09.11.25 Avyakt Bapdada
Kannada
Murli 30.11.2007 Om Shanti Madhuban
“ಸತ್ಯತೆ ಮತ್ತು
ಪವಿತ್ರತೆಯ ಶಕ್ತಿಯನ್ನು ಸ್ವರೂಪದಲ್ಲಿ ತರುತ್ತಾ ಬಾಲಕ ಮತ್ತು ಮಾಲೀಕತನದ ಸಮತೋಲನೆಯನ್ನಿಡಿ”
ಈ ದಿನ ಸತ್ಯ ತಂದೆ,
ಸತ್ಯ ಶಿಕ್ಷಕ, ಸದ್ಗುರು ತನ್ನ ನಾಲ್ಕೂ ಕಡೆಯ ಸತ್ಯತೆಯ ಸ್ವರೂಪ, ಶಕ್ತಿ ಸ್ವರೂಪ ಮಕ್ಕಳನ್ನು
ನೋಡುತ್ತಿದ್ದೇವೆ ಏಕೆಂದರೆ ಸತ್ಯತಾ ಶಕ್ತಿ ಸರ್ವ ಶ್ರೇಷ್ಠವಾಗಿದೆ. ಈ ಸತ್ಯತಾ ಶಕ್ತಿಗೆ
ಆಧಾರವಾಗಿದೆ - ಸಂಪೂರ್ಣ ಪವಿತ್ರತೆ. ಮನ-ವಚನ-ಕರ್ಮ, ಸಂಬಂಧ-ಸಂಪರ್ಕ, ಸ್ವಪ್ನದಲ್ಲಿಯೂ ಸಹ
ಅಪವಿತ್ರತೆಯ ಹೆಸರು-ಗುರುತೂ ಇರಬಾರದು. ಇಂತಹ ಪವಿತ್ರತೆಯ ಪ್ರತ್ಯಕ್ಷ ಸ್ವರೂಪ ಏನು ಕಂಡು
ಬರುತ್ತದೆ? ಇಂತಹ ಪವಿತ್ರ ಆತ್ಮನ ನಡತೆ ಮತ್ತು ಚಹರೆಯಲ್ಲಿ ದಿವ್ಯತೆ ಸ್ಪಷ್ಟವಾಗಿ ಕಂಡು ಬರುತ್ತದೆ.
ಅವರ ನಯನಗಳಲ್ಲಿ ಆತ್ಮೀಯ ಹೊಳಪು, ಚಹರೆಯಲ್ಲಿ ಸದಾ ಹರ್ಷಿತಮುಖತೆ ಮತ್ತು ನಡತೆಯಲ್ಲಿ ಪ್ರತೀ
ಹೆಜ್ಜೆಯಲ್ಲಿ ತಂದೆಯ ಸಮಾನ ಕರ್ಮಯೋಗಿ. ಇಂತಹ ಸತ್ಯವಾದಿಗಳು ಸತ್ಯ ತಂದೆಯ ಮೂಲಕ ಈ ಸಮಯದಲ್ಲಿ
ತಾವೆಲ್ಲರೂ ಆಗುತ್ತಿದ್ದೀರಿ. ಪ್ರಪಂಚದಲ್ಲಿಯೂ ಸಹ ಕೆಲವರು ತಮ್ಮನ್ನು ಸತ್ಯವಾದಿ ಎಂದು
ಹೇಳುತ್ತಾರೆ, ಸತ್ಯವನ್ನೇ ಹೇಳುತ್ತಾರೆ ಆದರೆ ಸಂಪೂರ್ಣ ಪವಿತ್ರತೆಯೇ ಸತ್ಯವಾದ ಸತ್ಯತೆಯ
ಶಕ್ತಿಯಾಗಿದೆ. ಈ ಸಮಯ ಈ ಸಂಗಮದಲ್ಲಿ ತಾವೆಲ್ಲರೂ ಆಗುತ್ತಿದ್ದೀರಿ. ಈ ಸಂಗಮದ ಶ್ರೇಷ್ಠ ಪ್ರಾಪ್ತಿ
- ಸತ್ಯತೆಯ ಶಕ್ತಿ, ಪವಿತ್ರತಾ ಶಕ್ತಿ. ಇದರ ಪ್ರಾಪ್ತಿಯಾಗಿ ಸತ್ಯಯುಗದಲ್ಲಿ ತಾವೆಲ್ಲಾ
ಬ್ರಾಹ್ಮಣರಿಂದ ದೇವತೆಗಳಾಗಿ ಆತ್ಮ ಮತ್ತು ಶರೀರ ಎರಡರಿಂದಲೂ ಪವಿತ್ರರಾಗುತ್ತೀರಿ. ಇಡೀ
ಸೃಷ್ಟಿಚಕ್ರದಲ್ಲಿ ಮತ್ತ್ಯಾರದೂ ಸಹ ಆತ್ಮ ಮತ್ತು ಶರೀರ ಎರಡೂ ಪವಿತ್ರರಾಗುವುದಿಲ್ಲ. ಆತ್ಮನಿಂದ
ಪವಿತ್ರವಾಗುತ್ತಾರೆ ಆದರೆ ಪವಿತ್ರವಾದ ಶರೀರ ಸಿಗುವುದಿಲ್ಲ ಅಂದಾಗ ಇಂತಹ ಸಂಪೂರ್ಣ ಪವಿತ್ರತೆಯನ್ನು
ಈ ಸಮಯದಲ್ಲಿ ತಾವೆಲ್ಲರೂ ಧಾರಣೆ ಮಾಡುತ್ತಿದ್ದೀರಿ. ನಶೆಯಿಂದ ಹೇಳುತ್ತೀರಿ - ನೆನಪಿದೆಯೇ?
ನಶೆಯಿಂದ ಹೇಳುತ್ತೀರೇನು? ಎಲ್ಲರೂ ಮನಃಪೂರ್ವಕವಾಗಿ, ಅನುಭವದಿಂದ ಹೇಳುತ್ತೀರಿ - ಪವಿತ್ರತೆಯು
ನಮ್ಮ ಜನ್ಮ ಸಿದ್ಧ ಅಧಿಕಾರವಾಗಿದೆ. ಜನ್ಮ ಸಿದ್ಧ ಅಧಿಕಾರವು ಸಹಜವಾಗಿ ಪ್ರಾಪ್ತಿಯಾಗುತ್ತದೆ
ಏಕೆಂದರೆ ಪವಿತ್ರತೆ ಅಥವಾ ಸತ್ಯತೆಯ ಪ್ರಾಪ್ತಿ ಮಾಡಿಕೊಳ್ಳಲು ತಾವೆಲ್ಲರೂ ಮೊದಲೇ ತನ್ನ ಸತ್ಯ
ಸ್ವರೂಪ ಆತ್ಮನನ್ನು ತಿಳಿದುಕೊಂಡಿದ್ದೀರಿ. ತನ್ನ ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವನ್ನೂ
ತಿಳಿದುಕೊಂಡಿದ್ದೀರಿ ಮತ್ತು ಪಡೆದುಕೊಂಡಿದ್ದೀರಿ. ಎಲ್ಲಿಯ ತನಕ ಯಾರು ತನ್ನ ಸತ್ಯ ಸ್ವರೂಪವನ್ನು
ಅಥವಾ ಸತ್ಯ ತಂದೆಯನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯ ತನಕ ಸಂಪೂರ್ಣ ಪವಿತ್ರತೆ ಸತ್ಯತೆಯ
ಶಕ್ತಿ ಬರಲು ಸಾಧ್ಯವಿಲ್ಲ.
ಅಂದಾಗ ತಾವೆಲ್ಲರೂ
ಸತ್ಯತೆ ಮತ್ತು ಪವಿತ್ರತೆಯ ಶಕ್ತಿಯ ಅನುಭವಿಗಳಾಗಿದ್ದೀರಲ್ಲವೆ! ಅನುಭವಿಯಾಗಿದ್ದೀರಾ?
ಅನುಭವಿಗಳಾಗಿದ್ದೀರಾ? ಮನುಷ್ಯರು ಪ್ರಯತ್ನ ಪಡುತ್ತಾರೆ ಆದರೆ ಯಥಾರ್ಥ ರೂಪದಲ್ಲಿ ತನ್ನ
ಸ್ವರೂಪವನ್ನಾಗಲಿ, ಸತ್ಯ ತಂದೆಯನ್ನು ಯಥಾರ್ಥ ಸ್ವರೂಪದಲ್ಲಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಮತ್ತು
ತಾವೆಲ್ಲರೂ ಈ ಸಮಯದ ಅನುಭವದ ಮೂಲಕ ಪವಿತ್ರತೆಯನ್ನು ಈ ರೀತಿ ಸಹಜ ಮಾಡಿಕೊಂಡಿದ್ದೀರಿ. ಈ ಸಮಯದ
ಪ್ರಾಪ್ತಿಯ ಪ್ರಾಲಬ್ಧವಾಗಿ ದೇವತೆಗಳಿಗೆ ಪವಿತ್ರತೆಯು ಸ್ವಾಭಾವಿಕ ಮತ್ತು ಸ್ವಭಾವವಾಗಿರುತ್ತದೆ.
ಈ ರೀತಿ ಸ್ವಾಭಾವಿಕ ಸ್ವಭಾವ ತಾವೇ ಪ್ರಾಪ್ತಿ ಮಾಡಿಕೊಳ್ಳುತ್ತೀರಿ ಅಂದಾಗ ಪರಿಶೀಲನೆ
ಮಾಡಿಕೊಳ್ಳಿರಿ - ಪವಿತ್ರತೆ ಮತ್ತು ಸತ್ಯತೆಯ ಶಕ್ತಿ ಸ್ವಾಭಾವಿಕ ಸ್ವಭಾವ ಆಗಿದೆಯೇ? ತಾವು ಏನು
ತಿಳಿದುಕೊಂಡಿದ್ದೀರಿ? ಪವಿತ್ರತೆ ನಮ್ಮ ಜನ್ಮಸಿದ್ಧ ಅಧಿಕಾರವಾಗಿದೆ ಎಂದು ತಿಳಿಯುವವರು
ಕೈಯನ್ನೆತ್ತಿರಿ. ಜನ್ಮ ಸಿದ್ಧ ಅಧಿಕಾರಕ್ಕೆ ಪರಿಶ್ರಮ ಪಡಬೇಕೇ? ಪರಿಶ್ರಮ ಪಡಬೇಕಾಗಿಲ್ಲ ಅಲ್ಲವೆ!
ಸುಲಭವಲ್ಲವೇ! ಏಕೆಂದರೆ ಜನ್ಮ ಸಿದ್ಧ ಅಧಿಕಾರವೆಂದಾಗ ಸಹಜವಾಗಿ ಪ್ರಾಪ್ತಿಯಾಗುತ್ತದೆ, ಕಷ್ಟ
ಪಡಬೇಕಾಗಿಲ್ಲ. ಪ್ರಪಂಚದವರು ಅಸಂಭವವೆಂದು ತಿಳಿಯುತ್ತಾರೆ ಮತ್ತು ತಾವು ಅಸಂಭವವನ್ನು ಸಂಭವ ಮತ್ತು
ಸಹಜ ಮಾಡಿಕೊಂಡಿರಿ.
ಯಾರೆಲ್ಲಾ ಹೊಸ-ಹೊಸ
ಮಕ್ಕಳು ಬಂದಿದ್ದೀರಿ, ಮೊದಲ ಬಾರಿ ಬಂದಿದ್ದೀರಿ ಅವರು ಕೈಯನ್ನೆತ್ತಿರಿ. ಒಳ್ಳೆಯದು - ಯಾರು
ಹೊಸ-ಹೊಸ ಮಕ್ಕಳಿದ್ದೀರಿ, ಶುಭಾಷಯಗಳು. ಮೊದಲ ಬಾರಿ ಬಂದಿರುವಂತಹವರು ಏಕೆಂದರೆ ಬಾಪ್ದಾದಾರವರು
ಹೇಳುತ್ತಾರೆ - ಭಲೆ ನೀವು ತಡವಾಗಿ ಬಂದಿದ್ದೀರಿ ಆದರೆ ಬಹಳ ತಡವಾಗಿ ಬಂದಿಲ್ಲ ಮತ್ತು ಹೊಸ
ಮಕ್ಕಳಿಗೆ ಬಾಪ್ದಾದಾರವರ ವರದಾನವಿದೆ - ಕೊನೆಯಲ್ಲಿ ಬಂದಿರುವವರೂ ಸಹ ತೀವ್ರವಾಗಿ ಪುರುಷಾರ್ಥ ಮಾಡಿ
ಮೊದಲ ಡಿವಿಜನ್ನಲ್ಲಿ ಬರಲು ಸಾಧ್ಯವಿದೆ. ಮೊದಲನೇ ನಂಬರಿನಲ್ಲಿ ಅಲ್ಲ ಆದರೆ ಮೊದಲನೇ ಡಿವಿಜನ್ನಲ್ಲಿ
ಬರಲು ಸಾಧ್ಯತೆಯಿದೆ ಅಂದಾಗ ಹೊಸ ಮಕ್ಕಳು ಇಷ್ಟೊಂದು ಸಾಹಸವಂತರಾಗಿದ್ದೀರಾ? ಫಸ್ಟ್ ಡಿವಿಜನ್ನಲ್ಲಿ
ಬರುತ್ತೇವೆ ಎನ್ನುವವರು ಕೈಯನ್ನೆತ್ತಿರಿ. ನೋಡಿ, ಟಿ.ವಿ.ಯಲ್ಲಿ ತಮ್ಮ ಕೈ ಬರುತ್ತಿದೆ. ಒಳ್ಳೆಯದು
- ಸಾಹಸವಂತರಾಗಿದ್ದೀರಿ ಶುಭಾಷಯಗಳು. ಸಾಹಸಕ್ಕೆ ಶುಭಾಷಯಗಳು. ಸಾಹಸವಿದ್ದರೆ ತಂದೆಯ ಸಹಯೋಗವು
ಇದ್ದೇ ಇದೆ ಮತ್ತು ಸರ್ವ ಬ್ರಾಹ್ಮಣ ಪರಿವಾರದ ಶುಭ ಭಾವನೆ, ಶುಭ ಕಾಮನೆ ತಮ್ಮೆಲ್ಲರೊಂದಿಗೆ ಇದೆ
ಆದ್ದರಿಂದ ಯಾರೆಲ್ಲಾ ಹೊಸಬರು ಮೊದಲ ಬಾರಿ ಬಂದಿದ್ದೀರಿ ಅವರೆಲ್ಲರ ಪ್ರತಿ ಬಾಪ್ದಾದಾ ಮತ್ತು
ಪರಿವಾರದ ಕಡೆಯಿಂದ ಮತ್ತೊಮ್ಮೆ ಪದಮಾಗುಣದಷ್ಟು ಶುಭಾಷಯಗಳು, ಶುಭಾಷಯಗಳು, ಶುಭಾಷಯಗಳು. ಮತ್ತು
ತಾವು ಯಾರೆಲ್ಲಾ ಮೊದಲ ಬಾರಿ ಬಂದಿದ್ದೀರಿ ಅವರಿಗೂ ಸಹ ಖುಷಿಯಾಗುತ್ತಿದೆಯಲ್ಲವೆ.! ಅಗಲಿರುವ
ಆತ್ಮರು ಮತ್ತೆ ತಮ್ಮ ಪರಿವಾರದಲ್ಲಿ ಬಂದು ತಲುಪಿದ್ದೀರಿ ಅಂದಾಗ ಬಾಪ್ದಾದಾರವರಿಗೂ
ಸಂತೋಷವಾಗುತ್ತಿದೆ ಮತ್ತು ತಮಗೆಲ್ಲರಿಗೂ ಸಹ ಸಂತೋಷವಾಗುತ್ತಿದೆ.
ಬಾಪ್ದಾದಾರವರು ವತನದಲ್ಲಿ
ದಾದೀಜಿಯವರ ಜೊತೆ ಒಂದು ಫಲಿತಾಂಶವನ್ನು ನೋಡಿದೆವು. ಫಲಿತಾಂಶದಲ್ಲಿ ಏನು ನೋಡಿರಬಹುದು?
ತಮಗೆಲ್ಲರಿಗೂ ತಿಳಿದಿದೆಯೇ? ತಾವೆಲ್ಲರೂ ತಿಳಿದುಕೊಂಡಿದ್ದೀರಿ, ಒಪ್ಪಿಕೊಳ್ಳುತ್ತೀರಿ - ನಾವೇ
ಮಾಲೀಕರು ಹಾಗೂ ಬಾಲಕರಾಗಿದ್ದೇವೆ. ಹೌದಲ್ಲವೆ! ಮಾಲೀಕರೂ ಆಗಿದ್ದೀರಿ, ಬಾಲಕರೂ ಆಗಿದ್ದೀರಿ.
ಎಲ್ಲರೂ ಆಗಿದ್ದೀರಾ? ಕೈಯನ್ನೆತ್ತಿರಿ. ಯೋಚನೆ ಮಾಡಿ ಎತ್ತಿರಿ, ಹಾಗೆಯೇ ಅಲ್ಲ. ಲೆಕ್ಕ
ತೆಗೆದುಕೊಳ್ಳುತ್ತೇವಲ್ಲವೆ. ಒಳ್ಳೆಯದು - ಕೈಯನ್ನು ಇಳಿಸಿ. ಬಾಪ್ದಾದಾರವರು ನೋಡಿದೆವು -
ಬಾಲಕತನದ ನಶೆ ಮತ್ತು ನಿಶ್ಚಯ ಸಹಜವಾಗಿರುತ್ತದೆ ಏಕೆಂದರೆ ಬ್ರಹ್ಮಾಕುಮಾರ ಮತ್ತು ಬ್ರಹ್ಮಾಕುಮಾರಿ
ಎಂದು ಹೇಳುತ್ತೀರಲ್ಲವೆ! ಅಂದಾಗ ಬಾಲಕರಾದಿರಿ ಮತ್ತು ಇಡೀ ದಿನ ನನ್ನ ಬಾಬಾ, ನನ್ನ ಬಾಬಾ - ಇದನ್ನೇ
ಸ್ಮೃತಿಯಲ್ಲಿ ತರುತ್ತೀರಿ ಮತ್ತೆ ಮರೆತು ಬಿಡುತ್ತೀರಿ ಆದರೆ ಮಧ್ಯ-ಮಧ್ಯದಲ್ಲಿ ನೆನಪು ಬರುತ್ತದೆ
ಮತ್ತು ಸೇವೆಯಲ್ಲಿಯೂ ಸಹ ಬಾಬಾ, ಬಾಬಾ ಶಬ್ಧ ಸ್ವಾಭಾವಿಕವಾಗಿ ಬಾಯಿಂದ ಬರುತ್ತದೆ. ಒಂದುವೇಳೆ ಬಾಬಾ
ಎಂಬ ಶಬ್ಧ ಬರಲಿಲ್ಲವೆಂದರೆ ಜ್ಞಾನದ ಪ್ರಭಾವವೂ ಸಹ ಬೀರುವುದಿಲ್ಲ. ಯಾವುದೇ ಸೇವೆಯನ್ನು
ಮಾಡುತ್ತೀರೆಂದರೆ ಭಲೆ ಭಾಷಣ ಮಾಡಬಹುದು, ಕೋರ್ಸ್ ಕೊಡಬಹುದು... ಭಿನ್ನ-ಭಿನ್ನ ವಿಷಯಗಳ ಬಗ್ಗೆ
ಮಾಡುತ್ತಿರಬಹುದು. ಸತ್ಯ ಸೇವೆಯ ಪ್ರತ್ಯಕ್ಷ ಸ್ವರೂಪ ಅಥವಾ ಪ್ರತ್ಯಕ್ಷ ಪ್ರಮಾಣ ಇದೇ ಆಗಿದೆ -
ಕೇಳುವಂತಹವರೂ ಸಹ ನಾನೂ ತಂದೆಯ ಮಗುವಾಗಿದ್ದೇನೆ ಎಂದು ಅನುಭವ ಮಾಡಲಿ. ಅವರ ಬಾಯಿಂದ ಬಾಬಾ, ಬಾಬಾ
ಶಬ್ಧ ಬರಲಿ. ಯಾವುದೋ ಶಕ್ತಿಯಿದೆ ಎಂದಲ್ಲ, ಚೆನ್ನಾಗಿದೆ ಎಂದಲ್ಲ ಆದರೆ ನನ್ನಬಾಬಾ ಎಂಬ ಅನುಭವ
ಮಾಡಲಿ. ಇದಕ್ಕೆ ಸೇವೆಯ ಪ್ರತ್ಯಕ್ಷ ಫಲವೆಂದು ಹೇಳಲಾಗುತ್ತದೆ ಅಂದಾಗ ಬಾಲಕತನದ ನಶೆ ಮತ್ತು
ನಿಶ್ಚಯವೂ ಸಹ ಚೆನ್ನಾಗಿರುತ್ತದೆ ಆದರೆ ಮಾಲೀಕತನದ ನಿಶ್ಚಯ ಮತ್ತು ನಶೆ ನಂಬರ್ವಾರ್ ಇರುತ್ತದೆ.
ಬಾಲಕತನದಿಂದ ಮಾಲೀಕತನದ ಪ್ರಾಕ್ಟಿಕಲ್ ನಡತೆ ಮತ್ತು ಚಹರೆಯಿಂದ ನಶೆಯು ಕೆಲವೊಮ್ಮೆ ಕಂಡು ಬರುತ್ತದೆ
ಮತ್ತು ಕಡಿಮೆ ಕಂಡು ಬರುತ್ತದೆ. ವಾಸ್ತವದಲ್ಲಿ ತಾವು ಡಬಲ್ ಮಾಲೀಕರಾಗಿದ್ದೀರಿ. ಒಬ್ಬ ತಂದೆಯ
ಖಜಾನೆಗಳಿಗೆ ಮಾಲೀಕರಾಗಿದ್ದೀರಿ. ಎಲ್ಲರೂ ಖಜಾನೆಗೆ ಮಾಲೀಕರಾಗಿದ್ದೀರಾ? ಮತ್ತು ತಂದೆಯು ಎಲ್ಲರಿಗೂ
ಒಂದೇ ಸಮನಾಗಿ ಖಜಾನೆಯನ್ನು ಕೊಟ್ಟಿದ್ದಾರೆ. ಕೆಲವರಿಗೆ ಲಕ್ಷ ಕೊಟ್ಟಿದ್ದಾರೆ, ಕೆಲವರಿಗೆ ಸಾವಿರ
ಕೊಟ್ಟಿದ್ದಾರೆ ಎಂದಲ್ಲ. ಎಲ್ಲರಿಗೂ ಎಲ್ಲಾ ಖಜಾನೆಯನ್ನು ಅಪರಿಮಿತವಾಗಿ ಕೊಟ್ಟಿದ್ದೇವೆ ಏಕೆಂದರೆ
ತಂದೆಯ ಬಳಿ ಅಪರಿಮಿತ ಖಜಾನೆಯಿದೆ, ಕಡಿಮೆಯಿಲ್ಲ ಅಂದಾಗ ಬಾಪ್ದಾದಾರವರು ಎಲ್ಲರಿಗೂ ಸರ್ವ
ಖಜಾನೆಯನ್ನು ನೀಡಿದ್ದಾರೆ ಮತ್ತು ಒಂದೇ ರೀತಿ, ಒಂದೇ ಸಮನಾಗಿ ನೀಡಿದ್ದೇವೆ ಮತ್ತು ಮತ್ತೊಂದು
ಮಾಲೀಕತನ – ಸ್ವರಾಜ್ಯಕ್ಕೆ ಮಾಲೀಕರಾಗಿದ್ದೀರಿ ಆದ್ದರಿಂದ ನನ್ನ ಒಬ್ಬೊಬ್ಬ ಮಗು ರಾಜಾ
ಮಕ್ಕಳಾಗಿದ್ದಾರೆ ಎಂದು ಬಾಪ್ದಾದಾ ನಶೆಯಿಂದ ಹೇಳುತ್ತೇವೆ ಅಂದಾಗ ರಾಜಾ ಮಕ್ಕಳಲ್ಲವೆ! ಪ್ರಜೆಗಳಂತೂ
ಅಲ್ಲ ಅಲ್ಲವೇ? ರಾಜ ಯೋಗಿಯೋ ಅಥವಾ ಪ್ರಜಾ ಯೋಗಿಗಳಾಗಿದ್ದೀರಾ? ರಾಜ ಯೋಗಿಯಲ್ಲವೆ! ಅಂದಾಗ
ಸ್ವರಾಜ್ಯದ ಮಾಲೀಕರಾಗಿದ್ದೀರಿ ಆದರೆ ಬಾಪ್ದಾದಾ ದಾದೀಜಿಯವರ ಜೊತೆ ಫಲಿತಾಂಶವನ್ನು ನೋಡಿದೆವು-
ಬಾಲಕತನದ ನಶೆ ಎಷ್ಟಿರುತ್ತದೆಯೋ ಅಷ್ಟು ಮಾಲೀಕತನದ ನಶೆ ಕಡಿಮೆಯಿರುತ್ತದೆ - ಏಕೆ? ಒಂದುವೇಳೆ
ಸ್ವರಾಜ್ಯದ ಮಾಲೀಕತನದ ನಶೆ ಸದಾ ಇದ್ದಿದ್ದೇ ಆದರೆ ಮಧ್ಯ-ಮಧ್ಯದಲ್ಲಿ ಯಾವ ಸಮಸ್ಯೆಗಳು, ವಿಘ್ನಗಳು
ಬರುತ್ತದೆ ಅವು ಬರಲು ಸಾಧ್ಯವಿಲ್ಲ. ಆ ರೀತಿ ನೋಡಿದ್ದೇ ಆದರೆ ಸಮಸ್ಯೆ ಮತ್ತು ವಿಘ್ನಗಳು ಬರಲು
ವಿಶೇಷವಾಗಿ ಮನಸ್ಸು ಆಧಾರವಾಗಿದೆ. ಮನಸ್ಸು ಏರುಪೇರಿನಲ್ಲಿ ಬರುತ್ತದೆ ಆದ್ದರಿಂದ ಬಾಪ್ದಾದಾರವರ
ಮಹಾಮಂತ್ರವೂ ಆಗಿದೆ- ಮನ್ಮನಾಭವ. ತನ್ಮನಾಭವ, ಧನ್ಮಾನಭವ ಅಲ್ಲ, ಮನ್ಮನಾಭವ. ಅಂದಾಗ ಒಂದುವೇಳೆ
ಸ್ವರಾಜ್ಯದ ಮಾಲೀಕರಾಗಿದ್ದೇ ಆದರೆ ಮನಸ್ಸಿಗೆ ಮಾಲೀಕರಲ್ಲವೇ? ಮನಸ್ಸು ತಮ್ಮ ಕರ್ಮಚಾರಿಯಾಗಿದೆ,
ರಾಜನಲ್ಲ. ರಾಜಾ ಅರ್ಥಾತ್ ಅಧಿಕಾರಿ, ಅಧೀನರಾಗುವವರಿಗೆ ರಾಜನೆಂದು ಹೇಳುವುದಿಲ್ಲ. ಅಂದಾಗ
ಫಲಿತಾಂಶದಲ್ಲಿ ಏನು ನೋಡಿದೆವು? ಮನಸ್ಸಿನ ಮಾಲೀಕ ನಾನು ರಾಜ್ಯಾಧಿಕಾರಿ ಮಾಲೀಕನಾಗಿದ್ದೇನೆ - ಈ
ಸ್ಮೃತಿ, ಈ ಆತ್ಮಿಕ ಸ್ಥಿತಿ ಸದಾ ಕಡಿಮೆಯಿರುತ್ತದೆ. ಇದು ಮೊದಲನೇ ಪಾಠವಾಗಿದೆ, ತಾವೆಲ್ಲರೂ ಮೊದಲ
ಪಾಠವನ್ನು ಏನು ಕಲಿತಿದ್ದೀರಿ? ನಾನು ಆತ್ಮನಾಗಿದ್ದೇನೆ, ಪರಮಾತ್ಮನ ಪಾಠ ಎರಡನೆಯದಾಗಿದೆ. ಆದರೆ
ಮೊದಲ ಪಾಠ ನಾನು ಮಾಲೀಕ ರಾಜ, ಈ ಕರ್ಮೇಂದ್ರಿಯಗಳಿಗೆ ಅಧಿಕಾರಿ ಆತ್ಮನಾಗಿದ್ದೇನೆ, ಶಕ್ತಿಶಾಲಿ
ಆತ್ಮನಾಗಿದ್ದೇನೆ, ಸರ್ವ ಶಕ್ತಿಗಳು ಆತ್ಮನ ನಿಜೀ ಗುಣಗಳಾಗಿವೆ ಅಂದಾಗ ಬಾಪ್ದಾದಾರವರು ನೋಡಿದೆವು
- ನಾನು ಯಾರಾಗಿದ್ದೇನೆ, ಹೇಗಿದ್ದೇನೆ ಅದನ್ನು ಸ್ವಾಭಾವಿಕ ಸ್ವರೂಪದ ಸ್ಮೃತಿಯಲ್ಲಿ ನಡೆಯುವುದು,
ಇರುವುದು, ಚಹರೆಯಿಂದ ಅನುಭವವಾಗುವುದು, ಸಮಸ್ಯೆಗಳಿಂದ ದೂರವಾಗುವುದು, ಇದರಲ್ಲಿ ಈಗ ಮತ್ತಷ್ಟು
ಗಮನವಿರಬೇಕು. ಕೇವಲ ನಾನು ಆತ್ಮ ಎಂದಲ್ಲ, ಆದರೆ ಎಂತಹ ಆತ್ಮನಾಗಿದ್ದೇನೆ, ಒಂದುವೇಳೆ ಇದನ್ನು
ಸ್ಮೃತಿಯಲ್ಲಿಟ್ಟುಕೊಂಡಿದ್ದೇ ಆದರೆ ಮಾ|| ಸರ್ವ ಶಕ್ತಿವಂತರ ಆತ್ಮರ ಮುಂದೆ ಸಮಸ್ಯೆ ಅಥವಾ
ವಿಘ್ನಗಳು ಬರಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ. ಈಗಲೂ ಸಹ ಫಲಿತಾಂಶದಲ್ಲಿ ಒಂದಲ್ಲ ಒಂದು ಸಮಸ್ಯೆ
ಅಥವಾ ವಿಘ್ನಗಳು ಕಂಡು ಬರುತ್ತದೆ. ತಿಳಿದಿದೆ ಆದರೆ ಚಲನೆ ಮತ್ತು ಚಹರೆಯಲ್ಲಿ ನಿಶ್ಚಯದ
ಪ್ರತ್ಯಕ್ಷ ಸ್ವರೂಪ, ಆತ್ಮೀಯ ನಶೆ ಮತ್ತಷ್ಟು ಪ್ರತ್ಯಕ್ಷವಾಗಲಿದೆ. ಇದಕ್ಕಾಗಿ ಈ ಮಾಲೀಕತನದ
ನಶೆಯನ್ನು ಪದೇ-ಪದೇ ಪರಿಶೀಲನೆ ಮಾಡಿಕೊಳ್ಳಿ. ಪರಿಶೀಲನೆ ಮಾಡಿಕೊಳ್ಳುವುದು ಸೆಕೆಂಡಿನ ಮಾತಾಗಿದೆ.
ಕರ್ಮ ಮಾಡುತ್ತಾ, ಯಾವುದೇ ಕರ್ಮ ಆರಂಭ ಮಾಡುತ್ತೀರಿ, ಆರಂಭ ಮಾಡುವ ಸಮಯದಲ್ಲಿ ಪರಿಶೀಲನೆ
ಮಾಡಿಕೊಳ್ಳಿ - ಮಾಲೀಕತನದ ಅಥಾರಿಟಿಯಿಂದ ಕರ್ಮೇಂದ್ರಿಯಗಳ ಮೂಲಕ ಕರ್ಮವನ್ನು ಮಾಡಿಸುವಂತಹ
ನಿಯಂತ್ರಣಾಶಕ್ತಿ, ರೂಲಿಂಗ್ಪವರ್ ಹೊಂದಿರುವ ಆತ್ಮನಾಗಿದ್ದೇನೆಯೇ? ಸಾಧಾರಣ ಕರ್ಮ
ಪ್ರಾರಂಭವಾಗಿದೆಯೇ? ಸ್ಮೃತಿ ಸ್ವರೂಪದಿಂದ ಕರ್ಮವನ್ನಾರಂಭಿಸುವುದರಲ್ಲಿ ಮತ್ತು ಸಾಧಾರಣ
ಸ್ಥಿತಿಯಿಂದ ಕರ್ಮವನ್ನಾರಂಭ ಮಾಡುವುದರಲ್ಲಿ ಬಹಳ ಅಂತರವಿದೆ. ಹೇಗೆ ಲೌಕಿಕದ ಪದವಿಯನ್ನು
ಹೊಂದಿದವರು ತಮ್ಮ ಕಾರ್ಯವನ್ನು ಮಾಡುತ್ತಾರೆಂದರೆ ಕಾರ್ಯದ ಸ್ಥಾನದಲ್ಲಿ ಸ್ಥಿತರಾಗಿ ನಂತರ
ಕಾರ್ಯವನ್ನಾರಂಭಿಸುತ್ತಾರೆ. ಹಾಗೆಯೇ ತನ್ನ ಮಾಲೀಕತನದ ಸ್ವರಾಜ್ಯಾಧಿಕಾರಿ ಸೀಟಿನಲ್ಲಿ ಸ್ಥಿತರಾಗಿ
ಮತ್ತು ಪ್ರತಿಯೊಂದು ಕಾರ್ಯವನ್ನು ಮಾಡಿ. ಈ ಮಾಲೀಕತನದ ಅಥಾರಿಟಿಯ ಚಿಹ್ನೆಯಾಗಿದೆ ಸದಾ ಪ್ರತಿಯೊಂದು
ಕಾರ್ಯದಲ್ಲಿ ಡಬಲ್ಲೈಟ್ ಮತ್ತು ಖುಷಿಯ ಅನುಭೂತಿಯಾಗುತ್ತದೆ ಮತ್ತು ಫಲಿತಾಂಶದಲ್ಲಿ ಸಫಲತೆಯು
ಸಹಜವಾಗಿ ಅನುಭವವಾಗುತ್ತದೆ. ಈಗಲೂ ಸಹ ಕೆಲವೆಡೆ ಅಧಿಕಾರಿಗಳಿಗೆ ಬದಲಾಗಿ ಅಧೀನರಾಗಿ ಬಿಡುತ್ತಾರೆ.
ಅಧೀನತೆಯ ಚಿಹ್ನೆಯಾಗಿ ಏನು ಕಂಡು ಬರುತ್ತದೆ? ಮತ್ತೆ-ಮತ್ತೆ ನನ್ನ ಸಂಸ್ಕಾರವೆಂದು ಹೇಳುತ್ತೀರಿ,
ಇಷ್ಟ ಪಡುವುದಿಲ್ಲ ಆದರೆ ನನ್ನ ಸಂಸ್ಕಾರ, ನನ್ನ ಸ್ವಭಾವವೆಂದು ಹೇಳುತ್ತೀರಿ.
ಬಾಪ್ದಾದಾರವರಿಗೆ ಮೊದಲೂ
ಸಹ ತಿಳಿಸಿದ್ದೆವು - ಯಾವ ಸಮಯದಲ್ಲಿ ನನ್ನ ಸಂಸ್ಕಾರ, ನನ್ನ ಸ್ವಭಾವವಾಗಿದೆ, ಈ ಬಲಹೀನತೆಯ
ಸಂಸ್ಕಾರ ತಮ್ಮ ಸಂಸ್ಕಾರವಾಗಿದೆಯೇ? ನನ್ನದೇ? ಇದಂತೂ ರಾವಣನ ಮಧ್ಯದ ಸಂಸ್ಕಾರವಾಗಿದೆ, ರಾವಣನ
ಕೊಡುಗೆಯಾಗಿದೆ. ಅದನ್ನು ನನ್ನದು ಎಂದು ಹೇಳುವುದೇ ತಪ್ಪಾಗಿದೆ. ತಮ್ಮ ಸಂಸ್ಕಾರವಂತೂ ತಂದೆಯ
ಸಂಸ್ಕಾರ ಯಾವುದಿದೆಯೋ ಅದೇ ನನ್ನ ಸಂಸ್ಕಾರವಾಗಿದೆ. ಆ ಸಮಯದಲ್ಲಿ ಯೋಚಿಸಿ, ನನ್ನದು-ನನ್ನದು ಎಂದು
ಹೇಳಿ, ಆದರೆ ಅದು ಅಧಿಕಾರಿಯಾಗಿ ಬಿಡುತ್ತದೆ ಮತ್ತು ನೀವು ಅಧೀನರಾಗಿ ಬಿಡುತ್ತೀರಿ. ಹೇಗೆ ತಂದೆಯ
ಸಮಾನರಾಗಬೇಕೆಂದರೆ ನನ್ನ ಸಂಸ್ಕಾರ ಎಂದಲ್ಲ, ಯಾವುದು ತಂದೆಯ ಸಂಸ್ಕಾರವಾಗಿದೆಯೋ ಅದು ನನ್ನ
ಸಂಸ್ಕಾರ. ತಂದೆಯ ಸಂಸ್ಕಾರವೇನಾಗಿದೆ? ವಿಶ್ವ ಕಲ್ಯಾಣಕಾರಿ, ಶುಭ ಭಾವನೆ, ಶುಭ ಕಾಮನಾಧಾರಿ.
ಅಂದಾಗ ಆ ಸಮಯ ತಂದೆಯ ಸಂಸ್ಕಾರವನ್ನು ಸನ್ಮುಖದಲ್ಲಿ ತನ್ನಿ. ತಂದೆಯ ಸಮಾನರಾಗುವ ಲಕ್ಷ್ಯವಿದೆ ಆದರೆ
ರಾವಣನ ಲಕ್ಷಣಗಳು ಉಳಿದುಕೊಂಡಿದೆ ಅಂದಾಗ ಬೆರತು ಹೋಗುತ್ತದೆ, ಸ್ವಲ್ಪ ತಂದೆಯ ಒಳ್ಳೆಯದು, ಸ್ವಲ್ಪ
ಆ ನನ್ನ ಹಿಂದಿನ ಸಂಸ್ಕಾರವಿದೆ ಆದ್ದರಿಂದ ಎರಡೂ ಬೆರಯುತ್ತಿರುತ್ತದೆಯಲ್ಲವೆ ಆಗ
ಕಿರಿಕಿರಿಯಾಗುತ್ತಿರುತ್ತದೆ. ಮತ್ತು ಸಂಸ್ಕಾರ ಹೇಗಾಗುತ್ತದೆ? ಅದನ್ನಂತೂ ಎಲ್ಲರೂ
ತಿಳಿದಿದ್ದೀರಲ್ಲವೆ! ಸಂಸ್ಕಾರವು ಮನಸ್ಸು ಮತ್ತು ಬುದ್ಧಿಯ ಸಂಕಲ್ಪ ಮತ್ತು ಕಾರ್ಯದಿಂದ
ಸಂಸ್ಕಾರವಾಗುತ್ತದೆ. ಮೊದಲು ಮನಸ್ಸು ಸಂಕಲ್ಪ ಮಾಡುತ್ತದೆ, ಬುದ್ಧಿ ಸಹಯೋಗ ಕೊಡುತ್ತದೆ ಮತ್ತು
ಒಳ್ಳೆಯ ಹಾಗೂ ಕೆಟ್ಟ ಸಂಸ್ಕಾರವಾಗಿ ಬಿಡುತ್ತದೆ.
ಅಂದಾಗ ಬಾಪ್ದಾದಾರವರು
ದಾದೀಜಿಯವರ ಜೊತೆ-ಜೊತೆಯಲ್ಲಿ ಫಲಿತಾಂಶದಲ್ಲಿ ನೋಡಿದೆವು- ಮಾಲೀಕತನದ ಸ್ವಾಭಾವಿಕ ಮತ್ತು ಸ್ವಭಾವದ
ನಶೆಯು ಬಾಲಕತನದ ಲೆಕ್ಕದಲ್ಲಿ ನೋಡಿದಾಗ ಈಗಲೂ ಕಡಿಮೆಯಿದೆ ಆದ್ದರಿಂದ ಬಾಪ್ದಾದಾರವರು ನೋಡುತ್ತೇವೆ
- ಸಮಾಧಾನ ಮಾಡುವುದಕ್ಕೋಸ್ಕರ ಯುದ್ಧ ಮಾಡಲು ತೊಡಗುತ್ತಾರೆ. ಬ್ರಾಹ್ಮಣರಾಗಿದ್ದರೂ
ಮಧ್ಯ-ಮಧ್ಯದಲ್ಲಿ ಕ್ಷತ್ರಿಯರಾಗಿ ಬಿಡುತ್ತೀರಿ ಅಂದಮೇಲೆ ಕ್ಷತ್ರಿಯರಾಗಬಾರದು. ಬ್ರಾಹ್ಮಣರಿಂದ
ದೇವತೆಗಳಾಗಬೇಕು. ಕ್ಷತ್ರಿಯರಾಗುವವರು ಅನೇಕರು ಬರಲಿದ್ದಾರೆ, ಅವರು ಹಿಂದೆ ಬರಲಿದ್ದಾರೆ, ನೀವಂತೂ
ಅಧಿಕಾರಿ ಆತ್ಮರಾಗಿದ್ದೀರಿ. ಫಲಿತಾಂಶವನ್ನು ಕೇಳಿದಿರಲ್ಲವೆ! ಆದ್ದರಿಂದ ಮತ್ತೆ-ಮತ್ತೆ ನಾನು ಯಾರು
ಎನ್ನುವುದನ್ನು ಸ್ಮೃತಿಗೆ ತಂದುಕೊಳ್ಳಿ. ಆಗಿಯೇ ಇದ್ದೀನೆ ಎಂದಲ್ಲ ಆದರೆ ಸ್ಮೃತಿಸ್ವರೂಪದಲ್ಲಿ
ತನ್ನಿ. ಸರಿಯಲ್ಲವೆ! ಒಳ್ಳೆಯದು - ಫಲಿತಾಂಶವನ್ನು ತಿಳಿಸಿದ್ದೇವೆ. ಈಗ ಸಮಸ್ಯೆಯ, ವಿಘ್ನದ,
ಏರುಪೇರಿನ ಹೆಸರು, ವ್ಯರ್ಥ ಸಂಕಲ್ಪಗಳ ಹೆಸರು, ವ್ಯರ್ಥ ಕರ್ಮದ ಹೆಸರು, ವ್ಯರ್ಥ ಸಂಬಂಧದ ಹೆಸರು,
ವ್ಯರ್ಥ ಸ್ಮೃತಿಯ ಹೆಸರು ಸಮಾಪ್ತಿ ಮಾಡಿ ಹಾಗೂ ಮಾಡಿಸಿ. ಸರಿಯಲ್ಲವೆ! ಮಾಡುತ್ತೀರಲ್ಲವೆ? ಯಾರು
ಧೃಡ ಸಂಕಲ್ಪದ ಕೈಯನ್ನೆತ್ತುತ್ತೀರೋ, ಈ ಕೈಯನ್ನೆತ್ತುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ
ಆದ್ದರಿಂದ ಕೈಯೆತ್ತಬೇಡಿ. ಮನಸ್ಸಿನಲ್ಲಿ ಧೃಡ ಸಂಕಲ್ಪದ ಕೈಯೆತ್ತಿರಿ. ಮನಸ್ಸಿನಲ್ಲಿ ಕೈಯೆತ್ತಿರಿ,
ಶರೀರದ ಕೈಯಲ್ಲ. ಅದನ್ನಂತೂ ಬಹಳ ನೋಡಿದ್ದೇವೆ. ಯಾವಾಗ ಎಲ್ಲರೂ ಸೇರಿ ಮನಸ್ಸಿನಿಂದ ಧೃಡ ಸಂಕಲ್ಪದ
ಕೈಯನ್ನೆತ್ತುತ್ತೀರಿ ಆಗಲೇ ವಿಶ್ವದ ಮೂಲೆ-ಮೂಲೆಯಲ್ಲಿ ಎಲ್ಲರ ಖುಷಿಯ ಕೈ ಮೇಲಿರುತ್ತದೆ - ನಮ್ಮ
ಸುಖ ದಾತ, ಶಾಂತಿ ದಾತ ತಂದೆಯು ಬಂದು ಬಿಟ್ಟರು.
ತಂದೆಯನ್ನು ಪ್ರತ್ಯಕ್ಷ
ಮಾಡುವಂತಹ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೀರಲ್ಲವೆ! ತೆಗೆದುಕೊಂಡಿದ್ದೀರಾ? ಪಕ್ಕಾ? ಟೀಚರ್ಸ್
ತೆಗೆದುಕೊಂಡಿದ್ದೀರಲ್ಲವೆ? ಒಳ್ಳೆಯದು - ಪಾಂಡವರು ಕೈಯೆತ್ತಿದ್ದೀರಿ, ಪಕ್ಕಾ. ಒಳ್ಳೆಯದು
ದಿನಾಂಕವನ್ನು ಫಿಕ್ಸ್ ಮಾಡಿ. ದಿನಾಂಕವನ್ನು ನಿಗಧಿಯಾಗಿದೆಯೇ? ಎಷ್ಟು ಸಮಯ ಬೇಕಾಗಿದೆ? ಒಂದು
ವರ್ಷ ಬೇಕೇ, ಎರಡು ವರ್ಷ ಬೇಕಾಗಿದೆಯೇ? ಎಷ್ಟು ವರ್ಷ ಬೇಕಾಗಿದೆ? ಬಾಪ್ದಾದಾ ತಿಳಿಸಿದರು -
ಪ್ರತಿಯೊಬ್ಬರು ತಮ್ಮ ಪುರುಷಾರ್ಥದ ಯಥಾ ಶಕ್ತಿಯ ಪ್ರಮಾಣ ತಮ್ಮ ಸ್ವಾಭಾವಿಕ ಚಲನೆಯ ಅಥವಾ ಹಾರುವ
ವಿಧಿಯ ಸಮಾನ ತಮ್ಮ ಸಂಪನ್ನರಾಗುವ ದಿನಾಂಕವನ್ನು ಸ್ವಯಂ ತಾವೇ ನಿಗಧಿಗೊಳಿಸಿ. ಬಾಪ್ದಾದಾರವರಂತೂ
ಈಗ ಮಾಡಿ ಎಂದು ಹೇಳುತ್ತಾರೆ ಆದರೆ ಯಥಾ ಶಕ್ತಿ ತಮ್ಮ ಪುರುಷಾರ್ಥದನುಸಾರ ತಮ್ಮ ದಿನಾಂಕವನ್ನು
ನಿಗಧಿಗೊಳಿಸಿ ಹಾಗೂ ಸಮಯ ಪ್ರತಿಸಮಯ ಅದನ್ನು ಪರಿಶೀಲನೆ ಮಾಡಿ - ಸಮಯ ಪ್ರಮಾಣ ಮನಸ್ಸಿನ ಸ್ಥಿತಿ,
ವಾಚಾದ ಸ್ಥಿತಿ, ಸಂಬಂಧ-ಸಂಪರ್ಕದ ಸ್ಥಿತಿಯಲ್ಲಿ ಉನ್ನತಿಯಾಗುತ್ತಿದೆಯೇ? ಏಕೆಂದರೆ ದಿನಾಂಕ ನಿಗಧಿ
ಪಡಿಸುವುದರಿಂದ ಸ್ವತಹ ಗಮನ ಹರಿಯುತ್ತದೆ.
ಉಳಿದಂತೆ ಎಲ್ಲರ
ಕಡೆಯಿಂದ, ನಾಲ್ಕಾರು ಕಡೆಯಿಂದ ಸಂದೇಶವೂ ಬಂದಿದೆ, ಈ-ಮೇಲ್ ಸಹ ಬಂದಿದೆ ಅಂದಾಗ ಬಾಪ್ದಾದಾರವರ
ಬಳಿಯಂತೂ ಈ-ಮೇಲ್ ತಲುಪುವ ಮೊದಲೇ ತಲುಪಿ ಬಿಡುತ್ತದೆ. ಹೃದಯದ ಸಂಕಲ್ಪದ ಈ-ಮೇಲ್ ಬಹಳ
ವೇಗವಾಗಿರುತ್ತದೆ, ಅದು ಮೊದಲೇ ತಲುಪುತ್ತದೆ ಆದ್ದರಿಂದ ಯಾರೆಲ್ಲರೂ ನೆನಪು-ಪ್ರೀತಿ, ತಮ್ಮ
ಸ್ಥಿತಿಯ ಸಮಾಚಾರ, ತಮ್ಮ ಸೇವೆಯ ಸಮಾಚಾರವನ್ನು ಕಳುಹಿಸಿದ್ದೀರಿ ಅದೆಲ್ಲವನ್ನೂ ಬಾಪ್ದಾದಾರವರು
ಸ್ವೀಕಾರ ಮಾಡಿದೆವು, ನೆನಪು-ಪ್ರೀತಿಯನ್ನು ಎಲ್ಲರೂ ಬಹಳ ಉಮ್ಮಂಗ-ಉತ್ಸಾಹದಿಂದ ಕಳುಹಿಸಿದ್ದೀರಿ
ಆದ್ದರಿಂದ ಬಾಪ್ದಾದಾರವರು ಅವರೆಲ್ಲರಿಗೂ ಭಲೆ ವಿದೇಶದವರಿರಬಹುದು, ದೇಶದವರಿರಬಹುದು ಎಲ್ಲರಿಗೂ
ರಿಟನ್ರ್ನಲ್ಲಿ ನೆನಪು-ಪ್ರೀತಿ ಹಾಗೂ ಹೃದಯದ ಆಶೀರ್ವಾದದಗಳ ಸಹಿತ ಪ್ರೀತಿ ಹಾಗೂ ಶಕ್ತಿಯ
ಸಕಾಶವನ್ನು ನೀಡುತ್ತಿದ್ದೇವೆ. ಒಳ್ಳೆಯದು.
ಎಲ್ಲವನ್ನು ಕೇಳಿದಿರಿ.
ಹೇಗೆ ಕೇಳುವುದು ಸಹಜವೆನಿಸುತ್ತದೆಯಲ್ಲವೆ! ಅದೇ ರೀತಿ ಕೇಳುವುದರಿಂದ ದೂರ ಮಧುರ ಸೈಲೆನ್ಸ್ನ
ಸ್ಥಿತಿಯು ಯಾವಾಗ ಬೇಕೋ, ಎಷ್ಟು ಸಮಯ ಬೇಕೋ ಅಷ್ಟು ಸಮಯ ಮಾಲೀಕರಾಗಿ ಮೊದಲು ವಿಶೇಷ ಮನಸ್ಸಿನ
ಮಾಲೀಕರಾಗಿ, ಆದ್ದರಿಂದ ಮನಜೀತೆ ಜಗತ್ಜೀತ್ ಎಂದು ಹೇಳಲಾಗುತ್ತದೆ. ಅಂದಾಗ ಈಗ ಕೇಳಿದಿರಿ,
ನೋಡಿದಿರಿ, ಆತ್ಮ ರಾಜನಾಗಿ ಮನ-ಬುದ್ಧಿ-ಸಂಸ್ಕಾರವನ್ನೂ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದೇ?
ಮನಸ್ಸು-ಬುದ್ಧಿ-ಸಂಸ್ಕಾರ, ಮೂರರ ಮಾಲೀಕರಾಗಿ ಆಜ್ಞೆ ಮಾಡಿ - ಮಧುರ ಸೈಲೆನ್ಸ್, ಆಗ ಅನುಭವ ಮಾಡಿ
- ಆಜ್ಞೆ ಮಾಡುವುದರಿಂದ, ಅಧಿಕಾರಿಯಾಗುವುದರಿಂದ ಮೂರೂ ಆರ್ಡರ್ನಲ್ಲಿ ಇರುತ್ತದೆಯೇ? ಈಗೀಗ
ಅಧಿಕಾರಿಯ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ. ಒಳ್ಳೆಯದು.
ನಾಲ್ಕೂ ಕಡೆಯ ಸದಾ
ಸ್ವಮಾನಧಾರಿ, ಸತ್ಯತೆಯ ಶಕ್ತಿ ಸ್ವರೂಪ, ಪವಿತ್ರತೆಯ ಸಿದ್ಧಿ ಸ್ವರೂಪ, ಸದಾ ಅಚಲ-ಅಡೋಲ ಸ್ಥಿತಿಯ
ಅನುಭವಿ ಸ್ವ-ಪರಿವರ್ತಕ ಹಾಗೂ ವಿಶ್ವ ಪರಿವರ್ತಕ, ಸದಾ ಅಧಿಕಾರಿ ಸ್ಥಿತಿಯ ಮೂಲಕ ಸರ್ವ ಆತ್ಮರಿಗೆ
ತಂದೆಯ ಮುಖಾಂತರ ಅಧಿಕಾರಿ ಕೊಡಿಸುವಂತಹ ನಾಲ್ಕೂ ಕಡೆಯ ಬಾಪ್ದಾದಾರವರ ಲಕ್ಕಿ ಹಾಗೂ ಲವ್ಲೀ
ಆತ್ಮರಿಗೆ ಪರಮಾತ್ಮನ ನೆನಪು-ಪ್ರೀತಿ ಹಾಗೂ ಹೃದಯದ ಆಶೀರ್ವಾದಗಳನ್ನು ಸ್ವೀಕಾರ ಮಾಡಿ ಮತ್ತು
ಬಾಪ್ದಾದಾರವರ ಮಧುರಾತಿ ಮಧುರ ಮಕ್ಕಳಿಗೆ ನಮಸ್ತೆ.
ಒಳ್ಳೆಯದು - ಎಲ್ಲರೂ
ಸಾಹಸವಂತರಾಗಿದ್ದೀರಿ. ಸಾಹಸ ಕಡಿಮೆಯಾಗಲಿಲ್ಲವಲ್ಲವೆ? ಧೈರ್ಯ ಕಡಿಮೆಯಾದರೆ ತಂದೆಯ ಸಹಯೋಗದ
ಅನುಭವವೂ ಆಗುವುದಿಲ್ಲ. ತಂದೆಯು ಸಹಯೋಗ ಕೊಡುತ್ತಾರೆ ಆದರೆ ಗ್ರಹಿಸಲು ಸಾಧ್ಯವಾಗುವುದಿಲ್ಲ,
ಲಾಭವನ್ನು ತೆಗೆದುಕೊಳ್ಳಲು ಆಗುವುದಿಲ್ಲ ಆದ್ದರಿಂದ ಸದಾ ತಮ್ಮನ್ನು ತಾವು ನೋಡಿಕೊಳ್ಳಿ,
ಧೈರ್ಯವನ್ನು ಹೆಚ್ಚಿಸಿಕೊಳ್ಳಿ. ಯಾವುದಾದರೂ ಇಂತಹ ಮಾತನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಿ
ಯಾವುದರಿಂದ ಧೈರ್ಯ ಹೆಚ್ಚುತ್ತದೆ. ಎಷ್ಟು ಧೈರ್ಯ ಹೆಚ್ಚುತ್ತದೆಯೋ ಅಷ್ಟು ಧೈರ್ಯದ ಮುಂದೆ ಅನ್ಯ
ಮಾತುಗಳು ಬರುವುದೂ ಕಡಿಮೆಯಾಗುತ್ತದೆ. ಒಳ್ಳೆಯದು - ಇದರ ಬಗ್ಗೆ ವಿಚಾರ ಮಾಡಿ.
ವರದಾನ:
ಸ್ವಯಂಗೆ ಸ್ವಯಂ
ಪರಿವರ್ತನೆ ಮಾಡಿಕೊಂಡು ವಿಶ್ವದ ಆಧಾರಮೂರ್ತಿಗಳಾಗುವಂತಹ ಶ್ರೇಷ್ಠ ಪದವಿಗೆ ಅಧಿಕಾರಿ ಭವ.
ಶ್ರೇಷ್ಠ ಪದವಿಯನ್ನು
ಪಡೆಯುವುದಕ್ಕಾಗಿ ಬಾಪ್ದಾದಾರವರದು ಇದೇ ಶಿಕ್ಷಣವಾಗಿದೆ ಮಕ್ಕಳು ಸ್ವಯಂ ಬದಲಾಗಿ. ಸ್ವಯಂಗೆ
ಬದಲಾಗುವ ಬದಲು, ಪರಿಸ್ಥಿತಿಗಳು ಅಥವಾ ಅನ್ಯ ಆತ್ಮಗಳು ಬದಲಾಗಲು ಯೋಚಿಸುತ್ತಾರೆ ಅಥವಾ ಸಂಕಲ್ಪ
ಬರುತ್ತೆ ಇದಕ್ಕೆ ಈ ಪರಿಹಾರ ಸಿಗಲಿ, ಸಹಯೋಗ ಅಥವಾ ಆಶ್ರಯ ಸಿಗಲಿ ಅದರಿಂದ ಪರಿವರ್ತನೆಯಾಗುತ್ತೇನೆ
- ಈ ರೀತಿ ಯಾವುದಾದರೂ ಆಧಾರದ ಮೇಲೆ ಪರಿವರ್ತನೆಯಾಗುವಂತಹವರ ಪ್ರಾಲಭ್ಧವೂ ಸಹ ಆಧಾರದ ಮೇಲೆಯೇ
ಇರುವರು ಏಕೆಂದರೆ ಎಷ್ಟು ಜನದ ಆಧಾರ ಪಡೆಯುವಿರಿ ಅಷ್ಟೂ ಜಮಾದ ಖಾತೆ ಶೆರ್ಸ್ ನಲ್ಲಿ ಹಂಚಿ ಹೋಗಿ
ಬಿಡುತ್ತದೆ, ಆದ್ದರಿಂದ ಸದಾ ಇದೇ ಲಕ್ಷ್ಯ ಇಡಿ ಸ್ವಯಂ ಪರಿವರ್ತನೆಯಾಗಬೇಕು. ನಾನು ಸ್ವಯಂ ವಿಶ್ವದ
ಆಧಾರಮೂರ್ತಿಯಾಗಿದ್ದೇನೆ.
ಸ್ಲೋಗನ್:
ಸಂಘಟನೆಯಲ್ಲಿ
ಒಲವು-ಉತ್ಸಾಹ ಮತ್ತು ಶ್ರೇಷ್ಠ ಸಂಕಲ್ಪದಿಂದ ಸಫಲತೆ ಆಗೇ ಇರುವುದು.
ಅವ್ಯಕ್ತ ಸೂಚನೆ:-
ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.
ಹೇಗೆ ಯಾರಾದರು
ಬಲಹೀನರಾಗಿ ಇರುತ್ತಾರೆ ಎಂದರೆ ಅವರಲ್ಲಿ ಮೊದಲು ಶಕ್ತಿ ತುಂಬಲು ಗ್ಲುಕೋಸ್ ಹಾಕುತ್ತಾರೆ, ಅದೇ
ರೀತಿ ಯಾವಾಗ ತಮ್ಮಲ್ಲಿ ಶಕ್ತಿ ತುಂಬಿಕೊಳ್ಳಬೇಕು ಎಂದರೆ ಶರೀರದಿಂದ ದೂರ ಅಶರೀರಿ ಆತ್ಮ
ಎಂದುಕೊಳ್ಳುತ್ತೀರಿ ಎಂದರೆ ಈ ಸಾಕ್ಷಿತನದ ಸ್ಥಿತಿ ಶಕ್ತಿ ತುಂಬುವ ಕೆಲಸ ಮಾಡುತ್ತದೆ ಹಾಗು ಎಷ್ಟು
ಸಮಯ ಸಾಕ್ಷಿತನದ ಸ್ಥಿತಿ ಇರುತ್ತದೆ ಅಷ್ಟೇ ಸಮಯ ತಂದೆ ಜೊತೆ ಇರುತ್ತಾರೆ.