13.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ಅನೇಕ
ದೇಹಧಾರಿಗಳೊಂದಿಗಿನ ಪ್ರೀತಿಯನ್ನು ತೆಗೆದು ಒಬ್ಬ ವಿದೇಹಿ ತಂದೆಯನ್ನು ನೆನಪು ಮಾಡಿ ಆಗ ನಿಮ್ಮ
ಎಲ್ಲಾ ಅಂಗಗಳು ಶೀತಲವಾಗಿಬಿಡುತ್ತವೆ”
ಪ್ರಶ್ನೆ:
ಯಾರು ದೈವೀಕುಲದ
ಆತ್ಮಗಳಾಗಿದ್ದಾರೆಯೋ ಅವರ ಚಿಹ್ನೆಗಳೇನು?
ಉತ್ತರ:
1. ದೈವೀಕುಲದ
ಆತ್ಮಗಳಿಗೆ ಈ ಹಳೆಯ ಪ್ರಪಂಚದಿಂದ ಸಹಜವಾಗಿಯೇ ವೈರಾಗ್ಯವಿರುವುದು. 2. ಅವರ ಬುದ್ಧಿಯು
ಬೇಹದ್ದಿನಲ್ಲಿರುವುದು. ಶಿವಾಲಯದಲ್ಲಿ ಹೋಗುವುದಕ್ಕಾಗಿ ಅವರು ಪಾವನ ಹೂಗಳಾಗುವ ಪುರುಷಾರ್ಥ
ಮಾಡುತ್ತಾರೆ. 3. ಯಾವುದೇ ಆಸುರೀ ನಡವಳಿಕೆಯಲ್ಲಿ ನಡೆಯುವುದಿಲ್ಲ. 4. ತಮ್ಮ
ಲೆಕ್ಕಪತ್ರವನ್ನಿಟ್ಟುಕೊಳ್ಳುತ್ತಾರೆ. ಯಾವುದೇ ಆಸುರಿ ಕರ್ಮವು ಆಗಲಿಲ್ಲವೆ? ತಂದೆಗೆ ಸತ್ಯವನ್ನೇ
ತಿಳಿಸುತ್ತಾರೆ, ಏನನ್ನೂ ಮುಚ್ಚಿಡುವುದಿಲ್ಲ.
ಗೀತೆ:
ಅವರೆಂದೂ
ನಮ್ಮಿಂದ ದೂರವಾಗುವುದಿಲ್ಲ............
ಓಂ ಶಾಂತಿ.
ಈಗ ಇವು ಬೇಹದ್ದಿನ ಮಾತುಗಳಾಗಿವೆ. ಹದ್ದಿನ ಮಾತುಗಳೆಲ್ಲವೂ ಹೊರಟುಹೋಗುತ್ತವೆ. ಪ್ರಪಂಚದಲ್ಲಂತೂ
ಅನೇಕರನ್ನು ನೆನಪು ಮಾಡಲಾಗುತ್ತದೆ ಮತ್ತು ಅನೇಕ ದೇಹಧಾರಿಗಳ ಜೊತೆ ಪ್ರೀತಿಯಿದೆ. ಒಬ್ಬ ತಂದೆಯೇ
ವಿದೇಹಿಯಾಗಿದ್ದಾರೆ. ಅವರಿಗೆ ಪರಮಪಿತ ಪರಮಾತ್ಮ ಶಿವನೆಂದು ಕರೆಯಲಾಗುತ್ತದೆ. ನೀವೀಗ ಅವರ
ಜೊತೆಯಲ್ಲಿಯೇ ಬುದ್ಧಿಯೋಗವನ್ನಿಡಬೇಕಾಗಿದೆ. ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು.
ಬ್ರಾಹ್ಮಣರಿಗೆ ತಿನ್ನಿಸುವುದೆಲ್ಲವೂ ಕಲಿಯುಗದ ಸಂಪ್ರದಾಯಗಳಾಗಿವೆ. ಅಲ್ಲಿನ ಸಂಪ್ರದಾಯ ಮತ್ತು
ಇಲ್ಲಿನ ಸಂಪ್ರದಾಯವು ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ಯಾವುದೇ ದೇಹಧಾರಿಯನ್ನು ನೆನಪು
ಮಾಡುವಂತಿಲ್ಲ. ಎಲ್ಲಿಯವರೆಗೆ ಆ ಸ್ಥಿತಿಯು ಬರುವುದೋ ಅಲ್ಲಿಯವರೆಗೆ ಪುರುಷಾರ್ಥವು
ನಡೆಯುತ್ತಿರುತ್ತದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಎಷ್ಟು ಸಾಧ್ಯವೋ ಅಷ್ಟು ಹಳೆಯ
ಪ್ರಪಂಚದಲ್ಲಿ ಯಾರೆಲ್ಲರೂ ಇದ್ದಾರೆಯೋ ಎಲ್ಲರನ್ನೂ ಮರೆಯಬೇಕಾಗಿದೆ. ಇಡೀ ದಿನ ಬುದ್ಧಿಯಲ್ಲಿ ಇದೇ
ನಡೆಯುತ್ತಿರಲಿ- ಯಾರಿಗೆ ಹೇಗೆ ತಿಳಿಸುವುದು? ಎಲ್ಲರಿಗೂ ತಿಳಿಸಬೇಕಾಗಿದೆ- ಬನ್ನಿ, ವಿಶ್ವದ ಭೂತ,
ಭವಿಷ್ಯತ್, ವರ್ತಮಾನವನ್ನು ತಿಳಿದುಕೊಳ್ಳಿ, ಇದನ್ನು ಯಾರೂ ತಿಳಿದುಕೊಂಡಿಲ್ಲ. ಭೂತಕಾಲವೆಂದರೆ
ಯಾವಾಗಿನಿಂದ ಆರಂಭವಾಯಿತು, ವರ್ತಮಾನವೆಂದರೆ ಈಗ ಏನಾಗುತ್ತಿದೆ. ಸತ್ಯಯುಗದಿಂದ ಆರಂಭವಾಗಿದೆ
ಅಂದಮೇಲೆ ಸತ್ಯಯುಗದಿಂದ ಹಿಡಿದು ಇಲ್ಲಿಯವರೆಗೆ ಮತ್ತು ಭವಿಷ್ಯವು ಏನಾಗಲಿದೆ ಎಂಬುದನ್ನು
ಪ್ರಪಂಚದವರು ತಿಳಿದುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಆದ್ದರಿಂದ ಚಿತ್ರಗಳನ್ನು
ರಚಿಸುತ್ತೀರಿ, ಇದು ಬಹಳ ದೊಡ್ಡ ಬೇಹದ್ದಿನ ನಾಟಕವಾಗಿದೆ. ಅವರಂತೂ ಸುಳ್ಳು, ಹದ್ದಿನ ನಾಟಕಗಳನ್ನು
ಬಹಳ ರಚಿಸುತ್ತಾರೆ, ಕಥೆಗಳನ್ನು ರಚಿಸುವವರೇ ಬೇರೆಯವರಿರುತ್ತಾರೆ ಮತ್ತು ನಾಟಕದ ದೃಶ್ಯಗಳನ್ನು
ರಚಿಸುವವರು ಬೇರೆಯವರಿರುತ್ತಾರೆ. ಇದೆಲ್ಲಾ ರಹಸ್ಯವು ನಿಮ್ಮ ಬುದ್ಧಿಯಲ್ಲಿದೆ. ಈಗ ಏನೆಲ್ಲಾ
ನೋಡುತ್ತೀರಿ ಅದೆಲ್ಲವೂ ಉಳಿಯುವುದಿಲ್ಲ, ವಿನಾಶವಾಗಿಬಿಡುವುದು ಆದ್ದರಿಂದ ನೀವು ಸತ್ಯಯುಗೀ
ಹೊಸಪ್ರಪಂಚದ ದೃಶ್ಯಗಳನ್ನು ಬಹಳ ಚೆನ್ನಾಗಿ ತೋರಿಸಬೇಕಾಗಿದೆ. ಹೇಗೆ ಅಜ್ಮೀರಿನಲ್ಲಿ ದ್ವಾರಿಕಾ ಇದೆ.
ಅಂದಾಗ ಅದರಲ್ಲಿಯೂ ಆ ದೃಶ್ಯಗಳನ್ನು ತೆಗೆದುಕೊಂಡು ಹೊಸಪ್ರಪಂಚವನ್ನು ಬೇರೆಯಾಗಿ ಮಾಡಿ ತೋರಿಸಿ, ಈ
ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳಲಿದೆ, ಇದರ ನಕ್ಷೆಯು ಇದೆಯಲ್ಲವೆ. ಈಗ ಹೊಸ ಪ್ರಪಂಚವು ಬರುತ್ತದೆ.
ಇಂತಹ ವಿಚಾರಗಳನ್ನು ಬಹಳ ಚೆನ್ನಾಗಿ ಮಾಡಬೇಕು. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ. ಈ
ಸಮಯದಲ್ಲಿ ಮನುಷ್ಯರದು ಕಲ್ಲುಬುದ್ಧಿಯಾಗಿದೆ. ನೀವು ತಿಳಿಸುತ್ತೀರಿ, ಆದರೂ ಸಹ ಬುದ್ಧಿಯಲ್ಲಿ
ಕುಳಿತುಕೊಳ್ಳುವುದಿಲ್ಲ. ಹೇಗೆ ನಾಟಕಗಾರರು ಸುಂದರ ದೃಶ್ಯಗಳನ್ನು ಮಾಡಿಸುತ್ತಾರೆ ಹಾಗೆಯೇ
ಯಾರಿಂದಲಾದರೂ ಸಹಯೋಗವನ್ನು ತೆಗೆದುಕೊಂಡು ಸ್ವರ್ಗದ ದೃಶ್ಯಗಳನ್ನು ಬಹಳ ಚೆನ್ನಾಗಿ ಮಾಡಿಸಬೇಕು.
ಇದಕ್ಕೆ ಅವರು ಬಹಳ ಒಳ್ಳೆಯ ಉಪಾಯಗಳನ್ನು ತಿಳಿಸುತ್ತಾರೆ. ಅದನ್ನು ನೋಡಿದಕೂಡಲೇ ಮನುಷ್ಯರು ಬಂದು
ತಿಳಿದುಕೊಳ್ಳುವ ಹಾಗೆ ಬಹಳ ಚೆನ್ನಾಗಿ ಮಾಡಿಸಬೇಕು. ಅವಶ್ಯವಾಗಿ ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು,
ನೀವು ಮಕ್ಕಳಲ್ಲಿಯೂ ಕೆಲವರಿಗೆ ಧಾರಣೆಯಾಗುತ್ತದೆ. ದೇಹಾಭಿಮಾನದ ಬುದ್ಧಿಯನ್ನು ಛೀ-ಛೀ
ಎನ್ನಲಾಗುತ್ತದೆ. ದೇಹೀ-ಅಭಿಮಾನಿ ಮಕ್ಕಳಿಗೆ ಹೂಗಳೆಂದು ಹೇಳಲಾಗುತ್ತದೆ. ಈಗ ನೀವು ಹೂಗಳಾಗುತ್ತೀರಿ,
ದೇಹಾಭಿಮಾನದಲ್ಲಿದ್ದರೆ ಮುಳ್ಳಿಗೆ ಮುಳ್ಳಾಗಿಯೇ ಉಳಿಯುತ್ತಾರೆ. ನೀವು ಮಕ್ಕಳಿಗಂತೂ ಈ ಹಳೆಯ
ಪ್ರಪಂಚದಿಂದ ವೈರಾಗ್ಯವಿದೆ. ಈ ವೇಶ್ಯಾಲಯದಿಂದ ಬಹಳ ತಿರಸ್ಕಾರವಿದೆ. ಈಗ ನಾವು ಶಿವಾಲಯದಲ್ಲಿ
ಹೋಗಲು ಹೂಗಳಾಗುತ್ತಿದ್ದೇವೆ. ಆಗುತ್ತಾ-ಆಗುತ್ತಾ ಒಂದುವೇಳೆ ಮತ್ತೆ ಇಂತಹ ಕೆಟ್ಟಚಲನೆಯಲ್ಲಿ
ನಡೆಯುತ್ತೀರೆಂದರೆ ಈಗ ಇವರಲ್ಲಿ ಭೂತ ಪ್ರವೇಶತೆಯಾಗಿದೆಯೆಂದು ತಿಳಿಯಲಾಗುತ್ತದೆ. ಒಂದೇ ಮನೆಯಲ್ಲಿ
ಪತಿಯು ಹಂಸವಾಗುತ್ತಿದ್ದರೆ, ಪತ್ನಿಯು ಜ್ಞಾನವನ್ನು ತಿಳಿದುಕೊಳ್ಳಲಿಲ್ಲವೆಂದರೆ ಕಷ್ಟವಾಗುತ್ತದೆ.
ಸಹನೆ ಮಾಡಬೇಕಾಗಿದೆ. ಇವರ ಅದೃಷ್ಟದಲ್ಲಿಲ್ಲ ಎಂದು ತಿಳಿಯಲಾಗುತ್ತದೆ. ಎಲ್ಲರೂ
ದೈವೀಕುಲದವರಾಗುವವರಲ್ಲ, ಯಾರು ಆಗುವವರಿದ್ದಾರೆಯೋ ಅವರೇ ಆಗುತ್ತಾರೆ. ಅನೇಕರ ಕೆಟ್ಟಚಲನೆಯ
ದೂರುಗಳು ತಂದೆಯ ಬಳಿ ಬರುತ್ತವೆ ಆದ್ದರಿಂದ ತಂದೆಯು ಪ್ರತಿನಿತ್ಯವೂ ಹೇಳುತ್ತಿರುತ್ತಾರೆ- ಮಕ್ಕಳೇ,
ತಮ್ಮ ದಿನಚರಿಯನ್ನು ರಾತ್ರಿಯಲ್ಲಿ ನೋಡಿಕೊಳ್ಳಿ, ಇಂದು ನಾನು ಯಾವುದೇ ಆಸುರೀ ಕರ್ಮವನ್ನಂತೂ
ಮಾಡಲಿಲ್ಲವೆ? ತಂದೆಯು ತಿಳಿಸುತ್ತಾರೆ- ಮಕ್ಕಳೇ, ಏನೆಲ್ಲಾ ತಪ್ಪುಗಳನ್ನು ಮಾಡಿದ್ದೀರೋ ಅದನ್ನು
ಸತ್ಯವಾಗಿ ತಿಳಿಸಿ, ಯಾರಾದರೂ ಕಠಿಣತಪ್ಪನ್ನು ಮಾಡುತ್ತಾರೆಂದರೆ ಅದನ್ನು ಮತ್ತೆ ವೈದ್ಯರಿಗೆ
ತಿಳಿಸಲು ಸಂಕೋಚವಾಗುತ್ತದೆ ಏಕೆಂದರೆ ಮರ್ಯಾದೆಯು ಕಳೆಯುತ್ತದೆಯಲ್ಲವೆ. ತಿಳಿಸದೇ ಇರುವುದರಿಂದ
ನಷ್ಟವುಂಟಾಗಿಬಿಡುತ್ತದೆ. ಮಾಯೆಯು ಈ ರೀತಿ ಪೆಟ್ಟನ್ನು ಕೊಡುತ್ತದೆ, ಒಂದೇಸಾರಿ ಸತ್ಯನಾಶ
ಮಾಡಿಬಿಡುತ್ತದೆ. ಮಾಯೆಯು ಬಹಳ ಪ್ರಬಲವಾಗಿದೆ. ಪಂಚವಿಕಾರಗಳ ಮೇಲೆ ಜಯಗಳಿಸಲಿಲ್ಲವೆಂದರೆ ತಂದೆಯು
ತಾನೆ ಏನು ಮಾಡುತ್ತಾರೆ?
ತಂದೆಯು ತಿಳಿಸುತ್ತಾರೆ-
ನಾನು ದಯಾಹೃದಯಿಯಾಗಿದ್ದೇನೆ, ಮಹಾಕಾಲನೂ ಆಗಿದ್ದೇನೆ. ಪತಿತ-ಪಾವನ ಬಂದು ಪಾವನರನ್ನಾಗಿ ಮಾಡಿ ಎಂದು
ನನ್ನನ್ನೇ ಕರೆಯುತ್ತಾರೆ. ನನಗೆ ಎರಡು ಹೆಸರುಗಳಿವೆಯಲ್ಲವೆ. ಹೇಗೆ ದಯಾಹೃದಯಿಯಾಗಿದ್ದೇನೆ ಮತ್ತು
ಮಹಾಕಾಲನಾಗಿದ್ದೇನೆಂಬ ಪಾತ್ರವನ್ನು ಈಗ ಅಭಿನಯಿಸುತ್ತಿದ್ದೇನೆ. ಮುಳ್ಳುಗಳನ್ನು ಹೂಗಳನ್ನಾಗಿ
ಮಾಡುತ್ತೇನೆ. ಆದ್ದರಿಂದ ನಿಮ್ಮ ಬುದ್ಧಿಯಲ್ಲಿ ಆ ಖುಷಿಯಿದೆ. ನೀವೆಲ್ಲರೂ ಪಾರ್ವತಿಯರಾಗಿದ್ದೀರಿ,
ನೀವೀಗ ನನ್ನೊಬ್ಬನನ್ನೇ ನೆನಪು ಮಾಡಬೇಕು. ಅದರಿಂದ ನೀವು ಅಮರಪುರಿಯಲ್ಲಿ ಹೋಗುವಿರಿ ಮತ್ತು ನಿಮ್ಮ
ಪಾಪಗಳು ನಾಶವಾಗುತ್ತವೆ. ಆ ಸ್ಥೂಲಯಾತ್ರೆಗಳಿಂದ ನಿಮ್ಮ ಪಾಪವು ನಾಶವಾಗುವುದಿಲ್ಲ. ಇವು
ಭಕ್ತಿಮಾರ್ಗದ ಯಾತ್ರೆಗಳಾಗಿವೆ. ನಿಮ್ಮ ಖರ್ಚು ಹೇಗೆ ನಡೆಯುತ್ತದೆ ಎಂದು ಕೆಲವರು ನೀವು ಮಕ್ಕಳನ್ನು
ಪ್ರಶ್ನಿಸುತ್ತಾರೆ ಆದರೆ ನಾವು ಈ ರೀತಿಯಾಗಿ ಪ್ರತ್ಯುತ್ತರವನ್ನು ಕೊಟ್ಟೆವು ಎಂಬ ಸಮಾಚಾರವನ್ನು
ಯಾರೂ ತಿಳಿಸುವುದಿಲ್ಲ. ಇಷ್ಟೆಲ್ಲಾ ಮಕ್ಕಳು ಬ್ರಹ್ಮನ ಸಂತಾನ ಬ್ರಾಹ್ಮಣರಿದ್ದೇವೆಂದರೆ ನಾವೇ
ನಮಗಾಗಿ ಖರ್ಚು ಮಾಡುತ್ತೇವೆ ಅಲ್ಲವೆ. ರಾಜಧಾನಿಯೂ ಸಹ ಶ್ರೀಮತದನುಸಾರ ನಾವು ನಮಗಾಗಿ ಸ್ಥಾಪನೆ
ಮಾಡುತ್ತಿದ್ದೇವೆ. ನಾವೇ ರಾಜ್ಯವನ್ನು ಮಾಡುತ್ತೇವೆ. ರಾಜಯೋಗವನ್ನು ನಾವೇ ಕಲಿಯುತ್ತೇವೆಂದ ಮೇಲೆ
ಅದರ ಖರ್ಚನ್ನು ನಾವೇ ಮಾಡುತ್ತೇವೆ. ಶಿವತಂದೆಯಂತು ಅವಿನಾಶಿ ಜ್ಞಾನರತ್ನಗಳ ದಾನ ಕೊಡುತ್ತಾರೆ,
ಇದರಿಂದ ನಾವು ರಾಜರಿಗೂ ರಾಜರಾಗುತ್ತೇವೆ. ಯಾವ ಮಕ್ಕಳು ಓದುವರೋ ಅವರೇ ಖರ್ಚು ಮಾಡುವವರಲ್ಲವೆ.
ತಿಳಿಸಬೇಕು- ನಮ್ಮ ಖರ್ಚನ್ನು ನಾವೇ ಮಾಡುತ್ತೇವೆ, ನಾವು ಯಾರಿಂದಲೂ ಭಿಕ್ಷೆ ಅಥವಾ ಶುಲ್ಕವನ್ನು
ತೆಗೆದುಕೊಳ್ಳುವುದಿಲ್ಲ. ಆದರೆ ಇವರು ಈ ರೀತಿ ಕೇಳುತ್ತಾರೆಂದು ಮಕ್ಕಳು ಬರೆಯುತ್ತೀರಿ.
ಆದ್ದರಿಂದಲೇ ತಂದೆಯು ತಿಳಿಸಿದ್ದರು- ಇಡೀ ದಿನದಲ್ಲಿ ಯಾವ-ಯಾವ ಸೇವೆ ಮಾಡುತ್ತೀರೋ ಅದನ್ನು
ರಾತ್ರಿಯಲ್ಲಿ ತಂದೆಗೆ ಸತ್ಯವಾಗಿ ತಿಳಿಸಬೇಕು. ಅನೇಕರು ಬರುತ್ತಾರೆ, ಅವರೆಲ್ಲರೂ
ಪ್ರಜೆಗಳಾಗುತ್ತಾರೆ. ಆದರೆ ಶ್ರೇಷ್ಠಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುವವರು ಬಹಳ ಕೆಲವರೇ
ಇದ್ದಾರೆ. ಕೆಲವರೇ ರಾಜರಾಗುತ್ತಾರೆ. ಸಾಹುಕಾರರು ಕೆಲವರೇ ಆಗುತ್ತಾರೆ. ಉಳಿದಂತೆ ಬಹಳಷ್ಟು ಮಂದಿ
ಬಡವರಾಗುತ್ತಾರೆ. ಇಲ್ಲಿಯೂ ಸಹ ಹಾಗೆಯೇ, ಅಂದಮೇಲೆ ದೈವೀಪ್ರಪಂಚದಲ್ಲಿಯೂ ಅದೇ ರೀತಿ ಇರುತ್ತದೆ.
ರಾಜಧಾನಿಯು ಸ್ಥಾಪನೆಯಾಗುತ್ತದೆ, ಅದರಲ್ಲಿ ನಂಬರ್ವಾರ್ ಎಲ್ಲರೂ ಬೇಕು. ತಂದೆಯು ಬಂದು
ರಾಜಯೋಗವನ್ನು ಕಲಿಸಿ ಆದಿಸನಾತನ ದೈವೀರಾಜಧಾನಿಯ ಸ್ಥಾಪನೆ ಮಾಡಿಸುತ್ತಾರೆ. ದೈವೀಧರ್ಮದ
ರಾಜಧಾನಿಯಿತ್ತು, ಈಗಿಲ್ಲ. ತಂದೆಯು ತಿಳಿಸುತ್ತಾರೆ- ನಾನು ಪುನಃ ಸ್ಥಾಪನೆ ಮಾಡುತ್ತೇನೆ ಅಂದಮೇಲೆ
ಅನ್ಯರಿಗೆ ತಿಳಿಸಲು ಚಿತ್ರಗಳೂ ಸಹ ಅಷ್ಟು ಸುಂದರವಾಗಿರಬೇಕು. ತಂದೆಯ ಮುರುಳಿಯನ್ನು ನುಡಿಸುತ್ತಾರೆ.
ದಿನ-ಪ್ರತಿದಿನ ಕಳೆದಂತೆ ಅದರಲ್ಲಿ ನವೀನತೆ ಬರುತ್ತಾ ಹೋಗುತ್ತದೆ. ನೀವು ತಮ್ಮ ಸ್ಥಿತಿಯನ್ನು
ನೋಡಿಕೊಳ್ಳುತ್ತಾ ಇರಿ. ಅದರಲ್ಲಿ ಬದಲಾವಣೆಯಾಗುತ್ತಾ ಹೋಗುತ್ತದೆ. ತಂದೆಯು ಬಂದು ಕೆಸರಿನಿಂದ
ಹೊರತೆಗೆಯುತ್ತಾರೆ. ಯಾರೆಷ್ಟು ಹೊರತೆಗೆಯುವ ಸೇವೆ ಮಾಡುವರೋ ಅಷ್ಟು ಶ್ರೇಷ್ಠಪದವಿಯನ್ನು
ಪಡೆಯುತ್ತಾರೆ. ನೀವು ಮಕ್ಕಳಂತೂ ಒಮ್ಮೆಲೆ ಕ್ಷೀರಖಂಡವಾಗಿರಬೇಕು. ತಂದೆಯು ಇಲ್ಲಿ
ಸತ್ಯಯುಗಕ್ಕಿಂತಲೂ ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಈಶ್ವರ ತಂದೆಯೇ ಓದಿಸುತ್ತಾರೆ
ಅಂದಮೇಲೆ ಅವರಿಗೆ ತಮ್ಮ ವಿದ್ಯೆಯ ಶೌರ್ಯವನ್ನು ತೋರಿಸಬೇಕು. ಆಗಲೇ ತಂದೆಯು ಬಲಿಹಾರಿಯಾಗುತ್ತಾರೆ.
ಇದು ಹೃದಯದಲ್ಲಿ ಬರಬೇಕು- ಬಾಬಾ, ಕೇವಲ ನಾವೀಗ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಕಾರ್ಯವನ್ನೇ
ಮಾಡುತ್ತೇವೆ, ಈ ನೌಕರಿ ಇತ್ಯಾದಿಯನ್ನಂತೂ ಮಾಡುತ್ತಲೇ ಇರುತ್ತೇವೆ ಆದ್ದರಿಂದ ಮೊದಲು ನಮ್ಮ
ಉನ್ನತಿಯನ್ನಾದರೂ ಮಾಡಿಕೊಳ್ಳಬೇಕು. ಇದು ಬಹಳ ಸಹಜವಾಗಿದೆ. ಮನುಷ್ಯರು ಎಲ್ಲವನ್ನೂ ಮಾಡಬಲ್ಲರು.
ಗೃಹಸ್ಥ ವ್ಯವಹಾರದಲ್ಲಿರುತ್ತಾ ರಾಜ್ಯಪದವಿಯನ್ನು ಪಡೆಯಬೇಕಾಗಿದೆ. ಆದ್ದರಿಂದ ನಿತ್ಯವೂ ತಮ್ಮ
ಲೆಕ್ಕಪತ್ರವನ್ನು ತೆಗೆಯಿರಿ. ಇಡೀ ದಿನದ ಲಾಭ ಮತ್ತು ನಷ್ಟವನ್ನು ತೆಗೆಯಿರಿ. ಲೆಕ್ಕಪತ್ರವನ್ನು
ತೆಗೆಯದೆ ತಮ್ಮನ್ನು ಸುಧಾರಣೆ ಮಾಡಿಕೊಳ್ಳುವುದು ಬಹಳ ಕಷ್ಟಸಾಧ್ಯ. ತಂದೆಯ ಮಾತನ್ನು ಪಾಲಿಸುವುದೇ
ಇಲ್ಲ ಆದ್ದರಿಂದ ಯಾರಿಗೂ ನಾವು ದುಃಖವನ್ನು ಕೊಡಲಿಲ್ಲವೆ? ಎಂದು ನಿತ್ಯವೂ ತಮ್ಮನ್ನು
ನೋಡಿಕೊಳ್ಳಬೇಕು. ಪದವಿಯು ಬಹಳ ಉನ್ನತವಾದುದಾಗಿದೆ. ಅಪಾರ ಸಂಪಾದನೆಯಿದೆ, ಇಲ್ಲವಾದರೆ
ಅಳಬೇಕಾಗುವುದು. ಹೇಗೆ ಸ್ಪರ್ಧೆಯಿರುತ್ತದೆಯಲ್ಲವೆ. ಕೆಲವರು ಲಕ್ಷಾಂತರ ರೂಪಾಯಿಗಳನ್ನು
ಸಂಪಾದಿಸುತ್ತಾರೆ, ಇನ್ನೂ ಕೆಲವರು ಹಾಗೆಯೇ ಉಳಿದುಕೊಳ್ಳುತ್ತಾರೆ.
ಈಗ ನಿಮ್ಮದು ಈಶ್ವರೀಯ
ಸ್ಪರ್ಧೆಯಾಗಿದೆ, ಇದರಲ್ಲಿ ಯಾವುದೇ ಸ್ಥೂಲವಾಗಿ ಓಡಬೇಕಾಗಿಲ್ಲ. ಕೇವಲ ಬುದ್ಧಿಯಿಂದ ಪ್ರಿಯವಾದ
ತಂದೆಯನ್ನು ನೆನಪು ಮಾಡಬೇಕಾಗಿದೆ. ಏನೇ ತಪ್ಪಾದರೂ ತಕ್ಷಣವೇ ಅದನ್ನು ತಿಳಿಸಿಬಿಡಬೇಕು. ಬಾಬಾ,
ನಮ್ಮಿಂದ ಈ ತಪ್ಪಾಯಿತು, ಕರ್ಮೇಂದ್ರಿಯಗಳಿಂದ ಈ ತಪ್ಪು ಮಾಡಿದೆವು. ತಂದೆಯು ತಿಳಿಸುತ್ತಾರೆ- ಸರಿ,
ತಪ್ಪನ್ನು ಆಲೋಚಿಸುವ ಬುದ್ಧಿಯು ಸಿಕ್ಕಿದೆ ಅಂದಮೇಲೆ ಈಗ ತಪ್ಪು ಕೆಲಸಗಳನ್ನು ಮಾಡಬೇಡಿ,
ತಪ್ಪುಕೆಲಸಗಳನ್ನು ಮಾಡಿ ನಂತರ ಬಾಬಾ ಇದನ್ನು ಕ್ಷಮಿಸಿಬಿಡಿ ಎಂದು ಹೇಳುತ್ತಾರೆ ಏಕೆಂದರೆ ತಂದೆಯು
ಈಗ ಕೇಳುವುದಕ್ಕಾಗಿ ಇಲ್ಲಿ ಕುಳಿತಿದ್ದಾರೆ. ಏನೇ ತಪ್ಪು ಕೆಲಸವಾದರೆ ತಕ್ಷಣ ತಂದೆಗೆ ತಿಳಿಸಿ ಅಥವಾ
ಬರೆಯಿರಿ- ಬಾಬಾ, ನನ್ನಿಂದ ಈ ಕೆಟ್ಟಕೆಲಸವು ನಡೆಯಿತು ಎಂದು ಸತ್ಯವಾಗಿ ಹೇಳಿದರೆ ನಿಮ್ಮದು
ಅರ್ಧಪಾಪವು ಕಳೆಯುವುದು. ಹಾಗೆಂದು ಹೇಳಿ ನಾನು ಕೃಪೆ ಮಾಡುತ್ತೇನೆಂದಲ್ಲ. ಇಲ್ಲಿ ಕ್ಷಮೆ ಅಥವಾ
ಒಂದು ಪೈಸೆಯಷ್ಟೂ ಕೃಪೆಯ ಮಾತಿಲ್ಲ. ಎಲ್ಲರೂ ಸಹ ತಮ್ಮನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ.
ತಂದೆಯ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ. ಹಿಂದಿನ ಲೆಕ್ಕಾಚಾರಗಳೂ ಸಹ ಯೋಗಬಲದಿಂದ
ತುಂಡಾಗುವುದು. ತಂದೆಯ ಮಕ್ಕಳಾದಮೇಲೂ ಸಹ ತಂದೆಯ ನಿಂದನೆ ಮಾಡಿಸಬೇಡಿ. ಸದ್ಗುರುವಿನ ನಿಂಧಕರಿಗೆ
ಪದವಿ ಸಿಗುವುದಿಲ್ಲ. ನಿಮಗೆ ಬಹಳ ಶ್ರೇಷ್ಠ ಪದವಿಯು ಸಿಗುವುದು, ಅನ್ಯಗುರುಗಳ ಬಳಿ ಯಾವುದೇ
ರಾಜ್ಯಪದವಿಯಿಲ್ಲ. ಇಲ್ಲಿ ನಿಮ್ಮ ಗುರಿ-ಧ್ಯೇಯವಿದೆ. ಭಕ್ತಿಮಾರ್ಗದಲ್ಲಿ ಯಾವುದೇ
ಗುರಿ-ಧ್ಯೇಯವಿರುವುದಿಲ್ಲ. ಒಂದುವೇಳೆ ಇದ್ದರೂ ಸಹ ಅಲ್ಪಕಾಲಕ್ಕಾಗಿ ಅಷ್ಟೇ. 21 ಜನ್ಮಗಳ
ಸುಖವೆಲ್ಲಿ! ಇಲ್ಲಿನ ಅಲ್ಪಸುಖವೆಲ್ಲಿ! ಧನದಿಂದ ಸುಖವು ಸಿಗುತ್ತದೆ ಎಂದಲ್ಲ. ಎಷ್ಟೊಂದು ದುಃಖವೂ
ಆಗುತ್ತದೆ. ತಿಳಿದುಕೊಳ್ಳಿ, ಯಾರಾದರೂ ಆಸ್ಪತ್ರೆಯನ್ನು ಕಟ್ಟಿಸುತ್ತಾರೆಂದರೆ ಇನ್ನೊಂದು
ಜನ್ಮದಲ್ಲಿ ರೋಗವು ಕಡಿಮೆಯಾಗುವುದು, ಹೆಚ್ಚು ವಿದ್ಯೆಯೂ ಸಿಗುತ್ತದೆ, ಧನವು ಸಿಗುತ್ತದೆ ಎಂದಲ್ಲ.
ಅದಕ್ಕಾಗಿ ಪುನಃ ಎಲ್ಲವನ್ನೂ ಮಾಡಬೇಕಾಗುತ್ತದೆ. ಯಾರಾದರೂ ಧರ್ಮಶಾಲೆಯನ್ನು ಕಟ್ಟಿಸಿದರೆ ಇನ್ನೊಂದು
ಜನ್ಮದಲ್ಲಿ ಮಹಲು ಸಿಗುವುದು ಆದರೆ ಅವರು ಆರೋಗ್ಯವಂತರಾಗಿರುತ್ತಾರೆ ಎಂದಲ್ಲ. ತಂದೆಯು ಎಷ್ಟೊಂದು
ಮಾತುಗಳನ್ನು ತಿಳಿಸುತ್ತಾರೆ. ಈ ಮಾತನ್ನು ಕೆಲವರು ಚೆನ್ನಾಗಿ ತಿಳಿದುಕೊಂಡು ಅನ್ಯರಿಗೂ
ತಿಳಿಸುತ್ತಾರೆ. ಇನ್ನೂ ಕೆಲವರು ತಿಳಿದುಕೊಳ್ಳುವುದೇ ಇಲ್ಲ ಆದ್ದರಿಂದ ಪ್ರತಿನಿತ್ಯವೂ
ಲೆಕ್ಕಪತ್ರವನ್ನು ತೆಗೆಯಿರಿ. ಇಂದು ನಾನು ಯಾವ ಪಾಪವನ್ನು ಮಾಡಿದೆನು? ಈ ಮಾತಿನಲ್ಲಿ
ಅನುತ್ತೀರ್ಣನಾದೆನು, ಅದಕ್ಕೆ ತಂದೆಯು ಸಲಹೆ ನೀಡುತ್ತಾರೆ- ಇಂತಹ ಕೆಲಸವನ್ನು ಮಾಡಬಾರದು. ನೀವು
ತಿಳಿದುಕೊಂಡಿದ್ದೀರಿ- ಈಗ ನಾವು ಸ್ವರ್ಗದಲ್ಲಿ ಹೋಗುತ್ತೇವೆ ಆದರೆ ನೀವು ಮಕ್ಕಳಿಗೆ ಇದು
ನಶೆಯೇರುವುದೇ ಇಲ್ಲ. ಈ ಬ್ರಹ್ಮಾತಂದೆಗಂತೂ ಎಷ್ಟೊಂದು ಖುಷಿಯಿದೆ- ನಾನು ವೃದ್ಧನಾಗಿದ್ದೇನೆ, ಈ
ಶರೀರವನ್ನು ಬಿಟ್ಟುಹೋಗಿ ನಾನು ರಾಜಕುಮಾರನಾಗುತ್ತೇನೆ, ನೀವೂ ಸಹ ಇವರಹಾಗೆ ಓದಿರಿ ಅಂದಮೇಲೆ
ಖುಷಿಯ ನಶೆಯೇರಬೇಕು. ಆದರೆ ತಂದೆಯನ್ನು ನೆನಪೇ ಮಾಡುವುದಿಲ್ಲ. ತಂದೆಯು ಎಷ್ಟೊಂದು ಸಹಜವಾಗಿ
ತಿಳಿಸುತ್ತಾರೆ- ಆ ಆಂಗ್ಲಭಾಷೆ ಇತ್ಯಾದಿಯನ್ನು ಓದುವುದರಲ್ಲಿ ಎಷ್ಟೊಂದು ತಲೆಕೆಟ್ಟುಹೋಗುತ್ತದೆ.
ಬಹಳ ಕಷ್ಟವಾಗಿರುತ್ತದೆ. ಆದರೆ ಈ ಜ್ಞಾನವು ಬಹಳ ಸಹಜವಾಗಿದೆ, ಈ ಆತ್ಮಿಕ ವಿದ್ಯೆಯಿಂದ ನೀವು
ಶೀತಲರಾಗಿಬಿಡುತ್ತೀರಿ. ಆದ್ದರಿಂದ ನೀವು ಕೇವಲ ತಂದೆಯನ್ನು ನೆನಪು ಮಾಡುತ್ತಾ ಇರಿ ಆಗ ಒಮ್ಮೆಲೆ
ಎಲ್ಲಾ ಅಂಗಗಳು ಶೀತಲವಾಗಿಬಿಡುತ್ತವೆ. ಶರೀರವಂತೂ ನಿಮಗೆ ಇದೆಯಲ್ಲವೆ. ಶಿವತಂದೆಗೆ ತಮ್ಮದೇ ಆದ
ಶರೀರವಿಲ್ಲ. ಶ್ರೀಕೃಷ್ಣನಿಗೆ ಅಂಗಗಳಿವೆ. ಕೃಷ್ಣನ ಅಂಗಗಳಂತೂ ಶೀತಲವಾಗಿಯೇ ಇದೆ. ಆದ್ದರಿಂದ
ಕೃಷ್ಣನ ಹೆಸರನ್ನಿಟ್ಟುಬಿಟ್ಟಿದ್ದಾರೆ. ಈಗ ಅವರ ಸಂಗ ಹೇಗೆ ಮಾಡುವುದು? ಏಕೆಂದರೆ ಕೃಷ್ಣನಿರುವುದು
ಸತ್ಯಯುಗದಲ್ಲಿ. ಅವರ ಅಂಗಗಳನ್ನೂ ಸಹ ಶೀತಲವನ್ನಾಗಿ ಯಾರು ಮಾಡಿದರು? ಇದನ್ನು ನೀವೀಗ
ತಿಳಿದುಕೊಂಡಿದ್ದೀರಿ ಆದ್ದರಿಂದ ನೀವು ಮಕ್ಕಳಿಗೂ ಸಹ ಬಹಳಷ್ಟು ಧಾರಣೆಯಿರಬೇಕು. ಜಗಳ-ಕಲಹ
ಮಾಡುವಂತಿಲ್ಲ. ಸತ್ಯವನ್ನೇ ನುಡಿಯಬೇಕಾಗಿದೆ. ಸುಳ್ಳು ಹೇಳುವುದರಿಂದ ಸತ್ಯನಾಶವಾಗಿಬಿಡುತ್ತದೆ.
ತಂದೆಯು ನೀವು ಮಕ್ಕಳಿಗೆ
ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಇಂತಹ ಒಳ್ಳೊಳ್ಳೆಯ ಚಿತ್ರಗಳನ್ನು ಮಾಡಿಸಿ, ಅದು ಎಲ್ಲರ
ಬಳಿಯೂ ಹೋಗಲಿ. ಯಾವುದೇ ಒಳ್ಳೆಯ ವಸ್ತುಗಳನ್ನು ನೋಡಿದರೆ ನೀವೂ ಸಹ ಹೋಗಿ ನೋಡಿ ಎಂದು ಹೇಳುತ್ತಾರೆ.
ಹಾಗೆಯೇ ಇಲ್ಲಿ ತಿಳಿಸಿಕೊಡುವವರೂ ಸಹ ಬುದ್ಧಿವಂತರಿರಬೇಕು. ಸರ್ವೀಸ್ ಮಾಡುವುದನ್ನು ಕಲಿಯಬೇಕಾಗಿದೆ.
ತಮ್ಮ ಸಮಾನರನ್ನಾಗಿ ಮಾಡುವ ಒಳ್ಳೆಯ ಬ್ರಾಹ್ಮಣಿಯರು ಬೇಕು. ಯಾರು ತಮ್ಮ ಸಮಾನ ಮ್ಯಾನೇಜರ್ನ್ನು
ಮಾಡುವರೋ ಅವರಿಗೆ ಒಳ್ಳೆಯ ಬ್ರಾಹ್ಮಿಣಿಯೆಂದು ಹೇಳಲಾಗುತ್ತದೆ. ಅವರು ಶ್ರೇಷ್ಠಪದವಿಯನ್ನೇ
ಪಡೆಯುತ್ತಾರೆ. ಇದರಲ್ಲಿ ಬೇಬಿ ಬುದ್ಧಿಯಿರಬಾರದು (ಹುಡುಗಾಟಿಕೆಯ ಬುದ್ಧಿ). ಒಂದುವೇಳೆ ಇದ್ದರೆ
ಎಳೆದುಕೊಂಡು ಹೋಗುತ್ತಾರೆ. ರಾವಣನ ಸಂಪ್ರದಾಯವಲ್ಲವೆ. ಆದ್ದರಿಂದ ಇಂತಹ ಬ್ರಾಹ್ಮಿಣಿಯರನ್ನು ತಯಾರು
ಮಾಡಿ, ಅವರು ನಂತರ ಸೇವಾಕೇಂದ್ರವನ್ನು ಸಂಭಾಲನೆ ಮಾಡುವಂತಿರಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಗೆ
ತಮ್ಮ ವಿದ್ಯೆಯ ಶೌರ್ಯವನ್ನು ತೋರಿಸಬೇಕಾಗಿದೆ. ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಕಾರ್ಯದಲ್ಲಿ
ತೊಡಗಬೇಕಾಗಿದೆ. ಮೊದಲು ತಮ್ಮ ಉನ್ನತಿಯ ವಿಚಾರ ಮಾಡಬೇಕಾಗಿದೆ. ಕ್ಷೀರಖಂಡವಾಗಿರಬೇಕಾಗಿದೆ.
2. ಯಾವುದೇ ತಪ್ಪಾದರೆ
ತಂದೆಯಿಂದ ಕ್ಷಮೆ ಕೇಳಿ ತಮ್ಮನ್ನು ತಾವೇ ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ತಂದೆಯು ಕೃಪೆ
ತೋರುವುದಿಲ್ಲ. ತಂದೆಯ ನೆನಪಿನಿಂದ ವಿಕರ್ಮಗಳನ್ನು ವಿನಾಶ ಮಾಡಿಕೊಳ್ಳಬೇಕಾಗಿದೆ. ಯಾವುದೇ ನಿಂದನೆ
ಮಾಡಿಸುವಂತಹ ಕರ್ಮವನ್ನು ಮಾಡಬಾರದು.
ವರದಾನ:
ಜ್ಞಾನ
ಪೂರ್ಣತೆಯ ವಿಶೇಷತೆಯ ಮೂಲಕ ಸಂಸ್ಕಾರಗಳ ಘರ್ಷಣೆಯಿಂದ ರಕ್ಷಿಸಿಕೊಳ್ಳುವಂತಹ ಕಮಲ ಪುಷ್ಪ ಸಮಾನ
ನ್ಯಾರಾ ಅಥವಾ ಸಾಕ್ಷಿ ಭವ
ಸಂಸ್ಕಾರವಂತೂ
ಅಂತ್ಯದವರೆಗೆ ಅವರ ದಾಸಿಯಾಗಿರುತ್ತದೆ, ಕೆಲವರದು ರಾಜನ ಸಂಸ್ಕಾರ, ಸಂಸ್ಕಾರ ಬದಲಾಗಲಿ ಎಂದು
ಇದಕ್ಕಾಗಿ ಕಾಯಬೇಡಿ. ಆದರೆ ನನ್ನ ಮೇಲೆ ಯಾರದೇ ಸಂಸ್ಕಾರದ ಪ್ರಭಾವ ಬೀರದಿರಲಿ ಏಕೆಂದರೆ ಒಂದು
ಪ್ರತಿಯೊಬ್ಬರ ಸಂಸ್ಕಾರ ಭಿನ್ನವಾಗಿದೆ ಇನ್ನೊಂದು ಮಾಯೆ ಕೂಡ ರೂಪ ಬದಲಿಸಿಕೊಂಡು ಬರುತ್ತದೆ
ಆದ್ದರಿಂದ ಯಾವುದೇ ಮಾತಿನ ನಿರ್ಣಯ ಮರ್ಯಾದೆಯ ಗೆರೆಯ ಒಳಗೆ ಇರುತ್ತಾ ಮಾಡಿ, ಭಿನ್ನ-ಭಿನ್ನ
ಸಂಸ್ಕಾರಗಳಿದ್ದರೂ ಘರ್ಷಣೆ ಇಲ್ಲದಿರಲಿ ಅದಕ್ಕಾಗಿ ಜ್ಞಾನಪೂರ್ಣರಾಗಿ ಕಮಲ ಪುಷ್ಪ ಸಮಾನ ನ್ಯಾರಾ
ಅಥವಾ ಸಾಕ್ಷಿಯಾಗಿರಿ.
ಸ್ಲೋಗನ್:
ಹಠ ಹಾಗೂ
ಪರಿಶ್ರಮ ಪಡುವ ಬದಲು ರಮಣೀಕತೆಯಿಂದ ಪುರುಷಾರ್ಥ ಮಾಡಿ
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ಪವಿತ್ರತೆಯು
ಸುಖ-ಶಾಂತಿಯ ಜನನಿಯಾಗಿದೆ. ಎಲ್ಲಿ ಪವಿತ್ರತೆಯಿದೆ ಅಲ್ಲಿ ದುಃಖ-ಅಶಾಂತಿ ಬರಲು ಸಾಧ್ಯವಿಲ್ಲ. ಚೆಕ್
ಮಾಡಿ ಸದಾ ಸುಖದ ಹಾಸಿಗೆ ಮೇಲೆ ಆರಾಮದಿಂದ ಅರ್ಥಾತ್ ಶಾಂತ ಸ್ವರೂಪದಲ್ಲಿ ವಿರಾಜಮಾನರಾಗಿರುತ್ತೀರಾ?
ಒಳಗಡೆ ಏಕೆ, ಏನು ಮತ್ತು ಹೇಗೆ ಎನ್ನುವುದರ ದ್ವಂದ್ವವಿರುತ್ತದೆಯೇ ಅಥವಾ ಈ ದ್ವಂದ್ವದಿಂದಲೂ ದೂರ
ಸುಖ ಸ್ವರೂಪ ಸ್ಥಿತಿಯಲ್ಲಿರುತ್ತೀರಿ?