08.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವೀಗ ಶೂದ್ರ ಮನೆತನದಿಂದ ಬ್ರಾಹ್ಮಣ ಮನೆತನದಲ್ಲಿ ಬಂದಿದ್ದೀರಿ, ತಂದೆಯು ನಿಮ್ಮನ್ನು ಬ್ರಹ್ಮಾರವರ ಮುಖದಿಂದ ದತ್ತು ಮಾಡಿಕೊಂಡಿದ್ದಾರೆ - ಇದೇ ಖುಷಿಯಲ್ಲಿರಿ”

ಪ್ರಶ್ನೆ:
ಯಾವ ಗುಹ್ಯ ರಹಸ್ಯವನ್ನು ಬ್ರಾಹ್ಮಣ ಕುಲದ ಮಕ್ಕಳೇ ತಿಳಿದುಕೊಳ್ಳಲು ಸಾಧ್ಯ?

ಉತ್ತರ:
ನಿರಾಕಾರ ಶಿವ ತಂದೆಯು ನಮ್ಮ ಪಿತನಾಗಿದ್ದಾರೆ ಮತ್ತು ಈ ಬ್ರಹ್ಮಾರವರು ನಮ್ಮ ತಾಯಿಯಾಗಿದ್ದಾರೆ. ನಿರಾಕಾರ ಭಗವಂತನು ಹೇಗೆ ಮಾತಾಪಿತಾ ಬಂಧು, ಸಖನಾಗುತ್ತಾರೆ ಎಂಬ ಗುಹ್ಯ ಗುಪ್ತ ರಹಸ್ಯವನ್ನು ಬ್ರಾಹ್ಮಣ ಕುಲದ ಮಕ್ಕಳೇ ತಿಳಿದುಕೊಳ್ಳುವರು. ಅದರಲ್ಲಿಯೂ ಯಾರು ದೈವೀ ಕುಲದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವವರಿದ್ದಾರೆಯೋ ಅವರೇ ಈ ರಹಸ್ಯವನ್ನು ಯಥಾರ್ಥ ರೀತಿಯಿಂದ ತಿಳಿದುಕೊಳ್ಳುತ್ತಾರೆ.

ಓಂ ಶಾಂತಿ.
ಮಕ್ಕಳು ಕುಳಿತಿದ್ದೀರಿ - ನಮ್ಮ ಬಾಪ್ದಾದಾ ಬಂದಿದ್ದಾರೆಂದು ತಿಳಿದುಕೊಳ್ಳುತ್ತಿದ್ದೀರಿ. ತಂದೆಯಂತೂ ದಾದಾರವರ ಜೊತೆ ಕಂಬೈಂಡ್ ಆಗುತ್ತಾರೆ ಆದ್ದರಿಂದ ಬಾಪ್ದಾದಾ ಬಂದಿದ್ದಾರೆಂದು ಹೇಳುತ್ತೀರಿ. ಅವರು ಶಿಕ್ಷಕನೂ ಆಗಿದ್ದಾರೆ. ತಂದೆಯು ದಾದಾರವರಿಲ್ಲದೆ ಏನನ್ನೂ ತಿಳಿಸಲು ಸಾಧ್ಯವಿಲ್ಲ. ಬುದ್ಧಿಯನ್ನು ಓಡಿಸಬೇಕು ಏಕೆಂದರೆ ಇದು ಹೊಸ ಮಾತಲ್ಲವೆ. ಅಜ್ಞಾನ ಕಾಲದಲ್ಲಿ ಒಬ್ಬರ ನೆನಪು ಮಾಡುತ್ತಾರೆ. ನಮ್ಮ ಗುರು ಇಂತಹ ಸ್ಥಳದಲ್ಲಿದ್ದಾರೆಂದು ಹೇಳುತ್ತಾರೆ, ಅವರ ಶರೀರದ ಹೆಸರನ್ನು ತಿಳಿದುಕೊಂಡಿರುತ್ತಾರೆ. ನಮ್ಮ ತಂದೆ, ನಮ್ಮ ತಾಯಿಯು ಇಂತಹ ಸ್ಥಳದಲ್ಲಿದ್ದಾರೆ, ಅವರಿಗೆ ನಾಮ-ರೂಪ ಎಲ್ಲವೂ ಇದೆ. ಮನುಷ್ಯರು ಮತ್ತೆ ಅದನ್ನು ಸಾರದಲ್ಲಿ ಬರೆದಿದ್ದಾರೆ, ಮನುಷ್ಯರು ಏನೆಲ್ಲವನ್ನೂ ಮಾಡಿದ್ದಾರೆಯೋ ಅದರಲ್ಲಿ ಒಂದಲ್ಲ ಒಂದು ತಪ್ಪುಗಳಿವೆ. ತ್ವಮೇವ ಮಾತಾಶ್ಚ ಪಿತಾ.... ಎಂದು ಭಲೆ ಗಾಯನವಿದೆ, ಇದನ್ನು ಒಬ್ಬರಿಗಾಗಿಯೇ ಹಾಡಲಾಗುತ್ತದೆ. ಬ್ರಹ್ಮಾರವರಿಗೂ ಈ ರೀತಿ ಹಾಡುವುದಿಲ್ಲ, ಇವರ ನಾಮ-ರೂಪವು ಬುದ್ಧಿಯಲ್ಲಿ ಬರುವುದಿಲ್ಲ. ವಿಷ್ಣುವಿನದಾಗಲಿ, ಶಂಕರನದಾಗಲಿ ಬರುವುದಿಲ್ಲ. ನೀವು ಮಾತಾಪಿತಾ, ನಾನು ನಿಮ್ಮ ಬಾಲಕ ಎಂದು ಹಾಡುತ್ತಾರೆ ಆಗಲೂ ಸಹ ಬುದ್ಧಿಯು ಮೇಲೆ ಹೋಗುತ್ತದೆ. ಕೃಷ್ಣನನ್ನು ಯಾರೂ ನೆನಪು ಮಾಡಲು ಸಾಧ್ಯವಿಲ್ಲ. ನೆನಪು ನಿರಾಕಾರನನ್ನೇ ಮಾಡುತ್ತಾರೆ. ಅವರಿಗೆ ಮಹಿಮೆಯಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಇಲ್ಲಿ ಕುಳಿತುಕೊಳ್ಳುತ್ತೀರೆಂದರೆ ಲೌಕಿಕ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆದು ಪಾರಲೌಕಿಕ ತಂದೆಯನ್ನು ನೆನಪು ಮಾಡಿ. ಈ ಸಮಯದಲ್ಲಿ ಅವರು ಸನ್ಮುಖದಲ್ಲಿದ್ದಾರೆ, ಭಕ್ತಿಮಾರ್ಗದಲ್ಲಿ ಹಾಡುವಾಗ ಮೇಲೆ ನೋಡುತ್ತಾ ನೀವು ಮಾತಾಪಿತಾ.... ಹೇ ಭಗವಂತ ಎಂದು ಹೇಳಿ ನೆನಪು ಮಾಡುತ್ತಾರೆ. ಭಗವಂತ ಎಂದು ಹೇಳಿದಾಗ ಶಿವ ಲಿಂಗವನ್ನೂ ನೆನಪು ಮಾಡುವುದಿಲ್ಲ. ಕೇವಲ ಗಿಳಿಯ ತರಹ ಹಾಡುತ್ತಾರೆ. ಲಕ್ಷ್ಮೀ-ನಾರಾಯಣರಿಗೂ ಈ ರೀತಿ ಹೇಳಲು ಸಾಧ್ಯವಿಲ್ಲ ಏಕೆಂದರೆ ಇವರಂತೂ ಮಹಾರಾಜ-ಮಹಾರಾಣಿಯಾಗಿದ್ದಾರೆ. ಅವರ ಮಕ್ಕಳೇ ಅವರನ್ನು ಮಾತಾಪಿತಾ ಎಂದು ಹೇಳುತ್ತಾರೆ, ಬಂದು ಎಂದು ಹೇಳುವುದಿಲ್ಲ. ಭಕ್ತರು ಹೇ ಪತಿತ-ಪಾವನ ಎಂದು ಹಾಡುತ್ತಾರೆ ಆದರೆ ಇದು ಬುದ್ಧಿಯಲ್ಲಿ ಬರುವುದಿಲ್ಲ – ಶಿವ ಲಿಂಗವಿರಬೇಕು ಎಂದು. ಹಾಗೆಯೇ ಕೇವಲ ಹೇ ಭಗವಂತ ಎಂದು ಹೇಳಿ ಬಿಡುತ್ತಾರೆ. ಹೇ ಭಗವಂತ ಎಂದು ಯಾರು ಹೇಳಿದರು? ಯಾರಿಗೆ ಹೇಳಿದರು? ಏನನ್ನೂ ತಿಳಿದುಕೊಂಡಿಲ್ಲ. ಒಂದುವೇಳೆ ನಾನು ಆತ್ಮನಾಗಿದ್ದೇನೆ, ಅವರನ್ನು ಕರೆಯುತ್ತೇನೆ ಎಂಬ ಜ್ಞಾನವು ಇದ್ದಿದ್ದರೆ ಅವರು ನಿರಾಕಾರ ಪರಮಾತ್ಮನಾಗಿದ್ದಾರೆ, ಅವರ ರೂಪವೇ ಲಿಂಗ ರೂಪವಾಗಿದೆ ಎಂಬುದನ್ನೂ ಸಹ ತಿಳಿದುಕೊಳ್ಳುತ್ತಿದ್ದರು. ಯಥಾರ್ಥ ರೀತಿಯಿಂದ ಯಾರೂ ಸಹ ತಂದೆಯನ್ನು ನೆನಪು ಮಾಡುವುದಿಲ್ಲ, ಅವರಿಂದ ಏನು ಪ್ರಾಪ್ತಿಯಾಗುತ್ತದೆ, ಯಾವಾಗ ಆಗುತ್ತದೆ, ಏನನ್ನೂ ತಿಳಿದುಕೊಂಡಿಲ್ಲ. ನಿಮಗೂ ಗೊತ್ತಿರಲಿಲ್ಲ, ಈಗ ನೀವು ತಂದೆಯ ಮಕ್ಕಳಾಗಿದ್ದೀರಿ. ನಿಮಗೆ ಅರ್ಥವಾಗಿದೆ – ಶಿವ ತಂದೆಯು ಬ್ರಹ್ಮಾರವರ ಮೂಲಕ ನಮ್ಮನ್ನು ತಮ್ಮ ಮಕ್ಕಳನ್ನಾಗಿ ಮಾಡಿಕೊಂಡಿದ್ದಾರೆ. ಈ ಬ್ರಹ್ಮಾರವರು ತಾಯಿಯಾಗಿದ್ದಾರೆ. ಈ ಬ್ರಹ್ಮಾ ತಾಯಿಯ ಮೂಲಕ ಶಿವ ತಂದೆಯು ದತ್ತು ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಿ - ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ. ಸಾಕಾರದಲ್ಲಿ ಪ್ರಜಾಪಿತ ಬ್ರಹ್ಮಾರವರ ಮಕ್ಕಳಾಗಿದ್ದೇವೆ. ಪ್ರಜಾಪಿತ ಬ್ರಹ್ಮಾರವರ ಮೂಲಕ ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ. ಯಾವುದೇ ಹೊಸ ಸೃಷ್ಟಿಯನ್ನು ರಚಿಸುತ್ತಾರೆಂದಲ್ಲ. ಈ ಸಮಯದಲ್ಲಿಯೇ ಬಂದು ಮಡಿಲಿಗೆ ತೆಗೆದುಕೊಳ್ಳುತ್ತಾರೆ, ದತ್ತು ಮಾಡಿಕೊಳ್ಳುತ್ತಾರೆ. ಮಾತಾಪಿತಾ ಎಂದು ಹೇಳುತ್ತಾರೆ ಅಂದಮೇಲೆ ಶಿವನು ಪಿತನಾದರು ಮತ್ತು ಬ್ರಹ್ಮನು ಮಾತಾ ಆದರು. ಅವರಿಗೇ ಮಾತಾಪಿತಾ ಎಂದು ಹೇಳಲಾಗುತ್ತದೆ. ತಂದೆಯು ಬ್ರಹ್ಮಾರವರ ಮೂಲಕ ಹೇಳುತ್ತಾರೆ - ನೀವಾತ್ಮರು ನನ್ನ ಮಕ್ಕಳಾಗಿದ್ದೀರಿ. ತಂದೆಯು ಕುಳಿತು ಆತ್ಮನ ಪರಿಚಯವನ್ನೂ ಕೊಡುತ್ತಾರೆ - ಆತ್ಮವೆಂದರೇನು? ಭೃಕುಟಿಯ ಮಧ್ಯದಲ್ಲಿ ನಕ್ಷತ್ರದಂತೆ ಇರುತ್ತದೆ ಎಂದು ಹೇಳುತ್ತಾರೆ. ಮತ್ತೇನನ್ನೂ ತಿಳಿದುಕೊಂಡಿಲ್ಲ. ಆತ್ಮವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ಈ ಶರೀರದ ಮೂಲಕ ಪಾತ್ರವನ್ನು ಅಭಿನಯಿಸುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಭಿನ್ನ-ಭಿನ್ನ ನಾಮ-ರೂಪ, ದೇಶ-ಕಾಲಗಳಿಂದ ಆತ್ಮವು ಒಂದು ಶರೀರವನ್ನು ಬಿಡುತ್ತದೆಯೆಂದರೆ ಇಡೀ ಪರಿವಾರವೇ ಬದಲಾಗುತ್ತದೆ. ಹೇಗೆ ಯಾರಾದರೂ ದತ್ತು ಮಾಡಿಕೊಂಡರೆ ಪರಿವಾರವೇ ಬದಲಾಗುತ್ತದೆ, ಯಾವ ಮಾತಾಪಿತರಿಂದ ಜನ್ಮ ಪಡೆದರೋ ಅವರನ್ನು ತಿಳಿದುಕೊಂಡಿರುತ್ತಾರೆ ಮತ್ತು ಯಾರು ದತ್ತು ಮಾಡಿಕೊಳ್ಳುತ್ತಾರೆಯೋ ಅವರ ಮನೆಯವರಾಗಿ ಬಿಡುತ್ತಾರೆ. ನೀವಿಲ್ಲಿ ಶೂದ್ರ ಮನೆತನದಿಂದ ಬ್ರಾಹ್ಮಣ ಮನೆತನದಲ್ಲಿ ಬಂದಿರಿ. ಬ್ರಹ್ಮಾರವರ ತನುವಿನಿಂದ ನಿಮ್ಮನ್ನು ದತ್ತು ಮಾಡಿಕೊಳ್ಳಲಾಯಿತು. ನೀವು ಬ್ರಾಹ್ಮಣ ಕುಲದಲ್ಲಿ ಬಂದು ಬಿಟ್ಟಿರಿ - ಈ ಮಾತುಗಳನ್ನು ಶಾಸ್ತ್ರಗಳಲ್ಲಿ ಬರೆಯಲು ಸಾಧ್ಯವಿಲ್ಲ, ಇದನ್ನು ತಿಳಿಸಲಾಗುತ್ತದೆ. ಬರೆಯುವುದರಿಂದ ಯಾರೂ ತಿಳಿದುಕೊಳ್ಳಲಾಗುವುದಿಲ್ಲ.

ನಾವು ಪರಮಪಿತ ಪರಮಾತ್ಮನ ಸಂತಾನರಾಗಿದ್ದೇವೆ, ಇವರು ತಾಯಿಯಾಗಿದ್ದಾರೆ ಎಂಬುದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಬ್ರಹ್ಮನಿಗೆ ಪ್ರಜಾಪಿತನೆಂದೇ ಹೇಳುತ್ತಾರೆ. ಇವರ ಮೂಲಕ ನೀವು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತೇನೆ, ಇವು ಎಷ್ಟು ಗುಪ್ತ ಮಾತುಗಳಾಗಿವೆ! ಸನ್ಮುಖದಲ್ಲಿ ಬರದೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅದರಲ್ಲಿಯೂ ಯಾರು ಈ ಬ್ರಾಹ್ಮಣ ಕುಲದವರಾಗಿದ್ದಾರೆಯೋ ಅವರೇ ತಿಳಿದುಕೊಳ್ಳುತ್ತಾರೆ. ಅವರೇ ದೈವೀ ಕುಲದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಹೊಸಬರ ಬುದ್ಧಿಯಲ್ಲಿ ಈ ಮಾತುಗಳು ಕುಳಿತುಕೊಳ್ಳುವುದಿಲ್ಲ. ಅವರು ಯಾರಿಗೂ ತಿಳಿಸುವುದಕ್ಕೂ ಸಾಧ್ಯವಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ತ್ವಮೇವ ಮಾತಾಶ್ಚ ಪಿತಾ.... ಎಂದು ಗಾಯನ ಮಾಡಲಾಗುತ್ತದೆ. ಶಿವ ತಂದೆಯನ್ನು ನೆನಪು ಮಾಡುತ್ತಾರೆ, ಮತ್ತೆ ನೀವು ಮಾತಾಪಿತಾ ಎಂದು ಹೇಳುತ್ತಾರೆ. ಒಬ್ಬರೇ ತಂದೆ ಹೇಗೆ ಮಾತಾಪಿತನಾಗುವರು? ಈ ಮಾತುಗಳನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಹೇಗೆ ಶಾಸ್ತ್ರಗಳಲ್ಲಿ ವ್ಯಾಸರು ಬರೆದಿರುವುದನ್ನು ಮನುಷ್ಯರು ಕಂಠಪಾಠ ಮಾಡಿದ್ದಾರೆಯೋ ಹಾಗೆಯೇ ನಿಮಗೂ ಸಹ ಯಾರೋ ತಿಳಿಸಿದ್ದಾರೆ, ನೀವು ಕಂಠಪಾಠ ಮಾಡಿದ್ದೀರಿ ಎಂದು ಹೇಳುತ್ತಾರೆ. ಹೊಸ ಮನುಷ್ಯರು ತಿಳಿದುಕೊಳ್ಳುವುದು ಬಹಳ ಕಷ್ಟವಿದೆ, ಇಲ್ಲಿರುವವರೂ ಸಹ ಅನ್ಯರಿಗೆ ತಿಳಿಸಿಕೊಡಲು ಕೆಲವರಿಂದ ಆಗುವುದಿಲ್ಲ. ನೀವಾತ್ಮರಾಗಿದ್ದೀರಿ, ನಿಮ್ಮ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ಆ ಬೇಹದ್ದಿನ ತಂದೆಯೇ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಆಸ್ತಿಯನ್ನು ಕೊಟ್ಟಿದ್ದರು ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಜನ್ಮಗಳು ಮುಕ್ತಾಯವಾಯಿತು. ಈಗ ತಂದೆಯು ಪುನಃ ಆಸ್ತಿಯನ್ನು ಕೊಡಲು ಬಂದ್ದಿದ್ದಾರೆ - ಇದನ್ನು ಯಾರಿಗಾದರೂ ತಿಳಿಸಲು ಎಷ್ಟು ಸಹಜವಾಗಿದೆ! ನೀವು ಮಾತಾಪಿತಾ ಎಂದು ಯಾರಿಗೆ ಹೇಳಲಾಗುತ್ತದೆ ಎಂಬುದು ವಿಚಾರ ಮಾಡುವ ಮಾತಲ್ಲವೆ. ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಳ್ಳುತ್ತಾರೆ ಅಂದಮೇಲೆ ತಾಯಿಯು ಅವಶ್ಯವಾಗಿ ಬೇಕಲ್ಲವೆ ಆದ್ದರಿಂದ ಯಾರು ಅನನ್ಯ ಮಗುವಾಗಿರುವರೋ ಅವರಿಗೆ ಡ್ರಾಮಾ ಪ್ಲಾನನುಸಾರ ಜಗದಂಬಾ ಎಂಬ ಬಿರುದನ್ನು ಕೊಡಲಾಗುತ್ತದೆ. ಪುರುಷನಿಗೆ ಜಗದಂಬಾ ಎಂದು ಹೇಳಲು ಸಾಧ್ಯವಿಲ್ಲ ಆದ್ದರಿಂದ ಇವರಿಗೆ ಜಗತ್ಪಿತನೆಂದು ಹೇಳುತ್ತಾರೆ. ಇವರಿಗೆ ಪ್ರಜಾಪಿತ ಎಂಬ ಹೆಸರು ಪ್ರಸಿದ್ಧವಾಗಿದೆ. ಒಳ್ಳೆಯದು - ಪ್ರಜಾ ಮಾತೆಯೆಲ್ಲಿ? ಆದ್ದರಿಂದ ಮಾತೆಯನ್ನು ದತ್ತು ಮಾಡಿಕೊಳ್ಳಲಾಗುತ್ತದೆ. ಆದಿ ದೇವನಂತೂ ಇದ್ದಾರೆ ಮತ್ತೆ ಆದಿ ದೇವಿಯನ್ನೂ ಸಹ ನಿಮಿತ್ತ ಮಾಡುತ್ತೇನೆ. ಜಗದಂಬೆಯು ಒಬ್ಬರೇ ಆಗಿದ್ದಾರೆ, ಅವರಿಗೇ ಮಹಿಮೆಯಿದೆ. ಜಗದಂಬೆಯ ಎಷ್ಟೊಂದು ಮೇಳಗಳಾಗುತ್ತವೆ ಆದರೆ ಅವರ ಬಗ್ಗೆ ಯಾರೂ ತಿಳಿದುಕೊಂಡಿಲ್ಲ. ಕಲ್ಕತ್ತಾದಲ್ಲಿ ಕಾಳಿಯ ಮಂದಿರವಿದೆ. ಬಾಂಬೆಯಲ್ಲಿಯೂ ಜಗದಂಬೆಯ ಮಂದಿರವಿದೆ. ರೂಪವು ಬೇರೆ-ಬೇರೆಯಾಗಿದೆ. ಜಗದಂಬಾ ಯಾರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಅವರಿಗೂ ಭಗವತಿ ಎಂದು ಹೇಳುತ್ತಾರೆ ಆದರೆ ಜಗದಂಬೆಗೆ ಭಗವತಿ ಎಂದು ಹೇಳಲು ಸಾಧ್ಯವಿಲ್ಲ, ಅವರು ಬ್ರಾಹ್ಮಣಿಯಾಗಿದ್ದಾರೆ. ಜ್ಞಾನ ಜ್ಞಾನೇಶ್ವರಿ ಆಗಿದ್ದಾರೆ, ಅವರಿಗೆ ತಂದೆಯಿಂದ ಜ್ಞಾನ ಸಿಕ್ಕಿದೆ. ನೀವೆಲ್ಲರೂ ಜಗದಂಬೆಯ ಮಕ್ಕಳಾಗಿದ್ದೀರಿ. ಜ್ಞಾನವನ್ನು ಕೇಳಿ ಮತ್ತೆ ಹೇಳುತ್ತೀರಿ. ನಿಮ್ಮ ಉದ್ಯೋಗವೇ ಇದಾಗಿದೆ. ನಿಮಗೆ ಸ್ವಯಂ ಈಶ್ವರನು ಓದಿಸುತ್ತಾರೆ, ಯಾವುದೇ ಮನುಷ್ಯರು ಓದಿಸುತ್ತಿಲ್ಲ. ಈ ಬ್ರಹ್ಮಾರವರೂ ಸಹ ಮನುಷ್ಯನಾಗಿದ್ದಾರೆ. ಮನುಷ್ಯರು ಯಾರನ್ನೂ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಮನುಷ್ಯರಿಗೆ ಇಷ್ಟು ಮಂಧ ಬುದ್ಧಿಯಾಗಿ ಬಿಟ್ಟಿದೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ, ಅವರು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಬರುತ್ತಾರೆ. ಇಡೀ ಪ್ರಪಂಚವು ತಮೋಪ್ರಧಾನವಾಗಿದೆ, ಎಲ್ಲರೂ ಪತಿತರಾಗಿದ್ದಾರೆ, ಹೊಸ ಪ್ರಪಂಚವು ಪಾವನ, ಹಳೆಯ ಪ್ರಪಂಚವು ಪತಿತವಾಗಿದೆ. ಹಳೆಯ ಪ್ರಪಂಚದಲ್ಲಿ ನರಕವಾಸಿಗಳಿದ್ದಾರೆ, ಹೊಸ ಪ್ರಪಂಚದಲ್ಲಿ ಸ್ವರ್ಗವಾಸಿಗಳಿದ್ದಾರೆ. ಬುದ್ಧಿಯೂ ಹೇಳುತ್ತದೆ - ಸತ್ಯಯುಗದಲ್ಲಿ ಕೇವಲ ಭಾರತವಾಸಿ ದೇವಿ-ದೇವತೆಗಳೇ ಇರುತ್ತಾರೆ ಮತ್ತ್ಯಾರೂ ಇರಲಿಲ್ಲ. ಈಗ ನೀವು ಮಕ್ಕಳಿಗೆ ಈ ಜ್ಞಾನವು ಸಿಕ್ಕಿದೆ, ಹೊಸ ಪ್ರಪಂಚದಲ್ಲಿ ಮೊದಲು ಸೂರ್ಯವಂಶಿ ದೇವತೆಗಳಿದ್ದರು ನಂತರ ಚಂದ್ರವಂಶಿಯರಾದರು ಆಗ ಸೂರ್ಯವಂಶವು ಕಳೆದು ಹೋಯಿತು. ಚಂದ್ರವಂಶಿಯರ ನಂತರ ಮತ್ತೆ ವೈಶ್ಯ ವಂಶಿಯರು.....ಬರುತ್ತಾರೆ. ಅವಶ್ಯವಾಗಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅವರಿಗೆ ಮೊದಲು ಏನಿತ್ತು? ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳಿಗೆ ತಂದೆಯು ಚಕ್ರದ ರಹಸ್ಯವನ್ನು ತಿಳಿಸಿದ್ದಾರೆ. ದ್ವಾಪರದಲ್ಲಿ ವೈಶ್ಯ ವಂಶಿಯರಿರುತ್ತಾರೆ, ಕಲಿಯುಗದಲ್ಲಿ ಶೂದ್ರವಂಶಿಯರಿದ್ದಾರೆ.

ನಾವೀಗ ಬ್ರಾಹ್ಮಣರಾಗಿದ್ದೇವೆ ಎಂದು ನೀವು ತಿಳಿದುಕೊಂಡಿದ್ದೀರಿ, ನಿಮ್ಮನ್ನು ತಂದೆಯು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ ಅರ್ಥಾತ್ ಶೂದ್ರ ಧರ್ಮದಿಂದ ದೇವತಾ ಧರ್ಮದಲ್ಲಿ ವರ್ಗಾವಣೆ ಮಾಡಿದ್ದಾರೆ. ಈಗ ಸೂರ್ಯವಂಶಿ, ಚಂದ್ರವಂಶಿಯರಂತೂ ಇಲ್ಲ. ಲಕ್ಷ್ಮೀ-ನಾರಾಯಣರ ರಾಜ್ಯವಾಗಲಿ, ರಾಮ ರಾಜ್ಯವಾಗಲಿ ಇಲ್ಲ. ಈಗ ಕಲಿಯುಗದ ಅಂತ್ಯವಾಗಿದೆ. ಕಲಿಯುಗದ ನಂತರ ಅವಶ್ಯವಾಗಿ ಸತ್ಯಯುಗವು ಬರುವುದು. ಕಲಿಯುಗದಲ್ಲಿ ಇದು ಹಳೆಯ, ಪತಿತ ಪ್ರಪಂಚವಾಗಿದೆ, ಮಹಾನ್ ದುಃಖಿಯಾಗಿದ್ದಾರೆ ಆದ್ದರಿಂದ ಹೋಗಿ ದೇವತೆಗಳ ಮಹಿಮೆ ಮಾಡುತ್ತಾರೆ, ತಲೆಬಾಗುತ್ತಾರೆ. ಲಕ್ಷ್ಮೀ-ನಾರಾಯಣರಿಗೆ ಈ ರಾಜ್ಯವನ್ನು ಯಾರು ಕೊಟ್ಟರು, ಇದನ್ನು ಹೇಳುವವರು ಯಾರಾದರೂ ಇದ್ದಾರೆಯೇ? ಯಾರಿಗೂ ಇದು ಸಂಕಲ್ಪದಲ್ಲಿಯೂ ಇರುವುದಿಲ್ಲ ಏಕೆಂದರೆ ಕಲಿಯುಗವು ಇನ್ನೂ ಮಗುವಾಗಿದೆ ಎಂಬುದೇ ಅವರ ಬುದ್ಧಿಯಲ್ಲಿದೆ. ಇನ್ನೂ 40 ಸಾವಿರ ವರ್ಷಗಳಿದೆ ಎಂದು ತಿಳಿಯುವ ಕಾರಣ ಈ ವಿಚಾರವೇ ಬರುವುದಿಲ್ಲ. ಈಗ ನಿಮಗೆ ಇದು ಗಮನಕ್ಕೆ ಬರುತ್ತದೆ. ಬಾಬಾ, ನಮಗೆ ನೆನಪೇ ಇರುವುದಿಲ್ಲವೆಂದು ಕೆಲವು ಮಕ್ಕಳು ಹೇಳುತ್ತಾರೆ. ಏಕೆ ಇರುವುದಿಲ್ಲ? ಏಕೆಂದರೆ ಬೆಳಗ್ಗೆ-ಬೆಳಗ್ಗೆ ಎದ್ದು ಕುಳಿತುಕೊಂಡು ಧಾರಣೆ ಮಾಡುವುದಿಲ್ಲ. ತಿಳಿದುಕೊಳ್ಳುತ್ತಾರೆ ಆದರೆ ಯಾರಿಗೂ ತಿಳಿಸುವುದಿಲ್ಲ ಆದ್ದರಿಂದ ಈ ರೀತಿಯಾಗುತ್ತದೆ, ಎಲ್ಲರೂ ಒಂದೇ ಸಮಾನ ಬುದ್ಧಿವಂತರಾಗಲು ಸಾಧ್ಯವಿಲ್ಲ. ಬುದ್ಧಿವಂತರೂ ಬೇಕು, ಮಂಧ ಬುದ್ಧಿಯವರೂ ಬೇಕು. ಬಹಳ ಬುದ್ಧಿವಂತರು ಹೋಗಿ ರಾಜ-ರಾಣಿಯಾಗುತ್ತಾರೆ. ಯಾರು ಎಷ್ಟೆಷ್ಟು ತಿಳಿದುಕೊಳ್ಳುವರೋ ಮತ್ತು ಅನ್ಯರಿಗೆ ತಿಳಿಸಿ ಕೊಡುವರೋ ಅವರ ಹೆಸರು ಪ್ರಸಿದ್ಧವಾಗುವುದು. ಪ್ರದರ್ಶನಿಗಳನ್ನು ಇಟ್ಟಾಗ ಬಾಬಾ ಇಂತಹವರನ್ನು ಕಳುಹಿಸಿ ಕೊಡಿ ಎಂದು ಪತ್ರ ಬರೆಯುತ್ತಾರೆ ಆದರೆ ನೀವೇ ಏಕೆ ತಿಳಿಸುವುದಿಲ್ಲ? ಅದಕ್ಕೆ ಬಾಬಾ ಅವರಿಗೆ ಚೆನ್ನಾಗಿ ಅಭ್ಯಾಸವಿದೆ, ನಾವಿನ್ನೂ ಕಚ್ಚಾ ಆಗಿದ್ದೇವೆಂದು ಹೇಳುತ್ತಾರೆ. ಸ್ವಯಂ ತಂದೆಯೇ ಹೇಳುತ್ತಾರೆ - ಎಲ್ಲಿಂದಲಾದರೂ ನಿಮಂತ್ರಣ ಸಿಕ್ಕಿದರೆ ಬರೆದು ಕಳುಹಿಸಿ, ಯಾರು-ಯಾರು ಇದ್ದಾರೆ ಎಂಬುದನ್ನು ನೋಡಿ, ಯಾರನ್ನು ಕಳುಹಿಸಬೇಕು ಎಂದು ತೀರ್ಮಾನಿಸುತ್ತೇವೆ. ಸನ್ಯಾಸಿಗಳೂ ಸಹ ಆ ನಿಮಂತ್ರಣದಲ್ಲಿ ಇದ್ದಾರೆಯೇ ಎಂಬುದನ್ನು ನೋಡಿ ಅವರಿಗೆ ತಿಳಿಸಲು ಅಂತಹ ಒಳ್ಳೆಯ ಬ್ರಹ್ಮಾಕುಮಾರಿಯನ್ನೇ ಕಳುಹಿಸಬೇಕಾಗುತ್ತದೆ. ಈ ಕುಮಾರಿಕಾ, ಮನೋಹರ್ ಇದ್ದಾರೆ, ಗಂಗೆ ಇದ್ದಾರೆ. ಇವರುಗಳಲ್ಲಿ ಯಾರನ್ನಾದರೂ ಕಳುಹಿಸಿ, ಮಕ್ಕಳಂತೂ ಅನೇಕರಿದ್ದಾರೆ. ಕುಮಾರ ಜಗದೀಶ್, ರಮೇಶರವರನ್ನು ಕಳುಹಿಸಿ ಎಂದು ಬರೆಯಿರಿ. ನೀವೂ ಸಹ ತಿಳಿದುಕೊಂಡಿದ್ದೀರಿ - ಒಬ್ಬರು ಇನ್ನೊಬ್ಬರಿಗಿಂತ ಬುದ್ಧಿವಂತರಿದ್ದಾರೆ, ಹೇಗೆ ಜಡ್ಜ್ ಮೆಜೆಸ್ಟ್ರೇಟ್ ಒಬ್ಬರು ಇನ್ನೊಬ್ಬರಿಗಿಂತ ಬುದ್ಧಿವಂತರಿರುತ್ತಾರೆ. ಸರ್ಕಾರಕ್ಕೂ ತಿಳಿದಿರುತ್ತದೆ ಆದ್ದರಿಂದಲೇ ಒಬ್ಬರು ಇನ್ನೊಬ್ಬರಿಗಿಂತ ಕೇಸ್ಗಳು ಮೇಲೆ ಹೋಗುತ್ತವೆ. ಮತ್ತೆ ಹೈಕೋರ್ಟ್ಗೆ ಹೋಗಿ ಮತ್ತೆ ಅವರಿಗಿಂತಲೂ ಮೇಲೆ ಹೋಗುತ್ತಾರೆ. ಅವರೂ ಸಹ ಸರಿಯಾಗಿ ತೀರ್ಮಾನ ಕೊಡಲಿಲ್ಲವೆಂದರೆ ಅವರಿಗಿಂತಲೂ ಮೇಲೆ ಹೋಗುತ್ತಾರೆ. ಇವರ ಮೇಲೆ ನೀವು ದಯೆ ತೋರಿಸಿ. ಈಗ ಇವೆಲ್ಲಾ ಮಾತುಗಳು ಇಲ್ಲಿಯೇ ಆಗುತ್ತವೆ, ಸತ್ಯ-ತ್ರೇತಾಯುಗದಲ್ಲಿ ಇರುವುದಿಲ್ಲ ಮತ್ತೆ ದ್ವಾಪರದಲ್ಲಿ ರಾಜ-ರಾಣಿಯರ ರಾಜ್ಯವಿರುತ್ತದೆ. ಅಲ್ಲಂತೂ ಮಹಾರಾಜ-ಮಹಾರಾಣಿಯೇ ಕೇಸ್ನ್ನು ಸಂಭಾಲನೆ ಮಾಡುತ್ತಾರೆ ಮತ್ತು ಅಲ್ಲಿ ಕೇಸ್ ಇರುವುದೂ ಬಹಳ ಕಡಿಮೆ. ಈಗಂತೂ ತಮೋಪ್ರಧಾನ, ಪತಿತರಲ್ಲವೆ ಆದ್ದರಿಂದ ರಾಜನ ಬಳಿ ಕೇಸ್ ಹೋದರೂ ಸಹ ಸ್ವಲ್ಪ ಶಿಕ್ಷೆ ಕೊಡುತ್ತಾರೆ. ಕಠಿಣ ತಪ್ಪಾದರೆ ಕಠಿಣ ಶಿಕ್ಷೆಯನ್ನು ವಿಧಿಸುತ್ತಾರೆ. ಇಲ್ಲಂತೂ ಎಷ್ಟೊಂದು ಮಂದಿ ಜಡ್ಜ್ ವಕೀಲರಿದ್ದಾರೆ. ಕಾರೋಬಾರ್ನಲ್ಲಿ ಎಷ್ಟೊಂದು ಅಂತರವಿದೆ, ಸತ್ಯಯುಗದಲ್ಲಿ ಹೇಗಿರುತ್ತದೆ ಎಂಬುದನ್ನು ಯಾರಿಗೂ ತಿಳಿದಿಲ್ಲ. ಈಗ ತಂದೆಯು ತಿಳಿಸಿದ್ದಾರೆ - ಈ ಲಕ್ಷ್ಮೀ-ನಾರಾಯಣರನ್ನು ತಿಳಿದುಕೊಂಡಿದ್ದೀರಾ ಎಂದು ಯಾರೊಂದಿಗಾದರೂ ಕೇಳಿರಿ, ಹೇಗೆ ಬಿರ್ಲಾದವರು ಇದ್ದಾರೆ, ಮಂದಿರಗಳನ್ನು ಕಟ್ಟಿಸುತ್ತಾ ಇರುತ್ತಾರೆ. ಅಂತಹವರಿಗೆ ನಿಮ್ಮಲ್ಲಿ ಯಾರಾದರೂ ಪತ್ರ ಬರೆಯಿರಿ - ನೀವು ಲಕ್ಷ್ಮೀ-ನಾರಾಯಣರ ಮಂದಿರಗಳನ್ನಂತೂ ಬಹಳ ಕಟ್ಟಿಸುತ್ತೀರಿ, ಆದರೆ ಯಾವಾಗ ಸತ್ಯಯುಗಕ್ಕೆ ಮೊದಲು ಕಲಿಯುಗವಿತ್ತು ಅಂದಮೇಲೆ ಇವರಿಗೆ ಈ ರಾಜಧಾನಿಯು ಹೇಗೆ ಸಿಕ್ಕಿತು? ಕಲಿಯುಗದಲ್ಲಂತೂ ಏನೂ ಇರಲಿಲ್ಲ, ದೇವತೆಗಳು ಯಾರೊಂದಿಗೂ ಯುದ್ಧ ಮಾಡುವುದಿಲ್ಲ, ಯುದ್ಧದಿಂದ ಯಾರೂ ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ. ಯಾರು ವಿಶ್ವದ ಮಾಲೀಕರಾಗಿದ್ದರೋ ಆ ಲಕ್ಷ್ಮೀ-ನಾರಾಯಣರ ಚಿತ್ರಗಳನ್ನಿಟ್ಟಿದ್ದಾರೆ. ಈಗಂತೂ ಕಲಿಯುಗವಾಗಿದೆ, ಇಲ್ಲಿ ಆಯುಧಗಳಿಂದ ಯುದ್ಧ ನಡೆಯುತ್ತದೆ. ತಂದೆಯು ತಿಳಿಸಿದ್ದಾರೆ - ಕ್ರಿಶ್ಚಿಯನ್ ಧರ್ಮದವರೇ ಪರಸ್ಪರ ಸೇರಿ ಒಂದಾದರೆ, ಪರಸ್ಪರ ಪ್ರೀತಿಯನ್ನಿಟ್ಟಿದ್ದೇ ಆದರೆ ವಿಶ್ವದ ಮಾಲೀಕರಾಗಬಲ್ಲರು ಆದರೆ ಇದು ಸಾಧ್ಯವಿಲ್ಲ. ಲಕ್ಷ್ಮೀ-ನಾರಾಯಣರೇ ವಿಶ್ವದ ಮಾಲೀಕರಾಗುತ್ತಾರೆ. ಬುದ್ಧಿಯೂ ಹೇಳುತ್ತದೆ - ಇವರು ಪರಸ್ಪರ ಒಂದಾದರೆ ಮಾಲೀಕರಾಗಬಲ್ಲರು ಆದರೆ ಸತ್ಯಯುಗದಲ್ಲಿ ಯಾರೂ ರಾಜ-ರಾಣಿಯಂತೂ ಆಗಲು ಸಾಧ್ಯವಿಲ್ಲ. ಸೃಷ್ಟಿ ನಾಟಕವೇ ಹೀಗೆ ಮಾಡಲ್ಪಟ್ಟಿದೆ. ನಾವೀಗ ಪುನಃ ಯೋಗ ಬಲದಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ನೀವಿದನ್ನು ತಿಳಿಸಬಹುದು - ಕಲ್ಪದ ಮೊದಲೂ ಸಹ ಸಂಗಮದಲ್ಲಿ ತಂದೆಯಿಂದ ಪದವಿಯನ್ನು ಪಡೆದಿದ್ದೇವೆ, 84 ಜನ್ಮಗಳು ಪೂರ್ಣವಾಯಿತು, ಈಗ ಪುನಃ ಆಸ್ತಿಯನ್ನು ಪಡೆಯುತ್ತಿದ್ದೇವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸ್ವಯಂನಲ್ಲಿ ಧಾರಣೆ ಮಾಡಿಕೊಳ್ಳಲು ಹಾಗೂ ಅನ್ಯರಿಗೂ ಮಾಡಿಸುವುದಕ್ಕಾಗಿ ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಬೇಕಾಗಿದೆ. ಏನನ್ನು ತಿಳಿದುಕೊಂಡಿದ್ದೀರೋ ಅದನ್ನು ಅನ್ಯರಿಗೂ ತಿಳಿಸುವ ಅಭ್ಯಾಸ ಮಾಡಬೇಕಾಗಿದೆ.

2. ಲೌಕಿಕ ಸಂಬಂಧಗಳಿಂದ ಬುದ್ಧಿ ಯೋಗವನ್ನು ತೆಗೆದು ಒಬ್ಬ ಪಾರಲೌಕಿಕ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯಿಂದ ಯಾವ ಜ್ಞಾನವು ಸಿಕ್ಕಿದೆಯೋ ಅದನ್ನು ಕೇಳಿ ಎಲ್ಲರಿಗೂ ತಿಳಿಸಬೇಕಾಗಿದೆ. ಇದೇ ನಿಮ್ಮ ಕರ್ತವ್ಯ (ಉದ್ಯೋಗ) ವಾಗಿದೆ.

ವರದಾನ:
ಸಮಾವೇಶ ಮಾಡಿಕೊಳ್ಳುವ ಶಕ್ತಿಯ ಮೂಲಕ ಏಕಮತದ ವಾತಾವರಣವನ್ನು ನಿರ್ಮಾಣ ಮಾಡುವಂತಹ ಉದಾಹರಣಾ ಸ್ವರೂಪ ಭವ.

ಯಾರು ಒಂದೇ ರೀತಿ ಮಣಿಯಾಗಿದ್ದಾರೆ, ಒಬ್ಬರದೇ ಲಗನ್ನಿನಲ್ಲಿ ಹಾಗೂ ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿ, ಒಬ್ಬರ ಮತದಂತೆ ನಡೆಯುವವರಾಗಿ ಇದ್ದಾರೆ, ಪರಸ್ಪರರಲ್ಲಿ ಸಂಕಲ್ಪಗಳಲ್ಲಿಯೂ ಏಕಮತವಿದೆಯೋ ಅವರೇ ಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ. ಆದರೆ ಏಕಮತದ ವಾತಾವರಣವು ಹಾಗಾಗುತ್ತದೆ ಯಾವಾಗ ಸಮಾವೇಶ ಮಾಡಿಕೊಳ್ಳುವ ಶಕ್ತಿಯಿರುತ್ತದೆ. ಒಂದುವೇಳೆ ಯಾವುದೇ ಮಾತಿನಲ್ಲಿ ಭಿನ್ನತೆಯುಂಟಾಗುತ್ತದೆ ಎಂದರೆ, ಆ ಭಿನ್ನತೆಯನ್ನು ಸಮಾವೇಶ ಮಾಡಿಕೊಂಡಾಗ ಪರಸ್ಪರರಲ್ಲಿ ಏಕತೆಯಿಂದ ಸಮೀಪಕ್ಕೆ ಬರುವಿರಿ ಹಾಗೂ ಎಲ್ಲರ ಮುಂದೆ ಉದಾಹರಣಾ ಸ್ವರೂಪರಾಗುವಿರಿ.

ಸ್ಲೋಗನ್:
ಪ್ರತೀ ಸಂಕಲ್ಪ, ವಾಣಿ ಹಾಗೂ ಕರ್ಮದಲ್ಲಿ ಆತ್ಮೀಯತೆಯ ಧಾರಣೆ ಮಾಡುತ್ತೀರೆಂದರೆ ಸೇವೆಯಲ್ಲಿ ಶೋಭೆಯುಂಟಾಗುವುದು.

ಅವ್ಯಕ್ತ ಸೂಚನೆ:– “ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”

ಯಾವುದೇ ಭಯಾನಕ ದೃಶ್ಯವನ್ನು ನೋಡುತ್ತಾ ನಥಿಂಗ್ ನ್ಯೂ ( ಏನು ಹೊಸದಲ್ಲ ), ಯಾರಿಗೆ ಈ ನಥಿಂಗ್ ನ್ಯೂ ನ ಪಾಠ ಪಕ್ಕಾ ಆಗಿದೆ ಅವರು ಗಾಬರಿ ಯಾಗುವುದಿಲ್ಲ. ಏನಾಯಿತು, ಹೇಗೆ ಆಯಿತು, ಹಾಗೆ ಆಯಿತು... ಸಮಾಚಾರವನ್ನು ಕೇಳುತ್ತಾ, ನೋಡುತ್ತಾ ಡ್ರಾಮಾದಲ್ಲಿ ಆಗಿರುವ ನಿಗದಿಯನ್ನು ಶಕ್ತಿಶಾಲಿಯಾಗಿ ನೋಡುತ್ತಾ ಹಾಗೂ ಅನ್ಯರಿಗೂ ಶಕ್ತಿಯನ್ನು ಕೊಡುತ್ತಾ ನಡೆಯಿರಿ. ಪ್ರಪಂಚದವರು ಗಾಬರಿಯಾಗುತ್ತಾರೆ ಹಾಗೂ ನೀವು ಏಕರಸ ಸ್ಥಿತಿಯಲ್ಲಿದ್ದು ಆ ಆತ್ಮಗಳಲ್ಲಿ ಶಕ್ತಿಯನ್ನು ತುಂಬುತ್ತಿರಿ. ಯಾರೇ ತಮ್ಮ ಸಂಪರ್ಕದಲ್ಲಿ ಬರಲಿ ಅವರಿಗೆ ಶಕ್ತಿಗಳ, ಶಾಂತಿಯ ದಾನ ಕೊಡುತ್ತಾ ಹೋಗಿ.