ಪಕಾಲಕ್ಕಾಗಿ ನಡೆಯುತ್ತದೆ ಆದರೆ ತಾವು ಅವಿನಾಶಿ ತಂದೆಯ ಸಮಾನ ಆಗುವವರು ಅವಿನಾಶಿ ಉಡುಗೊರೆಯನ್ನು ಕೊಡಿ. ಮನಸ್ಸಿನ ಮೂಲಕ ಶಕ್ತಿಗಳ ಉಡುಗೊರೆ ಕೊಡಿ, ವಾಚಾದಿಂದ ಜ್ಞಾನದ ಗಿಫ್ಟ್ ಕೊಡಿ, ಕರ್ಮದ ಮೂಲಕ ಗುಣಗಳ ಗಿಫ್ಟ್ ಕೊಡಿ, ಎಲ್ಲರ ಬಳಿ ಇದೆಯಲ್ಲವೇ? ಇದೆ ಅಂದರೆ ತಲೆ ಆಡಿಸಿ, ಬಹಳ ಖಜಾನೆ ಇದೆಯಲ್ಲವೇ, ಕಡಿಮೆಯಂತೂ ಇಲ್ಲ ತಾನೇ? ಯಾರೊಂದಿಗಾದರೂ ಕಾರ್ಯದಲ್ಲಿ ಬನ್ನಿ, ಕಾರ್ಯದಲ್ಲಂತೂ ಬರಲೇಬೇಕಲ್ಲವೇ. ಅವರಿಗೆ ಈ ವರ್ಷದಲ್ಲಿ ಹೆಚ್ಚು ಉಡುಗೊರೆಯನ್ನು ಕೊಡಿ ಆದರೆ ಅವಿನಾಶಿ ಉಡುಗೊರೆ ಆಗಿರಲಿ. ತಿಳಿಸಿದ್ದೇನಲ್ಲವೇ ಯಾರನ್ನೂ ಖಾಲಿ ಹೋಗಲು ಬಿಡಬೇಡಿ. ಮನಸ್ಸಿನ ಬಹುಮಾನ ಆದರೂ ಕೊಡಿ, ಮಾತಿನಿಂದ ಅಥವಾ ಕರ್ಮದಿಂದಲಾದರೂ ಕೊಡಿ, ಅದಕ್ಕಾಗಿ ಸದಾ ತಮಗೆ ಒಂದು ಗಮನ ಇಟ್ಟುಕೊಳ್ಳಬೇಕಾಗುತ್ತದೆ, ಪ್ರತಿಯೊಂದು ಸಮಯ ಮನಸ್ಸಿನಲ್ಲಿ ಶಕ್ತಿಗಳ ಸ್ಟಾಕ್ ಇಟ್ಟುಕೊಳ್ಳಬೇಕು. ಎಷ್ಟೊಂದು ಶಕ್ತಿಗಳಿದೆಯಲ್ಲವೇ? ಲಿಸ್ಟ್ ಇದೆಯಲ್ಲವೇ. ವಾಚಾದ ಕಾರಣ ಸದಾ ಮನದಲ್ಲಿ ಮನನ ಶಕ್ತಿ, ಜ್ಞಾನವನ್ನು ಮನನ ಮಾಡುವ ಶಕ್ತಿ, ಸ್ಮೃತಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಚಲನೆಯಲ್ಲಿ, ಮುಖದಲ್ಲಿ, ಕರ್ಮದಲ್ಲಿ ಗುಣಗಳ ಸ್ವರೂಪ ಆಗಬೇಕು. ಸದಾ ತಮ್ಮನ್ನು ತಾವು ಗುಣ ಮೂರ್ತಿ, ಜ್ಞಾನ ಮೂರ್ತಿ, ಶಕ್ತಿ ಸ್ವರೂಪದಲ್ಲಿ ಇಮರ್ಜ್ ಮಾಡಿಕೊಳ್ಳಬೇಕು. ಈ ರೀತಿ ಅಲ್ಲ ಶಕ್ತಿಗಳಂತೂ ಇದ್ದೇ ಇದೆ, ಜ್ಞಾನವಂತೂ ಇದ್ದೇ ಇದೆ... ಆದರೆ ಸ್ವರೂಪರಾಗಬೇಕು. ಪ್ರತಿಯೊಬ್ಬರನ್ನು ಈಶ್ವರೀಯ ಪರಿವಾರದ ದೃಷ್ಟಿ-ವೃತ್ತಿಯಿಂದ ನೋಡಬೇಕಾಗುತ್ತದೆ. ಈ ವರ್ಷ ತಂದೆಯ ಸಮಾನ ಆಗಲೇಬೇಕು ಇದರಲ್ಲಿ ಕೈ ಎತ್ತಿ ಬಿಟ್ಟಿದ್ದೀರಿ. ಬಾಪ್ದಾದಾರವರ ವತನದಲ್ಲಿ ಎಲ್ಲರ ಕೈಗಳು ಕಾಣಿಸಲ್ಪಡುತ್ತದೆ. ಅಲ್ಲಿ ಈ ಚಿಕ್ಕ ಟಿ.ವಿ. ಇಲ್ಲ, ಬಹಳ ದೊಡ್ಡದಾಗಿದೆ. ಒಂದು ಸೆಕೆಂಡಿನಲ್ಲಿ ಎಲ್ಲಾ ಸೇವಾಕೇಂದ್ರಗಳ ಫಲಿತಾಂಶವನ್ನು ನೋಡಬಹುದು ಅಂದಾಗ ಬಾಪ್ದಾದಾರವರು ತಂದೆಯ ಸಮಾನ ಆಗಲೇಬೇಕು ಎಂಬ ನಿಮ್ಮ ಈ ಉಮಂಗವನ್ನು ನೋಡಿ ಬಹಳ ಖುಷಿ ಪಡುತ್ತಾರೆ. ಅದೃಷ್ಟಶಾಲಿ ಆಗಿದ್ದೀರಿ, ಖುಷಿಯ ಚೆಹರೆವುಳ್ಳವರಾಗಿದ್ದೀರಿ, ಎಂದೂ ಅವೇಶದ ಚೆಹರೆ ಮಾಡಿಕೊಳ್ಳಬಾರದು. ಸದಾ ಖುಷಿ ಆಗಿರಬೇಕು. ಎಷ್ಟೇ ಕೆಲಸಗಳಲ್ಲಿ ಬಿಜಿ ಆಗಿರಲಿ, ತಪ್ಪನ್ನು ಸರಿಪಡಿಸುತ್ತಿರುತ್ತೀರಿ, ತಿಳುವಳಿಕೆ ನೀಡುತ್ತಿರುತ್ತೀರಿ ಆದರೆ ಆವೇಶದ ಮುಖ, ಮಾತು ಇರಬಾರದು. ಈ ವರ್ಷದಲ್ಲಿ ಈ ಪರಿವರ್ತನೆ ಮಾಡಿ ತೋರಿಸಿ, ಪ್ರೈಜ್ ಕೊಡುತ್ತೇನೆ. ಇಡೀ ವರ್ಷದಲ್ಲಿ ಯಾರು ಮುಗುಳ್ನಗುತ್ತಿರುತ್ತಾರೆ, ಯಾವುದೇ ಮಾತು ಬರಲಿ, ಕೆಲವು ಸಹೋದರ-ಸಹೋದರಿಯರು ಹೇಳುತ್ತಾರೆ, ಎಲ್ಲರೂ ಈ ರೀತಿ ಆತ್ಮಿಕ ವಾರ್ತಾಲಾಪವಂತೂ ಮಾಡುತ್ತೀರಲ್ಲವೇ. ಅಂದಾಗ ಆಗ ಆವೇಶದಿಂದ ಜೋರಾಗಿ ಹೇಳಲಿಲ್ಲವೆಂದರೆ ಅವರು ತಿಳಿದುಕೊಳ್ಳುವುದಿಲ್ಲ, ಅವರು ಬದಲಾಗುವುದೇ ಇಲ್ಲ ಎಂಬ ಭಾವನೆ ತಾವು ಮೊದಲೇ ಇಟ್ಟುಕೊಂಡಿರಿ ಆ ಕಾರಣ ತಮ್ಮ ವೈಬ್ರೇಶನ್ ಮೊದಲೇ ತಲುಪಿ ಬಿಡುತ್ತದೆ. ಆದ್ದರಿಂದ ಈ ವರ್ಷ ಕ್ರೋಧದ ಮಕ್ಕಳು, ಮರಿ ಮಕ್ಕಳಿಗೆ ವಿದಾಯಿ ಕೊಡಬೇಕು. ಆಗುತ್ತದೆಯೇ? ಆವೇಶವೂ ಇರಬಾರದು. ತಂದೆ ಕೇಳುತ್ತಾರೆ ಯಾರು ಸಮಯ ಪ್ರತಿ ಸಮಯ ಕೆಲಸ ಮಾಡಿಸಿಕೊಳ್ಳಲು, ಸುಧಾರಣೆ ಮಾಡಲು ಏನು ಕ್ರೋಧ ಮಾಡುತ್ತಾರೋ ಅದರಿಂದ ಅವರು ಸುಧಾರಣೆ ಆಗುತ್ತಾರೆಯೇ? ಕ್ರೋಧ ಮಾಡುವುದರಿಂದ ಯಾರಾದರೂ ಸುಧಾರಣೆ ಆಗಿದ್ದಾರೆಯೇ? ಆ ಲಿಸ್ಟ್ ಹೇಳಿ. ಇನ್ನೂ ಸಿಟ್ಟಿ ಗೇಳುತ್ತಾರೆ, ಸುಧಾರಣೆ ಆಗುವುದಿಲ್ಲ. ಮನಸ್ಸಿನಲ್ಲಿ ಅಪೋಸಿಶನ್ ಮಾಡಿಕೊಳ್ಳುತ್ತಾರೆ, ಒಂದುವೇಳೇ ದೊಡ್ಡವರಾದರೆ ಮನದಲ್ಲಿ ಅಪೋಜಿಶನ್ ಮಾಡುತ್ತಾರೆ, ಹೇಳಲು ಆಗುವುದಿಲ್ಲ, ಒಂದುವೇಳೆ ಚಿಕ್ಕವರಾದರೆ ಅಳಲು ಪ್ರಾರಂಭಿಸುತ್ತಾರೆ. ಅಂದಾಗ ಈ ವರ್ಷ ಏನೇನು ಮಾಡಬೇಕು ಅದೆಲ್ಲವನ್ನು ತಿಳಿಸುತ್ತಿದ್ದೇವೆ. ಇಷ್ಟವಿದೆಯೇ? ಮಾಡುತೀರಾ? ಈಗ ಕೈ ಎತ್ತಿ. ಮಾಡಬೇಕೇ? ಟಿ.ವಿಯವರು ಪೋಟೋ ತೆಗೆಯಿರಿ. ಕೈ ಎತ್ತಿ, ಸ್ವಲ್ಪ ಕೈ ಹಾಗೆ ಇಟ್ಟುಕೊಳ್ಳಿ. ಟಿ.ವಿಯವರು ಪೋಟೋ ತೆಗೆಯುತ್ತಿದ್ದಾರೆ.

ಅಂದಾಗ ಸಮಯದ ಪ್ರಮಾಣ ಬಾಪ್ದಾದಾರವರು ನೋಡುತ್ತಿದ್ದರು ಸಮಯದ ವೇಗ ಈ ಸಮಯದಲ್ಲಿ ತೀವ್ರವಾಗಿದೆ ಅಂದಾಗ ಸಮಯವನ್ನು ಯಾರು ಎದುರಿಸುತ್ತಾರೆ? ಎದುರಿಸುವವರು ತಾವೇ ಅಲ್ಲವೇ. ದುಃಖಿಗಳ ಕೂಗು, ಸಮಯದ ಕೂಗು, ಭಕ್ತರ ಕೂಗು ಅಷ್ಟು ಕೇಳಿಸಿಕೊಳ್ಳದೆ ಇರುವುದು ಬಾಪ್ದಾದಾರವರು ನೋಡಿದರು. ಪಾಪ ಧೈರ್ಯಹೀನರಾಗಿದ್ದಾರೆ, ಅವರಿಗೆ ರೆಕ್ಕೆಗಳು ಕೊಡಿ ಇದರಿಂದ ಹಾರಲು ಸಾಧ್ಯವಾಗಲಿ. ಧೈರ್ಯದ ರೆಕ್ಕೆ, ಉಮಂಗ-ಉತ್ಸಾಹದ ರೆಕ್ಕೆಯನ್ನು ಕೊಡಿ. ಒಳ್ಳೆಯದು.

ನಾಲ್ಕೂ ಕಡೆಯ ಮಕ್ಕಳು ಈಗ ಬಾಪ್ದಾದಾ ಕೊಟ್ಟಿರುವ ಹೋಮ್ ವರ್ಕನ್ನು ಪ್ರಾಯೋಗಿಕವಾಗಿ ಮಾಡಿ ಪ್ರಮಾಣವನ್ನು ತೋರಿಸುವ ಸುಪುತ್ರ ಮಗು ತನ್ನ ಪ್ರಭಾವವನ್ನು ತೋರಿಸುತ್ತಾರೆ. ನಾಲ್ಕೂ ಕಡೆಯ ಮಕ್ಕಳಿಗೆ ಬಹಳ ಬಹಳ ಹೃದಯದ ಪ್ರೀತಿ ಮತ್ತು ಹೃದಯದ ಪದ್ಮ ಪಟ್ಟು ನೆನಪು ಪ್ರೀತಿ ಸ್ವೀಕಾರ ಮಾಡಿರಿ. ಮತ್ತು ಇ0ತಹ ಯೋಗ್ಯ ಮಕ್ಕಳಿಗೆ ಶ್ರೇಷ್ಠ ಮಕ್ಕಳಿಗೆ ಬಾಪ್ದಾದಾ ಅವರ ನಮಸ್ತೆ.

ಎಲ್ಲರೂ ಹೊಸ ವರ್ಷವನ್ನು ಆಚರಿಸಿದಿರಿ ಮತ್ತು ಈ ವರ್ಷದ ಪ್ರತಿ ದಿನ ಸ್ವ ಪರಿವರ್ತನೆ ಮತ್ತು ವಿಶ್ವ ಪರಿವರ್ತನೆಯ ರೂಪದಲ್ಲಿ ಆಚರಿಸುತ್ತಾ ಇರಿ. ಪ್ರತಿ ದಿನ ಹೊಸ ಪರಿವರ್ತನೆ. ಪ್ರತಿ ದಿನ ಹೊಸ ಸೇವೆ, ಪ್ರತಿ ದಿನ ಸದಾ ಉಮ0ಗ ಉತ್ಸಾಹ, ಒ0ದು ದಿನವೂ ಚಿ0ತೆ ಚಿ0ತನೆಯದಲ್ಲ, ಸೇವೆಯ ಪ್ರತಿ ಮಾಡಲೇ ಬೇಕು, ಇ0ತಹ ಧೃಢ ಸ0ಕಲ್ಪ ಮಾಡಿ ಸಮಯ ಸಮೀಪ ತರುತ್ತಾ ತ0ದೆ ಸಮಾನ ಆಗಿ ಹಾರಬೆಕು ಮತ್ತು ಹಾರಿಸುತ್ತಿರಬೆಕು. ಒಳ್ಳೆಯದು. ಓಂ ಶಾಂತಿ.

ವರದಾನ:
ಪ್ರತಿಯೊಬ್ಬರ ಸಲಹೆಗೆ ಗೌರವ ಕೊಟ್ಟು ವಿಶ್ವದ ಮೂಲಕ ಗೌರವವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಬಾಲಕನಿಂದ ಮಾಲೀಕ ಭವ.

ಭಲೆ ಯಾರೇ ಕಿರಿಯರಿರಲಿ ಅಥವಾ ಹಿರಿಯರು - ತಾವು ಪ್ರತಿಯೊಬ್ಬರ ಸಲಹೆಗೆ ಅವಶ್ಯವಾಗಿ ಗೌರವ ಕೊಡಿ. ಏಕೆಂದರೆ ಯಾರದೇ ಸಲಹೆಯನ್ನು ಮುರಿಯುವುದು ಅರ್ಥಾತ್ ತಮ್ಮನ್ನು ತಾವು ಅವರ ಸಂಬಂಧದಿಂದ ದೂರವಾಗುವುದು ಆದ್ದರಿಂದ ಒಂದುವೇಳೆ ಯಾರಲ್ಲಿಯೇ ಇರುವಂತಹ ವ್ಯರ್ಥವನ್ನು ತೆಗೆಯಬೇಕೆಂದರೆ, ಮೊದಲು ಅವರಿಗೆ ಗೌರವ ಕೊಡಿ, ಸ್ವಮಾನ ಕೊಡಿ ನಂತರದಲ್ಲಿ ಶಿಕ್ಷಣ ಕೊಡಿ - ಇದು ವಿಧಿಯಾಗಿದೆ. ಯಾವಾಗ ಈ ರೀತಿ ಗೌರವ ಕೊಡುವ ಸಂಸ್ಕಾರವನ್ನು ತಮ್ಮಲ್ಲಿ ತುಂಬಿಕೊಳ್ಳುತ್ತೀರಿ, ಆಗಲೇ ವಿಶ್ವದಿಂದ ತಮಗೆ ಗೌರವು ಸಿಗುವುದು. ಇದಕ್ಕಾಗಿ ಬಾಲಕನಿಂದ ಮಾಲೀಕ, ಮಾಲೀಕನಿಂದ ಬಾಲಕರಾಗಿರಿ. ಬುದ್ಧಿಯು ಬೇಹದ್ದಿನಲ್ಲಿ ಶುಭ ಕಲ್ಯಾಣದ ಭಾವನೆಯಿಂದ ಸಂಪನ್ನವಾಗಿರಲಿ.

ಸ್ಲೋಗನ್:
ಮಸ್ತಕದಲ್ಲಿ ಸದಾ ಜೊತೆ (ಸತ್ಯ ಸಂಗ) ದ ಸ್ಮೃತಿಯ ತಿಲಕವನ್ನಿಟ್ಟುಕೊಳ್ಳುವುದೇ ಸುಮಂಗಲಿಯ ಲಕ್ಷಣವಾಗಿದೆ.

ಅವ್ಯಕ್ತ ಸೂಚನೆ:- ಏಕತೆ ಮತ್ತು ವಿಶ್ವಾಸದ ಗುಣ ಲಕ್ಷಣಗಳ ಮೂಲಕ ಸಫಲತಾ ಸಂಪನ್ನರಾಗಿರಿ.

ಏಕತೆಯನ್ನು ತರಲು ಎರಡು ಮಾತುಗಳನ್ನು ಧಾರಣೆ ಮಾಡಬೇಕಾಗುತ್ತದೆ ಒಂದಂತು ಏಕನಾಮಿಯಾಗಿ ಸದಾ ಪ್ರತಿಯೊಂದು ಮಾತಿನಲ್ಲಿ ಒಬ್ಬರದೇ ಹೆಸರು ತೆಗೆದುಕೊಳ್ಳಿ. ಎರಡು - ಸಂಕಲ್ಪಗಳ, ಸಮಯದ ಮತ್ತು ಜ್ಞಾನ ಖಜಾನೆಗಳ ಏಕಾನಾಮಿ (ಉಳಿತಾಯ) ಮಾಡಿ. ಯಾವಾಗ ಎಲ್ಲರು ಹಾಗೆಯೇ ಏಕನಾಮಿ ಮತ್ತು ಏಕಾನಾಮಿಯವರಾಗುವಿರಿ ಆಗ ಒಬ್ಬ ತಂದೆಯಲ್ಲಿ ಎಲ್ಲಾ ಪ್ರಕಾರದ ಭಿನ್ನತೆ ಸಮಾವೇಶವಾಗಿ ಬಿಡುವುದು.