08.11.26 Avyakt Bapdada
Kannada
Murli 18.11.2071 Om Shanti Madhuban
ದೀಪಾವಳಿ - ಚೈತನ್ಯ
ದೀಪಗಳ ಮಾಲೆಯ ನೆನಪಾರ್ಥ
ಇಂದು ಬಾಪ್ದಾದಾರವರು
ಏನನ್ನು ನೋಡುತ್ತಿದ್ದಾರೆ? ತಾವು ದೀಪಗಳ ಮಾಲೆಯನ್ನು ನೋಡುವುದಕ್ಕಾಗಿ ಬಂದಿದ್ದಾರೆ. ದೀಪಾವಳಿಯ
ನೆನಪಾರ್ಥದ ದಿನವನ್ನಂತು ಜನರು ಆಚರಿಸುತ್ತಾರೆ ಆದರೆ ಬಾಪ್ದಾದಾರವರು ಚೈತನ್ಯ ದೀಪಗಳ ಮಾಲೆಯನ್ನು
ನೋಡುತ್ತಿದ್ದಾರೆ. ತಾವೆಲ್ಲರೂ ಸಹ ಯಾವಾಗ ದೀಪಾವಳಿಯ ದಿನದಂದು ಜಾಗೃತವಾಗಿದ್ದು ದೀಪಗಳನ್ನು
ನೋಡುತ್ತೀರೆಂದರೆ, ಇಂತಹ ಖುಷಿಯಾಗುತ್ತದೆಯೇ- ನಮ್ಮ ನೆನಪಾರ್ಥವನ್ನೇ ಆಚರಿಸುತ್ತಿದ್ದಾರೆ? ಹೇಗೆ
ಬೆಳಗಿರುವ ಜ್ಯೋತಿಯು ಪ್ರಿಯವೆನಿಸುತ್ತದೆಯೋ ಹಾಗೆಯೇ ತಮ್ಮ ನೆನಪಾರ್ಥವನ್ನು ನೋಡಿ ಸ್ಮೃತಿ
ಬರುವುದರಿಂದ, ತಾವೆಲ್ಲರೂ ಸಹ ವಿಶ್ವದ ತಂದೆ ಹಾಗೂ ಇಡೀ ವಿಶ್ವದ ಆತ್ಮರುಗಳಿಗೆ ಪ್ರಿಯರಾಗುತ್ತೀರಿ.
ಇಂದು ನೆನಪಾರ್ಥ ರೂಪವನ್ನು ಪ್ರತ್ಯಕ್ಷವಾಗಿ ನೋಡುವುದಕ್ಕಾಗಿ ಬಂದಿದ್ದೇವೆ. ಮಾಲೆಯಲ್ಲಿ ಒಂದು
ಮಣಿಯಷ್ಟೇ ಇರುವುದಿಲ್ಲ, ಅನೇಕರ ಮಾಲೆಯಾಗುತ್ತದೆ. ಅದರಿಂದೇನಾದರೂ ಒಂದು ದೀಪವು ಬೇರೆಯಾಗಿ
ಬೆಳಗುತ್ತಿರುತ್ತದೆಯೆಂದರೆ, ಅದನ್ನು ದೀಪಮಾಲೆಯೆಂದು ಹೇಳುವುದಿಲ್ಲ. ಅದೇರೀತಿಯಲ್ಲಿ
ಬೆಳಗುತ್ತಿರುವ ಅನೇಕ ದೀಪಗಳು ಮಾಲೆಯ ರೂಪದಲ್ಲಿ ಕಂಡು ಬರುತ್ತದೆ. ಪ್ರತಿಯೊಬ್ಬರೂ ತಮ್ಮನ್ನು ಈ
ದೀಪ ಮಾಲೆಯಲ್ಲಿ ಪೋಣಿಸಲ್ಪಟ್ಟಿರುವ, ಬೆಳಗುತ್ತಿರುವ ದೀಪವೆಂದು ತಿಳಿಯುತ್ತೀರಾ? ಅಥವಾ ತಾವೂ ಸಹ
ಬೆಳಗುತ್ತಿರುವ ಅನೇಕ ದೀಪಗಳನ್ನು ನೋಡಿ ಹರ್ಷಿತವಾಗುತ್ತೀರಾ? ದೀಪಾವಳಿ ಈ ದಿನದಂದು ತಾವೆಲ್ಲರೂ
ದೀಪಾವಳಿ ಆಚರಿಸಿದಿರಾ? ಇಂದು ದೀಪಾವಳಿಯನ್ನು ವಿಶೇಷವಾಗಿ ಆಚರಿಸಿದಿರಾ? ತಾವಂತು ಸದಾಕಾಲ
ಬೆಳಗುತ್ತಿರುವ ದೀಪವಾಗಿದ್ದೀರಿ ಆದರೆ ಯಾವಾಗ ವಿಶೇಷ ನೆನಪಾರ್ಥದ ದಿನವಿರುತ್ತದೆಯೋ ಆಗ ವಿಶೇಷ
ಆತ್ಮರುಗಳು ಏನು ಮಾಡಬೇಕಾಗಿದೆ? ವಿಶೇಷ ಆತ್ಮರಲ್ಲಿ ಯಾರು ವಿಶೇಷ ರೂಪದಿಂದ ನಿಮಿತ್ತವಾಗಿದ್ದಾರೆಯೋ,
ಅವರುಗಳು ವಿಶೇಷವಾದ ಸೇವೆಯನ್ನೇನು ಮಾಡಬೇಕು? ವಿಶೇಷ ಆತ್ಮರುಗಳಂತು ಅನ್ಯರಿಗಿಂತ ವಿಶೇಷವಾದ
ಕಾರ್ಯವನ್ನು ಮಾಡಬೇಕಲ್ಲವೆ ಏಕೆಂದರೆ ಅನ್ಯ ಆತ್ಮರು ಯಾವ ಕಾರ್ಯವನ್ನು ಮಾಡಲು ಸಾಧ್ಯವಿದೆ ಹಾಗೂ
ಮಾಡುತ್ತಿದ್ದಾರೆಯೋ ಅದನ್ನೇ ತಾವೂ ಸಹ ಮಾಡುತ್ತೀರೆಂದರೆ ಅಂತರವೇನಾಯಿತು? ವಿಶೇಷ ಆತ್ಮರು ವಿಶೇಷ
ಕಾರ್ಯವನ್ನು ಮಾಡಬೇಕು. ಬಾಪ್ದಾದಾರವರು ವಿಶೇಷ ದಿನಗಳಲ್ಲಿ ವಿಶೇಷ ರೂಪದಿಂದ ಮಕ್ಕಳ ಹಾಗೂ ಭಕ್ತರ
ಸೇವೆಯನ್ನು ಮೂರೂ ರೂಪಗಳಿಂದ ಮಾಡುತ್ತಾರೆ. ವಿಶೇಷವಾಗಿ ವಿಶೇಷ ಅತ್ಮರು ತಮ್ಮ ನೆನಪಾರ್ಥ ದಿನದಂದು
ಸಾಕ್ಷಾತ್ಕಾರ ಮೂರ್ತಿಯಾಗಿದ್ದು, ಸಾಕ್ಷಾತ್ ಬಾಪ್ದಾದಾರವರ ಸಮಾನರಾಗಿ, ಆತ್ಮರುಗಳ ಬಗ್ಗೆ ತಮ್ಮ
ಕಲ್ಯಾಣದ ಭಾವನೆಯಿಂದ, ತಮ್ಮ ಆತ್ಮಿಕ ಸ್ನೇಹ ಸ್ವರೂಪದಿಂದ, ತಮ್ಮ ಸೂಕ್ಷ್ಮ ಶಕ್ತಿಗಳ ಮೂಲಕ
ಶಕ್ತಿಯನ್ನು ತುಂಬಬೇಕಾಗಿದೆ. ಹೇಗೆ ಬಾಪ್ದಾದಾರವರು ಅವ್ಯಕ್ತರೂಪದಲ್ಲಿಯೂ ನಾಲ್ಕೂ ಕಡೆಯಲ್ಲಿರುವ
ಮಕ್ಕಳ ಸೇವೆಯನ್ನು ಮಾಡುತ್ತಾರೆ, ಆ ಮಕ್ಕಳು ತಿಳಿಯುತ್ತಾರೆ - ಬಾಪ್ದಾದಾರವರು ನನ್ನೊಂದಿಗೆ
ವಾರ್ತಲಾಪ ಮಾಡಿದರು, ನನ್ನ ನೆನಪಿನ ಪ್ರತ್ಯುತ್ತರವನ್ನು ಕೊಟ್ಟರು ಅಥವಾ ನಾನು ನನ್ನ ನೆನಪಿನ
ಪ್ರತ್ಯಕ್ಷ ಫಲದ ಅನುಭೂತಿ ಮಾಡಿದೆನು ಅಥವಾ ಭಕ್ತರೂ ಸಹ ಅನುಭವ ಮಾಡುವರು - ಭಗವಂತನು ನಮ್ಮ ಪ್ರೀತಿ
ಅಥವಾ ಭಾವನೆಯ ಫಲವನ್ನು ಪೂರ್ಣಗೊಳಿಸಿದರು - ಈ ಅನುಭವವು ಪ್ರತ್ಯಕ್ಷವಾಗಿ ಆಗುತ್ತಿರುತ್ತದೆ.
ಇಂತಹ ವಿಶೇಷ ಆತ್ಮರಿಗೆ
ತಮ್ಮ ಅವ್ಯಕ್ತ ಸ್ಥಿತಿಯಲ್ಲಿದ್ದು, ಒಂದು ಸ್ಥಾನದಲ್ಲಿದ್ದರೂ ನಾಲ್ಕೂ ಕಡೆಯಲ್ಲಿಯೂ ತಮ್ಮ ಆತ್ಮಿಕ
ಲೈಟ್ ಮತ್ತು ಮೈಟ್ನ ಸ್ಥಿತಿಯ ಮೂಲಕ ಲೈಟ್ಹೌಸ್ ಹಾಗೂ ಮೈಟ್ಹೌಸ್ ಆಗಿರುತ್ತಾ, ಅಲೌಕಿಕ ಆತ್ಮಿಕ
ಸೇವಾ ಭಾವನೆ ಹಾಗೂ ಆತ್ಮಿಕ ವೃತ್ತಿಯ ಮೂಲಕ ಸೇವೆ ಮಾಡಬೇಕಾಗಿದೆ - ಇದಕ್ಕೇ ಬೇಹದ್ದಿನ ಸೇವೆ ಎಂದು
ಹೇಳಲಾಗುವುದು. ಅದರಿಂದ ಇಂತಹ ಅನುಭವವಾಗಬೇಕು - ಇಂದು ನಾನು ವಿಶೇಷ ಆತ್ಮನನ್ನು ನನ್ನ ನೆನಪಾರ್ಥದ
ದಿನದಂತು ಪ್ರಜೆ ಅಥವಾ ಭಕ್ತರು ನೆನಪು ಮಾಡುತ್ತಿದ್ದಾರೆ. ಅಲ್ಪಕಾಲದ ರಿದ್ಧಿ-ಸಿದ್ಧಿ ಮಾಡುವವರು,
ಒಂದೇ ಸ್ಥಾನದಲ್ಲಿದ್ದರೂ ತನ್ನ ರೂಪದ ಪ್ರತ್ಯಕ್ಷ ಸಾಕ್ಷಾತ್ಕಾರವನ್ನು ತನ್ನ ಭಕ್ತರಿಗೆ
ಮಾಡಿಸಬಹುದು, ಅಂದಾಗ ತಾವು ವಿಶೇಷ ಆತ್ಮರು ಲೈಟ್ ಮತ್ತು ಮೈಟ್ನ ಸೇವೆಯ ಮೂಲಕ ಭಕ್ತರಿಗೆ ಅಥವಾ
ಪ್ರಜೆಗಳಿಗೆ ಅನುಭವ ಮಾಡಿಸಲು ಸಾಧ್ಯವಿಲ್ಲವೇ? ಯಾವಾಗ ಇಂತಹ ವಿಶೇಷ ನೆನಪಾರ್ಥದ ದಿನವು
ಬರುತ್ತದೆಯೋ, ಅಂತಹ ದಿನದಂತು ತಾವು ವಿಶೇಷ ಆತ್ಮರಿಗೆ ವಿಶೇಷ ಸೇವೆಯ ಪ್ರತಿ ಅನುಭವವಾಗಬೇಕು.
ಇಂತಹ ಸೇವೆಯನ್ನು ಮಾಡಿದ್ದೀರಾ? ಇದು ಸೇವೆಯಾಯಿತು. ಒಳ್ಳೆಯದು - ದೀಪಾವಳಿಯ ದಿನದಂತು ತಮ್ಮ ಪ್ರತಿ
ವಿಶೇಷ ಗಮನವಿದ್ದಿತೆ? ಇಂದಿನ ದಿನದಂದು ಸದಾಕಾಲಕ್ಕಾಗಿ ತಮ್ಮ ಆತ್ಮದ ಸಂಸ್ಕಾರಗಳಲ್ಲಿ ಪರಿವರ್ತನೆ
ತರುವಂತಹ ವಿಶೇಷ ಗಮನವನ್ನು ಕೊಟ್ಟಿದ್ದಿರಾ? ಯಾವಾಗ ನೆನಪಾರ್ಥದ ರೂಪದಲ್ಲಿ ಇಂದಿನ ದಿನದಂದು ಹಳೆಯ
ಖಾತೆಗಳನ್ನು ಸಮಾಪ್ತಿಗೊಳಿಸುವ ರೂಪದಲ್ಲಿ ನಡೆಯುತ್ತಾ ಬರುತ್ತಿದೆ. ಅದನ್ನು ತಾವು ಅವಶ್ಯವಾಗಿ
ಪ್ರತ್ಯಕ್ಷ ರೂಪದಲ್ಲಿ ಮಾಡಿದ್ದೀರಿ ಆದ್ದರಿಂದ ನೆನಪಾರ್ಥವು ನಡೆಯುತ್ತಾ ಬರುತ್ತಿದೆ. ಅಂದಾಗ ಇಂದು
ತಮ್ಮ ಹಳೆಯ ಸಂಸ್ಕಾರಗಳಲ್ಲಿ ಅಲ್ಪ ಸ್ವಲ್ಪ ಉಳಿದುಕೊಂಡಿರುವ ಖಾತೆಯನ್ನು ಸಮಾಪ್ತಿ ಮಾಡಿದಿರಾ?
ಸಮಾಪ್ತಿ ಮಾಡುವ ಮೊದಲು ತಮ್ಮ ಖಾತೆಯನ್ನು ಪರಿಶೀಲನೆ ಮಾಡಲಾಗುತ್ತದೆ. ಫಲಿತಾಂಶವನ್ನು
ತೆಗೆಯಲಾಗುತ್ತದೆ, ಅದೇರೀತಿ ತಾವೆಲ್ಲರೂ ಸಹ ತಮ್ಮ ಲೆಕ್ಕಾಚಾರವನ್ನು ಪರಿಶೀಲನೆ ಮಾಡಿದಿರಾ?
ಅದರಲ್ಲಿ ಪರಿಶೀಲನೆಯನ್ನೇನು ಮಾಡಿದಿರಿ? ಇಂದಿನವರೆಗೂ ಏನೆಲ್ಲಾ ಪುರುಷಾರ್ಥವು ನಡೆಯಿತೋ,
ಈಗಿನವರೆಗೂ ಅದರ ಫಲಿತಾಂಶದಲ್ಲಿ ಯಾವ ಮಾತುಗಳಲ್ಲಿ ಹಾಗು ಶೇಕಡ ಎಷ್ಟು ಸಫಲತಾ ಮೂರ್ತಿಯಾಗಿದ್ದೀರಿ?
ಮೊದಲು ತಮ್ಮ ಮನಸ್ಸಾ ಸಂಕಲ್ಪಗಳ ಲೆಕ್ಕವನ್ನು ಪರಿಶೀಲನೆ ಮಾಡಿರಿ - ಈಗಿನವರೆಗೂ ನಾನು
ಎಲ್ಲಿಯವರೆಗೆ ಸಂಪೂರ್ಣ ಶ್ರೇಷ್ಠ ಸಂಕಲ್ಪಗಳ ಪುರುಷಾರ್ಥದಲ್ಲಿ ಸಫಲತೆಯು ಬಂದಿದೆ? ವ್ಯರ್ಥ
ಸಂಕಲ್ಪಗಳ ಅಥವಾ ವಿಕಲ್ಪಗಳ ಪ್ರತಿ ಎಲ್ಲಿಯವರೆಗೆ ವಿಜಯಿಯಾಗಿರುವೆನು? ಮತ್ತು ವಾಣಿಯ ಮೂಲಕ ತಂದೆಯ
ಪರಿಚಯವನ್ನು ಆತ್ಮರಿಗೆ ಎಲ್ಲಿಯವರೆಗೆ ಕೊಡಲು ಸಾಧ್ಯವಾಯಿತು, ಅದರಲ್ಲಿ ಎಷ್ಟು ಆತ್ಮರು ತಂದೆಯ
ಸ್ನೇಹಿ ಅಥವಾ ಸಹಯೋಗಿಯನ್ನಾಗಿ ಮಾಡಲು ಸಾಧ್ಯವಾಯಿತು? ವಾಚಾದಲ್ಲಿ ಎಲ್ಲಿಯವರೆಗೆ ಆತ್ಮೀಯತೆ ಅಥವಾ
ಅಲೌಕಿಕ ಅಥವಾ ಆಕರ್ಷಣೆ ಬಂದಿತು? ಅದೇ ರೀತಿ ಕರ್ಮಣಾದ ಮೂಲಕ ಸದಾ ಭಿನ್ನ ಹಾಗೂ ಪ್ರಿಯ, ಅಲೌಕಿಕ,
ಅಸಾಧಾರಣ ಕರ್ಮವು ಎಲ್ಲಿಯವರೆಗೆ ಮಾಡಲು ಸಾಧ್ಯವಾಗಿದೆ? ಕರ್ಮಗಳಲ್ಲಿ ಎಲ್ಲಿಯವರೆಗೆ ಕರ್ಮ ಯೋಗಿ,
ಯೋಗ ಯುಕ್ತ, ಯುಕ್ತಿ ಯುಕ್ತ, ಸ್ನೇಹ ಯುಕ್ತ ರೂಪವನ್ನು ಧಾರಣೆ ಮಾಡಿರುವೆನು? ಎಲ್ಲಿಯವರೆಗೆ ತಮ್ಮ
ಸಂಸ್ಕಾರಗಳು ಮತ್ತು ಸ್ವರೂಪಗಳಲ್ಲಿ ಅರ್ಥಾತ್ ಚಹರೆಯಲ್ಲಿ ತಂದೆಯ ಸಮಾನ ಆಕರ್ಷಣಾ ರೂಪ, ಸ್ನೇಹಿ
ರೂಪ, ಸಹಯೋಗಿ ರೂಪದವನಾದೆನು? ಹೀಗೆ ತಮ್ಮ ಲೆಕ್ಕಾಚಾರವನ್ನು ಪರಿಶೀಲನೆ ಮಾಡುವುದರಿಂದ ಈಗಿನವರೆಗೂ
ಯಾವ ಕೊರತೆ ಅಥವಾ ಬಲಹೀನತೆಗಳಿವೆಯೋ, ಅದನ್ನು ಸಮಾಪ್ತಿಗೊಳಿಸಿ ಹೊಸ ಖಾತೆಯನ್ನು ಪ್ರಾರಂಭಿಸಬಹುದೇ?
ಈ ರೀತಿಯಲ್ಲಿ ತಮ್ಮ ಲೆಕ್ಕಾಚಾರವನ್ನು ಪರಿಶೀಲನೆ ಮಾಡಿರಿ.
ಇದಕ್ಕೇ ದೀಪಾವಳಿ
ಹಬ್ಬವನ್ನಾಚರಿಸುವುದು ಎಂದು ಅಥವಾ ತಮ್ಮನ್ನು ಸಂಪೂರ್ಣರನ್ನಾಗಿ ಮಾಡಿಕೊಳ್ಳುವ ಧೃಡ ಸಂಕಲ್ಪವನ್ನು
ಮಾಡುವುದೇ ಆಚರಿಸುವುದೆಂದು ಹೇಳಲಾಗುತ್ತದೆ. ಹಾಗಾದರೆ ಈ ರೀತಿಯಲ್ಲಿ ದೀಪಾವಳಿ ಆಚರಿಸಿದಿರಾ ಅಥವಾ
ಕೇವಲ ಮಿಲನ ಮಾಡಿದಿರಾ? ಮಿಲನ ಮಾಡುವ ನೆನಪಾರ್ಥವು ಮಾಲೆಯ ರೂಪದಲ್ಲಿದೆ ಆದರೆ ಧೃಡ ಸಂಕಲ್ಪಗಳ
ನೆನಪಾರ್ಥವು ದೀಪದ ಜ್ಯೋತಿ ರೂಪದ್ದಾಗಿದೆ. ಹಾಗಾದರೆ ಎರಡೂ ರೀತಿಯಲ್ಲಿ ಆಚರಿಸಿದಿರಾ? ಹೊಸ
ವಸ್ತ್ರವನ್ನು ಧರಿಸಿದಿರೆ? ಆತ್ಮನಿಗೆ ಯಾವ ಆಧಾರದಿಂದ ಹೊಸ ವಸ್ತ್ರವು ಸಿಗುತ್ತದೆ? ಸಂಸ್ಕಾರಗಳ
ಆಧಾರದಿಂದ ಸಿಗುತ್ತದೆಯಲ್ಲವೆ. ಆತ್ಮದ ಸಂಸ್ಕಾರವು ಹೇಗಿದೆಯೋ, ಅದರನುಸಾರವೇ ವಸ್ತ್ರವು
ತಯಾರಾಗುತ್ತದೆ. ಅಂದಮೇಲೆ ಯಾವ ಹೊಸ ವಸ್ತ್ರ ಅಥವಾ ಹೊಸ ಶರೀರವನ್ನು ಧರಿಸುವಿರಿ? ಯಾವ ರೀತಿ
ಆತ್ಮದಲ್ಲಿ ಹೊಸ ಯುಗದ ಸಂಸ್ಕಾರ ಅಥವಾ ಹೊಸ ಯುಗದ ಸ್ಥಾಪಕ ತಂದೆಯು ಸಂಪೂರ್ಣ ಸಂಸ್ಕಾರಗಳನ್ನು
ಧಾರಣೆ ಮಾಡಿದರು – ಹೊಸ ವಸ್ತ್ರವನ್ನು ತೊಡುವುದೆಂದರೆ ಇದೇ ಆಗಿದೆ. ಶರೀರದಲ್ಲಿ ಹೊಸ ವಸ್ತ್ರವನ್ನು
ಭಲೆ ಎಷ್ಟಾದರೂ ತೊಡಬಹುದು ಆದರೆ ಇಂದಿನ ಹಳೆಯ ಪ್ರಪಂಚದ ಹೊಸ ವಸ್ತ್ರುವೂ ಸಹ ಹೊಸ ಪ್ರಪಂಚದ ಮುಂದೆ
ಹಳೆಯದೇ ಆಗಿದೆ. ಏಕೆಂದರೆ ಅತಿ ಕನಿಷ್ಟ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಂಡಿದೆ. ಆದ್ದರಿಂದ ಹೊಸ
ವಸ್ತ್ರವನ್ನು ಧರಿಸುತ್ತೀರೆಂದರೂ ಹೊಸ ವಸ್ತ್ರವೆಂದು ಹೇಳುವುದಿಲ್ಲ. ಸತೋಪ್ರಧಾನ ಪ್ರಪಂಚದಲ್ಲಿ
ಎಲ್ಲವೂ ಹೊಸದಾಗಿರುತ್ತದೆ, ತಮೋಪ್ರಧಾನ ಪ್ರಪಂಚದ ವಸ್ತುಗಳೆಲ್ಲವೂ ಹಳೆಯದಾಗಿದೆ, ನಿಸ್ಸಾರವಾಗಿದೆ.
ಅಂದಾಗ ಅದನ್ನು ಹೊಸದೆಂದು ಹೇಳುವರೇ? ಹೊಸ ವಸ್ತ್ರ ಅರ್ಥಾತ್ ತಮ್ಮ ಆತ್ಮದ ಹೊಸ ಸಂಸ್ಕಾರ,
ಶ್ರೇಷ್ಠ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳುವುದಾಗಿದೆ. ಮತ್ತೇನು ಮಾಡುವಿರಿ? ಯಾವಾಗ ಹೊಸ
ಸಂಸ್ಕಾರವನ್ನು ಧಾರಣೆ ಮಾಡಿಕೊಂಡಿದ್ದೀರಿ, ಅಂದಾಗ ಲೆಕ್ಕವನ್ನಿಡುವ ಅಭ್ಯಾಸವಾಗುತ್ತದೆ ಅಲ್ಲವೆ.
ಈ ರೀತಿ ಲೆಕ್ಕವನ್ನಿಡುವುದೇ ಸ್ವಚ್ಛತೆಯಾಗಿದೆ, ಹೇಗೆ ದೀಪಾವಳಿಯಲ್ಲಿ ಸ್ವಚ್ಛತೆ ಮಾಡುವಾಗ
ಏನೆಲ್ಲಾ ಕಸ ಅಥವಾ ಕೀಟಾಣುಗಳಿರುತ್ತವೆ, ಅವು ಸ್ವತಹವಾಗಿಯೇ ಸಮಾಪ್ತಿಯಾಗಿ ಬಿಡುತ್ತದೆ.
ಪರಸ್ಪರದಲ್ಲಿ ತಮ್ಮ ಮಧುರ ಮಾತುಗಳಿಂದ ಎಂತಹ ಲೇವಾದೇವಿ ಮಾಡುವಿರಿ? ದೀಪಾವಳಿಯಂದು
ಒಬ್ಬರಿನ್ನೊಬ್ಬರಿಂದ ಗಿಫ್ಟ್ (ಸ್ವೀಟ್ಸ್, ಗಿಫ್ಟ್...) ತೆಗೆದುಕೊಳ್ಳುವರಲ್ಲವೆ. ತಾವುಗಳು
ಒಬ್ಬರಿನ್ನೊಬ್ಬರಿಗೆ ಎಂತಹ ಖರ್ಚು ಮಾಡುವಿರಿ (ಗಿಫ್ಟ್ ಕೊಡುವಿರಿ). ತಮ್ಮಬಳಿ ಅಂತಹ ಯಾವ
ವಸ್ತುವಿದೆ, ಅದನ್ನು ಒಬ್ಬರಿನ್ನೊಬ್ಬರಿಗೆ ಕೊಡುವಿರಿ? (ಸ್ನೇಹದ ಗಿಫ್ಟ್)
ಒಬ್ಬರಿನ್ನೊಬ್ಬರೊಂದಿಗೆ ಸದಾಕಾಲಕ್ಕಾಗಿ ಸ್ನೇಹಿಗಳಾಗಿರುತ್ತೀರಿ, ಇಂದು ಎಂತಹ ಸ್ನೇಹಿಯಾಗುವಿರಿ?
ಸ್ನೇಹಿಗಳಂತು ಆಗಿರುವಿರಿ ಮತ್ತು ಇದೇ ಸ್ನೇಹದ ಲಕ್ಷಣದಿಂದ ಪರಸ್ಪರದ ಸಮೀಪತೆಯ ಚಿಹ್ನೆಯಾಗಿ
ದೀಪಾವಳಿ ಎಂದು ಹೇಳಲಾಗುತ್ತದೆ. ವಿಶೇಷ ದಿನಗಳಲ್ಲಿ ವಿಶೇಷವಾಗಿ ಯಾವ ಗಿಫ್ಟ್ನ್ನು ಕೊಡಬೇಕಾಗಿದೆ?
ಯಾರು ತನ್ನ ಪುರುಷಾರ್ಥದ ಮೂಲಕ ಈಗಿನವರೆಗೂ ಸಹಜ ಸಫಲತೆಯ ಪ್ರಾಪ್ತಿಯಾಗಿದೆ ಅಥವಾ ಅನುಭವವಾಗಿದೆಯೋ,
ತಮ್ಮ ಅಂತಹ್ ಆನುಭವದ ಜ್ಞಾನ ರತ್ನಗಳಿಂದ ಪ್ರತ್ಯಕ್ಷ ಅನುಭವಿಯಾಗಿ ಅನ್ಯರನ್ನೂ ಅನುಭವಿಯನ್ನಾಗಿ
ಮಾಡಬಹುದು, ಇಂತಹ ಅನುಭವದ ರತ್ನಗಳನ್ನು ಪರಸ್ಪರದಲ್ಲಿ ಗಿಫ್ಟ್ನ ರೂಪದಲ್ಲಿ ಕೊಡಬೇಕಾಗಿದೆ.
ತಿಳಿಯಿತೆ? ತಂದೆಯ ಖಜಾನೆಯನ್ನು ತಮ್ಮ ಅನುಭವದ ಮೂಲಕ ಯಾರು ತಮ್ಮವರನ್ನಾಗಿ ಮಾಡಿಕೊಂಡಿದ್ದೀರಿ,
ತಮ್ಮಲ್ಲಿ ಸಮಾವೇಶ ಮಾಡಿಕೊಂಡಿರುವ ಜ್ಞಾನ ರತ್ನಗಳನ್ನು ಪರಸ್ಪರದಲ್ಲಿ ಕೊಡಬೇಕಾಗಿದೆ, ಅದರಿಂದ ಆ
ಆತ್ಮವೂ ಸಹ ಸಹಜ ಅನುಭವಿಯಾಗಲಿ, ಇದಾಗಿದೆ ಗಿಫ್ಟ್. ಹಾಗಾದರೆ ಪರಸ್ಪರದಲ್ಲಿ ಒಬ್ಬರಿನ್ನೊಬ್ಬರು
ಇಂತಹ ಗಿಫ್ಟ್ ಕೊಡಿ, ಯಾವುದು ಸದಾಕಾಲಕ್ಕಾಗಿ ನೆನಪಾರ್ಥವಾಗಿ ಬಿಡಲಿ. ಯಾರಿಗೇ ಇಂತಹ ರತ್ನಗಳನ್ನು
ಕೊಡುತ್ತೀರೆಂದರೆ, ಆ ಆತ್ಮನಿಗೂ ತಮಗೆ ತಂದೆಯು ಕೊಟ್ಟಿರುವ ರತ್ನಗಳ ನೆನಪು ಅವಶ್ಯವಾಗಿರುತ್ತದೆ.
ಅಂದಾಗ ಯಾರಿಗೇ ಆಗಲಿ ಸದಾಕಾಲಕ್ಕಾಗಿ ಸಂಪನ್ನರನ್ನಾಗಿ ಮಾಡುವಂತಹ ಗಿಫ್ಟ್ ಕೊಡಬೇಕಾಗಿದೆ. ಇಂತಹ
ದೀಪಾವಳಿಯನ್ನಾಚರಿಸಿ ಮತ್ತು ಇದೇರೀತಿ ಶ್ರೇಷ್ಠಾತ್ಮರಾಗಿದ್ದು, ಅನ್ಯ ಆತ್ಮರ ಶ್ರೇಷ್ಠ ಸೇವೆಯನ್ನು
ಮಾಡಿರಿ.
ವರ್ತಮಾನದಲ್ಲಿ ಸರ್ವ
ಆತ್ಮರು ಹಣದ ಬಾಯಾರಿಕೆಯಲ್ಲಿದ್ದಾರೆ. ಇಂತಹ ಬಾಯಾರಿರುವ ಆತ್ಮರಿಗೆ, ಅಂತಹ ಆತ್ಮಿಕ ಧನವನ್ನು ಕೊಡಿ,
ಯಾವುದರಿಂದ ಆ ಆತ್ಮನೆಂದಿಗೂ ಬೇಡುವಂತಹ ಅವಶ್ಯಕತೆಯಿರಬಾರದು. ಧನವನ್ನು ಯಾರು ಬೇಡುವರು?
ಭಿಕಾರಿಗಳು. ಇಂದಿನ ದಿನ ಆತ್ಮವು ಭಿಕಾರಿಯಾಗುತ್ತದೆ, ರಾಯಲ್ ಭಿಕಾರಿಯೆಂದೇ ಹೇಳಿ, ಯಾರೆಷ್ಟೇ
ಕೋಟ್ಯಾಧಿಪತಿ ಆಗಿರಬಹುದು ಆದರೆ ಇಂದಿನ ದಿನದಲ್ಲಿ ಭಿಕಾರಿಯಾಗಿದ್ದಾರೆ. ಇಂತಹ ಭಿಕಾರಿ ಆತ್ಮರನ್ನು
ಭಿಕಾರಿತನದಿಂದ ಮುಕ್ತಗೊಳಿಸುವುದೇ ಬೇಹದ್ದಿನ ಸೇವೆಯಾಗಿದೆ, ತಾವು ದಾತನ ಮಕ್ಕಳಾಗಿದ್ದೀರಲ್ಲವೆ
ಅಂದಮೇಲೆ ಭಿಕಾರಿಗಳನ್ನು ಸಂಪನ್ನಗೊಳಿಸಿರಿ. ದಾತನ ಮಕ್ಕಳು, ವರದಾತನ ಮಕ್ಕಳು, ತಮ್ಮ ವರದಾನದ
ಶಕ್ತಿಯಿಂದ, ಜ್ಞಾನ ದಾನದ ಶಕ್ತಿಯಿಂದ ಭಿಕಾರಿಗಳನ್ನು ಸಂಪನ್ನಗೊಳಿಸಿರಿ. ಇಂದಿನ ದಿನದಲ್ಲಿ ಈ
ಭಿಕಾರಿ ಆತ್ಮರ ಪ್ರತಿ ವಿದಾತಾ ಮತ್ತು ವರದಾತನ ಮಕ್ಕಳಿಗೆ ದಯೆ ಬರಬೇಕು. ಈ ರೀತಿ ಯಾವ ಆತ್ಮರಿಗೆ
ದಯೆ ಬರುತ್ತದೆಯೋ, ಅವರಿಗೂ ಮಾಯೆ ಮತ್ತು ವಿಶ್ವದಲ್ಲಿನ ಆತ್ಮರು ನಮಸ್ಕಾರ ಮಾಡುವರು. ಹೀಗೆ ಜ್ಯೋತಿ
ಬೆಳಗಿರುವ ಆತ್ಮರ ನೆನಪಾರ್ಥವು ಈಗಲೂ ಕಾಯಂ ಆಗಿದೆ. ನಂದಿ ಹೋಗಿರುವ ದೀಪಕ್ಕೆ ನಮಸ್ಕಾರ
ಮಾಡುವುದಿಲ್ಲ, ಆದ್ದರಿಂದ ಸದಾ ಜಾಗೃತವಾಗಿರುವ ಜ್ಯೋತಿಯಾಗಿರಿ. ಇಂತಹ ಆತ್ಮರಿಗೆ ಬಾಪ್ದಾದಾರವರೂ
ಸಹ ನಮಸ್ಕಾರ ಮಾಡುವರು. ಒಳ್ಳೆಯದು.
(ಮಹಾರಾಷ್ಟ್ರ ಜೋನ್ನ
ಸಹೋದರ ಸಹೋದರಿಯರ ಪ್ರತಿ ಅವ್ಯಕ್ತ ಬಾಪ್ದಾದಾರವರ ಮಹಾವಾಕ್ಯ ರಿವೈಜ್ – 20-3-12)
ಈ ಜೋನ್ನ ಸಂಖ್ಯೆಯೂ ಬಹಳ
ಇದೆ. ಹೆಸರಾಗಿದೆ - ಮಹಾರಾಷ್ಟ್ರ. ಅಂದಮೇಲೆ ಮಹಾನ್ ಆಗಿದೆಯಲ್ಲವೆ! ಹೇಗೆ ಹೆಸರಿದೆಯೋ ಹಾಗೆಯೇ
ಸಂಖ್ಯೆಯೂ ಮಹಾನ್ ಆಗಿದೆ. ಬಾಪ್ದಾದಾರವರು ಬಾಂಬೆ ಮತ್ತು ದೆಹಲಿ ಎರಡೂ ಕಡೆಯಲ್ಲಿ ಒಂದು ಮಾತಿನ
ಉಮ್ಮಂಗ-ಉತ್ಸಾಹವನ್ನು ನೋಡಿದರು. ಸೇವೆಯಂತು ಮಾಡುತ್ತೀರಿ, ಅದನ್ನು ಹೇಳುವ ಮಾತೇ ಇಲ್ಲ. ಚೆನ್ನಾಗಿ
ಮಾಡುತ್ತಿದ್ದೀರಿ, ಮಾಡುತ್ತಿರುತ್ತೀರಿ ಆದರೆ ಬಾಪ್ದಾದಾರವರು ದೆಹಲಿ ಮತ್ತು ಬಾಂಬೆಯವರಿಂದ ಇದನ್ನೇ
ಬಯಸುತ್ತಾರೆ - ತಮ್ಮ ಸಂಬಂಧ-ಸಂಪರ್ಕದಲ್ಲಿ ಯಾರು ಬಂದಿರುವಂತಹ ವಿಶೇಷ ಆತ್ಮರು ಮೈಕ್ ಸಹ ಆಗಬಹುದು
ಮತ್ತು ವಾರಸುಧಾರರೂ ಆಗಬಹುದು, ಇಂತಹ ಗ್ರೂಪ್ನ್ನು ತಯಾರು ಮಾಡಿ ಏಕೆಂದರೆ ಎಲ್ಲಾ ವರ್ಗದವರು
ಮೆಜಾರಿಟಿಯಲ್ಲಿ ಲಿಸ್ಟ್ನ್ನು ಬಾಪ್ದಾದಾರವರಿಗೆ ಕಳುಹಿಸಿದ್ದೀರಿ. ಆ ಲಿಸ್ಟ್ನ್ನು ನೋಡಿದ್ದೇವೆ.
ಲಿಸ್ಟ್ನಲ್ಲಿ ಒಳ್ಳೊಳ್ಳೆಯವರಿದ್ದಾರೆ ಅವರು ಹೆಸರನ್ನು ಪ್ರಸಿದ್ಧಗೊಳಿಬಹುದು. ಈಗ ಅವರನ್ನು
ಪ್ರತ್ಯಕ್ಷ ಮಾಡಿ. ತಮಗೆ ಬದಲಾಗಿ ಅವರು ಭಾಷಣ ಮಾಡಲಿ. ಜ್ಞಾನ ಏನಾಗಿದೆ, ನಾವು ಜೀವನದಲ್ಲಿ ಯಾವ
ವ್ಯತ್ಯಾಸವನ್ನು ಮಾಡಿಕೊಂಡಿದ್ದೇವೆ ಎನ್ನುವ ವರ್ಣನೆಯ ತಮ್ಮ ಅನುಭವವನ್ನು ಎಲ್ಲರಿಗೆ ತಿಳಿಸಲಿ.
ಯಾವಾಗ ಕಾರ್ಯಕ್ರಮಗಳಾಗುತ್ತದೆ, ಈಗಲೂ ಕೆಲವರು ತಮ್ಮ ಅನುಭವವನ್ನು ಬಹಳ ಚೆನ್ನಾಗಿ ತಿಳಿಸುತ್ತಾ
ಇರುತ್ತಾರೆ ಆದರೆ ಅದಂತು ಕಾರ್ಯಕ್ರಮದಲ್ಲಿ ತಿಳಿಸಿದರು ಆದರೆ ನಿರಂತರದ ಜೀವನದಲ್ಲಿ ಅನುಭವ ಮಾಡಲಿ.
ಈ ಗಮನ ಕೊಡುತ್ತೀರೆಂದರೆ ಬರುವಂತಹವರಿದ್ದಾರೆ ಏಕೆಂದರೆ ಬಾಪ್ದಾದಾರವರು ಯಾವ ಲಿಸ್ಟ್ನ್ನು ನೋಡಿದರು,
ಅದರಲ್ಲಿ ಇಂತಹ ಯೋಗ್ಯವಾಗಿರುವವರು ಇದ್ದಾರೆ ಆದರೆ ಸ್ವಲ್ಪ ಪುರುಷಾರ್ಥ ಮಾಡಿ ಅವರನ್ನು
ಮುಂದುವರೆಸಬೇಕು. ಪ್ರತಿಯೊಂದು ವರ್ಗದವರಿಗೆ ವಾಸ್ತವದಲ್ಲಿ ಈ ಲಿಸ್ಟ್ ಪ್ರತ್ಯಕ್ಷ ರೂಪದಲ್ಲಿ
ಪರಿವಾರದ ಹಾಗೂ ತಂದೆಯ ಮುಂದೆ ಕರೆತರಬೇಕಾಗಿದೆ. ವರ್ಗದವರು ಕಾರ್ಯ ಮಾಡಿದ್ದೀರಿ. ಬಾಪ್ದಾದಾರವರು
ನೋಡಿದರು - ಕಾರ್ಯ ಮಾಡಿದ್ದಾರೆ ಆದರೆ ಬಹಳ ಸಮಯದಿಂದ ಮಾಡುತ್ತಿದ್ದೀರಿ ಈಗ ಸ್ವಲ್ಪ ಏನಾದರೂ
ನವೀನತೆಯನ್ನು ತನ್ನಿ. ನವೀನತೆ ಇದಾಗಿದೆ - ವಾರಸುಧಾರರನ್ನಾಗಿ ಮಾಡುವುದು. ಕೊನೆಪಕ್ಷ ಯಾರು
ಸಂಪರ್ಕದಲ್ಲಿದ್ದಾರೆ ಅವರನ್ನು ಸಂಬಂಧದಲ್ಲಿ ತರಬೇಕು, ಸಂಬಂಧದ ನಂತರ ಸೇವೆಯಲ್ಲಿ ತೊಡಗಿಸಬೇಕಾಗಿದೆ.
ಸಂಬಂಧವೆಂದರೆ ಬರುವುದು-ಹೋಗುವುದಲ್ಲ ಆದರೆ ತಂದೆ ಹಾಗೂ ಪರಿವಾರದ ಜೊತೆಗಾರರಾಗಬೇಕು. ಈಗ
ಬಾಪ್ದಾದಾರವರು ನೋಡಿದರು - ಇದೂ ಸಹ ಆಗುವುದಿದೆ, ಒಂದುವೇಳೆ ಬ್ರಾಹ್ಮಣರೆಲ್ಲರೂ ಸೇರಿ ಯಾವುದೇ
ಒಂದು ಸಂಕಲ್ಪ ಮಾಡುತ್ತೀರೆಂದರೆ ಆಗಿಯೇ ಇದೆ ಆದರೆ ಎಲ್ಲರ ಸಂಕಲ್ಪ ಒಂದೇ ಆಗಿರುತ್ತದೆಯೆಂದರೆ
ಆಗುವುದು ಏಕೆಂದರೆ ಈಗ ವಾಯುಮಂಡಲ ಪರಿವರ್ತನೆಯಾಗಿದೆ. ಯಾವಾಗಿನಿಂದ ತಾವು ಈ 75 ವರ್ಷಗಳ
ಮಹೋತ್ಸವನ್ನಾಚರಿಸಿದಿರಿ ಆಗಿನಿಂದ ಜನರಲ್ಲಿ ತಿಳುವಳಿಕೆಯಲ್ಲಿ ಬಂದಿದೆ - ಇವರು ಸ್ವಲ್ಪ
ಮಾಡಿದ್ದಾರೆ ಮತ್ತು ಅವರು ಒಳ್ಳೆಯದನ್ನು ಹೇಳುತ್ತಾರೆ, ಮಾಡಬಲ್ಲರು ಎಂದು ಹೇಳುತ್ತಾರೆ. ಈಗ
ಇಲ್ಲಿಯವರೆಗೆ ಪರಿವರ್ತನೆ ಬಂದಿದೆ ಆದ್ದರಿಂದ ಈಗ ತಮ್ಮ ಪರಿವರ್ತನೆಯನ್ನೂ ನೋಡುತ್ತಾರೆ ಮತ್ತೆ
ಸ್ವಲ್ಪ ಪರಿಶ್ರಮ ಪಡುತ್ತೀರೆಂದರೆ ತಮ್ಮ ಪರಿವಾರ ಎಷ್ಟೊಂದು ದೊಡ್ಡದಾಗಿ ಬಿಡುತ್ತದೆ ಅಂದಮೇಲೆ
ಬಾಪ್ದಾದಾರವರು ಇಂತಹವರನ್ನು ಎಲ್ಲಿಯಾದರೂ ಸಂಘಟನೆ ಮಾಡಲು ಬಯಸುತ್ತಾರೆ. ಮಧುಬನದಲ್ಲಿ ಮಿಲನ ಮಾಡಲು
ಬರುತ್ತಾರೆ ಅದು ಬೇರೆ ಮಾತಾಗಿದೆ ಆದರೆ ಪರಿವಾರದವರಾಗಿ ಬರಬೇಕು ಏಕೆಂದರೆ ಸರ್ವೀಸಿನಲ್ಲಿ
ಏನಾದರೊಂದು ನವೀನತೆ ಇರಬೇಕಲ್ಲವೆ! ಒಳ್ಳೆಯದು.
ಉಳಿದಂತೆ ಬಾಪ್ದಾದಾರವರ
ಒಂದು ಆಸೆ ಉಳಿದುಕೊಂಡಿದೆ, ಉಳಿದುಕೊಂಡಿರುವ ಜೋನ್ನ ಪ್ರತಿಯೂ ಸಹ. ಅದು ಯಾವುದಾಗಿದೆ? ಪ್ರತಿಯೊಂದು
ಸೇವಾಕೇಂದ್ರವು ಈ ಖುಷಿ ಸಮಾಚಾರ ಬರೆಯಬೇಕು - ನಮ್ಮ ಸೇವಾಕೇಂದ್ರವು ನಿರ್ವಿಘ್ನವಾಗಿದೆ, ಮಿಲನ
ಸಾರವಿದೆ. ಬಾಬಾರವರ ಎಲ್ಲಾ ಮಕ್ಕಳು ಆಕ್ಯೂರೇಟ್ ಆಗಿದ್ದಾರೆ. ಯಾವ ಕಾರ್ಯಕ್ರಮ ಮಾಡಲಾಯಿತು ಅದರಕಡೆ
ಬ್ಯುಜಿಯಾಗಿದ್ದಾರೆ, ನಿರ್ವಿಘ್ನವಾಗಿದೆ. ಇದು ಈಗಲೂ ಯಾವುದೇ ಜೋನ್ನಿಂದ ಬಂದಿಲ್ಲ ಅಂದಮೇಲೆ
ಮಹಾರಾಷ್ಟ್ರದವರಂತು ಮಹಾನ್ ಕಾರ್ಯವನ್ನು ಮಾಡುತ್ತೀರಲ್ಲವೆ. ಯಾವುದೇ ಜೋನ್ ಸಹ ಈಗ ಈ ಖುಷಿ
ಸಮಾಚಾರವನ್ನು ಕಳುಹಿಸಿಲ್ಲ. ಆಗಬೇಕು ಎಂದು ಹೇಳುತ್ತೀರಿ. ತಾವೇ ಆಗಬೇಕಾಗಿದೆ ಮತ್ತ್ಯಾರೂ ಆಗುವರು!
ತಮ್ಮ ತಪಸ್ಸು ಕಡಿಮೆಯೇನಿಲ್ಲ. ಭಲೆ ನಿಮಿತ್ತ ಶಿಕ್ಷಕಿಯಿರಬಹುದು, ವಿದ್ಯಾರ್ಥಿಯಾಗಿರಬಹುದು.
ಪ್ರಪಂಚದ ಲೆಕ್ಕದಿಂದ ಪ್ರತಿಯೊಬ್ಬರೂ ಮಹಾನ್ ಆತ್ಮರಾಗಿದ್ದೀರಿ. ಈಗೀಗ ನೋಡಿಕೊಳ್ಳಿ - ತಮ್ಮನ್ನು
ಈ ರೀತಿ ನಿರ್ವಿಘ್ನವನ್ನಾಗಿ ಮಾಡಿಕೊಳ್ಳಬೇಕು. ಆಗ ತಮ್ಮ ಜಡಚಿತ್ರವನ್ನು ಯಾವ ಶುಭ ಭಾವನೆಯಿಂದ
ನೋಡುತ್ತಾರೆ, ಹಾಗೆಯೇ ಎಲ್ಲರೂ ತಮ್ಮನ್ನು ಚೈತನ್ಯ ರೂಪದಲ್ಲಿ ದೇವಿಯ ರೂಪದಲ್ಲಿ, ದೇವತಾ ರೂಪದಲ್ಲಿ
ನೋಡುವರು. ಬಾಕಿ ಸೇವೆಯನ್ನಂತು ಎಲ್ಲರೂ ಚೆನ್ನಾಗಿ ಮಾಡಿದ್ದೀರಿ. ಅದಕ್ಕಾಗಿ ಬಾಪ್ದಾದಾರವರು
ಶುಭಾಷಯಗಳನ್ನು ಕೊಡುತ್ತಿದ್ದಾರೆ. ಒಳ್ಳೆಯದು.
ವರದಾನ:
ದಿವ್ಯ ಗುಣಗಳ
ಆಹ್ವಾನದ ಮೂಲಕ ಅವಗುಣಗಳನ್ನು ಸಮಾಪ್ತಿ ಮಾಡುವಂತಹ ದಿವ್ಯ ಗುಣಧಾರಿ ಭವ.
ಹೇಗೆ ದೀಪಾವಳಿಯಲ್ಲಿ
ಶ್ರೀ ಲಕ್ಷ್ಮೀಯ ಆಹ್ವಾನ ಮಾಡುತ್ತಾರೆಯೋ ಹಾಗೆಯೇ ತಾವು ಮಕ್ಕಳು ಸ್ವಯಂನಲ್ಲಿ ದಿವ್ಯ ಗುಣಗಳ
ಆಹ್ವಾನ ಮಾಡುತ್ತೀರೆಂದರೆ, ಅವಗುಣಗಳು ಆಹುತಿ ರೂಪದಲ್ಲಿ ಸಮಾಪ್ತಿಯಾಗುತ್ತಿರುತ್ತದೆ. ನಂತರ ಹೊಸ
ಸಂಸ್ಕಾರಗಳೆಂಬ ಹೊಸ ವಸ್ತ್ರವನ್ನು ಧಾರಣೆ ಮಾಡುವಿರಿ. ಈಗ ಹಳೆಯ ವಸ್ತ್ರಗಳೊಂದಿಗೆ ಸ್ವಲ್ಪವೂ
ಪ್ರೀತಿಯಿರಬಾರದು. ಏನೆಲ್ಲಾ ಬಲಹೀನತೆ, ಕೊರತೆಗಳು, ನಿರ್ಬಲತೆ, ಕೋಮಲತೆಯು ಉಳಿದುಕೊಂಡಿದೆಯೋ
ಅದೆಲ್ಲಾ ಹಳೆಯ ಖಾತೆಯು, ಇಂದಿನಿಂದ ಸದಾಕಾಲಕ್ಕಾಗಿ ಸಮಾಪ್ತಿ ಮಾಡಿದಾಗಲೇ ದಿವ್ಯ ಗುಣವುಳ್ಳವರು
ಆಗುವಿರಿ ಹಾಗೂ ಭವಿಷ್ಯದಲ್ಲಿ ಕಿರೀಟ ಧಾರಣೆ ಆಗುವುದು. ಅದರ ನೆನಪಾರ್ಥವೇ ದೀಪಾವಳಿ ಆಗಿದೆ.
ಸ್ಲೋಗನ್:
ಸ್ವರಾಜ್ಯ
ಅಧಿಕಾರಿಯಾಗುವುದೆಂದರೆ ಮನಸ್ಸು ರೂಪಿ ಮಂತ್ರಿಯನ್ನು ತಮ್ಮ ಸಹಯೋಗಿಯನ್ನಾಗಿ ಮಾಡಿಕೊಳ್ಳಿರಿ.
ಅವ್ಯಕ್ತ ಸೂಚನೆ:-
ಬ್ರಹ್ಮಾ ತಂದೆಯ ಸಮಾನ ಸಂಪನ್ನ ಮತ್ತು ಸಂಪೂರ್ಣ ಸ್ಥಿತಿಯ ಅನುಭವ ಮಾಡಿರಿ.
“ಬಿಂದು ಮತ್ತು ಸಿಂಧು”
ಈ ಎರಡು ಶಬ್ದವನ್ನು ಒಂದುವೇಳೆ ನೆನಪಿಟ್ಟುಕೊಂಡರೆ ಸಂಪೂರ್ಣತೆ ಸಹಜವಾಗಿ ಬಂದು ಬಿಡುತ್ತದೆ. ಒಂದು
ಬಿಂದುವಿನ ನೆನಪು ಮತ್ತು ಏಕರಸದ ಸ್ಥಿತಿ, ಒಬ್ಬರದ್ದೇ ಮತ ಮತ್ತು ಒಬ್ಬರ ಕರ್ತವ್ಯದಲ್ಲಿ
ಸಹಯೋಗಿಗಳು. ಕೇವಲ ಬಿಂದು ಮತ್ತು ಒಬ್ಬರು, ಅದರ ಮುಂದೆ ವಿಸ್ತಾರದಲ್ಲಿ ಹೋಗುವ ಅವಶ್ಯಕತೆಯಿಲ್ಲ.
ವಿಸ್ತಾರದಲ್ಲಿ ಹೋಗಬೇಕೆಂದರೆ ಕೇವಲ ಸರ್ವೀಸಿನ ಪ್ರತಿ. ಅದರ ಮುಂದೆ ತಮ್ಮ ಬುದ್ಧಿಯನ್ನು ನಡೆಸುವ
ಅವಶ್ಯಕತೆಯಿಲ್ಲ.