13.08.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಅಕಾಲಮೂರ್ತಿ ತಂದೆಯು ಮಾತನಾಡುವ-ನಡೆಯುವ ಸಿಂಹಾಸನ (ಬ್ರಹ್ಮಾ) ಇದಾಗಿದೆ. ಯಾವಾಗ ಈ ಬ್ರಹ್ಮಾರವರಲ್ಲಿ ತಂದೆ ಬರುತ್ತಾರೆ, ಆಗ ನೀವು ಬ್ರಹ್ಮಾಣರನ್ನು ರಚಿಸುತ್ತಾರೆ.”

ಪ್ರಶ್ನೆ:
ಬುದ್ಧಿವಂತ ಮಕ್ಕಳು ಯಾವ ರಹಸ್ಯವನ್ನು ತಿಳಿದು ಸರಿಯಾದ ರೀತಿಯಿಂದ ತಿಳಿಸುತ್ತಾರೆ?

ಉತ್ತರ:
ಬ್ರಹ್ಮಾ ಯಾರು ಹಾಗು ಅವರೇ ಬಹ್ಮಾನಿಂದ ವಿಷ್ಣು ಹೇಗಾಗುತ್ತಾರೆ, ಪ್ರಜಾಪಿತ ಬ್ರಹ್ಮಾ ಇಲ್ಲಿದ್ದಾರೆ ಅವರು ದೇವತೆ ಅಲ್ಲ, ಬ್ರಹ್ಮಾರವರೇ ಬ್ರಾಹ್ಮಣರ ಮುಖಾಂತರ ಜ್ಞಾನ ಯಜ್ಞವನ್ನು ರಚಿಸುತ್ತಾರೆ – ಇವೆಲ್ಲಾ ರಹಸ್ಯಗಳನ್ನು ಬುದ್ಧ್ದಿವಂತ ಮಕ್ಕಳೇ ತಿಳಿದು ತಿಳಿಸುತ್ತಾರೆ. ಕುದುರೆ ಸವಾರರೂ ಹಾಗೂ ಕಾಲಾಳುಗಳೂ ಇದರಲ್ಲಿ ಗೊಂದಲ ಮಾಡುತ್ತಾರೆ.

ಗೀತೆ:
ಓಂ ನಮಃ ಶಿವಾಯ...............

ಓಂ ಶಾಂತಿ.
ಭಕ್ತಿಯಲ್ಲಿ ಒಬ್ಬರದೇ ಮಹಿಮೆ ಮಾಡುತ್ತಾರೆ. ಮಹಿಮೆಯಂತೂ ಗಾಯನ ಮಾಡುತ್ತಾರಲ್ಲವೇ! ಆದರೆ ಅವರನ್ನು ತಿಳಿದೂ ಇಲ್ಲ, ಅವರ ಯಥಾರ್ಥವಾದ ಪರಿಚಯವನ್ನೇ ಅರಿತುಕೊಂಡಿಲ್ಲ. ಒಂದುವೇಳೆ ಯಥಾರ್ಥವಾಗಿ ಮಹಿಮೆ ತಿಳಿದಿದ್ದರೆ ಅದನ್ನು ಖಂಡಿತವಾಗಿ ವರ್ಣನೆಯನ್ನು ಮಾಡುತ್ತಿದ್ದರು. ನೀವು ಮಕ್ಕಳು ತಿಳಿದಿದ್ದೀರಿ - ಭಗವಂತ ಅತೀ ಶ್ರೇಷ್ಠವಾಗಿದ್ದಾರೆ. ಮುಖ್ಯವಾದ ಚಿತ್ರ ಅವರದೇ ಆಗಿದೆ. ಬ್ರಹ್ಮಾನಿಗೂ ಸಂತಾನ ಇರುತ್ತಾರೆ. ನೀವೆಲ್ಲರೂ ಬ್ರಹ್ಮಾಣರಾಗಿದ್ದೀರಿ. ಬ್ರಹ್ಮಾನನ್ನು ಬ್ರಾಹ್ಮಾಣರೇ ತಿಳಿದುಕೊಂಡಿದ್ದಾರೆ, ಬೇರೆ ಯಾರು ತಿಳಿದಿಲ್ಲ ಆ ಕಾರಣ ಗೊಂದಲವಾಗುತ್ತಾರೆ. ಇವರು ಬ್ರಹ್ಮಾ ಹೇಗಾಗುತ್ತಾರೆ. ಬ್ರಹ್ಮಾನನ್ನು ಸೂಕ್ಷ್ಮವತನದಲ್ಲಿ ತೋರಿಸಲಾಗಿದೆ. ಈಗ ಪ್ರಜಾಪಿತ ಸೂಕ್ಷ್ಮವತನದಲ್ಲಿ ಇರುವುದಿಲ್ಲ, ಅಲ್ಲಿ ರಚನೆ ಇರುವುದಿಲ್ಲ. ಇದರ ಪ್ರತಿ ನಿಮ್ಮ ಜೊತೆ ಬಹಳ ವಾದ-ವಿವಾದವನ್ನು ಮಾಡುತ್ತಾರೆ. ಬ್ರಹ್ಮಾ ಹಾಗೂ ಬ್ರಹ್ಮಾಣರು ಇರುವುದು ಸರಿ ಇದೆ ತಿಳಿಸಿರಿ. ಹೇಗೆ ಕ್ರೈಸ್ತನಿಂದ ಕ್ರಿಶ್ಚಿಯನ್ ಅಕ್ಷರ ಬಂದಿದೆ. ಬುದ್ದನಿಂದ ಬೌದ್ದ, ಇಬ್ರಾಹಿಂನಿಂದ ಇಸ್ಲಾಂ. ಹಾಗೆಯೇ ಪ್ರಜಾಪಿತ ಬ್ರಹ್ಮಾನಿಂದ ಬ್ರಾಹ್ಮಣರ ಹೆಸರು ಪ್ರಸಿದ್ಧವಾಗಿದೆ – ಆದಿ ದೇವ ಬ್ರಹ್ಮಾ. ವಾಸ್ತವದಲ್ಲಿ ಬ್ರಹ್ಮಾನಿಗೆ ದೇವತೆ ಎಂದು ಹೇಳುವುದಿಲ್ಲ. ಇದು ತಪ್ಪಾಗಿದೆ. ಯಾರು ತಮ್ಮನ್ನು ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತಾರೆಯೋ ಅವರನ್ನು ಕೇಳಬೇಕು - ಬ್ರಹ್ಮಾನು ಎಲ್ಲಿಂದ ಬಂದರು? ಇದು ಯಾರ ರಚನೆಯಾಗಿದೆ? ಬ್ರಹ್ಮಾನನ್ನು ಯಾರು ರಚನೆ ಮಾಡಿದರು? ಇದಕ್ಕೆ ಯಾರು ಉತ್ತರವನ್ನು ತಿಳಿಸಲು ಸಾಧ್ಯವಿಲ್ಲ ಏಕೆಂದರೆ ಅರಿತುಕೊಂಡೇ ಇಲ್ಲ. ಇದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಶಿವ ತಂದೆಯು ಈ ರಥದಲ್ಲಿ ಪ್ರವೇಶ ಮಾಡುತ್ತಾರೆ, ಈ ಆತ್ಮವೇ (ಬ್ರಹ್ಮಾ) ಮೊದಲ ಜನ್ಮದಲ್ಲಿ ಕೃಷ್ಣ, ರಾಜಕುಮಾರನಾಗಿದ್ದನು, 84 ಜನ್ಮಗಳ ನಂತರ ಅದೇ ಆತ್ಮವು ಬಂದು ಈ ಬ್ರಹ್ಮಾನಾಗಿದ್ದಾರೆ. ಜನ್ಮಪತ್ರಿಕೆಯ ಹೆಸರಂತೂ ಇವರಿಗೆ ಬೇರೆ ಇರಬೇಕಲ್ಲವೇ ಏಕೆಂದರೆ ಇವರು ಮನುಷ್ಯನಲ್ಲವೇ. ನಂತರ ತಂದೆಯು ಇವರಲ್ಲಿ ಪ್ರವೇಶ ಮಾಡಿ ಇವರಿಗೇ ಬ್ರಹ್ಮಾನೆಂದು ಹೆಸರಿಡುತ್ತಾರೆ, ಅದೇ ಬ್ರಹ್ಮಾನು ವಿಷ್ಣುವಿನ ರೂಪವಾಗಿದ್ದಾರೆ, ನಾರಯಣನಾಗುತ್ತಾನಲ್ಲವೇ. 84 ಜನ್ಮಗಳ ಅಂತ್ಯದಲ್ಲಿಯೂ ಇವರದು ಸಾಧಾರಣ ರಥವಾಗಿದೆ. ಈ ಶರೀರವು ಎಲ್ಲಾ ಆತ್ಮಗಳ ರಥವಾಗಿದೆ ಅಕಾಲಮೂರ್ತಿ ಆತ್ಮನಿಗೆ ನಡೆಯುವ-ಮಾತನಾಡುವ ಸಿಂಹಾಸನವಾಗಿದೆ. ಸಿಖ್ಖರೂ ಇದಕ್ಕೆ ಸ್ಥೂಲವಾದ ಸಿಂಹಾಸನವನ್ನು ಮಾಡಿ ಬಿಟ್ಟಿದ್ದಾರೆ, ಅದಕ್ಕೆ ಅಕಾಲ ಸಿಂಹಾಸನವೆಂದು ಹೇಳುತ್ತಾರೆ. ಹಾಗೆ ನೋಡಿದರೆ ಇವೆಲ್ಲವೂ (ಶರೀರಗಳು) ಅಕಾಲ ಸಿಂಹಾಸನಗಳಾಗಿವೆ. ಆತ್ಮಗಳೆಲ್ಲರೂ ಅಕಾಲಮೂರ್ತಿಗಳಾಗಿದ್ದೀರಿ. ಸರ್ವಶ್ರೇಷ್ಠ ಭಗವಂತನಿಗೆ ರಥವಂತೂ ಬೇಕಲ್ಲವೇ. ರಥದಲ್ಲಿ ಪ್ರವೇಶ ಮಾಡಿ ಜ್ಞಾನವನ್ನು ತಿಳಿಸುತ್ತಾರೆ. ಅವರಿಗೇ ಜ್ಞಾನಪೂರ್ಣನೆಂದು ಹೇಳಲಾಗುತ್ತದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ಜ್ಞಾನಪೂರ್ಣನೆಂದರೆ ಅಂತರ್ಯಾಮಿ ಅಥವಾ ಸರ್ವಜ್ಞನನೆಂದಲ್ಲ. ಸರ್ವವ್ಯಾಪಿ ಎಂಬುದರ ಅರ್ಥವೇ ಬೇರೆ, ಸರ್ವಜ್ಞನೆಂಬುದರ ಅರ್ಥವೇ ಬೇರೆಯಾಗಿದೆ. ಮನುಷ್ಯರಂತೂ ಎಲ್ಲವನ್ನು ಸೇರಿಸಿ ಮನಸ್ಸಿಗೆ ಏನು ಬಂದರೆ ಅದನ್ನು ಹೇಳುತ್ತಾ ಹೋಗುತ್ತಾರೆ. ಈಗ ನೀವು ತಿಳಿದು ಕೊಂಡಿದ್ದೀರಿ - ನಾವೆಲ್ಲಾ ಬ್ರಹ್ಮಾಣರು ಬ್ರಹ್ಮಾನ ಸಂತಾನರಾಗಿದ್ದೇವೆ. ನಮ್ಮ ಕುಲವು ಎಲ್ಲರಿಗಿಂತ ಶ್ರೇಷ್ಠವಾಗಿದೆ. ಅವರಿಗೆ ದೇವತೆಗಳನ್ನು ಶ್ರೇಷ್ಠರೆಂದು ಹೇಳುತ್ತಾರೆ ಏಕೆಂದರೆ ಸತ್ಯಯುಗದ ಆದಿಯಲ್ಲಿ ದೇವತೆಗಳು ಇದು ಹೋಗಿದ್ದಾರೆ ಆದರೆ ಪ್ರಜಾಪಿತ ಬ್ರಹ್ಮಾನ ಸಂತಾನರು ಬ್ರಹ್ಮಾಣರು ಇರುತ್ತಾರೆಂಬುದು ನೀವು ಮಕ್ಕಳ ವಿನಃ ಬೇರೆ ಯಾರಿಗೂ ತಿಳಿದಿಲ್ಲ. ಬ್ರಹ್ಮಾನನ್ನು ಸೂಕ್ಷ್ಮವತನದಲ್ಲಿ ಇದ್ದಾರೆಂದು ತಿಳಿಯುತ್ತಾರೆ. ಆ ಲೌಕಿಕ ಬ್ರಾಹ್ಮಣರೇ ಬೇರೆಯಾಗಿದ್ದಾರೆ, ಅವರು ಪೂಜೆ ಮಾಡುತ್ತಾರೆ, ಭಕ್ಷ್ಯ ಭೋಜ್ಯಗಳನ್ನು ತಿನ್ನುತ್ತಾರೆ. ನೀವೇನೂ ತಿನ್ನುವುದಿಲ್ಲ. ಬ್ರಹ್ಮಾನ ರಹಸ್ಯವನ್ನು ಈಗ ಬಹಳ ಚೆನ್ನಾಗಿ ತಿಳಿಸಿಕೊಡಬೇಕಾಗಿದೆ, ಅಂದಾಗ ತಿಳಿಸಿ – ಅನ್ಯ ಮಾತುಗಳನ್ನು ಬಿಟ್ಟು ಯಾವ ತಂದೆಯಿಂದ ಪತಿತರಿಂದ ಪಾವನರಾಗಬೇಕಾಗಿದೆಯೋ ಆ ತಂದೆಯನ್ನು ಮೊದಲು ನೆನಪು ಮಾಡಿ ನಂತರ ಈ ಮಾತುಗಳೆಲ್ಲವೂ ಅರ್ಥವಾಗುತ್ತವೆ. ಚಿಕ್ಕ ಮಾತಿನಲ್ಲಿ ಸಂಶಯವು ಬಂದರೆ ಸಾಕು ತಂದೆಯನ್ನೇ ಬಿಟ್ಟು ಬಿಡುತ್ತಾರೆ. ಮೊದಲ ಮುಖ್ಯ ಮಾತಾಗಿದೆ - ತಂದೆ ಮತ್ತು ಆಸ್ತಿ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ನಾನು ಅವಶ್ಯವಾಗಿ ಯಾರದೋ ತನುವಿನಲ್ಲಿ ಬರುತ್ತೇನಲ್ಲವೇ. ಅವರ ಹೆಸರೂ ಇರಬೇಕು. ನಾನು ಬಂದು ಅವರನ್ನು ರಚಿಸುತ್ತೇನೆ. ಬ್ರಹ್ಮಾನ ಬಗ್ಗೆ ತಿಳಿಸಲು ಬಹಳ ಬುದ್ಧಿವಂತಿಕೆ ಇರಬೇಕು. ತಿಳಿಸಿಕೊಡುವುದರಲ್ಲಿ ಕುದುರೆ ಸವಾರರು, ಕಾಲಾಳುಗಳು ತಬ್ಬಿಬ್ಬಾಗುತ್ತಾರೆ. ತಂದೆಯು ಸ್ಥಿತಿಯನುಸಾರ ತಿಳಿಸುತ್ತಾರಲ್ಲವೇ. ಪ್ರಜಾಪಿತ ಬ್ರಹ್ಮಾರವರು ಇಲ್ಲಿಯೇ ಇದ್ದಾರೆ. ಬ್ರಾಹ್ಮಣರ ಮುಖಾಂತರ ಯಜ್ಞವನ್ನು ರಚನೆ ಮಾಡುತ್ತಾರೆಂದರೆ ಬ್ರಾಹ್ಮಣರೇ ಬೇಕಲ್ಲವೇ, ಅವರಿಂದ ಬ್ರಾಹ್ಮಣರು ಬೇಕೆಂದರೆ ಪ್ರಜಾಪಿತ ಬ್ರಹ್ಮಾರವರು ಸಹ ಇಲ್ಲಿಯೇ ಬೇಕು. ಲೌಕಿಕ ಬ್ರಾಹ್ಮಣರೂ ಸಹ ನಾವು ಬ್ರಹ್ಮಾನ ಸಂತಾನರೆಂದು ಹೇಳಿಕೊಳ್ಳುತ್ತಾರೆ, ನಮ್ಮ ಕುಲವು ಪರಂಪರೆಯಿಂದ ಬಂದಿದೆ ಎಂದು ತಿಳಿಯುತ್ತಾರೆ ಆದರೆ ಬ್ರಹ್ಮಾರವರು ಯಾವಾಗ ಇದ್ದರು ಎಂಬುದನ್ನು ತಿಳಿದುಕೊಂಡಿಲ್ಲ. ನೀವು ಈಗ ಬ್ರಾಹ್ಮಣರಾಗಿದ್ದೀರಿ. ಯಾರು ಬ್ರಹ್ಮಾನ ಸಂತಾನರೋ ಅವರೇ ಬ್ರಾಹ್ಮಣರು. ಲೌಕಿಕ ಬ್ರಾಹ್ಮಣರಂತೂ ತಂದೆಯ ಪರಿಚಯವನ್ನು ತಿಳಿದುಕೊಂಡಿಲ್ಲ. ಭಾರತದಲ್ಲಿ ಮೊದಲು ಬ್ರಾಹ್ಮಣರೇ ಇರುತ್ತಾರೆ. ಬ್ರಾಹ್ಮಣರದು ಸರ್ವಶ್ರೇಷ್ಠ ಕುಲವಾಗಿದೆ. ನಮ್ಮ ಕುಲವು ಅವಶ್ಯವಾಗಿ ಬ್ರಹ್ಮಾನಿಂದಲೇ ಬಂದಿರಬೇಕು ಎಂದು ಆ ಬ್ರಾಹ್ಮಣರು ಸಹ ತಿಳಿಯುತ್ತಾರೆ ಆದರೆ ಯಾವಾಗ, ಹೇಗೆ.... ಇದರ ವರ್ಣನೆಯನ್ನು ಮಾಡಲು ಅವರಿಂದ ಸಾಧ್ಯವಿಲ್ಲ. ನೀವು ತಿಳಿದುಕೊಳ್ಳುತ್ತೀರಿ - ಪ್ರಜಾಪಿತ ಬ್ರಹ್ಮಾನೇ ಬ್ರಾಹ್ಮಣರನ್ನು ರಚಿಸುತ್ತಾರೆ. ಆ ಬ್ರಾಹ್ಮಣರೇ ಮತ್ತೆ ದೇವತೆಗಳಾಗುತ್ತಾರೆ. ತಂದೆಯು ಬಂದು ಬ್ರಾಹ್ಮಣರಿಗೆ ಓದಿಸುತ್ತಾರೆ. ಬ್ರಾಹ್ಮಣರಿಗೆ ರಾಜ್ಯವಿಲ್ಲ ಬ್ರಾಹ್ಮಣರದು ಕುಲವಿದೆ ಮತ್ತೆ ಯಾವಾಗ ರಾಜ-ರಾಣಿ ಆಗುವರೋ ಆಗಲೇ ರಾಜಧಾನಿ ಎಂದು ಹೇಳಲಾಗುವುದು. ಹೇಗೆ ಸೂರ್ಯವಂಶಿ ರಾಜಧಾನಿ ಎಂದು ಹೇಳುತ್ತಾರಲ್ಲವೇ. ನೀವು ಬ್ರಾಹ್ಮಣರು ರಾಜರಂತೂ ಆಗುವುದಿಲ್ಲ, ಕೌರವರು ಮತ್ತು ಪಾಂಡವರ ರಾಜ್ಯವಿತ್ತು ಎಂದು ಯಾವ ಮಾತನ್ನು ಹೇಳುತ್ತಾರೆಯೋ ಇವೆರಡೂ ತಪ್ಪಾಗಿದೆ ಏಕೆಂದರೆ ಇಬ್ಬರಿಗೂ ರಾಜ್ಯವಿಲ್ಲ. ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ, ಇದಕ್ಕೆ ರಾಜಧಾನಿ ಎಂದೂ ಹೇಳುವುದಿಲ್ಲ, ರಾಜ್ಯ ಕಿರೀಟವೂ ಇಲ್ಲ. ತಂದೆಯು ತಿಳಿಸಿದ್ದರು -ಮೊದಲು ಭಾರತದಲ್ಲಿ ಡಬಲ್ ಕಿರೀಟಧಾರಿ ರಾಜರಿದ್ದರು ನಂತರ ಸಿಂಗಲ್ ಕಿರೀಟಧಾರಿಗಳು. ಈ ಸಮಯದಲ್ಲಿ ಕಿರೀಟವೇ ಇಲ್ಲ. ಇದನ್ನೂ ಸಹ ಒಳ್ಳೆಯ ರೀತಿಯಲ್ಲಿ ಸಿದ್ಧ ಮಾಡಿ ತಿಳಿಸಬೇಕಾಗಿದೆ. ಯಾರು ಒಳ್ಳೆಯ ಧಾರಣೆ ಮಾಡುವವರಿರುವರೋ ಅವರು ಚೆನ್ನಾಗಿ ತಿಳಿಸಬಲ್ಲರು. ಬ್ರಹ್ಮಾನ ಕುರಿತೇ ಹೆಚ್ಚು ಮಾತುಗಳನ್ನು ತಿಳಿಸಬೇಕಾಗುತ್ತದೆ. ಮನುಷ್ಯರು ವಿಷ್ಣುವನ್ನೂ ತಿಳಿದುಕೊಂಡಿಲ್ಲ ಅಂದಾಗ ಇದನ್ನಾದರೂ ತಿಳಿಸಬೇಕಾಗಿದೆ. ವೈಕುಂಠಕ್ಕೆ ವಿಷ್ಣು ಪುರಿಯೆಂದು ಹೇಳಲಾಗುತ್ತದೆ ಅರ್ಥಾತ್ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಕೃಷ್ಣನು ರಾಜಕುಮಾರನಾಗಿದ್ದರೆ ನಮ್ಮ ತಂದೆಯು ರಾಜನಾಗಿದ್ದಾರೆ ಎಂದು ಹೇಳುತ್ತಾರಲ್ಲವೇ. ಕೃಷ್ಣನ ತಂದೆಯು ರಾಜನಾಗಿರಲು ಸಾಧ್ಯವಿಲ್ಲ ಎಂದಲ್ಲ. ಕೃಷ್ಣನು ರಾಜಕುಮಾರನೆಂದು ಕರೆಸಿಕೊಳ್ಳುತ್ತಾನೆಂದರೆ ಅವಶ್ಯವಾಗಿ ರಾಜನ ಬಳಿ ಜನ್ಮವಾಗಿದೆ ಎಂದರ್ಥ. ಸಾಹುಕಾರರ ಬಳಿ ಜನ್ಮ ಪಡೆದರೆ ರಾಜಕುಮಾರನೆಂದು ಕರೆಸಿಕೊಳ್ಳುವುದಿಲ್ಲ. ರಾಜನ ಪದವಿ ಮತ್ತು ಸಾಹುಕಾರರ ಪದವಿಯಲ್ಲಿ ರಾತ್ರಿ ಹಗಲಿನ ಅಂತರವಾಗಿಬಿಡುತ್ತದೆ. ಕೃಷ್ಣನ ತಂದೆ ರಾಜನ ಹೆಸರೇ ಇಲ್ಲ. ಕೃಷ್ಣನ ಹೆಸರು ಎಷ್ಟು ಪ್ರಖ್ಯಾತವಾಗಿದೆ. ಅವರ ತಂದೆಯದು ಶ್ರೇಷ್ಠ ಪದವಿ ಎಂದು ಹೇಳುವುದಿಲ್ಲ. ಅವರದು ಮಧ್ಯಮ ವರ್ಗದ ಪದವಿಯಾಗಿದೆ, ಅವರು ಕೇವಲ ಕೃಷ್ಣನಿಗೆ ಜನ್ಮ ನೀಡಲು ನಿಮಿತ್ತನಾಗುತ್ತಾರೆ. ಕೃಷ್ಣನ ಆತ್ಮನಿಗಿಂತಲೂ ಹೆಚ್ಚು ಓದಿದ್ದಾರೆ ಎಂದಲ್ಲ ಕೃಷ್ಣನೇ ನಂತರ ನಾರಾಯಣನಾಗುತ್ತಾನೆ ಬಾಕಿ ತಂದೆಯ ಹೆಸರೇ ಮರೆಯಾಗಿ ಬಿಡುತ್ತದೆ. ಬ್ರಾಹ್ಮಣರು ಅವಶ್ಯವಾಗಿ ಇದ್ದಾರೆ ಆದರೆ ವಿದ್ಯೆಯಲ್ಲಿ ಕೃಷ್ಣನಿಗಿಂತಲೂ ಕಡಿಮೆ. ಕೃಷ್ಣನ ಆತ್ಮದ ವಿದ್ಯೆಯು ತನ್ನ ತಂದೆಗಿಂತಲೂ ಉತ್ತಮವಾಗಿತ್ತು ಆದ್ದರಿಂದಲೇ ಇಷ್ಟೊಂದು ಹೆಸರು ಬರುತ್ತದೆ. ಕೃಷ್ಣನ ತಂದೆಯು ಯಾರಾಗಿದ್ದರು, ಇದು ಯಾರಿಗೂ ತಿಳಿದಿಲ್ಲ, ಮುಂದೆ ಹೋದಂತೆ ಅರ್ಥವಾಗುವುದು. ಎಲ್ಲರೂ ಇಲ್ಲಿಂದಲೇ ಆಗಬೇಕಾಗಿದೆ ರಾಧೆಗೂ ಸಹ ತಂದೆ ತಾಯಿಯಂತೂ ಇರುತ್ತಾರಲ್ಲವೇ ಆದರೆ ಅವರಿಗಿಂತಲೂ ರಾಧೆಯ ಹೆಸರೇ ಹೆಚ್ಚಾಗಿದೆ ಏಕೆಂದರೆ ತಂದೆ-ತಾಯಿಯು ರಾಧೆಗಿಂತಲೂ ಕಡಿಮೆ ಓದಿದ್ದಾರೆ. ರಾಧೆಯ ಹೆಸರು ಅವರಿಗಿಂತಲೂ ಉತ್ತಮವಾಗಿ ಬಿಡುತ್ತದೆ. ಮಕ್ಕಳಿಗೆ ತಿಳಿದುಕೊಳ್ಳಲು ಇವು ಬಹಳ ವಿಸ್ತಾರವಾದ ಮಾತುಗಳಾಗಿವೆ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ಬ್ರಹ್ಮಾನ ಕುರಿತು ತಿಳಿಸುವುದಕ್ಕೂ ಬುದ್ದಿವಂತಿಕೆ ಬೇಕು. ಅದೇ ಕೃಷ್ಣನ ಆತ್ಮನೇ 84 ಜನ್ಮಗಳನ್ನು ಭೋಗಿಸುತ್ತದೆ. ನೀವೂ ಸಹ 84 ಜನ್ಮಗಳನ್ನು ಪಡೆಯುತ್ತೀರಿ. ಎಲ್ಲರೂ ಒಟ್ಟಿಗೆ ಬರುವುದಿಲ್ಲ. ಯಾರು ವಿದ್ಯೆಯಲ್ಲಿ ಮುಂದೆ ಇರುವರೋ ಅವರು ಅಲ್ಲಿಯೂ ಮುಂದೆ ಬರುವರು. ನಂಬರ್ವಾರಂತೂ ಬರುತ್ತಾರಲ್ಲವೇ. ಇವು ಬಹಳ ಗುಹ್ಯ ಮಾತುಗಳಾಗಿವೆ. ಮಂದ ಬುದ್ಧಿಯವರು ಧಾರಣೆ ಮಾಡಲು ಸಾಧ್ಯವಿಲ್ಲ. ನಂಬರ್ವಾರ್ ಹೋಗುತ್ತಾರೆ. ನೀವೂ ಸಹ ನಂಬರ್ವಾರ್ ಆಗಿ ಇಲ್ಲಿಂದ ವರ್ಗಾವಣೆಯಾಗುತ್ತೀರಿ. ಇದು ಎಷ್ಟು ದೊಡ್ಡ ಕ್ಯೂ (ಸಾಲು) ಆಗಿದೆ, ಇದು ಅಂತಿಮದಲ್ಲಿ ಹೋಗುವುದು. ನಂಬರ್ವಾರ್ ತಮ್ಮ-ತಮ್ಮ ಸ್ಥಾನಗಳಿಗೆ ಹೋಗಿ ನಿವಾಸಿಸುತ್ತಾರೆ. ಎಲ್ಲರ ಸ್ಥಾನವು ನಿಶ್ಚಿತವಾಗಿದೆ. ಇದು ಬಹಳ ಅದ್ಭುತವಾದ ಆಟವಾಗಿದೆ ಆದರೆ ಯಾರೂ ತಿಳಿದುಕೊಂಡಿಲ್ಲ. ಇದಕ್ಕೆ ಮುಳ್ಳಿನ ಕಾಡೆಂದು ಹೇಳಲಾಗುತ್ತದೆ. ಇಲ್ಲಿ ಎಲ್ಲರೂ ಪರಸ್ಪರ ದುಃಖವನ್ನು ಕೊಡುತ್ತಿರುತ್ತಾರೆ. ಸ್ವರ್ಗದಲ್ಲಂತೂ ಸ್ವಾಭಾವಿಕ ಸುಖವಿರುತ್ತದೆ, ಇಲ್ಲಿ ತಾತ್ಕಾಲಿಕ ಸುಖವಿದೆ. ಸತ್ಯವಾದ ಸುಖವನ್ನು ತಂದೆಯೊಬ್ಬರೇ ಕೊಡುತ್ತಾರೆ, ಇಲ್ಲಿರುವ ಸುಖವು ಕಾಗವಿಷ್ಟ ಸಮಾನವಾಗಿದೆ. ದಿನ-ಪ್ರತಿದಿನ ತಮೋಪ್ರಧಾನರಾಗುತ್ತಾ ಹೋಗುತ್ತಾರೆ, ಎಷ್ಟೊಂದು ದುಃಖವಿದೆ! ಬಾಬಾ, ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ಮಾಯೆಯು ಗೊಂದಲದಲ್ಲಿ ಸಿಕ್ಕಿ ಹಾಕಿಸುತ್ತಿದೆ. ಬಹಳ ದುಃಖದ ಅಲೆಯು ಬರುತ್ತಿದೆ ಎಂದು ಹೇಳುತ್ತಾರೆ. ಸುಖದಾತ ತಂದೆಯ ಮಕ್ಕಳಾಗಿಯೂ ಒಂದುವೇಳೆ ದುಃಖದ ಅಲೆಯು ಬರುತ್ತದೆಯೆಂದರೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮ್ಮದು ಇದು ಬಹಳ ದೊಡ್ಡ ಕರ್ಮ ಭೋಗವಾಗಿದೆ. ತಂದೆಯು ಸಿಕ್ಕಿದ್ದಾರೆ ಅಂದಮೇಲೆ ದುಃಖದ ಅಲೆಯೂ ಬರಬಾರದು. ಯಾವ ಹಳೆಯ ಕರ್ಮ ಭೋಗವಿದೆಯೋ ಅದನ್ನು ಯೋಗಬಲದಿಂದ ಮುಗಿಸಿ. ಒಂದುವೇಳೆ ಯೋಗಬಲವಿಲ್ಲವೆಂದರೆ ಶಿಕ್ಷೆಯನ್ನನುಭವಿಸಿ ಲೆಕ್ಕಾಚಾರವನ್ನು ಮುಗಿಸಬೇಕಾಗಿದೆ. ಪೆಟ್ಟು ತಿಂದು ಅಲ್ಪ ರೊಟ್ಟಿಯನ್ನು ಪಡೆಯುವುದು ಚೆನ್ನಾಗಿಲ್ಲ (ಶಿಕ್ಷೆಯನ್ನನುಭವಿಸಿ ಪದವಿಯನ್ನು ಪಡೆಯುವುದು ಒಳ್ಳೆಯದಲ್ಲ). ಪುರುಷಾರ್ಥ ಮಾಡಬೇಕು ಇಲ್ಲವಾದರೆ ಕೊನೆಯಲ್ಲಿ ನ್ಯಾಯಾಲಯದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಪ್ರಜೆಗಳಂತೂ ಬಹಳಷ್ಟು ಮಂದಿ ಆಗುವರು, ಇದಂತೂ ಡ್ರಾಮಾನುಸಾರ ಎಲ್ಲರೂ ಗರ್ಭ ಜೈಲಿನಲ್ಲಿ ಬಹಳ ಶಿಕ್ಷೆಗಳನ್ನನುಭವಿಸುತ್ತಾರೆ. ಆತ್ಮಗಳು ಬಹಳಷ್ಟು ಅಲೆದಾಡುತ್ತಾರೆ. ಕೆಲವು ಆತ್ಮಗಳು ಬಹಳ ನಷ್ಟವನುಂಟು ಮಾಡುತ್ತದೆ, ಯಾರಲ್ಲಾದರೂ ಅಶುದ್ಧ ಆತ್ಮನ (ಪ್ರೇತಾತ್ಮ) ಪ್ರವೇಶತೆಯಾಗುತ್ತದೆಯೆಂದರೆ ಎಷ್ಟು ಹೆಚ್ಚು ಕಡಿಮೆಯಾಗುತ್ತದೆ! ಹೊಸ ಪ್ರಪಂಚದಲ್ಲಿ ಈ ಮಾತುಗಳೇ ಇರುವುದಿಲ್ಲ. ನಾವು ಹೊಸ ಪ್ರಪಂಚದಲ್ಲಿ ಹೋಗಬೇಕೆಂದು ನೀವೀಗ ಪುರುಷಾರ್ಥ ಮಾಡುತ್ತಿದ್ದೀರಿ. ಅಲ್ಲಿ ಹೋಗಿ ಹೊಸ-ಹೊಸ ಮಹಲುಗಳನ್ನು ತಯಾರು ಮಾಡಬೇಕಾಗುತ್ತದೆ. ಹೇಗೆ ಕೃಷ್ಣನು ಜನ್ಮ ಪಡೆಯುತ್ತಾನೆಯೋ ಹಾಗೆಯೇ ರಾಜರ ಬಳಿ ಹೋಗಿ ಜನ್ಮ ಪಡೆಯುತ್ತಾರೆ. ಆದರೆ ಇಷ್ಟೊಂದು ಮಹಲು ಇತ್ಯಾದಿಗಳು ಮೊದಲೇ ಇರುವುದಿಲ್ಲ. ಅವೆಲ್ಲವನ್ನೂ ನಂತರ ಕಟ್ಟಲಾಗುತ್ತದೆ. ಯಾರು ರಚಿಸಿದ್ದಾರೆ, ಯಾರ ಬಳಿ ಜನ್ಮ ಪಡೆಯುತ್ತಾರೆ! ರಾಜರ ಬಳಿ ಜನ್ಮವಾಗುತ್ತದೆಯೆಂದು ಗಾಯನವೂ ಇದೆ ಆದರೆ ಏನಾಗುವುದೆಂಬುದನ್ನು ಮುಂದೆ ಹೋದಂತೆ ನೋಡುವಿರಿ. ತಂದೆಯು ಈಗಲೇ ತಿಳಿಸುವುದಿಲ್ಲ, ಹಾಗೆ ತಿಳಿಸುವಂತಿದ್ದರೆ ಇದು ಕೃತಕ ನಾಟಕವಾಗಿ ಬಿಡುತ್ತದೆ ಆದ್ದರಿಂದ ಏನನ್ನೂ ತಿಳಿಸುವುದಿಲ್ಲ. ಮೊದಲೇ ತಿಳಿಸುವುದು ನಾಟಕದಲ್ಲಿ ನಿಗಧಿಯಾಗಿಲ್ಲ. ತಂದೆಯು ತಿಳಿಸುತ್ತಾರೆ - ನಾನೂ ಸಹ ಪಾತ್ರಧಾರಿಯಾಗಿದ್ದೇನೆ. ಮುಂದಿನ ಮಾತುಗಳನ್ನು ಮೊದಲೇ ತಿಳಿದುಕೊಂಡಿದ್ದರೆ ಬಹಳಷ್ಟು ತಿಳಿಸುತ್ತಿದ್ದೆನು. ತಂದೆಯು ಅಂತರ್ಯಾಮಿಯಾಗಿದ್ದರೆ ಮೊದಲೇ ತಿಳಿಸುತ್ತಿದ್ದರು. ತಂದೆಯು ತಿಳಿಸುತ್ತಾರೆ - ಇಲ್ಲ, ನಾಟಕದಲ್ಲಿ ಏನಾಗುವುದೋ ಅದನ್ನು ಸಾಕ್ಷಿಯಾಗಿ ನೋಡುತ್ತಾ ಬನ್ನಿ. ಜೊತೆ ಜೊತೆಗೆ ನೆನಪಿನ ಯಾತ್ರೆಯಲ್ಲಿ ಮಸ್ತರಾಗಿರಿ. ಇದರಲ್ಲಿಯೇ ಅನುತ್ತೀರ್ಣರಾಗುತ್ತಾರೆ. ಜ್ಞಾನವೆಂದೂ ಹೆಚ್ಚು ಕಡಿಮೆಯಾಗಲು ಸಾಧ್ಯವಿಲ್ಲ. ನೆನಪಿನ ಯಾತ್ರೆಯಲ್ಲಿ ಏರಿಳಿತವಾಗುತ್ತದೆ. ಜ್ಞಾನವಂತೂ ಯಾವುದು ಸಿಕ್ಕಿದೆಯೋ ಅದು ನಿಮ್ಮಲ್ಲಿ ಇದ್ದೇ ಇದೆ. ನೆನಪಿನ ಯಾತ್ರೆಯಲ್ಲಿ ಮಾತ್ರ ಕೆಲವೊಮ್ಮೆ ಉಮ್ಮಂಗವಿರುತ್ತದೆ, ಇನ್ನೂ ಕೆಲವೊಮ್ಮೆ ಬಹಳ ಕೆಳಗೆ ಬಂದು ಬಿಡುತ್ತೀರಿ, ಯಾತ್ರೆಯಲ್ಲಿ ಏರಿಳಿತವಾಗುತ್ತದೆ. ಜ್ಞಾನದಲ್ಲಿಯೂ ಏಣಿಯನ್ನು ಏರುವುದಿಲ್ಲ, ಜ್ಞಾನಕ್ಕೆ ಯಾತ್ರೆಯೆಂದು ಹೇಳುವುದಿಲ್ಲ. ಇದು ನೆನಪಿನ ಯಾತ್ರೆಯಾಗಿದೆ. ತಂದೆಯು ತಿಳಿಸುತ್ತಾರೆ - ನೆನಪಿನಲ್ಲಿದ್ದರೆ ನೀವು ಸುರಕ್ಷಿತರಾಗಿರುತ್ತೀರಿ. ದೇಹಾಭಿಮಾನದಲ್ಲಿ ಬರುವುದರಿಂದಲೇ ನೀವು ಬಹಳ ಮೋಸ ಹೋಗುತ್ತೀರಿ, ವಿಕರ್ಮ ಮಾಡುತ್ತಿರುತ್ತಾರೆ. ಕಾಮ ಮಹಾಶತ್ರುವಾಗಿದೆ, ಇದರಲ್ಲಿಯೇ ಅನುತ್ತೀರ್ಣರಾಗಿ ಬಿಡುತ್ತಾರೆ. ಕ್ರೋಧ, ಇತ್ಯಾದಿಗಳ ಬಗ್ಗೆ ತಂದೆಯು ಅಷ್ಟೊಂದು ಒತ್ತುಕೊಟ್ಟು ಹೇಳುವುದಿಲ್ಲ, ಕಾಮದ ಮೇಲೆಯೇ ಇಷ್ಟೊಂದು ತಿಳಿಸುತ್ತಾರೆ.

ಜ್ಞಾನದಿಂದ ಸೆಕೆಂಡಿನಲ್ಲಿ ಜೀವನ್ಮುಕ್ತಿಯಾಗುತ್ತದೆ ಅಥವಾ ಸಾಗರವನ್ನು ಶಾಹಿಯನ್ನಾಗಿ ಮಾಡಿದರೂ ಸಹ ಜ್ಞಾನವು ಮುಗಿಯುವುದಿಲ್ಲ ಎಂದು ಹೇಳುತ್ತಾರೆ. ಇಲ್ಲಿಯೇ ಕೇವಲ ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಯಾವುದಕ್ಕೆ ನೆನಪು ಮಾಡುವುದೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ಕಲಿಯುಗದಿಂದ ನಿಮ್ಮನ್ನು ಸತ್ಯಯುಗದಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಹಳೆಯ ಪ್ರಪಂಚದಲ್ಲಿ ದುಃಖವಿದೆ. ನೀವೂ ಸಹ ನೋಡುತ್ತೀರಿ, ಮಳೆಯಿಂದ ಎಷ್ಟೊಂದು ಕಟ್ಟಡಗಳು ಬಿದ್ದು ಹೋಗುತ್ತಿರುತ್ತದೆ! ಎಷ್ಟೊಂದು ಮುಳುಗಿ ಹೋಗುತ್ತದೆ! ಮಳೆ ಇತ್ಯಾದಿಗಳೆಲ್ಲವೂ ಪ್ರಾಕೃತಿಕ ವಿಕೋಪಗಳಾಗಿವೆ. ಇದೆಲ್ಲವೂ ಆಕಸ್ಮಿಕವಾಗಿ ಆಗುತ್ತಾ ಇರುವುದು ಆದರೂ ಸಹ ಕುಂಭಕರ್ಣನ ನಿದ್ರೆಯಲ್ಲಿ ಮಲಗಿ ಬಿಟ್ಟಿದ್ದಾರೆ. ವಿನಾಶದ ಸಮಯದಲ್ಲಿ ಜಾಗೃತರಾಗುತ್ತಾರೆ ಆದರೆ ಏನು ತಾನೆ ಮಾಡಲು ಸಾಧ್ಯ! ಮರಣ ಹೊಂದುತ್ತಾರೆ. ಭೂಮಿಯೂ ಸಹ ಬಹಳ ಜೋರಾಗಿ ಅಲುಗಾಡುತ್ತದೆ. ಮಳೆ, ಬಿರುಗಾಳಿ ಎಲ್ಲವೂ ಬರುತ್ತದೆ. ಬಾಂಬುಗಳನ್ನು ಹಾಕುತ್ತಾರೆ ಆದರೆ ಇಲ್ಲಿ ಅಂತರ್ಯುದ್ಧಗಳು........... ನಡೆಯುತ್ತವೆಯೆಂದು ಸೇರಿಸಲಾಗಿದೆ. ರಕ್ತದ ನದಿಗಳು ಹರಿಯುತ್ತವೆ ಎಂದು ಗಾಯನವಿದೆ. ಇಲ್ಲಿ ಬಹಳಷ್ಟು ಹೊಡೆದಾಟಗಳಾಗುತ್ತವೆ. ಒಬ್ಬರು ಇನ್ನೊಬ್ಬರ ಮೇಲೆ ಮೊಕದ್ದಮೆ ಹೂಡುತ್ತಾರೆ. ಅಂದಮೇಲೆ ಅವಶ್ಯವಾಗಿ ಹೊಡೆದಾಡುತ್ತಾರೆ. ಎಲ್ಲರೂ ನಿರ್ಧನಿಕರಾಗಿದ್ದಾರೆ, ನೀವು ಧನಿಕರಾಗಿದ್ದೀರಿ ಅಂದಮೇಲೆ ಯಾವುದೇ ಯುದ್ಧ ಇತ್ಯಾದಿಗಳನ್ನು ನೀವು ಮಾಡಬಾರದು. ಬ್ರಾಹ್ಮಣರಾಗಿದ್ದರಿಂದ ನೀವು ಧನಿಕರಾಗಿ ಬಿಟ್ಟಿರಿ. ಧಣಿ ಎಂದು ತಂದೆಗೆ ಇಲ್ಲವೆ ಪತಿಗೆ ಹೇಳಲಾಗುತ್ತದೆ. ಶಿವ ತಂದೆಯಂತೂ ಪತಿಯರ ಪತಿಯಾಗಿದ್ದಾರೆ. ಹೇಗೆ ನಿಶ್ಚಿತಾರ್ಥವಾಗಿ ಬಿಟ್ಟರೆ ನಾವು ಇಂತಹ ಪತಿಯ ಜೊತೆ ಯಾವಾಗ ಹೋಗಿ ಮಿಲನ ಮಾಡುತ್ತೇವೆಂದು ಹಾಡುತ್ತಾರೆ, ಹಾಗೆಯೇ ಆತ್ಮಗಳೂ ಹೇಳುತ್ತೀರಿ - ಬಾಬಾ, ತಮ್ಮೊಂದಿಗೆ ನಮ್ಮ ನಿಶ್ಚಿತಾರ್ಥವಾಗಿ ಬಿಟ್ಟಿತು ಅಂದಾಗ ತಮ್ಮೊಂದಿಗೆ ಮಿಲನ ಮಾಡುವುದು ಹೇಗೆ? ಕೆಲವರಂತೂ ಸತ್ಯವನ್ನು ಬರೆಯುತ್ತಾರೆ, ಇನ್ನೂ ಕೆಲವರು ಬಹಳ ಮುಚ್ಚಿಡುತ್ತಾರೆ. ಬಾಬಾ, ನನ್ನಿಂದ ಈ ತಪ್ಪಾಯಿತು, ಕ್ಷಮೆ ಮಾಡಿ ಎಂದು ಸತ್ಯತೆಯಿಂದ ಬರೆಯುವುದೇ ಇಲ್ಲ. ಒಂದುವೇಳೆ ಯಾವುದೇ ವಿಕಾರದಲ್ಲಿ ಬಿದ್ದರೆ ಅವರ ಬುದ್ಧಿಯಲ್ಲಿ ಧಾರಣೆಯಾಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಇಂತಹ ಕಠಿಣ ತಪ್ಪನ್ನು ಮಾಡಿದರೆ ಬಿದ್ದು ಪುಡಿ-ಪುಡಿಯಾಗಿ ಬಿಡುತ್ತೀರಿ. ನಾನು ನಿಮ್ಮನ್ನು ಸುಂದರರನ್ನಾಗಿ ಮಾಡಲು ಬಂದಿದ್ದೇನೆ. ಅಂದಮೇಲೆ ನೀವು ಹೇಗೆ ಮುಖ ಕಪ್ಪು ಮಾಡಿಕೊಳ್ಳುತ್ತೀರಿ! ಮೊದಲು ಸ್ವರ್ಗದಲ್ಲಿ ಬರುತ್ತೀರಿ ಆದರೆ ಬಿಡಿಗಾಸು ಪದವಿಯನ್ನು ಪಡೆಯುವರು. ರಾಜಧಾನಿಯು ಸ್ಥಾಪನೆಯಾಗುತ್ತಿದೆಯಲ್ಲವೆ. ಕೆಲವರಂತೂ ಸೋಲನ್ನನುಭವಿಸಿ ಜನ್ಮ-ಜನ್ಮಾಂತರಕ್ಕಾಗಿ ಪದವಿ ಭ್ರಷ್ಟರಾಗಿ ಬಿಡುತ್ತಾರೆ. ಅಂತಹವರು ಹೇಳುತ್ತಾರೆ - ನೀವು ತಂದೆಯಿಂದ ಈ ಪದವಿಯನ್ನು ಪಡೆಯಲು ಬಂದಿದ್ದೀರಿ. ತಂದೆಯು ಎಷ್ಟು ಶ್ರೇಷ್ಠರಾದರು, ಮತ್ತೆ ನಾವು ಮಕ್ಕಳು ಪ್ರಜೆಗಳಾಗಲು ಸಾಧ್ಯವೇ? ತಂದೆಯ ಸಿಂಹಾಸನವನ್ನೇರಿ, ಮಕ್ಕಳು ದಾಸ-ದಾಸಿಯರಾದರೆ ಇದೆಷ್ಟು ನಾಚಿಕೆಯ ಮಾತಾಗಿದೆ! ಕೊನೆಯಲ್ಲಿ ನಿಮಗೆ ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ. ನಾವು ಹೀಗೆ ಮಾಡಿದೆವಲ್ಲ ಎಂದು ಬಹಳ ಪಶ್ಚಾತ್ತಾಪ ಪಡುವಿರಿ. ಸನ್ಯಾಸಿಗಳೂ ಸಹ ಬ್ರಹ್ಮಚರ್ಯದಲ್ಲಿರುತ್ತಾರೆ, ಆದ್ದರಿಂದ ವಿಕಾರಿಗಳೆಲ್ಲರೂ ಅವರಿಗೆ ತಲೆ ಬಾಗುತ್ತಾರೆ. ಪವಿತ್ರತೆಗೆ ಮಾನ್ಯತೆಯಿದೆ. ಯಾರ ಅದೃಷ್ಟದಲ್ಲಿಲ್ಲವೆಂದರೆ ತಂದೆಯು ಬಂದು ಓದಿಸಿದರೂ ಸಹ ಉದಾಸೀನ ಮಾಡುತ್ತಿರುತ್ತಾರೆ. ನೆನಪನ್ನೇ ಮಾಡುವುದಿಲ್ಲ. ಬಹಳ ವಿಕರ್ಮಗಳಾಗಿ ಬಿಡುತ್ತವೆ.

ನೀವು ಮಕ್ಕಳ ಮೇಲೆ ಈಗ ಬೃಹಸ್ಪತಿ ದೆಶೆಯಿದೆ. ಇದಕ್ಕಿಂತ ಶ್ರೇಷ್ಠ ದೆಶೆ ಮತ್ತ್ಯಾವುದೂ ಇಲ್ಲ. ನೀವು ಮಕ್ಕಳ ಮೇಲೆ ದೆಶೆಗಳು ಸುತ್ತುತ್ತಿರುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಡ್ರಾಮಾದ ಪ್ರತಿಯೊಂದು ದೃಶ್ಯವನ್ನು ಸಾಕ್ಷಿಯಾಗಿ ನೋಡಬೇಕು, ಒಬ್ಬ ತಂದೆಯ ನೆನಪಿನಲ್ಲಿ ಮಸ್ತರಾಗಿರಬೇಕಾಗಿದೆ. ನೆನಪಿನ ಯಾತ್ರೆಯಲ್ಲಿ ಎಂದೂ ಉಮ್ಮಂಗವು ಕಡಿಮೆಯಾಗದಿರಲಿ.

2. ವಿದ್ಯೆಯಲ್ಲೆಂದೂ ಉದಾಸೀನರಾಗಬಾರದು, ತಮ್ಮ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳಲು ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಸೋಲನ್ನನುಭವಿಸಿ ಜನ್ಮ-ಜನ್ಮಾಂತರಕ್ಕಾಗಿ ಪದವಿ ಭ್ರಷ್ಟ ಮಾಡಿಕೊಳ್ಳಬಾರದು.

ವರದಾನ:
ಸತ್ಯ ಸೇವೆಯ ಮೂಲಕ ಅವಿನಾಶಿ, ಅಲೌಕಿಕ ಖುಷಿಯ ಸಾಗರದಲ್ಲಿ ತೇಲಾಡುವ ಅದೃಷ್ಟವಂತ ಆತ್ಮ ಭವ.

ಯಾವ ಮಕ್ಕಳು ಸೇವೆಗಳಲ್ಲಿ ಬಾಪ್ದಾದಾ ಮತ್ತು ನಿಮಿತ್ತವಾಗಿರುವ ಹಿರಿಯ ಸ್ನೇಹದ ಆಶೀರ್ವಾದಗಳನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ, ಅವರಲ್ಲಿ ಅಲೌಕಿಕ, ಆತ್ಮಿಕ ಖುಷಿಯ ಅನುಭವವಾಗುತ್ತದೆ. ಅವರು ಸೇವೆಗಳ ಮೂಲಕ ಆಂತರಿಕ ಖುಷಿ, ಆತ್ಮಿಕ ಮೋಜು, ಬೇಹದ್ದಿನ ಪ್ರಾಪ್ತಿಯ ಅನುಭವ ಮಾಡುತ್ತಾ, ಸದಾ ಖುಷಿಯ ಸಾಗರದಲ್ಲಿ ತೇಲಾಡುತ್ತಿರುತ್ತಾರೆ. ಸತ್ಯ ಸೇವೆಯು ಸರ್ವರ ಸ್ನೇಹ, ಸರ್ವರ ಮೂಲಕ ಅವಿನಾಶಿ ಸಮ್ಮಾನ ಮತ್ತು ಖುಷಿಯ ಆಶೀರ್ವಾದಗಳನ್ನು ಪ್ರಾಪ್ತಿ ಮಾಡಿಕೊಳ್ಳುವ ಅದೃಷ್ಟದ ಶ್ರೇಷ್ಠ ಭಾಗ್ಯದ ಅನುಭವ ಮಾಡಿಸುತ್ತದೆ. ಯಾರು ಸದಾ ಖುಷಿಯಾಗಿದ್ದಾರೆ ಅವರೇ ಅದೃಷ್ಟವಂತರಾಗಿದ್ದಾರೆ.

ಸ್ಲೋಗನ್:
ಸದಾ ಹರ್ಷಿತ ಅಥವಾ ಆಕರ್ಷಣಾ ಮೂರ್ತಿಯಾಗುವುದಕ್ಕಾಗಿ ಸಂತುಷ್ಟಮಣಿಯಾಗಿರಿ.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ಕರ್ಮದಲ್ಲಿ, ವಾಣಿಯಲ್ಲಿ, ಸಂಪರ್ಕದಲ್ಲಿ ಅಥವಾ ಸಂಬಂಧದಲ್ಲಿ ಪ್ರೀತಿ ಮತ್ತು ಸ್ಮೃತಿ ಅಥವಾ ಸ್ಥಿತಿಯಲ್ಲಿ ಲವಲೀನರಾಗಿರಬೇಕು, ಯಾರು ಎಷ್ಟು ಪ್ರಿಯರಾಗಿರುತ್ತಾರೆ, ಅವರು ಅಷ್ಟೇ ಲವಲೀನರಾಗಿರಲು ಸಾಧ್ಯ. ಈ ಲವಲೀನ ಸ್ಥಿತಿಯ ಮನುಷ್ಯಾತ್ಮರು ಲೀನವಾಗುವ ಅವಸ್ಥೆಯೆಂದು ಹೇಳಿಬಿಟ್ಟರು. ತಂದೆಯಲ್ಲಿನ ಪ್ರೀತಿಯನ್ನು (ಲವ) ಸಮಾಪ್ತಿ ಮಾಡಿ ಕೇವಲ ಲೀನ ಶಬ್ದವನ್ನು ತೆಗೆದುಕೊಂಡಿದ್ದಾರೆ. ನೀವು ಮಕ್ಕಳು ತಂದೆಯ ಪ್ರೀತಿಯಲ್ಲಿ ಲವಲೀನರಾಗಿದ್ದರೆ ಅನ್ಯರನ್ನು ತಮ್ಮ ಸಮಾನ ಅಥವಾ ತಂದೆಯ ಸಮಾನ ಮಾಡಿಕೊಳ್ಳಬಹುದು.