09.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನಿಮಗೆ ನಶೆಯಿರಲಿ- ಯಾವ ಶಿವನಿಗೆ ಎಲ್ಲರೂ ಪೂಜೆ ಮಾಡುತ್ತಾರೆಯೋ ಅವರೀಗ ನಮ್ಮ ತಂದೆಯಾಗಿದ್ದಾರೆ, ಅವರು ಈಗ ನಮ್ಮ ಮುಂದೆ ಕುಳಿತಿದ್ದಾರೆ”

ಪ್ರಶ್ನೆ:
ಮನುಷ್ಯರು ಭಗವಂತನಿಂದ ಏಕೆ ಕ್ಷಮೆಯಾಚಿಸುತ್ತಾರೆ? ಅವರಿಗೆ ಕ್ಷಮೆ ಸಿಗುತ್ತದೆಯೇ?

ಉತ್ತರ:
ನಾವು ಯಾವ ಪಾಪ ಕರ್ಮಗಳನ್ನು ಮಾಡಿದ್ದೇವೆಯೋ ಅದರ ಶಿಕ್ಷೆಯನ್ನು ಭಗವಂತನು ಧರ್ಮರಾಜನಿಂದ ಕೊಡಿಸುತ್ತಾರೆಂದು ಮನುಷ್ಯರು ತಿಳಿಯುತ್ತಾರೆ ಆದ್ದರಿಂದ ಕ್ಷಮೆ ಬೇಡುತ್ತಾರೆ ಆದರೆ ಅವರಿಗೆ ತಮ್ಮ ಕರ್ಮಗಳ ಶಿಕ್ಷೆಯನ್ನು ಕರ್ಮಭೋಗದ ರೂಪದಲ್ಲಿ ಭೋಗಿಸಲೇಬೇಕಾಗುತ್ತದೆ. ಭಗವಂತನು ಅದಕ್ಕೆ ಯಾವುದೇ ಔಷಧಿಯನ್ನು ಕೊಡುವುದಿಲ್ಲ. ಗರ್ಭಜೈಲಿನಲ್ಲಿಯೂ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಸಾಕ್ಷಾತ್ಕಾರವಾಗುತ್ತದೆ- ನೀವು ಇಂತಿಂತಹ ಕರ್ಮಗಳನ್ನು ಮಾಡಿದ್ದೀರಿ, ಈಶ್ವರನ ಆದೇಶದಂತೆ ನಡೆಯಲಿಲ್ಲ ಆದ್ದರಿಂದ ಈ ಶಿಕ್ಷೆಯಾಗಿದೆ.

ಗೀತೆ:
ನೀನು ರಾತ್ರಿಯನ್ನು ಮಲಗುತ್ತಾ ಕಳೆದೆ, ಹಗಲನ್ನು ತಿನ್ನುತ್ತಾ ಕಳೆದೆ...........

ಓಂ ಶಾಂತಿ.
ಇದನ್ನು ಯಾರು ಹೇಳಿದರು? ಆತ್ಮಿಕ ತಂದೆಯು ಹೇಳಿದರು. ತಂದೆಯು ಸರ್ವಶ್ರೇಷ್ಠನಾಗಿದ್ದಾರೆ. ಎಲ್ಲಾ ಆತ್ಮರಿಗಿಂತಲೂ ಶ್ರೇಷ್ಠನಾಗಿದ್ದಾರೆ. ಎಲ್ಲರಲ್ಲಿ ಆತ್ಮವೇ ಇದೆಯಲ್ಲವೆ. ಈ ಶರೀರವು ಪಾತ್ರವನ್ನಭಿನಯಿಸುವುದಕ್ಕಾಗಿ ಸಿಕ್ಕಿದೆ, ನೀವೀಗ ನೋಡುತ್ತೀರಿ- ಸನ್ಯಾಸಿ ಮೊದಲಾದವರ ಶರೀರಕ್ಕೂ ಸಹ ಎಷ್ಟೊಂದು ಮಾನ್ಯತೆಯಿರುತ್ತದೆ. ತಮ್ಮ ಗುರುಗಳನ್ನು ಎಷ್ಟೊಂದು ಮಹಿಮೆ ಮಾಡುತ್ತಾರೆ. ಈ ಬೇಹದ್ದಿನ ತಂದೆಯಂತೂ ಎಷ್ಟು ಗುಪ್ತವಾಗಿದ್ದಾರೆ, ನೀವು ಮಕ್ಕಳು ತಿಳಿದಿದ್ದೀರಿ- ಶಿವತಂದೆಯು ಸರ್ವಶ್ರೇಷ್ಠನಾಗಿದ್ದಾರೆ, ಅವರಿಗಿಂತಲೂ ಶ್ರೇಷ್ಠರು ಯಾರೂ ಇಲ್ಲ. ಧರ್ಮರಾಜನೂ ಅವರ ಜೊತೆಯಿದ್ದಾರೆ ಏಕೆಂದರೆ ಭಕ್ತಿಮಾರ್ಗದಲ್ಲಿ ಹೇ ಭಗವಂತನೇ ಕ್ಷಮಿಸಿ ಎಂದು ಕ್ಷಮೆಯಾಚಿಸುತ್ತಾರೆ ಅಂದಾಗ ಭಗವಂತನು ಏನು ಮಾಡುತ್ತಾರೆ? ಇಲ್ಲಿ ಸರ್ಕಾರವಂತೂ ತಪ್ಪು ಮಾಡಿದವರನ್ನು ಜೈಲಿನಲ್ಲಿಡುತ್ತಾರೆ, ಆ ಧರ್ಮರಾಜನು ಗರ್ಭಜೈಲಿನಲ್ಲಿ ಶಿಕ್ಷೆಯನ್ನು ಕೊಡುತ್ತಾರೆ. ದುಃಖವನ್ನೂ ಸಹ ಅನುಭವಿಸಬೇಕಾಗುತ್ತದೆ, ಇದಕ್ಕೆ ಕರ್ಮಭೋಗವೆಂದು ಹೇಳಲಾಗುತ್ತದೆ. ಕರ್ಮಭೋಗವನ್ನು ಯಾರು ಭೋಗಿಸುತ್ತಾರೆ? ಏನಾಗುತ್ತದೆ? ಎಲ್ಲವನ್ನೂ ನೀವೀಗ ತಿಳಿದುಕೊಂಡಿದ್ದೀರಿ- ಹೇ ಪ್ರಭು, ಕ್ಷಮಿಸಿ ದುಃಖವನ್ನು ದೂರ ಮಾಡಿ, ಸುಖವನ್ನು ಕೊಡಿ ಎಂದು ಹೇಳುತ್ತಾರೆ ಅಂದಾಗ ಭಗವಂತನು ಯಾವುದೇ ಔಷಧಿ ಕೊಡುತ್ತಾರೆಯೇ? ಅವರೇನೂ ಮಾಡಲು ಸಾಧ್ಯವಿಲ್ಲ ಅಂದಮೇಲೆ ಭಗವಂತನಿಗೆ ಏಕೆ ಹೇಳುತ್ತಾರೆ? ಏಕೆಂದರೆ ಭಗವಂತನ ಜೊತೆ ಧರ್ಮರಾಜನೂ ಇದ್ದಾರೆ. ಕೆಟ್ಟಕರ್ಮವನ್ನು ಮಾಡಿದರೆ ಅವಶ್ಯವಾಗಿ ಅನುಭವಿಸಬೇಕಾಗುತ್ತದೆ. ಗರ್ಭಜೈಲಿನಲ್ಲಿ ಶಿಕ್ಷೆಯೂ ಸಿಗುತ್ತದೆ, ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಾತ್ಕಾರವಾಗದೆ ಶಿಕ್ಷೆಯು ಸಿಗುವುದಿಲ್ಲ. ಗರ್ಭಜೈಲಿನಲ್ಲಿ ಯಾವುದೇ ಔಷಧಿ ಮೊದಲಾದವು ಇಲ್ಲ. ಅಲ್ಲಿ ಶಿಕ್ಷೆಯನ್ನು ಅನುಭವಿಸಲೇಬೇಕಾಗಿದೆ. ಯಾವಾಗ ದುಃಖಿಯಾಗುವರೋ ಆಗ ಭಗವಂತ ನಮ್ಮನ್ನು ಈ ಜೈಲಿನಿಂದ ಹೊರತೆಗೆಯಿರಿ ಎಂದು ಹೇಳುತ್ತಾರೆ.

ಈಗ ನೀವು ಮಕ್ಕಳು ಯಾರ ಸನ್ಮುಖದಲ್ಲಿ ಕುಳಿತಿದ್ದೀರಿ? ಸರ್ವಶ್ರೇಷ್ಠ ತಂದೆಯಾಗಿದ್ದಾರೆ ಆದರೆ ಗುಪ್ತವಾಗಿದ್ದಾರೆ. ಎಲ್ಲರಿಗಂತೂ ಶರೀರವು ಕಾಣಿಸುತ್ತದೆ. ಇಲ್ಲಿ ಶಿವತಂದೆಗೆ ತಮ್ಮ ಕೈಕಾಲು ಇತ್ಯಾದಿಯೇನೂ ಇಲ್ಲ. ಹೂಗಳನ್ನು ಸಹ ಯಾರು ಸ್ವೀಕಾರ ಮಾಡುತ್ತಾರೆ? ಅವಶ್ಯಕತೆಯಿದ್ದಲ್ಲಿ ಇವರ (ಬ್ರಹ್ಮಾ) ಕೈಯಿಂದಲೇ ಸ್ವೀಕಾರ ಮಾಡಬೇಕಾಗುವುದು ಆದರೆ ಯಾರಿಂದಲೂ ತೆಗೆದುಕೊಳ್ಳುವುದಿಲ್ಲ. ಹೇಗೆ ಯಾರು ಎಂದೂ ಸ್ಪರ್ಷಿಸಬಾರದು ಎಂದು ಶಂಕರಾಚಾರ್ಯರು ಹೇಳುತ್ತಾರೆ ಅಂದಾಗ ತಂದೆಯೂ ಸಹ ಹೇಳುತ್ತಾರೆ- ನಾನು ಪತಿತರಿಂದ ಏನನ್ನಾದರೂ ಹೇಗೆ ತೆಗೆದುಕೊಳ್ಳಲಿ? ನನಗೆ ಹೂ ಇತ್ಯಾದಿಗಳ ಅವಶ್ಯಕತೆಯಿಲ್ಲ. ಭಕ್ತಿಮಾರ್ಗದಲ್ಲಿ ಸೋಮನಾಥನ ಮಂದಿರವನ್ನು ಕಟ್ಟಿಸುತ್ತಾರೆ, ಹೂವನ್ನಿಡುತ್ತಾರೆ ಆದರೆ ನನಗಂತೂ ಶರೀರವೇ ಇಲ್ಲ. ಆತ್ಮವನ್ನು ಸ್ಪರ್ಷಿಸುವುದಾದರೂ ಹೇಗೆ? ನಾನು ಪತಿತರಿಂದ ಹೂವನ್ನು ಹೇಗೆ ಸ್ವೀಕರಿಸಲಿ! ನನ್ನನ್ನು ಯಾರೂ ಸ್ಪರ್ಷಿಸಲೂ ಸಾಧ್ಯವಿಲ್ಲ. ಪತಿತರನ್ನು ಮುಟ್ಟುವುದಕ್ಕೂ ಬಿಡುವುದಿಲ್ಲ. ಇಂದು ಬಾಬಾ ಎಂದು ಹೇಳುತ್ತಾರೆ, ನಾಳೆ ಹೋಗಿ ನರಕವಾಸಿಗಳಾಗುತ್ತಾರೆ. ಇಂತಹವರನ್ನು ನೋಡುವುದೂ ಇಲ್ಲ. ನಾನು ಸರ್ವಶ್ರೇಷ್ಠನಾಗಿದ್ದೇನೆ. ನಾಟಕದನುಸಾರ ಈ ಸನ್ಯಾಸಿ ಮೊದಲಾದವರ ಉದ್ಧಾರವನ್ನೂ ನಾನೇ ಮಾಡಬೇಕಾಗಿದೆ ಆದರೆ ನನ್ನನ್ನು ಯಾರೂ ಅರಿತುಕೊಂಡೇ ಇಲ್ಲ. ಶಿವನ ಪೂಜೆ ಮಾಡುತ್ತಾರೆ ಆದರೆ ಇವರೇ ಗೀತೆಯ ಭಗವಂತನಾಗಿದ್ದಾರೆ. ಇವರು ಬಂದು ಜ್ಞಾನವನ್ನು ಕೊಡುತ್ತಾರೆ ಎಂಬುದು ಅವರಿಗೆ ತಿಳಿದಿಲ್ಲ. ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿಬಿಟ್ಟಿದ್ದಾರೆ. ಕೃಷ್ಣನು ಜ್ಞಾನವನ್ನು ಕೊಟ್ಟರೆ ಮತ್ತೆ ಶಿವನು ಏನು ಮಾಡುತ್ತಿರುತ್ತಾರೆ? ಆದ್ದರಿಂದ ಮನುಷ್ಯರು ತಿಳಿಯುತ್ತಾರೆ- ಶಿವನು ಬರುವುದೇ ಇಲ್ಲವೆಂದು. ಅರೆ! ಪತಿತ-ಪಾವನನೆಂದು ಕೃಷ್ಣನಿಗೆ ಹೇಳುತ್ತಾರೆಯೇ? ನನಗೇ ಪತಿತ-ಪಾವನನೆಂದು ಹೇಳುತ್ತಾರಲ್ಲವೆ. ನಿಮ್ಮಲ್ಲಿಯೂ ಸಹ ಕೆಲವರು ತಂದೆಗೆ ಅಷ್ಟು ಗೌರವವನ್ನು ಇಡುವುದೇ ಇಲ್ಲ. ತಂದೆಯು ಎಷ್ಟು ಸಾಧಾರಣವಾಗಿದ್ದಾರೆ, ನಾನು ಈ ಋಷಿ-ಮುನಿ ಮೊದಲಾದವರೆಲ್ಲರ ತಂದೆಯಾಗಿದ್ದೇನೆ ಎಂದು ತಿಳಿಸುತ್ತಾರೆ. ಯಾರೆಲ್ಲ ಶಂಕರಾಚಾರ್ಯ ಮೊದಲದವರಿದ್ದಾರೆಯೋ ಅವರೆಲ್ಲಾ ಆತ್ಮಗಳ ತಂದೆಯು ನಾನಾಗಿದ್ದೇನೆ. ಶರೀರಗಳ ತಂದೆಯಂತೂ ಇದ್ದೇ ಇರುವರು ಆದರೆ ನಾನು ಎಲ್ಲಾ ಆತ್ಮಗಳ ತಂದೆಯಾಗಿದ್ದೇನೆ. ಎಲ್ಲರೂ ನನ್ನನ್ನು ಪೂಜಿಸುತ್ತಾರೆ. ಈಗ ನಾನೇ ಇಲ್ಲಿ ಮುಂದೆ ಕುಳಿತಿದ್ದೇನೆ ಆದರೆ ನಾವು ಎಲ್ಲರೂ ಯಾರ ಮುಂದೆ ಕುಳಿತಿದ್ದೇವೆಂದು ಅರಿತುಕೊಂಡಿರುವುದಿಲ್ಲ.

ಆತ್ಮಗಳು ಜನ್ಮ-ಜನ್ಮಾಂತರದಿಂದ ದೇಹಾಭಿಮಾನದಲ್ಲಿ ಸಿಲುಕಿಕೊಂಡಿರುವ ಕಾರಣ ತಂದೆಯನ್ನು ನೆನಪು ಮಾಡುವುದಿಲ್ಲ. ದೇಹವನ್ನೇ ನೋಡುತ್ತಾರೆ, ಆತ್ಮಾಭಿಮಾನಿಯಾಗಿದ್ದಾಗಲೇ ಆ ತಂದೆಯನ್ನು ನೆನಪು ಮಾಡುವರು ಮತ್ತು ತಂದೆಯ ಶ್ರೀಮತದಂತೆ ನಡೆಯುವರು. ತಂದೆಯು ತಿಳಿಸುತ್ತಾರೆ- ನನ್ನನ್ನು ಅರಿತುಕೊಳ್ಳುವುದಕ್ಕೆ ಎಲ್ಲರೂ ಪುರುಷಾರ್ಥಿಗಳಾಗಿದ್ದಾರೆ, ಅಂತಿಮದಲ್ಲಿ ಸಂಪೂರ್ಣ ಆತ್ಮಾಭಿಮಾನಿಗಳಾಗುವವರೇ ತೇರ್ಗಡೆಯಾಗುತ್ತಾರೆ. ಉಳಿದೆಲ್ಲರಲ್ಲಿ ಅಲ್ಪಸ್ವಲ್ಪ ದೇಹಾಭಿಮಾನವು ಇದ್ದೇ ಇರುವುದು. ತಂದೆಯಂತೂ ಗುಪ್ತವಾಗಿದ್ದಾರೆ, ಅವರಿಗೆ ಏನನ್ನೂ ಕೊಡಲು ಸಾಧ್ಯವಿಲ್ಲ. ಕುಮಾರಿಯರು ಶಿವನ ಮಂದಿರಕ್ಕೂ ಹೋಗಿ ತಿಳಿಸಬಹುದು. ಕುಮಾರಿಯರೇ ಶಿವತಂದೆಯ ಪರಿಚಯವನ್ನು ಕೊಟ್ಟಿದ್ದೀರಿ. ಹಾಗೆ ನೋಡಿದರೆ ಕುಮಾರ-ಕುಮಾರಿಯರಿಬ್ಬರೂ ಸೇವೆ ಮಾಡಿದ್ದೀರಿ, ಮಾತೆಯರನ್ನು ವಿಶೇಷವಾಗಿ ಮೇಲೆತ್ತುತ್ತೇವೆ ಏಕೆಂದರೆ ಅವರು ಪುರುಷರಿಗಿಂತಲೂ ಹೆಚ್ಚಿನ ಸೇವೆ ಮಾಡಿದ್ದಾರೆ ಅಂದಾಗ ಮಕ್ಕಳಿಗೆ ಸೇವೆಯ ಆಸಕ್ತಿಯಿರಬೇಕು. ಹೇಗೆ ಆ ಲೌಕಿಕ ವಿದ್ಯೆಯ ಆಸಕ್ತಿಯಿರುತ್ತದೆಯಲ್ಲವೆ. ಅದು ಸ್ಥೂಲವಿದ್ಯೆಯಾಗಿದೆ. ಇದು ಆತ್ಮಿಕ ವಿದ್ಯೆಯಾಗಿದೆ. ಲೌಕಿಕ ವಿದ್ಯೆಯನ್ನು ಓದುತ್ತಾರೆ, ವ್ಯಾಯಾಮವನ್ನು ಕಲಿಯುತ್ತಾರೆ ಆದರೆ ಸಿಗುವುದೇನೂ ಇಲ್ಲ. ತಿಳಿದುಕೊಳ್ಳಿ- ಯಾರಿಗಾದರೂ ಮಗುವಿನ ಜನ್ಮವಾಯಿತು ಎಂದರೆ ಬಹಳ ವಿಜೃಂಭಣೆಯಿಂದ ಜಯಂತಿಯನ್ನು ಆಚರಿಸುತ್ತಾರೆ ಆದರೆ ಅವರು ಪಡೆಯುವುದೇನು! ಆ ಮಗುವಿನಿಂದ ಏನಾದರೂ ಪಡೆಯಲು ಅಷ್ಟು ಸಮಯವೇ ಇಲ್ಲ. ಇಲ್ಲಿಂದಲೂ ಸಹ ಹೋಗಿ ಜನ್ಮ ತೆಗೆದುಕೊಳ್ಳುತ್ತಾರೆ ಆದರೆ ಅವರೂ ಸಹ ಏನನ್ನೂ ತಿಳಿದುಕೊಳ್ಳುವುದಿಲ್ಲ. ಇಲ್ಲಿ ವಿದ್ಯೆಯನ್ನು ಓದುತ್ತಾ ಯಾರು ಅಗಲಿಹೋಗಿರುವರೋ ಅವರು ಅದೇ ಅನುಸಾರ ಬಾಲ್ಯದಲ್ಲಿಯೇ ಶಿವತಂದೆಯನ್ನು ನೆನಪು ಮಾಡುತ್ತಿರಬಹುದು. ಇದಂತೂ ಮಂತ್ರವಾಗಿದೆಯಲ್ಲವೆ. ಚಿಕ್ಕಮಕ್ಕಳಿಗೆ ಕಲಿಸುತ್ತಾರೆ ಆದರೆ ಅವರು ಬಿಂದು ಇತ್ಯಾದಿಯೇನೂ ತಿಳಿದುಕೊಳ್ಳುವುದಿಲ್ಲ. ಕೇವಲ ಶಿವಬಾಬಾ, ಶಿವಬಾಬಾ ಎನ್ನುತ್ತಿರುತ್ತಾರೆ. ಶಿವತಂದೆಯನ್ನು ನೆನಪು ಮಾಡುವುದರಿಂದ ಸ್ವರ್ಗದ ಆಸ್ತಿಯನ್ನು ಪಡೆಯುತ್ತೀರಿ. ಅನ್ಯರಿಗೆ ತಿಳಿಸುತ್ತೀರೆಂದರೆ ಅವರೂ ಸಹ ಸ್ವರ್ಗದಲ್ಲಿ ಬಂದುಬಿಡುತ್ತಾರೆ ಆದರೆ ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಹೀಗೆ ಅನೇಕ ಮಕ್ಕಳು ಬರುತ್ತಾರೆ. ಶಿವಬಾಬಾ, ಶಿವಬಾಬಾ ಎಂದು ಹೇಳುತ್ತಿರುತ್ತಾರೆ ಮತ್ತೆ ಅಂತ್ಯಮತಿ ಸೋ ಗತಿಯಾಗಿಬಿಡುವುದು. ಈಗ ರಾಜಧಾನಿಯೂ ಸ್ಥಾಪನೆಯಾಗುತ್ತಿದೆ. ಮನುಷ್ಯರು ಶಿವನ ಪೂಜೆ ಮಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಹೇಗೆ ಚಿಕ್ಕಮಗು ಶಿವ, ಶಿವ ಎಂದು ಹೇಳುತ್ತದೆ, ಏನನ್ನೂ ಅರ್ಥಮಾಡಿಕೊಂಡಿರುವುದಿಲ್ಲವೋ ಹಾಗೆಯೇ ಇಲ್ಲಿಯೂ ಪೂಜೆ ಮಾಡುತ್ತಾರೆ. ಆದರೆ ತಿಳುವಳಿಕೆಯೇನೂ ಇಲ್ಲ. ಆದ್ದರಿಂದ ಅವರಿಗೆ ತಿಳಿಸಬೇಕು- ನೀವು ಯಾವ ಶಿವನ ಪೂಜೆಯನ್ನು ಮಾಡುತ್ತೀರೋ ಅವರೇ ಜ್ಞಾನಸಾಗರ, ಗೀತೆಯ ಭಗವಂತನಾಗಿದ್ದಾರೆ. ಅವರು ನಮಗೆ ತಿಳಿಸುತ್ತಿದ್ದಾರೆ. ಈ ಪ್ರಪಂಚದಲ್ಲಿ ಶಿವತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ ಎಂದು ಹೇಳುವಂತಹ ಮನುಷ್ಯರ್ಯಾರೂ ಇಲ್ಲ. ಇದನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ. ಕೆಲವೊಮ್ಮೆ ನೀವು ಮರೆತುಹೋಗುತ್ತೀರಿ. ಭಗವಾನುವಾಚ- ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ, ಭಗವಾನುವಾಚ- ಕಾಮ ಮಹಾಶತ್ರುವಾಗಿದೆ. ಇದರ ಮೇಲೆ ವಿಜಯಿಗಳಾಗಿ, ಹಳೆಯ ಪ್ರಪಂಚದ ಸನ್ಯಾಸ ಮಾಡಿ ಎಂದು ಯಾರು ಹೇಳಿದರು? ನೀವು ಹಠಯೋಗಿ, ಹದ್ದಿನ ಸನ್ಯಾಸಿಗಳಾಗಿದ್ದೀರಿ, ಅವರು ಶಂಕರಾಚಾರ್ಯರಾಗಿದ್ದಾರೆ, ತಂದೆಯು ಶಿವಾಚಾರ್ಯ ಆಗಿದ್ದಾರೆ ಅವರೇ ನಮಗೆ ಕಲಿಸುತ್ತಾರೆ. ಕೃಷ್ಣಾಚಾರ್ಯ ಎಂದು ಹೇಳಲು ಸಾಧ್ಯವಿಲ್ಲ. ಕೃಷ್ಣನು ಚಿಕ್ಕಮಗುವಾಗಿದ್ದಾನೆ, ಸತ್ಯಯುಗದಲ್ಲಿ ಜ್ಞಾನದ ಅವಶ್ಯಕತೆಯಿರುವುದಿಲ್ಲ.

ಎಲ್ಲಿ ಶಿವನ ಮಂದಿರಗಳಿವೆಯೋ ಅಲ್ಲಿ ನೀವು ಮಕ್ಕಳು ಬಹಳ ಒಳ್ಳೆಯ ಸೇವೆ ಮಾಡಬಹುದು. ಶಿವನ ಮಂದಿರಕ್ಕೆ ಹೋಗಿ, ಮಾತೆಯರು ಹೋಗುವುದು ಒಳ್ಳೆಯದಾಗಿದೆ, ಕನ್ಯೆಯರು ಹೋಗುವುದು ಅದಕ್ಕಿಂತಲೂ ಒಳ್ಳೆಯದಾಗಿದೆ. ಈಗಂತೂ ನಾವು ತಂದೆಯಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಾಗಿದೆ. ತಂದೆಯು ನಮಗೆ ಓದಿಸುತ್ತಾರೆ ಮತ್ತೆ ನಾವು ರಾಜ-ರಾಣಿಯರಾಗುತ್ತೇವೆ. ಸರ್ವಶ್ರೇಷ್ಠವಾಗಿರುವವರು ತಂದೆಯಾಗಿದ್ದಾರೆ. ಇಂತಹ ಶಿಕ್ಷಣವನ್ನು ಯಾವುದೇ ಮನುಷ್ಯರು ಕೊಡಲು ಸಾಧ್ಯವಿಲ್ಲ. ಇದು ಕಲಿಯುಗವಾಗಿದೆ, ಸತ್ಯಯುಗದಲ್ಲಿ ಇವರ ರಾಜ್ಯವಿತ್ತು, ಇವರು ರಾಜ-ರಾಣಿ ಹೇಗಾದರು? ಇವರು ಸತ್ಯಯುಗದ ಮಾಲೀಕರು, ರಾಜಯೋಗವನ್ನು ಯಾರು ಕಲಿಸಿದರು? ಯಾರ ಪೂಜೆಯನ್ನು ನೀವು ಮಾಡುತ್ತೀರೋ ಅವರು ನಮಗೆ ಓದಿಸಿ ಸತ್ಯಯುಗದ ಮಾಲೀಕರನ್ನಾಗಿ ಮಾಡುತ್ತಾರೆ. ಬ್ರಹ್ಮಾರವರ ಮೂಲಕ ಸ್ಥಾಪನೆ, ವಿಷ್ಣುವಿನ ಮೂಲಕ ಪಾಲನೆ, ಪತಿತ-ಪ್ರವೃತ್ತಿ ಮಾರ್ಗದವರೇ ಪಾವನ ಪ್ರವೃತ್ತಿ ಮಾರ್ಗದಲ್ಲಿ ಹೋಗುತ್ತಾರೆ. ಬಾಬಾ, ನಾವು ಪತಿತರನ್ನು ಪಾವನ ಮಾಡಿ ಈ ದೇವತೆಗಳನ್ನಾಗಿ ಮಾಡಿ ಎಂದು ಹೇಳುತ್ತಾರೆ. ಅದು ಪ್ರವೃತ್ತಿ ಮಾರ್ಗವಾಗಿದೆ. ಹೀಗೆ ಬಹಳಷ್ಟು ಮಂದಿ ದಂಪತಿಗಳಿರುತ್ತಾರೆ, ಅವರು ವಿಕಾರಕ್ಕಾಗಿ ವಿವಾಹ ಮಾಡಿಕೊಳ್ಳುವುದಿಲ್ಲ. ಕೇವಲ ಜೊತೆಗಾಗಿ ವಿವಾಹ ಮಾಡಿಕೊಳ್ಳುತ್ತಾರೆ. ಅಂದಾಗ ನೀವು ಮಕ್ಕಳು ಈ ರೀತಿ ಸೇವೆ ಮಾಡಬಹುದು. ಆಂತರ್ಯದಲ್ಲಿ ಆಸಕ್ತಿಯಿರಬೇಕು, ನಾವು ತಂದೆಗೆ ಸುಪುತ್ರರಾಗಿ ಹೋಗಿ ಏಕೆ ಸೇವೆ ಮಾಡಬಾರದು! ಹಳೆಯ ಪ್ರಪಂಚದ ವಿನಾಶವು ಮುಂದೆ ನಿಂತಿದೆ. ಈಗ ಶಿವತಂದೆಯು ತಿಳಿಸುತ್ತಾರೆ- ಕೃಷ್ಣನಂತೂ ಇಲ್ಲಿರಲು ಸಾಧ್ಯವಿಲ್ಲ. ಕೃಷ್ಣನು ಒಂದೇಬಾರಿ ಸತ್ಯಯುಗದಲ್ಲಿ ಬರುತ್ತಾನೆ ನಂತರದ ಜನ್ಮದಲ್ಲಿ ಅದೇ ಮುಖಲಕ್ಷಣಗಳ, ಅದೇ ಹೆಸರು ಇರುವುದಿಲ್ಲ. 84 ಜನ್ಮಗಳಲ್ಲಿ 84 ಮುಖಲಕ್ಷಣಗಳು ಇರುತ್ತವೆ. ಕೃಷ್ಣನು ಈ ಜ್ಞಾನವನ್ನು ಯಾರಿಗೂ ಕಲಿಸಲು ಸಾಧ್ಯವಿಲ್ಲ. ಆ ಸತ್ಯಯುಗದ ಕೃಷ್ಣನು ಇಲ್ಲಿ ಹೇಗೆ ಬರುತ್ತಾನೆ? ನೀವೀಗ ಈ ಮಾತುಗಳನ್ನು ತಿಳಿದುಕೊಂಡಿದ್ದೀರಿ. ಅರ್ಧಕಲ್ಪ ಒಳ್ಳೆಯ ಜನ್ಮವಿರುತ್ತವೆ, ನಂತರ ರಾವಣರಾಜ್ಯವು ಆರಂಭವಾಗುತ್ತದೆ. ಮನುಷ್ಯರು ಚಾಚೂತಪ್ಪದೆ ಪ್ರಾಣಿಗಳ ಸಮಾನರಾಗಿಬಿಡುತ್ತಾರೆ. ಪರಸ್ಪರ ಜಗಳ, ಗಲಾಟೆ ಮಾಡುತ್ತಿರುತ್ತಾರೆ. ಅಂದಮೇಲೆ ರಾವಣನ ಜನ್ಮವಾಯಿತಲ್ಲವೆ. ಉಳಿದಂತೆ 84 ಲಕ್ಷ ಜನ್ಮಗಳಂತೂ ಇಲ್ಲ. ಇಷ್ಟೊಂದು ವಿಭಿನ್ನತೆಯಿದೆ, ಅಂದಮೇಲೆ ಅಷ್ಟು ಹೆಚ್ಚು ಜನ್ಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದನ್ನು ತಂದೆಯೇ ತಿಳಿಸುತ್ತಾರೆ. ಅವರು ಸರ್ವಶ್ರೇಷ್ಠ ಭಗವಂತನಾಗಿದ್ದಾರೆ. ಅವರು ಓದಿಸುತ್ತಾರೆ. ಅವರ ನಂತರ ಇವರೂ ಇದ್ದಾರಲ್ಲವೆ. ಸರಿಯಾಗಿ ಓದಲಿಲ್ಲವೆಂದರೆ ಯಾರ ಬಳಿಯಾದರೂ ಹೋಗಿ ದಾಸ-ದಾಸಿಯರಾಗುತ್ತಾರೆ. ಶಿವತಂದೆಯ ಬಳಿ ದಾಸ-ದಾಸಿಯರಾಗುವರೇ? ಇಲ್ಲ. ತಂದೆಯಂತೂ ತಿಳಿಸುತ್ತಾರೆ- ನೀವು ಓದದಿದ್ದರೆ ಸತ್ಯಯುಗದಲ್ಲಿ ಹೋಗಿ ದಾಸ-ದಾಸಿಯರಾಗುತ್ತೀರಿ. ಯಾರು ಏನೂ ಸೇವೆ ಮಾಡುವುದಿಲ್ಲ. ತಿನ್ನುವುದು, ಕುಡಿಯುವುದು, ಮಲಗುವುದರಲ್ಲಿಯೇ ಸಮಯವನ್ನು ಕಳೆಯುತ್ತಾರೆಂದರೆ ಅವರೇನಾಗುತ್ತಾರೆ? ಏನಾಗುತ್ತೇವೆಂದು ಬುದ್ಧಿಯಲ್ಲಿ ಬರುತ್ತದೆಯಲ್ಲವೇ! ನಾನಂತೂ ಮಹಾರಾಜನಾಗುತ್ತೇನೆ, ನನ್ನ ಮುಂದೆಯೂ ಬರುವುದಿಲ್ಲ. ಸ್ವಯಂ ತಿಳಿದಿರುತ್ತಾರೆ- ನಾನು ಈ ರೀತಿ ಆಗುತ್ತೇನೆಂದು. ಆದರೂ ನಾಚಿಕೆ ಎಲ್ಲಿದೆ, ನಾವು ನನ್ನ ಉನ್ನತಿಯನ್ನು ಮಾಡಿಕೊಂಡು ಏನಾದರೂ ಪಡೆಯಬೇಕೆಂದು ತಿಳಿದುಕೊಳ್ಳುವುದೇ ಇಲ್ಲ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸದಾ ಶಿವತಂದೆಯು ಹೇಳುತ್ತಾರೆಂದೇ ತಿಳಿಯಿರಿ, ಈ ಬ್ರಹ್ಮಾರವರು ಹೇಳುತ್ತಾರೆಂದು ತಿಳಿಯಬೇಡಿ, ಶಿವತಂದೆಗೆ ಗೌರವವನ್ನಿಡಬೇಕಲ್ಲವೆ. ಅವರ ಜೊತೆ ಮತ್ತೆ ಧರ್ಮರಾಜನೂ ಇದ್ದಾರೆ. ಇಲ್ಲವಾದರೆ ಧರ್ಮರಾಜನ ಬಹಳ ಶಿಕ್ಷೆಗಳನ್ನು ಅನುಭವಿಸುತ್ತೀರಿ. ಕುಮಾರಿಯರಂತೂ ಬಹಳ ಬುದ್ಧಿವಂತರಾಗಬೇಕು. ಇಲ್ಲಿ ಕೇಳಿ ಹೊರಗಡೆ ಹೋದಾಗ ಸಮಾಪ್ತಿಯಾಗುವುದಿಲ್ಲ ತಾನೆ. ಭಕ್ತಿಮಾರ್ಗದ ಎಷ್ಟೊಂದು ಸಾಮಗ್ರಿಗಳಿವೆ, ಈಗ ತಂದೆಯು ತಿಳಿಸುತ್ತಾರೆ- ವಿಷ (ವಿಕಾರ) ವನ್ನು ಬಿಡಿ, ಸ್ವರ್ಗವಾಸಿಗಳಾಗಿ. ಈ ರೀತಿ ಸ್ಲೋಗನ್ಗಳನ್ನು ಬರೆಸಿ, ಸಾಹಸವಂತ ಸಿಂಹಿಣಿಯರಾಗಿ. ಬೇಹದ್ದಿನ ತಂದೆಯು ಸಿಕ್ಕಿದ್ದಾರೆಂದಮೇಲೆ ಇನ್ನೇನು ಚಿಂತೆಯಿದೆ? ಸರ್ಕಾರವು ಧರ್ಮವನ್ನು ಒಪ್ಪುವುದೇ ಇಲ್ಲ ಅಂದಮೇಲೆ ಅವರು ಮನುಷ್ಯರಿಂದ ದೇವತೆಗಳಾಗಿ ಹೇಗೆ ಬರುತ್ತಾರೆ? ಸರ್ಕಾರದವರು ಹೇಳುತ್ತಾರೆ- ನಾವು ಯಾವುದೇ ಧರ್ಮವನ್ನು ಒಪ್ಪುವುದೇ ಇಲ್ಲ. ನಾವು ಎಲ್ಲರೂ ಒಂದೇ ಎಂದು ತಿಳಿಯುತ್ತೇವೆಂದು ಹೇಳುತ್ತಾರೆ ಅಂದಮೇಲೆ ಮತ್ತೇಕೆ ಜಗಳವಾಡುತ್ತೀರಿ? ಪ್ರಪಂಚದಲ್ಲಿ ಅಸತ್ಯವೇ ಅಸತ್ಯವಿದೆ. ಇಲ್ಲಿ ಸತ್ಯದ ಅಂಶವು ಇಲ್ಲ. ಮೊಟ್ಟಮೊದಲು ಈಶ್ವರ ಸರ್ವವ್ಯಾಪಿ ಎಂದು ಹೇಳುವುದರಿಂದಲೇ ಸುಳ್ಳು ಆರಂಭವಾಗುತ್ತದೆ. ಹಿಂದೂ ಧರ್ಮವಂತೂ ಯಾವುದೂ ಇಲ್ಲ. ಕ್ರಿಶ್ಚಿಯನ್ನರ ಧರ್ಮವು ನಡೆದುಬರುತ್ತದೆ, ಅವರು ತಮ್ಮ ಧರ್ಮವನ್ನು ಬಿಡುವುದಿಲ್ಲ. ಆದರೆ ಇದೊಂದೇ ಧರ್ಮವಾಗಿದೆ, ಯಾರು ತಮ್ಮ ಧರ್ಮವನ್ನು ಬದಲಾಯಿಸಿ ಹಿಂದೂ ಧರ್ಮವೆಂದೆ ಹೇಳುತ್ತಾರೆ ಮತ್ತು ಶ್ರೀ ಶ್ರೀ ಎಂದು ಎಂತೆಂತಹ ಹೆಸರುಗಳನ್ನಿಟ್ಟುಕೊಳ್ಳುತ್ತಾರೆ. ಈಗ ಶ್ರೀ ಅರ್ಥಾತ್ ಶ್ರೇಷ್ಠರೆಲ್ಲಿದ್ದಾರೆ? ಶ್ರೀಮತವು ಯಾರದೂ ಇಲ್ಲ. ಅವರದಂತೂ ಕಲಿಯುಗದ ಮತವಾಗಿದೆ ಅದಕ್ಕೆ ಶ್ರೀಮತವೆಂದು ಹೇಗೆ ಹೇಳಲು ಸಾಧ್ಯ? ಈಗ ನೀವು ಕುಮಾರಿಯರು ಎದ್ದು ನಿಲ್ಲಿ, ಯಾರಿಗೇ ಬೇಕಾದರೂ ತಿಳಿಸುವವರಾಗಿ ಆದರೆ ಒಳ್ಳೆಯ ಯೋಗಯುಕ್ತ ಬುದ್ಧಿವಂತ ಕುಮಾರಿಯರು ಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಉನ್ನತಿ ಮಾಡಿಕೊಳ್ಳುವುದಕ್ಕೆ ತಂದೆಯ ಸೇವೆಯಲ್ಲಿಯೇ ತತ್ಪರರಾಗಿರಬೇಕಾಗಿದೆ. ಕೇವಲ ತಿನ್ನುವುದು, ಕುಡಿಯುವುದು, ಮಲಗುವುದು.... ಇದು ಪದವಿಯನ್ನು ಕಳೆದುಕೊಳ್ಳುವುದಾಗಿದೆ.

2. ತಂದೆ ಮತ್ತು ವಿದ್ಯೆಯ ಪ್ರತಿ ಗೌರವವನ್ನಿಡಬೇಕಾಗಿದೆ. ಆತ್ಮಾಭಿಮಾನಿಗಳಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ತಂದೆಯ ಶಿಕ್ಷಣವನ್ನು ಧಾರಣೆ ಮಾಡಿಕೊಂಡು ಸುಪುತ್ರರಾಗಬೇಕಾಗಿದೆ.

ವರದಾನ:
ಸೇವೆ ಮಾಡುತ್ತಾ ಉಪರಾಮ ಸ್ಥಿತಿಯಲ್ಲಿರುವಂತಹ ಯೋಗಯುಕ್ತ, ಯುಕ್ತಿಯುಕ್ತ ಸೇವಾಧಾರಿ ಭವ

ಯಾರು ಯೋಗಯುಕ್ತ, ಯುಕ್ತಿಯುಕ್ತ ಸೇವಾಧಾರಿಯಾಗಿದ್ದಾರೆ ಅವರು ಸೇವೆ ಮಾಡುತ್ತಿದ್ದರೂ ಸದಾ ಉಪರಾಮ ವಾಗಿರುತ್ತಾರೆ. ಹೀಗೆ ಹೇಳುವುದಿಲ್ಲಾ ಸೇವೆ ಹೆಚ್ಚಾಗಿದೆ ಆದ್ದರಿಂದ ಅಶರೀರಿಯಾಗಲು ಸಾಧ್ಯವಿ¯್ಲ ಎಂದು. ಆದರೆ ನೆನಪಿರಲಿ ಇದು ನನ್ನ ಸೇವೆ ಅಲ್ಲಾ, ತಂದೆ ಕೊಟ್ಟಿರುವ ಸೇವೆ ಎಂದು ತಿಳಿದಾಗ ನಿಭರ್ಂಧನರಾಗಿರುವಿರಿ. ಟ್ರಸ್ಟಿಯಾಗಿರುವಿರಿ, ಬಂಧನಮುಕ್ತನಾಗಿರುವೆ ಈ ರೀತಿ ಪ್ರಾಕ್ಟಿಸ್ ಮಾಡಿ. ಅತೀ ಆದಾಗ ಅಂತಿಮ ಸ್ಥಿತಿಯಾದ ಕರ್ಮಾತೀತ ಅವಸ್ಥೆಯ ಅಭ್ಯಾಸ ಮಾಡಿ. ಹೇಗೆ ಮಧ್ಯೆ-ಮಧ್ಯೆ ಸಂಕಲ್ಪಗಳ ಟ್ರಾಫಿಕ್ ಕಂಟ್ರೋಲ್ ಮಾಡುವಿರಿ ಅದೇ ರೀತಿ ಅತಿ ಆದ ಸಮಯದಲ್ಲಿ ಅಂತ್ಯದ ಸ್ಟೇಜ್ನ ಅನುಭವ ಮಾಡಿ ಆಗ ಅಂತ್ಯದ ಸಮಯದಲ್ಲಿ ಪಾಸ್ ವಿತ್ ಹಾನರ್ ಆಗುವಿರಿ.

ಸ್ಲೋಗನ್:
ಶುಭಭಾವನೆ ಕಾರಣವನ್ನು ನಿವಾರಣೆಯಲ್ಲಿ ಪರಿವರ್ತನೆ ಮಾಡಿಬಿಡುತ್ತದೆ.


ಅವ್ಯಕ್ತ ಸೂಚನೆ: ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.

ಪವಿತ್ರತೆಯು ಬ್ರಾಹ್ಮಣ ಜೀವನದ ವಿಶೇಷ ಜನ್ಮದ ವಿಶೇಷತೆಯಾಗಿದೆ. ಪವಿತ್ರ ಸಂಕಲ್ಪ ಬ್ರಾಹ್ಮಣರಿಗೆ ಬುದ್ಧಿಯ ಭೋಜನವಾಗಿದೆ. ಪವಿತ್ರ ದೃಷ್ಟಿ ಬ್ರಾಹ್ಮಣರ ಕಣ್ಣುಗಳಿಗೆ ಬೆಳಕಾಗಿದೆ, ಪವಿತ್ರ ಕರ್ಮ ಬ್ರಾಹ್ಮಣ ಜೀವನದ ವಿಶೇಷ ಕರ್ತವ್ಯ. ಪವಿತ್ರ ಸಂಬಂಧ ಮತ್ತು ಸಂಪರ್ಕ ಬ್ರಾಹ್ಮಣ ಜೀವನದ ಮರ್ಯಾದೆಯಾಗಿದೆ. ಇಂತಹ ಮಹಾನ್ ವಸ್ತುವನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ ಪರಿಶ್ರಮ ಪಡಬೇಡಿ, ಹಠದಿಂದಲ್ಲ. ಈ ಪವಿತ್ರತೆಯು ನಿಮ್ಮ ಜೀವನದ ವರದಾನವಾಗಿದೆ.