10.07.25 Morning Kannada Murli Om Shanti
BapDada Madhuban
ಮಧುರ ಮಕ್ಕಳೇ-
ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ, ದೇಹೀ-ಅಭಿಮಾನಿಗಳಿಗೇ ಈಶ್ವರೀಯ ಸಂಪ್ರದಾಯದವರೆಂದು
ಹೇಳಲಾಗುತ್ತದೆ
ಪ್ರಶ್ನೆ:
ನೀವು ಮಕ್ಕಳು
ಈಗ ಯಾವ ಸತ್ಸಂಗ ಮಾಡುತ್ತೀರೋ ಇದು ಅನ್ಯಸತ್ಸಂಗಗಳಿಗಿಂತ ಭಿನ್ನವಾಗಿದೆ- ಹೇಗೆ?
ಉತ್ತರ:
ಇದೊಂದೇ
ಸತ್ಸಂಗವಾಗಿದೆ, ಎಲ್ಲಿ ನೀವು ಆತ್ಮ ಮತ್ತು ಪರಮಾತ್ಮನ ಜ್ಞಾನವನ್ನು ಕೇಳುತ್ತೀರಿ. ಇಲ್ಲಿ
ವಿದ್ಯೆಯಿದೆ, ಗುರಿ-ಧ್ಯೇಯವೂ ಸನ್ಮುಖದಲ್ಲಿದೆ. ಅನ್ಯಸತ್ಸಂಗಗಳಲ್ಲಿ ವಿದ್ಯೆಯೂ ಇರುವುದಿಲ್ಲ,
ಯಾವುದೇ ಗುರಿ-ಧ್ಯೇಯವೂ ಇಲ್ಲ.
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ, ಆತ್ಮಿಕ ಮಕ್ಕಳು ಕೇಳುತ್ತಿದ್ದೀರಿ.
ಮೊಟ್ಟಮೊದಲು ತಂದೆಯು ತಿಳಿಸುತ್ತಾರೆ- ಯಾವಾಗಲೇ ಇಲ್ಲಿ ಕುಳಿತುಕೊಳ್ಳುತ್ತೀರೆಂದರೆ ತಮ್ಮನ್ನು
ಆತ್ಮನೆಂದು ತಿಳಿದು ಕುಳಿತುಕೊಳ್ಳಿ. ದೇಹವೆಂದು ತಿಳಿಯಬೇಡಿ. ದೇಹಾಭಿಮಾನಿಗಳನ್ನು ಆಸುರೀ
ಸಂಪ್ರದಾಯದವರೆಂದು ಹೇಳಲಾಗುತ್ತದೆ. ದೇಹೀ-ಅಭಿಮಾನಿಗಳಿಗೆ ಈಶ್ವರೀಯ ಸಂಪ್ರದಾಯದವರೆಂದು
ಹೇಳಲಾಗುತ್ತದೆ. ಈಶ್ವರನಿಗಂತೂ ದೇಹವಿಲ್ಲ. ಅವರು ಸದಾ ಆತ್ಮಾಭಿಮಾನಿಯಾಗಿ ಇರುತ್ತಾರೆ. ಅವರು
ಶ್ರೇಷ್ಠ ಆತ್ಮ, ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಪರಮ ಆತ್ಮ ಅರ್ಥಾತ್ ಶ್ರೇಷ್ಠಾತಿಶ್ರೇಷ್ಠ.
ಮನುಷ್ಯರು ಶ್ರೇಷ್ಠಾತಿಶ್ರೇಷ್ಠ ಭಗವಂತನೆಂದು ಹೇಳಿದಾಗ ಬುದ್ಧಿಯಲ್ಲಿ ಅವರು ನಿರಾಕಾರ
ಬಿಂದುರೂಪವೆಂದು ಬುದ್ಧಿಯಲ್ಲಿ ಬರುತ್ತದೆ. ನಿರಾಕಾರ ಲಿಂಗದ ಪೂಜೆಯು ನಡೆಯುತ್ತದೆ. ಅವರು
ಪರಮಾತ್ಮ ಅಂದರೆ ಎಲ್ಲಾ ಆತ್ಮಗಳಿಗಿಂತಲೂ ಶ್ರೇಷ್ಠರಾಗಿದ್ದಾರೆ. ಅವರೂ ಆತ್ಮನೇ ಆಗಿದ್ದಾರೆ ಆದರೆ
ಶ್ರೇಷ್ಠ ಆತ್ಮ. ಅವರು ಜನನ-ಮರಣದಲ್ಲಿ ಬರುವುದಿಲ್ಲ, ಉಳಿದೆಲ್ಲರೂ ಪುನರ್ಜನ್ಮದಲ್ಲಿ ಬರುತ್ತಾರೆ
ಮತ್ತು ರಚನೆಯಾಗಿದ್ದಾರೆ. ರಚಯಿತನಂತೂ ಒಬ್ಬರೇ ತಂದೆಯಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನೂ
ರಚನೆಯಾಗಿದ್ದಾರೆ. ಮನುಷ್ಯಸೃಷ್ಟಿಯೂ ರಚನೆಯಾಗಿದೆ. ರಚಯಿತನಿಗೆ ತಂದೆಯೆಂದು ಹೇಳಲಾಗುತ್ತದೆ.
ಪುರುಷನಿಗೂ ರಚಯಿತನೆಂದು ಹೇಳುತ್ತಾರೆ ಏಕೆಂದರೆ ಸ್ತ್ರೀಯನ್ನು ದತ್ತು ಮಾಡಿಕೊಂಡು ನಂತರ ಅವರಿಂದ
ಮಕ್ಕಳನ್ನು ರಚಿಸುತ್ತಾರೆ, ಪಾಲನೆ ಮಾಡುತ್ತಾರೆ ಆದರೆ ವಿನಾಶ ಮಾಡುವುದಿಲ್ಲ ಮತ್ತು ಯಾರು
ಧರ್ಮಸ್ಥಾಪಕರಿದ್ದಾರೆಯೋ ಅವರೂ ಸಹ ರಚನೆ ಮಾಡುತ್ತಾರೆ ನಂತರ ಅವರ ಪಾಲನೆ ಮಾಡುತ್ತಾರೆ. ಯಾರೂ
ವಿನಾಶವನ್ನು ಮಾಡುವುದಿಲ್ಲ. ಬೇಹದ್ದಿನ ತಂದೆ ಯಾರಿಗೆ ಪರಮ ಆತ್ಮನೆಂದು ಹೇಳಲಾಗುತ್ತದೆ, ಹೇಗೆ
ಆತ್ಮನ ರೂಪವು ಬಿಂದುವಾಗಿದೆಯೋ ಹಾಗೆಯೇ ಪರಮಪಿತ ಪರಮಾತ್ಮನ ರೂಪವೂ ಬಿಂದುವಾಗಿದೆ ಆದರೆ ಇಷ್ಟು
ದೊಡ್ಡಲಿಂಗದ ರೂಪದಲ್ಲಿ ಮಾಡುವುದು ಭಕ್ತಿಮಾರ್ಗದಲ್ಲಿ ಪೂಜೆಯ ಕಾರಣ. ಬಿಂದುವಿನ ಪೂಜೆ ಮಾಡಲು
ಆಗುವುದಿಲ್ಲ. ಭಾರತದಲ್ಲಿ ರುದ್ರಯಜ್ಞವನ್ನು ರಚಿಸಿದಾಗ ಮಣ್ಣಿನ ಶಿವಲಿಂಗ ಮತ್ತು
ಸಾಲಿಗ್ರಾಮಗಳನ್ನು ಮಾಡಿ ಪೂಜೆ ಮಾಡುತ್ತಾರೆ, ಅದಕ್ಕೆ ರುದ್ರಯಜ್ಞವೆಂದು ಹೇಳಲಾಗುತ್ತದೆ.
ವಾಸ್ತವದಲ್ಲಿ ಮೂಲಹೆಸರು ರಾಜಸ್ವ ಅಶ್ವಮೇಧ ಅವಿನಾಶಿ ರುದ್ರ ಗೀತಾಜ್ಞಾನ ಯಜ್ಞವೆಂದಾಗಿದೆ. ಇದನ್ನು
ಶಾಸ್ತ್ರಗಲ್ಲಿಯೂ ಬರೆಯಲಾಗಿದೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು
ತಿಳಿದುಕೊಳ್ಳಿ. ಉಳಿದ ಯಾವುದೇ ಸತ್ಸಂಗಗಳಲ್ಲಿ ಆತ್ಮ-ಪರಮಾತ್ಮನ ಜ್ಞಾನವು ಯಾರಲ್ಲಿಯೂ ಇಲ್ಲ,
ಕೊಡುವುದಕ್ಕೆ ಸಾಧ್ಯವೂ ಇಲ್ಲ. ಅಲ್ಲಂತೂ ಯಾವುದೇ ಗುರಿ-ಧ್ಯೇಯವಿರುವುದಿಲ್ಲ. ನೀವು ಮಕ್ಕಳಂತೂ ಈಗ
ವಿದ್ಯೆಯನ್ನು ಓದಿಸುತ್ತಿದ್ದೀರಿ. ನಿಮಗೆ ತಿಳಿದಿದೆ- ಆತ್ಮವು ಶರೀರದಲ್ಲಿ ಪ್ರವೇಶ ಮಾಡುತ್ತದೆ.
ಆತ್ಮವು ಅವಿನಾಶಿ, ಶರೀರವು ವಿನಾಶಿಯಾಗಿದೆ, ಶರೀರದ ಮೂಲಕ ಪಾತ್ರವನ್ನಭಿನಯಿಸುತ್ತದೆ. ಆತ್ಮವು
ಅಶರೀರಿಯಲ್ಲವೆ. ಅಶರೀರಿಯಾಗಿ ಬಂದಿದ್ದೇವೆ, ಅಶರೀರಿಯಾಗಿ ಹೋಗಬೇಕೆಂದೂ ಹೇಳುತ್ತಾರೆ. ಶರೀರಧಾರಣೆ
ಮಾಡಿದ್ದಾರೆ, ಮತ್ತೆ ಶರೀರವನ್ನು ಬಿಟ್ಟು ಅಶರೀರಿಯಾಗಿ ಹೋಗಬೇಕಾಗಿದೆ. ಇದನ್ನು ತಂದೆಯು ನೀವು
ಮಕ್ಕಳಿಗೇ ತಿಳಿಸುತ್ತಾರೆ. ಇದೂ ಸಹ ಮಕ್ಕಳಿಗೆ ಗೊತ್ತಿದೆ- ಭಾರತದಲ್ಲಿ ಸತ್ಯಯುಗವಿದ್ದಾಗ
ದೇವಿ-ದೇವತೆಗಳ ರಾಜ್ಯವಿತ್ತು, ಒಂದೇ ಧರ್ಮವಿತ್ತು, ಇದನ್ನು ಭಾರತವಾಸಿಗಳೇ ತಿಳಿದುಕೊಂಡಿಲ್ಲ.
ಯಾರು ತಂದೆಯನ್ನು ತಿಳಿದುಕೊಂಡಿಲ್ಲವೋ ಅವರು ಏನನ್ನೂ ತಿಳಿದುಕೊಂಡಿಲ್ಲ. ನಾವು ರಚಯಿತ ಮತ್ತು
ರಚನೆಯನ್ನು ತಿಳಿದುಕೊಂಡಿಲ್ಲವೆಂದು ಪ್ರಾಚೀನ ಋಷಿ-ಮುನಿಗಳೂ ಸಹ ಹೇಳುತ್ತಿದ್ದರು. ರಚಯಿತನು
ಬೇಹದ್ದಿನ ತಂದೆಯಾಗಿದ್ದಾರೆ ಅವರೇ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ.
ಆರಂಭಕ್ಕೆ ಆದಿಯೆಂದು, ನಡುವಿನ ಸಮಯವನ್ನು ಮಧ್ಯವೆಂದು ಹೇಳಲಾಗುತ್ತದೆ. ಆದಿಯು ಸತ್ಯಯುಗವಾಗಿದೆ,
ಅದಕ್ಕೆ ದಿನವೆಂದು ಹೇಳಲಾಗುತ್ತದೆ. ನಂತರ ಮಧ್ಯದಿಂದ ಅಂತ್ಯದವರೆಗೆ ರಾತ್ರಿಯಾಗಿದೆ. ದಿನವು
ಸತ್ಯ-ತ್ರೇತಾಯುಗವಾಗಿದೆ, ಸ್ವರ್ಗವು ಪ್ರಪಂಚದ ಅದ್ಭುತವಾಗಿದೆ. ಭಾರತವೇ ಸ್ವರ್ಗವಾಗಿತ್ತು, ಅಲ್ಲಿ
ಲಕ್ಷ್ಮೀ-ನಾರಾಯಣರು ರಾಜ್ಯ ಮಾಡುತ್ತಿದ್ದರು. ಇದನ್ನು ಭಾರತವಾಸಿಗಳೇ ತಿಳಿದುಕೊಂಡಿಲ್ಲ. ಈಗ
ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ-
ನೀವು ತಮ್ಮನ್ನು ಆತ್ಮನೆಂದು ತಿಳಿಯಿರಿ. ನಾನು ಫಸ್ಟ್ಕ್ಲಾಸ್ ಆತ್ಮನಾಗಿದ್ದೇನೆ, ಈ ಸಮಯದಲ್ಲಿ
ಮನುಷ್ಯಾತ್ಮರೆಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ತಂದೆಯು ಆತ್ಮಾಭಿಮಾನಿಯನ್ನಾಗಿ ಮಾಡುತ್ತಾರೆ.
ಆತ್ಮವೆಂದರೇನು ಎಂಬುದನ್ನೂ ಸಹ ತಂದೆಯು ತಿಳಿಸುತ್ತಾರೆ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ.
ಭೃಕುಟಿಯ ಮಧ್ಯ ಹೊಳೆಯುವ ನಕ್ಷತ್ರವೆಂದು ಹೇಳುತ್ತಾರೆ ಆದರೆ ಅದು ಹೇಗಿದೆ, ಅದರಲ್ಲಿ ಹೇಗೆ
ಪಾತ್ರವು ಅಡಕವಾಗಿದೆ ಎಂಬುದೇನನ್ನೂ ತಿಳಿದುಕೊಂಡಿಲ್ಲ. ಈಗ ನಿಮಗೆ ತಂದೆಯು ತಿಳಿಸುತ್ತಾರೆ- ನೀವು
ಭಾರತವಾಸಿಗಳು 84 ಜನ್ಮಗಳ ಪಾತ್ರವನ್ನು ಅಭಿನಯಿಸಬೇಕಾಗಿದೆ. ಭಾರತವೇ ಶ್ರೇಷ್ಠಖಂಡವಾಗಿದೆ.
ಯಾರೆಲ್ಲಾ ಮನುಷ್ಯಮಾತ್ರರಿದ್ದಾರೆಯೋ ಅವರಿಗೆ ಇದು ತೀರ್ಥಸ್ಥಾನವಾಗಿದೆ ಏಕೆಂದರೆ ಸರ್ವರ ಸದ್ಗತಿ
ಮಾಡುವ ತಂದೆಯು ಇಲ್ಲಿಯೇ ಬರುತ್ತಾರೆ. ರಾವಣರಾಜ್ಯದಿಂದ ಮುಕ್ತಗೊಳಿಸಿ ಮಾರ್ಗದರ್ಶಕನಾಗಿ
ಕರೆದುಕೊಂಡು ಹೋಗುತ್ತಾರೆ. ಮನುಷ್ಯರಂತೂ ಕೇವಲ ಹಾಗೆಯೇ ಹೇಳಿಬಿಡುತ್ತಾರೆ, ಅರ್ಥವೇನೂ ಗೊತ್ತಿಲ್ಲ.
ಭಾರತದಲ್ಲಿ ಮೊದಲು ದೇವಿ-ದೇವತೆಗಳಿದ್ದರು, ಅವರೇ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳಬೇಕಾಯಿತು.
ಭಾರತವಾಸಿಗಳೇ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರನಾಗುತ್ತಾರೆ. ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾರಲ್ಲವೆ. ಈ ಜ್ಞಾನವನ್ನು ತಿಳಿದುಕೊಳ್ಳುವುದರಲ್ಲಿ 7 ದಿನಗಳು ಹಿಡಿಸುತ್ತದೆ.
ಪತಿತಬುದ್ಧಿಯನ್ನು ಪಾವನ ಮಾಡಬೇಕಾಗಿದೆ. ಈ ಲಕ್ಷ್ಮೀ-ನಾರಾಯಣರು ಪಾವನ ಪ್ರಪಂಚದಲ್ಲಿ ರಾಜ್ಯ
ಮಾಡುತ್ತಿದ್ದರಲ್ಲವೆ. ಅವರ ರಾಜ್ಯವು ಭಾರತದಲ್ಲಿದ್ದಾಗ ಮತ್ತ್ಯಾವ ಧರ್ಮವೂ ಇರಲಿಲ್ಲ, ಒಂದೇ
ರಾಜ್ಯವಿತ್ತು. ಭಾರತವು ಎಷ್ಟು ಧನವಂತನಾಗಿತ್ತು! ವಜ್ರರತ್ನಗಳ ಮಹಲುಗಳಿತ್ತು ನಂತರ
ರಾವಣರಾಜ್ಯದಲ್ಲಿ ಪೂಜಾರಿಗಳಾಗಿದ್ದಾರೆ. ಮತ್ತೆ ಭಕ್ತಿಮಾರ್ಗದಲ್ಲಿ ಈ ಮಂದಿರ ಇತ್ಯಾದಿಗಳನ್ನು
ಕಟ್ಟಿಸಿದ್ದಾರೆ. ಸೋಮನಾಥನ ಮಂದಿರವಿತ್ತಲ್ಲವೆ. ಕೇವಲ ಒಂದು ಮಂದಿರವಷ್ಟೇ ಅಲ್ಲ, ಅಕ್ಕಪಕ್ಕದಲ್ಲಿ
ಇನ್ನೂ ಬಹಳಷ್ಟು ಇದ್ದಿರಬಹುದು. ಇಲ್ಲಿಯೂ ಸಹ ಶಿವನ ಮಂದಿರದಲ್ಲಿ ಇಷ್ಟು ವಜ್ರರತ್ನಗಳಿತ್ತು
ಯಾವುದನ್ನು ಮಹಮ್ಮದ್ ಘಜಿû್ನಯು ಒಂಟೆಗಳ ಮೇಲೆ ತೆಗೆದುಕೊಂಡು ಹೋದನು. ಇಷ್ಟು ಸಂಪತ್ತಿತ್ತು, ಒಂದು
ಒಂಟೆಯೇನು! ಲಕ್ಷಾಂತರ ಒಂಟೆಗಳನ್ನು ಕರೆತಂದರೂ ಸಹ ತುಂಬುವಷ್ಟಿತ್ತು. ಸತ್ಯಯುಗದಲ್ಲಿ ಅನೇಕ
ವಜ್ರರತ್ನಗಳ ಮಹಲುಗಳಿದ್ದವು, ಮಹಮ್ಮದ್ ಘಜಿû್ನಯಾದರೂ ಈಗ ಬಂದಿದ್ದಾನೆ ನಂತರ ಭೂಕಂಪದಲ್ಲಿ ಎಲ್ಲವೂ
ಮಣ್ಣಲ್ಲಿ ಹೊರಟುಹೋಗುತ್ತದೆ. ರಾವಣನ ಯವುದೇ ಚಿನ್ನದ ಲಂಕೆಯಿರುವುದಿಲ್ಲ. ರಾವಣರಾಜ್ಯದಲ್ಲಿಯೇ
ಭಾರತದ ಸ್ಥಿತಿಯು ಈ ಮಟ್ಟಕ್ಕೆ ತಲುಪುತ್ತದೆ. 100% ಅಧರ್ಮ, ಅಸತ್ಯತೆ, ಪತಿತ, ವಿಕಾರಿ,
ನಿರ್ಧನಿಕರು. ಹೊಸಪ್ರಪಂಚಕ್ಕೆ ನಿರ್ವಿಕಾರಿಯೆಂದು ಹೇಳಲಾಗುತ್ತದೆ. ಭಾರತವು ಶಿವಾಲಯವಾಗಿತ್ತು,
ಅದಕ್ಕೆ ವಂಡರ್ ಆಫ್ ವಲ್ರ್ಡ್ ಎಂದು ಹೇಳಲಾಗುತ್ತದೆ. ಬಹಳ ಕಡಿಮೆ ಸಂಖ್ಯೆಯಿತ್ತು, ಈಗಂತೂ
ಕೋಟ್ಯಾಂತರ ಮನುಷ್ಯರಿದ್ದಾರೆ ಅಂದಮೇಲೆ ವಿಚಾರ ಮಾಡಬೇಕಲ್ಲವೆ. ಈಗ ನೀವು ಮಕ್ಕಳಿಗೆ ಇದು
ಪುರುಷೋತ್ತಮ ಸಂಗಮಯುಗವಾಗಿದೆ, ಯಾವಾಗ ತಂದೆಯು ನಿಮ್ಮನ್ನು ಪುರುಷೋತ್ತಮ, ಪಾರಸಬುದ್ಧಿಯವರನ್ನಾಗಿ
ಮಾಡುತ್ತಿದ್ದಾರೆ. ತಂದೆಯು ನಿಮಗೆ ಮನುಷ್ಯರಿಂದ ದೇವತೆಗಳಾಗುವ ಶ್ರೇಷ್ಠಮತವನ್ನು ಕೊಡುತ್ತಾರೆ.
ತಂದೆಯು ಮತಕ್ಕಾಗಿ ನಿಮ್ಮ ಗತಿಮತವು ಭಿನ್ನವೆಂದು ಗಾಯನ ಮಾಡುತ್ತಾರೆ. ಇದರ ಅರ್ಥವನ್ನು ಯಾರೂ
ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಇಂತಹ ಶ್ರೇಷ್ಠಮತವನ್ನು ಕೊಡುತ್ತೇನೆ
ಅದರಿಂದ ನೀವು ದೇವತೆಗಳಾಗಿಬಿಡುತ್ತೀರಿ. ಈಗ ಕಲಿಯುಗದ ಮುಕ್ತಾಯವಾಗಿದೆ. ಹಳೆಯ ಪ್ರಪಂಚದ ವಿನಾಶವೂ
ಸನ್ಮುಖದಲ್ಲಿದೆ. ಮನುಷ್ಯರಂತೂ ಘೋರ ಅಂಧಕಾರದಲ್ಲಿ, ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ
ಏಕೆಂದರೆ ಶಾಸ್ತ್ರಗಳಲ್ಲಿ ಕಲಿಯುಗವು ಇನ್ನೂ ಮಗುವಾಗಿದೆ. 40 ಸಾವಿರ ವರ್ಷಗಳಿದೆಯೆಂದು
ಬರೆದಿದ್ದಾರೆ. 84 ಲಕ್ಷ ಯೋನಿಗಳೆಂದು ತಿಳಿದುಕೊಳ್ಳುವ ಕಾರಣ ಕಲ್ಪದ ಆಯಸ್ಸನ್ನೂ ಬಹಳ ಉದ್ದಗಲ
ಮಾಡಿಬಿಟ್ಟಿದ್ದಾರೆ. ವಾಸ್ತವದಲ್ಲಿ 5000 ವರ್ಷಗಳಾಗಿದೆ. ತಂದೆಯು ತಿಳಿಸುತ್ತಾರೆ- ನೀವು 84
ಜನ್ಮಗಳನ್ನು ತೆಗೆದುಕೊಳ್ಳುತ್ತೀರೇ ಹೊರತು 84 ಲಕ್ಷ ಜನ್ಮಗಳಲ್ಲ. ಬೇಹದ್ದಿನ ತಂದೆಯಂತೂ ಇವೆಲ್ಲಾ
ಶಾಸ್ತ್ರ ಇತ್ಯಾದಿಗಳನ್ನು ತಿಳಿದುಕೊಂಡಿದ್ದಾರೆ ಆದ್ದರಿಂದಲೇ ಇದೆಲ್ಲವೂ ಭಕ್ತಿಮಾರ್ಗದ್ದೆಂದು
ಹೇಳುತ್ತಾರೆ. ಇದು ಅರ್ಧಕಲ್ಪ ನಡೆಯುತ್ತದೆ ಇದರಿಂದ ಯಾರೂ ನನ್ನನ್ನು ಮಿಲನ ಮಾಡುವುದಿಲ್ಲ. ಇದೂ
ಸಹ ವಿಚಾರ ಮಾಡುವ ಮಾತಾಗಿದೆ- ಒಂದುವೇಳೆ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳುವುದಾದರೆ
ಎಷ್ಟೊಂದು ಸಂಖ್ಯೆಯಾಗಿಬಿಡುವುದು! ಕ್ರಿಶ್ಚಿಯನ್ನರ ಸಂಖ್ಯೆಯೇ 2000 ವರ್ಷಗಳಲ್ಲಿಯೇ ಇಷ್ಟೊಂದು
ವೃದ್ಧಿಯಾಗಿಬಿಟ್ಟಿದೆ ಆದರೆ ಭಾರತ ಮೂಲಧರ್ಮವೇ ದೇವಿ-ದೇವತಾಧರ್ಮವಾಗಿದೆ. ಅದೇ ನಡೆದುಬರಬೇಕು ಆದರೆ
ಆದಿಸನಾತನ ದೇವಿ-ದೇವತಾಧರ್ಮವಿದ್ದಾಗ ವಿಷ್ಣುಪುರಿಯಾಗಿತ್ತು. ಈಗ ರಾವಣನ ಪುರಿಯಾಗಿದೆ, ಅದೇ
ದೇವಿ-ದೇವತೆಗಳು 84 ಜನ್ಮಗಳ ನಂತರ ಏನಾಗಿಬಿಟ್ಟಿದ್ದಾರೆ! ದೇವತೆಗಳನ್ನು ನಿರ್ವಿಕಾರಿಗಳೆಂದು
ತಿಳಿದು ತಮ್ಮನ್ನು ವಿಕಾರಿಗಳೆಂದು ಹೇಳಿ ಅವರ ಪೂಜೆ ಮಾಡುತ್ತಾರೆ. ಸತ್ಯಯುಗದಲ್ಲಿ ಭಾರತವು
ನಿರ್ವಿಕಾರಿಯಾಗಿತ್ತು, ಅದು ಹೊಸಪ್ರಪಂಚವಾಗಿತ್ತು, ಅದಕ್ಕೆ ನವಭಾರತವೆಂದು ಹೇಳಲಾಗುತ್ತದೆ. ಇದು
ಹಳೆಯ ಭಾರತವಾಗಿದೆ, ಹೊಸ ಭಾರತವು ಹೇಗಿತ್ತು, ಹಳೆಯ ಭಾರತವು ಏನಾಗಿದೆ! ಹೊಸಪ್ರಪಂಚದಲ್ಲಿ
ಹೊಸಭಾರತವಾಗಿತ್ತು, ಈಗ ಹಳೆಯ ಪ್ರಪಂಚದಲ್ಲಿ ಭಾರತವು ಹಳೆಯದಾಗಿದೆ. ಭಾರತವೇ ಸ್ವರ್ಗವಾಗಿತ್ತು,
ಈಗ ನರಕವಾಗಿದೆ. ಭಾರತವು ಬಹಳ ಧನವಂತನಾಗಿತ್ತು, ಈಗ ಅದೇ ಭಾರತವು ನಿರ್ಧನಿಕನಾಗಿಬಿಟ್ಟಿದೆ.
ಎಲ್ಲರಿಂದ ಭಿಕ್ಷೆಯನ್ನು ಬೇಡುತ್ತಿದ್ದಾರೆ. ಪ್ರಜೆಗಳಿಂದಲೂ ಭಿಕ್ಷೆ ಬೇಡುತ್ತಾರೆ. ಇದು
ತಿಳುವಳಿಕೆಯ ಮಾತಾಗಿದೆ. ಇಂದಿನ ದೇಹಾಭಿಮಾನಿ ಮನುಷ್ಯರಿಗೆ ಸ್ವಲ್ಪ ಹಣ ಸಿಕ್ಕಿದರೂ ನಾವು
ಸ್ವರ್ಗದಲ್ಲಿ ಕುಳಿತಿದ್ದೇವೆಂದು ತಿಳಿಯುತ್ತಾರೆ. ಸುಖಧಾಮವನ್ನು (ಸ್ವರ್ಗ) ತಿಳಿದುಕೊಂಡೇ ಇಲ್ಲ
ಏಕೆಂದರೆ ಕಲ್ಲುಬುದ್ಧಿಯವರಾಗಿದ್ದಾರೆ. ಈಗ ಅವರನ್ನು ಪಾರಸಬುದ್ಧಿಯವರನ್ನಾಗಿ ಮಾಡಲು 7 ದಿನಗಳ
ಭಟ್ಟಿಯಲ್ಲಿ ಕುಳ್ಳರಿಸಿ ಏಕೆಂದರೆ ಪತಿತರಲ್ಲವೆ. ಪತಿತರನ್ನು ಇಲ್ಲಿ ಕುಳ್ಳರಿಸುವಂತಿಲ್ಲ. ಪಾವನರೇ
ಇಲ್ಲಿರಲು ಸಾಧ್ಯ. ಪತಿತರಿಗೆ ಅನುಮತಿಯಿಲ್ಲ.
ನೀವೀಗ ಪುರುಷೋತ್ತಮ
ಸಂಗಮಯುಗದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ- ತಂದೆಯು ನಮ್ಮನ್ನು ಇಂತಹ ಪುರುಷೋತ್ತಮರನ್ನಾಗಿ
ಮಾಡುತ್ತಾರೆ, ಇದು ಸತ್ಯವಾದ ಸತ್ಯನಾರಾಯಣನ ಕಥೆಯಾಗಿದೆ. ಸತ್ಯತಂದೆಯು ನಿಮಗೆ ನರನಿಂದ
ನಾರಾಯಣನಾಗುವ ರಾಜಯೋಗವನ್ನು ಕಲಿಸುತ್ತಿದ್ದಾರೆ. ಜ್ಞಾನವು ಕೇವಲ ಒಬ್ಬ ತಂದೆಯ ಬಳಿಯಿದೆ. ಅವರನ್ನೇ
ಜ್ಞಾನಸಾಗರನೆಂದು ಕರೆಯಲಾಗುತ್ತದೆ. ಶಾಂತಿಯ ಸಾಗರ, ಪವಿತ್ರತೆಯ ಸಾಗರ ಇದೆಲ್ಲವೂ ಒಬ್ಬ ತಂದೆಯ
ಮಹಿಮೆಯೇ ಆಗಿದೆ. ಮತ್ತ್ಯಾರ ಮಹಿಮೆಯೂ ಇರಲು ಸಾಧ್ಯವಿಲ್ಲ. ದೇವತೆಗಳ ಮಹಿಮೆಯು ಬೇರೆಯಾಗಿದೆ,
ಪರಮಪಿತ ಪರಮಾತ್ಮ ಶಿವನ ಮಹಿಮೆಯೇ ಬೇರೆಯಾಗಿದೆ. ಅವರು ತಂದೆಯಾಗಿದ್ದಾರೆ, ಕೃಷ್ಣನಿಗೆ ತಂದೆಯೆಂದು
ಹೇಳುವುದಿಲ್ಲ. ಈಗ ಭಗವಂತನು ಯಾರಾದರು? ಈಗಲೂ ಸಹ ಭಾರತವಾಸಿ ಮನುಷ್ಯರಿಗೆ ಗೊತ್ತಿಲ್ಲ. ಕೃಷ್ಣ
ಭಗವಾನುವಾಚವೆಂದು ಹೇಳುತ್ತಾರೆ, ಕೃಷ್ಣನಂತೂ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ.
ಸೂರ್ಯವಂಶಿ ನಂತರ ಚಂದ್ರವಂಶಿ ಅವರನಂತರ ವೈಶ್ಯವಂಶಿ.... ಮನುಷ್ಯರು ಹಮ್ ಸೋ, ಸೋ ಹಮ್ನ ಅರ್ಥವನ್ನು
ತಿಳಿದುಕೊಂಡಿಲ್ಲ. ನಾನಾತ್ಮನೇ ಪರಮಾತ್ಮನೆಂದು ಹೇಳಿಬಿಡುತ್ತಾರೆ. ಎಷ್ಟು ತಪ್ಪಾಗಿದೆ! ನೀವು
ತಿಳಿಸುತ್ತೀರಿ- ಭಾರತವು ಹೇಗೆ ಏರುವಕಲೆ ಮತ್ತು ಇಳಿಯುವಕಲೆಯಲ್ಲಿ ಬರುತ್ತದೆ ಎಂದು. ಇದು ಜ್ಞಾನ,
ಅದೆಲ್ಲವೂ ಭಕ್ತಿಯಾಗಿದೆ. ಸತ್ಯಯುಗದಲ್ಲಿ ಎಲ್ಲರೂ ಪಾವನರೇ ಇರುತ್ತಾರೆ. ರಾಜ-ರಾಣಿಯರ ರಾಜ್ಯವು
ನಡೆಯುತ್ತಿತ್ತು. ಅಲ್ಲಿ ಮಂತ್ರಿಗಳೂ ಸಹ ಇರುವುದಿಲ್ಲ ಏಕೆಂದರೆ ರಾಜ-ರಾಣಿಯೇ ಸ್ವಯಂ
ಮಾಲೀಕನಾಗಿದ್ದಾರೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಂಡಿರುತ್ತಾರೆ. ಅವರಲ್ಲಿಯೇ
ಸೂಕ್ಷ್ಮಬುದ್ಧಿಯಿರುತ್ತದೆ. ಲಕ್ಷ್ಮೀ-ನಾರಾಯಣರಿಗೆ ಯಾರಿಂದಲೂ ಸಲಹೆಯನ್ನು ತೆಗೆದುಕೊಳ್ಳುವ
ಅವಶ್ಯಕತೆಯಿಲ್ಲ. ಅಲ್ಲಿ ಮಂತ್ರಿಗಳೇ ಇರುವುದಿಲ್ಲ. ಭಾರತದಂತಹ ಪವಿತ್ರದೇಶವು ಮತ್ತ್ಯಾವುದೂ
ಇರಲಿಲ್ಲ. ಮಹಾನ್ ಪವಿತ್ರ ದೇಶವಾಗಿತ್ತು, ಹೆಸರೇ ಸ್ವರ್ಗವಾಗಿತ್ತು. ಈಗ ನರಕವಾಗಿದೆ. ನರಕದಿಂದ
ಸ್ವರ್ಗವನ್ನಾಗಿ ತಂದೆಯೇ ಮಾಡುವರು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯ
ಶ್ರೇಷ್ಠಮತದಂತೆ ನಡೆದು ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಈ ಸೌಭಾಗ್ಯದ ಸಂಗಮಯುಗದಲ್ಲಿ
ಸ್ವಯಂನ್ನು ಪುರುಷೋತ್ತಮ ಪಾರಸಬುದ್ಧಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ.
2. 7 ದಿನಗಳ ಭಟ್ಟಿಯಲ್ಲಿ
ಕುಳಿತು ಪತಿತಬುದ್ಧಿಯನ್ನು ಪಾವನ ಬುದ್ಧಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ಸತ್ಯತಂದೆಯಿಂದ
ಸತ್ಯನಾರಾಯಣನ ಸತ್ಯಕಥೆಯನ್ನು ಕೇಳಿ ನರನಿಂದ ನಾರಾಯಣರಾಗಬೇಕಾಗಿದೆ.
ವರದಾನ:
ಪ್ರತಿ
ಖಜಾನೆಯನ್ನು ತಂದೆಯ ಸೂಚನೆಯನುಸಾರ ಕಾರ್ಯದಲ್ಲಿ ತೊಡಗಿಸುವಂತಹ ಪ್ರಾಮಾಣಿಕರು ಹಾಗೂ ನಂಬಿಕಸ್ತ ಭವ
ಪ್ರಾಮಾಣಿಕರು ಅರ್ಥಾತ್
ನಂಬಿಕಸ್ತರು ಎಂದು ಅವರಿಗೇ ಹೇಳಲಾಗುವುದು ಯಾರು ತಂದೆಯಿಂದ ಪ್ರಾಪ್ತಿಯಾಗಿರುವ ಖಜಾನೆಗಳನ್ನು
ತಂದೆಯ ಸೂಚನೆಯಿಲ್ಲದೆ ಯಾವುದೇ ಕಾರ್ಯದಲ್ಲಿ ತೊಡಗಿಸುವುದಿಲ್ಲ. ಒಂದುವೇಳೆ ಸಮಯ, ವಾಣಿ, ಕರ್ಮ,
ಶ್ವಾಸ ಹಾಗೂ ಸಂಕಲ್ಪ ಪರಮತ ಅಥವಾ ಸಂಗದೋಷದಲ್ಲಿ ವ್ಯರ್ಥದ ಕಡೆ ಕಳೆಯುವಿರಿ, ಸ್ವಚಿಂತನೆಯ ಬದಲು
ಪರಚಿಂತನೆ ಮಾಡುವಿರಿ, ಸ್ವಮಾನದ ಬದಲು ಯಾವುದೇ ಪ್ರಕಾರದ ಅಭಿಮಾನದಲ್ಲಿ ಬರುವಿರಿ, ಶ್ರೀಮತದ ಬದಲು
ಮನಮತದ ಆಧಾರದಮೇಲೆ ನಡೆಯುವಿರಿ ಎಂದಾಗ ಪ್ರಾಮಾಣಿಕರು ಎಂದು ಹೇಳಲಾಗುವುದಿಲ್ಲ. ಈ ಎಲ್ಲ ಖಜಾನೆ
ವಿಶ್ವ ಕಲ್ಯಾಣಕ್ಕಾಗಿ ಸಿಕ್ಕಿರುವುದು, ಆದ್ದರಿಂದ ಅದರಲ್ಲಿಯೇ ತೊಡಗಿಸ ಬೇಕು ಇದೇ
ಪ್ರಾಮಾಣಿಕರಾಗುವುದು.
ಸ್ಲೋಗನ್:
ಆಪೋಸಿಷನ್
ಮಾಯೆಯ ಜೊತೆ ಮಾಡಿ ಹೊರತು ದೈವಿ ಪರಿವಾರದೊಂದಿಗೆ ಅಲ್ಲ.
ಅವ್ಯಕ್ತ ಸೂಚನೆ:
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ
ಎಲ್ಲಾ ಆತ್ಮಗಳು ಒಂದೇ -ಬೇಹದ್ದಿನ
ಪರಿವಾರದವರಾಗಿದ್ದಾರೆ, ನಮ್ಮ ಪರಿವಾರದ ಯಾವುದೇ ಆತ್ಮ ವರದಾನಗಳಿಂದ ವಂಚಿತರಾಗಬಾರದು- ಇಂತಹ ಉಮಂಗ
ಉತ್ಸಾಹದ ಶ್ರೇಷ್ಠ ಸಂಕಲ್ಪ ಹೃದಯದಲ್ಲಿ ಸದಾ ಇರಲಿ. ತಮ್ಮ ಪ್ರವೃತ್ತಿಯಲ್ಲಿ ಬಿಜಿ ಇರಬೇಡಿ,
ಬೇಹದ್ದಿನ ಸ್ಟೇಜಿನ ಮೇಲೆ ಸ್ಥಿತವಾಗಿ, ಬೇಹದ್ದಿನ ಆತ್ಮಗಳ ಸೇವೆಯ ಶ್ರೇಷ್ಠ ಸಂಕಲ್ಪ ಮಾಡಿ, ಇದೇ
ಸಫಲತೆಯ ಸಹಜ ಸಾಧನವಾಗಿದೆ.