12.10.25    Avyakt Bapdada     Kannada Murli    17.03.2007     Om Shanti     Madhuban


ಶ್ರೇಷ್ಠ ವೃತ್ತಿಯಿಂದ ಶಕ್ತಿಶಾಲಿ ವೈಬ್ರೇಷನ್ ಮತ್ತು ವಾಯುಮಂಡಲವನ್ನು ಮಾಡುವಂತಹ ತೀವ್ರ ಪುರುಷಾರ್ಥ ಮಾಡಿ, ಆಶೀರ್ವಾದವನ್ನು ಕೊಡಿ ಮತ್ತು ಆಶೀರ್ವಾದವನ್ನು ತೆಗೆದುಕೊಳ್ಳಿ.


ಇಂದು ಪ್ರೀತಿ ಮತ್ತು ಶಕ್ತಿ ಸಾಗರ ಬಾಪ್ದಾದಾ ತನ್ನ ಸ್ನೇಹೀ, ಬಹಳ ಕಾಲದಿಂದ ಅಗಲಿ ಸಿಕ್ಕಿರುವಂತಹ ಮುದ್ದಾದ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ಎಲ್ಲಾ ಮಕ್ಕಳೂ ದೂರ ದೂರದಿಂದ ಸ್ನೇಹದ ಆಕರ್ಷಣೆಯಿಂದ ಮಿಲನ ಮಾಡಲು ತಲುಪಿದ್ದೀರಿ. ಭಲೆ ಸನ್ಮುಖದಲ್ಲಿ ಕುಳಿತಿರಬಹುದು, ದೇಶ-ವಿದೇಶಗಳಲ್ಲಿ ಕುಳಿತು ಸ್ನೇಹದ ಮಿಲನವನ್ನು ಮಾಡುತ್ತಿರಬಹುದು, ಬಾಪ್ದಾದಾ ನಾಲ್ಕಾರು ಕಡೆಯ ಸರ್ವ ಸ್ನೇಹಿ, ಸರ್ವ ಸಹಯೋಗಿ ಜೊತೆಗಾರ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದೇವೆ. ಬಾಪ್ದಾದಾ ನೋಡುತ್ತಿದ್ದೇವೆ, ಮೆಜಾರಿಟಿ ಮಕ್ಕಳಿಗೆ ಹೃದಯದಲ್ಲಿ ಒಂದೇ ಸಂಕಲ್ಪವಿದೆ - ಈಗ ಆದಷ್ಟು ಬೇಗನೆ ತಂದೆಯ ಪ್ರತ್ಯಕ್ಷತೆ ಮಾಡಿ ಬಿಡಬೇಕು. ತಂದೆಯೂ ತಿಳಿಸುತ್ತೇವೆ - ಎಲ್ಲಾ ಮಕ್ಕಳಲ್ಲಿ ಉತ್ಸಾಹ ಬಹಳ ಚೆನ್ನಾಗಿದೆ ಆದರೆ ಯಾವಾಗ ಮೊದಲು ತನ್ನನ್ನು ತಂದೆಯ ಸಮಾನ ಸಂಪನ್ನ, ಸಂಪೂರ್ಣರಾಗಿ ಪ್ರತ್ಯಕ್ಷ ಮಾಡುತ್ತೀರೋ ಆಗ ತಂದೆಯ ಪ್ರತ್ಯಕ್ಷತೆಯಾಗುತ್ತದೆ. ಯಾವಾಗ ಪ್ರತ್ಯಕ್ಷತೆಯಾಗುತ್ತದೆ? ಎಂದು ಮಕ್ಕಳು ತಂದೆಯನ್ನು ಕೇಳುತ್ತಾರೆ. ತಂದೆಯೂ ಸಹ ನೀವೇ ಹೇಳಿ, ನೀವು ಸ್ವಯಂನ್ನು ತಂದೆಯ ಸಮಾನ ಪ್ರತ್ಯಕ್ಷ ಮಾಡಿಕೊಂಡಿದ್ದೀರಾ? ಎಂದು ಕೇಳುತ್ತೇವೆ. ತಾವು ಸಂಪನ್ನರಾಗುವ ದಿನಾಂಕವನ್ನು ನಿಗಧಿ ಪಡಿಸಿದಿರಾ? ವಿದೇಶದವರು ಹೇಳುತ್ತಾರೆ, ಒಂದು ವರ್ಷಕ್ಕೆ ಮೊದಲೇ ದಿನಾಂಕವನ್ನು ನಿಗಧಿ ಪಡಿಸಿಕೊಂಡಿರುತ್ತಾರೆ. ಅಂದಾಗ ತಾವು ತಂದೆಯ ಸಮಾನರಾಗಲು ಪರಸ್ಪರ ಮೀಟಿಂಗ್ ಮಾಡಿ, ದಿನಾಂಕವನ್ನು ನಿಗಧಿ ಪಡಿಸಿಕೊಂಡಿದ್ದೀರಾ? ನಿಗಧಿ ಮಾಡಿದ್ದೀರಾ?

ಬಾಪ್ದಾದಾ ನೋಡುತ್ತೇವೆ - ಇತ್ತೀಚೆಗೆ ಪ್ರತಿಯೊಂದು ವರ್ಗದ ಮೀಟಿಂಗ್ ಬಹಳ ನಡೆಯುತ್ತಿದೆ. ಡಬಲ್ ವಿದೇಶಿಯರೂ ಸಹ ಮೀಟಿಂಗ್ ಮಾಡುತ್ತಿರುವುದನ್ನು ಬಾಪ್ದಾದಾ ಕೇಳಿದೆವು. ಬಹಳ ಚೆನ್ನಾಗಿದೆ. ಎಲ್ಲಾ ಮೀಟಿಂಗ್ನ ಸಮಾಚಾರಗಳು ತಲುಪಿ ಬಿಡುತ್ತವೆ, ಅಂದಾಗ ಬಾಪ್ದಾದಾ ಈ ದಿನಾಂಕವನ್ನು ಯಾವಾಗ ನಿಗಧಿ ಪಡಿಸಿಕೊಳ್ಳುತ್ತೀರಿ? ಎಂದು ಕೇಳುತ್ತೇವೆ. ಈ ದಿನಾಂಕವನ್ನು ಡ್ರಾಮಾ ನಿಗಧಿ ಪಡಿಸುತ್ತದೆಯೋ ಅಥವಾ ತಾವು ನಿಗಧಿ ಪಡಿಸುತ್ತೀರೋ? ಯಾರು ಮಾಡುತ್ತಾರೆ? ಲಕ್ಷ್ಯವನ್ನಂತೂ ತಾವೇ ಇಡಬೇಕಾಗುತ್ತದೆ. ಲಕ್ಷ್ಯವಂತೂ ಬಹಳ ಚೆನ್ನಾಗಿದೆ, ಬಹಳ ಉತ್ತಮವಾದದ್ದನ್ನೇ ಇಟ್ಟುಕೊಂಡಿದ್ದೀರಿ. ಈಗ ಎಂತಹ ಲಕ್ಷ್ಯವನ್ನಿಟ್ಟಿದ್ದೀರೋ ಅದರಂತೆಯೇ ಲಕ್ಷಣ, ಶ್ರೇಷ್ಠ ಲಕ್ಷ್ಯ ಶ್ರೇಷ್ಠ ಗುರಿಯ ಸಮಾನವಾಗಬೇಕಾಗಿದೆ. ಈಗ ಲಕ್ಷ್ಯ ಮತ್ತು ಲಕ್ಷಣದಲ್ಲಿ ಅಂತರವಿದೆ. ಯಾವಾಗ ಲಕ್ಷ್ಯ ಮತ್ತು ಲಕ್ಷಣ ಸಮಾನವಾಗುತ್ತದೆ ಆಗ ಲಕ್ಷ್ಯವು ಪ್ರತ್ಯಕ್ಷದಲ್ಲಿ ಕಂಡುಬರುತ್ತದೆ. ಎಲ್ಲಾ ಮಕ್ಕಳು ಯಾವಾಗ ಅಮೃತವೇಳೆ ಮಿಲನ ಮಾಡುತ್ತೀರಿ ಮತ್ತು ಸಂಕಲ್ಪ ಮಾಡುತ್ತೀರಿ, ಅದು ಬಹಳ ಚೆನ್ನಾಗಿ ಮಾಡುತ್ತೀರಿ. ಬಾಪ್ದಾದಾರವರು ನಾಲ್ಕೂ ಕಡೆಯ ಪ್ರತಿಯೊಬ್ಬ ಮಗುವಿನ ಆತ್ಮಿಕ ವಾರ್ತಾಲಾಪವನ್ನು ಕೇಳುತ್ತೇವೆ, ಬಹಳ ಸುಂದರ ಮಾತನ್ನು ಮಾತನಾಡುತ್ತಾರೆ, ಪುರುಷಾರ್ಥವನ್ನೂ ಚೆನ್ನಾಗಿ ಮಾಡುತ್ತಾರೆ. ಆದರೆ ಪುರುಷಾರ್ಥದಲ್ಲಿ ಒಂದು ಮಾತಿನ ತೀವ್ರತೆ ಬೇಕು. ಪುರುಷಾರ್ಥವಿದೆ ಆದರೆ ತೀವ್ರ ಪುರುಷಾರ್ಥವಿರಬೇಕು. ತೀವ್ರತೆಗಾಗಿ ಧೃಡತೆಯ ಅಡಿಷನ್ (ಸೇರ್ಪಡೆ) ಬೇಕು.

ಬಾಪ್ದಾದಾರವರು ಸಮಯ ಪ್ರಮಾಣ ಈಗ ಪ್ರತಿಯೊಬ್ಬ ಮಗುವಿನ ಪ್ರತಿ ಭಲೆ ನಂಬರ್ವಾರ್ ಇರಲಿ, ಬಾಪ್ದಾದಾರವರಿಗೆ ತಿಳಿದಿದೆ. ನಂಬರ್ವಾರ್ನಲ್ಲಿಯೂ ತೀವ್ರ ಪುರುಷಾರ್ಥವಿರಲಿ, ಇದರ ಅವಶ್ಯಕತೆಯಿದೆ. ಸಮಯ ಸಂಪನ್ನವಾಗುವುದರಲ್ಲಿ ತೀವ್ರತೆಯಿಂದ ಸಾಗುತ್ತಿದೆ, ಆದರೆ ಈಗ ಮಕ್ಕಳು ತಂದೆಯ ಸಮಾನ ಆಗಲೇಬೇಕು. ಇದೂ ಸಹ ನಿಶ್ಚಿತವಾಗಿದೆ. ಕೇವಲ ಇದರಲ್ಲಿ ತೀವ್ರತೆಯಿರಬೇಕು. ಪ್ರತಿಯೊಬ್ಬರೂ ತನ್ನನ್ನು ಪರಿಶೀಲನೆ ಮಾಡಿಕೊಳ್ಳಿ, ನಾನು ಸದಾ ತೀವ್ರ ಪುರುಷಾರ್ಥಿ ಆಗಿದ್ದೇನೆಯೇ? ಏಕೆಂದರೆ ಪುರುಷಾರ್ಥದಲ್ಲಿ ಪೇಪರ್ (ಪರಿಸ್ಥಿತಿ) ಬಹಳಷ್ಟು ಬರುತ್ತವೆ, ಬರಲೇಬೇಕು. ಆದರೆ ತೀವ್ರ ಪುರುಷಾರ್ಥಕ್ಕಾಗಿ ಪೇಪರ್ನಲ್ಲಿ ಪಾಸ್ ಆಗುವುದು ಅಷ್ಟೇ ನಿಶ್ಚಿತವಾಗಿದೆ. ತೀವ್ರ ಪುರುಷಾರ್ಥದ ಪೇಪರ್ನಲ್ಲಿ ಪಾಸ್ ಆಗುವುದು ನಿಶ್ಚಿತವಾಗಿದೆ. ಆಗಬೇಕು ಎಂದಲ್ಲ, ಆಗಿಯೇ ಬಿಟ್ಟಿದೆ, ಇದು ನಿಶ್ಚಿತವಾಗಿದೆ. ಸೇವೆಯನ್ನೂ ಸಹ ಎಲ್ಲರೂ ಚೆನ್ನಾಗಿ ಉತ್ಸಾಹದಿಂದ ಮಾಡುತ್ತಿದ್ದೀರಿ ಆದರೆ ಬಾಪ್ದಾದಾ ಮೊದಲೂ ತಿಳಿಸಿದ್ದೆವು - ವರ್ತಮಾನ ಸಮಯ ಪ್ರಮಾಣ ಒಂದೇ ಸಮಯದಲ್ಲಿ ಮನಸ್ಸಾ-ವಾಚಾ ಮತ್ತು ಕರ್ಮಣಾ ಅರ್ಥಾತ್ ಚಲನೆ ಮತ್ತು ಚಹರೆಯ ಮೂಲಕ ಮೂರೂ ಪ್ರಕಾರದ ಸೇವೆಯನ್ನು ಮಾಡಿ. ಮನಸ್ಸಿನ ಮೂಲಕ ಅನುಭವ ಮಾಡಿಸುವುದು, ವಾಣಿಯ ಮೂಲಕ ಜ್ಞಾನದ ಖಜಾನೆಯ ಪರಿಚಯ ಕೊಡುವುದು ಮತ್ತು ಚಲನೆ ಮತ್ತು ಚಹರೆಯ ಮೂಲಕ ಸಂಪೂರ್ಣ ಯೋಗಿ ಜೀವನದ ಪ್ರತ್ಯಕ್ಷ ರೂಪದಲ್ಲಿ ಅನುಭೂತಿ ಮಾಡಿಸುವುದು. ಮೂರೂ ಸೇವೆಯನ್ನು ಒಂದೇ ಸಮಯದಲ್ಲಿ ಮಾಡಬೇಕಾಗಿದೆ. ಬೇರೆ-ಬೇರೆ ಮಾಡುವುದಲ್ಲ, ಸಮಯ ಕಡಿಮೆಯಿದೆ, ಸೇವೆಯು ಈಗಲೂ ಬಹಳಷ್ಟು ಮಾಡಬೇಕಾಗಿದೆ.

ಬಾಪ್ದಾದಾ ನೋಡಿದ್ದೇವೆ - ಎಲ್ಲದಕ್ಕಿಂತ ಸಹಜ ಸೇವೆಯ ಸಾಧನ ವೃತ್ತಿಯ ಮೂಲಕ ವೈಬ್ರೇಷನ್ ಮಾಡುವುದು, ವೈಬ್ರೇಷನ್ನಿನ ಮೂಲಕ ವಾಯುಮಂಡಲವನ್ನು ಮಾಡುವುದು ಏಕೆಂದರೆ ವೃತ್ತಿಯು ಎಲ್ಲದಕ್ಕಿಂತ ಬಹಳ ತೀವ್ರವಾದ ಸಾಧನವಾಗಿದೆ. ಹೇಗೆ ವಿಜ್ಞಾನದ ರಾಕೆಟ್ ವೇಗವಾಗಿ ಹೋಗುತ್ತದೆ, ಹಾಗೆಯೇ ತಮ್ಮ ಆತ್ಮಿಕ ಶುಭ ಭಾವನೆ – ಶುಭ ಕಾಮನೆಯ ವೃತ್ತಿ, ದೃಷ್ಟಿ ಮತ್ತು ಸೃಷ್ಟಿಯನ್ನು ಬದಲಾಯಿಸಿ ಬಿಡುತ್ತದೆ. ಒಂದೇ ಸ್ಥಾನದಲ್ಲಿ ಕುಳಿತಿದ್ದರೂ ವೃತ್ತಿಯ ಮೂಲಕ ಸೇವೆಯನ್ನು ಮಾಡಬಹುದು. ಕೇಳಿರುವಂತಹ ಮಾತುಗಳನ್ನು ಮರೆತು ಹೋಗಬಹುದು ಆದರೆ ವಾಯುಮಂಡದಲ್ಲಿ ಅನುಭವವೇನಿದೆ ಅದು ಮರೆತು ಹೋಗಲು ಸಾಧ್ಯವಿಲ್ಲ. ಹೇಗೆ ಮಧುಬನದಲ್ಲಿ ಅನುಭವವನ್ನು ಮಾಡುತ್ತಾರೆ – ಬ್ರಹ್ಮಾ ತಂದೆಯ ಕರ್ಮ ಭೂಮಿ, ಯೋಗ ಭೂಮಿ, ಚಾರಿತ್ರ್ಯ ಭೂಮಿಯ ವಾಯುಮಂಡಲ ಇದುವರೆವಿಗೂ ಸಹ ವಾಯುಮಂಡಲದ ಅನುಭವ ಮಾಡುತ್ತಾರೆ. ಅದು ಮರೆತು ಹೋಗುವುದಿಲ್ಲ, ವಾಯುಮಂಡಲದ ಅನುಭವ ಹೃದಯದಲ್ಲಿ ಮುದ್ರಿತವಾಗಿ ಬಿಡುತ್ತದೆ ಅಂದಮೇಲೆ ದೊಡ್ಡ-ದೊಡ್ಡ ವಾಚಾದ ಮೂಲಕ ಕಾರ್ಯಕ್ರಮಗಳನ್ನು ಮಾಡುತ್ತೀರಿ ಆದರೆ ಪ್ರತಿಯೊಬ್ಬರು ತನ್ನ ಶ್ರೇಷ್ಠ ಆತ್ಮಿಕ ವೃತ್ತಿಯಿಂದ, ವೈಬ್ರೇಷನ್ನಿಂದ ವಾಯುಮಂಡಲವನ್ನು ಮಾಡಬೇಕು. ಆದರೆ ವೃತ್ತಿ ಆತ್ಮೀಯವಾಗಿ ಮತ್ತು ಶಕ್ತಿಶಾಲಿಯಾಗಿ ಯಾವಾಗ ಆಗುತ್ತದೆಯೆಂದರೆ ಯಾವಾಗ ತಮ್ಮ ಹೃದಯದಲ್ಲಿ, ಮನಸ್ಸಿನಲ್ಲಿ ಯಾವುದೇ ಮಾತಿನ ಉಲ್ಟಾ ವೃತ್ತಿಯ ವೈಬ್ರೇಷನ್ ಇರುವುದಿಲ್ಲ. ತನ್ನ ಮನಸ್ಸಿನ ವೃತ್ತಿ ಸದಾ ಸ್ವಚ್ಛವಾಗಿರಲಿ ಏಕೆಂದರೆ ಯಾವುದೇ ಆತ್ಮನ ಪ್ರತಿ ಒಂದುವೇಳೆ ಯಾವುದೇ ವ್ಯರ್ಥ ವೃತ್ತಿ ಅಥವಾ ಜ್ಞಾನದ ಲೆಕ್ಕದಿಂದ ವ್ಯರ್ಥ ವೃತ್ತಿಯಿದ್ದರೆ ವ್ಯರ್ಥ ಅರ್ಥಾತ್ ಕೊಳಕು, ಒಂದುವೇಳೆ ಮನಸ್ಸಿನಲ್ಲಿ ಕೊಳಕಿದೆಯೆಂದರೆ ಶುಭ ವೃತ್ತಿಯಿಂದ ಸೇವೆಯನ್ನು ಮಾಡಲು ಆಗುವುದಿಲ್ಲ. ಅಂದಾಗ ಮೊದಲು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿ - ನನ್ನ ಮನಸ್ಸಿನ ವೃತ್ತಿ ಶುಭ ಆತ್ಮೀಯತೆಯಿಂದ ಇದೆಯೇ? ವ್ಯರ್ಥ ವೃತ್ತಿಯನ್ನೂ ಸಹ ತಮ್ಮ ಶುಭ ಭಾವನೆ – ಶುಭ ಕಾಮನೆಯಿಂದ ವ್ಯರ್ಥವನ್ನೂ ಸಹ ಸಮರ್ಥತೆಯಲ್ಲಿ ಪರಿವರ್ತನೆ ಮಾಡಿಕೊಳ್ಳಬಹುದು ಏಕೆಂದರೆ ವ್ಯರ್ಥದಿಂದ ತನ್ನ ಮನಸ್ಸಿನಲ್ಲಿಯೇ ಬೇಸರವಾಗುತ್ತದೆಯಲ್ಲವೇ! ವ್ಯರ್ಥ ಸಂಕಲ್ಪಗಳು ನಡೆಯುತ್ತದೆಯಲ್ಲವೇ! ಅಂದಾಗ ಮೊದಲು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿ - ನನ್ನ ಮನಸ್ಸಿನಲ್ಲಿ ಯಾವುದೇ ಏರುಪೇರು ಇಲ್ಲವೆ? ನಂಬರ್ವಾರಂತೂ ಇದ್ದೀರಿ, ಒಳ್ಳೆಯವರೂ ಇದ್ದೀರಿ, ಜೊತೆಯಲ್ಲಿ ಕಿರಿ ಕಿರಿ ಮಾಡುವವರೂ ಇದ್ದಾರೆ ಆದರೆ ಇವರು ಹೀಗಿದ್ದಾರೆ, ಇದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಯಾವುದು ತಪ್ಪಿದೆ, ಅದನ್ನು ತಪ್ಪೆಂದು ತಿಳಿಯುವುದು, ಯಾವುದು ಸರಿಯಿದೆ ಅದನ್ನು ಸರಿಯೆಂದು ತಿಳಿಯುವುದು ಸರಿ. ಅದನ್ನು ತನ್ನ ಹೃದಯದಲ್ಲಿ ಇಟ್ಟುಕೊಳ್ಳಬಾರದು. ತಿಳಿದುಕೊಳ್ಳುವುದು ಬೇರೆ ಮಾತಾಗಿದೆ, ಜ್ಞಾನಪೂರ್ಣರಾಗುವುದು ಒಳ್ಳೆಯದು - ತಪ್ಪನ್ನು ತಪ್ಪೆಂದು ಹೇಳುತ್ತೀರಲ್ಲವೆ! ಕೆಲವು ಮಕ್ಕಳು ಹೇಳುತ್ತಾರೆ - ಇವರು ಹೇಗಿದ್ದಾರೆ ಎಂಬುದು ನಿಮಗೆ ತಿಳಿದೇ ಇಲ್ಲ! ನೀವು ನೋಡಿದರೆ ಗೊತ್ತಾಗುತ್ತದೆ. ತಂದೆಯು ಇದನ್ನು ಒಪ್ಪಿಕೊಳ್ಳುತ್ತೇವೆ, ನೀವು ಹೇಳುವ ಮೊದಲೇ ಇವರು ಹೀಗಿದ್ದಾರೆಂದು ಒಪ್ಪುತ್ತೇವೆ. ಆದರೆ ಇಂತಹ ಮಾತುಗಳನ್ನು ತಮ್ಮ ಹೃದಯದಲ್ಲಿ, ವೃತ್ತಿಯಲ್ಲಿ ಇಟ್ಟುಕೊಳ್ಳುವುದರಿಂದ ಸ್ವಯಂ ಸಹ ಬೇಸರವಾಗಿ ಬಿಡುತ್ತದೆ. ಮತ್ತು ಕೆಟ್ಟವಸ್ತು ಒಂದುವೇಳೆ ಮನಸ್ಸಿನಲ್ಲಿದೆ, ಹೃದಯದಲ್ಲಿದೆಯೆಂದರೆ ಎಲ್ಲಿ ಕೆಟ್ಟ ವಸ್ತು ಇದೆ, ವ್ಯರ್ಥ ಸಂಕಲ್ಪಗಳಿದೆ ಅವರು ವಿಶ್ವ ಕಲ್ಯಾಣಕಾರಿಗಳಾಗಲು ಹೇಗೆ ಸಾಧ್ಯ? ತಮ್ಮೆಲ್ಲರ ಕರ್ತವ್ಯವೇನಾಗಿದೆ? ನಾವು ಲಂಡನ್ ಕಲ್ಯಾಣಕಾರಿಗಳು, ದೆಹಲಿಯ ಕಲ್ಯಾಣಕಾರಿಗಳು, ಯು.ಪಿ.,ಯ ಕಲ್ಯಾಣಕಾರಿಗಳೆಂದು ಯಾರಾದರೂ ಹೇಳುತ್ತೀರಾ? ಅಥವಾ ಎಲ್ಲಿ ಇರುತ್ತೀರೋ, ದೇಶದಲ್ಲಿಲ್ಲವೆಂದರೆ ಸೇವಾಕೇಂದ್ರದ ಕಲ್ಯಾಣಕಾರಿ, ಎಂದು ಎಲ್ಲರೂ ಇದನ್ನೇ ಹೇಳುತ್ತೀರಲ್ಲವೆ. ನೀವೆಲ್ಲರೂ ವಿಶ್ವ ಕಲ್ಯಾಣಕಾರಿ ಎಂದು ತಮ್ಮ ಕರ್ತವ್ಯವನ್ನು ಹೇಳುತ್ತೀರಲ್ಲವೆ. ನೀವೆಲ್ಲರೂ ಯಾರಾಗಿದ್ದೀರಿ? ವಿಶ್ವ ಕಲ್ಯಾಣಕಾರಿಗಳಲ್ಲವೆ? ಆಗಿದ್ದೀರೆಂದರೆ ಕೈಯನ್ನೆತ್ತಿ. ವಿಶ್ವ ಕಲ್ಯಾಣಕಾರಿ! ವಿಶ್ವ ಕಲ್ಯಾಣಕಾರಿ. ಒಳ್ಳೆಯದು - ಅಂದಮೇಲೆ ಮನಸ್ಸಿನಲ್ಲಿ ಯಾವುದೇ ಕೆಟ್ಟದ್ದಿಲ್ಲವೆ. ತಿಳಿದುಕೊಳ್ಳುವುದು ಬೇರೆ ಮಾತಾಗಿದೆ, ಇದು ಸರಿ, ಇದು ತಪ್ಪೆಂದು ತಿಳಿದುಕೊಳ್ಳಿ ಆದರೆ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಮನಸ್ಸಿನಲ್ಲಿ ವೃತ್ತಿಯನ್ನಿಡುವುದರಿಂದ ದೃಷ್ಟಿ ಮತ್ತು ಸೃಷ್ಟಿಯೂ ಸಹ ಪರಿವರ್ತನೆಯಾಗಿ ಬಿಡುತ್ತದೆ.

ಬಾಪ್ದಾದಾರವರು ಹೋಮ್ವರ್ಕ್ನ್ನು ಕೊಟ್ಟಿದ್ದೆವು - ಏನು ಕೊಟ್ಟಿದ್ದೆವು? ಎಲ್ಲದಕ್ಕಿಂತ ಸಹಜ ಪುರುಷಾರ್ಥವಾಗಿದೆ - ಎಲ್ಲರೂ ಮಾಡಬಹುದು, ಮಾತೆಯರೂ ಮಾಡಬಹುದು, ವೃದ್ಧರೂ ಮಾಡಬಹುದು, ಯುವಕರೂ ಮಾಡಬಹುದು, ಮಕ್ಕಳೂ ಮಾಡಬಹುದು, ಅದು ಇದೇ ವಿಧಿಯಾಗಿದೆ - ಕೇವಲ ಒಂದು ಕೆಲಸ ಮಾಡಿ - ಯಾರೇ ಸಂಪರ್ಕದಲ್ಲಿ ಬರಲಿ - "ಆಶೀರ್ವಾದ ಕೊಡಿ ಮತ್ತು ಆಶೀರ್ವಾದವನ್ನು ತೆಗೆದುಕೊಳ್ಳಿ" ಭಲೆ ಅವರು ಶಾಪವನ್ನು ಕೊಡುತ್ತಾರೆ ಆದರೆ ತಾವು ಯಾವ ಕೋರ್ಸ್ ಕೊಡುತ್ತೀರಿ? ವ್ಯರ್ಥವನ್ನು ಸಮರ್ಥದಲ್ಲಿ (ನೆಗೇಟಿವ್ನ್ನು ಪಾಜಿಟೀವ್ನಲ್ಲಿ) ಬದಲಾಯಿಸಿಕೊಳ್ಳಲು ಹೇಳುತ್ತೀರಿ ಅಂದಮೇಲೆ ಸ್ವಯಂಗೂ ಆ ಸಮಯದಲ್ಲಿ ಕೋರ್ಸ್ ಕೊಡಿಸಬೇಕಾಗಿದೆ. ತಮ್ಮ ಚಾಲೆಂಜ್ ಏನಾಗಿದೆ? ಪ್ರಕೃತಿಯನ್ನೂ ತಮೋಗುಣಿಯಿಂದ ಸತೋಗುಣಿ ಮಾಡಲೇಬೇಕಾಗಿದೆ. ಇದು ಚಾಲೆಂಜ್ ಆಗಿದೆಯಲ್ಲವೆ. ಅಲ್ಲವೇ? ತಾವೆಲ್ಲರೂ ಈ ಚಾಲೆಂಜ್ ಮಾಡಿದಿರಿ- ಪ್ರಕೃತಿಯನ್ನೂ ಸತೋಪ್ರಧಾನ ಮಾಡಬೇಕಾಗಿದೆ? ಮಾಡಲೇಬೇಕಾಗಿದೆಯಲ್ಲವೆ? ಕತ್ತನ್ನು ಅಲುಗಾಡಿಸಿ, ಕೈಯನ್ನು ಅಲುಗಾಡಿಸಿ. ನೋಡಿ, ಪರಸ್ಪರ ನೋಡಿ ಅಲುಗಾಡಿಸುವುದಲ್ಲ. ಹೃದಯದಿಂದ ಅಲುಗಾಡಿಸಿ ಏಕೆಂದರೆ ಈಗ ಸಮಯ ಪ್ರಮಾಣ ವೃತ್ತಿಯಿಂದ ವಾಯುಮಂಡಲವನ್ನು ಮಾಡುವ ತೀವ್ರ ಪುರುಷಾರ್ಥವಿದೆ. ಅಂದಮೇಲೆ ವೃತ್ತಿಯಲ್ಲಿ ಒಂದುವೇಳೆ ಸ್ವಲ್ಪ ಕೊಳಕಿದ್ದರೂ ವೃತ್ತಿಯಿಂದ ಹೇಗೆ ವಾಯುಮಂಡಲವನ್ನು ಮಾಡುತ್ತೀರಿ? ಪ್ರಕೃತಿಯವರೆಗೂ ತಮ್ಮ ವೈಬ್ರೇಷನ್ ಹೋಗುತ್ತದೆ, ವಾಣಿಯಿಂದಂತೂ ಹೋಗುವುದಿಲ್ಲ, ವೈಬ್ರೇಷನ್ ಹೋಗುತ್ತದೆ. ಮತ್ತು ವೃತ್ತಿಯಿಂದ ವೈಬ್ರೇಷನ್ ಆಗುತ್ತದೆ ಮತ್ತು ವೈಬ್ರೇಷನ್ನಿಂದ ವಾಯುಮಂಡಲವಾಗುತ್ತದೆ. ಮಧುಬನದಲ್ಲಿಯೂ ಸಹ ಎಲ್ಲರೂ ಒಂದೇ ರೀತಿಯಂತೂ ಇಲ್ಲ ಆದರೆ ಬ್ರಹ್ಮಾ ತಂದೆ ಮತ್ತು ಅನನ್ಯ ಮಕ್ಕಳ ವೃತ್ತಿಯ ಮೂಲಕ, ತೀವ್ರ ಪುರುಷಾರ್ಥದ ಮೂಲಕ ವಾಯುಮಂಡಲವಾಗುತ್ತದೆ.

ಇಂದು ತಮ್ಮ ದಾದಿ ನೆನಪಿಗೆ ಬರುತ್ತಿದ್ದಾರೆ, ದಾದಿಯವರ ಯಾವ ವಿಶೇಷತೆಯನ್ನು ನೋಡಿದಿರಿ? ಹೇಗೆ ನಿಯಂತ್ರಣ ಮಾಡಿದರು? ಎಂತಹವರೇ ಇರಬಹುದು, ಎಂದೂ ಅವರ ಕಡಿಮೆಗಳನ್ನು ದಾದಿಯವರು ಮನಸ್ಸಿನಲ್ಲಿ ಇಟ್ಟುಕೊಳ್ಳಲಿಲ್ಲ. ಎಲ್ಲರಿಗೂ ಉಮ್ಮಂಗ ತರಿಸಿದರು. ತಮ್ಮ ಜಗದಂಬಾ ತಾಯಿರವರು ವಾಯುಮಂಡಲವನ್ನು ಮಾಡಿದರು. ತಿಳಿದಿದ್ದರೂ ಸಹ ತಮ್ಮ ವೃತ್ತಿಯನ್ನು ಸದಾ ಶುಭವಾಗಿಯೇ ಇಟ್ಟರು, ಅವರ ವಾಯುಮಂಡಲದ ಅನುಭವವನ್ನು ತಾವೆಲ್ಲರೂ ಮಾಡುತ್ತಿದ್ದೀರಿ. ಭಲೆ ಫಾಲೋ ಫಾದರ್ ಆಗಿರಿ ಆದರೆ ಬಾಪ್ದಾದಾ ಯಾವಾಗಲೂ ಹೇಳುತ್ತಾರೆ - ಪ್ರತಿಯೊಬ್ಬರ ವಿಶೇಷತೆಯನ್ನು ತಿಳಿದು ಆ ವಿಶೇಷತೆಯನ್ನು ತಮ್ಮದನ್ನಾಗಿ ಮಾಡಿಕೊಳ್ಳಿ ಮತ್ತು ಪ್ರತಿಯೊಬ್ಬ ಮಗುವೂ ನೋಟ್ ಮಾಡಿಕೊಳ್ಳಿ, ಯಾರು ಬಾಪ್ದಾದಾರವರ ಮಗುವಾಗಿದ್ದಾರೆ ಆ ಒಬ್ಬೊಬ್ಬ ಮಗುವಿನಲ್ಲಿ, ಭಲೆ ಮೂರನೇ ನಂಬರಿನವರಾಗಿರಬಹುದು ಆದರೆ ಈ ಡ್ರಾಮಾದ ವಿಶೇಷತೆಯಾಗಿದೆ, ಬಾಪ್ದಾದಾರವರ ವರದಾನವಿದೆ, ಎಲ್ಲಾ ಮಕ್ಕಳಲ್ಲಿ ಭಲೆ 99 ಅವಗುಣಗಳಿರಬಹುದು ಆದರೆ ಅವಶ್ಯವಾಗಿ ಒಂದು ವಿಶೇಷತೆಯಿದೆ. ಆ ವಿಶೇಷತೆಯಿಂದ ನನ್ನಬಾಬಾ ಎಂದು ಹೇಳಲು ಅಧಿಕಾರಿಯಾಗಿದ್ದಾರೆ. ಪರವಶರಾಗಿದ್ದಾರೆ ಆದರೆ ತಂದೆಯೊಂದಿಗೆ ತುಂಡರಿಸಲಾರದ ಪ್ರೀತಿಯಿದೆ ಆದ್ದರಿಂದ ಬಾಪ್ದಾದಾ ಈಗ ಸಮಯದ ಸಮೀಪತೆಯನುಸಾರ ಯಾವುದೆಲ್ಲಾ ತಂದೆಯ ಸ್ಥಾನಗಳಿವೆ, ಭಲೆ ಹಳ್ಳಿಯಲ್ಲಿರಬಹುದು, ಭಲೆ ದೊಡ್ಡ ಜೋನ್ ಇರಬಹುದು, ಸೇವಾಕೇಂದ್ರವಿರಬಹುದು. ಆದರೆ ಪ್ರತಿಯೊಂದು ಸ್ಥಾನ ಮತ್ತು ಜೊತೆಗಾರರಲ್ಲಿ ಶ್ರೇಷ್ಠ ವೃತ್ತಿಯ ವಾಯುಮಂಡಲದ ಅವಶ್ಯಕತೆಯಿದೆ. ಕೇವಲ ಒಂದು ಅಕ್ಷರದ ನೆನಪಿಟ್ಟುಕೊಳ್ಳಿ - ಒಂದುವೇಳೆ ಯಾರೇ ಶಾಪ ಕೊಟ್ಟರೂ ತೆಗೆದುಕೊಳ್ಳುವವರು ಯಾರು? ಕೊಡುವವರು ತೆಗೆದುಕೊಳ್ಳುತ್ತಾರೆಯೋ, ಒಬ್ಬರಿರುತ್ತಾರೆಯೋ ಅಥವಾ ಇಬ್ಬರೋ? ಒಂದುವೇಳೆ ಯಾರಾದರೂ ತಮಗೆ ಕೆಟ್ಟ ವಸ್ತುವನ್ನು ಕೊಡುತ್ತಾರೆಂದರೆ ನೀವು ಏನು ಮಾಡುತ್ತೀರಿ? ತಮ್ಮ ಬಳಿಯೇ ಇಟ್ಟುಕೊಳ್ಳುತ್ತೀರಾ? ಇಲ್ಲವೇ ಹಿಂತಿರುಗಿ ಕೊಡುತ್ತೀರಾ ಅಥವಾ ಹೊರಗೆ ಹಾಕುತ್ತೀರೋ? ಹೊರಗೆ ಹಾಕುತ್ತೀರೋ ಅಥವಾ ಅಲೆಮಾರಿನಲ್ಲಿ ಸಂಭಾಲನೆ ಮಾಡಿ ಇಟ್ಟುಕೊಳ್ಳುತ್ತೀರೋ? ಹೃದಯದಲ್ಲಿ ಸಂಭಾಲನೆ ಮಾಡಿ ಇಟ್ಟುಕೊಳ್ಳಿ. ತಮ್ಮ ಹೃದಯವು ಬಾಪ್ದಾದಾರವರ ಸಿಂಹಾಸನವಾಗಿದೆ ಆದ್ದರಿಂದ ಒಂದು ಶಬ್ಧವನ್ನು ಈಗ ಮನಸ್ಸಿನಲ್ಲಿ ಪಕ್ಕಾ ನೆನಪಿಟ್ಟುಕೊಳ್ಳಿ - ಮುಖದಿಂದಲ್ಲ, ಮನಸ್ಸಿನಲ್ಲಿ ಇಟ್ಟುಕೊಳ್ಳಿ - ಆಶೀರ್ವಾದವನ್ನು ಕೊಡಬೇಕು ಮತ್ತು ಆಶೀರ್ವಾದವನ್ನು ತೆಗೆದುಕೊಳ್ಳಬೇಕು. ಯಾವುದೇ ವ್ಯರ್ಥ ಮಾತುಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಒಳ್ಳೆಯದು – ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಹೊರಹಾಕುವುದು ನಿಮ್ಮ ಕೆಲಸವೋ ಅಥವಾ ಅನ್ಯರ ಕೆಲಸವೋ? ಆಗ ವಿಶ್ವದಲ್ಲಿ, ಆತ್ಮರಲ್ಲಿ ತೀವ್ರ ವೇಗದ ಸೇವೆಯಿಂದ ವಾಯುಮಂಡಲವನ್ನು ಮಾಡಲು ಸಾಧ್ಯ. ವಿಶ್ವ ಪರಿವರ್ತನೆ ಮಾಡಬೇಕಲ್ಲವೆ! ಈಗ ಏನನ್ನು ನೆನಪಿಟ್ಟುಕೊಳ್ಳುತ್ತೀರಿ? ಮನಸ್ಸಿನಿಂದ ನೆನಪಿಟ್ಟುಕೊಂಡಿರಾ? ಆಶೀರ್ವಾದ ಎಂಬ ಶಬ್ಧವನ್ನು ನೆನಪಿಟ್ಟುಕೊಳ್ಳಿ. ಅಷ್ಟೇ ಏಕೆಂದರೆ ತಮ್ಮ ಜಡಚಿತ್ರ ಏನನ್ನು ಕೊಡುತ್ತದೆ? ಆಶೀರ್ವಾದವನ್ನು ಕೊಡುತ್ತದೆಯಲ್ಲವೆ. ಮಂದಿರದಲ್ಲಿ ಹೋದಾಗ ಏನನ್ನು ಬೇಡುತ್ತೀರಾ? ಆಶೀರ್ವಾದವನ್ನು ಕೇಳುತ್ತಾರಲ್ಲವೆ! ಆಶೀರ್ವಾದ ಸಿಗುತ್ತದೆ, ಆದ್ದರಿಂದಲೇ ಆಶೀರ್ವಾದವನ್ನು ಬೇಡುತ್ತಾರೆ. ನಿಮ್ಮ ಜಡಚಿತ್ರವು ಅಂತಿಮ ಜನ್ಮದವರೆಗೂ ಆಶೀರ್ವಾದವನ್ನು ಕೊಡುತ್ತಿದೆ, ವೃತ್ತಿಯಿಂದ ಅವರ ಕಾಮನೆಗಳನ್ನು ಪೂರ್ಣ ಮಾಡುತ್ತದೆ ಅಂದಮೇಲೆ ತಾವು ಪದೇ-ಪದೇ ಈ ರೀತಿ ಆಶೀರ್ವಾದ ಕೊಡುವಂತಹವರಾಗಿದ್ದೀರಾ? ಆ ಕಾರಣ ನಿಮ್ಮ ಚಿತ್ರಗಳೂ ಸಹ ಇಲ್ಲಿಯವರೆಗೆ ಆಶೀರ್ವಾದಗಳು ಕೊಡುತ್ತಿದೆ. ಒಂದುವೇಳೆ ಪರವಶ ಆತ್ಮರಿಗೆ ಕ್ಷಮಾ ಸಾಗರನ ಮಕ್ಕಳು ಸ್ವಲ್ಪ ಕ್ಷಮೆ ಕೊಡುತ್ತೀರೆಂದರೂ ಒಳ್ಳೆಯದೇ ಅಲ್ಲವೆ! ಅಂದಮೇಲೆ ತಾವೆಲ್ಲರೂ ಮಾಸ್ಟರ್ ಕ್ಷಮಾ ಸಾಗರರಾಗಿದ್ದೀರಲ್ಲವೆ? ಆಗಿದ್ದೀರಾ ಅಥವಾ ಇಲ್ಲವೇ? ಆಗಿದ್ದೀರಲ್ಲವೆ? ಆಗಿದ್ದೀರಲ್ಲವೆ? ಮೊದಲು ನಾನು ಎಂದು ಹೇಳಿ, ಇದರಲ್ಲಿ ಹೇ ಅರ್ಜುನರಾಗಿರಿ. ಇಂತಹ ವಾಯುಮಂಡಲ ಮಾಡಿರಿ - ನಿಮ್ಮ ಮುಂದೆ ಯಾರೇ ಬರುತ್ತಾರೆಂದರೂ ಅವರಿಗೆ ಸ್ವಲ್ಪ ಸ್ನೇಹವಾದರೂ ಪಡೆಯಲಿ, ಸಹಯೋಗ ಪಡೆಯಲಿ, ಕ್ಷಮೆಯನ್ನು ಅನುಭವ ಮಾಡಲಿ, ಸಾಹಸದ ಅನುಭವ ಮಾಡಲಿ, ಸಹಯೋಗದ ಅನುಭವ ಮಾಡಲಿ. ಉಮ್ಮಂಗ-ಉತ್ಸಾಹದ ಅನುಭವ ಮಾಡಲಿ. ಈಗ ಮಾಡಲು ಸಾಧ್ಯವೇ? ಮಾಡಲು ಸಾಧ್ಯವೇ? ಮೊದಲ ಸಾಲಿನವರು ಮಾಡಲು ಸಾಧ್ಯವೇ? ಕೈಯನ್ನೆತ್ತಿ. ಮೊದಲು ಮಾಡಬೇಕಾಗುತ್ತದೆ. ಮಾಡಬೇಕಾಗುತ್ತದೆ. ಮೊದಲ ಸಾಲಿನವರು, ಟೀಚರ್ಸ್, ಎಲ್ಲರೂ ಮಾಡುತ್ತೀರಾ?

ಎಲ್ಲಾ ಸ್ಥಾನಗಳಿಂದ ಮಕ್ಕಳ ಈ-ಮೇಲ್ ಮತ್ತು ಪತ್ರಗಳು ಬರುತ್ತಿರುತ್ತವೆ ಆದರೆ ಯಾರು ಪತ್ರವನ್ನೂ ಬರೆದಿಲ್ಲ ಆದರೆ ಸಂಕಲ್ಪ ಮಾಡಿದ್ದೀರೆಂದರೆ ಸಂಕಲ್ಪದವರ ನೆನಪು-ಪ್ರೀತಿಯು ಬಾಪ್ದಾದಾರವರ ಬಳಿ ತಲುಪಿದೆ. ಪತ್ರಗಳು ಬಹಳ ಮಧುರಾತಿ ಮಧುರವಾಗಿ ಬರೆಯುತ್ತಾರೆ. ಪತ್ರಗಳನ್ನು ಈ ರೀತಿ ಬರೆಯುತ್ತಾರೆ ಯಾವುದು ಗೊತ್ತೇ ಇಲ್ಲ, ಉಮ್ಮಂಗ-ಉತ್ಸಾಹದಿಂದ ಹಾರುತ್ತಲೇ ಇರುತ್ತಾರೆ. ಆದರೂ ಒಳ್ಳೆಯದೇ ಆಗಿದೆ. ಪತ್ರ ಬರೆಯುವುದರಿಂದ ತನ್ನನ್ನು ಬಂಧನದಲ್ಲಿ ಬಂಧಿಸಿಕೊಳ್ಳುತ್ತಾರೆ. ಪ್ರತಿಜ್ಞೆ ಮಾಡುತ್ತಾರಲ್ಲವೆ! ಅಂದಾಗ ನಾಲ್ಕೂ ಕಡೆಯಲ್ಲಿ ಎಲ್ಲಿ ನೋಡುತ್ತಿದ್ದಾರೆ ಮತ್ತು ಕೇಳುತ್ತಿದ್ದಾರೆ, ಅವರೆಲ್ಲರನ್ನೂ ಬಾಪ್ದಾದಾ ಸಮ್ಮುಖದಲ್ಲಿರುವವರಿಗಿಂತಲೂ ಮೊದಲು ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ಏಕೆಂದರೆ ಬಾಪ್ದಾದಾರವರಿಗೆ ತಿಳಿದಿದೆ - ಒಂದೊಂದು ಸ್ಥಾನದಲ್ಲಿ ಒಂದೊಂದು ಸಮಯವಾಗಿದೆ, ಆದರೆ ಎಲ್ಲರೂ ಬಹಳ ಉತ್ಸಾಹದಿಂದ ಕುಳಿತಿದ್ದಾರೆ. ನೆನಪಿನಲ್ಲಿದ್ದು ಕೇಳುತ್ತಿದ್ದಾರೆ. ಒಳ್ಳೆಯದು.

ಎಲ್ಲರೂ ಸಂಕಲ್ಪ ಮಾಡಿದಿರಿ, ನಂಬರ್ವನ್ ಆಗಲೇಬೇಕೆಂದು ತೀವ್ರ ಪುರುಷಾರ್ಥ ಮಾಡಿ. ಮಾಡಿದಿರಾ! ಕೈಗಳನ್ನೆತ್ತಿ. ಒಳ್ಳೆಯದು - ಮಾಡಿದಿರಾ? ಈಗ ಟೀಚರ್ಸ್ ಕೈ ಎತ್ತುತ್ತಿದ್ದಾರೆ. ಮೊದಲನೇ ಸಾಲಿನವರಂತೂ ಆಗಿದ್ದೀರಲ್ಲವೆ! ಒಳ್ಳೆಯದು - ಬಾಪ್ದಾದಾರವರು ಇದೇ ಡೈರೆಕ್ಷನ್ನ್ನು ಕೊಟ್ಟಿದ್ದೇವೆ - ಇಡೀ ದಿನದಲ್ಲಿ 5 ನಿಮಿಷ ಸಿಕ್ಕಿದರೂ ಸಹ ಆಗ ಮನಸ್ಸಿನ ವ್ಯಾಯಾಮವನ್ನು ಮಾಡಿ ಏಕೆಂದರೆ ವರ್ತಮಾನ ಸಮಯವು ವ್ಯಾಯಾಮ ಮಾಡುವುದಾಗಿದೆ ಅಂದಾಗ 5 ನಿಮಿಷದಲ್ಲಿ ಮನಸ್ಸಿನ ವ್ಯಾಯಾಮವನ್ನು ಪರಮಧಾಮದಿಂದ ಕರೆತನ್ನಿ, ಸೂಕ್ಷ್ಮವತನದಲ್ಲಿ ಸೂಕ್ಷ್ಮ ದೇವತೆಯ ನೆನಪು ಮಾಡಿ ನಂತರ ಪೂಜ್ಯ ರೂಪದಲ್ಲಿ ನೆನಪು ಮಾಡಿ ನಂತರ ಬ್ರಾಹ್ಮಣ ರೂಪದಲ್ಲಿ ನೆನಪು ಮಾಡಿ. ನಂತರ ದೇವತಾ ರೂಪದಲ್ಲಿ ನೆನಪು ಮಾಡಿ. ಎಷ್ಟಾಯಿತು? ಐದು, ಅಂದಾಗ 5 ನಿಮಿಷದಲ್ಲಿ ಈ ಐದು ವ್ಯಾಯಾಮವನ್ನು ಮಾಡಿ ಮತ್ತು ಇಡೀ ದಿನದಲ್ಲಿ ನಡೆದಾಡುತ್ತಾ-ತಿರುಗಾಡುತ್ತಾ ಇದನ್ನು ಮಾಡಬಹುದು. ಇದಕ್ಕಾಗಿ ಮೈದಾನ ಬೇಕಾಗಿಲ್ಲ, ಓಡಬೇಕಾಗಿಲ್ಲ, ಇದಕ್ಕಾಗಿ ಕುರ್ಚಿಯೂ ಬೇಕಾಗಿಲ್ಲ, ಸ್ಥಳವೂ ಬೇಕಾಗಿಲ್ಲ, ಯಂತ್ರ ಬೇಕಾಗಿಲ್ಲ. ಹೇಗೆ ಶರೀರದ ವ್ಯಾಯಾಮಕ್ಕೆ ಇದೆಲ್ಲವೂ ಬೇಕಾಗಿದೆ, ಅದನ್ನು ಭಲೆ ಮಾಡಿ, ಬೇಡ ಎನ್ನುವುದಿಲ್ಲ ಆದರೆ ಈ ಮನಸ್ಸಿನ ವ್ಯಾಯಾಮ ಮನಸ್ಸನ್ನು ಸದಾ ಖುಷಿಯಾಗಿಡುತ್ತದೆ, ಒಲವು-ಉತ್ಸಾಹದಲ್ಲಿಡುತ್ತದೆ. ಹಾರುವ ಕಲೆಯ ಅನುಭವ ಮಾಡಿಸುತ್ತದೆ. ಈಗೀಗ ಈ ವ್ಯಾಯಾಮವನ್ನು ಪ್ರಾರಂಭ ಮಾಡಿಕೊಳ್ಳಿ. ಪರಮಧಾಮದಿಂದ ದೇವತೆಯಾಗುವವರೆಗೂ ಮಾಡಿ. ಒಳ್ಳೆಯದು.

ನಾಲ್ಕೂ ಕಡೆಯ ಸದಾ ತಮ್ಮ ವೃತ್ತಿಯಿಂದ ಆತ್ಮೀಯ ಶಕ್ತಿಶಾಲಿ ವಾಯುಮಂಡಲವನ್ನು ಮಾಡುವಂತಹ ತೀವ್ರ ಪುರುಷಾರ್ಥಿ ಮಕ್ಕಳಿಗೆ, ಸದಾ ತನ್ನ ಸ್ಥಾನ ಮತ್ತು ಸ್ಥಿತಿಯನ್ನು ಶಕ್ತಿಶಾಲಿ ವೈಬ್ರೇಷನ್ನಲ್ಲಿ ಶಕ್ತಿಶಾಲಿ ಅನುಭವ ಮಾಡಿಸುವಂತಹ ಧೃಡ ಸಂಕಲ್ಪವುಳ್ಳ ಶ್ರೇಷ್ಠ ಆತ್ಮರಿಗೆ, ಆಶೀರ್ವಾದವನ್ನು ಕೊಡುವುದು ಮತ್ತು ತೆಗೆದುಕೊಳ್ಳುವಂತಹ ದಯಾಹೃದಯಿ ಆತ್ಮರಿಗೆ, ಸದಾ ತನ್ನನ್ನು ತಾನು ಹಾರುವ ಕಲೆಯಲ್ಲಿ ಅನುಭವ ಮಾಡುವಂತಹ ಡಬಲ್ಲೈಟ್ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:
ವಿಶಾಲ ಬುದ್ಧಿಯ ಮೂಲಕ ಸಂಘಟನೆಯ ಶಕ್ತಿಯನ್ನು ಹೆಚ್ಚಿಸುವಂತಹ ಸಫಲತಾ ಸ್ವರೂಪ ಭವ.

ಸಂಗಟನೆಯ ಶಕ್ತಿಯನ್ನು ಹೆಚ್ಚಿಸಬೇಕು - ಇದು ಬ್ರಾಹ್ಮಣ ಜೀವನದ ಮೊದಲ ಶ್ರೇಷ್ಠ ಕಾರ್ಯವಾಗಿದೆ. ಅದಕ್ಕಾಗಿ ಯಾವಾಗ ಯಾವುದೇ ಮಾತು ಮೆಜಾರಿಟಿ ಅನುಮೋದಿಸುತ್ತಾರೆ, ಆಗ ಎಲ್ಲಿ ಮೆಜಾರಿಟಿಯಿರುತ್ತದೆ ಅಲ್ಲಿ ನಾನು-ಇದೇ ಆಗಿದೆ ಸಂಘಟನೆಯ ಶಕ್ತಿಯನ್ನು ಹೆಚ್ಚಿಸುವುದು. ಇದರಲ್ಲಿ ದೊಡ್ಡತನವನ್ನು ತೋರಿಸಬೇಡಿ ನನ್ನ ವಿಚಾರವಂತು ಬಹಳ ಚೆನ್ನಾಗಿದೆ. ಭಲೇ ಎಷ್ಟೇ ಒಳ್ಳೆಯದಾಗಿರಲಿ ಆದರೆ ಎಲ್ಲಿ ಸಂಗಟನೆ ಮುರಿಯುತ್ತೆ ಅಲ್ಲಿ ಒಳ್ಳೆಯದೂ ಸಹಾ ಸಾಧಾರಣವಾಗಿ ಬಿಡುವುದು. ಆ ಸಮಯದಲ್ಲಿ ತಮ್ಮ ವಿಚಾರಗಳನ್ನು ತ್ಯಾಗ ಮಾಡಬೇಕಾಗಿ ಬಂದರೂ ಸಹಾ ತ್ಯಾಗದಲ್ಲಿಯೂ ಭಾಗ್ಯವಿದೆ. ಇದರಲ್ಲಿ ಸಫಲತಾ ಸ್ವರೂಪರಾಗುವಿರಿ. ಸಮೀಪ ಸಂಬಂಧದಲ್ಲಿ ಬರುವಿರಿ.

ಸ್ಲೋಗನ್:
ಸರ್ವ ಸಿದ್ಧಿಗಳನ್ನು ಪ್ರಾಪ್ತಿ ಮಾಡಿಕೊಳ್ಳಲು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಿ.

ಅವ್ಯಕ್ತ ಸೂಚನೆ:- ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.

ಸಮಯ ಪ್ರಮಾಣ ಈಗ ಮನಸ್ಸಾ ಮತ್ತು ವಾಚಾದ ಒಟ್ಟಿಗೆ ಸೇವೆ ಮಾಡಿ. ಆದರೆ ವಾಚಾ ಸೇವೆ ಸಹಜವಾಗಿದೆ, ಮನಸ್ಸಿನಲ್ಲಿ ಗಮನ ಕೊಡುವ ಮಾತಿದೆ ಅದಕ್ಕಾಗಿಯೇ ಸರ್ವ ಆತ್ಮರ ಪ್ರತಿ ಮನಸ್ಸಿನಲ್ಲಿ ಶುಭ ಭಾವನೆ, ಶುಭ ಕಾಮನೆಯ ಸಂಕಲ್ಪವಿರಲಿ. ಮಾತಿನಲ್ಲಿ ಮಧುರತೆ, ಸಂತುಷ್ಟತೆ, ಸರಳತೆಯ ನವೀನತೆಯಿರಲಿ ಆಗ ಸೇವೆಯಲ್ಲಿ ಸಹಜ ಸಫಲತೆ ಸಿಗುತ್ತಿರುತ್ತದೆ.