08.11.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಆತ್ಮಾಭಿಮಾನಿಯಾಗಿ ಆಗ ಎಲ್ಲಾ ಕಾಯಿಲೆಗಳು ಸಮಾಪ್ತಿಯಾಗುತ್ತವೆ ಮತ್ತು ನೀವು ಡಬಲ್ ಕಿರೀಟಧಾರಿ
ವಿಶ್ವದ ಮಾಲೀಕರಾಗುತ್ತೀರಿ”
ಪ್ರಶ್ನೆ:
ತಂದೆಯ
ಸನ್ಮುಖದಲ್ಲಿ ಎಂತಹ ಮಕ್ಕಳು ಕುಳಿತುಕೊಳ್ಳಬೇಕು?
ಉತ್ತರ:
ಯಾರಿಗೆ ಜ್ಞಾನದ
ನರ್ತನ ಮಾಡುವುದು ಬರುತ್ತದೆಯೋ ಅಂತಹ ಜ್ಞಾನ ನರ್ತನ ಮಾಡುವ ಮಕ್ಕಳು ತಂದೆಯ ಸನ್ಮುಖದಲ್ಲಿದ್ದಾಗ
ತಂದೆಯ ಮುರುಳಿಯೂ ಸಹ ಅದೇ ರೀತಿ ನಡೆಯುತ್ತದೆ. ಒಂದುವೇಳೆ ಯಾರಾದರೂ ಸನ್ಮುಖದಲ್ಲಿ ಕುಳಿತು
ಅಲ್ಲಿ-ಇಲ್ಲಿ ನೋಡುತ್ತಾರೆಂದರೆ ಈ ಮಗು ಏನನ್ನೂ ತಿಳಿದುಕೊಂಡಿಲ್ಲವೆಂದು ತಂದೆಯು ತಿಳಿಯುತ್ತಾರೆ.
ತಂದೆಯು ಬ್ರಾಹ್ಮಣಿಯರಿಗೂ ಹೇಳುತ್ತಾರೆ - ನೀವು ತಂದೆಯ ಮುಂದೆಯೂ ಆಕಳಿಸುವಂತಹ ಮಕ್ಕಳನ್ನು ಕರೆ
ತಂದಿದ್ದೀರಾ? ಮಕ್ಕಳಿಗೆ ಇಂತಹ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಖುಷಿಯಲ್ಲಿ ನರ್ತನ ಮಾಡಬೇಕು.
ಗೀತೆ:
ದೂರ
ದೇಶದಲ್ಲಿರುವವರು...............
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಗೀತೆಯನ್ನು ಕೇಳಿದಿರಾ. ಆತ್ಮಿಕ ಮಕ್ಕಳಿಗೆ ತಿಳಿದಿದೆ - ಆತ್ಮಿಕ ತಂದೆಯು
ಯಾರನ್ನು ನಾವು ನೆನಪು ಮಾಡುತ್ತಾ ಬಂದಿದ್ದೇವೆ, ದುಃಖಹರ್ತ-ಸುಖಕರ್ತ ಅಥವಾ ನೀವೇ ಮಾತಾಪಿತಾ.....
ಪುನಃ ಬಂದು ನಮಗೆ ಅಪಾರ ಸುಖವನ್ನು ಕೊಡಿ, ನಾವು ದುಃಖಿಯಾಗಿದ್ದೇವೆ, ಇಡೀ ಪ್ರಪಂಚವು ದುಃಖಿಯಾಗಿದೆ
ಎಂದು. ಏಕೆಂದರೆ ಇದು ಕಲಿಯುಗೀ ಹಳೆಯ ಪ್ರಪಂಚವಾಗಿದೆ. ಎಷ್ಟು ಸುಖವು ಹೊಸ ಪ್ರಪಂಚ, ಹೊಸ
ಮನೆಯಲ್ಲಿರುವುದೋ ಅಷ್ಟು ಹಳೆಯ ಪ್ರಪಂಚ, ಹಳೆಯ ಮನೆಯಲ್ಲಿರಲು ಸಾಧ್ಯವಿಲ್ಲ. ನೀವು ಮಕ್ಕಳು
ತಿಳಿದುಕೊಂಡಿದ್ದೀರಿ, ನಾವು ವಿಶ್ವದ ಮಾಲೀಕರು, ಆದಿ ಸನಾತನ ದೇವಿ-ದೇವತೆಗಳಾಗಿದ್ದೆವು, ನಾವೇ 84
ಜನ್ಮಗಳನ್ನು ತೆಗೆದುಕೊಂಡೆವು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾವು ಎಷ್ಟು ಜನ್ಮಗಳು
ಪಾತ್ರವನ್ನಭಿನಯಿಸುತ್ತೇವೆಂದು ನೀವು ತಮ್ಮ ಜನ್ಮಗಳನ್ನೇ ಅರಿತುಕೊಂಡಿಲ್ಲ. 84 ಲಕ್ಷ
ಪುನರ್ಜನ್ಮಗಳೆಂದು ಮನುಷ್ಯರು ತಿಳಿಯುತ್ತಾರೆ. ಅಂದರೆ ಒಂದೊಂದು ಪುನರ್ಜನ್ಮ ಎಷ್ಟು
ವರ್ಷಗಳಿರಬಹುದು? 84 ಲಕ್ಷ ಜನ್ಮಗಳ ಲೆಕ್ಕವಿದ್ದರೆ ಸೃಷ್ಟಿಚಕ್ರವು ಬಹಳ ದೊಡ್ಡದಾಗಿ ಬಿಡುವುದು
ಆದರೆ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವಾತ್ಮಗಳ ತಂದೆಯು ನಮಗೆ ಓದಿಸಲು ಬಂದಿದ್ದಾರೆ.
ನಾವೂ ಸಹ ದೂರ ದೇಶದ ನಿವಾಸಿಗಳಾಗಿದ್ದೇವೆ. ನಾವು ಇಲ್ಲಿರುವವರಲ್ಲ, ಕೇವಲ ಇಲ್ಲಿ
ಪಾತ್ರವನ್ನಭಿನಯಿಸಲು ಬಂದಿದ್ದೇವೆ. ತಂದೆಯನ್ನೂ ಸಹ ನಾವು ಪರಮಧಾಮದಲ್ಲಿ ನೆನಪು ಮಾಡುತ್ತೇವೆ. ಈಗ
ಈ ಪರದೇಶದಲ್ಲಿ ಬಂದಿದ್ದೇವೆ. ಶಿವ ತಂದೆಗೆ ಬಾಬಾ ಎಂದು ಹೇಳುತ್ತೀರಿ, ರಾವಣನಿಗೆ ಬಾಬಾ ಎಂದು
ಹೇಳುವುದಿಲ್ಲ. ಭಗವಂತನಿಗೇ ಹೇಳುತ್ತೀರಿ, ತಂದೆಯ ಮಹಿಮೆಯೇ ಬೇರೆಯಾಗಿದೆ. ಪಂಚ ವಿಕಾರಗಳಿಗೆ
ಯಾರಾದರೂ ಮಹಿಮೆ ಮಾಡುತ್ತಾರೆಯೇ? ದೇಹಾಭಿಮಾನವು ಅತಿ ದೊಡ್ಡ ಕಾಯಿಲೆಯಾಗಿದೆ. ನಾವು
ದೇಹೀ-ಅಭಿಮಾನಿಗಳಾದರೆ ಯಾವುದೇ ಕಾಯಿಲೆಯಿರುವುದಿಲ್ಲ ಮತ್ತು ನಾವು ವಿಶ್ವದ ಮಾಲೀಕರಾಗುತ್ತೇವೆ. ಈ
ಮಾತುಗಳು ನಿಮ್ಮ ಬುದ್ಧಿಯಲ್ಲಿದೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಾವಾತ್ಮಗಳಿಗೆ
ಓದಿಸುತ್ತಾರೆ, ಯಾವುದೆಲ್ಲಾ ಸತ್ಸಂಗಗಳಿವೆಯೋ ಅಲ್ಲಿಯೂ ಸಹ ನಮಗೆ ಶಿವ ತಂದೆಯು ಬಂದು ರಾಜಯೋಗವನ್ನು
ಕಲಿಸುತ್ತಾರೆ, ರಾಜ್ಯಭಾಗ್ಯಕ್ಕಾಗಿ ಓದಿಸುತ್ತಾರೆ ಎಂಬ ಮಾತನ್ನು ಎಲ್ಲಿಯೂ
ತಿಳಿದುಕೊಳ್ಳುವುದಿಲ್ಲ. ರಾಜರನ್ನಾಗಿ ಮಾಡುವವರು ರಾಜರೇ ಬೇಕಲ್ಲವೆ. ಹೇಗೆ ಸರ್ಜನ್ ಓದಿಸಿ ತಮ್ಮ
ಸಮಾನ ಸರ್ಜನ್ ಆಗಿ ಮಾಡಿಕೊಳ್ಳುವರು. ಆದ್ದರಿಂದ ಮನುಷ್ಯರು ಕೃಷ್ಣನಿಗೆ ಡಬಲ್ ಕಿರೀಟವನ್ನು
ತೋರಿಸುತ್ತಾರೆ ಆದರೆ ಕೃಷ್ಣನು ಹೇಗೆ ಓದಿಸುತ್ತಾನೆ! ಅವಶ್ಯವಾಗಿ ತಂದೆಯು ಸಂಗಮಯುಗದಲ್ಲಿಯೇ
ಬಂದಿರಬೇಕು, ಬಂದು ರಾಜಧಾನಿಯನ್ನು ಸ್ಥಾಪನೆ ಮಾಡಿರುವರು ಆದರೆ ತಂದೆಯು ಹೇಗೆ ಬರುತ್ತಾರೆಂಬುದು
ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ದೂರ ದೇಶದಿಂದ ತಂದೆಯು ಬಂದು ನಮಗೆ
ಓದಿಸುತ್ತಾರೆ, ರಾಜಯೋಗವನ್ನು ಕಲಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನನಗೆ ಯಾವುದೆ
ಪ್ರಕಾಶತೆಯ ಹಾಗೂ ರತ್ನ ಜಡಿತ ಕಿರೀಟವಿಲ್ಲ. ನಾನೆಂದೂ ರಾಜ್ಯ ಪದವಿಯನ್ನು ಪಡೆಯುವುದಿಲ್ಲ. ಡಬಲ್
ಕಿರೀಟಧಾರಿಯಾಗುವುದಿಲ್ಲ, ನಿಮ್ಮನ್ನೇ ಮಾಡುತ್ತೇನೆ. ಒಂದುವೇಳೆ ನಾನು ರಾಜನಾಗುವಂತಿದ್ದರೆ ಮತ್ತೆ
ಪ್ರಜೆಯೂ ಆಗಬೇಕಾಗುತ್ತದೆ. ಭಾರತವಾಸಿಗಳು ರಾಜರಾಗಿದ್ದರು, ಈಗ ಪ್ರಜೆಗಳಾಗಿದ್ದಾರೆ. ನೀವೂ ಸಹ
ಡಬಲ್ ಕಿರೀಟಧಾರಿಗಳಾಗುತ್ತೀರಿ ಅಂದಾಗ ನಿಮ್ಮನ್ನು ಆ ರೀತಿ ಮಾಡುವವರೂ ಸಹ ಡಬಲ್
ಕಿರೀಟಧಾರಿಯಾಗಿರಬೇಕು ಮತ್ತು ಅವರ ಜೊತೆ ನಿಮ್ಮ ಯೋಗವೂ ಇರಬೇಕು. ಯಾರು ಹೇಗಿರುವರೋ ಅದೇ ರೀತಿ
ತಮ್ಮ ಸಮಾನ ಮಾಡಿಕೊಳ್ಳುವರು. ಸನ್ಯಾಸಿಗಳು ಪ್ರಯತ್ನಪಟ್ಟು ಸನ್ಯಾಸಿಗಳನ್ನಾಗಿ ಮಾಡುತ್ತಾರೆ. ನೀವು
ಗೃಹಸ್ಥಿಗಳು, ಅವರು ಸನ್ಯಾಸಿಗಳು ಅಂದಮೇಲೆ ನೀವು ಅವರಿಗೆ ಅನುಯಾಯಿಗಳಾಗಲಿಲ್ಲ. ಇಂತಹವರು
ಶಿವಾನಂದರ ಅನುಯಾಯಿಯಾಗಿದ್ದಾರೆಂದು ಹೇಳುತ್ತಾರೆ ಆದರೆ ಆ ಸನ್ಯಾಸಿಗಳು ತಲೆಯನ್ನು
ಬೋಳಿಸಿಕೊಳ್ಳುವವರಾಗಿದ್ದಾರೆ. ನೀವಂತೂ ಅವರನ್ನು ಅನುಸರಿಸುವುದಿಲ್ಲ. ಅಂದಮೇಲೆ ಮತ್ತೆ ನೀವು
ಅನುಯಾಯಿಯೆಂದು ಏಕೆ ಹೇಳುತ್ತೀರಿ! ಅನುಯಾಯಿಗಳೆಂದರೆ ಅವರು ಕೂಡಲೇ ವಸ್ತ್ರಗಳನ್ನು ಬದಲಾಯಿಸಿ ಕಾವೀ
ಬಟ್ಟೆಯನ್ನು ಧರಿಸುವವರು. ನೀವಂತೂ ಗೃಹಸ್ಥದಲ್ಲಿ ವಿಕಾರಗಳಲ್ಲಿರುತ್ತೀರಿ ಅಂದಮೇಲೆ ನೀವು
ಶಿವಾನಂದರ ಅನುಯಾಯಿಗಳೆಂದು ಕರೆಸಿಕೊಳ್ಳಲು ಹೇಗೆ ಸಾಧ್ಯ? ಗುರುವಿನ ಕರ್ತವ್ಯವಾಗಿದೆ - ಸದ್ಗತಿ
ಮಾಡುವುದು. ಇಂತಹವರನ್ನು ನೆನಪು ಮಾಡಿ ಎಂದು ಗುರುಗಳು ಹೇಳುವುದಿಲ್ಲ. ಅಂದಮೇಲೆ ಅವರೂ
ಗುರುವಾಗಲಿಲ್ಲ. ಮುಕ್ತಿಧಾಮಕ್ಕಾಗಿ ಹೋಗುವುದಕ್ಕಾಗಿಯೂ ಯುಕ್ತಿ ಬೇಕಾಗಿದೆ.
ಮಕ್ಕಳಿಗೆ
ತಿಳಿಸಲಾಗುತ್ತದೆ, ನಿಮ್ಮ ಮನೆಯು ಮುಕ್ತಿಧಾಮ ಅಥವಾ ನಿರಾಕಾರಿ ಪ್ರಪಂಚವಾಗಿದೆ, ಆತ್ಮಕ್ಕೆ
ನಿರಾಕಾರಿ ಆತ್ಮನೆಂದು ಹೇಳಲಾಗುತ್ತದೆ. ಈ ಶರೀರವು ಪಂಚ ತತ್ವಗಳಿಂದ ಮಾಡಲ್ಪಟ್ಟಿದೆ. ಆತ್ಮಗಳು
ಎಲ್ಲಿಂದ ಬರುತ್ತಾರೆ? ಪರಮಧಾಮ, ನಿರಾಕಾರಿ ಪ್ರಪಂಚದಿಂದ. ಅಲ್ಲಿ ಬಹಳ ಆತ್ಮಗಳಿರುತ್ತಾರೆ, ಅದಕ್ಕೆ
ಮಧುರ ಶಾಂತಿಯ ಮನೆಯೆಂದು ಹೇಳುತ್ತಾರೆ. ಅಲ್ಲಿ ಆತ್ಮಗಳು ಸುಖ-ದುಃಖದಿಂದ ಭಿನ್ನವಾಗಿರುತ್ತಾರೆ.
ಇದನ್ನು ಚೆನ್ನಾಗಿ ಪಕ್ಕಾ ಮಾಡಿಕೊಳ್ಳಬೇಕಾಗಿದೆ, ನಾವು ಮಧುರ ಶಾಂತಿಧಾಮದ ನಿವಾಸಿಗಳಾಗಿದ್ದೆವು,
ಇದು ನಾಟಕ ಶಾಲೆಯಾಗಿದೆ, ನಾವಿಲ್ಲಿ ಪಾತ್ರವನ್ನಭಿನಯಿಸಲು ಬರುತ್ತೇವೆ. ಈ ನಾಟಕ ಶಾಲೆಯಲ್ಲಿ
ಸೂರ್ಯ, ಚಂದ್ರ, ನಕ್ಷತ್ರಗಳು ದೀಪಗಳಾಗಿವೆ. ಈ ನಾಟಕ ಶಾಲೆಯು ಎಷ್ಟು ಮೈಲಿಗಳ ದೂರವಿದೆ ಎಂಬುದನ್ನು
ಯಾರೂ ಎಣಿಕೆ ಮಾಡಲು ಸಾಧ್ಯವಿಲ್ಲ. ವಿಮಾನದಲ್ಲಿ ಮೇಲೆ ಹೋಗುತ್ತಾರೆ ಆದರೆ ಅಂತ್ಯವನ್ನು ಮುಟ್ಟಿ
ಹಿಂತಿರುಗಿ ಬರುವಷ್ಟು ಪೆಟ್ರೋಲನ್ನು ಅದರಲ್ಲಿ ಹಾಕಲು ಸಾಧ್ಯವಿಲ್ಲ. ಇಷ್ಟು ದೂರ ಹೋಗುವುದಕ್ಕೆ
ಸಾಧ್ಯವಿಲ್ಲ. ಇಷ್ಟು ಮೈಲಿಗಳವರೆಗೆ ಇದೆಯೆಂದು ಅವರು ತಿಳಿಯುತ್ತಾರೆ. ಸಮುದ್ರದ ಹಾಗೂ ಆಕಾಶ
ತತ್ವದ ಅಂತ್ಯವನ್ನು ಪಡೆಯಲು ಸಾಧ್ಯವಿಲ್ಲ. ಈಗ ತಂದೆಯು ನಿಮಗೆ ತನ್ನ ಅಂತ್ಯ ಅರ್ಥಾತ್ ಪರಿಚಯವನ್ನೇ
ತಿಳಿಸುತ್ತಾರೆ. ಆತ್ಮವು ಈ ಆಕಾಶ ತತ್ವದಿಂದ ದೂರ ಹೊರಟು ಹೋಗುತ್ತದೆ. ಎಷ್ಟು ತೀಕ್ಷ್ಣ ರಾಕೆಟ್
ಆಗಿದೆ, ನೀವಾತ್ಮಗಳು ಯಾವಾಗ ಪವಿತ್ರರಾಗಿ ಬಿಡುವಿರೋ ಆಗ ರಾಕೆಟ್ ತರಹ ಹಾರ ತೊಡಗುತ್ತೀರಿ. ಎಷ್ಟು
ಚಿಕ್ಕ ರಾಕೆಟ್ ಆಗಿದೆ, ಸೂರ್ಯ-ಚಂದ್ರರಿಗಿಂತಲೂ ದೂರ ಮೂಲವತನಕ್ಕೆ ಹೊರಟು ಹೋಗುವಿರಿ.
ಸೂರ್ಯ-ಚಂದ್ರರ ಅಂತ್ಯವನ್ನು ತಲುಪಲು ಬಹಳ ಪ್ರಯತ್ನ ಪಡುತ್ತಾರೆ. ದೂರದ ನಕ್ಷತ್ರಗಳು ಇತ್ಯಾದಿಗಳು
ಎಷ್ಟು ಚಿಕ್ಕದಾಗಿ ಕಾಣುತ್ತವೆ, ವಾಸ್ತವದಲ್ಲಿ ದೊಡ್ಡ ಗಾತ್ರದಲ್ಲಿರುತ್ತವೆ. ಹೇಗೆ ನೀವು
ಪತಂಗಗಳನ್ನು ಹಾರಿಸುತ್ತೀರಿ, ಅವು ಮೇಲೆ ಹೋದಂತೆ ಎಷ್ಟು ಚಿಕ್ಕ-ಚಿಕ್ಕದಾಗಿ ಕಾಣುತ್ತವೆ. ತಂದೆಯು
ತಿಳಿಸುತ್ತಾರೆ - ನೀವಾತ್ಮಗಳಂತೂ ಎಲ್ಲದಕ್ಕಿಂತ ತೀಕ್ಷ್ಣವಾಗಿದ್ದೀರಿ, ಒಂದು ಸೆಕೆಂಡಿನಲ್ಲಿ ಒಂದು
ಶರೀರವನ್ನು ಬಿಟ್ಟು ಇನ್ನೊಂದು ಗರ್ಭದಲ್ಲಿ ಹೋಗಿ ಪ್ರವೇಶ ಮಾಡುತ್ತೀರಿ. ಯಾರ ಕರ್ಮಗಳ
ಲೆಕ್ಕಾಚಾರವು ಲಂಡನ್ನಿನಲ್ಲಿ ಇದ್ದರೆ ಸೆಕೆಂಡಿನಲ್ಲಿ ಆತ್ಮವು ಲಂಡನ್ನಿಗೆ ಹೋಗಿ ಜನ್ಮ
ಪಡೆಯುತ್ತದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆಯಲ್ಲವೆ. ಮಗುವು ಗರ್ಭದಿಂದ ಹೊರ
ಬಂದಿತೆಂದರೆ ಮಾಲೀಕನಾಯಿತು, ವಾರಸುಧಾರನಾಗಿ ಬಿಟ್ಟಿತು. ನೀವು ಮಕ್ಕಳೂ ಸಹ ತಂದೆಯನ್ನು
ಅರಿತುಕೊಂಡಿರೆಂದರೆ ವಿಶ್ವದ ಮಾಲೀಕರಾಗಿ ಬಿಟ್ಟಿರಿ. ಬೇಹದ್ದಿನ ತಂದೆಯೇ ಬಂದು ನಿಮ್ಮನ್ನು
ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಶಾಲೆಯಲ್ಲಿ ಬ್ಯಾರಿಸ್ಟರಿ ಓದಿದರೆ ಬ್ಯಾರಿಸ್ಟರ್
ಆಗುತ್ತಾರೆ. ನೀವಿಲ್ಲಿ ಡಬಲ್ ಕಿರೀಟಧಾರಿಗಳಾಗಲು ಓದುತ್ತೀರಿ. ಒಂದುವೇಳೆ
ತೇರ್ಗಡೆಯಾಗುತ್ತೀರೆಂದರೆ ಅವಶ್ಯವಾಗಿ ಡಬಲ್ ಕಿರೀಟಧಾರಿಗಳಾಗುತ್ತೀರಿ. ಆದರೆ ಸ್ವರ್ಗದಲ್ಲಂತೂ
ಅವಶ್ಯವಾಗಿ ಬರುತ್ತಾರೆ. ನಿಮಗೆ ತಿಳಿದಿದೆ - ತಂದೆಯು ಸದಾ ಅಲ್ಲಿಯೇ ಇರುತ್ತಾರೆ. ಓ ಗಾಡ್ ಫಾದರ್
ಎಂದು ಹೇಳಿದಾಗಲೂ ದೃಷ್ಟಿಯು ಮೇಲೆ ಹೋಗುತ್ತದೆ. ಪರಮಪಿತ ಪರಮಾತ್ಮನಿದ್ದಾರೆ ಅಂದಮೇಲೆ ಅವರದು
ಪಾತ್ರವೂ ಇರಬೇಕಲ್ಲವೆ. ಈಗ ಪಾತ್ರವನ್ನಭಿನಯಿಸುತ್ತಿದ್ದಾರೆ, ಅವರಿಗೆ ಹೂದೋಟದ ಮಾಲೀಕನೆಂದೂ
ಹೇಳುತ್ತಾರೆ. ಈಗ ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಿದ್ದಾರೆ ಅಂದಾಗ ನೀವು ಮಕ್ಕಳಿಗೆ
ಖುಷಿಯಿರಬೇಕು. ತಂದೆಯು ಈ ಪರದೇಶದಲ್ಲಿ ಬಂದಿದ್ದಾರೆ. ದೂರ ದೇಶದಲ್ಲಿರುವವರು ಪರದೇಶದಲ್ಲಿ ಬಂದರು......
ದೂರ ದೇಶದ ನಿವಾಸಿಯು ತಂದೆಯೇ ಆಗಿದ್ದಾರೆ ಮತ್ತು ನೀವಾತ್ಮಗಳು ಅಲ್ಲಿರುತ್ತೀರಿ. ಇಲ್ಲಿಗೆ
ಪಾತ್ರವನ್ನಭಿನಯಿಸಲು ಬರುತ್ತೀರಿ. ಪರದೇಶದ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಮನುಷ್ಯರಂತೂ
ಭಕ್ತಿಮಾರ್ಗದಲ್ಲಿ ಏನನ್ನು ಕೇಳುವರೋ ಅದನ್ನೇ ಸತ್ಯ-ಸತ್ಯವೆಂದು ಹೇಳುತ್ತಿರುತ್ತಾರೆ. ನೀವು
ಮಕ್ಕಳಿಗೆ ತಂದೆಯು ಎಷ್ಟು ಚೆನ್ನಾಗಿ ತಿಳಿಸಿಕೊಡುತ್ತಾರೆ! ಆತ್ಮವು ಅಪವಿತ್ರವಾಗಿರುವ ಕಾರಣ
ಹಾರಲಾಗುತ್ತಿಲ್ಲ. ಪವಿತ್ರರಾಗದೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ತಂದೆಯೊಬ್ಬರಿಗೇ
ಪತಿತ-ಪಾವನನೆಂದು ಹೇಳಲಾಗುತ್ತದೆ. ಅವರು ಸಂಗಮಯುಗದಲ್ಲಿಯೇ ಬರುತ್ತಾರೆ ಅಂದಾಗ ನಿಮಗೆ ಎಷ್ಟು
ಖುಷಿಯಿರಬೇಕು - ತಂದೆಯು ನಮ್ಮನ್ನು ಡಬಲ್ ಕಿರೀಟಧಾರಿಗಳನ್ನಾಗಿ ಮಾಡುತ್ತಿದ್ದಾರೆ, ಇದಕ್ಕಿಂತ
ಶ್ರೇಷ್ಠ ಪದವಿಯು ಮತ್ತ್ಯಾವುದೂ ಇಲ್ಲ. ತಂದೆಯು ತಿಳಿಸುತ್ತಾರೆ - ನಾನು ಡಬಲ್
ಕಿರೀಟಧಾರಿಯಾಗುವುದಿಲ್ಲ, ನಾನು ಒಂದೇ ಬಾರಿ ಪರ ದೇಶ, ಪರ ಶರೀರದಲ್ಲಿ ಬರುತ್ತೇನೆ. ಈ ದಾದಾರವರೂ
ಸಹ ಹೇಳುತ್ತಾರೆ - ನಾನು ಶಿವನಲ್ಲ, ನನಗೆ ಲಕ್ಕಿರಾಜ್ ಎಂದು ಹೇಳುತ್ತಿದ್ದರು ನಂತರ ಸಮರ್ಪಣೆಯಾದ
ನಂತರ ಶಿವ ತಂದೆಯು ನನಗೆ ಬ್ರಹ್ಮಾನೆಂದು ಹೆಸರಿಟ್ಟರು. ಇವರಲ್ಲಿ ಪ್ರವೇಶ ಮಾಡಿ ತಿಳಿಸಿದರು -
ನೀವೆಲ್ಲರೂ ತಮ್ಮ ಜನ್ಮಗಳ ಬಗ್ಗೆ ಅರಿತುಕೊಂಡಿಲ್ಲ. 84 ಜನ್ಮಗಳ ಲೆಕ್ಕವೂ ಇರಬೇಕಲ್ಲವೆ. ಮನುಷ್ಯರು
84 ಲಕ್ಷ ಜನ್ಮಗಳೆಂದು ಹೇಳಿ ಬಿಡುತ್ತಾರೆ ಆದರೆ ಇದು ಅಸಂಭವವಾಗಿದೆ. 84 ಲಕ್ಷ ಜನ್ಮಗಳ
ರಹಸ್ಯವನ್ನು ತಿಳಿಸುವುದರಲ್ಲಿಯೇ ಸಾವಿರಾರು ವರ್ಷಗಳು ಹಿಡಿಸುವುದು, ಅದು ನೆನಪಿರಲೂ ಸಾಧ್ಯವಿಲ್ಲ.
ಪಶು ಪಕ್ಷಿಗಳು 84 ಲಕ್ಷ ಯೋನಿಗಳಲ್ಲಿ ಬಂದು ಬಿಡುತ್ತವೆ. ಮನುಷ್ಯನ ಜನ್ಮವೇ ದುರ್ಲಬವೆಂದು
ಗಾಯನವಿದೆ ಏಕೆಂದರೆ ಪ್ರಾಣಿ ಪಕ್ಷಿಗಳು ಜ್ಞಾನವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯು ಬಂದು
ನಿಮಗೆ ಜ್ಞಾನವನ್ನು ತಿಳಿಸುತ್ತಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ಮಕ್ಕಳೇ, ನಾನು ರಾವಣ
ರಾಜ್ಯದಲ್ಲಿ ಬರುತ್ತೇನೆ, ಮಾಯೆಯು ನಿಮ್ಮನ್ನು ಎಷ್ಟು ಕಲ್ಲು ಬುದ್ಧಿಯವರನ್ನಾಗಿ ಮಾಡಿ ಬಿಟ್ಟಿದೆ,
ಈಗ ಪುನಃ ತಂದೆಯು ನಿಮ್ಮನ್ನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ. ಇಳಿಯುವ ಕಲೆಯಲ್ಲಿ ನೀವು
ಕಲ್ಲು ಬುದ್ಧಿಯವರಾಗಿ ಬಿಟ್ಟಿರಿ. ಈಗ ಮತ್ತೆ ತಂದೆಯು ಏರುವ ಕಲೆಯಲ್ಲಿ ಕರೆದುಕೊಂಡು ಹೋಗುತ್ತಾರೆ.
ನಂಬರ್ವಾರಂತೂ ಇರುತ್ತಾರಲ್ಲವೆ. ಪ್ರತಿಯೊಬ್ಬರೂ ತಮ್ಮ ಪುರುಷಾರ್ಥದಿಂದ ತಿಳಿದುಕೊಳ್ಳಬಹುದು.
ಮುಖ್ಯ ಮಾತು ನೆನಪಿನದಾಗಿದೆ. ರಾತ್ರಿ ಮಲಗುವಾಗಲೂ ಸಹ ಇದೇ ಚಿಂತನೆ ಮಾಡಿ, ಬಾಬಾ ನಾವು ತಮ್ಮ
ನೆನಪಿನಲ್ಲಿ ಮಲಗುತ್ತೇವೆ ಅಂದರೆ ನಾವು ಈ ಶರೀರವನ್ನು ಬಿಟ್ಟು ತಮ್ಮ ಬಳಿಗೆ ಬರುತ್ತೇವೆ. ಹೀಗೆ
ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಮಲಗಿರಿ ಆಗ ನೋಡಿ, ಎಷ್ಟು ಆನಂದವಾಗುತ್ತದೆ!
ಸಾಕ್ಷಾತ್ಕಾರವೂ ಆಗುವ ಸಾಧ್ಯತೆಯಿದೆ ಆದರೆ ಈ ಸಾಕ್ಷಾತ್ಕಾರ ಮೊದಲಾದುವುಗಳಲ್ಲಿ ಖುಷಿಯಾಗಿ
ಬಿಡಬಾರದು. ಬಾಬಾ, ನಾವಂತೂ ತಮ್ಮನ್ನೇ ನೆನಪು ಮಾಡುತ್ತೇವೆ. ತಮ್ಮ ಬಳಿ ಬರಲು ಬಯಸುತ್ತೇವೆ ಎಂದು
ತಂದೆಯನ್ನು ನೆನಪು ಮಾಡುತ್ತಾ ಮಾಡುತ್ತಾ ನೀವು ಬಹಳ ಆರಾಮವಾಗಿ ಹೊರಟು ಹೋಗುವಿರಿ.
ಸೂಕ್ಷ್ಮವತನದಲ್ಲಿಯೂ ಹೋಗಬಹುದು, ಮೂಲವತನಕ್ಕಂತೂ ಹೋಗಲು ಸಾಧ್ಯವಿಲ್ಲ. ಇನ್ನೂ ಹಿಂತಿರುಗಿ ಹೋಗುವ
ಸಮಯವೆಲ್ಲಿ ಬಂದಿದೆ! ಹಾ ಬಿಂದುವಿನ ಸಾಕ್ಷಾತ್ಕಾರವಾಯಿತೆಂದರೆ ಚಿಕ್ಕ-ಚಿಕ್ಕ ಆತ್ಮಗಳ ವೃಕ್ಷವು
ಕಾಣಿಸುವುದು. ಹೇಗೆ ನಿಮಗೆ ವೈಕುಂಠದ ಸಾಕ್ಷಾತ್ಕಾರವಾಯಿತಲ್ಲವೆ. ಸಾಕ್ಷಾತ್ಕಾರವಾದ ಮಾತ್ರಕ್ಕೆ
ನೀವು ವೈಕುಂಠದಲ್ಲಿ ಹೋಗಿ ಬಿಡುವುದಿಲ್ಲ ಅದಕ್ಕಾಗಿ ಮತ್ತೆ ಪರಿಶ್ರಮ ಪಡಬೇಕಾಗುವುದು. ನೀವು
ಮೊಟ್ಟ ಮೊದಲಿಗೆ ಮಧುರ ಮನೆಗೆ ಹೋಗುತ್ತೀರಿ, ಎಲ್ಲಾ ಆತ್ಮರು ಪಾತ್ರವನ್ನಭಿನಯಿಸುವುದರಿಂದ
ಮುಕ್ತರಾಗಿ ಬಿಡುತ್ತಾರೆ. ಎಲ್ಲಿಯವರೆಗೆ ಆತ್ಮವು ಪವಿತ್ರವಾಗುವುದಿಲ್ಲವೋ ಅಲ್ಲಿಯವರೆಗೆ ಹೋಗಲು
ಸಾಧ್ಯವಿಲ್ಲ. ಬಾಕಿ ಸಾಕ್ಷಾತ್ಕಾರದಿಂದ ಸಿಗುವುದೇನೂ ಇಲ್ಲ. ಮೀರಾಳಿಗೆ ಸಾಕ್ಷಾತ್ಕಾರವಾಯಿತು ಆದರೆ
ವೈಕುಂಠದಲ್ಲಿ ಹೋದಳೆ! ವೈಕುಂಠವು ಸತ್ಯಯುಗದಲ್ಲಿಯೇ ಇರುತ್ತದೆ. ನೀವೀಗ ವೈಕುಂಠದ ಮಾಲೀಕರಾಗಲು
ತಯಾರು ಮಾಡಿಕೊಳ್ಳುತ್ತಿದ್ದೀರಿ. ತಂದೆಯು ಧ್ಯಾನದಲ್ಲಿ ಹೋಗಲು ಬಿಡುವುದಿಲ್ಲ ಏಕೆಂದರೆ ನೀವೀಗ
ಓದಬೇಕಲ್ಲವೆ. ತಂದೆಯು ಬಂದು ಓದಿಸುತ್ತಾರೆ, ಸರ್ವರ ಸದ್ಗತಿ ಮಾಡುತ್ತಾರೆ. ವಿನಾಶವೂ ಸನ್ಮುಖದಲ್ಲಿ
ನಿಂತಿದೆ ಬಾಕಿ ಅಸುರರು ಮತ್ತು ದೇವತೆಗಳ ಯುದ್ಧವಂತೂ ಇಲ್ಲ. ಅವರು ಪರಸ್ಪರ ನಿಮಗಾಗಿಯೇ
ಹೊಡೆದಾಡುತ್ತಾರೆ ಏಕೆಂದರೆ ಈಗ ನಿಮಗೆ ಹೊಸ ಪ್ರಪಂಚ ಬೇಕು. ಮಾಯೆಯ ಜೊತೆ ನಿಮ್ಮ ಯುದ್ಧವಿದೆ. ನೀವು
ಬಹಳ ಪ್ರಸಿದ್ಧ ಯೋಧರಾಗಿದ್ದೀರಿ ಆದರೆ ದೇವಿಯರಿಗೆ ಇಷ್ಟೊಂದು ಗಾಯನ ಏಕೆ ಇದೆ ಎಂಬುದನ್ನು ಯಾರೂ
ತಿಳಿದುಕೊಂಡಿಲ್ಲ. ನೀವೀಗ ಭಾರತವನ್ನು ಯೋಗ ಬಲದಿಂದ ಸ್ವರ್ಗವನ್ನಾಗಿ ಮಾಡುತ್ತೀರಿ, ಈಗ ನಿಮಗೆ
ತಂದೆಯು ಸಿಕ್ಕಿದ್ದಾರೆ. ತಂದೆಯು ತಿಳಿಸುತ್ತಾ ಇರುತ್ತಾರೆ - ಜ್ಞಾನದಿಂದ ಹೊಸ ಪ್ರಪಂಚವಾಗುತ್ತದೆ.
ಈ ಲಕ್ಷ್ಮೀ-ನಾರಾಯಣರೇ ಹೊಸ ಪ್ರಪಂಚದ ಮಾಲೀಕರಾಗಿದ್ದರಲ್ಲವೆ. ಈಗ ಹಳೆಯ ಪ್ರಪಂಚವಾಗಿದೆ,
ಅಣ್ವಸ್ತ್ರಗಳ ಮೂಲಕ ಹಳೆಯ ಪ್ರಪಂಚದ ವಿನಾಶವು ಕಲ್ಪದ ಹಿಂದೆಯೂ ಆಗಿತ್ತು, ಮಹಾಭಾರತ ಯುದ್ಧವು
ನಡೆದಿತ್ತು, ಆ ಸಮಯದಲ್ಲಿ ತಂದೆಯು ರಾಜಯೋಗವನ್ನು ಕಲಿಸುತ್ತಿದ್ದರು. ಅದೇ ರೀತಿಯಲ್ಲಿ ಈಗಲೂ
ತಂದೆಯು ಸನ್ಮುಖದಲ್ಲಿ ರಾಜಯೋಗವನ್ನು ಕಲಿಸುತ್ತಿದ್ದಾರಲ್ಲವೆ. ತಂದೆಯೇ ನಿಮಗೆ ಸತ್ಯವನ್ನು
ತಿಳಿಸುತ್ತಾರೆ. ಸತ್ಯ ತಂದೆಯು ಬರುತ್ತಾರೆ ಆದ್ದರಿಂದ ನೀವು ಸದಾ ಖುಷಿಯಲ್ಲಿ ನರ್ತನ ಮಾಡುತ್ತೀರಿ,
ಇದು ಜ್ಞಾನದ ನರ್ತನವಾಗಿದೆ ಅಂದಾಗ ಯಾರಿಗೆ ಜ್ಞಾನದ ನರ್ತನದಲ್ಲಿ ಆಸಕ್ತಿಯಿದೆಯೋ ಅವರೇ
ಸನ್ಮುಖದಲ್ಲಿ ಕುಳಿತುಕೊಳ್ಳಿ. ಯಾರಿಗೆ ಅರ್ಥವಾಗುವುದಿಲ್ಲವೋ ಅವರಿಗೆ ಆಕಳಿಕೆ ಬರುತ್ತದೆ. ಇವರು
ಏನನ್ನೂ ಅರ್ಥ ಮಾಡಿಕೊಳ್ಳುವುದಿಲ್ಲವೆಂದು ಇದರಿಂದಲೇ ಅರ್ಥವಾಗುತ್ತದೆ. ಜ್ಞಾನವನ್ನು ಅರ್ಥ
ಮಾಡಿಕೊಳ್ಳದೇ ಇರುವವರು ಆ ಕಡೆ-ಈ ಕಡೆ ನೋಡುತ್ತಾ ಇರುತ್ತಾರೆ. ನೀವು ಎಂತಹವರನ್ನು ಕರೆ
ತಂದಿದ್ದೀರಿ ಎಂದು ತಂದೆಯು ಬ್ರಾಹ್ಮಿಣಿಯರಿಗೂ ಹೇಳುತ್ತಾರೆ. ಯಾರು ಕಲಿಯುತ್ತಾರೆ ಮತ್ತು
ಕಲಿಸುತ್ತಾರೆಯೋ ಅವರು ಸನ್ಮುಖದಲ್ಲಿ ಕುಳಿತುಕೊಳ್ಳಬೇಕು, ಅವರಿಗೇ ಖುಷಿಯಾಗುತ್ತಿರುತ್ತದೆ. ಇದು
ಜ್ಞಾನ ನರ್ತನವಾಗಿದೆ, ನಾವೂ ಸಹ ನರ್ತನ ಮಾಡಬೇಕಾಗಿದೆ. ಕೃಷ್ಣನಂತೂ ಜ್ಞಾನವನ್ನು ತಿಳಿಸಲಿಲ್ಲ,
ನರ್ತನವೂ ಮಾಡಲಿಲ್ಲ. ಇದು ಜ್ಞಾನದ ಮುರುಳಿಯಲ್ಲವೆ ಅಂದಾಗ ತಂದೆಯು ತಿಳಿಸಿದ್ದಾರೆ - ರಾತ್ರಿ
ಮಲಗುವ ಸಮಯದಲ್ಲಿ ತಂದೆಯನ್ನು ನೆನಪು ಮಾಡುತ್ತಾ ಚಕ್ರವನ್ನು ಬುದ್ಧಿಯಲ್ಲಿ ನೆನಪು ಮಾಡುತ್ತಾ ಇರಿ.
ಬಾಬಾ, ನಾವೀಗ ಈ ಶರೀರವನ್ನು ಬಿಟ್ಟು ತಮ್ಮ ಬಳಿ ಬರುತ್ತೇವೆ, ಹೀಗೆ ನೆನಪು ಮಾಡುತ್ತಾ-ಮಾಡುತ್ತಾ
ಮಲಗಿರಿ ಆಗ ನೋಡಿ ಏನಾಗುತ್ತದೆ. ಆರಂಭದಲ್ಲಿ ಕೆಲವರು ಶಾಂತಿಯಲ್ಲಿ ಹೊರಟು ಹೋಗುತ್ತಿದ್ದರು, ಇನ್ನೂ
ಕೆಲವರು ನೃತ್ಯ ಮಾಡುತ್ತಿದ್ದರು, ಧ್ಯಾನದಲ್ಲಿ ಹೊರಟು ಹೋಗುತ್ತಿದ್ದರು. ಯಾರು ತಂದೆಯನ್ನೇ
ಅರಿತುಕೊಂಡಿಲ್ಲವೋ ಅವರು ಹೇಗೆ ನೆನಪು ಮಾಡಲು ಸಾಧ್ಯ. ಮನುಷ್ಯ ಮಾತ್ರರು ತಂದೆಯನ್ನೇ
ಅರಿತುಕೊಂಡಿಲ್ಲ ಅಂದಮೇಲೆ ತಂದೆಯನ್ನು ಹೇಗೆ ನೆನಪು ಮಾಡುವರು! ಆದ್ದರಿಂದಲೇ ತಂದೆಯು
ತಿಳಿಸುತ್ತಾರೆ - ನಾನು ಯಾರಾಗಿದ್ದೇನೆ, ಹೇಗಿದ್ದೇನೆಯೋ ಅದೇ ರೀತಿಯಲ್ಲಿ ನನ್ನನ್ನು ಯಾರೂ
ತಿಳಿದುಕೊಂಡಿಲ್ಲ.
ಈಗ ನಿಮಗೆ ಎಷ್ಟೊಂದು
ತಿಳುವಳಿಕೆ ಬಂದಿದೆ! ನೀವು ಗುಪ್ತ ಯೋಧರಾಗಿದ್ದೀರಿ. ಯೋಧರ ಹೆಸರನ್ನು ಕೇಳಿ ದೇವಿಯರಿಗೆ
ಕತ್ತಿ-ಬಾಣಗಳನ್ನು ತೋರಿಸಿದ್ದಾರೆ. ನೀವು ಯೋಗ ಬಲದ ಯೋಧರಾಗಿದ್ದೀರಿ, ಯೋಗ ಬಲದಿಂದ ವಿಶ್ವದ
ಮಾಲೀಕರಾಗುತ್ತೀರಿ. ಬಾಹು ಬಲದಿಂದ ಭಲೆ ಯಾರೆಷ್ಟಾದರೂ ಪ್ರಯತ್ನ ಪಡಲಿ ಆದರೆ ವಿಜಯಿಗಳಾಗಲು
ಸಾಧ್ಯವಿಲ್ಲ. ಭಾರತದ ಯೋಗವು ಪ್ರಸಿದ್ಧವಾಗಿದೆ, ಇದನ್ನು ತಂದೆಯೇ ಬಂದು ಕಲಿಸಿ ಕೊಡುತ್ತಾರೆ. ಇದೂ
ಸಹ ಯಾರಿಗೂ ಗೊತ್ತಿಲ್ಲ. ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನೇ ನೆನಪು ಮಾಡುತ್ತಾ ಇರಿ. ಯೋಗವು
ಹಿಡಿಸುವುದಿಲ್ಲವೆಂದು ಕೆಲವರು ಹೇಳುತ್ತಾರೆ, ಯೋಗ ಶಬ್ಧವನ್ನೇ ತೆಗೆದು ಹಾಕಿ. ಮಕ್ಕಳು ತಂದೆಯನ್ನು
ನೆನಪು ಮಾಡುತ್ತಾರಲ್ಲವೆ. ಹಾಗೆಯೇ ಶಿವ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ
ನೆನಪು ಮಾಡಿ, ನಾನೇ ಸರ್ವ ಶಕ್ತಿವಂತನಾಗಿದ್ದೇನೆ, ನನ್ನನ್ನು ನೆನಪು ಮಾಡುವುದರಿಂದ ನೀವು
ಸತೋಪ್ರಧಾನರಾಗಿ ಬಿಡುವಿರಿ. ಯಾವಾಗ ಸತೋಪ್ರಧಾನರಾಗಿ ಬಿಡುತ್ತೀರೋ ಆಗ ಆತ್ಮಗಳ ಮೆರವಣಿಗೆಯು
ನಡೆಯುವುದು. ಹೇಗೆ ನೊಣಗಳ ಹಿಂಡು ಹೋಗುತ್ತದೆಯಲ್ಲವೆ ಹಾಗೆಯೇ ಇದೂ ಶಿವ ತಂದೆಯ ಮೆರವಣಿಗೆಯಾಗಿದೆ.
ಶಿವ ತಂದೆಯ ಹಿಂದೆ ಎಲ್ಲಾ ಆತ್ಮಗಳು ಸೊಳ್ಳೆಗಳೋಪಾದಿಯಲ್ಲಿ ಹೊರಟು ಹೋಗುವರು. ಉಳಿದಂತೆ
ಶರೀರಗಳೆಲ್ಲವೂ ಸಮಾಪ್ತಿಯಾಗಿ ಬಿಡುತ್ತವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ರಾತ್ರಿ
ಮಲಗುವ ಮೊದಲು ತಂದೆಯೊಂದಿಗೆ ಮಧುರಾತಿ ಮಧುರವಾಗಿ ಮಾತನಾಡಬೇಕಾಗಿದೆ. ಬಾಬಾ, ನಾವು ಈ ಶರೀರವನ್ನು
ಬಿಟ್ಟು ತಮ್ಮ ಬಳಿ ಬರುತ್ತೇವೆ - ಹೀಗೆ ನೆನಪು ಮಾಡುತ್ತಾ ಮಲಗಬೇಕಾಗಿದೆ. ನೆನಪೇ ಮುಖ್ಯವಾಗಿದೆ,
ನೆನಪಿನಿಂದಲೇ ಪಾರಸ ಬುದ್ಧಿಯವರಾಗುತ್ತೀರಿ.
2. ಪಂಚ ವಿಕಾರಗಳ
ಕಾಯಿಲೆಯಿಂದ ಮುಕ್ತರಾಗಲು ಆತ್ಮಾಭಿಮಾನಿಯಾಗಿರುವ ಪುರುಷಾರ್ಥ ಮಾಡಬೇಕಾಗಿದೆ. ಅಪಾರ
ಖುಷಿಯಲ್ಲಿರಬೇಕು, ಜ್ಞಾನ ನರ್ತನ ಮಾಡಬೇಕಾಗಿದೆ. ತರಗತಿಯಲ್ಲಿ ಆಲಸ್ಯದ ವಾಯುಮಂಡಲವನ್ನು ಹರಡಬಾರದು.
ವರದಾನ:
ಸೇವೆಯ ಮೂಲಕ
ಅನೇಕ ಆತ್ಮರ ಆಶೀರ್ವಾದವನ್ನು ಪ್ರಾಪ್ತಿಮಾಡಿಕೊಂಡು ಸದಾ ಮುಂದುವರೆಯುವ ಮಹಾದಾನಿ ಭವ.
ಮಹಾದಾನಿಯಾಗುವುದು
ಅರ್ಥಾತ್ ಅನ್ಯರ ಸೇವೆ ಮಾಡುವುದು, ಅನ್ಯರ ಸೇವೆಯನ್ನು ಮಾಡುವುದರಿಂದ ಸ್ವಯಂನ ಸೇವೆಯು ಸ್ವತಹವಾಗಿ
ಆಗಿ ಬಿಡುತ್ತದೆ. ಮಹಾದಾನಿ ಆಗುವುದು ಅರ್ಥಾತ್ ಸ್ವಯಂನ್ನು ಸಂಪನ್ನ ಮಾಡಿಕೊಳ್ಳುವುದು, ಎಷ್ಟು
ಆತ್ಮರಿಗೆ ಸುಖ, ಶಕ್ತಿ ಹಾಗೂ ಜ್ಞಾನ ದಾನ ಮಾಡುತ್ತೀರಿ, ಅಷ್ಟು ಆತ್ಮರಿಗೆ ಪ್ರಾಪ್ತಿಯ ಧ್ವನಿ
ಅಥವ ಧನ್ಯವಾದಗಳೇನು ಬರುತ್ತದೆ, ಅದು ತಮಗಾಗಿ ಆಶೀರ್ವಾದದ ರೂಪವಾಗಿ ಬಿಡುತ್ತದೆ. ಈ ಆಶೀರ್ವಾದಗಳೇ
ಮುಂದುವರೆಯುವ ಸಾಧನವಾಗಿದೆ. ಯಾರಿಗೆ ಆಶೀರ್ವಾದವು ಸಿಗುತ್ತದೆ, ಅವರು ಸದಾ ಖುಷಿಯಾಗಿರುತ್ತಾರೆ.
ಅಂದಾಗ ಪ್ರತಿನಿತ್ಯ ಅಮೃತವೇಳೆಯಲ್ಲಿ ಮಹಾದಾನಿಯಾಗುವ ಕಾರ್ಯಕ್ರಮ ಹಾಕಿಕೊಳ್ಳಿರಿ. ಯಾವುದೇ ಸಮಯ
ಅಥವ ದಿನವು ಹೀಗಾಗಬಾರದು, ಅದರಲ್ಲಿ ದಾನವಾಗಲಿಲ್ಲ ಎನ್ನುವಂತೆ.
ಸ್ಲೋಗನ್:
ಈಗಿನ
ಪ್ರತ್ಯಕ್ಷ ಫಲವು ಆತ್ಮಕ್ಕೆ ಹಾರುವ ಕಲೆಯ ಬಲವನ್ನು ಕೊಡುತ್ತದೆ.
ಅವ್ಯಕ್ತ ಸೂಚನೆ:-
ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.
ತಂದೆಯ ಸಮಾನ ಹಾಗು
ಸಮೀಪರಾಗುವುದಕ್ಕಾಗಿ ದೇಹದಲ್ಲಿರುತ್ತಾ ವಿದೇಹಿಯಾಗುವ ಅಭ್ಯಾಸ ಮಾಡಿ. ಹೇಗೆ ಕರ್ಮಾತೀತರಾಗುವ
ಉದಾಹರಣೆ ಸಾಕಾರದಲ್ಲಿ ಬ್ರಹ್ಮಾ ಬಾಬಾರವರನ್ನು ನೋಡಿದಿರಿ, ಅದೇ ರೀತಿ ಫಾಲೋ ಫಾದರ್ ಮಾಡಿ.
ಎಲ್ಲಿಯವರೆಗೂ ದೇಹವಿದೆಯೋ ಕಮೇರ್ಂದ್ರಿಯಗಳ ಜೊತೆ ಈ ಕರ್ಮ ಕ್ಷೇತ್ರದಲ್ಲಿ ಪಾತ್ರ ಮಾಡುತ್ತಿರುವಿರಿ,
ಅಲ್ಲಿಯವರೆಗೂ ಕರ್ಮ ಮಾಡುತ್ತ ಕರ್ಮೇಂದ್ರಿಯಗಳ ಆಧಾರ ತೆಗೆದುಕೊಳ್ಳಿ ಹಾಗು ಭಿನ್ನರಾಗಿ ಬಿಡಿ, ಈ
ಅಭ್ಯಾಸವೇ ವಿದೇಹಿಯನ್ನಾಗಿ ಮಾಡುವುದು.