08.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಸದಾ
ಇದೇ ಖುಷಿಯಲ್ಲಿರಿ - ನಾವು 84 ಜನ್ಮಗಳ ಚಕ್ರವನ್ನು ಪೂರ್ಣ ಮಾಡಿದೆವು, ಈಗ ನಮ್ಮ ಮನೆಗೆ
ಹೋಗುತ್ತೇವೆ, ಇನ್ನು ಕೆಲವೇ ದಿನಗಳು ಮಾತ್ರ ಈ ಕರ್ಮ ಭೋಗವಿರುವುದು”.
ಪ್ರಶ್ನೆ:
ವಿಕರ್ಮಾಜೀತರಾಗುವ ಮಕ್ಕಳು ವಿಕರ್ಮಗಳಿಂದ ಪಾರಾಗಲು ಯಾವ ಮಾತಿನ ಮೇಲೆ ಬಹಳ ಗಮನ ಕೊಡಬೇಕು?
ಉತ್ತರ:
ಸರ್ವ
ವಿಕರ್ಮಗಳಿಗೆ ಮೂಲ ದೇಹಾಭಿಮಾನವಿದೆ, ಈ ದೇಹಾಭಿಮಾನದಲ್ಲೆಂದೂ ಬರಬಾರದು, ಇದರ ಮೇಲೆ
ಗಮನವನ್ನಿಡಬೇಕಾಗಿದೆ. ಇದಕ್ಕಾಗಿ ಮತ್ತೆ-ಮತ್ತೆ ದೇಹೀ-ಅಭಿಮಾನಿಗಳಾಗಿ ತಂದೆಯನ್ನು ನೆನಪು
ಮಾಡಬೇಕಾಗಿದೆ. ಒಳ್ಳೆಯ ಮತ್ತು ಕೆಟ್ಟ ಫಲವಂತೂ ಅವಶ್ಯವಾಗಿ ಸಿಗುತ್ತದೆ, ಅಂತ್ಯದಲ್ಲಿ ವಿವೇಕ
ತಿನ್ನುತ್ತದೆ ಆದರೆ ಈ ಜನ್ಮದ ಪಾಪಗಳ ಹೊರೆಯನ್ನು ಹಗುರ ಮಾಡಿಕೊಳ್ಳಲು ತಂದೆಗೆ ಸತ್ಯ-ಸತ್ಯವಾಗಿ
ತಿಳಿಸಬೇಕಾಗಿದೆ.
ಓಂ ಶಾಂತಿ.
ದೊಡ್ಡದಕ್ಕಿಂತ ದೊಡ್ಡ ಗುರಿಯು ನೆನಪಿನದಾಗಿದೆ. ಬಹಳ ಮಂದಿಗೆ ಕೇವಲ ಕೇಳುವುದರಲ್ಲಿಯೇ
ಆಸಕ್ತಿಯಿರುತ್ತದೆ. ಜ್ಞಾನವನ್ನು ತಿಳಿದುಕೊಳ್ಳುವುದಂತೂ ಬಹಳ ಸಹಜವಾಗಿದೆ. 84 ಜನ್ಮಗಳ ಚಕ್ರವನ್ನು
ತಿಳಿದುಕೊಳ್ಳಬೇಕು, ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ. ಹೆಚ್ಚೇನೂ ಇಲ್ಲ. ನಾವೆಲ್ಲರೂ
ಸ್ವದರ್ಶನ ಚಕ್ರಧಾರಿಗಳೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಸ್ವದರ್ಶನ ಚಕ್ರದಿಂದ ಯಾರದೇ ತಲೆ
ಕತ್ತರಿಸುವುದಿಲ್ಲ. ಹೇಗೆ ಕೃಷ್ಣನಿಗಾಗಿ ತೋರಿಸಿದ್ದಾರೆ - ಈ ಲಕ್ಷ್ಮೀ-ನಾರಾಯಣರು, ವಿಷ್ಣುವಿನ
ಎರಡು ರೂಪವಾಗಿದ್ದಾರೆ. ಅಂದಮೇಲೆ ಅವರಿಗೆ ಸ್ವದರ್ಶನ ಚಕ್ರವಿದೆಯೇ? ಮತ್ತೆ ಕೃಷ್ಣನಿಗೆ ಚಕ್ರವನ್ನು
ಏಕೆ ತೋರಿಸುತ್ತಾರೆ? ಒಂದು ಮಾಸ ಪತ್ರಿಕೆಯಿದೆ ಅದರಲ್ಲಿ ಕೃಷ್ಣನ ಇಂತಹ ಬಹಳ ಚಿತ್ರಗಳನ್ನು
ತೋರಿಸುತ್ತಾರೆ. ತಂದೆಯು ಬಂದು ನಿಮಗೆ ರಾಜಯೋಗವನ್ನು ಕಲಿಸುತ್ತಾರೆಯೇ ಹೊರತು ಚಕ್ರದಿಂದ ಅಸುರರ
ಘಾತ ಮಾಡುವುದಿಲ್ಲ. ಯಾರದು ಆಸುರೀ ಸ್ವಭಾವವಾಗಿದೆಯೋ ಅವರಿಗೆ ಅಸುರರೆಂದು ಕರೆಯಲಾಗುತ್ತದೆ. ಬಾಕಿ
ಮನುಷ್ಯರಂತೂ ಮನುಷ್ಯರೇ ಅಲ್ಲವೆ. ಸ್ವದರ್ಶನ ಚಕ್ರದಿಂದ ಎಲ್ಲರನ್ನೂ ಸಾಯಿಸುತ್ತಾರೆಂದಲ್ಲ.
ಭಕ್ತಿಮಾರ್ಗದಲ್ಲಿ ಏನೇನೋ ಚಿತ್ರಗಳನ್ನು ಬರೆದಿದ್ದಾರೆ, ರಾತ್ರಿ-ಹಗಲಿನ ಅಂತರವಿದೆ. ನೀವು ಮಕ್ಕಳು
ಈ ಸೃಷ್ಟಿಚಕ್ರ ಮತ್ತು ಇಡೀ ನಾಟಕವನ್ನು ಅರಿತುಕೊಳ್ಳಬೇಕಾಗಿದೆ ಏಕೆಂದರೆ ಎಲ್ಲರೂ
ಪಾತ್ರಧಾರಿಗಳಾಗಿದ್ದಾರೆ. ಆ ಹದ್ದಿನ ಪಾತ್ರಧಾರಿಗಳಂತೂ ನಾಟಕವನ್ನು ಅರಿತುಕೊಂಡಿರುತ್ತಾರೆ. ಇದು
ಬೇಹದ್ದಿನ ನಾಟಕವಾಗಿದೆ. ಇದರಲ್ಲಿ ಅಷ್ಟು ವಿಸ್ತಾರವಾಗಿ ತಿಳಿಸಲು ಸಾಧ್ಯವಿಲ್ಲ. ಅದಂತೂ ಕೇವಲ
ಎರಡು ಗಂಟೆಗಳ ನಾಟಕವಾಗಿದೆ. ಅದರ ಸಂಪೂರ್ಣ ನಾಟಕವು ತಿಳಿದಿರುತ್ತದೆ ಆದರೆ ಅಲ್ಲಿ 84 ಜನ್ಮಗಳ
ಬಗ್ಗೆ ತಿಳಿದುಕೊಳ್ಳಬೇಕಾಗಿದೆ.
ತಂದೆಯು ತಿಳಿಸಿದ್ದಾರೆ
- ನಾನು ಬ್ರಹ್ಮಾರವರ ರಥದಲ್ಲಿ ಪ್ರವೇಶ ಮಾಡುತ್ತೇನೆ. ಬ್ರಹ್ಮಾನ 84 ಜನ್ಮಗಳ ಕಥೆಯೂ ಬೇಕು.
ಮನುಷ್ಯರ ಬುದ್ಧಿಯಲ್ಲಿ ಈ ಮಾತುಗಳು ಬರಲು ಸಾಧ್ಯವಿಲ್ಲ. 84 ಲಕ್ಷ ಜನ್ಮಗಳೇ ಅಥವಾ 84 ಜನ್ಮಗಳೇ
ಎಂದು ತಿಳಿದುಕೊಳ್ಳುವುದಿಲ್ಲ. ನಿಮ್ಮ 84 ಜನ್ಮಗಳ ಕಥೆಯನ್ನು ನಾನು ತಿಳಿಸುತ್ತೇನೆ. 84 ಲಕ್ಷ
ಜನ್ಮಗಳಿದ್ದರೆ ತಿಳಿಸಲು ಎಷ್ಟು ವರ್ಷಗಳು ಹಿಡಿಸಬಹುದು? ನಾವು 84 ಜನ್ಮಗಳ ಚಕ್ರವನ್ನು ಹೇಗೆ
ಸುತ್ತಿದ್ದೇವೆ? ಇದು 84 ಜನ್ಮಗಳ ಕಥೆಯೆಂದು ನೀವು ಸೆಕೆಂಡಿನಲ್ಲಿ ತಿಳಿದುಕೊಳ್ಳುತ್ತೀರಿ. 84
ಲಕ್ಷ ಜನ್ಮಗಳಿದ್ದರೆ ಸೆಕೆಂಡಿನಲ್ಲಿ ತಿಳಿದುಕೊಳ್ಳಲು ಸಾಧ್ಯವೆ? 84 ಲಕ್ಷ ಜನ್ಮಗಳು ಇಲ್ಲವೇ
ಇಲ್ಲ. ನೀವು ಮಕ್ಕಳಿಗೂ ಖುಷಿಯಿರಬೇಕು - ನಮ್ಮ 84 ಜನ್ಮಗಳ ಚಕ್ರವು ಮುಕ್ತಾಯವಾಯಿತು. ನಾವೀಗ
ಮನೆಗೆ ಹೋಗುತ್ತೇವೆ, ಇನ್ನು ಸ್ವಲ್ಪದಿನಗಳು ಮಾತ್ರ ಕರ್ಮ ಭೋಗವಿರುತ್ತದೆ. ವಿಕರ್ಮಗಳು ಭಸ್ಮವಾಗಿ
ಕರ್ಮಾತೀತ ಸ್ಥಿತಿಯು ಹೇಗಾಗುವುದು, ಇದಕ್ಕಾಗಿ ಯುಕ್ತಿಯನ್ನು ತಿಳಿಸಿದ್ದೇವೆ. ಆದರೆ ಈ ಜನ್ಮದಲ್ಲಿ
ಏನೆಲ್ಲಾ ವಿಕರ್ಮಗಳನ್ನು ಮಾಡಿದ್ದೀರೋ ಅದನ್ನು ಬರೆದುಕೊಡಿ ಆಗ ಹೊರೆಯು ಇಳಿದು ಹೋಗುವುದು.
ಜನ್ಮ-ಜನ್ಮಾಂತರಗಳ ವಿಕರ್ಮವನ್ನು ಯಾರೂ ಬರೆಯಲು ಸಾಧ್ಯವಿಲ್ಲ. ವಿಕರ್ಮಗಳಂತೂ ಆಗುತ್ತಾ ಬಂದಿವೆ.
ಯಾವಾಗಿನಿಂದ ರಾವಣ ರಾಜ್ಯವು ಆರಂಭವಾಗಿದೆಯೋ ಆಗಿನಿಂದ ಕರ್ಮಗಳು ವಿಕರ್ಮಗಳಾಗುತ್ತವೆ.
ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ. ಭಗವಾನುವಾಚ - ನಿಮಗೆ ಕರ್ಮ, ಅಕರ್ಮ, ವಿಕರ್ಮದ
ಗತಿಯನ್ನು ತಿಳಿಸುತ್ತೇನೆ. ವಿಕರ್ಮಾಜೀತ ಸಂವತ್ಸರವು ಲಕ್ಷ್ಮೀ-ನಾರಾಯಣರಿಂದ ಆರಂಭವಾಗುತ್ತದೆ.
ಏಣಿಯ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿದೆ. ಶಾಸ್ತ್ರಗಳಲ್ಲಿ ಈ ಮಾತುಗಳಿಲ್ಲ. ಸೂರ್ಯವಂಶಿ,
ಚಂದ್ರವಂಶಿಯರ ರಹಸ್ಯವನ್ನೂ ಕೂಡ ಮಕ್ಕಳು ತಿಳಿದುಕೊಂಡಿದ್ದೀರಿ - ನಾವೇ ಆಗಿದ್ದೆವು ಎಂದು. ವಿರಾಟ
ರೂಪದ ಚಿತ್ರಗಳನ್ನು ಬಹಳಷ್ಟು ಮಾಡುತ್ತಾರೆ ಆದರೆ ಅರ್ಥವೇನನ್ನೂ ತಿಳಿದುಕೊಂಡಿಲ್ಲ. ತಂದೆಯ ವಿನಃ
ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಈ ಬ್ರಹ್ಮಾರವರ ಮೇಲೂ ಯಾರೋ ಇದ್ದಾರಲ್ಲವೆ. ಅವರೇ ಕಲಿಸಿರಬೇಕು.
ಒಂದುವೇಳೆ ಯಾವುದೇ ಗುರುಗಳು ಕಲಿಸುವಂತಿದ್ದರೆ ಆ ಗುರುವಿಗೆ ಕೇವಲ ಒಬ್ಬನೇ ಶಿಷ್ಯನಂತು ಇರಲು
ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಪತಿತರಿಂದ ಪಾವನ, ಪಾವನರಿಂದ
ಪತಿತರಾಗಲೇಬೇಕು. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಅನೇಕ ಬಾರಿ ಈ ಚಕ್ರವನ್ನು ಸುತ್ತಿದ್ದೀರಿ,
ಸುತ್ತುತ್ತಲೇ ಇರುತ್ತೀರಿ. ನೀವು ಸರ್ವತೋಮುಖ ಪಾತ್ರಧಾರಿಗಳಾಗಿದ್ದೀರಿ. ಆದಿಯಿಂದ ಅಂತ್ಯವರೆಗಿನ
ಪಾತ್ರವು ಮತ್ತ್ಯಾರಿಗೂ ಇರುವುದಿಲ್ಲ. ನಿಮಗೇ ತಂದೆಯು ತಿಳಿಸುತ್ತಾರೆ ಮತ್ತೆ ನೀವು ಇದನ್ನೂ
ತಿಳಿದುಕೊಂಡಿದ್ದೀರಿ – ಅನ್ಯ ಧರ್ಮದವರು ಯಾವ-ಯಾವ ಸಮಯದಲ್ಲಿ ಬರುತ್ತಾರೆ. ನಿಮ್ಮದು ಸರ್ವತೋಮುಖ
ಪಾತ್ರವಿದೆ. ಕ್ರಿಶ್ಚಿಯನ್ನರು ಸ್ವರ್ಗದಲ್ಲಿದ್ದರೆಂದು ಹೇಳುವುದಿಲ್ಲ. ಅವರು ದ್ವಾಪರದ ಮಧ್ಯದಲ್ಲಿ
ಬರುತ್ತಾರೆ. ಈ ಜ್ಞಾನವು ನೀವು ಮಕ್ಕಳ ಬುದ್ಧಿಯಲ್ಲಿಯೇ ಇದೆ. ಯಾರಿಗೆ ಬೇಕಾದರೂ ನೀವು ತಿಳಿಸಬಹುದು,
ಮತ್ತ್ಯಾರೂ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ರಚಯಿತನನ್ನೇ
ತಿಳಿದುಕೊಂಡಿಲ್ಲವೆಂದರೆ ರಚನೆಯನ್ನು ಹೇಗೆ ತಿಳಿದುಕೊಳ್ಳುವರು! ತಂದೆಯು ತಿಳಿಸಿದ್ದಾರೆ - ಯಾವ
ಸತ್ಯ ಮಾತುಗಳಿವೆಯೋ ಅವನ್ನು ಮುದ್ರಿಸಿ ವಿಮಾನಗಳ ಮೂಲಕ ಎಲ್ಲಾ ಸ್ಥಾನಗಳಲ್ಲಿ ಹಾಕಿಸಬೇಕಾಗಿದೆ. ಆ
ಅಂಶಗಳು ಅಥವಾ ವಿಷಯಗಳನ್ನು ಬರೆಯಬೇಕು. ನಮಗೆ ಕೆಲಸವಿಲ್ಲವೆಂದು ಕೆಲವು ಮಕ್ಕಳು ಹೇಳುತ್ತಾರೆ. ಈ
ಸರ್ವೀಸಂತೂ ಬಹಳಷ್ಟಿದೆ. ಇಲ್ಲಿ ಏಕಾಂತದಲ್ಲಿ ಕುಳಿತು ಈ ಕೆಲಸ ಮಾಡಿ - ಯಾವುದೆಲ್ಲಾ
ದೊಡ್ಡ-ದೊಡ್ಡ ಸಂಸ್ಥೆಗಳಿವೆ, ಗೀತಾ ಪಾಠಶಾಲೆಗಳಿವೆಯೋ ಅವರೆಲ್ಲರನ್ನೂ ಜಾಗೃತಗೊಳಿಸಬೇಕಾಗಿದೆ,
ಎಲ್ಲರಿಗೆ ಸಂದೇಶ ಕೊಡಬೇಕಾಗಿದೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ. ಬುದ್ಧಿವಂತ ಮಕ್ಕಳೇ ಇದನ್ನು
ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ, ಅವಶ್ಯವಾಗಿ ಸಂಗಮಯುಗದಲ್ಲಿಯೇ ಹೊಸ ಪ್ರಪಂಚದ ಸ್ಥಾಪನೆ ಮತ್ತು
ಹಳೆಯ ಪ್ರಪಂಚದ ವಿನಾಶವಾಗುತ್ತದೆ. ಸತ್ಯಯುಗದಲ್ಲಿ ಪುರುಷೋತ್ತಮ ಮನುಷ್ಯರಿರುತ್ತಾರೆ. ಇಲ್ಲಿ
ಆಸುರೀ ಸ್ವಭಾವದಿಂದ ಕೂಡಿದ ಪತಿತ ಮನುಷ್ಯರಿದ್ದಾರೆ. ಇದನ್ನೂ ತಂದೆಯು ತಿಳಿಸುತ್ತಾರೆ - ಬಹಳಷ್ಟು
ಕುಂಭಮೇಳವು ಸೇರುತ್ತದೆ, ಅಲ್ಲಿಗೆ ಮನುಷ್ಯರು ಸ್ನಾನ ಮಾಡಲು ಹೋಗುತ್ತಾರೆ - ಏಕೆ ಹೋಗುತ್ತಾರೆ?
ಪಾವನರಾಗ ಬಯಸುತ್ತಾರೆ. ಆದ್ದರಿಂದ ಎಲ್ಲೆಲ್ಲಿ ಮನುಷ್ಯರು ಸ್ನಾನ ಮಾಡಲು ಹೋಗುವರೋ ಅಲ್ಲಿಗೆ ಹೋಗಿ
ಸರ್ವೀಸ್ ಮಾಡಬೇಕು. ಈ ನೀರು, ಪತಿತ-ಪಾವನಿಯಲ್ಲ ಎಂಬ ಮಾತನ್ನು ಮನುಷ್ಯರಿಗೆ ತಿಳಿಸಿಕೊಡಬೇಕಾಗಿದೆ.
ನಿಮ್ಮ ಬಳಿ ಚಿತ್ರಗಳೂ ಇವೆ, ಗೀತಾ ಪಾಠಶಾಲೆಗಳಲ್ಲಿ ಹೋಗಿ ಈ ಪತ್ರಿಕೆಗಳನ್ನು ಹಂಚಬೇಕು. ಮಕ್ಕಳು
ಸೇವೆ ಬೇಕೆಂದು ಕೇಳುತ್ತಾರೆ ಅಂದಾಗ ಇದನ್ನು ಕುಳಿತು ಬರೆಯಿರಿ - ಗೀತೆಯ ಭಗವಂತನು ಪರಮಪಿತ
ಪರಮಾತ್ಮ, ಶಿವನೇ ಹೊರತು ಶ್ರೀಕೃಷ್ಣನಲ್ಲ. ಮತ್ತೆ ಅವರ ಚರಿತ್ರೆಯ ಮಹಿಮೆಯನ್ನೂ ಬರೆಯಿರಿ. ಶಿವ
ತಂದೆಯ ಚರಿತ್ರೆಯನ್ನು ಬರೆಯಿರಿ. ಮತ್ತೆ ತಾವೇ ಅದನ್ನು ನಿರ್ಣಯ ಮಾಡಿ - ಪತಿತ-ಪಾವನನು ಯಾರೆಂಬ
ಮಾತುಗಳನ್ನೂ ಬರೆಯಬೇಕು ಮತ್ತು ಶಿವ-ಶಂಕರನ ಭೇದವನ್ನೂ ತೋರಿಸಬೇಕು. ಶಿವನೇ ಬೇರೆ, ಶಂಕರನೇ
ಬೇರೆಯಾಗಿದ್ದಾರೆ. ಕಲ್ಪವು 5000 ವರ್ಷಗಳದಾಗಿದೆ. ಮನುಷ್ಯರು 84 ಜನ್ಮಗಳನ್ನು
ಪಡೆದುಕೊಳ್ಳುತ್ತಾರೆ, 84 ಲಕ್ಷವಲ್ಲ. ಈ ಮುಖ್ಯ-ಮುಖ್ಯವಾದ ಮಾತುಗಳನ್ನು ಸಾರ ರೂಪದಲ್ಲಿ ಬರೆಯಬೇಕು.
ಇವನ್ನು ವಿಮಾನದಿಂದಲೂ ಬೀಳಿಸಬಹುದಾಗಿದೆ ಮತ್ತು ತಿಳಿಸಲೂಬಹುದಾಗಿದೆ. ಹೇಗೆ ಗೋಲದ ಚಿತ್ರವಿದೆ,
ಇದರಲ್ಲಿ ಯಾವ-ಯಾವ ಧರ್ಮ ಸ್ಥಾಪಕರು, ಯಾವ-ಯಾವ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆಂಬುದು
ಸ್ಪಷ್ಟವಾಗಿದೆ. ಆದ್ದರಿಂದ ಈ ಗೋಲದ ಚಿತ್ರವೂ ಇರಲಿ. ಮುಖ್ಯವಾಗಿ 12 ಚಿತ್ರಗಳ ಕ್ಯಾಲೆಂಡರನ್ನು
ಮುದ್ರಿಸಬಲ್ಲಿರಿ. ಇದರಲ್ಲಿ ಸಂಪೂರ್ಣ ಜ್ಞಾನವು ಬಂದು ಬಿಡುವುದು ಮತ್ತು ಸರ್ವೀಸ್ ಸಹಜವಾಗುವುದು.
ಈ ಚಿತ್ರಗಳು ಬಹಳ ಅವಶ್ಯವಾಗಿವೆ. ಯಾವ ಚಿತ್ರಗಳನ್ನು ಮಾಡಿಸಬೇಕಾಗಿದೆ, ಏನೇನು ಬರೆಯಬೇಕಾಗಿದೆ
ಎಂಬುದನ್ನು ಕುಳಿತು ಬರೆಯಿರಿ.
ನೀವು ಗುಪ್ತ ವೇಷದಲ್ಲಿ
ಈ ಹಳೆಯ ಪ್ರಪಂಚದ ಪರಿವರ್ತನೆ ಮಾಡುತ್ತಿದ್ದೀರಿ. ಗುಪ್ತ ಸೈನಿಕರಾಗಿದ್ದೀರಿ. ನಿಮ್ಮನ್ನು ಯಾರೂ
ತಿಳಿದುಕೊಂಡಿಲ್ಲ. ತಂದೆಯೂ ಗುಪ್ತ, ಜ್ಞಾನವೂ ಗುಪ್ತವಾಗಿದೆ. ಇದು ಯಾವುದೇ
ಶಾಸ್ತ್ರಗಳಾಗುವುದಿಲ್ಲ. ಅನ್ಯ ಧರ್ಮ ಸ್ಥಾಪಕರ ಬೈಬಲ್ ಇತ್ಯಾದಿಗಳು ಮುದ್ರಿತವಾಗುತ್ತವೆ. ಅದನ್ನು
ಓದಲು ಬರುತ್ತಾರೆ. ಪ್ರತಿಯೊಬ್ಬರದೂ ಗ್ರಂಥಗಳನ್ನು ಮಾಡುತ್ತಾರೆ ಮತ್ತೆ ನಿಮ್ಮದು
ಭಕ್ತಿಮಾರ್ಗದಲ್ಲಿ ಮುದ್ರಿತವಾಗುತ್ತದೆ. ಈಗ ಮುದ್ರಿಸಬಾರದು ಏಕೆಂದರೆ ಈಗಂತೂ ಈ ಶಾಸ್ತ್ರಗಳೆಲ್ಲವೂ
ಸಮಾಪ್ತಿಯಾಗಲಿದೆ. ನೀವೀಗ ಬುದ್ಧಿಯಿಂದ ಕೇವಲ ನೆನಪು ಮಾಡಬೇಕಾಗಿದೆ. ತಂದೆಯ ಬಳಿಯೂ ಜ್ಞಾನವಿದೆ,
ಇದಕ್ಕಾಗಿ ಮನುಷ್ಯರು ಎಲ್ಲರ ಹೃದಯವನ್ನು ತಿಳಿದುಕೊಳ್ಳುವ ಸರ್ವಜ್ಞನೆಂದು ತಿಳಿಯುತ್ತಾರೆ.
ಭಗವಂತನು ನೋಡುತ್ತಾರೆ ಆದ್ದರಿಂದಲೇ ಕರ್ಮಗಳ ಫಲವನ್ನು ಕೊಡುತ್ತಾರೆ. ಇದೆಲ್ಲವೂ ನಾಟಕದಲ್ಲಿ
ನಿಗಧಿಯಾಗಿದೆ. ನಾಟಕದಲ್ಲಿ ಯಾರು ವಿಕರ್ಮ ಮಾಡುವರೋ ಅವರಿಗೆ ಶಿಕ್ಷೆಯಾಗುತ್ತಾ ಹೋಗುತ್ತದೆ.
ಒಳ್ಳೆಯ ಅಥವಾ ಕೆಟ್ಟ ಕರ್ಮಗಳ ಫಲವು ಸಿಗುತ್ತದೆ. ಅದರ ಬರವಣಿಗೆಯಂತೂ ಇಲ್ಲ. ಮನುಷ್ಯರು
ತಿಳಿದುಕೊಳ್ಳುತ್ತಾರೆ - ಅವಶ್ಯವಾಗಿ ಕರ್ಮಗಳ ಫಲವು ಇನ್ನೊಂದು ಜನ್ಮದಲ್ಲಿ ಸಿಗುತ್ತದೆ. ಅಂತಿಮ
ಘಳಿಗೆಯಲ್ಲಿ ವಿವೇಕವು ಬಹಳ ತಿನ್ನುತ್ತದೆ. ನಾವು ಇಂತಹ ಪಾಪವನ್ನು ಮಾಡಿದ್ದೇವೆಂದು ಎಲ್ಲವೂ
ನೆನಪಿಗೆ ಬರುತ್ತದೆ. ಎಂತಹ ಕರ್ಮವೋ ಅಂತಹ ಜನ್ಮ ಸಿಗುವುದು. ನೀವು ವಿಕರ್ಮಾಜೀತರಾಗುತ್ತೀರಿ ಅಂದರೆ
ಯಾವುದೇ ಇಂತಹ ವಿಕರ್ಮ ಮಾಡಬಾರದು. ಎಲ್ಲದಕ್ಕಿಂತ ದೊಡ್ಡ ವಿಕರ್ಮವು ದೇಹಾಭಿಮಾನದ್ದಾಗಿದೆ. ತಂದೆಯು
ಮತ್ತೆ-ಮತ್ತೆ ತಿಳಿಸುತ್ತಾರೆ - ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ. ಪವಿತ್ರರಂತೂ
ಆಗಲೇಬೇಕಾಗಿದೆ. ಎಲ್ಲದಕ್ಕಿಂತ ದೊಡ್ಡ ಪಾಪವು ಕಾಮ ವಿಕಾರವಾಗಿದೆ. ಇದೇ ಆದಿ-ಮಧ್ಯ-ಅಂತ್ಯ ದುಃಖ
ಕೊಡುವಂತದ್ದಾಗಿದೆ ಆದ್ದರಿಂದ ಇದು ಕಾಗವಿಷ್ಟ ಸಮಾನ ಸುಖವೆಂದು ಸನ್ಯಾಸಿಗಳೂ ಹೇಳುತ್ತಾರೆ. ಅಲ್ಲಿ
ದುಃಖದ ಹೆಸರೇ ಇರುವುದಿಲ್ಲ. ಇಲ್ಲಂತೂ ದುಃಖವೇ ದುಃಖವಿದೆ ಆದ್ದರಿಂದ ಸನ್ಯಾಸಿಗಳಿಗೆ ವೈರಾಗ್ಯವಿದೆ
ಆದರೆ ಅವರು ಕಾಡಿಗೆ ಹೊರಟು ಹೋಗುತ್ತಾರೆ. ಅವರದು ಹದ್ದಿನ ವೈರಾಗ್ಯ, ನಿಮ್ಮದು ಬೇಹದ್ದಿನ
ವೈರಾಗ್ಯ. ಈ ಪ್ರಪಂಚವೇ ಛೀ ಛೀ ಆಗಿದೆ. ಬಾಬಾ, ಬಂದು ನಮಗೆ ದುಃಖ ದೂರ ಮಾಡಿ ಸುಖವನ್ನು ಕೊಡಿ ಎಂದು
ಎಲ್ಲರೂ ಹೇಳುತ್ತಾರೆ. ತಂದೆಯೇ ದುಃಖಹರ್ತ, ಸುಖಕರ್ತನಾಗಿದ್ದಾರೆ. ನೀವು ಮಕ್ಕಳೂ
ತಿಳಿದುಕೊಂಡಿದ್ದೀರಿ – ಹೊಸ ಪ್ರಪಂಚದಲ್ಲಿ ಈ ದೇವತೆಗಳ ರಾಜ್ಯವಿತ್ತು, ಅಲ್ಲಿ ಯಾವುದೇ ಪ್ರಕಾರದ
ದುಃಖವಿರಲಿಲ್ಲ. ಇಲ್ಲಿ ಯಾರಾದರೂ ಶರೀರ ಬಿಡುತ್ತಾರೆಂದರೆ ಸ್ವರ್ಗವಾಸಿಯಾದರೆಂದು ಮನುಷ್ಯರು
ಹೇಳುತ್ತಾರೆ ಆದರೆ ನಾವು ನರಕದಲ್ಲಿದ್ದೇವೆ, ನಾವು ಯಾವಾಗ ಶರೀರ ಬಿಡುವೆವೋ ಆಗ ಸ್ವರ್ಗದಲ್ಲಿ
ಹೋಗುತ್ತೇವೆಂದು ಅವರಿಗೆ ತಿಳಿಯುವುದೇ ಇಲ್ಲ. ಆದರೆ ಅವರು ಸ್ವರ್ಗದಲ್ಲಿ ಹೋದರೆ ಅಥವಾ ಇಲ್ಲಿ
ನರಕದಲ್ಲಿ ಬಂದರೆ? ಏನನ್ನೂ ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳೇ ಮೂವರು ತಂದೆಯರ ರಹಸ್ಯವನ್ನು
ಎಲ್ಲರಿಗೆ ತಿಳಿಸಬಹುದು. ಇಬ್ಬರು ತಂದೆಯರನ್ನಂತೂ ಎಲ್ಲರೂ ತಿಳಿದುಕೊಂಡಿದ್ದಾರೆ, ಲೌಕಿಕ ಮತ್ತು
ಪಾರಲೌಕಿಕ. ಈ ಅಲೌಕಿಕ ಪ್ರಜಾಪಿತ ಬ್ರಹ್ಮನು ಸಂಗಮಯುಗದಲ್ಲಿದ್ದಾರೆ. ಬ್ರಾಹ್ಮಣಿಯರೂ ಬೇಕಲ್ಲವೆ.
ಆ ಬ್ರಾಹ್ಮಣರು ಬ್ರಹ್ಮನ ಮೂಲಕ ವಂಶಾವಳಿ ಇರುತ್ತಾರೆಯೇ! ಬ್ರಹ್ಮನಿದ್ದರು ಆದ್ದರಿಂದ ಬ್ರಾಹ್ಮಣ
ದೇವಿ-ದೇವತಾ ನಮಃ ಎಂದು ಹೇಳುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ಇದನ್ನು ಯಾರಿಗೆ ಹೇಳುತ್ತಾರೆ,
ಎಂತಹ ಬ್ರಾಹ್ಮಣರೆಂದು ತಿಳಿದುಕೊಂಡಿಲ್ಲ. ನೀವು ಪುರುಷೋತ್ತಮ ಸಂಗಮಯುಗೀ ಬ್ರಾಹ್ಮಣರಾಗಿದ್ದೀರಿ.
ಅವರು ಕಲಿಯುಗಿಗಳಾಗಿದ್ದಾರೆ. ಇದು ಪುರುಷೋತ್ತಮ ಸಂಗಮಯುಗ, ಯಾವಾಗ ನೀವು ಮನುಷ್ಯರಿಂದ
ದೇವತೆಗಳಾಗುತ್ತೀರಿ. ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ ಅಂದಾಗ ಮಕ್ಕಳಿಗೆ ಎಲ್ಲಾ
ಅಂಶಗಳನ್ನು ಧಾರಣೆ ಮಾಡಬೇಕಾಗಿದೆ ಮತ್ತು ನಂತರ ಸರ್ವೀಸ್ ಮಾಡಬೇಕಾಗಿದೆ. ಪೂಜೆ ಮಾಡುವ ಮತ್ತು
ಶ್ರಾದ್ಧವನ್ನು ತಿನ್ನುವ ಬ್ರಾಹ್ಮಣ ಮನುಷ್ಯರು ಬರುತ್ತಾರೆ. ಅವರೊಂದಿಗೂ ಸಹ ನೀವು ಚರ್ಚೆ
ಮಾಡಬಹುದು. ನಿಮ್ಮನ್ನು ಸತ್ಯ ಬ್ರಾಹ್ಮಣರನ್ನಾಗಿ ಮಾಡಲು ಸಾಧ್ಯವಿದೆ. ಈಗ ಭಾದ್ರಪದ ಮಾಸ
ಬರುತ್ತಿದೆ, ಎಲ್ಲಾ ಪಿತೃಗಳಿಗೆ ತಿನ್ನಿಸುತ್ತಾರೆ. ಅದೂ ಸಹ ಯುಕ್ತಿಯಿಂದ ಮಾಡಬೇಕಾಗಿದೆ,
ಇಲ್ಲವೆಂದರೆ ಬ್ರಹ್ಮಾಕುಮಾರಿಯರ ಬಳಿ ಹೋಗಿ ಎಲ್ಲವನ್ನೂ ಬಿಟ್ಟು ಬಿಡುತ್ತಾರೆಂದು ಹೇಳುತ್ತಾರೆ.
ಯಾವುದರಲ್ಲಿ ಬೇಸರವಾಗುತ್ತದೆಯೋ ಆ ರೀತಿ ಮಾಡಬಾರದು. ಯುಕ್ತಿಯಿಂದ ನೀವು ಜ್ಞಾನವನ್ನು ಕೊಡಲು
ಸಾಧ್ಯವಿದೆ. ಅವಶ್ಯವಾಗಿ ಬ್ರಾಹ್ಮಣ ಮನುಷ್ಯರು ಬರುತ್ತಾರೆ, ಆಗ ಜ್ಞಾನವನ್ನು ಕೊಡಬಹುದಲ್ಲವೆ. ಈ
ಮಾಸದಲ್ಲಿ ನೀವು ಬ್ರಾಹ್ಮಣರು ಬಹಳ ಸರ್ವೀಸ್ ಮಾಡಲು ಸಾಧ್ಯವಿದೆ. ನೀವು ಬ್ರಾಹ್ಮಣರಂತೂ ಪ್ರಜಾಪಿತ
ಬ್ರಹ್ಮನ ಸಂತಾನರಾಗಿದ್ದೀರಿ. ಅವರೊಂದಿಗೆ ಕೇಳಿ, ಬ್ರಾಹ್ಮಣ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು?
ನೀವು ಮನೆಯಲ್ಲಿ ಕುಳಿತೇ ಅವರ ಕಲ್ಯಾಣವನ್ನೂ ಮಾಡಬಹುದು. ಹೇಗೆ ಅಮರನಾಥದ ಯಾತ್ರೆಯಲ್ಲಿ
ಹೋಗುತ್ತಾರೆ ಅಂದಾಗ ಅವರು ಕೇವಲ ಬರವಣಿಗೆಯಿಂದ ಇಷ್ಟೊಂದು ತಿಳಿಸಲು ಸಾಧ್ಯವಿಲ್ಲ. ಅಲ್ಲಿ ಕುಳಿತು
ತಿಳಿಸಬೇಕಾಗಿದೆ. ನಾವು ನಿಮಗೆ ಸತ್ಯ ಅಮರನಾಥನ ಕಥೆಯನ್ನು ತಿಳಿಸುತ್ತೇವೆ. ಅಮರನಾಥನೆಂದು
ಒಬ್ಬರಿಗೇ ಹೇಳಲಾಗುತ್ತದೆ. ಅಮರನಾಥ ಅರ್ಥಾತ್ ಯಾರು ಅಮರಪುರಿಯನ್ನು ಸ್ಥಾಪನೆ ಮಾಡಿದರು. ಅದು
ಸತ್ಯಯುಗವಾಗಿದೆ, ಇಂತಹ ಸರ್ವೀಸ್ ಮಾಡಬೇಕಾಗುತ್ತದೆ. ಅಲ್ಲಿ ಪಾದಯಾತ್ರೆಯನ್ನೂ ಮಾಡಬೇಕಾಗುತ್ತದೆ,
ಯಾರು ಒಳ್ಳೊಳ್ಳೆಯ ವ್ಯಕ್ತಿಗಳಿದ್ದಾರೆ ಅವರಿಗೂ ಸಹ ಹೋಗಿ ತಿಳಿಸಬೇಕಾಗುವುದು. ಸನ್ಯಾಸಿಗಳಿಗೂ ಸಹ
ನೀವು ಜ್ಞಾನವನ್ನು ತಿಳಿಸಬಹುದು. ನೀವು ಇಡೀ ಸೃಷ್ಟಿಯ ಕಲ್ಯಾಣಕಾರಿಗಳಾಗಿದ್ದೀರಿ. ಶ್ರೀಮತದಂತೆ
ನಾವು ವಿಶ್ವದ ಕಲ್ಯಾಣ ಮಾಡಬೇಕಾಗಿದೆ - ಬುದ್ಧಿಯಲ್ಲಿ ಈ ನಶೆಯಿರಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾವಾಗ
ಏಕಾಂತ ಮತ್ತು ಸಮಯ ಸಿಗುವುದು ಆಗ ಜ್ಞಾನದ ಒಳ್ಳೊಳ್ಳೆಯ ಅಂಶಗಳ ಬಗ್ಗೆ ವಿಚಾರಸಾಗರ ಮಂಥನ ಮಾಡಿ
ಬರೆಯಬೇಕಾಗಿದೆ. ಎಲ್ಲರಿಗೂ ಸಂದೇಶವನ್ನು ಕೊಡುವುದಕ್ಕಾಗಿ ಮತ್ತು ಎಲ್ಲರ ಕಲ್ಯಾಣ ಮಾಡಲು
ಯುಕ್ತಿಯನ್ನು ರಚಿಸಬೇಕಾಗಿದೆ.
2. ವಿಕರ್ಮಗಳಿಂದ
ಪಾರಾಗಲು ದೇಹೀ-ಅಭಿಮಾನಿಗಳಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಈಗ ಯಾವುದೇ ವಿಕರ್ಮವನ್ನು
ಮಾಡಬಾರದು, ಈ ಜನ್ಮದಲ್ಲಿ ಮಾಡಿರುವ ವಿಕರ್ಮಗಳನ್ನು ಬಾಪ್ದಾದಾರವರಿಗೆ ಸತ್ಯ-ಸತ್ಯವಾಗಿ
ತಿಳಿಸಬೇಕಾಗಿದೆ.
ವರದಾನ:
ಅಟಲ
ಭವಿಷ್ಯವನ್ನು ತಿಳಿದಿದ್ದರೂ ಸಹಾ ಶ್ರೇಷ್ಠ ಕಾರ್ಯಕ್ಕೆ ಪ್ರತ್ಯಕ್ಷ ರೂಪ ಕೊಡುವಂತಹ ಸದಾ ಸಮರ್ಥ
ಭವ.
ಹೊಸ ಶ್ರೇಷ್ಠ ವಿಶ್ವ
ನಿರ್ಮಾಣವಾಗುವ ಭವಿಷ್ಯ ಅಟಲವಾಗಿದ್ದರೂ ಸಹಾ ಸಮರ್ಥ ಭಾವದ ವರದಾನಿ ಮಕ್ಕಳು ಕೇವಲ ಕರ್ಮ ಮತ್ತು
ಫಲದ, ಪುರುಷಾರ್ಥ ಮತ್ತು ಪ್ರಾಲಭ್ಧದ, ನಿಮಿತ್ತ ಮತ್ತು ನಿರ್ಮಾಣದ ಕರ್ಮ ಸಿದ್ಧಾಂತದನುಸಾರ
ನಿಮಿತ್ತರಾಗಿ ಕಾರ್ಯ ಮಾಡುತ್ತಾರೆ. ಪ್ರಪಂಚದ ಜನರಿಗೆ ಭರವಸೆ ಕಂಡು ಬರುತ್ತಿಲ್ಲ. ಆದರೆ ನೀವು
ಹೇಳುವಿರಿ ಈ ಕಾರ್ಯ ಅನೇಕ ಬಾರಿ ಆಗಿದೆ, ಈಗಲೂ ಆಗೇ ಹೋಗಿದೆ ಏಕೆಂದರೆ ಸ್ವ ಪರಿವರ್ತನೆಯ
ಪ್ರತ್ಯಕ್ಷ ಪ್ರಮಾಣದ ಮುಂದೆ ಬೇರೆ ಯಾವ ಪ್ರಮಾಣದ ಆವಶ್ಯಕತೆಯೇ ಇಲ್ಲ. ಜೊತೆ-ಜೊತೆಯಲ್ಲಿ
ಪರಮಾತ್ಮನ ಕಾರ್ಯ ಸಫಲವಾಗೆ ಇದೆ.
ಸ್ಲೋಗನ್:
ಹೇಳುವುದು ಕಡಿಮೆ,
ಮಾಡುವುದು ಹೆಚ್ಚು-ಈ ಶ್ರೇಷ್ಠ ಲಕ್ಷ್ಯ ಮಹಾನ್ ಆಗಿ ಮಾಡಿ ಬಿಡುವುದು.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಸೇವೆಯಲ್ಲಿ ಅಥವಾ
ಸ್ವಯಂನ ಏರುವ ಕಲೆಯಲ್ಲಿ ಸಫಲತೆಯ ಮುಖ್ಯ ಆಧಾರವಾಗಿದೆ – ಒಬ್ಬ ತಂದೆಯೊಂದಿಗೆ ಮುರಿಯಲಾಗದ ಪ್ರೀತಿ.
ತಂದೆಯನ್ನು ಬಿಟ್ಟರೆ ಬೇರೆ ಏನು ಕಾಣಿಸುವುದಿಲ್ಲ, ಸಂಕಲ್ಪದಲ್ಲಿಯೂ ಬಾಬಾ, ಮಾತಿನಲ್ಲಿಯೂ ಬಾಬಾ,
ಕರ್ಮದಲ್ಲಿಯೂ ಬಾಬಾರವರ ಜೊತೆ, ಹೀಗೆ ಲವಲೀನ ಸ್ಥಿತಿಯಲ್ಲಿರುತ್ತ ಒಂದು ಶಬ್ಧವೂ ಮಾತನಾಡಿದರೆ ಆ
ಸ್ನೇಹದ ಮಾತು ಅನ್ಯ ಆತ್ಮರನ್ನು ಸಹ ಸ್ನೇಹದಲ್ಲಿ ಬಂಧಿಸಿ ಬಿಡುತ್ತದೆ. ಹೀಗೆ ಲವಲೀನ ಆತ್ಮನ ಒಂದು
ಬಾಬಾ ಶಬ್ದವೇ ಜಾದೂ ಮಂತ್ರದ ಕೆಲಸ ಮಾಡುತ್ತದೆ.