11.07.25         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ಮೊಟ್ಟಮೊದಲು ಎಲ್ಲರಿಗೂ ತಂದೆಯ ಯಥಾರ್ಥ ಪರಿಚಯವನ್ನು ಕೊಟ್ಟು ಗೀತೆಯ ಭಗವಂತನನ್ನು ಸಿದ್ಧ ಮಾಡಿ ಆಗ ನಿಮ್ಮ ಹೆಸರು ಪ್ರಖ್ಯಾತವಾಗುವುದು

ಪ್ರಶ್ನೆ:
ನೀವು ಮಕ್ಕಳು ನಾಲ್ಕೂ ಯುಗಗಳಲ್ಲಿ ಚಕ್ರವನ್ನು ಸುತ್ತಿದ್ದೀರಿ, ಅದರ ಪದ್ಧತಿಯು ಭಕ್ತಿಯಲ್ಲಿ ನಡೆಯುತ್ತಿದೆ- ಅದು ಯಾವುದು?

ಉತ್ತರ:
ನೀವು ನಾಲ್ಕೂಯುಗಗಳಲ್ಲಿ ಸುತ್ತಿದ್ದೀರಿ ಅದನ್ನು ಭಕ್ತಿಯಲ್ಲಿ ಎಲ್ಲಾ ಶಾಸ್ತ್ರಗಳ ಚಿತ್ರಗಳು ಮುಂತಾದವುಗಳನ್ನು ಗಾಡಿಯಲ್ಲಿ ಇಟ್ಟುಕೊಂಡು ನಾಲ್ಕಾರುಕಡೆ ಮೆರವಣಿಗೆ ಮಾಡುತ್ತಾರೆ. ಮತ್ತೆ ಮನೆಯಲ್ಲಿ ಬಂದು ಮಲಗಿಸಿಬಿಡುತ್ತಾರೆ. ನೀವು ಬ್ರಾಹ್ಮಣರು, ದೇವತೆಗಳು, ಕ್ಷತ್ರಿಯರು.....ಆಗುತ್ತೀರಿ. ಈ ಚಕ್ರದ ಬದಲು ಅವರು ಪರಿಕ್ರಮಣ ಮಾಡಿಸುವುದನ್ನು ಆರಂಭಿಸುತ್ತಾರೆ. ಇದೂ ಸಹ ಪದ್ಧತಿಯಾಗಿದೆ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ಯಾರಿಗಾದರೂ ತಿಳಿಸುವಾಗ ಮೊದಲು ತಂದೆಯು ಒಬ್ಬರೇ ಆಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿ. ತಂದೆಯು ಒಬ್ಬರೇ ಅಥವಾ ಅನೇಕರೆಂದು ಅವರು ಕೇಳುವಂತಾಗಬಾರದು. ಈ ರೀತಿಯಂತೂ ಅನೇಕರು ಹೇಳಿಬಿಡುತ್ತಾರೆ. ತಂದೆಯು ರಚಯಿತ, ಪರಮಪಿತ ಪರಮಾತ್ಮನು ಒಬ್ಬರೇ ಆಗಿದ್ದಾರೆ, ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ ಎಂಬುದನ್ನು ತಿಳಿಸಲೇಬೇಕಾಗಿದೆ. ಮೊಟ್ಟಮೊದಲು ಅವರು ಬಿಂದುವಾಗಿದ್ದಾರೆಂದು ಹೇಳಬಾರದು. ಇದರಲ್ಲಿ ಅವರು ತಬ್ಬಿಬ್ಬಾಗುತ್ತಾರೆ ಆದ್ದರಿಂದ ಅವರಿಗೆ ಮೊಟ್ಟಮೊದಲಿಗೆ ಇದನ್ನು ಚೆನ್ನಾಗಿ ತಿಳಿಸಿಕೊಡಿ- ಲೌಕಿಕ ಮತ್ತು ಪಾರಲೌಕಿಕ ಇಬ್ಬರು ತಂದೆಯರಿದ್ದಾರೆ. ಲೌಕಿಕ ತಂದೆಯರಂತೂ ಪ್ರತಿಯೊಬ್ಬರಿಗೆ ಇದ್ದೇ ಇರುತ್ತಾರೆ ಆದರೆ ಪಾರಲೌಕಿಕ ತಂದೆಗೆ ಕೆಲವರು ಖುದಾ, ಕೆಲವರು ಗಾಡ್ ಎಂದು ಹೇಳುತ್ತಾರೆ. ಇರುವುದಂತೂ ಒಬ್ಬರೇ ತಂದೆ, ಎಲ್ಲರೂ ಒಬ್ಬರನ್ನೇ ನೆನಪು ಮಾಡುತ್ತಾರೆ. ಮೊಟ್ಟಮೊದಲು ಇದನ್ನು ಪಕ್ಕಾ ನಿಶ್ಚಯ ಮಾಡಿಸಿ- ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಅವರು ಇಲ್ಲಿ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬರುತ್ತಾರೆ. ಇದಕ್ಕೆ ಶಿವಜಯಂತಿಯೆಂದು ಹೇಳುತ್ತಾರೆ. ಇದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಸ್ವರ್ಗದ ರಚಯಿತನು ಭಾರತದಲ್ಲಿಯೇ ಸ್ವರ್ಗವನ್ನು ರಚಿಸುತ್ತಾರೆ, ಅಲ್ಲಿ ದೇವಿ-ದೇವತೆಗಳ ರಾಜ್ಯವೇ ಇರುತ್ತದೆ ಅಂದಾಗ ಮೊಟ್ಟಮೊದಲು ತಂದೆಯ ಪರಿಚಯವನ್ನೇ ಕೊಡಬೇಕಾಗಿದೆ. ಅವರ ಹೆಸರಾಗಿದೆ- ಶಿವ. ಗೀತೆಯಲ್ಲಿ ಭಗವಾನುವಾಚ ಇದೆಯಲ್ಲವೆ. ಮೊಟ್ಟಮೊದಲು ಈ ನಿಶ್ಚಯ ಮಾಡಿಸಿ ಬರೆಸಿಕೊಳ್ಳಬೇಕು. ಗೀತೆಯಲ್ಲಿ ಭಗವಾನುವಾಚವಿದೆ- ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ ಅರ್ಥಾತ್ ನರನಿಂದ ನಾರಾಯಣನನ್ನಾಗಿ ಮಾಡುತ್ತೇನೆ. ಈ ರೀತಿ ಯಾರು ಮಾಡಬಲ್ಲರು? ಇದನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ಭಗವಂತನು ಯಾರು ಎಂಬುದನ್ನೂ ಸಹ ತಿಳಿಸಿಕೊಡಬೇಕಾಗಿದೆ. ಸತ್ಯಯುಗದಲ್ಲಿ ಮೊದಲ ನಂಬರಿನಲ್ಲಿ ಯಾವ ಲಕ್ಷ್ಮೀ-ನಾರಾಯಣರಿದ್ದಾರೆಯೋ ಅವಶ್ಯವಾಗಿ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ನಂತರ ಅನ್ಯಧರ್ಮದವರು ಬರುತ್ತಾರೆ. ಅವರದು ಇಷ್ಟೊಂದು ಜನ್ಮಗಳಿರುವುದಿಲ್ಲ. ಮೊದಲು ಬರುವವರಿಗೆ 84 ಜನ್ಮಗಳಿವೆ. ಸತ್ಯಯುಗದಲ್ಲಂತೂ ಏನನ್ನೂ ಕಲಿಯುವುದಿಲ್ಲ, ಅವಶ್ಯವಾಗಿ ಸಂಗಮಯುಗದಲ್ಲಿಯೇ ಕಲಿಯುತ್ತಾರೆ ಅಂದಾಗ ಮೊಟ್ಟಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ. ಹೇಗೆ ಆತ್ಮವು ಸ್ಥೂಲಕಣ್ಣುಗಳಿಗೆ ಕಾಣುವುದಿಲ್ಲ ಅದನ್ನು ಅರಿತುಕೊಳ್ಳಬಹುದಾಗಿದೆ ಹಾಗೆಯೇ ಪರಮಾತ್ಮನನ್ನೂ ಸಹ ನೋಡಲು ಸಾಧ್ಯವಿಲ್ಲ. ಅವರು ನಾವಾತ್ಮಗಳ ತಂದೆಯಾಗಿದ್ದಾರೆ ಎಂಬುದನ್ನು ಬುದ್ಧಿಯಿಂದ ತಿಳಿದುಕೊಳ್ಳುತ್ತೀರಿ. ಅವರಿಗೆ ಪರಮ ಆತ್ಮನೆಂದು ಹೇಳಲಾಗುತ್ತದೆ. ಅವರು ಸದಾ ಪಾವನನಾಗಿದ್ದಾರೆ, ಅವರೇ ಬಂದು ಪತಿತ ಪ್ರಪಂಚವನ್ನು ಪಾವನರನ್ನಾಗಿ ಮಾಡಬೇಕಾಗುತ್ತದೆ. ಆದ್ದರಿಂದ ಮೊದಲು ತಂದೆಯು ಒಬ್ಬರೇ ಎಂಬುದನ್ನು ಸಿದ್ಧ ಮಾಡಿ ತಿಳಿಸಿದಾಗ ಗೀತೆಯ ಭಗವಂತನು ಕೃಷ್ಣನಲ್ಲವೆಂದು ಸಿದ್ಧವಾಗುತ್ತದೆ. ನೀವು ಮಕ್ಕಳು ಈ ಮಾತನ್ನು ಸಿದ್ಧಮಾಡಿ ತಿಳಿಸಬೇಕು- ಒಬ್ಬ ತಂದೆಗೆ ಸತ್ಯವೆಂದು ಹೇಳಲಾಗುತ್ತದೆ (ಗಾಡ್ ಈಜ್ ಟ್ರೂಥ್) ಉಳಿದ ಕರ್ಮಕಾಂಡ ಹಾಗೂ ತೀರ್ಥಯಾತ್ರೆಗಳ ಮಾತುಗಳೆಲ್ಲವೂ ಭಕ್ತಿಯ ಶಾಸ್ತ್ರಗಳಲ್ಲಿದೆ. ಜ್ಞಾನದಲ್ಲಿ ಇವುಗಳ ವರ್ಣನೆಯಿಲ್ಲ. ಇವುಗಳಲ್ಲಿ ಯಾವ ಶಾಸ್ತ್ರವೂ ಇಲ್ಲ. ತಂದೆಯು ಬಂದು ಸಂಪೂರ್ಣ ರಹಸ್ಯವನ್ನು ತಿಳಿಸಿಕೊಡುತ್ತಾರೆ. ಮೊಟ್ಟಮೊದಲು ಭಗವಂತನು ನಿರಾಕಾರನಾಗಿದ್ದಾರೆ, ಸಾಕಾರಿಯಲ್ಲ ಎಂಬ ಮಾತಿನ ಮೇಲೆ ನೀವು ವಿಜಯಿಗಳಾಗಬೇಕಾಗಿದೆ. ಪರಮಪಿತ ಪರಮಾತ್ಮ ಶಿವಭಗವಾನುವಾಚ, ಜ್ಞಾನಸಾಗರ ಎಲ್ಲರ ತಂದೆಯು ಅವರೊಬ್ಬರೇ ಆಗಿದ್ದಾರೆ. ಶ್ರೀಕೃಷ್ಣನು ಎಲ್ಲರಿಗೂ ತಂದೆಯಾಗಲು ಸಾಧ್ಯವಿಲ್ಲ ಅಥವಾ ದೇಹದ ಎಲ್ಲಾ ಧರ್ಮಗಳನ್ನು ತ್ಯಜಿಸಿ ನನ್ನೊಬ್ಬನನ್ನೇ ನೆನಪು ಮಾಡಿ ಎಂಬ ಮಾತನ್ನು ಹೇಳಲು ಸಾಧ್ಯವಿಲ್ಲ. ಇದು ಬಹಳ ಸಹಜಮಾತಾಗಿದೆ ಆದರೆ ಮನುಷ್ಯರು ಶಾಸ್ತ್ರ ಇತ್ಯಾದಿಗಳನ್ನು ಓದಿ ಭಕ್ತಿಯಲ್ಲಿ ಪಕ್ಕಾ ಆಗಿಬಿಟ್ಟಿದ್ದಾರೆ. ಇತ್ತೀಚೆಗಂತೂ ಶಾಸ್ತ್ರಗಳು ಇತ್ಯಾದಿಗಳನ್ನು ಗಾಡಿಯಲ್ಲಿಟ್ಟುಕೊಂಡು ಪರಿಕ್ರಮಣ ಮಾಡುತ್ತಾರೆ. ಚಿತ್ರಗಳನ್ನು, ಗ್ರಂಥಗಳನ್ನೂ ಸಹ ಇಟ್ಟುಕೊಂಡು ಪರಿಕ್ರಮಣ ಮಾಡುತ್ತಾರೆ ನಂತರ ಮನೆಗೆ ಹೋಗಿ ಮಲಗಿಸಿಬಿಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾವು ದೇವತೆಗಳಿಂದ ಕ್ಷತ್ರಿಯರು, ವೈಶ್ಯ, ಶೂದ್ರರಾಗುತ್ತೇವೆ, ಪೂರ್ಣ ಚಕ್ರವನ್ನು ಸುತ್ತುತ್ತೇವೆ, ಇದಕ್ಕೆ ಅವರು ಚಕ್ರದ ಬದಲು ಚಿತ್ರಗಳನ್ನು ಪರಿಕ್ರಮಣ ಮಾಡಿಸಿ ಮನೆಯಲ್ಲಿಟ್ಟುಬಿಡುತ್ತಾರೆ. ಅದಕ್ಕೆ ಒಂದುದಿನವು ನಿಗಧಿಪಡಿಸಿರುತ್ತಾರೆ, ಆ ಸಮಯದಲ್ಲಿಯೇ ಮೆರವಣಿಗೆ ಮಾಡುತ್ತಾರೆ ಅಂದಾಗ ಮೊಟ್ಟಮೊದಲಿಗೆ ಈ ಮಾತನ್ನು ಸಿದ್ಧಮಾಡಿ ತಿಳಿಸಬೇಕು- ಶ್ರೀಕೃಷ್ಣ ಭಗವಾನುವಾಚವಲ್ಲ, ಶಿವಭಗವಾನುವಾಚ ಎಂದಾಗಿದೆ. ಶಿವನೇ ಪುನರ್ಜನ್ಮರಹಿತ ಆಗಿದ್ದಾನೆ, ಅವರು ಅವಶ್ಯವಾಗಿ ಬರುತ್ತಾರೆ. ಆದರೆ ಅವರದು ದಿವ್ಯಜನ್ಮವಾಗಿದೆ. ಭಗೀರಥನಲ್ಲಿ ಬಂದು ಸವಾರಿ ಮಾಡುತ್ತಾರೆ. ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ, ಈ ಜ್ಞಾನವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ತಮ್ಮ ಪರಿಚಯವನ್ನು ಕೊಡಬೇಕಾಗಿದೆ. ಮುಖ್ಯವಾದ ಮಾತೇ ತಂದೆಯ ಪರಿಚಯ ಕೊಡುವುದಾಗಿದೆ. ಅವರೇ ಗೀತೆಯ ಭಗವಂತನಾಗಿದ್ದಾರೆ, ಈ ಮಾತನ್ನು ನೀವು ಸಿದ್ಧಮಾಡಿ ತಿಳಿಸುತ್ತೀರೆಂದರೆ ನಿಮ್ಮ ಹೆಸರು ಬಹಳ ಪ್ರಖ್ಯಾತವಾಗುವುದು ಆದ್ದರಿಂದ ಇಂತಹ ಪತ್ರಿಕೆಗಳನ್ನು ಮುದ್ರಣ ಮಾಡಿಸಿ ಅದರಲ್ಲಿ ಚಿತ್ರವನ್ನೂ ಹಾಕಿಸಿ. ವಿಮಾನದಿಂದ ಕೆಳಗೆ ಹಾಕಬೇಕು. ತಂದೆಯು ಮುಖ್ಯಮುಖ್ಯವಾದ ಮಾತುಗಳನ್ನು ತಿಳಿಸುತ್ತಾ ಇರುತ್ತಾರೆ. ನಿಮ್ಮದು ಮುಖ್ಯವಾಗಿ ಒಂದುಮಾತಿನಲ್ಲಿ ಜಯವಾದರೆ ಸಾಕು, ನೀವು ವಿಜಯಿಗಳಾದಿರಿ. ಇದರಲ್ಲಿ ನಿಮ್ಮ ಹೆಸರು ಬಹಳ ಪ್ರಸಿದ್ಧವಾಗಿದೆ. ಇದರಲ್ಲಿ ಯಾವುದೇ ಏರುಪೇರು ಮಾಡುವುದಿಲ್ಲ ಏಕೆಂದರೆ ಇದು ಬಹಳ ಸ್ಪಷ್ಟವಾದ ಮಾತಾಗಿದೆ. ತಂದೆಯು ತಿಳಿಸುತ್ತಾರೆ- ನಾನು ಸರ್ವವ್ಯಾಪಿಯಾಗಲು ಹೇಗೆ ಸಾಧ್ಯ! ನಾನಂತೂ ಬಂದು ಮಕ್ಕಳಿಗೆ ಜ್ಞಾನವನ್ನು ತಿಳಿಸುತ್ತೇನೆ. ಪತಿತ-ಪಾವನ ಬನ್ನಿ, ರಚಯಿತ ಮತ್ತು ರಚನೆಯ ಜ್ಞಾನವನ್ನು ತಿಳಿಸಿ ಎಂದು ಕರೆಯುತ್ತಾರೆ. ತಂದೆಯ ಮಹಿಮೆಯೇ ಬೇರೆ, ಕೃಷ್ಣನ ಮಹಿಮೆಯೇ ಬೇರೆಯಾಗಿದೆ. ಈ ರೀತಿಯಲ್ಲ ಶಿವತಂದೆಯು ಬಂದು ಕೃಷ್ಣ ಅಥವಾ ನಾರಾಯಣನಾಗುತ್ತಾರೆ, 84 ಜನ್ಮಗಳಲ್ಲಿ ಬರುತ್ತಾರೆ. ಇದು ಸಾಧ್ಯವೇ ಇಲ್ಲ. ಅನ್ಯರಿಗೆ ತಿಳಿಸಲು ನಿಮ್ಮ ಬುದ್ಧಿಯಲ್ಲಿ ಎಲ್ಲಾ ಮಾತುಗಳು ಇರಬೇಕು. ಮುಖ್ಯವಾದುದು ಗೀತೆಯಾಗಿದೆ, ಭಗವಾನುವಾಚವಿದೆ ಅಂದಮೇಲೆ ಅವಶ್ಯವಾಗಿ ಭಗವಂತನಿಗೆ ಮುಖವು ಬೇಕಲ್ಲವೆ. ಭಗವಂತನಂತು ನಿರಾಕಾರನಾಗಿದ್ದಾರೆ, ಆತ್ಮವು ಮುಖ (ಬಾಯಿ) ವಿಲ್ಲದೆ ಮಾತನಾಡುವುದು ಹೇಗೆ? ಆದ್ದರಿಂದಲೇ ತಂದೆಯು ತಿಳಿಸುತ್ತಾರೆ- ನಾನು ಸಾಧಾರಣ ತನುವಿನ ಆಧಾರವನ್ನು ತೆಗೆದುಕೊಳ್ಳುತ್ತೇನೆ. ಯಾರು ಮೊದಲು ಲಕ್ಷ್ಮೀ-ನಾರಾಯಣನಾಗುತ್ತಾರೆಯೋ ಅವರೇ 84 ಜನ್ಮಗಳನ್ನೂ ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಅಂತಿಮ ಜನ್ಮದಲ್ಲಿ ಬರುತ್ತಾರೆ, ಆಗ ಮತ್ತೆ ಅವರ ತನುವಿನಲ್ಲಿಯೇ ಬರುತ್ತೇನೆ. ಕೃಷ್ಣನ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ತಂದೆಯು ಬರುತ್ತಾರೆ. ಈ ಮಾತುಗಳನ್ನು ವಿಚಾರ ಸಾಗರ ಮಂಥನ ಮಾಡಿ. ಯಾರಿಗೆ ಹೇಗೆ ತಿಳಿಸಿಕೊಡುವುದು ಎಂಬ ಯುಕ್ತಿಗಳನ್ನು ರಚಿಸಿ ಆಗ ಒಂದೇಮಾತಿನಲ್ಲಿ ನಿಮ್ಮ ಹೆಸರು ಪ್ರಖ್ಯಾತವಾಗುವುದು. ರಚಯಿತ ತಂದೆಯ ಬಗ್ಗೆ ಎಲ್ಲರಿಗೂ ಅರ್ಥವಾಗುವುದು. ಮುಂದೆ ಹೋದಂತೆ ನಿಮ್ಮಬಳಿ ಅನೇಕರು ಬರುತ್ತಾರೆ. ಬಂದು ಇಲ್ಲಿ ಭಾಷಣ ಮಾಡಿ ಎಂದು ಅನೇಕರು ನಿಮಗೆ ನಿಮಂತ್ರಣ ಕೊಡುತ್ತಾರೆ ಆದ್ದರಿಂದ ಮೊಟ್ಟಮೊದಲಿಗೆ ತಂದೆಯ ಪರಿಚಯವನ್ನು ಸಿದ್ಧಮಾಡಿ ತಿಳಿಸಿ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾವು ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ತಂದೆಯು ಪ್ರತೀ 5000 ವರ್ಷಗಳ ನಂತರ ಭಾರತದಲ್ಲಿಯೇ ಭಾಗ್ಯಶಾಲಿ ರಥದಲ್ಲಿ ಬರುತ್ತಾರೆ. ಇವರು ಸೌಭಾಗ್ಯಶಾಲಿ ರಥವಾಗಿದ್ದಾರೆ. ಯಾವ ರಥದಲ್ಲಿ ಭಗವಂತನು ಬಂದು ಕುಳಿತುಕೊಳ್ಳುತ್ತಾರೆ, ಇದು ಕಡಿಮೆ ಮಾತೇನು! ಭಗವಂತನೇ ಇವರಲ್ಲಿ ಕುಳಿತು ಮಕ್ಕಳಿಗೆ ತಿಳಿಸಿಕೊಡುತ್ತಾರೆ- ನಾನು ಬಹಳ ಜನ್ಮಗಳ ಅಂತಿಮದಲ್ಲಿ ಇವರಲ್ಲಿ ಪ್ರವೇಶ ಮಾಡುತ್ತೇನೆ, ಶ್ರೀಕೃಷ್ಣನ ಆತ್ಮವು ರಥವಲ್ಲವೆ, ಅವರೇನೂ ಕೃಷ್ಣನಲ್ಲ ಆದರೆ ಕೃಷ್ಣನ ಆತ್ಮದ ಬಹಳ ಜನ್ಮಗಳ ಅಂತಿಮ ಶರೀರವಾಗಿದೆ. ಪ್ರತೀ ಜನ್ಮದಲ್ಲಿ ನಾಮ, ರೂಪ ಎಲ್ಲವೂ ಬದಲಾಗುತ್ತಿರುತ್ತದೆ. ಬಹಳ ಜನ್ಮಗಳ ಅಂತಿಮದಲ್ಲಿ ಯಾರಲ್ಲಿ ಪ್ರವೇಶ ಮಾಡುತ್ತೇನೆಯೋ ಅವರೇ ನಂತರ ಕೃಷ್ಣನಾಗುತ್ತಾರೆ. ಸಂಗಮದಲ್ಲಿಯೂ ಬರುತ್ತಾರೆ. ನಾವೂ ಸಹ ತಂದೆಯ ಮಕ್ಕಳಾಗಿ ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ. ತಂದೆಯೇ ಓದಿಸಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಮತ್ತ್ಯಾವುದೇ ಕಷ್ಟದ ಮಾತಿಲ್ಲ. ತಂದೆಯು ಕೇವಲ ಇಷ್ಟನ್ನೇ ತಿಳಿಸುತ್ತಾರೆ- ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಅಂದಮೇಲೆ ಹೇಗೆ-ಹೇಗೆ ಬರೆಯುವುದು ಎಂದು ಚೆನ್ನಾಗಿ ವಿಚಾರ ಮಾಡಬೇಕು. ಇದೇ ಮುಖ್ಯವಾದ ತಪ್ಪಾಗಿದೆ. ಇದರ ಕಾರಣವೇ ಭಾರತವು ಅಸತ್ಯವಂತ, ಧರ್ಮಭ್ರಷ್ಟ, ಬಡಭಾರತವಾಗಿದೆ. ತಂದೆಯು ಪುನಃ ಬಂದು ರಾಜಯೋಗವನ್ನು ಕಲಿಸುತ್ತಾರೆ. ಭಾರತವನ್ನು ಸತ್ಯವಂತ, ಧನಿಕನನ್ನಾಗಿ ಮಾಡುತ್ತಾರೆ. ಇಡೀ ಪ್ರಪಂಚವನ್ನೇ ಸತ್ಯಪ್ರಪಂಚವನ್ನಾಗಿ ಮಾಡುತ್ತಾರೆ, ಆ ಸಮಯದಲ್ಲಿ ಇಡೀ ವಿಶ್ವದ ಮಾಲೀಕರು ನೀವೇ ಆಗಿಬಿಡುತ್ತೀರಿ. ಆಯುಷ್ಯವಾನ್ಭವ, ಸಂಪತ್ತಿವಾನ್ಭವ ಎಂದು ಹೇಳುತ್ತಾರಲ್ಲವೆ. ತಂದೆಯು ಸದಾ ಜೀವಿಸಿಯೇ ಇರಿ ಎಂದು ಆಶೀರ್ವಾದವನ್ನು ಕೊಡುವುದಿಲ್ಲ, ಆರಾಮವಾಗಿ ಇರಿ ಎಂದು ಸಾಧುಗಳು ಹೇಳುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಅಮರರು ಅವಶ್ಯವಾಗಿ ಅಮರಪುರಿಯಲ್ಲಿ ಇರುತ್ತಾರೆ. ಮೃತ್ಯುಲೋಕದಲ್ಲಿ ಅಮರರೆಂದು ಹೇಗೆ ಹೇಳುತ್ತೀರಿ? ಅಂದಾಗ ಮಕ್ಕಳು ಪರಸ್ಪರ ಮೀಟಿಂಗ್ ಮಾಡಿದಾಗ ತಂದೆಯಿಂದ ಸಲಹೆಯನ್ನು ಕೇಳುತ್ತಾರೆ. ತಂದೆಯು ಮುಂಚಿತವಾಗಿಯೇ ಸಲಹೆ ಕೊಡುತ್ತಾರೆ. ಎಲ್ಲರೂ ಭಲೆ ಒಟ್ಟಿಗೆ ಇದ್ದರೂ ಪರವಾಗಿಲ್ಲ, ತಮ್ಮ-ತಮ್ಮ ಸಲಹೆಗಳನ್ನು ಬರೆದು ಕಳುಹಿಸಿ. ಸಲಹೆಯನ್ನು ಮುರುಳಿಯಲ್ಲಿ ಬರೆಯುವುದರಿಂದ ಎಲ್ಲರ ಬಳಿ ತಲುಪುತ್ತದೆ. 2-3 ಸಾವಿರರೂಪಾಯಿಗಳ ಖರ್ಚು ಉಳಿಯುತ್ತದೆ. ಈ 2-3 ಸಾವಿರದಿಂದ 2-3 ಸೇವಾಕೇಂದ್ರವನ್ನು ತೆರೆಯಬಹುದು. ಚಿತ್ರ ಇತ್ಯಾದಿಗಳನ್ನು ತೆಗೆದುಕೊಂಡು ಹಳ್ಳಿ-ಹಳ್ಳಿಗೆ ಹೋಗಬೇಕು.

ನೀವು ಮಕ್ಕಳಿಗೆ ಸೂಕ್ಷ್ಮವತನದ ಮಾತುಗಳಲ್ಲಿ ಹೆಚ್ಚಿನ ಆಸಕ್ತಿಯಿರಬಾರದು. ಬ್ರಹ್ಮಾ-ವಿಷ್ಣು-ಶಂಕರನ ಚಿತ್ರದಲ್ಲಿ ಇದರ ಬಗ್ಗೆ ಸ್ವಲ್ಪ ತಿಳಿಸಿಕೊಡಬಹುದು. ಇವರದು ಮಧ್ಯದಲ್ಲಿ ಸ್ವಲ್ಪವೇ ಪಾತ್ರವಿದೆ. ನೀವು ಹೋಗುತ್ತೀರಿ, ಮಿಲನ ಮಾಡುತ್ತೀರಿ ಬಾಕಿ ಮತ್ತೇನೂ ಇಲ್ಲ ಆದ್ದರಿಂದ ಇದರಲ್ಲಿ ಹೆಚ್ಚಿನ ಆಸಕ್ತಿಯನ್ನು ತೆಗೆದುಕೊಳ್ಳಬಾರದು. ಇಲ್ಲಿ ಆತ್ಮವನ್ನು ಕರೆಸಲಾಗುತ್ತದೆ, ಅವರನ್ನು ತೋರಿಸುತ್ತಾರೆ. ಕೆಲವರಂತೂ ಬಂದು ಅಳುತ್ತಾರೆ, ಇನ್ನೂ ಕೆಲವರು ಪ್ರೀತಿಯಿಂದ ಮಿಲನ ಮಾಡುತ್ತಾರೆ, ಕೆಲವರು ದುಃಖದಿಂದ ಕಣ್ಣೀರನ್ನು ಸುರಿಸುತ್ತಾರೆ. ಇದೆಲ್ಲವೂ ನಾಟಕದಲ್ಲಿ ಪಾತ್ರವಿದೆ. ಇದಕ್ಕೆ ವಾರ್ತಾಲಾಪವೆಂದು ಹೇಳಬಹುದು. ಅವರಂತೂ ಬ್ರಾಹ್ಮಣರಲ್ಲಿ ಅನ್ಯರ ಆತ್ಮವನ್ನು ಕರೆಸುತ್ತಾರೆ, ಮತ್ತೆ ಅವರಿಗೆ ಹೊಸಉಡುಪುಗಳನ್ನು ತೊಡಿಸುತ್ತಾರೆ. ಶರೀರವಂತೂ ಸಮಾಪ್ತಿಯಾಯಿತು ಅಂದಮೇಲೆ ಮತ್ತೆ ಧರಿಸುವವರು ಯಾರು? ನಿಮ್ಮ ಬಳಿ ಆ ಪದ್ಧತಿಯಿಲ್ಲ, ಅಳುವ ಮಾತೂ ಇಲ್ಲ ಅಂದಾಗ ಶ್ರೇಷ್ಠಾತಿಶ್ರೇಷ್ಠರಾಗಬೇಕಾಗಿದೆ. ಹೇಗಾಗುವುದು? ಅವಶ್ಯವಾಗಿ ಮಧ್ಯದಲ್ಲಿ ಸಂಗಮಯುಗವಿದೆ. ಆಗಲೇ ಪವಿತ್ರರಾಗುತ್ತೀರಿ. ನೀವು ಒಂದುಮಾತನ್ನು ಸಿದ್ಧಮಾಡಿದರೆ ಸಾಕು, ಇವರು ಸತ್ಯವಾದ ಮಾತನ್ನು ತಿಳಿಸುತ್ತಾರೆಂದು ಒಪ್ಪುತ್ತಾರೆ. ಭಗವಂತನು ಎಂದೂ ಸುಳ್ಳನ್ನು ಹೇಳಲು ಸಾಧ್ಯವಿಲ್ಲ ಆಗ ಅನೇಕರಿಗೆ ಪ್ರೀತಿಯುಂಟಾಗುವುದು. ಅನೇಕರು ಬರುತ್ತಾರೆ, ಸಮಯದಲ್ಲಿ ನೀವು ಮಕ್ಕಳಿಗೆ ಎಲ್ಲಾ ಜ್ಞಾನಬಿಂದುಗಳು ಸಿಗುತ್ತಿರುತ್ತಿವೆ. ಕೊನೆಯಲ್ಲಿ ಏನೇನು ಆಗಲಿದೆ ಎಂಬುದೆಲ್ಲವನ್ನೂ ನೋಡುತ್ತೀರಿ. ಯುದ್ಧಗಳಾಗುವುದು, ಬಾಂಬುಗಳು ಬೀಳುತ್ತವೆ. ಮೊದಲ ಮೃತ್ಯುವು ಆಕಡೆ (ವಿದೇಶ) ಆಗುವುದು, ಇಲ್ಲಂತೂ ರಕ್ತದ ನದಿಗಳು ಹರಿಯುತ್ತವೆ ನಂತರ ಹಾಲು-ತುಪ್ಪದ ನದಿಗಳು ಹರಿಯುವುದು. ಮೊಟ್ಟಮೊದಲನೆಯದಾಗಿ ವಿದೇಶದಿಂದಲೇ ಯುದ್ಧವು ಆರಂಭವಾಗುತ್ತದೆ. ಭಯವೂ ಅಲ್ಲಿದೆ. ಎಷ್ಟು ದೊಡ್ಡ-ದೊಡ್ಡ ಬಾಂಬುಗಳನ್ನು ತಯಾರಿಸುತ್ತಾರೆ, ಅದರಲ್ಲಿ ಏನೇನನ್ನೋ ಹಾಕುತ್ತಾರೆ ಆದ್ದರಿಂದ ಒಮ್ಮೆಲೆ ನಗರವನ್ನೇ ಸಮಾಪ್ತಿ ಮಾಡಿಬಿಡುತ್ತಾರೆ. ಯಾರು ಸ್ವರ್ಗದ ರಾಜಧಾನಿಯನ್ನು ಸ್ಥಾಪನೆ ಮಾಡಿದರು ಎಂಬ ಮಾತನ್ನು ತಿಳಿಸಬೇಕಾಗಿದೆ. ಸ್ವರ್ಗದ ರಚಯಿತ ತಂದೆಯು ಅವಶ್ಯವಾಗಿ ಸಂಗಮಯುಗದಲ್ಲಿಯೇ ಬರುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ಇದು ಸಂಗಮಯುಗವಾಗಿದೆ. ನಿಮಗೆ ತಂದೆಯನ್ನು ನೆನಪು ಮಾಡುವ ಮುಖ್ಯಮಾತನ್ನು ತಿಳಿಸಲಾಗುತ್ತದೆ. ಇದರಿಂದಲೇ ಪಾಪಗಳು ಕಳೆಯುತ್ತವೆ. ಯಾವಾಗ ಭಗವಂತನು ಬಂದಿದ್ದರೋ ಆಗ ನನ್ನೊಬ್ಬನನ್ನೇ ನೆನಪು ಮಾಡಿ ಆಗ ನೀವು ಸತೋಪ್ರಧಾನರಾಗುತ್ತೀರಿ, ಮುಕ್ತಿಧಾಮದಲ್ಲಿ ಹೋಗುತ್ತೀರಿ ಎಂದು ಕಲ್ಪದ ಹಿಂದೆಯೂ ತಿಳಿಸಿದ್ದರು. ಈಗ ಮತ್ತೆ ಮೊದಲಿನಿಂದ ಚಕ್ರವು ಪುನರಾವರ್ತನೆಯಾಗುತ್ತದೆ. ದೇವತೆಗಳು, ಮುಸಲ್ಮಾನರು, ಬೌದ್ಧರು..... ನೀವು ವಿದ್ಯಾರ್ಥಿಗಳ ಬುದ್ಧಿಯಲ್ಲಿ ಈ ಸಂಪೂರ್ಣ ಜ್ಞಾನವಿರಬೇಕು. ನಾವು ಎಷ್ಟು ಸಂಪಾದನೆ ಮಾಡಿಕೊಳ್ಳುತ್ತೇವೆ ಎಂದು ಖುಷಿಯಿರುತ್ತದೆ, ಈ ಅಮರಕಥೆಯನ್ನು ಅಮರತಂದೆಯೇ ತಿಳಿಸುತ್ತಾರೆ. ನಿಮಗೆ ಅನೇಕ ಹೆಸರುಗಳನ್ನಿಟ್ಟಿದ್ದಾರೆ. ಮುಖ್ಯವಾಗಿ ದೇವತೆಗಳು ನಂತರ ವೃದ್ಧಿಯಾಗುತ್ತಾ-ಆಗುತ್ತಾ ವೃಕ್ಷವೂ ವೃದ್ಧಿಯಾಗುತ್ತಾ ಹೋಗುತ್ತದೆ. ಅನೇಕಾನೇಕ ಧರ್ಮಗಳು, ಅನೇಕ ಮತಗಳಾಗಿಬಿಡುತ್ತವೆ. ಈ ಒಂದುಧರ್ಮವು ಒಬ್ಬರ ಶ್ರೀಮತದಿಂದಲೇ ಸ್ಥಾಪನೆಯಾಗುತ್ತದೆ, ಎರಡನೇ ಮಾತಿಲ್ಲ. ಈ ಆತ್ಮಿಕ ಜ್ಞಾನವನ್ನು ಆತ್ಮಿಕ ತಂದೆಯೇ ತಿಳಿಸಿಕೊಡುತ್ತಾರೆ ಅಂದಾಗ ನೀವು ಮಕ್ಕಳು ಖುಷಿಯಲ್ಲಿರಬೇಕು.

ತಂದೆಯು ನಮಗೆ ಓದಿಸುತ್ತಾರೆ ಎಂದು ಮಕ್ಕಳಿಗೆ ತಿಳಿದಿದೆ, ನೀವು ಅನುಭವದಿಂದ ಹೇಳುತ್ತೀರಿ ಅಂದಮೇಲೆ ನಿಮಗೆ ಈ ಶುದ್ಧ ಅಹಂಕಾರವಿರಬೇಕು- ಭಗವಂತನೇ ನಮಗೆ ಓದಿಸುತ್ತಿದ್ದಾರೆ ಅಂದಮೇಲೆ ನಮಗೇನು ಬೇಕು! ಯಾವಾಗ ನಾವು ವಿಶ್ವದ ಮಾಲೀಕರಾಗುತ್ತಿದ್ದೇವೆ ಅಂದಮೇಲೆ ಏಕೆ ಖುಷಿಯಿರುವುದಿಲ್ಲ ಅಥವಾ ನಿಶ್ಚಯದಲ್ಲಿ ಎಲ್ಲಿ ಸಂಶಯವಿದೆ. ತಂದೆಯಲ್ಲೆಂದೂ ಸಂಶಯ ತರಬಾರದು. ಮಾಯೆಯು ಸಂಶಯದಲ್ಲಿ ತಂದು ಮರೆಸಿಬಿಡುತ್ತದೆ. ತಂದೆಯು ತಿಳಿಸುತ್ತಾರೆ- ಮಾಯೆಯು ಕಣ್ಣುಗಳ ಮೂಲಕ ಮೋಸಮಾಡುತ್ತದೆ. ಒಳ್ಳೆಯ ಪದಾರ್ಥವನ್ನು ನೋಡಿದರೆ ತಿನ್ನೋಣವೆಂದು ಸಂಕಲ್ಪ ಬರುತ್ತದೆ ಮತ್ತು ಕಣ್ಣುಗಳಿಂದ ನೋಡಿದಾಗ ಹೊಡೆಯಲು ಕ್ರೋಧವೂ ಬರುತ್ತದೆ. ನೋಡಲೇ ಇಲ್ಲವೆಂದರೆ ಹೇಗೆ ಹೊಡೆಯುವರು. ಇದರಮೇಲೆ ಪೂರ್ಣ ಗಮನವನ್ನಿಡಬೇಕು. ಆತ್ಮಕ್ಕೆ ಜ್ಞಾನವು ಸಿಗುತ್ತದೆ ಆಗ ಈ ಕುದೃಷ್ಟಿಯು ಹೊರಟುಹೋಗುತ್ತದೆ. ಕಣ್ಣುಗಳನ್ನು ತೆಗೆದುಹಾಕಬೇಕೆಂದಲ್ಲ. ಕುದೃಷ್ಟಿಯನ್ನು ಶ್ರೇಷ್ಠದೃಷ್ಟಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಸದಾ ಇದೇ ಖುಷಿ ಮತು ನಶೆಯಲ್ಲಿರಬೇಕಾಗಿದೆ- ನಮಗೆ ಭಗವಂತನೇ ಓದಿಸುತ್ತಾರೆ, ಯಾವುದೇ ಮಾತಿನಲ್ಲಿ ಸಂಶಯಬುದ್ಧಿಯವರಾಗಬಾರದು, ಶುದ್ಧ ಅಹಂಕಾರವನ್ನು ಇಟ್ಟುಕೊಳ್ಳಬೇಕಾಗಿದೆ.

2) ಸೂಕ್ಷ್ಮವತನದ ಮಾತುಗಳಲ್ಲಿ ಹೆಚ್ಚಿನ ಆಸಕ್ತಿಯನ್ನಿಡಬಾರದು. ಆತ್ಮವನ್ನು ಸತೋಪ್ರಧಾನವನ್ನಾಗಿ ಮಾಡಿಕೊಳ್ಳುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಪರಸ್ಪರ ಸಲಹೆ ತೆಗೆದುಕೊಂಡು ಎಲ್ಲರಿಗೆ ತಂದೆಯ ಯಥಾರ್ಥ ಪರಿಚಯವನ್ನು ಕೊಡಬೇಕಾಗಿದೆ.

ವರದಾನ:
ಪಾಸ್ ವಿತ್ ಆನರ್ ಆಗಬೇಕಾದರೆ ಪುರುಷಾರ್ಥದ ಗತಿಯನ್ನು ತೀವ್ರ ಮತ್ತು ಬ್ರೇಕ್ ಪವರ್ ಫುಲ್ ಆಗಿಟ್ಟುಕೊಳ್ಳುವಂತಹ ಯಥಾರ್ಥ ಯೋಗಿ ಭವ

ವರ್ತಮಾನ ಸಮಯ ಪ್ರಮಾಣ ಪುರುಷಾರ್ಥದ ಗತಿ ತೀವ್ರ ಮತ್ತು ಬ್ರೇಕ್ ಪವರ್ಫುಲ್ ಆಗಿರಬೇಕಾಗಿದೆ ಆಗ ಮಾತ್ರ ಅಂತ್ಯದಲ್ಲಿ ಪಾಸ್ವಿತ್ಆನರ್ ಆಗಲು ಸಾಧ್ಯ. ಏಕೆಂದರೆ ಆ ಸಮಯದ ಪರಿಸ್ಥಿತಿಗಳು ಬುದ್ಧಿಯಲ್ಲಿ ಅನೇಕ ಸಂಕಲ್ಪಗಳನ್ನು ತರುವಂತಹದಾಗಿರುತ್ತವೆ, ಆ ಸಮಯದಲ್ಲಿ ಎಲ್ಲಾ ಸಂಕಲ್ಪಗಳಿಂದ ದೂರ ಒಂದೇ ಸಂಕಲ್ಪದಲ್ಲಿ ಸ್ಥಿತರಾಗಿರುವ ಅಭ್ಯಾಸ ಇರಬೇಕಾಗುತ್ತದೆ. ಯಾವ ಸಮಯದಲ್ಲಿ ವಿಸ್ತಾರದಲ್ಲಿ ಹರಡಿಕೊಂಡಿರುವ ಬುದ್ಧಿಯಿದ್ದಲ್ಲಿ ಆ ಸಮಯ ಸ್ಟಾಪ್ ಮಾಡುವ ಅಭ್ಯಾಸ ಬೇಕಾಗಿದೆ. ಸ್ಟಾಪ್ ಎಂದ ತಕ್ಷಣ ಸ್ಟಾಪ್ ಆಗಿಬಿಡಬೇಕು. ಎಷ್ಟು ಸಮಯ ಇಚ್ಛಿಸುವಿರೊ ಅಷ್ಟು ಸಮಯ ಬುದ್ಧಿಯನ್ನು ಒಂದೇ ಸಂಕಲ್ಪದಲ್ಲಿ ಸ್ಥಿತ ಮಾಡಬೇಕು-ಇದೇ ಆಗಿದೆ ಯಥಾರ್ಥ ಯೋಗ.

ಸ್ಲೋಗನ್:
ತಾವು ವಿಧೇಯ ಸೇವಕರಾಗಿರುವಿರಿ ಆದ್ದರಿಂದ ಸೋಮಾರಿಯಾಗಬಾರದು. ಸೇವಕ ಎಂದರೆ ಸದಾ ಸೇವೆಯಲ್ಲಿ ಉಪಸ್ಥಿತ.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ

ಹೇಗೆ ಇಂಜೆಕ್ಷನ್ ಮೂಲಕ ರಕ್ತದಲ್ಲಿ ಶಕ್ತಿ ತುಂಬುತ್ತಾರೆ. ಇದೇ ರೀತಿ ನಿಮ್ಮ ಶ್ರೇಷ್ಠ ಸಂಕಲ್ಪಗಳ ಇಂಜೆಕ್ಷನ್ ಕೆಲಸ ಮಾಡುವುದು. ಸಂಕಲ್ಪಗಳ ಮೂಲಕ ಸಂಕಲ್ಪಗಳಲ್ಲಿ ಶಕ್ತಿ ಬಂದು ಬಿಡುವುದು- ಈಗ ಈ ಸೇವೆಯ ಬಹಳ ಅವಶ್ಯಕತೆ ಇದೆ. ಸ್ವಯಂನ ರಕ್ಷಣೆಗಾಗಿ ಶುಭ ಹಾಗೂ ಶ್ರೇಷ್ಠ ಸಂಕಲ್ಪಗಳ ಶಕ್ತಿ ಹಾಗೂ ನಿರ್ಭಯತೆಯ ಶಕ್ತಿಯನ್ನು ಜಮಾ ಮಾಡಿ ಆಗ ಅಂತ್ಯ ಸುಗಮ ಹಾಗೂ ಬೇಹದ್ದಿನ ಕಾರ್ಯದಲ್ಲಿ ಸಹಯೋಗಿಯಾಗಿ ಬೇಹದ್ದಿನ ವಿಶ್ವದ ರಾಜ್ಯ ಅಧಿಕಾರಿ ಆಗಲು ಸಾಧ್ಯ.