14.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನೀವೀಗ
ಸಂಗಮದಲ್ಲಿದ್ದೀರಿ, ನೀವು ಹಳೆಯ ಪ್ರಪಂಚದಿಂದ ಸಂಬಂಧವನ್ನು ತೆಗೆಯಬೇಕಾಗಿದೆ ಏಕೆಂದರೆ ಈ ಹಳೆಯ
ಪ್ರಪಂಚವು ಈಗ ಸಮಾಪ್ತಿಯಾಗಲಿದೆ”
ಪ್ರಶ್ನೆ:
ಸಂಗಮಯುಗದ ಯಾವ
ವಿಶೇಷತೆಯು ಇಡೀ ಕಲ್ಪಕ್ಕಿಂತ ಭಿನ್ನವಾಗಿದೆ?
ಉತ್ತರ:
ಸಂಗಮಯುಗದ
ವಿಶೇಷತೆಯೇ ಆಗಿದೆ- ಇಲ್ಲಿ ಓದುತ್ತೀರಿ, ಪ್ರಾಲಬ್ಧವನ್ನು ಭವಿಷ್ಯದಲ್ಲಿ ಪಡೆಯುತ್ತೀರಿ. ಇಡೀ
ಕಲ್ಪದಲ್ಲಿ ಇಂತಹ ವಿದ್ಯೆಯನ್ನು ಓದಿಸಲಾಗುವುದಿಲ್ಲ. ಯಾವುದರ ಪ್ರಾಲಬ್ಧವು ಇನ್ನೊಂದು ಜನ್ಮದಲ್ಲಿ
ಸಿಗುತ್ತದೆ, ಈಗ ನೀವು ಮಕ್ಕಳು ಅಮರಲೋಕಕ್ಕಾಗಿ ಮೃತ್ಯುಲೋಕದಲ್ಲಿ ಓದುತ್ತೀರಿ. ಇನ್ನೊಂದು
ಜನ್ಮಕ್ಕಾಗಿ ಓದುವುದಿಲ್ಲ.
ಗೀತೆ:
ದೂರದೇಶದಲ್ಲಿರುವವರು.................
ಓಂ ಶಾಂತಿ.
ದೂರದೇಶದಲ್ಲಿರುವವರು ಯಾರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಪರದೇಶದಲ್ಲಿ ಬರಲು ಅವರಿಗೆ ತಮ್ಮ
ದೇಶವಿರಲಿಲ್ಲವೇ? ಅವರು ತಮ್ಮ ದೇಶದಲ್ಲಿ ಬರುವುದಿಲ್ಲ. ಈ ರಾವಣನ ರಾಜ್ಯವು ಪರದೇಶವಾಗಿದೆಯಲ್ಲವೆ
ಅಂದಮೇಲೆ ಶಿವತಂದೆಯು ತಮ್ಮ ದೇಶದಲ್ಲಿ ಬರುವುದಿಲ್ಲವೇ? ರಾವಣನ ಪರದೇಶವು ಯಾವುದು? ಮತ್ತು ದೇಶವು
ಯಾವುದು? ಶಿವತಂದೆಗೆ ತನ್ನ ದೇಶ ಯಾವುದಾಗಿದೆ? ತನ್ನ ದೇಶದ ಸ್ಥಾಪನೆ ಮಾಡಲು ಬಂದಿದ್ದಾರೆ. ತಮ್ಮ
ದೇಶದಲ್ಲಿ ಸ್ವಯಂ ತಂದೆಯೇ ಬರುತ್ತಾರೆ. (ಒಬ್ಬಿಬ್ಬರು ತಿಳಿಸಿದರು) ಒಳ್ಳೆಯದು. ಇದರ ಮೇಲೆ ಎಲ್ಲರೂ
ವಿಚಾರಸಾಗರ ಮಂಥನ ಮಾಡಿ. ಇದು ಬಹಳ ತಿಳಿದುಕೊಳ್ಳುವ ಮಾತಾಗಿವೆ. ರಾವಣನ ಪರದೇಶವನ್ನು ತಿಳಿಸುವುದು
ಬಹಳ ಸಹಜವಾಗಿದೆ. ರಾಮರಾಜ್ಯದಲ್ಲಿ ಎಂದೂ ರಾವಣನು ಬರುವುದಿಲ್ಲ. ತಂದೆಯು ರಾವಣನ ದೇಶದಲ್ಲಿ
ಬರಬೇಕಾಗುತ್ತದೆ ಏಕೆಂದರೆ ರಾವಣನ ರಾಜ್ಯವನ್ನು ಪರಿವರ್ತನೆ ಮಾಡಬೇಕಾಗುತ್ತದೆ. ಇದು
ಸಂಗಮಯುಗವಾಗಿದೆ. ಅವರು ಸತ್ಯಯುಗದಲ್ಲಿಯೂ ಬರುವುದಿಲ್ಲ. ಕಲಿಯುಗದಲ್ಲಿಯೂ ಬರುವುದಿಲ್ಲ.
ಸಂಗಮಯುಗದಲ್ಲಿಯೇ ಬರುತ್ತಾರೆ ಅಂದಾಗ ಇದು ರಾಮನ ದೇಶವಾಗಿದೆ. ರಾವಣನ ದೇಶವೂ ಆಗಿದೆ. ಈ ತೀರವು
ರಾಮನದು, ಆ ತೀರವು ರಾವಣನದಾಗಿದೆ. ಇದು ಸಂಗಮವಲ್ಲವೆ. ಈಗ ನೀವು ಮಕ್ಕಳು ಸಂಗಮದಲ್ಲಿದ್ದೀರಿ,
ಆಕಡೆಯೂ ಇಲ್ಲ ಈಕಡೆಯೂ ಇಲ್ಲ. ತಮ್ಮನ್ನು ಸಂಗಮದಲ್ಲಿದ್ದೇವೆಂದು ತಿಳಿಯಬೇಕು. ನಮಗೆ ಅತ್ತಕಡೆ
ಸಂಬಂಧವಿಲ್ಲ, ಬುದ್ಧಿಯಿಂದ ಹಳೆಯ ಪ್ರಪಂಚದೊಂದಿಗಿನ ಸಂಬಂಧವನ್ನು ತೆಗೆಯಬೇಕಾಗಿದೆ. ಇರುವುದಂತೂ
ಇಲ್ಲಿಯೇ ಆದರೆ ಬುದ್ಧಿಯಿಂದ ತಿಳಿಯಿರಿ, ಈ ಹಳೆಯ ಪ್ರಪಂಚವೇ ಸಮಾಪ್ತಿಯಾಗಲಿದೆ. ನಾವೀಗ
ಸಂಗಮದಲ್ಲಿದ್ದೇವೆಂದು ಆತ್ಮವು ಹೇಳುತ್ತದೆ. ತಂದೆಯು ಬಂದಿದ್ದಾರೆ ಅವರಿಗೆ ಅಂಬಿಗನೆಂತಲೂ
ಹೇಳುತ್ತಾರೆ. ನಾವೀಗ ಹೋಗುತ್ತಿದ್ದೇವೆ, ಹೇಗೆ? ಯೋಗದಿಂದ. ಯೋಗಕ್ಕಾಗಿಯೂ ಜ್ಞಾನವಿದೆ,
ಜ್ಞಾನಕ್ಕಾಗಿಯೂ ಜ್ಞಾನವಿದೆ. ಯೋಗಕ್ಕಾಗಿ ತಿಳಿಸಲಾಗುತ್ತದೆ- ತಮ್ಮನ್ನು ಆತ್ಮನೆಂದು ತಿಳಿಯಿರಿ
ಮತ್ತು ತಂದೆಯನ್ನು ನೆನಪು ಮಾಡಿ. ಇದೂ ಸಹ ಜ್ಞಾನವಾಗಿದೆಯಲ್ಲವೆ. ಜ್ಞಾನವೆಂದರೆ ತಿಳುವಳಿಕೆ.
ತಂದೆಯು ಮತವನ್ನು ಕೊಡಲು ಬಂದಿದ್ದಾರೆ. ತಮ್ಮನ್ನು ಆತ್ಮವೆಂದು ತಿಳಿಯಿರಿ ಎಂದು ಹೇಳುತ್ತಾರೆ.
ಆತ್ಮವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ತಂದೆಯು ಮಕ್ಕಳಿಗೆ ವಿಸ್ತಾರವಾಗಿ
ತಿಳಿಸಿಕೊಡುತ್ತಾರೆ. ಈಗ ಈ ರಾವಣರಾಜ್ಯವು ಸಮಾಪ್ತಿಯಾಗಲಿದೆ. ಇಲ್ಲಿ ಕರ್ಮಬಂಧನವಿದೆ.
ಸತ್ಯಯುಗದಲ್ಲಿ ಕರ್ಮಸಂಬಂಧವಿರುತ್ತದೆ. ಬಂಧನವೆಂಬುದು ದುಃಖದ ಹೆಸರಾಗಿದೆ. ಸಂಬಂಧವು ಸುಖದ
ಹೆಸರಾಗಿದೆ. ಈಗ ಕರ್ಮಬಂಧನವನ್ನು ಕತ್ತರಿಸಬೇಕಾಗಿದೆ. ಬುದ್ಧಿಯಲ್ಲಿದೆ- ನಾವು ಈ ಸಮಯದಲ್ಲಿ
ಬ್ರಾಹ್ಮಣ ಸಂಬಂಧದಲ್ಲಿದ್ದೇವೆ ನಂತರ ದೈವೀಸಂಬಂಧದಲ್ಲಿ ಹೋಗುತ್ತೇವೆ. ಬ್ರಾಹ್ಮಣ ಸಂಬಂಧವು ಇದೊಂದೇ
ಜನ್ಮವಾಗಿದೆ. ನಂತರ 8 ಮತ್ತು 12 ಜನ್ಮಗಳು ದೈವೀಸಂಬಂಧದಲ್ಲಿರುತ್ತೀರಿ. ಈ ಜ್ಞಾನವು
ಬುದ್ಧಿಯಲ್ಲಿದೆ ಆದ್ದರಿಂದ ಕಲಿಯುಗೀ ಛೀ ಛೀ ಕರ್ಮಬಂಧನದಿಂದ ಹೇಗೆ ನಿಂದನೆ ಮಾಡುತ್ತಾರೆ! ಈ
ಪ್ರಪಂಚದ ಕರ್ಮಬಂಧನದಲ್ಲಿ ಈಗ ಇರುವಂತಿಲ್ಲ. ಇವೆಲ್ಲವೂ ಆಸುರೀ ಕರ್ಮಬಂಧನವೆಂಬ ತಿಳುವಳಿಕೆಯು
ಸಿಕ್ಕಿದೆ. ನಾವೂ ಸಹ ಒಂದು ಗುಪ್ತ ಯಾತ್ರೆಯಲ್ಲಿದ್ದೇವೆ. ಈ ತಂದೆಯು ಯಾತ್ರೆಯನ್ನು ಕಲಿಸಿದ್ದಾರೆ
ನಂತರ ಈ ಕರ್ಮಬಂಧನದಿಂದ ಭಿನ್ನರಾಗಿ ನಾವು ಕರ್ಮಾತೀತರಾಗಿಬಿಡುತ್ತೇವೆ. ಈ ಕರ್ಮಬಂಧನವು ಈಗ
ಕತ್ತರಿಸಲೇಬೇಕಾಗಿದೆ. ನಾವು ತಂದೆಯನ್ನು ಏಕೆ ನೆನಪು ಮಾಡುತ್ತೇವೆಂದರೆ ಪವಿತ್ರರಾಗಿ
ಚಕ್ರವನ್ನರಿತು ಚಕ್ರವರ್ತಿ ರಾಜರಾಗಬೇಕಾಗಿದೆ. ಓದುತ್ತಿದ್ದೇವೆ, ಮತ್ತೆ ಗುರಿ-ಧ್ಯೇಯದ
ಪ್ರಾಬಲ್ಧವು ಬೇಕಲ್ಲವೆ. ನಿಮಗೆ ತಿಳಿದಿದೆ- ನಮಗೆ ಓದಿಸುವವರು ಬೇಹದ್ದಿನ ತಂದೆಯಾಗಿದ್ದಾರೆ. ಅವರು
ನಮಗೆ 5000 ವರ್ಷಗಳ ಮೊದಲು ಓದಿಸಿದ್ದರು, ಇದು ನಾಟಕವಾಗಿದೆಯಲ್ಲವೆ. ಯಾರಿಗೆ ಕಲ್ಪದ ಹಿಂದೆ
ಓದಿಸಿದ್ದರೋ ಅವರಿಗೇ ಓದಿಸುತ್ತಾರೆ. ಬರುತ್ತಿರುತ್ತಾರೆ, ವೃದ್ಧಿಯನ್ನು ಹೊಂದುತ್ತಾ ಇರುತ್ತಾರೆ.
ಎಲ್ಲರೂ ಸತ್ಯಯುಗದಲ್ಲಿ ಬರುವುದಿಲ್ಲ. ಉಳಿದೆವರೆಲ್ಲರೂ ಹಿಂತಿರುಗಿ ಮನೆಗೆ ಹೋಗುತ್ತಾರೆ. ಇತ್ತಕಡೆ
ನರಕವಿದೆ, ಅತ್ತಕಡೆ ಸ್ವರ್ಗವಿದೆ. ಆ ವಿದ್ಯೆಯಲ್ಲಂತೂ ಪ್ರಾಲಬ್ಧವನ್ನು ಇಲ್ಲಿಯೇ ಪಡೆಯುತ್ತೇವೆಂದು
ತಿಳಿಯುತ್ತಾರೆ ಆದರೆ ನಾವು ಸಂಗಮಯುಗದಲ್ಲಿ ಓದುತ್ತೇವೆ. ಇದರ ಪ್ರಾಲಬ್ಧವು ನಮಗೆ ಹೊಸಪ್ರಪಂಚದಲ್ಲಿ
ಸಿಗುವುದು. ಇದು ಹೊಸಮಾತಾಗಿದೆ. ನಿಮಗೆ ಇದರ ಪ್ರಾಲಬ್ಧವು ಇನ್ನೊಂದು ಜನ್ಮದಲ್ಲಿ ಸಿಗುವುದೆಂಬ
ಮಾತನ್ನು ಪ್ರಪಂಚದಲ್ಲಿ ಮತ್ತ್ಯಾರೂ ಹೇಳುವುದಿಲ್ಲ. ಈ ಜನ್ಮದಲ್ಲಿ ಮುಂದಿನ ಜನ್ಮಗಳ
ಪ್ರಾಲಬ್ಧವನ್ನು ಪಡೆಯುವುದು ಕೇವಲ ಈ ಸಂಗಮಯುಗದಲ್ಲಿಯೇ ಆಗುತ್ತದೆ. ತಂದೆಯೂ ಸಹ ಸಂಗಮಯುಗದಲ್ಲಿ
ಬರುತ್ತಾರೆ. ನೀವು ಪುರುಷೋತ್ತಮರಾಗಲು ಓದುತ್ತೀರಿ. ಒಂದೇ ಬಾರಿ ಭಗವಂತ ಜ್ಞಾನಸಾಗರನು ಬಂದು ಹೊಸ
ಪ್ರಪಂಚ, ಅಮರಪುರಿಗಾಗಿ ಓದಿಸುತ್ತಾರೆ. ಇದು ಕಲಿಯುಗ, ಮೃತ್ಯುಲೋಕವಾಗಿದೆ, ನಾವು ಸತ್ಯಯುಗಕ್ಕಾಗಿ
ಓದುತ್ತೇವೆ. ನರಕವಾಸಿಗಳಿಂದ ಸ್ವರ್ಗವಾಸಿಗಳಾಗಲು ಓದುತ್ತೇವೆ. ಇದು ಪರದೇಶ, ಅದು ನಮ್ಮ ದೇಶವಾಗಿದೆ.
ಆ ತಮ್ಮ ದೇಶದಲ್ಲಿ ಬರಲು ತಂದೆಗೆ ಅವಶ್ಯಕತೆಯಿಲ್ಲ. ಆ ದೇಶವು ಕೇವಲ ತಾವು ಮಕ್ಕಳಿಗಾಗಿಯೇ ಇದೆ. ಆ
ಸತ್ಯಯುಗದಲ್ಲಿ ರಾವಣನು ಬರುವಂತಿಲ್ಲ. ರಾವಣನು ಮಾಯವಾಗಿಬಿಡುತ್ತಾನೆ. ಮತ್ತೆ ದ್ವಾಪರದಲ್ಲಿ
ಬರುತ್ತಾನೆ ಆಗ ತಂದೆಯು ಮರೆಯಾಗುತ್ತಾರೆ. ಸತ್ಯಯುಗದಲ್ಲಿ ಯಾರೂ ಅವರನ್ನು ತಿಳಿದುಕೊಂಡಿಲ್ಲ
ಅಂದಮೇಲೆ ನೆನಪನ್ನೇಕೆ ಮಾಡುತ್ತಾರೆ! ಸುಖದ ಪ್ರಾಲಬ್ಧವು ಪೂರ್ಣವಾದಾಗ ರಾವಣರಾಜ್ಯವು
ಆರಂಭವಾಗುತ್ತದೆ, ಇದಕ್ಕೆ ಪರದೇಶವೆಂದು ಹೇಳಲಾಗುತ್ತದೆ.
ಈಗ ನೀವು
ತಿಳಿದುಕೊಂಡಿದ್ದೀರಿ- ನಾವು ಸಂಗಮಯುಗದಲ್ಲಿದ್ದೇವೆ, ನಮಗೆ ಮಾರ್ಗವನ್ನು ತೋರಿಸುವಂತಹ ತಂದೆಯು
ಸಿಕ್ಕಿದ್ದಾರೆ, ಉಳಿದೆವರೆಲ್ಲರೂ ಅಲೆದಾಡುತ್ತಿರುತ್ತಾರೆ. ಯಾರು ಬಹಳ ಸುಸ್ತಾಗಿರುವರೋ, ಯಾರು
ಕಲ್ಪದ ಹಿಂದೆ ಮಾರ್ಗವನ್ನು ಪಡೆದಿರುವರೋ ಅವರೇ ಬರುತ್ತಾರೆ. ನೀವು ಮಾರ್ಗದರ್ಶಕರು ಎಲ್ಲರಿಗೆ
ಮಾರ್ಗವನ್ನು ತಿಳಿಸುತ್ತೀರಿ, ಇದು ಆತ್ಮಿಕ ಯಾತ್ರೆಯ ಮಾರ್ಗವಾಗಿದೆ. ನೇರವಾಗಿ ಸುಖಧಾಮಕ್ಕೆ
ಹೋಗುತ್ತೀರಿ, ನೀವು ಮಾರ್ಗದರ್ಶಕರು ಪಾಂಡವ ಸಂಪ್ರದಾಯದವರಾಗಿದ್ದೀರಿ. ಪಾಂಡವರಾಜ್ಯವೆಂದು
ಹೇಳುವುದಿಲ್ಲ. ರಾಜ್ಯವು ಕೌರವರಿಗೂ ಇಲ್ಲ, ಪಾಂಡವರಿಗೂ ಇಲ್ಲ. ಇಬ್ಬರಿಗೂ ಕಿರೀಟವಿಲ್ಲ.
ಭಕ್ತಿಮಾರ್ಗದಲ್ಲಿ ಇಬ್ಬರಿಗೂ ಕಿರೀಟವನ್ನು ತೋರಿಸಿದ್ದಾರೆ. ಒಂದುವೇಳೆ ಕೊಟ್ಟರೂ ಸಹ ಕೌರವರಿಗೆ
ಪ್ರಕಾಶತೆಯ ಕಿರೀಟವಿಲ್ಲ, ಪಾಂಡವರಿಗೂ ಸಹ ಕೊಡಲು ಸಾಧ್ಯವಿಲ್ಲ ಏಕೆಂದರೆ ಇನ್ನೂ
ಪುರುಷಾರ್ಥಿಗಳಾಗಿದ್ದಾರೆ. ನಡೆಯುತ್ತಾ-ನಡೆಯುತ್ತಾ ಕೆಳಗೆ ಬೀಳುತ್ತಾರೆ ಆದ್ದರಿಂದ ಯಾರಿಗೆ
ಕೊಡುವುದು! ಇದರಿಂದಲೇ ಇವೆಲ್ಲಾ ಅಲಂಕಾರಗಳನ್ನು ವಿಷ್ಣುವಿಗೆ ತೋರಿಸಿದ್ದಾರೆ ಏಕೆಂದರೆ ಅವರು
ಪವಿತ್ರವಾಗಿದ್ದಾರೆ. ಸತ್ಯಯುಗದಲ್ಲಿ ಪವಿತ್ರ, ಸಂಪೂರ್ಣ ನಿರ್ವಿಕಾರಿಗಳಾಗಿರುತ್ತಾರೆ.
ಪವಿತ್ರತೆಯ ಪ್ರಕಾಶತೆಯ ಕಿರೀಟವಿರುತ್ತದೆ. ಈ ಸಮಯದಲ್ಲಂತೂ ಯಾರೂ ಪವಿತ್ರರಿಲ್ಲ. ನಾವು
ಪವಿತ್ರರೆಂದು ಸನ್ಯಾಸಿಗಳು ಹೇಳಿಕೊಳ್ಳುತ್ತಾರೆ ಆದರೆ ಪ್ರಪಂಚವು ಪವಿತ್ರವಲ್ಲವಲ್ಲವೆ. ಮತ್ತೆ
ಜನ್ಮವನ್ನೂ ಸಹ ವಿಕಾರಿ ಪ್ರಪಂಚದಲ್ಲಿಯೇ ತೆಗೆದುಕೊಳ್ಳುತ್ತಾರೆ. ಇದು ರಾವಣನ ಪತಿತಪುರಿಯಾಗಿದೆ.
ಪಾವನ ರಾಜ್ಯವೆಂದು ಹೊಸ ಪ್ರಪಂಚ, ಸತ್ಯಯುಗಕ್ಕೆ ಹೇಳಲಾಗುತ್ತದೆ. ಈಗ ನೀವು ಮಕ್ಕಳನ್ನು ತಂದೆ
ಮಾಲಿಯು ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಾರೆ. ಅವರು ಪತಿತ-ಪಾವನನೂ ಆಗಿದ್ದಾರೆ, ಅಂಬಿಗನೂ
ಆಗಿದ್ದಾರೆ, ಮಾಲಿಯೂ ಆಗಿದ್ದಾರೆ. ಮುಳ್ಳುಗಳ ಕಾಡಿನಲ್ಲಿ ಮಾಲಿಯೂ ಬಂದಿದ್ದಾರೆ, ನಿಮ್ಮ
ಕಮ್ಯಾಂಡರ್ ಒಬ್ಬರೇ ಆಗಿದ್ದಾರೆ. ಯಾದವರ ಚೀಫ್ ಕಮ್ಯಾಂಡರ್ ಎಂದು ಶಂಕರನಿಗೆ ಹೇಳುವುದೇ?
ವಾಸ್ತವದಲ್ಲಿ ಶಂಕರನೇನು ವಿನಾಶ ಮಾಡಿಸುವುದಿಲ್ಲ. ಸಮಯವು ಬಂದಾಗ ಯುದ್ಧವು ತಾನೇ ಆಗುತ್ತದೆ,
ಶಂಕರನ ಪ್ರೇರಣೆಯಿಂದ ಅಣ್ವಸ್ತ್ರಗಳು ತಯಾರಾಗುತ್ತವೆ ಎಂದು ಹೇಳುತ್ತಾರೆ. ಹೀಗೆ ಅನೇಕ ಕಥೆಗಳನ್ನು
ಬರೆದಿದ್ದಾರೆ. ಹಳೆಯ ಪ್ರಪಂಚವಂತೂ ಅವಶ್ಯವಾಗಿ ಸಮಾಪ್ತಿಯಾಗಲಿದೆ. ಮನೆಯು ಹಳೆಯದಾದಾಗ
ಬಿದ್ದುಹೋಗುತ್ತದೆ. ಮನುಷ್ಯರು ಸತ್ತುಹೋಗುತ್ತಾರೆ. ಈ ಹಳೆಯ ಪ್ರಪಂಚವೂ ಸಹ ಸಮಾಪ್ತಿಯಾಗಲಿದೆ.
ಇವೆಲ್ಲವೂ ಬಿದ್ದು ಕೆಲವರು ಸತ್ತುಹೋಗುತ್ತಾರೆ, ಕೆಲವರು ನೀರಿನಲ್ಲಿ ಮುಳುಗಿ ಸಾಯುತ್ತಾರೆ,
ಕೆಲವರು ಗಾಬರಿಯಲ್ಲಿ ಶರೀರಬಿಡುತ್ತಾರೆ, ಅಣುಬಾಂಬುಗಳ ವಿಷಗಾಳಿಯೂ ಸಹ ಅನೇಕರನ್ನು ಸಾಯಿಸುತ್ತದೆ.
ಮಕ್ಕಳ ಬುದ್ಧಿಯಲ್ಲಿದೆ- ಈಗ ವಿನಾಶವು ಆಗಲೇಬೇಕಾಗಿದೆ, ನಾವು ಆ ತೀರಕ್ಕೆ ಹೋಗಬೇಕಾಗಿದೆ.
ಕಲಿಯುಗವು ಪೂರ್ಣವಾಗಿ ಸತ್ಯಯುಗದ ಸ್ಥಾಪನೆಯು ಅವಶ್ಯವಾಗಿ ಆಗಬೇಕಾಗಿದೆ. ನಂತರ ಅರ್ಧಕಲ್ಪ ಯುದ್ಧವು
ನಡೆಯುವುದೇ ಇಲ್ಲ.
ಈಗ ತಂದೆಯು ಪುರುಷಾರ್ಥ
ಮಾಡಿಸಲು ಬಂದಿದ್ದಾರೆ. ಇದು ಕೊನೆಯ ಅವಕಾಶವಾಗಿದೆ, ತಡಮಾಡಿದರೆ ಮತ್ತೆ ಆಕಸ್ಮಿಕವಾಗಿ ಶರೀರವನ್ನು
ಬಿಡುತ್ತೀರಿ. ಮೃತ್ಯುವು ಸನ್ಮುಖದಲ್ಲಿ ನಿಂತಿದೆ. ಮನುಷ್ಯರು ಕುಳಿತಿದ್ದಂತೆಯೇ ಆಕಸ್ಮಿಕವಾಗಿ
ಸತ್ತುಹೋಗುತ್ತಾರೆ. ಸಾಯುವುದಕ್ಕೆ ಮೊದಲೇ ನೆನಪಿನ ಯಾತ್ರೆ ಮಾಡಿರಿ. ನೀವು ಮಕ್ಕಳೀಗ ಮನೆಗೆ
ಹೋಗಬೇಕಾಗಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಮನೆಯನ್ನು ನೆನಪು ಮಾಡಿ ಇದರಿಂದ
ಅಂತ್ಯ ಮತಿ ಸೋ ಗತಿಯಾಗುವುದು. ಮನೆಗೆ ಹೊರಟುಹೋಗುತ್ತೀರಿ ಆದರೆ ಕೇವಲ ಮನೆಯನ್ನು ನೆನಪು
ಮಾಡುವುದರಿಂದ ಪಾಪವು ನಾಶವಾಗುವುದಿಲ್ಲ. ತಂದೆಯನ್ನು ನೆನಪು ಮಾಡುವುದರಿಂದಲೇ ಪಾಪಗಳು
ನಾಶವಾಗುವುದು ಮತ್ತು ಈಗ ತಮ್ಮ ಮನೆಗೆ ಹೊರಟುಹೋಗುತ್ತೀರಿ ಆದ್ದರಿಂದ ತಂದೆಯನ್ನು ನೆನಪು ಮಾಡುತ್ತಾ
ಇರಿ. ತಮ್ಮ ಚಾರ್ಟನ್ನು ಇಟ್ಟುಕೊಳ್ಳಿ. ಇಡೀ ದಿನದಲ್ಲಿ ನಾವು ಏನು ಮಾಡಿದೆವೆಂಬುದು ಅರ್ಥವಾಗುವುದು.
5-6 ವರ್ಷದ ಮಗುವಿನಿಂದ ಹಿಡಿದು ತಮ್ಮ ಜೀವನದಲ್ಲಿ ಏನೇನು ಮಾಡಿದೆವೆಂಬುದು ನೆನಪಿರುತ್ತದೆ. ಇಡೀ
ಸಮಯ ಬರೆಯುತ್ತಾ ಇರಬೇಕಾಗುತ್ತದೆ ಎಂದಲ್ಲ, ಗಮನದಲ್ಲಿರುತ್ತದೆ. ನಾವು ಉದ್ಯಾನವನದಲ್ಲಿ ಕುಳಿತು
ತಂದೆಯನ್ನು ನೆನಪು ಮಾಡಿದೆವು, ಅಂಗಡಿಯಲ್ಲಿ ಯಾರೂ ಗ್ರಾಹಕರಿರಲಿಲ್ಲ ಆಗ ನಾವು ನೆನಪಿನಲ್ಲಿ
ಕುಳಿತಿದ್ದೆವು, ಹೀಗೆ ಒಳಗೆ ಎಲ್ಲವೂ ನೋಟ್ ಆಗುತ್ತಿರುವುದು. ಒಂದುವೇಳೆ ಬರೆಯಲು
ಇಚ್ಛಿಸುತ್ತೀರೆಂದರೆ ಮತ್ತೆ ದೈನಂದಿನ ದಿನಚರಿಯನ್ನು ಇಡಬಹುದಾಗಿದೆ. ಮೂಲಮಾತೇ ಇದಾಗಿದೆ. ನಾವು
ತಮೋಪ್ರಧಾನರಿಂದ ಹೇಗೆ ಸತೋಪ್ರಧಾನರಾಗುವುದು, ಹೇಗೆ ಪವಿತ್ರಪ್ರಪಂಚದ ಮಾಲೀಕರಾಗುವುದು! ಪತಿತರಿಂದ
ಪಾವನ ಹೇಗಾಗುವುದು! ತಂದೆಯು ಬಂದು ಇದೆಲ್ಲದರ ಜ್ಞಾನವನ್ನು ಕೊಡುತ್ತಾರೆ. ಜ್ಞಾನಸಾಗರನು ತಂದೆಯೇ
ಆಗಿದ್ದಾರೆ. ನೀವೀಗ ಹೇಳುತ್ತೀರಿ- ಬಾಬಾ, ನಾವೀಗ ನಿಮ್ಮವರಾಗಿದ್ದೇವೆ, ಸದಾ ನಿಮ್ಮವರಾಗಿಯೇ
ಇರುತ್ತೇವೆ. ಕೇವಲ ಮರೆತುಹೋಗಿ ದೇಹಾಭಿಮಾನಿಗಳಾಗಿಬಿಟ್ಟಿದ್ದೇವೆ. ಈಗ ತಾವೂ ತಿಳಿಸಿದ್ದೀರಿ
ಅಂದಮೇಲೆ ನಾವು ಮತ್ತೇ ದೇಹೀ-ಅಭಿಮಾನಿಗಳಾಗುತ್ತೇವೆ. ಸತ್ಯಯುಗದಲ್ಲಿ ನಾವು
ದೇಹೀ-ಅಭಿಮಾನಿಗಳಾಗಿದ್ದೆವು, ಖುಷಿ-ಖುಷಿಯಿಂದ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳುತ್ತಿದ್ದೀರಿ ಅಂದಾಗ ನೀವು ಮಕ್ಕಳು ಇದೆಲ್ಲವನ್ನೂ ಧಾರಣೆ ಮಾಡಿ ಮತ್ತೆ ಅನ್ಯರಿಗೂ
ತಿಳಿಸಲು ಯೋಗ್ಯರಾಗಬೇಕು ಆಗಲೇ ಅನೇಕರ ಕಲ್ಯಾಣವಾಗುವುದು. ತಂದೆಗೆ ಗೊತ್ತಿದೆ, ನಾಟಕದನುಸಾರ
ನಂಬರ್ವಾರ್ ಪುರುಷಾರ್ಥದನುಸಾರ ಸೇವಾಧಾರಿಗಳಾಗುತ್ತಿದ್ದಾರೆ. ಭಲೆ ಯಾರಿಗಾದರೂ ವೃಕ್ಷದ ಬಗ್ಗೆ
ತಿಳಿಸಲು ಆಗದಿದ್ದರೆ ನೀವು ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂದು
ತಿಳಿಸುವುದು ಸಹಜವಲ್ಲವೆ. ಇದನ್ನು ತಂದೆಯೇ ತಿಳಿಸುತ್ತಾರೆ. ನನ್ನನ್ನು ನೆನಪು ಮಾಡಿದರೆ
ವಿಕರ್ಮಗಳು ವಿನಾಶವಾಗುತ್ತವೆ ಎಂಬ ಮಾತನ್ನು ನೀವು ಬ್ರಾಹ್ಮಣರ ವಿನಃ ಮತ್ತ್ಯಾವ ಮನುಷ್ಯರೂ ಹೇಳಲು
ಸಾಧ್ಯವಿಲ್ಲ. ಮತ್ತ್ಯಾರೂ ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ಅರಿತುಕೊಂಡಿಲ್ಲ. ಕೇವಲ ಹಾಗೆಯೇ
ಹೇಳಿಬಿಡುತ್ತೀರೆಂದರೆ ಯಾರಿಗೂ ಬಾಣವು ನಾಟುವುದಿಲ್ಲ. ಭಗವಂತನ ರೂಪವನ್ನು
ಅರಿತುಕೊಳ್ಳಬೇಕಾಗುತ್ತದೆ. ಇವರೆಲ್ಲರೂ ನಾಟಕದ ಪಾತ್ರಧಾರಿಗಳಾಗಿದ್ದಾರೆ, ಪ್ರತಿಯೊಂದು ಆತ್ಮವು
ಶರೀರದ ಜೊತೆ ಪಾತ್ರವನ್ನಭಿನಯಿಸುತ್ತದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡು
ಪಾತ್ರವನ್ನಭಿನಯಿಸುತ್ತದೆ. ಆ ಪಾತ್ರಧಾರಿಗಳು ವಸ್ತ್ರವನ್ನು ಬದಲಾಯಿಸಿಕೊಂಡು ಭಿನ್ನ-ಭಿನ್ನ
ಪಾತ್ರವನ್ನಭಿನಯಿಸುತ್ತಾರೆ ಹಾಗೆಯೇ ನೀವೂ ಸಹ ಶರೀರವನ್ನು ಬದಲಾಯಿಸುತ್ತೀರಿ. ಅದರಲ್ಲಿ ಸ್ತ್ರೀ
ಹಾಗೂ ಪುರುಷರ ಉಡುಪನ್ನು ಅಲ್ಪಕಾಲಕ್ಕಾಗಿ ಧರಿಸುತ್ತಾರೆ. ಇಲ್ಲಿ ಪುರುಷನ ವಸ್ತ್ರ (ಶರೀರ)ವನ್ನು
ಧರಿಸಿದರೆ ಪೂರ್ಣಾಯಸ್ಸು ಪುರುಷನಾಗಿಯೇ ಇರುತ್ತಾರೆ. ಅದು ಹದ್ದಿನ ನಾಟಕ, ಇದು ಬೇಹದ್ದಿನ
ನಾಟಕವಾಗಿದೆ. ಮೊಟ್ಟಮೊದಲ ಮುಖ್ಯಮಾತನ್ನು ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿರಿ,
ಯೋಗ ಶಬ್ಧವನ್ನೂ ಸಹ ಕಾರ್ಯದಲ್ಲಿ ತರಬೇಡಿ ಏಕೆಂದರೆ ಅನೇಕ ಪ್ರಕಾರದ ಯೋಗಗಳನ್ನು ಕಲಿಸುತ್ತಾರೆ.
ಅವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಈಗ ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ ಮತ್ತೆ
ಮನೆಯನ್ನು ನೆನಪು ಮಾಡಿದರೆ ನೀವು ಮನೆಗೆ ಹೊರಟುಹೋಗುತ್ತೀರಿ. ಶಿವತಂದೆಯು ಇವರಲ್ಲಿ ಬಂದು
ಶಿಕ್ಷಣವನ್ನು ಕೊಡುತ್ತಾರೆ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ನೀವು ಪಾವನರಾಗಿಬಿಡುತ್ತೀರಿ
ಅನಂತರ ಪವಿತ್ರ ಆತ್ಮವು ಹಾರುವುದು. ಎಷ್ಟೆಷ್ಟು ನೆನಪು ಮಾಡುವರೋ, ಸೇವೆ ಮಾಡುವರೋ ಅಷ್ಟು
ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ನೆನಪಿನಲ್ಲಿಯೇ ಬಹಳ ವಿಘ್ನಗಳೂ ಬರುತ್ತವೆ.
ಪಾವನರಾಗಲಿಲ್ಲವೆಂದರೆ ಧರ್ಮರಾಜಪುರಿಯಲ್ಲಿ ಶಿಕ್ಷೆಯನ್ನನುಭವಿಸಬೇಕಾಗುವುದು, ಮರ್ಯಾದೆಯೂ
ಹೊರಟುಹೋಗುವುದು, ಪದವಿಯೂ ಭ್ರಷ್ಟವಾಗುವುದು. ಅಂತಿಮದಲ್ಲಿ ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ ಆದರೆ
ಏನೂ ಮಾಡಲು ಸಾಧ್ಯವಿಲ್ಲ. ನಿಮಗೆ ಎಷ್ಟೊಂದು ತಿಳಿಸಿದೆನು ಆದರೆ ನೆನಪು ಮಾಡಲಿಲ್ಲ. ಪಾಪಗಳು
ಉಳಿದುಬಿಟ್ಟಿತು, ಈಗ ಶಿಕ್ಷೆಯನ್ನು ಅನುಭವಿಸಿ ಎಂದು ಸಾಕ್ಷಾತ್ಕಾರ ಮಾಡಿಸುತ್ತಾರೆ. ಆ ಸಮಯದಲ್ಲಿ
ವಿದ್ಯಾಭ್ಯಾಸಕ್ಕಾಗಿ ಅವಕಾಶವಿರುವುದಿಲ್ಲ. ನಾವು ಏನೇನು ಮಾಡಿದೆವು, ಸುಮ್ಮನೆ ಸಮಯವನ್ನು
ಕಳೆದೆವೆಂದು ಬಹಳಷ್ಟು ದುಃಖಪಡುತ್ತೀರಿ ಆದರೆ ಶಿಕ್ಷೆಯನ್ನಂತೂ ಅನುಭವಿಸಲೇಬೇಕಾಗುತ್ತದೆ. ಏನೂ
ಮಾಡಲು ಸಾಧ್ಯವಿಲ್ಲ. ಅನುತ್ತೀರ್ಣರಾದಿರೆಂದರೆ ಆದಿರಿ, ಮತ್ತೆ ಓದುವ ಮಾತಿಲ್ಲ. ಲೌಕಿಕ
ವಿದ್ಯೆಯಲ್ಲಂತೂ ಅನುತ್ತೀರ್ಣರಾದರೆ ಪುನಃ ಓದುತ್ತಾರೆ ಆದರೆ ಈ ವಿದ್ಯೆಯು ಇಲ್ಲಿಯೇ
ಮುಕ್ತವಾಗಿಬಿಡುವುದು. ಅಂತಿಮ ಸಮಯದಲ್ಲಿ ಪಶ್ಚಾತ್ತಾಪ ಪಡಬಾರದೆಂದು ತಂದೆಯು ಸಲಹೆ ನೀಡುತ್ತಾರೆ.
ಮಕ್ಕಳೇ, ಚೆನ್ನಾಗಿ ಓದಿರಿ, ಅಲ್ಲಸಲ್ಲದ ಮಾತುಗಳಲ್ಲಿ ತಮ್ಮ ಸಮಯವನ್ನು ಕಳೆಯಬೇಡಿ. ಇಲ್ಲವಾದರೆ
ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ಮಾಯೆಯು ಬಹಳ ವಿರುಧ್ದವಾದ ಕೆಲಸಗಳನ್ನು ಮಾಡಿಸಿಬಿಡುತ್ತದೆ.
ಎಂದೂ ಕಳ್ಳತನವನ್ನು ಮಾಡಿರುವುದೇ ಇಲ್ಲ, ಆದರೆ ಮಾಯೆಯು ಅದನ್ನು ಮಾಡಿಸಿಬಿಡುವುದು. ನಮಗೆ ಮಾಯೆಯು
ಮೋಸಮಾಡಿಬಿಟ್ಟಿತೆಂದು ಕೊನೆಯಲ್ಲಿ ಸ್ಮೃತಿಯು ಬಂದುಬಿಡುವುದು. ಇಂತಹ ಪದಾರ್ಥವನ್ನು
ತೆಗೆದುಕೊಳ್ಳಲೇ ಎಂದು ಮೊದಲು ಮನಸ್ಸಿನಲ್ಲಿ ಸಂಕಲ್ಪವು ಬರುತ್ತದೆ ಆದರೆ ಇದು ಸರಿಯೇ ಅಥವಾ ತಪ್ಪೆ
ಎಂದು ತಿಳಿಯುವ ಬುದ್ಧಿಯು ಸಿಕ್ಕಿದೆ. ಈ ವಸ್ತುವನ್ನು ತೆಗೆದುಕೊಂಡರೆ ತಪ್ಪಾಗುವುದು.
ತೆಗೆದುಕೊಳ್ಳದೇ ಇರುವುದೇ ಸರಿಯಾಗಿದೆ. ಈಗ ಏನು ಮಾಡುವುದು? ಪವಿತ್ರರಾಗಿರುವುದು ಒಳ್ಳೆಯದಲ್ಲವೆ.
ಸಂಗದೋಷದಲ್ಲಿ ಬಂದು ಸಡಿಲವಾಗಬಾರದು. ನಾವು ಸಹೋದರ-ಸಹೋದರಿಯರಾಗಿದ್ದೇವೆ ಅಂದಮೇಲೆ ನಾಮ-ರೂಪದಲ್ಲಿ
ಏಕೆ ಸಿಕ್ಕಿಕೊಳ್ಳುವುದು? ದೇಹದ ಅಭಿಮಾನದಲ್ಲಿ ಬರಬಾರದಾಗಿದೆ ಆದರೆ ಮಾಯೆಯು ಬಹಳ
ಶಕ್ತಿಶಾಲಿಯಾಗಿದೆ. ಮಾಯೆಯು ಕೆಟ್ಟಕೆಲಸವನ್ನು ಮಾಡಿಸುವ ಸಂಕಲ್ಪವನ್ನು ತರಿಸುತ್ತದೆ. ತಂದೆಯು
ತಿಳಿಸುತ್ತಾರೆ- ಮಕ್ಕಳೇ, ನೀವು ತಪ್ಪುಕೆಲಸಗಳನ್ನು ಮಾಡಲೇಬಾರದು. ಯುದ್ಧವು ನಡೆಯುತ್ತದೆಯೆಂದರೆ
ಕೆಳಗೆ ಬೀಳುತ್ತೀರಿ ಮತ್ತೆ ಸರಿಯಾದ ಬುದ್ಧಿಯು ಬರುವುದೇ ಇಲ್ಲ. ನಾವು ಸರಿಯಾದ ಕಾರ್ಯವನ್ನು
ಮಾಡಬೇಕಾಗಿದೆ, ಅಂಧರಿಗೆ ಊರುಗೋಲಾಗಬೇಕಾಗಿದೆ. ಒಳ್ಳೆಯದಕ್ಕಿಂತ ಒಳ್ಳೆಯ ಕೆಲಸವೇ ಇದಾಗಿದೆ. ಶರೀರ
ನಿರ್ವಹಣೆಗಾಗಿ ಸಮಯವಂತೂ ಇದೆ, ರಾತ್ರಿಯಲ್ಲಿ ನಿದ್ರೆ ಮಾಡಿರಿ, ಆತ್ಮವು ಸುಸ್ತಾಗುತ್ತದೆಯೆಂದರೆ
ನಿದ್ರಿಸಿಬಿಡುತ್ತದೆ ಮತ್ತು ಶರೀರವೂ ನಿದ್ರಿಸುತ್ತದೆ ಅಂದಾಗ ಶರೀರ ನಿರ್ವಹಣೆಗಾಗಿ ವಿಶ್ರಾಂತಿ
ತೆಗೆದುಕೊಳ್ಳುವುದಕ್ಕಾಗಿ ಸಮಯವಂತೂ ಇದೆ, ಉಳಿದ ಸಮಯದಲ್ಲಿ ನನ್ನ ಸೇವೆಯಲ್ಲಿ ತೊಡಗಿರಿ, ನೆನಪಿನ
ಚಾರ್ಟನ್ನು ಇಟ್ಟುಕೊಳ್ಳಿ. ಚಾರ್ಟನ್ನು ಬರೆಯಿರಿ ಆದರೆ ನಡೆಯುತ್ತಾ-ನಡೆಯುತ್ತಾ
ಅನುತ್ತೀರ್ಣರಾಗಿಬಿಡುತ್ತಾರೆ, ತಂದೆಯನ್ನು ನೆನಪು ಮಾಡುವುದಿಲ್ಲ, ಸೇವೆ ಮಾಡುವುದಿಲ್ಲವೆಂದರೆ
ತಪ್ಪು ಕೆಲಸಗಳಾಗುತ್ತಿರುತ್ತವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಅಲ್ಲಸಲ್ಲದ
(ಪರಚಿಂತನೆ) ಮಾತುಗಳಲ್ಲಿ ತಮ್ಮ ಸಮಯವನ್ನು ಕಳೆಯಬಾರದು. ಮಾಯೆಯು ಯಾವುದೇ ಉಲ್ಟಾಕೆಲಸವನ್ನು
ಮಾಡಿಸದಂತೆ ಗಮನವಿಡಬೇಕಾಗಿದೆ. ಸಂಗದೋಷದಲ್ಲಿ ಬಂದು ಎಂದೂ ಸಡಿಲವಾಗಬಾರದು. ದೇಹದ ಅಭಿಮಾನದಲ್ಲಿ
ಬಂದು ಯಾರದೇ ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳಬಾರದು.
2. ಮನೆಯ ನೆನಪಿನ
ಜೊತೆಜೊತೆಗೆ ತಂದೆಯನ್ನು ನೆನಪು ಮಾಡಬೇಕಾಗಿದೆ. ನೆನಪಿನ ಚಾರ್ಟಿನ ಡೈರಿಯನ್ನು
ಇಟ್ಟುಕೊಳ್ಳಬೇಕಾಗಿದೆ. ಅದರಲ್ಲಿ ಬರೆದುಕೊಳ್ಳಬೇಕು- ನಾನು ಇಡೀ ದಿನದಲ್ಲಿ ಏನೇನು ಮಾಡಿದೆನು?
ಎಷ್ಟು ಸಮಯ ತಂದೆಯನ್ನು ನೆನಪು ಮಾಡಿದೆನು
ವರದಾನ:
ನಮ್ರತಾ ರೂಪಿ
ಕವಚದ ಮೂಲಕ ವ್ಯರ್ಥದ ರಾವಣನನ್ನು ಸುಡುವಂತಹ ಸತ್ಯ ಸ್ನೇಹಿ, ಸಹಯೋಗಿ ಭವ
ಯಾರು ಎಷ್ಟೇ ನಿಮ್ಮ
ಸಂಗಟನೆಯಲ್ಲಿ ಕೊರತೆಯನ್ನು ಹುಡುಕುವ ಪ್ರಯತ್ನ ಮಾಡಲಿ ಆದರೆ ಸಂಸ್ಕಾರ-ಸ್ವಭಾವದ ಘರ್ಷಣೆ ಸ್ವಲ್ಪವೂ
ಕಂಡು ಬರದೇ ಇರಲಿ. ಒಂದುವೇಳೆ ಯಾರೇ ನಿಮಗೆ ಬೈಗುಳ ಹಾಕಿದರೂ, ನಿಂದನೆ ಮಾಡಿದರೂ ನೀವು ಸರಿಯಾಗಿರಿ.
ಯಾರಾದರೂ ಘರ್ಷಣೆಯಲ್ಲಿ ಬಂದರೂ ಸಹ ನೀವು ಅವರಿಗೆ ಸ್ನೇಹದ ನೀರನ್ನು ನೀಡಿ. ಇವರು ಏಕೆ ಹೀಗೆ, ಈ
ರೀತಿ ಏಕೆ ಎನ್ನುವ ಸಂಕಲ್ಪ ಮಾಡಿ ಬೆಂಕಿಗೆ ಎಣ್ಣೆ ಸುರಿಯ ಬೇಡಿ. ನಮ್ರತೆಯ ಕವಚವನ್ನು
ಧರಿಸಿಕೊಳ್ಳಿ. ಎಲ್ಲಿ ನಮ್ರತೆಯಿರುತ್ತದೆ ಅಲ್ಲಿ ಸ್ನೇಹ ಮತ್ತು ಸಹಯೋಗವೂ ಅವಶ್ಯವಾಗಿರುತ್ತದೆ.
ಸ್ಲೋಗನ್:
ನನ್ನತನದ ಅನೇಕ
ಹದ್ದಿನ ಭಾವನೆಗಳು “ನನ್ನ ಬಾಬಾ” ಎನ್ನುವ ಒಂದರಲ್ಲಿ ಸಮಾವೇಶವಾಗಿಬಿಡುವುದು.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ಆತ್ಮಿಕ ಘನತೆಯ ಫೌಂಡೇಷನ್
ಸಂಪೂರ್ಣ ಪವಿತ್ರತೆಯಾಗಿದೆ. ತಮ್ಮೊಂದಿಗೆ ಕೇಳಿಕೊಳ್ಳಿ ಆತ್ಮಿಕ ಘನತೆಯ ಮಿಂಚು ಮತ್ತು ಹೊಳಪು
ನಿಮ್ಮ ರೂಪ ಅಥವಾ ಚರಿತ್ರೆಯಿಂದ ಪ್ರತಿಯೊಬ್ಬರಿಗೆ ಅನುಭವವಾಗುತ್ತದೆಯೇ? ಜ್ಞಾನದ ದರ್ಪಣದಲ್ಲಿ
ತಮ್ಮನ್ನು ನೋಡಿಕೊಳ್ಳಿ ನನ್ನ ಮುಖದಲ್ಲಿ, ನಡತೆಯಲ್ಲಿ ಆ ಆತ್ಮಿಕ ಘನತೆ ಕಾಣಿಸುತ್ತದೆಯೋ ಅಥವಾ
ಸಾಧಾರಣ ನಡತೆ ಮತ್ತು ಮುಖವು ಕಾಣಿಸುತ್ತದೆಯೋ?