11.05.25 Avyakt Bapdada
Kannada
Murli 07.03.2005 Om Shanti Madhuban
“ಸಂಪೂರ್ಣ ಪವಿತ್ರತೆಯ
ವ್ರತವನ್ನು ಇಟ್ಟುಕೊಳ್ಳುವುದು ಹಾಗೂ ನನ್ನತನವನ್ನು ಸಮರ್ಪಣೆ ಮಾಡುವುದೇ ಶಿವಜಯಂತಿ ಆಚರಿಸುವುದು”
ಇಂದು ವಿಶೇಷವಾಗಿ
ಶಿವತಂದೆ ತನ್ನ ಸಾಲಿಗ್ರಾಮ ಮಕ್ಕಳ ಜನ್ಮದಿನವನ್ನು ಆಚರಿಸಲು ಬಂದಿದ್ದೇವೆ. ನೀವು ಮಕ್ಕಳು ತಂದೆಯ
ಜನ್ಮದಿನವನ್ನು ಆಚರಿಸಲು ಬಂದಿದ್ದೀರಿ ಹಾಗೂ ಬಾಪ್ದಾದಾ ಮಕ್ಕಳ ಜನ್ಮದಿನವನ್ನು ಆಚರಿಸಲು
ಬಂದಿದ್ದೇವೆ ಏಕೆಂದರೆ ತಂದೆಗೆ ಮಕ್ಕಳ ಬಗ್ಗೆ ಬಹಳ ಪ್ರೀತಿಯಿದೆ. ತಂದೆ ಅವತರಣೆ ಆಗುತ್ತಲೇ ಯಜ್ಞ
ರಚಿಸುತ್ತಾರೆ ಮತ್ತು ಯಜ್ಞದಲ್ಲಿ ಬ್ರಾಹ್ಮಣರ ವಿನಃ ಯಜ್ಞ ಸಂಪೂರ್ಣ ಆಗುವುದಿಲ್ಲ. ಆದ್ದರಿಂದ ಈ
ಜನ್ಮದಿನವು ಅಲೌಕಿಕವಾಗಿದೆ, ಭಿನ್ನ ಹಾಗೂ ಪ್ರಿಯವಾಗಿದೆ. ಇಂತಹ ಜನ್ಮದಿನವು ಯಾವುದರಲ್ಲಿ ತಂದೆ
ಮತ್ತು ಮಕ್ಕಳ ಜನ್ಮದಿನ ಒಟ್ಟಿಗೆ ಆಗುವುದು - ಈ ರೀತಿ ಇಡೀ ಕಲ್ಪದಲ್ಲಿ ಆಗಿಲ್ಲ, ಎಂದೂ ಆಗಲು
ಸಾಧ್ಯವಿಲ್ಲ. ತಂದೆ ನಿರಾಕಾರ ಆಗಿದ್ದಾರೆ. ಒಂದು ಕಡೆ ತಂದೆ ನಿರಾಕಾರನಾಗಿದ್ದಾರೆ, ಮತ್ತೊಂದುಕಡೆ
ಜನ್ಮವನ್ನು ಆಚರಿಸುತ್ತಾರೆ. ಒಬ್ಬರೇ ಶಿವತಂದೆ ಇದ್ದಾರೆ ಯಾರಿಗೆ ತಮ್ಮದೇ ಆದ ಶರೀರವಿಲ್ಲ.
ಆದ್ದರಿಂದ ಬ್ರಹ್ಮಾತಂದೆಯ ತನುವಿನಲ್ಲಿ ಅವತರಿತರಾಗುತ್ತಾರೆ, ಈ ಅವತರಿತರಾಗುವದನ್ನೇ ಜಯಂತಿಯ
ರೂಪದಲ್ಲಿ ಆಚರಿಸುತ್ತಾರೆ. ಅಂದಾಗ ತಾವೆಲ್ಲರೂ ತಂದೆಯ ಜನ್ಮದಿನವನ್ನು ಆಚರಿಸಲು ಬಂದಿದ್ದೀರೋ ಅಥವಾ
ನಿಮ್ಮ ಜನ್ಮದಿನವನ್ನು ಆಚರಿಸಲು ಬಂದಿದ್ದೀರೋ? ಶುಭಾಶಯಗಳನ್ನು ಕೊಡಲು ಬಂದಿದ್ದೀರೋ ಅಥವಾ
ಶುಭಾಶಯಗಳನ್ನು ಪಡೆಯಲು ಬಂದಿದ್ದೀರೋ? ಈ ಜೊತೆ-ಜೊತೆಯಲ್ಲಿ ಇರುವ ಪ್ರತಿಜ್ಞೆ ಮಕ್ಕಳ ಜೊತೆ
ತಂದೆಯದಾಗಿದೆ. ತಾವೂ ಕೂಡ ಸಂಗಮದಲ್ಲಿ ಕಂಬೈಂಡ್ ರೂಪದಲ್ಲಿದ್ದೀರಿ. ಅವತರಣೆಯೂ ಸಹ ಜೊತೆಯಲ್ಲಿ
ಆಗುತ್ತದೆ. ಪರಿವರ್ತನೆ ಮಾಡುವ ಕಾರ್ಯವೂ ಕೂಡ ಜೊತೆಯಲ್ಲಿ ಆಗುತ್ತದೆ ಹಾಗೂ ಮನೆ ಪರಂಧಾಮಕ್ಕೆ
ಹೋಗುವುದರಲ್ಲಿಯೂ ಕೂಡ ಜೊತೆಜೊತೆಯಲ್ಲಿಯೇ. ಇದು ತಂದೆ ಮತ್ತು ಮಕ್ಕಳ ಪ್ರೀತಿಯ ಸ್ವರೂಪವಾಗಿದೆ.
ಶಿವಜಯಂತಿ ಭಕ್ತರೂ
ಆಚರಿಸುತ್ತಾರೆ ಆದರೆ ಅವರು ಕೇವಲ ಕೂಗುತ್ತಾರೆ, ಹಾಡು ಹೇಳುತ್ತಾರೆ. ನೀವು ಕೂಗುವುದಿಲ್ಲ, ನಿಮ್ಮ
ಆಚರಣೆ ಎಂದರೆ ಸಮಾನರಾಗುವುದು. ಆಚರಿಸುವುದು ಎಂದರೆ ಸದಾ ಹುಮಸ್ಸು-ಉತ್ಸಾಹದಿಂದ ಹಾರುತ್ತಾ
ಇರುವುದು. ಆದ್ದರಿಂದ ಇದಕ್ಕೆ ಉತ್ಸವ ಎಂದು ಹೇಳುತ್ತಾರೆ. ಉತ್ಸವದ ಅರ್ಥವೇ ಆಗಿದೆ ಉತ್ಸಾಹದಲ್ಲಿ
ಇರುವುದು. ಅಂದಾಗ ಸದಾ ಉತ್ಸವ ಎಂದರೆ ಉತ್ಸಾಹದಲ್ಲಿರುವವರಾಗಿದ್ದೀರಿ ಅಲ್ಲವೇ. ಉತ್ಸಾಹ ಇದೆಯೇ?
ಸದಾ ಇದೆಯೋ ಅಥವಾ ಒಮ್ಮೊಮ್ಮೆ ಇದೆಯೋ? ಹಾಗೆ ನೋಡಿದಾಗ ಬ್ರಾಹ್ಮಣ ಜೀವನದ ಶ್ವಾಸವೇ ಆಗಿದೆ
ಉಮ್ಮಸು-ಉತ್ಸಾಹ. ಹೇಗೆ ಶ್ವಾಸದ ಹೊರೆತು ಇರಲು ಸಾಧ್ಯವಿಲ್ಲ ಹಾಗೆಯೇ ಬ್ರಾಹ್ಮಣ ಆತ್ಮರು
ಉಮ್ಮಸು-ಉತ್ಸಾಹದ ಹೊರೆತು ಬ್ರಾಹ್ಮಣ ಜೀವನದಲ್ಲಿ ಇರಲು ಸಾಧ್ಯವಿಲ್ಲ. ಈ ರೀತಿ ಅನುಭವ
ಮಾಡುತ್ತೀರಲ್ಲವೇ. ನೋಡಿ ವಿಶೇಷ ಜಯಂತಿ ಆಚರಿಸಲು ಎಲ್ಲೆಲ್ಲಿಂದ ದೂರ-ದೂರದಿಂದ ಓಡಿ ಬಂದಿದ್ದಾರೆ.
ಬಾಪ್ದಾದಾರವರಿಗೆ ಎಷ್ಟು ಮಕ್ಕಳ ಜನ್ಮದಿನದ ಖುಷಿ ಇದೆಯೋ ಅಷ್ಟು ತಮ್ಮ ಜನ್ಮದಿನದ ಬಗ್ಗೆ ಇಲ್ಲ.
ಆದ್ದರಿಂದ ಬಾಪ್ದಾದಾ ಒಬ್ಬೊಬ್ಬ ಮಗುವಿಗೆ ಪದಮಾಗುಣದಷ್ಟು ಖುಷಿಯ ತಟ್ಟೆಗಳನ್ನು ತುಂಬಿ-ತುಂಬಿ
ಶುಭಾಶಯಗಳನ್ನು ನೀಡುತ್ತಿದ್ದಾರೆ. ಶುಭಾಷಯಗಳು, ಶುಭಾಷಯಗಳು, ಶುಭಾಷಯಗಳು. ಬಾಪ್ದಾದಾರವರಿಗೆ
ಇಂದಿನ ದಿನ ಸತ್ಯ ಭಕ್ತರೂ ಕೂಡ ಬಹಳ ನೆನಪಿಗೆ ಬರುತ್ತಿದ್ದಾರೆ. ಅವರು ಒಂದು ದಿನದ ವ್ರತವನ್ನು
ಇಟ್ಟುಕೊಳ್ಳುತ್ತಾರೆ ಹಾಗೂ ನೀವು ಇಡೀ ಜೀವನದಲ್ಲಿ ಸಂಪೂರ್ಣ ಪವಿತ್ರರಾಗುವಂತಹ ವ್ರತವನ್ನು
ಇಟ್ಟುಕೊಂಡಿದ್ದೀರಿ. ಅವರು ಊಟದ ವ್ರತವನ್ನು ಇಡುತ್ತಾರೆ. ನೀವೂ ಸಹ ಮನಸ್ಸಿನ ಭೋಜನವಾದ ವ್ಯರ್ಥ
ಸಂಕಲ್ಪ, ನಕಾರಾತ್ಮಕ ಸಂಕಲ್ಪ, ಅಪವಿತ್ರ ಸಂಕಲ್ಪಗಳ ವ್ರತವನ್ನು ಇಟ್ಟುಕೊಂಡಿದ್ದೀರಿ. ಪಕ್ಕಾ
ವ್ರತವನ್ನು ಇಟ್ಟುಕೊಂಡಿದ್ದೀರಲ್ಲವೇ. ಈ ಡಬಲ್ ವಿದೇಶಿಗಳು ಮುಂದೆ ಕುಳಿತಿದ್ದಾರೆ. ಕುಮಾರರು ಹೇಳಿ,
ಕುಮಾರರು ವ್ರತ ಇಟ್ಟಿದ್ದೀರಾ? ಪಕ್ಕಾ? ಕಚ್ಚಾ ಅಲ್ಲ. ಮಾಯೆ ಕೇಳುತ್ತಿದೆ. ಎಲ್ಲರೂ ಬಾವುಟಗಳನ್ನು
ಬೀಸುತ್ತಿದ್ದೀರಲ್ಲವೇ. ಅಂದಾಗ ಮಾ ನೋಡುತ್ತಿದೆ. ಬಾವುಟಗಳನ್ನು ಬೀಸುತ್ತಿದ್ದೀರಾ. ಯಾವಾಗ
ಪವಿತ್ರರಾಗಲೇಬೇಕು ಎಂಬ ವ್ರತವನ್ನು ಇಟ್ಟುಕೊಳ್ಳುತ್ತೀರಿ ಅಂದಾಗ ವ್ರತವನ್ನು
ಇಟ್ಟುಕೊಳ್ಳುವುದೆಂದರೆ ಶ್ರೇಷ್ಠ ಮನೋವೃತ್ತಿಯನ್ನು ಮಾಡಿಕೊಳ್ಳುವುದು. ಹೇಗೆ ಮನೋವೃತ್ತಿ
ಇರುತ್ತದೋ ಹಾಗೆಯೇ ದೃಷ್ಟಿ, ಕೃತಿ ತಾನಾಗಿಯೇ ಆಗುತ್ತದೆ. ಅಂದಾಗ ಅಂತಹ ವ್ರತ ಇಟ್ಟಿದ್ದೀರಲ್ಲವೇ?
ಪವಿತ್ರ ಶುಭವೃತ್ತಿ, ಪವಿತ್ರ ಶುಭದೃಷ್ಟಿ, ಯಾವಾಗ ಒಬ್ಬರು ಮತ್ತೊಬ್ಬರನ್ನು ನೋಡುತ್ತೀರೋ ಆಗ ಏನು
ನೋಡುತ್ತೀರಾ? ಮುಖವನ್ನು ನೋಡುತ್ತೀರೋ ಅಥವಾ ಭೃಕುಟಿಯ ಮಧ್ಯ ಹೊಳೆಯುತ್ತಿರುವ ಆತ್ಮನನ್ನು
ನೋಡುತ್ತೀರೋ? ಯಾವುದೋ ಮಗುವು ಕೇಳಿತು - ಯಾವಾಗ ಮಾತನಾಡಬೇಕಾಗುತ್ತದೋ, ಕೆಲಸ ಮಾಡಬೇಕಾಗುತ್ತದೆಯೋ
ಆಗ ಮುಖವನ್ನು ನೋಡಿಯೇ ಮಾತನಾಡಬೇಕಾಗುತ್ತದೆ, ಕಣ್ಣುಗಳ ಕಡೆಗೆ ದೃಷ್ಟಿ ಹೋಗುತ್ತದೆ, ಅಂದಾಗ
ಒಮ್ಮೊಮ್ಮೆ ಮುಖವನ್ನು ನೋಡಿ ಸ್ವಲ್ಪ ಮನೋವೃತ್ತಿ ಬದಲಾಗುತ್ತದೆ. ಬಾಪ್ದಾದಾ ತಿಳಿಸುತ್ತಾರೆ -
ಕಣ್ಣುಗಳ ಜೊತೆ-ಜೊತೆಗೆ ಭೃಕುಟಿಯು ಕೂಡ ಇದೆ, ಅಂದಾಗ ಭೃಕುಟಿಯ ಮಧ್ಯೆ ಆತ್ಮವನ್ನು ನೋಡಿ ಮಾತನಾಡಲು
ಸಾಧ್ಯವಿಲ್ಲವೇ. ಈಗ ಬಾಪ್ದಾದಾ ಎದುರಿಗೆ ಕುಳಿತ ಮಕ್ಕಳ ಕಣ್ಣುಗಳಲ್ಲಿ ನೋಡುತ್ತಿದ್ದಾರೋ ಅಥವಾ
ಭೃಕುಟಿಯಲ್ಲಿ ನೋಡುತ್ತಿದ್ದಾರೋ, ಗೊತ್ತಾಗುತ್ತದೆಯೇ? ಜೊತೆ-ಜೊತೆಯಂತೂ ಇದೆ. ಅಂದಾಗ ಮುಖವನ್ನು
ನೋಡಿ ಆದರೆ ಮುಖದಲ್ಲಿ ಭೃಕುಟಿಯಲ್ಲಿ ಹೊಳೆಯುತ್ತಿರುವ ನಕ್ಷತ್ರವನ್ನು ನೋಡಿ. ಈ ವ್ರತವನ್ನು
ತೆಗೆದುಕೊಳ್ಳಿ. ಈಗಾಗಲೇ ತೆಗೆದುಕೊಂಡಿದ್ದೀರಿ - ಅದರ ಮೇಲೆ ಇನ್ನೂ ಸಂಪೂರ್ಣ ಗಮನವನ್ನಿಡಿ.
ಆತ್ಮವನ್ನು ನೋಡಿ ಮಾತನಾಡಬೇಕಾಗಿದೆ, ಆತ್ಮದೊಂದಿಗೆ ಆತ್ಮವು ಮಾತನಾಡುತ್ತಿದೆ, ಆತ್ಮವು
ನೋಡುತ್ತಿದೆ, ಇದರಿಂದ ವೃತ್ತಿಯು ಸದಾ ಶುಭವಾಗಿರುವುದು ಮತ್ತು ಜೊತೆಜೊತೆಯಲ್ಲಿ ಇನ್ನೊಂದು
ಲಾಭವೇನೆಂದರೆ ವೃತ್ತಿಯಂತೆ ವಾಯುಮಂಡಲವಿರುತ್ತದೆ. ವಾಯುಮಂಡಲವನ್ನು ಶ್ರೇಷ್ಠವನ್ನಾಗಿ
ಮಾಡುವುದರಿಂದ ಸ್ವಯಂನ ಪುರುಷಾರ್ಥದ ಜೊತೆಜೊತೆ ಸೇವೆಯೂ ಆಗಿಬಿಡುತ್ತದೆ ಅಂದಾಗ ಡಬಲ್
ಲಾಭವಾಯಿತಲ್ಲವೆ! ಈಗ ತಮ್ಮ ವೃತ್ತಿಯನ್ನು ಇಷ್ಟೂ ಶ್ರೇಷ್ಠ ಮಾಡಿಕೊಳ್ಳಿ ಎಂತಹದ್ದೇ ವಿಕಾರಿ,
ಪತಿತರೂ ಸಹ ವೃತ್ತಿಯ ವಾಯುಮಂಡಲದಿಂದ ಪರಿವರ್ತನೆಯಾಗಿಬಿಡಲಿ, ಇಂತಹ ವ್ರತವು ಸದಾ ಸ್ಮೃತಿಯಲ್ಲಿರಲಿ,
ಸ್ವರೂಪದಲ್ಲಿರಲಿ.
ಇತ್ತೀಚೆಗೆ ಬಾಪ್ದಾದಾ
ಮಕ್ಕಳ ಚಾರ್ಟನ್ನು ನೋಡಿದರು, ತಮ್ಮ ವೃತ್ತಿಯಿಂದ ವಾಯುಮಂಡಲವನ್ನು ರೂಪಿಸುವ ಬದಲು ಕೆಲವೊಂದೆಡೆ
ಕೆಲಕೆಲವೊಮ್ಮೆ ಅನ್ಯರ ವಾಯುಮಂಡಲ ಪ್ರಭಾವವಾಗಿಬಿಡುತ್ತದೆ - ಕಾರಣವೇನು? ಮಕ್ಕಳು ಸಂಭಾಷಣೆಯಲ್ಲಿ
ಬಹಳ ಮಧುರಾತಿಮಧುರ ಮಾತುಗಳನ್ನಾಡುತ್ತಾರೆ, ಬಾಬಾ ಇವರ ವಿಶೇಷತೆ ಬಹಳ ಇಷ್ಟವಾಗುತ್ತದೆ, ಇವರ
ಸಹಯೋಗವೂ ಬಹಳ ಇಷ್ಟವಾಗುತ್ತದೆ ಎಂದು ಹೇಳುತ್ತಾರೆ. ಆದರೆ ವಿಶೇಷತೆಯು ಪ್ರಭುವಿನ ಕೊಡುಗೆಯಾಗಿದೆ.
ಬ್ರಾಹ್ಮಣ ಜೀವನದಲ್ಲಿ ಯಾವುದೆಲ್ಲಾ ಪ್ರಾಪ್ತಿಗಳಿವೆಯೋ, ವಿಶೇಷತೆಗಳಿವೆಯೋ ಎಲ್ಲವೂ ಪ್ರಭು
ಪ್ರಸಾದವಾಗಿದೆ, ಪ್ರಭುವಿನ ಕೊಡುಗೆಯಾಗಿದೆ ಅಂದಮೇಲೆ ದಾತನನ್ನೇ ಮರೆತುಹೋಗಿ
ತೆಗೆದುಕೊಳ್ಳುವವರನ್ನು (ಲೇವತಾ) ನೆನಪು ಮಾಡುವುದೇ!....... ಪ್ರಸಾದವನ್ನು ಎಂದಾದರೂ ಯಾರೂ ಸಹ
ತನ್ನದೆಂದು ಹೇಳಿಕೊಳ್ಳುವುದಿಲ್ಲ, ಪ್ರಭುಪ್ರಸಾದವೆಂದೇ ಹೇಳಲಾಗುತ್ತದೆ. ಇದು ಇಂತಹವರ
ಪ್ರಸಾದವೆಂದು ಹೇಳುವುದಿಲ್ಲ. ಪ್ರಭು ಪ್ರಸಾದವೆನ್ನುತ್ತಾರೆ. ಸಹಯೋಗವು ಸಿಗುವುದು ಒಳ್ಳೆಯ
ಮಾತಾಗಿದೆ ಆದರೆ ಸಹಯೋಗವನ್ನು ಕೊಡಿಸುವಂತಹ ದಾತನನ್ನು ಮರೆಯಬಾರದಲ್ಲವೆ. ಅಂದಮೇಲೆ ಜನ್ಮದಿನದ
ಪಕ್ಕಾ-ಪಕ್ಕಾ ವ್ರತವನ್ನಿಟ್ಟುಕೊಂಡಿದ್ದೀರಾ? ವೃತ್ತಿಯು ಬದಲಾಗಿದೆಯೇ? ಸಂಪನ್ನ ಪವಿತ್ರತೆಯೇ
ಸತ್ಯ-ಸತ್ಯವಾದ ವ್ರತವನ್ನು ತೆಗೆದುಕೊಳ್ಳುವುದು, ಅಥವಾ ಪ್ರತಿಜ್ಞೆ ಮಾಡುವುದಾಗಿದೆ ಅಂದಾಗ
ಪರಿಶೀಲನೆ ಮಾಡಿಕೊಳ್ಳಿ - ದೊಡ್ಡ-ದೊಡ್ಡ ವಿಕಾರದ ವ್ರತವನ್ನಿಟ್ಟುಕೊಂಡಿದ್ದೀರಾ ಮತ್ತು ಅವುಗಳ
ಚಿಕ್ಕ-ಚಿಕ್ಕ ಮಕ್ಕಳು ಮರಿಗಳಿಂದ ಮುಕ್ತರಾಗಿದ್ದೀರಾ? ಹಾಗೆ ನೋಡಿದರೆ ಜೀವನದಲ್ಲಿ
ಪ್ರವೃತ್ತಿಯವರಿಗೂ ಸಹ ಮಕ್ಕಳಿಗಿಂತಲೂ ಹೆಚ್ಚಿನದಾಗಿ ಮೊಮ್ಮಕ್ಕಳು, ಮರಿಮಕ್ಕಳ ಮೇಲೆ ಬಹಳ
ಪ್ರೀತಿಯಿರುತ್ತದೆ. ಮಾತೆಯರಿಗೆ ಪ್ರೀತಿಯಿರುತ್ತದೆಯಲ್ಲವೆ ಅಂದಾಗ ದೊಡ್ಡರೂಪದಿಂದಂತೂ
ವಿಜಯಿಗಳಾಗಿದ್ದೀರಿ ಆದರೆ ಚಿಕ್ಕ-ಚಿಕ್ಕ ಸೂಕ್ಷ್ಮಸ್ವರೂಪದಲ್ಲಿ ಯುದ್ಧ ಮಾಡುತ್ತಿಲ್ಲತಾನೆ? ಹೇಗೆ
ನನಗೆ ಆಸಕ್ತಿಯೇನೋ ಇಲ್ಲ ಆದರೆ ಇದು ನನಗೆ ಪ್ರಿಯವಾಗುತ್ತದೆ. ಈ ವಸ್ತು ನನಗೆ ಬಹಳ ಚೆನ್ನಾಗಿದೆ
ಎನಿಸುತ್ತದೆ ಆದರೆ ನನಗೆ ಆಸಕ್ತಿಯಿಲ್ಲ ಎಂದೆನಿಸುತ್ತದೆ. ವಿಶೇಷವಾಗಿ ಚೆನ್ನಾಗಿದೆ ಎಂದು ಏಕೆ
ಎನಿಸುತ್ತದೆ? ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಚಿಕ್ಕ-ಚಿಕ್ಕ ರೂಪದಲ್ಲಿಯೂ ಅಪವಿತ್ರತೆಯ ಅಂಶವು
ಉಳಿದುಕೊಂಡಿಲ್ಲವೆ? ಏಕೆಂದರೆ ಅಂಶವಿದ್ದರೆ ಅದೆಂದಾದರೂ ವಂಶವನ್ನೇ ಸೃಷ್ಟಿಸಬಲ್ಲದು. ಯಾವುದೇ
ವಿಕಾರವು ಭಲೆ ಚಿಕ್ಕ ರೂಪದಲ್ಲಿರಬಹುದು ಅಥವಾ ದೊಡ್ಡ ರೂಪದಲ್ಲಿ ಬರುವುದಕ್ಕೆ ನಿಮಿತ್ತ ಒಂದು
ಶಬ್ಧದ ಭಾವವಾಗಿದೆ. ಆ ಒಂದು ಶಬ್ಧವಾಗಿದೆ - “ನಾನು”. ದೇಹಾಭಿಮಾನದ ನಾನು. ಈ ನಾನು ಎಂಬ ಒಂದು
ಶಬ್ಧದಿಂದ ಅಭಿಮಾನವೂ ಬರುತ್ತದೆ ಮತ್ತು ಒಂದುವೇಳೆ ಆ ಅಭಿಮಾನವು ಪೂರ್ಣವಾಗದಿದ್ದರೆ ಕ್ರೋಧವೂ
ಬರುತ್ತದೆ ಏಕೆಂದರೆ ಅಭಿಮಾನದ ಚಿಹ್ನೆಯೇನೆಂದರೆ - ಅವರು ತಮ್ಮ ಅಪಮಾನದ ಒಂದು ಶಬ್ಧವನ್ನೂ ಸಹ
ಕೇಳಲು ಸಾಧ್ಯವಿಲ್ಲ. ಆದ್ದರಿಂದ ಕ್ರೋಧವು ಬಂದುಬಿಡುತ್ತದೆ. ಭಕ್ತರಂತೂ ಬಲಿ ನೀಡುತ್ತಾರೆ ಆದರೆ
ತಾವು ಇಂದಿನ ಯಾವುದೆಲ್ಲಾ ಮಿತವಾದ ನಾನು ಎಂಬುದಿದೆಯೋ ಅದನ್ನು ತಂದೆಗೆ ಸಮರ್ಪಣೆ ಮಾಡಿ.
ಮಾಡಬೇಕಾಗಿದೆ, ಆಗಬೇಕಾಗಿದೆ, ಹೀಗೆ ಇದೆ, ಇದೆ ಎಂದು ಆಲೋಚಿಸಬೇಡಿ. ಸಮರ್ಥರಾಗಿದ್ದೀರಿ ಮತ್ತು
ಸಮರ್ಥರಾಗಿ ಸಮಾಪ್ತಿ ಮಾಡಿ, ಯಾವುದೇ ಹೊಸಮಾತಿಲ್ಲ. ಎಷ್ಟು ಕಲ್ಪಗಳು, ಎಷ್ಟೊಂದು ಬಾರಿ
ಸಂಪೂರ್ಣರಾಗಿದ್ದೀರಿ, ನೆನಪಿದೆಯೇ? ಯಾವುದೇ ಹೊಸ ಮಾತಿಲ್ಲ. ಕಲ್ಪ-ಕಲ್ಪವೂ ಆಗಿದ್ದೀರಿ,
ಮಾಡಲ್ಪಟ್ಟಿರುವುದೇ ಆಗುತ್ತಿದೆ. ಕೇವಲ ಅದರ ಪುನರಾವರ್ತನೆ ಮಾಡಬೇಕಾಗಿದೆ. ಆಗಿರುವುದನ್ನು
ಪುನರಾವರ್ತಿಸಬೇಕಾಗಿದೆ ಆದ್ದರಿಂದ ಮಾಡಿ-ಮಾಡಲ್ಪಟ್ಟ ನಾಟಕವೆಂದು ಹೇಳಲಾಗುತ್ತದೆ. ಮೊದಲೇ
ಮಾಡಲ್ಪಟ್ಟಿದೆ, ಈಗ ಕೇವಲ ಪುನರಾವರ್ತಿಸಬೇಕು ಅರ್ಥಾತ್ ಮಾಡಿಕೊಳ್ಳಬೇಕು. ಇದು ಕಷ್ಟವೊ ಅಥವಾ
ಸಹಜವೋ? ಬಾಪ್ದಾದಾ ತಿಳಿಯುತ್ತೇವೆ - ಸಂಗಮಯುಗದ ವರದಾನವೂ ಸಹ ಸಹಜ ಪುರುಷಾರ್ಥವಾಗಿದೆ. ಈ
ಜನ್ಮದಲ್ಲಿ ಸಹಜ ಪುರುಷಾರ್ಥದ ವರದಾನದಿಂದ 21 ಜನ್ಮಗಳ ಸಹಜ ಜೀವನವು ಸ್ವತಹವಾಗಿಯೇ
ಪ್ರಾಪ್ತವಾಗುವುದು. ಬಾಪ್ದಾದಾ ಪ್ರತಿಯೊಬ್ಬ ಮಗುವನ್ನು ಪರಿಶ್ರಮದಿಂದ ಮುಕ್ತಗೊಳಿಸಲು ಬಂದಿದ್ದಾರೆ.
63 ಜನ್ಮಗಳಂತೂ ಪರಿಶ್ರಮಪಟ್ಟಿರಿ. ಈಗ ಈ ಒಂದು ಜನ್ಮದಲ್ಲಿ ಪರಮಾತ್ಮ ಪ್ರೀತಿ, ಪಾಲನೆಯಿಂದ
ಪರಿಶ್ರಮದಿಂದ ಮುಕ್ತರಾಗಿರಿ. ಎಲ್ಲಿ ಪ್ರೀತಿಯಿದೆಯೋ ಅಲ್ಲಿ ಪರಿಶ್ರಮವಿಲ್ಲ, ಎಲ್ಲಿ
ಪರಿಶ್ರಮವಿದೆಯೋ ಅಲ್ಲಿ ಪ್ರೀತಿಯಿಲ್ಲ ಆದ್ದರಿಂದ ಬಾಪ್ದಾದಾ ಸಹಜ ಪುರುಷಾರ್ಥಿಭವದ ವರದಾನವನ್ನು
ಕೊಡುತ್ತಿದ್ದಾರೆ ಮತ್ತು ಪರಿಶ್ರಮದಿಂದ ಮುಕ್ತರಾಗುವ ಸಾಧನವಾಗಿದೆ - ಪ್ರೀತಿ, ತಂದೆಯೊಂದಿಗೆ
ಹೃದಯಪೂರ್ವಕ ಸ್ನೇಹ. ಪ್ರೀತಿಯಲ್ಲಿ ಲವಲೀನರಾಗಿ ಮತ್ತು ಮಹಾ ಯಂತ್ರವು - ಮನ್ಮನಾಭವದ ಮಂತ್ರವಾಗಿದೆ
ಅಂದಾಗ ಈ ಯಂತ್ರವನ್ನು ಕೆಲಸದಲ್ಲಿ ತೊಡಗಿಸಿ. ತೊಡಗಿಸಲು ಬರುತ್ತದೆಯೇ! ಬಾಪ್ದಾದಾ ನೋಡಿದರು -
ಸಂಗಮಯುಗದಲ್ಲಿ ಪರಮಾತ್ಮನ ಪ್ರೀತಿಯಿಂದ ಬಾಪ್ದಾದಾರವರ ಮೂಲಕ ಎಷ್ಟೊಂದು ಶಕ್ತಿಗಳು ಸಿಕ್ಕಿವೆ,
ಗುಣಗಳು ಸಿಕ್ಕಿವೆ, ಜ್ಞಾನವು ಸಿಕ್ಕಿದೆ, ಖುಷಿಯು ಸಿಕ್ಕಿದೆ..... ಇದೆಲ್ಲಾ ಪ್ರಭುವಿನ
ಕೊಡುಗೆಯನ್ನು, ಖಜಾನೆಗಳನ್ನು, ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸಿ.
ಅಂದಮೇಲೆ ಬಾಪ್ದಾದಾ
ಏನನ್ನು ಬಯಸುತ್ತಾರೆಂಬುದನ್ನು ಕೇಳಿದಿರಾ? ಪ್ರತಿಯೊಬ್ಬ ಮಗುವು ಸಹಜಪುರುಷಾರ್ಥಿ ಸಹಜವೂ, ತೀವ್ರವೂ
ಆಗಿರಲಿ. ಧೃಡತೆಯನ್ನು ಉಪಯೋಗಿಸಿಕೊಳ್ಳಿ. ಆಗಲೇಬೇಕಾಗಿದೆ, ನಾವಾಗದಿದ್ದರೆ ಮತ್ತ್ಯಾರು ಆಗುವರು?
ನಾವೇ ಆಗಿದ್ದೆವು, ನಾವೇ ಆಗಿದ್ದೇವೆ ಮತ್ತೆ ಪ್ರತೀ ಕಲ್ಪವೂ ನಾವೇ ಆಗುತ್ತೇವೆ. ಇಷ್ಟು ಧೃಡ
ನಿಶ್ಚಯವನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಳ್ಳಲೇಬೇಕಾಗಿದೆ. ಮಾಡುತ್ತೇವೆ ಎಂದು ಹೇಳಬೇಡಿ
ಮಾಡಲೇಬೇಕಾಗಿದೆ, ಆಗಲೇಬೇಕಾಗಿದೆ, ಆಗಿಯೇ ಇದೆ.
ಬಾಪ್ದಾದಾ ದೇಶ-ವಿದೇಶದ
ಮಕ್ಕಳನ್ನು ನೋಡಿ ಬಹಳ ಖುಷಿಯಾಗಿದ್ದೇವೆ ಆದರೆ ಕೇವಲ ತಾವು ಸನ್ಮುಖದಲ್ಲಿರುವವರನ್ನು
ನೋಡುತ್ತಿಲ್ಲ, ನಾಲ್ಕಾರೂ ಕಡೆಯ ದೇಶ-ವಿದೇಶದ ಮಕ್ಕಳನ್ನು ನೋಡುತ್ತಿದ್ದೇವೆ. ಬಹುತೇಕವಾಗಿ ಅನೇಕ
ಕಡೆಗಳಿಂದ ಜನ್ಮದಿನದ ಶುಭಾಷಯಗಳು ಬಂದಿದೆ, ಪತ್ರಗಳೂ ಬಂದಿದೆ, ಈ-ಮೇಲ್ ಬಂದಿದೆ, ಹೃದಯದ
ಸಂಕಲ್ಪಗಳೂ ತಲುಪಿದೆ. ತಂದೆಯೂ ಸಹ ಮಕ್ಕಳ ಗೀತೆಯನ್ನು ಹಾಡುತ್ತಾರೆ, ಬಾಬಾ, ತಾವು ಚಮತ್ಕಾರ
ಮಾಡಿಬಿಟ್ಟಿರಿ ಎಂದು ಹಾಡುತ್ತೀರಲ್ಲವೆ. ಅಂದಾಗ ತಂದೆಯೂ ಸಹ ಮಧುರ ಮಕ್ಕಳು ಚಮತ್ಕಾರ
ಮಾಡಿಬಿಟ್ಟಿರೆಂದು ಹಾಡುತ್ತಾರೆ. ಬಾಪ್ದಾದಾ ಸದಾ ಹೇಳುತ್ತೇವೆ - ತಾವು ಸನ್ಮುಖದಲ್ಲಿ
ಕುಳಿತಿದ್ದೀರಿ ಆದರೆ ದೂರದಲ್ಲಿರುವವರೂ ಸಹ ಬಾಪ್ದಾದಾರವರ ಹೃದಯದಲ್ಲಿ ಕುಳಿತಿದ್ದಾರೆ. ಇಂದು
ನಾಲ್ಕಾರೂ ಕಡೆಯ ಮಕ್ಕಳ ಸಂಕಲ್ಪದಲ್ಲಿ ಶುಭಾಷಯಗಳು, ಶುಭಾಷಾಯಗಳು, ಶುಭಾಷಯಗಳೇ ಇವೆ.
ಬಾಪ್ದಾದಾರವರ ಕಿವಿಗಳಲ್ಲಿ ಇದೇ ಶಬ್ಧವು ಮೊಳಗುತ್ತಿದೆ ಮತ್ತು ಮನಸ್ಸಿನಲ್ಲಿ ಸಂಕಲ್ಪಗಳು
ತಲುಪುತ್ತಿವೆ. ಈ ಪತ್ರಗಳು ಕೇವಲ ನಿಮಿತ್ತಪತ್ರಗಳಷ್ಟೆ ಆಗಿದೆ, ಇವು ಬಹಳ ದೊಡ್ಡ ವಜ್ರಕ್ಕಿಂತಲೂ
ಹೆಚ್ಚಿನ ಉಡುಗೊರೆಯಾಗಿದೆ. ಎಲ್ಲರೂ ಕೇಳುತ್ತಿದ್ದಾರೆ, ಹರ್ಷಿತರಾಗುತ್ತಿದ್ದಾರೆ ಅಂದಾಗ ಎಲ್ಲರೂ
ತಮ್ಮ ಜನ್ಮದಿನವನ್ನಾಚರಿಸಿದಿರಿ. 2 ವರ್ಷದವರಿರಬಹುದು, 5 ವರ್ಷದವರಿರಬಹುದು, ಕೇವಲ ಒಂದು
ವಾರದವರಿರಬಹುದು ಆದರೆ ಇದು ಯಜ್ಞದ ಸ್ಥಾಪನೆಯ ಜನ್ಮದಿನವಾಗಿದೆ. ಅಂದಮೇಲೆ ಎಲ್ಲಾ ಬ್ರಾಹ್ಮಣರು
ಯಜ್ಞವಾಸಿಗಳಂತೂ ಆಗಿಯೇ ಇದ್ದೀರಿ ಆದ್ದರಿಂದ ಎಲ್ಲಾ ಮಕ್ಕಳಿಗೆ ಬಹಳ, ಬಹಳ ಹೃದಯದ ನೆನಪು,
ಪ್ರೀತಿಯಿದೆ, ಆಶೀರ್ವಾದಗಳೂ ಇದೆ. ಸದಾ ಆಶೀರ್ವಾದಗಳಲ್ಲಿ ಬೆಳೆಯುತ್ತಾ ಇರಿ, ಹಾರುತ್ತಾ ಇರಿ.
ಆಶೀರ್ವಾದವನ್ನು ಕೊಡುವುದು, ತೆಗೆದುಕೊಳ್ಳುವುದು ಸಹಜವಲ್ಲವೆ. ಸಹಜವೆ? ಯಾರು ಸಹಜವೆಂದು
ತಿಳಿಯುತ್ತೀರಿ ಅವರು ಕೈಯನ್ನೆತ್ತಿರಿ. ಬಾವುಟಗಳನ್ನು ಅಲುಗಾಡಿಸಿ. ಆಶೀರ್ವಾದಗಳನ್ನು
ಬಿಟ್ಟುಬಿಡುತ್ತಿಲ್ಲತಾನೆ. ಎಲ್ಲದಕ್ಕಿಂತ ಸಹಜ ಪುರುಷಾರ್ಥವಾಗಿದೆ - ಆಶೀರ್ವಾದವನ್ನು ಕೊಡುವುದು
ಮತ್ತು ಆಶೀರ್ವಾದವನ್ನು ತೆಗೆದುಕೊಳ್ಳುವುದು. ಇದರಲ್ಲಿ ಯೋಗವೂ ಬರುತ್ತದೆ, ಜ್ಞಾನವೂ ಬರುತ್ತದೆ,
ಧಾರಣೆಯೂ ಬಂದುಬಿಡುತ್ತದೆ ಮತ್ತು ಸೇವೆಯೂ ಬಂದುಬಿಡುತ್ತದೆ. ಆಶೀರ್ವಾದವನ್ನು ಕೊಡುವುದು ಮತ್ತು
ತೆಗೆದುಕೊಳ್ಳುವುದರಲ್ಲಿ ಈ ನಾಲ್ಕು ಸಬ್ಜೆಕ್ಟ್ಗಳು ಬಂದುಬಿಡುತ್ತವೆ.
ಅಂದಮೇಲೆ ಡಬಲ್
ವಿದೇಶಿಯರೇ ಆಶೀರ್ವಾದವನ್ನು ಕೊಡುವುದು ಮತ್ತು ತೆಗೆದುಕೊಳ್ಳುವುದು ಸಹಜವಲ್ಲವೆ! ಸಹಜವೇ? ಯಾರು
20 ವರ್ಷದವರು ಬಂದಿದ್ದೀರಿ, ಅವರು ಕೈಯನ್ನೆತ್ತಿರಿ. ತಮಗಂತೂ 20 ವರ್ಷಗಳಾಗಿದೆ ಆದರೆ ಬಾಪ್ದಾದಾ
ತಮ್ಮೆಲ್ಲರಿಗೆ ಪದಮಾಗುಣದಷ್ಟು ಶುಭಾಷಯಗಳನ್ನು ಕೊಡುತ್ತಿದ್ದೀರಿ. ಎಷ್ಟು ದೇಶಗಳಿಂದ ಬಂದಿದ್ದೀರಿ?
(69 ದೇಶಗಳಿಂದ) ಶುಭಾಷಯಗಳು. 69ನೇ ಜನ್ಮದಿನವನ್ನಾಚರಿಸಲು 69 ದೇಶಗಳಿಂದ ಬಂದಿದ್ದೀರಿ. ಎಷ್ಟು
ಚೆನ್ನಾಗಿದೆ! ಬರಲು ಯಾವುದೇ ತೊಂದರೆಯಾಗಲಿಲ್ಲ ತಾನೆ? ಸಹಜವಾಗಿ ಬಂದುಬಿಟ್ಟಿರಲ್ಲವೆ. ಎಲ್ಲಿ
ಪ್ರೀತಿಯಿದೆಯೋ ಅಲ್ಲಿ ಸ್ವಲ್ಪವೂ ಪರಿಶ್ರಮವಿಲ್ಲ ಅಂದಾಗ ಇಂದಿನ ವಿಶೇಷ ಯಾವ ವರದಾನವನ್ನು
ನೆನಪಿಟ್ಟುಕೊಳ್ಳುತ್ತೀರಿ? ಸಹಜ ಪುರುಷಾರ್ಥಿ. ಸಹಜಕಾರ್ಯವನ್ನು ಬಹಳ ಬೇಗಬೇಗನೆ ಮಾಡಲಾಗುತ್ತದೆ.
ಪರಿಶ್ರಮದ ಕೆಲಸವು ಕಷ್ಟವಾಗುವಕಾರಣ ಸಮಯ ಹಿಡಿಸುತ್ತದೆ ಅಂದಾಗ ತಾವೆಲ್ಲರೂ ಯಾರಾಗಿದ್ದೀರಿ? ಸಹಜ
ಪುರುಷಾರ್ಥಿಗಳು. ಇದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ತಮ್ಮ ದೇಶದಲ್ಲಿ ಹೋಗಿ ಮತ್ತೆ
ಪರಿಶ್ರಮದಲ್ಲಿ ತೊಡಗಬೇಡಿ. ಒಂದುವೇಳೆ ಯಾವುದೇ ಪರಿಶ್ರಮದ ಕೆಲಸ ಬಂದರೂ ಸಹ ಹೃದಯದಿಂದ ಬಾಬಾ,
ನನ್ನಬಾಬಾ ಎಂದು ಹೇಳಿ ಆಗ ಪರಿಶ್ರಮವು ಸಮಾಪ್ತಿಯಾಗಿಬಿಡುವುದು. ಒಳ್ಳೆಯದು, ಆಚರಿಸಿದಿರಲ್ಲವೆ!
ತಂದೆಯೂ ಆಚರಿಸಿದೆವು, ತಾವೂ ಜನ್ಮದಿನವನ್ನಾಚರಿಸಿದಿರಿ, ಒಳ್ಳೆಯದು.
ಈಗ ಒಂದು ಸೆಕೆಂಡಿನಲ್ಲಿ
ಆತ್ಮಿಕ ಡ್ರಿಲ್ ಮಾಡುತ್ತೀರಾ? ಮಾಡಲು ಸಾಧ್ಯವಿದೆಯೇ? ಒಳ್ಳೆಯದು.
ನಾಲ್ಕಾರೂ ಕಡೆಯ ಸದಾ
ಉಮ್ಮಂಗ-ಉತ್ಸಾಹದಲ್ಲಿರುವ ಶ್ರೇಷ್ಠ ಮಕ್ಕಳಿಗೆ, ಸದಾ ಸಹಜ ಪುರುಷಾರ್ಥಿ, ಸಂಗಮಯುಗದ ಸರ್ವವರದಾನಿ
ಮಕ್ಕಳಿಗೆ, ಸದಾ ತಂದೆ ಮತ್ತು ನಾನು ಆತ್ಮ - ಇದೇ ಸ್ಮೃತಿಯಿಂದ ನಾನು ಎಂದು ಹೇಳುವಂತಹ, ನಾನಾತ್ಮ
ಸದಾ ಸರ್ವಆತ್ಮಗಳಿಗೆ ತಮ್ಮ ವೃತ್ತಿಯಿಂದ ವಾಯುಮಂಡಲದ ಸಹಯೋಗವನ್ನು ಕೊಡುವಂತಹ ಮಾ||
ಸರ್ವಶಕ್ತಿವಂತ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ, ಆಶೀರ್ವಾದಗಳು, ಶುಭಾಷಯಗಳು ಹಾಗೂ
ನಮಸ್ತೆ.
ಡಬಲ್ ವಿದೇಶಿ ಹಿರಿಯ
ಸಹೋದರಿಯರೊಂದಿಗೆ:-
ಎಲ್ಲರೂ ಬಹಳ
ಪರಿಶ್ರಮಪಟ್ಟಿದ್ದೀರಿ. ಪ್ರತ್ಯೇಕ ಗ್ರೂಪ್ಗಳನ್ನು ಮಾಡಿದ್ದೀರಿ, ಬಹಳ ಒಳ್ಳೆಯ
ಪರಿಶ್ರಮಪಟ್ಟಿದ್ದೀರಿ ಮತ್ತು ಇಲ್ಲಿನ ವಾಯುಮಂಡಲವೂ ಚೆನ್ನಾಗಿದೆ, ಸಂಘಟನಾಶಕ್ತಿಯೂ ಇದೆ
ಆದ್ದರಿಂದ ಎಲ್ಲರಿಗೂ ಒಳ್ಳೆಯ ರಿಫ್ರೆಷ್ಮೆಂಟ್ ಸಿಗುತ್ತದೆ ಮತ್ತು ತಾವು ನಿಮಿತ್ತರಾಗುತ್ತೀರಿ.
ಚೆನ್ನಾಗಿದೆ, ದೂರ-ದೂರದಲ್ಲಿರುತ್ತೀರಲ್ಲವೆ ಆದ್ದರಿಂದ ಇಲ್ಲಿನ ಸಂಘಟನಾ ಶಕ್ತಿಯು ಬಹಳ
ಚೆನ್ನಾಗಿರುತ್ತದೆ. ಇಷ್ಟು ದೊಡ್ಡ ಪರಿವಾರವು ಒಟ್ಟಿಗೆ ಸೇರುತ್ತದೆಯೆಂದರೆ ವಿಶೇಷತೆಯ ಪ್ರಭಾವವು
ಬೀರುತ್ತದೆ. ಒಳ್ಳೆಯ ಯೋಜನೆ ಮಾಡಿದ್ದೀರಿ, ಬಾಪ್ದಾದಾರವರಿಗೆ ಖುಷಿಯಿದೆ, ಎಲ್ಲರ ಸುಗಂಧವನ್ನು
ತಾವು ತೆಗೆದುಕೊಳ್ಳುತ್ತೀರಿ, ಅವರು ಖುಷಿಯಾಗುತ್ತಾರೆ, ತಮಗೆ ಆಶೀರ್ವಾದಗಳು ಸಿಗುತ್ತದೆ.
ಚೆನ್ನಾಗಿದೆ, ಇಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತೀರಲ್ಲವೆ. ಇದು ಬಹಳ ಚೆನ್ನಾಗಿದೆ. ಪರಸ್ಪರ
ಜ್ಞಾನದ ಚರ್ಚೆಯೂ ನಡೆಯುತ್ತದೆ ಮತ್ತು ರಿಫ್ರೆಷ್ಮೆಂಟ್ ಆಗಿಬಿಡುತ್ತದೆ. ಪರಸ್ಪರ ಒಬ್ಬರಿಗೆ
ಇನ್ನೊಬ್ಬರ ವಿಶೇಷತೆಯು ಇಷ್ಟವಾಗುತ್ತದೆ. ಅದನ್ನು ಉಪಯೋಗಿಸುತ್ತಾರೆ. ಈ ಸಂಘಟನೆಯು ಬಹಳ
ಚೆನ್ನಾಗಿರುತ್ತದೆ.
ಸೇವಾಕೇಂದ್ರ
ನಿವಾಸಿಗಳೊಂದಿಗೆ:
(ಬ್ಯಾನರ್ - ಪ್ರೇಮ
ಮತ್ತು ದಯೆಯ ಜ್ಯೋತಿಯನ್ನು ಸದಾ ಬೆಳಗಿಸುತ್ತೇವೆ) ಬಹಳ ಒಳ್ಳೆಯ ಸಂಕಲ್ಪ ಮಾಡಿದ್ದೀರಿ. ತಮ್ಮ ಮೇಲೂ
ದಯಾದೃಷ್ಟಿ, ಜೊತೆಗಾರರ ಮೇಲೂ ದಯಾದೃಷ್ಟಿ ಮತ್ತು ಸರ್ವರ ಮೇಲೂ ದಯಾದೃಷ್ಟಿ. ಈಶ್ವರೀಯ ಪ್ರೀತಿಯು
ಅಯಸ್ಕಾಂತವಾಗಿದೆ ಅಂದಾಗ ತಮ್ಮಬಳಿ ಈಶ್ವರೀಯ ಪ್ರೀತಿಯ ಅಯಸ್ಕಾಂತವಿದೆ. ಯಾವುದೇ ಆತ್ಮನನ್ನು
ಈಶ್ವರೀಯ ಪ್ರೀತಿಯ ಅಯಸ್ಕಾಂತದಿಂದ ತಂದೆಯ ಮಕ್ಕಳನ್ನಾಗಿ ಮಾಡಬಲ್ಲಿರಿ. ಬಾಪ್ದಾದಾ
ಸೇವಾಕೇಂದ್ರಗಳಲ್ಲಿರುವವರಿಗೆ ವಿಶೇಷ ಹೃದಯದ ಆಶೀರ್ವಾದಗಳನ್ನು ಕೊಡುತ್ತಿದ್ದಾರೆ, ತಾವೆಲ್ಲರೂ
ವಿಶ್ವದಲ್ಲಿ ಹೆಸರನ್ನು ಪ್ರಖ್ಯಾತ ಮಾಡಿದ್ದೀರಿ. ಮೂಲೆ-ಮೂಲೆಯಲ್ಲಿ ಬ್ರಹ್ಮಾಕುಮಾರೀಸ್
ಹೆಸರನ್ನಂತೂ ಹರಡಿದ್ದೀರಲ್ಲವೆ! ಮತ್ತು ಬಾಪ್ದಾದಾರವರಿಗೆ ಎಲ್ಲದಕ್ಕಿಂತ ಬಹಳ ಇಷ್ಟವಾಗುವ
ಮಾತೇನೆಂದರೆ ಹೇಗೆ ಡಬಲ್ ವಿದೇಶಿಯರಾಗಿದ್ದೀರೋ ಅದೇ ರೀತಿ ಡಬಲ್ ವೃತ್ತಿಯನ್ನು ಮಾಡುವವರಾಗಿದ್ದೀರಿ.
ಬಹುತೇಕ ಮಂದಿ ಲೌಕಿಕ ವೃತ್ತಿಯನ್ನೂ ಮಾಡುತ್ತಾರೆ ಮತ್ತು ಅಲೌಕಿಕ ವೃತ್ತಿಯನ್ನೂ ನಿಭಾಯಿಸುತ್ತಾರೆ.
ಬಾಪ್ದಾದಾ ನೋಡುತ್ತಾರೆ, ಬಾಪ್ದಾದಾರವರ ಟಿ.ವಿ. ಬಹಳ ದೊಡ್ಡದಾಗಿದೆ. ಇಂತಹ ದೊಡ್ಡ ಟಿ.ವಿ.ಯು
ಇಲ್ಲಿಲ್ಲ ಅಂದಾಗ ಬಾಪ್ದಾದಾ ನೋಡುತ್ತಾರೆ, ಹೇಗೆ ಬೇಗಬೇಗನೆ ಮುರುಳಿಯನ್ನು ಓದುತ್ತಾರೆ,
ನಿಂತುಕೊಂಡೇ ತಿಂಡಿಯನ್ನು ತಿನ್ನುತ್ತಾರೆ. ಸಮಯದಲ್ಲಿ ತಮ್ಮ ಕೆಲಸದಲ್ಲಿಯೂ ತೊಡಗುತ್ತಾರೆ,
ಚಮತ್ಕಾರ ಮಾಡುತ್ತಾರೆ. ಬಾಪ್ದಾದಾ ನೋಡಿ, ನೋಡಿ ಹೃದಯದ ಪ್ರೀತಿಯನ್ನು ಕೊಡುತ್ತಾರೆ. ಬಹಳ
ಒಳ್ಳೆಯದು, ಸೇವೆಗೆ ನಿಮಿತ್ತರಾಗಿದ್ದೀರಿ ಮತ್ತು ನಿಮಿತ್ತರಾಗುವ ಉಡುಗೊರೆಯಾಗಿ ಸದಾ ತಂದೆಯು
ವಿಶೇಷ ದೃಷ್ಟಿಯನ್ನು ಕೊಡುತ್ತಿರುತ್ತಾರೆ. ಬಹಳ ಒಳ್ಳೆಯ ಲಕ್ಷ್ಯವನ್ನಿಟ್ಟುಕೊಂಡಿದ್ದೀರಿ,
ಒಳ್ಳೆಯವರಾಗಿದ್ದೀರಿ, ಒಳ್ಳೆಯವರಾಗಿರುತ್ತೀರಿ, ಒಳ್ಳೆಯವರನ್ನಾಗಿ ಮಾಡುತ್ತೀರಿ. ಒಳ್ಳೆಯದು.
ವರದಾನ:
ಸರ್ವ
ಖಜಾನೆಗಳನ್ನು ಮಿತವ್ಯಯದಿಂದ ಆಯವ್ಯಯ (ಬಡ್ಜೆಟ್) ಮಾಡುವಂತಹ ಸೂಕ್ಷ್ಮ ಪುರುಷಾರ್ಥಿ ಭವ
ಹೇಗೆ ಲೌಕಿಕ
ರೀತಿಯಲ್ಲಿಯೂ ಒಂದುವೇಳೆ ಮಿತವ್ಯಯವಿಲ್ಲದೆ ಮನೆ ನಡೆಸಿದರೆ ಅದು ಸರಿಯಾದ ರೀತಿಯಲ್ಲಿ
ನಡೆಯುವುದಿಲ್ಲ, ಅದೇ ರೀತಿ ಒಂದುವೇಳೆ ನಿಮಿತ್ತರಾಗಿರುವಂತಹ ಮಕ್ಕಳು ಮಿತವ್ಯಯಿ ಆಗಿರದಿದ್ದರೆ
ಅವರ ಸೇವಾಕೇಂದ್ರವೂ ಸರಿಯಾಗಿ ನಡೆಯುವುದಿಲ್ಲ. ಅದಾಗಿದೆ ಹದ್ದಿನ ಪ್ರವೃತ್ತಿ. ಇದಾಗಿದೆ
ಬೇಹದ್ದಿನ ಪ್ರವೃತ್ತಿ. ಅಂದಾಗ ಸಂಕಲ್ಪ. ಮಾತು ಮತ್ತು ಶಕ್ತಿಗಳಲ್ಲಿ ಏನೇನು ಅಧಿಕವಾಗಿ ಖರ್ಚು
ಮಾಡಿರುವೆ? ಎಂದು ಚೆಕ್ ಮಾಡಿಕೊಳ್ಳುತ್ತಿರಿ. ಯಾರು ಸರ್ವ ಖಜಾನೆಗಳನ್ನು ಮಿತವ್ಯಯದ ಆಯವ್ಯಯ ಮಾಡಿ
ಅದರ ಅನುಸಾರ ನಡೆಯುತ್ತಾರೆ ಅವರನ್ನೇ ಸೂಕ್ಷ್ಮ ಪುರುಷಾರ್ಥಿಗಳು ಎಂದು ಕರೆಯಲಾಗುತ್ತದೆ. ಅವರ
ಸಂಕಲ್ಪ, ಮಾತು. ಕರ್ಮ ಹಾಗೂ ಜ್ಞಾನದ ಶಕ್ತಿಗಳು ಯಾವುದೂ ವ್ಯರ್ಥವಾಗಿ ಹೋಗುವುದಿಲ್ಲ.
ಸ್ಲೋಗನ್:
ಸ್ನೇಹದ
ಖಜಾನೆಯಿಂದ ಮಾಲಮಾಲ್ ಆಗಿ ಎಲ್ಲರಿಗೂ ಸ್ನೇಹ ಕೊಡಿ ಮತ್ತು ಸ್ನೇಹ ಪಡೆಯಿರಿ.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ಪವಿತ್ರತೆಯ ಶಕ್ತಿ
ಪರಮಪೂಜ್ಯರನ್ನಾಗಿ ಮಾಡುತ್ತದೆ. ಪವಿತ್ರತೆಯ ಶಕ್ತಿಯಿಂದ ಈ ಪತಿತ ಪ್ರಪಂಚವನ್ನು ಪರಿವರ್ತನೆ
ಮಾಡುತ್ತೀರಿ. ಪವಿತ್ರತೆಯ ಶಕ್ತಿ ವಿಕಾರಗಳ ಅಗ್ನಿಯಲ್ಲಿ ಸುಡುತ್ತಿರುವ ಆತ್ಮರನ್ನು ಶೀತಲರನ್ನಾಗಿ
ಮಾಡುತ್ತದೆ. ಆತ್ಮವನ್ನು ಅನೇಕ ಜನ್ಮಗಳ ವಿಕಾರಗಳ ಬಂಧನದಿಂದ ಬಿಡಿಸುತ್ತದೆ. ಪವಿತ್ರತೆಯ ಆಧಾರದ
ಮೇಲೆ ದ್ವಾಪರದಿಂದ ಈ ಸೃಷ್ಟಿಯು ನಿಂತಿದೆ. ಇದರ ಮಹತ್ವವನ್ನು ತಿಳಿದು ಪವಿತ್ರತೆಯ ಲೈಟ್ನ
ಕಿರೀಟವನ್ನು ಧಾರಣೆ ಮಾಡಿ.