14.06.26 Avyakt Bapdada
Kannada
Murli 24.10.2010 Om Shanti Madhuban
“ಸಮಯದ ವೇಗದ ಪ್ರಮಾಣ ಈಗ
ವಿಶೇಷ ಸ್ವಭಾವ-ಸಂಸ್ಕಾರ ಪರಿವರ್ತನೆ ಮಾಡುವುದರಲ್ಲಿ ತೀವ್ರತೆಯನ್ನು ತೆಗೆದುಕೊಂಡು ಬನ್ನಿ,
ಮನಸ್ಸಿನ ಮೂಲಕ ಆತ್ಮರಿಗೆ ಭಿನ್ನ-ಭಿನ್ನ ಕಿರಣಗಳನ್ನು ಕೊಡಿ”.
ಈ ದಿನ ನಾಲ್ಕಾರು ಕಡೆ
ಪರಮಾತ್ಮ ಸಿಂಹಾಸನಾಧಿಕಾರಿ, ಭೃಕುಟಿಯ ಸಿಂಹಾಸನಾಧಿಕಾರಿ ಮತ್ತು ವಿಶ್ವದ ಸಿಂಹಾಸನಾಧಿಕಾರಿ
ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದೇವೆ. ಪರಮಾತ್ಮನ ಹೃದಯ ಸಿಂಹಾಸನ ಕೇವಲ ತಾವು
ಬ್ರಾಹ್ಮಣರಿಗಾಗಿಯೇ ಇದೆ, ಭೃಕುಟಿಯ ಸಿಂಹಾಸನವಂತೂ ಎಲ್ಲರ ಬಳಿ ಇದೆ ಆದರೆ ಪರಮಾತ್ಮನ ಸಿಂಹಾಸನ
ಕೇವಲ ಬ್ರಾಹ್ಮಣ ಆತ್ಮರ ಭಾಗ್ಯದಲ್ಲಿ ಮಾತ್ರ ಇದೆ. ಈ ಪರಮಾತ್ಮನ ಸಿಂಹಾಸನ ವಿಶ್ವ ಸಿಂಹಾಸನವನ್ನು
ಕೊಡಿಸುತ್ತದೆ ಅಂದಾಗ ಮೂರು ಸಿಂಹಾಸನಗಳ ಅಧಿಕಾರಿ ಆತ್ಮಗಳು ತಾವು ಬ್ರಾಹ್ಮಣರೇ ಆಗಿದ್ದೀರಿ.
ಪರಮಾತ್ಮನ ಸಿಂಹಾಸನ ಎಷ್ಟು ಶ್ರೇಷ್ಠವಾಗಿದೆ. ಮತ್ಯಾವುದೇ ಯುಗದಲ್ಲಿ ಸಿಂಹಾಸನ ಪ್ರಾಪ್ತಿ
ಆಗುವುದಿಲ್ಲ. ಪರಮಾತ್ಮನ ಸಿಂಹಾಸನದ ಅಧಿಕಾರಿ ಆತ್ಮರು ಭಕ್ತಿ ಮಾರ್ಗದಲ್ಲೂ ಸಹ ಮಾಲೆಯ ಮಣಿಗಳ
ರೂಪದಲ್ಲಿ ಗಾಯನ ಮಾಡಲಾಗುತ್ತದೆ ಮತ್ತು ಪೂಜೆ ಮಾಡಲಾಗುತ್ತದೆ. ಕೋಟಿಯಲ್ಲಿ ಕೆಲವರ ರೂಪದಲ್ಲಿ
ಗಾಯನ ಮಾಡಲಾಗುತ್ತದೆ, ಬಹಳ ದೊಡ್ಡ ಭಾವನೆಯಿಂದ ಒಂದೊಂದು ಮಣಿಯನ್ನು ಎಷ್ಟು ಶ್ರೇಷ್ಠ ದೃಷ್ಟಿಯಿಂದ
ನೋಡುತ್ತಿರುತ್ತಾರೆ ಅಂದಾಗ ತಮ್ಮೆಲ್ಲರಿಗೂ ನಶೆ ಇದೆಯಲ್ಲವೇ! ನಮ್ಮ ವಿನಃ ಬೇರೆ ಯಾರೂ ಈ
ಸಿಂಹಾಸನದ ಅನುಭವ ಮಾಡಲು ಸಾಧ್ಯವಿಲ್ಲ ಎಂದು ನಶೆ ಇದೆಯೇ? ಆದರೆ ತಾವೆಲ್ಲ ಬ್ರಾಹ್ಮಣರ ಜನ್ಮ
ಸಿದ್ಧ ಅಧಿಕಾರವಾಗಿದೆ. ತಮಗಾಗಿ ಈ ಸಿಂಹಾಸನ ಕೊರಳಿನ ಹಾರವಾಗಿದೆ. ಅಂದಾಗ ಭಗವಂತನ ಹೃದಯ
ಸಿಂಹಾಸನಾಧಿಕಾರಿ, ಈ ನಶೆ ಮತ್ತು ಖುಷಿ ಎಲ್ಲರಿಗೆ ಸದಾ ಸ್ಮೃತಿಯಲ್ಲಿ ಇರುತ್ತದೆಯೇ? ನಾವು
ಯಾರಿಗಾದ್ದೇವೆ! ಇದರ ನಿಶ್ಚಯ ಮತ್ತು ನಶೆ ಇರುತ್ತದೆಯೇ?
ಬಾಪ್ದಾದಾರವರಂತೂ ಇಂತಹ
ಮೂರು ಸಿಂಹಾಸನಗಳ ಅಧಿಕಾರಿ ಮಕ್ಕಳನ್ನು ನೋಡಿ ಖುಷಿ ಆಗುತ್ತಾರೆ. ವಾಹ್! ನನ್ನ ಶ್ರೇಷ್ಠ ಅಧಿಕಾರಿ
ಮಕ್ಕಳೇ ವಾಹ್! ಮಕ್ಕಳು ಹೇಳುತ್ತಾರೆ ವಾಹ್! ಬಾಬಾ ವಾಹ್! ಮತ್ತು ತಂದೆ ಹೇಳುತ್ತಾರೆ ವಾಹ್!
ಮಕ್ಕಳೇ ವಾಹ್! ಸ್ವಯಂ ತಂದೆಯೂ ಸಹ ಅಂತಹ ಮಕ್ಕಳ ಮಹಿಮೆ ಮಾಡುತ್ತಾರೆ. ನಾವು ಯಾರಾಗಿದ್ದೇವೆ? ಎಂಬ
ನಶೆ ಇದೆಯೇ? ಎಷ್ಟು ನಿಶ್ಚಯ ಇರುತ್ತದೆ ಅಷ್ಟು ನಶೆ ಇರುತ್ತದೆ ಮತ್ತು ನಿಶ್ಚಯದ ನಶೆ ತಮ್ಮ ಚೆಹರೆ
ಮತ್ತು ಚಲನೆಯಿಂದ ಕಂಡು ಬರುತ್ತದೆ. ಯಾರಿಗೆ ನಿಶ್ಚಯ ಇರುತ್ತದೆ ಅವರಿಗೆ ಖಂಡಿತ ನಶೆ ಇರುತ್ತದೆ.
ಬಾಪ್ದಾದಾರವರೂ ಸಹ ಈಗ ಪ್ರತಿಯೊಬ್ಬ ಮಕ್ಕಳ ಮೂಲಕ ಚೆಹರೆ ಮತ್ತು ಚಲನೆಯಿಂದ ಆತ್ಮರಿಗೆ ಅನುಭವ
ಮಾಡಲು ಬಯಸುತ್ತಾರೆ, ವಾಣಿಯ ಮೂಲಕ ಅಂತೂ ಅನುಭವ ಮಾಡುತ್ತಿದ್ದಾರೆ. ಈಗ ಅನುಭವ ಮಾಡುವ ಕಾರ್ಯ ಶುರು
ಆಗಿ ಬಿಟ್ಟಿದೆ. ಮೊದಲು ಕೇಳುತ್ತಿದ್ದರು, ಯೋಚನೆ ಮಾಡುತ್ತಿದ್ದರು. ಈಗ ತಾವು ಬ್ರಾಹ್ಮಣ ಆತ್ಮಗಳ
ಸ್ಥಿತಿಯ ಪ್ರಭಾವದ ಅನುಭವ ಮಾಡುವುದು ಪ್ರಾರಂಭಿಸಿದ್ದಾರೆ, ಅಂದಾಗ ನಾನು ಇಡೀ ದಿನದಲ್ಲಿ ಎಷ್ಟು
ಸಮಯ ಪರಮಾತ್ಮನ ಹೃದಯದಲ್ಲಿ ಇರುತ್ತೇನೆ? ಎಂದು ತಮ್ಮನ್ನು ತಾವು ಚೆಕ್ ಮಾಡಿಕೊಳ್ಳಿ. ಏಕೆಂದರೆ ಈ
ಹೃದಯ ಸಿಂಹಾಸನ, ವಿಶ್ವದ ಸಿಂಹಾಸನ ಪ್ರಾಪ್ತಿ ಮಾಡಿಸಲು ಆಧಾರವಾಗಿದೆ. ಏಕೆಂದರೆ ಈ ಹೃದಯ
ಸಿಂಹಾಸನದ ಆಧಾರದಿಂದ ಎಷ್ಟು ಸಮಯ ಹೃದಯ ಸಿಂಹಾಸನಾಧಿಕಾರಿ ಆಗಿರುತ್ತೀರಿ ಅಷ್ಟು ಹೆಚ್ಚು ಸಮಯ
ಭವಿಷ್ಯದಲ್ಲಿ ರಾಜ ಮನೆತನದಲ್ಲಿ ಅಧಿಕಾರಿ ಆಗಿ ಬಿಡುತ್ತೀರಿ. ಯಾವಾಗಿನಿಂದ ನಾನು ಬ್ರಾಹ್ಮಣ
ಆಗಿದ್ದೆ ಆಗಿನಿಂದ ಎಷ್ಟು ಸಮಯ ಹೃದಯ ಸಿಂಹಾಸನಾಧಿಕಾರಿ ಆಗಿದ್ದೇನೆ ಎಂದು ಚೆಕ್ ಮಾಡಿಕೊಳ್ಳಿ, ಈ
ಆಧಾರದಿಂದ ಸಿಂಹಾಸನದ ಮೇಲೆ ನಂಬರ್ವಾರಾಗಿ ಕುಳಿತುಕೊಳ್ಳುತ್ತೀರಿ ಆದರೆ ಸದಾ ರಾಜ ಪರಿವಾರದಲ್ಲಿ,
ರಾಜ ಮನೆತನದಲ್ಲಿ ಅಧಿಕಾರಿ ಆಗಿ ಬಿಡುತ್ತೀರಿ, ಎಂದಾದರೂ ಚೆಕ್ ಮಾಡಿಕೊಂಡಿದ್ದೀರಾ? ಹೃದಯ
ಸಿಂಹಾಸನದಿಂದ ಇಳಿಯುವುದಿಲ್ಲ ತಾನೆ? ತಮ್ಮ ಲೆಕ್ಕವನ್ನು ತೆಗೆಯಬೇಕು ಏಕೆಂದರೆ ಇದರ ಆಧಾರದಿಂದ
ತಾವೆಲ್ಲರೂ ರಾಜ ಮನೆತನದಲ್ಲಿ ಬರುತ್ತೀರಿ. ಸಿಂಹಾಸನವನ್ನು ಬಿಟ್ಟು ಮಣ್ಣಿನಲ್ಲಿ ಕಾಲು
ಇಡುವುದಿಲ್ಲ ತಾನೆ? ಎಂದು ಚೆಕ್ ಮಾಡಿಕೊಳ್ಳಬೇಕು. 63 ಜನ್ಮದ ಸಂಸ್ಕಾರ, ದೇಹದ ಪರಿವೆ ಎಂಬ
ಮಣ್ಣಿನಲ್ಲಿ ಕಾಲು ಇಟ್ಟಿದ್ದೀರಿ. ಒಂದಾಗಿದೆ ದೇಹದ ಪರಿವೆ ಮತ್ತೊಂದು ದೇಹದ ಅಭಿಮಾನ.
ದೇಹಾಭಿಮಾನದ ಮಣ್ಣು ಬಹಳ ಆಳವಾಗಿದೆ ಆದರೆ ದೇಹದ ಪರಿವೆ ಸಹ ಮಣ್ಣಾಗಿದೆ. ಯಾವಾಗ ಮನುಷ್ಯರು ಹೋಗಿ
ಬಿಡುತ್ತಾರೆ (ಮರಣ ಹೊಂದುತ್ತಾರೆ) ಮತ್ತು ದೇಹವನ್ನು ಸುಟ್ಟಾಗ ಮಣ್ಣು ಮಣ್ಣಿನಲ್ಲಿ ಸೇರಿ ಹೋಯಿತು
ಎಂದು ಮನುಷ್ಯರೂ ಹೇಳುತ್ತಾರೆ. ಅಂದಾಗ ಮಣ್ಣಿನಲ್ಲಿ ಕಾಲು ಹೋಗುತ್ತಿಲ್ಲ ತಾನೆ! ಎಂದು ಚೆಕ್
ಮಾಡಿಕೊಳ್ಳಿ. ದೇಹದ ಪರಿವೆಯಲ್ಲಿ ಬರುವುದು ಅರ್ಥಾತ್ ಮಣ್ಣಿನಲ್ಲಿ ಕಾಲು ಇಡುವುದು.
ಬಾಪ್ದಾದಾರವರು ತಾವು
ಶ್ರೇಷ್ಠ ಆತ್ಮಗಳಿಗಾಗಿ ಮೂರು ಸಿಂಹಾಸನಗಳನ್ನು ಕೊಟ್ಟಿದ್ದಾರೆ ಏಕೆಂದರೆ ಮುದ್ದು
ಮಕ್ಕಳಾಗಿದ್ದೀರಲ್ಲವೇ. ಅಗಲಿ ಹೋಗಿ ಸಿಕ್ಕಿದ್ದೀರಿ, ಮುದ್ದು ಮಕ್ಕಳೂ ಆಗಿದ್ದೀರಿ, ಯಾರು ಮುದ್ದು
ಮಕ್ಕಳಿರುತ್ತಾರೆ ಅವರನ್ನು ಉಯ್ಯಾಲೆಯಲ್ಲಿ ಅಥವಾ ಮಡಿಲಿನಲ್ಲಿ ಇಟ್ಟುಕೊಳ್ಳುತ್ತಾರೆ. ಮಣ್ಣಿನಲ್ಲಿ
ಕಾಲು ಇಡಲು ಬಿಡುವುದಿಲ್ಲ. ಅಂದಾಗ ಬಾಪ್ದಾದಾರವರು ಯಾರು ಮೂರು ಸಿಂಹಾನಕ್ಕೆ ಅಧಿಕಾರಿ ಆಗಿದ್ದಾರೆ
ಅವರಿಗಾಗಿ ಎಷ್ಟು ಭಿನ್ನ-ಭಿನ್ನ ಉಯ್ಯಾಲೆಗಳನ್ನು ಕೊಟ್ಟಿದ್ದಾರೆ. ಕೆಲವೊಮ್ಮೆ ಶಾಂತಿಯ
ಉಯ್ಯಾಲೆಯಲ್ಲಿ ತೂಗುತ್ತಿರಿ, ಕೆಲವೊಮ್ಮೆ ಸುಖದ ಉಯ್ಯಾಲೆಯಲ್ಲಿ ತೂಗುತ್ತಿರಿ, ಕೆಲವೊಮ್ಮೆ
ಪ್ರೇಮದ ಉಯ್ಯಾಲೆಯಲ್ಲಿ ಉಯ್ಯಾಲೆ ಆಡಿ. ಸಿಂಹಾಸನ ಮತ್ತು ಉಯ್ಯಾಲೆಯಲ್ಲೇ ಪಾದ ಇಡಬೇಕು. ನಾವು
ಭವಿಷ್ಯದಲ್ಲಿ ಎಲ್ಲಿ ಬರುತ್ತೇವೆ? ಏನಾಗುತ್ತೇವೆ ಎಂದು ಕೇಳುತ್ತಾರೆ. ಎಷ್ಟು ಸಮಯದಿಂದ
ಬಂದಿದ್ದೀರಿ ಅಷ್ಟು ಸಮಯದಿಂದ ನನ್ನ ಪಾದ ಎಷ್ಟು ಸಮಯ ಉಯ್ಯಾಲೆಯಲ್ಲಿ ಅಥವಾ ಸಿಂಹಾಸನದ ಮೇಲೆ ಇದೆ?
ಎಂಬುವುದು ಚೆಕ್ ಮಾಡಿಕೊಳ್ಳಿ ಎಂದು ತಂದೆ ಹೇಳುತ್ತಾರೆ. ಅಷ್ಟೇ ಭವಿಷ್ಯದಲ್ಲಿ ರಾಯಲ್ ಮನೆತನದಲ್ಲಿ
ಇರುತ್ತೀರಿ. ರಾಯಲ್ ಪ್ರಜೆಗಳಲ್ಲೂ ಬರುವುದಿಲ್ಲ. ರಾಯಲ್ ಮನೆತನದಲ್ಲಿಯೇ ಬರುತ್ತೀರಿ. ಈಗ
ಲೆಕ್ಕವನ್ನು ಪ್ರತಿಯೊಬ್ಬರು ತಮ್ಮ-ತಮ್ಮ ಲೆಕ್ಕವನ್ನು ತೆಗೆಯಿರಿ. ಬೇರೆಯವರನ್ನು ನೋಡಬಾರದು,
ತಮ್ಮ ಲೆಕ್ಕವನ್ನು ತೆಗೆಯಬೇಕು. ಪ್ರತಿಯೊಬ್ಬರು ಏನು ಬಯಸುತ್ತಾರೆ? ರಾಯಲ್ ಮನೆತನದಲ್ಲಿ, ರಾಜ
ಮನೆತನದಲ್ಲಿಯೇ ಇರಬೇಕೆಂದು ಬಯಸುತ್ತಾರೆ. ಈಗಲೂ ಸಹ ಎಷ್ಟು ಸಮಯ ಸಿಗುತ್ತದೆ ಏಕೆಂದರೆ
ಸಮಾಪ್ತಿಯಂತೂ ಅಚಾನಕ್ ಆಗುವುದಿದೆ. ಸಮಾಪ್ತಿ ಆಗುವವರೆಗೆ ಚೆಕ್ ಮಾಡಿಕೊಂಡರೆ ಎಷ್ಟು ಸಮಯ ಹೆಚ್ಚು
ತಂದೆಯ ಮಡಿಲಿನಲ್ಲಿ, ಸಿಂಹಾಸನದ ಮೇಲೆ, ಉಯ್ಯಾಲೆಯಲ್ಲಿ ಇರುತ್ತೀರಿ, ಅಷ್ಟು ಸಮಯ ರಾಯಲ್
ಪರಿವಾರದಲ್ಲಿ, ರಾಯಲ್ ಮನೆತನದಲ್ಲಿ ಭಾಗ್ಯ ಪ್ರಾಪ್ತಿ ಮಾಡಿಕೊಳ್ಳುತ್ತೀರಿ.
ಬಾಪ್ದಾದಾರವರಿಗಂತೂ
ಪ್ರತಿಯೊಬ್ಬ ಮಗುವಿನ ಪೂರ್ತಿ ಸಮಯ 21 ಜನ್ಮಗಳು ರಾಯಲ್ ಮನೆತನದಲ್ಲಿ ಸೂರ್ಯವಂಶಿ ಆಗಿರಬಹುದು,
ಚಂದ್ರವಂಶ ಆಗಿರಬಹುದು, ಎರಡು ಯುಗದಲ್ಲಿ ರಾಯಲ್ ಪರಿವಾರದಲ್ಲಿ ಇರುವ ಅಧಿಕಾರ ಕೊಡುತ್ತಿದ್ದಾರೆ,
ಆದರೆ ಅಧಿಕಾರ ತೆಗೆದುಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಮೇಲೆ ಇದೆ. ಬ್ರಹ್ಮಾ ಬಾಬಾರವರೊಂದಿಗೆ
ಪ್ರೀತಿ ತಮಗೆ ಇದೆ ಬ್ರಹ್ಮಾ ಬಾಬಾರವರಿಗೂ ತಾವು ಮಕ್ಕಳೊಂದಿಗೆ ಪ್ರೀತಿ ಇದೆ. ಬ್ರಹ್ಮಾ ತಂದೆ ತಾವು
ಮಕ್ಕಳನ್ನು ತಮ್ಮ ಜೊತೆ ರಾಯಲ್ ಮನತನದಲ್ಲಿ ನೋಡಲು ಬಯಸುತ್ತಾರೆ. ತಾವು ಏನು ತಿಳಿಯುತ್ತೀರಿ?
ಬ್ರಹ್ಮಾ ತಂದೆಯ ಜೊತೆ-ಜೊತೆಯಲ್ಲಿ ರಾಯಲ್ ಮನೆತನದಲ್ಲಿ ಇರುವವರೋ ಅಥವಾ ಸ್ವಲ್ಪ ಸಮಯ ಇರುವವರೋ?
ದೂರ ಹೋಗಲು ಇಷ್ಟ ಪಡುವುದಿಲ್ಲ ತಾನೆ! ಸಂಗಮಯುಗವು ಆಧಾರವಾಗಿದೆ ಎಂದು ತಿಳಿಸಿದ್ದೇವೆ.
ಬಾಪ್ದಾದಾರವರಿಗೆ ಮಕ್ಕಳೊಂದಿಗೆ ಇಷ್ಟು ಪ್ರೀತಿ ಇದೆ, ಜೊತೆಯಲ್ಲಿ ಇರುತ್ತೇವೆ, ಜೊತೆಯಲ್ಲಿ
ಹೋಗುತ್ತೇವೆ ಎಂದು ಏನು ಹೇಳುತ್ತೀರಿ, ಈಗ ಬ್ರಹ್ಮ ತಂದೆ ಮತ್ತು ಬ್ರಾಹ್ಮಣರು ಜೊತೆಯಲ್ಲಿ ಇದ್ದಾರೆ,
ಅವ್ಯಕ್ತ ರೂಪದಲ್ಲಿ ಇರಬಹುದು ಆದರೆ ಜೊತೆಯಲ್ಲಿ ಇದ್ದಾರೆ.
ಮಕ್ಕಳನ್ನು ಇದುವರೆಗೆ
ಮಾಯೆ ಬಿಡದೆ ಇರುವುದನ್ನು ಬಾಪ್ದಾದಾರವರು ನೋಡಿದ್ದಾರೆ. ಮಾಯೆಗೂ ಪ್ರೀತಿ ಇದೆ. ಮತ್ತು ಇತ್ತೀಚಿಗೆ
ಮಾಯೆ ಎರಡು ರೂಪದಲ್ಲಿ ಅವಕಾಶ ತೆಗೆದುಕೊಳ್ಳುತ್ತದೆ. ಎರಡು ರೂಪದಲ್ಲಿ ಬರುತ್ತದೆ. ಒಂದು ವ್ಯರ್ಥ
ಸಂಕಲ್ಪ, ಇನ್ನೊಂದು ಕೆಲವೊಮ್ಮೆ, ಕೆಲವು ಬಾರಿ ನಾನು ಏನು ಮಾಡಿದ್ದೇನೆ ಅಥವಾ ಯೋಚನೆ ಮಾಡಿದ್ದೇನೆ,
ನಾನೇ ರೈಟ್ ನಾನು ಕಡಿಮೆ ಅಲ್ಲ ಎಂಬ ಅಲೆ ಬರುತ್ತದೆ. ಈ ಅಲೆ ಹರಡಿದೆ. ನಾನೇ ರೈಟ್ ಆಗಿದ್ದೇನೆ
ಆದರೆ ಯಾರು ಸಂಬಂಧದಲ್ಲಿ ಬರುತ್ತಾರೆ ಅಥವಾ ನಿಮಿತ್ತ ಆಗಿದ್ದಾರೆ ಅವರೂ ಸಹ ತಮ್ಮ ವಿಚಾರಕ್ಕೆ ಜೊತೆ
ಕೊಡುತ್ತಾರೆಯೇ! ಬೇರೆಯವರದೂ ಪರಿಶೀಲನೆ (ವೆರಿಫಿಕೇಷನ್) ಸಿಗಬೇಕು. ಈ ವ್ಯರ್ಥ ಸಂಕಲ್ಪ ಸಮಯ
ವ್ಯರ್ಥ ಮಾಡಿಸುತ್ತದೆ, ಆದ್ದರಿಂದ ಬಾಪ್ದಾದಾರವರು ಪ್ರತಿನಿತ್ಯದ ಮುರಳಿಯಲ್ಲಿ ಮನನ ಮಾಡುವ, ಸೇವೆ
ಮಾಡುವ ಹೋಂವರ್ಕ್ ಪ್ರತಿದಿನ ಕೊಡುತ್ತಾರೆ. ಒಂದುವೇಳೆ ಮನನ ಮಾಡುತ್ತಾ-ಮಾಡುತ್ತಾ ಮಗ್ನರಾಗುವಿರಿ
ಪ್ರತಿನಿತ್ಯದ ಹೋಂವರ್ಕ್ ಮನಸ್ಸನ್ನು ಬಿಜಿ ಮಾಡುವ ಆಧಾರವಾಗಿದೆ. ಕೇಳುವುದು ಮತ್ತು ಮನನ ಮಾಡುವುದು
ಅಥವಾ ಮಗ್ನರಾಗುವ ಪ್ರತಿನಿತ್ಯದ ಹೋಂವರ್ಕ್ ಬಾಪ್ದಾದಾ ಏಕೆ ಕೊಡುತ್ತಾರೆಂದರೆ ಎಷ್ಟು ಹೆಚ್ಚು
ಹೋಂವರ್ಕ್ ಕೊಡುತ್ತಾರೋ ಅಷ್ಟು ಮಾಡುವುದರಲ್ಲಿ ಬುದ್ಧಿ ಬಿಜಿ ಇರಲಿ ಎಂದು. ಈ ರೀತಿ ಪ್ರತಿನಿತ್ಯದ
ಮುರಳಿಯಲ್ಲಿ ನಾಲ್ಕು ಸಬ್ಜೆಕ್ಟ್ಗಳ ಹೋಂವರ್ಕ್ ಇದೆ. ಮನಸ್ಸಿನ ಹೋಂವರ್ಕ್ ಇದೆ, ವಾಣಿಯ ಹೋಂವರ್ಕ್
ಇದೆ, ಕರ್ಮದ ಅಟೆನ್ಷನ್ ಇದೆ ಮತ್ತು ದಿವ್ಯತೆಯ ಸೂಚನೆಯ ಹೋಂವರ್ಕ್ ಇದೆ ಅಂದಾಗ ಹೋಂವರ್ಕ್ನಲ್ಲಿ
ಬಿಜಿ ಆಗಿದ್ದರೆ ವ್ಯರ್ಥ ಸಂಕಲ್ಪ ಬರುವ ಅವಕಾಶ ಇರುವುದಿಲ್ಲ. ಈ ವಿಧಿಯನ್ನು ತನ್ನದನ್ನಾಗಿ
ಮಾಡಿಕೊಂಡರೆ ವ್ಯರ್ಥ ಸಂಕಲ್ಪ ಸ್ವತಃವಾಗಿಯೇ ತಮ್ಮಿಂದ ಬೀಳ್ಕೊಡುಗೆ ತೆಗೆದುಕೊಳ್ಳುತ್ತದೆ ಏಕೆಂದರೆ
ನೆನಪಿನ ಯಾತ್ರೆಯಲ್ಲಿ ಎಲ್ಲರದೂ ನಂಬರ್ವಾರ್ ಅಟೆನ್ಷನ್ ಇರುವುದನ್ನು ಬಾಪ್ದಾದಾರವರು ನೋಡಿದ್ದಾರೆ.
ವಾಚಾ ಸೇವೆಯಲ್ಲೂ ಅಟೆನ್ಷನ್ ಇದೆ ಆದರೆ ಈಗ ತಮ್ಮ ಸಂಸ್ಕಾರ ಅಥವಾ ಬೇರೆಯವರ ಸಂಸ್ಕಾರ ಪರಿವರ್ತನೆ
ಮಾಡುವುದು, ಈ ಸ್ವಭಾವ ಸಂಸ್ಕಾರ ಯಾವುದನ್ನು ರಾಯಲ್ ರೂಪದದಲ್ಲಿ ನೀವು ಹೇಳುತ್ತೀರಿ ಸ್ವಭಾವ,
ನನ್ನ ಸ್ವಭಾವ, ಭಾವವಿಲ್ಲ ಸ್ವಭಾವವಾಗಿದೆ, ಈ ಧಾರಣೆಯ ವಿಷಯ ಈಗಲೂ ರಾಯಲ್ ರೂಪದಲ್ಲಿ
ಬರುತ್ತಿರುವುದು. ಬಾಪ್ದಾದಾ ಇತ್ತೀಚೆಗೆ ಇದೇ ಸೂಚನೆ ಕೊಡುತ್ತಾರೆ ಏನೆಲ್ಲಾ ಧಾರಣೆ ಕಡಿಮೆಯಿದೆ
ಅದನ್ನು ಈಗ ವಿಶೇಷ ಗಮನ ಕೊಡಿ.
ಬಾಪ್ದಾದಾರವರು ಮೊದಲು
ಸಹ ಹೇಳಿದ್ದರು ಈಗ ಧಾರಣೆಯಲ್ಲಿ ಮುಖ್ಯ ಧಾರಣೆಯ ಗಮನ ಕೊಡಿ, ಯಾವುದೇ ಮಾತಾದರೆ ಚೆಕ್ ಮಾಡಿ ಕೊಳ್ಳಿ
ಸೆಕೆಂಡಿನಲ್ಲಿ ಫುಲ್ಸ್ಟಾಪ್ ಇಡಬಹುದೇ! ಫುಲ್ಸ್ಟಾಪ್ ಇಡಲು ಬಯಸುತ್ತೀರಿ ಆದರೆ ಪ್ರಶ್ನಾರ್ಥಕ
ಚಿಹ್ನೆಯಾಗಿ ಬಿಡುತ್ತದೆಯೇ? ಫುಲ್ಸ್ಟಾಪ್ ಅಲ್ಲ, ಅರ್ಧ ಫುಲ್ಸ್ಟಾಪ್ವಾಗುತ್ತದೆ ಮತ್ತು
ಮಾತ್ರೆ(ಚಿಹ್ನೆ)ಯಾಗಿ ಬಿಡುತ್ತದೆ. ಮುಂದೆ ಹೋದಂತೆ ಇಂತಹ ಪರಿಸ್ಥಿತಿಗಳು ಬರುತ್ತವೆ ಯಾವುದಕ್ಕೆ
ನೀವು ಸೆಕೆಂಡಿನಲ್ಲಿ ಫುಲ್ಸ್ಟಾಪ್ ಹಾಕಬೇಕಾಗುತ್ತದೆ. ಆ ಸಮಯದಲ್ಲಿ ಪ್ರಶ್ನಾರ್ಥಕ ಚಿಹ್ನೆ,
ಆಶ್ಚರ್ಯಚಕಿತ ಚಿಹ್ನೆಯನ್ನು ಸರಿ ಮಾಡುವಷ್ಟು ಸಮಯವಿರುವುದಿಲ್ಲ. ಸೆಕೆಂಡಿನಲ್ಲಿ ಫುಲ್ಸ್ಟಾಪಿನ
ಅವಶ್ಯಕತೆಯಿರುತ್ತದೆ, ಇದಕ್ಕೆ ಬಹಳ ಸಮಯದ ಅಭ್ಯಾಸ ಬೇಕಾಗುತ್ತದೆ ಆಗ ಸಮಯದಲಿ ವಿಜಯಿಯಾಗಲು ಸಾಧ್ಯ.
ಏರುಪೇರಿನ ಸಮಯದಲ್ಲಿ ಯಾವಾಗ ಸಂಸ್ಕಾರ, ಸ್ವಭಾವದ ಪೇಪರ್ವಿರುತ್ತದೆ, ಅದಕ್ಕಾಗಿ ಈಗಿನಿಂದಲೇ ಇಂತಹ
ಸಮಯದಲ್ಲಿ ಅಭ್ಯಾಸ ಮಾಡಿ ಆಗ ಬಹಳ ಸಮಯದ ಅಭ್ಯಾಸ ಮುಂದೆ ಹೋಗುತ್ತಾ ನಿಮಗೆ ಬಹಳ ಸಹಯೋಗಿಯಾಗುವುದು.
ಬಾಪ್ದಾದಾರವರು ಅಮೃತವೇಳೆ
ಚಕ್ಕರ ಹಾಕಿದಾಗ ಪ್ರತಿಯೊಬ್ಬರ ಪುರುಷಾರ್ಥವನ್ನು ಚೆಕ್ ಮಾಡುತ್ತಾರೆ. ತಂದೆಯ ಸಮಾನರಾಗಬೇಕೆಂದು
ನಿಮ್ಮ ಲಕ್ಷ್ಯವು ಆಗಿದೆ. ಇದಕ್ಕಾಗಿ ಎಲ್ಲದಕ್ಕಿಂತ ಸಹಜ ಸಾಧನೆಯಾಗಿದೆ, ಬ್ರಹ್ಮಾ ತಂದೆಯನ್ನು
ಫಾಲೋ ಮಾಡಿ. ಯಾವುದೇ ಕರ್ಮವನ್ನು ಮಾಡಿದಾಗಿ ಮೊದಲು ಹೊಲಿಕೆ ಮಾಡಿಕೊಂಡು ಸಮಾನ ಮಾಡಿಕೊಳ್ಳಿ.
ಕರ್ಮ, ಮಾತು ಮತ್ತು ಸಂಕಲ್ಪ ತಂದೆಯ ಸಮಾನವಿದೆಯೇ? ಮೊದಲು ಯೋಚನೆ ಮಾಡಿ ನಂತರ ಮಾಡಿ ಎಂದು
ಹೇಳಲಾಗುತ್ತದೆ. ಹೇಳುವುದರ ಮೊದಲು ಯೋಚನೆ ಮಾಡಿ ನಂತರ ಮಾತನಾಡಿ. ಬಾಪ್ದಾದಾರವರೂ ಸಹ ಏನು
ಬಯಸುತ್ತಾರೆ? ತಾವೂ ಸಹ ಬಯಸುತ್ತೀರಲ್ಲವೇ, ವಾರ್ತಾಲಾಪ ಮಾಡಿದಾಗ ಬಾಪ್ದಾದಾ ಬಹಳ ಮಧುರ
ಮಾತುಗಳನ್ನು ತಿಳಿಸುತ್ತಾರೆ. ಉಮ್ಮಂಗದ ಮಾತುಗಳೂ ಸಹ ಬಹಳ ಚೆನ್ನಾಗಿ ಮಾತನಾಡುತ್ತಾರೆ. ಇದನ್ನು
ಮಾಡಿ ತೋರಿಸುತ್ತೇವೆ ಅಥವಾ ಮಾಡಲೇಬೇಕು ಅಥವಾ ಆಗಲೇಬೇಕು, ಸಂಕಲ್ಪ ಬಹಳ ಉತ್ಸಾಹದ ಸಂಕಲ್ಪ
ಆಗಿರುತ್ತದೆ ಆದರೆ ಕರ್ಮದಲ್ಲಿ ಬರುವುದರಲ್ಲಿ ಬದಲಾವಣೆ ಆಗಿ ಬಿಡುತ್ತದೆ, ಬೇರೆ ಆಗಿ ಬಿಡುತ್ತದೆ.
ಬಾಪ್ದಾದಾರವರು ಭಿನ್ನ-ಭಿನ್ನ ಪ್ರಕಾರದ ಸೇವೆಯ ಪ್ಲಾನ್ ಯಾವುದು ಮಾಡುತ್ತಾರೆ ಅದನ್ನು ಎಲ್ಲರೂ
ಇಷ್ಟ ಪಡುತ್ತಾರೆ. ಪ್ರೋಗ್ರಾಂಗಳೂ ಸಹ ಕೆಲವೊಂದು ಕಡೆ ಚೆನ್ನಾಗಿ ನಡೆಯುತ್ತಿದೆ, ಆದರೆ ಈಗ ಎಷ್ಟು
ವಾಚಾ ಮೂಲಕ ಅಥವಾ ಭಿನ್ನ-ಭಿನ್ನ ವಿಧಿಗಳ ಮೂಲಕ ಮಾಡುತ್ತಿದ್ದೀರಿ, ಸಫಲತೆಯೂ ಸಹ ಇದೆ,
ಬಾಪ್ದಾದಾರವರೂ ಖುಷಿ ಆಗುತ್ತಾರೆ, ಈಗ ಕೇವಲ ಮನಸ್ಸಿನ ಮೂಲಕ ಅನೇಕ ಆತ್ಮಗಳಿಗೆ ಖುಷಿಯ ಕಿರಣಗಳನ್ನು,
ಶಕ್ತಿಯ ಕಿರಣಗಳನ್ನು, ಸುಖದ ಕಿರಣಗಳನ್ನು, ಪ್ರೇಮದ ಕಿರಣಗಳನ್ನು ತಲುಪಿಸುವ ಸೇವೆಯನ್ನು
ಜೊತೆ-ಜೊತೆಯಲ್ಲಿ ಮಾಡಿ. ತಮ್ಮ ಸಂಸ್ಕಾರದ ಪರಿವರ್ತನೆ ಅಥವಾ ಬೇರೆಯವರ ಸಂಸ್ಕಾರಕ್ಕೆ ಸಹಯೋಗ
ಕೊಡುವುದರಲ್ಲಿ ಕೆಲವರ ಸಮಯ ಹೆಚ್ಚು ಹೋಗುತ್ತದೆ. ಮನಸ್ಸಾ ಸೇವೆಯ ಮೂಲಕ ಭಿನ್ನ-ಭಿನ್ನ ಕಿರಣಗಳನ್ನು
ಆತ್ಮರಿಗೆ ಕೊಡಬೇಕು. ಇದರ ಅಟೆನ್ಷನ್ ಮುಂದೆ ಹೋದಂತೆ ಬಹಳ ಅವಶ್ಯಕತೆ ಇದೆ. ಅದರ ಮೇಲೂ ಗಮನ
ಕೊಡುತ್ತಿರಿ. ಯಾವ ಮಕ್ಕಳು ಈ ಸೇವೆ ನಾನು ಮಾಡುತ್ತಿದ್ದೇನೆ ಎಂದು ತಿಳಿದಿದ್ದೀರಿ ಅವರು ಕೈ ಎತ್ತಿ.
ಒಳ್ಳೆಯದು. ಮಾಡುತ್ತಿದ್ದೀರಿ ಅವರಿಗೆ ಶುಭಾಶಯಗಳು. ಯಾರು ಮಾಡುತ್ತಿಲ್ಲ ಅವರು ಮಾಡಬೇಕು ಏಕೆಂದರೆ
ಮುಂದೆ ಹೋದಂತೆ ಈ ರೀತಿ ಪರಿಸ್ಥಿತಿಗಳು ಇರುತ್ತದೆ, ತಿಳಿಸುವವರು ಮತ್ತು ಕೇಳುವವರ ಮಿಲನ ಕಷ್ಟ
ಆಗುತ್ತದೆ. ಆದ್ದರಿಂದ ಎರಡು ಪ್ರಕಾರದ ಸೇವೆ ಎಷ್ಟು ಆಗುತ್ತದೋ ಅಷ್ಟು ಅಭ್ಯಾಸ ಮಾಡಿ. ಮನಸ್ಸು
ಬಿಜಿಯಾಗಿ ಇರುತ್ತದೆ ಮತ್ತು ಮನ್ಮನಾಭವ ಆಗುವುದು ಸಹಜ ಆಗಿ ಬಿಡುತ್ತದೆ. ಮನಸ್ಸು ಬಿಜಿ
ಆಗುವುದರಿಂದ ಸಂಸ್ಕಾರ-ಸ್ವಭಾವವನ್ನು ಸಹಜವಾಗಿ ಪರಿವರ್ತನೆ ಮಾಡಿಕೊಳ್ಳುವುದರಲ್ಲಿ ಸಹಯೋಗ
ಸಿಗುತ್ತದೆ.
ಈ ದಿನ ಮುಖ್ಯವಾಗಿ ಡಬಲ್
ವಿದೇಶಿಗಳ ಮಿಲನದ ದಿನವಾಗಿದೆ. ವಾಹ್! ಡಬಲ್ ವಿದೇಶಿಯರು ವಾಹ್! ವಿಶ್ವದ ಮೂಲೆ-ಮೂಲೆಯಲ್ಲಿ ತಂದೆಯ
ಕಲ್ಪದ ಮೊದಲಿನ ಮಕ್ಕಳು ಗುಪ್ತವಾಗಿದ್ದಾರೆ, ಅಂದಾಗ ವಿಶ್ವ ಸೇವೆಗೆ ಡಬಲ್ ವಿದೇಶಿಯರು
ನಿಮಿತ್ತರಾಗಿದ್ದಾರೆ ಎಂದು ಬಾಪ್ದಾದಾರವರಿಗೆ ಖುಷಿ ಇದೆ. ಮತ್ತು ಪ್ರತಿಯೊಬ್ಬರು ತಮ್ಮ-ತಮ್ಮ
ಸ್ಥಾನಗಳಲ್ಲಿ, ಹಳ್ಳಿ ಅಥವಾ ಪಟ್ಟಣದಲ್ಲಿ ಯಾವುದು ಉಳಿದಿದೆ ಅಲ್ಲಿಗೆ ತಲುಪಲು ಪ್ಲಾನ್
ಮಾಡುತ್ತಿರುತ್ತಾರೆ ಎಂದು ಬಾಪ್ದಾದಾರವರು ಕೇಳಿದರು. ಅದಕ್ಕೆ ಶುಭಾಶಯಗಳು, ಶುಭಾಶಯಗಳು.
ಇಲ್ಲವೆಂದರೆ ಸಮಾಪ್ತಿ ಆದಾಗ ಪರಿಸ್ಥಿಗಳು ಬದಲಾವಣೆ ಆಗುತ್ತದೆ, ತಮ್ಮೆಲ್ಲರಿಗೆ ಭಾರತ ಆಗಿರಬಹುದು,
ವಿದೇಶ ಆಗಿರಬಹುದು, ನಮ್ಮ ತಂದೆ ಬಂದಿದ್ದಾರೆ ತಾವು ಹೇಳಲೇ ಇಲ್ಲ ಎಂದು ಬಹಳ, ಬಹಳ, ಬಹಳ ದೂರು
ಬರುತ್ತದೆ. ಸಂದೇಶವಂತೂ ಕೊಡುತ್ತೀರಿ. ಬಹಳ ದೂರು ಸಿಗುತ್ತದೆ, ಆದರೆ ಈಗ ಮಾಡುತ್ತಿದ್ದೀರಿ ಮತ್ತು
ಹೆಚ್ಚು ಯಾವುದೇ ಮೂಲೆ ಉಳಿದುಕೊಳ್ಳಬಾರದು, ಇದರ ಪ್ರಯತ್ನ ಮಾಡಬೇಕು. ಬಾಕಿ ಬಾಪ್ದಾದಾ ಡಬಲ್
ವಿದೇಶಿಯರು ಮತ್ತು ದೇಶದವರು ಇಬ್ಬರು ಮಕ್ಕಳು ಯಾರು ನಾಲ್ಕೂ ಕಡೆ ತಮ್ಮ ಪುರುಷಾರ್ಥ
ಮಾಡುತ್ತಿದ್ದಾರೆ, ಅವರನ್ನು ನೋಡಿ ಖುಷಿ ಆಗುತ್ತಿದ್ದಾರೆ. ಅವರನ್ನು ನೋಡಿ ಬಹಳ-ಬಹಳ ಖುಷಿ
ಆಗಿದ್ದಾರೆ. ಏಕೆ? ಏಕೆ ಖುಷಿ ಆಗಿದ್ದಾರೆ? ಈಗ ದೇಶದಲ್ಲಿ, ವಿದೇಶದಲ್ಲಿ ಪ್ಲಾನ್ ಮಾಡುತ್ತಿದ್ದಾರೆ,
ಬಾಪ್ದಾದಾರವರಿಗೆ ಇಷ್ಟ ಆಗಿದೆ. ಯಾವುದೇ ಸಾಧನೆಯ ಮೂಲಕ ಸಂದೇಶವನ್ನು ತಲುಪಿಸಬೇಕು. ಈ ವಿಜ್ಞಾನ
ವಾಸ್ತವದಲ್ಲಿ ತಮಗಾಗಿ ಬಹಳ ಸಮಯದಿಂದ ಸಹಯೋಗಿ ಆಗಿದೆ. ಸಾಧನೆ ದಿನ-ಪ್ರತಿ ದಿನ ಹೊಸ-ಹೊಸದು
ಬರುತ್ತಿರುತ್ತದೆ. ಅದನ್ನು ಕಾರ್ಯದಲ್ಲಿ ನಿರ್ವಿಘ್ನವಾಗಿ ತೊಡಗಿಸುತ್ತಿರಿ. ಬಾಪ್ದಾದಾ ಎಲ್ಲಾದರೂ
ಸೇವೆಯನ್ನು ವೃದ್ಧಿ ಮಾಡುವ ಮೀಟಿಂಗ್ ಮಾಡುವುದು ನೋಡಿ ಮತ್ತು ಕೇಳಿ ಖುಷಿ ಆಗುತ್ತಾರೆ.
ಸಾಧನೆಗಳನ್ನು ಸೇವೆಯಲ್ಲಿ ತೊಡಗಿಸಲು ಮಕ್ಕಳ ಬುದ್ಧಿ ಈಗ ಆಲ್ರೌಂಡರ್ ಆಗುತ್ತಿದೆ ಎಂದು ಖುಷಿ
ಆಗುತ್ತಾರೆ. ಆದ್ದರಿಂದ ತಾವು ಯಾವುದೆಲ್ಲಾ ಪ್ಲಾನ್ ಮಾಡುತ್ತೀರಿ ಅಥವಾ ಬಾಪ್ದಾದಾರವರು
ಕೇಳುತ್ತಾರೆ, ಚಕ್ಕರ್ ಹಾಕುತ್ತಾರಲ್ಲವೇ! ತಾವು ಎಲ್ಲಾದರೂ ಮೀಟಿಂಗ್ ಮಾಡಿ, ದೆಹಲಿಯಲ್ಲಾದರೂ ಮಾಡಿ,
ದೇಶದಲ್ಲಿ ಯಾವುದೇ ಪಟ್ಟಣದಲ್ಲಾದರೂ ಮಾಡಿ, ವಿದೇಶದಲ್ಲಾರೂ ಮಾಡಿ, ಎಲ್ಲಾದರೂ ಮಾಡಿ ಬಾಪ್ದಾದಾ
ಎಲ್ಲಾ ಕೇಳುತ್ತಿರುತ್ತಾರೆ. ಬಾಪ್ದಾದಾರವರ ಬಳಿಯೂ ಸಾಧನೆಗಳು ಇದೆ, ಅದಕ್ಕಾಗಿ ವಿದೇಶದಿಂದ
ಒಂದೊಂದು ದೇಶದಿಂದ ಯಾರೆಲ್ಲಾ ಬಂದಿದ್ದೀರಿ, ಪ್ರತಿಯೊಬ್ಬರಿಗೆ ಏನು ಕೊಡುತ್ತಾರೆ? ಬಹಳ-ಬಹಳ
ಪ್ರೀತಿ ಕೊಡುತ್ತಿದ್ದಾರೆ. ಈಗ ಕೇವಲ ತೀವ್ರತೆಯನ್ನು ತೆಗೆದುಕೊಂಡು ಬನ್ನಿ. ಪ್ಲಾನ್ನ್ನು
ಪ್ರಾಕ್ಟಿಕಲ್ನಲ್ಲಿ ಹೊಸ-ಹೊಸ ಮಾತುಗಳನ್ನು ತೆಗೆದುಕೊಂಡು ಬನ್ನಿ. ಇದೆಲ್ಲವನ್ನು ನೋಡಿ, ತಮ್ಮ
ಯಜ್ಞ ಆರಂಭ ಆಗುವುದರ ಸ್ವಲ್ಪ ವರ್ಷಗಳ ಮುಂದೆ ಎಲ್ಲಾ ಇನ್ವೆನ್ಷನ್ (ಕಂಡು ಹಿಡಿಯುವುದು)
ಆರಂಭವಾಗಿದೆ. ವಿಜ್ಞಾನವೂ ಸಹ ತಮ್ಮ ಸೇವೆಗೆ ಸಹಯೋಗಿ ಆಗಿದೆ. ಹೆಚ್ಚು ಲಾಭ ಪಡೆದುಕೊಳ್ಳಿ.
ತಮಗಾಗಿಯೇ ವಿಜ್ಞಾನವಿದೆ. ದಿನ-ಪ್ರತಿದಿನ ನೋಡಿ ಎಷ್ಟು ಹೊಸ-ಹೊಸ ಮಾತುಗಳು ಬರುತ್ತಿವೆ. ಡ್ರಾಮ
ತಮಗೆ ಸಹಯೋಗ ಕೊಡುತ್ತಿದೆ. ಸಾಧನೆ ತಮಗೆ ಸಹಯೋಗ ಕೊಡುತ್ತಿದೆ. ಒಳ್ಳೆಯದು.
ಈಗ ಸದಾ ಖುಷಿ
ಆಗಿದ್ದೀರಲ್ಲವೇ. ಸದಾ ಖುಷಿ ಆಗಿದ್ದೀರಲ್ಲವೇ. ಯಾರು ಸದಾ ಖುಷಿ ಆಗಿರುತ್ತಾರೆ ಅವರು ಕೈ ಎತ್ತಿ.
ಸದಾ ಖುಷಿಯಾಗಿರುತ್ತೀರಾ? ಯಾವುದೇ ಮಾತಾದರೂ ಖುಷಿ ಆಗಿರುತ್ತೀರಾ? ಮಾತುಗಳು ಬಂದರೂ ಸಹ ಖುಷಿ
ಆಗಿರುತ್ತೀರಾ? ಆಗಿರುತ್ತೀರಾ? ದೊಡ್ಡದಾಗಿ ಕೈ ಎತ್ತಿ. ಸ್ವಾಗತ ಮಾಡುತ್ತೀರಲ್ಲವೇ? ಗಾಬರಿ
ಆಗುವುದಿಲ್ಲ ತಾನೆ! ಸ್ವಾಗತ ಮಾಡುತ್ತೀರಾ? ಅನುಭವಿ ಆಗುತ್ತೀರಿ. ವಿಘ್ನಗಳು ಅನುಭವದ
ಅಥಾರಿಟಿಯನ್ನು ಹೆಚ್ಚಿಸುತ್ತದೆ. ಮಾಯೆ ಬಂದು ಬಿಟ್ಟಿದೆ, ಮಾಯೆ ಬಂದು ಬಿಟ್ಟಿದೆ ಎಂದು ಹೇಳಬೇಡಿ.
ಇದು ಪರೀಕ್ಷೆ ಆಗಿದೆ, ಮಾಯೆ-ಮಾಯೆ ಎಂದು ಹೇಳುತ್ತಾ ಮಾಯೆಯನ್ನು ಮುಂದುವರೆಸುತ್ತೀರಿ, ಪರೀಕ್ಷೆ
ಆಗಿದೆ, ಮಾಯೆಯನ್ನಂತೂ ತಾವು ತಿಳಿದುಕೊಂಡಿದ್ದೀರಿ. ಎಷ್ಟು ವರ್ಷಗಳಿಂದ ಮಾಯೆ ಏನಾಗಿದೆ? ಎಂದು
ತಿಳಿದುಕೊಂಡಿದ್ದೀರಿ. ಅದರಿಂದ ಮಾಯೆಯಿಂದ ಗಾಬರಿ ಆಗಬೇಡಿ. ಪೇಪರ್ ಎಂದು ತಿಳಿದು ಖುಷಿ-ಖುಷಿಯಿಂದ
ಪರೀಕ್ಷೆಯನ್ನು ಪಾರು ಮಾಡಿ ಮತ್ತು ಅನುಭವದ ಕ್ಲಾಸ್ನಲ್ಲಿ ಮುಂದುವರೆಯಿರಿ. ಇದು ಕ್ಲಾಸ್
ಮುಂದುವರೆಯುವುದು ತಬ್ಬಿಬ್ಬಾಗುವುದಲ್ಲ, ಏಕೆ-ಏನು ಇದು ಬ್ರಾಹ್ಮಣರು ಯೋಚನೆ ಮಾಡುವ ಕಾರ್ಯ ಅಲ್ಲ.
ತ್ರಿಕಾಲದರ್ಶಿ ಆಗಿದ್ದೀರಿ. ಏಕೆ-ಏನು? ಎಂದು ಪ್ರಶ್ನೆಯೇ ಬರುವುದಿಲ್ಲ. ಪೇಪರ್ ಬಂದಿದೆ ಅಂದಾಗ
ಅನುಭವದ ಕ್ಲಾಸ್ನಲ್ಲಿ ಮುಂದುವರೆಯಬೇಕು. ಖುಷಿ ಆಗಿದ್ದೀರಾ? ಈಗಂತೂ ಅನುಭವಿ ಆಗಿದ್ದೀರಿ ಮತ್ತು
ಆಗುತ್ತಿರುತ್ತೀರಿ. ಒಳ್ಳೆಯದು.
ಯಾವುದೆಲ್ಲಾ ಪತ್ರಗಳು,
ಫೋನ್, ಯಾರದು ನೆನಪು-ಪ್ರೀತಿ ಮತ್ತು ಸಂದೇಶ ಬಾಪ್ದಾದಾರವರ ಪ್ರತಿ ಬಂದಿದೆ ಆ ಎಲ್ಲಾ ಮಕ್ಕಳಿಗೆ
ಬಾಪ್ದಾದಾ ತಮ್ಮ ನಯನಗಳಲ್ಲಿ ಸಮಾವೇಶ ಮಾಡಿಕೊಳ್ಳುತ್ತಾ ನೆನಪು-ಪ್ರೀತಿ ಅಥವಾ ಸೇವೆಯ ಸಮಾಚಾರವನ್ನು
ಅಥವಾ ಮನಸ್ಸಿನ ಪುರುಷಾರ್ಥದ ಸಮಾಚಾರವನ್ನು ತಿಳಿಸಿದ್ದಾರೆ ಅವರೆಲ್ಲರನ್ನು ಬಾಪ್ದಾದಾರವರು
ಮನಸ್ಸಿನ ಮೂಲಕ ಇಮರ್ಜ್ ಮಾಡಿಕೊಂಡು ಸುಖದ-ಶಾಂತಿಯ, ಖುಷಿಯ ಕಿರಣಗಳನ್ನು ಕೊಡುತ್ತಿದ್ದಾರೆ.
ಇಲ್ಲಿಗೆ ಕಳುಹಿಸದೆ ಇರಬಹುದು ಆದರೆ ಮನಸ್ಸಿನಲ್ಲಿ ಸಂಕಲ್ಪ ಮಾಡಿದರೆ, ಆ ಸಂಕಲ್ಪ ತಂದೆಯ ಬಳಿ
ತಲುಪಿ ಬಿಟ್ಟಿದೆ.
ನಾಲ್ಕಾರು ಕಡೆ ಸಾಹಸ
ಮಕ್ಕಳದು, ಸಹಯೋಗ ತಂದೆಯದು. ಮಧುರಾತಿ ಮಧುರ ಮಕ್ಕಳಿಗೆ ಬಾಪ್ದಾದಾರವರು ನೆನಪು-ಪ್ರೀತಿಯನ್ನು
ಕೊಡುತ್ತಿದ್ದಾರೆ ಮತ್ತು ಈ ವರ್ಷ ತಮ್ಮ ಪ್ರತಿ ಅಥವಾ ಸೇವಾಕೇಂದ್ರದ ಪ್ರತಿ ಅಥವಾ ವಿಶ್ವದ ಆತ್ಮಗಳ
ಪ್ರತಿ ಯಾವುದಾದರು ಅಂತಹ ಪ್ಲಾನ್ ಮಾಡಬೇಕು, ಯಾವುದರಿಂದ ಸೇವೆಯ ಬಲ ಮತ್ತು ಫಲ ಎಲ್ಲರಿಗೂ
ಪ್ರಾಪ್ತಿ ಆಗಿ ಬಿಡಲಿ. ನಾಲ್ಕಾರು ಕಡೆಯ ಮಕ್ಕಳಿಗೆ ಬಾಪ್ದಾದಾರವರ ವಿಶೇಷವಾಗಿ ಹೃದಯದ ನೆನಪು
ಮತ್ತು ಪ್ರೀತಿ ಸ್ವೀಕಾರ ಆಗಲಿ. ಓಂ ಶಾಂತಿ.
ವರದಾನ:
ಸಾಧಾರಣತೆಯ
ಮೂಲಕ ಮಹಾನತೆಯನ್ನು ಪ್ರಸಿದ್ಧಗೊಳಿಸುವ ಸರಳ ಹಾಗೂ ಸ್ಯಾಂಪಲ್ (ಉದಾಹರಣೆ) ಭವ.
ಹೇಗೆ ಯಾವುದೇ ಸಿಂಪಲ್
ಆಗಿರುವ ವಸ್ತುವೇನಾದರೂ ಸ್ವಚ್ಛವಾಗಿರುತ್ತದೆ ಎಂದರೆ ತನ್ನ ಕಡೆ ಅವಶ್ಯವಾಗಿ ಆಕರ್ಷಿಸುತ್ತದೆ. ಅದೇ
ರೀತಿ ಮನಸ್ಸಿನ ಸಂಕಲ್ಪಗಳಲ್ಲಿ, ಸಂಬಂಧದಲ್ಲಿ, ವ್ಯವಹಾರದಲ್ಲಿ, ಚಲನೆ-ವಲನೆಯಲ್ಲಿಯೂ ಯಾರೂ
ಸರಳವಾಗಿ ಹಾಗೂ ಸ್ವಚ್ಛವಾಗಿರುತ್ತಾರೆಯೋ ಅವರು ಉದಾಹರಣೆಯಾಗಿದ್ದು, ಸರ್ವರನ್ನೂ ತನ್ನ ಕಡೆಗೆ
ಸ್ವತಹವಾಗಿ ಆಕರ್ಷಿಸುತ್ತಾರೆ. ಸರಳ ಅರ್ಥಾತ್ ಸಾಧಾರಣ. ಸಾಧಾರಣತೆಯಿಂದಲೇ ಮಹಾನತೆಯು
ಪ್ರಸಿದ್ಧವಾಗುವುದು. ಯಾರು ಸಾಧಾರಣ ಅರ್ಥಾತ್ ಸಾಧಾರಣವಾಗಿ ಇರುವುದಿಲ್ಲವೋ ಅವರು ಸಮಸ್ಯಾ ರೂಪವಾಗಿ
ಬಿಡುತ್ತಾರೆ.
ಸ್ಲೋಗನ್:
ಮನಃಪೂರ್ವಕವಾಗಿ
ಹೇಳಿರಿ - ನನ್ನ ಬಾಬಾ, ಇದರಿಂದ ಮಾಯೆಯ ಮೂರ್ಛೆಯಿಂದ ಮುಚ್ಚಿರುವ ಕಣ್ಣುಗಳು ತೆರೆದು ಬಿಡುತ್ತದೆ.
ಅವ್ಯಕ್ತ ಸೂಚನೆಗಳು:-
ಸದಾ ಹರ್ಷಿತರಾಗಿರಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿರಿ, ಸಹನಶೀಲರಾಗಿರಿ.
ಈಗೀಗ ಶಬ್ದದಲ್ಲಿ, ಈಗೀಗ
ಶಬ್ದದಿಂದ ದೂರ, ಎಷ್ಟು ಈ ಅಭ್ಯಾಸ ಸರಳ ಮತ್ತು ಸಹಜವಾಗುತ್ತದೆ ಅಷ್ಟು ಸಂಪೂರ್ಣತೆ ಸಮೀಪ
ಕಾಣಿಸುವುದು. ಸಂಪೂರ್ಣತೆಯ ಸ್ಥಿತಿಯ ಲಕ್ಷಣವಾಗಿದೆ – ಅವರ ಪುರುಷಾರ್ಥ ಸರಳವಾಗಿರುವುದು. ನೆನಪಿನ
ಯಾತ್ರೆ, ಸರ್ವೀಸ್ ಎರಡು ಸಹಜ ಪುರುಷಾರ್ಥದಲ್ಲಿ ಬಂದು ಬಿಡುತ್ತವೆ. ಯಾವಾಗ ಎರಡರಲ್ಲಿ, ಸರಳ, ಸಹಜ
ಅನುಭವವಾಗುತ್ತದೆ ಆಗ ತಿಳಿದುಕೊಳ್ಳಿ ಸಂಪೂರ್ಣತೆಯ ಅವಸ್ಥೆಯನ್ನು ಪ್ರಾಪ್ತಿ
ಮಾಡಿಕೊಳ್ಳುವವರಾಗಿದ್ದಾರೆ.