10.04.25         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ಜ್ಞಾನದ ಅಂಶಗಳನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ ಆಗ ಖುಷಿಯಿರುವುದು, ನೀವೀಗ ಸ್ವರ್ಗದ ದ್ವಾರದಲ್ಲಿ ನಿಂತಿದ್ದೀರಿ, ತಂದೆಯು ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತೋರಿಸುತ್ತಿದ್ದಾರೆ

ಪ್ರಶ್ನೆ:
ತಮ್ಮ ರಿಜಿಸ್ಟರನ್ನು ಸರಿಯಾಗಿಟ್ಟುಕೊಳ್ಳಲು ಅವಶ್ಯವಾಗಿ ಯಾವ ಗಮನವನ್ನಿಡಬೇಕಾಗಿದೆ?

ಉತ್ತರ:
ಗಮನವಿರಲಿ- ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಲಿಲ್ಲವೆ? ತಮ್ಮ ಸ್ವಭಾವವು ಬಹಳ ಮಧುರವಾಗಿರಲಿ. ಮಾಯೆಯು ಮೂಗನ್ನು ಹಿಡಿದು ಅನ್ಯರಿಗೆ ದುಃಖ ಸಿಗುವಂತಹ ಯಾವುದೇ ಕರ್ಮವನ್ನು ಮಾಡಿಸದಿರಲಿ. ಒಂದುವೇಳೆ ದುಃಖ ಕೊಡುತ್ತೀರೆಂದರೆ ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ರಿಜಿಸ್ಟರ್ ಹಾಳಾಗಿಬಿಡುತ್ತದೆ.

ಗೀತೆ:
ಕಣ್ಣಿಲ್ಲದವರಿಗೆ ದಾರಿ ತೋರಿಸು ಪ್ರಭು................

ಓಂ ಶಾಂತಿ.
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ದಾರಿಯನ್ನು ಬಹಳ ಸಹಜವಾಗಿ ತಿಳಿಸಿಕೊಡಲಾಗುತ್ತದೆ. ಆದರೂ ಸಹ ಮಕ್ಕಳು ಮತ್ತೆ ಮೋಸಹೋಗುತ್ತಿರುತ್ತಾರೆ. ಇಲ್ಲಿ ಕುಳಿತಿದ್ದಾಗ ತಂದೆಯು ನಮಗೆ ಓದಿಸುತ್ತಾರೆ. ಶಾಂತಿಧಾಮದಲ್ಲಿ ಹೋಗುವ ಮಾರ್ಗವನ್ನು ತಿಳಿಸುತ್ತಾರೆ. ಬಹಳ ಸಹಜವಾಗಿದೆ ಎಂದು ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಹಗಲು-ರಾತ್ರಿ ಎಷ್ಟು ಸಾಧ್ಯವೋ ಅಷ್ಟು ನೆನಪಿನಲ್ಲಿರಿ. ಭಕ್ತಿಮಾರ್ಗದಲ್ಲಿ ಪಾದಯಾತ್ರೆಯನ್ನು ಮಾಡಲಾಗುತ್ತದೆ, ಬಹಳಷ್ಟು ಅಲೆದಾಡಬೇಕಾಗುತ್ತದೆ ಆದರೆ ನೀವಿಲ್ಲಿ ಕುಳಿತಿದ್ದರೂ ಸಹ ನೆನಪಿನ ಯಾತ್ರೆಯಲ್ಲಿದ್ದೀರಿ. ಇದನ್ನೂ ಸಹ ತಂದೆಯು ತಿಳಿಸುತ್ತಾರೆ- ಮಕ್ಕಳೇ, ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಪತಿತ, ಅವಗುಣಗಳನ್ನು ಸಮಾಪ್ತಿ ಮಾಡಿಕೊಳ್ಳುತ್ತಾ ಹೋಗಿ. ಯಾವುದೇ ಪತಿತ ಕೆಲಸವನ್ನು ಮಾಡಬೇಡಿ. ಇದರಿಂದ ವಿಕರ್ಮವಾಗಿಬಿಡುತ್ತದೆ. ತಂದೆಯು ಬಂದಿರುವುದೇ ನೀವು ಮಕ್ಕಳನ್ನು ಸದಾ ಸುಖಿಯನ್ನಾಗಿ ಮಾಡಲು. ಯಾರಾದರೂ ರಾಜರ ಮಗುವಾಗಿದ್ದರೆ ಅವರಿಗೆ ತಂದೆಯನ್ನು ಮತ್ತು ರಾಜಧಾನಿಯನ್ನು ನೋಡಿ ಖುಷಿಯಿರುತ್ತದೆಯಲ್ಲವೆ. ಭಲೆ ಇಲ್ಲಿ ರಾಜ್ಯಪದವಿಯಿದೆ, ಆದರೆ ಶರೀರದ ರೋಗ ಇತ್ಯಾದಿಗಳು ಇದ್ದೇ ಇರುತ್ತದೆ. ಇಲ್ಲಿ ನೀವು ಮಕ್ಕಳಿಗೆ ನಿಶ್ಚಯವಿದೆ- ಶಿವತಂದೆಯು ಬಂದಿದ್ದಾರೆ, ಅವರು ನಮಗೆ ಓದಿಸುತ್ತಿದ್ದಾರೆ, ಪುನಃ ಸ್ವರ್ಗದಲ್ಲಿ ಹೋಗಿ ರಾಜ್ಯ ಮಾಡುತ್ತೇವೆ, ಅಲ್ಲಿ ಯಾವುದೇ ಪ್ರಕಾರದ ದುಃಖವಿರುವುದಿಲ್ಲ. ನಿಮ್ಮ ಬುದ್ಧಿಯಲ್ಲಿ ರಚಯಿತ ಮತ್ತು ರಚನೆ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಈ ಜ್ಞಾನವು ಬೇರೆ ಮನುಷ್ಯರ ಬುದ್ಧಿಯಲ್ಲಿಯೂ ಇರುವುದಿಲ್ಲ. ನೀವು ಮಕ್ಕಳೂ ಸಹ ಈಗ ತಿಳಿದುಕೊಂಡಿದ್ದೀರಿ- ನಮ್ಮಲ್ಲಿಯೂ ಈ ಜ್ಞಾನ ಮುಂಚೆ ಇರಲಿಲ್ಲ. ತಂದೆಯನ್ನು ನಾವು ತಿಳಿದುಕೊಂಡಿರಲಿಲ್ಲ. ಮನುಷ್ಯರು ಭಕ್ತಿಯನ್ನು ಬಹಳ ಉತ್ತಮವೆಂದು ತಿಳಿದುಕೊಂಡಿದ್ದಾರೆ. ಅನೇಕ ಪ್ರಕಾರದ ಭಕ್ತಿಯನ್ನು ಮಾಡುತ್ತಾರೆ. ಅದರಲ್ಲಿ ಎಲ್ಲವೂ ಸ್ಥೂಲಮಾತುಗಳಿವೆ. ಯಾವುದೇ ಸೂಕ್ಷ್ಮ ಮಾತುಗಳಿಲ್ಲ. ಅಮರನಾಥನ ಯಾತ್ರೆಗೆ ಹೋಗುತ್ತಾರೆಂದರೆ ಸ್ಥೂಲವಾಗಿ ಹೋಗುತ್ತಾರಲ್ಲವೆ. ಅಲ್ಲಿಯೂ ಸಹ ಲಿಂಗವಿದೆ. ಯಾರ ಬಳಿ ಹೋಗುತ್ತೇವೆ ಎಂಬುದನ್ನು ಮನುಷ್ಯರು ಅರಿತುಕೊಳ್ಳುವುದಿಲ್ಲ. ಈಗ ನೀವು ಮಕ್ಕಳು ಎಲ್ಲಿಯೂ ಅಲೆದಾಡಲು ಹೋಗುವುದಿಲ್ಲ ಏಕೆಂದರೆ ನಿಮಗೆ ತಿಳಿದಿದೆ- ನಾವು ಹೊಸ ಪ್ರಪಂಚಕ್ಕಾಗಿ ಓದುತ್ತಿದ್ದೇವೆ, ಎಲ್ಲಿ ಈ ವೇದ-ಶಾಸ್ತ್ರ ಮೊದಲಾದವುಗಳು ಇರುವುದೇ ಇಲ್ಲ, ಸತ್ಯಯುಗದಲ್ಲಿ ಭಕ್ತಿಯಿರುವುದೂ ಇಲ್ಲ, ಅಲ್ಲಿ ಸುಖವೇ ಸುಖವಿರುತ್ತದೆ. ಎಲ್ಲಿ ಭಕ್ತಿಯಿರುತ್ತದೆಯೋ ಅಲ್ಲಿ ದುಃಖವಿದೆ. ಈ ಸೃಷ್ಟಿಚಕ್ರದ ಚಿತ್ರವು ಬಹಳ ಚೆನ್ನಾಗಿದೆ. ಇದರಲ್ಲಿ ಸ್ವರ್ಗದ ದ್ವಾರವು ಬಹಳ ಸ್ಪಷ್ಟವಾಗಿ ತೋರಿಸಲಾಗಿದೆ. ಇದು ಬುದ್ಧಿಯಲ್ಲಿರಬೇಕು- ನಾವೀಗ ಸ್ವರ್ಗದ ದ್ವಾರದಲ್ಲಿ ನಿಂತಿದ್ದೇವೆ ಎಂದು ಬಹಳ ಖುಷಿಯಿರಬೇಕು. ಜ್ಞಾನದ ಅಂಶಗಳನ್ನು ನೆನಪು ಮಾಡುತ್ತಾ ನೀವು ಮಕ್ಕಳು ಬಹಳ ಖುಷಿಯಲ್ಲಿರಬೇಕು ಏಕೆಂದರೆ ನಿಮಗೆ ತಿಳಿದಿದೆ- ನಾವೀಗ ಸ್ವರ್ಗದ ದ್ವಾರದಲ್ಲಿ ಹೋಗುತ್ತಿದ್ದೇವೆ. ಅಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ, ಇಲ್ಲಿ ಎಷ್ಟೊಂದು ಜನಸಂಖ್ಯೆಯಿದೆ, ಎಷ್ಟೊಂದು ಅಲೆದಾಡುತ್ತಿರುತ್ತಾರೆ. ದಾನ-ಪುಣ್ಯ ಮಾಡುವುದು, ಋಷಿಗಳ ಹಿಂದೆ ಎಷ್ಟೊಂದು ಅಲೆದಾಡುತ್ತಿರುತ್ತಾರೆ. ಆದರೂ ಸಹ ಹೇ ಪ್ರಭು ಕಣ್ಣಿಲ್ಲದವರಿಗೆ ದಾರಿ ತೋರಿಸು ಎಂದು ಕರೆಯುತ್ತಿರುತ್ತಾರೆ. ಯಾವಾಗಲೂ ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನೇ ಬಯಸುತ್ತಿರುತ್ತಾರೆ. ಇದು ಹಳೆಯ ದುಃಖದ ಪ್ರಪಂಚವಾಗಿದೆ. ಅದನ್ನು ನೀವು ತಿಳಿದುಕೊಂಡಿದ್ದೀರಿ, ಮನುಷ್ಯರಿಗೆ ತಿಳಿದೇ ಇಲ್ಲ. ಕಲಿಯುಗದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳುವುದರಿಂದ ಅಂಧಕಾರದಲ್ಲಿದ್ದಾರಲ್ಲವೆ. ನಿಮ್ಮಲ್ಲಿಯೂ ಸಹ ನಂಬರ್ವಾರ್ ಕೆಲವರಿಗೆ ಅರ್ಥವಾಗಿದೆ. ಅವಶ್ಯವಾಗಿ ನಮ್ಮ ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಹೇಗೆ ವಕೀಲರಾಗುವ, ಇಂಜಿನಿಯರ್ ಆಗುವ, ಯೋಗವಿರುತ್ತದೆಯಲ್ಲವೆ. ಓದುವವರಿಗೆ ಅವರ ಶಿಕ್ಷಕರ ನೆನಪೇ ಇರುತ್ತದೆ. ವಕೀಲರ ಜ್ಞಾನದಿಂದ ಮನುಷ್ಯರು ವಕೀಲರು ಆಗಿಬಿಡುವರು. ಹಾಗೆಯೇ ಇದು ರಾಜಯೋಗವಾಗಿದೆ. ನಮ್ಮ ಬುದ್ಧಿಯೋಗವು ಪರಮಪಿತನ ಜೊತೆಯಿದೆ. ಇದರಲ್ಲಿ ಒಮ್ಮೆಲೆ ಖುಷಿಯ ನಶೆಯೇರಿರಬೇಕು. ಬಹಳ ಮಧುರರಾಗಬೇಕಾಗಿದೆ. ಸ್ವಭಾವವು ಬಹಳ ಸುಂದರವಾಗಿರಲಿ. ಯಾರಿಗೂ ದುಃಖ ಕೊಡಬಾರದು ಎಂದು ಬಯಸುತ್ತಾರೆ ಆದರೂ ಸಹ ಮತ್ತೆ ಮಾಯೆಯು ಕಿವಿ, ಮೂಗನ್ನು ಹಿಡಿದು ತಪ್ಪುಗಳನ್ನು ಮಾಡಿಸಿಬಿಡುತ್ತದೆ. ಪಾಪ! ನಾವು ಅವರಿಗೆ ದುಃಖ ಕೊಟ್ಟುಬಿಟ್ಟೆವೆಂದು ಒಳಗೆ ಪಶ್ಚಾತ್ತಾಪಪಡುತ್ತಾರೆ ಆದರೆ ರಿಜಿಸ್ಟರ್ನಲ್ಲಿ ಕಲೆಯುಂಟಾಯಿತಲ್ಲವೆ ಆದ್ದರಿಂದ ಯಾರಿಗೂ ಮನಸ್ಸಾ-ವಾಚಾ-ಕರ್ಮಣಾ ದುಃಖವನ್ನು ಕೊಡದಂತೆ ಪ್ರಯತ್ನಪಡಬೇಕು. ತಂದೆಯು ನಮ್ಮನ್ನು ಇಂತಹ ದೇವತೆಗಳನ್ನಾಗಿ ಮಾಡುವುದಕ್ಕಾಗಿಯೇ ಬರುತ್ತಾರೆ. ಇವರು ಎಂದಾದರೂ ಯಾರಿಗಾದರೂ ದುಃಖ ಕೊಡುತ್ತಾರೆಯೇ! ಲೌಕಿಕ ಶಿಕ್ಷಕರು ಓದಿಸುತ್ತಾರೆ, ದುಃಖವಂತೂ ಕೊಡುವುದಿಲ್ಲ ಅಲ್ಲವೆ. ಹಾ! ಮಕ್ಕಳು ಓದಲಿಲ್ಲವೆಂದರೆ ಅದಕ್ಕೆ ಶಿಕ್ಷೆ ಇತ್ಯಾದಿಯನ್ನು ಕೊಡುತ್ತಾರೆ. ಇತ್ತೀಚೆಗಂತೂ ಹೊಡೆಯುವುದಕ್ಕೂ ಕಾಯಿದೆ ಬಂದುಬಿಟ್ಟಿದೆ. ನೀವು ಆತ್ಮಿಕ ಶಿಕ್ಷಕರಾಗಿದ್ದೀರಿ. ಶ್ರೇಷ್ಠಪದವಿಯನ್ನು ಪಡೆಯುತ್ತೀರಿ, ಇಲ್ಲವೆಂದರೆ ಅನುತ್ತೀರ್ಣರಾಗುತ್ತೀರಿ. ಈ ತಂದೆಯೂ ಸಹ ಪ್ರತಿನಿತ್ಯವೂ ಬಂದು ಓದಿಸುತ್ತಾರೆ. ಚಾರಿತ್ರ್ಯವನ್ನು ಕಲಿಸುತ್ತಾರೆ, ಕಲಿಸುವುದಕ್ಕೆ ಪ್ರದರ್ಶನಿ ಮೊದಲಾದವುಗಳ ವ್ಯವಸ್ಥೆ ಮಾಡುತ್ತಾರೆ. ಎಲ್ಲರೂ ಪ್ರದರ್ಶನ, ಪ್ರೋಜೆಕ್ಟರ್ನ್ನು ಉಪಯೋಗಿಸುತ್ತಾರೆ. ಕೊನೆಗೊಂದು ದಿನ ಸಾವಿರಾರು ಪೆÇ್ರಜೆಕ್ಟರ್ಗಳನ್ನು ಕೊಂಡುಕೊಳ್ಳುತ್ತೀರಿ. ಪ್ರತಿಯೊಂದು ಮಾತನ್ನು ತಂದೆಯು ಸಹಜ ಮಾಡಿ ತಿಳಿಸುತ್ತಾರೆ. ಅಮರನಾಥದಲ್ಲಿ ಸೇವೆ ಮಾಡಲು ಬಹಳ ಸಹಜವಾಗುತ್ತದೆ. ನೀವು ಈ ಚಿತ್ರಗಳನ್ನು ಕುರಿತು ತಿಳಿಸಬಹುದಾಗಿದೆ. ಜ್ಞಾನ ಮತ್ತು ಭಕ್ತಿಯೆಂದರೇನು? ಒಂದುಕಡೆ ಜ್ಞಾನ, ಇನ್ನೊಂದುಕಡೆ ಭಕ್ತಿಯಿದೆ. ಜ್ಞಾನದಿಂದ ಸ್ವರ್ಗ, ಭಕ್ತಿಯಿಂದ ನರಕ. ಬಹಳ ಸ್ಪಷ್ಟವಾಗಿದೆ. ಈಗ ನೀವು ಮಕ್ಕಳು ಏನನ್ನು ಓದುವಿರೋ ಅದು ಬಹಳ ಸಹಜವಾಗಿದೆ. ಭಲೆ ನೀವು ಚೆನ್ನಾಗಿ ಓದಲೂಬಹುದು, ಆದರೆ ನೆನಪಿನ ಯಾತ್ರೆಯೆಲ್ಲಿದೆ! ಎಲ್ಲವೂ ಬುದ್ಧಿಯ ಮಾತಾಗಿದೆ. ನಾವು ತಂದೆಯನ್ನು ನೆನಪು ಮಾಡಬೇಕಾಗಿದೆ ಆದರೆ ಇದರಲ್ಲಿಯೇ ಮಾಯೆಯು ಬಹಳಷ್ಟು ತೊಂದರೆ ಕೊಡುತ್ತದೆ. ಒಮ್ಮೆಲೆ ಯೋಗವನ್ನು ಕತ್ತರಿಸುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ನೀವೆಲ್ಲರೂ ಯೋಗದಲ್ಲಿ ಬಹಳ ನಿರ್ಬಲರಾಗಿದ್ದೀರಿ. ಒಳ್ಳೊಳ್ಳೆಯ ಮಹಾರಥಿಗಳೂ ಸಹ ನಿರ್ಬಲರಾಗಿದ್ದಾರೆ. ಇವರಲ್ಲಿ ಬಹಳ ಒಳ್ಳೆಯ ಜ್ಞಾನವಿದೆ ಆದ್ದರಿಂದ ಇವರು ಹಿರಿಯರಾಗಿದ್ದಾರೆಂದು ತಿಳಿಯುತ್ತಾರೆ ಆದರೆ ಇವರು ಕುದುರೆ ಸವಾರರು, ಕಾಲಾಳುಗಳೆಂದು ತಂದೆಯು ಹೇಳುತ್ತಾರೆ. ಯಾರು ನಿರಂತರ ನೆನಪಿನಲ್ಲಿರುವರೋ ಅವರೇ ಮಹಾರಥಿಗಳಾಗುತ್ತಾರೆ. ಏಳುತ್ತಾ-ಕುಳಿತುಕೊಳ್ಳುತ್ತಾ ನೆನಪಿನಲ್ಲಿದ್ದಾಗ ವಿಕರ್ಮಗಳು ವಿನಾಶವಾಗುತ್ತವೆ. ಪಾವನರಾಗುತ್ತೀರಿ, ಇಲ್ಲವಾದರೆ ಬಹಳ ಶಿಕ್ಷೆಯನ್ನನುಭವಿಸಬೇಕಾಗುವುದು. ಪದವಿಯು ಭ್ರಷ್ಟವಾಗುವುದು ಆದ್ದರಿಂದ ತಮ್ಮ ಚಾರ್ಟನ್ನು ಇಟ್ಟುಕೊಳ್ಳಿ ಆಗ ನಿಮಗೆ ಅರ್ಥವಾಗುವುದು- ಈ ತಂದೆಯೂ (ಬ್ರಹ್ಮಾ) ಸಹ ತಿಳಿಸುತ್ತಾರೆ, ನಾನೂ ಸಹ ಪುರುಷಾರ್ಥ ಮಾಡುತ್ತೇನೆ. ಪದೇ-ಪದೇ ಬುದ್ಧಿಯು ಬೇರೆಕಡೆ ಹೊರಟುಹೋಗುತ್ತದೆ. ಇವರಿಗಂತೂ ಬಹಳಷ್ಟು ಚಿಂತೆಯಿರುತ್ತದೆಯಲ್ಲವೆ. ನೀವು ಬಹಳಷ್ಟು ತೀಕ್ಷ್ಣವಾಗಿ ಮುಂದೆಹೋಗಬಹುದು. ಮತ್ತೆ ಜೊತೆಯಲ್ಲಿ ತಮ್ಮ ಚಲನೆಯನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಪವಿತ್ರರಾಗಿದ್ದು ಮತ್ತೆ ವಿಕಾರದಲ್ಲಿ ಬಿದ್ದರೆ ಸಂಪಾದನೆಯೆಲ್ಲವೂ ಸಮಾಪ್ತಿಯಾಗುವುದು. ಯಾರ ಮೇಲಾದರೂ ಕ್ರೋಧ ಮಾಡಿದರೆ, ಉಪ್ಪುನೀರಾಗಿ ವರ್ತಿಸಿದರೆಂದರೆ ಅಸುರರಾಗಿಬಿಡುತ್ತಾರೆ. ಅನೇಕ ಪ್ರಕಾರದ ಮಾಯೆಯು ಬರುತ್ತದೆ. ಯಾರೂ ಸಂಪೂರ್ಣರಾಗಿಲ್ಲ, ತಂದೆಯಂತೂ ಪುರುಷಾರ್ಥ ಮಾಡಿಸುತ್ತಿರುತ್ತಾರೆ. ಕುಮಾರಿಯರಿಗೆ ಇದು ಬಹಳ ಸಹಜವಾಗಿದೆ. ಇದರಲ್ಲಿ ತನ್ನ ಶಕ್ತಿಯೂ ಬೇಕು, ಆಂತರ್ಯದ ಸತ್ಯತೆ ಬೇಕು. ಒಂದುವೇಳೆ ಯಾರ ಮೇಲಾದರೂ ಮನಸ್ಸಿದ್ದರೆ ಅಂತಹವರು ನಡೆಯಲು ಸಾಧ್ಯವಿಲ್ಲ. ಕುಮಾರಿಯರು, ಮಾತೆಯರು ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯಲ್ಲಿ ತೊಡಗಬೇಕು. ಇದರಲ್ಲಿ ಪರಿಶ್ರಮವಿದೆ. ಪರಿಶ್ರಮವಿಲ್ಲದೆ ಏನೂ ಸಿಗುವುದಿಲ್ಲ. ನಿಮಗೆ 21 ಜನ್ಮಗಳಿಗಾಗಿ ರಾಜ್ಯಭಾಗ್ಯವು ಸಿಗುತ್ತದೆ ಅಂದಮೇಲೆ ಎಷ್ಟೊಂದು ಪರಿಶ್ರಮಪಡಬೇಕು. ಆ ಲೌಕಿಕ ವಿದ್ಯೆಯನ್ನೂ ಸಹ ಓದಲು ತಂದೆಯು ಏಕೆ ಅನುಮತಿ ಕೊಡುತ್ತಾರೆಂದರೆ ಈ ವಿದ್ಯೆಯಲ್ಲಿ ಪಕ್ಕಾ ಆಗುವವರೆಗೆ ಅದನ್ನು ಓದಲಿ ಎಂದು. ಆದರೆ ಮತ್ತೆ ಇವೆರಡನ್ನೂ ಬಿಟ್ಟು ಹೊರಗೆ ಹೋಗುವಂತವರಾಗಬಾರದು. ಯಾರಾದರೂ ನಾಮ-ರೂಪದಲ್ಲಿ ಸಿಕ್ಕಿಕೊಳ್ಳುತ್ತಾರೆಂದರೆ ಸಮಾಪ್ತಿಯಾಗುತ್ತಾರೆ.

ಅದೃಷ್ಟವಂತ ಮಕ್ಕಳೇ ಶರೀರದ ಸ್ಮೃತಿಯನ್ನು ಮರೆತು ತನ್ನನ್ನು ಅಶರೀರಿ ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡುತ್ತಾರೆ. ತಂದೆಯು ಪ್ರತಿನಿತ್ಯವೂ ತಿಳಿಸುತ್ತಾರೆ- ಮಕ್ಕಳೇ, ನೀವು ಶರೀರದ ಸ್ಮೃತಿಯನ್ನು ಬಿಟ್ಟುಬಿಡಿ, ನಾವು ಅಶರೀರಿ ಆತ್ಮಗಳು ಈಗ ಮನೆಗೆ ಹೋಗುತ್ತೇವೆ. ಆದ್ದರಿಂದ ಈ ಶರೀರವನ್ನು ಇಲ್ಲಿಯೇ ಬಿಟ್ಟುಬಿಡಬೇಕಾಗಿದೆ. ಯಾವಾಗ ನಿರಂತರ ತಂದೆಯ ನೆನಪಿನಲ್ಲಿದ್ದು ಕರ್ಮಾತೀತರಾಗುವಿರೋ ಆಗ ಶರೀರವನ್ನು ಬಿಟ್ಟುಹೋಗುತ್ತೀರಿ. ಇದು ಬುದ್ಧಿಯ ಮಾತಾಗಿದೆ. ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರೇನು ಪುರುಷಾರ್ಥ ಮಾಡುವರು? ಇದು ಬುದ್ಧಿಯಲ್ಲಿರಬೇಕು- ನಾವು ಅಶರೀರಿಯಾಗಿ ಬಂದೆವು ನಂತರ ಸುಖದ ಸಂಬಂಧದಲ್ಲಿ ಬಂಧಿತರಾದೆವು. ಮತ್ತೆ ರಾವಣರಾಜ್ಯದಲ್ಲಿ ವಿಕಾರಿ ಬಂಧನದಲ್ಲಿ ಸಿಲುಕಿದೆವು. ಈಗ ಪುನಃ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಅಶರೀರಿಯಾಗಿ ಹೋಗಬೇಕಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ. ಆತ್ಮವೇ ಪತಿತವಾಗಿದೆ. ಹೇ ಪತಿತ-ಪಾವನ, ಬನ್ನಿ ಎಂದು ಆತ್ಮವೇ ಹೇಳುತ್ತದೆ. ಈಗ ನಿಮಗೆ ತಂದೆಯು ಪತಿತರಿಂದ ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಆತ್ಮವು ಅವಿನಾಶಿಯಾಗಿದೆ, ನೀವಾತ್ಮರು ಇಲ್ಲಿ ಶರೀರದಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೀರಿ. ಇದನ್ನೂ ಸಹ ತಂದೆಯು ತಿಳಿಸಿದ್ದಾರೆ. ಯಾರಿಗೆ ಕಲ್ಪದ ಹಿಂದೆ ತಿಳಿಸಿದ್ದೀರೋ ಅವರೇ ಬರುತ್ತಾರೆ. ಈಗ ಕಲಿಯುಗದ ಸಂಬಂಧಗಳನ್ನು ಮರೆತುಹೋಗಿ. ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಈ ಪ್ರಪಂಚವೇ ಸಮಾಪ್ತಿಯಾಗಲಿದೆ. ಇದರಲ್ಲಿ ಯಾವುದೇ ಸಾರವಿಲ್ಲ ಆದ್ದರಿಂದಲೇ ಅಲೆದಾಡುತ್ತಿರುತ್ತಾರೆ. ಭಗವಂತನೊಂದಿಗೆ ಮಿಲನ ಮಾಡಲು ಭಕ್ತಿ ಮಾಡುತ್ತಾರೆ. ಭಕ್ತಿಯು ಬಹಳ ಒಳ್ಳೆಯದು, ಬಹಳ ಭಕ್ತಿಮಾಡಿದರೆ ಭಗವಂತ ಸಿಗುತ್ತಾರೆ. ಸದ್ಗತಿಯಲ್ಲಿ ಕರೆದುಕೊಂಡು ಹೋಗುವರೆಂದು ತಿಳಿಯುತ್ತಾರೆ. ಈಗ ನಿಮ್ಮ ಭಕ್ತಿಯು ಪೂರ್ಣವಾಗುತ್ತದೆ. ನಿಮ್ಮ ಬಾಯಿಂದ ಹೇ ರಾಮ, ಹೇ ಭಗವಂತ, ಈ ಭಕ್ತಿಯ ಶಬ್ಧಗಳೂ ಸಹ ಬರಬಾರದು. ಇವೆಲ್ಲವೂ ನಿಲ್ಲಬೇಕಾಗಿದೆ. ತಂದೆಯು ಕೇವಲ ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ. ಈ ಪ್ರಪಂಚವೇ ತಮೋಪ್ರಧಾನವಾಗಿದೆ. ಸತೋಪ್ರಧಾನರು ಸತ್ಯಯುಗದಲ್ಲಿರುತ್ತಾರೆ. ಸತ್ಯಯುಗವು ಏರುವಕಲೆಯಾಗಿದೆ, ನಂತರ ಇಳಿಯುವ ಕಲೆಯಾಗುತ್ತದೆ. ವಾಸ್ತವದಲ್ಲಿ ತ್ರೇತಾಯುಗಕ್ಕೂ ಸ್ವರ್ಗವೆಂದು ಹೇಳಲಾಗುವುದಿಲ್ಲ. ಕೇವಲ ಸತ್ಯಯುಗಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಆದಿಯೆಂದರೆ ಆರಂಭ, ಮಧ್ಯ ಎಂದರೆ ಅರ್ಧ, ನಂತರ ಅಂತ್ಯ. ಮಧ್ಯದಲ್ಲಿ ರಾವಣರಾಜ್ಯವು ಆರಂಭವಾಗುತ್ತದೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಭಾರತವೇ ಪತಿತ ಮತ್ತು ಪಾವನವಾಗುತ್ತದೆ. 84 ಜನ್ಮಗಳನ್ನು ಭಾರತವಾಸಿಗಳೇ ತಿಳಿದುಕೊಳ್ಳುತ್ತಾರೆ. ಉಳಿದಂತೆ ನಂಬರ್ವಾರ್ ಧರ್ಮದವರು ಬರುತ್ತಾರೆ. ವೃಕ್ಷವು ವೃದ್ಧಿಹೊಂದುತ್ತದೆ ಮತ್ತೆ ಆ ಸಮಯದಲ್ಲಿಯೇ ಬರುತ್ತಾರೆ. ಈ ಮಾತುಗಳು ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ನಿಮ್ಮಲ್ಲಿಯೂ ಸಹ ಎಲ್ಲರೂ ಧಾರಣೆ ಮಾಡಲು ಸಾಧ್ಯವಿಲ್ಲ. ಈ 84 ಜನ್ಮಗಳ ಚಕ್ರವು ಬುದ್ಧಿಯಲ್ಲಿದ್ದರೂ ಸಹ ಖುಷಿಯಲ್ಲಿರುವಿರಿ. ಈಗ ನಮ್ಮನ್ನು ಕರೆದುಕೊಂಡು ಹೋಗಲು ನಮ್ಮನ್ನು ಕರೆದಿದ್ದಾರೆ. ಸತ್ಯ-ಸತ್ಯವಾದ ಪ್ರಿಯತಮನು ಬಂದಿದ್ದಾರೆ. ಯಾರನ್ನು ನಾವು ಭಕ್ತಿಮಾರ್ಗದಲ್ಲಿ ಬಹಳ ನೆನಪು ಮಾಡುತ್ತಿದ್ದೆವೋ ಅವರೀಗ ನಾವಾತ್ಮರನ್ನು ಹಿಂತಿರುಗಿ ಕರೆದುಕೊಂಡು ಹೋಗಲು ಬಂದಿದ್ದಾರೆ. ಶಾಂತಿಯೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಆತ್ಮವು ಶಾಂತಸ್ವರೂಪವಾಗಿದೆ, ಈ ಕರ್ಮೇಂದ್ರಿಯಗಳು ಸಿಕ್ಕಿದಾಗ ಕರ್ಮ ಮಾಡಬೇಕಾಗುತ್ತದೆ. ಶಾಂತಿಯ ಸಾಗರನಾದ ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ ಆಗ ಎಲ್ಲರಿಗೂ ಶಾಂತಿಯು ಸಿಗುವುದು. ಸತ್ಯಯುಗದಲ್ಲಿ ನಿಮಗೆ ಶಾಂತಿಯೂ ಇರುತ್ತದೆ, ಸುಖವೂ ಇರುತ್ತದೆ. ಉಳಿದೆಲ್ಲಾ ಆತ್ಮರು ಶಾಂತಿಧಾಮದಲ್ಲಿರುತ್ತಾರೆ. ತಂದೆಗೆ ಶಾಂತಿಯ ಸಾಗರನೆಂದು ಹೇಳಲಾಗುತ್ತದೆ. ಇದನ್ನೂ ಸಹ ಅನೇಕ ಮಕ್ಕಳು ಮರೆತುಹೋಗಿದ್ದಾರೆ ಏಕೆಂದರೆ ದೇಹಾಭಿಮಾನದಲ್ಲಿರುತ್ತಾರೆ. ದೇಹೀ-ಅಭಿಮಾನಿಗಳಾಗುವುದೇ ಇಲ್ಲ. ತಂದೆಯು ಶಾಂತಿಯನ್ನಂತೂ ಎಲ್ಲರಿಗೂ ಕೊಡುತ್ತಾರಲ್ಲವೆ. ಚಿತ್ರದಲ್ಲಿ ಸಂಗಮಯುಗವನ್ನು ತೋರಿಸಿ ಈ ಸಮಯದಲ್ಲಿ ಎಲ್ಲರೂ ಅಶಾಂತರಾಗಿದ್ದಾರೆ. ಸತ್ಯಯುಗದಲ್ಲಂತೂ ಇಷ್ಟೊಂದು ಧರ್ಮಗಳಿರುವುದೇ ಇಲ್ಲ. ಎಲ್ಲರೂ ಶಾಂತಿಯಲ್ಲಿಯೇ ಹೊರಟುಹೋಗುತ್ತಾರೆ. ಅಲ್ಲಿ ಸಂಪೂರ್ಣ ಶಾಂತಿಯು ಸಿಗುತ್ತದೆ. ನಿಮಗೆ ರಾಜಧಾನಿಯಲ್ಲಿ ಶಾಂತಿಯೂ ಇರುತ್ತದೆ, ಸುಖವೂ ಇರುತ್ತದೆ. ಸತ್ಯಯುಗದಲ್ಲಿ ನಿಮಗೆ ಸುಖ, ಶಾಂತಿ, ಪವಿತ್ರತೆ ಎಲ್ಲವೂ ಇರುತ್ತದೆ. ಮಧುರಮನೆಯಾದ ಶಾಂತಿಧಾಮಕ್ಕೆ ಮುಕ್ತಿಧಾಮವೆಂದು ಕರೆಯಲಾಗುತ್ತದೆ. ಅಲ್ಲಿ ಪತಿತ, ದುಃಖಿಗಳಿರುವುದಿಲ್ಲ. ಸುಖ-ದುಃಖದ ಯಾವುದೇ ಮಾತಿರುವುದಿಲ್ಲ. ಮನುಷ್ಯರು ಶಾಂತಿಯ ಅರ್ಥವನ್ನೇ ತಿಳಿದುಕೊಂಡಿಲ್ಲ. ಹೇಗೆ ರಾಣಿಯ ಕಂಠಹಾರದ ಉದಾಹರಣೆಯನ್ನು ಕೊಡುತ್ತಾರಲ್ಲವೆ. ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸುಖ-ಶಾಂತಿಯೆಲ್ಲವನ್ನೂ ಪಡೆದುಕೊಳ್ಳಿ. ಆಯುಷ್ಯವಾನ್ಭವ. ಅಲ್ಲಿ ಮಕ್ಕಳೂ ಸಹ ನಿಯಮದನುಸಾರವಾಗಿ ಜನ್ಮ ಪಡೆಯುವರು. ಮಕ್ಕಳಾಗಲು ಯಾವುದೇ ಪುರುಷಾರ್ಥವನ್ನು ಮಾಡಬೇಕಾಗುವುದಿಲ್ಲ. ಶರೀರವನ್ನೂ ಬಿಡುವ ಸಮಯವು ಬಂದಾಗ ಸಾಕ್ಷಾತ್ಕಾರವಾಗುತ್ತದೆ ಮತ್ತು ಖುಷಿ-ಖುಷಿಯಿಂದ ಶರೀರವನ್ನು ಬಿಟ್ಟುಬಿಡುತ್ತಾರೆ. ಹೇಗೆ ನಾನು ಶರೀರವನ್ನು ಬಿಟ್ಟುಹೋಗಿ ಇಂತಹ ಸುಂದರ ಕೃಷ್ಣನಾಗುತ್ತೇನೆ, ಈಗ ಓದುತ್ತಿದ್ದೇನೆಂದು ಈ ತಂದೆಗೆ (ಬ್ರಹ್ಮಾ) ಖುಷಿಯಿರುತ್ತದೆಯಲ್ಲವೆ! ನೀವೂ ಸಹ ತಿಳಿದುಕೊಂಡಿದ್ದೀರಿ- ನಾವು ಸತ್ಯಯುಗದಲ್ಲಿ ಹೋಗುತ್ತೇವೆ, ಸಂಗಮಯುಗದಲ್ಲಿಯೇ ಇದು ನಿಮ್ಮ ಬುದ್ಧಿಯಲ್ಲಿರುತ್ತದೆ. ಅಂದಾಗ ಎಷ್ಟೊಂದು ಖುಷಿಯಲ್ಲಿರಬೇಕು! ಎಷ್ಟು ಉನ್ನತ ವಿದ್ಯೆಯೋ ಅಷ್ಟು ಖುಷಿ. ನಮಗೆ ಭಗವಂತನೇ ಓದಿಸುತ್ತಾರೆ, ಲಕ್ಷ್ಯವು ಮುಂದೆ ಇದೆ, ಅಂದಾಗ ಎಷ್ಟು ಖುಷಿಯಿರಬೇಕು. ಆದರೆ ನಡೆಯುತ್ತಾ-ನಡೆಯುತ್ತಾ ಕೆಳಗೆ ಬೀಳುತ್ತಾರೆ.

ಯಾವಾಗ ಕುಮಾರಿಯರು ಮೈದಾನದಲ್ಲಿ ಬರುವರೋ ಆಗ ನಿಮ್ಮ ಸೇವೆಯು ವೃದ್ಧಿಯಾಗುವುದು. ತಂದೆಯು ತಿಳಿಸುತ್ತಾರೆ- ಪರಸ್ಪರ ಮೊಟ್ಟಮೊದಲನೆಯದಾಗಿ ಉಪ್ಪುನೀರಾಗಬೇಡಿ, ಯಾವಾಗ ನಿಮಗೆ ತಿಳಿದಿದೆ, ನಾವು ಇಂತಹ ಪ್ರಪಂಚದಲ್ಲಿ ಹೋಗುತ್ತೇವೆ, ಅಲ್ಲಿ ಹಸು-ಹುಲಿ ಒಟ್ಟಿಗೆ ನೀರು ಕುಡಿಯುತ್ತದೆ. ಅಲ್ಲಂತೂ ಪ್ರತಿಯೊಂದು ವಸ್ತುವನ್ನು ನೋಡುತ್ತಿದ್ದಂತೆಯೇ ಬಹಳ ಖುಷಿಯಾಗಿಬಿಡುತ್ತದೆ. ಹೆಸರು ನೋಡಿದರೆ ಸ್ವರ್ಗ, ಅಂದಮೇಲೆ ಕುಮಾರಿಯರು ಲೌಕಿಕ ತಂದೆ-ತಾಯಿಯರಿಗೆ ತಿಳಿಸಬೇಕು- ಈಗ ನಾವು ಅಲ್ಲಿಗೆ ಹೋಗುವ ಪುರುಷಾರ್ಥ ಮಾಡುತ್ತಿದ್ದೇವೆ ಆದ್ದರಿಂದ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಕಾಮಮಹಾಶತ್ರುವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಈಗ ನಾನು ಯೋಗಿನಿಯಾಗಿದ್ದೇನೆ ಆದ್ದರಿಂದ ಪತಿತ ಆಗಲು ಸಾಧ್ಯವಿಲ್ಲ. ಹೀಗೆ ಮಾತನಾಡಲು ಧೈರ್ಯವು ಬೇಕು. ಇಂತಹ ಕುಮಾರಿಯರು ಯಾವಾಗ ಬರುವರೋ ಆಗ ನೋಡಿರಿ, ಎಷ್ಟು ಬೇಗ-ಬೇಗ ಸೇವೆಯಾಗುತ್ತದೆ! ಆದರೆ ನಷ್ಟಮೋಹಿಗಳಾಗಬೇಕು, ಒಂದುಬಾರಿ ಸತ್ತಮೇಲೆ ಮತ್ತೇಕೆ ನೆನಪು ಬರಬೇಕು. ಆದರೆ ಅನೇಕರಿಗೆ ಮನೆ, ಮಕ್ಕಳು, ಮೊದಲಾದವರ ನೆನಪು ಬರುತ್ತಿರುತ್ತದೆ ಮತ್ತೆ ತಂದೆಯ ಜೊತೆ ಯೋಗವು ಹೇಗೆ ಹಿಡಿಸುತ್ತದೆ? ಇಲ್ಲಂತೂ ಇದೇ ಬುದ್ಧಿಯಲ್ಲಿರಲಿ- ನಾವು ತಂದೆಯ ಮಕ್ಕಳಾಗಿದ್ದೇವೆ, ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿಬಿಟ್ಟಿದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನನ್ನನ್ನು ನೆನಪು ಮಾಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತನ್ನ ಶ್ರೇಷ್ಠ ಅದೃಷ್ಠವನ್ನು ರೂಪಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ಅಶರೀರಿಯಾಗುವ ಅಭ್ಯಾಸವನ್ನು ಮಾಡಬೇಕಾಗಿದೆ. ಶರೀರದ ಭಾನವು ಸಂಪೂರ್ಣ ಮರೆತುಹೋಗಲಿ. ಯಾರದೇ ನಾಮ-ರೂಪವು ನೆನಪಿಗೆ ಬರಬಾರದು. ಈ ಪರಿಶ್ರಮಪಡಬೇಕಾಗಿದೆ.

2. ತಮ್ಮ ಚಲನೆಯ ಚಾರ್ಟನ್ನು ಇಡಬೇಕಾಗಿದೆ. ಎಂದೂ ಸಹ ಆಸುರೀ ಚಲನೆಯಲ್ಲಿ ನಡೆಯಲಿಲ್ಲವೆ? ಹೃದಯದ ಸ್ವಚ್ಛತೆಯಿಂದ ನಷ್ಟಮೋಹಿಯಾಗಿ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯಲ್ಲಿ ತೊಡಗಬೇಕಾಗಿದೆ

ವರದಾನ:
ಮಾಯೆಯ ರಾಯಲ್ ರೂಪದ ಬಂದನಗಳಿಂದ ಮುಕ್ತ, ವಿಶ್ವ ಜೀತ್, ಜಗತ್ ಜೀತ್ ಭವ

ನನ್ನ ಪುರುಷಾರ್ಥ.ನಾನು ಕಂಡುಹಿಡಿದಿರುವುದು, ನನ್ನ ಸೇವೆ. ನನ್ನ ಟಚಿಂಗ್, ನನ್ನ ಗುಣ ಚೆನ್ನಾಗಿದೆ. ನನ್ನ ನಿರ್ಣಯಶಕ್ತಿ ಬಹಳ ಚೆನ್ನಾಗಿದೆ. ಈ ನನ್ನತನವೇ ಮಾಯೆಯ ರಾಯಲ್ ರೂಪವಾಗಿದೆ. ಮಾಯೆ ಇಂತಹ ಜಾದೂ ಮಂತ್ರ ಹಾಕಿಬಿಡುತ್ತದೆ ನಿನ್ನದು ಎನ್ನುವುದನ್ನೂ ನನ್ನದನ್ನಾಗಿ ಮಾಡಿಬಿಡುತ್ತದೆ ಆದ್ದರಿಂದ ಈಗ ಇಂತಹ ಅನೇಕ ಬಂಧನಗಳಿಂದ ಮುಕ್ತರಾಗಿ ಒಬ್ಬ ತಂದೆಯ ಬಂಧನದಲ್ಲಿ ಬಂದಾಗ ಮಾಯಾ ಜೀತ್ ಆಗಿಬಿಡುವಿರಿ. ಮಾಯಾ ಜೀತ್ ಆದವರೇ ಪ್ರಕೃತಿ ಜೀತ್, ವಿಶ್ವ ಜೀತ್ ಅಥವಾ ಜಗತ್ ಜೀತ್ ಆಗುವಿರಿ. ಅಂತಹವರೇ ಒಂದು ಸೆಕೆಂಡ್ ನಲ್ಲಿ ಅಶರೀರಿ ಭವದ ಸೂಚನೆಯನ್ನು ಸಹಜ ರೀತಿ ಮತ್ತು ಸ್ವತಃ ಕಾರ್ಯದಲ್ಲಿ ತೊಡಗಿಸುತ್ತಾರೆ.

ಸ್ಲೋಗನ್:
ಯಾರು ನೆಗೆಟೀವ್ ಅನ್ನು ಪಾಸಿಟೀವ್ನಲ್ಲಿ ಪರಿವರ್ತನೆ ಮಾಡುತ್ತಾರೆ ಅವರೇ ವಿಶ್ವ ಪರಿವರ್ತಕರಾಗಿರುತ್ತಾರೆ.


ಅವ್ಯಕ್ತ ಸೂಚನೆ: ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.

ನಿಮ್ಮ ಸ್ವ-ಸ್ವರೂಪ ಪವಿತ್ರತೆಯಾಗಿದೆ, ಸ್ವ-ಧರ್ಮ ಅರ್ಥಾತ್ ಆತ್ಮದ ಮೊದಲನೇ ಧಾರಣೆ ಪವಿತ್ರತೆಯಾಗಿದೆ. ಸ್ವದೇಶ ಪವಿತ್ರ ದೇಶವಾಗಿದೆ. ಸ್ವರಾಜ್ಯ ಪವಿತ್ರ ರಾಜ್ಯವಾಗಿದೆ. ಸ್ವಯಂನ ನೆನಪಾರ್ಥ ಪರಮ ಪವಿತ್ರ ಪೂಜ್ಯವಾಗಿದೆ. ಕರ್ಮೇಂದ್ರಿಯಗಳ ಅನಾದಿ ಸ್ವಭಾವ ಸುಕರ್ಮವಾಗಿದೆ, ಇದನ್ನೇ ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿ ಆಗ ಪರಿಶ್ರಮ ಮತ್ತು ಹಠದಿಂದ ಮುಕ್ತರಾಗುವಿರಿ. ಪವಿತ್ರತೆಯನ್ನು ವರದಾನದ ರೂಪದಲ್ಲಿ ಧಾರಣೆ ಮಾಡಿ.