12.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮಗೆ
ಸರ್ವೀಸಿನಲ್ಲಿ ಬಹಳ ಉಮ್ಮಂಗ ಬರಬೇಕು, ಜ್ಞಾನ-ಯೋಗ ಇದ್ದಾಗ ಬೇರೆಯವರಿಗೂ ಕಲಿಸಿ, ಸರ್ವೀಸನ್ನು
ವೃದ್ಧಿ ಮಾಡಿರಿ.”
ಪ್ರಶ್ನೆ:
ಸರ್ವೀಸಿನಲ್ಲಿ
ಉಮ್ಮಂಗ ಬರದೇ ಇರಲು ಕಾರಣವೇನಾಗಿದೆ? ಯಾವ ವಿಘ್ನದ ಕಾರಣ ಉಮ್ಮಂಗವು ಬರುವುದಿಲ್ಲ?
ಉತ್ತರ:
ಎಲ್ಲದಕ್ಕಿಂತಲೂ
ದೊಡ್ಡ ವಿಘ್ನ ಅಪವಿತ್ರ ದೃಷ್ಟಿಯಾಗಿದೆ. ಈ ಖಾಯಿಲೆಯು ಸರ್ವೀಸಿನಲ್ಲಿ ಉಮ್ಮಂಗ ಬರಲು
ಬಿಡುವುದಿಲ್ಲ. ಇದು ಬಹಳ ಕಠಿಣವಾದ ಖಾಯಿಲೆಯಾಗಿದೆ. ಒಂದುವೇಳೆ ಅಪವಿತ್ರ ದೃಷ್ಟಿಯು ತಣ್ಣಗಾಗಿಲ್ಲ,
ಗೃಹಸ್ಥ ವ್ಯವಹಾರದಲ್ಲಿ ಎರಡೂ ಚಕ್ರಗಳು ಸರಿಯಾಗಿ ನಡೆದಿಲ್ಲವೆಂದರೆ ಗೃಹಸ್ಥವು ಹೊರೆಯಾಗುತ್ತದೆ,
ಹಗುರರಾಗಿ ಸರ್ವೀಸಿನಲ್ಲಿ ಉಮ್ಮಂಗ ಬರುವುದಿಲ್ಲ.
ಗೀತೆ:
ಎದ್ದೇಳಿ
ಪ್ರಿಯತಮೆಯರೇ ಎದ್ದೇಳಿ...............
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಇಂತಹ 2-4 ಒಳ್ಳೆಯ ಗೀತೆಗಳು ಎಲ್ಲರ
ಬಳಿಯಿರಬೇಕು ಅಥವಾ ಟೇಪ್ನಲ್ಲಿ ಭರ್ತಿ ಮಾಡಿರಿ. ಈ ಗೀತೆಗಳು ಮನುಷ್ಯರಿಂದ ಮಾಡಲ್ಪಟ್ಟಿವೆ.
ಡ್ರಾಮಾನುಸಾರ ಯಾವುದು ಮಕ್ಕಳ ಕೆಲಸಕ್ಕೆ ಬರುತ್ತದೆಯೋ ಅದು ಟಚ್ ಆಗುತ್ತದೆ. ಇಂತಹ ಗೀತೆಗಳು
ಮಕ್ಕಳು ಕೇಳುವುದರಿಂದ ನಶೆಯೇರುತ್ತದೆ. ಈಗ ನಾವು ಹೊಸ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ
ಎಂಬ ನಶೆಯು ಮಕ್ಕಳಿಗಿರಬೇಕು. ಹೇಗೆ ಯಾರಾದರೂ ಯುದ್ಧ ಮಾಡುತ್ತಿದ್ದರೆ ಅವರಿಗೆ ವಿಚಾರ ಬರುತ್ತದೆ
- ನಾವು ಇವರಿಂದ ರಾಜ್ಯವನ್ನು ಪಡೆಯುತ್ತೇವೆ, ಇವರ ರಾಜ್ಯವು ನಮ್ಮ ಕೈಗೆ ಬರುತ್ತದೆ ಎಂದು ಆದರೆ
ಅವರೆಲ್ಲರೂ ಅಲ್ಪಕಾಲದ ರಾಜ್ಯಕ್ಕೋಸ್ಕರ ಯುದ್ಧ ಮಾಡುತ್ತಾರೆ, ನೀವು ಮಕ್ಕಳ ಯುದ್ಧವು ಮಾಯೆಯ
ಜೊತೆಯಿದೆ. ಅದು ನೀವು ಮಕ್ಕಳ ವಿನಃ ಬೇರೆ ಯಾರಿಗೂ ಗೊತ್ತಿಲ್ಲ. ನೀವು ತಿಳಿದುಕೊಂಡಿದ್ದೀರಿ -
ನೀವೀಗ ಈ ವಿಶ್ವದ ಮೇಲೆ ಗುಪ್ತ ರೀತಿಯಲ್ಲಿ ರಾಜ್ಯ ಸ್ಥಾಪನೆ ಮಾಡುತ್ತಿದ್ದೀರಿ ಅಥವಾ ತಂದೆಯಿಂದ
ಆಸ್ತಿಯನ್ನು ಪಡೆಯುತ್ತಿದ್ದೀರಿ. ಇದಕ್ಕೆ ವಾಸ್ತವದಲ್ಲಿ ಯುದ್ಧವೆಂದು ಹೇಳುವುದಿಲ್ಲ.
ಡ್ರಾಮಾನುಸಾರ ಯಾರು ಸತೋಪ್ರಧಾನರಿದ್ದರು ಅವರು ತಮೋಪ್ರಧಾನರಾಗಿದ್ದಾರೆ. ಈಗ ಮತ್ತೆ
ಸತೋಪ್ರಧಾನರಾಗಬೇಕು. ನಿಮಗೆ ನಿಮ್ಮ ಜನ್ಮಗಳ ಕಥೆ ಗೊತ್ತಿಲ್ಲ, ಈಗ ತಂದೆಯು ತಿಳಿಸುತ್ತಿದ್ದಾರೆ.
ಬೇರೆ ಧರ್ಮದವರಿಗೆ ಈ ಜ್ಞಾನವು ಸಿಗುವಂತಹ ಅವಕಾಶವೇ ಇಲ್ಲ. ತಂದೆಯು ಕುಳಿತು ನೀವು ಮಕ್ಕಳಿಗೆ
ಎಲ್ಲವನ್ನೂ ತಿಳಿಸುತ್ತಿದ್ದಾರೆ. ಧರ್ಮದಲ್ಲಿಯೇ ಶಕ್ತಿಯಿದೆ ಎಂದು ಗಾಯನವಿದೆ. ನಮ್ಮ ಧರ್ಮ
ಯಾವುದೆಂದು ಭಾರತವಾಸಿಗಳಿಗೆ ತಿಳಿದಿಲ್ಲ. ನಿಮಗೆ ತಂದೆಯ ಮುಖಾಂತರ ನಮ್ಮದು ಆದಿ ಸನಾತನ
ದೇವಿ-ದೇವತಾ ಧರ್ಮವಾಗಿದೆ ಎಂದು ತಿಳಿದಿದೆ. ತಂದೆಯು ಬಂದು ಮತ್ತೆ ನಿಮ್ಮನ್ನು ಆ ಧರ್ಮಕ್ಕೆ
ವರ್ಗಾವಣೆ ಮಾಡುತ್ತಾರೆ. ನಮ್ಮ ಧರ್ಮವು ಎಷ್ಟು ಸುಖ ಕೊಡುತ್ತದೆಯೆಂಬುದು ನಿಮಗೆ ತಿಳಿದಿದೆ. ನೀವು
ಯಾರ ಜೊತೆಯಲ್ಲಿಯೂ ಯುದ್ಧ ಮಾಡುವ ಅಗತ್ಯವಿಲ್ಲ. ನೀವೀಗ ನಿಮ್ಮ ಸ್ವಧರ್ಮದಲ್ಲಿ ಸ್ಥಿತರಾಗಬೇಕು
ಮತ್ತು ತಂದೆಯನ್ನು ನೆನಪು ಮಾಡಬೇಕು. ಇದರಲ್ಲಿಯೇ ನಿಮಗೆ ಸಮಯ ಹಿಡಿಸುತ್ತದೆ. ಕೇವಲ ಹೇಳುವುದರಿಂದ
ಸ್ಥಿತರಾಗುತ್ತೇವೆ ಎಂಬ ಮಾತಲ್ಲ, ನಾನಾತ್ಮ ಶಾಂತ ಸ್ವರೂಪನಾಗಿದ್ದೇನೆಂದು ಆಂತರ್ಯದಲ್ಲಿ ಈ ಸ್ಮೃತಿ
ಬರಬೇಕು. ನಾವು ಆತ್ಮಗಳು ಈಗ ತಮೋಪ್ರಧಾನ, ಪತಿತರಾಗಿದ್ದೇವೆ. ನಾವಾತ್ಮರು ಯಾವಾಗ
ಶಾಂತಿಧಾಮದಲ್ಲಿದ್ದೆವೋ ಆಗ ಪವಿತ್ರರಾಗಿದ್ದೆವು ಮತ್ತೆ ಪಾತ್ರ ಅಭಿನಯಿಸುತ್ತಾ-ಅಭಿನಯಿಸುತ್ತಾ
ತಮೋಪ್ರಧಾನರಾಗಿದ್ದೇವೆ. ಈಗ ಮತ್ತೆ ಪವಿತ್ರರಾಗಿ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ತಂದೆಯಿಂದ
ಆಸ್ತಿಯನ್ನು ಪಡೆಯುವುದಕ್ಕೆ ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಂಡು ನನ್ನನ್ನು ನೆನಪು ಮಾಡಿ. ನಾವು
ಈಶ್ವರನ ಸಂತಾನರೆಂದು ನಿಮಗೆ ನಶೆಯೇರುತ್ತದೆ. ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮ
ವಿನಾಶವಾಗುತ್ತದೆ. ನೆನಪಿನಿಂದ ನಾವು ಪವಿತ್ರರಾಗಿ ಮತ್ತೆ ಶಾಂತಿಧಾಮಕ್ಕೆ ಹೋಗುತ್ತೇವೆ ಎಂಬುದು
ಎಷ್ಟು ಸಹಜವಾಗಿದೆ! ಪ್ರಪಂಚದವರಿಗೆ ಈ ಶಾಂತಿಧಾಮ, ಸುಖಧಾಮ ಏನೆಂಬುದು ತಿಳಿದಿಲ್ಲ. ಈ ಮಾತು
ಯಾವುದೇ ಶಾಸ್ತ್ರದಲ್ಲಿಯೂ ಇಲ್ಲ. ಜ್ಞಾನ ಸಾಗರನ ಗೀತೆ ಒಂದೇ ಆಗಿದೆ ಅದರ ಹೆಸರನ್ನು ಬದಲಾವಣೆ
ಮಾಡಲಾಗಿದೆ. ಸರ್ವರ ಸದ್ಗತಿದಾತ ಜ್ಞಾನ ಸಾಗರ, ಆ ಪರಮಪಿತ ಪರಮಾತ್ಮನೇ ಆಗಿದ್ದಾರೆ, ಬೇರೆ ಯಾರಿಗೂ
ಜ್ಞಾನವಂತರೆಂದು ಹೇಳುವುದಿಲ್ಲ. ಯಾವಾಗ ಅವರು ಬಂದು ಜ್ಞಾನ ಕೊಡುತ್ತಾರೆಯೋ ಆಗ ನೀವು
ಜ್ಞಾನವಂತರಾಗುತ್ತೀರಿ. ಈಗ ಎಲ್ಲರೂ ಭಕ್ತರಾಗಿದ್ದಾರೆ. ನೀವೂ ಭಕ್ತರೇ ಆಗಿದ್ದಿರಿ, ಈಗ ಮತ್ತೆ
ನೀವು ಜ್ಞಾನವಂತರಾಗುತ್ತಿದ್ದೀರಿ. ನಂಬರ್ವಾರ್ ಪುರುಷಾರ್ಥದನುಸಾರ ಜ್ಞಾನವು ಕೆಲವರಲ್ಲಿ ಇರುತ್ತದೆ,
ಕೆಲವರಲ್ಲಿ ಇರುವುದಿಲ್ಲ. ಈ ಲೆಕ್ಕದಿಂದ ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ. ತಂದೆಯು
ಸರ್ವೀಸಿಗಾಗಿ ಎಷ್ಟು ಉಮ್ಮಂಗ ತುಂಬುತ್ತಾರೆ! ಅನ್ಯರಿಗೆ ತಿಳಿಸಲು ಮಕ್ಕಳಲ್ಲಿ ಇನ್ನೂ ಆ ಶಕ್ತಿ
ಬಂದಿಲ್ಲ. ಇಂತಹ ಯುಕ್ತಿಗಳನ್ನು ರಚಿಸಿ, ಭಲೆ ಮಕ್ಕಳು ಶ್ರಮಪಟ್ಟು ಸಮ್ಮೇಳನಗಳನ್ನು ಮಾಡುತ್ತಾರೆ.
ಗೋಪರಲ್ಲಿ (ಅಣ್ಣಂದಿರಲ್ಲಿ) ಸ್ವಲ್ಪ ಶಕ್ತಿಯಿದೆ, ಸಂಘಟನೆಯಲ್ಲಿ ಸೇರಿ ಯುಕ್ತಿಯನ್ನು ರಚಿಸಬೇಕು
- ಸರ್ವೀಸ್ ಹೇಗೆ ವೃದ್ಧಿ ಮಾಡುವುದೆಂದು ಅವರಿಗೆ ವಿಚಾರ ಬರುತ್ತದೆ. ಭಲೆ ಹೆಸರು ಶಕ್ತಿದಳ
ಎಂದಾಗಿದ್ದರೂ ಸಹ ಓದು-ಬರಹ ಇಲ್ಲ. ಕೆಲವರು ಅವಿದ್ಯಾವಂತರು ಓದಿರುವವರಿಗೆ ಬಹಳ ಚೆನ್ನಾಗಿ
ಓದಿಸುತ್ತಾರೆ. ಅಪವಿತ್ರ ದೃಷ್ಟಿಯು ಬಹಳ ನಷ್ಟ ಮಾಡುತ್ತದೆಯೆಂದು ತಂದೆಯು ತಿಳಿಸುತ್ತಾರೆ. ಇದು
ದೊಡ್ಡ ಖಾಯಿಲೆಯಾಗಿರುವ ಕಾರಣ ಉಮ್ಮಂಗ ಬರುವುದಿಲ್ಲ. ತಂದೆಯು ಕೇಳುತ್ತಾರೆ - ನೀವು ಯುಗಲ್
ಆಗಿದ್ದೀರಿ ಎಂದರೆ ಎರಡೂ ಚಕ್ರಗಳು ಸರಿಯಾಗಿ ನಡೆಯುತ್ತಿದೆಯೇ? ಒಂದು ಕಡೆ ಎಷ್ಟು ದೊಡ್ಡ-ದೊಡ್ಡ
ಸೈನಿಕರಿದ್ದಾರೆ, ಸ್ತ್ರೀಯರ ಗುಂಪೂ ಇದೆ, ಅವರೆಲ್ಲರಿಗೂ ಓದು-ಬರಹ ಬರುತ್ತದೆ. ಅಂತಹವರಿಗೆ
ಸಹಯೋಗವೂ ಸಿಗುತ್ತದೆ ಆದರೆ ನೀವಿಲ್ಲಿ ಗುಪ್ತವಾಗಿದ್ದೀರಿ. ಬ್ರಹ್ಮಾಕುಮಾರ-ಕುಮಾರಿಯರು ಏನು
ಮಾಡುತ್ತಾರೆಂಬುದು ಯಾರಿಗೂ ಗೊತ್ತಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ಗೃಹಸ್ಥ ವ್ಯವಹಾರವೇ
ತಲೆಯ ಮೇಲಿರುವ ಕಾರಣ ಬಾಗಿ ಬಿಟ್ಟಿದ್ದಾರೆ. ಬ್ರಹ್ಮಾಕುಮಾರ-ಕುಮಾರಿಯರೆಂದು ಹೇಳಿಕೊಂಡರೂ ಸಹ
ಅಪವಿತ್ರ ದೃಷ್ಟಿಯು ತಣ್ಣಗಾಗಿರುವುದಿಲ್ಲ. ಎರಡೂ ಚಕ್ರಗಳೂ ಒಂದೇ ಸಮಾನ ನಡೆಯಲು ಕಷ್ಟವಾಗಿರುತ್ತದೆ.
ತಂದೆಯು ಮಕ್ಕಳಿಗೆ ಸರ್ವೀಸ್ ಮಾಡುವುದಕ್ಕೋಸ್ಕರ ತಿಳಿಸುತ್ತಿರುತ್ತಾರೆ. ಕೆಲವರು ಧನವಂತರಾಗಿದ್ದರೂ
ಉಮ್ಮಂಗವಿರುವುದಿಲ್ಲ. ಹಣದ ಹಸಿವುಳ್ಳವರಾಗಿರುತ್ತಾರೆ, ಮಕ್ಕಳಿರುವುದಿಲ್ಲವೆಂದರೂ ದತ್ತು
ಮಾಡಿಕೊಳ್ಳುತ್ತಾರೆ. ಬಾಬಾ ನಾವು ಕುಳಿತಿದ್ದೇವೆ, ನಾವು ದೊಡ್ಡ ಮನೆಯನ್ನು ತೆಗೆದುಕೊಂಡು
ಕೊಡುತ್ತೇವೆಂಬ ಉತ್ಸಾಹವೂ ಬರುವುದಿಲ್ಲ.
ದೆಹಲಿಯು ರಾಜಧಾನಿ ಹಾಗೂ
ಮುಖ್ಯ ಕೇಂದ್ರವಾಗಿರುವ ಕಾರಣ ತಂದೆಯ ದೃಷ್ಟಿಯು ವಿಶೇಷವಾಗಿ ದೆಹಲಿಯ ಮೇಲಿದೆ. ತಂದೆಯು
ಹೇಳುತ್ತಾರೆ - ದೆಹಲಿಯಲ್ಲಿ ವಿಶೇಷವಾಗಿ ಸರ್ವೀಸ್ ಮಾಡಲು ಮುತ್ತಿಗೆ ಹಾಕಿ. ಅನ್ಯರಿಗೆ
ತಿಳಿಸಿಕೊಡಲು ಒಳಗಡೆ ನುಗ್ಗಬೇಕು. ಪಾಂಡವರಿಗೆ ಕೌರವರಿಂದ ಮೂರಡಿ ಭೂಮಿಯೂ ಸಿಗಲಿಲ್ಲವೆಂದು
ಗಾಯನವಿದೆ. ಕೌರವ ಎಂಬ ಅಕ್ಷರವು ಗೀತೆಯಲ್ಲಿದೆ. ಭಗವಂತನು ಬಂದು ರಾಜಯೋಗವನ್ನು ಕಲಿಸಿರುವಕಾರಣ
ಅದರ ಹೆಸರು ಗೀತೆಯೆಂದು ಇಡಲಾಗಿದೆ ಆದರೆ ಗೀತೆಯ ಭಗವಂತನನ್ನು ಮರೆತಿದ್ದಾರೆ. ಆ ಕಾರಣ ತಂದೆಯು
ಘಳಿಗೆ-ಘಳಿಗೆಗೂ ಮುಖ್ಯವಾಗಿ ಇದೇ ವಿಷಯದ ಪ್ರತಿ ತಿಳಿಸಿ ಎಂದು ಹೇಳುತ್ತಿರುತ್ತಾರೆ. ಬನಾರಸಿ
ವಿದ್ಯುತ್ ಮಂಡಳಿಯವರಿಗೆ ತಿಳಿಸಿ, ಮೊದಲೆಲ್ಲಾ ತಂದೆಯು ಹೇಳುತ್ತಿದ್ದರು. ಬಾಬಾ ಯುಕ್ತಿಯನ್ನು
ಹೇಳುತ್ತಿರುತ್ತಾರೆ. ಮಕ್ಕಳು ಬಹಳ ಪ್ರಯತ್ನ ಪಡಬೇಕು. ತಂದೆಯು ಪದೇ-ಪದೇ ತಿಳಿಸುತ್ತಾರೆ -
ನಂಬರ್ವನ್ ದೆಹಲಿಯಲ್ಲಿ ಯುಕ್ತಿಯನ್ನು ರಚಿಸಿ, ಸಂಘಟನೆಯಲ್ಲಿಯೂ ಇದರ ಪ್ರತಿ ವಿಚಾರ ಮಾಡಿ.
ಮುಖ್ಯವಾದ ಮಾತು, ದೆಹಲಿಯಲ್ಲಿ ಹೇಗೆ ದೊಡ್ಡ ಮೇಳ ಮಾಡಬೇಕು ಎಂಬುದಾಗಿದೆ. ಅವರು ದೆಹಲಿಯಲ್ಲಿ ಬಹಳ
ಉಪವಾಸ ಸತ್ಯಾಗ್ರಹ ಮಾಡುತ್ತಾರೆ, ನೀವೇನೂ ಅಂತಹ ಕೆಲಸ ಮಾಡುವ ಹಾಗಿಲ್ಲ. ಹೊಡೆದಾಟ-ಜಗಳವೂ ಇಲ್ಲ.
ಕೇವಲ ನೀವು ಮಲಗಿರುವವರನ್ನು ಜಾಗೃತಗೊಳಿಸುತ್ತೀರಿ. ದೆಹಲಿಯಲ್ಲಿರುವವರಿಗಾಗಿಯೇ ನೀವು ಪರಿಶ್ರಮ
ಪಡಬೇಕು. ಕಲ್ಪದ ಹಿಂದಿನಂತೆ ಸೃಷ್ಟಿಗೂ ಮಾಲೀಕರಾಗುತ್ತೀರಿ ಹಾಗೂ ಬ್ರಹ್ಮಾಂಡಕ್ಕೂ
ಮಾಲೀಕರಾಗುತ್ತೀರಿ ಎಂಬುದು ನಿಮಗೆ ತಿಳಿದಿದೆ. ಇದು ಪಕ್ಕಾ ಆಗಿದೆ. ವಿಶ್ವದ ಮಾಲೀಕರಂತೂ ಆಗಲೇಬೇಕು.
ಅಲ್ಲಿ ಜ್ಞಾನದ ಗೋಲಿಯನ್ನು ಹೊಡೆಯುವುದಕ್ಕೆ ಈಗ ನಿಮಗೆ ಮೂರಡಿ ಭೂಮಿಯು ರಾಜಧಾನಿಯಲ್ಲಿಯೇ
ಬೇಕಾಗಿದೆ. ಗಣ್ಯ ವ್ಯಕ್ತಿಗಳಿಗೆ ಸಂದೇಶ ಕೊಡಬೇಕು. ಈ ಸಮಯದಲ್ಲಿ ಭಾರತದ ಬಡವರ ಸೇವೆಯನ್ನು
ಮಾಡುವುದಕ್ಕೆ ತಂದೆಯು ಬಂದಿದ್ದಾರೆ. ದೆಹಲಿಯಲ್ಲಿ ಬಹಳ ಸರ್ವೀಸ್ ಮಾಡಬೇಕು. ಬಾಬಾ ಸೂಚನೆಯನ್ನು
ಕೊಡುತ್ತಿರುತ್ತಾರೆ. ಬಾಬಾ ನಮ್ಮ ಗಮನವನ್ನೂ ಸೆಳೆಯುತ್ತಿದ್ದಾರೆ ಎಂದು ದೆಹಲಿಯಲ್ಲಿರುವವರು
ತಿಳಿಯುತ್ತಾರೆ. ಪರಸ್ಪರ ಕ್ಷೀರ ಖಂಡವಾಗಿರಬೇಕು. ತಾವು ಪಾಂಡವರು ಕೋಟೆಯನ್ನು ನಿರ್ಮಿಸಬೇಕು ಅದೂ
ದೆಹಲಿಯಲ್ಲಿಯೇ ಆಗಬೇಕಾಗಿದೆ. ಇದರಲ್ಲಿ ಬುದ್ಧಿಯು ಬಹಳ ಚೆನ್ನಾಗಿರಬೇಕು. ಬಹಳಷ್ಟು ಮಾಡಿ
ತೋರಿಸಬಹುದು. ನಮ್ಮ ದೇಶ ಭಾರತ, ನಾವು ಈ ರೀತಿ ಮಾಡುತ್ತೇವೆಂದು ಹಾಡನ್ನು ಹಾಡುತ್ತಾರೆ ಆದರೆ
ಅವರಲ್ಲಿ ಸ್ವಲ್ಪವೂ ಧೈರ್ಯವಿಲ್ಲ. ವಿದೇಶಿಯರ ಕೈವಾಡವಿಲ್ಲದೆ ಅವರು ಮೇಲೆ ಬರಲು ಆಗುವುದಿಲ್ಲ.
ಆದರೆ ನಿಮಗೆ ಬೇಹದ್ದಿನ ತಂದೆಯಿಂದ ಬಹಳ ಸಹಯೋಗ ಸಿಗುತ್ತಿದೆ. ಇಷ್ಟು ಸಹಯೋಗವನ್ನು ಬೇರೆ ಯಾರೂ
ಕೊಡುವುದಕ್ಕಾಗುವುದಿಲ್ಲ. ಈಗ ಬಹಳ ಬೇಗನೆ ಕೋಟೆಯನ್ನು ರಚಿಸಬೇಕು. ನೀವು ಮಕ್ಕಳಿಗೆ ತಂದೆಯು
ವಿಶ್ವದ ಆಸ್ತಿ ಕೊಡುತ್ತಾರೆಂದರೆ ನಿಮ್ಮಲ್ಲಿ ಉತ್ಸಾಹವೂ ಇರಬೇಕು. ಬಹಳ ಮಕ್ಕಳ ಬುದ್ಧಿಯು
ಅಲ್ಲಸಲ್ಲದ ಮಾತುಗಳಲ್ಲಿ ಸಿಕ್ಕಿ ಹಾಕಿಕೊಂಡಿರುತ್ತದೆ. ಹೆಚ್ಚಿನದಾಗಿ ಬಂಧನಗಳ ಆಪತ್ತು ಮಾತೆಯರಿಗೆ
ಬರುತ್ತದೆ. ಅಣ್ಣಂದಿರಿಗೆ ಅಷ್ಟೊಂದು ಬರುವುದಿಲ್ಲ. ಮಾತೆಯರಿಗೇ ಅಬಲೆಯರೆಂದು ಹೇಳುತ್ತಾರೆ,
ಪುರುಷರಿಗೆ ಶಕ್ತಿವಂತರೆಂದು ಹೇಳುತ್ತಾರೆ. ಪುರುಷ ವಿವಾಹವಾಗುತ್ತಾನೆಂದರೆ, ಅವನಿಗೆ ಶಕ್ತಿ
ಕೊಡುತ್ತಾರೆ - ನೀನೇ ಗುರು, ಈಶ್ವರ ಎಲ್ಲವೂ ಎಂದು. ಸ್ತ್ರೀ ಅವನನ್ನು ಅನುಸರಿಸುತ್ತಾಳೆ. ಹಿಂದೆ
ಬಿದ್ದಿರುವವರಿಗೆ ಖಂಡಿತವಾಗಿಯೂ ಬಾಲ ಎಂದೇ ಹೇಳಲಾಗುತ್ತದೆಯಲ್ಲವೆ. ಪತಿಯಲ್ಲಿ ಮೋಹ ಮತ್ತು
ಮಕ್ಕಳಲ್ಲಿ ಮೋಹ ಆದರೆ ಪುರುಷನಿಗೆ ಇಷ್ಟೊಂದು ಮೋಹವಿರುವುದಿಲ್ಲ. ಅವರಿಗೆ ಒಂದು ಚಪ್ಪಲಿ (ಪತ್ನಿ)
ಹೋದರೆ ಇನ್ನೊಂದು, ಮತ್ತೊಂದು. ಹವ್ಯಾಸವಾಗಿ ಬಿಟ್ಟಿರುತ್ತದೆ. ಬಾಬಾ ತಿಳಿಸುತ್ತಾರೆ - ಇದನ್ನೂ
ಸಹ ದಿನ ಪತ್ರಿಕೆಯಲ್ಲಿ ಹಾಕಿಸಿ. ಮಕ್ಕಳು ತಂದೆಯನ್ನು ಪ್ರತ್ಯಕ್ಷ ಮಾಡಬೇಕು. ಇದನ್ನು ತಿಳಿಸುವುದು
ನಿಮ್ಮ ಕೆಲಸವಾಗಿದೆ. ತಂದೆಯ ಜೊತೆಯಲ್ಲಿ ದಾದಾರವರೂ ಇದ್ದಾರೆ, ಇವರು ಹೊರಗಡೆ ಹೋಗುವುದಿಲ್ಲ. ಶಿವ
ತಂದೆಯೇ ಇದನ್ನು ನಮಗೆ ಹೇಳಿ, ನಮ್ಮ ಮೇಲೆ ಇಂತಹ ಆಪತ್ತು ಬಂದಿದೆ, ಇದಕ್ಕೆ ನೀವು ಸಲಹೆಯನ್ನು ನೀಡಿ
ಎಂದು ತಂದೆಯನ್ನು ಕೇಳುತ್ತಾರೆ. ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ತಂದೆಯು ಬಂದಿದ್ದಾರೆ.
ತಂದೆಯು ತಿಳಿಸುತ್ತಾರೆ - ನೀವು ಮಕ್ಕಳಿಗೆ ಎಲ್ಲದರ ಜ್ಞಾನವು ಸಿಗುತ್ತಿದೆ. ಪ್ರಯತ್ನಪಟ್ಟು
ಒಟ್ಟಾಗಿ ಸೇರಿ ಸಲಹೆಯನ್ನು ತೆಗೆಯಿರಿ. ನೀವು ಮಕ್ಕಳೀಗ ವಿಹಂಗ ಮಾರ್ಗದ ಸೇವೆಯ ತಮಾಷೆಯನ್ನು
ತೋರಿಸಬೇಕು. ಇರುವೆ ಸಮಾನದ ಮಾರ್ಗವಂತೂ ನಡೆಯುತ್ತಲೇ ಬಂದಿದೆ, ಆದರೆ ಈಗ ಅನೇಕರ ಕಲ್ಯಾಣ
ಮಾಡುವಂತಹ ತಮಾಷೆಯನ್ನು ತೋರಿಸಿ. ತಂದೆಯು ಇದನ್ನು ಕಲ್ಪದ ಹಿಂದೆಯೂ ತಿಳಿಸಿದ್ದರು, ಈಗಲೂ
ತಿಳಿಸುತ್ತಿದ್ದಾರೆ. ಅನೇಕರ ಬುದ್ಧಿಯು ಒಂದಲ್ಲ ಒಂದುಕಡೆ ಸಿಕ್ಕಿ ಹಾಕಿಕೊಂಡಿದೆ, ಉಮ್ಮಂಗವೇ
ಇಲ್ಲ. ತಕ್ಷಣ ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ದೇಹದ ಅಭಿಮಾನವೇ ಸತ್ಯ ನಾಶ ಮಾಡುತ್ತದೆ. ಈಗ
ತಂದೆಯು ಸತ್ಯ ಶ್ರೇಷ್ಠರನ್ನಾಗಿ ಮಾಡುವುದಕ್ಕೆ ಎಷ್ಟು ಸಹಜ ಮಾತುಗಳನ್ನು ತಿಳಿಸುತ್ತಿದ್ದಾರೆ!
ತಂದೆಯನ್ನು ನೆನಪು ಮಾಡಿದಾಗಲೇ ಶಕ್ತಿಯು ಬರುತ್ತದೆ, ಇಲ್ಲವೆಂದರೆ ಸಿಗುವುದಿಲ್ಲ. ಭಲೆ
ಸೇವಾಕೇಂದ್ರವನ್ನು ಸಂಭಾಲನೆ ಮಾಡುತ್ತಾರೆ ಆದರೆ ನಶೆಯೇ ಇರುವುದಿಲ್ಲ ಏಕೆಂದರೆ
ದೇಹಾಭಿಮಾನದಲ್ಲಿರುತ್ತಾರೆ. ಆತ್ಮಾಭಿಮಾನಿಯಾದಾಗ ನಶೆಯೇರುತ್ತದೆ. ನಾವು ಯಾರಿಗೆ ಮಕ್ಕಳಾಗಿದ್ದೇವೆ,
ತಂದೆಯು ತಿಳಿಸುತ್ತಾರೆ - ಎಷ್ಟು ನೀವು ಆತ್ಮಾಭಿಮಾನಿಯಾಗುತ್ತೀರೋ ಅಷ್ಟು ನಿಮ್ಮಲ್ಲಿ ಬಲ
ಬರುತ್ತದೆ. ಅರ್ಧಕಲ್ಪ ದೇಹಾಭಿಮಾನದ ನಶೆಯಲ್ಲಿದ್ದಿರಿ, ಈಗ ಆತ್ಮಾಭಿಮಾನಿಯಾಗುವುದರಲ್ಲಿ ಶ್ರಮ
ಪಡಬೇಕಾಗಿದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ, ನಾವೂ ಜ್ಞಾನವನ್ನು ಪಡೆದಿದ್ದೇವೆ, ಅನೇಕರಿಗೆ
ತಿಳಿಸುತ್ತೇವೆ ಎಂದಲ್ಲ. ಆದರೆ ನೆನಪಿನ ಹರಿತವೂ ಇರಬೇಕು. ಜ್ಞಾನ ಕತ್ತಿಯಾಗಿದೆ, ನೆನಪು
ಯಾತ್ರೆಯಾಗಿದೆ. ಎರಡೂ ಬೇರೆ-ಬೇರೆಯಾಗಿದೆ. ಜ್ಞಾನದಲ್ಲಿ ನೆನಪಿನ ಯಾತ್ರೆಯ ಹರಿತ ಬೇಕು. ಇದು
ಇಲ್ಲವೆಂದರೆ ಕಟ್ಟಿಗೆಯ ಕತ್ತಿಯಾಗಿ ಬಿಡುತ್ತದೆ. ಸಿಖ್ಖರು ಕತ್ತಿಗೆ ಎಷ್ಟೊಂದು ಮಾನ್ಯತೆಯನ್ನು
ಕೊಡುತ್ತಾರೆ! ಅದು ಯುದ್ಧ ಮಾಡುವ ಹಿಂಸೆಯ ಕತ್ತಿಯಾಗಿದ್ದು ವಾಸ್ತವದಲ್ಲಿ ಗುರುಗಳು ಯುದ್ಧ
ಮಾಡುವುದಿಲ್ಲ. ಅವರು ಅಹಿಂಸಾ ಪ್ರವೃತ್ತಿಯುಳ್ಳವರಾಗಬೇಕಲ್ಲವೆ. ಯುದ್ಧದಿಂದ ಸದ್ಗತಿಯಾಗುತ್ತದೆಯೇ?
ನಿಮ್ಮದು ಇಲ್ಲಿ ಯೋಗದ ಮಾತಾಗಿದೆ. ನೆನಪಿನ ಬಲವಿಲ್ಲದೆ ಜ್ಞಾನದ ಕತ್ತಿಯು ಕೆಲಸ ಮಾಡುವುದಿಲ್ಲ.
ಅಪವಿತ್ರ ದೃಷ್ಟಿಯು ಬಹಳ ನಷ್ಟವನ್ನುಂಟು ಮಾಡುತ್ತದೆ. ಆತ್ಮವು ಕಿವಿಯ ಮೂಲಕ ಕೇಳುತ್ತದೆ. ತಂದೆಯು
ತಿಳಿಸುತ್ತಾರೆ - ನೀವು ನೆನಪಿನಲ್ಲಿ ಮಸ್ತರಾಗಿದ್ದಾಗ ಸರ್ವೀಸ್ ವೃದ್ಧಿಯಾಗುತ್ತದೆ. ಕೆಲವೊಮ್ಮೆ
ನಮ್ಮ ಸಂಬಂಧಿಗಳು ಕೇಳುವುದೇ ಇಲ್ಲವೆಂದು ತಂದೆಗೆ ಹೇಳುತ್ತಾರೆ ಆಗ ತಂದೆಯು ತಿಳಿಸುತ್ತಾರೆ -
ನೆನಪಿನ ಯಾತ್ರೆಯಲ್ಲಿ ಕಚ್ಚಾ ಇದ್ದೀರಿ ಆದ್ದರಿಂದ ಜ್ಞಾನದ ಕತ್ತಿ ಕೆಲಸ ಮಾಡುತ್ತಿಲ್ಲ.
ನೆನಪಿನಲ್ಲಿರುವ ಶ್ರಮಪಡಿ. ಇದು ಗುಪ್ತ ಶ್ರಮವಾಗಿದೆ. ಮುರುಳಿ ನುಡಿಸುವುದು ಪ್ರತ್ಯಕ್ಷವಾದ ಕೆಲಸ,
ನೆನಪು ಗುಪ್ತವಾಗಿದೆ ಯಾವುದರಿಂದ ಶಕ್ತಿಯು ಸಿಗುತ್ತದೆ. ಜ್ಞಾನದಿಂದ ಶಕ್ತಿಯು ಸಿಗುವುದಿಲ್ಲ,
ನೆನಪಿನ ಬಲದಿಂದಲೇ ಪತಿತರಿಂದ ಪಾವನರಾಗುತ್ತೀರಿ. ಸಂಪಾದನೆಗೆ ಪುರುಷಾರ್ಥ ಮಾಡಬೇಕು.
ಮಕ್ಕಳಲ್ಲಿ ಯಾವಾಗ ನೆನಪು
ಏಕರಸವಾಗಿರುತ್ತದೆ, ಸ್ಥಿತಿಯು ಚೆನ್ನಾಗಿರುತ್ತದೆಯೋ ಆಗ ಬಹಳ ಖುಷಿಯಿರುತ್ತದೆ ಮತ್ತು ಯಾವಾಗ
ನೆನಪು ಚೆನ್ನಾಗಿರುವುದಿಲ್ಲ, ಯಾವುದೋ ಮಾತಿನಲ್ಲಿ ಗುಟುಕರಿಸುತ್ತಿರುತ್ತಾರೆ, ಆಗ ಖುಷಿಯನ್ನು
ಕಳೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ನೆನಪಿಗೆ ಬರುವುದಿಲ್ಲವೆ? ಇಲ್ಲಿ ನೀವು
ಮನೆಯಲ್ಲಿದ್ದರೂ ಎಲ್ಲಾ ಮಾಡುತ್ತಿದ್ದರೂ, ಶಿಕ್ಷಕರನ್ನು ನೆನಪು ಮಾಡಬೇಕು. ಈ ಶಿಕ್ಷಕನಿಂದ ಬಹಳ
ಶ್ರೇಷ್ಠ ಪದವಿ ಸಿಗುತ್ತದೆ. ಗೃಹಸ್ಥ ವ್ಯವಹಾರದಲ್ಲಿಯೂ ಇರಿ, ಶಿಕ್ಷಕರ ನೆನಪು ಬಂದಾಗ ತಂದೆ ಹಾಗೂ
ಗುರುವಿನ ನೆನಪೂ ಬರುತ್ತದೆ. ಎಷ್ಟು ಪ್ರಕಾರವಾಗಿ ತಂದೆಯು ತಿಳಿಸುತ್ತಿರುತ್ತಾರೆ! ಆದರೆ ಮನೆಯಲ್ಲಿ
ಹಣ-ಸಂಪತ್ತು, ಮಕ್ಕಳು-ಮೊಮ್ಮಕ್ಕಳು ಎಲ್ಲವನ್ನೂ ನೋಡುತ್ತಾ ಮರೆತು ಬಿಡುತ್ತಾರೆ. ತಂದೆಯು ಬಹಳ
ತಿಳಿಸುತ್ತಿರುತ್ತಾರೆ - ನೀವು ಆತ್ಮಗಳಿಗೆ ಸರ್ವೀಸ್ ಮಾಡಿ. ತಂದೆಯ ನೆನಪೇ ಶ್ರೇಷ್ಠವಾದ
ಸೇವೆಯಾಗಿದೆ. ಮನಸ್ಸಾ-ವಾಚಾ-ಕರ್ಮಣಾ ಬುದ್ಧಿಯಲ್ಲಿ ತಂದೆಯ ನೆನಪಿರಲಿ. ಬಾಯಿಂದಲೂ ಜ್ಞಾನದ ಮಾತೇ
ಹೇಳಿ. ಯಾರಿಗೂ ದುಃಖ ಕೊಡಬೇಡಿ. ಯಾವುದೇ ಅಕರ್ತವ್ಯವನ್ನು ಮಾಡಬೇಡಿ. ಮೊದಲ ಮಾತು - ತಂದೆಯನ್ನು
ತಿಳಿಯದಿದ್ದರೆ ಏನನ್ನೂ ಅರ್ಥೈಸಿಕೊಳ್ಳಲಾಗುವುದಿಲ್ಲ. ಮೊದಲು ತಂದೆಯನ್ನು ಪಕ್ಕಾ ಮಾಡಿಕೊಳ್ಳಿ.
ಅಲ್ಲಿಯ ತನಕ ಮುಂದೆ ಹೋಗಬಾರದು. ಶಿವ ತಂದೆಯು ರಾಜಯೋಗವನ್ನು ಕಲಿಸಿ ವಿಶ್ವದ ಮಾಲೀಕರನ್ನಾಗಿ
ಮಾಡುತ್ತಿದ್ದಾರೆ. ಈ ಛೀ ಛೀ ಪ್ರಪಂಚದಲ್ಲಿ ಮಾಯೆಯ ಆಡಂಬರ ಬಹಳ ಇದೆ. ಎಷ್ಟು ಫ್ಯಾಷನ್ ಇದೆ! ಕೊಳಕು
ಪ್ರಪಂಚದೊಂದಿಗೆ ನಿಮಗೆ ತಿರಸ್ಕಾರ ಬರಬೇಕು. ಒಬ್ಬ ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ
ವಿಕರ್ಮವು ವಿನಾಶವಾಗುತ್ತದೆ, ಪವಿತ್ರರಾಗುತ್ತೀರಿ. ಸಮಯವನ್ನು ವ್ಯರ್ಥ ಮಾಡಬಾರದು. ಚೆನ್ನಾಗಿ
ಧಾರಣೆ ಮಾಡಿ. ಮಾಯಾ ಶತ್ರು ಅನೇಕರ ಬುದ್ಧಿಯನ್ನು ಕೆಡಿಸುತ್ತದೆ. ಕಮ್ಯಾಂಡರ್ ತಪ್ಪು ಮಾಡಿದರೆ
ಅವರನ್ನು ಕೆಲಸದಿಂದ ನಿವೃತ್ತಿಗೊಳಿಸುತ್ತಾರೆ. ಸ್ವಯಂ ಕಮ್ಯಾಂಡರ್ಗೆ ನಾಚಿಕೆಯಾಗುತ್ತದೆ, ಮತ್ತೆ
ರಾಜಿನಾಮೆಯನ್ನು ಕೊಟ್ಟು ಬಿಡುತ್ತಾರೆ, ಇಲ್ಲಿಯೂ ಹಾಗೆಯೇ ಆಗುತ್ತದೆ. ಒಳ್ಳೊಳ್ಳೆಯ ಕಮ್ಯಾಂಡರರೂ
ಸಹ ಪದಚ್ಯುತರಾಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನೆನಪಿನ
ಗುಪ್ತ ಪರಿಶ್ರಮ ಪಡಬೇಕು. ನೆನಪಿನ ಮಸ್ತಿಯಲ್ಲಿ ಇರುವುದರಿಂದ ಸರ್ವೀಸ್ ಸ್ವತಃವಾಗಿ
ವೃದ್ಧಿಯಾಗುತ್ತದೆ. ಮನಸ್ಸಾ-ವಾಚಾ-ಕರ್ಮಣಾ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ.
2. ಬಾಯಿಂದ ಜ್ಞಾನದ
ಮಾತುಗಳನ್ನೇ ತಿಳಿಸಿ, ಯಾರಿಗೂ ದುಃಖ ಕೊಡಬಾರದು. ಯಾವುದೇ ಅಕರ್ತವ್ಯ ಮಾಡಬೇಡಿ.
ಆತ್ಮಾಭಿಮಾನಿಯಾಗುವ ಪರಿಶ್ರಮ ಪಡಬೇಕು.
ವರದಾನ:
ಕಬ್ಬಿಣ ಸಮಾನ
ಆತ್ಮವನ್ನು ಪಾರಸವನ್ನಾಗಿ ಮಾಡುವಂತಹ ಮಾಸ್ಟರ್ ಪಾರಸನಾಥ್ ಭವ.
ತಾವೆಲ್ಲರೂ ಪಾರಸನಾಥ
ತಂದೆಯ ಮಕ್ಕಳು ಮಾಸ್ಟರ್ ಪಾರಸನಾಥರಾಗಿರುವಿರಿ - ಆದ್ದರಿಂದ ಯಾವುದೇ ರೀತಿಯ ಲೋಹದಂತಹ
ಆತ್ಮವಾಗಿರಲಿ ಆದರೆ ನಿಮ್ಮ ಸಂಗದಿಂದ ಲೋಹವೂ ಸಹ ಪಾರಸವಾಗಿ ಬಿಡಬೇಕು. ಇದು ಲೋಹವಾಗಿದೆ ಎಂದು ಎಂದೂ
ಯೋಚಿಸಬೇಡಿ. ಪಾರಸದ ಕೆಲಸವಾಗಿದೆ ಲೋಹವನ್ನು ಪಾರಸ ಮಾಡುವುದು. ಇದೇ ಲಕ್ಷ್ಯ ಮತ್ತು ಲಕ್ಷಣ ಸದಾ
ಸ್ಮತಿಯಲ್ಲಿಟ್ಟು ಪ್ರತಿ ಸಂಕಲ್ಪ, ಪ್ರತಿ ಕರ್ಮ ಮಾಡಬೇಕು, ಆಗ ಅನುಭವವಾಗುವುದು ನಾನು ಆತ್ಮನ
ಬೆಳಕಿನ ಕಿರಣಗಳು ಅನೇಕ ಆತ್ಮಗಳಿಗೆ ಚಿನ್ನದಂತೆ ಮಾಡುವ ಶಕ್ತಿಯನ್ನು ಕೊಡುತ್ತಿದೆ.
ಸ್ಲೋಗನ್:
ಪ್ರತಿ ಕಾರ್ಯ
ಸಾಹಸದಿಂದ ಮಾಡಿ ಆಗ ಸರ್ವರಿಂದ ಸಮ್ಮಾನ ಪ್ರಾಪ್ತಿಯಾಗುವುದು.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಪರಮಾತ್ಮನ ಪ್ರೀತಿ ಈ
ಶ್ರೇಷ್ಠ ಬ್ರಾಹ್ಮಣ ಜನ್ಮದ ಆಧಾರವಾಗಿದೆ. ಹೇಳಲಾಗುತ್ತದೆ ಎಲ್ಲಿ ಪ್ರೀತಿಯಿದೆ ಅಲ್ಲಿ ಜಗತ್ತಿದೆ,
ಜೀವನವಿದೆ. ಪ್ರೀತಿಯಿಲ್ಲವೆಂದರೆ ಜೀವನವಿಲ್ಲ, ಜಗತ್ತಿಲ್ಲ. ಪ್ರೀತಿ ಸಿಕ್ಕಿದರೆ ಅರ್ಥಾತ್ ಜಗತ್ತೇ
ಸಿಕ್ಕಿದೆ. ಪ್ರಪಂಚವು ಒಂದು ಹನಿಯ ಬಾಯಾರಿಕೆಯಲ್ಲಿದ್ದಾರೆ ಮತ್ತು ನೀವು ಮಕ್ಕಳದ್ದು ಈ ಪ್ರಭು
ಪ್ರೀತಿಯೇ ಆಸ್ತಿಯಾಗಿದೆ. ಇದೇ ಪ್ರಭು ಪ್ರೀತಿಯಿಂದ ಬೆಳೆಯುತ್ತೀರಿ ಅರ್ಥಾತ್ ಬ್ರಾಹ್ಮಣ
ಜೀವನದಲ್ಲಿ ಮುಂದುವರೆಯುತ್ತೀರಿ. ಸದಾ ಪ್ರೀತಿಯ ಸಾಗರದಲ್ಲಿ ಲವಲೀನರಾಗಿರಿ.