11.08.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ವಿದ್ಯೆಯಿಂದ ತಮ್ಮ ಕರ್ಮಾತೀತ ಸ್ಥಿತಿಯನ್ನು ಮಾಡಿಕೊಳ್ಳಬೇಕು, ಜೊತೆ ಜೊತೆಯಲ್ಲಿ ಪತಿತರಿಂದ ಪಾವನರನ್ನಾಗಿ ಮಾಡುವ ಮಾರ್ಗವನ್ನು ತೋರಿಸಬೇಕು, ಆತ್ಮಗಳ ಸೇವೆ ಮಾಡಬೇಕಾಗಿದೆ.”

ಪ್ರಶ್ನೆ:
ಯಾವ ಮಂತ್ರವು ನೆನಪಿದ್ದಾಗ ಪಾಪ ಕರ್ಮಗಳಿಂದ ಪಾರಾಗಿ ಬಿಡುತ್ತೀರಿ?

ಉತ್ತರ:
ತಂದೆಯು ಮಂತ್ರವನ್ನು ಕೊಟ್ಟಿದ್ದಾರೆ - ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ........ ಇದೇ ಮಂತ್ರವನ್ನು ನೆನಪಿಟ್ಟುಕೊಳ್ಳಿ. ನೀವು ನಿಮ್ಮ ಕರ್ಮೇಂದ್ರಿಯಗಳಿಂದ ಯಾವುದೇ ಪಾಪವನ್ನು ಮಾಡಬಾರದು. ಕಲಿಯುಗದಲ್ಲಿ ಎಲ್ಲರಿಂದಲೂ ಪಾಪಕರ್ಮವೇ ಆಗುತ್ತದೆ. ಆದ ಕಾರಣ ತಂದೆಯು ಈ ಯುಕ್ತಿಯನ್ನು ತಿಳಿಸುತ್ತಾರೆ - ಪವಿತ್ರತೆಯ ಗುಣವನ್ನು ಧಾರಣೆ ಮಾಡಿ, ಇದೇ ನಂಬರ್ವನ್ ಗುಣವಾಗಿದೆ.

ಓಂ ಶಾಂತಿ.
ಮಕ್ಕಳು ಯಾರ ಮುಂದೆ ಕುಳಿತಿದ್ದೀರಿ. ಬುದ್ಧಿಯಲ್ಲಿ ನಾವು ಪತಿತ-ಪಾವನ, ಸರ್ವರ ಸದ್ಗತಿದಾತ, ನಮ್ಮ ಬೇಹದ್ದಿನ ತಂದೆಯ ಮುಂದೆ ಕುಳಿತಿದ್ದೇವೆ ಎಂದು ವಿಚಾರ ಬರುತ್ತದೆ. ಭಲೆ ಬ್ರಹ್ಮಾರವರ ದೇಹದಲ್ಲಿದ್ದರೂ ತಂದೆಯನ್ನು ನೆನಪು ಮಾಡಿ. ಮನುಷ್ಯರು ಯಾರಿಗೂ ಸದ್ಗತಿಯನ್ನು ಕೊಡುವುದಕ್ಕಾಗುವುದಿಲ್ಲ. ಮನುಷ್ಯರಿಗೆ ಪತಿತ-ಪಾವನ ಎಂದು ಹೇಳಲಾಗುವುದಿಲ್ಲ. ಮಕ್ಕಳು ತನ್ನನ್ನು ಆತ್ಮವೆಂದು ತಿಳಿಯಬೇಕು. ನಾವೆಲ್ಲಾ ಆತ್ಮಗಳಿಗೆ ತಂದೆಯು ಪರಮಾತ್ಮನಾಗಿದ್ದಾರೆ. ಆ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಇದನ್ನು ಮಕ್ಕಳು ತಿಳಿಯಬೇಕು ಹಾಗೂ ಖುಷಿಯಲ್ಲಿಯೂ ಇರಬೇಕು. ಇದೂ ಸಹ ಮಕ್ಕಳಿಗೆ ತಿಳಿದಿದೆ - ನಾವು ನರಕವಾಸಿಗಳಿಂದ ಸ್ವರ್ಗವಾಸಿಗಳಾಗುತ್ತಿದ್ದೇವೆ. ಬಹಳ ಸಹಜವಾದ ಮಾರ್ಗವು ಸಿಗುತ್ತಿದೆ. ಕೇವಲ ನೆನಪು ಮಾಡಬೇಕು ಹಾಗೂ ತಮ್ಮಲ್ಲಿ ದೈವೀ ಗುಣವನ್ನು ಧಾರಣೆ ಮಾಡಬೇಕು. ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕು. ನಾರದನ ಉದಾಹರಣೆಯೂ ಇದೆಯಲ್ಲವೆ. ಈ ಎಲ್ಲಾ ದೃಷ್ಟಾಂತಗಳನ್ನು ಜ್ಞಾನ ಸಾಗರ ತಂದೆಯೇ ಕೊಡುತ್ತಿದ್ದಾರೆ. ತಂದೆಯು ಕೊಟ್ಟಿರುವಂತಹ ದೃಷ್ಟಾಂತಗಳನ್ನೇ ಸನ್ಯಾಸಿಗಳು ತಿಳಿಸುತ್ತಿದ್ದಾರೆ. ಇದನ್ನು ಭಕ್ತಿಮಾರ್ಗದಲ್ಲಿ ಕೇವಲ ಗಾಯನ ಮಾಡುತ್ತಾರೆ. ಅವರು ಆಮೆಯ, ಸರ್ಪದ, ಭ್ರಮರಿಯ ದೃಷ್ಟಾಂತವನ್ನು ಕೊಡುತ್ತಾರೆ ಆದರೆ ಯಥಾರ್ಥವಾದ ಅರ್ಥ ಗೊತ್ತಿಲ್ಲ. ತಂದೆಯು ತಿಳಿಸಿರುವ ದೃಷ್ಟಾಂತಗಳನ್ನು ಭಕ್ತಿಮಾರ್ಗದಲ್ಲಿ ಪುನರಾವರ್ತನೆ ಮಾಡುತ್ತಾರೆ. ಕಳೆದು ಹೋಗಿರುವುದೇ ಭಕ್ತಿಮಾರ್ಗವಾಗುತ್ತದೆ. ಈ ಸಮಯದಲ್ಲಿ ಯಾವುದು ಪ್ರತ್ಯಕ್ಷವಾಗಿ ಆಗುತ್ತಿದೆಯೋ ಅದು ನಂತರ ಗಾಯನ ಮಾಡಲ್ಪಡುತ್ತದೆ. ಭಲೆ ದೇವತೆಗಳ ಜನ್ಮದಿನ ಅಥವಾ ಭಗವಂತನ ಜನ್ಮ ದಿನವನ್ನಾಚರಿಸುತ್ತಾರೆ, ಆದರೆ ಏನೂ ಗೊತ್ತಿಲ್ಲ. ಈಗ ನೀವು ಎಲ್ಲವನ್ನೂ ತಿಳಿಯುತ್ತಿದ್ದೀರಿ. ತಂದೆಯಿಂದ ಶಿಕ್ಷಣ ಪಡೆದು ಪತಿತರಿಂದ ಪಾವನರು ಆಗುತ್ತಿದ್ದೀರಿ ಹಾಗೂ ಪತಿತರನ್ನು ಪಾವನ ಮಾಡುವ ಮಾರ್ಗವನ್ನು ತೋರಿಸುತ್ತಿದ್ದೀರಿ. ಇದು ನಿಮ್ಮದು ಮುಖ್ಯವಾದ ಆತ್ಮಿಕ ಸೇವೆಯಾಗಿದೆ. ಮೊಟ್ಟ ಮೊದಲು ಯಾರಿಗೇ ಆಗಲಿ ಆತ್ಮದ ಜ್ಞಾನವನ್ನು ಕೊಡಿ - ನೀವು ಆತ್ಮರಾಗಿದ್ದೀರಿ ಎಂಬುದು ಯಾರಿಗೂ ತಿಳಿದಿಲ್ಲ. ಆತ್ಮವು ಅವಿನಾಶಿಯಾಗಿದೆ. ಯಾವಾಗ ಸಮಯ ಬರುತ್ತದೆಯೋ ಆಗ ಆತ್ಮವು ಶರೀರದಲ್ಲಿ ಬಂದು ಸೇರುತ್ತದೆ ಅಂದಾಗ ನಿಮ್ಮನ್ನು ಘಳಿಗೆ-ಘಳಿಗೆ ಆತ್ಮವೆಂದು ತಿಳಿಯಬೇಕಲ್ಲವೆ. ನಾವು ಆತ್ಮಗಳಿಗೆ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ಪರಮ ಶಿಕ್ಷಕನೂ ಆಗಿದ್ದಾರೆ. ಇದೆಲ್ಲವೂ ಪ್ರತೀ ಕ್ಷಣವೂ ಮಕ್ಕಳಿಗೆ ನೆನಪಿರಬೇಕು, ಇದನ್ನು ಮರೆಯಬಾರದು. ಈಗ ಮನೆಗೆ ಹಿಂತಿರುಗಿ ಹೋಗಬೇಕು, ವಿನಾಶವು ಮುಂದೆ ನಿಂತಿದೆ. ಸತ್ಯಯುಗದಲ್ಲಿ ದೈವೀ ಪರಿವಾರವು ಬಹಳ ಚಿಕ್ಕದಾಗಿರುತ್ತದೆ. ಕಲಿಯುಗದಲ್ಲಿ ಎಷ್ಟೊಂದು ಮಂದಿ ಮನುಷ್ಯರಿದ್ದಾರೆ, ಅನೇಕ ಧರ್ಮ, ಅನೇಕ ಮತಗಳಿವೆ! ಸತ್ಯಯುಗದಲ್ಲಿ ಇದ್ಯಾವುದೂ ಇರುವುದಿಲ್ಲ. ಮಕ್ಕಳಿಗೆ ಇಡೀ ದಿನ ಬುದ್ಧಿಯಲ್ಲಿ ಇದೇ ಮಾತುಗಳು ಬರುತ್ತಿರಬೇಕು. ಇದು ವಿದ್ಯೆಯಾಗಿದೆ, ಆ ವಿದ್ಯೆಯಲ್ಲಿಯೂ ಅನೇಕ ಪುಸ್ತಕಗಳಿರುತ್ತವೆ. ಪ್ರತೀ ತರಗತಿಗೂ ಹೊಸ-ಹೊಸ ಪುಸ್ತಕಗಳನ್ನು ಖರೀದಿ ಮಾಡಬೇಕಾಗುತ್ತದೆ. ಇಲ್ಲಿ ಯಾವುದೇ ಪುಸ್ತಕದ ಅಥವಾ ಶಾಸ್ತ್ರದ ಮಾತಿಲ್ಲ. ಇದರಲ್ಲಿ ಒಂದೇ ಮಾತು, ಒಂದೇ ವಿದ್ಯಾಭ್ಯಾಸವಿದೆ. ಇಲ್ಲಿ ಯಾವಾಗ ಬ್ರಿಟೀಷ್ ಸರ್ಕಾರವಿತ್ತು, ರಾಜರುಗಳ ರಾಜ್ಯವಿತ್ತು, ಆಗ ಸ್ಟಾಂಪ್ನಲ್ಲಿಯೂ ರಾಜ-ರಾಣಿಯರ ವಿನಃ ಇನ್ನ್ಯಾವುದೇ ಭಾವಚಿತ್ರವನ್ನು ಹಾಕುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ನೋಡಿದಾಗ ಯಾರೆಲ್ಲಾ ಭಕ್ತರು ಇದ್ದು ಹೋಗಿದ್ದಾರೆಯೋ ಅವರ ಭಾವಚಿತ್ರಗಳನ್ನು ಹಾಕಿ ಸ್ಟಾಂಪ್ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಚಿತ್ರದಲ್ಲಿಯೂ ಒಬ್ಬರದೇ ಮಹಾರಾಜ-ಮಹಾರಾಣಿಯರದು ಇರುತ್ತದೆ. ಯಾವ ದೇವತೆಗಳು ಇದ್ದು ಹೋಗಿದ್ದಾರೆ ಅವರ ಚಿತ್ರವು ಅಳಿಸಿ ಹೋಗಿದೆ ಎನ್ನುವ ಮಾತಿಲ್ಲ. ತುಂಬಾ ಹಳೆಯ ದೇವತೆಗಳ ಚಿತ್ರ ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತಾರೆ ಏಕೆಂದರೆ ಶಿವ ತಂದೆಯ ನಂತರ ದೇವತೆಗಳಿಗೆ ಆದ್ಯತೆಯಿದೆ. ಇವೆಲ್ಲಾ ಮಾತುಗಳನ್ನು ನೀವು ಮಕ್ಕಳು ಧಾರಣೆ ಮಾಡುತ್ತೀರಿ ಏಕೆಂದರೆ ಬೇರೆಯವರಿಗೆ ಮಾರ್ಗ ತೋರಿಸುವುದಕ್ಕಾಗಿ. ಇದು ಖಂಡಿತವಾಗಿ ಭಿನ್ನವಾದ ವಿದ್ಯೆಯಾಗಿದೆ. ನೀವೇ ಇದನ್ನು ಕೇಳಿದ್ದೀರಿ, ಪದವಿಯನ್ನೂ ಪಡೆದಿದ್ದೀರಿ, ಮತ್ತ್ಯಾರಿಗೂ ಇದು ಗೊತ್ತಿಲ್ಲ. ನಿಮಗೆ ರಾಜಯೋಗವನ್ನು ಪರಮಪಿತ ಪರಮಾತ್ಮನೇ ಕಲಿಸುತ್ತಿದ್ದಾರೆ. ಮಹಾಭಾರತ ಯುದ್ಧವು ಪ್ರಸಿದ್ಧಿಯಾಗಿದೆ. ಏನಾಗುತ್ತದೆ ಎಂಬುದನ್ನು ಮುಂದೆ ನೋಡುತ್ತೀರಿ. ಮನುಷ್ಯರು ಏನೆಲ್ಲವನ್ನೂ ಹೇಳುತ್ತಾರೆ, ದಿನ-ಪ್ರತಿದಿನ ಮನುಷ್ಯರಿಗೆ ಟಚ್ ಆಗುತ್ತದೆ. ಮೂರನೆಯ ಮಹಾಭಾರತ ಯುದ್ಧವು ನಡೆಯುತ್ತದೆಯೆಂದು ಹೇಳುತ್ತಾರೆ. ನೀವು ಮಕ್ಕಳು ಇದಕ್ಕೆ ಮುಂಚಿತವಾಗಿ ಈ ವಿದ್ಯಾಭ್ಯಾಸದಿಂದ ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕು ಆದರೆ ಅಸುರರಿಗೆ ಹಾಗೂ ದೇವತೆಗಳಿಗೆ ಯುದ್ಧವಾಯಿತು ಎನ್ನುವುದು ನಡೆದಿಲ್ಲ. ಈ ಸಮಯದಲ್ಲಿ ನೀವು ಬ್ರಾಹ್ಮಣ ಸಂಪ್ರದಾಯದವರಾಗಿದ್ದೀರಿ, ಮತ್ತೆ ನೀವೇ ದೈವೀ ಸಂಪ್ರದಾಯದವರಾಗುತ್ತೀರಿ. ಆ ಕಾರಣ ಈ ಜನ್ಮದಲ್ಲಿ ದೈವೀ ಗುಣ ಧಾರಣೆಯನ್ನು ಮಾಡುತ್ತೀರಿ. ಪವಿತ್ರತೆಯು ನಂಬರ್ವನ್ ದೈವೀ ಗುಣವಾಗಿದೆ. ನೀವು ಈ ಶರೀರದ ಮುಖಾಂತರ ಎಷ್ಟೊಂದು ಪಾಪಗಳನ್ನು ಮಾಡುತ್ತಾ ಬಂದಿದ್ದೀರಿ. ಆತ್ಮಕ್ಕೇ ಹೇಳಲಾಗುತ್ತದೆ - ಪಾಪಾತ್ಮ, ಆತ್ಮವು ಈ ಕರ್ಮೇಂದ್ರಿಯಗಳಿಂದ ಎಷ್ಟೊಂದು ಪಾಪ ಮಾಡುತ್ತಾ ಬಂದಿದೆ! ಈಗ ಕೆಟ್ಟದ್ದನ್ನು ಕೇಳಬೇಡಿ........ ಯಾರಿಗೆ ಹೇಳಲಾಗುತ್ತದೆ? ಆತ್ಮಕ್ಕೆ. ಆತ್ಮವೇ ಕಿವಿಗಳಿಂದ ಕೇಳುತ್ತದೆ. ತಂದೆಯು ನೀವು ಮಕ್ಕಳಿಗೆ ಸ್ಮೃತಿ ತರಿಸುತ್ತಿದ್ದಾರೆ - ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ, ಚಕ್ರದಲ್ಲಿ ಸುತ್ತುತ್ತಾ ಬಂದಿದ್ದೀರಿ. ಈಗ ಪುನಃ ಅವರೇ ನೀವಾಗಬೇಕು. ಈ ಮಧುರ ಸ್ಮೃತಿಯು ಬರುವುದರಿಂದ ಪವಿತ್ರರಾಗುವ ಧೈರ್ಯವು ಬರುತ್ತದೆ. ನಾವು ಹೇಗೆ 84 ಜನ್ಮವನ್ನು ಪಡೆಯುತ್ತಾ ಬಂದೆವು ಎಂಬುದು ನಿಮ್ಮ ಬುದ್ಧಿಯಲ್ಲಿದೆ. ಮೊದಲು ನಾವು ದೇವತೆಗಳಾಗಿದ್ದೆವು, ಇದು ಕಥೆಯಲ್ಲವೆ. 5000 ವರ್ಷಗಳ ಹಿಂದೆ ನಾವೇ ದೇವತೆಗಳಾಗಿದ್ದೆವು ಎಂಬುದು ಬುದ್ಧಿಯಲ್ಲಿ ಬರಬೇಕಲ್ಲವೆ. ನಾವು ಆತ್ಮರು ಮೂಲವತನದಲ್ಲಿದ್ದೆವು, ನಾವೆಲ್ಲಾ ಆತ್ಮಗಳ ಮನೆ ಅದಾಗಿದೆ ಎಂಬುದು ನಿಮಗೆ ವಿಚಾರದಲ್ಲಿಯೇ ಇರಲಿಲ್ಲ. ಅಲ್ಲಿಂದ ಇಲ್ಲಿಗೆ ಪಾತ್ರವನ್ನಭಿನಯಿಸುವುದಕ್ಕೆ ಬರುತ್ತೇವೆ. ಸೂರ್ಯವಂಶಿ, ಚಂದ್ರವಂಶಿ...... ಆದೆವು. ಈಗ ಬಹ್ಮಾನ ಸಂತಾನ ಬ್ರಾಹ್ಮಣ ವಂಶದವರಾಗಿದ್ದೇವೆ. ನೀವು ಈಶ್ವರನಿಗೆ ಸಂತಾನರಾಗಿದ್ದೀರಿ. ಈಶ್ವರನು ಕುಳಿತು ನಿಮಗೆ ಶಿಕ್ಷಣವನ್ನು ಕೊಡುತ್ತಿದ್ದಾರೆ. ಇವರು ಸುಪ್ರೀಂ ತಂದೆ, ಸುಪ್ರೀಂ ಶಿಕ್ಷಕ, ಸುಪ್ರೀಂ ಗುರುವೂ ಆಗಿದ್ದಾರೆ. ನಾವು ಅವರ ಮತದನುಸಾರ ಎಲ್ಲಾ ಮನುಷ್ಯರನ್ನು ಶ್ರೇಷ್ಠರನ್ನಾಗಿ ಮಾಡುತ್ತೇವೆ. ಮುಕ್ತಿ-ಜೀವನ್ಮುಕ್ತಿ ಎರಡೂ ಶ್ರೇಷ್ಠವಾಗಿದೆ. ನಾವು ನಮ್ಮ ಮನೆಗೆ ಹೋಗುತ್ತೇವೆ, ನಂತರ ಪವಿತ್ರ ಆತ್ಮಗಳು ಬಂದು ರಾಜ್ಯ ಮಾಡುತ್ತೀರಿ. ಇದು ಚಕ್ರವಾಗಿದೆಯಲ್ಲವೆ. ಇದಕ್ಕೆ ಸ್ವದರ್ಶನ ಚಕ್ರವೆಂದು ಹೇಳಲಾಗುತ್ತದೆ. ಇದು ಜ್ಞಾನದ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ನಿಮ್ಮ ಈ ಸ್ವದರ್ಶನ ಚಕ್ರವು ನಿಂತು ಹೋಗಬಾರದು. ತಿರುಗುತ್ತಾ ಇರುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತದೆ. ನೀವೀಗ ರಾವಣನ ಮೇಲೆ ವಿಜಯವನ್ನು ಪಡೆಯುತ್ತೀರಿ, ಪಾಪವು ಅಳಿಸಿ ಹೋಗುತ್ತದೆ. ಈಗ ಸ್ಮರಣೆ ಮಾಡುವುದಕ್ಕೆ ಸ್ಮೃತಿ ಬಂದಿದೆ. ಕುಳಿತು ಮಾಲೆಯನ್ನು ಸ್ಮರಿಸುವ ಮಾತಲ್ಲ, ಆತ್ಮದ ಆಂತರ್ಯದಲ್ಲಿ ಯಾವ ಜ್ಞಾನವಿದೆಯೋ ಅದನ್ನು ನೀವು ಮಕ್ಕಳು ನಿಮ್ಮ ಸಹೋದರ-ಸಹೋದರಿಯರಿಗೆ ತಿಳಿಸಬೇಕು. ಮಕ್ಕಳು ಸಹಯೋಗಿಗಳಾಗುತ್ತೀರಲ್ಲವೆ. ನೀವು ಮಕ್ಕಳನ್ನೇ ಸ್ವದರ್ಶನ ಚಕ್ರಧಾರಿಯನ್ನಾಗಿ ಮಾಡುತ್ತೇನೆ. ಈ ಜ್ಞಾನವು ತಂದೆಯಲ್ಲಿಯೇ ಇರುವ ಕಾರಣ ತಂದೆಗೆ ಜ್ಞಾನ ಸಾಗರ, ಮನುಷ್ಯ ಸೃಷ್ಟಿಯ ಬೀಜರೂಪನೆಂದು ಕರೆಯುತ್ತಾರೆ, ಅವರಿಗೆ ಹೂದೋಟದ ಮಾಲೀಕನೆಂದು ಕರೆಯುತ್ತಾರೆ. ದೇವಿ-ದೇವತಾ ಧರ್ಮದ ಬೀಜವನ್ನು ಶಿವ ತಂದೆಯೇ ನೆಡುತ್ತಾರೆ, ಈಗ ನೀವು ದೇವಿ-ದೇವತೆಗಳಾಗುತ್ತಿದ್ದೀರಿ. ಇದನ್ನು ಇಡೀ ದಿನ ಸ್ಮರಣೆ ಮಾಡುತ್ತಿದ್ದರೆ ನಿಮ್ಮ ಕಲ್ಯಾಣವು ಬಹಳ ಬೇಗ ಆಗುತ್ತದೆ. ದೈವೀ ಗುಣವನ್ನೂ ಧಾರಣೆ ಮಾಡಬೇಕು, ಪವಿತ್ರರೂ ಆಗಬೇಕು. ಸ್ತ್ರೀ-ಪುರುಷ ಇಬ್ಬರೂ ಒಟ್ಟಿಗೆ ಇದ್ದು ಪವಿತ್ರರಾಗಬೇಕು ಎಂದು ಹೇಳುವ ಧರ್ಮ ಯಾವುದೂ ಇಲ್ಲ. ಕೇವಲ ಪುರುಷರಷ್ಟೇ ನಿವೃತ್ತ ಮಾರ್ಗಕ್ಕೆ ಹೋಗುತ್ತಾರೆ. ಸ್ತ್ರೀ-ಪುರುಷ ಇಬ್ಬರೂ ಒಟ್ಟಿಗೆ ಇದ್ದು ಪವಿತ್ರರಾಗುವುದು ಕಷ್ಟವಿದೆ ಎಂದು ಹೇಳುತ್ತಾರೆ. ಸತ್ಯಯುಗದಲ್ಲಿ ಇದ್ದಿರಲ್ಲವೆ. ಲಕ್ಷ್ಮೀ-ನಾರಾಯಣರ ಮಹಿಮೆಯನ್ನು ಮಾಡುತ್ತಾರೆ.

ಈಗ ನಿಮಗೆ ತಿಳಿದಿದೆ - ತಂದೆಯು ನಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಿ ಮತ್ತೆ ದೇವತೆಗಳನ್ನಾಗಿ ಮಾಡುತ್ತಿದ್ದಾರೆ. ನಾವೇ ಪೂಜ್ಯರಿಂದ ಪೂಜಾರಿಗಳಾದೆವು. ಯಾವಾಗ ವಾಮಮಾರ್ಗದಲ್ಲಿ ಹೋಗುತ್ತೇವೆಯೋ ಆಗ ಶಿವನ ಮಂದಿರವನ್ನು ಕಟ್ಟಿಸಿ ಪೂಜೆ ಮಾಡಿದೆವು. ನೀವು ಮಕ್ಕಳಿಗೆ ನಿಮ್ಮ 84 ಜನ್ಮಗಳ ಜ್ಞಾನವು ಇದೆ. ತಂದೆಯೇ ತಿಳಿಸುತ್ತಾರೆ - ನಿಮಗೆ ನಿಮ್ಮ ಜನ್ಮಗಳ ಕಥೆಯು ಗೊತ್ತಿಲ್ಲ, ಅದನ್ನು ನಾನೇ ತಿಳಿಸುತ್ತೇನೆ. ಇಂತಹ ಮಾತುಗಳನ್ನು ಯಾವುದೇ ಮನುಷ್ಯರು ಹೇಳಲು ಆಗುವುದಿಲ್ಲ. ಈಗ ತಂದೆಯು ನಿಮ್ಮನ್ನು ಸ್ವದರ್ಶನ ಚಕ್ರಧಾರಿಯನ್ನಾಗಿ ಮಾಡುತ್ತಿದ್ದಾರೆ. ನೀವು ಆತ್ಮರು ಪವಿತ್ರರಾಗುತ್ತಿದ್ದೀರಿ. ಶರೀರವಂತೂ ಇಲ್ಲಿ ಪವಿತ್ರವಾಗುವುದಿಲ್ಲ. ಆತ್ಮವು ಪವಿತ್ರವಾಗಿ ಬಿಟ್ಟರೆ ಈ ಅಪವಿತ್ರ ಶರೀರವನ್ನು ಬಿಟ್ಟು ಬಿಡುತ್ತದೆ. ಎಲ್ಲಾ ಆತ್ಮಗಳು ಪವಿತ್ರರಾಗಿ ಹಿಂತಿರುಗಬೇಕು, ಪವಿತ್ರ ಪ್ರಪಂಚವು ಈಗ ಸ್ಥಾಪನೆಯಾಗುತ್ತಿದೆ. ಬಾಕಿ ಉಳಿದವರು ಮಧುರವಾದ ಮನೆಗೆ ತಲುಪುತ್ತಾರೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಿ.

ತಂದೆಯ ನೆನಪಿನ ಜೊತೆ ಜೊತೆಯಲ್ಲಿ ಮನೆಯನ್ನೂ ಖಂಡಿತವಾಗಿ ನೆನಪು ಮಾಡಬೇಕು ಏಕೆಂದರೆ ಈಗ ಹಿಂತಿರುಗಿ ಮನೆಗೆ ಹೋಗಬೇಕು. ಮನೆಯಲ್ಲಿಯೇ ತಂದೆಯನ್ನು ನೆನಪು ಮಾಡಬೇಕು. ಭಲೆ ನಿಮಗೆ ಗೊತ್ತಿದೆ, ಬಾಬಾ ಈ (ಬ್ರಹ್ಮಾ) ದೇಹದಲ್ಲಿ ಬಂದು ನಮಗೆ ತಿಳಿಸುತ್ತಿದ್ದಾರೆ ಆದರೆ ಬುದ್ಧಿಯು ಪರಮಧಾಮ, ಮಧುರವಾದ ಮನೆಯಿಂದ ತುಂಡಾಗಬಾರದು. ಶಿಕ್ಷಕರು ಮನೆಬಿಟ್ಟು ನಿಮಗೆ ಓದಿಸುವುದಕ್ಕಾಗಿ ಬರುತ್ತಾರೆ. ಓದಿಸಿ ಮತ್ತೆ ದೂರ ಹೊರಟು ಬಿಡುತ್ತಾರೆ. ಸೆಕೆಂಡಿನಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು. ಆತ್ಮವು ಎಷ್ಟು ಚಿಕ್ಕ ಬಿಂದುವಾಗಿದೆ ಎಂಬುದು ಆಶ್ಚರ್ಯದ ಮಾತಲ್ಲವೆ. ತಂದೆಯು ಆತ್ಮದ ಜ್ಞಾನವನ್ನು ಕೊಟ್ಟಿದ್ದಾರೆ. ಸ್ವರ್ಗದಲ್ಲಿ ಯಾವುದೇ ಕೊಳಕು ವಸ್ತುಗಳಿರುವುದಿಲ್ಲವೆಂಬುದು ನಿಮಗೆ ತಿಳಿದಿದೆ ಯಾವುದರಿಂದ ನಿಮ್ಮ ಕೈ-ಕಾಲು ಅಥವಾ ವಸ್ತ್ರಗಳು ಕೊಳಕಾಗುವುದಿಲ್ಲ. ದೇವತೆಗಳಿಗೆ ಹೇಗೆ ಸುಂದರವಾದ ವೇಷ ಭೂಷಣಗಳಿರುತ್ತವೆ, ಎಷ್ಟು ಫಸ್ಟ್ಕ್ಲಾಸ್ ವಸ್ತ್ರಗಳಿರುತ್ತವೆ! ಒಗೆಯುವಂತಹ ಅವಶ್ಯಕತೆಯೂ ಇರುವುದಿಲ್ಲ. ಇದನ್ನು ನೋಡಿ ಎಷ್ಟೊಂದು ಖುಷಿ ಪಡಬೇಕಲ್ಲವೆ. ಭವಿಷ್ಯದ 21 ಜನ್ಮಗಳು ನಾವು ಈ ರೀತಿಯಾಗುತ್ತೇವೆಂದು ಆತ್ಮಕ್ಕೆ ಗೊತ್ತಿದೆ. ಕೇವಲ ಅದನ್ನು ನೋಡುತ್ತಲೇ ಇರಿ. ಈ ಚಿತ್ರವು ಎಲ್ಲರ ಬಳಿಯಿರಬೇಕು. ನಮ್ಮನ್ನು ತಂದೆಯು ಈ ರೀತಿ ಮಾಡುತ್ತಿದ್ದಾರೆ ಎಂಬುದರಲ್ಲಿ ಬಹಳ ಖುಷಿಯಿರಬೇಕು. ಇಂತಹ ತಂದೆಗೆ ನಾವು ಮಕ್ಕಳಾಗಿದ್ದೇವೆಂದಮೇಲೆ ನಾವೇಕೆ ಅಳಬೇಕು! ನೀವು ಏಕೆ ಚಿಂತೆ ಮಾಡಬೇಕು? ದೇವತೆಗಳ ಮಂದಿರಕ್ಕೆ ಹೋಗಿ ಮಹಿಮೆ ಮಾಡುತ್ತಾರೆ - ಸರ್ವಗುಣ ಸಂಪನ್ನ....... ಅಚ್ಯುತಂ, ಕೇಶವಂ ಎಷ್ಟೊಂದು ಹೆಸರುಗಳನ್ನು ಹೇಳುತ್ತಾರೆ. ನೀವು ಏನನ್ನು ನೆನಪು ಮಾಡುತ್ತೀರೋ ಅದೆಲ್ಲವೂ ಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ. ಶಾಸ್ತ್ರಗಳನ್ನು ಯಾರು ಬರೆದಿದ್ದಾರೆ? ವ್ಯಾಸ. ಅಥವಾ ಕೆಲಕೆಲವರು ಹೊಸಬರೂ ಬರೆಯುತ್ತಾರೆ. ಹಿಂದೆ ಎಲ್ಲವೂ ಕೈಯಿಂದ ಬರೆದಿದ್ದ ಚಿಕ್ಕ ಗ್ರಂಥವಿತ್ತು, ಆದರೆ ಈಗ ಎಷ್ಟು ದೊಡ್ಡದಾಗಿ ಮಾಡಿ ಬಿಟ್ಟಿದ್ದಾರೆ! ಎಂದರೆ ಇದರಲ್ಲಿ ಎಷ್ಟೊಂದು ವಿಷಯವನ್ನು ಸೇರಿಸಿ ಬಿಟ್ಟಿದ್ದಾರೆ. ಈಗ ಗುರುನಾನಕ್ ಬರುತ್ತಾರೆ, ತನ್ನ ಧರ್ಮ ಸ್ಥಾಪನೆ ಮಾಡುತ್ತಾರೆ. ಜ್ಞಾನವನ್ನು ಕೊಡುವಂತಹವರು ಒಬ್ಬರೇ ಆಗಿದ್ದಾರೆ, ಕೇವಲ ತನ್ನ ಧರ್ಮ ಸ್ಥಾಪನೆ ಮಾಡುವುದಕ್ಕೆ ಕ್ರೈಸ್ತನೂ ಬರುತ್ತಾನೆ. ಯಾವಾಗ ಎಲ್ಲರೂ ಬರುತ್ತಾರೆ ನಂತರ ಹಿಂತಿರುಗಿ ಹೋಗುತ್ತಾರೆ. ಮನೆಗೆ ಕಳುಹಿಸುವವರು ಯಾರು? ಕ್ರೈಸ್ತನೇನು? ಈಗಂತೂ ಅವರು ಭಿನ್ನ ನಾಮ-ರೂಪದಲ್ಲಿ ತಮೋಪ್ರಧಾನ ಸ್ಥಿತಿಯಲ್ಲಿದ್ದಾರೆ. ಸತೋ, ರಜೋ, ತಮೋದಲ್ಲಿ ಬರಬೇಕಲ್ಲವೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನವಾಗಿದ್ದಾರೆ, ಎಲ್ಲರ ಸ್ಥಿತಿಯು ಜಡಜಡೀಭೂತವಾಗಿದೆ. ಪುನರ್ಜನ್ಮವನ್ನು ಪಡೆಯುತ್ತಾ-ಪಡೆಯುತ್ತಾ ಈ ಸಮಯದಲ್ಲಿ ಎಲ್ಲಾ ಧರ್ಮದವರು ತಮೋಪ್ರಧಾನರಾಗಿದ್ದಾರೆ. ಈಗ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ಮತ್ತೆ ಚಕ್ರವನ್ನು ಸುತ್ತಬೇಕು. ತಂದೆಯೇ ಬಂದು ಆದಿ ಸನಾತನದ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ ಮತ್ತೆ ವಿನಾಶವೂ ಆಗುತ್ತದೆ. ಸ್ಥಾಪನೆ, ವಿನಾಶ ನಂತರ ಪಾಲನೆ, ಸತ್ಯಯುಗದಲ್ಲಿ ಒಂದೇ ಧರ್ಮವಿರುತ್ತದೆ. ಈ ಸ್ಮೃತಿ ಬರುತ್ತದೆಯಲ್ಲವೆ. ಇಡೀ ಚಕ್ರವು ಸ್ಮೃತಿಯಲ್ಲಿ ತಂದುಕೊಳ್ಳಬೇಕು. ಈಗ ನಾವು 84 ಜನ್ಮದ ಚಕ್ರವನ್ನು ಪೂರ್ಣ ಮಾಡಿ ಮನೆಗೆ ಹಿಂತಿರುಗುತ್ತೇವೆ. ನೀವು ಮಾತನಾಡುತ್ತಾ-ನಡೆಯುತ್ತಾ ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ ಆದರೆ ಅಲ್ಲಿ ಕೃಷ್ಣನಿಗೆ ಸ್ವದರ್ಶನ ಚಕ್ರವನ್ನು ತೋರಿಸಲಾಗಿದೆ. ಅದರಿಂದ ಎಲ್ಲರನ್ನೂ ಸಂಹಾರ ಮಾಡಿದ. ಅಕಾಸುರ-ಬಕಾಸುರರ ಚಿತ್ರವನ್ನು ತೋರಿಸಲಾಗಿದೆ ಆದರೆ ಇಂತಹ ಯಾವುದೇ ಮಾತು ನಡೆದಿಲ್ಲ.

ನೀವು ಮಕ್ಕಳು ಈಗ ಸ್ವದರ್ಶನ ಚಕ್ರಧಾರಿಗಳಾಗಿರಬೇಕು ಏಕೆಂದರೆ ಸ್ವದರ್ಶನ ಚಕ್ರದಿಂದಲೇ ನಿಮ್ಮ ಪಾಪಗಳು ತುಂಡಾಗುತ್ತವೆ. ಆಸುರೀತನವು ಸಮಾಪ್ತಿಯಾಗುತ್ತದೆ. ದೇವತೆಗಳಿಗೆ ಹಾಗೂ ಅಸುರರಿಗೆ ಯುದ್ಧವು ನಡೆದಿಲ್ಲ. ಅಸುರರು ಕಲಿಯುಗದಲ್ಲಿ, ದೇವತೆಗಳು ಸತ್ಯಯುಗದಲ್ಲಿರುತ್ತಾರೆ ಮಧ್ಯದಲ್ಲಿ ಈ ಸಂಗಮಯುಗವಿದೆ. ಶಾಸ್ತ್ರಗಳು ಭಕ್ತಿಮಾರ್ಗದ್ದಾಗಿದೆ, ಅದರಲ್ಲಿ ಜ್ಞಾನದ ಹೆಸರು-ಗುರುತೂ ಇಲ್ಲ. ಜ್ಞಾನ ಸಾಗರ ತಂದೆಯೊಬ್ಬರೇ ಎಲ್ಲರ ಸಲುವಾಗಿ ಇದ್ದಾರೆ. ತಂದೆಯ ವಿನಃ ಬೇರೆ ಯಾರೂ ಸಹ ಆತ್ಮಗಳನ್ನು ಪವಿತ್ರರನ್ನಾಗಿ ಮಾಡಿ ಹಿಂತಿರುಗಿ ಮನೆಗೆ ಕರೆದೊಯ್ಯುವುದಿಲ್ಲ. ಪಾತ್ರವನ್ನು ಖಂಡಿತ ಅಭಿನಯಿಸಬೇಕು ಅಂದಾಗ ಈಗ ನಿಮ್ಮ 84 ಜನ್ಮಗಳ ಚಕ್ರವನ್ನು ನೆನಪು ಮಾಡಬೇಕು. ನೀವು ಸತ್ಯಯುಗದಲ್ಲಿ ಹೊಸ ಜನ್ಮದಲ್ಲಿ ಬರುತ್ತೀರಿ, ಇಂತಹ ಜನ್ಮವು ಮತ್ತೆಂದೂ ಸಿಗುವುದಿಲ್ಲ. ಶಿವ ತಂದೆಯ ನಂತರ ಬ್ರಹ್ಮಾ ತಂದೆ. ಲೌಕಿಕ, ಪಾರಲೌಕಿಕ ಹಾಗೂ ಇವರು ಅಲೌಕಿಕ ತಂದೆಯಾಗಿದ್ದಾರೆ. ಈ ಸಮಯದ್ದೇ ಮಾತು, ಇದಕ್ಕೆ ಅಲೌಕಿಕವೆನ್ನಲಾಗುತ್ತದೆ. ನೀವು ಮಕ್ಕಳು ಆ ಶಿವ ತಂದೆಯನ್ನು ಸ್ಮರಣೆ ಮಾಡುತ್ತೀರಿ ಬ್ರಹ್ಮಾ ತಂದೆಯನ್ನಲ್ಲ. ಭಲೆ ಬ್ರಹ್ಮಾನ ಮಂದಿರದಲ್ಲಿ ಹೋಗಿ ಪೂಜೆ ಮಾಡುತ್ತಾರೆ. ಯಾವಾಗ ಸೂಕ್ಷ್ಮವತನದಲ್ಲಿ ಸಂಪೂರ್ಣ ಅವ್ಯಕ್ತ ಮೂರ್ತಿಯಾಗುತ್ತಾರೆಯೋ ಆಗಲೇ ಅವರಿಗೆ ಪೂಜೆ ಮಾಡುತ್ತಾರೆ. ಈ ಶರೀರಧಾರಿಯು (ಬ್ರಹ್ಮಾ) ಪೂಜೆಗೆ ಯೋಗ್ಯರಾಗಿಲ್ಲ, ಇವರೂ ಮನುಷ್ಯರಲ್ಲವೆ, ಮನುಷ್ಯರಿಗೆ ಪೂಜೆ ಮಾಡಲಾಗುವುದಿಲ್ಲ. ಬ್ರಹ್ಮಾನಿಗೆ ದಾಡಿ ತೋರಿಸಿದ್ದಾರೆಂದರೆ ಇವರು ಇಲ್ಲಿಯವರೇ ಎಂದು ತಿಳಿಯಲಾಗುತ್ತದೆ. ದೇವತೆಗಳಿಗೆ ದಾಡಿಯಿರುವುದಿಲ್ಲ. ಇವೆಲ್ಲಾ ಮಾತುಗಳನ್ನು ಮಕ್ಕಳಿಗೆ ತಿಳಿಸಲಾಗಿದೆ. ನಿಮ್ಮ ಹೆಸರು ಪ್ರಸಿದ್ಧಿಯಾಗಿರುವುದರಿಂದಲೇ ನಿಮ್ಮ ಮಂದಿರವನ್ನೂ ಕಟ್ಟಿಸಿದ್ದಾರೆ. ಸೋಮನಾಥ ಮಂದಿರವು ಎಷ್ಟೊಂದು ಶ್ರೇಷ್ಠವಾಗಿದೆ! ಸೋಮರಸ ಕುಡಿಸಿದರು, ಮುಂದೇನಾಯಿತು? ಮತ್ತೆ ಇಲ್ಲಿನ ದಿಲ್ವಾಡಾ ಮಂದಿರವನ್ನು ನೋಡಿ, ನಿಮ್ಮದೇ ನೆನಪಾರ್ಥವಾಗಿ ಈ ಮಂದಿರವನ್ನು ಮಾಡಿದ್ದಾರೆ. ಕೆಳಗಡೆ ತಪಸ್ಸು ಮಾಡುತ್ತಿದ್ದಾರೆ, ಮೇಲೆ ಸ್ವರ್ಗವನ್ನು ತೋರಿಸಿದ್ದಾರೆ. ಮನುಷ್ಯರು ಸ್ವರ್ಗವು ಮೇಲಿದೆಯೆಂದು ತಿಳಿಯುತ್ತಾರೆ. ಮಂದಿರದಲ್ಲಿಯೂ ಸ್ವರ್ಗವನ್ನು ಕೆಳಗಡೆ ಹೇಗೆ ಮಾಡುವುದು! ಆ ಕಾರಣ ಮೇಲೆ ತೋರಿಸಲಾಗಿದೆ. ಕಟ್ಟಿಸಿದವರಿಗೆ ಇದರ ಅರ್ಥವು ಗೊತ್ತಿಲ್ಲ. ದೊಡ್ಡ-ದೊಡ್ಡ ಕೋಟ್ಯಾಧಿಪತಿಗಳಿಗೆ ಇದನ್ನು ತಿಳಿಸಿರಿ. ನಿಮಗೆ ಈಗ ಜ್ಞಾನ ಸಿಕ್ಕಿರುವುದರಿಂದ ಇದನ್ನು ನೀವು ಅನೇಕರಿಗೆ ತಿಳಿಸಬಹುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಆಂತರ್ಯದಿಂದ ಆಸುರೀತನವನ್ನು ಸಮಾಪ್ತಿ ಮಾಡುವುದಕ್ಕೆ ನಡೆಯುತ್ತಾ-ತಿರುಗಾಡುತ್ತಾ ಸ್ವದರ್ಶನ ಚಕ್ರಧಾರಿಗಳಾಗಿ. ಪೂರ್ಣ ಚಕ್ರವನ್ನು ಸ್ಮೃತಿಯಲ್ಲಿ ತಂದುಕೊಳ್ಳಬೇಕು.

2. ತಂದೆಯ ನೆನಪಿನ ಜೊತೆ ಜೊತೆಗೆ ಬುದ್ಧಿಯು ಪರಮಧಾಮ ಮನೆಯಲ್ಲಿಯೇ ಸಿಕ್ಕಿ ಹಾಕಿಕೊಂಡಿರಬೇಕು. ತಂದೆಯು ಯಾವ ಸ್ಮೃತಿಯನ್ನು ತರಿಸುತ್ತಿದ್ದಾರೆಯೋ ಅದನ್ನು ಸ್ಮರಣೆ ಮಾಡುತ್ತಾ ನಿಮ್ಮ ಕಲ್ಯಾಣ ಮಾಡಿಕೊಳ್ಳಿ.

ವರದಾನ:
ಸರ್ವ ಗುಣ ಸಂಪನ್ನ ಆಗುವುದರ ಜೊತೆ-ಜೊತೆ ಯಾವುದಾದರೂ ಒಂದು ವಿಶೇಷತೆಯಲ್ಲಿ ವಿಶೇಷ ಪ್ರಭಾವಶಾಲಿ ಭವ.

ಹೇಗೆ ಡಾಕ್ಟರ್ಗಳು ಸಾಮಾನ್ಯ ಖಾಯಿಲೆಯ ಜ್ಞಾನವಂತೂ ಹೊಂದಿರುತ್ತಾರೆ ಆದರೆ ಜೊತೆ-ಜೊತೆ ಯಾವುದಾದರೂ ಒಂದು ಮಾತಿನಲ್ಲಿ ವಿಶೇಷ ಜ್ಞಾನದಲ್ಲಿ ಹೆಸರುವಾಸಿಯಾಗಿ ಬಿಡುತ್ತಾರೆ ಅದೇ ರೀತಿ ತಾವು ಮಕ್ಕಳು ಸಂಪೂರ್ಣ ಸಂಪನ್ನವಂತೂ ಆಗಲೇ ಬೇಕು ಆದರೂ ಸಹ ಒಂದು ವಿಶೇಷತೆಯನ್ನು ವಿಶೇಷ ರೂಪದಲ್ಲಿ ಅನುಭವದಲ್ಲಿ ತರುತ್ತಾ, ಸೇವೆಯಲ್ಲಿ ತರುತ್ತ್ತಾ ಮುಂದುವರೆಯುತ್ತಾ ಹೋಗಿ. ಹೇಗೆ ಸರಸ್ವತಿಯನ್ನು ವಿದ್ಯಾ ದೇವಿ, ಲಕ್ಷ್ಮೀಯನ್ನು ಧನದ ದೇವಿ ಎಂದು ಹೇಳಿ ಪೂಜಿಸುತ್ತಾರೆ. ಅದೇ ರೀತಿ ತಮ್ಮಲ್ಲಿ ಸರ್ವಗುಣ, ಸರ್ವಶಕ್ತಿಗಳು ಇದ್ದರೂ ಸಹಾ ಒಂದು ವಿಶೇಷತೆಯಲ್ಲಿ ವಿಶೇಷ ಸಂಶೋಧನೆ ಮಾಡಿ ಸ್ವಯಂ ಅನ್ನು ಫ್ರಭಾವಶಾಲಿ ಮಾಡಿಕೊಳ್ಳಿ.

ಸ್ಲೋಗನ್:
ವಿಕಾರ ರೂಪಿ ಸರ್ಪವನ್ನು ಸಹಜಯೋಗದ ಶಯ್ಯೆಯನ್ನಾಗಿ ಮಾಡಿಕೊಂಡುಬಿಡಿ ಆಗ ಸದಾ ನಿಶ್ಚಿಂತರಾಗಿರುತ್ತಾರೆ.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ಯಾವಾಗ ಮನಸ್ಸೇ ತಂದೆಯದಾಗಿದೆ ಅಂದಾಗ ಮನಸ್ಸು ಹೇಗೆ ಜೋಡಿಸುವುದು? ಪ್ರೀತಿ ಹೇಗೆ ಮಾಡುವುದು? ಇಂತಹ ಪ್ರಶ್ನೆಗಳು ಬರಲು ಸಾಧ್ಯವೇ ಇಲ್ಲ ಏಕೆಂದರೆ ಸದಾ ಲವಲೀನರಾಗಿರುತ್ತೀರಿ, ಪ್ರೀತಿಯ ಸ್ವರೂಪ, ಮಾಸ್ಟರ್ ಪ್ರೀತಿಯ ಸಾಗರರಾಗಿದ್ದೀರಿ, ಅಂದಾಗ ಪ್ರೀತಿಯನ್ನು ಮಾಡಬೇಕಾಗಿಲ್ಲ, ಪ್ರೀತಿಯ ಸ್ವರೂಪರಾಗಿದ್ದೀರಿ. ಎಷ್ಟು -ಎಷ್ಟು ಜ್ಞಾನ ಸೂರ್ಯ ಕಿರಣಗಳು ಅಥವಾ ಪ್ರಕಾಶ ಹೆಚ್ಚಾಗುತ್ತದೆ, ಅಷ್ಟು ಹೆಚ್ಚು ಪ್ರೀತಿಯ ಅಲೆಗಳು ಬರುತ್ತವೆ.