14.06.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಈಗ ನಿಮಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ ಆದ್ದರಿಂದ ಈಗ ನಿಮ್ಮ ಕಣ್ಣುಗಳು ಯಾರಲ್ಲಿಯೂ ಮುಳುಗಬಾರದು”

ಪ್ರಶ್ನೆ:
ಯಾರಿಗೆ ಹಳೆಯ ಪ್ರಪಂಚದ ಬೇಹದ್ದಿನ ವೈರಾಗ್ಯವಿರುವುದೋ ಅವರ ಲಕ್ಷಣಗಳೇನು?

ಉತ್ತರ:
ಅವರು ತಮ್ಮದೆಲ್ಲವನ್ನೂ ತಂದೆಗೆ ಅರ್ಪಣೆ ಮಾಡುತ್ತಾರೆ, ಬಾಬಾ ನಮ್ಮದೇನೂ ಇಲ್ಲ, ಈ ದೇಹವೂ ನನ್ನದಲ್ಲ, ಇದು ಹಳೆಯ ದೇಹವಾಗಿದೆ, ಇದನ್ನು ಬಿಡಬೇಕಾಗಿದೆ - ಹೀಗೆ ಅವರ ಮೋಹವು ಎಲ್ಲದರಿಂದ ಕಳೆಯುತ್ತಾ ಹೋಗುವುದು. ನಷ್ಟಮೋಹಿಗಳಾಗಿರುತ್ತಾರೆ. ಅವರ ಬುದ್ಧಿಯಲ್ಲಿರುತ್ತದೆ- ಇಲ್ಲಿಯದೇನೂ ಕೆಲಸಕ್ಕೆ ಬರುವುದಿಲ್ಲ ಏಕೆಂದರೆ ಇಲ್ಲಿಯದೆಲ್ಲವೂ ಕ್ಷಣಿಕವಾಗಿದೆ.

ಓಂ ಶಾಂತಿ.
ತಂದೆಯು ಮಕ್ಕಳಿಗೆ ಬ್ರಹ್ಮಾಂಡ ಮತ್ತು ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಿದ್ದಾರೆ, ಅದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಒಂದು ಗೀತೆಯಲ್ಲಿಯೇ ಇದೆ - ಭಗವಂತನು ಬಂದು ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆಂದು ರಾಜಯೋಗದ ವರ್ಣನೆಯಿದೆ. ಇದು ಗೀತೆಯ ವಿನಃ ಮತ್ತ್ಯಾವುದೇ ಶಾಸ್ತ್ರದಲ್ಲಿಲ್ಲ. ಇದನ್ನೂ ಸಹ ತಂದೆಯು ತಿಳಿಸಿದ್ದಾರೆ - ನಾನು ನಿಮಗೆ ರಾಜಯೋಗವನ್ನು ಕಲಿಸಿದ್ದೆನು, ಈ ಜ್ಞಾನವು ಪರಂಪರೆಯಿಂದ ನಡೆಯುವುದಿಲ್ಲ ಎಂಬುದನ್ನೂ ಸಹ ತಿಳಿಸಿದ್ದರು. ತಂದೆಯು ಬಂದು ಒಂದು ಧರ್ಮದ ಸ್ಥಾಪನೆ ಮಾಡುತ್ತಾರೆ ಆಗ ಉಳಿದೆಲ್ಲಾ ಧರ್ಮಗಳು ವಿನಾಶವಾಗಿಬಿಡುತ್ತವೆ. ಯಾವುದೇ ಶಾಸ್ತ್ರ ಇತ್ಯಾದಿಗಳು ಪರಂಪರೆಯಿಂದ ನಡೆಯುವುದಿಲ್ಲ. ಎಲ್ಲವೂ ಸಮಾಪ್ತಿಯಾಗಿಬಿಡಲು, ಧರ್ಮಸ್ಥಾಪನೆ ಮಾಡಲು ಬರುವ ಸಮಯದಲ್ಲಿ ಯಾವುದೇ ವಿನಾಶವಾಗುವುದಿಲ್ಲ. ಭಕ್ತಿಮಾರ್ಗದ ಶಾಸ್ತ್ರಗಳನ್ನು ಓದುತ್ತಲೇ ಬರುತ್ತಾರೆ. ಭಲೆ ಬ್ರಾಹ್ಮಣ ಧರ್ಮದ ಶಾಸ್ತ್ರವು ಗೀತೆಯಾಗಿದೆ ಆದರೆ ಅದನ್ನೂ ಸಹ ಭಕ್ತಿಮಾರ್ಗದಲ್ಲಿಯೇ ರಚಿಸುತ್ತಾರೆ ಏಕೆಂದರೆ ಸತ್ಯಯುಗದಲ್ಲಂತೂ ಯಾವುದೇ ಶಾಸ್ತ್ರಗಳಿರುವುದಿಲ್ಲ. ಮತ್ತು ಅನ್ಯಧರ್ಮಗಳ ಸಮಯದಲ್ಲಿ ವಿನಾಶವಂತೂ ಆಗುವುದಿಲ್ಲ. ಹೊಸಧರ್ಮವು ಸ್ಥಾಪನೆಯಾಗಲು ಹಳೆಯ ಪ್ರಪಂಚವು ಸಮಾಪ್ತಿಯಾಗುವುದಿಲ್ಲ. ಅದೇ ನಡೆದುಬರುತ್ತದೆ. ಮಕ್ಕಳು ಈಗ ತಿಳಿದುಕೊಂಡಿದ್ದೀರಿ- ಈ ಹಳೆಯ ಪ್ರಪಂಚವು ಸಮಾಪ್ತಿಯಾಗಬೇಕಾಗಿದೆ, ತಂದೆಯು ನಮಗೆ ಓದಿಸುತ್ತಿದ್ದಾರೆ. ಗಾಯನವೂ ಸಹ ಒಂದೇ ಗೀತೆಯದೇ ಆಗಿದೆ. ಗೀತಾಜಯಂತಿಯನ್ನು ಆಚರಿಸುತ್ತಾರೆ. ವೇದಜಯಂತಿಯೆಂದು ಯಾವುದೂ ಇಲ್ಲ. ಭಗವಂತನು ಒಬ್ಬರೇ ಆಗಿದ್ದಾರೆ ಅಂದಮೇಲೆ ಒಬ್ಬರದೇ ಜಯಂತಿಯನ್ನು ಆಚರಿಸಬೇಕು. ಉಳಿದೆಲ್ಲವೂ ಅವರ ರಚನೆಯಾಗಿದೆ, ಅದರಿಂದ ಏನೂ ಸಿಗುವುದಿಲ್ಲ. ಈಗ ಇವರು ಬೇಹದ್ದಿನ ಜ್ಞಾನವನ್ನು ಕೊಡುವಂತಹ ನಿಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಇವರು ಯಾವುದೇ ಶಾಸ್ತ್ರಗಳನ್ನು ಹೇಳುತ್ತಿಲ್ಲ. ಇವೆಲ್ಲವೂ ಭಕ್ತಿಮಾರ್ಗವಾಗಿದೆ, ಇದೆಲ್ಲದರ ಸಾರವನ್ನು ನಿಮಗೆ ತಿಳಿಸುತ್ತೇನೆ, ಶಾಸ್ತ್ರಗಳೇನೂ ವಿದ್ಯೆಯಲ್ಲ. ವಿದ್ಯೆಯಿಂದ ಪದವಿಯು ಪ್ರಾಪ್ತವಾಗುತ್ತದೆ. ಈ ವಿದ್ಯೆಯನ್ನು ತಂದೆಯು ಮಕ್ಕಳಿಗೆ ಓದಿಸುತ್ತಿದ್ದಾರೆ. ಭಗವಾನುವಾಚ ಮಕ್ಕಳ ಪ್ರತಿ- ಮತ್ತೆ 5000 ವರ್ಷಗಳ ನಂತರವೂ ಸಹ ಇದೇ ರೀತಿಯಾಗುವುದು. ಮಕ್ಕಳಿಗೆ ತಿಳಿದಿದೆ- ನಾವು ತಂದೆಯಿಂದ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇವೆ. ಇದನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು ಇವರ (ಬ್ರಹ್ಮಾ) ಮುಖಕಮಲದಿಂದ ತಿಳಿಸುತ್ತಾರೆ. ಇದು ಭಗವಂತನು ಲೋನ್ ಆಗಿ ತೆಗೆದುಕೊಂಡಿರುವ ಮುಖವಾಗಿದೆಯಲ್ಲವೆ. ಇದಕ್ಕೆ ಗೋಮುಖವೆಂದು ಹೇಳುತ್ತಾರೆ. ದೊಡ್ಡತಾಯಿಯಲ್ಲವೆ. ಇವರ ಮುಖದಿಂದ ಜ್ಞಾನರತ್ನಗಳು ಬರುತ್ತವೆ, ನೀರಲ್ಲ. ಭಕ್ತಿಮಾರ್ಗದಲ್ಲಿ ಗೋಮುಖದಿಂದ ನೀರು ಬರುತ್ತಿರುವಂತೆ ತೋರಿಸಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ, ಭಕ್ತಿಮಾರ್ಗದಲ್ಲಿ ಏನೇನು ಮಾಡುತ್ತಾರೆ! ನೀರನ್ನು ಕುಡಿಯಲು ಎಷ್ಟು ದೂರ ಗೋಮುಖ ಮುಂತಾದ ತೀರ್ಥಸ್ಥಾನಗಳಿಗೆ ಹೋಗುತ್ತಾರೆ. ಈಗ ನೀವು ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ತಂದೆಯು ಕಲ್ಪ-ಕಲ್ಪವೂ ಬಂದು ಮನುಷ್ಯರಿಂದ ದೇವತೆಗಳಾಗಲು ಓದಿಸುತ್ತಾರೆಂದು ನಿಮಗೆ ತಿಳಿದಿದೆ. ಅವರು ಹೇಗೆ ಓದಿಸುತ್ತಿದ್ದಾರೆ ಎಂಬುದನ್ನು ನೋಡುತ್ತೀರಿ. ನಮಗೆ ಭಗವಂತನೇ ಓದಿಸುತ್ತಿದ್ದಾರೆ, ಆ ತಂದೆಯು ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು ಎಂಬ ಮಾತನ್ನು ನೀವು ಎಲ್ಲರಿಗೆ ತಿಳಿಸುತ್ತೀರಿ. ಸತ್ಯಯುಗದಲ್ಲಿ ಕೆಲವರೇ ಮನುಷ್ಯರಿರುತ್ತಾರೆ, ಕಲಿಯುಗದಲ್ಲಿ ಎಷ್ಟೊಂದು ಮಂದಿ ಮನುಷ್ಯರಿರುತ್ತಾರೆ. ತಂದೆಯು ಬಂದು ಆದಿಸನಾತನ ದೇವಿ-ದೇವತಾಧರ್ಮವನ್ನು ಸ್ಥಾಪನೆ ಮಾಡುತ್ತಿದ್ದಾರೆ. ನಾವು ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ. ಮನುಷ್ಯರಿಂದ ದೇವತೆಗಳಾಗುವ ಮಕ್ಕಳಲ್ಲಿ ದೈವೀಗುಣಗಳು ಕಾಣಿಸುತ್ತವೆ. ಅಂತಹವರಲ್ಲಿ ಕ್ರೋಧದ ಅಂಶವು ಇರುವುದಿಲ್ಲ. ಎಂದಾದರೂ ಕ್ರೋಧವು ಬಂದಿತೆಂದರೆ ತಕ್ಷಣ ತಂದೆಗೆ ಬರೆಯುತ್ತಾರೆ- ಬಾಬಾ, ನನ್ನಿಂದ ಇಂದು ಈ ತಪ್ಪಾಯಿತು, ನಾನು ಕ್ರೋಧ ಮಾಡಿಬಿಟ್ಟೆನು, ವಿಕರ್ಮ ಮಾಡಿಬಿಟ್ಟೆನು. ತಂದೆಯ ಜೊತೆ ನಿಮಗೆ ಎಷ್ಟೊಂದು ಸಂಬಂಧವಿದೆ! ಬಾಬಾ, ಕ್ಷಮೆ ಮಾಡಿ ಎಂದು ಹೇಳಿದಾಗ ತಂದೆಯು ಹೇಳುತ್ತಾರೆ- ಮಕ್ಕಳೇ, ಯಾವುದೇ ಕ್ಷಮೆ ಇತ್ಯಾದಿಗಳಿಲ್ಲ ಆದರೆ ಮುಂದೆ ಎಂದೂ ಸಹ ಇಂತಹ ತಪ್ಪು ಮಾಡಬೇಡಿ. ಶಿಕ್ಷಕರು ಕ್ಷಮಿಸುವುದಿಲ್ಲ. ನಿಮ್ಮ ನಡುವಳಿಕೆಯು ಸರಿಯಿಲ್ಲವೆಂದು ರಿಜಿಸ್ಟರ್ ತೋರಿಸುತ್ತಾರೆ. ಹಾಗೆಯೇ ಬೇಹದ್ದಿನ ತಂದೆಯೂ ಸಹ ಹೇಳುತ್ತಾರೆ- ನೀವು ತಮ್ಮ ನಡವಳಿಕೆಯನ್ನು ನೋಡಿಕೊಳ್ಳುತ್ತಾ ಇರಿ. ಪ್ರತಿನಿತ್ಯವೂ ತಮ್ಮ ಲೆಕ್ಕಪತ್ರವನ್ನು ನೋಡಿಕೊಳ್ಳಿ, ಯಾರಿಗೂ ದುಃಖ ಕೊಡಲಿಲ್ಲವೆ, ಯಾರಿಗೂ ತೊಂದರೆ ಮಾಡಲಿಲ್ಲವೇ? ದೈವೀಗುಣಗಳನ್ನು ಧಾರಣೆ ಮಾಡುವುದರಲ್ಲಿ ಸಮಯ ಹಿಡಿಸುತ್ತದೆಯಲ್ಲವೆ. ದೇಹಾಭಿಮಾನವು ಬಿಟ್ಟುಹೋಗುವುದು ಬಹಳ ಕಷ್ಟವಾಗುತ್ತದೆ. ಯಾವಾಗ ತಮ್ಮನ್ನು ಆತ್ಮನೆಂದು ತಿಳಿಯುತ್ತೀರಿ ಆಗ ತಂದೆಯಲ್ಲಿಯೂ ಪ್ರೀತಿಯಿರುವುದು. ಇಲ್ಲವೆಂದರೆ ದೇಹದ ಕರ್ಮಬಂಧನದಲ್ಲಿಯೇ ಬುದ್ಧಿಯು ಸಿಕ್ಕಿಹಾಕಿಕೊಂಡಿರುತ್ತದೆ. ತಂದೆಯು ತಿಳಿಸುತ್ತಾರೆ- ನೀವು ಶರೀರ ನಿರ್ವಹಣಾರ್ಥವಾಗಿ ಕರ್ಮವನ್ನು ಮಾಡಬೇಕು ಆದರೆ ಅದರಿಂದ ಸಮಯವನ್ನು ತೆಗೆಯಬೇಕಾಗುತ್ತದೆ. ಭಕ್ತಿಗಾಗಿ ಸಮಯವನ್ನು ತೆಗೆಯುತ್ತಾರಲ್ಲವೆ. ಮೀರಾ ಕೃಷ್ಣನ ನೆನಪಿನಲ್ಲಿಯೇ ಇರುತ್ತಿದ್ದಳಲ್ಲವೆ. ಪುನರ್ಜನ್ಮವನ್ನಂತೂ ಇಲ್ಲಿಯೇ ತೆಗೆದುಕೊಳ್ಳುತ್ತಾ ಹೋದಳು.

ಈಗ ನೀವು ಮಕ್ಕಳಿಗೆ ಈ ಹಳೆಯ ಪ್ರಪಂಚದಿಂದ ವೈರಾಗ್ಯವುಂಟಾಗುತ್ತದೆ ಏಕೆಂದರೆ ನಿಮಗೆ ತಿಳಿದಿದೆ- ಈ ಹಳೆಯ ಪ್ರಪಂಚದಲ್ಲಿ ಪುನರ್ಜನ್ಮವನ್ನು ತೆಗೆದುಕೊಳ್ಳುವುದೇ ಇಲ್ಲ, ಈ ಹಳೆಯ ಪ್ರಪಂಚವೇ ಸಮಾಪ್ತಿಯಾಗಿಬಿಡುತ್ತದೆ. ಇವೆಲ್ಲಾ ಮಾತುಗಳು ನಿಮ್ಮ ಬುದ್ಧಿಯಲ್ಲಿದೆ. ಹೇಗೆ ತಂದೆಯಲ್ಲಿ ಜ್ಞಾನವಿದೆಯೋ ಹಾಗೆಯೇ ಮಕ್ಕಳಲ್ಲಿಯೂ ಇದೆ. ಈ ಸೃಷ್ಟಿಚಕ್ರದ ಜ್ಞಾನವು ಮತ್ಯಾರ ಬುದ್ಧಿಯಲ್ಲಿಯೂ ಇಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದೀರಿ, ಅವರ ಬುದ್ಧಿಯಲ್ಲಿ ನಮಗೆ ಶ್ರೇಷ್ಠಾತಿಶ್ರೇಷ್ಠ ಪತಿತ-ಪಾವನ ತಂದೆಯು ಓದಿಸುತ್ತಾರೆ ಎಂಬುದು ಇರುತ್ತದೆ. ಇದನ್ನು ನೀವೇ ತಿಳಿದುಕೊಂಡಿದ್ದೀರಿ. ನಿಮ್ಮ ಬುದ್ಧಿಯಲ್ಲಿ ಇಡೀ 84 ಜನ್ಮಗಳ ಚಕ್ರವಿದೆ. ಈ ನರಕದಲ್ಲಿ ಇದು ಅಂತಿಮ ಜನ್ಮವಾಗಿದೆ ಎಂದು ಸ್ಮೃತಿಯಲ್ಲಿರುತ್ತದೆ. ಇದಕ್ಕೆ ರೌರವ ನರಕವೆಂದು ಹೇಳಲಾಗುತ್ತದೆ. ಬಹಳ ಕೊಳಕಾಗಿದೆ ಆದ್ದರಿಂದ ಸನ್ಯಾಸಿಗಳು ಗೃಹಸ್ಥವನ್ನು ಬಿಟ್ಟುಹೋಗುತ್ತಾರೆ. ಅದಂತೂ ಶರೀರದ ಮಾತಾಯಿತು. ನೀವು ಬುದ್ಧಿಯಿಂದ ಸನ್ಯಾಸ ಮಾಡುತ್ತೀರಿ ಏಕೆಂದರೆ ನಾವೀಗ ಹಿಂತಿರುಗಿ ಹೋಗಬೇಕಾಗಿದೆ. ಎಲ್ಲವನ್ನೂ ಮರೆಯಬೇಕಾಗುತ್ತದೆ ಎಂದು ನಿಮಗೆ ತಿಳಿದಿದೆ. ಈ ಹಳೆಯ ಛೀ ಛೀ ಪ್ರಪಂಚವು ಸಮಾಪ್ತಿಯಾಗಿಯೇಬಿಟ್ಟಿದೆ. ಮನೆಯು ಹಳೆಯದಾದಾಗ ಹೊಸಮನೆಯು ತಯಾರಾಗುತ್ತದೆ ಎಂದರೆ ಈ ಹಳೆಯ ಮನೆಯು ಬಿದ್ದುಹೋಗುವುದೆಂದು ಮನಸ್ಸಿನಲ್ಲಿರುತ್ತದೆಯಲ್ಲವೆ. ಈಗ ನೀವು ಮಕ್ಕಳು ಓದುತ್ತಿದ್ದೀರಲ್ಲವೆ. ನಿಮಗೆ ತಿಳಿದಿದೆ- ಹೊಸಪ್ರಪಂಚದ ಸ್ಥಾಪನೆಯಾಗುತ್ತಿದೆ, ಇನ್ನು ಸ್ವಲ್ಪವೇ ಸಮಯವಿದೆ. ಅನೇಕ ಮಕ್ಕಳು ಓದುತ್ತಾರೆ, ಹೊಸಮನೆಯು ಈಗ ತಯಾರಾಗುತ್ತಿದೆ, ಹಳೆಯದು ಬೀಳುತ್ತಾ ಹೋಗುತ್ತಿದೆ. ಇನ್ನು ಕೆಲವೇ ದಿನಗಳಿವೆ. ನಿಮ್ಮ ಬುದ್ಧಿಯಲ್ಲಿ ಈ ಬೇಹದ್ದಿನ ಮಾತುಗಳಿವೆ. ಈಗ ಈ ಹಳೆಯ ಪ್ರಪಂಚದ ಕಡೆ ನಮ್ಮ ಮನಸ್ಸು ಹೋಗುವುದಿಲ್ಲ, ಕೊನೆಗೆ ಇದೇನೂ ಕೆಲಸಕ್ಕೆ ಬರುವುದಿಲ್ಲ. ನಾವು ಇಲ್ಲಿಂದ ಹೋಗಬಯಸುತ್ತೇವೆ. ತಂದೆಯೂ ಸಹ ತಿಳಿಸುತ್ತಾರೆ- ಮಕ್ಕಳೇ, ಈ ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನಿಡಬೇಡಿ. ತಂದೆಯಾದ ನನ್ನನ್ನು ಮತ್ತು ಮನೆಯನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುವವು ಇಲ್ಲವೆಂದರೆ ಬಹಳ ಶಿಕ್ಷೆಯನ್ನನುಭವಿಸುತ್ತೀರಿ ಮತ್ತು ಪದವಿಯೂ ಭ್ರಷ್ಟವಾಗುವುದು. ಆತ್ಮಕ್ಕೆ ಚಿಂತೆಯಿದೆ- ನಾವು 84 ಜನ್ಮಗಳನ್ನು ಮುಕ್ತಾಯ ಮಾಡಿದೆವು, ಈಗ ತಂದೆಯನ್ನು ನೆನಪು ಮಾಡಬೇಕಾಗಿದೆ ಆಗಲೇ ವಿಕರ್ಮಗಳು ವಿನಾಶವಾಗುವುದು. ತಂದೆಯ ಮತದಂತೆ ನಡೆದಾಗಲೇ ಜೀವನವು ಶ್ರೇಷ್ಠವಾಗುವುದು. ತಂದೆಯು ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ, ಇದನ್ನೂ ಸಹ ನೀವೇ ತಿಳಿದುಕೊಂಡಿದ್ದೀರಿ. ತಂದೆಯು ಬಹಳ ಚೆನ್ನಾಗಿ ಸ್ಮೃತಿ ತರಿಸುತ್ತಾರೆ. ಬೇಹದ್ದಿನ ತಂದೆಯು ಜ್ಞಾನಸಾಗರನಾಗಿದ್ದಾರೆ, ಅವರೇ ಬಂದು ಓದಿಸುತ್ತಾರೆ. ತಂದೆಯು ತಿಳಿಸುತ್ತಾರೆ- ಈ ವಿದ್ಯೆಯನ್ನು ಓದಿ ಶರೀರ ನಿರ್ವಹಣೆಯನ್ನೂ ಮಾಡಿಕೊಳ್ಳಿ ಆದರೆ ಟ್ರಸ್ಟಿಯಾಗಿರಿ.

ಯಾವ ಮಕ್ಕಳಿಗೆ ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗ್ಯವಿರುವುದು ಅವರು ತಮ್ಮದೆಲ್ಲವನ್ನೂ ತಂದೆಗೆ ಅರ್ಪಣೆ ಮಾಡುವರು. ನನ್ನದೇನೂ ಇಲ್ಲ. ಬಾಬಾ ಈ ದೇಹವೂ ಸಹ ನನ್ನದಲ್ಲ, ಇದು ಹಳೆಯ ದೇಹವಾಗಿದೆ. ಇದನ್ನೂ ಸಹ ಬಿಡಬೇಕಾಗಿದೆ. ಎಲ್ಲದರಿಂದ ಮೋಹವು ಕಳೆಯುತ್ತದೆ, ನಷ್ಟಮೋಹಿಗಳಾಗಿಬಿಡಬೇಕಾಗಿದೆ, ಇದೇ ಬೇಹದ್ದಿನ ವೈರಾಗ್ಯವಾಗಿದೆ. ಹೇಗೆ ಅಲ್ಲಿ ಹದ್ದಿನ ವೈರಾಗ್ಯವಿರುತ್ತದೆ. ಹಾಗೆಯೇ ಬುದ್ಧಿಯಲ್ಲಿದೆ- ನಾವು ಸ್ವರ್ಗದಲ್ಲಿ ಹೋಗಿ ಮಹಲುಗಳನ್ನು ಕಟ್ಟುತ್ತೇವೆ, ಇಲ್ಲಿಯದೇನೂ ಕೆಲಸಕ್ಕೆ ಬರುವುದಿಲ್ಲ ಏಕೆಂದರೆ ಇದೆಲ್ಲವೂ ಕ್ಷಣಿಕವಾದುದಾಗಿದೆ. ನೀವೀಗ ಈ ಕ್ಷಣಿಕವಾದುದನ್ನು ತ್ಯಜಿಸಿ ಬೇಹದ್ದಿನಲ್ಲಿ ಹೋಗುತ್ತೀರಿ. ನಿಮ್ಮ ಬುದ್ಧಿಯಲ್ಲಿ ಈ ಬೇಹದ್ದಿನ ಜ್ಞಾನವೇ ಇರಬೇಕು. ಈಗ ಮತ್ತ್ಯಾರಲ್ಲಿಯೂ ನಿಮ್ಮ ಕಣ್ಣುಗಳು ಮುಳುಗುವುದಿಲ್ಲ. ಈಗಂತೂ ಮನೆಗೆ ಹೋಗಬೇಕಾಗಿದೆ, ಕಲ್ಪ-ಕಲ್ಪವೂ ತಂದೆಯು ಬಂದು ನಮಗೆ ಓದಿಸಿ ಜೊತೆ ಕರೆದುಕೊಂಡು ಹೋಗುತ್ತಾರೆ. ನಿಮಗೇನೂ ಇದು ಹೊಸವಿದ್ಯೆಯಲ್ಲ, ಕಲ್ಪ-ಕಲ್ಪವೂ ಈ ವಿದ್ಯೆಯನ್ನು ಓದುತ್ತೇವೆಂದು ತಿಳಿದುಕೊಂಡಿದ್ದೀರಿ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದೀರಿ. ಇಡೀ ಪ್ರಪಂಚದಲ್ಲಿ ಎಷ್ಟೊಂದು ಮನುಷ್ಯರಿದ್ದಾರೆ ಆದರೆ ನಿಧಾನ-ನಿಧಾನವಾಗಿ ಈ ಬ್ರಾಹ್ಮಣರ ವೃಕ್ಷವು ವೃದ್ಧಿಹೊಂದುತ್ತಿರುತ್ತದೆ ಎಂದು ಅವರಿಗೆ ತಿಳಿದಿದೆಯೇ? ನಾಟಕದ ಯೋಜನೆಯನುಸಾರ ಸ್ಥಾಪನೆಯಾಗಲೇಬೇಕಾಗಿದೆ. ನಮ್ಮದು ಆತ್ಮಿಕ ಸತ್ಕಾರವಾಗಿದೆ. ನಾವು ದಿವ್ಯದೃಷ್ಟಿಯಿಂದ ಹೊಸಪ್ರಪಂಚವನ್ನು ನೋಡುತ್ತೇವೆ. ಅಲ್ಲಿಯೇ ಹೋಗಬೇಕಾಗಿದೆ. ಭಗವಂತನು ಒಬ್ಬರೇ ಆಗಿದ್ದಾರೆ, ಅವರೇ ಓದಿಸುವವರಾಗಿದ್ದಾರೆ. ರಾಜಯೋಗವನ್ನು ತಂದೆಯು ಕಲಿಸಿದ್ದರು ಆ ಸಮಯದಲ್ಲಿ ಅನೇಕ ಧರ್ಮಗಳ ವಿನಾಶವಾಗಿತ್ತು, ಒಂದು ಧರ್ಮ ಸ್ಥಾಪನೆಯಾಗಿತ್ತು. ನೀವೂ ಸಹ ಕಲ್ಪದ ಮೊದಲಿನವರಾಗಿದ್ದೀರಿ. ನೀವು ಕಲ್ಪ-ಕಲ್ಪವೂ ಓದುತ್ತಾ ಬಂದಿದ್ದೀರಿ, ಆಸ್ತಿಯನ್ನು ತೆಗೆದುಕೊಳ್ಳುತ್ತಾ ಬಂದಿದ್ದೀರಿ. ಪ್ರತಿಯೊಬ್ಬರೂ ತಮ್ಮ-ತಮ್ಮ ಪುರುಷಾರ್ಥ ಮಾಡಬೇಕಾಗಿದೆ. ಇದು ಬೇಹದ್ದಿನ ವಿದ್ಯೆಯಾಗಿದೆ. ಈ ಶಿಕ್ಷಣವನ್ನು ಯಾವುದೇ ಮನುಷ್ಯಮಾತ್ರರೂ ಕೊಡಲು ಸಾಧ್ಯವಿಲ್ಲ.

ತಂದೆಯು ಶ್ಯಾಮ ಮತ್ತು ಸುಂದರ ಎನ್ನುವುದರ ರಹಸ್ಯವನ್ನು ತಿಳಿಸಿದ್ದಾರೆ. ನಾವೀಗ ಸುಂದರರಾಗುತ್ತಿದ್ದೇವೆ ಮೊದಲು ಶ್ಯಾಮನಾಗಿದ್ದೆವು ಎಂಬುದನ್ನು ನೀವೇ ತಿಳಿದುಕೊಂಡಿದ್ದೀರಿ. ಕೇವಲ ಕೃಷ್ಣನೊಬ್ಬನೇ ಇರಲಿಲ್ಲ, ಅವರ ಇಡೀ ರಾಜಧಾನಿಯಿತ್ತಲ್ಲವೆ. ನೀವೀಗ ತಿಳಿದುಕೊಳ್ಳುತ್ತೀರಿ- ನಾವು ನರಕವಾಸಿಗಳಿಂದ ಸ್ವರ್ಗವಾಸಿಗಳಾಗುತ್ತಿದ್ದೇವೆ. ಈಗ ನಿಮಗೆ ಈ ನರಕದಿಂದ ತಿರಸ್ಕಾರವುಂಟಾಗುತ್ತದೆ. ನೀವೀಗ ಈ ಪುರುಷೋತ್ತಮ ಸಂಗಮಯುಗದಲ್ಲಿ ಬಂದುಬಿಟ್ಟಿದ್ದೀರಿ, ಇಷ್ಟೊಂದುಮಂದಿ ಬರುತ್ತಾರೆ. ಇವರಲ್ಲಿ ಯಾರು ಕಲ್ಪದ ಹಿಂದೆ ಬಂದಿದ್ದರೋ ಅವರೇ ಬರುತ್ತಾರೆ. ಸಂಗಮಯುಗವನ್ನೂ ಸಹ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ನಾವು ಪುರುಷೋತ್ತಮ ಅರ್ಥಾತ್ ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ. ಮನುಷ್ಯರಂತೂ ನರಕವೆಂದರೇನು, ಸ್ವರ್ಗವೆಂದರೇನು ತಿಳಿದುಕೊಂಡಿಲ್ಲ. ಎಲ್ಲವೂ ಇಲ್ಲಿಯೇ ಇದೆ. ಯಾರು ಸುಖಿಯಾಗಿದ್ದಾರೆಯೋ ಅವರು ಸ್ವರ್ಗದಲ್ಲಿದ್ದಾರೆ, ದುಃಖಿಯಾಗಿರುವವರು ನರಕದಲ್ಲಿದ್ದಾರೆಂದು ಹೇಳುತ್ತಾರೆ. ಅನೇಕ ಮತಗಳಿವೆಯಲ್ಲವೆ. ಒಂದು ಮನೆಯಲ್ಲಿಯೂ ಸಹ ಅನೇಕ ಮತಗಳಾಗಿಬಿಡುತ್ತವೆ. ಮಕ್ಕಳು ಮೊದಲಾದವರಲ್ಲಿ ಮೋಹದ ಸೆಳೆತವಿದೆ, ಅದು ಕಳೆಯುವುದಿಲ್ಲ. ಮೋಹಕ್ಕೆ ವಶರಾಗಿ ನಾವು ಹೇಗಿರುತ್ತೇವೆ ಎಂಬುದನ್ನೇ ತಿಳಿದುಕೊಂಡಿರುವುದಿಲ್ಲ. ಮಗುವಿನ ವಿವಾಹ ಮಾಡುವುದೇ ಎಂದು ಕೇಳುತ್ತಾರೆ ಆದರೆ ಮಕ್ಕಳಿಗೆ ಈ ನಿಯಮವನ್ನು ತಿಳಿಸಲಾಗುತ್ತದೆ- ನೀವು ಸ್ವರ್ಗವಾಸಿಗಳಾಗಲು ಒಂದುಕಡೆ ಜ್ಞಾನವನ್ನು ಕೇಳುತ್ತಿದ್ದೀರಿ, ಇನ್ನೊಂದುಕಡೆ ಅವರನ್ನು ನರಕದಲ್ಲಿ ಹಾಕುವುದೇ ಎಂದು ಕೇಳುತ್ತೀರಿ. ನೀವು ಈ ರೀತಿ ಕೇಳುತ್ತೀರೆಂದರೆ ಹೋಗಿ ಮಾಡಿ ಎಂದು ತಂದೆಯು ಹೇಳುತ್ತಾರೆ. ಇವರಿಗೆ ಮೋಹವಿದೆಯೆಂದು ತಿಳಿಯುತ್ತಾರೆ. ಒಂದುವೇಳೆ ಮದುವೆ ಬೇಡವೆಂದರೂ ಮತ್ತೆ ಉಲ್ಲಂಘನೆ ಮಾಡಿಬಿಡುತ್ತೀರಿ. ಮಗಳಿಗೆ ಮದುವೆಯಂತೂ ಮಾಡಲೇಬೇಕಾಗುತ್ತದೆ. ಇಲ್ಲವೆಂದರೆ ಸಂಗದೋಷದಲ್ಲಿ ಹಾಳಾಗಿಬಿಡುತ್ತಾರೆ. ಗಂಡುಮಕ್ಕಳಿಗೆ ನೀವೇನೂ ಮಾಡುವ ಅವಶ್ಯಕತೆಯಿಲ್ಲ ಆದರೆ ಅಷ್ಟು ಸಾಹಸಬೇಕಲ್ಲವೆ. ತಂದೆಯು ಇವರಿಂದ ಕರ್ಮ ಮಾಡಿಸಿದ್ದರಲ್ಲವೆ. ಇವರನ್ನು ನೋಡಿ ಮತ್ತೆಲ್ಲರೂ ಮಾಡತೊಡಗಿದರು. ಮನೆಯಲ್ಲಿಯೂ ಬಹಳ ಜಗಳಗಳಾಗುತ್ತವೆ. ಇದು ಕಲಹದ ಪ್ರಪಂಚವಾಗಿದೆ, ಮುಳ್ಳುಗಳ ಕಾಡಲ್ಲವೆ. ಒಬ್ಬರು ಇನ್ನೊಬರನ್ನು ಕುಟುಕುತ್ತಿರುತ್ತಾರೆ. ಸ್ವರ್ಗಕ್ಕೆ ಉದ್ಯಾನವನ ಎಂದು ಹೇಳಲಾಗುತ್ತದೆ. ಇದು ಕಾಡಾಗಿದೆ. ತಂದೆಯು ಬಂದು ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಾರೆ. ಪ್ರದರ್ಶನಿಯಲ್ಲಿ ಭಲೆ ಹೌದು, ಹೌದು ಸತ್ಯವೆಂದು ಹೇಳುತ್ತಾರೆ ಆದರೆ ತಿಳಿದುಕೊಳ್ಳುವುದೇನೂ ಇಲ್ಲ. ಕೆಲವರೇ ವಿರಳ ಬರುತ್ತಾರೆ. ಒಂದುಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟುಬಿಡುತ್ತಾರೆ. ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ಸಮಯ ಹಿಡಿಸುತ್ತದೆಯಲ್ಲವೆ. ಮನುಷ್ಯರು ತಮ್ಮನ್ನು ಮುಳ್ಳೆಂದು ತಿಳಿಯುವುದಿಲ್ಲ, ಈ ಸಮಯದಲ್ಲಿ ಭಲೆ ಮುಖವು ಮನುಷ್ಯನದಾಗಿದೆ ಆದರೆ ಗುಣಗಳು ಕೋತಿಗಿಂತಲೂ ಕೀಳಾಗಿದೆ ಆದರೆ ತಮ್ಮನ್ನು ಆ ರೀತಿ ತಿಳಿಯುವುದೇ ಇಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ- ತಮ್ಮ ರಚನೆಗೂ (ಮಕ್ಕಳು) ತಿಳಿಸಿ, ಒಂದುವೇಳೆ ತಿಳಿದುಕೊಳ್ಳಲಿಲ್ಲವೆಂದರೆ ಬಿಟ್ಟುಬಿಡಿ ಆದರೆ ಆ ಶಕ್ತಿಯು ಬೇಕಲ್ಲವೆ. ಮೋಹದ ಕೀಟಗಳು ಈ ರೀತಿ ಮುತ್ತಿಕೊಂಡಿದೆ, ಅವು ಬಿಟ್ಟುಹೋಗುವುದೇ ಇಲ್ಲ. ಇಲ್ಲಂತೂ ನಷ್ಟಮೋಹಿಗಳಾಗಬೇಕಾಗಿದೆ. ನನ್ನವರು ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ. ಈಗ ನಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ ಅಂದಮೇಲೆ ಪಾವನರಾಗಬೇಕಾಗಿದೆ. ಇಲ್ಲವೆಂದರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಪದವಿಯೂ ಭ್ರಷ್ಟವಾಗುವುದು. ಈಗ ತಮ್ಮನ್ನು ಸತೋಪ್ರಧಾನ ಮಾಡಿಕೊಳ್ಳುವುದೇ ಚಿಂತೆಯಾಗಿದೆ. ಶಿವನ ಮಂದಿರದಲ್ಲಿ ಹೋಗಿ ನೀವು ತಿಳಿಸಬಹುದು- ಭಗವಂತನು ಭಾರತವನ್ನು ಸ್ವರ್ಗವನ್ನಾಗಿ ಮಾಡಿದ್ದರು, ಈಗ ಅವರು ಪುನಃ ಮಾಡುತ್ತಿದ್ದಾರೆ. ಕೇವಲ ಇಷ್ಟನ್ನೇ ತಿಳಿಸುತ್ತಾರೆ- ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಈ ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗಿಗಳಾಗಿ ತಮ್ಮದೆಲ್ಲವನ್ನೂ ಅರ್ಪಣೆ ಮಾಡಿ. ನಮ್ಮದೇನೂ ಇಲ್ಲ. ಈ ದೇಹವೂ ನನ್ನದಲ್ಲ, ಇದರಿಂದ ಮೋಹವನ್ನು ತೆಗೆದು ನಷ್ಟಮೋಹಿಗಳಾಗಬೇಕಾಗಿದೆ.

2) ರಿಜಿಸ್ಟರ್ನಲ್ಲಿ ಕಲೆಯುಂಟಾಗುವ ತಪ್ಪನ್ನೆಂದೂ ಮಾಡಬಾರದು. ಸರ್ವದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಒಳಗೆ ಕ್ರೋಧದ ಅಂಶಮಾತ್ರವೂ ಇರಬಾರದು.

ವರದಾನ:
ಹೇಳುವುದು, ಯೋಚಿಸುವುದು ಮತ್ತು ಮಾಡುವುದು-ಈ ಮೂರನ್ನೂ ಸಮಾನವಾಗಿ ಮಾಡುವಂತಹ ಜ್ಞಾನಿತ್ವ ಆತ್ಮ ಭವ

ಈಗ ವಾನಪ್ರಸ್ಥ ಅವಸ್ಥೆಯಲ್ಲಿ ಹೋಗುವ ಸಮಯ ಸಮೀಪ ಬರುತ್ತಿದೆ-ಆದ್ದರಿಂದ ಬಲಹೀನತೆಗಳೆಂಬ ನನ್ನತನವನ್ನು ಅಥವಾ ವ್ಯರ್ಥದ ಆಟವನ್ನು ಸಮಾಪ್ತಿ ಮಾಡಿ ಹೇಳುವುದು, ಯೋಚಿಸುವುದು ಮತ್ತು ಮಾಡುವುದು ಸಮಾನವಾಗಿ ಮಾಡಿಕೊಳ್ಳಿ ಆಗ ಹೇಳಲಾಗುವುದು ಜ್ಞಾನ ಸ್ವರೂಪ. ಯಾರು ಹೀಗೆ ಜ್ಞಾನ ಸ್ವರೂಪ ಜ್ಞಾನಿತ್ವ ಆತ್ಮರುಗಳಿದ್ದಾರೆ ಅವರ ಪ್ರತಿಯೊಂದು ಕರ್ಮ, ಸಂಸ್ಕಾರ,ಗುಣ ಮತ್ತು ಕರ್ತವ್ಯ ಸಮರ್ಥ ತಂದೆಯ ಸಮಾನವಿರುತ್ತದೆ. ಅವರು ಎಂದೂ ವ್ಯರ್ಥದ ವಿಚಿತ್ರ ಆಟ ಆಡಲು ಸಾಧ್ಯವಿಲ್ಲ. ಸದಾ ಪರಮಾತ್ಮನ ಮಿಲನದ ಆಟದಲ್ಲಿ ವ್ಯಸ್ಥವಾಗಿರುತ್ತಾರೆ. ಒಬ್ಬ ತಂದೆಯ ಜೊತೆ ಮಿಲನ ಆಚರಿಸುತ್ತಾರೆ ಮತ್ತು ಬೇರೆಯವರನ್ನೂ ಸಹ ತಂದೆಯ ಸಮಾನ ಮಾಡುತ್ತಾರೆ.

ಸ್ಲೋಗನ್:
ಸೇವೆಯಲ್ಲಿ ಉಲ್ಲಾಸ ಸಣ್ಣ-ಸಣ್ಣ ಖಾಯಿಲೆಗಳನ್ನು ಮರ್ಜ್ ಮಾಡಿಬಿಡುತ್ತದೆ, ಆದ್ದರಿಂದ ಸೇವೆಯಲ್ಲಿ ಸದಾ ವ್ಯಸ್ಥವಾಗಿರಿ.

ಅವ್ಯಕ್ತ ಸೂಚನೆಗಳು- ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಅಂತರ್ಮುಖಿ ಅರ್ಥಾತ್ ಮುಖ ಹಾಗೂ ಮನಸ್ಸಿನ ಮೌನ ಇಡುವಂತಹವರು.ಮುಖದ ಮೌನವನ್ನು ಪ್ರಂಪಚದವರು ಇಡುತ್ತಾರೆ ಆದರೆ ವ್ಯರ್ಥ ಸಂಕಲ್ಪದ ಮೌನವನ್ನು ಇಡಬೇಕು.ಹೇಗೆ ಟ್ರಫಿಕ್ ಕಂಟ್ರೋಲ್ ಮಾಡುತ್ತೇವೆಂದರೆ ವ್ಯರ್ಥದ ಕಂಟ್ರೋಲ್ ಮಾಡುತ್ತೇವೆ ಅದರಂತೆ ಮಧ್ಯ-ಮಧ್ಯದಲ್ಲಿಒಂದು ದಿನ ಮನಸ್ಸಿನ ಟ್ರಫಿಕ್ ಕಂಟ್ರೋಲ್ ಮಾಡಿ.