08.03.26 Avyakt Bapdada
Kannada
Murli 18.01.2009 Om Shanti Madhuban
“40 ವರ್ಷದ ಅವ್ಯಕ್ತ
ಪಾಲನೆಯ ರಿಟರ್ನ್ - 4 ವಿಷಯಗಳು – ಶುಭ ಚಿಂತಕರಾಗಿ, ಶುಭ ಚಿಂತನೆ ಮಾಡಿ, ಶುಭ ವೃತ್ತಿಯಿಂದ ಶುಭ
ವಾಯುಮಂಡಲವನ್ನು ತಯಾರು ಮಾಡಿ ಹಾಗೂ (0) ಸೊನ್ನೆ [ಜೀರೋ] ಮತ್ತು ಹೀರೋ ಆಗುವ ಸ್ಮೃತಿಯಲ್ಲಿ ಇರಿ”
ಇಂದು ಬಾಪ್ದಾದಾರವರು
ಎಲ್ಲಾ ಕಡೆಯ ತನ್ನ ಸೇವೆಯ ಜೊತೆಗಾರರ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ಆದಿ ಸೇವೆಯ
ಜೊತೆಗಾರರು ಹಾಗೂ ಜೊತೆಯಲ್ಲಿ ಸೇವೆಯ ಜೊತೆಗಾರರೂ ಸಹ ಆಗಿ ಬಹಳ ಒಳ್ಳೆಯ ಸೇವೆಯ ವೃದ್ಧಿಯನ್ನು
ಮಾಡುತ್ತಿದ್ದಾರೆ, ಅಂದಾಗ ಬಾಪ್ದಾದಾರವರು ತನ್ನ ಜೊತೆಗಾರರನ್ನು ನೋಡಿ ಖುಷಿ ಆಗುತ್ತಿದ್ದಾರೆ.
ಮತ್ತು ಹೃದಯದಲ್ಲಿ ಹಾಡನ್ನು ಹಾಡುತ್ತಿದ್ದಾರೆ ವಾಹ್! ನನ್ನ ವಿಶ್ವ ಪರಿವರ್ತನೆ ಸೇವೆಯ ಜೊತೆಗಾರರೇ
ವಾಹ್!
ಈ ದಿನ ಅಮೃತವೇಳೆಯಿಂದ
ಎಲ್ಲಾ ಕಡೆ ಸ್ನೇಹದ ಮಾಲೆಗಳು ಬಾಪ್ದಾದಾರವರಿಗೆ ಹಾಕುತ್ತಿದ್ದರು. ಮೂರು ಪ್ರಕಾರದ ಮಾಲೆಗಳಿತ್ತು
ಒಂದಾಗಿದೆ ತಂದೆಯ ಸಮಾನರಾಗುವ ಉಮಂಗ-ಉತ್ಸಾಹದ ಮಾಲೆ, ಇನ್ನೊಂದು ಬಹಳ ಅಗಲಿರುವ ಬಂಧನವುಳ್ಳ
ಬಂಧಿತರಾಗಿರುವ ಗೋಪಿಕೆಯರ ಮಾಲೆ, ಅವರ ಮಾಲೆಗಳಂತೂ ಇದೆ ಆದರೆ ಹೊಳೆಯುತ್ತಿರುವ ಅತೀ ಅಮೂಲ್ಯ
ಕಣ್ಣೀರಿನ ಮಾಲೆಯೂ ಸಹ ಇತ್ತು. ಒಂದೊಂದು ಕಣ್ಣೀರಿನ ಹನಿ ರತ್ನದ ಸಮಾನ ಹೊಳೆಯುತ್ತಿತ್ತು ಮತ್ತು
ಮೂರನೇಯದು ಕೆಲವು ಮಕ್ಕಳ ದೂರಿನ ಮಾಲೆಯಾಗಿದೆ.
ಈ ದಿನ ಅಮೃತವೇಳೆಯಿಂದ
ಎಲ್ಲರಲ್ಲಿ ವಿಶೇಷವಾಗಿ ಸ್ನೇಹ ಸಮಾವೇಶವಾಗಿರುವುದು ಕಂಡು ಬರುತ್ತಿತ್ತು. ಬಾಪ್ದಾದಾರವರು ವಿರಾಟ
ರೂಪದ ಹಾಗೆ ಬಾಹುಗಳನ್ನು ಚಾಚಿ ಎಲ್ಲಾ ಮಕ್ಕಳನ್ನು ಬಾಹುಗಳಲ್ಲಿ ಸಮಾವೇಶ ಮಾಡಿಕೊಂಡಿದ್ದಾರೆ. ಹೇಗೆ
ಈ ದಿನ ಸ್ನೇಹದ ಜೊತೆ ಸರ್ವ ಶಕ್ತಿಗಳನ್ನು ವಿಲ್ ಮಾಡುವ ದಿನವೂ ಸಹ ಆಗಿದೆ. ಒಂದು ಮಗುವಿನ ಕೈಯಲ್ಲಿ
ಕೈಯನ್ನು ಸೇರಿಸಿ ವಿಲ್ಪವರ್ಸ್ನ ವಿಲ್ ಎಲ್ಲಾ ಮಕ್ಕಳಿಗೆ ಶಕ್ತಿ ಸೇನೆ ಹಾಗೂ ಪಾಂಡವರು, ಕೆಲವು
ಮಕ್ಕಳು ಪಾಂಡವರೂ ಸಹ ಹಾಗೂ ಶಕ್ತಿಗಳೂ ಸಹ ಬಾಪ್ದಾದಾರವರು ನೋಡಿದ್ದಾರೆ ಗುಪ್ತ ರೂಪದಲ್ಲಿ
ಅಂತರ್ಮುಖಿ ಆಗಿ ಪುರುಷಾರ್ಥದಲ್ಲಿ ತೀವ್ರ ಗತಿಯಿಂದ ನಡೆಯುತ್ತಿದ್ದಾರೆ. ಹೊರಗೆ ಕಾಣಿಸುವುದಿಲ್ಲ
ಆದರೆ ಒಳ್ಳೆಯ ಪುರುಷಾರ್ಥಿ ಆಗಿದ್ದಾರೆ. ಈ ದಿನ ವಿಶೇಷವಾಗಿ ಸ್ನೇಹದ ಸಬ್ಜೆಕ್ಟ್, ಎಲ್ಲರ ಮುಖ
ಹೊಳೆಯುತ್ತಿರುವುದನ್ನು ಬಾಪ್ದಾದಾರವರು ನೋಡಿದ್ದಾರೆ. ಜ್ಞಾನಿ ಆತ್ಮ ಮಕ್ಕಳಂತೂ ಆಗಿದ್ದಾರೆ ಆದರೆ
ಸ್ನೇಹದ ಸಬ್ಜೆಕ್ಟ್ ಅವಶ್ಯಕವಾಗಿದೆ ಏಕೆಂದರೆ ಸ್ನೇಹಿ ಪರಿಶ್ರಮ ಕಡಿಮೆ ಹಾಗೂ ಪ್ರೀತಿಯ
ಅನುಭವದಲ್ಲಿ ಸಹಜವಾಗಿರುತ್ತಾರೆ. ಸ್ನೇಹದ ಶಕ್ತಿ ಎಂತಹದ್ದೇ ಬೆಟ್ಟದ ಸಮಾನ ಸಮಸ್ಯೆ ಇರಲಿ,
ಬೆಟ್ಟವನ್ನೂ ಸಹ ಹತ್ತಿಯ ಸಮಾನ ಮಾಡಿ ಬಿಡುತ್ತದೆ. ಬೆಟ್ಟವನ್ನೂ ಸಹ ನೀರಿನ ಹಾಗೆ ಹಗುರ ಮಾಡಿ
ಬಿಡುತ್ತದೆ. ಸ್ನೇಹ ಛತ್ರಛಾಯೆ ಆಗಿದೆ. ಛತ್ರಛಾಯೆ ಕಾರಣ ಅವರು ಸುರಕ್ಷಿತವಾಗಿರುತ್ತಾರೆ.
ಸಹಜವಾಗುತ್ತದೆ. ಸ್ನೇಹದಿಂದ ಪರಮಾತ್ಮ ಅಥವಾ ಭಗವಂತನನ್ನೂ ಸಹ ತನ್ನ ಜೊತೆಗಾರರನ್ನಾಗಿ
ಮಾಡಿಕೊಳ್ಳುತ್ತಾರೆ. ಯಾವುದು ಖುದಾ ದೋಸ್ತಿನ (ಈಶ್ವರ ಜೊತೆಗಾರನ) ನೆನಪಾರ್ಥವಿದೆ. ಈಶ್ವರನನ್ನು
ಜೊತೆಗಾರರನ್ನಾಗಿ ಮಾಡಿಕೊಂಡು ಯಾವುದೇ ಸಮಸ್ಯೆಯನ್ನು ಜೊತೆಗಾರನ ಸಂಬಂಧದಿಂದ ಸುಲಭ
ಮಾಡಿಕೊಳ್ಳುತ್ತಾರೆ. ತಂದೆಯನ್ನು ತನ್ನ ಜೊತೆಗಾರರನ್ನಾಗಿ ಮಾಡಿಕೊಳ್ಳುತ್ತಾರೆ. ಜ್ಞಾನ ಬೀಜ ಆಗಿದೆ
ಆದರೆ ಪ್ರೇಮದ ನೀರು ಬೀಜದಲ್ಲಿ ಪ್ರಾಪ್ತಿಯ ಫಲವನ್ನು ಕೊಡುತ್ತದೆ. ಇಂತಹ ತಂದೆಯ ಸ್ನೇಹಿ ಮಕ್ಕಳು
ತಂದೆಯನ್ನು ನೆನಪು ಮಾಡಲು ಕಷ್ಟವೆನಿಸುವುದಿಲ್ಲ ಆದರೆ ಮರೆಯುವುದು ಕಷ್ಟವೆನಿಸುತ್ತದೆ. ಸ್ನೇಹಿಗಳು
ಎಂದೂ ಸ್ನೇಹವನ್ನು ಮರೆಯಲು ಸಾಧ್ಯವಿಲ್ಲ. ನನ್ನ ಬಾಬಾ ಎಂದು ಹೇಳಿದಾಗ ಹೃದಯದ ಸ್ನೇಹದಿಂದ ಸರ್ವ
ಖಜಾನೆಗಳ ಬೀಗದ ಕೈ ಸಿಕ್ಕಿ ಬಿಡುತ್ತದೆ. ಅಂದಾಗ ಬಾಪ್ದಾದಾರವರು ಇಬ್ಬರೂ ಇಂತಹ ಸ್ನೇಹಿಗಳು, ಅವರ
ಮುಂದೆ ಬಾಪ್ದಾದಾರವರೂ ಸಹ ಪ್ರತ್ಯಕ್ಷವಾಗಿ ಬಿಡುತ್ತಾರೆ. ಪ್ರಪಂಚದವರು ಆತ್ಮ ಪರಮಾತ್ಮನಲ್ಲಿ
ಲೀನವಾಯಿತು ಎಂದು ಹೇಳುತ್ತಾರೆ ಆದರೆ ಆತ್ಮ ಪರಮಾತ್ಮನ ಪ್ರೀತಿಯಲ್ಲಿ ಲವಲೀನವಾಗಿ ಬಿಡುತ್ತದೆ,
ಲೀನ ಆಗುವುದಿಲ್ಲ ಆದರೆ ಲವಲೀನವಾಗುತ್ತದೆ.
ಈ ದಿನ ಪ್ರೀತಿಯಲ್ಲಿ
ಲವಲೀನರಾಗುವ ದಿನವಾಗಿದೆ (ಸೇರಿ ಹೋಗುವ ದಿನವಾಗಿದೆ). ಪರಿಶ್ರಮ ಸಮಾಪ್ತಿ ಆಗಿ ಪ್ರೀತಿಯ ರೂಪದಲ್ಲಿ
ಬದಲಾಗುತ್ತದೆ. ಬಾಪ್ದಾದಾರವರು ಎಲ್ಲಾ ಮಕ್ಕಳ ಫಲಿತಾಂಶವನ್ನು ನೋಡಿದ್ದೆವು, ಹೋಂವರ್ಕ್ನ್ನು
ಮೆಜಾರಿಟಿ ಮಾಡಿದ್ದಾರೆ. ತಂದೆಯ ಸಮಾನರಾಗುವ ಲಕ್ಷ್ಯವನ್ನು ಮತ್ತೆ-ಮತ್ತೆ ರಿವೈಜ್ ಮಾಡಿದ್ದಾರೆ,
ಅನುಭೂತಿಯನ್ನು ಮಾಡಿದ್ದಾರೆ. 75% ಮಕ್ಕಳ ಫಲಿತಾಂಶ ಚೆನ್ನಾಗಿತ್ತು. ತಂದೆಯ ಸಮಾನ ಆಗಲೇಬೇಕು. ಏನೇ
ಬಿರುಗಾಳಿ ಬರಲಿ ಇರುವುದೇ ಕಲಿಯುಗದ ಸಮಾಪ್ತಿಯ ಸಮಯ ಅಂದಾಗ ಬಿರುಗಾಳಿಗಳಂತೂ ಬರುತ್ತದೆ,
ಪರಿವರ್ತನೆಯ ಸಮಯ ಆದರೆ ತಾವು ಮಕ್ಕಳಿಗೆ ಬಿರುಗಾಳಿ ಏನು! ಬಿರುಗಾಳಿ ಬಿರುಗಾಳಿ ಅಲ್ಲ ಆದರೆ
ಉಡುಗೊರೆಯಾಗಿದೆ ಏಕೆಂದರೆ ಬಾಪ್ದಾದಾರವರ ವರದಾನದ ಹಸ್ತ ಎಲ್ಲಾ ಪುರುಷಾರ್ಥಿ ಮಕ್ಕಳ ತಲೆಯ ಮೇಲಿದೆ.
ಯಾರೆಲ್ಲಾ ದೃಢ ಸಂಕಲ್ಪ ಅರ್ಥಾತ್ ದೃಢತೆಯ ಬೀಗದ ಕೈಯನ್ನು ಕಾರ್ಯದಲ್ಲಿ ತೊಡಗಿಸಿದ್ದಾರೆ ಅವರ
ಈಗಿನ ಫಲಿತಾಂಶದ ಪ್ರಮಾಣ ಸಫಲತೆಯೂ ಸಹ ಪ್ರಾಪ್ತಿ ಆಗಿದೆ. ಆದರೆ ಸದಾಕಾಲಕ್ಕೋಸ್ಕರ ಬಿರುಗಾಳಿಯನ್ನು
ಉಡುಗೊರೆಯಾಗಿ ಮಾಡಿಕೊಳ್ಳಬೇಕು. ಸಮಸ್ಯೆಗೆ ಸಮಾಧಾನರೂಪ ಕೊಟ್ಟು ಮುಂದುವರೆಯುತ್ತಾ ಹೋಗಿ.
ಬಾಪ್ದಾದಾರವರಿಗೆ ಈಗಿನ ಫಲಿತಾಂಶ ಸಂತೋಷ ತಂದಿದೆ. ಯಾರು ಯೋಗ ತಪಸ್ಸನು ಮಾಡಿದ್ದಾರೆ ಅದರಲ್ಲಿ
ಆಗಲೇಬೇಕೆಂದು ಲಕ್ಷ್ಯವನ್ನು ದೃಢವಾಗಿ ಇಟ್ಟುಕೊಂಡಿದ್ದಾರೆ.
40 ವರ್ಷ ಅವ್ಯಕ್ತ ಪಾಲನೆ
ಸಮಾಪ್ತಿ ಆಯಿತ್ತು. 40 ವರ್ಷದಲ್ಲಿ ಮೊದಲು ಏನು ಬರುತ್ತದೆ, ಜೀರೋ ಈ ಸೊನ್ನೆ ನಾನು ಹೀರೋ
ಎಂಬುದನ್ನು ನೆನಪಿಸುತ್ತದೆ, ಸತ್ಯವಾದ ಹೀರೋ, ಮಹಾನ್ ಹೀರೋ ಆಗಿದ್ದೇನೆ ಮತ್ತು ಹೀರೋ ಪಾತ್ರಧಾರಿ
ಆಗಿ ಪ್ರತಿಯೊಂದು ಕಾರ್ಯವನ್ನು ಹೀರೋ ಸಮಾನ ಮಾಡಬೇಕು. ಜೀರೋ, ಹೀರೋ ಸದಾ ನೆನಪಿರಲಿ ಉಳಿದಿರುವ 4,
ಅದರಲ್ಲಿ 4 ಮಾತುಗಳನ್ನು ಸ್ವಾಭಾವಿಕವಾಗಿ ಜೀವನದಲ್ಲಿ ತೆಗೆದುಕೊಂಡು ಬನ್ನಿ. ದೃಢತಾಪೂರ್ವಕವಾಗಿ
ಮಾಡಬೇಕು, ಮಾಡುತ್ತೀರಾ? ಮಾಡುತ್ತೀರಾ? ಸಿದ್ಧರಿದ್ದೀರಾ? ಯಾವುದೇ ಪೇಪರ್ ಬರಲಿ ಆದರೆ ನಾಲ್ಕು
ಮಾತು ತನ್ನ ಜೀವನದಲ್ಲಿ ತೆಗೆದುಕೊಂಡು ಬರಲೇಬೇಕು. ಪಕ್ಕಾ? ಪಕ್ಕಾ? ಪಕ್ಕಾ? ಹಿಂದಿನವರು ಪಕ್ಕಾ
ಇದ್ದೀರಲ್ಲವೇ. ಕಚ್ಚಾ ಇರುವವರನ್ನು ಮಾಯೆ ತಿಂದು ಬಿಡುತ್ತದೆ ಆದ್ದರಿಂದ ಪಕ್ಕಾ ಇರಬೇಕು.
ಮೊದಲನೇಯ ಮಾತು ಸದಾ ಶುಭಚಿಂತಕ ಯಾರದೇ ಬಲಹೀನತೆಯನ್ನು ನೋಡಿ ಅಥವಾ ಕೇಳಿ ದಯಾಹೃದಯಿ ಆಗಿ
ಶುಭಚಿಂತಕರಾಗಿ ಅವರಿಗೆ ಸಹಯೋಗವನ್ನು ಕೊಡಲೇಬೇಕು. ಬಲಹೀನತೆಯನ್ನು ನೋಡಬಾರದು ಆದರೆ ಸಹಯೋಗವನ್ನು
ನೀಡಲೇಬೇಕು ಇದಕ್ಕೆ ಶುಭಚಿಂತಕ ಎಂದು ಹೇಳಲಾಗುತ್ತದೆ. ಪಕ್ಕಾ ಇರುತ್ತೀರಲ್ಲವೇ! ಆಶ್ರಯದಾತ,
ದಯಾಹೃದಯಿ ಆಗಿ ಸಹಯೋಗವನ್ನು ಕೊಡಿ. ಆದ್ದರಿಂದ ದೂರ ಸರಿಯುವುದಾಗಲಿ ಅಥವಾ ತಿರಸ್ಕಾರವನ್ನು
ಮಾಡಬೇಡಿ, ಕ್ಷಮೆ ಮಾಡಿ. ಪರವಶರನ್ನು ಎಂದೂ ತಿರಸ್ಕರಿಸುವುದಲ್ಲ ಆಶ್ರಯವನ್ನು ಕೊಡಲಾಗುತ್ತದೆ.
ಅಂದಾಗ ಶುಭಚಿಂತಕ ಮತ್ತು ಎರಡನೆಯದು ಶುಭಚಿಂತನೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಬಾಪ್ದಾದಾರವರು
ಮೆಜಾರಿಟಿ ಮಕ್ಕಳಲ್ಲಿ ಬಹಳಷ್ಟು ವ್ಯರ್ಥ ಸಂಕಲ್ಪಗಳು ನಡೆಯುವುದು ನೋಡಿದ್ದಾರೆ, ಇದರಲ್ಲಿ
ತನ್ನಲ್ಲಿ ಜಮಾ ಮಾಡಿಕೊಂಡಿರುವ ಶಕ್ತಿಗಳು ವ್ಯರ್ಥವಾಗಿ ಬಿಡುತ್ತವೆ. ಆದ್ದರಿಂದ ಶುಭ ಚಿಂತನೆಯನ್ನು
ಮಾಡಿ. ಸ್ವಮಾನದ ಒಂದಲ್ಲ ಒಂದು ತಮ್ಮ ಟೈಟಲ್ನ್ನು ಮನಸ್ಸಿಗೆ ಹೋಂವರ್ಕ್ನ್ನು ಕೊಟ್ಟು ಬಿಡಿ,
ಮನಸ್ಸಿನ ಟೈಮ್ಟೇಬಲ್ನ್ನು ಹಾಕಿಕೊಳ್ಳಿ. ಕರ್ಮದ ಟೈಂಟೇಬಲ್ ಅಂತೂ ಮಾಡುತ್ತೀರಿ ಆದರೆ ಮನಸ್ಸಿನ
ಟೈಂಟೇಬಲ್ನ್ನು ಮಾಡಿ. ಅಮೃತವೇಳೆ ಮಿಲನ ಮಾಡಿದ ಮೇಲೆ ಮನಸ್ಸಿಗೆ ಸ್ವಮಾನವನ್ನು ಕೊಟ್ಟು ಬಿಡಿ.
ಆದರೆ ಹೇಗೆ ತಿಳಸಲಾಗಿತ್ತು 12-13 ಬಾರಿ ಎಲ್ಲರಿಗೂ ಟೈಂಟೇಬಲ್ ಸಿಕ್ಕಿದೆ ಅದರ ಅನುಭೂತಿಯನ್ನೂ
ಮಾಡಿ, ರಿವೈಜ್ ಮಾಡಿದ್ದೇ ಆದರೆ ಮನಸ್ಸು ಬಿಜಿ ಆಗಿರುವುದರಿಂದ ವ್ಯರ್ಥ ಸಂಕಲ್ಪದಲ್ಲಿ ಸಮಯವು
ಹೋಗುವುದಿಲ್ಲ. ಪರಿಶ್ರಮ ಪಡಬೇಕಾಗಿಲ್ಲ. ಪ್ರತಿ ಸಮಯ ಸಂಗಮಯುಗದಲ್ಲಿ ಸಂತೋಷದಿಂದ ಇರುವ ಸಮಯವಾಗಿದೆ,
ಅದೇ ಖುಷಿಯಲ್ಲಿ ಇರುತ್ತೀರಿ. ಎರಡನೆಯದು ಹೇಳಿದೆವು – ಶುಭ ಚಿಂತನೆ ಮಾಡುವುದು. ಪರಿಶೀಲನೆ (ಚೆಕ್)
ಮಾಡಿಕೊಳ್ಳಿ ಹಾಗೂ ಪರಿವರ್ತನೆ (ಚೇಂಜ್) ಮಾಡಿಕೊಳ್ಳಿ. ಮೂರನೆಯದು ಶುಭ ವೃತ್ತಿ ಆಗಿದೆ. ಅಶುಭ
ವೃತ್ತಿ ವಾಯುಮಂಡಲದಲ್ಲಿ ಅಶುದ್ಧತೆಯನ್ನು ಹರಡುತ್ತದೆ. ಆದರೆ ಶುಭ ವೃತ್ತಿವುಳ್ಳವರಾಗಿ ಮತ್ತು
ನಾಲ್ಕನೆಯದು ಪ್ರತಿಯೊಬ್ಬರು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು - ಇದು ನನ್ನ ಕೆಲಸವಾಗಿದೆ,
ಅನ್ಯರನ್ನು ನೋಡಬೇಡಿ, ಶುಭವಾದಂತಹ ವಾಯುಮಂಡಲವನ್ನು ಮಾಡುವುದು ನನ್ನ ಕೆಲಸವಾಗಿದೆ. ಹೇಗೆ ಎಂದಾದರೂ
ವಾತಾವರಣದಲ್ಲಿ ದುರ್ಗಂಧವಿದ್ದರೆ ಏನು ಮಾಡುತ್ತೀರಿ? ಸುಗಂಧವನ್ನು ಹರಡುತ್ತೀರಲ್ಲವೇ, ದುರ್ವಾಸನೆ
ಸಹನೆ ಆಗುವುದಿಲ್ಲ. ಒಂದಲ್ಲ ಒಂದು ಪರಿಮಳದ ಸಾಧನವನ್ನು ತಮ್ಮದನ್ನಾಗಿ ಮಾಡಿಕೊಳ್ಳುತ್ತೀರಿ ಹಾಗೆಯೇ
ಸಾಧಾರಣ ವಾಯುಮಂಡಲ, ಅಶುಭ ವಾಯುಮಂಡಲವನ್ನು ಪರಿವರ್ತನೆ ಮಾಡಲೇಬೇಕು. ಚಿಕ್ಕವರಿರಲಿ, ಹೊಸಬರಾಗಲಿ,
ಎಲ್ಲರಿಗೂ ಜವಾಬ್ದಾರಿ ಇದೆ. ನಾನು ಶುಭ ವಾಯುಮಂಡಲವನ್ನು ಮಾಡಲೇಬೇಕು ಎಂಬ ದೃಢ ಸಂಕಲ್ಪವನ್ನು ಮಾಡಿ.
ಈ ಪ್ರತಿಜ್ಞೆ ಪ್ರತ್ಯಕ್ಷತೆಯನ್ನು ಮಾಡುತ್ತದೆ. ಪ್ರತಿಜ್ಞೆಯನ್ನು ಮಾಡುತ್ತೀರಿ, ಬಾಪ್ದಾದಾರವರಿಗೆ
ಸಂತೋಷ ಆಗುತ್ತದೆ ಆದರೆ ಪ್ರತಿಜ್ಞೆಯಲ್ಲಿ ಆಗಾಗ ದೃಢತೆ ಇರುವುದಿಲ್ಲ ಆದ್ದರಿಂದ ಸಫಲತೆ ಎಷ್ಟು
ಬಯಸುತ್ತೀರಿ, ಏನನ್ನು ಬಯಸುತ್ತೀರಿ ಅಷ್ಟು ಇರುವುದಿಲ್ಲ. ಇಡೀ ವಿಶ್ವದಲ್ಲಿ ಪ್ರಕೃತಿಯ,
ಆತ್ಮರಲ್ಲಿ ಬ್ರಾಹ್ಮಣ ಆತ್ಮರೂ ಸಹ ಬಂದು ಬಿಡುತ್ತಾರೆ, ಪ್ರತಿಯೊಬ್ಬರೂ ತಮ್ಮ ಸೇವಾ ಸ್ಥಾನದಲ್ಲಿ
ಇಂತಹ ವಾತಾವರಣ ದೃಢತೆಯಿಂದ ಮಾಡಿ. ಸ್ವಲ್ಪ ತ್ಯಾಗ ಮಾಡಬೇಕೆಂದರೆ ತ್ಯಾಗ ಮಾಡಿ. ತ್ಯಾಗ ಮಾಡಿದರೆ
ನಾನು ಮಾಡುತ್ತೇನೆ ಅಲ್ಲ. ಎಲ್ಲಾ ವ್ಯವಸ್ಥೆ ಚೆನ್ನಾಗಿದ್ದರೆ - ಈ ರೀತಿ ರೆ, ರೆ ಎಂದು ಮಾಡಬೇಡಿ.
ನಾನಂತೂ ಮಾಡಲೇಬೇಕು. ಎಲ್ಲರೂ ವಿಶ್ವ ಪರಿವರ್ತಕರಲ್ಲವೇ. ಕೈ ಎತ್ತಿರಿ. ಒಳ್ಳೆಯದು, ವಿಶ್ವ
ಪರಿವರ್ತಕರಾಗಿದ್ದೀರಿ, ಬಹಳ ಒಳ್ಳೆಯದು. ಮೊದಲು ಬಾಪ್ದಾದಾರವರು ನೋಡಲು ಬಯಸುತ್ತೇವೆ. ಈ
ವರ್ಷದಲ್ಲಿ ಚಿಕ್ಕದಿರಲಿ ಅಥವಾ ದೊಡ್ಡ ಸೇವಾಕೇಂದ್ರವಿರಲಿ ವಾಯುಮಂಡಲ ಹೇಗಿದೆ ಎಂದು ಚಕ್ಕರ್
ಹಾಕಿದಾಗ ಕಂಡು ಬರುತ್ತದೆ. ಹೇಗೆ ಈ ದಿನ ಸ್ನೇಹ ಮತ್ತು ಶಕ್ತಿಯ ದಿನವಾಗಿದೆ ಹಾಗೆಯೇ
ಹಳ್ಳಿ-ಹಳ್ಳಿಯ ಸೇವಾಕೇಂದ್ರವಿರಲಿ ದೊಡ್ಡ ಸೇವಾಕೇಂದ್ರವಿರಲಿ ವಾಯುಮಂಡಲ ಚೈತನ್ಯ ಮಂದಿರದಂತೆ ಇರಲಿ,
ನಕಾರಾತ್ಮಕತೆಯನ್ನು (ನೆಗಟಿವ್ನ್ನು) ಸಕಾರಾತ್ಮಕತೆಯಲ್ಲಿ (ಪಾಜಿಟಿವ್) ಮಾಡುವುದರಲ್ಲಿ ಮೊದಲು
ನಾನು, ಮೊದಲು ತಾವು ಅಲ್ಲ, ಮೊದಲು ನಾನು ಏಕೆಂದರೆ ಬಾಪ್ದಾದಾ ಮತ್ತು ಅಡ್ವಾನ್ಸ್ಪಾರ್ಟಿ ಹಾಗೂ
ಈಗಿನ ಪ್ರಕೃತಿಯೂ ಸಹ ನಿರೀಕ್ಷಣೆ ಮಾಡುತ್ತಿದೆ. ತಯಾರಾಗುವವರು ತಾವಾಗಿದ್ದೀರಿ, ತಾವು ನಿರೀಕ್ಷಣೆ
ಮಾಡಬಾರದು, ಸಿದ್ಧರಾಗಬೇಕು.
ಈಗ ಎಲ್ಲಾ ಕಡೆ ಭಯ
ಹರಡಿದೆ, ಎಲ್ಲರ ಹೃದಯದಲ್ಲಿ ಒಂದೇ ಸಂಕಲ್ಪವಿದೆ. ಪ್ರಪಂಚದವರಲ್ಲಿ ಮೆಜಾರಿಟಿ ನಾಳೆ ಏನಾಗುತ್ತದೆಯೋ
ಎಂಬ ಸಂಕಲ್ಪವಿದೆ. ನಾಳೆ ಏನಾಗುತ್ತದೆ ಎಂದು ನಿಮಗೆ ಗೊತ್ತಿದೆಯೇ? ಅಂದಾಗ ಪರಿವರ್ತನೆ
ಮಾಡಿಕೊಳ್ಳುವುದರಲ್ಲಿ ಮೊದಲು ನಾನು ನಿಮಿತ್ತನಾಗುತ್ತೇನೆ - ಈ ದೃಢ ಸಂಕಲ್ಪವನ್ನು ಯಾರು
ಮಾಡುತ್ತೀರಿ? ಇದರಲ್ಲಿ ಕೈ ಎತ್ತಿರಿ. ಮಾಡಬೇಕಾಗುತ್ತದೆ. ಬದಲಾಗಬೇಕಾಗುತ್ತದೆ,
ರಕ್ಷಕರಾಗಬೇಕಾಗುತ್ತದೆ, ಕೆಲವೊಂದನ್ನು ಬಿಡಬೇಕಾಗುತ್ತದೆ ಮತ್ತು ಪ್ರೀತಿಯನ್ನು
ತೆಗೆದುಕೊಳ್ಳಬೇಕಾಗುತ್ತದೆ. ತಾವೆಲ್ಲಾ ಮನಸ್ಸಿನ ಕೈ ಎತ್ತಿದ್ದೀರೋ ಅಥವಾ ಕೇವಲ ಕೈಯನ್ನು
ಎತ್ತಿದ್ದೀರೋ! ಯಾರು ಮನಸ್ಸಿನ ಕೈ ಎತ್ತಿದ್ದೀರಿ ಏಕೆಂದರೆ ಮನಸ್ಸು ಬದಲಾವಣೆ ಆದರೆ ವಿಶ್ವ
ಬದಲಾವಣೆ ಆಗುತ್ತದೆ ಅಂದಾಗ ಈ ವರ್ಷದಲ್ಲಿ ಯಾವ ಸ್ಲೋಗನ್ ಇರುತ್ತದೆ? ಯಾವ ಸ್ಲೋಗನ್ ಇರುತ್ತದೆ?
ನೋ ಪ್ರಾಬ್ಲಮ್ (ಸಮಸ್ಯೆಯೇ ಇಲ್ಲ). ವಿಜಯದ ಬಾವುಟ ಹೃದಯದಲ್ಲಿ ಹಾರುತ್ತದೆ ಮತ್ತು ಎಲ್ಲರೂ ಖುಷಿಯ
ನರ್ತನೆಯನ್ನು ಸದಾ ಮನಸ್ಸಿನಲ್ಲಿ ಮಾಡುತ್ತೀರಿ. ಮನಸ್ಸಿನ ನರ್ತನ ಖುಷಿ ಆಗಿದೆ. ಅಂದಾಗ ಪ್ರತಿಸಮಯ
ಖುಷಿಯ ನರ್ತನೆ ಮಾಡಿ. ಮತ್ತು ದಾತನ ಮಕ್ಕಳಾಗಿದ್ದೀರೆಂದರೆ ಏನೇ ಬರಲಿ ಪ್ರತಿಯೊಬ್ಬರಿಗೂ ಒಂದಲ್ಲ
ಒಂದು ಗುಣದ ಬಹುಮಾನವನ್ನು ಕೊಡಿ ಅಂದಾಗ ಒಂದು ಸೆಕೆಂಡಿನಲ್ಲಿ ಆ ದೃಢ ಸಂಕಲ್ಪ ದಾತನ ಸಂಕಲ್ಪ
ಲಿಫ್ಟ್ ಆಗಿ ಬಿಡುತ್ತದೆ ಮತ್ತು ಸೆಕೆಂಡಿನಲ್ಲಿ ಪರಮಧಾಮ, ಸೂಕ್ಷ್ಮವತನ, ಸ್ಥೂಲ ಮಧುಬನ,
ಸಾಕಾರವತನ ಎಲ್ಲಿ ಬಯಸುತ್ತೀರೋ ಅಲ್ಲಿಗೆ ಯಾವುದೇ ಶ್ರಮವಿಲ್ಲದೆ ತಲುಪಿ ಬಿಡುತ್ತೀರಿ. ಯಾರೇ
ನಿಮ್ಮ ಮುಂದೆ ಬಂದಾಗ ಅವರನ್ನು ಖಾಲಿ ಕೈಯಲ್ಲಿ ಕಳುಹಿಸಬೇಡಿ, ಒಂದಲ್ಲ ಒಂದು ಗುಣವನ್ನು
ಚೆಹರೆಯಿಂದ, ಚಲನೆಯಿಂದ, ಮುಖದಿಂದ ಕೊಡಿ. ಒಂದಲ್ಲ ಒಂದು ಗುಣದ ಉಡುಗೊರೆ ಇಲ್ಲದೆ ಮಿಲನ ಮಾಡಬೇಡಿ.
ಅಂದಾಗ ಈ ವರ್ಷ ಪ್ರತಿ
ತಿಂಗಳಿನ ಫಲಿತಾಂಶವನ್ನು ತಮ್ಮ ಹತ್ತಿರ ಇಟ್ಟುಕೊಳ್ಳಿ ಹಾಗೂ ಟೀಚರ್ ಮೂಲಕ ಒ.ಕೆ ಕಾರ್ಡ್ ಯಜ್ಞಕ್ಕೆ
ಕಳುಹಿಸಬೇಕು, ದೊಡ್ಡ ಪತ್ರವನ್ನು ಕಳುಹಿಸಬಾರದು, ಒ.ಕೆ ಎನ್ನುವ ಕಾರ್ಡ್ ಕಳುಹಿಸಬೇಕು. ಕಾರ್ಡ್
ಸಹ ದೊಡ್ಡದು ಕಳುಹಿಸಬಾರದು. ಪ್ರಪಂಚದಲ್ಲಿ ಇರುವ ಕಾರ್ಡ್ ಅಲ್ಲ ಟೀಚರ್ ಮೂಲಕ ಏನು ವರದಾನದ ಕಾರ್ಡ್
ಸಿಗುತ್ತದೆ ಅಂತಹದ್ದು ಕಳುಹಿಸಬೇಕು. ಗುಣಗಳ ಉಡುಗೊರೆ, ಶಕ್ತಿಗಳ ಉಡುಗೊರೆ ಎಷ್ಟಿದೆ ಎಂದು ಲಿಸ್ಟ್
ಎನಿಸಿದ್ದೇ ಆದರೆ ಎಷ್ಟು ದೊಡ್ಡ ಲಿಸ್ಟ್ ಇದೆ. ಮತ್ತು ಎಷ್ಟು ಕೊಡುತ್ತೀರೋ ಅಷ್ಟು ಕಡಿಮೆ
ಆಗುವುದಿಲ್ಲ, ಹೆಚ್ಚುತ್ತಾಹೋಗುತ್ತದೆ. ಹೇಗೆ ಛೂ ಮಂತ್ರ ಎಂದು ಹೇಳುತ್ತಾರಲ್ಲವೇ ಅಂದಾಗ ಈ ಶಿವ
ಮಂತ್ರದಿಂದ ಎಂದೂ ಯಾವುದೇ ಗುಣ ನಿಮ್ಮಗೆ ಕಡಿಮೆ ಆಗುವುದಿಲ್ಲ. ಇನ್ನೂ ಹೆಚ್ಚಾಗುತ್ತದೆ ಏಕೆಂದರೆ
ದಾನ ಕೊಟ್ಟರೆ ಗ್ರಹಣ ಬಿಟ್ಟು ಹೋಗುತ್ತದೆ ಎಂದು ಗಾಯನವಿದೆ. ಒಳ್ಳೆಯದು.
ಈ ಬಾರಿ ಯಾರು ಮೊಟ್ಟ
ಮೊದಲನೇ ಬಾರಿ ಬಂದಿದ್ದೀರಿ ಅವರು ಎದ್ದು ನಿಲ್ಲಿ. ಒಳ್ಳೆಯದು - (ಮಧ್ಯ ಪ್ರದೇಶದ ರಾಜ್ಯಪಾಲರು
ಎದುರಿಗೆ ಕುಳಿತಿದ್ದರು) ಈ ಸಂಘಟನೆಯಲ್ಲಿ ಬಂದಿದ್ದೀರಿ ಒಳ್ಳೆಯದು. ಬಾಪ್ದಾದಾರವರು ತಮ್ಮೆಲ್ಲರಿಗೆ,
ಬರುವವರಿಗೆ ಸದಾ ತಂದೆಯಿಂದ ಗುಡ್ಮಾರ್ನಿಂಗ್ ಹಾಗೂ ಗುಡ್ನೈಟ್ ಖಂಡಿತ ಮಾಡುವ ವರದಾನವನ್ನು
ಕೊಡುತ್ತಿದ್ದಾರೆ. ಏಕೆಂದರೆ ಮೊಟ್ಟ ಮೊದಲು ಕಣ್ಣು ತೆರೆಯುತ್ತಲೇ ತಂದೆಯನ್ನು ನೋಡಿದರೆ ಇಡೀ ದಿನ
ಚೆನ್ನಾಗಿರುತ್ತದೆ. ಅಂದಾಗ ಮೊದಲನೇ ಬಾರಿ ಬರುವ ಮಕ್ಕಳಿಗೆ ಬಾಪ್ದಾದಾರವರ ಪದಮಾಗುಣ ನೆನಪು,
ಪ್ರೀತಿ ಹಾಗೂ ಶುಭಾಶಯಗಳು. ಒಳ್ಳೆಯದು.
ಈಗ ಎಲ್ಲರೂ ಸದಾ ಏನು
ನಾಲ್ಕು ಮಾತುಗಳನ್ನು ತಿಳಿಸಿದ್ದೇವೆ ಮತ್ತು 5ನೆಯದು ಜೀರೋ ಹಾಗೂ ಹೀರೋ ಎಂದು ತಿಳಿಸಿದ್ದೇವೆ, ಈ
ಮಾತುಗಳನ್ನು ಮನನ ಮಾಡುತ್ತಾ ಮಗ್ನಾವಸ್ಥೆಯಲ್ಲಿ ಇರುವ ಬ್ರಾಹ್ಮಣರಿಂದ ಫರಿಸ್ಥಾ ಆತ್ಮಗಳು, ದೇವತಾ
ಆಗುವುದಂತೂ ತಮ್ಮ ಜನ್ಮ ಸಿದ್ಧ ಅಧಿಕಾರವಾಗಿದೆ. ಫರಿಸ್ಥೆಯಿಂದ ದೇವತೆ ಆಗಿಯೇ ಆಗುತ್ತಾರೆ ಅಂದಾಗ
ಸದಾ ಸ್ನೇಹದ ಪ್ರೀತಿಯಲ್ಲಿ ಲೀನ ಲವಲೀನರಾಗಿರುವ ಸದಾ ದೃಢತೆಯ ಸಂಕಲ್ಪದ ಬೀಗದ ಕೈಯನ್ನು
ಮನಸ್ಸಿನಲ್ಲಿ, ಬುದ್ಧಿಯಲ್ಲಿ ಇಟ್ಟುಕೊಳ್ಳುವವರು, ಏಕೆಂದರೆ ಈ ಬೀಗದ ಕೈಗೆ ಮಾಯೆ ಬಹಳ ಚಕ್ಕರ್
ಹಾಕುತ್ತದೆ. ಅಂದಾಗ ಮನಸ್ಸು ಹಾಗೂ ಬುದ್ಧಿಯಿಂದ ಸದಾ ಸಮರ್ಥರಾಗಿರುವ ಎಲ್ಲಾ ಕಡೆಯ ಮಕ್ಕಳಿಗೆ
ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ದಾದಿಗಳ ಜೊತೆ (ಜಾನಕಿ
ದಾದಿಯವರ ಜೊತೆ) :
ಚಕ್ಕರ್ ಹಾಕಿ
ಬಂದಿದ್ದೀರಿ ಬಹಳ ಒಳ್ಳೆಯದು, ಏನು ಮಾಡುತ್ತಿದ್ದೀರಿ ಬಹಳ ಚೆನ್ನಾಗಿದೆ. ತಂದೆಗೆ ಜಗದಾಂಬ
ಮಧ್ಯದಲ್ಲಿ ನಿಂತಿದ್ದಾರೆ, ಬಾವುಟ ಹಾರಿಸುತ್ತಿದ್ದಾರೆ ಮತ್ತೆ ಹಿಂದೆ ಎಲ್ಲಾ ಶಕ್ತಿಗಳು
ಜೊತೆಯಲ್ಲಿ ನಿಂತಿರುವ ಚಿತ್ರ ನೆನಪಿಗೆ ಬಂದಿದೆ. ಈಗ ಬಾಪ್ದಾದಾರವರು ಈ ಚಿತ್ರವನ್ನು ವಿಶ್ವದ
ಮುಂದೆ ತೋರಿಸಲು ಇಷ್ಟ ಪಡುತ್ತಾರೆ. ಪೂರ್ತಿ ಬ್ರಾಹ್ಮಣರಲ್ಲಿ ನಿಮಿತ್ತರಾಗುವ ಶಕ್ತಿ ಸೇನೆಯನ್ನು
ತಯಾರು ಮಾಡಿ. ಚಕ್ಕರ್ ಹಾಕುತ್ತಾ ವಾಯುಮಂಡಲವನ್ನು ಶಕ್ತಿಶಾಲಿಯನ್ನಾಗಿ ಮಾಡಲಿ ಹಾಗೂ ದೃಢ ಸಂಕಲ್ಪ
ಮಾಡಿದರೆ ನಾವು ಈ ದೃಢ ಸಂಕಲ್ಪ ಇಟ್ಟುಕೊಳ್ಳುತ್ತೇವೆ - ನಾವು ವಾಯುಮಂಡಲವನ್ನು ಪರಿವರ್ತನೆ ಮಾಡಿ
ತೋರಿಸುತ್ತೇವೆ ಈ ಬಾವುಟವನ್ನು ಹಾರಿಸಬೇಕು. ಚಕ್ಕರ್ ಹಾಕಿ ವಾಯುಮಂಡಲವನ್ನು ಸರಿ ಮಾಡುವ
ಗ್ರೂಪನ್ನು ತಯಾರು ಮಾಡಿ. ತಮ್ಮ ಸ್ಥಿತಿ, ವಾಣಿ ಹಾಗೂ ಸಂಗದಿಂದ ಅಂತಹ ಗ್ರೂಪ್ನ್ನು ತಯಾರು ಮಾಡಿ
ತೋರಿಸಿ. ಬಾಪ್ದಾದಾರವರಿಗೆ ಚಿತ್ರ ನೆನಪಿಗೆ ಬಂದಿದೆ ಅಂದಾಗ ಇದು ಪ್ರಾಕ್ಟಿಕಲ್ ಆಗಬೇಕು. ಈ ರೀತಿ
ಹೇಳಬೇಡಿ ಸಮಯ ಸಿಗುವುದಿಲ್ಲ. ಯಾರೂ ಸಮಯ ಸಿಗುವುದಿಲ್ಲ ಎಂದು ಹೇಳುವುದಿಲ್ಲ. ಒಂದುವೇಳೆ ಶುಭ
ಭಾವನೆ ಇದ್ದರೆ ಸಮಯ ಸಿಗುತ್ತದೆ. ಇಂತಹ ಗ್ರೂಪ್ನ್ನು ಬಾಪ್ದಾದಾರವರಿಗೆ ಮಾಡಿ ತೋರಿಸಿ.
ಯುವಕರ ವರ್ಗ:-
ಈಗ ಈ ವರ್ಷದಲ್ಲಿ ಏನೆಲ್ಲಾ ಬ್ರಾಹ್ಮಣರ ಮರ್ಯಾದೆಗಳಿದೆ ಒಂದೊಂದು ಮರ್ಯಾದೆಯನ್ನು ಪೂರ್ಣ
ರೀತಿಯಲ್ಲಿ ಮನಸ್ಸಿನಿಂದ, ವಾಚಾದಿಂದ, ಕರ್ಮಣಾದಿಂದ ಮತ್ತು ಸಂಬಂಧ-ಸಂಪರ್ಕದಿಂದ ನಾಲ್ಕೂ ರೂಪದಿಂದ
ಪಾಲನೆ ಮಾಡುವವರಾಗಿದ್ದೀರಿ - ಇಂತಹ ಗ್ರೂಪ್ನ್ನು ತಯಾರು ಮಾಡಿ. ಈ ವರ್ಷದಲ್ಲಿ ಯಾವುದೇ ಮರ್ಯಾದೆ
ಭಂಗ ಆಗಬಾರದು. ಅಂತಹ ಗ್ರೂಪ್ನ್ನು ಪರಸ್ಪರದಲ್ಲಿ ತಯಾರು ಮಾಡಿ. ಇಷ್ಟ ಇದೆಯಲ್ಲವೇ. ಯಾರು
ಮಾಡುತ್ತೀರಿ? ತಾವು ಮಾಡುತ್ತೀರಾ? ಕೈ ಎತ್ತಿ. ಮಾಡುತ್ತೀರಾ? ಎಲ್ಲಾ ಯುವಕರು ಮಾಡುತ್ತೀರಾ? ಎಷ್ಟು
ಜನ ಇದ್ದಾರೆ? (400) ಪರಸ್ಪರ ಪ್ರತಿಯೊಂದು ಗ್ರೂಪಿನಲ್ಲಿ ಪಕ್ಕಾ ಮಾಡಿ, ಕೇವಲ ಸರ್ಕಾರಕ್ಕೆ
ತೋರಿಸುತ್ತೇವೆ ಇವರು ಮರ್ಯಾದಾ ಪುರುಷೋತ್ತಮರಾಗಿದ್ದಾರೆ. ಸರ್ಕಾರವೂ ಸಹ ಬಯಸುತ್ತದೆ ಆದರೆ ಮಾಡಲು
ಆಗುವುದಿಲ್ಲ. ತಾವು ಮಾಡಿ ತೋರಿಸಿ. ಉದಾಹರಣೆ ಆಗಿ ತೋರಿಸಿ. ಹೋಂವರ್ಕ್ ಸಿಕ್ಕಿದೆಯಲ್ಲವೇ.
ಬಾಪ್ದಾದಾರವರೂ ಎಲ್ಲಾ ಕಡೆ ಇರುವ ಬ್ರಾಹ್ಮಣ ಆತ್ಮಗಳು ಈ ವರ್ಷದಲ್ಲಿ ಕಮಾಲ್ ಮಾಡಿ ತೋರಿಸಿಲಿ
ಎನ್ನುವುದೇ ಬಯಸುತ್ತಾರೆ. ವ್ಯರ್ಥ ಸಂಕಲ್ಪದ ಧಮಾಲ್ ಸಹ ಇರಬಾರದು. ಶುದ್ಧ ಸಂಕಲ್ಪಗಳನ್ನು ಇಷ್ಟು
ಜಮಾ ಮಾಡಿಕೊಳ್ಳಿ ಯಾವುದರಿಂದ ವ್ಯರ್ಥಕ್ಕೆ ಬರಲು ಸಮಯ ಸಿಗಬಾರದು. ಖಜಾನೆ ಇದೆಯಲ್ಲವೇ. ಶುದ್ಧ
ಸಂಕಲ್ಪದ ಇಷ್ಟು ಖಜಾನೆ ಒಟ್ಟಿಗೆ ಇದೆಯಲ್ಲವೇ? ಇದ್ದರೆ ಕೈ ಎತ್ತಿ. ಶಕ್ತಿಯರೂ ಸಹ ಇದ್ದಾರೆ,
ಶಕ್ತಿಯರೂ ಸಹ ಉದಾಹರಣೆ ಆಗಬೇಕು, ಪಾಂಡವರೂ ಸಹ ಉದಾಹರಣೆ ಆಗಬೇಕು. ಒಳ್ಳೆಯದು ಬಾಪ್ದಾದಾರವರು ಖುಷಿ
ಆಗಿದ್ದಾರೆ.
ವರದಾನ:
ಸೂಕ್ಷ್ಮ
ಸಂಕಲ್ಪಗಳ ಬಂಧನಗಳಿಂದಲೂ ಮುಕ್ತರಾಗಿ ಶ್ರೇಷ್ಠ ಸ್ಥಿತಿಯ ಅನುಭವ ಮಾಡುವಂತಹ ನಿರ್ಬಂಧನ ಭವ.
ಯಾವ ಮಕ್ಕಳೆಷ್ಟು
ನಿರ್ಬಂಧನರು ಆಗಿರುತ್ತಾರೆಯೋ ಅಷ್ಟು ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಲು ಸಾಧ್ಯವಾಗುವುದು.
ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿರಿ - ಮನಸಾ-ವಾಚಾ ಹಾಗೂ ಕರ್ಮದಲ್ಲಿ ಸೂಕ್ಷ್ಮವಾಗಿಯೂ ಯಾವುದೇ
ಸೆಳೆತ/ಬಂಧನವು ಬಂಧಿತವಾಗಿಲ್ಲವೆ! ಒಬ್ಬ ತಂದೆಯ ಹೊರತು ಮತ್ತ್ಯಾರದೇ ನೆನಪು ಬರುವುದಿಲ್ಲವೆ!
ತಮ್ಮ ದೇಹದ ನೆನಪು ಬಂದಿತೆಂದರೂ ಸಹ ದೇಹದ ಜೊತೆ ದೇಹದ ಸಂಬಂಧ, ಪದಾರ್ಥ, ಪ್ರಪಂಚದಲ್ಲಿ
ಇರುವುದೆಲ್ಲವೂ ಬಂದು ಬಿಡುತ್ತದೆ. ನಾನು ನಿರ್ಬಂಧನನಾಗಿದ್ದೇನೆ - ಈ ವರದಾನವನ್ನು ಸ್ಮೃತಿಯಲ್ಲಿ
ಇಟ್ಟುಕೊಂಡು, ಇಡೀ ಪ್ರಪಂಚವನ್ನು ಮಾಯೆಯ ಜಾಲದಿಂದ ಮುಕ್ತಗೊಳಿಸುವ ಸೇವೆಯನ್ನು ಮಾಡಿರಿ.
ಸ್ಲೋಗನ್:
ದೇಹಿ-ಅಭಿಮಾನಿ
ಸ್ಥಿತಿಯ ಮೂಲಕ ತನು ಹಾಗೂ ಮನಸ್ಸಿನ ಏರುಪೇರುಗಳನ್ನು ಸಮಾಪ್ತಿ ಮಾಡುವವರೇ ಅಚಲರಾಗಿ ಇರುವರು.
ಅವ್ಯಕ್ತ ಸೂಚನೆ:-
“ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”
ಸಮಸ್ಯೆಗಳ ಕೆಲಸವಾಗಿದೆ
ಬರುವುದು, ನಿಶ್ಚಯ ಬುದ್ಧಿ ಆತ್ಮನ ಕೆಲಸವಾಗಿದೆ ಸಮಾಧಾನ ಸ್ವರೂಪದಿಂದ ಸಮಸ್ಯೆಯನ್ನು ಪರಿವರ್ತನೆ
ಮಾಡುವುದು. ಏಕೆ? ನೀವು ಪ್ರತಿ ಬ್ರಾಹ್ಮಣ ಆತ್ಮನು ಬ್ರಾಹ್ಮಣ ಜನ್ಮ ತೆಗೆದುಕೊಳ್ಳುತ್ತಲೇ ಮಾಯೆಗೆ
ಚಾಲೇಂಜ್ ಮಾಡಿದ್ದೀರಾ ನಾವು ಮಾಯಾಜೀತ್ರಾಗುವವರಿದ್ದೇವೆ. ಸಮಸ್ಯೆ ಸ್ವರೂಪ ಮಾಯೆಯ ಸ್ವರೂಪವಾಗಿದೆ.
ಯವಾಗ ಚಾಲೇಂಜ್ ಮಾಡಿದ್ದೀರಿ ಆಗ ಮಾಯೆ ಎದುರಿಸುತ್ತದೆ ಆದರೆ ನೀವು ಅದನ್ನು ನಿಶ್ಚಯ ಬುದ್ಧಿ ವಿಜಯಿ
ಸ್ವರೂಪದಿಂದ, ನಥಿಂಗ್ ನ್ಯೂ (ಯಾವುದು ಹೊಸದಲ್ಲ) ಎಂದು ತಿಳಿದು ಪಾರು ಮಾಡಿದರೆ ನಿಶ್ಚಿಂತ
ಚಕ್ರವರ್ತಿ ಇರುತ್ತೀರಿ.