12.07.25         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ನೀವು ಸತ್ಯ-ಸತ್ಯ ವೈಷ್ಣವರಾಗಬೇಕಾಗಿದೆ, ಸತ್ಯವೈಷ್ಣವರು ಭೋಜನದ ವ್ರತ (ಪಥ್ಯ)ದ ಜೊತೆಜೊತೆಗೆ ಪವಿತ್ರರೂ ಆಗಿರುತ್ತಾರೆ

ಪ್ರಶ್ನೆ:
ಯಾವ ಅವಗುಣವು ಗುಣದಲ್ಲಿ ಪರಿವರ್ತನೆಯಾಗಿಬಿಟ್ಟರೆ ದೋಣಿಯು ಪಾರಾಗಿಬಿಡುತ್ತದೆ?

ಉತ್ತರ:
ಎಲ್ಲದಕ್ಕಿಂತ ದೊಡ್ಡ ಅವಗುಣವು ಮೋಹವಾಗಿದೆ. ಮೋಹದ ಕಾರಣ ಸಂಬಂಧಿಗಳ ನೆನಪು ಸತಾಯಿಸುತ್ತಿರುತ್ತದೆ. (ಕೋತಿಯ ತರಹ) ಯಾವುದೇ ಸಂಬಂಧಿಯು ಶರೀರಬಿಟ್ಟರೆ 12 ತಿಂಗಳಿನವರೆಗೆ ಅವರನ್ನು ನೆನಪು ಮಾಡುತ್ತಿರುತ್ತಾರೆ. ಮುಖ ಮುಚ್ಚಿಕೊಂಡು ಅಳುತ್ತಿರುತ್ತಾರೆ, ಅವರ ನೆನಪೇ ಬರುತ್ತಾ ಇರುತ್ತದೆ. ಹಾಗೆಯೇ ಒಂದುವೇಳೆ ತಂದೆಯ ನೆನಪು ನಿರಂತರ ಇದ್ದಿದ್ದೇ ಆದರೆ ಹಗಲು-ರಾತ್ರಿ ನೆನಪು ಮಾಡಿದರೆ ನಿಮ್ಮ ದೋಣಿಯು ಪಾರಾಗಿಬಿಡುವುದು. ಹೇಗೆ ಲೌಕಿಕ ಸಂಬಂಧಿಯನ್ನು ನೆನಪು ಮಾಡುತ್ತೀರೋ ಅದೇ ರೀತಿ ತಂದೆಯನ್ನು ನೆನಪು ಮಾಡಿದರೆ ಅಹೋ ಸೌಭಾಗ್ಯ....!

ಓಂ ಶಾಂತಿ.
ತಂದೆಯು ಪ್ರತಿನಿತ್ಯವೂ ಮಕ್ಕಳಿಗೆ ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಿ. ಇಂದು ಅದರಲ್ಲಿ ಇನ್ನೂ ಸೇರಿಸುತ್ತಾರೆ- ಕೇವಲ ತಂದೆಯಷ್ಟೇ ಅಲ್ಲ ಅನ್ಯಸಂಬಂಧಗಳಲ್ಲಿಯೂ ನೆನಪು ಮಾಡಬೇಕಾಗಿದೆ. ಮುಖ್ಯಮಾತೇ ಇದಾಗಿದೆ- ಪರಮಪಿತ ಪರಮಾತ್ಮ ಶಿವ ಇವರಿಗೆ ಗಾಡ್ಫಾದರ್ ಎಂತಲೂ ಹೇಳುತ್ತಾರೆ, ಜ್ಞಾನಸಾಗರನೂ ಆಗಿದ್ದಾರೆ. ಸತ್ಯತಂದೆಯು ಇವರಿಗೆ ಓದಿಸುತ್ತಿದ್ದಾರೆ, ಇವರು ಅನುಭವದ ಮಾತನ್ನು ತಿಳಿಸುತ್ತಿದ್ದಾರೆ ಎಂಬುದು ಅವರಿಗೆ ಅರ್ಥವಾಗುತ್ತದೆ. ಅವರು ಎಲ್ಲರ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ರಾಜಯೋಗವನ್ನೂ ಕಲಿಸುತ್ತಾರೆ. ಇದನ್ನು ತಿಳಿಸಿದಾಗ ಅವರಿಗೆ ಅರ್ಥವಾಗುತ್ತದೆ. ಅವರು ಎಲ್ಲರ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗತಿದಾತನೂ ಆಗಿದ್ದಾರೆ ಮತ್ತೆ ಅವರಿಗೆ ಜ್ಞಾನಪೂರ್ಣನೆಂದು ಹೇಳಲಾಗುತ್ತದೆ. ತಂದೆ, ಶಿಕ್ಷಕ, ಪತಿತ-ಪಾವನ, ಜ್ಞಾನಸಾಗರನಾಗಿದ್ದಾರೆ. ಮೊಟ್ಟಮೊದಲಿಗೆ ತಂದೆಯ ಮಹಿಮೆ ಮಾಡಬೇಕು. ಅವರು ನಮಗೆ ಓದಿಸುತ್ತಾರೆ, ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಬ್ರಹ್ಮಾನೂ ಸಹ ಶಿವತಂದೆಯ ರಚನೆಯಾಗಿದ್ದಾರೆ ಮತ್ತು ಈಗ ಸಂಗಮಯುಗವಾಗಿದೆ. ಗುರಿ-ಧ್ಯೇಯವೂ ಸಹ ರಾಜಯೋಗಕ್ಕಾಗಿದೆ, ನಮಗೆ ರಾಜಯೋಗವನ್ನು ಕಲಿಸುತ್ತಾರೆ ಅಂದಮೇಲೆ ಶಿಕ್ಷಕರೆಂದು ಸಿದ್ಧವಾಯಿತು. ಈ ವಿದ್ಯೆಯು ಹೊಸಪ್ರಪಂಚಕ್ಕೋಸ್ಕರ ಇದೆ, ಇಲ್ಲಿ ಕುಳಿತೇ ಇದನ್ನು ಪಕ್ಕಾ ಮಾಡಿಕೊಳ್ಳಿ. ನಾವು ಏನೇನನ್ನು ತಿಳಿಸಿಕೊಡಬೇಕಾಗಿದೆ, ಇದು ಅಂತರ್ಯದಲ್ಲಿ ಧಾರಣೆಯಾಗಬೇಕು. ಕೆಲವರಿಗೆ ಹೆಚ್ಚು ಧಾರಣೆಯಾಗುತ್ತದೆ, ಕೆಲವರಿಗೆ ಕಡಿಮೆ. ಇಲ್ಲಿಯೂ ಸಹ ಜ್ಞಾನದಲ್ಲಿ ಯಾರು ಹೆಚ್ಚು ತೀಕ್ಷ್ಣವಾಗಿ ಮುಂದೆಹೋಗುವರೋ ಅವರ ಹೆಸರೇ ಪ್ರಸಿದ್ಧವಾಗುತ್ತದೆ. ಪದವಿಯೂ ಸಹ ಉತ್ತಮವಾಗಿರುತ್ತದೆ. ತಂದೆಯು ಪಥ್ಯವನ್ನು ತಿಳಿಸುತ್ತಿರುತ್ತಾರೆ. ನೀವು ಸಂಪೂರ್ಣ ವೈಷ್ಣವರಾಗುತ್ತೀರಿ. ವೈಷ್ಣವರು ಎಂದರೆ ಸಸ್ಯಹಾರಿಗಳಾಗಿರುತ್ತಾರೆ. ಮಾಂಸ, ಮಧ್ಯಪಾನಗಳನ್ನು ಸೇವಿಸುವುದಿಲ್ಲ ಆದರೆ ವಿಕಾರದಲ್ಲಂತೂ ಹೋಗುತ್ತಾರೆ ಅಂದಮೇಲೆ ವೈಷ್ಣವರಾಗಿ ಏನಾಯಿತು? ವೈಷ್ಣವಕುಲದವರೆಂದು ಕರೆಸಿಕೊಳ್ಳುತ್ತಾರೆ ಅರ್ಥಾತ್ ಈರುಳ್ಳಿ ಇತ್ಯಾದಿ ತಮೋಗುಣಿ ಪದಾರ್ಥಗಳನ್ನು ಸೇವಿಸುವುದಿಲ್ಲ. ತಮೋಗುಣಿ ಪದಾರ್ಥಗಳು ಯಾವುವು ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಕೆಲವರು ಒಳ್ಳೆಯ ಮನುಷ್ಯರೂ ಇರುತ್ತಾರೆ, ಅವರಿಗೆ ಧಾರ್ಮಿಕ ವ್ಯಕ್ತಿಗಳು ಅಥವಾ ಭಕ್ತರೆಂದೂ ಹೇಳಲಾಗುತ್ತದೆ. ಸನ್ಯಾಸಿಗಳಿಗೆ ಪವಿತ್ರ ಆತ್ಮನೆಂತಲೂ ಮತ್ತು ದಾನ-ಪುಣ್ಯ ಮಾಡುವವರಿಗೆ ಪುಣ್ಯಾತ್ಮನೆಂತಲೂ ಹೇಳುತ್ತಾರೆ. ಇದರಿಂದಲೂ ಸಿದ್ಧವಾಗುತ್ತದೆ- ಆತ್ಮವೇ ದಾನ-ಪುಣ್ಯಗಳನ್ನು ಮಾಡುತ್ತದೆ ಆದ್ದರಿಂದ ಪುಣ್ಯಾತ್ಮ, ಪವಿತ್ರ ಆತ್ಮನೆಂದು ಕರೆಯಲಾಗುತ್ತದೆ. ಆತ್ಮವು ನಿರ್ಲೇಪವಲ್ಲ, ಇಂತಹ ಒಳ್ಳೆಯ ಶಬ್ಧಗಳನ್ನು ನೆನಪಿಟ್ಟುಕೊಳ್ಳಬೇಕು. ಸಾಧುಗಳನ್ನು ಮಹಾನ್ ಆತ್ಮನೆಂದು ಹೇಳುತ್ತಾರೆ, ಮಹಾನ್ ಪರಮಾತ್ಮನೆಂದು ಹೇಳುವುದಿಲ್ಲ ಅಂದಮೇಲೆ ಸರ್ವವ್ಯಾಪಿಯೆಂದು ಹೇಳುವುದು ತಪ್ಪಾಯಿತು. ಸರ್ವಆತ್ಮಗಳು ಯಾರೆಲ್ಲರೂ ಇದ್ದಾರೆಯೋ ಎಲ್ಲರಲ್ಲಿ ಆತ್ಮವಿದೆ, 84 ಲಕ್ಷ ಯೋನಿಗಳಲ್ಲಿಯೂ ಆತ್ಮವೇ ಇದೆಯೆಂದು ಹೇಳುತ್ತಾರೆ. ಆತ್ಮವು ಇಲ್ಲದೇ ಹೋಗಿದ್ದರೆ ಹೇಗೆ ವೃದ್ಧಿಹೊಂದುತ್ತದೆ! ಮನುಷ್ಯನ ಆತ್ಮವು ಜಡದಲ್ಲಿ ಹೋಗಲು ಸಾಧ್ಯವಿಲ್ಲ. ಶಾಸ್ತ್ರಗಳಲ್ಲಿ ಇಂತಿಂತಹ ಮಾತುಗಳನ್ನು ಬರೆದುಬಿಟ್ಟಿದ್ದಾರೆ. ಇಂದ್ರಪ್ರಸ್ಥದಿಂದ ಏಟುಕೊಟ್ಟಾಗ ಕಲ್ಲಾಗಿಬಿಟ್ಟರೆಂದು ಹೇಳುತ್ತಾರೆ. ಈಗ ತಂದೆಯು ತಿಳಿಸುತ್ತಾರೆ- ದೇಹದ ಸಂಬಂಧವನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ, ನನ್ನೊಬ್ಬನನ್ನೇ ನೆನಪು ಮಾಡಿ. ಈಗ ನಿಮ್ಮ 84 ಜನ್ಮಗಳು ಮುಕ್ತಾಯವಾಯಿತು. ಈಗ ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ದುಃಖಧಾಮವು ಅಪವಿತ್ರ ಧಾಮವಾಗಿದೆ. ಶಾಂತಿಧಾಮ ಮತ್ತು ಸುಖಧಾಮವು ಪವಿತ್ರ ಧಾಮಗಳಾಗಿವೆ, ಇದನ್ನು ತಿಳಿದುಕೊಂಡಿದ್ದೀರಲ್ಲವೆ. ಸುಖಧಾಮದಲ್ಲಿರುವ ದೇವತೆಗಳ ಮುಂದೆ ತಲೆಬಾಗುತ್ತಾರೆ. ಭಾರತದಲ್ಲಿ ಹೊಸಪ್ರಪಂಚದಲ್ಲಿ ಪವಿತ್ರ ಆತ್ಮರಿದ್ದರು, ಶ್ರೇಷ್ಠಪದವಿಯಿತ್ತು ಎಂದು ಇದರಿಂದಲೇ ಸಿದ್ಧವಾಗುತ್ತದೆ. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹಾಡುತ್ತಾರೆ, ವಾಸ್ತವಿಕವಾಗಿ ಇರುವುದೂ ಹಾಗೆಯೇ. ಯಾವುದೇ ಗುಣವಿಲ್ಲ, ಮನುಷ್ಯರಲ್ಲಿ ಮೋಹವು ಬಹಳಷ್ಟಿರುತ್ತದೆ. ಸತ್ತಿರುವವರದೂ ನೆನಪಿರುತ್ತದೆ. ಇವರು ನನ್ನ ಮಕ್ಕಳಾಗಿದ್ದಾರೆ ಎಂದು ಬುದ್ಧಿಯಲ್ಲಿ ಬರುತ್ತದೆ. ಪತಿ ಅಥವಾ ಮಕ್ಕಳು ಶರೀರಬಿಟ್ಟರೆ ಅವರನ್ನು ನೆನಪು ಮಾಡುತ್ತಿರುತ್ತಾರೆ. ಸ್ತ್ರೀಯು 12 ತಿಂಗಳಿನವರೆಗೆ ತುಂಬಾ ನೆನಪು ಮಾಡುತ್ತಾಳೆ. ಮುಖ ಮುಚ್ಚಿಕೊಂಡು ಅಳುತ್ತಿರುತ್ತಾರೆ. ಒಂದುವೇಳೆ ನೀವು ಹೀಗೆ ಮುಖ ಮುಚ್ಚಿಟ್ಟುಕೊಂಡು ಹಗಲು-ರಾತ್ರಿ ನೆನಪು ಮಾಡಿದ್ದೇ ಆದರೆ ದೋಣಿಯು ಪಾರಾಗಿಬಿಡುವುದು. ತಂದೆಯು ತಿಳಿಸುತ್ತಾರೆ- ಹೇಗೆ ನೀವು ಪತಿಯನ್ನು ನೆನಪು ಮಾಡುತ್ತಾ ಇರುತ್ತೀರೋ ಹಾಗೆಯೇ ನನ್ನನ್ನು ನೆನಪು ಮಾಡಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುವುವು. ಹೀಗೆ ಮಾಡಿ ಎಂದು ತಂದೆಯು ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ.

ತಮ್ಮ ಲೆಕ್ಕಪತ್ರವನ್ನು ನೋಡಿಕೊಳ್ಳುತ್ತಾರೆ- ಇಂದು ಇಷ್ಟು ಖರ್ಚಾಯಿತು, ಇಷ್ಟು ಲಾಭವಾಯಿತು, ಬ್ಯಾಲೆನ್ಸ್ ಅನ್ನು ಪ್ರತಿನಿತ್ಯವೂ ತೆಗೆಯುತ್ತಾರೆ. ಕೆಲವರು ಪ್ರತೀ ತಿಂಗಳೂ ತೆಗೆಯುತ್ತಾರೆ. ಇಲ್ಲಂತೂ ಇದು ಬಹಳ ಅತ್ಯವಶ್ಯಕವಾಗಿದೆ. ತಂದೆಯು ಮತ್ತೆ-ಮತ್ತೆ ತಿಳಿಸಿದ್ದಾರೆ- ನೀವು ಮಕ್ಕಳು ಸೌಭಾಗ್ಯಶಾಲಿಗಳು, ಸಾವಿರಪಟ್ಟು ಸೌಭಾಗ್ಯಶಾಲಿಗಳು, ಕೋಟಿಯಷ್ಟು ಸೌಭಾಗ್ಯಶಾಲಿಗಳು, ಬಿಲಿಯನ್-ಟ್ರಿಲಿಯನ್ ಭಾಗ್ಯಶಾಲಿಗಳಾಗಿದ್ದೀರಿ. ಯಾವ ಮಕ್ಕಳು ತಮ್ಮನ್ನು ಸೌಭಾಗ್ಯಶಾಲಿಗಳೆಂದು ತಿಳಿಯುವರೋ ಅವರು ಅವಶ್ಯವಾಗಿ ಚೆನ್ನಾಗಿ ತಂದೆಯನ್ನು ನೆನಪು ಮಾಡುತ್ತಿರುತ್ತಾರೆ, ಅವರೇ ಗುಲಾಬಿಹೂ ಆಗುತ್ತಾರೆ. ಇಲ್ಲಿ ಸಾರರೂಪದಲ್ಲಿ ತಿಳಿಸಲಾಗುತ್ತದೆ, ಸುಗಂಧಭರಿತ ಹೂವಾಗಬೇಕಾಗಿದೆ. ಮುಖ್ಯವಾದದ್ದು ನೆನಪಿನ ಮಾತು. ಸನ್ಯಾಸಿಗಳು ಯೋಗವೆಂಬ ಅಕ್ಷರವನ್ನು ಹೇಳುತ್ತಿರುತ್ತಾರೆ, ಲೌಕಿಕ ತಂದೆಯು ನನ್ನನ್ನು ನೆನಪು ಮಾಡಿ ಎಂದು ಹೇಳುವುದಿಲ್ಲ ಅಥವಾ ನನ್ನನ್ನು ನೆನಪು ಮಾಡುತ್ತೀರಾ ಎಂದು ಕೇಳುವುದಿಲ್ಲ. ತಂದೆಗೆ ಮಕ್ಕಳ, ಮಕ್ಕಳಿಗೆ ತಂದೆಯ ನೆನಪು ಇದ್ದೇ ಇರುತ್ತದೆ, ಇದು ಖಾಯಿದೆಯಾಗಿದೆ. ಆದರೆ ಇಲ್ಲಿ ಮತ್ತೆ-ಮತ್ತೆ ಕೇಳಬೇಕಾಗುತ್ತದೆ ಏಕೆಂದರೆ ಮಾಯೆಯು ಮರೆಸಿಬಿಡುತ್ತದೆ. ಇಲ್ಲಿ ಬರುತ್ತಾರೆ, ನಾವು ತಂದೆಯ ಬಳಿ ಹೋಗುತ್ತೇವೆಂದು ತಿಳಿಯುತ್ತಾರೆ ಅಂದಮೇಲೆ ತಂದೆಯ ನೆನಪಿರಬೇಕಲ್ಲವೆ. ಆದ್ದರಿಂದ ತಂದೆಯು ಚಿತ್ರಗಳನ್ನು ಮಾಡಿಸುತ್ತಾರೆ ಅಂದಾಗ ಅವು ಜೊತೆಯಲ್ಲಿರಲಿ. ಮೊಟ್ಟಮೊದಲು ಯಾವಾಗಲೂ ತಂದೆಯ ಮಹಿಮೆಯನ್ನಾರಂಭಿಸಿ- ಇವರು ನಮ್ಮ ತಂದೆಯಾಗಿದ್ದಾರೆ, ವಾಸ್ತವದಲ್ಲಿ ಎಲ್ಲರ ತಂದೆಯಾಗಿದ್ದಾರೆ, ಸರ್ವರ ಸದ್ಗತಿದಾತ, ಜ್ಞಾನಸಾಗರ, ಜ್ಞಾನಪೂರ್ಣನಾಗಿದ್ದಾರೆ. ತಂದೆಯು ನಮಗೆ ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ ಇದರಿಂದ ನಾವು ತ್ರಿಕಾಲದರ್ಶಿಗಳಾಗಿಬಿಡುತ್ತೇವೆ. ಈ ಸೃಷ್ಟಿಯಲ್ಲಿ ಯಾವುದೇ ಮನುಷ್ಯರು ತ್ರಿಕಾಲದರ್ಶಿಗಳಾಗಿರಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ಈ ಲಕ್ಷ್ಮೀ-ನಾರಾಯಣರೂ ಸಹ ತ್ರಿಕಾಲದರ್ಶಿಗಳಲ್ಲ. ಇವರು ತ್ರಿಕಾಲದರ್ಶಿಯಾಗಿ ಏನು ಮಾಡುವರು? ನೀವೇ ಆಗುತ್ತೀರಿ ಮತ್ತು ಮಾಡುತ್ತೀರಿ. ಒಂದುವೇಳೆ ಈ ಲಕ್ಷ್ಮೀ-ನಾರಾಯಣರಲ್ಲಿ ಜ್ಞಾನವು ಇದ್ದಿದ್ದರೆ ಅದು ಪರಂಪರೆಯಿಂದ ನಡೆದುಬರುತ್ತಿತ್ತು ಮಧ್ಯದಲ್ಲಿ ವಿನಾಶವಾಗಿಬಿಡುತ್ತದೆ ಆದ್ದರಿಂದ ಪರಂಪರೆಯಿಂದ ನಡೆದುಬರಲು ಸಾಧ್ಯವಿಲ್ಲ ಆದ್ದರಿಂದ ಮಕ್ಕಳು ಈ ವಿದ್ಯೆಯನ್ನು ಚೆನ್ನಾಗಿ ಸ್ಮರಣೆ ಮಾಡಬೇಕಾಗಿದೆ. ನಿಮ್ಮ ಶ್ರೇಷ್ಠಾತಿಶ್ರೇಷ್ಠ ವಿದ್ಯೆಯು ಸಂಗಮಯುಗದಲ್ಲಿಯೇ ನಡೆಯುತ್ತದೆ. ನೀವು ನೆನಪು ಮಾಡುವುದಿಲ್ಲ. ದೇಹಾಭಿಮಾನದಲ್ಲಿ ಬಂದುಬಿಡುತ್ತೀರಿ ಆದ್ದರಿಂದ ಮಾಯೆಯ ಪೆಟ್ಟು ಬೀಳುತ್ತದೆ. 16 ಕಲಾಸಂಪೂರ್ಣರಾಗಿಬಿಡುತ್ತೀರೆಂದರೆ ವಿನಾಶದ ತಯಾರಿಯೂ ಆಗುತ್ತದೆ. ಅವರು ವಿನಾಶಕ್ಕಾಗಿ, ನೀವು ಅವಿನಾಶಿ ಪದವಿಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಕೌರವ ಹಾಗೂ ಪಾಂಡವರಿಗೆ ಯಾವುದೇ ಯುದ್ಧವಾಗಲಿಲ್ಲ, ಕೌರವರು ಮತ್ತು ಯಾದವರಿಗೆ ಯುದ್ಧವು ನಡೆಯುತ್ತದೆ. ಡ್ರಾಮಾನುಸಾರ ಪಾಕೀಸ್ತಾನವೂ ಆಗಿಬಿಟ್ಟಿತು. ಯಾವಾಗ ನಿಮ್ಮ ಜನ್ಮವಾಯಿತೋ ಆಗ ಅದೂ ಆರಂಭವಾಯಿತು. ಈಗ ತಂದೆಯು ಬಂದಿದ್ದಾರೆಂದಮೇಲೆ ಎಲ್ಲವೂ ಪ್ರಾಕ್ಟಿಕಲ್ ಆಗಬೇಕಲ್ಲವೆ. ರಕ್ತದ ನದಿಗಳು ಹರಿಯುತ್ತವೆ ನಂತರ ಹಾಲು-ತುಪ್ಪದ ನದಿಗಳು ಹರಿಯುತ್ತವೆಯೆಂದು ಇಲ್ಲಿಗಾಗಿಯೇ ಹೇಳುತ್ತಾರೆ. ಈಗಲೂ ನೋಡಿ ಹೊಡೆದಾಡುತ್ತಿರುತ್ತಾರೆ. ಇದು ನಮ್ಮ ಮಾರ್ಗವಾಗಿದೆ, ಇದರಲ್ಲಿ ನೀವು ಓಡಾಡಬೇಡಿ ಎಂದು ಹೊಡೆದಾಡುತ್ತಾರೆ, ಅವರೇನು ಮಾಡುವುದು? ಹಡಗುಗಳು ಹೇಗೆ ಹೋಗುವುದು? ನಂತರ ಸಲಹೆ ತೆಗೆದುಕೊಳ್ಳುತ್ತಾರೆ. ಅವಶ್ಯವಾಗಿ ಸಲಹೆಯನ್ನು ಕೇಳುತ್ತಿರಬಹುದು. ಸಹಯೋಗದ ಭರವಸೆಯೂ ಸಿಕ್ಕಿರಬಹುದು. ಅವರು ಪರಸ್ಪರ ಒಳಗೆ ಅದನ್ನು ನಿಲ್ಲಿಸಿಬಿಡುತ್ತಾರೆ. ಇಲ್ಲಿ ಅಂತರ್ಯುದ್ಧಗಳೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ.

ಈಗ ತಂದೆಯು ತಿಳಿಸುತ್ತಾರೆ- ಮಧುರ ಮಕ್ಕಳೇ, ಬಹಳ-ಬಹಳ ಬುದ್ಧಿವಂತರಾಗಿ, ಇಲ್ಲಿಂದ ಹೊರಗೆ ಮನೆಗೆ ಹೋದತಕ್ಷಣ ಮರೆತುಬಿಡಬೇಡಿ, ಇಲ್ಲಿ ನೀವು ಸಂಪಾದನೆಯನ್ನು ಜಮಾ ಮಾಡಿಕೊಳ್ಳಲು ಬರುತ್ತೀರಿ. ಚಿಕ್ಕ-ಚಿಕ್ಕಮಕ್ಕಳನ್ನು ಕರೆತರುತ್ತೀರೆಂದರೆ ಅವರ ಬಂಧನದಲ್ಲಿರಬೇಕಾಗುತ್ತದೆ, ಇಲ್ಲಂತೂ ಈ ಸಂಪಾದನೆಯಲ್ಲಿ ತೊಡಗಿಬಿಡಬೇಕು. ನೀವು ಅವಿನಾಶಿ ಜ್ಞಾನರತ್ನಗಳ ಜೋಳಿಗೆಯನ್ನು ತುಂಬಿಸಿಕೊಳ್ಳುವುದಕ್ಕಾಗಿಯೇ ಬರುತ್ತೀರಿ. ಭೋಲಾನಾಥನೇ ನಮ್ಮ ಜೋಳಿಗೆಯನ್ನು ತುಂಬು ಎಂದು ಹಾಡುತ್ತಾರಲ್ಲವೆ. ಭಕ್ತರಂತೂ ಶಂಕರನ ಮುಂದೆಹೋಗಿ ಹೀಗಿ ಹಾಡುತ್ತಾರೆ, ಅವರು ಶಿವ-ಶಂಕರನನ್ನು ಒಂದೇ ಎಂದು ತಿಳಿಯುತ್ತಾರೆ. ಶಿವಶಂಕರ ಮಹಾದೇವ ಎಂದು ಹೇಳುತ್ತಾರೆ ಅಂದಾಗ ಮಹಾದೇವನು ದೊಡ್ಡವರಾಗಿದ್ದಾರೆ. ಇಂತಹ ಚಿಕ್ಕ-ಚಿಕ್ಕ ಮಾತುಗಳು ಬಹಳ ತಿಳಿದುಕೊಳ್ಳಲು ಯೋಗ್ಯವಾಗಿದೆ.

ನೀವು ಮಕ್ಕಳಿಗೆ ತಿಳಿಸಲಾಗುತ್ತದೆ- ನೀವೀಗ ಬ್ರಾಹ್ಮಣರಾಗಿದ್ದೀರಿ, ಜ್ಞಾನವು ಸಿಗುತ್ತಿದೆ, ವಿದ್ಯೆಯಿಂದ ಮನುಷ್ಯರು ಸುಧಾರಣೆಯಾಗುತ್ತಾರೆ, ಚಲನೆ-ವಲನೆಯೂ ಸಹ ಚೆನ್ನಾಗಿರುತ್ತದೆ, ನೀವೀಗ ಓದುತ್ತೀರಿ. ಯಾರು ಚೆನ್ನಾಗಿ ಓದಿ-ಓದಿಸುವರೋ ಅವರ ನಡವಳಿಕೆಯೂ ಸಹ ಚೆನ್ನಾಗಿರುತ್ತದೆ. ಎಲ್ಲರಿಗಿಂತ ಒಳ್ಳೆಯ ಚಲನೆಯು ಮಮ್ಮಾ-ಬಾಬಾರವರದೆಂದು ನೀವು ಹೇಳುತ್ತೀರಿ. ಅದರಲ್ಲಿಯೂ ಇವರು ದೊಡ್ಡ ತಾಯಿಯಾದರು. ಇವರಲ್ಲಿ ಪ್ರವೇಶ ಮಾಡಿ ತಂದೆಯು ಮಕ್ಕಳನ್ನು ರಚಿಸುತ್ತಾರೆ, ಮಾತಾಪಿತ ಕಂಬೈಂಡ್ ಆಗಿದ್ದಾರೆ. ಎಷ್ಟು ಗುಪ್ತಮಾತುಗಳಾಗಿವೆ! ಹೇಗೆ ನೀವು ಓದುತ್ತೀರೋ ಅದೇರೀತಿ ಮಮ್ಮಾರವರೂ ಓದುತ್ತಿದ್ದರು. ಅವರನ್ನು ತಂದೆಯು ದತ್ತು ಮಾಡಿಕೊಂಡರು, ಬಹಳ ಬುದ್ಧಿವಂತರಾಗಿದ್ದಕಾರಣ ಸರಸ್ವತಿ ಎಂಬ ಹೆಸರು ಇಡಲಾಗಿದೆ ಮತ್ತು ಬ್ರಹ್ಮಪುತ್ರ ದೊಡ್ಡ ನದಿಯಾಗಿದೆ. ಮೇಳವೂ ಆಗುತ್ತದೆ ಬ್ರಹ್ಮಪುತ್ರ ಮತ್ತು ಸಾಗರನದು . ಇವರು ದೊಡ್ಡನದಿಯೂ ಆದರು, ತಾಯಿಯೂ ಆದರಲ್ಲವೆ. ನೀವು ಮಧುರಾತಿ ಮಧುರ ಮಕ್ಕಳನ್ನು ಎಷ್ಟು ಶ್ರೇಷ್ಠಸ್ಥಿತಿಗೆ ಕರೆದುಕೊಂಡು ಹೋಗುತ್ತಾರೆ! ತಂದೆಯು ನೀವು ಮಕ್ಕಳನ್ನೇ ನೋಡುತ್ತಾರೆ, ಅವರು ಮತ್ತ್ಯಾರನ್ನೂ ನೆನಪು ಮಾಡಬೇಕಾಗಿಲ್ಲ. ಇವರ ಆತ್ಮ(ಬ್ರಹ್ಮಾ)ವೂ ಸಹ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ- ನಾವು ಇಬ್ಬರೂ ಮಕ್ಕಳನ್ನೂ ನೋಡುತ್ತೇವೆ. ನಾನಾತ್ಮನಂತೂ ಸಾಕ್ಷಿಯಾಗಿ ನೋಡಬೇಕಾಗಿಲ್ಲ ಆದರೆ ತಂದೆಯ ಸಂಗದಲ್ಲಿ ನಾನೂ ಸಹ ಅದೇರೀತಿ ನೋಡುತ್ತೇನೆ. ತಂದೆಯ ಜೊತೆಯಿರುತ್ತೇನಲ್ಲವೆ. ಅವರ ಮಗುವಾಗಿದ್ದೇನೆ ಆದ್ದರಿಂದ ಅವರ ಜೊತೆಯಲ್ಲಿ ನೋಡುತ್ತೇನೆ. ಹೇಗೆ ನಾನೇ ಇದನ್ನು ಮಾಡುತ್ತೇನೆ ಎನ್ನುವಂತೆ ವಿಶ್ವದ ಮಾಲೀಕನಾಗಿ ತಿರುಗಾಡುತ್ತೇನೆ, ದೃಷ್ಟಿ ಕೊಡುತ್ತೇನೆ, ದೇಹಸಹಿತವಾಗಿ ಎಲ್ಲವನ್ನೂ ಮರೆಯಬೇಕಾಗುತ್ತದೆ ಆದರೆ ತಂದೆ ಮತ್ತು ಮಗು ಇಬ್ಬರೂ ಒಂದಾಗಲು ಹೇಗೆ ಸಾಧ್ಯ! ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಹೆಚ್ಚು ಪುರುಷಾರ್ಥ ಮಾಡಿ ಅವಶ್ಯವಾಗಿ ಮಮ್ಮಾ-ಬಾಬಾ ಎಲ್ಲರಿಗಿಂತ ಹೆಚ್ಚು ಸರ್ವೀಸ್ ಮಾಡುತ್ತಾರೆ. ಮನೆಯಲ್ಲಿ ತಂದೆ-ತಾಯಿಯು ಬಹಳ ಸರ್ವೀಸ್ ಮಾಡುತ್ತಾರಲ್ಲವೆ. ಸರ್ವೀಸ್ ಮಾಡುವವರು ಅವಶ್ಯವಾಗಿ ಉತ್ತಮಪದವಿಯನ್ನೇ ಪಡೆಯುತ್ತಾರೆ ಅಂದಮೇಲೆ ಫಾಲೋ ಮಾಡಬೇಕಲ್ಲವೆ. ಹೇಗೆ ತಂದೆಯು ಅಪಕಾರಿಗಳ ಮೇಲೂ ಉಪಕಾರ ಮಾಡುತ್ತಾರೆಯೋ ಹಾಗೆಯೇ ನೀವೂ ಸಹ ಫಾಲೋ ಫಾದರ್ ಮಾಡಿ. ಇದರ ಅರ್ಥವನ್ನೂ ಸಹ ತಿಳಿದುಕೊಳ್ಳಬೇಕಾಗಿದೆ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ. ಮತ್ತ್ಯಾರಿಂದಲೂ ಕೇಳಬೇಡಿ. ಯಾರಾದರೂ ಏನಾದರೂ ಹೇಳಿದರೆ ಕೇಳಿಯೂ ಕೇಳದಂತಿರಿ. ನೀವು ಮುಗುಳ್ನಗುತ್ತಾ ಇರಿ ಆಗ ಅವರೇ ತಣ್ಣಗಾಗಿಬಿಡುವರು. ತಂದೆಯು ಇದನ್ನೂ ಹೇಳಿದ್ದರು, ಯಾರಾದರೂ ಕ್ರೋಧ ಮಾಡಿದರೆ ನೀವು ಅವರ ಮೇಲೆ ಹೂಗಳನ್ನು ಹಾಕಿರಿ. ಅವರಿಗೆ ಹೇಳಿ- ನೀವು ಅಪಕಾರ ಮಾಡುತ್ತೀರಿ, ನಾವು ನಿಮಗೆ ಉಪಕಾರ ಮಾಡುತ್ತೇವೆ. ಸ್ವಯಂ ತಂದೆಯೇ ತಿಳಿಸುತ್ತಾರೆ- ಇಡೀ ಪ್ರಪಂಚದ ಮನುಷ್ಯರು ನನಗೆ ಅಪಕಾರಿಗಳಾಗಿದ್ದಾರೆ, ನನ್ನನ್ನು ಸರ್ವವ್ಯಾಪಿ ಎಂದು ಹೇಳಿ ಎಷ್ಟೊಂದು ನಿಂದನೆ ಮಾಡುತ್ತಾರೆ, ನಾನಂತೂ ಎಲ್ಲರ ಉಪಕಾರಿಯಾಗಿದ್ದೇನೆ, ನೀವು ಮಕ್ಕಳೂ ಸಹ ಎಲ್ಲರ ಉಪಕಾರ ಮಾಡುವವರಾಗಿದ್ದೀರಿ. ನೀವು ವಿಚಾರ ಮಾಡಿ- ನಾವು ಹೇಗಿದ್ದೆವು, ಈಗ ಏನಾಗುತ್ತೇವೆ! ವಿಶ್ವದ ಮಾಲೀಕರಾಗುತ್ತೇವೆ, ಸ್ವಪ್ನ-ಸಂಕಲ್ಪದಲ್ಲಿಯೂ ಇರಲಿಲ್ಲ, ಅನೇಕರಿಗೆ ಮನೆಯಲ್ಲಿ ಕುಳಿತಿದ್ದಂತೆಯೇ ಸಾಕ್ಷಾತ್ಕಾರವಾಗಿದೆ, ಆದರೆ ಸಾಕ್ಷಾತ್ಕಾರದಿಂದ ಏನೂ ಆಗುವುದಿಲ್ಲ. ನಿಧಾನ-ನಿಧಾನವಾಗಿ ವೃಕ್ಷವು ವೃದ್ಧಿಯಾಗುತ್ತಾ ಇರುವುದು. ಈ ಹೊಸದೈವೀವೃಕ್ಷವು ಸ್ಥಾಪನೆಯಾಗುತ್ತಿದೆಯಲ್ಲವೆ. ಮಕ್ಕಳಿಗೆ ತಿಳಿದಿದೆ- ನಮ್ಮ ದೈವೀ ಹೂಗಳ ಉದ್ಯಾನವನವು ತಯಾರಾಗುತ್ತಿದೆ. ಸತ್ಯಯುಗದಲ್ಲಿ ದೇವತೆಗಳೇ ಇರುತ್ತಾರೆ ಅಂದಮೇಲೆ ಅವರು ಪುನಃ ಬರಲಿದ್ದಾರೆ, ಚಕ್ರವು ಸುತ್ತುತ್ತಿರುತ್ತದೆ. 84 ಜನ್ಮಗಳನ್ನೂ ಸಹ ಅವರೇ ತೆಗೆದುಕೊಳ್ಳುತ್ತಾರೆ. ಅನ್ಯಆತ್ಮಗಳು ಮತ್ತೆಲ್ಲಿಂದ ಬರುವರು? ಡ್ರಾಮಾದಲ್ಲಿ ಯಾರೆಲ್ಲಾ ಆತ್ಮರಿದ್ದಾರೆಯೋ, ಯಾರೂ ಸಹ ಪಾತ್ರದಿಂದ ಬಿಡುಗಡೆಯಾಗುವುದಿಲ್ಲ. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ಆತ್ಮವು ಎಂದೂ ಸವೆಯುವುದಿಲ್ಲ, ಚಿಕ್ಕದು-ದೊಡ್ಡದಾಗುವುದಿಲ್ಲ.

ತಂದೆಯು ಮಧುರಮಕ್ಕಳಿಗೆ ತಿಳಿಸುತ್ತಾರೆ, ಹೇಳುತ್ತಾರೆ- ಮಕ್ಕಳೇ, ಸುಖದಾಯಿಯಾಗಿ. ಪರಸ್ಪರ ಜಗಳವಾಡಬೇಡಿ ಎಂದು ತಾಯಿಯು ಹೇಳುತ್ತಾಳಲ್ಲವೆ. ಬೇಹದ್ದಿನ ತಂದೆಯೂ ಸಹ ಮಕ್ಕಳಿಗೆ ತಿಳಿಸುತ್ತಾರೆ- ನೆನಪಿನ ಯಾತ್ರೆಯು ಬಹಳ ಸಹಜವಾಗಿದೆ. ಆ ಸ್ಥೂಲಯಾತ್ರೆಯನ್ನಂತೂ ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ ಆದರೂ ಸಹ ಕೆಳಗಿಳಿಯುತ್ತಾ ಇನ್ನೂ ಪಾಪಾತ್ಮರಾಗಿಬಿಡುತ್ತೀರಿ. ಇದು ಆತ್ಮಿಕ ಯಾತ್ರೆಯಾಗಿದೆ. ಮತ್ತೆ ಇದೇ ಮೃತ್ಯುಲೋಕಕ್ಕೆ ಹಿಂತಿರುಗುವುದಿಲ್ಲ. ಅವರಂತೂ ಯಾತ್ರೆಯಿಂದ ಹಿಂತಿರುಗಿ ಬರುತ್ತಾರೆ ಮತ್ತು ಹೇಗಿದ್ದವರು ಹಾಗೆಯೇ ಆಗಿಬಿಡುತ್ತಾರೆ. ನೀವಂತೂ ತಿಳಿದುಕೊಂಡಿದ್ದೀರಿ- ನಾವು ಸ್ವರ್ಗದಲ್ಲಿ ಹೋಗುತ್ತೇವೆ, ಸ್ವರ್ಗವಿತ್ತು ಅದು ಪುನಃ ಆಗುವುದು. ಈ ಚಕ್ರವು ಸುತ್ತುತ್ತದೆ, ಪ್ರಪಂಚವು ಒಂದೇ ಆಗಿದೆ ಬಾಕಿ ನಕ್ಷತ್ರಗಳಲ್ಲಿ ಯಾವುದೇ ಪ್ರಪಂಚವಿಲ್ಲ. ಮೇಲೆ ಹೋಗಿ ನೋಡಲು ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾ ಇರುತ್ತಾರೆ. ಅವರು ತಲೆಕೆಡಿಸಿಕೊಳ್ಳುತ್ತಾ-ತಲೆಕೆಡಿಸಿಕೊಳ್ಳುತ್ತಾ ಮೃತ್ಯುವು ಅವರ ಮುಂದೆ ಬಂದುಬಿಡುವುದು. ಇದೆಲ್ಲವೂ ವಿಜ್ಞಾನವಾಗಿದೆ. ಮೇಲೆ ಹೋದರೂ ಸಹ ಮತ್ತೇನಾಗುವುದು, ಮೃತ್ಯುವಂತೂ ಸನ್ಮುಖದಲ್ಲಿ ನಿಂತಿದೆ. ಒಂದುಕಡೆ ಮೇಲೆ ಹೋಗಿ ಅನ್ವೇಷಣೆ ನಡೆಸುತ್ತಾರೆ, ಇನ್ನೊಂದುಕಡೆ ಮೃತ್ಯುವಿಗಾಗಿ ಬಾಂಬುಗಳನ್ನು ತಯಾರಿಸುತ್ತಿದ್ದಾರೆ. ಮನುಷ್ಯರ ಬುದ್ಧಿ ನೋಡಿ ಹೇಗಿದೆ! ಯಾರೋ ನಮಗೆ ಪ್ರೇರಕರಿದ್ದಾರೆಂದೂ ಸಹ ತಿಳಿದುಕೊಳ್ಳುತ್ತಾರೆ. ಮಹಾಭಾರಿ ಯುದ್ಧವು ಅವಶ್ಯವಾಗಿ ಆಗುವುದಿದೆ ಎಂದು ಅವರೇ ಹೇಳುತ್ತಾರೆ. ಇದು ಅದೇ ಮಹಾಭಾರತ ಯುದ್ಧವಾಗಿದೆ. ಈಗ ನೀವು ಮಕ್ಕಳೂ ಸಹ ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟೇ ಕಲ್ಯಾಣ ಮಾಡಿಕೊಳ್ಳುತ್ತೀರಿ. ಖುದಾನ ಮಕ್ಕಳಂತೂ ಆಗಿಯೇ ಇದ್ದೀರಿ, ಭಗವಂತನು ತಮ್ಮ ಮಕ್ಕಳನ್ನಾಗಿ ಮಾಡಿಕೊಳ್ಳುತ್ತಾರೆ ಆಗ ನೀವು ಭಗವಾನ್-ಭಗವತಿಯಾಗಿಬಿಡುತ್ತೀರಿ. ಲಕ್ಷ್ಮೀ-ನಾರಾಯಣರನ್ನು ದೇವಿ-ದೇವತೆಗಳೆಂದು ಹೇಳುತ್ತಾರಲ್ಲವೆ. ಕೃಷ್ಣನನ್ನು ದೇವತೆಯೆಂದು ಒಪ್ಪುತ್ತಾರೆ, ರಾಧೆಗೆ ಅಷ್ಟೊಂದು ಒಪ್ಪುವುದಿಲ್ಲ. ಸರಸ್ವತಿಯ ಹೆಸರಿದೆ, ರಾಧೆಯ ಹೆಸರಿಲ್ಲ ಮತ್ತೆ ಕಳಶವನ್ನು ಲಕ್ಷ್ಮೀಗೆ ತೋರಿಸುತ್ತಾರೆ, ಇದನ್ನೂ ಸಹ ತಪ್ಪು ಮಾಡಿಬಿಟ್ಟಿದ್ದಾರೆ. ಸರಸ್ವತಿಗೆ ಅನೇಕ ಹೆಸರುಗಳನ್ನಿಟ್ಟಿದ್ದಾರೆ. ವಾಸ್ತವದಲ್ಲಿ ಅದು ನೀವಾಗಿದ್ದೀರಿ. ದೇವಿಯರ ಪೂಜೆಯೂ ನಡೆಯುತ್ತದೆ ಮತ್ತು ಆತ್ಮಗಳಿಗೂ ಪೂಜೆಯು ನಡೆಯುತ್ತದೆ. ತಂದೆಯು ಮಕ್ಕಳಿಗೆ ಪ್ರತಿಯೊಂದು ಮಾತನ್ನು ತಿಳಿಸುತ್ತಿರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಹೇಗೆ ತಂದೆಯು ಅಪಕಾರಿಗಳ ಮೇಲೂ ಉಪಕಾರ ಮಾಡುತ್ತಾರೆಯೋ ಹಾಗೆಯೇ ಫಾಲೋ ಫಾದರ್ ಮಾಡಬೇಕಾಗಿದೆ. ಯಾರಾದರೂ ಏನಾದರೂ ಹೇಳಿದರೆ ಕೇಳಿಯೂ ಕೇಳದಂತಿರಬೇಕು, ಮುಗುಳ್ನಗುತ್ತಿರಬೇಕಾಗಿದೆ. ಒಬ್ಬ ತಂದೆಯಿಂದಲೇ ಕೇಳಬೇಕಾಗಿದೆ.

2. ಸುಖದಾಯಿಯಾಗಿ ಎಲ್ಲರಿಗೆ ಸುಖವನ್ನು ಕೊಡಬೇಕಾಗಿದೆ. ಪರಸ್ಪರ ಜಗಳ-ಕಲಹ ಮಾಡಬಾರದು. ಬುದ್ಧಿವಂತರಾಗಿ ಅವಿನಾಶಿ ಜ್ಞಾನರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಕೊಳ್ಳಬೇಕಾಗಿದೆ.

ವರದಾನ:
ಸಾಗರದ ಆಳದಲ್ಲಿ ಹೋಗಿ ಅನುಭವ ರೂಪಿ ರತ್ನ ಪ್ರಾಪ್ತಿ ಮಾಡಿಕೊಳ್ಳುವಂತಹ ಸದಾ ಸಮರ್ಥಆತ್ಮ ಭವ

ಸಮರ್ಥ ಆತ್ಮ ಆಗಬೇಕಾದರೆ ಯೋಗದ ಎಲ್ಲಾ ವಿಶೇಷತೆಗಳ ಎಲ್ಲಾ ಶಕ್ತಿಗಳ ಮತ್ತು ಜ್ಞಾನದ ಪ್ರತಿಯೊಂದು ಪಾಯಿಂಟ್ ನ ಅಭ್ಯಾಸ ಮಾಡಿ. ಅಭ್ಯಾಸಿ, ಲಗನ್ ನಲ್ಲಿ ಮಗ್ನರಾಗಿರುವಂತಹ ಆತ್ಮನ ಮುಂದೆ ಯಾವುದೇ ಪ್ರಕಾರದ ವಿಘ್ನ ನಿಲ್ಲಲು ಸಾಧ್ಯವಿಲ್ಲ ಆದ್ದರಿಂದ ಅಭ್ಯಾಸದ ಪ್ರಯೋಗಶಾಲೆಯಲ್ಲಿ ಕುಳಿತುಬಿಡಿ. ಇಲ್ಲಿಯವರೆಗೆ ಜ್ಞಾನ ಸಾಗರ, ಗುಣಗಳ ಸಾಗರ, ಶಕ್ತಿಗಳ ಸಾಗರನ ಮೇಲೆ-ಮೇಲೆ,ಮೇಲೆ ಅಲೆಗಳಲ್ಲಿ ತೇಲುತ್ತಿರುವಿರಿ, ಆದರೆ ಈಗ ಸಾಗರನ ತಳದಲ್ಲಿ ಹೋಗಿ ಆಗ ಅನೇಕ ಪ್ರಕಾರದ ವಿಚಿತ್ರ ಅನುಭವದ ರತ್ನ ಪ್ರಾಪ್ತಿಮಾಡಿಕೊಂಡು ಸಮರ್ಥ ಆತ್ಮ ಆಗಿಬಿಡುವಿರಿ.

ಸ್ಲೋಗನ್:
ಅಶುದ್ಧರಾಗಿರುವವರೇ ವಿಕಾರ ರೂಪಿ ಭೂತಗಳ ಆಹ್ವಾನ ಮಾಡುತ್ತಾರೆ ಆದ್ದರಿಂದ ಸಂಕಲ್ಪಗಳಿಂದಲೂ ಶುದ್ಧರಾಗಿ.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ

ಹೇಗೆ ಬ್ರಹ್ಮಾಬಾಬಾ ವಿಶೇಷ ಶ್ರೇಷ್ಠ ಸಂಕಲ್ಪಗಳಿಂದ ಮಕ್ಕಳನ್ನು ಆಹ್ವಾನ ಮಾಡಿದರು ಅರ್ಥಾತ್ ರಚನೆಯನ್ನು ಮಾಡಿದರು. ಈ ಸಂಕಲ್ಪದ ರಚನೆಯು ಸಹ ಕಡಿಮೆ ಇಲ್ಲ. ಶ್ರೇಷ್ಠ ಶಕ್ತಿಶಾಲಿ ಸಂಕಲ್ಪ ಒಟ್ಟುಗೂಡಿ ಭಿನ್ನ ಭಿನ್ನ ಧರ್ಮದ ಪರದೆಯನ್ನು ತೆರೆದು ಸಮೀಪ ತಂದಿತು. ಇದೇ ರೀತಿ ತಾವು ಮಕ್ಕಳು ಸಹ ಶಕ್ತಿಶಾಲಿ ಶ್ರೇಷ್ಠ ಸಂಕಲ್ಪಧಾರಿ ಆಗಿ. ತಮ್ಮ ಸಂಕಲ್ಪಗಳ ಶಕ್ತಿಯನ್ನು ಹೆಚ್ಚು ಖರ್ಚು ಮಾಡಬೇಡಿ, ವ್ಯರ್ಥವಾಗಿ ಕಳೆಯಬೇಡಿ. ಆಗ ಶ್ರೇಷ್ಠ ಸಂಕಲ್ಪಗಳಿಂದ ಪ್ರಾಪ್ತಿಯು ಸಹ ಶ್ರೇಷ್ಠವಾಗುವುದು.