13.06.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಈ ಬೇಹದ್ದಿನ ಆಟದಲ್ಲಿ ನೀವು ಆತ್ಮರೂಪಿ ನಟರು ಪಾತ್ರಧಾರಿಗಳಾಗಿದ್ದೀರಿ, ನಿಮ್ಮ ನಿವಾಸ ಸ್ಥಾನವು ಮಧುರ ಶಾಂತಿಧಾಮವಾಗಿದೆ, ಅಲ್ಲಿಗೆ ಈಗ ಹೋಗಬೇಕಾಗಿದೆ”

ಪ್ರಶ್ನೆ:
ಯಾರು ಡ್ರಾಮಾದ ಆಟವನ್ನು ಯಥಾರ್ಥ ರೀತಿಯಿಂದ ಅರಿತುಕೊಂಡಿದ್ದಾರೆಯೋ ಅವರ ಬಾಯಿಂದ ಯಾವ ಶಬ್ಧಗಳು ಬರಲು ಸಾಧ್ಯವಿಲ್ಲ?

ಉತ್ತರ:
ಇದು ಈ ರೀತಿ ಆಗದಿದ್ದರೆ ಹೀಗೆ ಆಗುತ್ತಿತ್ತು...... ಹೀಗೆ ಆಗಬಾರದಿತ್ತು, ಇಂತಹ ಶಬ್ಧಗಳು ಡ್ರಾಮಾದ ಆಟವನ್ನು ಅರಿತುಕೊಂಡಿರುವವರು ಹೇಳುವುದಿಲ್ಲ. ನೀವು ಮಕ್ಕಳಿಗೆ ತಿಳಿದಿದೆ- ಈ ಡ್ರಾಮಾದ ಆಟವು ಹೇನಿನ ತರಹ ನಿಧಾನವಾಗಿ ಸುತ್ತುತ್ತಿರುತ್ತದೆ. ಏನೆಲ್ಲವೂ ಆಗುವುದೋ ಎಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾವುದೇ ಚಿಂತೆಯ ಮಾತಿಲ್ಲ.

ಓಂ ಶಾಂತಿ.
ತಂದೆಯು ಮಕ್ಕಳಿಗೆ ತನ್ನ ಪರಿಚಯವನ್ನು ಕೊಟ್ಟಾಗ ಮಕ್ಕಳಿಗೆ ತನ್ನ ಪರಿಚಯವೂ ಸಿಕ್ಕಿಬಿಡುತ್ತದೆ. ಎಲ್ಲಾ ಮಕ್ಕಳು ಬಹಳ ಸಮಯದಿಂದ ದೇಹಾಭಿಮಾನಿಯಾಗಿರುತ್ತೀರಿ. ದೇಹೀ-ಅಭಿಮಾನಿಗಳಾದರೆ ತಂದೆಯ ಯಥಾರ್ಥ ಪರಿಚಯವಿರುವುದು. ಆದರೆ ಡ್ರಾಮಾದಲ್ಲಿ ಈ ರೀತಿಯಿಲ್ಲ. ಭಗವಂತನು ಪರಮಾತ್ಮನಾಗಿದ್ದಾರೆ, ರಚಯಿತನಾಗಿದ್ದಾರೆ ಎಂದು ಭಲೆ ಹೇಳುತ್ತಾರೆ ಆದರೆ ತಿಳಿದುಕೊಂಡಿಲ್ಲ. ಶಿವಲಿಂಗದ ಚಿತ್ರವೂ ಇದೆ ಆದರೆ ತಂದೆಯು ಇಷ್ಟು ದೊಡ್ಡರೂಪದಲ್ಲಂತೂ ಇಲ್ಲ. ಯಥಾರ್ಥ ರೀತಿಯಿಂದ ಅರಿತುಕೊಳ್ಳದ ಕಾರಣ ತಂದೆಯನ್ನು ಮರೆತುಹೋಗುತ್ತಾರೆ. ತಂದೆಯು ರಚಯಿತನಾಗಿದ್ದಾರೆ. ಅವಶ್ಯವಾಗಿ ಹೊಸ ಪ್ರಪಂಚವನ್ನೇ ರಚಿಸುತ್ತಾರೆ ಅಂದಮೇಲೆ ನಾವು ಮಕ್ಕಳಿಗೆ ಹೊಸ ಪ್ರಪಂಚದ ರಾಜಧಾನಿಯ ಆಸ್ತಿಯು ಅವಶ್ಯವಾಗಿ ಬೇಕು. ಸ್ವರ್ಗದ ಹೆಸರು ಭಾರತದಲ್ಲಿ ಪ್ರಸಿದ್ಧವಾಗಿದೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಇಂತಹವರು ಸ್ವರ್ಗಸ್ಥರಾದರೆಂದು ಹೇಳುತ್ತಾರೆ ಆದರೆ ಈ ರೀತಿ ಎಂದಾದರೂ ಆಗುತ್ತದೆಯೇ? ನೀವೀಗ ತಿಳಿದುಕೊಳ್ಳುತ್ತೀರಿ- ನಾವೂ ಸಹ ತುಚ್ಛಬುದ್ಧಿಯವರಾಗಿದ್ದೆವು, ನಂಬರ್ವಾರ್ ಎಂದು ಹೇಳುತ್ತಾರಲ್ಲವೆ. ಮುಖ್ಯವಾದವರಿಗೆ ಈ ತಿಳುವಳಿಕೆಯಾಗಿದೆ- ನಾನು ಇವರಲ್ಲಿ ಬಹಳ ಜನ್ಮಗಳ ಅಂತಿಮ ಶರೀರದಲ್ಲಿ ಬರುತ್ತೇನೆ, ಇವರು ಮೊಟ್ಟಮೊದಲಿಗನಾಗಿದ್ದಾರೆ. ನಾವೀಗ ಅವರ ಮಕ್ಕಳು ಬ್ರಾಹ್ಮಣರಾಗಿದ್ದೀವೆಂದು ಮಕ್ಕಳು ತಿಳಿಯುತ್ತೀರಿ. ಇವೆಲ್ಲವೂ ತಿಳುವಳಿಕೆಯ ಮಾತಾಗಿದೆ. ತಂದೆಯು ಇಷ್ಟೊಂದು ಸಮಯದಿಂದ ತಿಳಿಸುತ್ತಲೇ ಇರುತ್ತಾರೆ. ಇಲ್ಲದಿದ್ದರೆ ತಂದೆಯನ್ನರಿತುಕೊಳ್ಳುವುದು ಒಂದು ಸೆಕೆಂಡಿನ ಮಾತಾಗಿದೆ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನಿಶ್ಚಯವಾದ ಮೇಲೆ ಯಾವುದೇ ಮಾತಿನ ಪ್ರಶ್ನೆಯೇಳಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ನೀವು ಶಾಂತಿಧಾಮದಲ್ಲಿದ್ದಾಗ ಪಾವನರಾಗಿದ್ದಿರಿ, ಈ ಮಾತುಗಳನ್ನೂ ಸಹ ನೀವೇ ತಂದೆಯ ಮೂಲಕ ಕೇಳುತ್ತೀರಿ ಮತ್ತ್ಯಾರೂ ಕೇಳಲು ಸಾಧ್ಯವಿಲ್ಲ. ನಾವಾತ್ಮಗಳು ಎಲ್ಲಿಯ ನಿವಾಸಿಗಳೆಂದು ನಿಮಗೆ ಅರ್ಥವಾಗಿದೆ. ಹೇಗೆ ನಾಟಕದ ಪಾತ್ರಧಾರಿಗಳು ನಾವು ಇಲ್ಲಿನ ನಿವಾಸಿಗಳಾಗಿದ್ದೇವೆಂದು ಹೇಳುತ್ತಾರೆ. ವಸ್ತ್ರಗಳನ್ನೂ ಬದಲಾಯಿಸಿ ಸ್ಟೇಜಿನ ಮೇಲೆ ಬರುತ್ತಾರೆ. ಈಗ ನಾವು ಎಲ್ಲಿಯ ನಿವಾಸಿಗಳೆಂದು ನೀವು ತಿಳಿದುಕೊಂಡಿದ್ದೀರಿ. ಇದು ಒಂದು ನಾಟಕಶಾಲೆಯಾಗಿದೆ. ಈಗ ಇದು ಬುದ್ಧಿಯಲ್ಲಿ ಬಂದಿದೆ- ನಾನು ಮೂಲವತನದ ನಿವಾಸಿಯಾಗಿದ್ದೇನೆ. ಯಾವುದಕ್ಕೆ ಮಧುರಮನೆಯೆಂದು ಹೇಳಲಾಗುತ್ತದೆ, ಇದಕ್ಕಾಗಿಯೇ ಎಲ್ಲರೂ ಬಯಸುತ್ತಾರೆ. ಏಕೆಂದರೆ ಆತ್ಮವು ದುಃಖಿಯಾಗಿದೆಯಲ್ಲವೆ. ಆದ್ದರಿಂದ ನಾವು ಹೇಗೆ ಮನೆಗೆ ಹಿಂತಿರುಗಿ ಹೋಗುವುದೆಂದು ಹೇಳುತ್ತಾರೆ. ಮನೆಯ ಬಗ್ಗೆ ತಿಳಿಯದ ಕಾರಣ ಅಲೆದಾಡುತ್ತಾರೆ. ನೀವೀಗ ಅಲೆದಾಡುವುದಿಲ್ಲ, ಮುಕ್ತರಾದಿರಿ. ಮಕ್ಕಳಿಗೆ ಅರ್ಥವಾಗಿಬಿಟ್ಟಿದೆ- ನಾವೀಗ ನಿಜವಾಗಿಯೂ ಮನೆಗೆ ಹೋಗಬೇಕಾಗಿದೆ. ನಾನಾತ್ಮನು ಎಷ್ಟು ಚಿಕ್ಕ ಬಿಂದುವಾಗಿದ್ದೇನೆ. ಇದೂ ಸಹ ಅದ್ಭುತವಾಗಿದೆ, ಇದಕ್ಕೆ ಸೃಷ್ಟಿಯೆಂದು ಹೇಳಲಾಗಿದೆ. ಇಷ್ಟು ಚಿಕ್ಕದಾದ ಆತ್ಮನಲ್ಲಿ ಎಷ್ಟೊಂದು ಪಾತ್ರವು ಅಡಕವಾಗಿದೆ. ಪರಮಪಿತ ಪರಮಾತ್ಮನು ಹೇಗೆ ಪಾತ್ರವನ್ನಭಿನಯಿಸುತ್ತಾರೆ ಎಂಬುದನ್ನೂ ಸಹ ನೀವು ಅರಿತುಕೊಂಡಿದ್ದೀರಿ. ಎಲ್ಲರಿಗಿಂತ ಮುಖ್ಯ ಪಾತ್ರಧಾರಿಯೇ ಅವರಾಗಿದ್ದಾರೆ. ಮಾಡಿ-ಮಾಡಿಸುವವರು ಆಗಿದ್ದಾರಲ್ಲವೆ. ನೀವು ಮಧುರಾತಿ ಮಧುರ ಮಕ್ಕಳಿಗೆ ಇದೀಗ ಅರ್ಥವಾಗಿದೆ- ನಾವಾತ್ಮಗಳು ಶಾಂತಿಧಾಮದಿಂದ ಬರುತ್ತೇವೆ, ಆತ್ಮಗಳೇನು ಹೊಸದಾಗಿ ತಯಾರಾಗಿ ಶರೀರದಲ್ಲಿ ಪ್ರವೇಶ ಮಾಡುವುದಿಲ್ಲ. ಆತ್ಮಗಳೆಲ್ಲರೂ ಮಧುರ ಶಾಂತಿಧಾಮದಲ್ಲಿರುತ್ತಾರೆ, ಅಲ್ಲಿಂದ ಪಾತ್ರವನ್ನಭಿನಯಿಸಲು ಬರುತ್ತಾರೆ. ಇದು ಆಟವಾಗಿದೆ, ಎಲ್ಲರೂ ಪಾತ್ರವನ್ನು ಅಭಿನಯಿಸಬೇಕಾಗಿದೆ, ಈ ಸೂರ್ಯ, ಚಂದ್ರ, ನಕ್ಷತ್ರಗಳು... ಇವೆಲ್ಲವೂ ದೀಪಗಳಾಗಿವೆ. ಈ ಸೃಷ್ಟಿನಾಟಕದಲ್ಲಿ ರಾತ್ರಿ ಮತ್ತು ದಿನದ ಆಟವು ನಡೆಯುತ್ತದೆ. ಸೂರ್ಯದೇವತಾಯ ನಮಃ, ಚಂದ್ರ ದೇವತಾಯ ನಮಃ... ಎಂದು ಹೇಳುತ್ತಾರೆ ಆದರೆ ವಾಸ್ತವದಲ್ಲಿ ಇವೇನೂ ದೇವತೆಗಳಲ್ಲ. ಈ ಆಟವನ್ನು ಕುರಿತು ಯಾರಿಗೂ ತಿಳಿದಿಲ್ಲ. ಸೂರ್ಯ-ಚಂದ್ರರಿಗೂ ದೇವತೆಗಳೆಂದು ಹೇಳಿಬಿಡುತ್ತಾರೆ. ವಾಸ್ತವದಲ್ಲಿ ಇವು ಈ ಇಡೀ ವಿಶ್ವದ ನಾಟಕಕ್ಕಾಗಿ ದೀಪಗಳಾಗಿವೆ. ನಾವು ಮಧುರ ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ನಾವಿಲ್ಲಿ ಪಾತ್ರವನ್ನಭಿನಯಿಸುತ್ತಿದ್ದೇವೆ. ಈ ಚಕ್ರವು ಹೇನಿನ ತರಹ ನಿಧಾನವಾಗಿ ಸುತ್ತುತ್ತಿರುತ್ತದೆ. ಏನೆಲ್ಲವೂ ಆಗುತ್ತದೆಯೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ. ಈ ರೀತಿ ಆಗದೇ ಇದ್ದಿದ್ದರೆ ಹೀಗಾಗುತ್ತಿತ್ತು ಎಂದು ಹೇಳುವಂತಿಲ್ಲ. ಇದು ನಾಟಕವಲ್ಲವೆ. ಉದಾ: (ಮಮ್ಮಾರವರೊಂದಿಗೆ) ಹೇಗೆ ನಿಮ್ಮ ತಾಯಿಯಿದ್ದರು ಅವರು ಹೊರಟುಹೋಗುವರೆಂದು ಸಂಕಲ್ಪದಲ್ಲಿಯೂ ಇರಲಿಲ್ಲ. ಒಳ್ಳೆಯದು- ಅವರು ಶರೀರವನ್ನು ಬಿಟ್ಟರು. ಇದೂ ಡ್ರಾಮ. ಈಗ ಅವರು ಹೊಸ ಪಾತ್ರವನ್ನಭಿನಯಿಸುತ್ತಿದ್ದಾರೆ. ಯಾವುದೇ ಚಿಂತೆಯ ಮಾತಿಲ್ಲ. ನಾವು ಪಾತ್ರಧಾರಿಗಳಾಗಿದ್ದೇವೆ, ಇದು ಸೋಲು-ಗೆಲುವಿನ ಆಟವಾಗಿದೆ ಎಂಬುದು ನೀವು ಮಕ್ಕಳ ಬುದ್ಧಿಯಲ್ಲಿದೆ. ಈ ಸೋಲು-ಗೆಲುವಿನ ಆಟವು ಮಾಯೆಯ ಮೇಲೆ ಆಧಾರಿತವಾಗಿದೆ, ಮಾಯೆಯಿಂದ ಸೋಲುವುದೇ ಸೋಲು, ಮಾಯೆಯನ್ನು ಗೆಲ್ಲುವುದೇ ಗೆಲುವು. ಇವನು ರಾವಣನಾಗಿದ್ದಾನೆ, ಇದಕ್ಕೆ ಮಾಯೆಯೆಂದು ಹೇಳಲಾಗುತ್ತದೆ. ಧನಕ್ಕೆ ಸಂಪತ್ತೆಂದು ಹೇಳುತ್ತಾರೆ, ಮಾಯೆಯೆಂದು ಹೇಳುವುದಿಲ್ಲ. ಇವರ ಬಳಿ ಬಹಳಷ್ಟು ಹಣವಿದೆಯೆಂದು, ಇದು ಮಾಯೆಯ ನಶೆಯೆಂದು ಹೇಳಿಬಿಡುತ್ತಾರೆ. ಆದರೆ ಮಾಯೆಯ ನಶೆಯಿರುತ್ತದೆಯೇ! ನಾವು ಮಾಯೆಯನ್ನು ಗೆಲ್ಲುವ ಪ್ರಯತ್ನ ಪಡುತ್ತೇವೆ ಅಂದಮೇಲೆ ಇದರಲ್ಲಿ ಯಾವುದೇ ಮಾತಿನಲ್ಲಿ ಸಂಶಯವನ್ನು ತರಬಾರದು. ಸ್ಥಿತಿಯು ಇನ್ನೂ ಪರಿಪಕ್ವವಾಗಿಲ್ಲದ ಕಾರಣ ಸಂಶಯವು ಬರುತ್ತದೆ. ಈ ಭಗವಾನುವಾಚ ಯಾರ ಪ್ರತಿ? ಆತ್ಮಗಳ ಪ್ರತಿ. ಭಗವಂತನು ಅವಶ್ಯವಾಗಿ ಆತ್ಮಗಳ ಪ್ರತಿ ಹೇಳಬೇಕಾದರೆ ಶಿವನೇ ಆಗಿರಬೇಕು. ಕೃಷ್ಣನು ದೇಹಧಾರಿಯಾಗಿದ್ದಾನೆ ಅಂದಮೇಲೆ ಆತ್ಮಗಳ ಪ್ರತಿ ಹೇಗೆ ಹೇಳುತ್ತಾರೆ! ನಿಮಗೆ ಯಾವುದೇ ದೇಹಧಾರಿಯು ಜ್ಞಾನವನ್ನು ತಿಳಿಸುತ್ತಿಲ್ಲ. ತಂದೆಗೆ ದೇಹವಂತೂ ಇಲ್ಲ, ಮತ್ತೆಲ್ಲರಿಗೂ ದೇಹವಿದೆ. ಯಾರ ಪೂಜೆ ಮಾಡುವರೋ ಅವರನ್ನು ನೆನಪು ಮಾಡುವುದು ಬಹಳ ಸಹಜವಾಗಿದೆ. ಬ್ರಹ್ಮಾ-ವಿಷ್ಣು-ಶಂಕರನಿಗೆ ದೇವತೆಗಳೆಂದು, ಶಿವನಿಗೆ ಭಗವಂತನೆಂದು ಹೇಳುತ್ತಾರೆ. ಶ್ರೇಷ್ಠಾತಿಶ್ರೇಷ್ಠ ಭಗವಂತನಿಗೆ ದೇಹವಿಲ್ಲ. ಇದನ್ನು ನೀವೀಗ ತಿಳಿದುಕೊಂಡಿದ್ದೀರಿ- ಆತ್ಮಗಳು ಮೂಲವತನದಲ್ಲಿದ್ದಾಗ ನಿಮಗೆ ದೇಹವಿತ್ತೆ? ನೀವಾತ್ಮಗಳಾಗಿದ್ದೀರಿ, ಈ ತಂದೆಯೂ ಆತ್ಮನಾಗಿದ್ದಾರೆ. ಕೇವಲ ಅವರು ಪರಮ ಆತ್ಮನಾಗಿದ್ದಾರೆ. ಅವರ ಪಾತ್ರದ ಗಾಯನವಿದೆ. ಪಾತ್ರವನ್ನಭಿನಯಿಸಿ ಹೋಗಿದ್ದಾರೆ, ಆದ್ದರಿಂದಲೇ ಪೂಜೆಯೂ ನಡೆಯುತ್ತದೆ ಆದರೆ 5000 ವರ್ಷಗಳಿಗೂ ಮೊದಲು ಸಹ ಪರಮಪಿತ ಪರಮಾತ್ಮ ರಚಯಿತನು ಬಂದಿದ್ದರು, ಅವರೇ ಸ್ವರ್ಗದ ರಚಯಿತನೆಂದು ತಿಳಿದಿರುವ ಮನುಷ್ಯರು ಯಾರೊಬ್ಬರೂ ಇಲ್ಲ. ತಂದೆಯು ಪ್ರತೀ 5000 ವರ್ಷಗಳ ನಂತರ ಕಲ್ಪದ ಸಂಗಮದಲ್ಲಿ ಬರುತ್ತಾರೆ ಆದರೆ ಕಲ್ಪದ ಆಯಸ್ಸನ್ನು ಬಹಳ ಉದ್ದಗಲ ಮಾಡಿರುವ ಕಾರಣ ಎಲ್ಲರೂ ಮರೆತುಹೋಗಿದ್ದಾರೆ. ನೀವು ಮಕ್ಕಳಿಗೆ ತಂದೆಯು ತಿಳಿಸಿಕೊಡುತ್ತಾರೆ- ಬಾಬಾ, ನಾವು ತಮ್ಮಿಂದ ಕಲ್ಪ-ಕಲ್ಪವೂ ಮಿಲನ ಮಾಡುತ್ತೇವೆ, ಹಾಗೂ ತಮ್ಮಿಂದ ಆಸ್ತಿಯನ್ನು ಪಡೆಯುತ್ತೇವೆಂದು ನೀವೇ ಹೇಳುತ್ತೀರಿ. ಮತ್ತೆ ಹೇಗೆ ಕಳೆದುಕೊಳ್ಳುತ್ತೇವೆ ಎಂಬುದೂ ಸಹ ಬುದ್ಧಿಯಲ್ಲಿದೆ. ಅನೇಕ ಪ್ರಕಾರದ ಜ್ಞಾನವಿದೆ, ಆದರೆ ಜ್ಞಾನಸಾಗರನೆಂದು ಭಗವಂತನಿಗೇ ಹೇಳಲಾಗುತ್ತದೆ. ಅವಶ್ಯವಾಗಿ ವಿನಾಶವಾಗುವುದೆಂಬ ಮಾತನ್ನು ಎಲ್ಲರೂ ತಿಳಿದುಕೊಳ್ಳುತ್ತಾರೆ. ಮೊದಲೂ ವಿನಾಶವಾಗಿತ್ತು ಆದರೆ ಹೇಗಾಗಿತ್ತು ಎಂದು ಯಾರಿಗೂ ಗೊತ್ತಿಲ್ಲ. ಶಾಸ್ತ್ರಗಳಲ್ಲಿ ವಿನಾಶದ ಬಗ್ಗೆ ಏನೇನನ್ನೋ ಬರೆದುಬಿಟ್ಟಿದ್ದಾರೆ. ಪಾಂಡವರು ಮತ್ತು ಕೌರವರ ಯುದ್ಧವು ಹೇಗೆ ನಡೆಯಲು ಸಾಧ್ಯ!

ನೀವು ಬ್ರಾಹ್ಮಣರು ಈಗ ಸಂಗಮಯುಗದಲ್ಲಿದ್ದೀರಿ, ಬ್ರಾಹ್ಮಣರ ಯಾವುದೇ ಯುದ್ಧವಿಲ್ಲ, ತಂದೆಯು ತಿಳಿಸುತ್ತಾರೆ- ನೀವು ನನ್ನ ಮಕ್ಕಳು ಡಬಲ್ ಅಹಿಂಸಕರಾಗಿದ್ದೀರಿ. ನೀವೀಗ ನಿರ್ವಿಕಾರಿಗಳಾಗುತ್ತಿದ್ದೀರಿ. ನೀವೇ ತಂದೆಯಿಂದ ಕಲ್ಪ-ಕಲ್ಪವೂ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ಜ್ಞಾನವು ಬಹಳ ಸಹಜವಾಗಿದೆ, 84 ಜನ್ಮಗಳ ಚಕ್ರವೂ ನಿಮ್ಮ ಬುದ್ಧಿಯಲ್ಲಿದೆ. ಈಗ ನಾಟಕವು ಪೂರ್ಣವಾಗುತ್ತದೆ, ಇನ್ನು ಸ್ವಲ್ಪವೇ ಸಮಯವಿದೆ. ನಿಮಗೆ ತಿಳಿದಿದೆ- ಈಗ ಇಂತಹ ಸಮಯವು ಬರುವುದಿದೆ, ಸಾಹುಕಾರರಿಗೂ ಸಹ ಆಹಾರವು ಸಿಗುವುದಿಲ್ಲ, ನೀರೂ ಸಹ ಸಿಗುವುದಿಲ್ಲ. ಇದಕ್ಕೆ ದುಃಖದ ಪರ್ವತವೆಂದು ಹೇಳಲಾಗುತ್ತದೆ, ನಿರಪರಾಧಿಗಳ ಕೊಲೆಯೂ ಆಟವಲ್ಲವೆ. ಇಷ್ಟೆಲ್ಲಾ ಆತ್ಮಗಳು ಸಮಾಪ್ತಿಯಾಗುತ್ತಾರೆ. ಯಾರಾದರೂ ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ಸಿಗುತ್ತದೆ. ಅಂದಾಗ ಇವರೇನು ತಪ್ಪು ಮಾಡಿದ್ದಾರೆ? ಕೇವಲ ಒಂದೇ ತಪ್ಪನ್ನು ಮಾಡಿದ್ದಾರೆ, ತಂದೆಯನ್ನು ಮರೆತಿದ್ದಾರೆ. ನೀವಂತೂ ತಂದೆಯಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ, ಉಳಿದೆಲ್ಲಾ ಮನುಷ್ಯರು ಈಗ ಶರೀರವನ್ನು ಬಿಟ್ಟೆವೆಂದರೆ ಬಿಟ್ಟೆವು ಎಂದು ತಿಳಿಯುತ್ತಾರೆ. ಮಹಾಭಾರತ ಯುದ್ಧವು ಸ್ವಲ್ಪ ಆರಂಭವಾಯಿತೆಂದರೆ ಸತ್ತುಹೋಗುತ್ತಾರೆ. ನೀವಂತೂ ಜೀವಿಸಿದ್ದೀರಲ್ಲವೆ. ಈ ವಿದ್ಯೆಯ ಶಕ್ತಿಯಿಂದ ನೀವು ವರ್ಗಾವಣೆಯಾಗಿ ಅಮರಲೋಕಕ್ಕೆ ಹೋಗುತ್ತೀರಿ. ವಿದ್ಯೆಗೆ ಆದಾಯದ ಮೂಲವೆಂದು ಹೇಳಲಾಗುತ್ತದೆ. ಶಾಸ್ತ್ರಗಳದೂ ವಿದ್ಯೆಯಾಗಿದೆ, ಅದರಿಂದಲೂ ಆದಾಯವಾಗುತ್ತದೆ ಆದರೆ ಅದು ಭಕ್ತಿಯ ವಿದ್ಯೆಯಾಗಿದೆ. ಈಗ ತಂದೆಯು ತಿಳಿಸುತ್ತಾರೆ- ನಾನು ನಿಮ್ಮನ್ನು ಈ ಲಕ್ಷ್ಮೀ-ನಾರಾಯಣನಂತೆ ಮಾಡುತ್ತೇನೆ, ನೀವೀಗ ಸ್ವಚ್ಛಬುದ್ಧಿಯವರಾಗುತ್ತೀರಿ. ನಾವು ಶ್ರೇಷ್ಠಾತಿಶ್ರೇಷ್ಠರಾಗುತ್ತೇವೆ, ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತೇವೆಂದು ನಿಮಗೆ ತಿಳಿದಿದೆ. ಹೊಸದರಿಂದ ಹಳೆಯದಾಗುತ್ತದೆ. ಏಣಿಯನ್ನು ಖಂಡಿತವಾಗಿ ಇಳಿಯಬೇಕಾಗುತ್ತದೆಯಲ್ಲವೆ. ಈಗ ಸೃಷ್ಟಿಯದೂ ಇಳಿಯುವ ಕಲೆಯಾಗಿದೆ. ಏರುವಕಲೆಯಿತ್ತೆಂದರೆ ಈ ದೇವತೆಗಳ ರಾಜ್ಯವಿತ್ತು, ಅದು ಸ್ವರ್ಗವಾಗಿತ್ತು. ಈಗ ನರಕವಾಗಿದೆ. ಈಗ ನೀವು ಸ್ವರ್ಗವಾಸಿಗಳಾಗಲು ಮತ್ತೆ ಪುರುಷಾರ್ಥ ಮಾಡುತ್ತಿದ್ದೀರಿ, ಬಾಬಾ-ಬಾಬಾ ಎನ್ನುತ್ತಿರುತ್ತೀರಿ.

ಓ ಗಾಡ್ ಫಾದರ್ ಎಂದು ಹೇಳಿ ಕರೆಯುತ್ತಾರೆ. ಆದರೆ ಅವರು ಆತ್ಮಗಳ ತಂದೆ ಸರ್ವಶ್ರೇಷ್ಠನಾಗಿದ್ದಾರೆ, ನಾವು ಅವರ ಮಕ್ಕಳೆಂದಮೇಲೆ ಏಕೆ ದುಃಖಿಗಳಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಅವಶ್ಯವಾಗಿ ದುಃಖಿಗಳಾಗಲೇಬೇಕೆಂದು ನೀವು ತಿಳಿದುಕೊಂಡಿದ್ದೀರಿ. ಏಕೆಂದರೆ ಇದು ಸುಖ-ದುಃಖದ ಆಟವಾಗಿದೆಯಲ್ಲವೆ. ಗೆಲುವಿನಲ್ಲಿ ಸುಖವಿದೆ, ಸೋಲಿನಲ್ಲಿ ದುಃಖವಿದೆ. ತಂದೆಯು ರಾಜ್ಯವನ್ನು ಕೊಟ್ಟರು, ರಾವಣನು ಕಸಿದುಕೊಂಡನು. ತಂದೆಯಿಂದ ನಮಗೆ ಸ್ವರ್ಗದ ಆಸ್ತಿಯು ಸಿಗುತ್ತಾ ಇರುತ್ತದೆ ಎಂಬುದು ಈಗ ಮಕ್ಕಳ ಬುದ್ಧಿಯಲ್ಲಿದೆ- ಆ ತಂದೆಯು ಬಂದಿದ್ದಾರೆ, ಈಗ ಕೇವಲ ತಂದೆಯನ್ನು ನೆನಪು ಮಾಡಿದರೆ ಪಾಪಗಳು ಕಳೆಯುವುದು. ಜನ್ಮ-ಜನ್ಮಾಂತರದ ಹೊರೆಯು ತಲೆಯ ಮೇಲಿದೆಯಲ್ಲವೆ. ಇದೂ ಸಹ ನಿಮಗೆ ತಿಳಿದಿದೆ- ನೀವೇನೂ ಬಹಳ ದುಃಖಿಗಳಾಗುವುದಿಲ್ಲ. ಹಿಟ್ಟಿನಲ್ಲಿ ಉಪ್ಪಿನಷ್ಟು ಸುಖವೂ ಇದೆ, ಇದಕ್ಕೆ ಕಾಗವಿಷ್ಟ ಸಮಾನ ಸುಖವಿದೆ ಎಂದು ಹೇಳಲಾಗುತ್ತದೆ. ಸರ್ವರ ಸದ್ಗತಿದಾತನು ತಂದೆಯೊಬ್ಬರೇ ಆಗಿದ್ದಾರೆ. ಜಗತ್ತಿನ ಗುರುವೂ ಒಬ್ಬರೇ ಆದರು. ವಾನಪ್ರಸ್ಥದಲ್ಲಿ ಗುರುಗಳನ್ನು ಮಾಡಿಕೊಳ್ಳಲಾಗುತ್ತದೆ. ಈಗಂತೂ ಒಂದುವೇಳೆ ಸತ್ತುಹೋದರೆ, ಸದ್ಗತಿಯನ್ನು ಪಡೆಯಲೆಂದು ಚಿಕ್ಕವರಿಗೂ ಗುರುಗಳನ್ನು ಮಾಡಿಸಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ- ವಾಸ್ತವದಲ್ಲಿ ಯಾರಿಗೂ ಗುರುಗಳೆಂದು ಹೇಳಲು ಸಾಧ್ಯವಿಲ್ಲ. ಯಾರು ಸದ್ಗತಿಯನ್ನು ಕೊಡುವರೋ ಅವರು ಗುರುಗಳಾಗಿದ್ದಾರೆ. ಸದ್ಗತಿದಾತನು ಒಬ್ಬರೇ ಆಗಿದ್ದಾರೆ, ಉಳಿದ ಕ್ರೈಸ್ತ, ಬುದ್ಧ ಯಾರೂ ಸಹ ಗುರುಗಳಲ್ಲ. ಅವರು ಬಂದಾಗ ಎಲ್ಲರಿಗೆ ಸದ್ಗತಿ ಸಿಗುತ್ತದೆಯೇ! ಕ್ರಿಸ್ತನು ಬಂದರು, ಯಾರೆಲ್ಲಾ ಅವರ ಧರ್ಮದವರಾಗಿದ್ದರೋ ಎಲ್ಲರೂ ಅವರ ಹಿಂದೆ ಬರತೊಡಗಿದರು. ಅಂದಮೇಲೆ ಅವರಿಗೆ ಗುರುಗಳೆಂದು ಹೇಗೆ ಹೇಳುತ್ತೀರಿ! ಏಕೆಂದರೆ ಅವರು ಎಲ್ಲರನ್ನೂ ಕೆಳಗೆ ತರಲು ನಿಮಿತ್ತರಾಗಿದ್ದಾರೆ. ಪತಿತ-ಪಾವನನೆಂದು ಒಬ್ಬ ತಂದೆಗೇ ಹೇಳುತ್ತಾರೆ, ಅವರು ಎಲ್ಲರನ್ನೂ ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗುವವರಾಗಿದ್ದಾರೆ. ಸ್ಥಾಪನೆಯನ್ನೂ ಮಾಡುತ್ತಾರೆ, ಕೇವಲ ಎಲ್ಲರನ್ನು ಕರೆದುಕೊಂಡು ಹೋಗುವಂತಿದ್ದರೆ ಪ್ರಳಯವಾಗಿಬಿಡುವುದು ಆದರೆ ಪ್ರಳಯವಾಗುವುದಿಲ್ಲ. ಸರ್ವಶಾಸ್ತ್ರಮಯಿ ಶಿರೋಮಣಿ ಶ್ರೀಮದ್ಭಗವದ್ಗೀತೆ ಎಂದು ಗಾಯನವಿದೆ. ಯಧಾಯಧಾಹಿ ಧರ್ಮಸ್ಯ......... ಭಾರತದಲ್ಲಿಯೇ ತಂದೆಯು ಬರುತ್ತಾರೆ. ಸ್ವರ್ಗದ ರಾಜಧಾನಿಯನ್ನು ಕೊಡುವವರು ತಂದೆಯಾಗಿದ್ದಾರೆ. ಆದರೆ ಅವರಿಗೂ ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಈಗ ನೀವು ಮಕ್ಕಳಿಗೆ ಖುಷಿಯಿದೆ- ಹೊಸ ಪ್ರಪಂಚದಲ್ಲಿ ಇಡೀ ವಿಶ್ವದಲ್ಲಿ ನಮ್ಮ ರಾಜ್ಯವೇ ಇರುವುದು ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಂತೂ ತುಂಡು-ತುಂಡನ್ನಾಗಿ ಮಾಡಿ ಪರಸ್ಪರ ಎಷ್ಟೊಂದು ಹೊಡೆದಾಡುತ್ತಿರುತ್ತಾರೆ. ನಿಮಗಂತೂ ಮಜಾ ಇದೆ ಅಂದಮೇಲೆ ಆನಂದದಿಂದ ನರ್ತಿಸಬೇಕಾಗಿದೆ. ಕಲ್ಪ-ಕಲ್ಪವೂ ತಂದೆಯಿಂದ ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು! ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ, ಆದರೂ ಸಹ ಮರೆತುಹೋಗುತ್ತೀರಿ. ಬಾಬಾ ಬುದ್ಧಿಯೋಗವು ಕತ್ತರಿಸಲ್ಪಡುತ್ತದೆಯೆಂದು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ- ಯೋಗವೆಂಬ ಅಕ್ಷರವನ್ನು ತೆಗೆದುಹಾಕಿ, ಅದು ಶಾಸ್ತ್ರಗಳ ಅಕ್ಷರವಾಗಿದೆ. ಕೇವಲ ನನ್ನನ್ನು ನೆನಪು ಮಾಡಿ. ಯೋಗ ಎಂಬುದು ಭಕ್ತಿಮಾರ್ಗದ ಅಕ್ಷರವಾಗಿದೆ. ತಂದೆಯಿಂದ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆ, ಅವರನ್ನು ನೀವು ನೆನಪು ಮಾಡದಿದ್ದರೆ ವಿಕರ್ಮಗಳು ಹೇಗೆ ವಿನಾಶವಾಗುತ್ತವೆ, ರಾಜ್ಯಭಾಗ್ಯವು ಹೇಗೆ ಸಿಗುತ್ತದೆ? ನೆನಪು ಮಾಡದಿದ್ದರೆ ಪದವಿಯು ಕಡಿಮೆಯಾಗುವುದು, ಶಿಕ್ಷೆಗಳನ್ನೂ ಅನುಭವಿಸುವಿರಿ. ಇಷ್ಟೂ ಬುದ್ಧಿಯಿಲ್ಲ, ಎಷ್ಟೊಂದು ಬುದ್ಧಿಹೀನರಾಗಿಬಿಟ್ಟಿದ್ದಾರೆ. ನಾನು ಕಲ್ಪ-ಕಲ್ಪವೂ ನಿಮಗೆ ಹೇಳುತ್ತೇನೆ- ನನ್ನೊಬ್ಬನನ್ನೇ ನೆನಪು ಮಾಡಿ, ಜೀವಿಸಿದ್ದಂತೆಯೇ ಈ ಪ್ರಪಂಚದಿಂದ ಸತ್ತುಹೋಗಿ. ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ವಿಜಯಮಾಲೆಯ ಮಣಿಯಾಗುತ್ತೀರಿ. ಇದು ಎಷ್ಟು ಸಹಜವಾಗಿದೆ! ಸರ್ವಶ್ರೇಷ್ಠ ಶಿವತಂದೆ ಮತ್ತು ಬ್ರಹ್ಮಾ ಇಬ್ಬರೂ ಎಷ್ಟು ಹೈಯೆಸ್ಟ್ ಆಗಿದ್ದಾರೆ. ಅವರು ಪಾರಲೌಕಿಕ, ಇವರು ಅಲೌಕಿಕ. ಸಂಪೂರ್ಣ ಸಾಧಾರಣ ಶಿಕ್ಷಕನಾಗಿದ್ದಾರೆ. ಆ ಶಿಕ್ಷಕರಂತೂ ಶಿಕ್ಷೆಯನ್ನು ಕೊಡುತ್ತಾರೆ. ಈ ತಂದೆಯು ಪ್ರೀತಿ ಮಾಡುತ್ತಿರುತ್ತಾರೆ. ಮಧುರ ಮಕ್ಕಳೇ, ತಂದೆಯನ್ನು ನೆನಪು ಮಾಡಿ ಸತೋಪ್ರಧಾನರಾಗಬೇಕಾಗಿದೆ. ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ಅವರೇ ಗುರುವಾದರು, ಮತ್ತ್ಯಾರೂ ಗುರುಗಳಾಗಲು ಸಾಧ್ಯವಿಲ್ಲ. ಬುದ್ಧನು ನಿರ್ವಾಣಧಾಮಕ್ಕೆ ಹೋದರೆಂದು ಹೇಳುತ್ತಾರೆ, ಇದೆಲ್ಲವೂ ಸುಳ್ಳಾಗಿದೆ, ಯಾರೊಬ್ಬರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಎಲ್ಲರದೂ ಡ್ರಾಮಾದಲ್ಲಿ ಪಾತ್ರವಿದೆ. ಇದರಲ್ಲಿ ಎಷ್ಟೊಂದು ವಿಶಾಲಬುದ್ಧಿ ಮತ್ತು ಖುಷಿಯಿರಬೇಕು! ಮೇಲಿನಿಂದ ಹಿಡಿದು ಸಂಪೂರ್ಣ ಜ್ಞಾನವು ಬುದ್ಧಿಯಲ್ಲಿದೆ. ಬ್ರಾಹ್ಮಣರೇ ಜ್ಞಾನವನ್ನು ತೆಗೆದುಕೊಳ್ಳುತ್ತಾರೆ. ಶೂದ್ರರಲ್ಲಾಗಲಿ, ದೇವತೆಗಳಲ್ಲಾಗಲಿ ಈ ಜ್ಞಾನವಿಲ್ಲ. ಇದನ್ನು ಅರಿತುಕೊಳ್ಳುವವರೇ ಅರಿತುಕೊಳ್ಳುವರು. ಯಾರು ಅರಿತುಕೊಳ್ಳುವುದಿಲ್ಲವೋ ಅವರದೂ ಮೃತ್ಯುವಿದೆ, ಪದವಿಯೂ ಕಡಿಮೆಯಾಗಿಬಿಡುವುದು. ಶಾಲೆಯಲ್ಲಿಯೂ ಓದದೇ ಇದ್ದರೆ ಪದವಿಯೂ ಕಡಿಮೆಯಾಗಿಬಿಡುತ್ತದೆ. ತಂದೆ ಮತ್ತು ಆಸ್ತಿ. ನಾವು ಪುನಃ ನಮ್ಮ ರಾಜಧಾನಿಯಲ್ಲಿ ಹೋಗುತ್ತಿದ್ದೇವೆ, ಈಗ ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿಬಿಡುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಅತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ತಂದೆಯು ನಮಗೆ ಇಂತಹ ಹೊಸ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ, ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬ ಖುಷಿಯಲ್ಲಿ ನರ್ತಿಸಬೇಕಾಗಿದೆ.

2) ವಿಜಯಮಾಲೆಯ ಮಣಿಯಾಗಲು ಜೀವಿಸಿದ್ದಂತೆಯೇ ಈ ಹಳೆಯ ಪ್ರಪಂಚದಿಂದ ಸಾಯಬೇಕಾಗಿದೆ. ತಂದೆಯ ನೆನಪಿನಿಂದ ವಿಕರ್ಮಗಳನ್ನು ವಿನಾಶ ಮಾಡಿಕೊಳ್ಳಬೇಕಾಗಿದೆ.

ವರದಾನ:
ತಮ್ಮ ಶಕ್ತಿಶಾಲಿ ಸ್ಟೇಜ್ ಮೂಲಕ ಸರ್ವರ ಶುಭಕಾಮನೆಗಳನ್ನು ಪೂರ್ಣಮಾಡುವಂತಹ ಮಹಾದಾನಿ ಭವ

ಮುಂದೆ ಬರುವಂತಹ ಆತ್ಮಗಳು ಸ್ವಲ್ಪದರಲ್ಲಿಯೆ ರಾಜಿó ಖುಶಿ ಯಾಗುತ್ತಾರೆ, ಏಕೆಂದರೆ ಅವರ ಪಾತ್ರ ಒಂದು ಕಣದಷ್ಟು ಅಗುಳನ್ನು ಪಡೆಯುವುದಾಗಿದೆ. ಆದ್ದರಿಂದ ಅಂತಹ ಆತ್ಮಗಳಿಗೆ ಅವರ ಭಾವನೆಗೆ ತಕ್ಕಂತೆ ಫಲ ಪ್ರಾಪ್ತಿಯಾಗಬೇಕು , ಯಾರೂ ವಂಚಿತರಾಗಬಾರದು, ಅದಕ್ಕಾಗಿ ಈಗಿನಿಂದಲೇ ತಮ್ಮಲ್ಲಿಸರ್ವ ಶಕ್ತಿಗಲನ್ನು ಜಮಾ ಮಾಡಿಕೊಳ್ಳಿ. ಯಾವಾಗ ತಾವು ತಮ್ಮ ಸಂಪೂರ್ಣ ಶಕ್ತಿಶಾಲಿ, ಮಹಾಧಾನಿ ಸ್ಟೇಜ್ ಮೇಲೆ ಸ್ಥಿತರಾದಲ್ಲಿ ಯಾವುದೇ ಆತ್ಮಕ್ಕೆ ತಮ್ಮ ಸಹಯೋಗದಿಂದ, ಮಹಾಧಾನ ಕೊಡುವಂತಹ ಕರ್ತವ್ಯದ ಆಧಾರದ ಮೇಲೆ, ಶುಬಭಾವನೆಯ ಸ್ವಿಚ್ ಆನ್ ಮಾಡಿದೊಡನೆ ದೃಷ್ಟಿಯಿಂದಲೆ ಸಂತುಷ್ಟಿರನ್ನಾಗಿ ಮಾಡುತ್ತಾರೆ.

ಸ್ಲೋಗನ್:
ಸದಾ ಈಶ್ವರೀಯ ಮರ್ಯಾದೆಗಳ ಮೇಲೆ ನಡೆಯುತ್ತಿರಿ ಆಗ ಮರ್ಯಾದಾ ಪುರುಷೋತ್ತಮ ಆಗಿಬಿಡುವಿರಿ.

ಅವ್ಯಕ್ತ ಸೂಚನೆಗಳು- ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಯಾವಾಗ ಸೇವೆಯ ಸ್ಟೇಜ್ ನ ಮೇಲೆ ಹೋಗುತ್ತೀರಿ ಆಗ ಅನುಭವವಾಗಬೇಕು- ಈ ಆತ್ಮ ಬಹಳ ಸಮಯದ ಅಂತರ್ಮುಖತೆ, ಆತ್ಮೀಯತೆಯ ಗುಹೆಯಿಂದ ಸೇವೆ ಮಾಡಲು ಬಂದಿದೆ, ತಪಸ್ವಿ ರೂಪ ಕಾಣಿಸಬೇಕು, ಬೇಹದ್ದಿನ ವೈರಾಗ್ಯದ ರೇಖೆಗಳು ಮುಖದಿಂದ ಕಾಣಿಸಬೇಕು. ಎಷ್ಟು ನಶೆ ಇರುತ್ತದೆಯೋ ಅಷ್ಟೇ ದಯೆ ಇರಬೇಕು. ಈಗ ಇಂತಹ ಸೇವೆಯ ಸಮಯವಾಗಿದೆ