08.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ ಆಗ ನೆನಪಿನ ಶಕ್ತಿಯು ಜಮಾ ಆಗುವುದು, ನೆನಪಿನ ಶಕ್ತಿಯಿಂದ ನೀವು ಇಡೀ ವಿಶ್ವದ ರಾಜ್ಯವನ್ನು ಪಡೆಯಬಹುದಾಗಿದೆ”

ಪ್ರಶ್ನೆ:
ಯಾವ ಮಾತು ನೀವು ಮಕ್ಕಳ ಸಂಕಲ್ಪ ಸ್ವಪ್ನದಲ್ಲಿಯೂ ಇರಲಿಲ್ಲ ಅದು ಈಗ ಪ್ರತ್ಯಕ್ಷದಲ್ಲಿ ಆಗಿದೆ?

ಉತ್ತರ:
ನಾವು ಭಗವಂತನಿಂದ ರಾಜಯೋಗವನ್ನು ಕಲಿತು ವಿಶ್ವದ ಮಾಲೀಕರಾಗುತ್ತೇವೆ. ರಾಜ್ಯಪದವಿಗಾಗಿ ವಿದ್ಯೆಯನ್ನು ಓದುತ್ತಿದ್ದೇವೆಂದು ನಿಮಗೆ ಸಂಕಲ್ಪ-ಸ್ವಪ್ನದಲ್ಲಿಯೂ ಇರಲಿಲ್ಲ. ಈಗ ಸರ್ವಶಕ್ತಿವಂತ ತಂದೆಯಿಂದ ಶಕ್ತಿಯನ್ನು ಪಡೆದುಕೊಂಡು ನಾವು ಸತ್ಯಯುಗದ ಸ್ವರಾಜ್ಯಾಧಿಕಾರಿಗಳಾಗುತ್ತೇವೆ ಎಂದು ನಿಮಗೆ ಅಪಾರ ಖುಷಿಯಿದೆ.

ಓಂ ಶಾಂತಿ.
ಮಕ್ಕಳು ಇಲ್ಲಿ ಅಭ್ಯಾಸಕ್ಕಾಗಿ ಕುಳಿತುಕೊಳ್ಳುತ್ತೀರಿ. ವಾಸ್ತವದಲ್ಲಿ ಯಾರು ಆತ್ಮಾಭಿಮಾನಿಯಾಗಿ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳುವರೋ ಅವರೇ ಇಲ್ಲಿ ಗದ್ದುಗೆಯ ಮೇಲೆ ಕುಳಿತುಕೊಳ್ಳಬೇಕು. ಒಂದುವೇಳೆ ನೆನಪಿನಲ್ಲಿ ಕುಳಿತುಕೊಳ್ಳದಿದ್ದರೆ ಅವರು ಶಿಕ್ಷಕರೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನೆನಪಿನಲ್ಲಿಯೇ ಶಕ್ತಿಯಿದೆ, ಜ್ಞಾನದಲ್ಲಿ ಶಕ್ತಿಯಿಲ್ಲ. ಇದಕ್ಕೆ ನೆನಪಿನ ಬಲವೆಂದು ಹೇಳಲಾಗುವುದು. ಯೋಗಬಲವೆನ್ನುವುದು ಸನ್ಯಾಸಿಗಳ ಶಬ್ಧವಾಗಿದೆ. ಇಲ್ಲಿ ತಂದೆಯು ಯಾವ ಕಷ್ಟದ ಶಬ್ಧವನ್ನು ಉಪಯೋಗಿಸುವುದಿಲ್ಲ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಈಗ ತಂದೆಯನ್ನು ನೆನಪು ಮಾಡಿ. ಹೇಗೆ ಚಿಕ್ಕಮಕ್ಕಳು ತಂದೆ-ತಾಯಿಯನ್ನು ನೆನಪು ಮಾಡುತ್ತಾರಲ್ಲವೆ ಆದರೆ ಅವರಂತೂ ದೇಹಧಾರಿಗಳಾಗಿದ್ದಾರೆ. ಇಲ್ಲಿ ನೀವು ವಿಚಿತ್ರ ಮಕ್ಕಳಾಗಿದ್ದಾರೆ, ಈ ಚಿತ್ರವು (ಶರೀರ) ನಿಮಗೆ ಇಲ್ಲಿಯೇ ಸಿಗುತ್ತದೆ. ನೀವು ವಿಚಿತ್ರದೇಶದ ನಿವಾಸಿಗಳಾಗಿದ್ದೀರಿ. ಅಲ್ಲಿ ಚಿತ್ರ ಅರ್ಥಾತ್ ಶರೀರವಿರುವುದಿಲ್ಲ. ಮೊಟ್ಟಮೊದಲಿಗೆ ನಾನು ಆತ್ಮನಾಗಿದ್ದೇನೆ ಎಂಬುದನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಆತ್ಮಾಭಿಮಾನಿಯಾಗಿ ತಮ್ಮನ್ನು ಆತ್ಮನೆಂದು ನಿಶ್ಚಯ ಮಾಡಿಕೊಳ್ಳಿ. ನೀವು ನಿರ್ವಾಣ ದೇಶದಿಂದ ಬಂದಿದ್ದೀರಿ, ಅದು ನೀವೆಲ್ಲಾ ಆತ್ಮಗಳ ಮನೆಯಾಗಿದೆ, ನೀವಿಲ್ಲಿ ಪಾತ್ರವನ್ನಭಿನಯಿಸಲು ಬರುತ್ತೀರಿ ಎಂದಮೇಲೆ ಮೊಟ್ಟಮೊದಲು ಯಾರು ಬರುತ್ತಾರೆ? ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ. ಪ್ರಪಂಚದಲ್ಲಿ ಈ ಜ್ಞಾನವಿರುವ ಮನುಷ್ಯರು ಬೇರೆ ಯಾರೂ ಇಲ್ಲ. ತಂದೆಯು ತಿಳಿಸುತ್ತಾರೆ- ಶಾಸ್ತ್ರ ಇತ್ಯಾದಿ ಏನೆಲ್ಲವನ್ನೂ ಓದಿದ್ದೀರೋ ಅದೆಲ್ಲವನ್ನೂ ಮರೆತುಬಿಡಿ. ಕೃಷ್ಣನ ಮಹಿಮೆ, ಮೊದಲಾದವರ ಮಹಿಮೆಯನ್ನು ಎಷ್ಟೊಂದು ಮಾಡುತ್ತಾರೆ! ಗಾಂಧೀಜಿಯ ಮಹಿಮೆಯನ್ನು ಮಾಡುತ್ತಾರೆ. ಅವರು ರಾಮರಾಜ್ಯದ ಸ್ಥಾಪನೆ ಮಾಡಿಹೋದರು ಎಂಬಂತೆ ಅವರಿಗೆ ಮಹಿಮೆ ಮಾಡುತ್ತಾರೆ ಆದರೆ ಶಿವಭಗವಾನುವಾಚ- ಆದಿಸನಾತನ ರಾಜ-ರಾಣಿಯ ರಾಜ್ಯದ ಯಾವ ನಿಯಮವಿತ್ತು, ತಂದೆಯು ರಾಜಯೋಗವನ್ನು ಕಲಿಸಿ ರಾಜ-ರಾಣಿಯನ್ನಾಗಿ ಮಾಡಿದ್ದರು, ಆ ಈಶ್ವರೀಯ ರೀತಿ-ಪದ್ಧತಿಯನ್ನೂ ಸಹ ಮುರಿದುಹಾಕಿದರು. ನಮಗೆ ರಾಜ್ಯಾಡಳಿತ ಬೇಕಿಲ್ಲ, ನಮಗೆ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯ ಅರ್ಥಾತ್ ಪ್ರಜಾಪ್ರಭುತ್ವವು ಬೇಕೆಂದು ಹೇಳಿದರು ಆದರೆ ಅದರ ಕಾರಣ ಇಂದು ಪ್ರಪಂಚದ ಸ್ಥಿತಿಯೇನಾಯಿತು! ದುಃಖವೇ ದುಃಖ, ಹೊಡೆದಾಡುತ್ತಾ ಜಗಳವಾಡುತ್ತಿರುತ್ತಾರೆ. ಅನೇಕ ಮತಗಳಾಗಿವೆ. ನೀವು ಮಕ್ಕಳು ಶ್ರೀಮತದನುಸಾರ ಈಗ ರಾಜ್ಯವನ್ನು ತೆಗೆದುಕೊಳ್ಳುತ್ತೀರಿ. ನಿಮ್ಮಲ್ಲಿ ಇಷ್ಟು ದೊಡ್ಡಶಕ್ತಿಯಿರುತ್ತದೆ, ಸತ್ಯಯುಗದಲ್ಲಿ ಸೈನ್ಯ ಮೊದಲಾದವುಗಳ ಅವಶ್ಯಕತೆಯಿರುವುದಿಲ್ಲ, ಯಾವುದೇ ಭಯದ ಮಾತಿರುವುದಿಲ್ಲ. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅದ್ವೈತ ರಾಜ್ಯವಾಗಿತ್ತು. ಚಪ್ಪಾಳೆಯನ್ನು ತಟ್ಟಲು ಇಬ್ಬರು ಇರಲೇ ಇಲ್ಲ. ಅದಕ್ಕೆ ಅದ್ವೈತ ರಾಜ್ಯವೆಂದು ಹೇಳಲಾಗುತ್ತದೆ. ನೀವು ಮಕ್ಕಳನ್ನು ತಂದೆಯು ದೇವತೆಗಳನ್ನಾಗಿ ಮಾಡುತ್ತಾರೆ ಮತ್ತೆ ರಾವಣನ ಮೂಲಕ ನೀವು ದ್ವೈತದಿಂದ ದೈತ್ಯರಾಗಿಬಿಡುತ್ತೀರಿ. ಈಗ ನೀವು ಮಕ್ಕಳಿಗೆ ಅರ್ಥವಾಗಿದೆ. ನಾವು ಭಾರತವಾಸಿಗಳು ಇಡೀ ವಿಶ್ವದ ಮಾಲೀಕರಾಗಿದ್ದೆವು. ನಿಮಗೆ ವಿಶ್ವದ ರಾಜ್ಯಭಾಗ್ಯವು ಕೇವಲ ನೆನಪಿನ ಬಲದಿಂದಲೇ ಸಿಕ್ಕಿತ್ತು. ಈಗ ಮತ್ತೆ ಸಿಗುತ್ತಿದೆ. ಕೇವಲ ನೆನಪಿನ ಬಲದಿಂದ ಕಲ್ಪ-ಕಲ್ಪವೂ ಸಿಗುತ್ತದೆ. ವಿದ್ಯೆಯಲ್ಲಿಯೂ ಬಲವಿದೆ. ಹೇಗೆ ವಕೀಲವಿದ್ಯೆಯನ್ನು ಓದಿ ವಕೀಲರಾಗುತ್ತಾರೆಂದರೆ ಅದರಲ್ಲಿ ಶಕ್ತಿಯಿದೆಯಲ್ಲವೆ ಆದರೆ ಅದು ನಯಾಪೈಸೆಯ ಶಕ್ತಿಯಾಗಿದೆ. ನೀವು ಯೋಗಬಲದಿಂದ ಇಡೀ ವಿಶ್ವದ ಮೇಲೆ ರಾಜ್ಯಭಾರ ಮಾಡುತ್ತೀರಿ. ಸರ್ವಶಕ್ತಿವಂತ ತಂದೆಯಿಂದ ಶಕ್ತಿ ಸಿಗುತ್ತದೆ. ನೀವು ಹೇಳುತ್ತೀರಿ- ಬಾಬಾ, ನಾವು ಕಲ್ಪ-ಕಲ್ಪವೂ ತಮ್ಮಿಂದ ಸ್ವರಾಜ್ಯ ಅಧಿಕಾರವನ್ನು ತೆಗೆದುಕೊಳ್ಳುತ್ತೇವೆ ಮತ್ತೆ ಕಳೆದುಕೊಳ್ಳುತ್ತೇವೆ. ಪುನಃ ತೆಗೆದುಕೊಳ್ಳುತ್ತೇವೆ. ನಿಮಗೆ ಪೂರ್ಣ ಜ್ಞಾನವು ಸಿಕ್ಕಿದೆ, ಈಗ ನೀವು ಶ್ರೀಮತದನುಸಾರ ಶ್ರೇಷ್ಠವಿಶ್ವದ ರಾಜ್ಯವನ್ನು ಪಡೆದುಕೊಳ್ಳುತ್ತೀರಿ. ವಿಶ್ವವೇ ಶ್ರೇಷ್ಠವಾಗಿ ಬಿಡುತ್ತದೆ. ಈ ರಚಯಿತ ಮತ್ತು ರಚನೆಯ ಜ್ಞಾನವು ನಿಮಗೆ ಈಗ ಇದೆ. ಈ ಲಕ್ಷ್ಮೀ-ನಾರಾಯಣರಿಗೂ ಸಹ ನಾವು ಹೇಗೆ ರಾಜ್ಯವನ್ನು ಪಡೆದುಕೊಂಡೆವು ಎಂಬ ಜ್ಞಾನವಿರುವುದಿಲ್ಲ. ನೀವು ಇಲ್ಲಿ ಓದುತ್ತೀರಿ ಮತ್ತು ಸತ್ಯಯುಗದಲ್ಲಿ ರಾಜ್ಯಭಾರ ಮಾಡುತ್ತೀರಿ. ಯಾರಾದರೂ ಒಳ್ಳೆಯ ಧನವಂತರ ಮನೆಯಲ್ಲಿ ಜನ್ಮಪಡೆದುಕೊಂಡರೆ ಇವರು ಹಿಂದಿನ ಜನ್ಮದಲ್ಲಿ ಒಳ್ಳೆಯ ಕರ್ಮ ಮಾಡಿದ್ದಾರೆ. ದಾನ-ಪುಣ್ಯಗಳನ್ನು ಮಾಡಿದ್ದಾರೆಂದು ಹೇಳುತ್ತಾರೆ. ಎಂತಹ ಕರ್ಮವೋ ಅಂತಹ ಜನ್ಮವು ಸಿಗುತ್ತದೆ. ಕೆಲವರು ಕೂಲಿ ಮಾಡುವವರು, ವೇಶ್ಯೆಯರಾಗಿಬಿಡುತ್ತಾರೆ. ಇದು ಕರ್ಮಭೋಗವಲ್ಲವೆ. ಇದು ರಾವಣರಾಜ್ಯವಾಗಿದೆ. ಇಲ್ಲಿ ಯಾವುದೆಲ್ಲಾ ಕರ್ಮ ಮಾಡುವರೋ ಅದು ವಿಕರ್ಮವೇ ಆಗುತ್ತದೆ. ಏಣಿಯನ್ನು ಇಳಿಯಲೇಬೇಕಾಗಿದೆ. ಎಲ್ಲದಕ್ಕಿಂತ ದೊಡ್ಡ ಸರ್ವಶ್ರೇಷ್ಠ ದೇವಿ-ದೇವತಾ ಧರ್ಮದವರೂ ಸಹ ಏಣಿಯನ್ನು ಇಳಿಯಲೇಬೇಕಾಗಿದೆ. ಸತೋ, ರಜೋ, ತಮೋದಲ್ಲಿ ಬರಬೇಕಾಗಿದೆ. ಪ್ರತಿಯೊಂದು ವಸ್ತು ಹೊಸದರಿಂದ ಮತ್ತೆ ಹಳೆಯದಾಗುತ್ತದೆ. ಅಂದಾಗ ನೀವು ಮಕ್ಕಳಿಗೆ ಈಗ ಅಪಾರ ಖುಷಿಯಿರಬೇಕು. ನಾವೇ ವಿಶ್ವದ ಮಾಲೀಕರಾಗುತ್ತೇವೆ ಎಂಬುದು ನಿಮಗೆ ಸಂಕಲ್ಪ-ಸ್ವಪ್ನದಲ್ಲಿಯೂ ಇರಲಿಲ್ಲ. ಭಾರತವಾಸಿಗಳಿಗೆ ತಿಳಿದಿದೆ- ಈ ಲಕ್ಷ್ಮಿ-ನಾರಾಯಣರ ರಾಜ್ಯವು ಇಡೀ ವಿಶ್ವದಲ್ಲಿತ್ತು, ಪೂಜ್ಯರಾಗಿದ್ದರು, ಅವರೇ ಈಗ ಪೂಜಾರಿಗಳಾಗಿದ್ದಾರೆ. ನಾವೇ ಪೂಜ್ಯ, ನಾವೇ ಪೂಜಾರಿಯೆಂದು ಗಾಯನ ಮಾಡಲಾಗುತ್ತದೆ. ಈಗ ಇದು ನಿಮ್ಮ ಬುದ್ಧಿಯಲ್ಲಿರಬೇಕು. ಈ ನಾಟಕವು ಬಹಳ ವಿಚಿತ್ರವಾಗಿದೆ. ಹೇಗೆ ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ, ಅದನ್ನು ಯಾರೂ ತಿಳಿದುಕೊಂಡಿಲ್ಲ. ಶಾಸ್ತ್ರಗಳನ್ನು 84 ಲಕ್ಷ ಜನ್ಮಗಳೆಂದು ಹೇಳಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ- ಇವೆಲ್ಲವೂ ಭಕ್ತಿಮಾರ್ಗದ ಅಸತ್ಯ ಮಾತುಗಳಾಗಿವೆ. ರಾವಣರಾಜ್ಯವಲ್ಲವೆ. ರಾಮರಾಜ್ಯ ಮತ್ತು ರಾವಣರಾಜ್ಯವು ಹೇಗಾಗುತ್ತದೆ ಎಂಬುದು ನೀವು ಮಕ್ಕಳ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ರಾವಣನನ್ನು ಪ್ರತೀ ವರ್ಷವೂ ಸುಡುತ್ತಾರೆ ಅಂದಮೇಲೆ ಶತ್ರುವಲ್ಲವೆ. ಪಂಚವಿಕಾರಗಳು ಮನುಷ್ಯನ ಶತ್ರುಗಳಾಗಿವೆ. ರಾವಣ ಯಾರು? ಏಕೆ ಸುಡುತ್ತಾರೆ? ಎಂಬುದನ್ನು ಯಾರೂ ಅರಿತುಕೊಂಡಿಲ್ಲ. ಯಾರು ತಮ್ಮನ್ನು ಸಂಗಮಯುಗದವರೆಂದು ತಿಳಿಯುವರೋ ಅವರಿಗೆ ಸ್ಮೃತಿಯಲ್ಲಿರುತ್ತದೆ- ನಾವೀಗ ಪುರುಷೋತ್ತಮರಾಗಿದ್ದೇವೆ. ಭಗವಂತನು ನಮಗೆ ರಾಜಯೋಗವನ್ನು ಕಲಿಸಿ ನರನಿಂದ ನಾರಾಯಣ, ಭ್ರಷ್ಟಾಚಾರಿಗಳಿಂದ ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತಾರೆ. ನಮಗೆ ಸರ್ವಶ್ರೇಷ್ಠ ನಿರಾಕಾರ ಭಗವಂತನೇ ಓದಿಸುತ್ತಾರೆ ಅಂದಾಗ ಎಷ್ಟೊಂದು ಖುಷಿಯಿರಬೇಕು. ಶಾಲೆಯಲ್ಲಿ ನಾವು ವಿದ್ಯಾರ್ಥಿಗಳಾಗಿದ್ದೇವೆ ಎಂಬುದು ವಿದ್ಯಾರ್ಥಿಯ ಬುದ್ಧಿಯಲ್ಲಿರುತ್ತದೆಯಲ್ಲವೆ. ಅವರಿಗಂತೂ ಸಾಮಾನ್ಯ ಶಿಕ್ಷಕರು ಓದಿಸುತ್ತಾರೆ, ಆದರೆ ಇಲ್ಲಿ ನಿಮಗೆ ಭಗವಂತನೇ ಓದಿಸುತ್ತಾರೆ. ಯಾವ ವಿದ್ಯೆಯಿಂದ ಇಷ್ಟು ಶ್ರೇಷ್ಠಪದವಿಯು ಸಿಗುತ್ತದೆಯೆಂದರೆ, ಎಷ್ಟು ಚೆನ್ನಾಗಿ ಓದಬೇಕು! ಇದು ಬಹಳ ಸಹಜವಿದ್ಯೆಯಾಗಿದೆ. ಕೇವಲ ಬೆಳಗ್ಗೆ ಅರ್ಧ-ಮುಕ್ಕಾಲು ಗಂಟೆ ಓದಬೇಕಾಗಿದೆ. ಇಡೀ ದಿನ ಉದ್ಯೋಗ-ವ್ಯವಹಾರಗಳಲ್ಲಿ ನೆನಪು ಮರೆತುಹೋಗುತ್ತದೆ ಆದ್ದರಿಂದ ಇಲ್ಲಿ ಬೆಳಗ್ಗೆ ಬಂದು ನೆನಪಿನಲ್ಲಿ ಕುಳಿತುಕೊಳ್ಳುತ್ತೀರಿ. ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಿ ಎಂದು ಹೇಳಲಾಗುತ್ತದೆ. ಬಾಬಾ, ತಾವು ನಮಗೆ ಓದಿಸಲು ಬಂದಿದ್ದೀರಿ. ಈಗ ನಮಗೆ ಅರ್ಥವಾಯಿತು, ತಾವು 5000 ವರ್ಷಗಳ ನಂತರ ಬಂದು ಓದಿಸುತ್ತೀರಿ. ತಂದೆಯ ಬಳಿ ಮಕ್ಕಳು ಬಂದಾಗ ಮೊದಲು ಎಂದಾದರೂ ಮಿಲನ ಮಾಡಿದ್ದೀರಾ? ಎಂದು ತಂದೆಯು ಕೇಳುತ್ತಾರೆ. ಈ ಪ್ರಶ್ನೆಯನ್ನು ಯಾವುದೇ ಸಾಧು-ಸನ್ಯಾಸಿಗಳು ಕೇಳಲು ಸಾಧ್ಯವಿಲ್ಲ. ಅಲ್ಲಂತೂ ಸತ್ಸಂಗದಲ್ಲಿ ಯಾರು ಬೇಕೋ ಹೋಗಿ ಕುಳಿತುಕೊಳ್ಳುತ್ತಾರೆ. ಅನೇಕರನ್ನು ನೋಡಿ ಎಲ್ಲರೂ ಒಳಗೆ ನುಗ್ಗುತ್ತಾರೆ. ಈಗ ನೀವೂ ಸಹ ತಿಳಿದುಕೊಳ್ಳುತ್ತೀರಿ- ನಾವು ಗೀತಾ, ರಾಮಾಯಣ ಮೊದಲಾದವನ್ನು ಎಷ್ಟೊಂದು ಖುಷಿಯಿಂದ ಹೋಗಿ ಕೇಳುತ್ತಿದ್ದೆವು ಆದರೆ ಏನೂ ಅರ್ಥವಾಗುತ್ತಿರಲಿಲ್ಲ. ಅದೆಲ್ಲವೂ ಭಕ್ತಿಯ ಖುಷಿಯಾಗಿದೆ, ಬಹಳ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ ಆದರೆ ಮತ್ತೆ ಕೆಳಗಿಳಿಯುತ್ತಲೇ ಬರುತ್ತಾರೆ. ಭಿನ್ನ-ಭಿನ್ನ ಪ್ರಕಾರದ ಹಠಯೋಗಗಳನ್ನು ಮಾಡುತ್ತಾರೆ. ಆರೋಗ್ಯಕ್ಕಾಗಿಯೇ ಎಲ್ಲವನ್ನೂ ಮಾಡುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಇವೆಲ್ಲವೂ ಭಕ್ತಿಮಾರ್ಗದ ರೀತಿ-ಪದ್ಧತಿಗಳಾಗಿವೆ. ರಚಯಿತ ಮತ್ತು ರಚನೆಯನ್ನು ಯಾರೂ ತಿಳಿದುಕೊಂಡಿಲ್ಲ. ಅಂದಮೇಲೆ ಉಳಿದದ್ದು ಏನು? ರಚಯಿತ, ರಚನೆಯನ್ನು ಅರಿತುಕೊಳ್ಳುವುದರಿಂದ ನೀವು ಏನಾಗುತ್ತೀರಿ ಮತ್ತು ಅರಿತುಕೊಳ್ಳದಿರುವುದರಿಂದ ಏನಾಗುತ್ತೀರಿ? ಅರಿತುಕೊಳ್ಳುವುದರಿಂದ ನೀವು ಸಾಹುಕಾರರಾಗುತ್ತೀರಿ, ಅರಿತುಕೊಳ್ಳದೇ ಇರುವುದರಿಂದ ಇದೇ ಭಾರತವಾಸಿಗಳು ಕನಿಷ್ಠರಾಗಿಬಿಟ್ಟಿದ್ದಾರೆ, ಅಸತ್ಯವನ್ನು ಹೇಳುತ್ತಿರುತ್ತಾರೆ. ಪ್ರಪಂಚದಲ್ಲಿ ಏನೇನು ಆಗುತ್ತಿರುತ್ತದೆ, ಎಷ್ಟೊಂದು ಹಣ, ಚಿನ್ನ, ಇತ್ಯಾದಿಯನ್ನು ಲೂಟಿ ಮಾಡುತ್ತಾರೆ. ನೀವು ಮಕ್ಕಳಿಗೆ ತಿಳಿದಿದೆ- ಸತ್ಯಯುಗದಲ್ಲಂತೂ ನಾವು ಚಿನ್ನದ ಮಹಲುಗಳನ್ನು ಕಟ್ಟುತ್ತೇವೆ. ವಕೀಲ ವಿದ್ಯೆಯನ್ನು ಓದುತ್ತಾರೆಂದರೆ ಪರೀಕ್ಷೆಯನ್ನು ತೇರ್ಗಡೆ ಮಾಡಿ ಈ ರೀತಿ ಆಗುತ್ತೇವೆ. ಮನೆ ಕಟ್ಟುತ್ತೇವೆ ಎಂದು ಮನಸ್ಸಿನಲ್ಲಿರುತ್ತದೆಯಲ್ಲವೆ. ಅಂದಾಗ ನಾವು ಸ್ವರ್ಗದ ರಾಜಕುಮಾರ-ರಾಜಕುಮಾರಿಯರಾಗಲು ಓದುತ್ತಿದ್ದೇವೆ ಎಂಬುದು ನಿಮಗೇಕೆ ಬುದ್ಧಿಯಲ್ಲಿ ಬರುವುದಿಲ್ಲ? ನಿಮಗೆ ಎಷ್ಟೊಂದು ಖುಷಿಯಿರಬೇಕು ಆದರೆ ಹೊರಗೆ ಹೋಗುತ್ತಿದ್ದಂತೆಯೇ ಖುಷಿಯು ಮಾಯವಾಗಿಬಿಡುತ್ತದೆ. ಚಿಕ್ಕ-ಚಿಕ್ಕ ಕನ್ಯೆಯರು ಈ ಜ್ಞಾನದಲ್ಲಿ ತೊಡಗುತ್ತಾರೆ. ಸಂಬಂಧಿಗಳು ಏನನ್ನೂ ತಿಳಿದುಕೊಂಡಿರುವುದಿಲ್ಲ. ಕೇವಲ ಇವರದು ಜಾದು ಆಗಿದೆಯೆಂದು ಹೇಳಿಬಿಡುತ್ತಾರೆ. ನಾವು ಓದುವುದಕ್ಕೆ ಬಿಡುವುದಿಲ್ಲವೆಂದು ಹೇಳುತ್ತಾರೆ, ಇಂತಹ ಸನ್ನಿವೇಶದಲ್ಲಿ ಎಲ್ಲಿಯವರೆಗೆ ಅಪ್ರಾಪ್ತ ವಯಸ್ಸಿನವರಾಗಿರುತ್ತೀರೋ ಅಲ್ಲಿಯವರೆಗೆ ತಂದೆ-ತಾಯಿಯ ಮಾತನ್ನು ಕೇಳಬೇಕಾಗುತ್ತದೆ. ಇಲ್ಲವಾದರೆ ಬಹಳಷ್ಟು ಏರುಪೇರುಗಳಾಗುತ್ತವೆ. ಆರಂಭದಲ್ಲಿ ಎಷ್ಟೊಂದು ಏರುಪೇರುಗಳಾಯಿತು! ನಾವು 18 ವರ್ಷದವರೆಂದು ಮಕ್ಕಳು ಹೇಳುವರು. ಇವರು 16 ವರ್ಷದವರು, ಅಪ್ರಾಪ್ತ ವಯಸ್ಕರೆಂದು ತಂದೆಯು ಹೇಳುತ್ತಿದ್ದರು. ಜಗಳ ಮಾಡಿ ಅವರನ್ನು ಹಿಡಿದು ಕರೆದುಕೊಂಡು ಹೋಗುತ್ತಿದ್ದರು. ಅಪ್ರಾಪ್ತ ವಯಸ್ಕರೆಂದರೆ ತಂದೆಯ ಆಜ್ಞೆಯಲ್ಲಿ ನಡೆಯಬೇಕಾಗಿದೆ. ವಯಸ್ಕರಾಗಿದ್ದರೆ ಏನು ಬೇಕೋ ಅದನ್ನು ಮಾಡಬಲ್ಲಿರಿ, ನಿಯಮವೂ ಇದೆಯಲ್ಲವೆ. ತಂದೆಯು ತಿಳಿಸುತ್ತಾರೆ, ನೀವು ತಂದೆಯ ಬಳಿ ಬರುತ್ತೀರೆಂದರೆ ತಮ್ಮ ಲೌಕಿಕ ತಂದೆಯ ಪತ್ರವನ್ನು ತೆಗೆದುಕೊಂಡು ಬನ್ನಿ ಮತ್ತು ನಡವಳಿಕೆಯನ್ನು ನೋಡಲಾಗುತ್ತದೆ. ನಡವಳಿಕೆಯು ಸರಿಯಿಲ್ಲವೆಂದರೆ ಹಿಂತಿರುಗಿ ಹೋಗಬೇಕಾಗುವುದು. ಆಟದಲ್ಲಿಯೂ ಇದೇ ರೀತಿಯಾಗುತ್ತದೆ. ಸರಿಯಾಗಿ ಆಡಲಿಲ್ಲವೆಂದರೆ ನೀವು ಆಟದಿಂದ ಹೊರಗೆ ಹೋಗಿ, ಮರ್ಯಾದೆಯನ್ನು ಕಳೆಯುತ್ತೀರಿ ಎಂದು ಹೇಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾವು ಯುದ್ಧದ ಮೈದಾನದಲ್ಲಿದ್ದೇವೆ, ಕಲ್ಪ-ಕಲ್ಪವೂ ತಂದೆಯು ಬಂದು ನಮಗೆ ಮಾಯೆಯ ಮೇಲೆ ಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ಮುಖ್ಯಮಾತು ಪಾವನರಾಗುವುದಾಗಿದೆ. ವಿಕಾರದಿಂದ ಪತಿತರಾಗುತ್ತೀರಿ. ತಂದೆಯು ತಿಳಿಸುತ್ತಾರೆ- ಕಾಮ ಮಹಾಶತ್ರುವಾಗಿದೆ, ಇದು ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುವಂತದ್ದಾಗಿದೆ. ಯಾರು ಬ್ರಾಹ್ಮಣರಾಗುವರೋ ಅವರೇ ದೇವಿ-ದೇವತಾಧರ್ಮದಲ್ಲಿ ಬರುತ್ತಾರೆ. ಬ್ರಾಹ್ಮಣರಲ್ಲಿಯೂ ನಂಬರ್ವಾರ್ ಇರುತ್ತಾರೆ. ಪರಮಜ್ಯೋತಿಯ ಬಳಿ ಪತಂಗಗಳು ಬರುತ್ತವೆ. ಕೆಲವು ಸುಟ್ಟು ಬಲಿಹಾರಿಯಾಗುತ್ತವೆ, ಇನ್ನೂ ಕೆಲವು ಸುತ್ತಾಡಿ ಹೊರಟುಹೋಗುತ್ತವೆ. ಇಲ್ಲಿಯೂ ಸಹ ಬಂದಿದ್ದೀರಿ, ಅದರಲ್ಲಿ ಕೆಲವರು ಒಮ್ಮೆಲೆ ಬಲಿಹಾರಿಯಾಗುತ್ತಾರೆ, ಇನ್ನೂ ಕೆಲವರು ಕೇಳಿ ಹೊರಟುಹೋಗುತ್ತಾರೆ. ಬಾಬಾ, ನಾವು ತಮ್ಮವರೆಂದು ಮೊದಲು ಕೆಲವರು ರಕ್ತದಿಂದಲೂ ಬರೆದುಕೊಡುತ್ತಿದ್ದರು. ಆದರೂ ಸಹ ಮಾಯೆಯು ಸೋಲಿಸಿಬಿಡುತ್ತದೆ. ಇಷ್ಟೊಂದು ಮಾಯೆಯ ಯುದ್ಧವು ನಡೆಯುತ್ತದೆ. ಇದಕ್ಕೆ ಯುದ್ಧಸ್ಥಳವೆಂದು ಹೇಳಲಾಗುತ್ತದೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಚಿತ್ರಗಳನ್ನಂತು ಬಹಳಷ್ಟು ಮಾಡಿದ್ದರಲ್ಲವೆ. ನಾರದನ ಉದಾಹರಣೆಯೂ ಸಹ ಈ ಸಮಯದ್ದಾಗಿದೆ. ನಾವು ಲಕ್ಷಿ ಅಥವಾ ನಾರಾಯಣ ಆಗುತ್ತೇವೆಂದು ಎಲ್ಲರೂ ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ- ತಮ್ಮನ್ನು ನೋಡಿಕೊಳ್ಳಿ, ನಾವು ಯೋಗ್ಯರಾಗಿದ್ದೇವೆಯೇ? ನಮ್ಮಲ್ಲಿ ವಿಕಾರಗಳಿಲ್ಲವೆ? ನಿಜವಾಗಿ ಎಲ್ಲರೂ ನಾರದನಂತೆ ಭಕ್ತರಾಗಿದ್ದೀರಲ್ಲವೆ. ಇಲ್ಲಿ ಕೇವಲ ಒಬ್ಬರ ಉದಾಹರಣೆಯನ್ನು ಬರೆಯಲಾಗಿದೆ- ನಾವು ಲಕ್ಷ್ಮಿಯನ್ನು ವರಿಸಲು ಸಾಧ್ಯವೇ ಎಂದು ಭಕ್ತಿಮಾರ್ಗದವರು ಕೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ- ಇಲ್ಲ, ಯಾವಾಗ ಜ್ಞಾನವನ್ನು ಕೇಳುವರೋ ಆಗಲೇ ಸದ್ಗತಿಯನ್ನು ಪಡೆಯಲು ಸಾಧ್ಯ. ನಾನು ಪತಿತ-ಪಾವನನೇ ಎಲ್ಲರ ಸದ್ಗತಿಯನ್ನು ಮಾಡುವವನಾಗಿದ್ದೇನೆ. ತಂದೆಯು ನಮ್ಮನ್ನು ರಾವಣರಾಜ್ಯದಿಂದ ಬಿಡುಗಡೆ ಮಾಡುತ್ತಿದ್ದಾರೆಂದು ನೀವೀಗ ತಿಳಿದಿದ್ದೀರಿ. ಅದು ಸ್ಥೂಲಯಾತ್ರೆಯಾಗಿದೆ, ಭಗವಾನುವಾಚ- ಮನ್ಮನಾಭವ. ಈ ಯಾತ್ರೆಯಲ್ಲಿ ಅಲೆದಾಡುವ ಮಾತಿಲ್ಲ. ಅದೆಲ್ಲವೂ ಭಕ್ತಿಮಾರ್ಗದ ಅಲೆದಾಟವಾಗಿದೆ. ಅರ್ಧಕಲ್ಪ ಬ್ರಹ್ಮನ ದಿನ, ಇನ್ನರ್ಧಕಲ್ಪ ಬ್ರಹ್ಮನ ರಾತ್ರಿಯಾಗಿದೆ. ನೀವು ತಿಳಿದಿದ್ದೀರಿ- ನಾವೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರಿಗೆ ಈಗ ಅರ್ಧಕಲ್ಪ ದಿನವಾಗುವುದು. ನಾವು ಸುಖಧಾಮದಲ್ಲಿರುತ್ತೇವೆ, ಅಲ್ಲಿ ಭಕ್ತಿಯಿರುವುದಿಲ್ಲ. ನಾವು ಎಲ್ಲರಿಗಿಂತ ಸಾಹುಕಾರರಾಗುತ್ತೇವೆಂದು ನೀವು ಮಕ್ಕಳಿಗೆ ತಿಳಿದಿದೆ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು! ನೀವೆಲ್ಲರೂ ಒರಟಾದ ಕಲ್ಲಿನ ಸಮಾನರಾಗಿದ್ದಿರಿ, ತಂದೆಯು ಬಂದು ಸುಂದರಮಣಿಯನ್ನಾಗಿ ಮಾಡಿ ಪೆÇೀಣಿಸುತ್ತಿದ್ದಾರೆ. ತಂದೆಯು ವಜ್ರವ್ಯಾಪಾರಿಯೂ ಆಗಿದ್ದಾರಲ್ಲವೆ. ನಾಟಕದನುಸಾರ ಶಿವತಂದೆಯು ಅನುಭವೀ ರಥವನ್ನು ತೆಗೆದುಕೊಂಡಿದ್ದಾರೆ. ಹಳ್ಳಿಯ ಬಾಲಕನೆಂದು ಗಾಯನವಿದೆ ಅಂದಮೇಲೆ ಕೃಷ್ಣನು ಹಳ್ಳಿಯ ಹುಡುಗನಾಗಲು ಹೇಗೆ ಸಾಧ್ಯ? ಕೃಷ್ಣನಂತೂ ಸತ್ಯಯುಗದಲ್ಲಿದ್ದನು, ಕೃಷ್ಣನನ್ನು ಎಲ್ಲರೂ ಉಯ್ಯಾಲೆಯಲ್ಲಿ ತೂಗುತ್ತಾರೆ. ಕಿರೀಟವನ್ನು ತೊಡಿಸುತ್ತಾರೆ ಅಂದಮೇಲೆ ಹಳ್ಳಿಯ ಹುಡುಗನೆಂದು ಏಕೆ ಹೇಳುತ್ತಾರೆ? ಹಳ್ಳಿಯ ಹುಡುಗನು ಶ್ಯಾಮನಾದನು ಎಂದು ಹೇಳುತ್ತಾರೆ. ಈಗ ನೀವು ಸುಂದರರಾಗಲು ಬಂದಿದ್ದೀರಿ. ತಂದೆಯು ಜ್ಞಾನದ ದಾರದಲ್ಲಿ ಪೆÇೀಣಿಸುತ್ತಿದ್ದಾರಲ್ಲವೆ. ಈ ಸತ್ಯತಂದೆಯ ಸಂಗವು ಕಲ್ಪ-ಕಲ್ಪ, ಕಲ್ಪದಲ್ಲಿ ಒಂದೇಬಾರಿ ಸಿಗುತ್ತದೆ. ಉಳಿದೆಲ್ಲವೂ ಅಸತ್ಯಸಂಗಗಳಾಗಿವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಕೆಟ್ಟದ್ದನ್ನು ಕೇಳಬೇಡಿ, ಎಲ್ಲಿ ನನ್ನ ಮತ್ತು ನಿಮ್ಮ ನಿಂದನೆ ಮಾಡುತ್ತಿರುತ್ತಾರೆಯೋ ಅಂತಹ ಮಾತುಗಳನ್ನು ಕೇಳಬೇಡಿ.

ಯಾವ ಕುಮಾರಿಯರು ಜ್ಞಾನದಲ್ಲಿ ಬರುತ್ತಾರೆಯೋ ಅವರು ಹೇಳಬಹುದು- ನನಗೆ ನಮ್ಮ ತಂದೆಯ ಆಸ್ತಿಯಲ್ಲಿ ಪಾಲಿದೆ, ನಾವು ಅದರಿಂದ ಬಾರತದ ಸೇವಾರ್ಥವಾಗಿ ಸೇವಾಕೇಂದ್ರವನ್ನು ಏಕೆ ತೆರೆಯಬಾರದು! ಕನ್ಯಾದಾನವಂತೂ ಕೊಡಲೇಬೇಕಾಗಿದೆ. ಆ ಭಾಗ್ಯವನ್ನು ನಮಗೆ ಕೊಟ್ಟರೆ ಅದರಿಂದ ಸೇವಾಕೇಂದ್ರವನ್ನು ತೆರೆಯುತ್ತೇವೆ. ಅದರಿಂದ ಅನೇಕರ ಕಲ್ಯಾಣವಾಗುತ್ತದೆ. ಇಂತಹ ಯುಕ್ತಿಯನ್ನು ಕುಮಾರಿಯರು ರಚಿಸಬೇಕು. ಇದು ನಿಮ್ಮ ಈಶ್ವರೀಯ ಯಂತ್ರವಾಗಿದೆ. ನೀವು ಕಲ್ಲುಬುದ್ಧಿಯವರನ್ನು ಪಾರಸಬುದ್ಧಿಯವರನ್ನಾಗಿ ಮಾಡುತ್ತೀರಿ. ಯಾರು ನಮ್ಮ ಧರ್ಮದವರಾಗಿರುವರೋ ಅವರೇ ಬರುತ್ತಾರೆ, ಉಳಿದವರು ಬರುವುದಿಲ್ಲ. ಪರಿಶ್ರಮವಾಗುತ್ತದೆಯಲ್ಲವೆ. ತಂದೆಯು ಎಲ್ಲಾ ಆತ್ಮಗಳನ್ನು ಪಾವನರನ್ನಾಗಿ ಮಾಡಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ ತಂದೆಯು ತಿಳಿಸಿದ್ದರು- ಹೊಸಬರು ಬಂದರೆ ಅವರನ್ನು ಸಂಗಮಯುಗದ ಚಿತ್ರದೆಡೆಗೆ ಕರೆದುಕೊಂಡು ಹೋಗಿ ತಿಳಿಸಿ- ಒಂದುಕಡೆ ಕಲಿಯುಗವಿದೆ, ಇನ್ನೊಂದುಕಡೆ ಸತ್ಯಯುಗವಿದೆ. ಸತ್ಯಯುಗದಲ್ಲಿ ದೇವತೆಗಳು, ಕಲಿಯುಗದಲ್ಲಿ ಅಸುರರಿರುತ್ತಾರೆ. ಈಗ ಈ ಸಮಯವನ್ನು ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ತಂದೆಯೇ ಪುರುಷೋತ್ತಮರನ್ನಾಗಿ ಮಾಡುತ್ತಾರೆ. ಯಾರು ಓದುವರೋ ಅವರು ಸತ್ಯಯುಗದಲ್ಲಿ ಬರುತ್ತಾರೆ, ಉಳಿದೆಲ್ಲರೂ ಮುಕ್ತಿಧಾಮಕ್ಕೆ ಹೋಗುತ್ತಾರೆ. ನಂತರ ಎಲ್ಲರೂ ತಮ್ಮ-ತಮ್ಮ ಸಮಯದಲ್ಲಿ ಬರುತ್ತಾರೆ. ಸೃಷ್ಟಿಚಕ್ರದ ಚಿತ್ರವು ಬಹಳ ಚೆನ್ನಾಗಿದೆ ಅಂದಾಗ ನಾವು ಹೀಗೀಗೆ ಸೇವೆ ಮಾಡಿ ಬಡವರ ಉದ್ಧಾರ ಮಾಡಿ ಅವರನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಬೇಕೆಂದು ಉಮ್ಮಂಗವಿರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮನ್ನು ತಾವು ನೋಡಿಕೊಳ್ಳಬೇಕು- ನಾವು ಶ್ರೀಲಕ್ಷ್ಮಿ-ಶ್ರೀನಾರಾಯಣನ ಸಮಾನ ಆಗುತ್ತೇವೆಯೇ? ನನ್ನಲ್ಲಿ ಯಾವುದೇ ವಿಕಾರವು ಇಲ್ಲವೇ? ನಾನು ಕೇವಲ ಸುತ್ತಾಡಿ ಹೋಗುವಂತಹ ಚಿಟ್ಟೆಯೇ? ಅಥವಾ ಬಲಿಹಾರಿಯಾಗುವ ಚಿಟ್ಟೆಯೇ? ತಂದೆಯ ಗೌರವವನ್ನು ಕಳೆಯುವಂತಹ ನಡುವಳಿಕೆಯಂತೂ ಇಲ್ಲವೆ?

2. ಅಪಾರ ಖುಷಿಯಲ್ಲಿರಲು ಬೆಳಗ್ಗೆ-ಬೆಳಗ್ಗೆ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು ಮತ್ತು ವಿದ್ಯೆಯನ್ನು ಓದಬೇಕಾಗಿದೆ. ಭಗವಂತನೇ ನಮಗೆ ಓದಿಸಿ ಪುರುಷೋತ್ತಮರನ್ನಾಗಿ ಮಾಡುತ್ತಾರೆ, ನಾವು ಸಂಗಮಯುಗಿಗಳಾಗಿದ್ದೇವೆ ಎಂಬ ನಶೆಯಲ್ಲಿರಬೇಕಾಗಿದೆ.

ವರದಾನ:
ಸರ್ವ ಗುಣಗಳ ಅನುಭವದ ಮೂಲಕ ತಂದೆಯನ್ನು ಪ್ರತ್ಯಕ್ಷ ಮಾಡುವಂತಹ ಅನುಭವಿ ಮೂರ್ತಿ ಭವ

ತಂದೆಯ ಗುಣಗಾನ ಯಾವುದು ಹಾಡುವಿರಿ ಅದರ ಅನುಭವಿಗಳಾಗಿ. ಹೇಗೆ ತಂದೆ ಆನಂದದ ಸಾಗರ ಆಗಿದ್ದಾರೆ ಅದೇ ರೀತಿ ಆನಂದದ ಸಾಗರನ ಅಲೆಯಲ್ಲಿ ತೇಲಾಡುತ್ತಿರಿ. ಯಾರೇ ಸಂಪರ್ಕದಲ್ಲಿ ಬಂದರೂ ಅವರಿಗೆ ಆನಂದ. ಪ್ರೇಮ, ಸುಖ..... ಎಲ್ಲಾ ಗುಣಗಳ ಅನುಭೂತಿ ಮಾಡಿಸಿ. ಈ ರೀತಿ ಸರ್ವಗುಣಗಳ ಅನುಭವಿ ಮೂರ್ತಿಗಳಾಗಿ ಅದರಿಂದ ತಮ್ಮ ಮೂಲಕ ತಂದೆಯ ರೂಪ ಪ್ರತ್ಯಕ್ಷವಾಗಿಬಿಡುವುದು ತಾವು ಮಹಾನ್ ಆತ್ಮರೇ ಪರಮ ಆತ್ಮನನ್ನು ತಮ್ಮ ಅನುಭವಿ ಮೂರ್ತಿಯಿಂದ ಪ್ರತ್ಯಕ್ಷ ಮಾಡಲು ಸಾಧ್ಯ.

ಸ್ಲೋಗನ್:
ಕಾರಣವನ್ನು ನಿವಾರಣೆಯಲ್ಲಿ ಪರಿವರ್ತನೆ ಮಾಡಿ ಅಶುಭ ಮಾತನ್ನೂ ಸಹ ಶುಭಮಾಡಿ ತೆಗೆದುಕೊಳ್ಳಿ.


ಅವ್ಯಕ್ತ ಸೂಚನೆ: ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.

ಬ್ರಾಹ್ಮಣರಿಗೆ ಜೀವನದ ಜೀವ ದಾನ ಪವಿತ್ರತೆಯಾಗಿದೆ. ಆದಿ - ಅನಾದಿ ಸ್ವರೂಪವೇ ಪವಿತ್ರತೆ. ನಾನು ಅನಾದಿ-ಆದಿ ಪವಿತ್ರ ಆತ್ಮನಾಗಿದ್ದೇನೆ ಎಂದು ಸ್ಮೃತಿಯು ಬಂದಿದೆ. ಸ್ಮೃತಿ ಬರುವುದು ಅರ್ಥಾತ್ ಪವಿತ್ರತೆಯ ಸಮರ್ಥತೆಯಲ್ಲಿ ಬರುವುದು. ಸ್ಮೃತಿ ಸ್ವರೂಪ, ಸಮರ್ಥ ಸ್ವರೂಪ ಆತ್ಮರು, ಸತ್ಯವಾದ ಪವಿತ್ರ ಸಂಸ್ಕಾರವುಳ್ಳವರು ಸತ್ಯ ಸಂಸ್ಕಾರಗಳನ್ನು ಇಮರ್ಜ್ ಮಾಡಿ, ಈ ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.