14.08.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯೊಂದಿಗೆ ಸತ್ಯವಂತರಾಗಿ ಇರಿ, ತಮ್ಮ ಸತ್ಯ-ಸತ್ಯವಾದ ಚಾರ್ಟನ್ನಿಡಿ, ಯಾರಿಗೂ ದುಃಖವನ್ನು ಕೊಡಬೇಡಿ, ಒಬ್ಬ ತಂದೆಯ ಶ್ರೇಷ್ಠ ಮತದಂತೆ ನಡೆಯುತ್ತಾ ಇರಿ”.

ಪ್ರಶ್ನೆ:
ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುವವರಿದ್ದಾರೆಯೋ ಅವರ ಪುರುಷಾರ್ಥವು ಹೇಗಿರುವುದು?

ಉತ್ತರ:
ಅವರು ವಿಶೇಷವಾಗಿ ನರನಿಂದ ನಾರಾಯಣನಾಗುವ ಪುರುಷಾರ್ಥ ಮಾಡುತ್ತಾರೆ, ತಮ್ಮ ಕರ್ಮೇಂದ್ರಿಯಗಳ ಮೇಲೆ ಪೂರ್ಣ ನಿಯಂತ್ರಣವಿರುತ್ತದೆ. ಅವರಿಗೆ ಕುದೃಷ್ಟಿಯಿರುವುದಿಲ್ಲ. ಒಂದುವೇಳೆ ಇಲ್ಲಿಯವರೆಗೂ ಯಾರನ್ನಾದರೂ ನೋಡಿದಾಗ ವಿಕಾರೀ ಸಂಕಲ್ಪಗಳು ಬರುತ್ತವೆ. ಕುದೃಷ್ಟಿಯಾಗುತ್ತದೆಯೆಂದರೆ ತಿಳಿದುಕೊಳ್ಳಿ - ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುವಂತಹ ಆತ್ಮನಲ್ಲ.

ಗೀತೆ:
ಈ ಪಾಪದ ಪ್ರಪಂಚದಿಂದ ದೂರ ಕರೆದುಕೊಂಡು ಹೋಗು..................

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ತಿಳಿದಿದೆ - ಇದು ಪಾಪದ ಪ್ರಪಂಚವಾಗಿದೆ, ಪುಣ್ಯದ ಪ್ರಪಂಚವನ್ನೂ ಸಹ ಮನುಷ್ಯರು ತಿಳಿದುಕೊಂಡಿದ್ದಾರೆ. ಪುಣ್ಯದ ಪ್ರಪಂಚಕ್ಕೆ ಮುಕ್ತಿ-ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ಅಲ್ಲಿ ಪಾಪವಾಗುವುದಿಲ್ಲ. ದುಃಖಧಾಮ, ರಾವಣ ರಾಜ್ಯದಲ್ಲಿಯೇ ಪಾಪಗಳಾಗುತ್ತವೆ. ದುಃಖ ಕೊಡುವಂತಹ ರಾವಣನನ್ನು ನೋಡಿದ್ದೀರಿ. ರಾವಣನೆಂದರೆ ಯಾವುದೇ ವ್ಯಕ್ತಿಯಲ್ಲ ಆದರೂ ಸಹ ಪ್ರತಿಮೆಯನ್ನು ಮಾಡಿ ಸುಡುತ್ತಾರೆ. ಮಕ್ಕಳಿಗೆ ತಿಳಿದಿದೆ - ನಾವು ಈ ಸಮಯದಲ್ಲಿ ರಾವಣ ರಾಜ್ಯದಲ್ಲಿದ್ದೇವೆ ಆದರೆ ರಾವಣ ರಾಜ್ಯದಿಂದ ದೂರ ಸರಿದಿದ್ದೇವೆ. ನಾವೀಗ ಪುರುಷೋತ್ತಮ ಸಂಗಮಯುಗದಲ್ಲಿದ್ದೇವೆ. ಮಕ್ಕಳಿಗೆ ಇಲ್ಲಿ ಬಂದಾಗ ನಾವು ಯಾವ ತಂದೆಯು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದ್ದಾರೆಯೋ ಅವರ ಬಳಿ ಹೋಗುತ್ತೇವೆ ಎಂದು ಬುದ್ಧಿಯಲ್ಲಿರುತ್ತದೆ. ಆ ತಂದೆಯು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ಸುಖಧಾಮದ ಮಾಲೀಕರನ್ನಾಗಿ ಮಾಡುವವರು ಈ ಬ್ರಹ್ಮಾನಲ್ಲ, ಯಾವುದೇ ದೇಹಧಾರಿಯಲ್ಲ ಅವರು ಶಿವ ತಂದೆಯಾಗಿದ್ದಾರೆ, ಅವರಿಗೆ ದೇಹವಿಲ್ಲ. ನಿಮಗೂ ಸಹ ದೇಹವಿರಲಿಲ್ಲ ಆದರೆ ನಂತರ ನೀವು ದೇಹವನ್ನು ಪಡೆದು ಜನನ-ಮರಣದಲ್ಲಿ ಬರುತ್ತೀರಿ ಆದ್ದರಿಂದ ನೀವು ತಿಳಿದುಕೊಳ್ಳುತ್ತೀರಿ - ನಾವು ಬೇಹದ್ದಿನ ತಂದೆಯ ಬಳಿ ಹೋಗುತ್ತೇವೆ, ಅವರು ನಮಗೆ ಶ್ರೇಷ್ಠ ಮತವನ್ನು ಕೊಡುತ್ತಾರೆ. ನೀವು ಇಂತಹ ಪುರುಷಾರ್ಥ ಮಾಡುವುದರಿಂದ ಸ್ವರ್ಗದ ಮಾಲೀಕರಾಗುತ್ತೀರಿ. ಸ್ವರ್ಗವನ್ನಂತೂ ಎಲ್ಲರೂ ನೆನಪು ಮಾಡುತ್ತಾರೆ. ಖಂಡಿತವಾಗಿಯೂ ಹೊಸ ಪ್ರಪಂಚವಿದೆ ಎಂದು ತಿಳಿಯುತ್ತಾರೆ ಅಂದಮೇಲೆ ಅವಶ್ಯವಾಗಿ ಸ್ಥಾಪನೆ ಮಾಡುವವರೂ ಸಹ ಯಾರೋ ಇದ್ದಾರಲ್ಲವೆ?. ನರಕವನ್ನೂ ಸಹ ಯಾರಾದರೊಬ್ಬರು ಸ್ವರ್ಗವನ್ನಾಗಿ ಮಾಡುತ್ತಾರೆ. ನಿಮ್ಮ ಸುಖಧಾಮದ ಪಾತ್ರವು ಯಾವಾಗ ಪೂರ್ಣವಾಗುತ್ತದೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ ನಂತರ ರಾವಣ ರಾಜ್ಯದಲ್ಲಿ ನೀವು ದುಃಖಿಯಾಗತೊಡಗುತ್ತೀರಿ. ಈ ಸಮಯದಲ್ಲಿ ಇದು ದುಃಖಧಾಮವಾಗಿದೆ, ಎಷ್ಟೇ ಕೋಟ್ಯಾಧಿಪತಿಗಳು, ಪದಮಾಪತಿಗಳಾಗಿರಲಿ ಆದರೆ ಇದಕ್ಕೆ ಪತಿತ ಪ್ರಪಂಚವೆಂದು ಖಂಡಿತವಾಗಿ ಹೇಳುತ್ತಾರಲ್ಲವೆ. ಇದು ಕಂಗಾಲ ಪ್ರಪಂಚ, ದುಃಖಿ ಪ್ರಪಂಚವಾಗಿದೆ. ಎಷ್ಟೇ ದೊಡ್ಡ-ದೊಡ್ಡ ಮನೆಗಳಿರಲಿ, ಸುಖದ ಎಲ್ಲಾ ಸಾಧನಗಳಿದ್ದರೂ ಸಹ ಪತಿತ, ಹಳೆಯ ಪ್ರಪಂಚವೆಂದೇ ಹೇಳುತ್ತಾರೆ. ವಿಷಯ ವೈತರಣಿ ನದಿಯಲ್ಲಿ ಮುಳುಗುತ್ತಿರುತ್ತಾರೆ. ವಿಕಾರದಲ್ಲಿ ಹೋಗುವುದು ಪಾಪವಾಗಿದೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ. ವಿಕಾರವಿಲ್ಲದೆ ಸೃಷ್ಟಿಯು ಹೇಗೆ ವೃದ್ಧಿಯಾಗುವುದು ಎಂದು ಕೇಳುತ್ತಾರೆ. ಅರೆ! ಹೇ ಭಗವಂತ, ಪತಿತ-ಪಾವನ ಬಂದು ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡು ಎಂದು ಕರೆಯುತ್ತೀರಿ. ಆತ್ಮವೇ ಶರೀರದ ಮೂಲಕ ಕೇಳುತ್ತದೆ. ಆತ್ಮವೇ ಪತಿತನಾಗಿದೆ ಆದ್ದರಿಂದಲೇ ಕರೆಯುತ್ತದೆ. ಸ್ವರ್ಗದಲ್ಲಿ ಯಾರೊಬ್ಬರೂ ಪತಿತರಿರುವುದಿಲ್ಲ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಸಂಗಮಯುಗದಲ್ಲಿ ಯಾರು ಒಳ್ಳೆಯ ಪುರುಷಾರ್ಥಿಗಳಿದ್ದಾರೆಯೋ ಅವರೇ ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಮತ್ತೆ ಈ ಲಕ್ಷ್ಮೀ-ನಾರಾಯಣರ ಜೊತೆಯಲ್ಲಿಯೇ ನಾವು ಸತ್ಯಯುಗದಲ್ಲಿ ರಾಜ್ಯ ಮಾಡುತ್ತೇವೆಂದು ತಿಳಿಯುತ್ತಾರೆ. ಕೇವಲ ಒಬ್ಬರೇ 84 ಜನ್ಮಗಳನ್ನು ತೆಗೆದುಕೊಂಡಿಲ್ಲ ಅಲ್ಲವೆ. ರಾಜನ ಜೊತೆ ಪ್ರಜೆಗಳೂ ಬೇಕು. ನೀವು ಬ್ರಾಹ್ಮಣರಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರು ರಾಜ-ರಾಣಿಯಾಗುತ್ತಾರೆ, ಕೆಲವರು ಪ್ರಜೆಗಳಾಗುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಈಗಲೇ ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಈ ಕಣ್ಣುಗಳು ಕೆಟ್ಟದ್ದಾಗಿವೆ. ಯಾರನ್ನಾದರೂ ನೋಡಿದರೆ ಸಾಕು ವಿಕಾರದ ದೃಷ್ಟಿಯು ಹೋಗುತ್ತದೆಯೆಂದರೆ ಅವರದು 84 ಜನ್ಮಗಳಿಲ್ಲವೆಂದರ್ಥ. ಅವರು ನರನಿಂದ ನಾರಾಯಣನಾಗಲು ಸಾಧ್ಯವಿಲ್ಲ. ಯಾವಾಗ ಈ ಕಣ್ಣುಗಳ ಮೇಲೆ ಜಯಗಳಿಸುವಿರೋ ಆಗ ಕರ್ಮಾತೀತ ಸ್ಥಿತಿಯಾಗುವುದು. ಎಲ್ಲವೂ ಕಣ್ಣುಗಳ ಮೇಲೆ ಆಧಾರಿತವಾಗಿದೆ. ಕಣ್ಣುಗಳೇ ಮೋಸಗೊಳಿಸುತ್ತವೆ. ಆತ್ಮವು ಈ ಕಿಟಕಿಗಳಿಂದ ನೋಡುತ್ತದೆ, ಇದರಲ್ಲಂತೂ (ಬ್ರಹ್ಮಾನ ಶರೀರ) ಎರಡು ಆತ್ಮಗಳಿವೆ, ತಂದೆಯೂ ಸಹ ಈ ಕಿಟಕಿಗಳಿಂದ ನೋಡುತ್ತಿದ್ದಾರೆ. ತಂದೆಯ ದೃಷ್ಟಿಯೂ ಸಹ ಆತ್ಮದ ಕಡೆಯೇ ಹೋಗುತ್ತದೆ. ತಂದೆಯು ಆತ್ಮಕ್ಕೇ ತಿಳಿಸುತ್ತಾರೆ. ನಾನೂ ಸಹ ಶರೀರವನ್ನು ಆಧಾರ ತೆಗೆದುಕೊಂಡಿದ್ದೇನೆ ಆದ್ದರಿಂದಲೇ ಮಾತನಾಡುತ್ತೇನೆ ಎಂದು ಹೇಳುತ್ತಾರೆ. ತಂದೆಯು ನಮ್ಮನ್ನು ಸುಖದ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಾರೆಂದು ನೀವೂ ತಿಳಿದುಕೊಂಡಿದ್ದೀರಿ. ಇದು ರಾವಣ ರಾಜ್ಯವಾಗಿದೆ. ನೀವೀಗ ಈ ಪತಿತ ಪ್ರಪಂಚದಿಂದ ದೂರ ಸರಿದಿದ್ದೀರಿ. ಕೆಲವರು ಬಹಳ ಮುಂದೆ ಹೋಗಿದ್ದಾರೆ, ಕೆಲವರು ಹಿಂದುಳಿದಿದ್ದಾರೆ. ಪ್ರತಿಯೊಬ್ಬರೂ ಸಹ ನಮ್ಮನ್ನು ಪಾರು ಮಾಡಿ ಎಂದು ಹೇಳುತ್ತಾರೆ, ಈಗ ಸತ್ಯಯುಗದಲ್ಲಿ ಹೋಗುತ್ತೀರಿ ಆದರೆ ಅಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಪವಿತ್ರರಾಗಬೇಕು, ಪರಿಶ್ರಮ ಪಡಬೇಕಾಗಿಲ್ಲ. ಮುಖ್ಯ ಮಾತು - ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವವು, ಇದು ಮೊದಲ ಸಬ್ಜೆಕ್ಟ್ ಆಗಿದೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವೀಗ ಪಾತ್ರಧಾರಿಗಳಾಗಿದ್ದೇವೆ, ಮೊಟ್ಟ ಮೊದಲು ನಾವು ಸುಖಧಾಮದಲ್ಲಿ ಬಂದೆವು ನಂತರ ಈಗ ದುಃಖಧಾಮದಲ್ಲಿ ಬಂದಿದ್ದೇವೆ. ಈಗ ಪುನಃ ಸುಖಧಾಮದಲ್ಲಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ ಮತ್ತು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಮತ್ತು ಪವಿತ್ರರಾಗಿರಿ, ಯಾರಿಗೂ ದುಃಖ ಕೊಡಬೇಡಿ, ಪರಸ್ಪರ ಬಹಳ ದುಃಖವನ್ನು ಕೊಡುತ್ತಿರುತ್ತಾರೆ. ಕೆಲವರಲ್ಲಿ ಕಾಮದ ಭೂತವು ಬಂದಿತು, ಕೆಲವರಲ್ಲಿ ಕ್ರೋಧದ ಭೂತವು ಬಂದಿತೆಂದರೆ ಹೊಡೆಯುತ್ತಾರೆ, ಇದಕ್ಕೆ ತಂದೆಯು ತಿಳಿಸುತ್ತಾರೆ - ಇವರಂತೂ ದುಃಖ ಕೊಡುವಂತಹ ಪಾಪಾತ್ಮನಾಗಿದ್ದಾರೆ, ಪುಣ್ಯಾತ್ಮನು ಹೇಗಾಗುತ್ತಾರೆ. ಇಲ್ಲಿಯವರೆಗೂ ಪಾಪವನ್ನೇ ಮಾಡುತ್ತಿರುತ್ತಾರೆ. ಇವರು ಹೆಸರನ್ನು ಕೆಡಿಸುತ್ತಾರೆ. ಎಲ್ಲರೂ ಏನು ಹೇಳುವರು! ನಮಗೆ ಭಗವಂತನೇ ಓದಿಸುತ್ತಾರೆ, ನಾವು ಮನುಷ್ಯರಿಂದ ದೇವತೆಗಳು ವಿಶ್ವದ ಮಾಲೀಕರಾಗುತ್ತೇವೆ ಎಂದು ಹೇಳುತ್ತಾರೆ. ಮತ್ತೆ ಇಂತಹ ಕೆಲಸ ಮಾಡುತ್ತಾರೆಯೇ ಎಂದು ಹೇಳುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಪ್ರತಿನಿತ್ಯ ರಾತ್ರಿ ತಮ್ಮನ್ನು ನೋಡಿಕೊಳ್ಳಿ, ಒಂದುವೇಳೆ ಸುಪುತ್ರರಾಗಿದ್ದರೆ ಚಾರ್ಟನ್ನು ಕಳುಹಿಸಿ. ಭಲೆ ಕೆಲವರು ಚಾರ್ಟನ್ನು ಬರೆಯುತ್ತಾರೆ ಆದರೆ ಅದರ ಜೊತೆಯಲ್ಲಿ ನಾವು ಇಂತಹವರಿಗೆ ದುಃಖ ಕೊಟ್ಟೆವು ಅಥವಾ ಈ ತಪ್ಪು ಮಾಡಿದೆವು ಎಂಬ ವಿಚಾರವನ್ನಂತೂ ಬರೆಯುವುದಿಲ್ಲ. ನೆನಪು ಮಾಡುತ್ತಿರುವುದು ಮತ್ತು ಉಲ್ಟಾ ಕರ್ಮಗಳನ್ನು ಮಾಡುತ್ತಿರುವುದು - ಇದು ಸರಿಯಲ್ಲ. ಯಾವಾಗ ದೇಹಾಭಿಮಾನಿಗಳಾಗುವರೋ ಆಗಲೇ ಉಲ್ಟಾ ಕರ್ಮಗಳನ್ನು ಮಾಡುತ್ತಾರೆ.

ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದು ಬಹಳ ಸಹಜವಾಗಿದೆ, ಒಂದು ದಿನದಲ್ಲಿ ಬೇಕಾದರೂ ಶಿಕ್ಷಕರಾಗಿ ಬಿಡಬಹುದು. ತಂದೆಯು ನಿಮಗೆ 84 ಜನ್ಮಗಳ ರಹಸ್ಯವನ್ನು ತಿಳಿಸುತ್ತಾರೆ, ಶಿಕ್ಷಣ ಕೊಡುತ್ತಾರೆ ಅಂದಮೇಲೆ ಹೋಗಿ ಮತ್ತೆ ಅದನ್ನು ಮನನ ಮಾಡಬೇಕು - ನಾವು 84 ಜನ್ಮಗಳನ್ನು ಹೇಗೆ ತೆಗೆದುಕೊಂಡೆವು? ಕಲಿಸುವಂತಹ ಶಿಕ್ಷಕರಿಗಿಂತಲೂ ಹೆಚ್ಚು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳುತ್ತಾರೆ. ತಂದೆಯು ಸಿದ್ಧ ಮಾಡಿ ತಿಳಿಸುತ್ತಾರೆ. ಕೆಲವು ಮಕ್ಕಳು ಬಾಬಾ, ನಮ್ಮ ಚಾರ್ಟನ್ನು ನೋಡಿ - ನಾವು ಯಾರಿಗೂ ಸ್ವಲ್ಪವೂ ದುಃಖವನ್ನು ಕೊಟ್ಟಿಲ್ಲವೆಂದು ತೋರಿಸುತ್ತಾರೆ ಆಗ ತಂದೆಯು ಹೇಳುತ್ತಾರೆ - ಈ ಮಗು ಬಹಳ ಮಧುರವಾಗಿದೆ. ಒಳ್ಳೆಯ ಸುಗಂಧವನ್ನು ಬೀರುತ್ತಿದೆ. ಶಿಕ್ಷಕರಾಗುವುದಂತೂ ಸೆಕೆಂಡಿನ ಕೆಲಸವಾಗಿದೆ. ಕೆಲವರು ವಿದ್ಯಾರ್ಥಿಗಳು ನೆನಪಿನ ಯಾತ್ರೆಯಲ್ಲಿ ಶಿಕ್ಷಕರಿಗಿಂತಲೂ ಮುಂದೆ ಹೋಗುತ್ತಾರೆ ಅಂದಾಗ ಅವರಿಗಿಂತಲೂ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ತಂದೆಯಂತೂ ಕೇಳುತ್ತಾರೆ, ಯಾರಿಗಾದರೂ ಕಲಿಸಿಕೊಡುತ್ತೀರಾ? ಪ್ರತಿನಿತ್ಯವೂ ಶಿವನ ಮಂದಿರದಲ್ಲಿ ಹೋಗಿ ತಿಳಿಸಿಕೊಡಿ – ಶಿವ ತಂದೆಯು ಹೇಗೆ ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ? ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ತಿಳಿಸಿಕೊಡಲು ಬಹಳ ಸಹಜವಾಗಿದೆ. ಬಾಬಾ, ನಮ್ಮ ಸ್ಥಿತಿಯು ಈ ರೀತಿಯಿದೆ ಎಂದು ತಂದೆಗೆ ಚಾರ್ಟನ್ನು ಕಳುಹಿಸುತ್ತಾರೆ. ಅದಕ್ಕೆ ತಂದೆಯು ಪ್ರಶ್ನಿಸುತ್ತಾರೆ - ಮಕ್ಕಳೇ, ಯಾವುದೇ ವಿಕರ್ಮಗಳನ್ನಂತೂ ಮಾಡುವುದಿಲ್ಲವೆ? ವಿಕಾರಿ ದೃಷ್ಟಿಯು ಯಾವುದೇ ಉಲ್ಟಾ-ಸುಲ್ಟಾ ಕೆಲಸಗಳನ್ನಂತೂ ಮಾಡಿಸುತ್ತಿಲ್ಲವೆ? ತಮ್ಮ ಚಲನೆ-ವಲನೆಯನ್ನು ನೋಡಿಕೊಳ್ಳಬೇಕಾಗಿದೆ. ಚಲನೆ-ವಲನೆ ಎಲ್ಲದರ ಆಧಾರವು ಕಣ್ಣುಗಳ ಮೇಲಿದೆ. ಕಣ್ಣುಗಳು ಅನೇಕ ಪ್ರಕಾರವಾಗಿ ಮೋಸ ಮಾಡುತ್ತವೆ. ಸ್ವಲ್ಪವೇನಾದರೂ ಯಾವುದೇ ಪದಾರ್ಥವನ್ನು ಕೇಳದೇ ತಿಂದು ಬಿಟ್ಟರೆ ಅದೂ ಸಹ ಪಾಪವಾಗಿ ಬಿಡುತ್ತದೆ ಏಕೆಂದರೆ ಅನುಮತಿಯಿಲ್ಲದೆ ತೆಗೆದುಕೊಂಡರಲ್ಲವೆ. ಇಲ್ಲಿ ಬಹಳಷ್ಟು ನಿಯಮಗಳಿವೆ. ಶಿವ ತಂದೆಯ ಯಜ್ಞವಲ್ಲವೆ! ನಿಮಿತ್ತರನ್ನು ಕೇಳದೇ ಪದಾರ್ಥವನ್ನು ತಿನ್ನುವಂತಿಲ್ಲ. ಒಬ್ಬರು ತಿಂದರೆ ಅನ್ಯರೂ ಸಹ ಅದೇರೀತಿ ಮಾಡತೊಡಗುತ್ತಾರೆ. ವಾಸ್ತವದಲ್ಲಿ ಇಲ್ಲಿ ಯಾವುದೇ ಪದಾರ್ಥವನ್ನು ಒಳಗಿಟ್ಟು ಬೀಗವನ್ನು ಹಾಕುವ ಅವಶ್ಯಕತೆಯಿಲ್ಲ. ನಿಯಮವು ಏನು ಹೇಳುತ್ತದೆಯೆಂದರೆ - ಈ ಮನೆಯೊಳಗೆ ಅಡುಗೆ ಮನೆಯಲ್ಲಿ ಯಾರೂ ಅಪವಿತ್ರರು ಬರುವಂತಿಲ್ಲ. ಹೊರಗಡೆಯಂತೂ ಅಪವಿತ್ರರು, ಪವಿತ್ರರ ಪ್ರಶ್ನೆಯೇ ಬರುವುದಿಲ್ಲ ಆದರೆ ತಮ್ಮನ್ನು ಪತಿತರೆಂದು ಹೇಳಿಕೊಳ್ಳುತ್ತಾರಲ್ಲವೆ. ಎಲ್ಲರೂ ಪತಿತರಾಗಿದ್ದಾರೆ. ವಲ್ಲಭಾಚಾರಿ ಅಥವಾ ಶಂಕರಾಚಾರ್ಯರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಏಕೆಂದರೆ ನಾವು ಪಾವನರು, ಇವರು ಪತಿತರೆಂದು ಅವರಿಗೆ ತಿಳಿದಿದೆ. ಭಲೆ ಇಲ್ಲಿ ಎಲ್ಲರ ಶರೀರಗಳು ಪತಿತವಾಗಿದೆ, ಆದರೂ ಸಹ ಪುರುಷಾರ್ಥದನುಸಾರ ವಿಕಾರಗಳ ಸನ್ಯಾಸ ಮಾಡುತ್ತಾರೆ ಆದ್ದರಿಂದ ನಿರ್ವಿಕಾರಿಗಳ ಮುಂದೆ ವಿಕಾರಿಗಳು ತಲೆಬಾಗುತ್ತಾರೆ. ಇವರು ಬಹಳ ಸ್ವಚ್ಛ ಧರ್ಮಾತ್ಮ ಮನುಷ್ಯನೆಂದು ಹೇಳುತ್ತಾರೆ, ಸತ್ಯಯುಗದಲ್ಲಂತೂ ಮಲೇಚ್ಛರಿರುವುದಿಲ್ಲ. ಅದು ಪವಿತ್ರ ಪ್ರಪಂಚವಾಗಿದೆ. ಒಂದೇ ಜನಾಂಗವಿರುತ್ತದೆ. ನೀವು ಎಲ್ಲಾ ರಹಸ್ಯವನ್ನು ತಿಳಿದುಕೊಂಡಿದ್ದೀರಿ. ಆರಂಭದಿಂದ ಹಿಡಿದು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವು ಬುದ್ಧಿಯಲ್ಲಿರಬೇಕು. ನಾವೀಗ ಎಲ್ಲವನ್ನೂ ತೆಗೆದುಕೊಳ್ಳುತ್ತೇವೆ ಬಾಕಿ ಇನ್ನೇನನ್ನಾದರೂ ತಿಳಿದುಕೊಳ್ಳುವುದು ಇರುವುದೇ ಇಲ್ಲ. ರಚಯಿತ ತಂದೆಯನ್ನು ಅರಿತುಕೊಂಡಿರಿ, ಸೂಕ್ಷ್ಮವತನ ಮತ್ತು ಭವಿಷ್ಯ ಪದವಿಯನ್ನು ಅರಿತುಕೊಂಡಿರಿ. ಇದಕ್ಕಾಗಿಯೇ ನೀವು ಪುರುಷಾರ್ಥ ಮಾಡುತ್ತೀರಿ ಮತ್ತೆ ಒಂದುವೇಳೆ ಚಲನೆಯು ಮೊದಲಿನಂತಾಗಿ ಬಿಡುತ್ತದೆಯೆಂದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಯಾರಿಗಾದರೂ ದುಃಖವನ್ನು ಕೊಡುತ್ತಾರೆ, ವಿಕಾರದಲ್ಲಿ ಹೋಗುತ್ತಾರೆ ಇಲ್ಲವೆ ಕುದೃಷ್ಟಿಯನ್ನಿಡುತ್ತಾರೆಂದರೆ ಇದೂ ಸಹ ಪಾಪವಾಗಿದೆ, ದೃಷ್ಟಿಯು ಪರಿವರ್ತನೆಯಾಗುವುದು ಬಹಳ ಪರಿಶ್ರಮವಿದೆ ಅಂದಾಗ ದೃಷ್ಟಿಯು ಬಹಳ ಚೆನ್ನಾಗಿರಬೇಕು. ಕಣ್ಣುಗಳು ನೋಡುತ್ತವೆ - ಇವರು ಕ್ರೋಧ ಮಾಡುತ್ತಾರೆಂದರೆ ತಾನೂ ಕ್ರೋಧಿಯಾಗಿ ಬಿಡುತ್ತಾರೆ. ಶಿವ ತಂದೆಯಲ್ಲಿ ಸ್ವಲ್ಪವೂ ಪ್ರೀತಿಯಿಲ್ಲ. ನೆನಪೇ ಮಾಡುವುದಿಲ್ಲ. ಬಲಿಹಾರಿಯು ಶಿವ ತಂದೆಯದಾಗಿದೆ. ಬಲಿಹಾರಿಯು ಆ ಸದ್ಗುರುವಿನದಾಗಿದೆ ಯಾರು ಗೋವಿಂದ ಶ್ರೀಕೃಷ್ಣನ ಸಾಕ್ಷಾತ್ಕಾರ ಮಾಡಿಸಿದರು, ಗುರುವಿನ ಮೂಲಕ ನೀವು ಗೋವಿಂದನಾಗುತ್ತೀರಿ. ಕೇವಲ ಸಾಕ್ಷಾತ್ಕಾರದಿಂದ ಬಾಯಿ ಸಿಹಿಯಾಗುವುದಿಲ್ಲ. ಮೀರಾಳ ಬಾಯಿ ಸಿಹಿಯಾಯಿತೇ? ಪ್ರತ್ಯಕ್ಷ ರೂಪದಲ್ಲಿ ಸ್ವರ್ಗದಲ್ಲಂತೂ ಹೋಗಲಿಲ್ಲ, ಅದು ಭಕ್ತಿಮಾರ್ಗವಾಗಿದೆ. ಅದಕ್ಕೆ ಸ್ವರ್ಗದ ಸುಖವೆಂದು ಹೇಳುವುದಿಲ್ಲ. ಗೋವಿಂದನನ್ನು ಕೇವಲ ನೋಡುವುದಲ್ಲ, ಅವರಂತೆ ಆಗಬೇಕಾಗಿದೆ. ನೀವು ಆ ರೀತಿ ಆಗುವುದಕ್ಕಾಗಿಯೇ ಇಲ್ಲಿಗೆ ಬಂದಿದ್ದೀರಿ. ಈ ನಶೆಯಿರಲಿ - ಯಾರು ನಮ್ಮನ್ನು ಈ ರೀತಿ ಮಾಡುತ್ತಾರೆಯೋ ಅಂತಹ ತಂದೆಯ ಬಳಿ ನಾವು ಹೋಗುತ್ತೇವೆ. ತಂದೆಯು ಎಲ್ಲರಿಗೆ ಸಲಹೆ ನೀಡುತ್ತಾರೆ, ಚಾರ್ಟ್ನಲ್ಲಿ ಇದನ್ನೂ ಬರೆಯಿರಿ - ಕಣ್ಣುಗಳು ಮೋಸ ಮಾಡಲಿಲ್ಲವೆ? ಪಾಪವನ್ನಂತೂ ಮಾಡಲಿಲ್ಲವೆ? ಕಣ್ಣುಗಳು ಯಾವುದಾದರೊಂದು ಮಾತಿನಲ್ಲಿ ಖಂಡಿತವಾಗಿ ಮೋಸ ಮಾಡುತ್ತವೆ ಆದ್ದರಿಂದ ಈಗ ಕಣ್ಣುಗಳು ಸಂಪೂರ್ಣ ಶೀತಲವಾಗಬೇಕು. ತಮ್ಮನ್ನು ಅಶರೀರಿ ಆತ್ಮನೆಂದು ತಿಳಿಯಿರಿ. ಈ ಕರ್ಮಾತೀತ ಸ್ಥಿತಿಯು ಅಂತಿಮದಲ್ಲಾಗುವುದು. ಅದರಲ್ಲಿಯೂ ಯಾವಾಗ ತಂದೆಗೆ ತಮ್ಮ ಚಾರ್ಟನ್ನು ಕಳುಹಿಸುತ್ತೀರೋ ಆಗ. ಭಲೆ ಧರ್ಮರಾಜನ ರಿಜಿಸ್ಟರ್ನಲ್ಲಿ ಎಲ್ಲವೂ ತಾನಾಗಿಯೇ ಜಮಾ ಆಗಿ ಬಿಡುತ್ತದೆ ಆದರೆ ಈಗ ತಂದೆಯು ಸಾಕಾರದಲ್ಲಿ ಬಂದಿದ್ದಾರೆಂದ ಮೇಲೆ ತಂದೆಗೆ ಎಲ್ಲವೂ ತಿಳಿಯಬೇಕಲ್ಲವೆ. ಆದ್ದರಿಂದ ಎಚ್ಚರಿಕೆ ನೀಡುತ್ತಾರೆ. ವಿಕಾರೀ ದೃಷ್ಟಿ ಅಥವಾ ದೇಹಾಭಿಮಾನದವರಿದ್ದರೆ ಅವರು ವಾಯುಮಂಡಲವನ್ನು ಅಶುದ್ಧಗೊಳಿಸುತ್ತಾರೆ. ಇಲ್ಲಿ ಕುಳಿತಿದ್ದರೂ ಸಹ ಬುದ್ಧಿಯೋಗವು ಹೊರಗೆ ಅಲೆಯುತ್ತಿರುತ್ತದೆ. ಮಾಯೆಯು ಬಹಳ ಮೋಸ ಮಾಡುತ್ತದೆ. ಮನಸ್ಸು ಬಹಳ ಬಿರುಗಾಳಿಯಿದ್ದಂತೆ. ಇಷ್ಟು ಶ್ರೇಷ್ಠರಾಗಲು ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ತಂದೆಯ ಬಳಿ ಬರುತ್ತಾರೆ, ತಂದೆಯು ಆತ್ಮಕ್ಕೆ ಜ್ಞಾನದ ಶೃಂಗಾರ ಮಾಡುತ್ತಾರೆ. ನೀವೂ ಸಹ ತಿಳಿದುಕೊಳ್ಳುತ್ತೀರಿ - ನಾವಾತ್ಮಗಳು ಜ್ಞಾನದಿಂದ ಪವಿತ್ರರಾಗುತ್ತೇವೆ ನಂತರ ನಮಗೆ ಪವಿತ್ರ ಶರೀರವೇ ಸಿಗುವುದು. ಸತ್ಯಯುಗದಲ್ಲಿ ಆತ್ಮ ಮತ್ತು ಶರೀರವೆರಡೂ ಪವಿತ್ರವಾಗಿರುತ್ತದೆ. ಮತ್ತೆ ಅರ್ಧಕಲ್ಪದ ನಂತರ ರಾವಣ ರಾಜ್ಯವಾಗುತ್ತದೆ. ಭಗವಂತನು ಹೀಗೇಕೆ ಮಾಡಿದರೆಂದು ಮನುಷ್ಯರು ಕೇಳುತ್ತಾರೆ. ಆದರೆ ಇದು ಅನಾದಿ ನಾಟಕವು ಮಾಡಲ್ಪಟ್ಟಿದೆ. ಭಗವಂತನೇನೂ ಮಾಡಲಿಲ್ಲ. ಸತ್ಯಯುಗದಲ್ಲಿ ಒಂದು ದೇವಿ-ದೇವತಾ ಧರ್ಮವೇ ಇರುತ್ತದೆ. ಇಂತಹ ಭಗವಂತನನ್ನು ನಾವೇಕೆ ನೆನಪು ಮಾಡಬೇಕೆಂದು ಕೆಲಕೆಲವರು ಪ್ರಶ್ನಿಸುತ್ತಾರೆ ಆದರೆ ನಿಮಗೆ ಅನ್ಯ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ. ಯಾರು ಮುಳ್ಳುಗಳಾಗಿದ್ದಾರೆಯೋ ಅವರೇ ಬಂದು ಹೂವಾಗುತ್ತಾರೆ. ಭಗವಂತನು ಕೇವಲ ಭಾರತವಾಸಿಗಳನ್ನಷ್ಟೇ ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆಯೇ? ನಾವು ಇದನ್ನು ಒಪ್ಪುವುದಿಲ್ಲ, ಭಗವಂತನಿಗೂ ಎರಡು ಕಣ್ಣುಗಳಿವೆಯೇ? ಎಂದು ಮನುಷ್ಯರು ಕೇಳುತ್ತಾರೆ. ಈ ನಾಟಕವಂತೂ ಮಾಡಲ್ಪಟ್ಟಿದೆ. ಎಲ್ಲರೂ ಸ್ವರ್ಗದಲ್ಲಿ ಬಂದು ಬಿಟ್ಟರೆ ಮತ್ತೆ ಅನೇಕ ಧರ್ಮಗಳ ಪಾತ್ರವು ಹೇಗೆ ನಡೆಯುವುದು? ಸ್ವರ್ಗದಲ್ಲಿ ಇಷ್ಟು ಕೋಟ್ಯಾಂತರ ಮನುಷ್ಯರು ಇರುವುದಿಲ್ಲ, ಮೊಟ್ಟ ಮೊದಲ ಮುಖ್ಯ ಮಾತೇನೆಂದರೆ ಭಗವಂತ ಯಾರಾಗಿದ್ದಾರೆ, ಅವರನ್ನಾದರೂ ತಿಳಿದುಕೊಳ್ಳಿ. ಮೊದಲು ಇದು ಅರ್ಥವಾಗದಿದ್ದರೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ತಮ್ಮನ್ನು ಆತ್ಮನೆಂದು ತಿಳಿದಾಗ ಇವರ ಮಾತು ಸರಿಯಾಗಿದೆ, ನಾವು ಅವಶ್ಯವಾಗಿ ಪತಿತರಿಂದ ಪಾವನರಾಗಬೇಕಾಗಿದೆ. ಅವರೊಬ್ಬರನ್ನೇ ನೆನಪು ಮಾಡಬೇಕಾಗಿದೆ. ಎಲ್ಲಾ ಧರ್ಮಗಳಲ್ಲಿ ಭಗವಂತನನ್ನು ನೆನಪು ಮಾಡುತ್ತಾರೆ ಎಂಬ ಮಾತನ್ನು ತಿಳಿದುಕೊಳ್ಳುತ್ತಾರೆ.

ನೀವು ಮಕ್ಕಳಿಗೆ ಈ ಜ್ಞಾನವು ಸಿಗುತ್ತಿದೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. ನೀವು ಪ್ರದರ್ಶನಿಗಳಲ್ಲಿಯೂ ಸಹ ಎಷ್ಟೊಂದು ತಿಳಿಸುತ್ತೀರಿ! ಆದರೆ ಕೆಲವರೇ ಪಕ್ಕಾ ಆಗುತ್ತಾರೆ. ಅಂದಮೇಲೆ ಪ್ರದರ್ಶನಿಗಳನ್ನು ಇಡುವುದಾದರೂ ಏಕೆ ಎಂದು ಹೇಳುವುದಲ್ಲ. ನಾಟಕದಲ್ಲಿತ್ತು ಮಾಡಿದಿರಿ, ಕೆಲವೊಂದು ಕಡೆ ಪ್ರದರ್ಶನಿಗಳಿಂದ ಬಹಳ ಮಂದಿ ಬರುತ್ತಾರೆ, ಕೆಲವೊಂದೆಡೆ ಬರುವುದಿಲ್ಲ. ಮುಂದೆ ಹೋದಂತೆ ಅನೇಕರು ಬರುತ್ತಾರೆ. ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತಾರೆ ಯಾರಾದರೂ ಕಡಿಮೆ ಪದವಿಯನ್ನು ಪಡೆಯುವುದಿದ್ದರೆ ಅವರು ಅಷ್ಟು ಪುರುಷಾರ್ಥವನ್ನೂ ಮಾಡುವುದಿಲ್ಲ. ಆದರೂ ಸಹ ಮತ್ತೆ-ಮತ್ತೆ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಯಾವುದೇ ವಿಕರ್ಮ ಮಾಡಬೇಡಿ. ಇದನ್ನೂ ಸಹ ನೋಟ್ ಮಾಡಿಕೊಳ್ಳಿ - ನಾವು ಯಾರಿಗೂ ದುಃಖವನ್ನು ಕೊಡಲಿಲ್ಲವೆ? ಯಾರೊಂದಿಗೂ ಜಗಳವಾಡಲಿಲ್ಲವೆ? ಉಲ್ಟಾ-ಸುಲ್ಟಾ ಮಾತನಾಡಲಿಲ್ಲವೆ? ಯಾವುದೇ ಅಕರ್ತವ್ಯ ಕಾರ್ಯವನ್ನು ಮಾಡಲಿಲ್ಲವೆ? ತಂದೆಯು ಹೇಳುತ್ತಾರೆ - ಯಾವ ವಿಕರ್ಮಗಳನ್ನು ಮಾಡುತ್ತೀರೋ ಅದೆಲ್ಲವನ್ನೂ ಬರೆಯಿರಿ. ಇದಂತೂ ನಿಮಗೆ ತಿಳಿದಿದೆ - ದ್ವಾಪರದಿಂದ ಹಿಡಿದು ವಿಕರ್ಮಗಳನ್ನು ಮಾಡುತ್ತಾ ಈಗ ಬಹಳ ವಿಕರ್ಮಿಗಳಾಗಿ ಬಿಟ್ಟಿರಿ. ಎಲ್ಲವನ್ನೂ ತಂದೆಗೆ ಬರೆದುಕೊಡುವುದರಿಂದ ಭಾರವು ಹಗುರವಾಗುವುದು. ನಾವು ಯಾರಿಗೂ ದುಃಖವನ್ನು ಕೊಡುವುದಿಲ್ಲವೆಂದು ಬರೆಯುತ್ತಾರೆ, ಅದಕ್ಕೆ ತಂದೆಯು ಹೇಳುತ್ತಾರೆ - ಚಾರ್ಟನ್ನು ತೆಗೆದುಕೊಂಡು ಬಂದರೆ ನೋಡುತ್ತೇನೆ. ತಂದೆಯು ಕರೆಯುವುದೂ ಸಹ ಇಂತಹ ಒಳ್ಳೆಯ ಮಕ್ಕಳನ್ನು, ಸುಪುತ್ರರನ್ನು ತಂದೆಯು ಬಹಳ ಪ್ರೀತಿ ಮಾಡುತ್ತಾರೆ. ತಂದೆಗೆ ಗೊತ್ತಿದೆ, ಇನ್ನೂ ಯಾರೂ ಸಂಪೂರ್ಣರಾಗಿಲ್ಲ, ತಂದೆಯು ಹೇಗೆ ಪುರುಷಾರ್ಥ ಮಾಡುತ್ತಾರೆಂದು ಪ್ರತಿಯೊಬ್ಬರನ್ನೂ ನೋಡುತ್ತಾರೆ. ಮಕ್ಕಳು ಚಾರ್ಟನ್ನು ಬರೆಯುವುದಿಲ್ಲವೆಂದರೆ ಖಂಡಿತವಾಗಿ ಇನ್ನೂ ಕೊರತೆಗಳಿವೆ. ಅವನ್ನು ತಂದೆಯಿಂದ ಮುಚ್ಚಿಡುತ್ತಾರೆ. ಯಾರು ಚಾರ್ಟ್ ಬರೆಯುವರೋ ಅವರೇ ಸತ್ಯ ಪ್ರಾಮಾಣಿಕ ಮಗುವೆಂದು ತಿಳಿಯುತ್ತೇನೆ. ಚಾರ್ಟ್ನ ಜೊತೆಗೆ ಮತ್ತೆ ನಡವಳಿಕೆಯೂ ಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸ್ವಯಂನ ಭಾರವನ್ನು ಹಗುರವನ್ನಾಗಿ ಮಾಡಿಕೊಳ್ಳಲು ಏನೆಲ್ಲವೂ ವಿಕರ್ಮಗಳಾಗಿವೆಯೋ ಎಲ್ಲವನ್ನೂ ತಂದೆಗೆ ಬರೆದುಕೊಡಬೇಕಾಗಿದೆ. ಈಗ ಯಾರಿಗೂ ದುಃಖವನ್ನು ಕೊಡಬಾರದು, ಸುಪುತ್ರರಾಗಿರಬೇಕಾಗಿದೆ.

2. ತಮ್ಮ ದೃಷ್ಟಿಯನ್ನು ಬಹಳ ಶುದ್ಧ ಮಾಡಿಕೊಳ್ಳಬೇಕಾಗಿದೆ. ಕಣ್ಣುಗಳು ಮೋಸಗೊಳಿಸದಿರಲಿ, ಇದರ ಸಂಭಾಲನೆ ಮಾಡಬೇಕಾಗಿದೆ. ತಮ್ಮ ನಡವಳಿಕೆಯನ್ನು ಬಹಳ ಚೆನ್ನಾಗಿಟ್ಟುಕೊಳ್ಳಬೇಕಾಗಿದೆ. ಕಾಮ-ಕ್ರೋಧಕ್ಕೆ ವಶವಾಗಿ ಯಾವುದೇ ಪಾಪಕರ್ಮ ಮಾಡಬಾರದು.

ವರದಾನ:
ಲಕ್ಷ್ಯ ಮತ್ತು ಗುರಿಯನ್ನು ಸದಾ ಸ್ಮತಿಯಲ್ಲಿಟ್ಟುಕೊಂಡು ತೀವ್ರ ಪುರುಷಾರ್ಥ ಮಾಡುವಂತಹ ಸದಾ ಹೋಲಿ ಮತ್ತು ಹ್ಯಾಪಿ ಭವ.

ಬ್ರಾಹ್ಮಣ ಜೀವನದ ಲಕ್ಷ್ಯವಾಗಿದೆ ಯಾವುದೇ ಹದ್ಧಿನ ಆಧಾರವಿಲ್ಲದೆ ಸದಾ ಆಂತರಿಕ ಖುಷಿಯಲ್ಲಿರುವುದು. ಯಾವಾಗ ಈ ಲಕ್ಷ್ಯ ಬದಲಾಗಿ ಹದ್ಧಿನ ಪ್ರಾಪ್ತಿಗಳ ಸಣ್ಣ-ಸಣ್ಣ ಗಲ್ಲಿಗಳಲ್ಲಿ ಸಿಕ್ಕಿಹಾಕಿಕೊಂಡು ಬಿಡುವಿರಿ ಆಮೇಲೆ ಗುರಿಯಿಂದ ದೂರವಾಗಿ ಬಿಡುವಿರಿ. ಆದ್ದರಿಂದ ಏನೇ ಆದರೂ ಸಹಾ, ಹದ್ಧಿನ ಪ್ರಾಪ್ತಿಗಳ ತ್ಯಾಗವನ್ನೂ ಸಹಾ ಮಾಡಬೇಕಾಗಬಹುದು ಆದ್ದರಿಂದ ಅದನ್ನು ಬಿಟ್ಟು ಬಿಡಿ ಆದರೆ ಅವಿನಾಶಿ ಖುಶಿಯನ್ನು ಎಂದೂ ಬಿಡಬೇಡಿ. ಹೋಲಿ ಮತ್ತು ಹ್ಯಾಪಿ ಭವದ ವರದಾನವನ್ನು ಸ್ಮತಿಯಲ್ಲಿಟ್ಟು ತೀವ್ರ ಪುರುಷಾರ್ಥದ ಮೂಲಕ ಅವಿನಾಶಿ ಪ್ರಾಪ್ತಿಯನ್ನು ಮಾಡಿಕೊಳ್ಳಿ.

ಸ್ಲೋಗನ್:
ಗುಣಮೂರ್ತಿಯಾಗಿ ಗುಣಗಳ ದಾನ ಕೊಡುತ್ತಾ ಹೋಗಿ-ಇದೇ ಎಲ್ಲಕ್ಕಿಂತ ದೊಡ್ಡ ಸೇವೆಯಾಗಿದೆ.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ಮಾಸ್ಟರ್ ಜ್ಞಾನಪೂರ್ಣ, ಮಾಸ್ಟರ್ ಸರ್ವಶಕ್ತಿವಂತನ ಸ್ಟೇಜ್ ಮೇಲೆ ಸ್ಥಿತರಾಗಿ ಭಿನ್ನ-ಭಿನ್ನ ಪ್ರಕಾರದ ಕ್ಯೂನಿಂದ ಹೊರಬಂದು, ತಂದೆಯ ಜೊತೆ ಸದಾ ಮಿಲನ ಮಾಡುವ ಲಗನ್ನಲ್ಲಿ ತಮ್ಮ ಸಮಯವನ್ನು ತೊಡಗಿಸಿ ಮತ್ತು ಲವಲೀನ ಸ್ಥಿತಿಯಲ್ಲಿರಿ ಆಗ ಬೇರೆ ಎಲ್ಲಾ ಮಾತುಗಳು ಸಹಜವಾಗಿ ಸಮಾಪ್ತಿಯಾಗಿ ಬಿಡುವುದು, ನಂತರ ನಿಮ್ಮ ಮುಂದೆ ನಿಮ್ಮ ಪ್ರಜೆ ಮತ್ತು ಭಕ್ತರ ಸಾಲು(ಕ್ಯೂ) ನಿಲ್ಲುವುದು.