09.08.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ಪುರುಷೋತ್ತಮ ಸಂಗಮಯುಗವು ಕಲ್ಯಾಣಕಾರಿ ಯುಗವಾಗಿದೆ, ಇದರಲ್ಲಿಯೇ ವಿದ್ಯೆಯಿಂದ ನೀವು ಶ್ರೀಕೃಷ್ಣ ಪುರಿಯ ಮಾಲೀಕರಾಗಬೇಕಾಗಿದೆ.”

ಪ್ರಶ್ನೆ:
ತಂದೆಯು ಮಾತೆಯರ ಮೇಲೆ ಜ್ಞಾನದ ಕಲಶವನ್ನು ಏಕೆ ಇಡುತ್ತಾರೆ? ಯಾವ ಒಂದು ಪದ್ಧತಿಯು ಭಾರತದಲ್ಲಿಯೇ ನಡೆಯುತ್ತದೆ?

ಉತ್ತರ:
ಪವಿತ್ರತೆಯ ಶ್ರೀರಕ್ಷೆಯನ್ನು ಕಟ್ಟಿ ಎಲ್ಲರನ್ನೂ ಪತಿತರಿಂದ ಪಾವನರನ್ನಾಗಿ ಮಾಡುವುದಕ್ಕೋಸ್ಕರ ತಂದೆಯು ಮಾತೆಯರ ಮೇಲೆ ಜ್ಞಾನದ ಕಲಶವನ್ನಿಡುತ್ತಾರೆ. ರಕ್ಷಾಬಂಧನದ ಪದ್ಧತಿಯು ಭಾರತದಲ್ಲಿಯೇ ಇದೆ. ಸಹೋದರಿಯು ಸಹೋದರನಿಗೆ ಶ್ರೀರಕ್ಷೆಯನ್ನು ಕಟ್ಟುತ್ತಾಳೆ, ಅದು ಪವಿತ್ರತೆಯ ಸಂಕೇತವಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ನನ್ನೊಬ್ಬನನ್ನೇ ನೆನಪು ಮಾಡಿ ಆಗ ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗುತ್ತೀರಿ.

ಗೀತೆ:
ಭೋಲಾನಾಥನಿಗಿಂತ ಭಿನ್ನ ಯಾರೂ ಇಲ್ಲ..............

ಓಂ ಶಾಂತಿ.
ಇದು ಭೋಲಾನಾಥನ ಮಹಿಮೆಯಾಗಿದೆ. ಇವರಿಗೆ ಕೊಡುವ ದಾತನೆಂದು ಹೇಳುತ್ತಾರೆ. ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ಶ್ರೀಲಕ್ಷ್ಮೀ-ನಾರಾಯಣರಿಗೆ ಈ ರಾಜ್ಯಭಾಗ್ಯವನ್ನು ಯಾರು ಕೊಟ್ಟರು? ಅವಶ್ಯವಾಗಿ ಭಗವಂತನೇ ಕೊಟ್ಟಿರಬೇಕು ಏಕೆಂದರೆ ಅವರೇ ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಸ್ವರ್ಗದ ರಾಜ್ಯಭಾಗ್ಯವನ್ನು ಭೋಲಾನಾಥನು ಹೇಗೆ ಲಕ್ಷ್ಮೀ-ನಾರಾಯಣರಿಗೆ ಕೊಟ್ಟರು ಹಾಗೆಯೇ ಕೃಷ್ಣನಿಗೂ ಕೊಟ್ಟರು. ರಾಧೆ-ಕೃಷ್ಣ ಅಥವಾ ಲಕ್ಷ್ಮೀ-ನಾರಾಯಣ ಎಂಬುದು ಒಂದೇ ಮಾತಾಗಿದೆ ಆದರೆ ರಾಜಧಾನಿಯಿಲ್ಲ. ಅವರಿಗೆ ಪರಮಪಿತ ಪರಮಾತ್ಮನ ವಿನಃ ಮತ್ತ್ಯಾರೂ ರಾಜ್ಯವನ್ನು ಕೊಡಲು ಸಾಧ್ಯವಿಲ್ಲ. ಅವರ ಜನ್ಮವು ಸ್ವರ್ಗದಲ್ಲಿಯೇ ಆಗುತ್ತದೆ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನೀವು ಮಕ್ಕಳು ಜನ್ಮಾಷ್ಟಮಿಯೆಂದು ತಿಳಿಸುತ್ತೀರಿ. ಕೃಷ್ಣನ ಜನ್ಮಾಷ್ಟಮಿಯಿದೆಯೆಂದರೆ ರಾಧೆಯದೂ ಇರಬೇಕು ಏಕೆಂದರೆ ಇಬ್ಬರೂ ಸ್ವರ್ಗವಾಸಿಗಳಾಗಿದ್ದರು. ರಾಧೆ-ಕೃಷ್ಣರ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ. ಮುಖ್ಯ ಮಾತೇನೆಂದರೆ ಅವರಿಗೆ ಈ ರಾಜ್ಯವನ್ನು ಯಾರು ಕೊಟ್ಟರು? ಇಲ್ಲಿ ರಾಜಯೋಗವನ್ನು ಯಾವಾಗ ಮತ್ತು ಯಾರು ಕಲಿಸಿದರು? ಸ್ವರ್ಗದಲ್ಲಂತೂ ಕಲಿಸಿರುವುದಿಲ್ಲ. ಸತ್ಯಯುಗದಲ್ಲಿ ಅವರು ಉತ್ತಮ ಪುರುಷರಾಗಿರುತ್ತಾರೆ. ಕಲಿಯುಗದ ನಂತರ ಸತ್ಯಯುಗವಾಗುತ್ತದೆ ಅಂದಾಗ ಅವಶ್ಯವಾಗಿ ಕಲಿಯುಗದ ಅಂತ್ಯದಲ್ಲಿಯೇ ರಾಜಯೋಗವನ್ನು ಕಲಿತಿರುತ್ತಾರೆ, ಇವರು ನಂತರ ಹೊಸ ಜನ್ಮದಲ್ಲಿ ರಾಜ್ಯ ಪದವಿಯನ್ನು ಪ್ರಾಪ್ತಿ ಮಾಡಿಕೊಂಡರು. ಹಳೆಯ ಪ್ರಪಂಚದಿಂದ ಹೊಸ, ಪಾವನ ಪ್ರಪಂಚವಾಗುತ್ತದೆ ಅಂದಮೇಲೆ ಅವಶ್ಯವಾಗಿ ಪತಿತ-ಪಾವನನೇ ಬಂದಿರುವರು. ಈಗ ಸಂಗಮಯುಗದಲ್ಲಿ ಯಾವ ಧರ್ಮವಾಗುತ್ತದೆ - ಇದು ಯಾರಿಗೂ ತಿಳಿದಿಲ್ಲ. ಹಳೆಯ ಪ್ರಪಂಚ ಮತ್ತು ಹೊಸ ಪ್ರಪಂಚದ ನಡುವಿನ ಪುರುಷೋತ್ತಮ ಸಂಗಮಯುಗವು ಇದಾಗಿದೆ. ಇದರ ಗಾಯನವೂ ಇದೆ - ಈ ಲಕ್ಷ್ಮೀ-ನಾರಾಯಣರು ಹೊಸ ಪ್ರಪಂಚದ ಮಾಲೀಕರಾಗಿದ್ದಾರೆ. ಈ ಆತ್ಮಗಳಿಗೆ ಹಿಂದಿನ ಜನ್ಮದಲ್ಲಿ ಪರಮಪಿತ ಪರಮಾತ್ಮನು ರಾಜಯೋಗವನ್ನು ಕಲಿಸಿದ್ದರು. ಯಾವ ಪುರುಷಾರ್ಥದ ಪ್ರಾಲಬ್ಧವು ಮತ್ತೆ ಹೊಸ ಜಗತ್ತಿನಲ್ಲಿ ಸಿಗುತ್ತದೆ. ಇದರ ಹೆಸರೇ ಆಗಿದೆ, ‘ಕಲ್ಯಾಣಕಾರಿ ಪುರುಷೋತ್ತಮ ಸಂಗಮಯುಗ’. ಅವಶ್ಯವಾಗಿ ಬಹಳ ಜನ್ಮಗಳ ಅಂತಿಮಜನ್ಮದಲ್ಲಿಯೇ ಇವರಿಗೆ ಯಾರಾದರೂ ರಾಜಯೋಗವನ್ನು ಕಲಿಸಿರಬೇಕು. ಕಲಿಯುಗದಲ್ಲಿ ಅನೇಕ ಧರ್ಮಗಳಿವೆ, ಸತ್ಯಯುಗದಲ್ಲಿ ಒಂದು ದೇವಿ-ದೇವತಾ ಧರ್ಮವಿದೆ. ಸಂಗಮಯುಗದಲ್ಲಿ ಯಾವ ಧರ್ಮವಿದೆ, ಇದರಿಂದ ಈ ಪುರುಷಾರ್ಥ ಮಾಡಿ ರಾಜಯೋಗವನ್ನು ಕಲಿತರು ಮತ್ತು ಸತ್ಯಯುಗದಲ್ಲಿ ಪ್ರಾಲಬ್ಧವನ್ನು ಭೋಗಿಸಿದರು. ಅವಶ್ಯವಾಗಿ ಸಂಗಮಯುಗದಲ್ಲಿ ಬ್ರಹ್ಮಾರವರ ಮೂಲಕ ಬ್ರಾಹ್ಮಣರೇ ರಚಿಸಲ್ಪಟ್ಟರೆಂದು ತಿಳಿಯಲಾಗುತ್ತದೆ. ಬ್ರಹ್ಮನ ಮೂಲಕ ಕೃಷ್ಣ ಪುರಿಯ ಸ್ಥಾಪನೆ ಎಂದು ಚಿತ್ರದಲ್ಲಿಯೂ ಇದೆ. ವಿಷ್ಣು ಅಥವಾ ನಾರಾಯಣ ಪುರಿ ಎಂದಾದರೂ ಹೇಳಿ ಒಂದೇ ಮಾತಾಗಿದೆ. ನಾವು ಈ ವಿದ್ಯೆಯಿಂದ ಮತ್ತು ಪಾವನರಾಗುವುದರಿಂದ ಶ್ರೀಕೃಷ್ಣ ಪುರಿಯ ಮಾಲೀಕರಾಗುತ್ತೇವೆಂದು ನಿಮಗೆ ತಿಳಿದಿದೆ. ಶಿವ ಭಗವಾನುವಾಚ ಇದೆಯಲ್ಲವೆ. ಕೃಷ್ಣನ ಆತ್ಮವು ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಈ ರೀತಿ (ಬ್ರಹ್ಮಾ)ಯಾಗುತ್ತದೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರಲ್ಲವೆ. ಇದು 84ನೇ ಜನ್ಮವಾಗಿದೆ. ಇವರಿಗೆ ಮತ್ತೆ ಬ್ರಹ್ಮನೆಂದು ಹೆಸರನ್ನಿಡುತ್ತಾರೆ. ಇಲ್ಲವಾದರೆ ಮತ್ತೆ ಬ್ರಹ್ಮನೆಲ್ಲಿಂದ ಬಂದರು? ಈಶ್ವರನೇ ರಚನೆಯನ್ನು ರಚಿಸಿದರು ಅಂದಾಗ ಬ್ರಹ್ಮಾ, ವಿಷ್ಣು, ಶಂಕರನೆಲ್ಲಿಂದ ಬಂದರು? ಹೇಗೆ ರಚಿಸಿದರು? ಇವರನ್ನು ರಚಿಸಲು ಛೂ ಮಂತ್ರ ಮಾಡಿ ಬಿಟ್ಟರೆ? ತಂದೆಯು ಇವರ ಚರಿತ್ರೆಯನ್ನು ತಿಳಿಸುತ್ತಾರೆ. ದತ್ತು ಮಾಡಿಕೊಳ್ಳುತ್ತಾರೆ ಆಗ ಇವರ ಹೆಸರು ಬದಲಾಗುತ್ತದೆ. ಬ್ರಹ್ಮನಿಂದ ಹೆಸರಂತೂ ಇರಲಿಲ್ಲ ಅಲ್ಲವೆ. ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಬರುತ್ತೇನೆ...... ಎಂದು ಹೇಳುತ್ತಾರೆಂದರೆ ಅವಶ್ಯವಾಗಿ ಇವರು ಪತಿತ ಮನುಷ್ಯ ಆದರು. ಆದರೆ ಬ್ರಹ್ಮನು ಎಲ್ಲಿಂದ ಬಂದರೆಂದು ಯಾರಿಗೂ ತಿಳಿದಿಲ್ಲ. ಬಹಳ ಜನ್ಮಗಳ ಅಂತಿಮ ಜನ್ಮವು ಯಾರದಾಯಿತು? ಲಕ್ಷ್ಮೀ-ನಾರಾಯಣರು ಬಹಳ ಜನ್ಮಗಳನ್ನು ತೆಗೆದುಕೊಂಡಿದ್ದಾರೆ. ನಾಮ-ರೂಪ, ದೇಶ-ಕಾಲ ಬದಲಾಗುತ್ತಾ ಹೋಗುತ್ತದೆ. ಕೃಷ್ಣನ ಚಿತ್ರದಲ್ಲಿ 84 ಜನ್ಮಗಳ ಕಥೆಯು ಸ್ಪಷ್ಟವಾಗಿ ಬರೆಯಲ್ಪಟ್ಟಿದೆ. ಜನ್ಮಾಷ್ಟಮಿಯಂದು ಕೃಷ್ಣನ ಚಿತ್ರಗಳು ಸಹ ಬಹಳಷ್ಟು ಮಾರಾಟವಾಗುತ್ತದೆ, ಏಕೆಂದರೆ ಎಲ್ಲರೂ ಕೃಷ್ಣನ ಮಂದಿರಕ್ಕೆ ಹೋಗುತ್ತಾರಲ್ಲವೆ. ರಾಧೆ-ಕೃಷ್ಣರ ಮಂದಿರಕ್ಕೆ ಹೋಗುತ್ತಾರೆ, ಕೃಷ್ಣನ ಜೊತೆ ಅವಶ್ಯವಾಗಿ ರಾಧೆಯೂ ಇರುವಳು. ರಾಧೆ-ಕೃಷ್ಣ, ರಾಜಕುಮಾರ-ಕುಮಾರಿಯರು ಲಕ್ಷ್ಮೀ-ನಾರಾಯಣ ಮಹಾರಾಜ-ಮಹಾರಾಣಿಯಾಗುತ್ತಾರೆ. ಇವರೇ 84 ಜನ್ಮಗಳನ್ನು ತೆಗೆದುಕೊಂಡು ಈ ಅಂತಿಮ ಜನ್ಮದಲ್ಲಿ ಬಂದು ಬ್ರಹ್ಮ-ಸರಸ್ವತಿಯಾದರು. ಬಹಳ ಜನ್ಮಗಳ ಅಂತಿಮದಲ್ಲಿ ತಂದೆಯು ಪ್ರವೇಶವಾಗುವರು ಮತ್ತು ಅವರೇ ತಿಳಿಸುತ್ತಾರೆ - ನೀವು ತಮ್ಮ ಜನ್ಮಗಳ ಬಗ್ಗೆ ತಿಳಿದುಕೊಂಡಿಲ್ಲ. ಮೊದಲ ಜನ್ಮದಲ್ಲಿ ಲಕ್ಷ್ಮೀ-ನಾರಾಯಣರಾಗಿದ್ದೀರಿ ನಂತರ ಈ ಜನ್ಮವನ್ನು ತೆಗೆದುಕೊಂಡಿರಿ. ಅರ್ಜುನನಿಗೆ ರಾಜಯೋಗವನ್ನು ಕಲಿಸಿದರೆಂದು ಅವರು ಅರ್ಜುನನ ಹೆಸರನ್ನು ತೆಗೆದುಕೊಂಡಿದ್ದಾರೆ. ಅರ್ಜುನನನ್ನು ಬೇರೆ ಮಾಡಿ ಬಿಟ್ಟಿದ್ದಾರೆ ಅವರ ಹೆಸರು ಅರ್ಜುನನಲ್ಲ, ಬ್ರಹ್ಮಾರವರ ಜೀವನ ಚರಿತ್ರೆಯೂ ಬೇಕಲ್ಲವೆ ಆದರೆ ಬ್ರಹ್ಮಾ ಮತ್ತು ಬ್ರಾಹ್ಮಣರ ವರ್ಣನೆಯು ಎಲ್ಲಿಯೂ ಇಲ್ಲ. ಈ ಮಾತುಗಳನ್ನು ತಂದೆಯೇ ಕುಳಿತು ತಿಳಿಸುತ್ತಾರೆ. ಎಲ್ಲಾ ಮಕ್ಕಳು ಕೇಳುತ್ತೀರಿ ಮತ್ತೆ ಅನ್ಯರಿಗೂ ತಿಳಿಸಿಕೊಡುತ್ತೀರಿ. ಹೇಗೆ ಕಥೆಯನ್ನು ಕೇಳಿ ಹೇಳಿದಮೇಲೆ ಅನ್ಯರಿಗೂ ತಿಳಿಸಿಕೊಡುತ್ತಾರೆ ಹಾಗೆಯೇ ನೀವೂ ಸಹ ಕೇಳುತ್ತೀರಿ, ಅನ್ಯರಿಗೂ ಹೇಳುತ್ತೀರಿ. ಈ ಪುರುಷೋತ್ತಮ ಸಂಗಮಯುಗವು ಅತಿ ಚಿಕ್ಕದಾದ ಯುಗವಾಗಿದೆ, ಅಧಿಕ ಯುಗವಾಗಿದೆ. ಪುರುಷೋತ್ತಮ ಮಾಸವು ಬಂದಾಗ ವರ್ಷದಲ್ಲಿ 13 ತಿಂಗಳಾಗಿ ಬಿಡುತ್ತದೆ. ಈ ಸಂಗಮಯುಗದ ಹಬ್ಬವನ್ನು ಪ್ರತಿವರ್ಷವೂ ಆಚರಣೆ ಮಾಡುತ್ತಾರೆ. ಈ ಪುರುಷೋತ್ತಮ ಸಂಗಮಯುಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ಸಂಗಮಯುಗದಲ್ಲಿಯೇ ತಂದೆಯು ತಮಗೆ ಪವಿತ್ರರನ್ನಾಗಿ ಮಾಡುವ ಪ್ರತಿಜ್ಞೆ ಮಾಡಿಸುತ್ತಾರೆ. ಪತಿತ ಪ್ರಪಂಚದಿಂದ ಪಾವನ ಪ್ರಪಂಚದ ಸ್ಥಾಪನೆ ಮಾಡುತ್ತಾರೆ. ರಕ್ಷಾಬಂಧನದ ಪದ್ಧತಿಯೂ ಸಹ ಭಾರತದಲ್ಲಿಯೇ ಇದೆ. ಸಹೋದರನಿಗೆ ಶ್ರೀರಕ್ಷೆಯನ್ನು ಕಟ್ಟುತ್ತಾರೆ ಆದರೆ ಆ ಕುಮಾರಿಯೂ ಸಹ ಮತ್ತೆ ಅಪವಿತ್ರವಾಗಿ ಬಿಡುತ್ತಾಳೆ. ಈಗ ತಂದೆಯು ಈ ಮಾತೆಯರ ಮೇಲೆ ಜ್ಞಾನದ ಕಳಶವನ್ನು ಇಡುತ್ತಾರೆ. ಆ ಬ್ರಹ್ಮಾಕುಮಾರ-ಕುಮಾರಿಯರು ಕುಳಿತು ಪವಿತ್ರತೆಯ ಪ್ರತಿಜ್ಞೆ ಮಾಡಿಸಲು ಶ್ರೀರಕ್ಷೆಯನ್ನು ಕಟ್ಟುತ್ತೀರಿ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನು ನೆನಪು ಮಾಡಿದರೆ ನೀವು ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ನಂತರ ಯಾವುದೇ ರಾಖಿ ಇತ್ಯಾದಿಯನ್ನು ಕಟ್ಟಿಸಿಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಹೇಗೆ ಸಾಧು-ಸನ್ಯಾಸಿಗಳು ದಾನವನ್ನು ಕೇಳುತ್ತಾರೆ. ಕ್ರೋಧದ ದಾನ ಕೊಡಿ ಎಂದು ಕೆಲವರು ಕೇಳುತ್ತಾರೆ. ಈರುಳ್ಳಿಯನ್ನು ತಿನ್ನಬೇಡಿ ಎಂದು ಕೆಲವರು ಹೇಳುತ್ತಾರೆ, ಯಾವುದನ್ನು ತಾವು ತಿನ್ನುವುದಿಲ್ಲವೋ ಅದನ್ನು ಅನ್ಯರಿಂದಲೇ ದಾನ ತೆಗೆದುಕೊಳ್ಳುತ್ತಾರೆ. ಅವರೆಲ್ಲರಿಗಿಂತ ದೊಡ್ಡ ಪ್ರತಿಜ್ಞೆಯನ್ನು ಬೇಹದ್ದಿನ ತಂದೆಯು ಮಾಡಿಸುತ್ತಾರೆ. ನೀವು ಪಾವನರಾಗಲು ಬಯಸುತ್ತೀರೆಂದರೆ ಪತಿತ-ಪಾವನ ತಂದೆಯನ್ನು ನೆನಪು ಮಾಡಿ. ದ್ವಾಪರದಿಂದ ಹಿಡಿದು ನೀವು ಪತಿತರಾಗುತ್ತಾ ಬಂದಿದ್ದೀರಿ, ಈಗ ಇಡೀ ಪ್ರಪಂಚವು ಪಾವನವಾಗಬೇಕು ಅಂದಾಗ ತಂದೆಯು ಪಾವನವನ್ನಾಗಿ ಮಾಡುತ್ತಾರೆ. ಸರ್ವರ ಸದ್ಗತಿದಾತನು ಯಾವುದೇ ಸಾಧಾರಣ ಮನುಷ್ಯನಾಗಿರಲು ಸಾಧ್ಯವಿಲ್ಲ. ತಂದೆಯು ಪಾವನರಾಗುವ ಪ್ರತಿಜ್ಞೆಯನ್ನು ಮಕ್ಕಳಿಂದ ತೆಗೆದುಕೊಳ್ಳುತ್ತಾರೆ. ಭಾರತವೇ ಪಾವನ ಸ್ವರ್ಗವಾಗಿತ್ತಲ್ಲವೆ. ಪರಮಪಿತ ಪರಮಾತ್ಮನು ಪತಿತ-ಪಾವನನಾಗಿದ್ದಾರೆ. ಕೃಷ್ಣನನ್ನು ಪತಿತ-ಪಾವನನೆಂದು ಹೇಳುವುದಿಲ್ಲ. ಕೃಷ್ಣನ ಜನ್ಮವಾಗುತ್ತದೆ, ಅವರ ತಂದೆ-ತಾಯಿಯರನ್ನೂ ತೋರಿಸುತ್ತಾರೆ. ಒಬ್ಬ ಶಿವನದು ಅಲೌಕಿಕ ಜನ್ಮವಾಗಿದೆ, ಅವರೇ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಶರೀರದ ಆಧಾರವನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ. ನಾನು ಜ್ಞಾನಸಾಗರ, ಪತಿತ-ಪಾವನ ರಾಜಯೋಗವನ್ನು ಕಲಿಸುವವನಾಗಿದ್ದೇನೆ ಅಂದಮೇಲೆ ತಂದೆಯೇ ಸ್ವರ್ಗದ ರಚಯಿತನಾಗಿದ್ದಾರೆ ಮತ್ತು ನರಕದ ವಿನಾಶ ಮಾಡಿಸುತ್ತಾರೆ. ಯಾವಾಗ ಸ್ವರ್ಗವಿರುತ್ತದೆ ಆಗ ನರಕವಿಲ್ಲ. ಈಗ ಸಂಪೂರ್ಣ ರೌರವ ನರಕವಾಗಿದೆ. ಯಾವಾಗ ಸಂಪೂರ್ಣ ತಮೋಪ್ರಧಾನ ನರಕವಾಗುವುದೋ ಆಗಲೇ ತಂದೆಯು ಬಂದು ಸತೋಪ್ರಧಾನ ಸ್ವರ್ಗವನ್ನಾಗಿ ಮಾಡುತ್ತಾರೆ. 100% ಪತಿತರಿಂದ 100% ಪಾವನರನ್ನಾಗಿ ಮಾಡುತ್ತಾರೆ. ಮೊದಲ ಜನ್ಮವು ಅವಶ್ಯವಾಗಿ ಸತೋಪ್ರಧಾನವಾಗಿರುವುದೇ ಸಿಗುವುದು. ನೀವು ಮಕ್ಕಳು ವಿಚಾರ ಸಾಗರ ಮಂಥನ ಮಾಡಿ ಭಾಷಣ ಮಾಡಬೇಕಾಗಿದೆ. ಪ್ರತಿಯೊಬ್ಬರ ತಿಳಿಸುವ ಶೈಲಿಯು ಭಿನ್ನವಾಗಿರುವುದು. ತಂದೆಯೂ ಸಹ ಒಂದೊಂದು ದಿನ, ಒಂದೊಂದು ರೀತಿಯಾಗಿ ತಿಳಿಸಿಕೊಡುತ್ತಾರೆ. ಒಂದೇ ತರಹವಾಗಿ ತಿಳಿಸುವುದಿಲ್ಲ. ತಿಳಿದುಕೊಳ್ಳಿ - ಯಾರಾದರೂ ಟೇಪ್ನಿಂದ ನಿಖರವಾಗಿ ಕೇಳಲೂಬಹುದು ಆದರೆ ಅದನ್ನು ಮತ್ತೆ ಅದೇರೀತಿ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಸ್ವಲ್ಪವಾದರೂ ಅಂತರವಾಗುತ್ತದೆ. ತಂದೆಯು ಏನನ್ನು ತಿಳಿಸುತ್ತಾರೆ? ಅದನ್ನು ನೀವು ತಿಳಿದುಕೊಂಡಿದ್ದೀರಿ. ಡ್ರಾಮಾದಲ್ಲಿ ಎಲ್ಲವೂ ನಿಗಧಿಯಾಗಿದೆ. ಕಲ್ಪದ ಹಿಂದೆ ಹೇಗೆ ತಿಳಿಸಿದ್ದೆನೋ ಅದೇರೀತಿ ಪ್ರತಿಯೊಂದು ಶಬ್ಧವನ್ನು ತಿಳಿಸುತ್ತೇನೆ. ಈ ರೆಕಾರ್ಡ್ ತುಂಬಲ್ಪಟ್ಟಿದೆ. ಸ್ವಯಂ ಭಗವಂತನೇ ತಿಳಿಸುತ್ತಾರೆ - ನಾನು 5000 ವರ್ಷಗಳ ಹಿಂದೆ ಯಾವ ಶಬ್ಧಗಳನ್ನು ತಿಳಿಸಿದ್ದೆನೋ ಅದೇ ಶಬ್ಧಗಳಲ್ಲಿ ಚಾಚೂ ತಪ್ಪದೆ ತಿಳಿಸಿಕೊಡುತ್ತೇನೆ. ಇದು ಮೊದಲೇ ನಿಗಧಿಯಾಗಿರುವ ನಾಟಕವಾಗಿದೆ, ಇದರಲ್ಲಿ ಸ್ವಲ್ಪವೂ ಅಂತರವಾಗಲು ಸಾಧ್ಯವಿಲ್ಲ. ಇಷ್ಟು ಚಿಕ್ಕಆತ್ಮನಲ್ಲಿ ರೆಕಾರ್ಡ್ ತುಂಬಲ್ಪಟ್ಟಿದೆ. ಈಗ ಕೃಷ್ಣ ಜನ್ಮಾಷ್ಟಮಿಯು ಯಾವಾಗ ಆಗಿತ್ತೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಇಂದಿಗೆ 5000 ವರ್ಷಗಳಿಗಿಂತಲೂ ಸ್ವಲ್ಪ ದಿನಗಳು ಕಡಿಮೆಯೆಂದು ಹೇಳಬಹುದು ಏಕೆಂದರೆ ಇನ್ನೂ ಓದುತ್ತಿದ್ದೀರಿ. ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ, ಮಕ್ಕಳ ಮನಸ್ಸಿನಲ್ಲಿ ಎಷ್ಟೊಂದು ಖುಷಿಯಿದೆ! ನೀವು ತಿಳಿದುಕೊಂಡಿದ್ದೀರಿ - ಕೃಷ್ಣನ ಆತ್ಮವು 84 ಜನ್ಮಗಳ ಚಕ್ರವು ಸುತ್ತಿದೆ. ಈಗ ಪುನಃ ಕೃಷ್ಣನ ನಾಮ ರೂಪದಲ್ಲಿ ಬರುತ್ತಿದೆ. ಹಳೆಯ ಪ್ರಪಂಚದಿಂದ ಒದೆಯುತ್ತಾ ಹೊಸ ಪ್ರಪಂಚವು ಬರುತ್ತಿರುವುದನ್ನು ತೋರಿಸಲಾಗಿದೆ. ಆದ್ದರಿಂದ ಶ್ರೀಕೃಷ್ಣನು ಬರಲಿದ್ದಾನೆ ಎಂದು ಹೇಳಲಾಗುತ್ತದೆ. ಅವಶ್ಯವಾಗಿ ತಂದೆಯು ಬಹಳ ಜನ್ಮಗಳ ಅಂತಿಮದಲ್ಲಿಯೇ ಓದಿಸುತ್ತಾರೆ. ಈ ವಿದ್ಯೆಯು ಮುಕ್ತಾಯವಾದರೆ ಕೃಷ್ಣನು ಜನ್ಮವನ್ನು ತೆಗೆದುಕೊಳ್ಳುತ್ತಾನೆ, ವಿದ್ಯಾಭ್ಯಾಸಕ್ಕೆ ಇನ್ನು ಸ್ವಲ್ಪವೇ ಸಮಯವಿದೆ. ಅವಶ್ಯವಾಗಿ ಅನೇಕ ಧರ್ಮಗಳ ವಿನಾಶವಾದ ನಂತರ. ಕೃಷ್ಣನ ಜನ್ಮವಾಗಿರಬೇಕು, ಅದು ಒಬ್ಬ ಕೃಷ್ಣನಂತೂ ಅಲ್ಲ, ಇಡೀ ಕೃಷ್ಣ ಪುರಿಯೇ ಇರುವುದು. ನೀವು ಬ್ರಾಹ್ಮಣರೇ ರಾಜಯೋಗವನ್ನು ಕಲಿತು ಮತ್ತೆ ದೇವತಾ ಪದವಿಯನ್ನು ಪಡೆಯುತ್ತೀರಿ. ದೇವತೆಗಳಾಗುವುದೇ ಜ್ಞಾನದಿಂದ. ತಂದೆಯು ಬಂದು ವಿದ್ಯೆಯಿಂದ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ಇದು ಪಾಪ ಶರೀರವಾಗಿದೆ, ಇದರಲ್ಲಿ ಎಲ್ಲದಕ್ಕಿಂತ ಹೆಚ್ಚು ಸಮಯ ಹಿಡಿಸುತ್ತದೆ. ವಿದ್ಯೆಯು ಸಹಜವಾಗಿದೆ ಆದರೆ ಯೋಗದಲ್ಲಿಯೇ ಪರಿಶ್ರಮವಿದೆ. ನೀವು ಇದನ್ನು ತಿಳಿಸಿ - ಕೃಷ್ಣನ ಆತ್ಮವೂ ಸಹ ಪರಮಪಿತ ಪರಮಾತ್ಮನ ಮೂಲಕ ಈಗ ರಾಜಯೋಗವನ್ನು ಕಲಿಯುತ್ತಿದೆ, ಶಿವ ತಂದೆಯು ಬ್ರಹ್ಮಾರವರ ಮೂಲಕ ನಾವಾತ್ಮಗಳಿಗೆ ವಿಷ್ಣು ಪುರಿಯ ರಾಜ್ಯವನ್ನು ಕೊಡಲು ಓದಿಸುತ್ತಿದ್ದಾರೆ. ನಾವು ಪ್ರಜಾಪಿತ ಬ್ರಹ್ಮನ ಮಕ್ಕಳು ಬ್ರಾಹ್ಮಣ-ಬ್ರಾಹ್ಮಿಣಿಯರಾಗಿದ್ದೇವೆ. ಇದು ಸಂಗಮಯುಗವಾಗಿದೆ. ಬಹಳ ಚಿಕ್ಕದಾದ ಯುಗವಾಗಿದೆ. ಶಿಖೆಯು ಎಲ್ಲದಕ್ಕಿಂತ ಚಿಕ್ಕದಾಗಿರುತ್ತದೆಯಲ್ಲವೆ. ಮತ್ತೆ ಅದಕ್ಕಿಂತಲೂ ದೊಡ್ಡದು ಮುಖವಾಗಿದೆ, ಅದಕ್ಕಿಂತಲೂ ದೊಡ್ಡದು ಬಾಹುಗಳು ನಂತರ ಹೊಟ್ಟೆ ಮತ್ತೆ ಅದಕ್ಕಿಂತಲೂ ಕಾಲುಗಳು ದೊಡ್ಡದಾಗಿರುತ್ತವೆ. ವಿರಾಟ ರೂಪವನ್ನು ತೋರಿಸುತ್ತಾರೆ ಆದರೆ ಅದರ ತಿಳುವಳಿಕೆಯನ್ನು ಯಾರೂ ಕೊಡುವುದಿಲ್ಲ. ನೀವು ಮಕ್ಕಳು ಈ 84 ಜನ್ಮಗಳ ಚಕ್ರದ ರಹಸ್ಯವನ್ನು ತಿಳಿಸಬೇಕಾಗಿದೆ. ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯಾಗುವುದು.

ನೀವು ಮಕ್ಕಳಿಗಾಗಿ ಇದು ಸಂಗಮಯುಗವಾಗಿದೆ. ನಿಮಗೋಸ್ಕರ ಈಗ ಕಲಿಯುಗವು ಮುಕ್ತಾಯವಾಗುತ್ತದೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಈಗ ನಿಮ್ಮ ಸುಖಧಾಮ, ಶಾಂತಿಧಾಮಕ್ಕೆ ಕರೆದುಕೊಂಡು ಹೋಗಲು ನಾನು ಬಂದಿದ್ದೇನೆ. ನೀವು ಸುಖಧಾಮದ ನಿವಾಸಿಗಳಾಗಿದ್ದಿರಿ, ನಂತರ ದುಃಖದಲ್ಲಿ ಬಂದಿರಿ. ಬಾಬಾ, ಈ ಹಳೆಯ ಪ್ರಪಂಚದಲ್ಲಿ ಬನ್ನಿ ಎಂದು ಕರೆಯುತ್ತೀರಿ. ನಿಮ್ಮ ಪ್ರಪಂಚವಂತೂ ಇಲ್ಲ, ನೀವೀಗ ಏನು ಮಾಡುತ್ತಿದ್ದೀರಿ? ಯೋಗಬಲದಿಂದ ತಮ್ಮ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೀರಿ. ಅಹಿಂಸಾ ಪರಮೋ ದೇವಿ-ದೇವತಾ ಧರ್ಮವೆಂದು ಹೇಳಲಾಗುತ್ತದೆ. ನೀವೀಗ ಅಹಿಂಸಕರಾಗಬೇಕು. ಕಾಮ ಕಟಾರಿಯನ್ನೂ ನಡೆಸಬಾರದು. ಜಗಳ-ಕಲಹವೂ ಮಾಡಬಾರದು. ತಂದೆಯು ತಿಳಿಸುತ್ತಾರೆ - ಪ್ರತೀ 5000 ವರ್ಷಗಳ ನಂತರ ಬರುತ್ತೇನೆ, ಲಕ್ಷಾಂತರ ವರ್ಷಗಳ ಮಾತಿಲ್ಲ. ಯಜ್ಞ, ತಪ, ದಾನ, ಪುಣ್ಯ ಇತ್ಯಾದಿಗಳನ್ನೂ ಮಾಡಿದರೂ ಸಹ ನೀವು ಕೆಳಗಿಳಿಯುತ್ತಾ ಬಂದಿದ್ದೀರಿ. ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಮನುಷ್ಯರಂತೂ ಕುಂಭಕರ್ಣನ ನಿದ್ರೆಯಲ್ಲಿ ಮಲಗಿ ಬಿಟ್ಟಿದ್ದಾರೆ, ಯಾರು ಜಾಗೃತರಾಗುವುದೇ ಇಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಬರುತ್ತೇನೆ. ಡ್ರಾಮಾದಲ್ಲಿ ನನ್ನ ಪಾತ್ರವಿದೆ. ನನ್ನ ಪಾತ್ರವಿಲ್ಲದೆ ಏನೂ ಮಾಡಲೂ ಸಾಧ್ಯವಿಲ್ಲ. ನಾನೂ ಸಹ ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆ. ನನ್ನ ಸಮಯದಲ್ಲಿಯೇ ಬರುತ್ತೇನೆ. ಡ್ರಾಮಾದ ಪ್ಲಾನನುಸಾರ ನಾನು ನೀವು ಮಕ್ಕಳನ್ನು ಮರಳಿ ಕರೆದುಕೊಂಡು ಹೋಗುತ್ತೇನೆ. ಮನ್ಮನಾಭವ ಎಂದು ಈಗ ಹೇಳುತ್ತೇನೆ ಆದರೆ ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ದೇಹದ ಸರ್ವ ಸಂಬಂಧಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿದರೆ ನೀವು ಪಾವನರಾಗಿ ಬಿಡುತ್ತೀರಿ. ಮಕ್ಕಳು ತಂದೆಯನ್ನು ನೆನಪು ಮಾಡುವ ಪರಿಶ್ರಮ ಪಡುತ್ತಿರುತ್ತಾರೆ. ಇದು ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ಇಡೀ ವಿಶ್ವವನ್ನು ಸದ್ಗತಿ ಮಾಡುವಂತಹ ಇಂತಹ ವಿಶ್ವ ವಿದ್ಯಾಲಯವು ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ಈಶ್ವರ ತಂದೆಯೇ ಬಂದು ಇಡೀ ವಿಶ್ವವನ್ನು ಪರಿವರ್ತನೆ ಮಾಡುತ್ತಾರೆ, ನರಕದಿಂದ ಸ್ವರ್ಗವನ್ನಾಗಿ ಮಾಡುತ್ತಾರೆ. ಯಾವ ಸ್ವರ್ಗದಲ್ಲಿ ನೀವು ರಾಜ್ಯಭಾರ ಮಾಡುತ್ತೀರಿ. ಶಿವನಿಗೆ ಬಬುಲನಾಥನೆಂದೂ ಹೇಳುತ್ತಾರೆ, ಅವರು ಬಂದು ನಿಮ್ಮನ್ನು ಕಾಮ ಕಟಾರಿಯಿಂದ ಬಿಡಿಸಿ ಪಾವನರನ್ನಾಗಿ ಮಾಡುತ್ತಾರೆ. ಭಕ್ತಿಮಾರ್ಗದಲ್ಲಂತೂ ಬಹಳಷ್ಟು ಆಡಂಬರವಿದೆ ಆದರೆ ಇಲ್ಲಿ ಶಾಂತಿಯಲ್ಲಿ ನೆನಪು ಮಾಡಬೇಕಾಗಿದೆ. ಆದರೆ ಅನೇಕ ಪ್ರಕಾರದ ಹಠಯೋಗ ಇತ್ಯಾದಿಗಳನ್ನು ಮಾಡುತ್ತಾರೆ. ಅವರ ನಿವೃತ್ತಿ ಮಾರ್ಗವೇ ಬೇರೆಯಾಗಿದೆ. ಅವರು ಬ್ರಹ್ಮತತ್ವವನ್ನೇ ಭಗವಂತನೆಂದು ಒಪ್ಪುತ್ತಾರೆ. ಬ್ರಹ್ಮಯೋಗಿ, ತತ್ವಯೋಗಿಗಳಾಗಿದ್ದಾರೆ. ಆದರೆ ಬ್ರಹ್ಮತತ್ವವಂತೂ ಆತ್ಮಗಳಿರುವ ಸ್ಥಾನವಾಯಿತು, ಅದಕ್ಕೆ ಬ್ರಹ್ಮಾಂಡವೆಂದು ಹೇಳಲಾಗುತ್ತದೆ ಆದರೆ ಈ ಬ್ರಹ್ಮತತ್ವವನ್ನೇ ಅವರು ಭಗವಂತನೆಂದು ತಿಳಿಯುತ್ತಾರೆ, ಅದರಲ್ಲಿ ಲೀನವಾಗಿ ಬಿಡುತ್ತಾರೆ ಅಂದರೆ ಆತ್ಮವನ್ನು ವಿನಾಶಿಯನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಬಂದು ಸರ್ವರ ಸದ್ಗತಿ ಮಾಡುತ್ತೇನೆ, ಶಿವ ತಂದೆಯೇ ಸರ್ವರ ಸದ್ಗತಿ ಮಾಡುತ್ತಾರೆ. ಅಂದಾಗ ಅವರು ವಜ್ರ ಸಮಾನರಾಗಿದ್ದಾರೆ. ಮತ್ತೆ ನಿಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ. ನಿಮ್ಮದು ಇದು ವಜ್ರ ಸಮಾನ ಜನ್ಮವಾಗಿದೆ. ನೀವೇ ನಂತರ ಸ್ವರ್ಗದಲ್ಲಿ ಹೋಗುತ್ತೀರಿ, ಈ ಜ್ಞಾನವನ್ನು ನಿಮಗೆ ತಂದೆಯೇ ಬಂದು ತಿಳಿಸುತ್ತಾರೆ ಯಾವುದರಿಂದ ನೀವು ದೇವತೆಗಳಾಗುತ್ತೀರಿ ನಂತರ ಈ ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ. ಈ ಲಕ್ಷ್ಮೀ-ನಾರಾಯಣರಲ್ಲಿಯೂ ಸಹ ರಚಯಿತ ಮತ್ತು ರಚನೆಯ ಜ್ಞಾನವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಹಳೆಯ ಪ್ರಪಂಚದಲ್ಲಿರುತ್ತಾ ಡಬಲ್ ಅಹಿಂಸಕರಾಗಿ. ಯೋಗಬಲದಿಂದ ತಮ್ಮ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಬೇಕಾಗಿದೆ. ತಮ್ಮ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಬೇಕಾಗಿದೆ.

2. ತಂದೆಯು ಏನನ್ನು ತಿಳಿಸುತ್ತಾರೆಯೋ ಅದರ ಮೇಲೆ ವಿಚಾರ ಸಾಗರ ಮಂಥನ ಮಾಡಿ ಅನ್ಯರಿಗೆ ತಿಳಿಸಬೇಕಾಗಿದೆ. ವಿದ್ಯೆಯು ಮುಕ್ತಾಯವಾದರೆ ನಾವು ಕೃಷ್ಣ ಪುರಿಯಲ್ಲಿ ಹೋಗುತ್ತೇವೆ ಎಂಬ ನಶೆ ಸದಾ ಇರಲಿ.

ವರದಾನ:
ಅಪವಿತ್ರತೆಯ ಹೆಸರು ಗುರುತನ್ನೂ ಸಹ ಸಮಾಪ್ತಿಮಾಡಿ “ಹಿಸ್ಹೋಲಿನೆಸ್”ನ ಟೈಟಲ್ ಪ್ರಾಪ್ತಿ ಮಾಡಿಕೊಳ್ಳುವಂತಹ ಹೋಲಿ ಹಂಸ ಭವ.

ಹೇಗೆ ಹಂಸವು ಎಂದೂ ಸಹಾ ಕಲ್ಲನ್ನು ಎತ್ತಿಕೊಳ್ಳುವುದಿಲ್ಲ, ರತ್ನವನ್ನು ಧಾರಣೆ ಮಾಡುತ್ತದೆ. ಇಂತಹ ಹೋಲಿ ಹಂಸ ಯಾರದೇ ಅವಗುಣ ಅರ್ಥಾತ್ ಕಲ್ಲನ್ನು ಧಾರಣೆ ಮಾಡಲು ಸಾಧ್ಯವಿಲ್ಲ. ಅವರು ವ್ಯರ್ಥ ಮತ್ತು ಸಮರ್ಥವನ್ನು ಬೇರೆ ಮಾಡಿ ವ್ಯರ್ಥವನ್ನು ಬಿಟ್ಟು ಬಿಡುತ್ತಾರೆ, ಸಮರ್ಥವನ್ನು ತನ್ನದನ್ನಾಗಿಸಿಕೊಳ್ಳುತ್ತಾರೆ. ಇಂತಹ ಹೋಲಿ ಹಂಸಗಳೇ ಪವಿತ್ರ ಶುದ್ಧ ಆತ್ಮಗಳಾಗಿದ್ದಾರೆ, ಅವರ ಆಹಾರ, ವ್ಯವಹಾರ ಎಲ್ಲವೂ ಶುದ್ಧವಾಗಿರುತ್ತದೆ. ಯಾವಾಗ ಅಶುದ್ಧ ಅರ್ಥಾತ್ ಅಪವಿತ್ರತೆಯ ಹೆಸರು ಗುರುತೂ ಸಹ ಸಮಾಪ್ತಿಯಾಯಿತೆಂದರೆ ಆಗ ಭವಿಷ್ಯದಲ್ಲಿ “ಹಿಸ್ಹೋಲಿನೆಸ್” ಎಂಬ ಟೈಟಲ್ ಪ್ರಾಪ್ತಿಯಾಗುತ್ತದೆ. ಆದ್ದರಿಂದ ತಪ್ಪಾಗಿಯೂ ಎಂದೂ ಯಾರದೇ ಅವಗುಣ ಧಾರಣೆ ಮಾಡಬಾರದು.

ಸ್ಲೋಗನ್:
ಯಾರು ಹಳೆಯ ಸ್ವಭಾವ ಸಂಸ್ಕಾರದ ವಂಶವನ್ನೂ ಸಹ ತ್ಯಾಗ ಮಾಡಿರುತ್ತಾರೆ ಅವರೇ ಸರ್ವಂಶ ತ್ಯಾಗಿ ಆಗಿದ್ದಾರೆ.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ಯಾವುದೇ ಕಾರ್ಯವನ್ನು ಮಾಡುತ್ತ ತಂದೆಯ ನೆನಪಿನಲ್ಲಿ ಲವಲೀನರಾಗಿರಿ. ಯಾವುದೇ ಮಾತಿನ ವಿಸ್ತಾರದಲ್ಲಿ ಹೋಗದೇ, ವಿಸ್ತಾರಕ್ಕೆ ಬಿಂದುವಿಟ್ಟು ಬಿಂದುವಿನಲ್ಲಿ ಸಮಾವೇಶಿಸಿ, ಬಿಂದುವಾಗಿಬಿಡಿ, ಬಿಂದುವನ್ನಿಡಿ, ಆಗ ಇಡೀ ವಿಸ್ತಾರ, ಇಡೀ ಜಾಲ ಸೆಕೆಂಡಿನಲ್ಲಿ ಸಮಾವೇಶವಾಗಿ ಬಿಡುವುದು ಮತ್ತು ಸಮಯವು ಉಳಿಯುವುದು, ಪರಿಶ್ರಮದಿಂದ ಮುಕ್ತರಾಗಿ ಬಿಡುವಿರಿ. ಬಿಂದುವಾಗಿ ಬಿಂದುವಿನಲ್ಲಿ ಲವಲೀನರಾಗಿ ಬಿಡುವಿರಿ.