12.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಿದ್ದರೂ ಸಹ ಸದಾ ತಮ್ಮ ಈಶ್ವರೀಯ ವಿದ್ಯಾರ್ಥಿ ಜೀವನ ಮತ್ತು ವಿದ್ಯೆಯ ನೆನಪಿಟ್ಟುಕೊಳ್ಳಿ, ಸ್ವಯಂ ಭಗವಂತನು ನಮಗೆ ಓದಿಸುತ್ತಾರೆ ಎಂಬ ನಶೆಯಿರಲಿ”

ಪ್ರಶ್ನೆ:
ಯಾವ ಮಕ್ಕಳಿಗೆ ಜ್ಞಾನಾಮೃತವನ್ನು ಜೀರ್ಣ ಮಾಡಿಕೊಳ್ಳಲು ಬರುತ್ತದೆ ಅವರ ಲಕ್ಷಣವೇನಾಗಿದೆ?

ಉತ್ತರ:
ಅವರಿಗೆ ಸದಾ ಆತ್ಮೀಯ ನಶೆಯಿರುತ್ತದೆ ಮತ್ತು ಆ ನಶೆಯ ಆಧಾರದಿಂದ ಎಲ್ಲರ ಕಲ್ಯಾಣ ಮಾಡುತ್ತಿರುತ್ತಾರೆ. ಕಲ್ಯಾಣವನ್ನು ಮಾಡದೇ ಅನ್ಯಮಾತುಗಳನ್ನು ಮಾತನಾಡುವುದೂ ಸಹ ಅವರಿಗೆ ಇಷ್ಟವಾಗುವುದಿಲ್ಲ. ಮುಳ್ಳನ್ನು ಹೂವನ್ನಾಗಿ ಮಾಡುವ ಸೇವೆಯಲ್ಲಿಯೇ ತತ್ಫರರಾಗಿರುತ್ತಾರೆ.

ಓಂ ಶಾಂತಿ.
ಈಗ ನೀವು ಮಕ್ಕಳು ಇಲ್ಲಿ ಕುಳಿತಿದ್ದೀರಿ ಮತ್ತು ನಾವು ಪಾತ್ರಧಾರಿಗಳಾಗಿದ್ದೇವೆ, 84 ಜನ್ಮಗಳ ಚಕ್ರವನ್ನು ಪೂರ್ಣಮಾಡಿದ್ದೇವೆಂದು ನಿಮಗೆ ತಿಳಿದಿದೆ. ಇದು ನೀವು ಮಕ್ಕಳ ಸ್ಮೃತಿಯಲ್ಲಿ ಬರಬೇಕು ಏಕೆಂದರೆ ನಿಮಗೆ ತಿಳಿದಿದೆ- ತಂದೆಯು ನಮಗೆ ಪುನಃ ರಾಜ್ಯವನ್ನು ಪ್ರಾಪ್ತಿ ಮಾಡಿಸಲು ಹಾಗೂ ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡಲು ಬಂದಿದ್ದಾರೆ. ಈ ಮಾತುಗಳನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸುವುದಿಲ್ಲ. ನೀವು ಇಲ್ಲಿ ಕುಳಿತುಕೊಂಡಿದ್ದೀರೆಂದರೆ ಹೇಗೆ ಶಾಲೆಯಲ್ಲಿ ಕುಳಿತಿದ್ದೀರಿ. ಹೊರಗಡೆ ಇದ್ದಾಗ ಶಾಲೆಯಲ್ಲಿ ಇದ್ದಂತೆ ಇಲ್ಲ. ನಿಮಗೆ ತಿಳಿದಿದೆ- ಇದು ಶ್ರೇಷ್ಠಾತಿಶ್ರೇಷ್ಠ ಆತ್ಮಿಕ ಶಾಲೆಯಾಗಿದೆ. ಆತ್ಮಿಕ ತಂದೆಯು ಕುಳಿತು ಓದಿಸುತ್ತಾರೆ. ಮಕ್ಕಳಿಗೆ ವಿದ್ಯೆಯ ನೆನಪು ಬರಬೇಕಲ್ಲವೆ. ಇವರೂ ಸಹ ಮಗನಾದರು, ಇವರಿಗೆ ಅಥವಾ ಎಲ್ಲರಿಗೂ ಕಲಿಸಿಕೊಡುವವರು ಆ ತಂದೆಯಾಗಿದ್ದಾರೆ, ಅವರು ಎಲ್ಲಾ ಮನುಷ್ಯ ಮಾತ್ರರ ಆತ್ಮಗಳ ತಂದೆಯಾಗಿದ್ದಾರೆ. ಅವರು ಬಂದು ಶರೀರದ ಲೋನ್ ತೆಗೆದುಕೊಂಡು ನಿಮಗೆ ತಿಳಿಸುತ್ತಿದ್ದಾರೆ. ಪ್ರತಿನಿತ್ಯವೂ ತಿಳಿಸುತ್ತಾರೆ, ನೀವಿಲ್ಲಿ ಕುಳಿತುಕೊಂಡಾಗಲೇ ಸ್ಮೃತಿಯಿರಬೇಕು- ನಾವು 84 ಜನ್ಮಗಳನ್ನು ತೆಗೆದುಕೊಂಡೆವು, ನಾವು ವಿಶ್ವದ ಮಾಲೀಕರಾಗಿದ್ದೆವು, ದೇವಿ-ದೇವತೆಗಳಾಗಿದ್ದೆವು ಮತ್ತೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಬಂದು ನೆಲವನ್ನು ಹಿಡಿದಿದ್ದೇವೆ. ಭಾರತವೇ ಎಷ್ಟೊಂದು ಸಾಹುಕಾರನಾಗಿತ್ತು! ಎಲ್ಲವೂ ಸ್ಮೃತಿಗೆ ಬಂದಿದೆ. ಭಾರತದ್ದೇ ಕಥೆಯಾಗಿದೆ, ಜೊತೆಜೊತೆಗೆ ತಮ್ಮದೂ ಸಹ. ತಮ್ಮನ್ನು ಮರೆತುಬಿಡಬೇಡಿ. ನಾವು ಸ್ವರ್ಗದಲ್ಲಿ ರಾಜ್ಯ ಮಾಡುತ್ತಿದ್ದೆವು ನಂತರ ನಾವು 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಯಿತು. ಇದನ್ನು ಇಡೀ ದಿನ ಸ್ಮೃತಿಯಲ್ಲಿ ತಂದುಕೊಳ್ಳಬೇಕಾಗಿದೆ. ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಲೂ ವಿದ್ಯೆಯು ನೆನಪಿಗೆ ಬರಬೇಕಲ್ಲವೆ. ಹೇಗೆ ನಾವು ವಿಶ್ವದ ಮಾಲೀಕರಾಗಿದ್ದೆವು ನಂತರ ನಾವು ಕೆಳಗಿಳಿಯುತ್ತಾ ಬಂದಿದ್ದೆವೆ. ಇದು ಬಹಳ ಸಹಜವಾಗಿದೆ ಆದರೆ ಆ ನೆನಪೂ ಸಹ ಯಾರಿಗೂ ಇರುವುದಿಲ್ಲ. ಆತ್ಮವು ಪವಿತ್ರವಾಗಿರದೇ ಇರುವಕಾರಣ ನೆನಪು ಜಾರಿಹೋಗುತ್ತದೆ. ನಮಗೆ ಭಗವಂತನೇ ಓದಿಸುತ್ತಾರೆ ಎಂಬ ನೆನಪು ಮರೆತುಹೋಗುತ್ತದೆ. ನಾವು ತಂದೆಯ ವಿದ್ಯಾರ್ಥಿಗಳಾಗಿದ್ದೇವೆ, ತಂದೆಯು ಹೇಳುತ್ತಿರುತ್ತಾರೆ- ನೆನಪಿನ ಯಾತ್ರೆಯಲ್ಲಿರಿ, ತಂದೆಯು ನಮಗೆ ಓದಿಸಿ ಇಂತಹ ದೇವಿ-ದೇವತೆಗಳನ್ನಾಗಿ ಮಾಡುತ್ತಿದಾರೆ- ಇಡೀ ದಿನ ಈ ಸ್ಮೃತಿಯು ಬರುತ್ತಿರಲಿ. ತಂದೆಯೇ ಸ್ಮೃತಿ ತರಿಸುತ್ತಾರೆ- ಇದೇ ಭಾರತದಲ್ಲಿ ನಾವು ದೇವಿ-ದೇವತೆಗಳಾಗಿದ್ದೆವು ಈಗ ಅಸುರರಾಗಿದ್ದೇವೆ, ಮೊದಲು ನಿಮ್ಮ ಬುದ್ಧಿಯು ಅಸುರಿಯಾಗಿತ್ತು. ಈಗ ತಂದೆಯು ಈಶ್ವರೀಯ ಬುದ್ಧಿಯನ್ನು ನೀಡಿದ್ದಾರೆ ಆದರೂ ಸಹ ಕೆಲವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ತಂದೆಯು ಈಶ್ವರೀಯ ಬುದ್ಧಿಯನ್ನು ನೀಡಿದ್ದಾರೆ ಆದರೂ ಸಹ ಕೆಲವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ, ಮರೆತುಹೋಗುತ್ತಾರೆ. ತಂದೆಯು ಎಷ್ಟೊಂದು ನಶೆಯೇರಿಸುತ್ತಾರೆ. ನೀವು ಪುನಃ ದೇವತೆಗಳಾಗುತ್ತೀರಿ ಅಂದಮೇಲೆ ಆ ನಶೆಯಿರಬೇಕಲ್ಲವೆ. ನಾವು ನಮ್ಮ ರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ, ನಾವು ನಮ್ಮ ರಾಜ್ಯವನ್ನು ಮಾಡುತ್ತೇವೆ. ಕೆಲವರಿಗಂತೂ ಇದು ಸ್ವಲ್ಪವೂ ನಶೆಯೇರಿರುವುದೋ ಅವರು ಅನ್ಯರ ಕಲ್ಯಾಣ ಮಾಡುವ ಮಾತಿನ ಜೀರ್ಣವಾಗುವುದೇ ಇದು ಸ್ವಲ್ಪವೂ ನಶೆಯೇರಿರುವುದೋ ಅವರು ಅನ್ಯರ ಕಲ್ಯಾಣ ಮಾಡುವ ಮಾತಿನ ಜೀರ್ಣವಾಗುವುದೇ ಇಲ್ಲ. ಯಾರಿಗೆ ನಶೆಯೇರಿರುವುದೋ ಅವರು ಅನ್ಯರ ಕಲ್ಯಾಣ ಮಾಡುವ ಮಾತಿನ ವಿನಃ ಮತ್ತ್ಯಾವುದೇ ಮಾತನ್ನು ಮಾತನಾಡುವುದೂ ಸಹ ಇಷ್ಟ ಪಡುವುದಿಲ್ಲ. ಹೂಗಳನ್ನಾಗಿ ಮಾಡುವ ಸೇವೆಯಲ್ಲಿಯೇ ತೊಡಗಿರುತ್ತಾರೆ. ನಾವು ಮೊದಲು ಹೂಗಳಾಗಿದ್ದೆವು ನಂತರ ಮಾಯೆಯು ಮುಳ್ಳನ್ನಾಗಿ ಮಾಡಿಬಿಟ್ಟಿದೆ, ಈಗ ಪುನಃ ಹೂಗಳಾಗುತ್ತೇವೆ. ತಮ್ಮೊಂದಿಗೆ ಈ ರೀತಿಯಾಗಿ ಮಾತನಾಡಿಕೊಳ್ಳಬೇಕು, ಈ ನಶೆಯಲ್ಲಿದ್ದು ನೀವು ಅನ್ಯರಿಗೆ ತಿಳಿಸುತ್ತೀರೆಂದರೆ ಬಹುಬೇಗನೆ ಬಾಣವು ನಾಟುವುದು. ಭಾರತವು ಭಗವಂತನ ಹೂದೋಟವಾಗಿತ್ತು, ಈಗ ಪತಿತನಾಗಿಬಿಟ್ಟಿದೆ. ನಾವೇ ಇಡೀ ವಿಶ್ವದ ಮಾಲೀಕರಾಗಿದ್ದೆವು, ಇದು ಎಷ್ಟು ದೊಡ್ಡ ಮಾತಾಗಿದೆ. ಈಗ ಪುನಃ ನಾವು ಹೇಗಾಗಿಬಿಟ್ಟಿದ್ದೇವೆ. ಎಷ್ಟೊಂದು ಕೆಳಗೆ ಬಂದಿದ್ದೇವೆ, ಇದು ನಮ್ಮ ಏರುವ ಮತ್ತು ಇಳಿಯುವ ನಾಟಕವಾಗಿದೆ ಅರ್ಥಾತ್ ಉತ್ಥಾನ ಮತ್ತು ಪಥನದ ನಾಟಕವಾಗಿದೆ. ಈ ಕಥೆಯನ್ನು ತಂದೆಯು ತಿಳಿಸಿದ್ದಾರೆ. ಇದು ಸತ್ಯವಾದ ಕಥೆ, ಅದು ಅಸತ್ಯಕಥೆಯಾಗಿದೆ, ಅವರು ಸತ್ಯನಾರಾಯಣನ ಕಥೆಯನ್ನು ತಿಳಿಸುತ್ತಾರೆ ಆದರೆ ನಾವು ಹೇಗೆ ಮೇಲೆ ಹತ್ತಿದೆವು ಮತ್ತೆ ಹೇಗೆ ಕೆಳಗಿಳಿದ್ದೇವೆ ಎಂಬುದನ್ನೇ ತಿಳಿದುಕೊಂಡಿಲ್ಲ. ಈಗ ತಂದೆಯು ಸತ್ಯವಾದ ಸತ್ಯನಾರಾಯಣನ ಕಥೆಯನ್ನು ತಿಳಿಸಿದ್ದಾರೆ. ರಾಜ್ಯಭಾಗ್ಯವನ್ನು ಹೇಗೆ ಕಳೆದುಕೊಂಡೆವು ಎಂಬುದೆಲ್ಲವೂ ತಮ್ಮ ಮೇಲಿದೆ. ಆತ್ಮಕ್ಕೂ ಸಹ ಅರ್ಥವಾಗಿದೆ- ನಾವು ಹೇಗೆ ಈ ತಂದೆಯಿಂದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ. ತಂದೆಯು ಇಲ್ಲಿ ಕೇಳಿದಾಗ ಹೌದು ಎಂದೂ ಹೇಳುತ್ತಾರೆ ಆದರೆ ಹೊರಗೆ ಹೋಗುವುದರಿಂದ ಏನೂ ನಶೆಯಿರುವುದಿಲ್ಲ. ಮಕ್ಕಳೇ ಸ್ವಯಂ ತಿಳಿದುಕೊಳ್ಳುತ್ತಾರೆ- ಭಲೆ ನಾವು ಕೈಯನ್ನೆತ್ತುತ್ತೇವೆ ಆದರೆ ನಮ್ಮ ಚಲನೆಯು ಹೀಗಿದೆ, ನಶೆಯಿರುವುದಕ್ಕೆ ಸಾಧ್ಯವಿಲ್ಲ, ಈ ರೀತಿ ಭಾಸವಾಗುತ್ತದೆಯಲ್ಲವೆ.

ತಂದೆಯು ಮಕ್ಕಳಿಗೆ ಸ್ಮೃತಿ ತರಿಸುತ್ತಾರೆ- ಮಕ್ಕಳೇ, ನಾನು ನಿಮಗೆ ರಾಜ್ಯಭಾಗ್ಯವನ್ನು ಕೊಟ್ಟಿದ್ದೆನು ಮತ್ತೆ ನೀವು ಕಳೆದುಕೊಂಡಿರಿ, ನೀವು ಕೆಳಗಿಳಿಯುತ್ತಾ ಬಂದಿದ್ದೀರಿ ಏಕೆಂದರೆ ಇದು ಏರುವ ಮತ್ತು ಇಳಿಯುವ ನಾಟಕವಾಗಿದೆ. ಇಂದು ರಾಜನಾಗಿದ್ದರೆ ನಾಳೆ ಅವರನ್ನು ಆ ಸ್ಥಾನದಿಂದ ಇಳಿಸಿಬಿಡುತ್ತಾರೆ. ಪತ್ರಿಕೆಗಳಲ್ಲಿ ಬಹಳಷ್ಟು ಇಂತಹ ಮಾತುಗಳನ್ನು ನೋಡುತ್ತೇವೆ. ಇದರ ಉದಾಹರಣೆಯನ್ನು ಕೊಟ್ಟಾಗ ಅರ್ಥವಾಗುವುದು. ಇದು ನಾಟಕವಾಗಿದೆಯೆಂದು ನೆನಪಿದ್ದರೂ ಸಹ ಖುಷಿಯಿರುವುದು. ಬುದ್ಧಿಯಲ್ಲಿದೆಯಲ್ಲವೆ- ಇಂದಿಗೆ 5000 ವರ್ಷಗಳ ಮೊದಲು ಶಿವತಂದೆಯು ಬಂದಿದ್ದರು, ಬಂದು ರಾಜಯೋಗವನ್ನು ಕಲಿಸಿದ್ದರು, ಯುದ್ಧವು ನಡೆದಿತ್ತು. ಈಗ ಮತ್ತೆ ಇವೆಲ್ಲಾ ಸತ್ಯಮಾತುಗಳನ್ನು ತಂದೆಯು ತಿಳಿಸುತ್ತಾರೆ. ಇದು ಪುರುಷೋತ್ತಮ ಯುಗವಾಗಿದೆ, ಕಲಿಯುಗದ ನಂತರ ಈ ಪುರುಷೋತ್ತಮ ಯುಗವು ಬರುತ್ತದೆ. ಕಲಿಯುಗಕ್ಕೆ ಪುರುಷೋತ್ತಮ ಯುಗವೆಂದು ಹೇಳುವುದಿಲ್ಲ, ಸತ್ಯಯುಗಕ್ಕೂ ಹೇಳುವುದಿಲ್ಲ. ಆಸುರೀ ಸಂಪ್ರದಾಯ ಮತ್ತು ದೈವೀ ಸಂಪ್ರದಾಯವೆಂದು ಹೇಳುತ್ತಾರೆ. ಅದರ ನಡುವಿನದು ಇದು ಸಂಗಮಯುಗವಾಗಿದೆ. ಯಾವಾಗ ಹಳೆಯ ಪ್ರಪಂಚದಿಂದ ಹೊಸ ಪ್ರಪಂಚವಾಗುತ್ತದೆ, ಹೊಸದರಿಂದ ಹಳೆಯದಾಗುವುದರಲ್ಲಿ ಇಡೀ ಚಕ್ರವು (5000 ವರ್ಷ) ಹಿಡಿಸುತ್ತದೆ. ಈಗ ಸಂಗಮಯುಗವಾಗಿದೆ, ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಅದು ಈಗಿಲ್ಲ. ಉಳಿದ ಅನೇಕ ಧರ್ಮಗಳು ಬಂದುಬಿಟ್ಟಿದೆ. ಇದು ನಿಮ್ಮ ಬುದ್ಧಿಯಲ್ಲಿರುತ್ತದೆ. ಇಂತಹವರು ಅನೇಕರಿದ್ದಾರೆ, 6-8 ತಿಂಗಳು ಅಥವಾ ಒಂದು ವರ್ಷದವರೆವಿಗೂ ಸಹ ಓದಿ ಮತ್ತೆ ಕನಿಷ್ಟರಾಗುತ್ತಾರೆ, ಅನುತ್ತೀರ್ಣರಾಗಿಬಿಡುತ್ತಾರೆ. ಭಲೆ ಪವಿತ್ರರಾಗುತ್ತಾರೆ ಆದರೆ ವಿದ್ಯೆಯನ್ನು ಓದಲಿಲ್ಲವೆಂದರೆ ಸಿಕ್ಕಿಹಾಕಿಕೊಳ್ಳುತ್ತಾರೆ. ಕೇವಲ ಪವಿತ್ರತೆಯು ಕೆಲಸಕ್ಕೆ ಬರುವುದಿಲ್ಲ. ಹೀಗೆ ಅನೇಕ ಮಂದಿ ಸನ್ಯಾಸಿಗಳೂ ಇದ್ದಾರೆ, ಅವರು ಸನ್ಯಾಸಧರ್ಮವನ್ನು ಬಿಟ್ಟುಹೋಗಿ ಮತ್ತೆ ಗೃಹಸ್ಥಿಗಳಾಗಿಬಿಡುತ್ತಾರೆ, ವಿವಾಹ ಮಾಡಿಕೊಳ್ಳುತ್ತಾರೆ. ಆದ್ದರಿಂದ ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ನೀವು ಶಾಲೆಯಲ್ಲಿ ಕುಳಿತಿದ್ದೀರಿ. ಇದು ಸ್ಮೃತಿಯಲ್ಲಿದೆ- ನಾವು ನಮ್ಮ ರಾಜ್ಯವನ್ನು ಹೇಗೆ ಕಳೆದುಕೊಂಡೆವು, ಎಷ್ಟು ಜನ್ಮಗಳನ್ನು ಕಳೆದುಕೊಂಡೆವು. ಈಗ ಮತ್ತೆ ತಂದೆಯು ಹೇಳುತ್ತಾರೆ- ಮಕ್ಕಳೇ, ವಿಶ್ವದ ಮಾಲೀಕರಾಗುವುದಕ್ಕೆ ಅವಶ್ಯವಾಗಿ ಪಾರಾಗಬೇಕಾಗಿದೆ. ಎಷ್ಟು ಹೆಚ್ಚು ನೆನಪು ಮಾಡುತ್ತೀರೋ ಅಷ್ಟು ಪವಿತ್ರರಾಗುತ್ತಾ ಹೋಗುತ್ತೀರಿ ಏಕೆಂದರೆ ಚಿನ್ನದಲ್ಲಿ ಬೆರಕೆಯುಂಟಾದರೆ ಅದು ಹೋಗುವುದು ಹೇಗೆ? ನಾವಾತ್ಮಗಳು ಸತೋಪ್ರಧಾನರಾಗಿದ್ದೆವು, 24 ಕ್ಯಾರೇಟ್ ಚಿನ್ನದ ಸಮಾನರಿದ್ದೆವು ಮತ್ತೆ ಕೆಳಗಿಳಿಯುತ್ತಾ ಈ ಸ್ಥಿತಿಯನ್ನು ತಲುಪಿದೆವು. ನಾವು ಏನಾಗಿಬಿಟ್ಟೆವು! ನಾನು ಹೇಗಿದ್ದೆನು, ಏನಾಗಿಬಿಟ್ಟಿದ್ದೇನೆಂದು ತಂದೆಯು ಹೇಳುವುದಿಲ್ಲ. ನಾವು ದೇವತೆಗಳಾಗಿದ್ದೆವು ಎಂಬ ಮಾತನ್ನು ನೀವು ಮನುಷ್ಯರು ಹೇಳುತ್ತೀರಿ. ತಂದೆಯು ಶ್ರೇಷ್ಠ ಮತ್ತು ಕನಿಷ್ಠರಾಗುವುದಿಲ್ಲ. ಭಾರತದ ಮಹಿಮೆಯಿದೆಯಲ್ಲವೆ. ಭಾರತದಲ್ಲಿ ಯಾರು ಬರುತ್ತಾರೆ, ಯಾವ ಜ್ಞಾನವನ್ನು ಕೊಡುತ್ತಾರೆ- ಇದು ಯಾರಿಗೂ ತಿಳಿದಿಲ್ಲ. ಮುಕ್ತಿದಾತನು ಯಾವಾಗ ಬರುತ್ತಾರೆಂದು ತಿಳಿದಿರಬೇಕಲ್ಲವೆ. ಭಾರತವು ಪ್ರಾಚೀನವೆಂದು ಗಾಯನವಿದೆ ಆದ್ದರಿಂದ ಅವಶ್ಯವಾಗಿ ಭಾರತದಲ್ಲಿಯೇ ತಂದೆಯ ಅವತರಣೆಯಾಗುವುದು ಅಥವಾ ತಂದೆಯ ಜಯಂತಿಯನ್ನೂ ಭಾರತದಲ್ಲಿ ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ತಂದೆಯು ಇಲ್ಲಿಗೇ ಬರುತ್ತಾರೆ. ಅವರು ಕುದುರೆಗಾಡಿಯನ್ನು ತೋರಿಸಿದ್ದಾರೆ, ಎಷ್ಟೊಂದು ಅಂತರವಿದೆ! ಕೃಷ್ಣ ಮತ್ತು ರಥವನ್ನು ತೋರಿಸುತ್ತಾರೆ, ನನ್ನ ಬಗ್ಗೆ ಯಾರಿಗೂ ತಿಳಿದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ- ತಂದೆಯು ಈ ರಥದಲ್ಲಿ ಬರುತ್ತಾರೆ, ಇವರಿಗೆ ಭಾಗ್ಯಶಾಲಿ ರಥವೆಂದು ಹೇಳಲಾಗುತ್ತದೆ. ಬ್ರಹ್ಮನಿಂದ ವಿಷ್ಣು ಚಿತ್ರದಲ್ಲಿ ಎಷ್ಟು ಸ್ಪಷ್ಟವಾಗಿದೆ. ತ್ರಿಮೂರ್ತಿಗಳ ಮೇಲೆ ಶಿವ, ಈ ಶಿವನ ಪರಿಚಯವನ್ನು ಯಾರು ಕೊಟ್ಟರು? ವಿಷ್ಣುವಿನಿಂದ ಬ್ರಹ್ಮಾ. ಇದನ್ನು ನೀವು ಮಕ್ಕಳಿಗೆ ತಿಳಿಸಲಾಗಿದೆ. 84 ಜನ್ಮಗಳ ನಂತರ ವಿಷ್ಣುವಿನಿಂದ ಬ್ರಹ್ಮನಾಗುವುದೆಲ್ಲಿ, ಒಂದು ಸೆಕೆಂಡಿನಲ್ಲಿ ಬ್ರಹ್ಮನಿಂದ ವಿಷ್ಣುವಾಗುವುದೆಲ್ಲಿ. ಇವು ಬುದ್ಧಿಯಲ್ಲಿ ತಿಳಿದುಕೊಳ್ಳುವ ವಿಚಿತ್ರ ಮಾತುಗಳಾಗಿವೆ. ಮೊಟ್ಟಮೊದಲಿಗೆ ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ಭಾರತವು ಅವಶ್ಯವಾಗಿ ಸ್ವರ್ಗವಾಗಿತ್ತು, ಸ್ವರ್ಗದ ರಚಯಿತ ಪರಮಾತ್ಮನೇ ಸ್ವರ್ಗವನ್ನು ರಚಿಸುವರು. ಈ ಚಿತ್ರವು ಬಹಳ ಸುಂದರವಾಗಿದೆ, ತಿಳಿಸಿಕೊಡುವುದಕ್ಕೆ ಉಮ್ಮಂಗವಿರುತ್ತದೆಯಲ್ಲವೆ. ತಂದೆಗೂ ಉಮ್ಮಂಗವಿದೆ, ನೀವು ಸೇವಾಕೇಂದ್ರಗಳಲ್ಲಿಯೂ ಹೀಗೆ ತಿಳಿಸುತ್ತಾ ಇರುತ್ತೀರಿ. ಇಲ್ಲಂತೂ ಡೈರೆಕ್ಟ್ ತಂದೆಯಿದ್ದಾರೆ, ತಂದೆಯು ಕುಳಿತು ಆತ್ಮಗಳಿಗೆ ತಿಳಿಸುತ್ತಾರೆ- ಆತ್ಮಗಳು ತಿಳಿಸುವುದರಲ್ಲಿ ಡೈರೆಕ್ಟ್ ತಂದೆಯು ತಿಳಿಸುವುದರಲ್ಲಿ ಅವಶ್ಯವಾಗಿ ಅಂತರವಿರುತ್ತದೆ ಆದ್ದರಿಂದ ತಂದೆಯಿಂದ ಕೇಳುವುದಕ್ಕಾಗಿ ಇಲ್ಲಿ ಸನ್ಮುಖದಲ್ಲಿ ಬರುತ್ತೀರಿ. ತಂದೆಗೆ ಪದೇ-ಪದೇ ಮಕ್ಕಳೇ, ಮಕ್ಕಳೇ ಎಂದು ಹೇಳುತ್ತಾರೆ. ಎಷ್ಟು ತಂದೆಯ ಪ್ರಭಾವ ಬೀರುವುದೋ ಅಷ್ಟು ಸಹೋದರತ್ವದ ಪ್ರಭಾವವು ಬೀರುವುದಿಲ್ಲ. ಇಲ್ಲಿ ನೀವು ತಂದೆಯ ಸನ್ಮುಖದ್ಲಲಿ ಕುಳಿತಿದ್ದೀರಿ. ಆತ್ಮನು ಮತ್ತು ಪರಮಾತ್ಮನ ಮೇಳವೆಂದು ಕರೆಯಲಾಗುತ್ತದೆ. ತಂದೆಯು ಸನ್ಮುಖದಲ್ಲಿ ತಿಳಿಸಿದಾಗ ನಶೆಯೇರಿರುತ್ತದೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ ಅಂದಮೇಲೆ ನಾವು ಅವರ ಮಾತನ್ನೇ ಪಾಲಿಸುವುದಿಲ್ಲವೆ? ಎಂದು ತಿಳಿಯುತ್ತಾರೆ. ನಾನು ನಿಮ್ಮನ್ನು ಸ್ವರ್ಗದಲ್ಲಿ ಕಳುಹಿಸಿಕೊಟ್ಟಿದ್ದೆನು ಮತ್ತೆ ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗಿದ್ದೀರಿ. ಮತ್ತೆ ನೀವು ಪಾವನರಾಗುವುದಿಲ್ಲವೆ! ಆತ್ಮಗಳಿಗೆ ಹೇಳುತ್ತೀರಿ- ಹೌದು, ತಂದೆಯು ಸತ್ಯವನ್ನು ಹೇಳುತ್ತಾರೆಂದು ಕೆಲವರು ತಿಳಿಯುತ್ತಾರೆ. ಇನ್ನೂ ಕೆಲವರು ಹೇಳುತ್ತಾರೆ- ಬಾಬಾ, ನಾವೇಕೆ ಪವಿತ್ರರಾಗಬಾರದು!

ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಕಳೆಯುತ್ತವೆ. ನೀವು ಸತ್ಯಚಿನ್ನವಾಗಿಬಿಡುತ್ತೀರಿ, ನಾನು ಎಲ್ಲರ ಪತಿತ-ಪಾವನ ತಂದೆಯಾಗಿದ್ದೇನೆ. ತಂದೆಯ ತಿಳಿಸುವಿಕೆ ಮತ್ತು ಆತ್ಮಗಳ ತಿಳಿಸುವಿಕೆಯಲ್ಲಿ ಎಷ್ಟೊಂದು ಅಂತರವಿದೆ! ತಿಳಿದುಕೊಳ್ಳಿ, ಯಾರಾದರೂ ಹೊಸಬರು ಬರುತ್ತಾರೆಂದರೆ ಅವರಲ್ಲಿಯೂ ಯಾರು ಇಲ್ಲಿನ ಹೂವಾಗಿದ್ದಾರೆಯೋ ಅವರಿಗೆ ಪ್ರೇರಣೆ ಸಿಗುವುದು. ಇವರು ಸರಿಯಾಗಿ ಹೇಳುತ್ತಾರೆ ಎಂದು ತಿಳಿಯುತ್ತಾರೆ. ಯಾರು ಇಲ್ಲಿಯವರಲ್ಲವೋ ಅವರಿಗೆ ಅರ್ಥವಾಗುವುದಿಲ್ಲ ಅಂದಾಗ ತಿಳಿಸಿ- ತಂದೆಯು ನಾವಾತ್ಮಗಳಿಗೆ ಹೇಳುತ್ತಾರೆ, ನೀವು ಪಾವನರಾಗಿ. ಮನುಷ್ಯರು ಪಾವನರಾಗಲು ಗಂಗಾಸ್ನಾನ ಮಾಡುತ್ತಾರೆ, ಗುರುಗಳನ್ನು ಮಾಡಿಕೊಳ್ಳುತ್ತಾರೆ ಆದರೆ ಪತಿತ-ಪಾವನನಂತೂ ತಂದೆಯೇ ಆಗಿದ್ದಾರೆ. ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ- ನೀವು ಎಷ್ಟೊಂದು ಪತಿತರಾಗಿದ್ದೀರಿ ಆದ್ದರಿಂದ ಪತಿತ-ಪಾವನ ಬನ್ನಿ ಎಂದು ಆತ್ಮವು ನೆನಪು ಮಾಡುತ್ತದೆ. ತಂದೆಯು ತಿಳಿಸುತ್ತಾರೆ- ನಾನು ಕಲ್ಪ-ಕಲ್ಪವೂ ಬರುತ್ತೇನೆ ಮತ್ತು ನೀವು ಮಕ್ಕಳಿಗೆ ಹೇಳುತ್ತೇನೆ- ಇದೊಂದು ಅಂತಿಮಜನ್ಮದಲ್ಲಿ ಪವಿತ್ರರಾಗಿ. ಈ ರಾವಣರಾಜ್ಯವು ಸಮಾಪ್ತಿಯಾಗಲಿದೆ. ಮುಖ್ಯಮಾತು ಪಾವನರಾಗುವುದಾಗಿದೆ. ಸ್ವರ್ಗದಲ್ಲಿ ವಿಕಾರವಿರುವುದಿಲ್ಲ. ಯಾರಾದರೂ ಬಂದಾಗ ಅವರಿಗೆ ತಿಳಿಸಿ, ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗಿಬಿಡುತ್ತೀರಿ, ತುಕ್ಕುಬಿಟ್ಟು ಹೋಗುವುದು. ಮನ್ಮನಾಭವ ಶಬ್ಧವು ನೆನಪಿದೆಯಲ್ಲವೆ. ತಂದೆಯು ನಿರಾಕಾರನಾಗಿದ್ದಾರೆ, ನಾವಾತ್ಮಗಳೂ ನಿರಾಕಾರಿಯಾಗಿದ್ದೇವೆ, ಹೇಗೆ ನಾವು ಶರೀರದ ಮೂಲಕ ಕೇಳುತ್ತೇವೆಯೋ ತಂದೆಯೂ ಸಹ ಈ ಶರೀರದಲ್ಲಿ ಬಂದು ತಿಳಿಸಿಕೊಡುತ್ತಾರೆ. ಇಲ್ಲದಿದ್ದರೆ ನನ್ನೊಬ್ಬನನ್ನೇ ನೆನಪು ಮಾಡಿ, ದೇಹದ ಎಲ್ಲಾ ಸಂಬಂಧಗಳನ್ನು ಬಿಡಿ ಎಂದು ಹೇಗೆ ಹೇಳುವರು? ಇಲ್ಲಿ ಬಂದು ಅವಶ್ಯವಾಗಿ ಬ್ರಹ್ಮನಲ್ಲಿ ಪ್ರವೇಶ ಮಾಡುವರು. ಪ್ರಜಾಪಿತನು ಈಗ ಪ್ರತ್ಯಕ್ಷದಲ್ಲಿದ್ದಾರೆ, ಇವರ ಮೂಲಕ ನಮಗೆ ತಂದೆಯು ಈ ರೀತಿ ಹೇಳುತ್ತಾರೆ, ನಾವು ಬೇಹದ್ದಿನ ತಂದೆಯ ಮಾತನ್ನೇ ಪಾಲಿಸುತ್ತೇವೆ. ಅವರು ಹೇಳುತ್ತಾರೆ- ಪಾವನರಾಗಿ, ಪತಿತತನವನ್ನು ಬಿಡಿ. ಹಳೆಯ ದೇಹದ ಅಭಿಮಾನವನ್ನು ಬಿಡಿ, ನನ್ನನ್ನು ನೆನಪು ಮಾಡಿದರೆ ಅಂತ್ಯಮತಿ ಸೋ ಗತಿಯಾಗುವುದು, ನೀವು ಲಕ್ಷ್ಮೀ-ನಾರಾಯಣರಾಗುತ್ತೀರಿ.

ತಂದೆಯಿಂದ ವಿಮುಖರನ್ನಾಗಿ ಮಾಡುವ ಮುಖ್ಯ ಅವಗುಣವಾಗಿದೆ- ಒಬ್ಬರು ಇನ್ನೊಬ್ಬರ ಪರಚಿಂತನೆ ಮಾಡುವುದು, ಕೆಟ್ಟಮಾತುಗಳನ್ನು ಕೇಳುವುದು ಮತ್ತು ಮಾಡುವುದು ತಂದೆಯ ಆದೇಶವಾಗಿದೆ- ನೀವು ಕೆಟ್ಟಮಾತುಗಳನ್ನು ಕೇಳಬಾರದು, ಇವರ ಮಾತನ್ನು ಅವರಿಗೆ, ಅವರ ಮಾತನ್ನು ಇವರಿಗೆ ಹೇಳುವುದು- ಈ ದೂತಿತನವು ನೀವು ಮಕ್ಕಳಲ್ಲಿರಬಾರದು. ಈ ಸಮಯದಲ್ಲಿ ಪ್ರಪಂಚದಲ್ಲಿ ಎಲ್ಲರೂ ವಿಪರೀತ ಬುದ್ಧಿಯವರಾಗಿದ್ದಾರಲ್ಲವೆ. ಒಬ್ಬ ರಾಮನ ಮಾತುಗಳ ವಿನಃ ಅನ್ಯರ ಮಾತನ್ನು ತಿಳಿಸುವುದಕ್ಕೆ ದೂತಿತನವೆಂದು ಹೇಳಲಾಗುತ್ತದೆ. ಒಬ್ಬ ರಾಮನ ಮಾತುಗಳ ವಿನಃ ಮತ್ತ್ಯಾರ ಮಾತನ್ನು ತಿಳಿಸುವುದಕ್ಕೆ ದೂತಿತನವೆಂದು ಹೇಳಲಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ- ಈ ದೂತಿತನವನ್ನು ಬಿಡಿ, ನೀವು ಎಲ್ಲಾ ಆತ್ಮಗಳಿಗೆ ತಿಳಿಸಿ- ಹೇ ಸೀತೆಯರೇ, ನೀವು ಒಬ್ಬ ರಾಮನೊಂದಿಗೆ ಯೋಗವನ್ನಿಡಿ. ನೀವು ಸಂದೇಶ ವಾಹಕರಾಗಿದ್ದೀರಿ. ಇದೇ ಸಂದೇಶವನ್ನು ಕೊಡಿ- ತಂದೆಯು ಹೇಳಿದ್ದಾರೆ, ನನ್ನನ್ನು ನೆನಪು ಮಾಡಿ. ಈ ಮಾತಿನ ವಿನಃ ಉಳಿದೆಲ್ಲವೂ ಜಾಡಿ ಹೇಳುವುದಾಗಿದೆ. ತಂದೆಯು ಎಲ್ಲಾ ಮಕ್ಕಳಿಗೆ ಹೇಳುತ್ತಾರೆ- ಈ ಜಾಡಿತನವನ್ನು ಬಿಡಿ, ಎಲ್ಲಾ ಸೀತೆಯರ ಯೋಗವನ್ನು ಒಬ್ಬ ರಾಮನೊಂದಿಗೆ ಜೋಡಣೆ ಮಾಡಿಸಿ- ನಿಮ್ಮ ಕರ್ತವ್ಯವೇ ಇದಾಗಿದೆ. ಇದೇ ಸಂದೇಶವನ್ನು ಕೊಡುತ್ತಾ ಇರಿ. ತಂದೆಯು ಬಂದಿದ್ದಾರೆ, ತಿಳಿಸುತ್ತಾರೆ- ನೀವು ಹೊಸಪ್ರಪಂಚದಲ್ಲಿ ಹೋಗಬೇಕಾಗಿದೆ. ಈಗ ಈ ಹಳೆಯ ಪ್ರಪಂಚವನ್ನು ಬಿಡಬೇಕಾಗಿದೆ. ನಿಮಗೆ ವನವಾಸವು ಸಿಕ್ಕಿದೆ, ಕಾಡಿನಲ್ಲಿ ಕುಳಿತಿದ್ದೀರಲ್ಲವೆ. ಕಾಡಿಗೆ ವನವೆಂದು ಹೇಳಲಾಗುತ್ತದೆ. ಕನ್ಯೆಗೆ ವಿವಾಹವಾಗುವಾಗ ವನದಲ್ಲಿ ಕುಳಿತುಕೊಳ್ಳುತ್ತಾರೆ ನಂತರ ಮಹಲಿನಲ್ಲಿ ಹೋಗುತ್ತಾಳೆ. ನೀವೂ ಸಹ ಕಾಡಿನಲ್ಲಿ ಕುಳಿತಿದ್ದೀರಿ, ಈಗ ಮಾವನ ಮನೆಗೆ ಹೋಗಬೇಕಾಗಿದೆ. ಈ ಹಳೆಯ ದೇಹವನ್ನು ಬಿಡಬೇಕಾಗಿದೆ. ಒಬ್ಬ ತಂದೆಯನ್ನು ನೆನಪು ಮಾಡಿ. ಯಾರದು ವಿನಾಶಕಾಲದಲ್ಲಿ ಪ್ರೀತಿಬುದ್ಧಿಯಾಗಿದೆಯೋ ಅವರು ಮಹಲಿನಲ್ಲಿ ಹೋಗುತ್ತಾರೆ. ವಿಪರೀತ ಬುದ್ಧಿಯುಳ್ಳವರದು ವನವಾಸವಾಗಿದೆ ಅರ್ಥಾತ್ ಕಾಡಿನಲ್ಲಿ ವಾಸವಾಗಿದೆ. ತಂದೆಯು ನೀವು ಮಕ್ಕಳಿಗೆ ಭಿನ್ನ-ಭಿನ್ನ ರೀತಿಯಿಂದ ತಿಳಿಸುತ್ತಾರೆ- ಯಾವ ತಂದೆಯಿಂದ ಎಷ್ಟು ಬೇಹದ್ದಿನ ರಾಜ್ಯವನ್ನು ಪಡೆದಿದ್ದೀರೋ ಅವರನ್ನೇ ಮರೆತುಬಿಟ್ಟಿದ್ದೀರಿ ಆದ್ದರಿಂದ ವನವಾಸದಲ್ಲಿದ್ದೀರಿ. ವನವಾಸ ಮತ್ತು ಉದ್ಯಾನವನವಾಸ. ತಂದೆಯ ಹೆಸರೇ ಆಗಿದೆ- ಹೂದೋಟದ ಮಾಲೀಕ ಆದರೆ ಇದು ಬುದ್ಧಿಯಲ್ಲಿ ಬರಬೇಕಾಗಿದೆ, ಭಾರದಲ್ಲಿಯೇ ನಮ್ಮ ರಾಜ್ಯವಿತ್ತು, ಈಗ ಇಲ್ಲ. ಈಗ ವನವಾಸವಾಗಿದೆ ನಂತರ ನಾವು ಹೂದೋಟದಲ್ಲಿ ಹೋಗುತ್ತೇವೆ. ನೀವಿಲ್ಲಿ ಕುಳಿತಿದ್ದೀರಿ ಆದರೂ ಸಹ ಬುದ್ಧಿಯಲ್ಲಿದೆ- ನಾವು ಬೇಹದ್ದಿನ ತಂದೆಯಿಂದ ನಮ್ಮ ರಾಜ್ಯವನ್ನು ಪಡೆಯುತ್ತಿದ್ದೇವೆ. ತಂದೆಯು ತಿಳಿಸುತ್ತಾರೆ- ನನ್ನ ಜೊತೆ ಪ್ರೀತಿಯನ್ನಿಟ್ಟುಕೊಳ್ಳಿ ಆದರೂ ಸಹ ಮಕ್ಕಳು ಮರೆತುಹೋಗುತ್ತೀರಿ. ಅದಕ್ಕೆ ತಂದೆಯು ದೂರು ಕೊಡುತ್ತಾರೆ- ನನ್ನನ್ನು ನೀವು ಎಲ್ಲಿಯವರೆಗೆ ಮರೆಯುತ್ತಾ ಇರುತ್ತೀರಿ! ಮತ್ತೆ ಸತ್ಯಯುಗದಲ್ಲಿ ಹೇಗೆ ಹೋಗುತ್ತೀರಿ? ನಾನು ಎಷ್ಟು ಸಮಯ ತಂದೆಯನ್ನು ನೆನಪು ಮಾಡುತ್ತೇನೆಂದು ತಮ್ಮನ್ನು ಕೇಳಿಕೊಳ್ಳಿ. ನಾವು ಹೇಗೆ ನೆನಪಿನ ಅಗ್ನಿಯಲ್ಲಿದ್ದೇವೆ ಅದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಒಬ್ಬ ತಂದೆಯೊಂದಿಗೆ ಪ್ರೀತಿಬುದ್ಧಿಯವರಾಗಬೇಕಾಗಿದೆ. ಎಲ್ಲರಿಗಿಂತ ಸುಂದರ ಪ್ರಿಯತಮನಾಗಿದ್ದಾರೆ, ಅವರು ನಿಮ್ಮನ್ನೂ ಫಸ್ಟ್ಕ್ಲಾಸ್ನ್ನಾಗಿ ಮಾಡುತ್ತಾರೆ. ತರ್ಡ್ಕ್ಲಾಸ್ನಲ್ಲಿ ಕುರಿಗಳ ಸಮಾನ ಪ್ರಯಾಣ ಮಾಡುವುದೆಲ್ಲಿ! ಏರ್ಕಂಡೀಷನ್ ಎಲ್ಲಿ! ಎಷ್ಟೊಂದು ಅಂತರವಿದೆ. ಇದೆಲ್ಲವನ್ನೂ ವಿಚಾರಸಾಗರ ಮಂಥನ ಮಾಡಬೇಕಾಗಿದೆ ಆಗ ನಿಮಗೆ ಮಜಾ ಬರುವುದು. ಈ ತಂದೆಯೂ (ಬ್ರಹ್ಮಾ) ಹೇಳುತ್ತಾರೆ- ನಾನೂ ಸಹ ತಂದೆಯನ್ನು ನೆನಪು ಮಾಡಲು ಎಷ್ಟೊಂದು ತಲೆಕೆಡಿಸಿಕೊಳ್ಳುತ್ತೇನೆ. ಇಡೀ ದಿನ ಆಲೋಚನೆಗಳು ನಡೆಯುತ್ತಿರುತ್ತವೆ. ನೀವು ಮಕ್ಕಳೂ ಸಹ ಇದೇ ಪರಿಶ್ರಮ ಪಡಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾರಿಗೇ ಆಗಲಿ ಒಬ್ಬ ರಾಮನ (ತಂದೆ) ಮಾತುಗಳನ್ನು ಬಿಟ್ಟು ಯಾವುದೇ ಮಾತುಗಳನ್ನು ತಿಳಿಸಬಾರದು. ಒಬ್ಬರ ಮಾತನ್ನು ಇನ್ನೊಬ್ಬರಿಗೆ ಹೇಳುವುದು, ಪರಚಿಂತನೆ ಮಾಡುವುದು ಚಾಡಿಕೋರತನವಾಗಿದೆ. ಇದನ್ನು ಬಿಡಬೇಕಾಗಿದೆ.

2. ಒಬ್ಬ ತಂದೆಯ ಜೊತೆ ಪ್ರೀತಿಯನ್ನಿಡಬೇಕಾಗಿದೆ. ಹಳೆಯ ದೇಹದ ಅಭಿಮಾನವನ್ನು ಬಿಟ್ಟು ಒಬ್ಬ ತಂದೆಯಿಂದ ಸ್ವಯಂನ್ನು ಪಾವನ ಮಾಡಿಕೊಳ್ಳಬೇಕಾಗಿದೆ.

ವರದಾನ:
ಅಳವಡಿಸಿಕೊಳ್ಳುವ ಶಕ್ತಿಯ ಮೂಲಕ ತಪ್ಪನ್ನೂ ಸಹ ಸರಿಯಾಗಿ ಮಾಡುವಂತಹ ವಿಶ್ವ ಪರಿವರ್ತಕ ಭವ.

ಅನ್ಯರ ತಪ್ಪುಗಳನ್ನು ನೋಡುತ್ತ ಸ್ವಯಂ ತಪ್ಪನ್ನು ಮಾಡಬೇಡಿ. ಒಂದುವೇಳೆ ಯಾರಾದರೂ ತಪ್ಪನ್ನು ಮಾಡಿದರೆ ನಾವು ಸರಿಯಾಗಿರಬೇಕು ಅವರ ಸಂಗದ ಪ್ರಭಾವದಲ್ಲಿ ಬರಬಾರದು, ಯಾರು ಪ್ರಭಾವದಲ್ಲಿ ಬರುತ್ತಾರೆ ಅವರು ಹುಡುಗಾಟಿಕೆಯಲ್ಲಿ ಬರುತ್ತಾರೆ. ಪ್ರತಿಯೊಬ್ಬರೂ ಕೇವಲ ಈ ಜವಾಬ್ದಾರಿ ತೆಗೆದುಕೊಳ್ಳಿ ನಾನು ಸದಾ ಸರಿಯಾದ ಮಾರ್ಗದಲ್ಲಿ ಇರುವೆನು, ಒಂದುವೇಳೆ ಬೇರೆಯವರು ತಪ್ಪು ಮಾಡಿದರೆ ನೀವು ಆ ಸಮಯದಲ್ಲಿ ಅಳವಡಿಸಿಕೊಳ್ಳುವ ಶಕ್ತಿಯನ್ನು ಉಪಯೋಗಿಸಿ. ಬೇರೆಯವರ ತಪ್ಪನ್ನು ಗುರುತಿಸುವ ಬದಲು ಅದನ್ನು ಸಹಯೋಗವನ್ನಾಗಿ ಗುರುತಿಸಿ ಅರ್ಥಾತ್ ಸಹಯೋಗದಿಂದ ತುಂಬಿ ಬಿಡಿ ಆಗ ವಿಶ್ವ ಪರಿವರ್ತನೆಯ ಕಾರ್ಯ ಸಹಜವಾಗಿ ಆಗಿಬಿಡುವುದು.

ಸ್ಲೋಗನ್:
ನಿರಂತರ ಯೋಗಿಯಾಗಬೇಕಾದರೆ ಹದ್ದಿನ ನಾನು ಮತ್ತು ನನ್ನ ತನವನ್ನು ಬೇಹದ್ದಿನಲ್ಲಿ ಪರಿವರ್ತನೆ ಮಾಡಿಕೊಳ್ಳಿ.


ಅವ್ಯಕ್ತ ಸೂಚನೆ: ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.

ವರ್ತಮಾನ ಸಮಯದ ಪ್ರಮಾಣ ಫರಿಶ್ತೆತನದ ಸಂಪನ್ನ ಸ್ಟೇಜ್ನ ಅಥವಾ ತಂದೆಯ ಸಮಾನ ಸ್ಟೇಜ್ನ ಸಮೀಪ ಬಂದಿದ್ದೀರಿ, ಅದರ ಪ್ರಮಾಣ ಪವಿತ್ರತೆಯ ಪರಿಭಾಷೆಯು ಅತೀ ಸೂಕ್ಷ್ಮವಗುತ್ತಾ ಹೋಗುತ್ತದೆ. ಕೇವಲ ಬ್ರಹ್ಮಚಾರಿಯಾಗುವುದು ಪವಿತ್ರತೆಯಲ್ಲ. ಆದರೆ ಬ್ರಹ್ಮಚಾರಿಯ ಜೊತೆ ಬ್ರಹ್ಮಾ ತಂದೆಯ ಪ್ರತಿ ಕರ್ಮ ರೂಪಿ ಹೆಜ್ಜೆಯ ಹೆಜ್ಜೆಯಿಡುವಂತಹ ಬ್ರಹ್ಮಾಚಾರಿಯಾಗಿ.